ವಿಷಯಕ್ಕೆ ಹೋಗು

ಅನ್ಯಾಕ್ಸಗೊರಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನ್ಯಾಕ್ಸಗೊರಾಸ್
Anaxagoras; part of a fresco in the portico of the National University of Athens.
ಜನನc. 510 BC
Klazomenai
ಮರಣc. 428 BC
Lampsacus
ಕಾಲಮಾನAncient philosophy
ಪ್ರದೇಶWestern Philosophy
ಪರಂಪರೆPluralist school
ಮುಖ್ಯ  ಹವ್ಯಾಸಗಳುNatural philosophy
ಗಮನಾರ್ಹ ಚಿಂತನೆಗಳುCosmic mind (Nous) ordering all things
The Milky Way (Via Lactea) as a concentration of distant stars[೧]
ಪ್ರಭಾವಕ್ಕೋಳಗಾಗು
ಪ್ರಭಾವ ಬೀರು

ಅನ್ಯಾಕ್ಸಗೊರಾಸ್ (ಸು. ಕ್ರಿ. ಪೂ. 500-428): ಪ್ರಾಚೀನ ಗ್ರೀಕ್ ದಾರ್ಶನಿಕರಲ್ಲಿ ಹೆಸರಾದವ.

ಜೀವನ[ಬದಲಾಯಿಸಿ]

ಕ್ಲಾಸೋಮಿನ ಎಂಬಲ್ಲಿ ಹುಟ್ಟಿದ. ಕ್ರಿ. ಪೂ. 480 ರಲ್ಲಿ ಅಥೆನ್ಸ್‍ಗೆ ತೆರಳಿ ಪೆರಿಕ್ಲಿಸ್‍ನೊಡನೆ ಸ್ನೇಹ ಬೆಳೆಸಿದ. ಸೂರ್ಯ ಪೆಲೋಪೊನೀಸ್‍ಗಿಂತಲೂ ದೊಡ್ಡ ಆಕಾರದ, ಕೆಂಪಗೆ ಕಾದ ವಸ್ತು ಎಂದು ಹೇಳಿದ್ದರಿಂದ ಈತನನ್ನು ನಾಸ್ತಿಕವಾದಿ ಎಂದು ಕರೆದು, ಹೇಳಿದರು. ನಿಸರ್ಗದ ಮೇಲಿನ ಇವನ ಕೆಲವು ಗ್ರಂಥಗಳು ಉಪಲಬ್ಧವಾಗಿವೆ. ವೈಜ್ಞಾನಿಕ ವಿಚಾರಾತ್ಮಕ ಸಂಪ್ರದಾಯದಲ್ಲಿ ಬೆಳೆದ ಇವನ ಶೈಲಿ ಸರಳತೆ ಹಾಗೂ ಸಂಯಮಗಳಿಂದ ಕೂಡಿದೆ. ವಿಶ್ವನಿರ್ಮಾಣಕ್ಕೆ ಬಳಕೆಯಾಗಿರುವ ಅಸಂಖ್ಯಾತ ಘಟನಾಂಶಗಳನ್ನು ನಿಯಂತ್ರಿಸುವ ಬೌದ್ಧಿಕಶಕ್ತಿ, ಚೇತನಾಂಶ ಒಂದುಂಟು ಎಂದು ಪ್ರತಿಪಾದಿಸಿ ಅಥೆನ್ಸ್ ಜನರನ್ನು ಪೇಚಿಗೆ ಸಿಕ್ಕಿಸಿದ. ವಿಚಾರಣೆಗೆ ಗುರಿಯಾಗುವ ಮುನ್ನ ಈತ ಅಥೆನ್ಸ್ ತ್ಯಜಿಸಿ ಲೇಂಪಾಕಸ್ ಅನ್ನುವ ಸ್ಥಳಕ್ಕೆ ಹೋಗಿ ಏಕಾಂತ ವಾಸಮಾಡಿದ. ಅಲ್ಲಿಗೆ ಹೋದ ಸ್ಪಲ್ಪ ದಿನದಲ್ಲೇ ಮಡಿದ. ಇವನ ಹಿಂದಿನ ದಾರ್ಶನಿಕರು ಇಡೀ ಜಗತ್ತು ಅಚೇತನವಾದ ಮೂಲಪ್ರಕೃತಿಯಿಂದ ಉತ್ಪನ್ನವಾಯಿತೆಂದು ವಾದಿಸಿದರು. ಇವನು ಮಾತ್ರ ಜಗತ್ತು ಒಂದು ಚಿತ್ ಶಕ್ತಿಯ ಸೃಷ್ಟಿ ಎಂದೂ ಇದಿಲ್ಲದೇ ಜಗತ್ತು ಶೂನ್ಯವೆಂದೂ ಭೋಧಿಸಿದ. ಇವನ ಪ್ರಾಪಂಚಿಕ ಅಭಿಪ್ರಾಯಗಳು ಯೂರಿಪಿಡೀಸ್‍ನಂಥ ನಾಟಕಕಾರನ ಮೇಲೂ ಪ್ರಭಾವ ಬೀರಿದುವು. ಇವನ ನಿರ್ಭಯ ಹಾಗೂ ಸ್ಪಷ್ಟ ವಿಚಾರಸರಣಿ ಗೌರವಾನ್ವಿತವಾದದ್ದು. ಅರಿಸ್ಟಾಟಲ್ ಇವನ ಅಭಿಪ್ರಾಯಗಳನ್ನು ಟೀಕಿಸಿದರು. ಹರಟೆಮಲ್ಲರ ಗುಂಪಿನಲ್ಲಿ ಸ್ತಿಮಿತಚಿತ್ತದವನೆಂದು ಗೌರವಿಸಿದ್ದ.

ಉಲ್ಲೇಖಗಳು[ಬದಲಾಯಿಸಿ]

  1. DK 59 A80: Aristotle, Meteorologica 342b.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
  • Anaxagoras entry by Patricia Curd in the Stanford Encyclopedia of Philosophy
  • Anaxagoras entry by Michael Patzia in the Internet Encyclopedia of Philosophy
  • O'Connor, John J.; Robertson, Edmund F., "ಅನ್ಯಾಕ್ಸಗೊರಾಸ್", MacTutor History of Mathematics archive, University of St Andrews
  • ಟೆಂಪ್ಲೇಟು:Cite LotEP
  • Translation and Commentary Archived 2010-12-12 ವೇಬ್ಯಾಕ್ ಮೆಷಿನ್ ನಲ್ಲಿ. from John Burnet's Early Greek Philosophy.
  • Anaxagoras: Fragments from Early Greek Philosophy by John Burnet, 3rd edition (1920).
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: