ವಿಷಯಕ್ಕೆ ಹೋಗು

ಆಮ್ಲಾಂಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಮ್ಲಾಂಕ ಎಂದರೆ ಒಂದು ಗ್ರಾಂ ವಸ್ತುವಿನಲ್ಲಿರುವ ಆಮ್ಲದ ಆಂಶವನ್ನು ತಟಸ್ಥಗೊಳಿಸಲು ಅಗತ್ಯವಾದ ಪೊಟ್ಯಾಸಿಯಂ ಹೈಡ್ರಾಕ್ಸೈಡಿನ ತೂಕವನ್ನು ಮಿಲಿಗ್ರಾಂಗಳಲ್ಲಿ ಸೂಚಿಸುವ ಸಂಖ್ಯೆ (ಆ್ಯಸಿಡ್ ವ್ಯಾಲ್ಯು).[೧][೨][೩][೪] ವಸ್ತುವನ್ನು ಮದ್ಯಸಾರದಲ್ಲಿ ವಿಲೀನಮಾಡಿ ಡೆಸಿನಾರ‍್ಮಲ್ ಕ್ಷಾರದೊಡನೆ, ಫೀನಾಲ್ಟ ಥ್ಯಾಲೈನ್ ಸೂಚಕದ ಸಹಾಯದಿಂದ, ಅನುಮಾಪಿಸಿ (ಟೈಟ್ರೇಷನ್) ನಿರ್ಣಯಿಸಲಾಗುವುದು. ಸಸ್ಯಜನ್ಯ ತೈಲಗಳು, ಕೊಬ್ಬು, ಮೇಣಗಳು ಮತ್ತು ಇವುಗಳಿಂದ ತಯಾರಿಸಲಾದ ಸಾಬೂನು, ಬಣ್ಣ, ಇಂಧನ, ಕೀಲೆಣ್ಣೆ ಇತ್ಯಾದಿಗಳ ರಾಸಾಯನಿಕ ವಿಶ್ಲೇಷಣೆಯಲ್ಲಿ ಈ ಮಾನದ ಬಳಕೆ ಹೆಚ್ಚು.

ವನಸ್ಪತಿ ತೈಲಾದಿಗಳು ಮೂಲತಃ ಗ್ಲಿಸರಾಲ್ ಮತ್ತು ಫ್ಯಾಟಿ ಆಮ್ಲಗಳ ಸಂಯೋಜನೆಯಿಂದಾದ ಲವಣ ಸದೃಶವಾದ ಸಂಯುಕ್ತಗಳು. ಬ್ಯಾಕ್ಟೀರಿಯ, ಕಿಣ್ವಗಳು ಅಥವಾ, ರಾಸಾಯನಿಕ ವಸ್ತುಗಳ ವರ್ತನೆಯಿಂದ ಆಮ್ಲ ಬಿಡುಗಡೆಯಾಗುವುದು. ಹೀಗೆ ಉತ್ಪತ್ತಿಯಾದ ಆಮ್ಲದ ಪ್ರಮಾಣವನ್ನು ಅಳೆಯಲು ಆಮ್ಲಾಂಕ ಮಾನದ ಬಳಕೆ ಇದೆ. ಆದ್ದರಿಂದ ತಯಾರಿಕಾ ವಿಧಾನ, ದಾಸ್ತಾನುಮಾಡಿದ ಪರಿಸ್ಥಿತಿ ಮತ್ತು ಅವಧಿಗೆ ಅನುಗುಣವಾಗಿ, ಆಮ್ಲಾಂಕವೂ ವ್ಯತ್ಯಾಸ ಹೊಂದುವುದು.

ಕೊಬ್ಬಿನ ಆಮ್ಲೀಯತೆಯನ್ನು ಅದರಲ್ಲಿರುವ ಫ್ರೀಫ್ಯಾಟಿ ಆಮ್ಲದ (ಎಫ್.ಎಫ್.ಎ.) ಶೇಕಡಾಂಶವನ್ನು ಸೂಚಿಸುವುದು ವಾಡಿಕೆ. ಉದಾಹರಣೆಗೆ, ಕೊಬ್ಬರಿ ಎಣ್ಣೆಗೆ ಲಾರಿಕ್ ಆಮ್ಲ, ಹರಳೆಣ್ಣೆಗೆ ರಿಸಿನ್ ಒಲಿಯಿಕ್ ಆಮ್ಲ, ಮತ್ತು ಇತರ ಅನೇಕ ಎಣ್ಣೆಗಳಿಗೆ ಒಲಿಯಿಕ್ ಆಮ್ಲಗಳನ್ನು ಆಧಾರವಾಗಿಟ್ಟುಕೊಂಡು ಲೆಕ್ಕಾಚಾರ ಮಾಡಬೇಕು. ಆಮ್ಲಾಂಕದ ಒಂದು ಮೂಲಮಾನಕ್ಕೆ ೦.೩೫೭ ಲಾರಿಕ್ ಆಮ್ಲವೂ ೦.೪೫೬ ಪಾಮಿಟಿಕ್ ಆಮ್ಲವೂ ೦.೫೩೧ ರಿಸಿನ್ ಒಲಿಯಿಕ್ ಆಮ್ಲವೂ ೦.೫೦೩ ಒಲಿಯಿಕ್ ಆಮ್ಲವೂ ಸಮವೆಂದು ಪರಿಗಣಿಸಲಾಗುವುದು.

ಉಲ್ಲೇಖಗಳು[ಬದಲಾಯಿಸಿ]

  1. "14.10.1: Foods- Acid Value and the Quality of Fats and Oils". Chemistry LibreTexts. ಮೇ 26, 2016. Retrieved ಅಕ್ಟೋಬರ್ 28, 2022.
  2. Ahuja, Satinder (ಜನವರಿ 25, 2015). Food, Energy, and Water: The Chemistry Connection. Elsevier. p. 301. ISBN 9780128003749. OCLC 900781294.
  3. Nielsen, S. Suzanne (ಮಾರ್ಚ್ 20, 2010). Food Analysis Laboratory Manual, 2nd Edition. Springer Science & Business Media. pp. 108–109. ISBN 9781441914637. OCLC 663096771.
  4. O'Brien, Richard D. (ಡಿಸೆಂಬರ್ 5, 2008). Fats and Oils: Formulating and Processing for Applications, 3rd Edition. CRC Press. pp. 220–221. ISBN 9781420061673. OCLC 367589246.
"https://kn.wikipedia.org/w/index.php?title=ಆಮ್ಲಾಂಕ&oldid=1150853" ಇಂದ ಪಡೆಯಲ್ಪಟ್ಟಿದೆ