ವಿಷಯಕ್ಕೆ ಹೋಗು

ಆಫ್ರಿಕನ್-ಅಮೆರಿಕನ್ ನಾಗರಿಕ ಹಕ್ಕುಗಳ ಚಳವಳಿ (೧೯೫೫–೧೯೬೮)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಫ್ರಿಕನ್-ಅಮೆರಿಕನ್ ನಾಗರಿಕ ಹಕ್ಕುಗಳ ಚಳವಳಿಯ ಪ್ರಮುಖ ವ್ಯಕ್ತಿಗಳು.ಮೇಲೆ ಎಡಬದಿಯಿಂದ ಬಲಮುರಿಯಾಗಿ: ಡಬ್ಲ್ಯೂ. ಇ. ಬಿ. ಡು ಬಾಯಿಸ್, ಮ್ಯಾಲ್ಕಮ್ X, ರೋಸಾ ಪಾರ್ಕ್ಸ್, ಮಾರ್ಟಿನ್‌ ಲೂಥರ್ ಕಿಂಗ್, ಜೂ.

ಆಫ್ರಿಕನ್-ಅಮೆರಿಕನ್ ನಾಗರಿಕ ಹಕ್ಕುಗಳ ಚಳವಳಿ ಯು (೧೯೫೫–೧೯೬೮), ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಆಫ್ರಿಕನ್ ಅಮೆರಿಕನ್ನರ ವಿರುದ್ಧ ಜನಾಂಗೀಯ ಭೇದಭಾವವನ್ನು ಕಾನೂನುಬಾಹಿರಗೊಳಿಸಿ, ದಕ್ಷಿಣದ ರಾಜ್ಯಗಳಲ್ಲಿ ಮತದಾನದ ಹಕ್ಕುಗಳನ್ನು ಮರುಸ್ಥಾಪಿಸುವ ಧ್ಯೇಯೋದ್ದೇಶವನ್ನು ಹೊಂದಿದ್ದ ಚಳವಳಿಗಳನ್ನು ಉಲ್ಲೇಖಿಸುತ್ತದೆ. ಈ ಲೇಖನವು, ೧೯೫೪ ಹಾಗು ೧೯೬೮ರ ನಡುವಿನ ಚಳವಳಿಯ ಘಟ್ಟವನ್ನು, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾಗದಲ್ಲಿ ನಡೆದ ಚಳವಳಿಯ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ೧೯೬೬ರ ಹೊತ್ತಿಗೆ ಆರಂಭಗೊಂಡ ಬ್ಲ್ಯಾಕ್ ಪವರ್ ಮೂವ್ಮೆಂಟ್ ಸುಮಾರು ೧೯೬೬ರಿಂದ ೧೯೭೫ರವರೆಗೂ ನಡೆಯಿತು, ಇದು ಜನಾಂಗೀಯ ಘನತೆ, ಆರ್ಥಿಕತೆ ಹಾಗು ರಾಜಕೀಯ ಸ್ವಯಂಪೂರ್ಣತೆ, ಹಾಗು ಬಿಳಿಯ ಅಮೆರಿಕನ್ನರ ದಬ್ಬಾಳಿಕೆಯಿಂದ ವಿಮುಕ್ತಿ ಸೇರಿದಂತೆ ನಾಗರಿಕ ಹಕ್ಕುಗಳ ಚಳವಳಿಯ ಉದ್ದೇಶಗಳನ್ನು ವಿಸ್ತರಿಸಿತು. NAACP, SNCC, CORE ಹಾಗು SCLCಯಂತಹ ಸಂಸ್ಥೆಗಳೊಂದಿಗೆ ನಾಗರಿಕ ಹಕ್ಕುಗಳ ಚಳವಳಿಯಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದ ಹಲವರು, ಇದಕ್ಕೆ "ದಕ್ಷಿಣ ಭಾಗದ ಸ್ವಾತಂತ್ರ್ಯ ಚಳವಳಿ" ಎಂದು ಕರೆಯುವುದಕ್ಕೆ ಆದ್ಯತೆ ನೀಡುತ್ತಾರೆ. ಏಕೆಂದರೆ ಇದು ಕಾನೂನಿನಡಿಯಲ್ಲಿ ಕೇವಲ ಮಾನವ ಹಕ್ಕುಗಳಿಗಾಗಿ ನಡೆದ ಹೋರಾಟಕ್ಕಿಂತ ಹೆಚ್ಚಾಗಿ, ಇದು ಸ್ವಾತಂತ್ರ್ಯ, ಗೌರವ, ಘನತೆ, ಹಾಗು ಆರ್ಥಿಕ ಹಾಗು ಸಾಮಾಜಿಕ ಸಮಾನತೆಯಂತಹ ಮೂಲಭೂತ ವಿಷಯಗಳ ಬಗೆಗೂ ಸಹ ನಡೆದ ಹೋರಾಟವಾಗಿತ್ತು. ಚಳವಳಿಯು, ನಾಗರಿಕ ಪ್ರತಿಭಟನೆಯದ ಪ್ರಮುಖ ಅಭಿಯಾನಗಳಿಂದ ವೈಶಿಷ್ಟ್ಯವನ್ನು ಪಡೆದಿದೆ. ೧೯೫೫–೧೯೬೮ರ ಅವಧಿಯಲ್ಲಿ, ಅಹಿಂಸಾ ಪ್ರತಿಭಟನೆ ಹಾಗು ಅಸಹಕಾರ ಚಳವಳಿಗಳು, ಕಾರ್ಯಕರ್ತರು ಹಾಗು ಸರ್ಕಾರಿ ಅಧಿಕಾರಿಗಳ ನಡುವೆ ಬಿಕ್ಕಟ್ಟಿನ ಪರಿಸ್ಥಿತಿಗಳನ್ನು ಉಂಟುಮಾಡಿದವು. ಆಫ್ರಿಕನ್ ಅಮೆರಿಕನ್ನರು ಎದುರಿಸುತ್ತಿದ್ದ ಅಸಮಾನತೆಗಳನ್ನು ಎತ್ತಿ ತೋರಿಸುತ್ತಿದ್ದ ಬಿಕ್ಕಟಿನ ಪರಿಸ್ಥಿತಿಗಳಿಗೆ ಸಂಯುಕ್ತ, ರಾಜ್ಯ, ಹಾಗು ಸ್ಥಳೀಯ ಸರ್ಕಾರಗಳು, ವ್ಯಾಪಾರಸಂಸ್ಥೆಗಳು ಹಾಗು ಸಮುದಾಯಗಳು ಸಾಮಾನ್ಯವಾಗಿ ತಕ್ಷಣವೇ ಪ್ರತಿಕ್ರಯಿಸಬೇಕಿತ್ತು. ಪ್ರತಿಭಟನೆ ಹಾಗು/ಅಥವಾ ಅಸಹಕಾರ ಚಳವಳಿಗಳ ರೂಪಗಳು ಅಲಬಾಮನಲ್ಲಿ ನಡೆದಂತಹ ಮೊಂಟ್ಗೋಮೆರಿ ಬಸ್ ಬಹಿಷ್ಕಾರದಂತಹ ಯಶಸ್ವಿ ಬಹಿಷ್ಕಾರಗಳು(೧೯೫೫–೧೯೫೬); ಉತ್ತರ ಕ್ಯಾರೊಲಿನದಲ್ಲಿ ನಡೆದಂತಹ ಗ್ರೀನ್ಸ್‌ಬರೊ ಧರಣಿಗಳಂತಹ ಧರಣಿಗಳು(೧೯೬೦); ಅಲಬಾಮನಲ್ಲಿ ನಡೆದಂತಹ ಸೆಲ್ಮದಿಂದ ಮೊಂಟ್ಗೋಮೆರಿಯವರೆಗಿನ ಪ್ರತಿಭಟನಾ ಮೆರವಣಿಗೆಯಂತಹ ಮೆರವಣಿಗೆಗಳು(೧೯೬೫); ಹಾಗು ವ್ಯಾಪಕವಾದ ಇತರ ಅಹಿಂಸಾತ್ಮಕ ಚಟುವಟಿಕೆಗಳು ಸೇರಿವೆ. ಮಾನವ ಹಕ್ಕುಗಳ ಚಳವಳಿಯ ಈ ಘಟ್ಟದಲ್ಲಿ ಅಂಗೀಕರಿಸಲಾದ ಗಮನಾರ್ಹ ವಿಧಾಯಕ ಸಾಧನೆಗಳೆಂದರೆ ೧೯೬೪ರ ಮಾನವ ಹಕ್ಕುಗಳ ಕಾಯಿದೆ ಅಂಗೀಕಾರ,[೧] ಇದು ನೇಮಕ ಪ್ರಕ್ರಿಯೆಯಲ್ಲಿ ಹಾಗು ಸಾರ್ವಜನಿಕ ಸ್ಥಳಗಳಲ್ಲಿ "ಜನಾಂಗ, ವರ್ಣ, ಧರ್ಮ, ಅಥವಾ ರಾಷ್ಟ್ರೀಯತೆ"ಯನ್ನು ಆಧರಿಸಿ ಭೇದಭಾವ ಮಾಡುವುದನ್ನು ನಿಷೇಧಿಸಿತು; ೧೯೬೫ರ ಮತದಾನ ಹಕ್ಕುಗಳ ಕಾಯಿದೆಯು, ಮತದಾನದ ಹಕ್ಕುಗಳನ್ನು ಮತ್ತೆ ಸ್ಥಾಪಿಸಿತು ಮತ್ತು ರಕ್ಷಿಸಿತು; ಇಮ್ಮಿಗ್ರೇಶನ್ ಅಂಡ್ ನ್ಯಾಷನಾಲಿಟಿ ಸರ್ವೀಸಸ್ ಆಕ್ಟ್ ಆಫ್ ೧೯೬೫, ಗಮನಾರ್ಹವಾಗಿ ಇತರ ಸಾಂಪ್ರದಾಯಿಕ ಯುರೋಪಿಯನ್ ಸಮುದಾಯಗಳನ್ನು ಹೊರತುಪಡಿಸಿ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಇತರೆ ವಲಸೆಗಾರರಿಗೆ ಪ್ರವೇಶವನ್ನು ದೊರಕಿಸಿಕೊಟ್ಟಿತು; ಜೊತೆಗೆ ಫೇರ್ ಹೌಸಿಂಗ್ ಆಕ್ಟ್ ಆಫ್ ೧೯೬೮, ಮನೆಯ ಬಾಡಿಗೆಗೆ ಅಥವಾ ಅದರ ಮಾರಾಟದಲ್ಲಿ ಉಂಟಾಗುತ್ತಿದ್ದ ತಾರತಮ್ಯಕ್ಕೆ ನಿಷೇಧವನ್ನು ಒಡ್ಡಿತು. ಆಫ್ರಿಕನ್ ಅಮೆರಿಕನ್ನರು ದಕ್ಷಿಣ ಭಾಗದಲ್ಲಿ ರಾಜಕೀಯಕ್ಕೆ ಮತ್ತೆ ಪ್ರವೇಶ ಪಡೆದರು, ಹಾಗು ಇದು ದೇಶದುದ್ದಕ್ಕೂ ಯುವ ಜನತೆ ಕಾರ್ಯೋನ್ಮುಖರಾಗುವಂತೆ ಪ್ರೇರೇಪಿಸಿತು.

ಹಿನ್ನೆಲೆ

[ಬದಲಾಯಿಸಿ]

೧೮೭೬ರಲ್ಲಿ ನಡೆದ ವಿವಾದಿತ ಚುನಾವಣೆಯು ಪುನಾರಚನೆಯ ಅಂತ್ಯವನ್ನು ಉಂಟುಮಾಡಿತು, ದಕ್ಷಿಣದಲ್ಲಿದ್ದ ಬಿಳಿಯರು, ಚುನಾವಣೆಗಳಲ್ಲಿ ಬೆದರಿಕೆ ಹಾಕುವುದು ಹಾಗು ಹಿಂಸಾತ್ಮಕ ಕೃತ್ಯಗಳನ್ನು ಎಸಗುವ ಮೂಲಕ ಆ ಪ್ರದೇಶದ ರಾಜಕೀಯ ನಿಯಂತ್ರಣವನ್ನು ಮತ್ತೆ ಪಡೆದುಕೊಂಡರು. ೧೮೯೦ರಿಂದ ೧೯೦೮ರ ನಡುವೆ ದಕ್ಷಿಣದ ರಾಜ್ಯಗಳಲ್ಲಿ ಆಫ್ರಿಕನ್ ಅಮೆರಿಕನ್ನರ ಮತದಾನ ಹಕ್ಕನ್ನು ಕಸಿದುಕೊಳ್ಳುವುದು ವ್ಯವಸ್ಥಿತವಾಗಿ ನಡೆಯಿತು ಹಾಗು ಇದು ೧೯೬೦ರ ಮಧ್ಯಭಾಗದಲ್ಲಿ ರಾಷ್ಟ್ರೀಯ ನಾಗರಿಕ ಹಕ್ಕುಗಳ ಕಾಯಿದೆಯು ಅನುಮೊದನೆಗೊಳ್ಳುವವರೆಗೂ ಉಂಟಾಯಿತು. ಉದಾಹರಣೆಗೆ, ೬೦ ವರ್ಷಗಳಿಗೂ ಹೆಚ್ಚಿನ ಸಮಯ, ದಕ್ಷಿಣ ಭಾಗದಲ್ಲಿದ್ದ ಕರಿಯರು, ಕಾಂಗ್ರೆಸ್ ಅಥವಾ ಸ್ಥಳೀಯ ಸರ್ಕಾರದಲ್ಲಿ ತಮ್ಮ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಯಾರೊಬ್ಬರನ್ನೂ ಆಯ್ಕೆ ಮಾಡಲು ಸಾಧ್ಯವಾಗುತ್ತಿರಲಿಲ್ಲ.[೨]

ಈ ಅವಧಿಯಲ್ಲಿ, ಬಿಳಿಯರ ಪ್ರಾಬಲ್ಯದ ಡೆಮೋಕ್ರ್ಯಾಟಿಕ್ ಪಕ್ಷವು ದಕ್ಷಿಣ ಭಾಗದಲ್ಲಿ ರಾಜಕೀಯ ನಿಯಂತ್ರಣವನ್ನು ಮತ್ತೆ ಗಳಿಸಿತು. ರಿಪಬ್ಲಿಕನ್ ಪಕ್ಷ— "ಲಿಂಕನ್ ಪಕ್ಷ"—ಎನಿಸಿದ್ದ ಪಕ್ಷಕ್ಕೆ ಬಹುತೇಕ ಕರಿಯರು ಸೇರಿದ್ದರು. ಕರಿಯರಿಗೆ ಮತದಾನದ ನೋಂದಣಿಯನ್ನು ದಮನ ಮಾಡಿದ್ದರಿಂದಾಗಿ ಪಕ್ಷವು ಪ್ರಾಮುಖ್ಯತೆಯನ್ನು ಕಳೆದುಕೊಂಡಿತು. ೨೦ನೇ ಶತಮಾನದ ಆರಂಭದ ಹೊತ್ತಿಗೆ, ದಕ್ಷಿಣದಿಂದ ಆಯ್ಕೆಯಾದ ಎಲ್ಲ ಅಧಿಕಾರಿಗಳು ಡೆಮೋಕ್ರ್ಯಾಟ್ ಗಳಾಗಿದ್ದರು.[ಸೂಕ್ತ ಉಲ್ಲೇಖನ ಬೇಕು] ಆಫ್ರಿಕನ್ ಅಮೆರಿಕನ್ ರ ಮತದಾನದ ಹಕ್ಕನ್ನು ಕಸಿದುಕೊಂಡ ಹೆಚ್ಚು ಕಡಿಮೆ ಅದೇ ಸಮಯದಲ್ಲಿ, ಬಿಳಿಯ ಡೆಮೋಕ್ರ್ಯಾಟ್ ಗಳು ಕಾನೂನಿನ ಮೂಲಕ ಜನಾಂಗೀಯ ವರ್ಣಭೇದನೀತಿಯನ್ನು ಬಲವಂತದಿಂದ ಹೇರಿದರು. ಕರಿಯರ ವಿರುದ್ಧ ಹಿಂಸಾಚಾರಗಳು ಭುಗಿಲೆದ್ದವು. ದಕ್ಷಿಣದಲ್ಲಿ ಪುನಾರಚನೆಯ ನಂತರದಲ್ಲಿ ಹುಟ್ಟಿಕೊಂಡ ಬಹಿರಂಗವಾದ, ಸರ್ಕಾರ-ಪ್ರೇರೇಪಿತ ಜನಾಂಗೀಯ ಭೇದಭಾವ ಹಾಗು ದಬ್ಬಾಳಿಕೆಯು "ಜಿಮ್ ಕ್ರೊ" ವ್ಯವಸ್ಥೆ ಎಂದು ಪರಿಚಿತವಾಗಿದೆ. ಇದು ೧೯೫೦ರ ಆರಂಭದ ದಶಕವರೆಗೂ ವಾಸ್ತವಿಕವಾಗಿ ಅಚ್ಚಳಿಯದೆ ಹಾಗೇ ಉಳಿದಿತ್ತು. ಈ ರೀತಿಯಾಗಿ, ೨೦ನೇ ಶತಮಾನದ ಆರಂಭದ ಅವಧಿಯನ್ನು ಸಾಮಾನ್ಯವಾಗಿ "ಅಮೆರಿಕನ್ ಜನಾಂಗೀಯ ಸಂಬಂಧಗಳ ಅಧಃಪತನವೆಂದು" ಸೂಚಿಸಲಾಗುತ್ತದೆ. ದಕ್ಷಿಣದಲ್ಲಿ ಸಮಸ್ಯೆಗಳು ಹಾಗು ನಾಗರಿಕ ಹಕ್ಕುಗಳ ಉಲ್ಲಂಘನೆಯು ತೀವ್ರವಾಗುತ್ತಿದ್ದಂತೆ, ಇತರ ಪ್ರದೇಶಗಳ ಆಫ್ರಿಕನ್ ಅಮೇರಿಕನ್ ರಿಗೂ ಸಹ ಸಾಮಾಜಿಕ ಉದ್ವೇಗಗಳ ಬಿಸಿ ತಟ್ಟಿದವು.[೩] ಪುನಾರಚನೆ ನಂತರದ ಅವಧಿಯ ವೈಶಿಷ್ಟ್ಯಗಳು:

 • ಜನಾಂಗೀಯ ಪ್ರತ್ಯೇಕತಾವಾದ ಕಾನೂನಿನನ್ವಯ,[೪] ಸಾರ್ವಜನಿಕ ಸೌಲಭ್ಯಗಳು ಹಾಗು ಸರ್ಕಾರಿ ಸೇವೆಗಳಾದ ಶಿಕ್ಷಣವನ್ನು ಪ್ರತ್ಯೇಕವಾಗಿ "ಬಿಳಿಯ" ಹಾಗು "ಕರಿಯ"ರ ಪ್ರದೇಶಗಳ ನಡುವೆ ಬೇರ್ಪಡಿಸಲಾಗಿತ್ತು. ವಿಶಿಷ್ಟವಾಗಿ, ಕರಿಯರಿಗೆ ಶಿಕ್ಷಣಕ್ಕೆ ಕಡಿಮೆ ಹಣ ನೀಡಲಾಗುತ್ತಿತ್ತು ಹಾಗು ನೀಡಲಾಗುತ್ತಿದ್ದ ಶಿಕ್ಷಣವು ಕಳಪೆ ಮಟ್ಟದಲ್ಲಿರುತ್ತಿತ್ತು.
 • ಮತದಾನದ ಹಕ್ಕು ಕಸಿತ. ಬಿಳಿಯ ಡೆಮೋಕ್ರ್ಯಾಟ್ ಗಳು ಅಧಿಕಾರವನ್ನು ಮತ್ತೆ ಪಡೆದಾಗ, ಅವರು ಕರಿಯರಿಗೆ ಮತದಾನದ ನೋಂದಣಿ ಹೆಚ್ಚು ಅವಕಾಶ ಸಿಗದಂತೆ ಕಾನೂನುಗಳನ್ನು ಮಾಡಿದರು. ಕರಿಯ ಮತದಾರರ ಹೆಸರನ್ನು ಮತದಾರರ ಪಟ್ಟಿಗಳಿಂದ ಬಲವಂತವಾಗಿ ತೆಗೆದುಹಾಕಲಾಯಿತು. ಗಮನಾರ್ಹವಾಗಿ ಆಫ್ರಿಕನ್ ಅಮೆರಿಕನ್ ಮತದಾರರ ಸಂಖ್ಯೆಯಲ್ಲಿ ಇಳಿಮುಖವಾಯಿತು, ಹಾಗು ಅವರು ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಾಮರ್ಥ್ಯವನ್ನು ಕಳೆದುಕೊಂಡರು. ೧೮೯೦ ರಿಂದ ೧೯೦೮ರವರೆಗೆ ಹಿಂದಿನ ಒಕ್ಕೂಟದ ದಕ್ಷಿಣ ರಾಜ್ಯಗಳು ಆಫ್ರಿಕನ್ ಅಮೆರಿಕನ್ನರು ಹಾಗು ಹತ್ತಾರು ಸಾವಿರ ಬಡ ಬಿಳಿಯ ಅಮೆರಿಕನ್ನರ ಮತದಾನದ ಹಕ್ಕನ್ನು ಕಸಿದುಕೊಳ್ಳುವಂತಹ ನಿಬಂಧನೆಗಳನ್ನು ಒಳಗೊಂಡಂತಹ ಸಂವಿಧಾನಗಳನ್ನು ರೂಪಿಸಿದರು.
 • ಶೋಷಣೆ. ಕರಿಯರು, ಲ್ಯಾಟಿನೋಗಳು ಹಾಗು ಏಷಿಯನ್ನರ ಮೇಲೆ ಆರ್ಥಿಕ ದಬ್ಬಾಳಿಕೆಯು ಹೆಚ್ಚಾಯಿತು, ಆರ್ಥಿಕ ಸೌಲಭ್ಯಗಳ ನಿರಾಕರಣೆ, ಹಾಗು ನೌಕರಿಯಲ್ಲಿ ಭೇದಭಾವವು ವ್ಯಾಪಕವಾಗಿತ್ತು.
 • ಹಿಂಸಾಚಾರ. ವೈಯಕ್ತಿಕವಾಗಿ, ಪೋಲಿಸರಿಂದ, ಸಾಂಸ್ಥಿಕವಾಗಿ, ಹಾಗು ಕರಿಯರ ವಿರುದ್ಧ ಸಾಮೂಹಿಕವಾಗಿ ಜನಾಂಗೀಯ ಹಿಂಸಾಚಾರವನ್ನು ಎಸಗಲಾಯಿತು(ಹಾಗು ನೈಋತ್ಯದಲ್ಲಿ ಲ್ಯಾಟಿನೋಗಳ ಮೇಲೆ ಹಾಗು ಕ್ಯಾಲಿಫೋರ್ನಿಯಾದಲ್ಲಿ ಏಷಿಯನ್ನರ ಮೇಲೆ ಹಿಂಸಾಚಾರ ಎಸಗಲಾಯಿತು.

ಆಫ್ರಿಕನ್ ಅಮೆರಿಕನ್ನರು ಹಾಗು ಇತರ ಜನಾಂಗೀಯ ಅಲ್ಪಸಂಖ್ಯಾತರು ಈ ಆಳ್ವಿಕೆಯ ವಿಧಾನವನ್ನು ತಿರಸ್ಕರಿಸಿದರು. ಇದನ್ನು ಹಲವಾರು ಮಾರ್ಗಗಳಲ್ಲಿ ವಿರೋಧಿಸಿದರು ಹಾಗು ಮೊಕದ್ದಮೆಗಳನ್ನು ಹೂಡುವ ಮೂಲಕ, ಹೊಸ ಸಂಸ್ಥೆಗಳ ಮೂಲಕ, ರಾಜಕೀಯ ನೇರ್ಪಡಿಕೆ ಮತ್ತು ಕಾರ್ಮಿಕ ಸಂಘಟನೆ ಮೂಲಕ ಉತ್ತಮ ಅವಕಾಶಗಳಿಗಾಗಿ ಅರಸಿದರು (ಆಫ್ರಿಕನ್-ಅಮೆರಿಕನ್ ನಾಗರಿಕ ಹಕ್ಕುಗಳ ಚಳವಳಿ (೧೮೯೬–೧೯೫೪) ವಿಭಾಗವನ್ನು ನೋಡಿ ). ೧೯೦೯ರಲ್ಲಿ ನ್ಯಾಷನಲ್ ಅಸೋಸಿಯೇಶನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ಕಲರ್ಡ್ ಪೀಪಲ್ (NAACP) ನ್ನು ಸ್ಥಾಪಿಸಲಾಯಿತು. ಸಂಸ್ಥೆಯು ದಾವೆ ಹೂಡುವ ಮೂಲಕ, ಶಿಕ್ಷಣ, ಹಾಗು ಲಾಬಿ ಪ್ರಯತ್ನಗಳಿಂದ ವರ್ಣಬೇಧ ನೀತಿಯನ್ನು ಕೊನೆಗೊಳಿಸಲು ಹೋರಾಟ ನಡೆಸಿತು. ಇದರ ಅತ್ಯುತ್ಕೃಷ್ಟ ಸಾಧನೆಯೆಂದರೆ, ಬ್ರೌನ್ ವಿರುದ್ಧ ಬೋರ್ಡ್ ಆಫ್ ಎಜುಕೇಶನ್ (೧೯೫೪)ನ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಕಾನೂನುಬದ್ಧ ಜಯ, ಈ ತೀರ್ಪು ಬಿಳಿಯರಿಗೆ ಹಾಗು ಕರಿಯರಿಗೆ ಪ್ರತ್ಯೇಕವಾದ ಶಾಲಾ ವ್ಯವಸ್ಥೆಯನ್ನು ತಿರಸ್ಕರಿಸಿತು ಜೊತೆಗೆ ಸೂಚನೆಯ ಮೂಲಕ ಪ್ಲೆಸ್ಸಿ ವಿರುದ್ಧ ಫೆರ್ಗುಸನ್ ರ ಮೊಕದ್ದಮೆಯಲ್ಲಿ ಸ್ಥಾಪಿತವಾದ "ಪ್ರತ್ಯೇಕ ಆದರೂ ಸಮಾನ" ಎಂಬ ಸಿದ್ಧಾಂತವನ್ನು ರದ್ದುಗೊಳಿಸಿತು. ದಕ್ಷಿಣ ಭಾಗದ ಹೊರಗೆ ಕರಿಯರ ಪರಿಸ್ಥಿತಿಯು ಸ್ವಲ್ಪಮಟ್ಟಿಗೆ ಉತ್ತಮವಾಗಿತ್ತು(ಹಲವು ರಾಜ್ಯಗಳಲ್ಲಿ ಅವರುಗಳು ಮತದಾನವನ್ನು ಮಾಡಬಹುದಿತ್ತು ಹಾಗು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಬಹುದಿತ್ತು, ಆದಾಗ್ಯೂ ಅವರು ವಸತಿಯಲ್ಲಿ ಹಾಗು ಉದ್ಯೋಗಗಳಲ್ಲಿ ತಾರತಮ್ಯವನ್ನು ಎದುರಿಸುತ್ತಿದ್ದರು). ೧೯೧೦ ರಿಂದ ೧೯೭೦ರವರೆಗೆ, ಉತ್ತರ ಹಾಗು ಪಶ್ಚಿಮ ಭಾಗಕ್ಕೆ ವಲಸೆ ಹೋಗುವ ಮೂಲಕ ಆಫ್ರಿಕನ್ ಅಮೆರಿಕನ್ನರು ಉತ್ತಮ ಜೀವನಕ್ಕಾಗಿ ಅರಸಿದರು. ಒಟ್ಟಾರೆಯಾಗಿ ಸುಮಾರು ಏಳು ದಶಲಕ್ಷ ಕರಿಯರು ದಕ್ಷಿಣ ಭಾಗವನ್ನು ತೊರೆದರು, ಇದು ಗ್ರೇಟ್ ಮೈಗ್ರೇಶನ್ ಎಂದು ಪರಿಚಿತವಾಗಿದೆ. ಬ್ರೌನ್ ಮೊಕದ್ದಮೆಯಲ್ಲಿ ಜಯದಿಂದ ಉತ್ತೇಜಿತರಾದ ಹಾಗು ತಕ್ಷಣದ ಪ್ರಾಯೋಗಿಕ ಪರಿಣಾಮದ ಕೊರತೆಯಿಂದ ನಿರಾಶೆಗೊಂಡು, ಸಾಮಾನ್ಯ ನಾಗರೀಕರು, ವರ್ಣಭೇಧ ನೀತಿಯ ರದ್ದಿಗೆ ಮೂಲ ಸಾಧನವೆಂದು ಹೇಳಲಾಗುತ್ತಿದ್ದ ಕ್ರಮಿಕ ಪರಿವರ್ತನವಾದಿ, ಕಾನೂನುವಾದಿ ಪ್ರಸ್ತಾಪಗಳನ್ನು ತಿರಸ್ಕರಿಸಿದರು. ಇವರುಗಳು, ದಕ್ಷಿಣದಲ್ಲಿ ಜನಾಂಗೀಯ ಪ್ರತ್ಯೇಕತಾವಾದ ಹಾಗು ಮತದಾರ ದಬ್ಬಾಳಿಕೆ ಪ್ರತಿಪಾದಕರ "ಅಗಾಧ ಪ್ರತಿರೋಧವನ್ನು" ಎದುರಿಸಿದರು. ಇದಕ್ಕೆ ಪ್ರತಿರೋಧವಾಗಿ, ಆಫ್ರಿಕನ್ ಅಮೆರಿಕನ್ನರು, ಅಸಹಕಾರ ಚಳವಳಿ ಎಂದು ಕರೆಯಲ್ಪಡುವ ಅಹಿಂಸಾ ಪ್ರತಿಭಟನೆಯೊಂದಿಗೆ ಸಂಘಟಿತ ಕಾರ್ಯತಂತ್ರದಂತಹ ನೇರವಾದ ಕೃತ್ಯಗಳನ್ನು ಅಳವಡಿಸಿಕೊಂಡರು, ಇದು ೧೯೫೫–೧೯೬೮ರ ನಡುವಿನ ಆಫ್ರಿಕನ್-ಅಮೇರಿಕನ್ ನಾಗರಿಕ ಹಕ್ಕುಗಳ ಚಳವಳಿಯ ಹುಟ್ಟಿಗೆ ಕಾರಣವಾಯಿತು.

"ಕಮ್ಯೂನಿಸ್ಟ್ ಹಣೆಪಟ್ಟಿಯನ್ನು" ದೂರ ಮಾಡುವುದು

[ಬದಲಾಯಿಸಿ]

೧೯೫೧ರ ಡಿಸೆಂಬರ್ ೧೭ರಂದು ಕಮ್ಯೂನಿಸ್ಟ್ ಪಕ್ಷದ-ಅಂಗವಾದ ಸಿವಿಲ್ ರೈಟ್ಸ್ ಕಾಂಗ್ರೆಸ್ ವೀ ಚಾರ್ಜ್ ಜೆನೊಸೈಡ್: ದಿ ಕ್ರೈಮ್ ಆಫ್ ಗವರ್ನ್‌ಮೆಂಟ್ ಎಗೇನೆಸ್ಟ್ ದಿ ನೀಗ್ರೊ ಪೀಪಲ್ ಎಂಬ ಅರ್ಜಿಯನ್ನು ೧೯೫೧ರಲ್ಲಿ ವಿಶ್ವ ಸಂಸ್ಥೆಗೆ ನೀಡಿತು ಇದನ್ನು ಸಾಮಾನ್ಯವಾಗಿ ವೀ ಚಾರ್ಜ್ ಜೆನೊಸೈಡ್ ಎಂದು ಸಂಕ್ಷಿಪ್ತಗೊಳಿಸಲಾಗುತ್ತದೆ, ಇದರಂತೆ ಅಮೆರಿಕಾ ಸಂಯುಕ್ತ ಸಂಸ್ಥಾನ ಸಂಯುಕ್ತ ಸರ್ಕಾರವು, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಗುಂಪುಹತ್ಯೆ ವಿರುದ್ಧ ಕಾನೂನುಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆಯೆಂದು ಇದು ವಾದಿಸಿತು, ಜೊತೆಗೆ UN ಜೆನೊಸೈಡ್ ಕನ್ವೆನ್ಶನ್ ನ IIನೇ ನಿಬಂಧನೆಯ ಪ್ರಕಾರ ಜನಹತ್ಯೆಯ ದೋಷಿ ಎಂದು ವಾದಿಸಿತು. ಈ ಅರ್ಜಿಯನ್ನು ವಿಶ್ವಸಂಸ್ಥೆಗೆ ಎರಡು ಪ್ರತ್ಯೇಕ ಸ್ಥಳಗಳಲ್ಲಿ ನೀಡಲಾಯಿತು: ಗಾನಗೋಷ್ಠಿ ಗಾಯಕ ಹಾಗು ಕಾರ್ಯಕರ್ತರಾಗಿದ್ದ ಪಾಲ್ ರೋಬೆಸನ್ ನ್ಯೂಯಾರ್ಕ್ ನಗರದಲ್ಲಿ UN ಅಧಿಕಾರಿಗೆ ನೀಡಿದರೆ, CRCಯ ಕಾರ್ಯನಿರ್ವಾಹಕ ನಿರ್ದೇಶಕ ವಿಲ್ಲಿಯಮ್ L. ಪ್ಯಾಟರ್ಸನ್, ಪ್ಯಾರಿಸ್ ನಲ್ಲಿರುವ UN ನಿಯೋಗಕ್ಕೆ ಕರಡು ಅರ್ಜಿಯ ಪ್ರತಿಗಳನ್ನು ನೀಡಿದರು. ಕರಡುಅರ್ಜಿಯ ಸಂಪಾದಕರಾಗಿದ್ದ ಪ್ಯಾಟರ್ಸನ್, ಕಮ್ಯೂನಿಸ್ಟ್ ಪಾರ್ಟಿ USAನ ನಾಯಕ ಹಾಗು ಇಂಟರ್ನ್ಯಾಷನಲ್ ಲೇಬರ್ ಡಿಫೆನ್ಸ್ ನ ಮುಖ್ಯಸ್ಥರಾಗಿದ್ದರು, ಈ ಗುಂಪು ಕಮ್ಯೂನಿಸ್ಟ್‌ರಿಗೆ, ಕಾರ್ಮಿಕ ಸಂಘಟನೆಗಳಿಗೆ ಹಾಗು ರಾಜಕೀಯ ಅಥವಾ ಜನಾಂಗೀಯ ಉಪದ್ರವಕ್ಕೆ ಸಂಬಂಧಿಸಿದ ಮೊಕದ್ದಮೆಗಳಲ್ಲಿ ಆಫ್ರಿಕನ್-ಅಮೆರಿಕನ್ನರಿಗೆ ಕಾನೂನು ಪ್ರಾತಿನಿಧ್ಯವನ್ನು ಒದಗಿಸುತ್ತಿತ್ತು. ನಾಗರೀಕ ಹಕ್ಕುಗಳ ಪ್ರತಿಪಾದಕರಾದ ರೋಬೆಸನ್, ಡುಬೋಯಿಸ್ ಹಾಗು ಪ್ಯಾಟರ್ಸನ್ ಹೆಚ್ಚು ರಾಜಕೀಯ ತೀವ್ರಗಾಮಿಗಳಾಗಿ(ಹಾಗು ಈ ರೀತಿಯಾಗಿ US ಸರ್ಕಾರದ ಕಮ್ಯೂನಿಸ್ಟ್ ವಿರೋಧಿ ಶೀತಲ ಸಮರದ ಗುರಿಗಳಾದರು) ಕರಿಯ ಅಮೆರಿಕ ಮುಖ್ಯವಾಹಿನಿ ಹಾಗು NAACP ಎರಡರಲ್ಲೂ ಬಹಳ ಬೇಗನೆ ಒಲವನ್ನು ಕಳೆದುಕೊಂಡರು. ಮುಖ್ಯವಾಹಿನಿಯಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹಾಗು ವಿಶಾಲವಾದ ನೆಲೆಯನ್ನು ಗಳಿಸಲು, ಹೊಸ ಪೀಳಿಗೆಯ ನಾಗರಿಕ ಹಕ್ಕುಗಳ ಕಾರ್ಯಕರ್ತರಿಗೆ, ಕಮ್ಯೂನಿಸ್ಟ್‌ಗೆ ಸಂಬಂಧಿಸಿದ ಯಾರೊಬ್ಬರಿಂದರೂ ಅಥವಾ ಯಾವುದರಿಂದಲೂ ಬಹಿರಂಗವಾಗಿ ದೂರವಿರುವುದು ಉಳಿವಿನ ಸಂಗತಿಯಾಗಿತ್ತು. ಈ ವ್ಯತ್ಯಾಸದ ನಡುವೆಯೂ, ಹಲವು ನಾಗರಿಕ ಹಕ್ಕುಗಳ ನಾಯಕರು ಹಾಗು ಸಂಸ್ಥೆಗಳನ್ನು J ಎಡ್ಗರ್ ಹೂವರ್ ನೇತೃತ್ವದಲ್ಲಿ FBI ತನಿಖೆ ನಡೆಸಿ, "ಕಮ್ಯೂನಿಸ್ಟ್" ಅಥವಾ "ವಿಧ್ವಂಸಕ"ರೆಂಬ ಹಣೆಪಟ್ಟಿ ನೀಡಿತು.

ದಾವೆಯ ಬದಲಿಗೆ ಸಾಮೂಹಿಕ ಕಾರ್ಯಚಟುವಟಿಕೆ

[ಬದಲಾಯಿಸಿ]

ಸಾರ್ವಜನಿಕ ಶಿಕ್ಷಣ, ಶಾಸಕಾಂಗದಲ್ಲಿ ಲಾಬಿ ಮಾಡುವುದು, ಹಾಗು ನ್ಯಾಯಾಂಗ ವ್ಯವಸ್ಥೆಯಲ್ಲಿ ದಾವೆ ಹೂಡುವ ಕಾರ್ಯತಂತ್ರವು, ೨೦ನೇ ಶತಮಾನದ ಮೊದಲಾರ್ಧದಲ್ಲಿ ನಾಗರಿಕ ಹಕ್ಕುಗಳ ಚಳವಳಿಯಲ್ಲಿ ಮಾದರಿಯಾಯಿತು. ಆದರೆ "ನೇರ ಕೃತ್ಯಗಳಿಗೆ" ಮಹತ್ವ ನೀಡಿದ ಬ್ರೌನ್ ರ ಕಾರ್ಯನೀತಿಯೊಂದಿಗೆ ಇದು ವಿಸ್ತಾರಗೊಂಡಿತು—ಮುಖ್ಯವಾಗಿ ಬಹಿಷ್ಕಾರಗಳು, ಧರಣಿ ಸತ್ಯಾಗ್ರಹಗಳು, ಸ್ವಾತಂತ್ರ್ಯ ಸವಾರಿಗಳು, ಮೆರವಣಿಗೆಗಳು ಹಾಗು ಇದೇ ಮಾದರಿಯ ತಂತ್ರಗಳು ಸಮೂಹ ಸಜ್ಜುಗೊಳಿಸುವಿಕೆ, ಅಹಿಂಸಾತ್ಮಕ ಪ್ರತಿರೋಧ ಹಾಗು ಅಸಹಕಾರ ಚಳವಳಿಯ ಮೇಲೆ ಅವಲಂಬಿತವಾಗಿತ್ತು. ಈ ಸಮೂಹ ಕ್ರಿಯೆಯ ಮಾರ್ಗವು ೧೯೬೦ರಿಂದ ೧೯೬೮ರವರೆಗೆ ಚಳವಳಿಯ ಮಾದರಿ ಲಕ್ಷಣವಾಗಿತ್ತು. ಚರ್ಚುಗಳು, ತಮ್ಮ ಸಮುದಾಯಗಳ ಕೇಂದ್ರಗಳು, ಹಾಗು ಸ್ಥಳೀಯ ಮೂಲಮಟ್ಟದ ಸಂಸ್ಥೆಗಳು, ವಿಶಾಲಾಧಾರಿತ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸಲು ಸ್ವಯಂಸೇವಕರನ್ನು ಸಜ್ಜುಗೊಳಿಸಿತು. ಇದು ನ್ಯಾಯಾಲಯದ ಸವಾಲುಗಳನ್ನು ಹೆಚ್ಚಿಸುವ ಸಾಂಪ್ರದಾಯಿಕ ಮಾರ್ಗದ ಬದಲಿಗೆ ಬಹಳ ನೇರವಾದ ಹಾಗು ಸಂಭಾವ್ಯವಾಗಿ ಬದಲಾವಣೆಯನ್ನು ಸೃಷ್ಟಿಸುವ ವೇಗದ ಸಾಧನವಾಗಿತ್ತು. ೧೯೫೨ರಲ್ಲಿ, T. R. M. ಹೊವರ್ಡ್ ನೇತೃತ್ವದ ರೀಜನಲ್ ಕೌನ್ಸಿಲ್ ಆಫ್ ನೀಗ್ರೋ ಲೀಡರ್ಶಿಪ್, ಕರಿಯರಿಗೆ ವಿಶ್ರಾಂತಿ ಕೊಠಡಿಗಳನ್ನು ಒದಗಿಸಲು ನಿರಾಕರಿಸಿದ ಮಿಸಿಸಿಪ್ಪಿ ಅನಿಲ ಕೇಂದ್ರಗಳ ಬಹಿಷ್ಕಾರವನ್ನು ಯಶಸ್ವಿಯಾಗಿ ಸಂಘಟಿಸಿತು. ಮೊಂಟ್ಗೋಮೆರಿ ಇಂಪ್ರೂವ್ಮೆಂಟ್ ಅಸೋಸಿಯೇಶನ್ —ಮೊಂಟ್ಗೋಮೆರಿ ಬಸ್ ಬಹಿಷ್ಕಾರವನ್ನು ಮುನ್ನಡೆಸಲು ರೂಪಿಸಲಾಯಿತು. ಇದು ಒಂದು ಫೆಡರಲ್ ನ್ಯಾಯಾಲಯವು ಮೊಂಟ್ಗೋಮೆರಿ ತನ್ನ ಬಸ್ಸುಗಳಲ್ಲಿ ವರ್ಣಭೇದ ನೀತಿಯನ್ನು ರದ್ದುಗೊಳಿಸಬೇಕೆಂಬ ಆದೇಶ ಹೊರಡಿಸುವವರೆಗೂ ಬಹಿಷ್ಕಾರವನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆಸುವಲ್ಲಿ ಯಶಸ್ವಿಯಾಯಿತು. ಮೊಂಟ್ಗೋಮೆರಿ ಬಹಿಷ್ಕಾರದ ಯಶಸ್ಸಿನಿಂದ ಅದರ ನಾಯಕ ಡಾ. ಮಾರ್ಟಿನ್ ಲೂಥರ್ ಕಿಂಗ್, ಜೂ., ರಾಷ್ಟ್ರೀಯವಾಗಿ ಒಬ್ಬ ಹೆಸರಾಂತ ವ್ಯಕ್ತಿಯಾದರು. ಇದು ಇತರ ಬಸ್ ಬಹಿಷ್ಕಾರಗಳನ್ನೂ ಉತ್ತೇಜಿಸಿತು, ಉದಾಹರಣೆಗೆ ಬಹಳ ಯಶಸ್ವಿಯಾದ ೧೯೫೬–೧೯೫೭ರ ಅವಧಿಯಲ್ಲಿ ನಡೆದ ತಲ್ಲಹಸ್ಸೀ, ಫ್ಲೋರಿಡಾದ ಬಹಿಷ್ಕಾರ.[೫] ೧೯೫೭ರಲ್ಲಿ, ಮೊಂಟ್ಗೋಮೆರಿ ಇಂಪ್ರೂವ್ಮೆಂಟ್ ಅಸೋಸಿಯೇಶನ್ ನ ನಾಯಕರುಗಳಾದ ಡಾ. ಕಿಂಗ್ ಹಾಗು ರೆವರೆಂಡ್ ಜಾನ್ ಡುಫ್ಫಿ, ಇದೇ ರೀತಿ ಬಹಿಷ್ಕಾರ ಪ್ರಯತ್ನಗಳನ್ನು ನಡೆಸಿದ ಇತರ ಚರ್ಚ್ ನಾಯಕರುಗಳೊಂದಿಗೆ ಒಂದಾದರು, ಉದಾಹರಣೆಗೆ ತಲ್ಲಹಸ್ಸೀಯ ರೆವರೆಂಡ್ c. K. ಸ್ಟೀಲೆ ಹಾಗು ಬ್ಯಾಟನ್ ರೂಶ್ ನ ರೆವರೆಂಡ್ T. J. ಜೆಮಿಸನ್; ಹಾಗು ಇತರ ಕಾರ್ಯಕರ್ತರಾದ ರೆವರೆಂಡ್ ಫ್ರೆಡ್ ಷಟ್ಟಲ್ಸ್ ವರ್ತ್, ಎಲ್ಲಾ ಬೇಕರ್, A. ಫಿಲಿಪ್ ರಾನ್ಡಾಲ್ಫ್, ಬಾಯರ್ಡ್ ರಸ್ಟಿನ್ ಹಾಗು ಸ್ಟ್ಯಾನ್ಲೆ ಲೆವಿಸನ್ ರೊಂದಿಗೆ ಜೊತೆಗೂಡಿ ಸದರನ್ ಕ್ರಿಶ್ಚಿಯನ್ ಲೀಡರ್ಶಿಪ್ ಕಾನ್ಫರೆನ್ಸ್ ನ್ನು ರೂಪಿಸಿದರು. ಅಟ್ಲಾಂಟ, ಜಾರ್ಜಿಯಾನಲ್ಲಿ ತನ್ನ ಪ್ರಮುಖ ಕಾರ್ಯಸ್ಥಾನವನ್ನು ಹೊಂದಿದ್ದ SCLC, NAACPಯ ಮಾದರಿಯಲ್ಲಿ ಸರ್ವಸದಸ್ಯರ ಜಾಲವನ್ನು ಸೃಷ್ಟಿಸಲು ಪ್ರಯತ್ನಿಸಲಿಲ್ಲ. ವರ್ಣಭೇದ ನೀತಿ ರದ್ದಿಗೆ ಹೋರಾಡುವ ಸ್ಥಳೀಯರ ಪ್ರಯತ್ನಕ್ಕೆ ತರಬೇತಿಯನ್ನು ಹಾಗು ನಾಯಕತ್ವದ ನೆರವನ್ನು ಒದಗಿಸಿತು. ಸಂಸ್ಥೆಯ ಕೇಂದ್ರಸ್ಥಾನವು, ಇಂತಹ ಅಭಿಯಾನಗಳಿಗೆ ನೆರವಾಗಲು ಬಹುತೇಕವಾಗಿ ಉತ್ತರ ಭಾಗಗಳಿಂದ ಹಣವನ್ನು ಸಂಗ್ರಹಿಸಿತು. ಇದು ತನ್ನ ಪ್ರಮುಖ ಸಿದ್ಧಾಂತ ಹಾಗು ಜನಾಂಗೀಯ ತಾರತಮ್ಯವನ್ನು ಎದುರಿಸುವ ತನ್ನ ಮೂಲ ವಿಧಾನ ಎರಡಕ್ಕೂ ಅಹಿಂಸಾ ಮಾರ್ಗವನ್ನು ಅಳವಡಿಸಿಕೊಂಡಿತು. ೧೯೫೯ರಲ್ಲಿ, ಸೆಪ್ಟಿಮಾ ಕ್ಲಾರ್ಕ್, ಬರ್ನಿಸ್ ರಾಬಿನ್ಸನ್, ಹಾಗು ಇಸಾವು ಜೆಂಕಿನ್ಸ್, ಟೆನ್ನಿಸ್ಸಿಯಲ್ಲಿದ್ದ ಹೈಲ್ಯಾಂಡರ್ ಫೋಕ್ ಸ್ಕೂಲ್ ನ ಸಹಾಯದೊಂದಿಗೆ, ದಕ್ಷಿಣ ಕ್ಯಾರೊಲಿನಾದ ಸೀ ಐಲ್ಯಾಂಡ್ಸ್ ನಲ್ಲಿ ಮೊದಲ ಸಿಟಿಜನ್‌ಶಿಪ್ ಶಾಲೆಗಳನ್ನು ಆರಂಭಿಸಿದರು. ಮತದಾನದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಹಾಯವಾಗುವಂತೆ ಕರಿಯರಿಗೆ ಸಾಕ್ಷರತೆಯನ್ನು ಬೋಧಿಸಿದರು. ಈ ಕಾರ್ಯಕ್ರಮವು ಅಗಾಧವಾದ ಯಶಸ್ಸನ್ನು ಗಳಿಸಿತು ಹಾಗು ಜಾನ್ಸ್ ದ್ವೀಪದಲ್ಲಿ ಕರಿಯ ಮತದಾರರ ಸಂಖ್ಯೆಯನ್ನು ಮುಪ್ಪಟ್ಟುಗೊಳಿಸಿತು. SCLC ಈ ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ವಹಿಸಿಕೊಂಡು, ಬೇರೆ ಕಡೆಗಳಲ್ಲಿ ಇದೇ ರೀತಿಯ ಫಲಿತಾಂಶಗಳನ್ನು ಪಡೆಯಿತು.

ಪ್ರಮುಖ ಘಟನೆಗಳು

[ಬದಲಾಯಿಸಿ]

ಬ್ರೌನ್ v. ಬೋರ್ಡ್ ಆಫ್ ಎಜುಕೇಶನ್, ೧೯೫೪

[ಬದಲಾಯಿಸಿ]

೧೯೫೧ರ ವಸಂತ ಋತುವಿನಲ್ಲಿ, ವರ್ಜೀನಿಯಾ ರಾಜ್ಯದ ಶೈಕ್ಷಣಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಕರಿಯ ವಿದ್ಯಾರ್ಥಿಗಳ ನಡುವೆ ದೊಡ್ಡ ಕ್ಷೋಬೆ ಉಂಟಾಯಿತು. ಆ ಅವಧಿಯಲ್ಲಿ ಪ್ರಿನ್ಸ್ ಎಡ್ವರ್ಡ್ ಕೌಂಟಿಯಲ್ಲಿ, ಮೊಟೋನ್ ಪ್ರೌಢ ಶಾಲೆಯನ್ನು ಪ್ರತ್ಯೇಕಗೊಳಿಸಲಾಯಿತು ಹಾಗು ವಿದ್ಯಾರ್ಥಿಗಳು ಎರಡು ಸಂಗತಿಗಳ ವಿರುದ್ಧ ತಾವೇ ಹೋರಾಡಲು ನಿರ್ಧರಿಸಿದರು: ಅತಿ ಜನನಿಬಿಡವಾಗಿದ್ದ ಶಾಲಾ ಆವರಣಗಳು ಹಾಗು ತಮ್ಮ ಶಾಲೆಯಲ್ಲಿದ್ದ ಅನನುಕೂಲ ಪರಿಸ್ಥಿತಿಗಳು. ದಕ್ಷಿಣದಲ್ಲಿದ್ದ ಕರಿಯರಿಂದ ಈ ರೀತಿಯಾದ ನಿರ್ದಿಷ್ಟ ನಡವಳಿಕೆಯು ಅನಿರೀಕ್ಷಿತವಾಗಿತ್ತು ಜೊತೆಗೆ ಇದನ್ನು ಅನುಚಿತವೆಂದು ಪರಿಗಣಿಸಲಾಗುತ್ತಿತ್ತು ಏಕೆಂದರೆ, ಕರಿಯರು ತಮ್ಮ ಅಧೀನದಲ್ಲಿರಬೇಕೆಂದು ಬಿಳಿಯರು ನಿರೀಕ್ಷಿಸುತ್ತಿದ್ದರು. ಇದೆಲ್ಲಕ್ಕಿಂತ ಹೆಚ್ಚಾಗಿ, NAACPಯ ಕೆಲವು ಸ್ಥಳೀಯ ನಾಯಕರುಗಳು, ಶಾಲಾ ಪ್ರತ್ಯೇಕತೆಯ ಬಗ್ಗೆ ಜಿಮ್ ಕ್ರೋನ ನಿಯಮಗಳ ವಿರುದ್ಧ ನಡೆಸಲಾಗುತ್ತಿದಂತಹ ಪ್ರತಿಭಟನೆಯನ್ನು ಕೈಬಿಡಬೇಕೆಂದು ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರು. NAACPಯ ಬೇಡಿಕೆಗಳಿಗೆ ವಿದ್ಯಾರ್ಥಿಗಳು ಸಮ್ಮತಿಸದಿದ್ದಾಗ, NAACP ತಾನೇತಾನಾಗಿ ಶಾಲಾ ಪ್ರತ್ಯೇಕತೆಯ ವಿರುದ್ಧ ಹೋರಾಟದಲ್ಲಿ ಅವರೊಂದಿಗೆ ಸೇರಿಕೊಂಡಿತು. ಬ್ರೌನ್ ವಿರುದ್ಧ ಬೋರ್ಡ್ ಆಫ್ ಎಜುಕೇಶನ್ ಎಂದು ಕರೆಯಲ್ಪಡುವ ಈ ಪ್ರತಿಭಟನೆಯು, ಈವರೆಗೆ ದಾಖಲಾಗಿದ್ದ ಐದು ಪ್ರಕರಣಗಳಲ್ಲಿ ಇದೂ ಸಹ ಒಂದಾಗಿತ್ತು.[೬] ಮೇ ೧೭, ೧೯೫೪ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಸರ್ವೋಚ್ಚ ನ್ಯಾಯಾಲಯವು, ಬ್ರೌನ್ ವಿರುದ್ಧ ಬೋರ್ಡ್ ಆಫ್ ಎಜುಕೇಶನ್ ಆಫ್ ಟೋಪೇಕ, ಕಾನ್ಸಾಸ್ ಎಂದು ಕರೆಯಲ್ಪಡುವ ಮೊಕದ್ದಮೆಗೆ ಸಂಬಂಧಿಸಿದಂತೆ ತೀರ್ಪನ್ನು ನೀಡಿತು. ಈ ಮೊಕದ್ದಮೆಯಲ್ಲಿ ಫಿರ್ಯಾದಿಗಳು ತಮ್ಮ ಬಿಳಿಯ ಸಹಪಾಟಿಗಳಿಂದ ಪ್ರತ್ಯೇಕಸಾರ್ವಜನಿಕ ಶಾಲೆಗಳಲ್ಲಿ ಕರಿಯರು ಶಿಕ್ಷಣ ಪಡೆಯುವ ವ್ಯವಸ್ಥೆಯು ಸಂವಿಧಾನ ಬಾಹಿರವೆಂದು ಆರೋಪಿಸಿದ್ದರು. ನ್ಯಾಯಾಲಯದ ತೀರ್ಪು ಈ ರೀತಿಯಾಗಿತ್ತು "ಸಾರ್ವಜನಿಕ ಶಾಲೆಗಳಲ್ಲಿ ಬಿಳಿಯರು ಹಾಗು ಕರಿಯ ಮಕ್ಕಳನ್ನು ಪ್ರತ್ಯೇಕಿಸುವುದು, ಕರಿಯ ಮಕ್ಕಳ ಮೇಲೆ ಅಪಾಯಕಾರಿ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ಕಾನೂನಿನ ಸಮ್ಮತಿ ದೊರೆತರೆ ಪರಿಣಾಮವು ಇನ್ನೂ ಅಧಿಕವಾಗಿರುತ್ತದೆ; ಜನಾಂಗಗಳನ್ನು ಬೇರ್ಪಡಿಸುವ ನೀತಿಯು ನಿಗ್ರೋ ಗುಂಪಿನ ಕೀಳರಿಮೆಯನ್ನು ಸೂಚಿಸುತ್ತದೆ ಎಂದು ಸಾಮಾನ್ಯವಾಗಿ ವ್ಯಾಖ್ಯಾನಿಸಲಾಗುತ್ತದೆ." NAACP ಪರವಾದ ವಕೀಲರು, ಶೈಕ್ಷಣಿಕ ಮಂಡಳಿ ವಿರುದ್ಧದ ಬ್ರೌನ್ ಮೊಕದ್ದಮೆಯನ್ನು ಗೆಲ್ಲಲು ಕೆಲವು ಸಮಂಜಸ ಸಾಕ್ಷ್ಯಗಳನ್ನು ಒಟ್ಟುಗೂಡಿಸಬೇಕಾಯಿತು. ಪ್ರತ್ಯೇಕ ಶಾಲಾ ವ್ಯವಸ್ಥೆಯ ವಿಷಯವನ್ನು ನ್ಯಾಯಾಲಯಕ್ಕೆ ತಿಳಿಸಲು ಅವರು ಅನುಸರಿಸಿದ ಮಾರ್ಗವು ಹಲವಾರು ವಾದಗಳನ್ನು ಒಂದೊಂದಾಗಿ ಮಂಡಿಸುವುದಾಗಿತ್ತು. ಅದರಲ್ಲಿ ಒಂದು ಸಂಗತಿಯು, ಶಾಲಾ ವಾತಾವರಣದಲ್ಲಿ ಅಂತರಜನಾಂಗೀಯ ಸಂಪರ್ಕಕ್ಕೆ ಒಡ್ಡಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದ್ದಾಗಿತ್ತು. ಇದಕ್ಕೆ ಪ್ರತಿಯಾಗಿ, ಜನಾಂಗಕ್ಕೆ ಸಂಬಂಧಿಸಿದಂತೆ ಸಮಾಜವು ಬೀರುವ ಒತ್ತಡಗಳಿಗೆ ಗುರಿಯಾಗದಂತೆ ಮಕ್ಕಳಿಗೆ ನೆರವಾಗುತ್ತದೆ ಎಂದು ಹೇಳಲಾಯಿತು. ಈ ರೀತಿಯಾಗಿ, ಪ್ರಜಾಪ್ರಭುತ್ವದಲ್ಲಿ ಜೀವಿಸಲು ಒಂದು ಉತ್ತಮ ಅವಕಾಶವನ್ನು ನೀಡುತ್ತದೆ. ಇದರ ಜೊತೆಯಲ್ಲಿ, ಮತ್ತೊಂದು ಸಂಗತಿಯು, ಹೇಗೆ 'ಶಿಕ್ಷಣವು' ಮಾನಸಿಕ, ಶಾರೀರಿಕ ಹಾಗು ನೈತಿಕ ಶಕ್ತಿಗಳು ಹಾಗು ಮಾನವನ ಸಾಮರ್ಥ್ಯಗಳಿಗೆ ತರಬೇತಿ ನೀಡಿ, ಅದನ್ನು ಅಭಿವೃದ್ಧಿ ಪಡಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಒಳಗೊಳ್ಳುತ್ತವೆಂಬ ಮಹತ್ವವನ್ನು ಉಲ್ಲೇಖಿಸುತ್ತದೆ".[೭] NAACPಯ ಗುರಿಗಳೇನೆಂದರೆ ಆಫ್ರಿಕನ್ ಅಮೇರಿಕನ್ ಮಕ್ಕಳು ಪ್ರತ್ಯೇಕ ಶಾಲಾ ವ್ಯವಸ್ಥೆಯ ಕಾನೂನುಬದ್ಧತೆಗೆ ಬಲಿಪಶುವಾದ ವಾಸ್ತವವನ್ನು ಹಾಗು ಅವರಿಗೆ ಭವ್ಯ ಭವಿಷ್ಯದ ಭರವಸೆ ಇಲ್ಲದಿರುವ ಬಗ್ಗೆ ನ್ಯಾಯಾಲಯದ ಗಮನವನ್ನು ಸೆಳೆಯುವುದಾಗಿತ್ತು ಎಂದು ಗೋಲುಬೋಫ್ ಪುಸ್ತಕದಲ್ಲಿ ವಿವರಿಸಲಾಗಿದೆ. ಇತರ ಸಂಸ್ಕೃತಿಗಳಿಗೆ ತೆರೆದುಕೊಳ್ಳುವ ಅವಕಾಶದಿಂದ ವಂಚಿತರಾಗಿ, ಕರಿಯ ಮಕ್ಕಳು, ವಯಸ್ಕರಾದಾಗ ಸಾಮಾನ್ಯ ಜೀವನವನ್ನು ನಡೆಸಲು ಪ್ರಯತ್ನಿಸುವಾಗ ಇದು ಅಡ್ಡಿಯಾಗುತ್ತದೆ. ನ್ಯಾಯಾಲಯವು, ವರ್ಣಭೇದ ನೀತಿ ಪ್ರತಿಪಾದನೆಯನ್ನು ಸ್ಥಾಪಿಸಿದ ಪ್ಲೆಸ್ಸಿ V. ಫೆರ್ಗುಸನ್ (೧೮೯೬) ರ ಸಾರ್ವತ್ರಿಕವಾದ "ಪ್ರತ್ಯೇಕ ಆದರೂ ಸಮಾನ" ಮಟ್ಟ ಹಾಗು ಶಾಲೆಗಳಿಗೆ ಈ ಮಾನದಂಡವನ್ನು ಬಳಕೆಮಾಡಿದ ಕಮ್ಮಿಂಗ್ ವಿರುದ್ಧ ರಿಚ್ಮಂಡ್ ಕೌಂಟಿ ಬೋರ್ಡ್ ಆಫ್ ಎಜುಕೇಶನ್(೧೮೯೯) ಎರಡನ್ನೂ ಸಂವಿಧಾನ ಬಾಹಿರವೆಂದು ತಳ್ಳಿ ಹಾಕಿತು. ಅದರ ಮರು ವರ್ಷ, ಬೋರ್ಡ್ ಆಫ್ ಎಜುಕೇಶನ್ ವಿರುದ್ಧದ ಬ್ರೌನ್ ಮೊಕದ್ದಮೆಯಲ್ಲಿ, ನ್ಯಾಯಾಲಯವು ಪ್ರತ್ಯೇಕ ಶಾಲಾ ವ್ಯವಸ್ಥೆಯನ್ನು "ಎಲ್ಲ ವಿವೇಚಿತ ವೇಗದೊಂದಿಗೆ" ಹಂತಹಂತವಾಗಿ ರದ್ದುಮಾಡಬೇಕೆಂದು ಆದೇಶಿಸಿತು.[೮]

ರೋಸಾ ಪಾರ್ಕ್ಸ್ ಹಾಗು ಮೊಂಟ್ಗೋಮೆರಿ ಬಸ್ ಬಹಿಷ್ಕಾರ, ೧೯೫೫–೧೯೫೬

[ಬದಲಾಯಿಸಿ]

೧೯೫೫ರ ಡಿಸೆಂಬರ್ ೧ರಂದು, ರೋಸಾ ಪಾರ್ಕ್ಸ್("ನಾಗರಿಕ ಹಕ್ಕುಗಳ ಚಳವಳಿಯ ಜನನಿ"), ಬಸ್ಸಿನಲ್ಲಿ ಬಿಳಿಯ ಪ್ರಯಾಣಿಕನಿಗೆ ಅವಕಾಶ ನೀಡುವುದಕ್ಕಾಗಿ ತಮ್ಮ ಆಸನವನ್ನು ತೆರವುಗೊಳಿಸಲು ನಿರಾಕರಿಸಿದರು. ಅವರು ಮೊಂಟ್ಗೋಮೆರಿ NAACP ವಿಭಾಗದ ಕಾರ್ಯದರ್ಶಿಯಾಗಿದ್ದರು ಹಾಗು ಆಗಷ್ಟೇ ಟೆನ್ನಿಸ್ಸಿಯ ಹೈಲ್ಯಾಂಡರ್ ಸೆಂಟರ್ ನಲ್ಲಿ ಆಯೋಜಿಸಲಾಗಿದ್ದ ಸಭೆಯನ್ನು ಮುಗಿಸಿಕೊಂಡು ಹಿಂದಿರುಗುತ್ತಿದ್ದರು. ಸಭೆಯಲ್ಲಿ ಅಹಿಂಸಾತ್ಮಕ ನಾಗರಿಕ ಅಸಹಕಾರ ಚಳವಳಿಯನ್ನು ಪ್ರತಿಭಟನೆಯ ಕಾರ್ಯನೀತಿಯನ್ನಾಗಿ ಬಳಸಿಕೊಳ್ಳಬೇಕೆಂದು ಚರ್ಚಿಸಲಾಗಿತ್ತು. ಪಾರ್ಕ್ಸ್ ರನ್ನು ಬಂಧಿಸಿ,ವಿಚಾರಣೆಗೆ ಒಳಪಡಿಸಲಾಯಿತು. ಅನುಚಿತ ವರ್ತನೆಗೆ ಹಾಗು ಸ್ಥಳೀಯ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ತಪ್ಪಿತಸ್ಥರೆಂದು ನಿರ್ಣಯಿಸಲಾಯಿತು. ಈ ಘಟನೆಯ ಬಗ್ಗೆ ಕರಿಯರ ಸಮುದಾಯಕ್ಕೆ ಸುದ್ದಿ ತಿಳಿದ ನಂತರ, ೫೦ ಮಂದಿ ಆಫ್ರಿಕನ್ ಅಮೆರಿಕನ್ ನಾಯಕರು ಒಟ್ಟಾಗಿ ಸೇರಿ, ಹೆಚ್ಚು ಮಾನವೀಯತೆಯಿಂದ ಕೂಡಿದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಬೇಡಿಕೆಯಿಟ್ಟು, ಮೊಂಟ್ಗೋಮೆರಿ ಬಸ್ ಬಹಿಷ್ಕಾರವನ್ನು ಆಯೋಜಿಸಿದರು. ಆದಾಗ್ಯೂ,ಯಾವುದೇ ಸುಧಾರಣೆಯನ್ನು ಮಾಡಲು ತಿರಸ್ಕರಿಸಿದ ನಂತರ, E.D. ನಿಕ್ಸನ್ ನೇತೃತ್ವದ NAACP ಸಾರ್ವಜನಿಕ ಸಾರಿಗೆಯ ಬಸ್ಸುಗಳಲ್ಲಿ ಸಂಪೂರ್ಣ ವರ್ಣಭೇದ ನೀತಿಯ ರದ್ದಿಗೆ ಒತ್ತಾಯಿಸಿದರು. ಮೊಂಟ್ಗೋಮೆರಿಯದ ಬಹುತೇಕ ೫೦,೦೦೦ ಆಫ್ರಿಕನ್ ಅಮೆರಿಕನ್ನರ ಬೆಂಬಲದೊಂದಿಗೆ, ಸಾರ್ವಜನಿಕ ಸಾರಿಗೆಯಲ್ಲಿ ಆಫ್ರಿಕನ್-ಅಮೆರಿಕನ್ನರು ಹಾಗು ಬಿಳಿಯರ ನಡುವೆ ಪ್ರತ್ಯೇಕತೆಯನ್ನು ತೆರವು ಮಾಡಿದ ಸ್ಥಳೀಯ ಆದೇಶ ಹೊರಡುವವರೆಗೂ ಬಹಿಷ್ಕಾರವು ೩೮೧ ದಿವಸಗಳ ಕಾಲ ನಡೆಯಿತು. ಮೊಂಟ್ಗೋಮೆರಿಯ ಶೇಕಡಾ ತೊಂಬತ್ತರಷ್ಟು ಆಫ್ರಿಕನ್ ಅಮೆರಿಕನ್ನರು ಬಹಿಷ್ಕಾರಗಳಲ್ಲಿ ಭಾಗಿಯಾದರು. ಇದು ಸಾರಿಗೆಯ ಆದಾಯವನ್ನು ೮೦%ರಷ್ಟು ಕಡಿಮೆ ಮಾಡಿತು. ೧೯೫೬ರಲ್ಲಿ ಫೆಡರಲ್ ನ್ಯಾಯಾಲಯವು ಮೊಂಟ್ಗೋಮೆರಿ ಬಸ್‌ಗಳಲ್ಲಿ ವರ್ಣಭೇದನೀತಿಯನ್ನು ರದ್ದುಮಾಡಬೇಕೆಂದು ಆದೇಶಿಸಿದ ನಂತರ ಬಹಿಷ್ಕಾರ ಕೊನೆಗೊಂಡಿತು.[೯] ಮಾರ್ಟಿನ್ ಲೂಥರ್ ಕಿಂಗ್, ಜೂ. ಎಂಬ ಯುವ ಬ್ಯಾಪ್ಟಿಸ್ಟ್ ಮಂತ್ರಿಯು ಮೊಂಟ್ಗೋಮೆರಿ ಇಂಪ್ರೂವ್ಮೆಂಟ್ ಅಸೋಸಿಯೇಶನ್ ನ ಅಧ್ಯಕ್ಷರಾಗಿದ್ದರು, ಈ ಸಂಘವು ಬಹಿಷ್ಕಾರವನ್ನು ನಿರ್ದೆಶಿಸುತ್ತಿತ್ತು. ಈ ಪ್ರತಿಭಟನೆಯಿಂದಾಗಿ ಕಿಂಗ್ ರಾಷ್ಟ್ರೀಯ ಗಣ್ಯ ವ್ಯಕ್ತಿಯಾದರು. ಕ್ರಿಶ್ಚಿಯನ್ ಸಹೋದರತ್ವ ಹಾಗು ಅಮೆರಿಕನ್ ಆದರ್ಶೀಕರಣ ಪ್ರವೃತ್ತಿಗೆ ಅವರ ಸ್ಫುಟವಾದ ನಿವೇದನೆಗಳು ದಕ್ಷಿಣ ಭಾಗದಲ್ಲಿ ಹಾಗು ಅದರ ಹೊರಗೂ ಒಂದು ಸಕಾರಾತ್ಮಕ ಭಾವನೆಯನ್ನು ಸೃಷ್ಟಿಸಿತು.

ಲಿಟಲ್ ರಾಕ್‌ನ ವರ್ಣಭೇದ ನೀತಿ ರದ್ದು, ೧೯೫೭

[ಬದಲಾಯಿಸಿ]

ಲಿಟಲ್ ರಾಕ್, ಅರ್ಕನ್ಸಾಸ್, ತುಲನಾತ್ಮಕವಾಗಿ ಪ್ರಗತಿ ಹೊಂದಿದ್ದ ದಕ್ಷಿಣದ ರಾಜ್ಯವಾಗಿತ್ತು. ಆದಾಗ್ಯೂ, ಇಲ್ಲಿ ಬಿಕ್ಕಟ್ಟಿನ ಪರಿಸ್ಥಿತಿಯು ಎದುರಾಯಿತು, ಅರ್ಕನ್ಸಾಸ್‌ನ ಗವರ್ನರ್ ಓರ್ವಲ್ ಫೌಬಸ್ ಸೆಪ್ಟೆಂಬರ್ ೪ ರಂದು ಒಂಬತ್ತು ಆಫ್ರಿಕನ್-ಅಮೆರಿಕನ್ ವಿದ್ಯಾರ್ಥಿಗಳ ಪ್ರವೇಶವನ್ನು ತಡೆಹಿಡಿಯಬೇಕೆಂದು ನ್ಯಾಷನಲ್ ಗಾರ್ಡ್‌ ಗೆ ಕರೆ ನೀಡಿದರು. ಏಕೀಕೃತ ಶಾಲೆಯಾದ ಲಿಟಲ್ ರಾಕ್ ಸೆಂಟ್ರಲ್ ಹೈಸ್ಕೂಲ್ ನಲ್ಲಿ ಕಲಿಯುವ ಹಕ್ಕು ನೀಡಬೇಕೆಂದು ಈ ವಿದ್ಯಾರ್ಥಿಗಳು ದಾವೆ ಹೂಡಿದ್ದರು.[೧೦] ಈ ಒಂಬತ್ತು ವಿದ್ಯಾರ್ಥಿಗಳು ಅತ್ಯುತ್ತಮ ದರ್ಜೆಗಳನ್ನು ಪಡೆದ ಕಾರಣಕ್ಕೆ ಸೆಂಟ್ರಲ್ ಹೈನಲ್ಲಿ ಕಲಿಯಲು ಆಯ್ಕೆಯಾಗಿದ್ದರು. ಶಾಲೆಯ ಮೊದಲ ದಿವಸ, ಒಂಬತ್ತರಲ್ಲಿ ಒಬ್ಬ ವಿದ್ಯಾರ್ಥಿನಿಯು ಹಾಜರಾದಳು, ಅವಳಿಗೆ ಶಾಲೆಗೆ ಹೋಗುವುದರಿಂದ ಉಂಟಾಗಬಹುದಾದ ಅಪಾಯದ ಬಗ್ಗೆ ಯಾವುದೇ ದೂರವಾಣಿ ಕರೆಗಳು ಬಂದಿರಲಿಲ್ಲ. ಅವಳನ್ನು ಶಾಲೆಯ ಹೊರಗೆ ಬಿಳಿಯ ಪ್ರತಿಭಟನಾಕಾರರು ಪೀಡಿಸಿದರು ಹಾಗು ಆಕೆಯ ರಕ್ಷಣೆಗಾಗಿ ಪೊಲೀಸರು ಅವಳನ್ನು ಗಸ್ತು ಪೋಲೀಸ್ ಕಾರ್‌ನಲ್ಲಿ ಕರೆದೊಯ್ಯಬೇಕಾಯಿತು. ಈ ಘಟನೆಯ ನಂತರ, ಒಂಬತ್ತು ವಿದ್ಯಾರ್ಥಿಗಳು, ಜೀಪ್ ಗಳಲ್ಲಿ ಬರುತ್ತಿದ್ದ ಮಿಲಿಟರಿಯವರ ಬೆಂಗಾವಲಿನಲ್ಲಿ ಶಾಲೆಗೆ ಸರದಿ ಪ್ರಕಾರವಾಗಿ ಕಾರ್ ನ್ನು ಓಡಿಸಿಕೊಂಡು ಬರಬೇಕಿತ್ತು. ಫೌಬಸ್ ವರ್ಣಭೇಧ ನೀತಿಯ ಒಬ್ಬ ಘೋಷಿತ ಪ್ರತಿಪಾದಕನಲ್ಲ. ಅರ್ಕಾನ್ಸಾಸ್ ಡೆಮೋಕ್ರ್ಯಾಟಿಕ್ ಪಕ್ಷವು, ಅಂದಿನ ರಾಜ್ಯದ ರಾಜಕೀಯವನ್ನು ನಿಯಂತ್ರಿಸುತ್ತಿತ್ತು, ಫೌಬಸ್, ಬ್ರೌನ್ ತೀರ್ಪನ್ನು ಅನುಸರಣೆ ಮಾಡುವಂತೆ ಅರ್ಕನ್ಸಾಸ್ ರಾಜ್ಯವನ್ನು ತಂದಿರುವ ಬಗ್ಗೆ ತನಿಖೆ ನಡೆಸುವುದಾಗಿ ಸೂಚಿಸಿದ ನಂತರ ಅದು ಫೌಬಸ್‌ನ ಮೇಲೆ ಗಮನಾರ್ಹ ಒತ್ತಡ ಹೇರಿತು. ನಂತರ ಫೌಬಸ್ ಏಕೀಕರಣದ ವಿರುದ್ಧ ಹಾಗು ಅದಕ್ಕೆ ಅಗತ್ಯವಾದ ಫೆಡರಲ್ ಕೋರ್ಟ್ ನ ಆದೇಶದ ವಿರುದ್ಧ ತಮ್ಮ ನಿಲುವನ್ನು ತೆಗೆದುಕೊಂಡರು. ಫೌಬಸ್ ನ ಆದೇಶವು ಅಧ್ಯಕ್ಷ ಡಿವೈಟ್ D. ಐಸೆನ್‌ಹೋವರ್ ರ ಗಮನವನ್ನು ಸೆಳೆಯಿತು, ಇವರು ಫೆಡರಲ್ ನ್ಯಾಯಾಲಯಗಳ ಆದೇಶಗಳನ್ನು ಜಾರಿಗೊಳಿಸಲು ನಿರ್ಧರಿಸಿರುತ್ತಾರೆ. ಹೆಚ್ಚೆಂದರೆ ಸಾರ್ವಜನಿಕ ಶಾಲೆಗಳ ವರ್ಣಭೇಧ ನೀತಿ ರದ್ದುಮಾಡುವ ಗುರಿಗೆ ಸಂಬಂಧಿಸಿದಂತೆ ಟೀಕಾಕಾರರು ಈತನನ್ನು ಆಸಕ್ತಿರಹಿತನೆಂದು ಆರೋಪಿಸುತ್ತಾರೆ. ಐಸೆನ್‌ಹೋವರ್ ನ್ಯಾಷನಲ್ ಗಾರ್ಡ್ ನ್ನು ಸಂಯುಕ್ತ ಸರ್ಕಾರದ ಅಧೀನಕ್ಕೆ ತಂದರು ಹಾಗು ಅವರನ್ನು ತಮ್ಮ ಬ್ಯಾರಕ್(ಸಿಪಾಯಿಮನೆ)ಗಳಿಗೆ ಹಿಂದಿರುಗುವಂತೆ ಆದೇಶಿಸುತ್ತಾರೆ. ಐಸೆನ್‌ಹೋವರ್ ನಂತರದಲ್ಲಿ ವಿದ್ಯಾರ್ಥಿಗಳ ರಕ್ಷಣೆಗಾಗಿ ೧೦೧ನೇ ಏರ್ಬೋರ್ನ್ ಡಿವಿಷನ್ ನ ಘಟಕಗಳನ್ನು ಲಿಟಲ್ ರಾಕ್ ಗೆ ನಿಯೋಜಿಸುತ್ತಾರೆ. ವಿದ್ಯಾರ್ಥಿಗಳು ಪ್ರೌಢಶಾಲೆಯಲ್ಲಿ ಹಾಜರಿಗೆ ಸಮರ್ಥರಾದರು. ತಾವು ಶಾಲೆಗೆ ಬಂದ ಮೊದಲ ದಿವಸ ವಿದ್ಯಾರ್ಥಿಗಳು ಉಗುಳುವ,ದೂಷಿಸುವ ಬಿಳಿ ವಿದ್ಯಾರ್ಥಿಗಳ ನಡುವೆ ಹಾದುಹೋಗಬೇಕಾಯಿತು. ಶೈಕ್ಷಣಿಕ ವರ್ಷದ ಉಳಿದ ಅವಧಿಯಲ್ಲಿ ಸಹಪಾಠಿ ಬಿಳಿ ವಿದ್ಯಾರ್ಥಿಗಳ ಪೀಡನೆಯನ್ನು ಸಹಿಸಿಕೊಳ್ಳಬೇಕಾಯಿತು. ಫೆಡರಲ್ ಪಡೆಗಳು ತರಗತಿಗಳ ವಿರಾಮದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಬೆಂಗಾವಲಾಗಿದ್ದರೂ ಸಹ, ವಿದ್ಯಾರ್ಥಿಗಳನ್ನು ಆಗಲೂ ಅಪಹಾಸ್ಯ ಮಾಡಲಾಯಿತು ಹಾಗು ಬೆಂಗಾವಲು ಪಡೆಯು ಸುತ್ತಮುತ್ತಲು ಇಲ್ಲದಿರುವಾಗ ಬಿಳಿಯ ವಿದ್ಯಾರ್ಥಿಗಳ ಆಕ್ರಮಣವನ್ನು ಎದುರಿಸಬೇಕಾಯಿತು. ಲಿಟಲ್ ರಾಕ್ ನೈನ್ ನಲ್ಲಿ ಒಬ್ಬಳಾದ ಮಿನ್ನಿಜೀನ್ ಬ್ರೌನ್, ಊಟದ ಅವಧಿಯಲ್ಲಿ ತನ್ನನ್ನು ಪೀಡಿಸುತ್ತಿದ್ದ ಬಿಳಿಯ ವಿದ್ಯಾರ್ಥಿಯ ತಲೆಯ ಮೇಲೆ ಒಂದು ಬಟ್ಟಲು ಮೆಣಸನ್ನು ಸುರಿದಿದ್ದಕ್ಕಾಗಿ ಶಾಲೆಯಿಂದ ಆಕೆಯನ್ನು ವಜಾಗೊಳಿಸಲಾಯಿತು. ನಂತರದಲ್ಲಿ, ಅವಳನ್ನು ಬಿಳಿಯ ವಿದ್ಯಾರ್ಥಿನಿಗೆ ದೂಷಣೆ ಮಾಡಿದ್ದರಿಂದಾಗಿ ಶಾಲೆಯಿಂದ ಹೊರಹಾಕಲಾಯಿತು.[೧೧] ಲಿಟಲ್ ರಾಕ್ ನೈನ್ ನಲ್ಲಿ ಒಬ್ಬನಾದ ಅರ್ನೆಸ್ಟ್ ಗ್ರೀನ್ ಗೆ ಮಾತ್ರ ೧೯೫೭–೫೮ರ ಶೈಕ್ಷಣಿಕ ಅವಧಿಯು ಮುಗಿದ ನಂತರ ಪದವಿ ಪಡೆಯುವ ಅವಕಾಶ ದೊರೆಯುತ್ತದೆ, ಲಿಟಲ್ ರಾಕ್ ಶಾಲಾ ವ್ಯವಸ್ಥೆಯು, ಏಕೀಕರಣವನ್ನು ಮುಂದುವರೆಸುವುದಕ್ಕಿಂತ ಹೆಚ್ಚಾಗಿ ಸಂಪೂರ್ಣವಾಗಿ ಸಾರ್ವಜನಿಕ ಶಾಲೆಗಳನ್ನು ಮುಚ್ಚಿಬಿಡಲು ನಿರ್ಧರಿಸುತ್ತದೆ. ದಕ್ಷಿಣ ಭಾಗದುದ್ದಕ್ಕೂ ಇದ್ದ ಇತರ ಶಾಲಾ ವ್ಯವಸ್ಥೆಗಳು ಇದನ್ನೇ ಅನುಸರಿಸಿದವು.

ಧರಣಿಗಳು, ೧೯೬೦

[ಬದಲಾಯಿಸಿ]

ಉತ್ತರ ಕ್ಯಾರೊಲಿನಾದ ಗ್ರೀನ್ಸ್ ಬರೋ ನ ವೂಲ್ವರ್ತ್ ನ ಮಳಿಗೆಯಲ್ಲಿ ವಿದ್ಯಾರ್ಥಿ ಧರಣಿಯು, ನಾಗರಿಕ ಹಕ್ಕುಗಳ ಚಳವಳಿಗೆ ಪುಷ್ಟಿಯನ್ನು ನೀಡಿತು.[೧೨] ೧೯೬೦ರ ಫೆಬ್ರವರಿ ೧ರಂದು, ಸಂಪೂರ್ಣವಾಗಿ ಕರಿಯ ವಿದ್ಯಾರ್ಥಿಗಳೇ ಇದ್ದ ಉತ್ತರ ಕ್ಯಾರೊಲಿನಾದ ಕೃಷಿ & ತಾಂತ್ರಿಕ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳಾದ ಎಜೆಲ್ A. ಬ್ಲೈರ್, ಜೂ.(ಅವರು ಈಗ ಜಿಬ್ರೀಲ್ ಖಜಾನ್ ಎಂಬ ಹೆಸರಿನಿಂದ ಪರಿಚಿತವಾಗಿದ್ದಾರೆ), ಡೇವಿಡ್ ರಿಚ್ಮಂಡ್, ಜೋಸೆಫ್ ಮ್ಯಾಕ್ನೀಲ್, ಹಾಗು ಫ್ರ್ಯಾಂಕ್ಲಿನ್ ಮ್ಯಾಕ್ಕೈನ್, ಆಫ್ರಿಕನ್ ಅಮೆರಿಕನ್ನರನ್ನು ಹೊರಗಿಡುವ ವೂಲ್ವರ್ತ್ ನೀತಿಯನ್ನು ಪ್ರತಿಭಟಿಸುವ ಸಲುವಾಗಿ ಪ್ರತ್ಯೇಕ ಊಟದ ಕೌಂಟರ್‌ನಲ್ಲಿ ಧರಣಿ ಕೂಡುತ್ತಾರೆ.[೧೩] ಈ ಪ್ರತಿಭಟನಾಕಾರರಿಗೆ ರೀತಿರಿವಾಜಿನಂತೆ ಉಡುಪು ಧರಿಸಲು, ಶಾಂತವಾಗಿ ಕೂರಲು ಹಾಗು ಸಂಭಾವ್ಯ ಬಿಳಿಯ ಸಹಾನುಭೂತಿಯುಳ್ಳವರು ಸೇರಿಕೊಳ್ಳುವಂತೆ ಪ್ರತಿಯೊಂದು ಮೇಜನ್ನು ಆಕ್ರಮಿಸಲು ಉತ್ತೇಜಿಸಲಾಯಿತು. ಈ ಧರಣಿಯು, ರಿಚ್ಮಂಡ್, ವರ್ಜೀನಿಯ;[೧೪] ನ್ಯಾಷ್ವಿಲ್ಲೆ, ಟೆನ್ನಿಸ್ಸಿ; ಹಾಗು ಅಟ್ಲಾಂಟ, ಜಾರ್ಜಿಯಾದಲ್ಲಿ ನಡೆದ ಇತರ ಧರಣಿಗಳಿಗೆ ಸ್ಫೂರ್ತಿಯನ್ನು ನೀಡಿತು.[೧೫][೧೬] ದಕ್ಷಿಣದುದ್ದಕ್ಕೂ ವಿದ್ಯಾರ್ಥಿಗಳು ತಮ್ಮ ಕೆಲವೇ ಕೆಲವು ಸ್ಥಳೀಯ ಮಳಿಗೆಗಳಲ್ಲಿ ಊಟದ ಕೌಂಟರುಗಳಲ್ಲಿ ಧರಣಿ ಕೂಡಲು ಆರಂಭಿಸಿದಾಗ, ಸ್ಥಳೀಯ ಅಧಿಕಾರಿಗಳು ಕೆಲವೊಂದು ಬಾರಿ ಭೋಜನ ಸೌಲಭ್ಯಗಳಿಂದ ಪ್ರತಿಭಟನಾಕಾರರನ್ನು ಆಚೆಗೆ ದಬ್ಬಲು ಪಶುಬಲವನ್ನು ಬಳಸಿದರು. "ಧರಣಿ" ತಂತ್ರವು ಹೊಸದೇನಾಗಿರಲಿಲ್ಲ-೧೯೩೯ರಷ್ಟು ಹಿಂದೆಯೇ ಆಫ್ರಿಕನ್-ಅಮೇರಿಕನ್ ವಕೀಲ ಸ್ಯಾಮ್ಯುಯೆಲ್ ವಿಲ್ಬರ್ಟ್ ಟಕರ್, ಅಂದಿಗೆ ವರ್ಣಭೇದ ನೀತಿಯಿಂದ ಪ್ರತ್ಯೇಕಗೊಂಡಿದ್ದ ಅಲೆಕ್ಸಾಂಡ್ರಿಯಾ, ವರ್ಜೀನಿಯ ಗ್ರಂಥಾಲಯದಲ್ಲಿ ಧರಣಿಯನ್ನು ಆಯೋಜಿಸಿದ್ದರು.[೧೭] ೧೯೬೦ರಲ್ಲಿ ಈ ತಂತ್ರವು, ಚಳವಳಿಗೆ ರಾಷ್ಟ್ರದ ಗಮನವನ್ನು ಸೆಳೆಯುವ ಮೂಲಕ ಯಶಸ್ವಿಯಾಯಿತು.[೧೮] ಗ್ರೀನ್ಸ್ ಬರೋ ಧರಣಿಯ ಯಶಸ್ಸು, ದಕ್ಷಿಣದಾದ್ಯಂತ ವಿದ್ಯಾರ್ಥಿಗಳ ವ್ಯಾಪಕ ಧರಣಿಗಳಿಗೆ ಎಡೆ ಮಾಡಿಕೊಟ್ಟಿತು. ಬಹುಶಃ ಇವುಗಳಲ್ಲಿ ಉತ್ತಮವಾಗಿ ಆಯೋಜಿಸಲಾದ, ಅತ್ಯಂತ ಶಿಸ್ತುಬದ್ಧ, ತಕ್ಷಣಕ್ಕೆ ಪರಿಣಾಮಕಾರಿಯಾದ ಧರಣಿ ಎಂದರೆ ನ್ಯಾಷ್ವಿಲ್ಲೆ, ಟೆನ್ನಿಸ್ಸಿಯಲ್ಲಿ ನಡೆದ ಧರಣಿ.[೧೯] ೧೯೬೦ ಮಾರ್ಚ್ ೯ರಂದು ಅಟ್ಲಾಂಟ ಯೂನಿವರ್ಸಿಟಿ ಕೇಂದ್ರದ ವಿದ್ಯಾರ್ಥಿಗಳ ಗುಂಪೊಂದು ಮಾನವ ಹಕ್ಕುಗಳಿಗಾಗಿ ಕೋರಿಕೆಯೊಂದನ್ನು[೨೦] ದಿನಪತ್ರಿಕೆಗಳಲ್ಲಿ ಪೂರ್ಣ ಪುಟದ ಜಾಹೀರಾತಾಗಿ ಬಿಡುಗಡೆ ಮಾಡಿತು, ಇದರಲ್ಲಿ ಅಟ್ಲಾಂಟ ಕಾನ್ಸ್ಟಿಟ್ಯೂಶನ್ , ಅಟ್ಲಾಂಟ ಜರ್ನಲ್ , ಹಾಗು ಅಟ್ಲಾಂಟ ಡೈಲಿ ವರ್ಲ್ಡ್ ಪತ್ರಿಕೆಗಳೂ ಸೇರಿವೆ.[೨೧] ಕಮಿಟಿ ಆನ್ ದಿ ಅಪೀಲ್ ಫಾರ್ ಹ್ಯೂಮನ್ ರೈಟ್ಸ್(COAHR) ಎಂದು ಪರಿಚಿತವಾದ ಈ ವಿದ್ಯಾರ್ಥಿ ಗುಂಪು, ಅಟ್ಲಾಂಟ ವಿದ್ಯಾರ್ಥಿ ಚಳವಳಿಯನ್ನು ಆರಂಭಿಸಿತು [೨೨] ಜೊತೆಗೆ ೧೯೬೦ರ ಮಾರ್ಚ್ ೧೫ರಂದು ಆರಂಭವಾದ ಧರಣಿಗಳೊಂದಿಗೆ ಅಟ್ಲಾಂಟದಲ್ಲಿ[೨೩] ಮುನ್ನಡೆ ಗಳಿಸಿತು.[೧೬] ೧೯೬೦ರ ಕೊನೆಯಲ್ಲಿ, ಧರಣಿಗಳು ಪ್ರತಿಯೊಂದು ಭಾಗಕ್ಕೂ ಹಾಗು ಗಡಿ ರಾಜ್ಯಗಳಿಗೆ ಹಾಗು ನೆವಾಡ, ಇಲ್ಲಿನಾಯ್, ಹಾಗು ಓಹಿಯೋಗೆ ಹರಡಿತ್ತು. ಪ್ರತಿಭಟನಾಕಾರರು ಊಟದ ಕೌಂಟರ್‌ಗಳಷ್ಟೇ ಅಲ್ಲದೆ, ಉದ್ಯಾನವನಗಳು, ಕಡಲ ತೀರಗಳು, ಗ್ರಂಥಾಲಯಗಳು, ಥಿಯೇಟರ್ ಗಳು, ವಸ್ತು ಸಂಗ್ರಹಾಲಯಗಳು, ಹಾಗು ಇತರ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತಿದ್ದ ವರ್ಣಭೇಧ ನೀತಿಯ ಬಗ್ಗೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಬಂಧನಕ್ಕೊಳಪಟ್ಟ ನಂತರ, ವಿದ್ಯಾರ್ಥಿ ಪ್ರತಿಭಟನಾಕಾರರು "ಜಾಮೀನುರಹಿತ- ಜೈಲುವಾಸ"ದ ಪ್ರತಿಜ್ಞೆಗಳನ್ನು ಮಾಡಿದರು. ತಮ್ಮ ಹೋರಾಟದ ಬಗ್ಗೆ ಗಮನ ಸೆಳೆಯಲು ಹಾಗು ಪ್ರತಿಭಟನೆಯ ವೆಚ್ಚವನ್ನು ತಿರುಗುಮುರುಗು ಮಾಡುವ ಮೂಲಕ ಮೂಲಕ ಬಂದೀಖಾನೆಯಲ್ಲಿ ಜಾಗ ಹಾಗು ಆಹಾರವನ್ನು ಪೂರೈಸಲು ಜೈಲರುಗಳಿಗೆ ಹಣಕಾಸಿನ ಮುಗ್ಗಟ್ಟು ಎದುರಾಗುವಂತೆ ಮಾಡಿದರು. ಏಪ್ರಿಲ್ ೧೯೬೦ರಲ್ಲಿ, ಧರಣಿಗಳನ್ನು ಮುನ್ನಡೆಸಿದ ಕಾರ್ಯಕರ್ತರು ಉತ್ತರ ಕ್ಯಾರೊಲಿನಾದ ರಾಲೆಯಿಗ್ ನಲ್ಲಿರುವ ಷಾ ವಿಶ್ವವಿದ್ಯಾಲಯದಲ್ಲಿ ಸಮ್ಮೇಳನವನ್ನು ನಡೆಸಿದರು, ಇದು ಸ್ಟೂಡೆಂಟ್ ನಾನ್ವೈಲೆಂಟ್ ಕೋಆರ್ಡಿನೇಟಿಂಗ್ ಕಮಿಟಿ (SNCC)ಯ ರಚನೆಗೆ ದಾರಿಯಾಯಿತು.[೨೪] SNCC ಅಹಿಂಸಾತ್ಮಕ ಸಂಘರ್ಷದ ತಂತ್ರಗಳನ್ನು, ಸ್ವಾತಂತ್ರ್ಯ ಸವಾರಿ ಅಭಿಯಾನದಲ್ಲಿ ಮುಂದುವರೆಸಿದರು.[೨೫]

ಸ್ವಾತಂತ್ರ್ಯ ಸವಾರಿಗಳು, ೧೯೬೧

[ಬದಲಾಯಿಸಿ]

ಸ್ವಾತಂತ್ರ್ಯ ಸವಾರಿಗಳೆಂದರೆ ನಾಗರಿಕ ಹಕ್ಕುಗಳ ಕಾರ್ಯಕರ್ತರು, ವರ್ಣಭೇದ ನೀತಿ ಅನುಸರಿಸುತ್ತಿದ್ದ ದಕ್ಷಿಣ ಅಮೆರಿಕಾ ಸಂಯುಕ್ತ ಸಂಸ್ಥಾನದ ಅಂತರರಾಜ್ಯ ಬಸ್ಸುಗಳಲ್ಲಿ ಸಂಚರಿಸುವುದಾಗಿದೆ. ಇವು ಅಮೆರಿಕಾ ಸಂಯುಕ್ತ ಸಂಸ್ಥಾನದ ಸರ್ವೋಚ್ಚ ನ್ಯಾಯಾಲಯವು ಬೋಯ್ನ್ಟನ್ v. ವರ್ಜೀನಿಯಾ,(೧೯೬೦) ೩೬೪ನ ಮೊಕದ್ದಮೆಯಲ್ಲಿ ನೀಡಲಾದ ತೀರ್ಪನ್ನು ಪರೀಕ್ಷಿಸಲು ಕೈಗೊಳ್ಳಲಾದ ಪ್ರಯಾಣಗಳಾಗಿದ್ದು, ಈ ತೀರ್ಪಿನಿಂದ ಅಂತರರಾಜ್ಯ ಪ್ರಯಾಣದಲ್ಲಿ ತೊಡಗುತ್ತಿದ್ದ ಕರಿಯ ಪ್ರಯಾಣಿಕರ ವಿರುದ್ಧ ವರ್ಣಭೇದ ನೀತಿಯು ಕೊನೆಗೊಂಡಿತ್ತು. COREನಿಂದ ಆಯೋಜಿತವಾದ, ೧೯೬೦ರ ಮೊದಲ ಸ್ವಾತಂತ್ರ್ಯ ಸವಾರಿಯು ಮೇ ೪, ೧೯೬೧ರಲ್ಲಿ ವಾಶಿಂಗ್ಟನ್ D.C.ಯಿಂದ ಹೊರಟು, ಮೇ ೧೭ರಂದು ನ್ಯೂಆರ್ಲಿಯನ್ಸ್ ತಲುಪಿತು.[೨೬] ಮೊದಲ ಹಾಗು ತರುವಾಯದ ಸ್ವಾತಂತ್ರ್ಯ ಸವಾರಿಗಳ ಅವಧಿಯಲ್ಲಿ, ಆಸನ ನಮೂನೆಗಳನ್ನು ಏಕೀಕರಿಸಲು ಹಾಗು ವಿಶ್ರಾಂತಿ ಕೊಠಡಿಗಳು ಹಾಗು ನೀರಿನ ಕೊಳಾಯಿಗಳನ್ನು ಒಳಗೊಂಡಂತೆ ಬಸ್ ನಿಲ್ದಾಣದಲ್ಲಿದ್ದ ವರ್ಣಭೇದ ನೀತಿಯನ್ನು ರದ್ದು ಮಾಡಲು ಕಾರ್ಯಕರ್ತರು ಡೀಪ್ ಸೌತ್ ಭಾಗದುದ್ದಕ್ಕೂ ಸಂಚರಿಸಿದರು. ಇದು ಒಂದು ಅಪಾಯಕಾರಿ ಉದ್ದೇಶವೆಂದು ಸಾಬೀತಾಯಿತು. ಆನಿಸ್ಟನ್, ಅಲಬಾಮನಲ್ಲಿ, ಒಂದು ಬಸ್ ನ್ನು ಸ್ಫೋಟಿಸಲಾಯಿತು, ಅದರಲ್ಲಿದ್ದ ಪ್ರಯಾಣಿಕರು ತಮ್ಮ ಜೀವವನ್ನು ಉಳಿಸಿಕೊಳ್ಳಲು ಪಲಾಯನ ಮಾಡಿದರು. ಬರ್ಮಿಂಗ್ಹ್ಯಾಮ್, ಅಲಬಾಮನಲ್ಲಿ, FBI ಮಾಹಿತಿದಾರ, ಪಬ್ಲಿಕ್ ಸೇಫ್ಟಿ ಕಮಿಷನರ್ ಯುಜಿನಿ "ಬುಲ್" ಕೊನ್ನೋರ್, ಸ್ವಾತಂತ್ರ್ಯ ಸವಾರಿಗೆ ಬರುತ್ತಿದ್ದ ಗುಂಪಿಗೆ ಪೊಲೀಸರು ರಕ್ಷಣೆ ನೀಡುವ ಮೊದಲೇ ಅವರ ಮೇಲೆ ಆಕ್ರಮಣ ಮಾಡಲು ಕು ಕ್ಲುಕ್ಸ್ ಕ್ಲಾನ್ ನ ಸದಸ್ಯರಿಗೆ ಹದಿನೈದು ನಿಮಿಷಗಳ ಕಾಲಾವಧಿ ನೀಡಿದರೆಂದು ವರದಿ ಮಾಡಿದ. "ಒಂದು ಬುಲ್‌ಡಾಗ್ ಅವರನ್ನು ಕಚ್ಚಿ ಹಿಡಿದಿರುವಂತೆ ಕಂಡು ಬಂದು, ಸವಾರರನ್ನು ತೀವ್ರತರವಾಗಿ ಥಳಿಸಲಾಯಿತು. ಬಿಳಿಯ ಕಾರ್ಯಕರ್ತ ಜೇಮ್ಸ್ ಪೆಕ್ ರನ್ನು ಎಷ್ಟರ ಮಟ್ಟಿಗೆ ಥಳಿಸಲಾಗಿತ್ತೆಂದರೆ, ಅವರ ತಲೆಗೆ ಐವತ್ತು ಹೊಲಿಗೆಗಳನ್ನು ಹಾಕಬೇಕಾಯಿತು.[ಸೂಕ್ತ ಉಲ್ಲೇಖನ ಬೇಕು] ಆನ್ನಿಸ್ಟನ್ ಮತ್ತು ಬರ್ಮಿಂಗ್‌ಹ್ಯಾಂನಲ್ಲಿ ಗುಂಪಿನ ಹಿಂಸಾಚಾರದಿಂದ ತಾತ್ಕಾಲಿಕವಾಗಿ ಸ್ವಾತಂತ್ರ್ಯ ಸವಾರಿಗಳನ್ನು ಸ್ಥಗಿತಗೊಳಿಸಿತು. ಆದರೆ SNCC ಕಾರ್ಯಕರ್ತರು ಬರ್ಮಿಂಗ್‌ಹ್ಯಾಂನಿಂದ ಪ್ರಯಾಣ ಮುಂದುವರಿಸಲು ಹೊಸ ಸ್ವಾತಂತ್ರ್ಯ ಸವಾರರನ್ನು ನ್ಯಾಶ್‌ವಿಲ್ಲೆಯಿಂದ ಕರೆತಂದಿತು. ಆಲ್ಬಾಮಾದ ಮೊಂಟ್ಗೊಮೆರಿಯ ಗ್ರೇಹೌಂಡ್ ಬಸ್ ನಿಲ್ದಾಣದ ಬಸ್ಸಿನಲ್ಲಿ ತುಂಬಿದ್ದ ಸ್ವಾತಂತ್ರ್ಯ ಸವಾರರ ಮೇಲೆ ಗುಂಪೊಂದು ದಾಳಿ ಮಾಡಿ, ಜಾನ್ ಲೆವಿಸ್ ಅವರನ್ನು ಪೆಟ್ಟಿಗೆಯಿಂದ ಹೊಡೆದು ಪ್ರಜ್ಞೆತಪ್ಪಿಸಿತು ಮತ್ತು ಲೈಫ್ ಛಾಯಾಚಿತ್ರಗ್ರಾಹಕ ಡಾನ್ ಅರ್‌ಬ್ರಾಕ್ ಅವರ ಮುಖಕ್ಕೆ ಅವರದೇ ಕ್ಯಾಮರಾದಲ್ಲಿ ಹೊಡೆಯಿತು. ಸುಮಾರು ಹನ್ನೆರಡು ಜನರು ಫಿಸ್ಕ್ ವಿಶ್ವವಿದ್ಯಾನಿಲಯದ ಬಿಳಿಯ ವಿದ್ಯಾರ್ಥಿ ಜಿಮ್ ವರ್ಗ್ ಅವರನ್ನು ಸುತ್ತುವರಿದು, ಸೂಟ್‌ಕೇಸ್‌ನಿಂದ ಅವರ ಮುಖಕ್ಕೆ ಹೊಡೆದು ಹಲ್ಲನ್ನು ಉದುರಿಸಿದರು.[ಸೂಕ್ತ ಉಲ್ಲೇಖನ ಬೇಕು] ಸ್ವಾತಂತ್ರ್ಯ ಸವಾರರು ಮಿಸಿಸಿಪ್ಪಿಯ ಜಾಕ್ಸನ್‌ಗೆ ತಮ್ಮ ಸವಾರಿಗಳನ್ನು ಮುಂದುವರಿಸಿದರು. ಬಿಳಿಯರಿಗೆ ಮಾತ್ರವಿದ್ದ ಸೌಲಭ್ಯಗಳನ್ನು ಬಳಸಿಕೊಳ್ಳುವ ಮೂಲಕ ಶಾಂತಿ ಕದಡಿದ್ದಕ್ಕಾಗಿ ಅವರನ್ನು ಬಂಧಿಸಲಾಯಿತು. ಹೊಸ ಸ್ವಾತಂತ್ರ್ಯ ಸವಾರಿಗಳನ್ನು ಅನೇಕ ವಿವಿಧ ಸಂಘಟನೆಗಳಿಂದ ಆಯೋಜಿಸಲಾಯಿತು. ಸ್ವಾತಂತ್ರ್ಯ ಸವಾರರು ಜಾಕ್ಸನ್‌ಗೆ ಆಗಮಿಸುತ್ತಿದ್ದಂತೆ ಅವರನ್ನು ಬಂಧಿಸಲಾಯಿತು. ಬೇಸಿಗೆಯ ಕೊನೆಯಲ್ಲಿ ೩೦೦ಕ್ಕೂ ಹೆಚ್ಚು ಮಂದಿಯನ್ನು ಮಿಸಿಸಿಪ್ಪಿಯಲ್ಲಿ ಬಂದೀಖಾನೆಗೆ ಹಾಕಲಾಯಿತು.[ಸೂಕ್ತ ಉಲ್ಲೇಖನ ಬೇಕು] ಬಂದೀಖಾನೆಗೆ ಹಾಕಲಾದ ಸ್ವಾತಂತ್ರ್ಯ ಸವಾರರನ್ನು ಕಠಿಣವಾಗಿ ನಡೆಸಿಕೊಳ್ಳಲಾಯಿತು ಮತ್ತು ಸಣ್ಣದಾದ, ಹೊಲಸು ಜೈಲುಕೋಣೆಗಳಲ್ಲಿ ಕೂಡಿಹಾಕಿ ಸತತವಾಗಿ ಥಳಿಸಲಾಯಿತು. ಮಿಸಿಸಿಪ್ಪಿಯ ಜಾಕ್ಸನ್‌ನಲ್ಲಿ ಕೆಲವು ಪುರುಷ ಕೈದಿಗಳು ೧೦೦ಡಿಗ್ರಿ ಉಷ್ಣಾಂಶದಲ್ಲಿ ಕಠಿಣ ದುಡಿಮೆಯನ್ನು ಮಾಡಬೇಕಾಯಿತು. ಉಳಿದವರನ್ನು ಪಾರ್ಚ್‌ಮನ್‌ನ ಮಿಸಿಸಿಪ್ಪಿ ರಾಜ್ಯ ಬಂದೀಖಾನೆಗೆ ವರ್ಗಾಯಿಸಲಾಯಿತು. ಅಲ್ಲಿ ಅವರ ಆಹಾರಕ್ಕೆ ಉದ್ದೇಶಪೂರ್ವಕವಾಗಿ ಹೆಚ್ಚು ಉಪ್ಪು ಬೆರಸಲಾಯಿತು ಮತ್ತು ಅವರ ಚಾಪೆಗಳನ್ನು ತೆಗೆದುಹಾಕಲಾಯಿತು. ಕೆಲವು ಬಾರಿ ಪುರುಷರನ್ನು ಗೋಡೆಗಳಿಗೆ "ವ್ರಿಸ್ಟ್ ಬ್ರೇಕರ್"‌ಗಳಿಂದ ಬಂಧಿಸಲಾಗುತ್ತಿತ್ತು. ಸಾಮಾನ್ಯವಾಗಿ ಅವರ ಕೋಣೆಗಳ ಕಿಟಕಿಗಳನ್ನು ಬೇಸಿಗೆಯ ದಿನಗಳಲ್ಲಿ ಬಿಗಿಯಾಗಿ ಮುಚ್ಚಲಾಗುತ್ತಿತ್ತು. ಇದರಿಂದ ಅವರಿಗೆ ಉಸಿರಾಡಲು ಕಷ್ಟವಾಗುತ್ತಿತ್ತು. ಸ್ವಾತಂತ್ರ್ಯ ಸವಾರರಿಗೆ ಸಾರ್ವಜನಿಕ ಸಹಾನುಭೂತಿ ಮತ್ತು ಬೆಂಬಲದಿಂದ ಕೆನಡಿ ಆಡಳಿತವು ಹೊಸ ವರ್ಣಭೇದ ನೀತಿ ರದ್ದಿನ ಆದೇಶ ಜಾರಿ ಮಾಡುವಂತೆ ಅಂತಾರಾಜ್ಯ ವಾಣಿಜ್ಯ ಸಮಿತಿ(ICC)ಗೆ ಆಜ್ಞೆ ಮಾಡುವುದಕ್ಕೆ ದಾರಿ ಕಲ್ಪಿಸಿತು. ಹೊಸ ಐಸಿಸಿ ನಿಯಮ ನವೆಂಬರ್ ಒಂದರಂದು ಜಾರಿಗೆ ಬಂದಾಗ, ಪ್ರಯಾಣಿಕರನ್ನು ಅವರು ಆಯ್ಕೆ ಮಾಡುವ ಸ್ಥಳದಲ್ಲಿ ಕುಳಿತುಕೊಳ್ಳಲು ಅನುಮತಿ ನೀಡಲಾಯಿತು. ಬಸ್ ನಿಲ್ದಾಣಗಳಲ್ಲಿ "ಬಿಳಿಯ" ಮತ್ತು "ವರ್ಣೀಯ" ಚಿಹ್ನೆಗಳನ್ನು ತೆಗೆಯಲಾಯಿತು. ಪ್ರತ್ಯೇಕ ಕುಡಿಯುವ ಚಿಲುಮೆಗಳು, ಶೌಚಾಲಯಗಳು ಮತ್ತು ಕಾಯುವ ಕೋಣೆಗಳನ್ನು ಒಂದುಗೂಡಿಸಲಾಯಿತು ಮತ್ತು ಚರ್ಮದ ಬಣ್ಣವನ್ನು ಪರಿಗಣಿಸದೇ ಭೋಜನ ಕೌಂಟರ್‌ಗಳು ಜನರಿಗೆ ಉಪಚರಿಸುವುದನ್ನು ಮುಂದುವರಿಸಿತು. ವಿದ್ಯಾರ್ಥಿ ಚಳವಳಿಯು ಏಕ ಮನಸ್ಕ ಕಾರ್ಯಕರ್ತ ಜಾನ್ ಲೆವಿಸ್, ಅಹಿಂಸೆ ಸಿದ್ಧಾಂತ ಮತ್ತು ತಂತ್ರಗಳ ಗೌರವಾನ್ವಿತ ಗುರು ಜೇಮ್ಸ್ ಲಾಸನ್, ಸುವ್ಯವಸ್ಥಿತ ಮತ್ತು ಕೆಚ್ಚೆದೆಯ ಸಾರ್ವಜನಿಕ ನ್ಯಾಯದ ಸಮರ್ಥಕ ಡಯಾನೆ ನ್ಯಾಷ್, ಮಿಸಿಸಿಪ್ಪಿಯ ಮತದಾನ ನೋಂದಣಿಯ ಪ್ರವರ್ತಕ ಬಾಬ್ ಮೋಸಸ್ ಮತ್ತು ತೀಕ್ಷ್ಣ ಬೋಧಕ ಮತ್ತು ವರ್ಚಸ್ವಿ ಸಂಘಟಕ ಹಾಗು ಸಹಾಯಕ ಜೇಮ್ಸ್ ಬೆವೆಲ್ ಮುಂತಾದ ಪ್ರಸಿದ್ಧ ವ್ಯಕ್ತಿಗಳನ್ನು ಒಳಗೊಂಡಿತ್ತು. ಇತರ ಪ್ರಮುಖ ವಿದ್ಯಾರ್ಥಿ ಕಾರ್ಯಕರ್ತರಲ್ಲಿ ಚಾರ್ಲ್ಸ್ ಮೆಕ್‌ಡಿವ್, ಬರ್ನಾರ್ಡ್ ಲಫಾಯೆಟ್, ಚಾರ್ಲ್ಸ್ ಜೋನ್ಸ್, ಲೋನಿ ಕಿಂಗ್, ಜೂಲಿಯನ್ ಬಾಂಡ್, ಹೋಸಿಯ ವಿಲಿಯಮ್ಸ್ಮತ್ತು ಸ್ಟಾಕ್ಲಿ ಕಾರ್ಮಿಚಾಲ್ ಒಳಗೊಂಡಿದ್ದರು.

ಮತದಾರ ನೋಂದಣಿ ಸಂಘಟನೆ

[ಬದಲಾಯಿಸಿ]

ಸ್ವಾತಂತ್ರ್ಯ ಸವಾರಿಗಳ ನಂತರ, ಆಮ್ಜಿ ಮೂರ್, ಆರಾನ್ ಹೆನ್ರಿ, ಮೆಡ್ಗಾರ್ ಎವರ್ಸ್ಮತ್ತಿತರ ಮಿಸಿಸಿಪ್ಪಿಯ ಸ್ಥಳೀಯ ಕರಿಯ ಜನಾಂಗದ ನಾಯಕರು ಕಪ್ಪು ಮತದಾರರನ್ನು ನೋಂದಣಿ ಮಾಡುವಂತೆ ಮತ್ತು ರಾಜ್ಯದಲ್ಲಿ ರಾಜಕೀಯ ಅಧಿಕಾರದಲ್ಲಿ ಪಾಲನ್ನು ಗೆಲ್ಲಲು ಸಮುದಾಯ ಸಂಘಟನೆಗಳನ್ನು ನಿರ್ಮಿಸಲು ಸಹಾಯ ಮಾಡುವಂತೆ SNCC ಗೆ ಕೋರಿಕೊಂಡರು. ಮಿಸಿಸಿಪ್ಪಿ ೧೮೯೦ರಲ್ಲಿ ಚುನಾವಣೆ ತೆರಿಗೆಗಳು, ನಿವಾಸ ಅಗತ್ಯಗಳು, ಸಾಕ್ಷರತೆ ಪರೀಕ್ಷೆಗಳು ಮುಂತಾದ ನಿಬಂಧನೆಗಳೊಂದಿಗೆ ಸಂವಿಧಾನವನ್ನು ಅಂಗೀಕರಿಸಿದ್ದರಿಂದ, ನೋಂದಣಿ ಹೆಚ್ಚು ಜಟಿಲವಾಯಿತು ಮತ್ತು ಚುನಾವಣೆಯಿಂದ ಕಪ್ಪು ಜನಾಂಗದವರನ್ನು ತೆಗೆದುಹಾಕಿತು. ಅನೇಕ ವರ್ಷಗಳ ನಂತರ, ಮತದಾನ ಮಾಡದಂತೆ ಕರಿಯ ಜನಾಂಗದವರನ್ನು ತಡೆಯುವ ಉದ್ದೇಶವು ಬಿಳಿಯರ ಪಾರಮ್ಯದ ಸಂಸ್ಕೃತಿಯ ಭಾಗವಾಯಿತು. ೧೯೬೧ರ ಶರತ್ಕಾಲದಲ್ಲಿ, SNCC ಸಂಘಟಕ ರಾಬರ್ಟ್ ಮೋಸಸ್ ಮೆಕ್‌ಕಾಂಬ್‌ನಲ್ಲಿ ಮತ್ತು ರಾಜ್ಯದ ವಾಯವ್ಯ ಭಾಗದ ಸುತ್ತಮುತ್ತಲಿನ ಕೌಂಟಿಗಳಲ್ಲಿ ಇಂತಹ ಯೋಜನೆಯನ್ನು ಆರಂಭಿಸಿದರು. ಈ ಪ್ರಯತ್ನಗಳಿಗೆ ರಾಜ್ಯ ಮತ್ತು ಸ್ಥಳೀಯ ಕಾನೂನು ಅಧಿಕಾರಗಳಾದ ವೈಟ್ ಸಿಟಿಜನ್ಸ್ ಕೌನ್ಸಿಲ್ ಮತ್ತು ಕು ಕ್ಲಕ್ಸ್ ಕ್ಲಾನ್‌ನಿಂದ ತೀವ್ರ ದಮನಕಾರಿ ಪ್ರವೃತ್ತಿಗೆ ಕಾರಣವಾಯಿತು. ಇದರಿಂದ ಥಳಿತಗಳು, ನೂರಾರು ಬಂಧನಗಳು ಮತ್ತು ಮತದಾನ ಕಾರ್ಯಕರ್ತ ಹರ್ಬರ್ಟ್ ಲೀ ಹತ್ಯೆಯಲ್ಲಿ ಫಲಿತಾಂಶ ಕಂಡಿತು.[೨೭] ಮಿಸಿಸಿಪ್ಪಿಯಲ್ಲಿ ಕರಿಯ ಮತದಾರ ನೋಂದಣಿಗೆ ಬಿಳಿಯರಿಂದ ತೀವ್ರ ಪ್ರತಿರೋಧ ಕಂಡುಬಂತು ಮತ್ತು ಯಾವುದೇ ಯಶಸ್ಸಿನ ಅವಕಾಶಕ್ಕೆ ರಾಜ್ಯದ ಎಲ್ಲ ನಾಗರಿಕ ಹಕ್ಕು ಸಂಘಟನೆಗಳು ಸಮನ್ವಯಿತ ಪ್ರಯತ್ನಕ್ಕಾಗಿ ಒಂದುಗೂಡಬೇಕೆಂಬ ತೀರ್ಮಾನಕ್ಕೆ ಬರಲಾಯಿತು. ೧೯೬೨ರ ಫೆಬ್ರವರಿಯಲ್ಲಿ,SNCC, CORE, ಮತ್ತು NAACP ಯ ಪ್ರತಿನಿಧಿಗಳು ಒಕ್ಕೂಟ ಸಂಘಟನೆಗಳ ಮಂಡಳಿ(COFO)ಯನ್ನು ಸ್ಥಾಪಿಸಿದರು. ಆಗಸ್ಟ್‌ನಲ್ಲಿ ತರುವಾಯದ ಸಭೆಯಲ್ಲಿ SCLC ಯು COFOಭಾಗವಾಯಿತು.[೨೮] ೧೯೬೨ರ ಶಿಶಿರಋತುವಿನಲ್ಲಿ, ಮತದಾರ ಶಿಕ್ಷಣ ಯೋಜನೆಯ ನಿಧಿಗಳಿಂದ SNCC/COFO ಯು ಗ್ರೀನ್‌ವುಡ್ಸುತ್ತಮುತ್ತಲಿನ ಮುಖಜಭೂಮಿ ಪ್ರದೇಶ ಮತ್ತು ಹ್ಯಾಟಿಸ್‌ಬರ್ಗ್, ಲಾರೆಲ್, ಮತ್ತುಹೋಲಿ ಸ್ಪ್ರಿಂಗ್ಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತದಾರ ನೋಂದಣಿ ಸಂಘಟನೆಯನ್ನು ಆರಂಭಿಸಿತು. ಮೆಕ್‌ಕೋಂಬ್ ರೀತಿಯಲ್ಲಿ, ಅವರ ಪ್ರಯತ್ನಗಳಿಗೆ ತೀಕ್ಷ್ಣ ವಿರೋಧ ಕಂಡುಬಂದು, ಬಂಧನಗಳು, ಥಳಿತಗಳು, ಗೋಲಿಬಾರ್‌ಗಳು,ಬೆಂಕಿಹಚ್ಚುವಿಕೆ ಮತ್ತು ಹತ್ಯೆ ಮುಂತಾದವು ಸಂಭವಿಸಿತು. ನೋಂದಣಿ ಅಧಿಕಾರಿಗಳು ಮತದಾನದ ಪಾತ್ರಗಳಿಂದ ಕರಿಯರನ್ನು ದೂರವಿಡಲು ಸಾಕ್ಷರತೆ ಪರೀಕ್ಷೆಯನ್ನು ಬಳಸಿಕೊಂಡಿತು ಮತ್ತು ಅತ್ಯಂತ ವಿದ್ಯಾವಂತ ಜನರು ಕೂಡ ಭರಿಸಲಾರದ ಮಾನದಂಡಗಳನ್ನು ಸೃಷ್ಟಿಸಿತು. ಇದರ ಜತೆಗೆ, ಮಾಲೀಕರು ನೋಂದಣಿಗೆ ಪ್ರಯತ್ನಿಸಿದ ಕರಿಯರನ್ನು ಕೆಲಸದಿಂದ ತೆಗೆದುಹಾಕಿದರು ಮತ್ತು ಭೂಮಾಲೀಕರು ಅವರನ್ನು ತಮ್ಮ ಮನೆಗಳಿಂದ ಖಾಲಿ ಮಾಡಿಸಿದರು.[೨೯] ಮುಂದಿನ ವರ್ಷಗಳಲ್ಲಿ, ಕರಿಯ ಮತದಾರ ನೋಂದಣಿ ಅಭಿಯಾನವು ರಾಜ್ಯಾದ್ಯಂತ ಹರಡಿತು. ಸದೃಶ ಮತದಾರ ನೋಂದಣಿ ಅಭಿಯಾನಗಳನ್ನು, ಇದೇ ರೀತಿಯ ಪ್ರತಿಕ್ರಿಯೆಗಳೊಂದಿಗೆ ಲೂವಿಸಿಯಾನ, ಅಲಬಾಮಾ, ನೈರುತ್ಯ ಜಾರ್ಜಿಯ, ಮತ್ತು ದಕ್ಷಿಣ ಕೆರೊಲಿನಾದಲ್ಲಿ SNCC, CORE, and SCLC ಆರಂಭಿಸಿತು. ೧೯೬೩ರಲ್ಲಿ, ದಕ್ಷಿಣ ಭಾಗದಲ್ಲಿ ಮತದಾರ ನೋಂದಣಿ ಅಭಿಯಾನಗಳು, ವರ್ಣಭೇದ ನೀತಿ ರದ್ದಿನ ಪ್ರಯತ್ನಗಳ ರೀತಿಯಲ್ಲಿ ಸ್ವಾತಂತ್ರ್ಯ ಚಳವಳಿಯ ಅವಿಭಾಜ್ಯ ಅಂಗವಾಯಿತು. ೧೯೬೪ರ ನಾಗರಿಕ ಹಕ್ಕುಗಳ ಕಾಯ್ದೆಯ ಅನುಮೋದನೆ ನಂತರ, ರಾಜ್ಯದ ಅಡ್ಡಿಗಳ ನಡುವೆಯೂ ಮತದಾರ ನೋಂದಣಿಯನ್ನು ರಕ್ಷಿಸುವುದು ಮತ್ತು ಸುಗಮಗೊಳಿಸುವುದು ಚಳವಳಿಯ ಮುಖ್ಯ ಪ್ರಯತ್ನವಾಯಿತು.[೧] ಇದು ೧೯೬೫ರ ಮತದಾನ ಹಕ್ಕುಗಳ ಕಾಯ್ದೆಯ ಅನುಮೋದನೆಯಲ್ಲಿ ಫಲಿತಾಂಶ ನೀಡಿತು.

ಮಿಸಿಸಿಪ್ಪಿ ವಿಶ್ವವಿದ್ಯಾನಿಲಯಗಳ ಏಕೀಕರಣ, ೧೯೫೬–೧೯೬೫

[ಬದಲಾಯಿಸಿ]
ಅಮೆರಿಕಾ ಸಂಯುಕ್ತ ಸಂಸ್ಥಾನದ ಮಾರ್ಷಲ್‌ಗಳ ಜತೆ ತರಗತಿಗೆ ಹೋಗುತ್ತಿರುವ ಜೇಮ್ಸ್ ಮೆರ್ಡಿತ್

೧೯೫೬ರ ಆರಂಭದಲ್ಲಿ ಕೊರಿಯನ್ ಯುದ್ಧದ ಕರಿಯ ಮಾಜಿ ಸೈನಿಕ ಕ್ಲೈಡ್ ಕೆನ್ನಾರ್ಡ್ ಹ್ಯಾಟ್ಟಿಸ್‌ಬರ್ಗ್‌ನ ಮಿಸಿಸಿಪ್ಪಿ ಸದರ್ನ್ ಕಾಲೇಜಿಗೆ (ಈಗಿನ ಯೂನಿವರ್ಸಿಟಿ ಆಫ್ ಸದರ್ನ್ ಮಿಸಿಸಿಪ್ಪಿ) ಯಲ್ಲಿ ಹೆಸರು ದಾಖಲಿಸಲು ಪ್ರಯತ್ನಿಸಿದರು. ಸ್ಥಳೀಯ ಕರಿಯ ಮುಖಂಡರು ಮತ್ತು ವರ್ಣಭೇದ ನೀತಿಯ ಪ್ರತಿಪಾದಕ ರಾಜ್ಯ ರಾಜಕೀಯ ಸಂಸ್ಥೆಗೆ ತೆರಳುವ ಮೂಲಕ ಈ ಕಾಲೇಜಿನ ಅಧ್ಯಕ್ಷ ಡಾ. ವಿಲಿಯಂ ಡೇವಿಡ್ ಮ್ಯಾಕ್‌ಕೈನ್ ಇದನ್ನು ವಿರೋಧಿಸಲು ತೀವ್ರ ಪ್ರಯತ್ನಗಳನ್ನು ಮಾಡಿದರು. ಅವರು ವಿಶೇಷವಾಗಿ ಮಿಸಿಸಿಪ್ಪಿ ರಾಜ್ಯ ಸಾರ್ವಭೌಮತ್ವ ಆಯೋಗವನ್ನು ಬಳಸಿಕೊಂಡರು, ಅವರು ಈ ಆಯೋಗದ ಸಹಾಯಕ ಸದಸ್ಯರಾಗಿದ್ದರು. ಅದು ವರ್ಣಭೇದ ರದ್ದು ನೀತಿಗಳನ್ನು ಧನಾತ್ಮಕವಾಗಿ ಚಿತ್ರಿಸಲು ರಚಿಸಿದ ಒಂದು ಸರ್ಕಾರಿ ಆಯೋಗವಾಗಿತ್ತು, ಆದರೆ ನಾಗರಿಕ ಹಕ್ಕುಗಳ ಚಳವಳಿಯ ಬಗ್ಗೆ ಗೂಢಚರ್ಯೆ ನಡೆಸಲು ಮತ್ತು ಅದನ್ನು ಹಾಳುಮಾಡಲು ಕೂಡ ಬಳಸಿಕೊಳ್ಳಲಾಯಿತು. ಇದರ ಫಲವಾಗಿ ಕೆನ್ನಾರ್ಡ್ ಅವರನ್ನು ಸುಳ್ಳು ಕ್ರಿಮಿನಲ್ ಆರೋಪಗಳ ಮೇಲೆ ಎರಡು ಬಾರಿ ಬಂಧಿಸಲಾಯಿತು ಮತ್ತು ಅಂತಿಮವಾಗಿ ರಾಜ್ಯ ಸೆರೆಮನೆಯಲ್ಲಿ ಏಳು ವರ್ಷಗಳ ಶಿಕ್ಷೆಯನ್ನು ನೀಡಲಾಯಿತು.[ಸೂಕ್ತ ಉಲ್ಲೇಖನ ಬೇಕು] ಮೂರು ವರ್ಷಗಳ ಕಠಿಣ ಜೈಲುವಾಸದ ನಂತರ, ಕೆನ್ನಾರ್ಡ್‌ನ ದೊಡ್ಡಕರುಳಿನ ಕ್ಯಾನ್ಸರ್‌ಗೆ ಚಿಕಿತ್ಸೆಯನ್ನು ಅಸಮರ್ಪಕವಾಗಿ ನಡೆಸಲಾಗುತ್ತಿದೆಯೆಂದು ತಿಳಿದುಕೊಂಡು ಮುಜುಗರಗೊಂಡ ಮಿಸಿಸಿಪ್ಪಿ ಗವರ್ನರ್ ರೋಸ್ ಬಾರ್ನೆಟ್‌ ಅವರನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಿದರು.[ಸೂಕ್ತ ಉಲ್ಲೇಖನ ಬೇಕು] ಈ ನ್ಯಾಯ ವ್ಯವಸ್ಥೆಯ ದುರುಪಯೋಗದಲ್ಲಿ ಡಾ. ಮೆಕ್‌ಕೈನ್‌ರ ನೇರ ಒಳಗೊಳ್ಳುವಿಕೆ ಅಸ್ಪಷ್ಟವಾಗಿದೆ. ಅವರು ಆಪಾದನೆಯು ಎಷ್ಟು ಸಂಶಯಾಸ್ಪದವಾಗಿತ್ತೆಂಬ ಕುರಿತಾಗಿ ರಾಜ್ಯ ರಾಜಕೀಯ ಸಂಸ್ಥೆಯ ಇತರ ನಿಕಟ ಸದಸ್ಯರಿಗೆ ತಿಳಿದ ಹಾಗೆಯೇ ತಿಳಿದಿದ್ದರು. ಆದರೆ ಯಾವುದೇ ಸಾರ್ವಜನಿಕ ಆಕ್ಷೇಪವನ್ನು ವ್ಯಕ್ತಪಡಿಸಲಿಲ್ಲ.[೩೦][೩೧][೩೨][೩೩] ಮೆಕ್‌ಕೇನ್ ಕ್ಲೈಡೆ ಕೆನ್ನಾರ್ಡ್‌ರನ್ನು ದಕ್ಷಿಣ ಮಿಸಿಸಿಪ್ಪಿಯಿಂದ ಹೊರಗಿಡಲು ಪ್ರಯತ್ನಿಸುವ ಸಂದರ್ಭದಲ್ಲೇ, ಅವರು ಮಿಸಿಸಿಪ್ಪಿ ರಾಜ್ಯ ಸಾರ್ವಭೌಮತ್ವ ಆಯೋಗ ಪ್ರಾಯೋಜಿಸಿದ ಚಿಕಾಗೊಗೆ ಪ್ರಯಾಣವನ್ನು ಬೆಳೆಸಿದರು. ಅಲ್ಲಿ ಅವರು ದಕ್ಷಿಣದ ಶಾಲೆಗಳಲ್ಲಿ ವರ್ಣಭೇದ ನೀತಿಯ ರದ್ದತಿಗೆ ಪ್ರಯತ್ನಿಸಿದ ಕರಿಯರು ಉತ್ತರದಿಂದ ಆಮದಾಗಿದ್ದಾರೆಂದು ಹೇಳುವ ಮೂಲಕ ಮಿಸಿಸಿಪ್ಪಿ ಜೀವನದ ನೈಜತೆಯನ್ನು ವಿವರಿಸಿದರು. (ವಾಸ್ತವವಾಗಿ ಕೆನ್ನಾರ್ಡ್ ಹ್ಯಾಟಿಸ್‌ಬರ್ಗ್‌ನ ಸ್ಥಳೀಯರಾಗಿದ್ದರು ಮತ್ತು ನಿವಾಸಿಯಾಗಿದ್ದರು.)

"ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ನಾವು ವರ್ಣಭೇದ ನೀತಿಯ(ಪ್ರತ್ಯೇಕತೆಯ) ಸಮಾಜವನ್ನು ಕಾಯ್ದುಕೊಳ್ಳಬೇಕೆಂದು ನಾವು ಹೇಳುತ್ತೇವೆ. ಪ್ರಾಮಾಣಿಕವಾಗಿ, ನಾವು ನೀಗ್ರೊ ಮತದಾನವನ್ನು ಪ್ರೋತ್ಸಾಹಿಸುತ್ತಿಲ್ಲವೆನ್ನುವುದಕ್ಕೆ ಸಮ್ಮತಿಸುತ್ತೇನೆ" ಎಂದು ಅವರು ಹೇಳಿದರು. "ನೀಗ್ರೋಗಳು ಸರ್ಕಾರದ ನಿಯಂತ್ರಣವು ಬಿಳಿಯರ ಕೈಯಲ್ಲಿರಬೇಕೆಂದು ಬಯಸುತ್ತಾರೆ."[೩೦][೩೨][೩೩]

೨೦೦೬ರಲ್ಲಿ, ನ್ಯಾಯಮೂರ್ತಿ ರೋಬರ್ಟ್ ಹೆಲ್‌ಫ್ರಿಚ್, ಕೆನ್ನಾರ್ಡ್ ನಿಜವಾಗಿ ಈ ಆರೋಪಗಳಿಂದ ಮುಕ್ತರಾದ ಅಮಾಯಕರೆಂದು ತೀರ್ಪು ನೀಡಿದರು.[೩೪] ಕ್ಲೈಡ್ ಕೆನ್ನಾರ್ಡ್ ಮತ್ತು ಇತರ ಸ್ಥಳೀಯ ನಾಗರಿಕ ಹಕ್ಕುಗಳ ಕಾರ್ಯಕರ್ತರ ನಿರಂತರ ಪ್ರಯತ್ನಗಳಿಂದಾಗಿ, ೧೯೬೫ರಲ್ಲಿ ರೇಲಾವ್ನಿ ಬ್ರ್ಯಾಂಚ್ ಮತ್ತು ಗ್ವೆಂಡೋಲಿನ್ ಎಲೈನ್ ಆರ್ಮ್‌ಸ್ಟ್ರಾಂಗ್ ದಕ್ಷಿಣ ಮಿಸಿಸಿಪ್ಪಿ ವಿಶ್ವವಿದ್ಯಾನಿಲಯವನ್ನು ಸೇರಿದ ಮೊದಲ ಆಫ್ರಿಕನ್-ಅಮೆರಿಕನ್ ವಿದ್ಯಾರ್ಥಿಗಳಾದರು. ಅವರು ವಿಶ್ವವಿದ್ಯಾನಿಲಯದ ಅಧ್ಯಕ್ಷ ವಿಲಿಯಂ ಡೇವಿಡ್ ಮ್ಯಾಕ್‌ಕೈನ್‌ ನಿರ್ಮಿಸಿದ ತುಂಬಾ ಶಾಂತಮಯ ಪರಿಸ್ಥಿತಿಗಳ ಹಂತದೊಂದಿಗೆ ವಿಶ್ವವಿದ್ಯಾನಿಲಯವನ್ನು ಪ್ರವೇಶಿಸಿದರು, ಕ್ಲೈಡ್ ಕೆನ್ನಾರ್ಡ್ ಮತ್ತು ಜೇಮ್ಸ್ ಮೆರೆಡಿತ್ ಪ್ರಸಂಗಗಳಿಂದ ಸಂಭವಿಸಿದಂತಹ ಕೆಟ್ಟ ಪ್ರಚಾರವನ್ನು ತಪ್ಪಿಸಲು ಅವರು ಬಯಸಿದರು.[೩೫] ಜೇಮ್ಸ್ ಮೆರೆಡಿತ್ ಮೊಕದ್ದಮೆಯೊಂದನ್ನು ಗೆದ್ದರು, ಅದು ಅವರಿಗೆ ೧೯೬೨ರ ಸೆಪ್ಟೆಂಬರ್‌ನಲ್ಲಿ ಮಿಸಿಸಿಪ್ಪಿ ವಿಶ್ವವಿದ್ಯಾನಿಲಯಕ್ಕೆ ಪ್ರವೇಶವನ್ನು ದೊರಕಿಸಿಕೊಟ್ಟಿತು. ಅವರು ಸೆಪ್ಟೆಂಬರ್ ೨೦ರಂದು, ೨೫ರಂದು ಮತ್ತು ಮತ್ತೊಮ್ಮೆ ೨೬ರಂದು ಕಾಲೇಜಿಗೆ ಪ್ರವೇಶ ಪಡೆಯಲು ಪ್ರಯತ್ನಿಸಿದರು, ಆದರೆ ಇದಕ್ಕೆ ಮಿಸಿಸಿಪ್ಪಿ ಗವರ್ನರ್‌ ರೋಸ್ ಬಾರ್ನೆಟ್ಟ್‌ ಅಡ್ಡಿಯನ್ನುಂಟುಮಾಡಿದರು. ಬಾರ್ನೆಟ್ಟ್ "ನಾನು ಗವರ್ನರ್ ಆಗಿರುವಾಗ ಮಿಸಿಸಿಪ್ಪಿಯಲ್ಲಿ ಯಾವುದೇ ಕಾಲೇಜಿನ ಏಕೀಕರಣವಿಲ್ಲ" ಎಂದು ಘೋಷಿಸಿದರು. ಫಿಫ್ತ್ ಯುನೈಟೆಡ್ ಸ್ಟೇಟ್ಸ್ ಸರ್ಕ್ಯುಟ್ ಕೋರ್ಟ್ ಆಫ್ ಅಪೀಲ್ಸ್ ಬಾರ್ನೆಟ್ ಮತ್ತು ಲೆಫ್ಟಿನೆಂಟ್ ಗವರ್ನರ್‌ ಪಾಲ್ ಬಿ. ಜಾನ್ಸನ್ ಜೂನಿಯರ್‌ಗೆ ಮೆರೆಡಿತ್‌ಗೆ ನ್ಯಾಯಾಲಯ ನಿಂದನೆ ತೋರಿ ಪ್ರವೇಶಾವಕಾಶವನ್ನು ನೀಡಲು ನಿರಾಕರಿಸಿದ್ದಕ್ಕಾಗಿ ಪ್ರತಿ ದಿನಕ್ಕೆ ೧೦,೦೦೦ ಡಾಲರ್‍‌ಗಿಂತ ಹೆಚ್ಚು ದಂಡಗಳನ್ನು ವಿಧಿಸಿತು. ಅಟರ್ನಿ ಜನರಲ್ ರಾಬರ್ಟ್ ಕೆನಡಿಯು ಅಮೆರಿಕಾ ಸಂಯುಕ್ತ ಸಂಸ್ಥಾನದ ಮಾರ್ಷಲ್‌ಗಳಪಡೆಯನ್ನು ಕಳುಹಿಸಿದರು. ೧೯೬೨ರ ಸೆಪ್ಟೆಂಬರ್ ೩೦ರಂದು ಮೆರೆಡಿತ್ ಅವರ ಬೆಂಗಾವಲಿನಡಿಯಲ್ಲಿ ಕಾಲೇಜು ಪ್ರವೇಶಿಸಿದರು. ಅಂದು ಸಂಜೆ ಬಿಳಿಯ ವಿದ್ಯಾರ್ಥಿಗಳು ಮತ್ತು ಇತರ ಬಿಳಿಯರು ದೊಂಬಿಗಳನ್ನು ನಡೆಸಲು ಆರಂಭಿಸಿದರು. ಲೈಸಿಯಮ್ ಹಾಲ್‌ನಲ್ಲಿ ಮೆರೆಡಿತ್‌ಗೆ ರಕ್ಷಣೆಯನ್ನು ಒದಗಿಸುತ್ತಿದ್ದ ಅಮೆರಿಕಾ ಸಂಯುಕ್ತ ಸಂಸ್ಥಾನ ಮಾರ್ಷಲ್‌ಗಳಿಗೆ ಕಲ್ಲುಗಳನ್ನು ತೂರಿದರು ಮತ್ತು ಅವರ ಮೇಲೆ ಗುಂಡುಹಾರಿಸಿದರು. ಒಬ್ಬ ಫ್ರೆಂಚ್ ಪತ್ರಿಕೋದ್ಯಮಿಯನ್ನೂ ಒಳಗೊಂಡಂತೆ ಇಬ್ಬರು ಸಾವನ್ನಪ್ಪಿದರು; ೨೮ ಮಾರ್ಷಲ್‌ಗಳು ಗುಂಡಿನೇಟಿನಿಂದ ಗಾಯಗೊಂಡರು; ಮತ್ತು೧೬೦ ಮಂದಿ ಇತರರು ಅಪಾಯಕ್ಕೊಳಗಾದರು. ಮಿಸಿಸಿಪ್ಪಿ ಹೆದ್ದಾರಿ ಗಸ್ತುದಳವನ್ನು ಕ್ಯಾಂಪ ಸ್‌ನಿಂದ ಹಿಂದಕ್ಕೆ ಕರೆಯಿಸಿದ ನಂತರ, ಅಧ್ಯಕ್ಷ ಕೆನಡಿಯು ದಂಗೆಯನ್ನು ನಿಗ್ರಹಿಸಲು ಕಾಲೇಜಿಗೆ ನಿಯಮಿತ ಸೈನ್ಯವನ್ನು ಕಳುಹಿಸಿದರು. ಸೈನ್ಯ ಬಂದು ತಲುಪಿದ ನಂತರ ಮೆರೆಡಿತ್ ತರಗತಿಗಳನ್ನು ಆರಂಭಿಸಿದರು.[೩೬]

ಅಲ್ಬನಿ ಚಳವಳಿ, ೧೯೬೧–೧೯೬೨

[ಬದಲಾಯಿಸಿ]

ಸ್ವಾತಂತ್ರ್ಯ ಸವಾರಿಗಳಲ್ಲಿ ಸಂಪೂರ್ಣವಾಗಿ ಭಾಗವಹಿಸಲು ವಿಫಲಗೊಂಡಿದ್ದಕ್ಕಾಗಿ ಕೆಲವು ವಿದ್ಯಾರ್ಥಿ ಕಾರ್ಯಕರ್ತರಿಂದ ಟೀಕೆಗೊಳಗಾದ SCLC ಅದರ ಹೆಚ್ಚಿನ ಘನತೆ ಮತ್ತು ಸಂಪನ್ಮೂಲಗಳನ್ನು ೧೯೬೧ರ ನವೆಂಬರ್‌ನಲ್ಲಿ ಜಾರ್ಜಿಯಾದ ಆಲ್ಬನಿ ಯಲ್ಲಿ ವರ್ಣಭೇದ ನೀತಿಯನ್ನು ತೆಗೆದುಹಾಕುವ ಚಳವಳಿಯೊಂದಕ್ಕೆ ಒದಗಿಸಿತು. ಕಿಂಗ್ ಸ್ಥಳೀಯ ಸಂಘಟಕರು ಎದುರಿಸಿದ ಅಪಾಯಗಳಿಂದ ದೂರವಿದ್ದುದಕ್ಕಾಗಿ ಆತನನ್ನು ಕೆಲವು SNCC ಕಾರ್ಯಕರ್ತಗಳು ವೈಯಕ್ತಿಕವಾಗಿ ಖಂಡಿಸಿದರು ಮತ್ತು ಆತನಿಗೆ 'ಡಿ ಲಾಡ್' ಎಂಬ ಅಣಕದ ಅಡ್ಡಹೆಸರನ್ನು ನೀಡಿದರು. ಇದರ ಫಲವಾಗಿ ಕಿಂಗ್ SNCC ಸಂಘಟಕರು ಮತ್ತು ಸ್ಥಳೀಯ ನಾಯಕರ ಮುಖಂಡತ್ವದಲ್ಲಿ ನಡೆಯುತ್ತಿದ್ದ ಚಳವಳಿಗೆ ವೈಯಕ್ತಿಕವಾಗಿ ಬೆಂಬಲವನ್ನು ಒದಗಿಸಲು ಮಧ್ಯಪ್ರವೇಶಿಸಿದರು. ಸ್ಥಳೀಯ ಮುಖ್ಯ ಪೊಲೀಸ್ ಅಧಿಕಾರಿ ಲಾರೀ ಪ್ರಿಟ್ಚೆಟ್‌ರ ಕುಶಲ ಪ್ರತಿಬಂಧಕ-ತಂತ್ರದಿಂದಾಗಿ ಮತ್ತು ಕರಿಯ ಸಮುದಾಯದಲ್ಲಿನ ಒಡಕುಗಳಿಂದಾಗಿ ಈ ಚಳವಳಿಯು ವಿಫಲಗೊಂಡಿತು. ಇದರ ಗುರಿಗಳು ಸಾಕಷ್ಟು ನಿರ್ದಿಷ್ಟವಾಗಿರಲಿಲ್ಲ. ಪ್ರಿಟ್ಚೆಟ್ ಚಳವಳಿಗಾರರ ಮೇಲೆ ಹಿಂಸಾಚಾರದ ದಾಳಿಗಳಿಲ್ಲದೇ ಚಳವಳಿಯನ್ನು ನಿಗ್ರಹಿಸಿದರು. ಇದು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಿತು. ಆತ ಚಳವಳಿಗಾರರನ್ನು ಬಂಧಿಸಿ ಸುತ್ತಮುತ್ತಲ ಪ್ರದೇಶದಲ್ಲಿದ್ದ ಜೈಲುಗಳಿಗೆ ಕರೆದುಕೊಂಡು ಹೋದರು ಮತ್ತು ತಮ್ಮ ಜೈಲಿನಲ್ಲಿ ಸಾಕಷ್ಟು ಕೋಣೆಗಳು ಉಳಿಯಲು ಅವಕಾಶ ನೀಡಿದರು. ಜೈಲಿನಲ್ಲಿ ಕಿಂಗ್ ಉಪಸ್ಥಿತಿಯು ಅಪಾಯಕಾರಿಯೆಂದು ಪ್ರಿಚೆಟ್ ಮುಂಗಂಡರು ಮತ್ತು ಕಿಂಗ್‌ ಪರವಾಗಿ ಕರಿಯ ಸಮುದಾಯದ ಪ್ರತಿಭಟನೆಗಳನ್ನು ತಪ್ಪಿಸಲು ಕಿಂಗ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿದರು. ಕಿಂಗ್ ಯಾವುದೇ ಪರಿಣಾಮಕಾರಿ ಗೆಲುವನ್ನು ಸಾಧಿಸದೆ ೧೯೬೨ರಲ್ಲಿ ಚಳವಳಿಯನ್ನು ಕೈಬಿಟ್ಟರು. ಆದರೂ ಸ್ಥಳೀಯ ಚಳವಳಿಯು ಹೋರಾಟವನ್ನು ಮುಂದುವರಿಸಿತು ಮತ್ತು ಮುಂದಿನ ಕೆಲವು ವರ್ಷಗಳಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿತು.[೩೭]

ಬರ್ಮಿಂಗ್ಹ್ಯಾಮ್ ಚಳವಳಿ, ೧೯೬೩–೧೯೬೪

[ಬದಲಾಯಿಸಿ]
ಚಿತ್ರ:Birmingham campaign dogs.jpg
ಇದು ಬಿಲ್ ಹಡ್ಸನ್‌ರವರು ತೆಗೆದಿರುವ ಪಾರ್ಕರ್ ಪ್ರೌಢ ಶಾಲೆಯ ವಿದ್ಯಾರ್ಥಿ ವಾಲ್ಟರ್ ಗ್ಯಾಡ್ಸ್‌ಡೆನ್ ಮೇಲೆ ನಾಯಿ ದಾಳಿ ಮಾಡಿರುವ ಛಾಯಾಚಿತ್ರವಾಗಿದ್ದು, 1963 ರ ಮೇ 4 ರಂದು ದಿ ನೂಯಾರ್ಕ್ ಟೈಮ್ಸ್ ನಲ್ಲಿ ಪ್ರಕಟಿಸಲಾಗಿದೆ.
ಅಲ್ಬಮಾ ಗವರ್ನರ್ ಜಾರ್ಜ್ ವ್ಯಾಲೇಸ್ 1963 ರಲ್ಲಿ, ಅಲ್ಬಮಾ ವಿಶ್ವವಿದ್ಯಾನಿಲಯದ ವರ್ಣಭೇಧ ನೀತಿ ರದ್ದಿನ ವಿರುದ್ಧ ನಿಲುವು ತೆಗೆದುಕೊಂಡಿರುವುದು ಮತ್ತು ಆ ಸಂದರ್ಭದಲ್ಲಿ US ಉಪ ಅಟರ್ನಿ ಜನರಲ್ ನಿಕೋಲಸ್ ಕ್ಯಾಟ್ಜೆನ್ ಬ್ಯಾಚಟ್ ರವರ ಎದುರಿಗೆ ನಿಂತಿರುವುದು.

ಆಲ್ಬನಿ ಚಳವಳಿಯು SCLC ಗೆ ಒಂದು ಪ್ರಮುಖ ಪಾಠವನ್ನು ಕಲಿಸಿತು, ಇದು ನಂತರ ೧೯೬೩ರಲ್ಲಿ ಬರ್ಮಿಂಗ್ಹ್ಯಾಮ್ ಚಳವಳಿಯನ್ನು ಆರಂಭಿಸಿತು. ಕಾರ್ಯನಿರ್ವಾಹಕ ನಿರ್ದೇಶಕ ವ್ಯಾಟ್ ಟೀ ವಾಕರ್ ಚಳವಳಿಗೆ ಜಾಗರೂಕತೆಯಿಂದ ನಿರ್ವಹಣಾ ಚಾತುರ್ಯ ಮತ್ತು ಕಾರ್ಯತಂತ್ರವನ್ನು ಯೋಜಿಸಿದರು. ಆಲ್ಬನಿಯ ಚಳವಳಿಯಂತೆ ವರ್ಣಭೇದ ನೀತಿಯ ಸಂಪೂರ್ಣ ರದ್ದತಿಯ ಬದಲಿಗೆ ಈ ಚಳವಳಿಯು ಬರ್ಮಿಂಗ್ಹ್ಯಾಮ್‌ನ ನಗರಮಧ್ಯಭಾಗದ ವ್ಯಾಪಾರಸ್ಥರ ನಡುವಿನ ವರ್ಣಭೇದ ನೀತಿಯನ್ನು ತೊಡೆದುಹಾಕುವ ಗುರಿಯನ್ನು ಹೊಂದಿತ್ತು. ಈ ಚಳವಳಿಯ ಪ್ರಯತ್ನಗಳಿಗೆ ಸ್ಥಳೀಯ ಅಧಿಕಾರಿಗಳು ತೀವ್ರ ಪ್ರತಿಕ್ರಿಯೆಯೊಂದಿಗೆ ಬೆಂಬಲಿಸಿದರು, ನಿರ್ದಿಷ್ಟವಾಗಿ ಸಾರ್ವಜನಿಕ ಸುರಕ್ಷತೆಯ ಕಮೀಷನರ್ ಯುಜೀನ್ "ಬುಲ್" ಕೊನ್ನರ್. ಅವರು ದೀರ್ಘಕಾಲದಿಂದ ಹೆಚ್ಚಿನ ರಾಜಕೀಯ ಅಧಿಕಾರವನ್ನು ಹೊಂದಿದ್ದರು, ಆದರೆ ವರ್ಣಭೇದ ನೀತಿ ಪ್ರತಿಪಾದನೆಯಲ್ಲಿ ಕಡಿಮೆ ಉತ್ಸಾಹ ಹೊಂದಿದ್ದ ಅಭ್ಯರ್ಥಿಗೆ ಮೇಯರ್ ಸ್ಥಾನದ ಚುನಾವಣೆಯನ್ನು ಕಳೆದುಕೊಂಡರು. ಹೊಸ ಮೇಯರ್‌ನ ಅಧಿಕಾರವನ್ನು ಸ್ವೀಕರಿಸಲು ನಿರಾಕರಿಸಿ, ಕೊನ್ನರ್ ಕಛೇರಿಯಲ್ಲಿ ಉಳಿಯಲು ನಿರ್ಧರಿಸಿದರು. ಈ ಚಳವಳಿಯು ವಿವಿಧ ರೀತಿಯ ಹಿಂಸಾಚಾರವಿಲ್ಲದ ಪ್ರತಿಭಟನೆ ವಿಧಾನಗಳನ್ನು ಬಳಸಿತು, ಸ್ಥಳೀಯ ಚರ್ಚ್‌ಗಳಲ್ಲಿ ಧರಣಿ ಸತ್ಯಾಗ್ರಹಗಳನ್ನು ಮತ್ತು ಮಂಡಿಯೂರಿ ಪ್ರತಿಭಟನೆ ಪ್ರದರ್ಶನಗಳನ್ನು ನಡೆಸಲಾಯಿತು ಹಾಗೂ ಮತದಾರರ ದಾಖಲೆಯನ್ನು ಚಾಲನೆಗೊಳಿಸಲು ಕೌಂಟಿ ಕಟ್ಟಡಕ್ಕೆ ಮೆರವಣಿಗೆ ನಡೆಸಲಾಯಿತು. ಆದರೆ ಆ ನಗರವು ಅಂತಹ ಎಲ್ಲಾ ಪ್ರತಿಭಟನೆಗಳನ್ನು ನಿಲ್ಲಿಸಲು ಒಂದು ತಡೆಯಾಜ್ಞೆಯನ್ನು ವಿಧಿಸಿತು. ಆ ಆಜ್ಞೆಯು ಕಾನೂನು ಬಾಹಿರವೆಂದು ಮನವರಿಕೆಯಾಗಿ, ಚಳವಳಿಯು ಅದನ್ನು ಉಲ್ಲಂಘಿಸಿತು ಮತ್ತು ಇದರಿಂದಾಗಿ ಅದರ ಬೆಂಬಲಿಗರು ಸಾಮೂಹಿಕ ಬಂಧನಕ್ಕೆ ಸಿದ್ಧರಾದರು. ಆ ಬಂಧನಕ್ಕೆ ಒಳಗಾದವರಲ್ಲಿ ಕಿಂಗ್ ೧೯೬೩ರ ಎಪ್ರಿಲ್ ೧೨ರಂದು ಚುನಾಯಿಸಲ್ಪಟ್ಟರು.[೩೮] ಜೈಲಿನಲ್ಲಿರುವಾಗ ಕಿಂಗ್ ಸಮಾಚಾರ ಪತ್ರಿಕೆಯೊಂದರ ಅಂಚುಗಳಲ್ಲಿ ಆತನ ಪ್ರಸಿದ್ಧ "ಲೆಟರ್ ಫ್ರಮ್ ಬರ್ಮಿಂಗ್ಹ್ಯಾಮ್ ಜೈಲ್"ಅನ್ನು[೩೯] ಬರೆದರು, ಏಕೆಂದರೆ ಅವರಿಗೆ ಒಂಟಿ ಸೆರೆಯಲ್ಲಿರುವಾಗ ಬೇರೆ ಯಾವುದೇ ಬರೆಯುವ ಕಾಗದಕ್ಕೆ ಅವಕಾಶ ಸಿಗುತ್ತಿರಲಿಲ್ಲ.[೪೦] ಬೆಂಬಲಿಗರು ಕೆನಡಿ ಆಡಳಿತಕ್ಕೆ ಮನವಿಯನ್ನು ಸಲ್ಲಿಸಿದರು, ಇದು ಕಿಂಗ್‌ನ ಬಿಡುಗಡೆಗೆ ಮಧ್ಯಪ್ರವೇಶ ಮಾಡಿತು. ಕಿಂಗ್‌ ತಮ್ಮ ನಾಲ್ಕನೇ ಮಗುವಿನ ಜನನದ ನಂತರ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದ ತನ್ನ ಪತ್ನಿಗೆ ಕರೆ ಮಾಡುವ ಅವಕಾಶವನ್ನು ಪಡೆದರು ಮತ್ತು ಎಪ್ರಿಲ್ ೧೯ರಂದು ಮುಂಚಿತವಾಗಿ ಬಿಡುಗಡೆಯಾದರು. ಚಳವಳಿಗಾರರು ಬಂಧನಕ್ಕೊಳಗಾಗುವ ಭಯದಿಂದ ಚಳವಳಿಯನ್ನು ಬಿಟ್ಟು ಹೋಗಲು ಆರಂಭಿಸಿದ್ದರಿಂದ ಅದರ ಪ್ರಾಬಲ್ಯತೆಯು ಕ್ಷೀಣಿಸಿತು. ಡೈರೆಕ್ಟ್ ಆಕ್ಷನ್ ಮತ್ತು ನಾನ್‌ವಯಲಂಟ್ ಎಜುಕೇಷನ್‌ನ SCLCಯ ನಿರ್ದೇಶಕ ಜೇಮ್ಸ್ ಬೆವೆಲ್ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಟನೆಗಳಲ್ಲಿ ಭಾಗವಹಿಸಲು ತರಬೇತಿ ನೀಡುವುದಕ್ಕಾಗಿ ಒಂದು ದಿಟ್ಟ ಮತ್ತು ವಿವಾದಾಸ್ಪದ ಪರ್ಯಾಯ ಮಾರ್ಗವನ್ನು ತಂದರು. ಇದರ ಫಲವಾಗಿ ಒಂದು ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಮೇ ೨ರಂದು ಶಾಲೆಯನ್ನು ತಪ್ಪಿಸಿ ಪ್ರದರ್ಶನಗಳಲ್ಲಿ ಸೇರಿಕೊಳ್ಳಲು ೧೬ನೇ ಸ್ಟ್ರೀಟ್‌ನ ಬ್ಯಾಪ್ಟಿಸ್ಟ್ ಚರ್ಚ್‌ನಲ್ಲಿ ಜಮಾಯಿಸಿದರು, ಇದನ್ನು ಚಿಲ್ಡ್ರನ್ಸ್ ಕ್ರಸೇಡ್ ಎಂದು ಕರೆಯಲಾಯಿತು. ಆರು ನೂರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳನ್ನು ಜೈಲಿಗೆ ಹಾಕಲಾಯಿತು. ಇದು ಸುದ್ದಿಯಾಗಬೇಕಿದ್ದ ವಿಷಯವಾಗಿತ್ತು. ಆದರೆ ಪ್ರಥಮ ಚಕಮಕಿಯಲ್ಲಿ, ಪೋಲೀಸರು ಸಂಯಮದಿಂದ ವರ್ತಿಸಿದರು. ಆದಾಗ್ಯೂ, ಮರುದಿನ ಮತ್ತೆ ಒಂದು ಸಾವಿರದಷ್ಟು ವಿದ್ಯಾರ್ಥಿಗಳು ಚರ್ಚಿನಲ್ಲಿ ಒಂದುಗೂಡಿದರು. ಅವರು ಮೆರವಣಿಗೆಯಲ್ಲಿ ಹೋಗಲು ಆರಂಭಿಸಿದಾಗ, ಬುಲ್ ಕೊನ್ನರ್ ಅವರ ಮೇಲೆ ಪೋಲೀಸ್ ನಾಯಿಗಳನ್ನು ಛೂ ಬಿಟ್ಟರು ಮತ್ತು ಮಕ್ಕಳ ಮೇಲೆ ನಗರದ ಅಗ್ನಿಶಾಮಕ ನೀರ್ಕೊಳವೆಗಳಿಂದ ನೀರು ಚಿಮುಕಿಸಿದರು. ನೀರ್ಕೊಳವೆಯಿಂದ ಬಿಟ್ಟ ನೀರು ಶಾಲಾಮಕ್ಕಳನ್ನು ಕೆಳಗೆ ಉರುಳಿಸುತ್ತಿರುವುದನ್ನು ಮತ್ತು ಮೆರವಣಿಗೆಯಲ್ಲಿ ಭಾಗವಹಿಸಿದ ವ್ಯಕ್ತಿಗಳ ಮೇಲೆ ನಾಯಿಗಳು ದಾಳಿ ನಡೆಸಿದ್ದನ್ನು ದೂರದರ್ಶನ ಕ್ಯಾಮೆರಾಗಳು ರಾಷ್ಟ್ರದಾದ್ಯಂತ ಪ್ರಸಾರ ಮಾಡಿದವು. ವ್ಯಾಪಕವಾಗಿ ಹರಡಿದ ಸಾರ್ವಜನಿಕ ಹಿಂಸಾಚಾರವು, ಕೆನಡಿ ಆಡಳಿತವು ಬಿಳಿಯರ ಉದ್ದಿಮೆ ಸಮುದಾಯ ಮತ್ತು SCLC ಯ ನಡುವೆ ಮಾತುಕತೆಗಳಲ್ಲಿ ಮಧ್ಯಪ್ರವೇಶಿಸುವಂತೆ ಮಾಡಿತು. ಮೇ ೧೦ರಂದು, ನಗರಮಧ್ಯದ ಭೋಜನ ಕೌಂಟರುಗಳು ಮತ್ತು ಇತರೆ ಸಾರ್ವಜನಿಕ ಸೌಕರ್ಯಗಳಲ್ಲಿ ವರ್ಣಭೇದ ನೀತಿಯನ್ನು ತೊಡೆದುಹಾಕಲು, ತಾರತಮ್ಯದ ನೌಕರಿ ಪದ್ಧತಿಗಳನ್ನು ನಿಲ್ಲಿಸುವುದಕ್ಕಾಗಿ ಸಮಿತಿ ಸ್ಥಾಪನೆ, ಬಂಧನಕ್ಕೊಳಗಾದ ಪ್ರತಿಭಟನೆಕಾರರನ್ನು ಬಿಡುಗಡೆಗೆ ವ್ಯವಸ್ಥೆ ಮಾಡಲು ಹಾಗೂ ಕರಿಯ ಮತ್ತು ಬಿಳಿಯ ಮುಖಂಡರ ನಡುವೆ ನಿಯಮಿತ ಮಾರ್ಗಗಳ ಸಂಪರ್ಕವನ್ನು ಸ್ಥಾಪಿಸಲು ಪಕ್ಷಗಳು ಒಪ್ಪಂದವೊಂದನ್ನು ಘೋಷಿಸಿದವು. ಕರಿಯ ಸಮುದಾಯದ ಎಲ್ಲರೂ ಒಪ್ಪಂದವನ್ನು ಅಂಗೀಕರಿಸಲಿಲ್ಲ-ವಿಶೇಷವಾಗಿ ರೆವೆರೆಂಡ್ ಫ್ರೆಡ್ ಶಟಲ್ಸ್‌ವರ್ತ್ ತೀವ್ರವಾಗಿ ಖಂಡಿಸಿದರು. ಏಕೆಂದರೆ ಅವರು ತಮಗಾದ ಅನುಭವದಿಂದಾಗಿ ಬರ್ಮಿಂಗ್‌ಹ್ಯಾಂನ ಅಧಿಕಾರ ರಚನೆಯ ಉತ್ತಮ ಕರ್ತವ್ಯಪಾಲನೆಯ ಬಗ್ಗೆ ಸಂಶಯವನ್ನು ಹೊಂದಿದ್ದರು. ಬಿಳಿಯ ಸಮುದಾಯದ ಭಾಗಶಃ ಸದಸ್ಯರು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದರು. ಅವರು SCLCಯ ಅನಧಿಕೃತ ಪ್ರಧಾನ ಕಛೇರಿಯನ್ನು ಹೊಂದಿದ್ದ ಮತ್ತು ಕಿಂಗ್‌ನ ಸಹೋದರ ರೆವೆರೆಂಡ್ ಎ. ಡಿ. ಕಿಂಗ್‌ನ ಮನೆಯಾಗಿದ್ದ ಗ್ಯಾಸ್ಟನ್ ಮೋಟೆಲ್‌ನ ಮೇಲೆ ಬಾಂಬ್ ದಾಳಿ ಮಾಡಿದರು. ಕೆನಡಿಯು ಅವಶ್ಯಕತೆ ಹೆಚ್ಚಿದರೆ ಅಲಬಾಮ ರಾಷ್ಟ್ರೀಯ ಭದ್ರತೆಯನ್ನು ಫೆಡರಲ್ ಸರ್ಕಾರದ ಅಧೀನಕ್ಕೆ ತರಲು ಸಿದ್ಧತೆ ನಡೆಸಿದರು. ನಾಲ್ಕು ತಿಂಗಳ ನಂತರ ಸೆಪ್ಟೆಂಬರ್ ೧೫ರಂದು, ಕು ಕ್ಲಕ್ಸ್ ಕ್ಲ್ಯಾನ್‌ ಸದಸ್ಯರು ಒಳಸಂಚು ನಡೆಸಿ, ಬರ್ಮಿಂಗ್‌ಹ್ಯಾಂನ ಸಿಕ್ಸ್ಟೀಂತ್ ಸ್ಟ್ರೀಟ್ ಬ್ಯಾಪ್ಟಿಸ್ಟ್ ಚರ್ಚ್ ಮೇಲೆ ಬಾಂಬ್ ದಾಳಿ ನಡೆಸಿದಾಗ, ನಾಲ್ವರು ಎಳೆಯ ಬಾಲಕಿಯರು ಹತ್ಯೆಗೊಳಗಾದರು. ೧೯೬೩ ರ ಬೇಸಿಗೆಯ ಇತರ ಘಟನೆಗಳು: ೧೯೬೩ರ ಜೂನ್ ೧೧ರಂದು, ಅಲಬಾಮದ ಗವರ್ನರ್ ಜಾರ್ಜ್ ವ್ಯಾಲೇಸ್ ಅಲಬಾಮ ವಿಶ್ವವಿದ್ಯಾನಿಲಯದ ಏಕೀಕರಣವನ್ನು ತಡೆಯಲು[೪೧] ಪ್ರಯತ್ನಿಸಿದರು. ಗವರ್ನರ್‌ ವ್ಯಾಲೇಸ್‌‌ರನ್ನು ಪಕ್ಕಕ್ಕೆ ಸರಿಸಲು ಅಧ್ಯಕ್ಷ ಜಾನ್ ಎಫ್. ಕೆನಡಿ ಸೈನ್ಯವನ್ನು ಕಳುಹಿಸಿ, ಇಬ್ಬರು ಕರಿಯ ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶ ಮಾಡಿಕೊಟ್ಟರು. ಆ ಸಂಜೆ ಅಧ್ಯಕ್ಷ ಕೆನಡಿಯು ಟಿವಿ ಮತ್ತು ರೇಡಿಯೊದಲ್ಲಿ ತನ್ನ ಐತಿಹಾಸಿಕ ನಾಗರಿಕ ಹಕ್ಕುಗಳ ಭಾಷಣದೊಂದಿಗೆ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದರು.[೪೨] ಮರುದಿನ, ಮೆದ್ಗಾರ್ ಈವರ್ಸ್ ಮಿಸಿಸಿಪ್ಪಿಯಲ್ಲಿ ಹತ್ಯೆಗೊಳಗಾದರು.[೪೩][೪೪] ಮುಂದಿನ ವಾರ ೧೯೬೩ರ ಜೂನ್ ೧೯ರಂದು ಕೊಟ್ಟ ಮಾತಿನಂತೆ ಅಧ್ಯಕ್ಷ ಕೆನಡಿ ಅವರ ನಾಗರಿಕ ಹಕ್ಕುಗಳ ಮಸೂದೆಯನ್ನು ಕಾಂಗ್ರೆಸ್‌ನಲ್ಲಿ ಮಂಡಿಸಿದರು.[೪೫]

ವಾಷಿಂಗ್ಟನ್‌ಗೆ ಮೆರವಣಿಗೆ, ೧೯೬೩

[ಬದಲಾಯಿಸಿ]
ಉದ್ಯೋಗ ಮತ್ತು ಸ್ವತಂತ್ರಕ್ಕಾಗಿ ನ್ಯಾಷನಲ್ ಮಾಲ್ ನಲ್ಲಿ ವಾಷಿಂಗ್ಟನ್‌ಗೆ ಮಾಡುತ್ತಿರುವ ಪಾದಯಾತ್ರೆ
ವಾಷಿಂಗ್ಟನ್‌ಗೆ ನಾಗರಿಕ ಹಕ್ಕು ಚಳವಳಿಯ ಮೆರವಣಿಗೆ ‌ವಾಷಿಂಗ್ಟನ್ ಸ್ಮಾರಕದಿಂದ ಲಿಂಕನ್ ಮೆಮೊರಿಯಲ್ ವರೆಗೆ ಕಾಲು ನಡಿಗೆಯಲ್ಲಿ ಮೆರವಣಿಗೆ ಮಾಡುತ್ತಿರುವ ನಾಯಕರು.
ಲಿಂಕನ್ ಮೆಮೊರಿಯಲ್ ನಲ್ಲಿ ನಾಗರಿಕ ಹಕ್ಕುಗಳ ಮೆರವಣಿಗೆಕಾರರು

ಎ. ಫಿಲಿಪ್ ರಾಂಡೋಲ್ಫ್ ರಕ್ಷಣಾ ಕೈಗಾರಿಕೆಗಳ ಉದ್ಯಮದಲ್ಲಿ ಉದ್ಯೋಗ ತಾರತಮ್ಯವನ್ನು ಹೋಗಲಾಡಿಸುವ ಬೇಡಿಕೆಗಳನ್ನು ಬೆಂಬಲಿಸಲು ೧೯೪೧ರಲ್ಲಿವಾಷಿಂಗ್ಟನ್ ಡಿ.ಸಿ.ಯಲ್ಲಿ ಒಂದು ಮೆರವಣಿಗೆಯನ್ನು ಯೋಜಿಸಿದರು; ರೂಸ್‌ವೆಲ್ಟ್ ಆಡಳಿತವು ಜನಾಂಗೀಯ ವರ್ಣಭೇದ ನೀತಿಯನ್ನು ನಿಷೇಧಿಸಿ ಕಾರ್ಯನಿರ್ವಾಹಕ ಆದೇಶ ೮೮೦೨ಅನ್ನು ಹೊರಡಿಸಿದರು ಮತ್ತು ಆ ಆದೇಶದ ಪಾಲನೆಯ ಮೇಲ್ವಿಚಾರಣೆ ನಡೆಸಲು ಒಂದು ಏಜೆನ್ಸಿಯನ್ನು ರಚಿಸುವ ಮೂಲಕ ಬೇಡಿಕೆಯನ್ನು ಪೂರೈಸಿದ್ದರಿಂದ ರಾಂಡೋಲ್ಫ್ ಮೆರವಣಿಗೆಯನ್ನು ಹಿಂತೆಗೆದುಕೊಂಡರು. ರಾಂಡೋಲ್ಫ್ ಮತ್ತು ಬಯಾರ್ಡ್ ರಸ್ಟಿನ್ ಎರಡನೇ ಮೆರವಣಿಗೆಯ ಮುಖ್ಯ ಯೋಜಕರಾಗಿದ್ದಾರೆ, ಅದನ್ನು ಅವರು ೧೯೬೨ರಲ್ಲಿ ಪ್ರಸ್ತಾಪಿಸಿದರು. ಕೆನಡಿ ಸರ್ಕಾರವು ಅದನ್ನು ಹಿಂದೆಗೆದುಕೊಳ್ಳುವಂತೆ ರಾಂಡೋಲ್ಫ್ ಮತ್ತು ಕಿಂಗ್‌ಗೆ ಭಾರೀ ಒತ್ತಡವನ್ನು ಹೇರಿತಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಮೆರವಣಿಗೆಯನ್ನು ೧೯೬೩ರ ಆಗಸ್ಟ್ ೨೮ರಂದು ನಡೆಸಲಾಯಿತು. ರಾಂಡೋಲ್ಫ್ ಕೇವಲ ಕರಿಯರ-ಮುಂದಾಳತ್ವದ ಸಂಘಟನೆಗಳನ್ನು ಮಾತ್ರ ಸೇರಿಸಿಕೊಂಡ ಯೋಜಿತ ೧೯೪೧ರ ಮೆರವಣಿಗೆಗಿಂತ ಭಿನ್ನವಾಗಿ, ೧೯೬೩ರ ಮೆರವಣಿಗೆಯು ಎಲ್ಲಾ ಪ್ರಮುಖ ನಾಗರಿಕ ಹಕ್ಕುಗಳ ಸಂಘಟನೆಗಳು, ಕಾರ್ಮಿಕ ಚಳವಳಿಯ ಪ್ರಗತಿಶೀಲ ವಿಭಾಗ ಮತ್ತು ಇತರ ಪ್ರಗತಿಪರ ಸಂಘಟನೆಗಳ ಸಹಯೋಗದ ಪ್ರಯತ್ನವಾಗಿತ್ತು. ಆ ಮೆರವಣಿಗೆಯು ಆರು ಅಧಿಕೃತ ಗುರಿಗಳನ್ನು ಹೊಂದಿತ್ತು:

 • "ಅರ್ಥಪೂರ್ಣ ನಾಗರಿಕ ಹಕ್ಕುಗಳ ಕಾನೂನುಗಳು,
 • ಭಾರಿ ಫೆಡರಲ್ ಕಾರ್ಯಗಳ ಯೋಜನೆ,
 • ಸಂಪೂರ್ಣ ಮತ್ತು ನ್ಯಾಯಪರ ಉದ್ಯೋಗ,
 • ಯೋಗ್ಯ ವಸತಿ,
 • ಮತಚಲಾವಣೆಯ ಹಕ್ಕು ಮತ್ತು
 • ಸಮರ್ಪಕ ಏಕೀಕೃತ ಶಿಕ್ಷಣ."

ಈ ಮೆರವಣಿಗೆಯ ಪ್ರಮುಖ ಉದ್ದೇಶವು ಬರ್ಮಿಂಗ್‌ಹ್ಯಾಂನ ಕ್ರಾಂತಿಯ ನಂತರ ಕೆನಡಿ ಸರ್ಕಾರವು ಮಂಡಿಸಿದ ನಾಗರಿಕ ಹಕ್ಕುಗಳ ಕಾನೂನಿಗೆ ಅಂಗೀಕಾರ ಒದಗಿಸುವುದಾಗಿತ್ತು. ರಾಷ್ಟ್ರೀಯ ಮಾಧ್ಯಮದ ಗಮನವೂ ಸಹ ಈ ಮೆರವಣಿಗೆಯ ರಾಷ್ಟ್ರೀಯ ಪ್ರದರ್ಶನ ಮತ್ತು ಸಂಭವನೀಯ ಪ್ರಭಾವಕ್ಕೆ ಹೆಚ್ಚು ಕೊಡುಗೆಯನ್ನು ನೀಡಿದೆ. "ದಿ ಮಾರ್ಚ್ ಆನ್ ವಾಷಿಂಗ್ಟನ್ ಆಂಡ್ ಟಿಲಿವಿಷನ್ ನ್ಯೂಸ್"‌ನಲ್ಲಿ[೪೬] ವಿಲಿಯಂ ಥಾಮಸ್ ಹೀಗೆಂದು ಸೂಚಿಸಿದ್ದಾರೆ: "ಆ ಘಟನೆಯನ್ನು ಪ್ರಸಾರ ಮಾಡಲು ಪ್ರಮುಖ ಜಾಲಗಳಿಂದ ಸುಮಾರು ಐನ್ನೂರು ಕ್ಯಾಮೆರಾಮೆನ್, ತಂತ್ರಜ್ಞರು ಮತ್ತು ಪ್ರಮುಖ ಜಾಲದ ಬಾತ್ಮಿದಾರರನ್ನು ವ್ಯವಸ್ಥೆಗೊಳಿಸಲಾಗಿತ್ತು. ಕಳೆದ ಬಾರಿಯ ಅಧ್ಯಕ್ಷರ ಉದ್ಘಾಟನೆ ಸಮಾರಂಭದಲ್ಲಿ ಬಳಸಿದ ಕ್ಯಾಮೆರಾಗಳಿಗಿಂದ ಹೆಚ್ಚಿನ ಕ್ಯಾಮೆರಾಗಳನ್ನು ಉಪಯೋಗಿಸಲಾಗಿತ್ತು. ಮೆರವಣಿಗೆಯ ಪರಿಣಾಮಕಾರಿ ದೀರ್ಘದೃಶ್ಯವನ್ನು ಒದಗಿಸಲು, ಒಂದು ಕ್ಯಾಮೆರಾವನ್ನು ಎತ್ತರದಲ್ಲಿ ವಾಷಿಂಗ್ಟನ್‌ನ ಸ್ಮಾರಕ ಸ್ತಂಭದಲ್ಲಿ ಇರಿಸಲಾಗಿತ್ತು". ಆಯೋಜಕರ ಭಾಷಣಗಳನ್ನು ಪ್ರಸಾರ ಮಾಡುವ ಮೂಲಕ ಮತ್ತು ಸ್ವಂತ ವರದಿಯನ್ನು ಒದಗಿಸುವ ಮೂಲಕ ದೂರದರ್ಶನ ಕೇಂದ್ರಗಳು, ಅವುಗಳ ಸ್ಥಳೀಯ ವೀಕ್ಷಕರು ಆ ಘಟನೆಯನ್ನು ನೋಡಿ, ಅದರ ಬಗ್ಗೆ ತಿಳಿಯಲು ಅಕ್ಷರಶಃ ಮಾರ್ಗವನ್ನು ಕಲ್ಪಿಸಿಕೊಟ್ಟವು.[೪೬] ಆ ಮೆರವಣಿಗೆಯು ಯಶಸ್ವಿಯಾಯಿತು, ಆದರೂ ವಿವಾದಗಳಿದ್ದವು. ಸುಮಾರು ೨೦೦,೦೦೦ರಿಂದ ೩೦೦,೦೦೦ದಷ್ಟು ಪ್ರದರ್ಶನಕಾರರು ಲಿಂಕನ್ ಸ್ಮಾರಕದ ಮುಂದೆ ಜಮಾಯಿಸಿದರು, ಅಲ್ಲಿ ಕಿಂಗ್ ಅವರ ಪ್ರಸಿದ್ಧ "ಐ ಹ್ಯಾವ್ ಎ ಡ್ರೀಮ್" ಭಾಷಣವನ್ನು ಮಾಡಿದರು. ಮತಚಲಾಯಿಸುವ ಹಕ್ಕನ್ನು ರಕ್ಷಿಸುವ ಮತ್ತು ವರ್ಣಭೇದ ನೀತಿಯನ್ನು ಕಾನೂನುಬಾಹಿರಗೊಳಿಸಿದ ಹೊಸ, ಹೆಚ್ಚು ಪರಿಣಾಮಕಾರಿ ನಾಗರಿಕ ಹಕ್ಕುಗಳ ಕಾನೂನಿಗೆ ಮಾಡಿದ ಪ್ರಯತ್ನಗಳಿಗಾಗಿ ಕೆನಡಿ ಸರ್ಕಾರವನ್ನು ಹೆಚ್ಚಿನ ಭಾಷಣಕಾರರು ಹೊಗಳಿದರು. SNCCಯ ಜಾನ್ ಲೆವಿಸ್ ದಕ್ಷಿಣದ ಕರಿಯರಿಗೆ ಮತ್ತು ಡೀಪ್ ಸೌತ್‌ನಲ್ಲಿ ದಾಳಿಗೆ ಒಳಗಾದ ನಾಗರಿಕ ಹಕ್ಕುಗಳ ಕಾರ್ಮಿಕರಿಗೆ ರಕ್ಷಣೆ ಒದಗಿಸಲು ಹೆಚ್ಚಿನ ಕಾರ್ಯವನ್ನು ಮಾಡದಿರುವ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು. ಮೆರವಣಿಗೆಯ ನಂತರ, ಕಿಂಗ್ ಮತ್ತು ಇತರ ನಾಗರಿಕ ಹಕ್ಕುಗಳ ಮುಖಂಡರು ಶ್ವೇತ ಭವನದಲ್ಲಿ ಅಧ್ಯಕ್ಷ ಕೆನಡಿಯನ್ನು ಭೇಟಿಯಾದರು. ಕಾನೂನನ್ನು ಅಂಗೀಕರಿಸುವಲ್ಲಿ ಕೆನಡಿ ಸರ್ಕಾರವು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದೆಯೆಂದು ಹೇಳಲಾಗುತ್ತಿದ್ದರೂ, ಕಾಂಗ್ರೆಸ್‌ನಲ್ಲಿ ಅದನ್ನು ಮಾಡಲು ಅದಕ್ಕೆ ಬಹುಮತವಿತ್ತೇ ಎಂಬ ಬಗ್ಗೆ ಸ್ಪಷ್ಟನೆಯಿರಲಿಲ್ಲ. ಆದರೆ ೧೯೬೩ರ ನವೆಂಬರ್ ೨೨ರಂದು ಅಧ್ಯಕ್ಷ ಕೆನಡಿಯು ಹತ್ಯೆಗೀಡಾದಾಗ,[೪೫] ಹೊಸ ಅಧ್ಯಕ್ಷ ಲಿಂಡನ್ ಜಾನ್ಸನ್ ಕೆನಡಿಯವರ ಬಹುಮಟ್ಟಿನ ಶಾಸಕಾಂಗದ ಕಾರ್ಯಸೂಚಿಯನ್ನು ಅನುಷ್ಠಾನಕ್ಕೆ ತರಲು ಕಾಂಗ್ರೆಸ್‌ನಲ್ಲಿನ ಅವರ ಪ್ರಭಾವವನ್ನು ಬಳಸಿಕೊಳ್ಳಲು ನಿರ್ಧರಿಸಿದರು.

ಸೇಂಟ್ ಆಗಸ್ಟಿನ್, ಫ್ಲೋರಿಡಾ, ೧೯೬೩–೧೯೬೪

[ಬದಲಾಯಿಸಿ]

'ರಾಷ್ಟ್ರದ ಹಳೆಯ ನಗರ'ವೆಂದು ಪ್ರಸಿದ್ಧವಾದ ಫ್ಲೋರಿಡಾದ ಈಶಾನ್ಯ ಕರಾವಳಿಯಲ್ಲಿರುವ ಸೇಂಟ್ ಆಗಸ್ಟಿನ್ಅನ್ನು ೧೫೬೫ರಲ್ಲಿ ಸ್ಪ್ಯಾನಿಶರು ಸ್ಥಾಪಿಸಿದರು. ಇದು ೧೯೬೪ರ ನಾಗರಿಕರ ಹಕ್ಕುಗಳ ಕಾಯಿದೆಯು ಅಂಗೀಕಾರವಾಗಲು ನಡೆದ ಭಾರಿ ಬೆಳವಣಿಗೆಗೆ ವೇದಿಕೆಯಾಯಿತು. ಕರಿಯ ದಂತವೈದ್ಯ ಮತ್ತು ವಾಯುಪಡೆ ಮಾಜಿ ಯೋಧ ಡಾ. ರೋಬರ್ಟ್ ಬಿ ಹೈಲಿಂಗ್ ಮುಖಂಡತ್ವದಲ್ಲಿ ಒಂದು ಸ್ಥಳೀಯ ಚಳವಳಿಯು ೧೯೬೩ರಿಂದ ಪ್ರತ್ಯೇಕಿಸಲಾದ ಸ್ಥಳೀಯ ಸಂಸ್ಥೆಗಳ ಎದುರು ಪ್ರತಿಭಟನೆಗಳನ್ನು ನಡೆಸಿದರು. ಇದರಿಂದಾಗಿ ಆ ವರ್ಷದ ಕೊನೆಯಲ್ಲಿ ಡಾ. ಹೈಲಿಂಗ್ ಮತ್ತು ಮೂವರು ಜೊತೆಗಾರರಾದ ಜೇಮ್ಸ್ ಜಾಕ್ಸನ್, ಕ್ಲೈಡ್ ಜೆಂಕಿನ್ಸ್ ಮತ್ತು ಜೇಮ್ಸ್ ಹಾಸರ್ ಅವರುಗಳನ್ನು ಕು ಕ್ಲಕ್ಸ್ ಕ್ಲ್ಯಾನ್‌ನ ಸಭೆಯಲ್ಲಿ ನಿರ್ದಯವಾಗಿ ಥಳಿಸಲಾಯಿತು. ನೈಟ್‌ರೈಡರ್‌ಗಳು ಕರಿಯರ ಮನೆಗಳಿಗೆ ದಾಳಿ ಮಾಡಿದರು ಹಾಗೂ ಹದಿಹರೆಯದವರಾದ ಆಂಡ್ರಿ ನೆಲ್ ಎಡ್ವರ್ಡ್ಸ್, ಜೋಯ್ಆನ್ ಆಂಡರ್ಸನ್, ಸ್ಯಾಮ್ಯುಯೆಲ್ ವೈಟ್ ಮತ್ತು ವಿಲ್ಲೈ ಕಾರ್ಲ್ ಸಿಂಗಲ್ಟನ್ (ಈತನನ್ನು 'ದಿ ಸೇಂಟ್ ಆಗಸ್ಟಿನ್ ಫೋರ್' ಎಂದು ಕರೆಯಲಾಗುತ್ತಿತ್ತು) ಸ್ಥಳೀಯ ವೂಲ್‌ವರ್ತ್‌ನ ಉಪಾಹಾರ ಗೃಹದಲ್ಲಿ(ಲಂಚ್ ಕೌಂಟರ್) ಧರಣಿ ನಡೆಸಿದ ನಂತರ ಆರು ತಿಂಗಳ ಕಾಲ ಜೈಲಿನಲ್ಲಿ ಮತ್ತು ಸುಧಾರಣಾ ಶಾಲೆಯಲ್ಲಿ ಕಳೆದರು. ಇದರಿಂದಾಗಿ ಪಿಟ್ಸ್‌ಬರ್ಗ್ ಕೊರಿಯರ್ , ಜಾಕೀ ರಾಬಿನ್ಸನ್ ಮತ್ತು ಇತರರು ರಾಷ್ಟ್ರೀಯ ಪ್ರತಿಭಟನೆಗಳನ್ನು ನಡೆಸಿದ ನಂತರ ಅವರನ್ನು ಬಿಡುಗಡೆ ಮಾಡಲು ಫ್ಲೋರಿಡಾದ ಸಚಿವಸಂಪುಟ ಮತ್ತು ಗವರ್ನರ್ ವಿಶೇಷ ಕ್ರಮಗಳನ್ನು ಕೈಗೊಂಡರು. ೧೯೬೪ರಲ್ಲಿ, ಡಾ. ಹೈಲಿಂಗ್ ಮತ್ತು ಇತರ ಕಾರ್ಯಕರ್ತಗಳು ಸದರ್ನ್ ಕ್ರಿಶ್ಚಿಯನ್ ಲೀಡರ್‌ಶಿಪ್ ಕಾನ್ಫರೆನ್ಸ್ಅನ್ನು ಸೇಂಟ್ ಆಗಸ್ಟಿನ್‌ನಲ್ಲಿ ನಡೆಸಬೇಕೆಂದು ಒತ್ತಾಯಪಡಿಸಿದರು. ಹೈಲಿಂಗ್ ಉತ್ತರದ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಬೀಚ್‌ಗೆ ಹೋಗದೆ ಪ್ರದರ್ಶನಗಳಲ್ಲಿ ಭಾಗವಹಿಸಲು ಪುರಾತನ ನಗರಕ್ಕೆ ಬನ್ನಿ ಎಂದು ಕೇಳಿಕೊಂಡಾಗ ಮೊದಲ ಕ್ರಮವು ವಸಂತಕಾಲದ ವಿರಾಮದಲ್ಲಿ ಚಾಲ್ತಿಗೆ ಬಂತು. ಮೇರಿ ಪಾರ್ಕ್‌ಮ್ಯಾನ್ ಪೀಬಾಡಿ, ಈಸ್ತರ್ ಬರ್ಗೆಸ್, ಹೆಸ್ಟರ್ ಕ್ಯಾಂಪ್‌ಬೆಲ್ (ಇವರೆಲ್ಲರ ಪತಿಯರು ಚರ್ಚಿನ ಬಿಷಪ್‌ಗಳಾಗಿದ್ದರು) ಮೊದಲಾದ ನಾಲ್ಕು ಪ್ರಮುಖ ಮಸ್ಸಾಚ್ಯುಸೆಟ್ಸ್ ಮಹಿಳೆಯರು ಹಾಗೂ ಫ್ಲೋರೆನ್ಸ್ ರೋವ್ (ಈಕೆಯ ಪತಿ ಜಾನ್ ಹಾನ್ಕಾಕ್ ಇನ್ಶುರೆನ್ಸ್ ಕಂಪನಿಯ ಉಪಾಧ್ಯಕ್ಷ) ತಮ್ಮ ಬೆಂಬಲವನ್ನು ನೀಡಿದರು. ಮಸ್ಸಾಚ್ಯುಸೆಟ್ಸ್‌ನ ಗವರ್ನರ್‌ನ ೭೨ ವರ್ಷದ ತಾಯಿ ಪೀಬಾಡಿ ಪ್ರತ್ಯೇಕಿಸಲಾದ ಪಾನ್ಸ್ ಡಿ ಲಿಯಾನ್ ಮೋಟಾರ್ ಲಾಡ್ಜ್‌ನಲ್ಲಿ ಒಂದು ಸಂಘಟಿತ ಸಮೂಹದೊಂದಿಗೆ ಆಹಾರ ಸೇವಿಸಿದ್ದಕ್ಕಾಗಿ ಬಂಧಿಸಲಾಯಿತು, ಇದು ರಾಷ್ಟ್ರದಾದ್ಯಂತ ಮುಖಪುಟ ಸುದ್ದಿಯಾಯಿತು ಮತ್ತು ಸೇಂಟ್ ಆಗಸ್ಟಿನ್‌ನಲ್ಲಿನ ನಾಗರಿಕ ಹಕ್ಕುಗಳ ಚಳವಳಿಯು ಪ್ರಪಂಚದ ಗಮನಕ್ಕೆ ತಂದಿತು. ಕಾಂಗ್ರೆಸ್‌ನ ನಾಗರಿಕ ಹಕ್ಕುಗಳ ಮಸೂದೆ ವಿರುದ್ಧ ದೀರ್ಘ ವಿಳಂಬವನ್ನು ಕಂಡಿದ್ದರಿಂದ, ಮುಂಬರುವ ತಿಂಗಳಲ್ಲಿ ವ್ಯಾಪಕವಾಗಿ ಪ್ರಚಾರವಾದ ಚಟುವಟಿಕೆಗಳು ಮುಂದುವರಿದವು. ಡಾ. ಮಾರ್ಟಿನ್‌ ಲೂಥರ್ ಕಿಂಗ್, ಜೂನಿಯರ್ ೧೯೬೪ರ ಜೂನ್ ೧೧ರಂದು ಸೇಂಟ್ ಆಗಸ್ಟಿನ್‌ನ ಮೋನ್ಸನ್ ಮೋಟೆಲ್‌ನಲ್ಲಿ ಬಂಧನಕ್ಕೊಳಗಾದರು, ಇದು ಅವರು ಬಂಧನಕ್ಕೊಳಗಾದ ಫ್ಲೋರಿಡಾದ ಏಕೈಕ ಸ್ಥಳವಾಗಿದೆ. ಚಳವಳಿಯಲ್ಲಿ ಭಾಗವಹಿಸಲು ಇತರರನ್ನು ಸೇರಿಸಿಕೊಳ್ಳುವಂತೆ ಕೋರಿ ಅವರು 'ಸೇಂಟ್ ಆಗಸ್ಟಿನ್ ಜೈಲ್‌ನಿಂದ ಪತ್ರ'ವನ್ನು ಉತ್ತರದ ಬೆಂಬಲಿಗ ನ್ಯೂಜೆರ್ಸಿಯ ರಾಬ್ಬಿ ಇಸ್ರೇಲ್ ಡ್ರೆಸ್ನರ್‌ಗೆ ಕಳುಹಿಸಿದರು. ಇದರಿಂದಾಗಿ ಒಂದು ವಾರದ ನಂತರ ಮೋನ್ಸನ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವಾಗ ಅಸಂಖ್ಯಾತ ರಬ್ಬಿ‌ಗಳನ್ನು(ಧಾರ್ಮಿಕ ನಾಯಕರು) ಬಂಧಿಸಲಾಯಿತು, ಇದು ಅಮೆರಿಕಾದ ಇತಿಹಾಸದಲ್ಲೇ ಬಹುದೊಡ್ಡ ಸಂಖ್ಯೆಯ ಬಂಧನವಾಗಿದೆ. ಸೇಂಟ್ ಆಗಸ್ಟಿನ್‌ನಲ್ಲಿ ತೆಗೆಯಲಾದ ಒಂದು ಪ್ರಸಿದ್ಧ ಛಾಯಾಚಿತ್ರವು ಮೋನ್ಸನ್ ಮೋಟೆಲ್‌ನ ವ್ಯವಸ್ಥಾಪಕ ಕರಿಯರು ಮತ್ತು ಬಿಳಿಯರು ಈಜುತ್ತಿದ್ದ ಈಜುಕೊಳಕ್ಕೆ ಆಮ್ಲ ಸುರಿಯುತ್ತಿರುವುದನ್ನು ತೋರಿಸುತ್ತದೆ. ೧೯೬೪ರ ನಾಗರಿಕ ಹಕ್ಕುಗಳ ಕಾಯಿದೆಯನ್ನು ಅಂಗೀಕರಿಸಲು ಸೆನೆಟ್ ಮತಹಾಕಲು ಹೋದ ದಿನದಂದು ಆ ದಿಗಿಲುಗೊಳಿಸುವ ಛಾಯಾಚಿತ್ರವನ್ನು ವಾಷಿಂಗ್ಟನ್‌ ಸುದ್ಧಿಪತ್ರಿಕೆಯ ಮುಖಪುಟದಲ್ಲಿ ಪ್ರಕಟಿಸಲಾಯಿತು.

ಮಿಸಿಸಿಪ್ಪಿ ಫ್ರೀಡಂ ಸಮ್ಮರ್‌, ೧೯೬೪

[ಬದಲಾಯಿಸಿ]

೧೯೬೪ರ ಬೇಸಿಗೆಯಲ್ಲಿ,COFO ಸುಮಾರು ೧,೦೦೦ ಕಾರ್ಯಕರ್ತಗಳನ್ನು ಮಿಸಿಸಿಪ್ಪಿಗೆ ಕರೆತಂದಿತು. ಅವರಲ್ಲಿ ಹೆಚ್ಚಿನವರು ಬಿಳಿಯ ಕಾಲೇಜು ವಿದ್ಯಾರ್ಥಿಗಳಾಗಿದ್ದರು. ಮತದಾರರನ್ನು ದಾಖಲಿಸಲು ಸ್ಥಳೀಯ ಕರಿಯ ಕಾರ್ಯಕರ್ತರೊಂದಿಗೆ ಸೇರಿಕೊಳ್ಳಲು, 'ಸ್ವಾತಂತ್ರ್ಯ ಶಾಲೆ'ಗಳಲ್ಲಿ ಕಲಿಸಲು ಮತ್ತು ಮಿಸಿಸಿಪ್ಪಿ ಫ್ರೀಡಮ್ ಡೆಮೋಕ್ರಟಿಕ್ ಪಾರ್ಟಿ (MFDP)ಯನ್ನು ಆಯೋಜಿಸಲು ಅವರನ್ನು ಕರೆತರಲಾಗಿತ್ತು.[೪೭] ಮಿಸಿಸಿಪ್ಪಿಯ ಹೆಚ್ಚಿನ ಬಿಳಿಯ ನಿವಾಸಿಗಳು ಹೊರಗಿನವರ ಮೇಲೆ ಮತ್ತು ಅವರ ಸಮಾಜವನ್ನು ಬದಲಾಯಿಸಲು ಪ್ರಯತ್ನಿಸಿದ್ದಕ್ಕಾಗಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು. ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳು, ಪೊಲೀಸ್, ಬಿಳಿಯ ನಾಗರಿಕರ ಕೌನ್ಸಿಲ್ ಮತ್ತು ಕು ಕ್ಲಕ್ಸ್ ಕ್ಲ್ಯಾನ್ ಯೋಜನೆಯನ್ನು ವಿರೋಧಿಸಲು ಮತ್ತು ಕರಿಯರಿಗೆ ಮತದಾನಕ್ಕೆ ನೋಂದಣಿಯಾಗದಂತೆ ಅಥವಾ ಸಾಮಾಜಿಕ ಸಮಾನತೆಯನ್ನು ಸಾಧಿಸದಂತೆ ನಿರ್ಬಂಧಿಸಲು ಬಂಧನಗಳು, ಥಳಿತಗಳು, ಬೆಂಕಿ ಹಚ್ಚುವಿಕೆ, ಹತ್ಯೆ, ಗೂಢಚರ್ಯೆ, ಗುಂಡು ಹಾರಿಸುವುದು, ಉಚ್ಚಾಟನೆ ಮತ್ತಿತರ ಬೆದರಿಕೆ ಮತ್ತು ಕಿರುಕುಳದ ಇತರ ರೂಪಗಳನ್ನು ಬಳಸಿದವು.[೪೮] ೧೯೬೪ರ ಜೂನ್ ೨೧ರಂದು ಮೂರು ಮಂದಿ ನಾಗರಿಕ ಹಕ್ಕುಗಳ ಕಾರ್ಯಕರ್ತರು ಕಾಣೆಯಾದರು. ಜೇಮ್ಸ್ ಚ್ಯಾನೆ, ಕಿರಿಯ ಕರಿಯ ಮಿಸಿಸಿಪ್ಪಿಯನ್ ಮತ್ತು ಗಿಲಾವುಗಾರನ ಅಪ್ರೆಂಟಿಸ್; ಮತ್ತು ಇಬ್ಬರು ಯೆಹೂದೀಯ ಕಾರ್ಯಕರ್ತಗಳಾದ ಆಂಡ್ರಿವ್ ಗುಡ್‌ಮ್ಯಾನ್, ಕ್ವೀನ್ಸ್ ಕಾಲೇಜ್ ಮಾನವಶಾಸ್ತ್ರ ವಿದ್ಯಾರ್ಥಿ; ಮತ್ತು ಮೈಕೆಲ್ ಸ್ಕ್ವರ್ನರ್, ಮ್ಯಾನ್ಹ್ಯಾಟನ್‌ನ ಲೋವರ್ ಈಸ್ಟ್ ಸೈಡ್‌ನ CORE ಆಯೋಜಕ. ಈ ಮೂವರು ಕೆಲವು ವಾರಗಳ ನಂತರ ಸಂಚುಗಾರರಿಂದ ಕೊಲೆಯಾಗಿದ್ದು ಕಂಡುಬಂತು. ಈ ಸಂಚುಗಾರರಲ್ಲಿ ಕೆಲವರು ಕ್ಲ್ಯಾನ್‌ನ ಸ್ಥಳೀಯ ಸದಸ್ಯರಾಗಿ, ಮತ್ತೆ ಕೆಲವರು ನೆಶೋಬ ಕೌಂಟಿ ಷೆರಿಫ್‌ನ ವಿಭಾಗದ ಸದಸ್ಯರಾಗಿದ್ದರು. ಇದು ಸಾರ್ವಜನಿಕರನ್ನು ರೊಚ್ಚಿಗೆಬ್ಬಿಸಿತು ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ನ್ಯಾಯಮಂಡಳಿಯು FBI (ಇದು ಹಿಂದೆ ವರ್ಣಭೇದ ನೀತಿ ಮತ್ತು ಕರಿಯರಿಗೆ ಕಿರುಕುಳ ಕೊಡುವ ಸಮಸ್ಯೆಯ ಬಗ್ಗೆ ಗಮನ ಹರಿಸಲು ನಿರಾಕರಿಸಿತ್ತು) ಒಂದಿಗೆ ಕ್ರಮ ಕೈಗೊಳ್ಳುವಂತೆ ಮಾಡಿತು. ಈ ಕೊಲೆಗಳ ವಿರುದ್ಧದ ತೀವ್ರ ಆಕ್ರೋಶವು ನಾಗರಿಕ ಹಕ್ಕುಗಳ ಕಾಯಿದೆಗೆ ಅಂಗೀಕಾರ ಸಿಗುವಂತೆ ಸಹಾಯ ಮಾಡಿತು.(ವಿವರಗಳಿಗಾಗಿ ಮಿಸಿಸಿಪ್ಪಿ ನಾಗರಿಕ ಹಕ್ಕುಗಳ ಕಾರ್ಯಕರ್ತರ ಕೊಲೆಗಳುಅನ್ನು ಗಮನಿಸಿ). ಜೂನ್‌ನಿಂದ ಆಗಸ್ಟ್‌ವರೆಗೆ, ಫ್ರೀಡಂ ಸಮ್ಮರ್‌ ಕಾರ್ಯಕರ್ತರು ರಾಜ್ಯದಾದ್ಯಂತ ಹರಡಿದ ಸುಮಾರು ೩೮ ಸ್ಥಳೀಯ ಯೋಜನೆಗಳಲ್ಲಿ ಕೆಲಸ ಮಾಡಿದರು, ಅವುಗಳಲ್ಲಿ ಹೆಚ್ಚಿನವರು ಮಿಸಿಸಿಪ್ಪಿ ನದೀ ಮುಖಜ ಭೂಮಿಯಲ್ಲಿ ಕೇಂದ್ರೀಕರಿಸಿದ್ದರು. ಸುಮಾರು ೩,೫೦೦ ವಿದ್ಯಾರ್ಥಿಗಳನ್ನು ಹೊಂದಿದ್ದ ಕನಿಷ್ಠ ೩೦ ಸ್ವಾತಂತ್ರ್ಯ-ಪರ ಶಾಲೆಗಳನ್ನು ಸ್ಥಾಪಿಸಲಾಯಿತು ಮತ್ತು ೨೮ ಸಮುದಾಯ ಕೇಂದ್ರಗಳನ್ನು ನಿರ್ಮಿಸಲಾಯಿತು.[೪೯] ಬೇಸಿಗೆ ಯೋಜನೆಯ ಅವಧಿಯಲ್ಲಿ ಕೆಲವು ೧೭,೦೦೦ ಮಿಸಿಸಿಪ್ಪಿ ಕರಿಯರು ತಮ್ಮ ವಿರುದ್ಧ ವ್ಯೂಹರಚಿಸಿದ ಬಿಳಿಯರ ಪಾರಮ್ಯದ ಪಡೆಗಳು ಮತ್ತು ಕೆಂಪು ಪಟ್ಟಿಯನ್ನು ಪ್ರತಿಭಟಿಸಿ, ನೋಂದಾಯಿತ ಮತದಾರರಾಗಲು ಪ್ರಯತ್ನಿಸಿದರು, ಅವರಲ್ಲಿ ಕೇವಲ ೧,೬೦೦ (೧೦% ಗಿಂತಲೂ ಕಡಿಮೆ) ಮಂದಿ ಮಾತ್ರ ಯಶಸ್ವಿಯಾದರು. ಆದರೆ ೮೦,೦೦೦ ಗಿಂತಲೂ ಹೆಚ್ಚು ಮಂದಿ ಮತಚಲಾಯಿಸುವ ಮತ್ತು ರಾಜಕಾರಣದಲ್ಲಿ ಭಾಗವಹಿಸುವ ತಮ್ಮ ಅಪೇಕ್ಷೆಯನ್ನು ತೋರಿಸಿ, ಒಂದು ಪರ್ಯಾಯ ರಾಜಕೀಯ ಸಂಘಟನೆಯಾಗಿ ಸ್ಥಾಪಿಸಲಾದ ಮಿಸಿಸಿಪ್ಪಿ ಫ್ರೀಡಮ್ ಡೆಮೋಕ್ರಟಿಕ್ ಪಾರ್ಟಿಯನ್ನು (MFDP) ಸೇರಿದರು.[೫೦]

1964 ರ ನಾಗರಿಕ ಹಕ್ಕುಗಳ ಕಾಯ್ದೆಗೆ ಸಹಿಹಾಕುತ್ತಿರುವ ರಾಷ್ಟ್ರಧ್ಯಕ್ಷ ಜಾನ್ಸನ್.

ಫ್ರೀಡಂ ಸಮ್ಮರ್‌ ಹೆಚ್ಚಿನ ಮತದಾರರನ್ನು ನೋಂದಾಯಿಸಲು ವಿಫಲಗೊಂಡರೂ, ಅದು ನಾಗರಿಕ ಹಕ್ಕುಗಳ ಚಳವಳಿಯ ಮೇಲೆ ಗಮನಾರ್ಹ ಪ್ರಭಾವವನ್ನು ಬೀರಿತು. ಅದು ಜಿಮ್ ಕ್ರೊ ವ್ಯವಸ್ಥೆಯ ಆಧಾರವಾಗಿದ್ದ ದಶಕಗಳಿಂದ ಜನರು ಅನುಭವಿಸುತ್ತಿದ್ದ ಪ್ರತ್ಯೇಕತೆ ಮತ್ತು ದಬ್ಬಾಳಿಕೆಯನ್ನು ಅಡಗಿಸಲು ಸಹಾಯ ಮಾಡಿತು. ಫ್ರೀಡಂ ಸಮ್ಮರ್‌ಗಿಂತ ಮೊದಲು, ರಾಷ್ಟ್ರೀಯ ಸುದ್ದಿಮಾಧ್ಯಮವು ಡೀಪ್ ಸೌತ್‌ನಲ್ಲಿನ ಕರಿಯ ಮತದಾರರ ದಬ್ಬಾಳಿಕೆಯ ಬಗ್ಗೆ ಮತ್ತು ಕರಿಯ ನಾಗರಿಕ ಹಕ್ಕುಗಳ ಕಾರ್ಯಕರ್ತರು ಎದುರಿಸುತ್ತಿದ್ದ ಅಪಾಯಗಳ ಬಗ್ಗೆ ಹೆಚ್ಚಿನ ಗಮನವನ್ನು ನೀಡುತ್ತಿರಲಿಲ್ಲ. ದಕ್ಷಿಣದಾದ್ಯಂತದ ಘಟನೆಗಳ ಪ್ರಗತಿಯು ಮಾಧ್ಯಮಗಳು ಮಿಸಿಸಿಪ್ಪಿಯ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಮಾಡಿತು. ಉತ್ತರದ ಶ್ರೀಮಂತ ಬಿಳಿಯ ವಿದ್ಯಾರ್ಥಿಗಳ ಸಾವು ಮತ್ತು ಉತ್ತರದ ಇತರರಿಗೆ ನೀಡಿದ ಬೆದರಿಕೆಗಳು ಮಾಧ್ಯಮದ ಸಂಪೂರ್ಣ ಗಮನವನ್ನು ರಾಜ್ಯದೆಡೆಗೆ ಸೆಳೆದವು. ಮಾಧ್ಯಮವು ಬಿಳಿಯರಿಗೆ ಮತ್ತು ಕರಿಯರ ಜೀವಗಳಿಗೆ ಭಿನ್ನವಾಗಿ ಮಹತ್ವವನ್ನು ನೀಡುತ್ತದೆಂದು ನಂಬಿದ ಅನೇಕ ಕರಿಯ ಕಾರ್ಯಕರ್ತರು ಅಸಮಾಧಾನಗೊಂಡರು. ಬಹುಶಃ ಫ್ರೀಡಂ ಸಮ್ಮರ್‌ನ ಗಮನಾರ್ಹ ಪ್ರಭಾವವು ಸ್ವಯಂಸೇವಕರ ಮೇಲುಂಟಾಯಿತು, ಅವರಲ್ಲಿ ಹೆಚ್ಚಿನವರು -ಕರಿಯರು ಮತ್ತು ಬಿಳಿಯರು- ಅದನ್ನು ತಮ್ಮ ಜೀವನದ ಒಂದು ನಿಷ್ಕೃಷ್ಟ ಅವಧಿಯೆಂದು ಪರಿಗಣಿಸುತ್ತಾರೆ.[೫೧]

೧೯೬೪ರ ನಾಗರಿಕ ಹಕ್ಕುಗಳ ಕಾಯಿದೆ

[ಬದಲಾಯಿಸಿ]

ಅಧ್ಯಕ್ಷ ಕೆನಡಿಯು ನಾಗರಿಕ ಹಕ್ಕುಗಳ ಕಾಯಿದೆಯನ್ನು ಮಂಡಿಸಿದರು ಮತ್ತು ಅದಕ್ಕೆ ಉತ್ತರಭಾಗದ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲವನ್ನು ಸೂಚಿಸಿದರೂ, ದಕ್ಷಿಣದ ಸೆನೆಟ್ ಸದಸ್ಯರು ಮತದಾನಕ್ಕೆ ಅಡ್ಡಿಮಾಡುವ(ಫಿಲಿಬಸ್ಟರ್) ಅಪಾಯಗಳನ್ನು ಉಂಟುಮಾಡುವ ಮೂಲಕ ಆ ಕಾಯಿದೆಯ ಪರಿಗಣನೆಗೆ ತಡೆಯೊಡ್ಡಿದರು. ಗಣನೀಯ ಸಂಸದೀಯ ಕುಶಲ ರಾಜಕೀಯ ಕಾರ್ಯಾಚರಣೆಗಳು ಮತ್ತು ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ಸೆನೆಟ್‌ನ ಸದನದಲ್ಲಿ ೫೪ ದಿನಗಳ ಮತದಾನಕ್ಕೆ ಅಡ್ಡಿಯ(ಫಿಲಿಬಸ್ಟರ್) ನಂತರ, ಅಧ್ಯಕ್ಷ ಜಾನ್ಸನ್ ಕಾಂಗ್ರೆಸ್‌ನ ಮೂಲಕ ಒಂದು ಮಸೂದೆಯನ್ನು ಸ್ವೀಕರಿಸಿದರು. ೧೯೬೪ರ ಜುಲೈ ೨ರಂದು, ಅಧ್ಯಕ್ಷ ಜಾನ್ಸನ್ ೧೯೬೪ರ ನಾಗರಿಕ ಹಕ್ಕುಗಳ ಕಾಯಿದೆಗೆ ಸಹಿಹಾಕಿದರು.[೧] ಅದು ಉದ್ಯೋಗದ ಪದ್ಧತಿಗಳಲ್ಲಿ ಮತ್ತು ಸಾರ್ವಜನಿಕ ಸೌಕರ್ಯಗಳಲ್ಲಿ 'ಜನಾಂಗ, ಬಣ್ಣ, ಧರ್ಮ, ಲಿಂಗ ಅಥವಾ ಅಥವಾ ರಾಷ್ಟ್ರೀಯ ಮೂಲ' ಮೊದಲಾದವುಗಳ ಆಧಾರದಲ್ಲಿ ತಾರತಮ್ಯ ತೋರುವುದನ್ನು ನಿರ್ಬಂಧಿಸಿತು. ಆ ಮಸೂದೆಯು ಹೊಸ ಕಾನೂನನ್ನು ಜಾರಿಮಾಡಲು ಮೊಕದ್ದಮೆಗಳನ್ನು ಹೂಡುವುದಕ್ಕೆ ಅಟಾರ್ನಿ ಜನರಲ್‌ಗೆ ಅನುಮತಿ ನೀಡಿತು. ಆ ಕಾಯಿದೆಯು ಅಂತಹ ತಾರತಮ್ಯವನ್ನು ಮಾಡುತ್ತಿದ್ದ ರಾಜ್ಯ ಮತ್ತು ಸ್ಥಳೀಯ ಕಾನೂನುಗಳನ್ನೂ ತೊಡೆದುಹಾಕಿತು.

ಮಿಸಿಸಿಪ್ಪಿ ಫ್ರೀಡಮ್ ಡೆಮೊಕ್ರಟಿಕ್ ಪಾರ್ಟಿ, ೧೯೬೪

[ಬದಲಾಯಿಸಿ]
ರಾಷ್ಟ್ರಧ್ಯಕ್ಷ ಲಿಂಡನ್ ಬಿ. ಜಾನ್ಸನ್ ನಾಗರಿಕ ಹಕ್ಕುಗಳ ನಾಯಕರಾದ ಮಾರ್ಟಿನ್‌ ಲೂಥರ್ ಕಿಂಗ್, ಜೂ., ವಿಟ್ನೆ ಯಂಗ್, ಜೇಮ್ಸ್ ಫಾರ್ಮರ್ ರೊಂದಿಗೆ ಭೇಟಿಯಾಗುತ್ತಿರುವುದು

ಮಿಸಿಸಿಪ್ಪಿಯ ಕರಿಯರು ೧೯ನೇ ಶತಮಾನದ ಉತ್ತರಾರ್ಧದವರೆಗೆ ಕಾನೂನುಬದ್ಧ ಮತ್ತು ಸಂವಿಧಾನಾತ್ಮಕ ಬದಲಾವಣೆಗಳಿಂದ ಮತಚಲಾಯಿಸುವ ಹಕ್ಕನ್ನು ಕಳೆದುಕೊಂಡರು. ೧೯೬೩ರಲ್ಲಿ COFO ಮಿಸಿಸಿಪ್ಪಿಯಲ್ಲಿ ಕರಿಯ ಮಿಸಿಸಿಪ್ಪಿಯನ್ನರಿಗೆ ಮತಚಲಾಯಿಸುವ ಇಚ್ಛೆಯನ್ನು ಪ್ರದರ್ಶಿಸುವ ಉದ್ದೇಶದಿಂದ ಒಂದು ಫ್ರೀಡಮ್ ವೋಟ್ ಆಯೋಜಿಸಿತು. ೮೦,೦೦೦ ಗಿಂತಲೂ ಹೆಚ್ಚು ಮಂದಿ ಅಣಕದ ಚುನಾವಣೆಯಲ್ಲಿ ನೋಂದಾಯಿಸಲ್ಪಟ್ಟರು ಮತ್ತು ಮತಚಲಾಯಿಸಿದರು. ಇದರಲ್ಲಿ ಅಧಿಕೃತ ರಾಜ್ಯ ಡೆಮೋಕ್ರಟಿಕ್ ಪಾರ್ಟಿಯ ಅಭ್ಯರ್ಥಿಗಳ ವಿರುದ್ಧ 'ಫ್ರೀಡಮ್ ಪಾರ್ಟಿ'ಯಿಂದ ಸಂಘಟಿತ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.[೫೨] ೧೯೬೪ರಲ್ಲಿ, ಸರ್ವ-ಬಿಳಿಯ ಅಧಿಕೃತ ಪಕ್ಷಕ್ಕೆ ಸವಾಲೊಡ್ಡಲು ಆಯೋಜಕರು ಮಿಸಿಸಿಪ್ಪಿ ಫ್ರೀಡಮ್ ಡೆಮೋಕ್ರಟಿಕ್ ಪಾರ್ಟಿ (MFDP)ಯನ್ನು ಪ್ರಾರಂಭಿಸಿದರು. ಮಿಸಿಸಿಪ್ಪಿಯ ಮತದಾನ ನೋಂದಣಿ ಅಧಿಕಾರಿಗಳು ಅವರ ಅಭ್ಯರ್ಥಿಗಳನ್ನು ಗುರುತಿಸಲು ನಿರಾಕರಿಸಿದಾಗ, ಅವರು ತಮ್ಮದೇ ಸ್ವಂತ ಪ್ರಾರಂಭಿಕ ಚುನಾವಣೆಯನ್ನು ನಡೆಸಿದರು. ಅವರು ಕಾಂಗ್ರೆಸ್‌ನ ಪರವಾಗಿ ಫ್ಯಾನ್ನೀ ಲೋ ಹ್ಯಾಮರ್, ಆನ್ನಿ ಡಿವೈನ್ ಮತ್ತು ವಿಕ್ಟೋರಿಯ ಗ್ರೇ ಮೊದಲಾದವರನ್ನು ಮತ್ತು ೧೯೬೪ರ ಪ್ರಜಾಪ್ರಭುತ್ವ ರಾಷ್ಟ್ರೀಯ ಸಭೆಯಲ್ಲಿ ಮಿಸಿಸಿಪ್ಪಿಯನ್ನು ಪ್ರತಿನಿಧಿಸಲು ಪ್ರತಿನಿಧಿಗಳ ಪಟ್ಟಿಯನ್ನು ಆಯ್ಕೆ ಮಾಡಿದರು.[೪೭] ಆದರೆ, ಮಹಾಸಭೆಯ ಆಯೋಜಕರಿಗೆ, ನ್ಯೂಜರ್ಸಿಯ ಅಟ್ಲಾಂಟಿಕ್‌ ಸಿಟಿಯಲ್ಲಿ ಮಿಸಿಸಿಪ್ಪಿ ಫ್ರೀಡಂ ಡೆಮಾಕ್ರಟಿಕ್ ಪಕ್ಷದ ಉಪಸ್ಥಿತಿಯು ಅನನುಕೂಲ ಸ್ಥಿತಿಯನ್ನೊಡ್ಡಿತು. ಡೆಮೊಕ್ರಟಿಕ್‌ ಪಕ್ಷದಲ್ಲಿ ಜನಾಂಗೀಯತೆಯ ವಿಚಾರವಾಗಿ ಹೋರಾಟದ ಬದಲಿಗೆ, ನಾಗರಿಕ ಹಕ್ಕು ಕ್ಷೇತ್ರದಲ್ಲಿ ಜಾನ್ಸನ್‌ ಆಡಳಿತದ ವಿಜಯೋತ್ಸವ ಆಚರಿಸುವ ಯೋಜನೆ ಹಾಕಿದ್ದರು. ಮಿಸಿಸಿಪ್ಪಿಯಿಂದ ಅಧಿಕೃತ ಪ್ರತಿನಿಧಿಗಳಿಗೆ ಸ್ಥಳಾವಕಾಶ ನೀಡದಿದ್ದಲ್ಲಿ, ಅಮೆರಿಕಾ ದೇಶದ ದಕ್ಷಿಣ ರಾಜ್ಯಗಳಿಂದ ಬಂದಿದ್ದ ಬಿಳಿಯ ಪ್ರತಿನಿಧಿಗಳೆಲ್ಲ ಸಭಾತ್ಯಾಗ ಮಾಡುತ್ತೇವೆಂದು ಬೆದರಿಕೆಹಾಕಿದರು. ಇದುವರೆಗೂ ದೃಢ ಬಿಳಿಯ ಡೆಮೊಕ್ರೆಟಿಕ್‌ ಭದ್ರಕೋಟೆಯಾಗಿದ್ದ ಅಮೆರಿಕಾ ದೇಶದ ದಕ್ಷಿಣ ಭಾಗಗಳಲ್ಲಿ ರಿಪಬ್ಲಿಕನ್‌ ಪಕ್ಷದ ಬ್ಯಾರಿ ಗೊಲ್ಡ್‌ವಾಟರ್‌ರ ಪ್ರಚಾರವು ಸಾಧಿಸುತ್ತಿದ್ದ ಅತಿಕ್ರಮಣ, ದೇಶದ ಉತ್ತರ ಭಾಗದಲ್ಲಿ ಡೆಮೊಕ್ರೆಟಿಕ್‌ ಪ್ರಾಥಮಿಕ ಹಂತದ ಚುನಾವಣೆಗಳಲ್ಲಿ ಜಾರ್ಜ್‌ ವಾಲೇಸ್‌ ಗಳಿಸುತ್ತಿದ್ದ ಅಪಾರ ಬೆಂಬಲವು ಜಾನ್ಸನ್‌ರನ್ನು ಚಿಂತೆಗೀಡು ಮಾಡಿತು. ಆದರೆ, MFDP ತನ್ನ ವಾದವನ್ನು ಕ್ರೆಡೆನ್ಷಿಯಲ್ ಕಮಿಟಿಯ ಮುಂದೆ ಮಂಡಿಸುವುದನ್ನು ಜಾನ್ಸನ್‌ ತಡೆಗಟ್ಟಲಾಗಲಿಲ್ಲ. ಅಲ್ಲಿ, ತಾವು ಎದುರಿಸಿದ ಥಳಿತಗಳು ಮತ್ತು ಮತ ಚಲಾಯಿಸಲೆಂದು ನೋಂದಾಯಿಸುವ ಯತ್ನದಲ್ಲಿ ಎದುರಿಸಿದ ಬೆದರಿಕೆಗಳನ್ನು ಕುರಿತು ಫ್ಯಾನಿ ಲೂ ಹ್ಯಾಮರ್ ಬಹಳಷ್ಟು ವಿಸ್ತಾರವಾಗಿ ವಿವರಿಸಿದರು.‌ ಕಿರುತೆರೆ ಕ್ಯಾಮೆರಾಗಳತ್ತ ಮುಖ ಮಾಡಿದ ಹ್ಯಾಮರ್‌ 'ಇದೇನಾ ಅಮೆರಿಕಾ?' ಎಂದು ಪ್ರಶ್ನಿಸಿದರು. ಜಾನ್ಸನ್‌ MFDPಗೆ ರಾಜಿಯ ಪ್ರಸ್ತಾಪವಿತ್ತರು. ಇದರ ಪ್ರಕಾರ ಅ ಪಕ್ಷಕ್ಕೆ ಮತದಾನ ಹಕ್ಕಿರದ, ಎರಡು ಸ್ಥಾನಗಳನ್ನು ನೀಡುವುದಾಗಿತ್ತು. ಅಧಿಕೃತ ಡೆಮೊಕ್ರೆಟಿಕ್‌ ಪಕ್ಷವು ಕಳುಹಿಸಿದ್ದ ಬಿಳಿಯ ನಿಯೋಗವು ತನ್ನೆಲ್ಲ ಸ್ಥಾನಗಳನ್ನು ಉಳಿಸಿಕೊಳ್ಳುವುದಾಗಿತ್ತು. ಈ ರಾಜಿಯನ್ನು ಎಮ್ಎಫ್‌ಡಿಪಿ ಕೋಪೋದ್ರಿಕ್ತವಾಗಿ ನಿರಾಕರಿಸಿತು. ಅಧಿಕೃತ ಮನ್ನಣೆ ನಿರಾಕರಿಸಲಾದ ನಂತರ, MFDP ಈ ಮಹಾಸಭೆಯಲ್ಲಿ ಪ್ರತಿಭಟನೆ ಮುಂದುವರೆಸಿತು. ಮೂವರನ್ನು ಹೊರತುಪಡಿಸಿ, ಉಳಿದೆಲ್ಲ ಮಿಸಿಸಿಪ್ಪಿಯ ಕಾಯಂ ಪ್ರತಿನಿಧಿಗಳು ಸಭಾತ್ಯಾಗ ಮಾಡಿದರು. ಪಕ್ಷಕ್ಕೆ ನಿಷ್ಠರಾಗಲು ನಿರಾಕರಿಸಿದ್ದು ಇದಕ್ಕೆ ಕಾರಣ.MFDPಪ್ರತಿನಿಧಿಗಳು ಸಹಾನುಭೂತಿ ತೋರಿದ ಪ್ರತಿನಿಧಿಗಳಿಂದ ಪಾಸು ಎರವಲು ಪಡೆದು, ಅಧಿಕೃತ ಮಿಸಿಸಿಪ್ಪಿ ಸದಸ್ಯರು ತ್ಯಜಿಸಿದ ಸ್ಥಾನಗಳಲ್ಲಿ ಕುಳಿತರು. ನ್ಯಾಷನಲ್‌ ಪಾರ್ಟಿ ಆಯೋಜಕರು ಅವರನ್ನು ಸಭೆಯಿಂದ ಹೊರತಳ್ಳಿದರು. ಮಾರನೆಯ ದಿನ ಪುನಃ ಬಂದಾಗ, ಮಹಾಸಭೆಯ ಆಯೋಜಕರು ಮುಂಚಿನ ದಿನ ಅಲ್ಲಿದ್ದ ಖಾಲಿ ಆಸನಗಳನ್ನು ತೆಗೆದದ್ದು ಕಂಡುಬಂದಿತು. ಅವರು ಅಲ್ಲೇ ನಿಂತು 'ಸ್ವಾತಂತ್ರ್ಯ ಗೀತೆ'ಗಳನ್ನು ಹಾಡಿದರು. ೧೯೬೪ರಲ್ಲಿ ನಡೆದ ಡೆಮೊಕ್ರೆಟಿಕ್‌ ಪಾರ್ಟಿ ಮಹಾಸಭೆಯು, MFDP ಹಾಗೂ ನಾಗರಿಕ ಹಕ್ಕು ಚಳವಳಿಯಲ್ಲಿದ್ದ ಹಲವರನ್ನು ಜಿಗುಪ್ಸೆಗೊಳಿಸಿತು. ಆದರೂ ಇದು MFDPಯನ್ನು ನಾಶಗೊಳಿಸಲಿಲ್ಲ. ಅಟ್ಲಾಂಟಿಕ್‌ ಸಿಟಿ ಸಭೆಯ ನಂತರ MFDP ಇನ್ನಷ್ಟು ಮೂಲಭೂತವಾದದತ್ತ ತಿರುಗಿತು. ತನ್ನ ಮಹಾಸಭೆಗಳೊಂದರಲ್ಲಿ ಮಾತನಾಡಲು ನೇಷನ್‌ ಆಫ್‌ ಇಸ್ಲಾಮ್ ಪಕ್ಷದ ಮ್ಯಾಲ್ಕಮ್‌ ಎಕ್ಸ್‌ರನ್ನು ಆಹ್ವಾನಿಸಿ, ವಿಯೆಟ್ನಾಮ್‌ ವಿರುದ್ಧದ ಯುದ್ಧವನ್ನು ವಿರೋಧಿಸಿತು.

ಡಾ. ಕಿಂಗ್‌ರಿಗೆ ನೊಬೆಲ್‌ ಶಾಂತಿ ಪುರಸ್ಕಾರ

[ಬದಲಾಯಿಸಿ]

೧೯೬೪ರ ಡಿಸೆಂಬರ್ ೧೦ರಂದು ಡಾ. ಮಾರ್ಟಿನ್‌ ಲೂಥರ್‌ ಕಿಂಗ್‌ ಜೂನಿಯರ್‌ಗೆ ನೊಬೆಲ್‌ ಶಾಂತಿ ಪುರಸ್ಕಾರ ನೀಡಲಾಯಿತು. ತಮ್ಮ ೩೫ನೆಯ ವಯಸ್ಸಿನಲ್ಲಿ ಈ ಪ್ರಶಸ್ತಿ ಸ್ವೀಕರಿಸಿ, ಅತ್ಯಂತ ಕಿರಿ ವಯಸ್ಸಿನ ನೊಬೆಲ್‌ ಪುರಸ್ಕೃತ ವ್ಯಕ್ತಿಯಾದರು.[೫೩]

೧೯೬೫ರ ಜನವರಿಯಲ್ಲಿ ಅಮೆರಿಕನ್‌ ಫುಟ್ಬಾಲ್‌ ಲೀಗ್‌ ಆಟಗಾರರಿಂದ ನ್ಯೂ ಆರ್ಲಿಯನ್ಸ್‌ ಬಹಿಷ್ಕಾರ

[ಬದಲಾಯಿಸಿ]

೧೯೬೪ರಲ್ಲಿ ವೃತ್ತಿಪರ ಅಮೆರಿಕನ್‌ ಫುಟ್ಬಾಲ್‌ ಲೀಗ್‌ ಋತು ಮುಗಿದ ನಂತರ, ೧೯೬೫ರ ಆರಂಭದಲ್ಲಿ ನ್ಯೂ ಆರ್ಲಿಯನ್ಸ್‌ನ ಟುಲ್ಯಾನ್‌ ಕ್ರೀಡಾಂಗಣದಲ್ಲಿ ಎಎಫ್‌ಎಲ್‌ ಆಲ್‌-ಸ್ಟಾರ್‌ ಗೇಮ್‌ ಆಯೋಜಿಸಲಾಗಿತ್ತು. ನ್ಯೂ ಆರ್ಲಿಯನ್ಸ್‌ನಲ್ಲಿನ ಹಲವು ಹೋಟೆಲ್‌ಗಳು ಮತ್ತು ವಾಣಿಜ್ಯ ಕೇಂದ್ರಗಳಲ್ಲಿ ಅಸಂಖ್ಯಾತ ಕರಿಯ ಆಟಗಾರರಿಗೆ ಸೇವೆ ಒದಗಿಸಲು ನಿರಾಕರಿಸಿದ ನಂತರ, ಕ್ಯಾಬ್‌ನ ಬಿಳಿಯ ಚಾಲಕರು ಕರಿಯ ಪ್ರಯಾಣಿಕರನ್ನು ಒಯ್ಯಲು ನಿರಾಕರಿಸಿದ ಘಟನೆಗಳು ನಡೆದವು. ಇದರಿಂದಾಗಿ, ಕರಿಯ ಮತ್ತು ಬಿಳಿಯ ಆಟಗಾರರು ನ್ಯೂ ಆರ್ಲಿಯನ್ಸ್‌ನ ಬಹಿಷ್ಕಾರಕ್ಕಾಗಿ ಕರೆ ನೀಡಿದರು. ಬಫೆಲೊ ಬಿಲ್ಸ್‌ ಆಟಗಾರರ ನಾಯಕತ್ವದಲ್ಲಿ, ಕುಕೀ ಗಿಲ್ಕ್ರಿಸ್ಟ್‌ ಸೇರಿದಂತೆ ಹಲವು ಆಟಗಾರರು ಒಗ್ಗಟ್ಟನ್ನು ಪ್ರದರ್ಶಿಸಿದರು. ಆಟವನ್ನು ಹೌಸ್ಟನ್‌ನಲ್ಲಿರುವ ಜೆಪ್ಸೆನ್‌ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಯಿತು. ಬಹಿಷ್ಕಾರಕ್ಕೆ ಪ್ರೇರೇಪಣೆ ನೀಡಿದ ತಾರತಮ್ಯದ ಪದ್ಧತಿಗಳು ೧೯೬೪ರಲ್ಲಿ ಅಂಕಿತ ಹಾಕಿದ ೧೯೬೪ರ ನಾಗರಿಕ ಹಕ್ಕು ಕಾಯಿದೆ ಅನ್ವಯ ಕಾನೂನುಬಾಹಿರವಾಗಿತ್ತು.[೧] ಈ ಹೊಸ ಕಾನೂನು ಎಎಫ್‌ಎಲ್‌ ಆಟಗಾರರ ಹೋರಾಟಕ್ಕೆ ಪ್ರೋತ್ಸಾಹ ನೀಡಿತು. ವೃತ್ತಿಪರ ಕ್ರೀಡಾ ಪಂದ್ಯಾವಳಿಯೊಂದು ಇಡೀ ನಗರವನ್ನೇ ಬಹಿಷ್ಕಾರಮಾಡಿದ್ದು ಇದೇ ಮೊದಲ ಬಾರಿ.

ಸೆಲ್ಮಾ ಮತ್ತು ಮತದಾನ ಹಕ್ಕುಗಳ ಕಾಯಿದೆ, ೧೯೬೫

[ಬದಲಾಯಿಸಿ]
ಚಿತ್ರ:Vot derome.jpg
1968 ರಲ್ಲಿ ಫಿಲಿಪ್ಪೆ ಡಿರೋಮ್ ರಿಂದ VOTE ಎಂಬ ಹೆಸರುಳ್ಳ ತೈಲಚಿತ್ರ ಕಲಾಕೃತಿ

೧೯೬೩ರಲ್ಲಿ ಅಲಬಾಮಾ ರಾಜ್ಯದ ಸೆಲ್ಮಾದಲ್ಲಿ SNCC ಮಹತ್ವಾಕಾಂಕ್ಷೆಯ ಮತದಾರ ನೋಂದಣಿ ಅಭಿಯಾನ ಕೈಗೊಂಡಿತು. ಆದರೆ, ಸೆಲ್ಮಾ ವಿಭಾಗದ ಷೆರಿಫ್‌ ಜಿಮ್‌ ಕ್ಲಾರ್ಕ್‌ ಇದಕ್ಕೆ ಆಕ್ಷೇಪಿಸಿದ ಫಲವಾಗಿ, ೧೯೬೫ರಲ್ಲಿ ಈ ನೋಂದಣಿ ಅಭಿಯಾನವನ್ನು ಕೈಬಿಡಬೇಕಾಯಿತು. ಸ್ಥಳೀಯ ನಿವಾಸಿಗಳು SNCCಯ ನೆರವು ಕೋರಿದಾಗ, ಕಿಂಗ್‌ ಸೆಲ್ಮಾಗೆ ಆಗಮಿಸಿ, ಹಲವು ಮೆರವಣಿಗೆಗಳನ್ನು ಮುನ್ನಡೆಸಿದರು. ಅವರನ್ನೂ ಸೇರಿಸಿ ಸುಮಾರು ೨೫೦ ಇತರೆ ಪ್ರತಿಭಟನಾಕಾರರನ್ನು ಬಂಧಿಸಲಾಯಿತು. ಮೆರವಣಿಗೆದಾರರ ಮೇಲೆ ಪೊಲೀಸರ ಹಿಂಸಾತ್ಮಕ ಪ್ರತಿರೋಧ ಮುಂದುವರಿಯಿತು. ಆನಂತರ, ೧೯೬೫ರ ಫೆಬ್ರವರಿ ತಿಂಗಳಲ್ಲಿ ನಡೆದ ಮೆರವಣಿಗೆಯಲ್ಲಿ, ಸನಿಹದ ಮ್ಯಾರಿಯಾನ್‌ ನಿವಾಸಿ ಜಿಮ್ಮಿ ಲೀ ಜ್ಯಾಕ್ಸನ್‌ ಪೊಲೀಸರಿಂದ ಹತ್ಯೆಯಾದ ಘಟನೆ ನಡೆಯಿತು. ಜ್ಯಾಕ್ಸನ್‌ರ ಸಾವಿನ ಫಲವಾಗಿ, ಸೆಲ್ಮಾ ಚಳವಳಿಯ ನಿರ್ದೇಶಕ ಜೇಮ್ಸ್‌ ಬೆವೆಲ್‌, ಸೆಲ್ಮಾದಿಂದ ರಾಜ್ಯದ ರಾಜಧಾನಿ ಮಾಂಟ್ಮೊಮೆರಿ ತನಕ ಮೆರವಣಿಗೆ ಆರಂಭಿಸಲು ನಿರ್ಧರಿಸಿದರು. ೧೯೬೫ರ ಮಾರ್ಚ್‌ ೭ರಂದು, ಬೆವೆಲ್‌ರ ಯೋಜನೆಯಂತೆ SCLC ಯ ಹೊಸಿಯ ವಿಲಿಯಮ್ಸ್‌ ಮತ್ತು SNCCಯ ಜಾನ್‌ ಲ್ಯೂಯಿಸ್‌ ಮುಂದಾಳತ್ವದಲ್ಲಿ ೬೦೦ ಜನರ ಗುಂಪು ಸೆಲ್ಮಾದಿಂದ ರಾಜಧಾನಿ ಮಾಂಟ್ಗೊಮೆರಿಯ ವರೆಗೆ, ೫೪ ಮೈಲು‌ಗಳು (೮೭ ಕಿಲೋಮೀಟರ್‌) ದೂರದ ಮೆರವಣಿಗೆ ನಡೆಸಿತು. ಮೆರವಣಿಗೆ ಆರಂಭವಾಗಿ ಆರು ಬ್ಲಾಕ್‌ಗಳನ್ನು ತಲುಪುವಷ್ಟರಲ್ಲಿ ಎಡ್ಮಂಡ್ ಪೆಟಸ್‌ ಸೇತುವೆ‌ಯಲ್ಲಿ ರಾಜ್ಯದ ಸೇನಾಪಡೆ ಮತ್ತು ಸ್ಥಳೀಯ ಕಾನೂನು ಜಾರಿ ಅಧಿಕಾರಿಗಳು, ಕೆಲವರು ಕುದುರೆಯ ಮೇಲೆ ಕುಳಿತು, ಶಾಂತಿಯುತ ಪ್ರತಿಭಟನಾಕಾರರ ಮೇಲೆ ಲಾಠಿಗಳು, ಅಶ್ರುವಾಯು, ಮುಳ್ಳಿನ ತಂತಿ ಸುತ್ತಿದ ರಬ್ಬರ್‌ ಟ್ಯೂಬ್‌ಗಳು ಮತ್ತು ಗೂಳಿಗಳನ್ನು ನಿಯಂತ್ರಿಸುವ ಚಾವಟಿಗಳಲ್ಲಿ ಹೊಡೆದರು. ಈ ಪಡೆಗಳು ಪ್ರತಿಭಟನಾಕಾರರನ್ನು ಸೆಲ್ಮಾ ಕಡೆಗೆ ವಾಪಸ್‌ ಓಡಿಸಿದರು. ಜಾನ್‌ ಲ್ಯೂಯಿಸ್‌ ಹೊಡೆತ ತಿಂದು ಪ್ರಜ್ಞೆ ತಪ್ಪಿ ಬಿದ್ದರು. ಇವರನ್ನು ಸುರಕ್ಷಿತ ಸ್ಥಳಕ್ಕೆ ಒಯ್ಯಲಾಯಿತು. ಇನ್ನೂ ಹದಿನಾರು ಮಂದಿ ಪ್ರತಿಭಟನಾಕಾರರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆ ಸಮಯದಲ್ಲಿ ಆಶ್ರುವಾಯು ಮತ್ತು ಏಟು ತಿಂದವರ ಪೈಕಿ, ಆ ಕಾಲದಲ್ಲಿ ನಾಗರಿಕ ಹಕ್ಕುಗಳ ಚಟುವಟಿಕೆಗಳಲ್ಲಿ ಕೇಂದ್ರಬಿಂದುವಾಗಿದ್ದ ಅಮೆಲಿಯಾ ಬೊಯ್ನ್‌ಟನ್ ರಾಬಿನ್ಸನ್‌ ಸಹ ಸೇರಿದ್ದರು. ಎರಡು ವರ್ಷ ಮುಂಚೆ ಬರ್ಮಿಂಗ್‌ಹ್ಯಾಂನಲ್ಲಿ ಸಂಭವಿಸಿದ ದೃಶ್ಯಗಳ ರೀತಿಯಲ್ಲಿ ಪ್ರತಿರೋಧಿಸದಿರುವ ಪ್ರತಿಭಟನೆಕಾರರ ಮೇಲೆ ಕಾನೂನು ಪಾಲಕರು ಹಲ್ಲೆಮಾಡಿದ ವಿಡಿಯೊ ದೃಶ್ಯಗಳ ರಾಷ್ಟ್ರೀಯ ಪ್ರಸಾರದಿಂದ ರಾಷ್ಟ್ರವ್ಯಾಪಿ ಪ್ರತಿಕ್ರಿಯೆಗೆ ಪ್ರಚೋದನೆ ನೀಡಿತು. ಎರಡು ವಾರಗಳ ನಂತರ, ಪ್ರತಿಭಟನಾಕಾರರು, ಯಾವುದೇ ಘಟನೆಯಿಲ್ಲದೇ ಮೆರವಣಿಗೆ ಮುಂದುವರೆಸಲು ನ್ಯಾಯಾಲಯದ ಅನುಮತಿ ಪಡೆದರು.

ಸೆಲ್ಮ ದಿಂದ ಮಾಂಟೆಗೊಮೆರಿ ಮೆರವಣಿಗಳಲ್ಲಿ ಪಾಲ್ಗೊಂಡವರು

ಮಾರ್ಚ್‌ ತಿಂಗಳ ೯ರಂದು ನಡೆದ ಎರಡನೆಯ ಮೆರವಣಿಗೆ ಬ್ಲಡಿ ಸಂಡೆ ಸ್ಥಳದತ್ತ ಸಾಗಿದ ನಂತರ, ಅಲ್ಲಿದ್ದ ಸ್ಥಳೀಯ ಬಿಳಿಯರು, ಇನ್ನೊಬ್ಬ ಮತದಾನ ಹಕ್ಕು ಪರ ಹೋರಾಟಗಾರ ರೆವೆರೆಂಡ್ ಜೇಮ್ಸ್‌ ರೀಬ್‌ರನ್ನು ಹತ್ಯೆ ಮಾಡಿದರು. ಮಾರ್ಚ್‌ ೧೧ರಂದು ಅವರು ಬರ್ಮಿಂಗ್‌ಹ್ಯಾಂ ಆಸ್ಪತ್ರೆಯಲ್ಲಿ ಅಸುನೀಗಿದರು. ಮಾರ್ಚ್‌ ೨೫ರ ರಾತ್ರಿ, ಡೆಟ್ರಾಯಿಟ್‌ ಮೂಲದ ಗೃಹಿಣಿ ವಯೊಲಾ ಲಿಯುಝೊಮೆರವಣಿಗೆಕಾರರನ್ನು ಮಾಂಟ್ಗೊಮೆರಿಗೆ ಯಶಸ್ವಿ ಮೆರವಣಿಗೆ ನಡೆಸಿದ ನಂತರ ಸೆಲ್ಮಾ ಕಡೆಗೆ ವಾಹನದಲ್ಲಿ ರಾತ್ರಿವೇಳೆ ಒಯ್ಯುವಾಗ, ನಾಲ್ವರು ಕ್ಲಾನ್‌ ಸದಸ್ಯರು ಆಕೆಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದರು. ಮೊದಲ ಮೆರವಣಿಗೆ ಮುಗಿದು ಎಂಟು ದಿನಗಳ ನಂತರ, ರಾಷ್ಟ್ರಾಧ್ಯಕ್ಷ ಜಾನ್ಸನ್‌ ತಾವು ಕಾಂಗ್ರೆಸ್‌ ಶಾಸನಸಭೆಗೆ ಕಳುಹಿಸಿದ ಮತದಾನ ಹಕ್ಕು ಮಸೂದೆಯನ್ನು ಸಮರ್ಥಿಸಿಕೊಂಡು ದೂರದರ್ಶನದಲ್ಲಿ ಪ್ರಸಾರ ಭಾಷಣ ಮಾಡಿದರು. ಈ ಭಾಷಣದಲ್ಲಿ ಅವರು ಹೀಗೆ ಹೇಳಿದರು:

But even if we pass this bill, the battle will not be over. What happened in Selma is part of a far larger movement which reaches into every section and state of America. It is the effort of American Negroes to secure for themselves the full blessings of American life.

Their cause must be our cause too. Because it is not just Negroes, but really it is all of us, who must overcome the crippling legacy of bigotry and injustice. And we shall overcome.

೧೯೬೫ರ ಮತದಾನ ಹಕ್ಕು ಕಾಯಿದೆಗೆ ಜಾನ್ಸನ್‌ ಆಗಸ್ಟ್‌ ೬ರಂದು ಹಸ್ತಾಕ್ಷರ ಹಾಕಿದರು. ೧೯೬೫ರ ಈ ಕಾಯಿದೆಯು ಮತದಾನ ತೆರಿಗೆಗಳು, ಸಾಕ್ಷರತಾ ಪರೀಕ್ಷೆಗಳು ಮತ್ತು ಇತರೆ ವೈಯಕ್ತಿಕ ಮತದಾರ ಪರೀಕ್ಷೆಗಳನ್ನು ರದ್ದುಗೊಳಿಸಿತು. ಅಂತಹ ಪರೀಕ್ಷೆ ನಡೆಸುವ ಪ್ರತಿಯೊಂದು ಮತದಾರ ಜಿಲ್ಲೆಗಳಲ್ಲಿ ಮತ್ತು ರಾಜ್ಯಗಳಲ್ಲಿ ಮತದಾರರ ನೋಂದಣಿಗೆ ಸಂಯುಕ್ತತಾ ಆಡಳಿತದ ಮೇಲ್ವಿಚಾರಣೆಗೆ ಅದು ಅಧಿಕಾರ ನೀಡಿತು. ಮತದಾನ ಹಕ್ಕು ಪಡೆಯಲೆಂದು ನೋಂದಣಿ ಮಾಡಿಸಿಕೊಳ್ಳಲು ನಿಷೇಧಿಸಲಾದ ಆಫ್ರಿಕನ್-ಅಮೆರಿಕನ್ನರಿಗೆ ಸ್ಥಳೀಯ ಅಥವಾ ರಾಜ್ಯ ನ್ಯಾಯಾಲಯಕ್ಕೆ ದಾವೆಗಳನ್ನು ಹೂಡುವ ಪರ್ಯಾಯ ಮಾರ್ಗವು ಅಂತಿಮವಾಗಿ ಸಿಕ್ಕಿತು. ಮತದಾನ ಭೇದಭಾವವುಂಟಾದಲ್ಲಿ, ೧೯೬೫ರ ಕಾಯಿದೆಯು ಸ್ಥಳೀಯ ನೋಂದಣಿಗಾರರ ಸ್ಥಳದಲ್ಲಿ ಸಂಯುಕ್ತತಾ ಪರೀಕ್ಷಕರನ್ನು ನೇಮಿಸಲು ಅಮೆರಿಕಾ ಸಂಯುಕ್ತ ಸಂಸ್ಥಾನದ ಅಟಾರ್ನಿ ಜನರಲ್‌‌ಅವರಿಗೆ ಅಧಿಕಾರ ನೀಡಲಾಯಿತು. ಈ ಮಸೂದೆಗೆ ಹಸ್ತಾಕ್ಷರ ಹಾಕಿದ್ದರಿಂದ, ಮುಂಬರುವ ಭವಿಷ್ಯದಲ್ಲಿ ತಮ್ಮ ಡೆಮೊಕ್ರಟಿಕ್‌ ಪಕ್ಷವು, ಅಮೆರಿಕಾ ದೇಶದ ದಕ್ಷಿಣ ಭಾಗದಲ್ಲಿ ಮತದಾರರಾಗಿ ಬಿಳಿಯರ ಬೆಂಬಲ ಕಳೆದುಕೊಂಡಂತಾಯಿತು ಎಂದು ಜಾನ್ಸನ್‌ ತಮ್ಮ ಸಂಗಡಿಗರಿಗೆ ಹೇಳಿದ್ದು ವರದಿಯಾಯಿತು. ಈ ಕಾಯಿದೆಯು ಆಫ್ರಿಕನ್‌ ಅಮೆರಿಕನ್ನರ ಮೇಲೆ ತ್ವರಿತ ಹಾಗೂ ಸಕಾರಾತ್ಮಕ ಪ್ರಭಾವ ಬೀರಿತು. ಈ ಮಸೂದೆ ಅಂಗೀಕಾರವಾದ ಕೆಲವೇ ತಿಂಗಳುಗಳಲ್ಲಿ, ೨೫೦,೦೦೦ ಕರಿಯ ಮತದಾರರು ನೋಂದಾಯಿಸಿಕೊಂಡಿದ್ದರು. ಇವರಲ್ಲಿ ಮೂರನೆಯ ಒಂದು ಪಾಲನ್ನು ಸಂಯುಕ್ತತಾ ಪರೀಕ್ಷಕರು ನೋಂದಾಯಿಸಿದ್ದರು. ನಾಲ್ಕು ವರ್ಷಗಳಲ್ಲಿ, ಅಮೆರಿಕಾ ದೇಶದ ದಕ್ಷಿಣ ಭಾಗದಲ್ಲಿ, ಮತದಾರರ ನೋಂದಣಿ ದುಪ್ಪಟ್ಟಿಗಿಂತಲೂ ಹೆಚ್ಚಾಗಿತ್ತು. ೧೯೬೫ರಲ್ಲಿ, ಮಿಸಿಸಿಪ್ಪಿ ರಾಜ್ಯದಲ್ಲಿ ಅತಿ ಹೆಚ್ಚು (೭೪%) ಕರಿಯರು ಮತದಾನ ಮಾಡಿದ್ದರು ಮತ್ತು ಆಯ್ಕೆಯಾದ ಕರಿಯ ಸಾರ್ವಜನಿಕ ಅಧಿಕಾರಿಗಳ ಪೈಕಿ ರಾಷ್ಟ್ರದಲ್ಲಿ ಮುನ್ನಡೆ ಗಳಿಸಿದ್ದರು. ೧೯೬೯ರಲ್ಲಿ, ಟೆನೆಸಿಯಲ್ಲಿ ೯೨.೧%, ಅರ್ಕನ್ಸಸ್‌ನಲ್ಲು ೭೭.೯% ಹಾಗೂ ಟೆಕ್ಸಾಸ್‌ನಲ್ಲಿ ೭೩.೧%ರಷ್ಟು ಕರಿಯರು ಮತದಾನ ಮಾಡಿದ್ದರು. ಮತದಾನ ಹಕ್ಕು ಕಾಯಿದೆಯನ್ನು ವಿರೋಧಿಸಿದ್ದ ಬಿಳಿಯರು ತಕ್ಷಣವೇ ಬೆಲೆ ತೆರಬೇಕಾಯಿತು. ನಾಗರಿಕ ಹಕ್ಕು ಪರ ಹೋರಾಟಗಾರರ ವಿರುದ್ಧ ಜಾನುವಾರು ಅಂಕುಶ ಬಳಸಿ ಅಪಖ್ಯಾತಿ ಗಳಿಸಿದ ಅಲಬಾಮಾದ ಷೆರಿಫ್‌ ಜಿಮ್‌ ಕ್ಲಾರ್ಕ್‌ ೧೯೬೬ರಲ್ಲಿ ಪುನಃ ಚುನಾವಣೆ ಸ್ಪರ್ಧೆ ನಿಂತರು. ತಮ್ಮ ಸಮವಸ್ತ್ರದಿಂದ ಕುಖ್ಯಾತ "Never" ಎನ್ನುವ ಬಿಲ್ಲೆಯನ್ನು ತೆಗೆದರೂ ಸಹ ಅವರು ಚುನಾವಣೆಯಲ್ಲಿ ಸೋತರು. ಕರಿಯರು ಅವರನ್ನು ಅಧಿಕಾರದಿಂದ ಕೆಳಗಳಿಸಲೆಂದು ಮತ ಚಲಾಯಿಸಿದ ಕಾರಣ, ಕ್ಲಾರ್ಕ್‌ ಸೋತರು. ಮಾದಕ ಔಷಧಗಳ ಧಂಧೆಯಲ್ಲಿ ಭಾಗಿಯಾಗಿದ್ದ ಕ್ಲಾರ್ಕ್‌ ನಂತರ ಸೆರೆಮನೆವಾಸ ಅನುಭವಿಸಿದರು. ಕರಿಯರಿಗೆ ಮತದಾನ ಮಾಡುವ ಹಕ್ಕು ಪುನಃ ಪ್ರಾಪ್ತಿಯಾದದ್ದು, ಅಮೆರಿಕಾ ದೇಶದ ದಕ್ಷಿಣ ಭಾಗದಲ್ಲಿ ರಾಜಕೀಯ ಭೂಚಿತ್ರಣವನ್ನೇ ಬದಲಿಸಿತು. ಕಾಂಗ್ರೆಸ್‌ (ಗಣರಾಜ್ಯಗಳ ಶಾಸನಸಭೆ) ಮತದಾನ ಹಕ್ಕು ಕಾಯಿದೆಯನ್ನು ಅಂಗೀಕರಿಸಿದಾಗ, ಕೇವಲ ಸುಮಾರು ೧೦೦ ಜನ ಆಫ್ರಿಕನ್‌-ಅಮೆರಿಕನ್ನರು ಚುನಾಯಿತ ಆಧಿಕಾರದಲ್ಲಿದ್ದರು. ಇವರೆಲ್ಲರೂ ಅಮೆರಿಕಾ ಸಂಯುಕ್ತ ಸಂಸ್ಥಾನದ ಉತ್ತರ ಭಾಗದ ರಾಜ್ಯದವರಾಗಿದ್ದರು. ೧೯೮೯ರಷ್ಟರೊಳಗೆ, ೭,೨೦೦ಕ್ಕಿಂತಲೂ ಹೆಚ್ಚು ಆಫ್ರಿಕನ್-ಅಮೆರಿಕನ್ನರು ಅಧಿಕಾರದಲ್ಲಿದ್ದರು. ಇವರಲ್ಲಿ ೪,೮೦೦ಕ್ಕಿಂತಲೂ ಹೆಚ್ಚು ಜನರು ಅಮೆರಿಕಾ ದೇಶದ ದಕ್ಷಿಣ ಭಾಗದವರಾಗಿದ್ದರು. ಅಲಬಾಮಾದಲ್ಲಿನ ಪ್ರತಿಯೊಂದು ಬ್ಲ್ಯಾಕ್‌ ಬೆಲ್ಟ್‌ ಎನ್ನಲಾದ ಕೌಂಟಿಯಲ್ಲೂ (ಇಲ್ಲಿನ ಜನಸಂಖ್ಯೆಯಲ್ಲಿ ಬಹಳಷ್ಟು ಜನರು ಕರಿಯರು) ಕರಿಯ ಮೂಲದ ಷೆರಿಫ್‌ಗಳಿದ್ದರು. ದೇಶದ ದಕ್ಷಿಣ ಭಾಗದ ಕರಿಯರು ನಗರ, ಕೌಂಟಿ ಮತ್ತು ರಾಜ್ಯ ಸರ್ಕಾರಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದರು. ಅಟ್ಲಾಂಟಾದಲ್ಲಿ ಆಂಡ್ರ್ಯೂ ಯಂಗ್‌ ಎಂಬ ಕರಿಯ ಮೇಯರ್ ಚುನಾಯಿತರಾದರು. ಇದೇ ರೀತಿ, ಮಿಸಿಸಿಪ್ಪಿಯ ಜ್ಯಾಕ್ಸನ್‌ನಲ್ಲಿ ಹಾರ್ವೆ ಜಾನ್ಸನ್‌, ಜೂನಿಯರ್ ಹಾಗೂ ನ್ಯೂ ಆರ್ಲೀಯನ್ಸ್‌ನಲ್ಲಿ ಅರ್ನೆಸ್ಟ್‌ ಮೊರಿಯಲ್‌ ಚುನಾಯಿತರಾದರು. ರಾಷ್ಟ್ರೀಯ ಮಟ್ಟದ ಕರಿಯ ರಾಜಕಾರಣಿಗಳಲ್ಲಿ ಕಾಂಗ್ರೆಸ್‌ನಲ್ಲಿ ಟೆಕ್ಸಾಸ್‌ ಪ್ರತಿನಿಧಿಸುವ ಬಾರ್ಬರಾ ಜೊರ್ಡಾನ್‌ ಹಾಗೂ ಜಿಮ್ಮಿ ಕಾರ್ಟರ್‌ ಆಡಳಿತದ ಕಾಲಾವಧಿಯಲ್ಲಿ ವಿಶ್ವಸಂಸ್ಥೆಯಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಯಭಾರಿಯಾಗಿ ನೇಮಕವಾದ ಆಂಡ್ರ್ರ್ಯೂ ಯಂಗ್‌ ಸೇರಿದ್ದಾರೆ. ಜೂಲಿಯನ್‌ ಬಾಂಡ್‌ ೧೯೬೫ರಲ್ಲಿ ಜಾರ್ಜಿಯಾ ರಾಜ್ಯ ಶಾಸನ ಸಭೆಗೆ ಚುನಾಯಿತರಾದರು. ಆದರೂ, ಅಮೆರಿಕಾ ಸಂಯುಕ್ತ ಸಂಸ್ಥಾನ ವಿಯೆಟ್ನಾಮ್‌ ವಿರುದ್ಧ ಯುದ್ಧದಲ್ಲಿ ತೊಡಗಿದ ಬಗ್ಗೆ ಸಾರ್ವಜನಿಕ ಆಕ್ಷೇಪಕ್ಕೆ ಅವರ ರಾಜಕೀಯ ಪ್ರತಿಕ್ರಿಯೆ ಕಾರಣ, ೧೯೬೭ರ ತನಕ ಅವರು ತಮ್ಮ ಸ್ಥಾನ ತೆಗೆದುಕೊಳ್ಳಲಾಗಲಿಲ್ಲ. ಅಮೆರಿಕಾ ಸಂಯುಕ್ತ ಸಂಸ್ಥಾನ ಪ್ರತಿನಿಧಿ ಸಭೆಯಲ್ಲಿ ಜಾನ್ ಲೂಯಿಸ್‌ ಜಾರ್ಜಿಯಾದ ಐದನೆಯ ಕಾಂಗ್ರೆಸ್‌ ಜಿಲ್ಲೆಯ ಪ್ರತಿನಿಧಿಯಾಗಿದ್ದಾರೆ. ಇವರು ೧೯೮೭ರಿಂದ ಸತತವಾಗಿ ಈ ಕ್ಷೇತ್ರದ ಪ್ರತಿನಿಧಿಯಾಗಿದ್ದಾರೆ.

ಮೆಂಫಿಸ್‌, ಕಿಂಗ್‌ ಹತ್ಯೆ ಮತ್ತು ಬಡ ಜನರ ಮೆರವಣಿಗೆ, ೧೯೬೮

[ಬದಲಾಯಿಸಿ]

೧೯೬೮ರ ಮಾರ್ಚ್‌ ತಿಂಗಳಲ್ಲಿ, ನೈರ್ಮಲ್ಯ ವಿಭಾಗದ ಕಾರ್ಮಿಕರ ಮುಷ್ಕರಕ್ಕೆ ಬೆಂಬಲ ಪಡೆಯಲು ರೆವೆರೆಂಡ್ ಜೇಮ್ಸ್‌ ಲಾಸನ್‌ ಕಿಂಗ್‌ರನ್ನು ಟೆನಿಸ್ಸಿಯ ಮೆಂಫಿಸ್‌ಗೆ ಆಹ್ವಾನಿಸಿದರು. ನೈರ್ಮಲ್ಯ ಕಾರ್ಯಮಗ್ನರಾಗಿದ್ದ ಇಬ್ಬರು ಆಕಸ್ಮಿಕವಾಗಿ ಸತ್ತ ನಂತರ, ಕಾರ್ಮಿಕರ ಒಕ್ಕೂಟ ಪ್ರಾತಿನಿಧ್ಯಕ್ಕಾಗಿ ಅವರು ಅಭಿಯಾನವನ್ನು ಆರಂಭಿಸಿದರು. ಲಾಸನ್ಸ್‌ ಇಗರ್ಜಿಯಲ್ಲಿ ಬಹಳಷ್ಟು ಚಿರಪರಿಚಿತ "ಮೌಂಟೆನ್‌ಟಾಪ್‌" ಪ್ರವಚನ ನೀಡಿದ ಮಾರನೆಯ ದಿನ, ಎಂದರೆ ೧೯೬೮ರ ಏಪ್ರಿಲ್‌ ೪ರಂದು ಮಾರ್ಟಿನ್‌ ಲುಥರ್‌ ಕಿಂಗ್‌ರನ್ನು ಹತ್ಯೆ ಮಾಡಲಾಯಿತು. ಆನಂತರದ ದಿನಗಳಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ೧೧೦ಕ್ಕಿಂತಲೂ ಹೆಚ್ಚು ನಗರಗಳಲ್ಲಿ ಗಲಭೆಗಳು ಸಂಭವಿಸಿದವು. ಇದರಲ್ಲಿ ಹೆಚ್ಚಾಗಿ ಷಿಕಾಗೊ, ಬಾಲ್ಟಿಮೋರ್‌ ಮತ್ತು ವಾಷಿಂಗ್ಟನ್‌ ಡಿಸಿಯಲ್ಲಿ ಗಲಭೆಗಳುಂಟಾದವು. ಈ ನಗರಗಳಲ್ಲಿ ಸಂಭವಿಸಿದ ಹಾನಿಯಿಂದಾಗಿ ಕರಿಯರ ಉದ್ದಿಮೆಗಳು ನಾಶಗೊಂಡವು. ಕಿಂಗ್‌ರ ಅಂತಿಮ ಸಂಸ್ಕಾರ ನಡೆದ ಹಿಂದಿನ ದಿನ (ಏಪ್ರಿಲ್‌ ೮) ಕೊರೆಟಾ ಸ್ಕಾಟ್‌ ಕಿಂಗ್‌ ಮತ್ತು ಕಿಂಗ್‌ರ ಮೂವರೂ ಮಕ್ಕಳು "ಹಾನರ್ ಕಿಂಗ್: ಎಂಡ್ ರೇಸಿಸಂ" ಹಾಗೂ "ಯೂನಿಯನ್ ಜಸ್ಟೀಸ್ ನೌ" ಎಂಬ ಫಲಕಗಳನ್ನು ಹಿಡಿದು ಮೆಂಫಿಸ್‌ ನಗರದ ಬೀದಿಗಳಲ್ಲಿ ಸುಮಾರು ೨೦,೦೦೦ ಮೆರವಣಿಗೆಕಾರರ ನೇತೃತ್ವ ವಹಿಸಿದರು. ನ್ಯಾಷನಲ್‌ ಗಾರ್ಡ್ಸ್‌ಮೆನ್‌ ಎಂ-೪೮ ಟ್ಯಾಂಕ್‌ಗಳು, ಬೆಯೊನೆಟ್‌ಗಳೊಂದಿಗೆ ಬೀದಿಗಳಲ್ಲಿ ಕಾವಲು ನಿಂತಿದ್ದರು. ಆ ಪ್ರದೇಶದ ಮೇಲೆ ಹೆಲಿಕಾಪ್ಟರ್‌ಗಳು ಸುತ್ತಾಡುತ್ತಿದ್ದವು. ಏಪ್ರಿಲ್‌ ೯ರಂದು ಶ್ರೀಮತಿ ಕಿಂಗ್‌ ಅಟ್ಲಾಂಟಾದ ಬೀದಿಗಳ ಮೂಲಕ ಶವಯಾತ್ರೆಯಲ್ಲಿ ೧೫೦,೦೦೦ ಜನರ ಮುಂಚೂಣಿ ವಹಿಸಿದರು.[೫೪] ಆಕೆಯ ಘನತೆಯು, ಚಳವಳಿಗಾರರಲ್ಲಿ ಸ್ಥೈರ್ಯ ಮತ್ತು ಆಶಯಗಳನ್ನು ಪುನಃ ಹೊತ್ತಿಸಿದವು. ಜನಾಂಗೀಯ ಸಮಾನತೆಗಾಗಿ ಹೋರಾಟದಲ್ಲಿ ಶ್ರೀಮತಿ ಕಿಂಗ್‌ ಹೊಸ ನಾಯಕಿಯಾಗಿ ಸ್ಥಾನ ಪಡೆದರು. ಕೊರೆಟಾ ಕಿಂಗ್‌ ಈ ರೀತಿ ಹೇಳಿರುವುದು ಪ್ರಖ್ಯಾತವಾಗಿದೆ.

[Martin Luther King, Jr.] gave his life for the poor of the world, the garbage workers of Memphis and the peasants of Vietnam. The day that Negro people and others in bondage are truly free, on the day want is abolished, on the day wars are no more, on that day I know my husband will rest in a long-deserved peace.

— Coretta King

ಕಿಂಗ್‌ರ ಉತ್ತರಾಧಿಕಾರಿಯಾಗಿ ರೆವೆರೆಂಡ್ ರಾಲ್ಫ್‌ ಅಬರ್ನತಿ SCLC ಯ ಮುಖ್ಯಸ್ಥರಾದರು. ಬಡಜನರ ಚಳವಳಿಗಾಗಿ ಕಿಂಗ್‌ರ ಯೋಜನೆಯನ್ನು ಮುಂದುವರಿಸಲು ಯತ್ನಿಸಿದರು. ಅಮೆರಿಕನ್‌ ಸಮಾಜ ಮತ್ತು ಆರ್ಥಿಕ ರಚನೆಯಲ್ಲಿ ಮೂಲಭೂತ ಪರಿವರ್ತನೆಗಳಿಗಾಗಿ ನಡೆಸುವ ಹೋರಾಟದಲ್ಲಿ ಕರಿಯರು-ಬಿಳಿಯರನ್ನು ಒಗ್ಗೂಡಿಸುವುದು ಇವರ ಇಂಗಿತವಾಗಿತ್ತು. ಬಿಚ್ಚುಮನದ ಮಾತಿನ ಅಬರ್ನತಿಯ ನಾಯಕತ್ವದಲ್ಲಿ ಚಳವಳಿಯು ಮುಂದೆ ನಡೆಯಿತು. ಆದರೆ ಅದರ ಧ್ಯೇಯಗಳನ್ನು ಪೂರೈಸಲಾಗಲಿಲ್ಲ.

ಇತರ ವಿಷಯಗಳು

[ಬದಲಾಯಿಸಿ]

ಕೆನಡಿ ಆಡಳಿತ ೧೯೬೧-೧೯೬೩

[ಬದಲಾಯಿಸಿ]
1963 ರ ಜೂನ್ ನಲ್ಲಿ ಜಸ್ಟೀಸ್ ಡಿಪಾರ್ಟ್‌ಮೆಂಟ್ ಕಟ್ಟಡದೆದುರು ನಾಗರಿಕ ಹಕ್ಕುಗಳ ಜನ ಸಮೂಹವನ್ನು ಕುರಿತು ಮಾತನಾಡುತ್ತಿರುವ ರಾಬರ್ಟ್ ಎಫ್. ಕೆನಡಿ

ತಾವು ರಾಷ್ಟ್ರಾಧ್ಯಕ್ಷರಾಗುವ ಮುಂಚಿನ ವರ್ಷಗಳಲ್ಲಿ, ಜನಾಂಗೀಯತಾ ಭೇದಭಾವ ವಿಚಾರಗಳಲ್ಲಿ ಜಾನ್‌ ಎಫ್. ಕೆನಡಿಯವರದು ಔದಾಸೀನ್ಯದ ಧೋರಣೆಯಾಗಿತ್ತು. ತಾವು ರಾಷ್ಟ್ರಾಧ್ಯಕ್ಷತೆ ವಹಿಸಿಕೊಂಡ ಆರಂಭಿಕ ಕೆಲವು ತಿಂಗಳುಗಳಲ್ಲಿ, ತಮಗೆ ನಾಗರಿಕ ಹಕ್ಕುಗಳ ಚಳವಳಿಯ ಕುರಿತು ಜ್ಞಾನದ ಕೊರತೆಯಿದೆ ಎಂದು ಕೆನಡಿ ತಮ್ಮ ಆಪ್ತ ಸಲಹೆಗಾರರೊಂದಿಗೆ ಹೇಳಿಕೊಂಡಿದ್ದರು. ಕೆನಡಿ ಆಡಳಿತದ ಮೊದಲ ಎರಡು ವರ್ಷಗಳಲ್ಲಿ, ರಾಷ್ಟ್ರಾದ್ಯಕ್ಷ ಹಾಗೂ ಅಟಾರ್ನಿ ಜನರಲ್ ರಾಬರ್ಟ್‌ ಎಫ್. ಕೆನಡಿಯತ್ತ ಮಿಶ್ರಿತ ಧೋರಣೆಗಳಿದ್ದವು. ಹಲವರು ಈ ಆಡಳಿತವನ್ನು ಅನುಮಾನಾಸ್ಪದವಾಗಿ ನೋಡುತ್ತಿದ್ದರು. ಬಿಳಿಯರ ಉದಾರವಾದಿ ರಾಜಕೀಯದತ್ತ ಸಿನಿಕತೆಯ ಇತಿಯಾಸದಿಂದಾಗಿ, ಯಾವುದೇ ಬಿಳಿಯ ರಾಜಕಾರಣಿ ಆಫ್ರಿಕನ್‌-ಅಮೆರಿಕನ್‌ ಸ್ವಾತಂತ್ರ್ಯ ವಿಚಾರಗಳಲ್ಲಿ ಅವರ ಕಾಳಜಿಗಳನ್ನು ಹಂಚಿಕೊಂಡರೂ, ಕರಿಯರು ಇವರಲ್ಲಿ ವಿಶ್ವಾಸವಿಡುತ್ತಿರಲಿಲ್ಲ. ಆದರೂ, ಕೆನಡಿ ಆಡಳಿತದಲ್ಲಿ, ರಾಜಕೀಯ ಮಾತುಕತೆಗಳಿಗೆ ಹೊಸ ಆರಂಭ ಸಂಭವಿಸಬಹುದೆಂದು ಹಲವರಲ್ಲಿ ಬಲವಾದ ಅನಿಸಿಕೆಯಿತ್ತು. ೧೯೬೦ರಿಂದ ೧೯೬೩ರ ವರೆಗೆ, ನಾಗರಿಕ ಹಕ್ಕುಗಳ ಚಳವಳಿಗಾಗಿ ಶಾಸಕಾಂಗ ಮತ್ತು ಕಾರ್ಯಕಾರಿ ಬೆಂಬಲವನ್ನು ಚರ್ಚಿಸುವಾಗ, ವೀಕ್ಷಕರು ಆಗಾಗ್ಗೆ ಕೆನಡಿ ಆಡಳಿತ ಅಥವಾ ರಾಷ್ಟ್ರಾಧ್ಯಕ್ಷ ಕೆನಡಿ ಎಂಬ ಪದಗುಚ್ಛವನ್ನು ಪ್ರತಿಪಾದಿಸುತ್ತಾರೆ. ಆದರೆ, ವಾಸ್ತವವಾಗಿ ಅನೇಕ ಉಪಕ್ರಮಗಳು ರಾಬರ್ಟ್ ಕೆನಡಿಯ ತೀವ್ರಾಸಕ್ತಿಯ ಫಲವಾಗಿತ್ತು. ಜನಾಂಗೀಯತೆಯ ವಾಸ್ತವತೆಗಳ ಶೀಘ್ರ ಶಿಕ್ಷಣದ ಮೂಲಕ[ಸೂಕ್ತ ಉಲ್ಲೇಖನ ಬೇಕು] ಶಿಕ್ಷಣ ಪಡೆದ ರಾಬರ್ಟ್‌ ಕೆನಡಿ ಅಟಾರ್ನಿ ಜನರಲ್ ಆದ ನಂತರ ತಮ್ಮ ಧ್ಯೇಯದಲ್ಲಿ ಅಪಾರ ಬದಲಾವಣೆಗೆ ಒಳಗಾದರು. ೧೯೬೨ರ ಮೇ ತಿಂಗಳಲ್ಲಿ ಸಂದರ್ಶನವೊಂದರಲ್ಲಿ 'ನಿಮ್ಮ ಮುಂದಿನ ಅತಿ ದೊಡ್ಡ ಸಮಸ್ಯೆ ಏನು? ಅಪರಾಧವೇ ಅಥವಾ ಆಂತರಿಕ ಭದ್ರತಾ ವ್ಯವಸ್ಥೆಯೇ?' ಎಂದು ಕೇಳಲಾಯಿತು. 'ನಾಗರಿಕ ಹಕ್ಕು' ಎಂದು ರಾಬರ್ಟ್‌ ಕೆನಡಿ ಉತ್ತರಿಸಿದರು.[೫೫] ಈ ವಿಚಾರಗಳಲ್ಲಿ ತಮ್ಮ ಕಿರಿಯ ಸಹೋದರ ತೋರುತ್ತಿದ್ದ ತುರ್ತಿನ ಪ್ರಜ್ಞೆಯನ್ನು ರಾಷ್ಟ್ರಾಧ್ಯಕ್ಷರೂ ಹಂಚಿಕೊಂಡರು. ಇದು ಎಷ್ಟರಮಟ್ಟಿಗೆಂದರೆ, ಅಟಾರ್ನಿ ಜನರಲ್ ಒತ್ತಾಯದ ಮೇರೆಗೆ ಅವರು ರಾಷ್ಟ್ರವನ್ನುದ್ದೇಶಿಸಿ ತಮ್ಮ ಐತಿಹಾಸಿಕ ಭಾಷಣ ನೀಡಿದರು.[೫೬] ಅಲಬಾಮಾದ ಮಾಂಟ್ಗೊಮೆರಿಯಲ್ಲಿನ ಫಸ್ಟ್‌ ಬ್ಯಾಪ್ಟಿಸ್ಟ್‌ ಚರ್ಚ್ ಮೇಲೆ ಬಿಳಿಯರ ಉದ್ರಿಕ್ತ ಗುಂಪು ದಾಳಿ ಮಾಡಿ ಸುಟ್ಟುಹಾಕಿದಾಗ, ಕಿಂಗ್ ಪ್ರತಿಭಟನೆಕಾರರ ಜತೆ ಅದನ್ನು ವಿರೋಧಿಸಿದರು. ಅಟಾರ್ನಿ ಜನರಲ್ ಕಿಂಗ್‌ರಿಗೆ ದೂರವಾಣಿ ಕರೆ ನೀಡಿ, 'ಅಮೆರಿಕಾ ಸಂಯುಕ್ತ ಸಂಸ್ಥಾನ ಮಾರ್ಷಲ್ಸ್‌ ಮತ್ತು ನ್ಯಾಷನಲ್‌ ಗಾರ್ಡ್‌ ರಕ್ಷಣಾ ಪಡೆಗಳು ಅಲ್ಲಿನ ಪ್ರದೇಶವನ್ನು ಬಂದೋಬಸ್ತ್‌ ಮಾಡುವವರೆಗೂ ಕಟ್ಟಡದಿಂದ ಹೊರಕ್ಕೆ ಬಾರದಂತೆ' ಸೂಚಿಸಿದರು. ಪರಸ್ಥಿತಿ ಹೀಗೆಯೇ ಹದಗೆಡಲು ಸುಮ್ಮನಿದ್ದ ಕೆನಡಿಯನ್ನು ಕಿಂಗ್‌ ಟೀಕಿಸಿದರು. ಆನಂತರ, ಕಿಂಗ್‌ಗೆ ಮಾರಣಾಂತಿಕವಾಗಿದ್ದ ದಾಳಿ ತಡೆಗಟ್ಟಲು ಸೇನಾಪಡೆಯನ್ನು ಕಳುಹಿಸಿಕೊಟ್ಟ ರಾಬರ್ಟ್‌ ಕೆನಡಿಗೆ ಮಾರ್ಟಿನ್‌ ಲೂಥರ್‌ ಕಿಂಗ್‌ ಸಾರ್ವಜನಿಕ ಧನ್ಯವಾದ ಹೇಳಿದರು. ಈ ಇಬ್ಬರು ವ್ಯಕ್ತಿಗಳ ಮಧ್ಯ ಪರಸ್ಪರ ಅನುಮಾನದ ಸಂಬಂಧವು ಆಕಾಂಕ್ಷೆಗಳನ್ನು ಹಂಚಿಕೊಳ್ಳುವುದರತ್ತ ತಿರುಗಿತು. ಕಿಂಗ್‌ರ ದೃಷ್ಟಿಯಿಂದ, ರಾಬರ್ಟ್‌ ಕೆನಡಿ ಆರಂಭದಲ್ಲಿ ಮೃದು ಧೋರಣೆ ತೋರುತ್ತಿದ್ದರು. ಇದು ಮುಂಚಿನ ವರ್ಷಗಳಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ದಬ್ಬಾಳಿಕೆಯ ವಿರುದ್ಧ ಕರಿಯರ ಪ್ರತಿಭಟನೆಯನ್ನು ನಿಷ್ಕ್ರಿಯಗೊಳಿಸಿತ್ತು. ಆ ಸಮಯದಲ್ಲಿ ರಾಬರ್ಟ್‌ ಕೆನಡಿಯ ದೃಷ್ಟಿಯಲ್ಲಿ ಕಿಂಗ್‌ ಅಸಹಜ ರೀತಿಯ ಉಗ್ರವಾದದ ಪ್ರತೀಕವಾಗಿ ತೋರುತ್ತಿದ್ದರು. ಸರ್ಕಾರ ಏನೇನೂ ಪ್ರಗತಿ ಸಾಧಿಸದಿರುವುದು ಉಗ್ರವಾದ ಹೆಚ್ಚಾಗಲು ಕಾರಣ ಎಂದು ಕೆಲವು ಬಿಳಿಯ ಉದಾರವಾದಿಗಳು ಅಭಿಪ್ರಾಯಪಟ್ಟರು. ಮೊದಲಿಗೆ, ಕೆನಡಿ ಸಹೋದರರ ಯತ್ನಗಳನ್ನು, ಚಳವಳಿಯನ್ನು ನಿಯಂತ್ರಿಸಿ, ಅದರ ಶಕ್ತಿಯನ್ನು ನಿಧಾನವಾಗಿ ಕಡಿಮೆಗೊಳಿಸುವ ಯತ್ನ ಎಂದು ಕಿಂಗ್‌ ಆರಂಭದಲ್ಲಿ ತಿಳಿದುಕೊಂಡಿದ್ದರು. ಆದರೆ ಸಹೋದರರ ಈ ಯತ್ನವು ಬಹಳ ಮಹತ್ವವಾದದ್ದು ಎಂಬುದು ಅವರಿಗೆ ಆಮೇಲೆ ಅರಿವಾಯಿತು. ಕಿಂಗ್‌ ಮತ್ತು ಇತರರೊಂದಿಗೆ ಸಂವಾದದ ಮೂಲಕ ರಾಬರ್ಟ್‌ ಕೆನಡಿಯವರ ಸತತ ಒತ್ತಾಯದ ಮೇರೆಗೆ, ಚುನಾವಣೆ ಸುಧಾರಣೆ ಹಾಗೂ ಮತದಾನದ ಹಕ್ಕಿನ ಮೂಲಭೂತ ಸ್ವರೂಪಕ್ಕೆ ಮಾನ್ಯತೆನೀಡಿದರು. ಕರಿಯ ಅಮೆರಿಕನ್ನರು ಪ್ರತಿಭಟನೆಯೊಂದೇ ಅಲ್ಲ, ಉನ್ನತ ಮಟ್ಟದಲ್ಲಿ ರಾಜಕೀಯ ಮಾತುಕತೆಯ ಅತ್ಯಗತ್ಯವನ್ನು ಕಿಂಗ್‌ ಮನಗಂಡರು. ನೇರ ಮಾತುಕತೆ ಹಾಗೂ ಅಟಾರ್ನಿ ಜನರಲ್ ಯತ್ನಗಳ ಫಲವಾಗಿ, ಕಾಲಾನಂತರದಲ್ಲಿ ರಾಷ್ಟ್ರಾಧ್ಯಕ್ಷರು ಕಿಂಗ್‌ರ ವಿಶ್ವಾಸ ಮತ್ತು ಮರ್ಯಾದೆ ಸಂಪಾದಿಸುವಲ್ಲಿ ಯಶಸ್ವಿಯಾದರು. ಜನಾಂಗೀಯತಾ ಸಮಾನತೆಯ ವಿಚಾರದಲ್ಲಿ ರಾಬರ್ಟ್‌ ಕೆನಡಿ ತಮ್ಮ ಹಿರಿಯ ಸಹೋದರನ ಪ್ರಮುಖ ಸಲಹೆಗಾರರಾದರು. ರಾಷ್ಟ್ರಾಧ್ಯಕ್ಷರು ನಾಗರಿಕ ಹಕ್ಕುಗಳ ವಿಚಾರವನ್ನು ಅಟಾರ್ನಿ ಜನರಲ್ ಸುಪರ್ದಿಗೆ ರವಾನಿಸಿದರು. ಕಾಂಗ್ರೆಸ್‌ ಶಾಸನ ಸಭೆಯಲ್ಲಿ ಅತಿಸಣ್ಣಪ್ರಮಾಣದಲ್ಲಿ ಬಹುಮತದೊಂದಿಗೆ, ರಾಷ್ಟ್ರಾಧ್ಯಕ್ಷರು ಶಾಸನದೊಂದಿಗೆ ಮುಂದೆ ಸಾಗುವ ಸಾಮರ್ಥ್ಯವು ಸೆನೆಟ್ ಸದಸ್ಯರು ಮತ್ತು ರಾಷ್ಟ್ರದ ದಕ್ಷಿಣ ಭಾಗದಿಂದ ಚುನಾಯಿತ ಕಾಂಗ್ರೆಸ್‌ ಸದಸ್ಯರೊಂದಿಗೆ ಸಮತೋಲಿತ ಆಟದ ಮೇಲೆ ಗಣನೀಯವಾಗಿ ಅವಲಂಬಿಸಿತ್ತು. ನಿಜಕ್ಕೂ, ಬಹಳಷ್ಟು ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿ ಸೇವೆ ಸಲ್ಲಿಸಿ ಅನುಭವ ಗಳಿಸಿದ್ದ ಉಪರಾಷ್ಟ್ರಾಧ್ಯಕ್ಷ ಲಿಂಡನ್‌ ಜಾನ್ಸನ್‌ರ ಬೆಂಬಲವಿಲ್ಲದೆ, ಅಟಾರ್ನಿ ಜನರಲ್ ಹಲವು ಯೋಜನೆಗಳು ಕಾರ್ಯಗತವಾಗುತ್ತಿರಲಿಲ್ಲ. ೧೯೬೨ರ ಅಪರಾರ್ಧದಲ್ಲಿ, ರಾಜಕೀಯ ಪರಿವರ್ತನೆಗಳ ನಿಧಾನಗತಿಯ ಬಗ್ಗೆ ಹತಾಶೆಯು- ಶಾಸಕಾಂಗೀಯ ಉಪಕ್ರಮಗಳು, ಗೃಹನಿರ್ಮಾಣ ಹಕ್ಕುಗಳು, ಅಮೆರಿಕಾ ಸಂಯುಕ್ತ ಸಂಸ್ಥಾನದ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಆಡಳಿತ ಪ್ರಾತಿನಿಧ್ಯ, ಮತಪೆಟ್ಟಿಗೆಯಲ್ಲಿ ಸುರಕ್ಷತೆಯ ಪರಿಸ್ಥಿತಿಗಳು, ಜನಾಂಗೀಯ ಅಪರಾಧಿಗಳಿಗೆ ದಂಡನೆ ನೀಡಲು ನ್ಯಾಯಾಲಯಗಳ ಮೇಲಿನ ಒತ್ತಡ - ಇವೆಲ್ಲವುಗಳಿಂದ ಸಮತೋಲನವಾಗುತ್ತಿತ್ತು. ಆ ವರ್ಷದ ಅಂತ್ಯದಲ್ಲಿ, ಕಿಂಗ್‌ ಅಭಿಪ್ರಾಯಪಟ್ಟದ್ದು ಹೀಗೆ: ಮತದಾನ ಹಕ್ಕುಗಳು ಮತ್ತು ಸರ್ಕಾರಿ ನೇಮಕಾತಿಗಳಲ್ಲಿ ಹೊಸ ಮಾರ್ಗ ಸೃಷ್ಟಿಸುವಲ್ಲಿ ಈ ಆಡಳಿತವು ತನ್ನ ಹಿಂದಿನದವುಗಳಿಗಿಂತಲೂ ಇನ್ನಷ್ಟು ರಚನಾತ್ಮಕವಾಗಿ ವರ್ತಿಸಿದೆ' .ಅದರ ಉತ್ಸಾಹಿ ಯುವಕರು ಬಹಳಷ್ಟು ನವನವೀನ ಹಾಗೂ ಬಹಳಷ್ಟು ಧೈರ್ಯದಿಂದ ಕೂಡಿದ ಯತ್ನಗಳನ್ನು ಮಾಡಿದ್ದಾರೆ. ಅವರು ನಾಗರಿಕ ಹಕ್ಕು ವಿಚಾರಗಳಲ್ಲಿ ಬಹಳಷ್ಟು ಗಮನ ನೀಡಿದ್ದಾರೆ [೫೭] ರಾಜ್ಯಪಾಲ ಜಾರ್ಜ್‌ ವ್ಯಾಲೆಸ್‌ರನ್ನು ಎದುರು ಹಾಕಿಕೊಳ್ಳುವುದು, ಆಡಳಿತ ಪ್ರದೇಶಗಳಲ್ಲಿ ವರ್ಣಭೇದ ನೀತಿಯನ್ನು ತೊಡೆಯುವಲ್ಲಿ ವಿಫಲರಾದ ಉಪರಾಷ್ಟ್ರಾಧ್ಯಕ್ಷ ಜಾನ್ಸನ್‌ರ ಕಟು ಟೀಕೆ, ಅಮೆರಿಕಾ ದೇಶದಲ್ಲಿ ಭ್ರಷ್ಟ ಬಿಳಿಯ ನ್ಯಾಯಾಧೀಶರನ್ನು ಬಹಿಷ್ಕರಿಸುವ ಬೆದರಿಕೆ, ಅಂತರ-ರಾಜ್ಯ ಸಾರಿಗೆಯಲ್ಲಿ ವರ್ಣಭೇದ ನೀತಿ ತೊಡೆದುಹಾಕುವಿಕೆ ಸೇರಿದಂತೆ ಅನೇಕ ಕಾರ್ಯಗಳಲ್ಲಿ ಮಗ್ನರಾಗಿದ್ದ ರಾಬರ್ಟ್‌ ಕೆನಡಿ, ನಾಗರಿಕ ಹಕ್ಕು ಚಳವಳಿಯಲ್ಲಿ ಸಕ್ರಿಯರಾದರು.ತಾವು ೧೯೬೮ರಲ್ಲಿ ರಾಷ್ಟ್ರಾಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಈ ಉದ್ದೇಶಗಳನ್ನು ಮುಂದೊಯ್ದರು. ರಾಜ್ಯಪಾಲ ವ್ಯಾಲೆಸ್‌ ಸೋಲೊಪ್ಪಿಕೊಂಡ ರಾತ್ರಿಯಲ್ಲಿ, ರಾಷ್ಟ್ರಾಧ್ಯಕ್ಷ ಕೆನಡಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಈ ಭಾಷಣವು ಪರಿವರ್ತನೆಯ ಅಲೆಗೆ ರೂವಾರಿಯಾಗಿ, ಮುಂದೆ ರಾಜಕೀಯ ನೀತಿಗಳಲ್ಲಿ ಬದಲಾವಣೆಗಳನ್ನು ತಂದಿತು. ನಿರ್ಣಾಯಕವಾಗಿ, ಹಾಗೂ ಈ ಕ್ಷಣವೇ ಕಾರ್ಯಪ್ರವೃತ್ತರಾಗುವ ಅಗತ್ಯವನ್ನು ರಾಷ್ಟ್ರಾಧ್ಯಕ್ಷ ಕೆನಡಿ ಈ ಭಾಷಣದಲ್ಲಿ ಒತ್ತಿ ಹೇಳಿದರು:

"We preach freedom around the world, and we mean it, and we cherish our freedom here at home, but are we to say to the world, and much more importantly, to each other that this is the land of the free except for the Negroes; that we have no second-class citizens except Negroes; that we have no class or caste system, no ghettoes, no master race except with respect to Negroes? Now the time has come for this Nation to fulfill its promise. The events in Birmingham and elsewhere have so increased the cries for equality that no city or State or legislative body can prudently choose to ignore them."

— President Kennedy, [೫೮]

.

ಹತ್ಯೆಯೊಂದಿಗೆ ಕೆನಡಿ ಸಹೋದರರು ಮತ್ತು ಡಾ. ಮಾರ್ಟಿನ್‌ ಲೂಥರ್‌ ಕಿಂಗ್‌ ಜೂನಿಯರ್‌ರವರ ಜೀವನ ಮತ್ತು ರಾಜಕೀಯ ವೃತ್ತಿ ಮೊಟಕಾಯಿತು. ಜಾನ್‌ ಎಫ್. ಕೆನಡಿ ಹತ್ಯೆಯಾಗುವ ಮುಂಚೆಯೇ, ೧೯೬೪ರ ನಾಗರಿಕ ಹಕ್ಕು ಕಾಯಿದೆಗಾಗಿ ಅಗತ್ಯ ಅಡಿಪಾಯ ಆರಂಭಿಸಲಾಗಿತ್ತು. ಕೆನಡಿ ಸಹೋದರರು, ಡಾ. ಕಿಂಗ್‌ ಮತ್ತು ಇತರೆ ನಾಯಕರು ಹಾಗೂ ರಾಷ್ಟ್ರಾಧ್ಯಕ್ಷ ಲಿಂಡನ್‌ ಜಾನ್ಸನ್‌ರ ಒಟ್ಟು ಯತ್ನಗಳಿಂದಾಗಿ, ರಾಜಕೀಯ ಮತ್ತು ಆಡಳಿತಾತ್ಮಕ ಸುಧಾರಣೆಗಳ ಅಗತ್ಯಗಳನ್ನು ಕ್ಯಾಪಿಟಲ್‌ ಹಿಲ್‌ನ ಹೊಸ್ತಿಲಿನ ತನಕ ತರಲು ಸಾಧ್ಯವಾಯಿತು. ೧೯೬೬ರಲ್ಲಿ, ರಾಬರ್ಟ್‌ ಕೆನಡಿ ದಕ್ಷಿಣ ಆಫ್ರಿಕಾ ಪ್ರವಾಸ ಹೋಗಿ, ಅಲ್ಲಿನ ವರ್ಣಭೇದ ನೀತಿ ವಿರೋಧಿ ಚಳವಳಿಯಲ್ಲಿ ಭಾಗವಹಿಸಿದರು. ರಾಜಕಾರಣಿಗಳು ದಕ್ಷಿಣ ಆಫ್ರಿಕಾದ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಲು ಹಿಂಜರಿಯುತ್ತಿದ್ದ ಕಾಲದಲ್ಲಿ, ರಾಬರ್ಟ್‌ ಕೆನಡಿಯವರ ದಕ್ಷಿಣ ಆಫ್ರಿಕಾ ಪ್ರವಾಸ ಅಂತರರಾಷ್ಟ್ರೀಯ ಪ್ರಶಂಸೆ ಪಡೆಯಿತು. ಅಲ್ಲಿಯ ಮೂಲನಿವಾಸಿ ಜನತೆಯ ಮೇಲಿನ ದಬ್ಬಾಳಿಕೆಯ ವಿರುದ್ಧ ಕೆನಡಿ ವಾಗ್ದಾಳಿ ನಡೆಸಿದರು. ಅಲ್ಲಿನ ಕರಿಯ ಜನಸ್ತೋಮದಿಂದ ಭೇಟಿನೀಡುವ ರಾಷ್ಟ್ರದ ಮುಖ್ಯಸ್ಥರೊಬ್ಬರಿಗೆ ಸಲ್ಲುವಷ್ಟು ಗೌರವ ಕೆನಡಿಗೆ ಸಂದಿತು. ಲುಕ್‌ ಪತ್ರಿಕೆಯೊಂದಿಗಿನ ಸಂದರ್ಶನವೊಂದರಲ್ಲಿ ಅವರು ಹೀಗೆ ಹೇಳಿದರು:

At the University of Natal in Durban, I was told the church to which most of the white population belongs teaches apartheid as a moral necessity. A questioner declared that few churches allow black Africans to pray with the white because the Bible says that is the way it should be, because God created Negroes to serve. "But suppose God is black", I replied. "What if we go to Heaven and we, all our lives, have treated the Negro as an inferior, and God is there, and we look up and He is not white? What then is our response?" There was no answer. Only silence.

— Robert Kennedy, LOOK Magazine[೫೯]

ಅಮೆರಿಕನ್‌ ಯೆಹೂದ್ಯ ಸಮುದಾಯ ಮತ್ತು ನಾಗರಿಕ ಹಕ್ಕು ಚಳವಳಿ

[ಬದಲಾಯಿಸಿ]

ಯೆಹೂದ್ಯ ಸಮುದಾಯದಲ್ಲಿ ಹಲವರು ನಾಗರಿಕ ಹಕ್ಕು ಚಳವಳಿಯನ್ನು ಬೆಂಬಲಿಸಿದರು. ಈ ಚಳವಳಿಯಲ್ಲಿ ಭಾಗವಹಿಸಿದ, ಅತಿ ಸಕ್ರಿಯ ಕರಿಯರೇತರ ಗುಂಪುಗಳಲ್ಲಿ ಯೆಹೂದ್ಯರ ಗುಂಪು ಸಹ ಒಂದಾಗಿತ್ತು. ನಾಗರಿಕ ಹಕ್ಕು ಚಳವಳಿಯ ಯುಗದಲ್ಲಿ, ಹಲವು ಯೆಹೂದ್ಯ ವಿದ್ಯಾರ್ಥಿಗಳು ಆಫ್ರಿಕನ್‌ ಅಮೆರಿಕನ್ನರೊಂದಿಗೆ ಸಹಯೋಗಿಸಿ, CORE, SCLC ಮತ್ತು SNCC ಸಂಘಟನೆಗಳಲ್ಲಿ ಪೂರ್ಣಕಾಲಿಕ ಸಂಘಟಕರು ಮತ್ತು ಬೇಸಿಗೆ ಕಾಲದ ಸ್ವಯಂಸೇವಕರಾಗಿ ಸಕ್ರಿಯರಾಗಿದ್ದರು. ೧೯೬೪ರ ಮಿಸಿಸಿಪ್ಪಿ ಫ್ರೀಡಮ್‌ ಸಮ್ಮರ್‌ ಚಳವಳಿಯಲ್ಲಿ ಸಕ್ರಿಯರಾಗಿದ್ದ, ಅಮೆರಿಕಾ ದೇಶದ ಉತ್ತರ ಭಾಗದ ಬಿಳಿಯ ಸ್ವಯಂಸೇವಕರಲ್ಲಿ ಯೆಹೂದ್ಯರು ಸ್ಥೂಲವಾಗಿ ಅರ್ಧದಷ್ಟಿದ್ದರು. ೧೯೬೦ರ ದಶಕದ ಕಾಲಾವಧಿಯಲ್ಲಿ ಸಕ್ರಿಯರಾಗಿದ್ದ ನಾಗರಿಕ ಹಕ್ಕು ಪರ ವಕೀಲರಲ್ಲಿ ಅರ್ಧದಷ್ಟು ಪಾಲು ಯೆಹೂದ್ಯರದಾಗಿತ್ತು.[೬೦] ೧೯೬೪ರ ಜೂನ್‌ ತಿಂಗಳಲ್ಲಿ, ರೆವೆರೆಂಡ್ ಡಾ. ಮಾರ್ಟಿನ್‌ ಲೂಥರ್‌ ಕಿಂಗ್‌, ಜೂನಿಯರ್‌ ಫ್ಲಾರಿಡಾದ ಸೇಂಟ್‌ ಆಗಸ್ಟೀನ್‌ನಲ್ಲಿ ಆಂದೋಲನಕ್ಕೆ ಕರೆ ನೀಡಿದ್ದು, ಅದಕ್ಕೆ ಓಗೊಟ್ಟ ಯೆಹೂದ್ಯ ನಾಯಕರನ್ನು ಬಂಧಿಸಲಾಯಿತು. ಅಮೆರಿಕಾದ ಇತಿಹಾಸದಲ್ಲೇ ಅತಿದೊಡ್ಡ ಪ್ರಮಾಣದ ಯೆಹೂದ್ಯ ರಾಬಿಗಳ ಬಂಧನವು ಮಾನ್ಸನ್‌ ಮೊಟಾರ್‌ ಲಾಡ್ಜ್‌ನಲ್ಲಿ ನಡೆಯಿತು. ನಾಗರಿಕ ಹಕ್ಕು ಚಳವಳಿಯಲ್ಲಿ ಮಹತ್ವದ ಸ್ಥಾನಮಾನ ಗಳಿಸಿದ್ದ ಮಾನ್ಸನ್‌ ಲಾಡ್ಜ್‌ನ್ನು ೨೦೦೩ರಲ್ಲಿ ನೆಲಸಮಗೊಳಿಸಿ ಅದರ ಜಾಗದಲ್ಲಿ ಹಿಲ್ಟನ್‌ ಹೊಟೆಲ್‌ ನಿರ್ಮಾಣ ಕಾರ್ಯ ನಡೆಯಿತು. ನ್ಯೂಯಾರ್ಕ್‌ ಮೂಲದ ಅಮೆರಿಕಾದ ಯೆಹೂದ್ಯ ದೇವತಾಶಾಸ್ತ್ರೀಯ ಸಂಸ್ಥೆಯಲ್ಲಿ ಬರಹಗಾರ, ಯೆಹೂದ್ಯ ಧರ್ಮಬೋದಕ ಅಬ್ರಹಾಮ್‌ ಜೊಷುವಾ ಹೆಸ್ಚೆಲ್‌, ನಾಗರಿಕ ಹಕ್ಕುಗಳ ವಿಚಾರದಲ್ಲಿ ಬಹಳಷ್ಟು ಮುಚ್ಚುಮರೆಯಿಲ್ಲದ ಮಾತಿನವರಾಗಿದ್ದರು. ೧೯೬೫ರ ಮಾರ್ಚ್‌ ತಿಂಗಳಲ್ಲಿ ಸೆಲ್ಮಾದಲ್ಲಿ ನಡೆದ ಮೆರವಣಿಗೆಯಲ್ಲಿ ಅವರು ಡಾ. ಕಿಂಗ್‌ರೊಂದಿಗೆ ಒಟ್ಟಿಗೆ ಸಾಗಿದರು. ೧೯೬೪ರ ಮಿಸಿಸಿಪ್ಪಿ ಬರ್ನಿಂಗ್‌ ಕೊಲೆ ಘಟನೆಯಲ್ಲಿ ಹತರಾದ ಇಬ್ಬರು ಬಿಳಿಯ ಕಾರ್ಯಕರ್ತರಾದ ಆಂಡ್ರ್ಯೂ ಗುಡ್ಮನ್‌ ಮತ್ತು ಮೈಕಲ್‌ ಷ್ವರ್ಮರ್‌ ಯೆಹೂದ್ಯರಾಗಿದ್ದರು. ವಿಶ್ವದಲ್ಲೇ ಏಕೈಕ ಅಪಂಥೀಯ ಯೆಹೂದ್ಯ-ಪ್ರಾಯೋಜಿತ ಕಾಲೇಜ್‌ ವಿಶ್ವವಿದ್ಯಾನಿಲಯವಾದ ಬ್ರ್ಯಾಂಡೀಸ್‌ ವಿಶ್ವವಿದ್ಯಾನಿಲಯವು, ರೆವೆರೆಂಡ್ ಡಾ. ಮಾರ್ಟಿನ್‌ ಲೂಥರ್‌ ಕಿಂಗ್‌ರ ಹತ್ಯೆಗೆ ಭಾಗಶಃ ಪ್ರತಿಕ್ರಿಯೆಯಾಗಿ, ೧೯೬೮ರಲ್ಲಿ ಟ್ರ್ಯಾನ್ಸಿಷನಲ್‌ ಇಯರ್‌ ಪ್ರೊಗ್ರಾಮ್‌ (ಟಿವೈಪಿ) ಕಲ್ಪಿಸಿತು. ಸಾಮಾಜಿಕ ನ್ಯಾಯಕ್ಕೆ ವಿಶ್ವವಿದ್ಯಾನಿಲಯದ ಬದ್ಧತೆಯನ್ನು ನವೀಕರಿಸಲು ಅದರ ಶಿಕ್ಷಕವರ್ಗವು ಇದನ್ನು ಕಲ್ಪಿಸಿತ್ತು. ಶೈಕ್ಷಣಿಕ ಉತ್ಕೃಷ್ಟತೆಗೆ ಬದ್ಧವಾಗಿದ್ದ ವಿಶ್ವವಿದ್ಯಾನಿಲಯ ಎಂದು ಬ್ರ್ಯಾಂಡೀಸ್‌ನ್ನು ಗುರುತಿಸಿದ ಈ ಶಿಕ್ಷಕವರ್ಗವು ಹೆಚ್ಚು ಅಧಿಕಾರ ನೀಡುವ ಶೈಕ್ಷಣಿಕ ಅನುಭವದಲ್ಲಿ ಭಾಗವಹಿಸಲು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿತು. ೨೦ ಜನ ಕರಿಯರನ್ನು ಸೇರಿಸಿಕೊಳ್ಳುವುದರೊಂದಿಗೆ ಈ ಕಾರ್ಯಕ್ರಮವು ಆರಂಭಗೊಂಡಿತು. ಇದು ಇನ್ನಷ್ಟು ಬೆಳೆಯುತ್ತಿದ್ದಾಗಲೆ, ಎರಡು ಗುಂಪುಗಳಿಗೆ ಅವಕಾಶ ನೀಡಲಾಗಿದೆ. ಮೊದಲ ಗುಂಪು ವಿದ್ಯಾರ್ಥಿಗಳಿಂದ ಕೂಡಿದ್ದು, ಅವರ ಪ್ರೌಢ ಶಿಕ್ಷಣ ಅನುಭವಗಳು ಮತ್ತು/ಅಥವಾ ಗೃಹಸಮುದಾಯಗಳು ಬ್ರಾಂಡೀಸ್ ಮುಂತಾದ ಪ್ರತಿಷ್ಟಿತ ಕಾಲೇಜುಗಳಲ್ಲಿ ಯಶಸ್ಸಿಗಾಗಿ ಸಾಕಷ್ಟು ಸಿದ್ಧತೆ ನಡೆಸಲು ಸಂಪನ್ಮೂಲಗಳ ಕೊರತೆಯನ್ನು ಹೊಂದಿರಬಹುದು. ಉದಾಹರಣೆಗೆ, ಅವರ ಪ್ರೌಢಶಾಲೆಗಳು ಎಪಿ ಅಥವಾ ಆನರ್ಸ್‌ ಪಠ್ಯಕ್ರಮಗಳಾಗಲಿ ಅಥವಾ ಉತ್ತಮ ಗುಣಮಟ್ಟದ ಪ್ರಯೋಗಾಲಯ ಅನುಭವಗಳನ್ನಾಗಲೀ ನೀಡುವುದಿಲ್ಲ. ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ-ತಮ್ಮ ಶಾಲೆಗಳಲ್ಲಿ ಕಲಿತ ಪಠ್ಯಕ್ರಮದಲ್ಲಿಯೇ ಉತ್ತಮ ಸಾಧನೆ ತೋರಿಸಿರುವ ಅಗತ್ಯವಿತ್ತು. ಎರಡನೆಯ ಗುಂಪಿನ ವಿದ್ಯಾರ್ಥಿಗಳಲ್ಲಿ, ತಮ್ಮ ಜೀವನದಲ್ಲಿ ಕಷ್ಟದ ಸನ್ನಿವೇಶಗಳು ಎದುರಾಗಿದ್ದವು. ಇದಕ್ಕೆ ಬಹಳಷ್ಟು ಮನದ ಏಕಾಗ್ರತೆ, ಕ್ಷಮತೆ ಹಾಗೂ ಪರಿಣತಿಗಳ ಅಗತ್ಯವಿತ್ತು. ಈ ಸನ್ನಿವೇಶಗಳು ಎದುರಾಗದಿದ್ದಲ್ಲಿ, ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಸಾಧನೆಗೈಯಬಹುದಾಗಿತ್ತು. ಕೆಲವರು ತಮ್ಮ ಮನೆಯಂದಿಯ ಪ್ರಮುಖರಾಗಿದ್ದರು. ಕೆಲವರು ಪೂರ್ಣಕಾಲಿಕವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಾಗಿದ್ದು, ಪೂರ್ಣಕಾಲಿಕ ನೌಕರಿಯಲ್ಲಿದ್ದದ್ದುಂಟು. ಇನ್ನೂ ಕೆಲವರು ಅನ್ಯ ರೀತ್ಯಾ ನಾಯಕತ್ವದ ಪರಿಣತಿ ತೋರಿಸಿದ್ದುಂಟು. ಅಮೆರಿಕನ್‌ ಯೆಹೂದ್ಯ ಸಮಿತಿ, ಅಮೆರಿಕನ್‌ ಯೆಹೂದ್ಯ ಕಾಂಗ್ರೆಸ್‌ ಹಾಗೂ ಮಾನಹಾನಿ-ವಿರೋಧಿ ಸಂಘಟನೆ ಈ ಸಂಘಟನೆಗಳು ನಾಗರಿಕ ಹಕ್ಕುಗಳ ಪರ ಹೋರಾಡಿದವು. ಅಮೆರಿಕಾ ದೇಶದ ದಕ್ಷಿಣ ಭಾಗದಲ್ಲಿ ಯೆಹೂದ್ಯರು ನಾಗರಿಕ ಹಕ್ಕುಗಳ ಚಳವಳಿಯಲ್ಲಿ ಬಹಳ ಸಕ್ರಿಯರಾಗಿದ್ದಾಗ, ಉತ್ತರ ಭಾಗದಲ್ಲಿ ಬಹಳಷ್ಟು ಯೆಹೂದ್ಯರು ಮತ್ತು ಆಫ್ರಿಕನ್‌ ಅಮೆರಿಕನ್ನರ ನಡುವಿನ ಬಾಂಧವ್ಯ ಕೆಡುತ್ತಿತ್ತು. ಬಿಳಿಯರು ಸ್ಥಳಗಳಿಂದ ಪಲಾಯನ ಹೂಡುವುದು, ಜನಾಂಗೀಯ ಗಲಭೆಗಳು ಹಾಗೂ ನಗರವಲಯಗಳಲ್ಲಿ ಕೆಡುತ್ತಿರುವ ವಾತಾವರಣಗಳನ್ನು ಅನುಭವಿಸುತ್ತಿರುವ ಸಮುದಾಯಗಳಲ್ಲಿ, ಹೆಚ್ಚು ಪರಿಣಾಮಕ್ಕೊಳಗಾದ ಸಮುದಾಯಗಳ ಪೈಕಿ ಕೊನೆಯಲ್ಲಿ ಉಳಿದಿರುವ ಬಿಳಿಯರು ಯೆಹೂದ್ಯ ಅಮೆರಿಕನ್ನರಾಗಿದ್ದರು. ಕರಿಯರ ಉಗ್ರವಾದ ಮತ್ತು ಬ್ಲಾಕ್ ಪವರ್/೦} ಚಳವಳಿಗಳು ಹೆಚ್ಚಾಗುತ್ತಿರುವುದರೊಂದಿಗೆ, ಕರಿಯರ ಯೆಹೂದ್ಯ ಪಕ್ಷಪಾತಕ್ಕೆ ವಿರೋಧಗಳು ಹೆಚ್ಚಾದವು. ಇದರಿಂದಾಗಿ, ಅಮೆರಿಕಾ ಸಂಯುಕ್ತ ಸಂಸ್ಥಾನದ ಉತ್ತರ ಭಾಗದಲ್ಲಿ ಕರಿಯರು ಮತ್ತು ಯೆಹೂದ್ಯರ ನಡುವಿನ ಬಾಂಧವ್ಯ ಕೆಡಲಾರಂಭಿಸಿತು. ಬಹಳಷ್ಟು ಗಮನಾರ್ಹವಾಗಿ, ನ್ಯೂಯಾರ್ಕ್ ನಗರದಲ್ಲಿ, ಯೆಹೂದ್ಯರು ಆಫ್ರಿಕನ್‌-ಅಮೆರಿಕನ್ನರನ್ನು ಪರಿಗಣಿಸುವ ರೀತಿಯಲ್ಲಿ ಪ್ರಮುಖ ಸಾಮಾಜಿಕ-ಆರ್ಥಿಕ ವರ್ಗ-ವ್ಯತ್ಯಾಸವಿತ್ತು.[೬೧] ಸುಶಿಕ್ಷಿತ ಉನ್ನತ ಮಧ್ಯಮ-ವರ್ಗದ ಹಿನ್ನೆಲೆಗಳ ಯೆಹೂದ್ಯರು ಆಫ್ರಿಕನ್‌-ಅಮೆರಿಕನ್‌ ನಾಗರಿಕ ಹಕ್ಕುಗಳ ವಿಚಾರದಲ್ಲಿ ಬೆಂಬಲ ಸೂಚಿಸುತ್ತಿದ್ದರು. ಆದರೆ, ಹೆಚ್ಚು ಅಲ್ಪಸಂಖ್ಯಾತರಾದ ಬಡ ನಗರವಾಸಿ ಸಮುದಾಯಗಳಲ್ಲಿ ವಾಸಿಸುತ್ತಿದ್ದ ಯೆಹೂದ್ಯರು ಈ ಚಳವಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರಲಿಲ್ಲ, ಇದಕ್ಕೆ ಎರಡು ಗುಂಪುಗಳ ನಡುವೆ ನಡೆದಿದ್ದ ಹೆಚ್ಚು ನಕಾರಾತ್ಮಕ ಮತ್ತು ಹಿಂಸಾತ್ಮಕ ಘರ್ಷಣೆಗಳು ಕಾರಣ.

ಮೈತ್ರಿಗಳಲ್ಲಿ ಕಲಹ

[ಬದಲಾಯಿಸಿ]

೧೯೬೪ರಲ್ಲಿ ಕಿಂಗ್‌ರ ಜನಪ್ರಿಯತೆ ಉತ್ತುಂಗಕ್ಕೇರಿತು. ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ನೀಡಲಾಯಿತು. ಆ ಹಂತದ ನಂತರ ಅವರ ವೃತ್ತಿಯಲ್ಲಿ ಬಹಳ ಹತಾಶ ಸವಾಲುಗಳು ಎದುರಾದವು. ೧೯೬೪ರ ನಾಗರಿಕ ಹಕ್ಕು ಕಾಯಿದೆ[೧] ಹಾಗೂ ೧೯೬೫ರಲ್ಲಿ ಮತದಾನ ಹಕ್ಕು ಕಾಯಿದೆಯನ್ನು ಅಂಗೀಕರಿಸಿದ ಉದಾರವಾದಿ ಮೈತ್ರಿಕೂಟದಲ್ಲಿ ಬಿರುಕು ಕಾಣಿಸಿಕೊಂಡಿತು. ಕಿಂಗ್‌ ಜಾನ್ಸನ್‌ ಆಡಳಿತದಿಂದ ಇನ್ನಷ್ಟು ದೂರ ಸರಿಯಲಾರಂಭಿಸಿದ್ದರು. ೧೯೬೫ರಲ್ಲಿ ಅವರು ವಿಯೆಟ್ನಾಮ್‌ ದೇಶದ ಮೇಲೆ ಅಮೆರಿಕಾದ ಬಾಂಬ್‌ ಹಲ್ಲೆಯನ್ನು ವಿರೋಧಿಸಿ, ಶಾಂತಿ ಮಾತುಕತೆಗಳಿಗಾಗಿ ಕರೆ ನೀಡುವುದರ ಮೂಲಕ ಜಾನ್ಸನ್‌ ಸರ್ಕಾರದೊಂದಿಗೆ ಸಂಬಂಧ ಕಡಿದುಕೊಂಡರು. ತರುವಾಯದ ವರ್ಷಗಳಲ್ಲಿ ಅವರು ಇನ್ನಷ್ಟು ಉದಾರವಾದಿಯಾಗಿ ಆರ್ಥಿಕ ನ್ಯಾಯ ಹಾಗೂ ಅಮೆರಿಕದ ಸಮಾಜದಲ್ಲಿ ಆಮೂಲಾಗ್ರ ಬದಲಾವಣೆ ತರುವ ಪರ ಮಾತನಾಡತೊಡಗಿದರು. ಚಳವಳಿಯಿಂದ ಸಂಪಾದಿಸಿದ ನಾಗರಿಕ ಹಕ್ಕುಗಳಿಗಿಂತಲೂ ಆಚೆ ಇನ್ನಷ್ಟು ಬದಲಾವಣೆ ಅಗತ್ಯ ಎಂದು ಅವರು ನಂಬಿದರು. ಆದರೆ, ನಾಗರಿಕ ಹಕ್ಕುಗಳ ಚಳವಳಿಯ ವ್ಯಾಪ್ತಿಯನ್ನು ವಿಸ್ತರಿಸುವ ಕಿಂಗ್‌ ಯತ್ನಗಳು ಸ್ಥಗಿತಗೊಂಡವು ಮತ್ತು ಬಹುಮಟ್ಟಿಗೆ ವಿಫಲವಾದವು. ೧೯೬೫ರಲ್ಲಿ ಚಳವಳಿಯ ವ್ಯಾಪ್ತಿಯನ್ನು ನಿರುದ್ಯೋಗ ಮತ್ತು ಗೃಹ ಸೌಲಭ್ಯದಲ್ಲಿ ಭೇದ-ಭಾವದ ಸಮಸ್ಯೆಗಳ ತನಕ ವಿಸ್ತರಿಸಲು ಕಿಂಗ್‌ ಹಲವು ಬಾರಿ ಯತ್ನಿಸಿದರು. ಷಿಕಾಗೊದಲ್ಲಿನ ಎಸ್‌ಸಿಎಲ್‌ಸಿ ಆಂದೋಲನ ಸಾರ್ವಜನಿಕವಾಗಿ ವಿಫಲವಾಯಿತು. ಷಿಕಾಗೊ ಮಹಾಪೌರ ರಿಚರ್ಡ್‌ ಜೆ. ಡೇಲಿ ನಗರದ ಈ ಸಮಸ್ಯೆಯ ಅಧ್ಯಯನ ನಡೆಸುವುದಾಗಿ ಭರವಸೆ ನೀಡುವ ಮೂಲಕ SCLC ಯ ಆಂದೋಲನವನ್ನು ಅಪ್ರಧಾನವಾಗಿಸಿದರು. ೧೯೬೬ರಲ್ಲಿ, ಷಿಕಾಗೊದ ಹೊರವಲಯದಲ್ಲಿ ಅತಿ ಜನಾಂಗೀಯ ಸಮಸ್ಯೆಯುಳ್ಳ ಕುಖ್ಯಾತ ಸಿಸೆರೊದಲ್ಲಿ, ವೈಟ್ ಪವರ್ ಫಲಕಗಳನ್ನು ಹಿಡಿದ ಬಿಳಿಯ ಪ್ರತಿಭಟನಾಕಾರರು, ಗೃಹ ನಿರ್ಮಾಣ ವ್ಯವಸ್ಥೆಯಲ್ಲಿ ಪ್ರತ್ಯೇಕತೆಯ ವಿರುದ್ಧ ಪ್ರತಿಭಟಿಸುತ್ತಿದ್ದವರ ಮೇಲೆ ಕಲ್ಲೆಸೆದರು.

ಜನಾಂಗೀಯ ದಂಗೆಗಳು, ೧೯೬೩–೧೯೭೦

[ಬದಲಾಯಿಸಿ]

ಎರಡನೇ ವಿಶ್ವ ಸಮರದ ಕೊನೆಯಭಾಗದಲ್ಲಿ, ರಾಷ್ಟ್ರದಲ್ಲಿದ್ದ ಕರಿಯರ ಜನಸಂಖ್ಯೆಯಲ್ಲಿ ಅರ್ಧಕ್ಕೂ ಹೆಚ್ಚು ಜನರು ದಕ್ಷಿಣ ಭಾಗದ ಹಳ್ಳಿಗಾಡು ಪ್ರದೇಶಗಳಿಗಿಂತ ಹೆಚ್ಚಾಗಿ ಉತ್ತರ ಹಾಗು ಪಶ್ಚಿಮದ ಕೈಗಾರಿಕಾ ನಗರಗಳಲ್ಲಿ ವಾಸಿಸುತ್ತಿದ್ದರು.[ಸೂಕ್ತ ಉಲ್ಲೇಖನ ಬೇಕು] ಉತ್ತಮವಾದ ಉದ್ಯೋಗದ ಅವಕಾಶಗಳು, ಶಿಕ್ಷಣ ಹಾಗು ಕಾನೂನು ಸಮ್ಮತವಾದ ವರ್ಣಭೇಧ ನೀತಿಯಿಂದ ಪಾರಾಗಲು ಕರಿಯರು ಈ ನಗರಗಳಿಗೆ ವಲಸೆ ಹೋಗಿದ್ದರು, ಆಫ್ರಿಕನ್ ಅಮೆರಿಕನ್ನರು ಸಾಮಾನ್ಯವಾಗಿ ಕಾನೂನಿನಲ್ಲಿ ಇದ್ದದ್ದಕ್ಕಿಂತ ಹೆಚ್ಚಿಗೆ ವಾಸ್ತವದಲ್ಲಿ ವರ್ಣಭೇಧದ ತಾರತಮ್ಯವನ್ನು ಎದುರಿಸುತ್ತಿದ್ದರು. ಈ ನಡುವೆ ೧೯೨೦ರ ನಂತರ, ಕು ಕ್ಲುಕ್ಸ್ ಕ್ಲಾನ್ ಚಾಲ್ತಿಯಲ್ಲಿ ಇಲ್ಲದಾಗ, ೧೯೬೦ರ ಸುಮಾರಿಗೆ ಉತ್ತರ ಭಾಗದ ನಗರಗಳಲ್ಲಿ ಇತರ ಸಮಸ್ಯೆಗಳು ಉದ್ಭವಿಸಿದವು. ೧೯೫೦ರ ದಶಕದ ಆರಂಭದಲ್ಲಿ, ಕೈಗಾರಿಕಾ ಚಟುವಟಿಕೆಯು ಕಡಿಮೆಯಾಯಿತು ಜೊತೆಗೆ ಆರ್ಥಿಕವಾಗಿ ಸದೃಢವಾಗಿದ್ದ ಪ್ರಮುಖ ಪ್ರದೇಶಗಳನ್ನು ಪುನರ್ರಚಿಸಲಾಯಿತು: ರೈಲುಮಾರ್ಗಗಳು ಹಾಗು ಮಾಂಸಾಹಾರದ ಪ್ಯಾಕಿಂಗ್, ಉಕ್ಕಿನ ತಯಾರಿಕೆ ಹಾಗು ಕಾರಿನ ಕೈಗಾರಿಕೆ. ಕೈಗಾರಿಕಾ ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸಿದ ಕಡೆಯ ವರ್ಗವಾಗ ಕರಿಯರು ಅದರ ಕುಸಿತದಿಂದ ಅನನುಕೂಲ ಪರಿಸ್ಥಿತಿಯನ್ನು ಎದುರಿಸಿದರು. ಅದೇ ಸಮಯದಲ್ಲಿ, ಹೆದ್ದಾರಿಗಳ ನಿರ್ಮಾಣಕ್ಕೆ ಹೂಡಲಾದ ಬಂಡವಾಳ ಹಾಗು ಯುದ್ಧಾನಂತರದ ವರ್ಷಗಳಲ್ಲಿ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಉಪನಗರಗಳಿಂದ, ಹಲವು ಜನಾಂಗೀಯ ಬಿಳಿಯರು ನಗರದಿಂದಾಚೆ, ವಿಸ್ತಾರವಾಗಿದ್ದ ಉಪನಗರಗಳಲ್ಲಿ ಹೊಸತಾಗಿ ನಿರ್ಮಾಣವಾದ ವಸತಿಗಳೆಡೆಗೆ ಆಕರ್ಷಿತರಾದರು. ನಗರದಲ್ಲಿದ್ದ ಕರಿಯರು, ನಗರದಿಂದಾಚೆ ವಲಸೆ ಹೋದ ಮಧ್ಯಮ ವರ್ಗವನ್ನು ಅನುಸರಿಸದೇ, ಒಳನಗರದ ನೆರೆಹೊರೆಗಳಲ್ಲಿ ಹಳೆಯ ವಸತಿಪ್ರದೇಶಗಳಲ್ಲಿ ಕೇಂದ್ರೀಕೃತರಾದರು ಮತ್ತು ಪ್ರಮುಖ ನಗರಗಳ ಪೈಕಿ ಅತ್ಯಂತ ಬಡವರು ಎನಿಸಿದರು. ಹೊಸ ಸೇವಾ ಪ್ರದೇಶಗಳಲ್ಲಿ ಉದ್ಯೋಗಗಳು ಮತ್ತು ಆರ್ಥಿಕತೆಯ ಕೆಲವು ಭಾಗಗಳು ಉಪನಗರಗಳಲ್ಲಿ ಸೃಷ್ಟಿಯಾದ ಕಾರಣ, ತಮ್ಮ ನೆರೆಯಲ್ಲಿದ್ದ ಬಿಳಿಯರಿಗಿಂತ, ಕರಿಯರಲ್ಲಿ ನಿರುದ್ಯೋಗ ಪರಿಸ್ಥಿತಿಯು ಹೆಚ್ಚಾಗಿತ್ತು, ಹಾಗು ಆಗಾಗ್ಗೆ ಅಪರಾಧಗಳು ನಡೆಯುತ್ತಿದ್ದವು. ತಾವು ನೆಲೆಸಿರುವಂತಹ ಪ್ರದೇಶಗಳಲ್ಲಿ ಆಫ್ರಿಕನ್ ಅಮೆರಿಕನ್ನರು ವಿರಳವಾಗಿ ಮಳಿಗೆಗಳು ಅಥವಾ ವ್ಯಾಪಾರದ ಒಡೆತನವನ್ನು ಹೊಂದಿರುತ್ತಿದ್ದರು. ಹಲವರು ಮನೆಕೆಲಸಕ್ಕೆ ಅಥವಾ ದೈಹಿಕ ಶ್ರಮದ ಕೆಲಸಕ್ಕೆ ಸೀಮಿತವಾಗಿದ್ದರು, ಆದಾಗ್ಯೂ ೧೯೩೦ ಹಾಗು ೧೯೪೦ರ ದಶಕಗಳಲ್ಲಿ ರಚನೆಯಾದ ಸಂಘ, ಕೆಲವರಿಗೆ ಉತ್ತಮ ಕೆಲಸದ ವಾತಾವರಣಗಳನ್ನು ಸೃಷ್ಟಿಸಿಕೊಟ್ಟಿತು. ಆಫ್ರಿಕನ್ ಅಮೆರಿಕನ್ನರು ಸಾಮಾನ್ಯವಾಗಿ ತಮ್ಮದೇ ಆದ ಶಿಥಿಲವಾದ ವಸತಿಗಳಲ್ಲಿ, ಅಥವಾ ಕಳಪೆ ನಿರ್ವಹಣೆಯ ಸಾರ್ವಜನಿಕ ವಸತಿ ಗೃಹಗಳಲ್ಲಿ ವಾಸಿಸುವಷ್ಟು ಮಾತ್ರವೇ ಹಣವನ್ನು ಸಂಪಾದಿಸುತ್ತಿದ್ದರು. ಅವರು ನಗರದಲ್ಲಿ ಕಳಪೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದ ಶಾಲೆಗಳಿಗೆ ಹೋಗುತ್ತಿದ್ದರು ಹಾಗು ಎರಡನೇ ವಿಶ್ವಸಮರಕ್ಕೆ ಮುಂಚಿನ ದಶಕಗಳಲ್ಲಿ ಇದ್ದಿದ್ದಕ್ಕಿಂತ ಕಡಿಮೆ ಪ್ರಮಾಣದ ಬಿಳಿಯ ವಿದ್ಯಾರ್ಥಿಗಳನ್ನು ಒಳಗೊಂಡಿತ್ತು. ಪೋಲಿಸ್ ಇಲಾಖೆಯಲ್ಲಿ ಜನಾಂಗೀಯ ನಿಯೋಜನೆಯು, ಸಾಮಾನ್ಯವಾಗಿ ದೊಡ್ಡ ಪ್ರಮಾಣದಲ್ಲಿ ಬಿಳಿಯರದ್ದಾಗಿರುತ್ತಿತ್ತು, ಇದು ಬಹಳ ದೊಡ್ಡ ವಿಷಯವಾಗಿತ್ತು. ಹಾರ್ಲೆಮ್ ನಂತಹ ಕರಿಯರಿದ್ದ ನೆರೆಯ ಪ್ರದೇಶಗಳಲ್ಲಿ, ಪ್ರತಿ ಆರು ಬಿಳಿಯ ಅಧಿಕಾರಿಗಳಿಗೆ ಕೇವಲ ಒಬ್ಬನೇ ಒಬ್ಬ ಕರಿಯ ಅಧಿಕಾರಿಯ ನಿಷ್ಪತ್ತಿಯಿರುತ್ತಿತ್ತು.[೬೨] ಹಾಗು ನೆವಾರ್ಕ್, ನ್ಯೂಜರ್ಸಿಯಂತಹ ಬಹುತೇಕ ಕರಿಯರೇ ತುಂಬಿದ್ದ ನಗರದಲ್ಲಿ ೧೩೨೨ರಲ್ಲಿ ಕೇವಲ ೧೪೫ ಮಂದಿ ಮಾತ್ರ ಕರಿಯ ಅಧಿಕಾರಿಗಳಾಗಿದ್ದರು.[೬೩] ಉತ್ತರ ಭಾಗದ ನಗರಗಳಲ್ಲಿ ಪೋಲಿಸ್ ಪಡೆಗಳು ಹೆಚ್ಚಾಗಿ ಬಿಳಿಯ ಜನಾಂಗದವರಿಂದ ರಚಿತವಾಗಿತ್ತು, ಇವರೆಲ್ಲರೂ ೧೯ನೇ ಶತಮಾನದ ವಲಸಿಗರ ವಂಶಸ್ಥರಾಗಿದ್ದರು: ಇವರಲ್ಲಿ ಮುಖ್ಯವಾಗಿ ಐರಿಶ್, ಇಟಾಲಿಯನ್, ಹಾಗು ಪೂರ್ವ ಯೂರೋಪಿನ ಅಧಿಕಾರಿಗಳಾಗಿದ್ದರು. ಅವರು ಪೋಲಿಸ್ ಇಲಾಖೆಗಳಲ್ಲಿ ಹಾಗು ನಗರಗಳ ಭೂಪ್ರದೇಶಗಳಲ್ಲಿ ತಮ್ಮದೇ ಆದ ಅಧಿಕಾರದ ಮೂಲಗಳನ್ನು ಸ್ಥಾಪಿಸಿದ್ದರು. ಕೆಲವರು ಪ್ರಚೋದನೆಯೊಂದಿಗೆ ಅಥವಾ ಇಲ್ಲದೆ ಕರಿಯರಿಗೆ ಕಿರುಕುಳ ನೀಡುವುದು ಸಾಮಾನ್ಯವಾಗಿತ್ತು.[೬೪] ಮೊದಲ ಪ್ರಮುಖ ಜನಾಂಗೀಯ ದಂಗೆಯು ಹಾರ್ಲೆಮ್, ನ್ಯೂಯಾರ್ಕ್‌ನಲ್ಲಿ ೧೯೬೪ರ ಬೇಸಿಗೆಯಲ್ಲಿ ನಡೆಯಿತು. ಒಬ್ಬ ಬಿಳಿಯ ಐರಿಶ್-ಅಮೆರಿಕನ್ ಪೋಲಿಸ್ ಅಧಿಕಾರಿ, ಥಾಮಸ್ ಗಿಲ್ಲಿಗನ್, ೧೫ ವರ್ಷದ ಜೇಮ್ಸ್ ಪೋವೆಲ್ ಎಂಬ ಕರಿಯ ಹುಡುಗನಿಗೆ ಗುಂಡಿಕ್ಕಿ ಸಾಯಿಸುತ್ತಾರೆ. ಆ ಹುಡುಗ ಚಾಕುವಿನಿಂದ ದಾಳಿ ಮಾಡಲು ಯತ್ನಿಸುವಾಗ ತಾವು ಗುಂಡಿಕ್ಕಿದ್ದಾಗಿ ಅವರು ಆರೋಪಿಸಿದ್ದರು. ವಾಸ್ತವವಾಗಿ, ಪೋವೆಲ್ ನ ಬಳಿ ಯಾವುದೇ ಆಯುಧವಿರಲಿಲ್ಲ. ಕರಿಯ ನಾಗರಿಕರ ಒಂದು ಗುಂಪು ಗಿಲ್ಲಿಗನ್‌ನನ್ನು ಅಮಾನತ್ತು ಪಡಿಸಬೇಕೆಂದು ಆಗ್ರಹಿಸಿತು. ನೂರಾರು ಯುವ ಪ್ರತಿಭಟನಾಕಾರರು ೧೯೬೪ರ ಜುಲೈ ೧೭ ರಂದು ಪೋವೆಲ್‌ರ ಮರಣದ ಒಂದು ದಿನದ ಬಳಿಕ ೬೭ನೇ ರಸ್ತೆಯಲ್ಲಿದ್ದ ಪೋಲಿಸ್ ಸ್ಟೇಶನ್ ಗೆ ಶಾಂತಿಯುತ ಮೆರವಣಿಗೆಯನ್ನು ನಡೆಸಿತು.[೬೫] ಗಿಲ್ಲಿಗನ್‌ನನ್ನು ಅಮಾನತ್ತುಗೊಳಿಸಲಿಲ್ಲ. ಆದಾಗ್ಯೂ ಈ ಉಪವಿಭಾಗವು, NYPDಯ ಮೊದಲ ಕರಿಯ ಸ್ಟೇಶನ್ ಕಮ್ಯಾಂಡರ್‌ಗೆ ಉತ್ತೇಜನ ನೀಡಿತಾದರೂ, ನೆರೆಯ ನಿವಾಸಿಗಳು ಅಸಮಾನತೆಗಳಿಂದ ಬೇಸತ್ತಿದ್ದರು. ನೆರೆಯ ಪ್ರದೇಶಗಳಲ್ಲಿ ಕರಿಯರ ಒಡೆತನದಲ್ಲಿಲ್ಲದ ಯಾವುದೇ ವಸ್ತುವನ್ನು ಅವರು ದೋಚುತ್ತಿದ್ದರು ಮತ್ತು ಸುಡುತ್ತಿದ್ದರು. ಈ ಅಶಾಂತಿಯು ಬೆಡ್ಫೋರ್ಡ್-ಸ್ಟುಯ್ವೆಸಂಟ್ಗೆ ಹರಡಿತು, ಇದು ಬ್ರೂಕ್ಲಿನ್ ನಲ್ಲಿದ್ದ ನೆರೆಯ ಪ್ರಮುಖ ಕರಿಯರ ನೆಲೆಯಾಗಿತ್ತು. ಅದೇ ವರ್ಷದ ಬೇಸಿಗೆಯಲ್ಲಿ, ಇದೆ ರೀತಿಯ ಕಾರಣಗಳಿಗಾಗಿ ಫಿಲಾಡೆಲ್ಫಿಯಾನಲ್ಲೂ ಸಹ ದಂಗೆಗಳು ಆರಂಭಗೊಂಡವು. ಜುಲೈ ೧೯೬೪ರ ಗಲಭೆಗಳ ಪರಿಣಾಮವಾಗಿ, ಸಂಯುಕ್ತ ಸರ್ಕಾರವು ಪ್ರಾಜೆಕ್ಟ್ ಅಪ್ಲಿಫ್ಟ್ ಎಂಬ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಆರ್ಥಿಕ ನೆರವು ನೀಡಿತು, ಯೋಜನೆಯ ಅನುಸಾರವಾಗಿ ೧೯೬೫ರ ಬೇಸಿಗೆಯಲ್ಲಿ ಹಾರ್ಲೆಮ್ ನ ಸಾವಿರಾರು ಯುವ ಜನರಿಗೆ ಉದ್ಯೋಗ ನೀಡಲಾಯಿತು. ಯೋಜನೆಯು, HARYOU ನೀಡಿದ ಯೂತ್ ಇನ್ ದಿ ಗೆಟ್ಟೋ ಎಂಬ ವರದಿಯಿಂದ ಉತ್ತೇಜಿತಗೊಂಡಿತು.[೬೬] ಯೋಜನೆಯನ್ನು ವ್ಯವಸ್ಥಿತವಾಗಿ ರೂಪಿಸುವಲ್ಲಿ HARYOU, ನ್ಯಾಷನಲ್ ಅರ್ಬನ್ ಲೀಗ್ ಹಾಗು ಸುಮಾರು ೧೦೦ ಸಣ್ಣ ಸಮುದಾಯದ ಸಂಘಗಳೊಂದಿಗೆ ಒಟ್ಟುಗೂಡಿ ಪ್ರಮುಖ ಪಾತ್ರವನ್ನು ವಹಿಸಿಕೊಂಡಿತು.[೬೭] ಆದಾಗ್ಯೂ, ಜೀವಿಸಲು ಸಾಕಾಗುವಷ್ಟು ವೇತನವನ್ನು ನೀಡುವ ಖಾಯಂ ಉದ್ಯೋಗಗಳು, ಹಲವು ಕರಿಯ ಯುವಕರ ಕೈಗೆ ನಿಲುಕದಾಗಿತ್ತು. ೧೯೬೫ರಲ್ಲಿ, ಅಧ್ಯಕ್ಷ ಲಿಂಡನ್ B. ಜಾನ್ಸನ್ ಮತದಾನ ಹಕ್ಕುಗಳ ಕಾಯಿದೆಗೆ ಹಸ್ತಾಕ್ಷರ ಹಾಕಿದರು. ಆದರೆ ಈ ಹೊಸ ಕಾನೂನು ಕರಿಯರ ಜೀವನ ಪರಿಸ್ಥಿತಿಗಳ ಮೇಲೆ ಯಾವುದೇ ತಕ್ಷಣದ ಪರಿಣಾಮವನ್ನು ಬೀರಲಿಲ್ಲ. ಕಾಯಿದೆಯು ಕಾನೂನಾಗಿ ಪರಿವರ್ತನೆಯಾದ ಕೆಲವು ದಿನಗಳ ನಂತರ, ವ್ಯಾಟ್ಸ್ ನ ನೆರೆಯ ಸೌತ್ ಸೆಂಟ್ರಲ್ ಲಾಸ್ ಎಂಜಲಿಸ್‌ನಲ್ಲಿ ಗಲಭೆಯು ಆರಂಭಗೊಂಡಿತು. ಹಾರ್ಲೆಮ್ ನ ಮಾದರಿಯಲ್ಲಿ, ವ್ಯಾಟ್ಸ್ ಸಹ ನಿರುದ್ಯೋಗದ ಸಮಸ್ಯೆಯಿಂದ ಕೂಡಿದ ಬಡ ನೆರೆ ಪ್ರದೇಶವಾಗಿತ್ತು. ಇಲ್ಲಿನ ನಿವಾಸಿಗಳು, ಬಹುತೇಕ ಬಿಳಿಯರೇ ಇದ್ದ ಪೊಲೀಸ್ ಇಲಾಖೆಯಿಂದ ಗಸ್ತುಗಳನ್ನು ಸಹಿಸಿಕೊಳ್ಳಬೇಕಾಯಿತು. ಕುಡಿದು ವಾಹನ ಚಲಾಯಿಸುತ್ತಿದ್ದ ಯುವಕನನ್ನು ಬಂಧಿಸುವಾಗ, ಪೋಲಿಸ್ ಅಧಿಕಾರಿಗಳು, ಆರೋಪಿಯ ತಾಯಿಯೊಂದಿಗೆ ನೋಡುಗರ ಎದುರು ವಾದಿಸುತ್ತಾರೆ. ಈ ಸಂಘರ್ಷದಿಂದ ಭುಗಿಲೆದ್ದ ಆರು ದಿನಗಳ ಗಲಭೆಯಲ್ಲಿ ಆಸ್ತಿಪಾಸ್ತಿಗೆ ಅಪಾರ ಹಾನಿಯಾಯಿತು. ಗಲಭೆಯಲ್ಲಿ ಮೂವತ್ತ ನಾಲ್ಕು ಜನರು ಸಾವನ್ನಪ್ಪಿದರು ಹಾಗು ಅಂದಾಜು $೩೦ ದಶಲಕ್ಷದಷ್ಟು ಆಸ್ತಿಪಾಸ್ತಿಗೆ ಹಾನಿಯಾಯಿತು, ಇದು ವ್ಯಾಟ್ಸ್ ದಂಗೆಯನ್ನು ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಘಟನೆಯನ್ನಾಗಿಸಿತು. ಕರಿಯರ ಉಗ್ರವಾದವು ಹೆಚ್ಚಾಗುತ್ತಿದ್ದಂತೆ, ಹೆಚ್ಚಿದ ಕೋಪೋದ್ರಿಕ್ತ ಕೃತ್ಯಗಳು ಪೋಲಿಸರೆಡೆಗೆ ತಿರುಗಿತು. ಪೋಲೀಸರ ದೌರ್ಜನ್ಯದಿಂದ ಬೇಸತ್ತಿದ್ದ ಕರಿಯ ನಿವಾಸಿಗಳು ದಂಗೆಯನ್ನು ಮುಂದುವರೆಸಿದರು. ಕೆಲವು ಯುವಕರು ಬ್ಲ್ಯಾಕ್ ಪ್ಯಾಂಥರ್ಸ್ ನಂತಹ ಗುಂಪಿಗೆ ಸೇರ್ಪಡೆಯಾದರು, ಆಂಶಿಕವಾಗಿ ಅವರು ಪೊಲೀಸ್ ಅಧಿಕಾರಿಗಳನ್ನು ಎದುರಿಸುತ್ತಿದ್ದ ರೀತಿಯಿಂದಾಗಿ ಅವರ ಜನಪ್ರಿಯತೆಯು ಅಧಿಕವಾಗಿತ್ತು. ೧೯೬೬ ಹಾಗು ೧೯೬೭ರಲ್ಲಿ, ಅಟ್ಲಾಂಟ, ಸ್ಯಾನ್ ಫ್ರ್ಯಾನ್ಸಿಸ್ಕೋ, ಓಕ್ಲ್ಯಾಂಡ್, ಬಾಲ್ಟಿಮೋರ್, ಸಿಯಾಟಲ್, ಕ್ಲೆವ್ಲಂಡ್, ಸಿನ್ಸಿನಾಟಿ, ಕೊಲಂಬಸ್, ನೆವಾರ್ಕ್, ಷಿಕಾಗೊ, ನ್ಯೂಯಾರ್ಕ್ ನಗರ(ಅದರಲ್ಲೂ ವಿಶೇಷವಾಗಿ ಬ್ರೂಕ್ಲಿನ್, ಹಾರ್ಲೆಮ್ ಹಾಗು ಬ್ರಾಂಕ್ಸ್), ಹಾಗು ಇವೆಲ್ಲಕ್ಕಿಂತ ಕೆಟ್ಟದಾಗಿ ಡೆಟ್ರಾಯ್ಟ್ ನಂತಹ ನಗರಗಳಲ್ಲಿ ಗಲಭೆಗಳು ಉಂಟಾದವು. ಡೆಟ್ರಾಯ್ಟ್‌ನಲ್ಲಿ, ಒಂದು ಸೌಕರ್ಯವುಳ್ಳ ಕರಿಯರ ಮಧ್ಯಮ ವರ್ಗವು, ಕರಿಯರ ಕುಟುಂಬಗಳ ನಡುವೆ ಬೆಳವಣಿಗೆಯಾಗಲು ಆರಂಭವಾಯಿತು, ಇವರುಗಳು ಉತ್ತಮ ವೇತನ ದೊರಕುತ್ತಿದ್ದ ಮೋಟಾರು ವಾಹನ ತಯಾರಿಕಾ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದರು.[ಸೂಕ್ತ ಉಲ್ಲೇಖನ ಬೇಕು] ಪ್ರಗತಿಯನ್ನು ಹೊಂದದ ಕರಿಯರು ಬಹಳ ಕೆಟ್ಟದಾದ ಪರಿಸ್ಥಿತಿಯಲ್ಲಿ ಜೀವಿಸುತ್ತಿದ್ದರು, ಇವರುಗಳು ವ್ಯಾಟ್ಸ್ ಹಾಗು ಹಾರ್ಲೆಮ್ ನಲ್ಲಿದ್ದ ಕರಿಯರು ಎದುರಿಸುತ್ತಿದ್ದ ಸಮಸ್ಯೆಗಳನ್ನೇ ಎದುರಿಸುತ್ತಿದ್ದರು. ಬಿಳಿಯ ಪೋಲಿಸ್ ಅಧಿಕಾರಿಗಳು ದಾಳಿ ಮಾಡಿ,ಅನಧಿಕೃತವಾಗಿ ನಡೆಸಲಾಗುತ್ತಿದ್ದ ಬಾರ್ ನ್ನು ಮುಚ್ಚಿಸಿ, ಅದಕ್ಕೆ ಪ್ರೋತ್ಸಾಹ ನೀಡುತ್ತಿದ್ದ ಒಂದು ದೊಡ್ಡ ಗುಂಪನ್ನು ಬಂಧಿಸಿದಾಗ, ಕೋಪೋದ್ರಿಕ್ತರಾದ ನಿವಾಸಿಗಳು ಗಲಭೆಯೆದ್ದರು. ಡೆಟ್ರಾಯ್ಟ್ ಗಲಭೆಯ ಒಂದು ಮಹತ್ವದ ಪರಿಣಾಮವೆಂದರೆ, ತ್ವರಿತ ಗತಿಯಲ್ಲಿ "ಬಿಳಿಯರ ವಲಸೆ". ಬಿಳಿಯ ನಿವಾಸಿಗಳು ನಗರದ ಒಳಭಾಗ ನೆರೆಹೊರೆಗಳಿಂದ ಬಿಳಿಯರ ಪ್ರಾಬಲ್ಯದ ಉಪನಗರಗಳಿಗೆ ಸ್ಥಳಾಂತರಗೊಳ್ಳುವುದು ಪ್ರವೃತ್ತಿಯಾಯಿತು. ಡೆಟ್ರಾಯ್ಟ್ ಸಹ "ಮಧ್ಯಮ ವರ್ಗದ ಕರಿಯರ ವಲಸೆಯನ್ನು" ಅನುಭವಿಸಿತು. ಗಲಭೆಗಳು ಹಾಗು ಇತರ ಸಾಮಾಜಿಕ ಬದಲಾವಣೆಗಳ ಪರಿಣಾಮವಾಗಿ ಡೆಟ್ರಾಯ್ಟ್, ನೆವಾರ್ಕ್, ಹಾಗು ಬಾಲ್ಟಿಮೋರ್ ನಂತಹ ನಗರಗಳಲ್ಲಿ ಬಿಳಿಯರ ಸಂಖ್ಯೆಯು ೪೦%ಗಿಂತ ಕಡಿಮೆಯಾಯಿತು. ಕೈಗಾರಿಕೆಗಳಲ್ಲಿ ಬದಲಾವಣೆಗಳು ಸತತ ನೌಕರಿಯ ನಷ್ಟಗಳು, ಮಧ್ಯಮ ವರ್ಗದ ನಿರ್ಜನೀಕರಣ, ಹಾಗು ಅಂತಹ ನಗರಗಳಲ್ಲಿ ಬಡತನದ ತೀವ್ರತೆಯನ್ನು ಉಂಟುಮಾಡಿದವು. ಗಲಭೆಗಳ ಪರಿಣಾಮವಾಗಿ, ಅಧ್ಯಕ್ಷ ಜಾನ್ಸನ್ ೧೯೬೭ರಲ್ಲಿ ನ್ಯಾಷನಲ್ ಅಡ್ವೈಸರಿ ಕಮಿಷನ್ ಆನ್ ಸಿವಿಲ್ ಡಿಸಾರ್ಡರ್ಸ್ ನ್ನು ರೂಪಿಸಿದರು. ಆಯೋಗದ ಅಂತಿಮ ವರದಿಯು, ಉದ್ಯೋಗದಲ್ಲಿ ಪ್ರಮುಖ ಸುಧಾರಣೆಗಳು ಹಾಗು ಕರಿಯ ಸಮುದಾಯಗಳಿಗೆ ಸಾರ್ವಜನಿಕ ನೆರವು ದೊರೆಯಬೇಕೆಂದು ಅಧಿಕೃತವಾಗಿ ಕರೆ ನೀಡಿತು. ಇದು, ಅಮೆರಿಕ ಸಂಯುಕ್ತ ಸಂಸ್ಥಾನವು ಪ್ರತ್ಯೇಕವಾದ ಬಿಳಿಯ ಹಾಗು ಕರಿಯ ಸಮಾಜಗಳೆಡೆಗೆ ಚಲಿಸುತ್ತಿರುವ ಬಗ್ಗೆ ಎಚ್ಚರಿಕೆ ನೀಡಿತು. ಡಾ. ಮಾರ್ಟಿನ್ ಲೂಥರ್ ಕಿಂಗ್, ಜೂನಿಯರ್ ಹತ್ಯೆಯೊಂದಿಗೆ ಏಪ್ರಿಲ್ ೧೯೬೮ರಲ್ಲಿ ಹೊಸ ದಂಗೆಗಳು ಅನೇಕ ಪ್ರಮುಖ ನಗರಗಳಲ್ಲಿ ಒಮ್ಮೆಲೆ ಆರಂಭಗೊಂಡವು.ಇವುಗಳಲ್ಲಿ ಷಿಕಾಗೊ, ಕ್ಲೆವ್ಲಂಡ್, ಬಾಲ್ಟಿಮೋರ್, ವಾಶಿಂಗ್ಟನ್, D.C., ಷಿಕಾಗೊ, ನ್ಯೂಯಾರ್ಕ್ ನಗರ ಹಾಗು ಲೂಯಿಸ್ವಿಲ್ಲೆ, ಕೆಂಟುಕಿ ನಗರಗಳು ಸೇರಿದ್ದವು. ಸಮರ್ಥಕ ಕಾರ್ಯವು ಪ್ರತಿಯೊಂದು ಪ್ರಮುಖ ನಗರದಲ್ಲೂ ಕರಿಯ ಪೋಲಿಸ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಬದಲಿಸಿತು. ಬಾಲ್ಟಿಮೋರ್, ವಾಷಿಂಗ್ಟನ್, ನ್ಯೂಆರ್ಲಿಯನ್ಸ್, ಅಟ್ಲಾಂಟ, ನೆವಾರ್ಕ್, ಹಾಗು ಡೆಟ್ರಾಯ್ಟ್ ನಂತರ ನಗರಗಳ ಪೋಲಿಸ್ ಇಲಾಖೆಯಲ್ಲಿ ಪ್ರಮಾಣಾನುಗುಣವಾಗಿ ಬಹುತೇಕ ಕರಿಯರು ಸೇವೆ ಸಲ್ಲಿಸುತ್ತಿದ್ದರು. ನಾಗರಿಕ ಹಕ್ಕುಗಳ ಕಾನೂನುಗಳು ನೌಕರಿಯಲ್ಲಿ ಉಂಟಾಗುತ್ತಿದ್ದ ತಾರತಮ್ಯವನ್ನು ಕಡಿಮೆ ಮಾಡಿತು. ೧೯೬೦ರ ನಂತರದ ಭಾಗದಲ್ಲಿ ಸತತವಾಗಿ ನಡೆಯುತ್ತಿದ್ದ ದಂಗೆಗಳಿಗೆ ಕಾರಣವಾದ ಪರಿಸ್ಥಿತಿಗಳು ತಗ್ಗಿತು, ಆದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಲಿಲ್ಲ. ಕೈಗಾರಿಕೆ ಹಾಗು ಆರ್ಥಿಕತೆಯ ಮರುರಚನೆಯೊಂದಿಗೆ, ೧೯೫೦ರ ದಶಕದ ನಂತರದ ಭಾಗದಲ್ಲಿ ಹಳೆಯ ಕೈಗಾರಿಕಾ ನಗರಗಳಿಂದ ಹತ್ತಾರು ಸಾವಿರ ಕೈಗಾರಿಕಾ ಉದ್ಯೋಗಗಳು ಕಣ್ಮರೆಯಾದವು. ಸ್ವಲ್ಪಮಟ್ಟಿಗೆ ಹೆಚ್ಚಿನ ಜನಸಂಖ್ಯೆಯಿದ್ದ ಕೆಲವರು ದಕ್ಷಿಣ ಭಾಗಕ್ಕೆ ಸ್ಥಳಾಂತರಗೊಂಡರೆ, ಮತ್ತೆ ಕೆಲವರು ಸಂಪೂರ್ಣವಾಗಿ ಅಮೆರಿಕ ಸಂಯುಕ್ತ ಸಂಸ್ಥಾನ ತೊರೆದರು. ೧೯೮೦ರಲ್ಲಿ ಮಿಯಾಮಿಯಲ್ಲಿ, ೧೯೯೨ರಲ್ಲಿ ಲಾಸ್ ಎಂಜಲಿಸ್ ನಲ್ಲಿ, ಹಾಗು ೨೦೦೧ರಲ್ಲಿ ಸಿನ್ಸಿನಾಟಿಯಲ್ಲಿ ನಾಗರಿಕ ಅಶಾಂತಿಯು ಭುಗಿಲೆದ್ದಿತು.

ಬ್ಲ್ಯಾಕ್ ಪವರ್, ೧೯೬೬

[ಬದಲಾಯಿಸಿ]

ಅದೇ ಸಮಯದಲ್ಲಿ ಕಿಂಗ್, ಡೆಮೋಕ್ರ್ಯಾಟಿಕ್ ಪಕ್ಷದ ಒಳಜಗಳಗಳೊಂದಿಗೆ ಪ್ರತಿಕೂಲಗಳನ್ನು ಎದುರಿಸಿದರು. ಅವರು ಸಮಗ್ರತೆ ಹಾಗು ಅಹಿಂಸೆ ಎಂಬ ಎರಡು ಪ್ರಮುಖ ಸಿದ್ಧಾಂತಗಳ ಮೇಲೆ ಅವಲಂಬಿತವಾಗಿದ್ದ ಚಳವಳಿಗೆ ನಾಗರಿಕ ಹಕ್ಕುಗಳ ಚಳವಳಿಯ ಒಳಗಿಂದಲೇ ಸವಾಲುಗಳನ್ನು ಎದುರಿಸಬೇಕಾಯಿತು. ೧೯೬೬ರಲ್ಲಿ SNCCಯ ನಾಯಕರಾಗಿ ಆಯ್ಕೆಯಾದ ಸ್ಟೋಕೆಲಿ ಕಾರ್ಮೈಕಲ್,೧೯೬೬ರ ಜೂನ್ ೧೭ರಲ್ಲಿ ಗ್ರೀನ್ವುಡ್, ಮಿಸಿಸಿಪ್ಪಿಯಲ್ಲಿ ವಿಲ್ಲಿ ರಿಕ್ಸ್ ಎಂಬ ಕಾರ್ಯಕರ್ತ ಹಾಗು ಸಂಘಟಕ ಹುಟ್ಟುಹಾಕಿದ ಘೋಷಣಾವಾಕ್ಯವನ್ನು ಬಳಸಿದ ನಂತರ "ಬ್ಲ್ಯಾಕ್ ಪವರ್" ಎಂದು ಕರೆಯಲ್ಪಡುವ ಚಳವಳಿಗೆ ಮೊದಲ ಹಾಗು ಅತ್ಯಂತ ಸ್ಫುಟ ವಕ್ತಾರರೆನಿಸಿಕೊಂಡರು. ೧೯೬೬ರಲ್ಲಿ SNCCಯ ಮುಖಂಡ ಸ್ಟೋಕ್ಲಿ ಕಾರ್ಮೈಕಲ್, ಕು ಕ್ಲುಕ್ಸ್ ಕ್ಲಾನ್ ನ್ನು ಎದುರಿಸಲು ಆಫ್ರಿಕನ್ ಅಮೆರಿಕನ್ ಸಮುದಾಯಗಳು ಶಸ್ತ್ರಸಜ್ಜಿತರಾಗಿ ಯುದ್ಧಕ್ಕೆ ತಯಾರಾಗಬೇಕೆಂದು ಕೋರಿದರು. ಅವರ ಪ್ರಕಾರ, ಸಮುದಾಯಗಳ ಮೇಲೆ ಕ್ಲಾನ್ ಉಂಟುಮಾಡುತ್ತಿದ್ದ ಭೀತಿಯನ್ನು ತೊಡೆದುಹಾಕಲು ಇದಕ್ಕಿರುವ ಒಂದೇ ಮಾರ್ಗ ಇದಾಗಿತ್ತೆಂದು ಹೇಳುತ್ತಾರೆ.[ಸೂಕ್ತ ಉಲ್ಲೇಖನ ಬೇಕು] ಬ್ಲ್ಯಾಕ್ ಪವರ್ ಚಳವಳಿಯಲ್ಲಿ ಭಾಗಿಯಾಗಿದ್ದ ಹಲವರು, ಕಪ್ಪು ಜನಾಂಗದ ಬಗ್ಗೆ ಹೆಮ್ಮೆ ಮತ್ತು ಸ್ವಸ್ವರೂಪದ ಪ್ರಜ್ಞೆಯನ್ನು ಗಳಿಸಲಾರಂಭಿಸಿದರು. ಸಾಂಸ್ಕೃತಿಕ ಸ್ವರೂಪದ ಪ್ರಜ್ಞೆಯನ್ನು ಹೆಚ್ಚಾಗಿ ಗಳಿಸುವ ನಿಟ್ಟಿನಲ್ಲಿ, ಹಲವಾರು ಕರಿಯರು ತಮ್ಮನ್ನು "ನೀಗ್ರೋ"ಗಳೆಂದು ಉಲ್ಲೇಖಿಸದೇ "ಆಫ್ರೋ-ಅಮೆರಿಕನ್ನರೆಂದು" ಕರೆಯಬೇಕೆಂದು ಬಿಳಿಯರಿಗೆ ಆಗ್ರಹಿಸುತ್ತಾರೆ. ೧೯೬೦ರ ದಶಕದ ಮಧ್ಯಭಾಗದವರೆಗೂ, ಕರಿಯರು, ಬಿಳಿಯರ ಮಾದರಿ ವಸ್ತ್ರಗಳನ್ನು ಧರಿಸುವುದರ ಜೊತೆಗೆ ತಮ್ಮ ಕೂದಲನ್ನು ನೇರಗೊಳಿಸಿಕೊಳ್ಳುತ್ತಿದ್ದರು. ವಿಶಿಷ್ಟವಾದ ಗುರುತನ್ನು ಗಳಿಸಿಕೊಳ್ಳುವ ಒಂದು ಭಾಗವಾಗಿ, ಕರಿಯರು ಸಡಿಲವಾದ ಡಾಷಿಕಿ(ದೊಗಳೆಶರ್ಟು)ಗಳನ್ನು ಧರಿಸುತ್ತಿದ್ದರು ಹಾಗು ಒಬ್ಬ ಸ್ವಾಭಾವಿಕ ಆಫ್ರೋನ ಮಾದರಿ ತಮ್ಮ ಕೂದಲನ್ನು ಬೆಳೆಸಿಕೊಳ್ಳುತ್ತಿದ್ದರು. "ಫ್ರೋ" ಎಂದು ಕೆಲವೊಂದು ಬಾರಿ ಅಡ್ಡಹೆಸರಿನಿಂದ ಕರೆಯಲ್ಪಡುತ್ತಿದ್ದ ಆಫ್ರೋ, ೧೯೭೦ರ ಉತ್ತರಾರ್ಧದವರೆಗೂ ಕರಿಯರ ಜನಪ್ರಿಯ ಕೇಶಶೈಲಿಯಾಗಿ ಉಳಿದಿತ್ತು. ಆದಾಗ್ಯೂ, ಬ್ಲ್ಯಾಕ್ ಪವರ್ ಚಳವಳಿಯನ್ನು, ೧೯೬೬ರಲ್ಲಿ ಓಕ್ಲ್ಯಾಂಡ್, ಕ್ಯಾಲಿಫೋರ್ನಿಯಾನಲ್ಲಿ ಹುಯೆ ನ್ಯೂಟನ್ ಹಾಗು ಬಾಬ್ಬಿ ಸೆಯಲೆ ಸ್ಥಾಪಿಸಿದ ಬ್ಲ್ಯಾಕ್ ಪ್ಯಾಂಥರ್ ಪಕ್ಷವು, ಸಾರ್ವಜನಿಕರನ್ನು ಹೆಚ್ಚು ತಲುಪುವಂತೆ ಮಾಡಿತು. ಈ ಗುಂಪು ಮಾಲ್ಕಂ Xರ ಸಿದ್ಧಾಂತವನ್ನು ಅನುಸರಿಸಿತು, ಇವರು ನೇಶನ್ ಆಫ್ ಇಸ್ಲಾಂನ ಮಾಜಿ ಸದಸ್ಯರಾಗಿದ್ದರು, ಇವರು ಅಸಮಾನತೆಯನ್ನು ತಡೆಯಲು "ಯಾವುದೇ ಮಾರ್ಗದಲ್ಲಾದರೂ ಅಗತ್ಯವಾದ" ಧೋರಣೆಯನ್ನು ಬಳಸುತ್ತಿದ್ದರು. ಅವರು ನೆರೆಯ ಆಫ್ರಿಕನ್ ಅಮೆರಿಕನ್ನರ ಮೇಲೆ ಪೋಲೀಸರ ದೌರ್ಜನ್ಯಕ್ಕೆ ತಡೆ ಹಾಕಲು ನಿರ್ಧರಿಸಿ, ಇತರ ವಿಷಯಗಳೊಂದಿಗೆ ಹತ್ತು-ಅಂಶಗಳ ಯೋಜನೆಯನ್ನು ಸೃಷ್ಟಿಸಿದರು. ಚರ್ಮದ ಕಪ್ಪು ಜ್ಯಾಕೆಟ್‌ಗಳು, ಬೆರಿ ಟೋಪಿಗಳು, ದೊಗಳೆ ಷರಾಯಿಗಳು, ಹಾಗು ತೆಳು ನೀಲಿ ಬಣ್ಣದ ಶರ್ಟುಗಳು ಅವರ ಉಡುಪುಗಳಾಗಿದ್ದವು. ಅವರು ಆಫ್ರೋ ಕೇಶ ಶೈಲಿಯನ್ನು ಬಳಸುತ್ತಿದ್ದರು. ಉಚಿತವಾದ ಉಪಹಾರ ಕಾರ್ಯಕ್ರಮಗಳನ್ನು ಆಯೋಜಿಸಿದ್ದಕ್ಕಾಗಿ, ಪೋಲಿಸ್ ಅಧಿಕಾರಿಗಳನ್ನು "ಹಂದಿಗಳು" ಎಂದು ಉಲ್ಲೇಖಿಸಿದ್ದಕ್ಕಾಗಿ, ಸಣ್ಣ ಬಂದೂಕುಗಳನ್ನು ಪ್ರದರ್ಶಿಸಿದ್ದಕ್ಕಾಗಿ ಹಾಗು ರೈಸ್ಡ್ ಫಿಸ್ಟ್ ಚಿಹ್ನೆಯನ್ನು ಪ್ರದರ್ಶಿಸಿದ್ದಕ್ಕಾಗಿ ಹಾಗು "ಜನರಿಗೆ ಅಧಿಕಾರ" ಎಂಬ ಹೇಳಿಕೆಯನ್ನು ಸಾಮಾನ್ಯವಾಗಿ ಬಳಸಿದ್ದಕ್ಕಾಗಿ ಅವರನ್ನು ಹೆಚ್ಚು ಸ್ಮರಿಸಲಾಗುತ್ತದೆ. ಬಂದೀಖಾನೆಯ ಗೋಡೆಗಳೊಳಗೆ ಬ್ಲ್ಯಾಕ್ ಪವರ್ ನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯಲಾಯಿತು. ೧೯೬೬ರಲ್ಲಿ, ಜಾರ್ಜ್ ಜ್ಯಾಕ್ಸನ್, ಕ್ಯಾಲಿಫೋರ್ನಿಯಾದ ಸ್ಯಾನ್ ಕ್ವೆನ್ಟಿನ್ ಸ್ಟೇಟ್ ಪ್ರಿಸನ್ ನಲ್ಲಿ ಬ್ಲ್ಯಾಕ್ ಗೆರಿಲ್ಲಾ ಫ್ಯಾಮಿಲಿಯನ್ನು ರೂಪಿಸಿದರು. ಈ ಗುಂಪಿನ ಗುರಿಯೆಂದರೆ, ಅಮೆರಿಕದಲ್ಲಿ ಬಿಳಿಯರು ನಡೆಸುವ ಸರ್ಕಾರವನ್ನು ಹಾಗು ಬಂದೀಖಾನೆ ವ್ಯವಸ್ಥೆಯನ್ನು ಉರುಳಿಸುವುದಾಗಿತ್ತು. ೧೯೭೦ರಲ್ಲಿ, ಬಂದೀಖಾನೆಯ ಗೋಪುರದಿಂದ ಗುಂಡಿಕ್ಕಿ ಕೊಲ್ಲಲಾದ ಮೂರು ಕರಿಯ ಕೈದಿಗಳ ಹತ್ಯೆಯಲ್ಲಿ ಬಿಳಿಯ ಬಂದೀಖಾನೆ ರಕ್ಷಕನು ತಪ್ಪಿತಸ್ಥನಲ್ಲವೆಂದು ತೀರ್ಮಾನವಾದ ನಂತರ, ಈ ಗುಂಪು ತನ್ನ ನಿಷ್ಠೆಯನ್ನು ಪ್ರದರ್ಶಿಸಿತು. ಬಂದೀಖಾನೆಯ ಬಿಳಿಯ ರಕ್ಷಕನನ್ನು ಕೊಳ್ಳುವ ಮೂಲಕ ತಮ್ಮ ಪ್ರತೀಕಾರವನ್ನು ತೀರಿಸಿಕೊಂಡರು. ೧೯೬೮ರಲ್ಲಿ ಟಾಮಿ ಸ್ಮಿತ್ ಮತ್ತು ಜಾನ್ ಕಾರ್ಲೋಸ್ ಅವರು ೧೯೬೮ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಕಂಚಿನ ಪದಕಗಳಿಂದ ಪುರಸ್ಕೃತರಾದಾಗ, ಮಾನವ ಹಕ್ಕುಗಳ ಬ್ಯಾಡ್ಜ್ ಧರಿಸಿದರು ಮತ್ತು ಅವರನ್ನು ವೇದಿಕೆಯ ಶಿಷ್ಟಾಚಾರದಲ್ಲಿ ಕಪ್ಪು ಕೈಗವಸಿನ ಬ್ಲ್ಯಾಕ್ ಪವರ್ ಸೆಲ್ಯೂಟ್ ಮಾಡಿದರು. ಪ್ರಾಸಂಗಿಕವಾಗಿ, ಬಿಳಿಯ ಬೆಳ್ಳಿಪದಕ ವಿಜೇತ ಆಸ್ಟ್ರೇಲಿಯದ ಪೀಟರ್ ನಾರ್ಮನ್ ಅವರು ಸ್ಮಿತ್ ಮತ್ತು ಕಾರ್ಲೋಸ್ ಪ್ರತಿಯೊಬ್ಬರೂ ಒಂದು ಕಪ್ಪು ಕೈಗವಸು ಧರಿಸುವಂತೆ ಸೂಚಿಸಿದ್ದರು. ಸ್ಮಿತ್ ಮತ್ತು ಕಾರ್ಲೋಸ್ ಅವರನ್ನು ಅಮೆರಿಕ ಒಲಿಂಪಿಕ್ ಸಮಿತಿ ತಕ್ಷಣವೇ ಆಟಗಳಿಂದ ಹೊರಹಾಕಿತು ಮತ್ತು ನಂತರ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಇಬ್ಬರಿಗೂ ಕಾಯಂ ಜೀವಿತಾವಧಿ ನಿಷೇಧವನ್ನು ವಿಧಿಸಿತು. ಆದಾಗ್ಯೂ, ಬ್ಲ್ಯಾಕ್ ಪವರ್(ಕರಿಯರಿಗೆ ಅಧಿಕಾರ) ಚಳವಳಿಗೆ ಅಂತಾರಾಷ್ಟ್ರೀಯ ಟೆಲಿವಿಷನ್‌ನಲ್ಲಿ ನೇರ ಪ್ರಸಾರದ ಮೂಲಕ ವೇದಿಕೆ ಒದಗಿಸಿತು. ಕಿಂಗ್‌ಗೆ ಬ್ಲ್ಯಾಕ್ ಪವರ್ ಘೋಷಣೆ ಹಿತಕಾರಿಯಾಗಲಿಲ್ಲ. ಇದು ಕರಿಯರ ರಾಷ್ಟ್ರೀಯತೆ ರೀತಿಯಲ್ಲಿ ಅವರಿಗೆ ಧ್ವನಿಸಿತು. ಈ ಕಾಲಾವಧಿಯಲ್ಲಿ SNCC ಕಾರ್ಯಕರ್ತರು ಬಿಳಿಯ ಅಧಿಕಾರಿಗಳ ದಾಳಿಗಳಿಗೆ ಪ್ರತಿಕ್ರಿಯೆಯಾಗಿ "ಸ್ವಯಂರಕ್ಷಣೆಯ ಹಕ್ಕನ್ನು" ಅವಲಂಬಿಸಲಾರಂಭಿಸಿದರು ಮತ್ತು ಅಹಿಂಸೆಗೆ ಸಲಹೆ ನೀಡುವುದನ್ನು ಮುಂದುವರಿಸಿದ ಕಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕಿಂಗ್೧೯೬೮ಲ್ಲಿ ಹತ್ಯೆಯಾದಾಗ, ಬಿಳಿಯರು ವ್ಯಾಪಕ ಗಲಭೆ ತಡೆಯಲಿದ್ದ ಒಬ್ಬ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾರೆ ಮತ್ತು ಕರಿಯರು ಪ್ರತಿಯೊಂದು ಪ್ರಮುಖ ನಗರವನ್ನು ಸುಟ್ಟು ನೆಲಸಮ ಮಾಡುತ್ತಾರೆಂದು ಸ್ಟೋಕ್ಲಿ ಕಾರ್ಮೈಕಲ್ ಹೇಳಿಕೆ ನೀಡಿದರು. ಬೋಸ್ಟನ್‌ನಿಂದ ಸ್ಯಾನ್‌ಫ್ರಾನ್ಸಿಸ್ಕೊವರೆಗೆ ಪ್ರತಿಯೊಂದು ಪ್ರಮುಖ ನಗರದಲ್ಲಿ ಕಿಂಗ್ ಸಾವಿನಿಂದಾಗಿ ಜನಾಂಗೀಯ ಗಲಭೆಗಳು ಕರಿಯ ಸಮುದಾಯದಲ್ಲಿ ಭುಗಿಲೆದ್ದವು ಮತ್ತು ಇದರ ಫಲವಾಗಿ ಅನೇಕ ನಗರಗಳಲ್ಲಿ ಬಿಳಿಯರ ನಗರ ತೊರೆಯುವಿಕೆ ಸಂಭವಿಸಿತು ಮತ್ತು ಕರಿಯರು ಶಿಥಿಲವಾದ ಮತ್ತು ದುರಸ್ತಿಮಾಡಲಾಗದ ನಗರದಲ್ಲಿ ಉಳಿದರು.[ಸೂಕ್ತ ಉಲ್ಲೇಖನ ಬೇಕು]

ಬಂದೀಖಾನೆ ಸುಧಾರಣೆ

[ಬದಲಾಯಿಸಿ]

ಗೇಟ್ಸ್ v. ಕಾಲಿಯರ್

[ಬದಲಾಯಿಸಿ]

ಪಾರ್ಚ್‌ಮನ್‌ನ ಮಿಸಿಸಿಪ್ಪಿ ರಾಜ್ಯ ಬಂದೀಖಾನೆ ಆಗ ಪಾರ್ಚ್‌ಮನ್ ಫಾರ್ಮ್ ಎಂದು ಹೆಸರಾಗಿತ್ತು. ಇದು ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿಯಲ್ಲಿ ವಹಿಸಿದ ಪಾತ್ರಕ್ಕಾಗಿ ಕೂಡ ಹೆಸರು ಪಡೆದಿದೆ. ೧೯೬೧ರ ವಸಂತಕಾಲದಲ್ಲಿ, ಸ್ವಾತಂತ್ರ್ಯ ಸವಾರರು ದಕ್ಷಿಣಕ್ಕೆ ಆಗಮಿಸಿ, ಸಾರ್ವಜನಿಕ ಸೌಲಭ್ಯಗಳ ವರ್ಣಭೇದ ನೀತಿ ರದ್ದಿನ ಪರೀಕ್ಷೆ ನಡೆಸಿದರು. ಜೂನ್ ಕೊನೆಯಲ್ಲಿ,೧೯೬೩ರ ಸ್ವಾತಂತ್ರ್ಯ ಸವಾರರು ಮಿಸಿಸಿಪ್ಪಿಯ ಜಾಕ್ಸನ್‌ನಲ್ಲಿ ಶಿಕ್ಷೆಗೆ ಗುರಿಯಾದರು.[೬೮] ಅನೇಕ ಮಂದಿಯನ್ನು ಪಾರ್ಚ್‌ಮನ್‌ನ ಮಿಸಿಸಿಪ್ಪಿ ರಾಜ್ಯ ಬಂದೀಖಾನೆಯಲ್ಲಿ ಇರಿಸಲಾಯಿತು. ಮಿಸಿಸಿಪ್ಪಿ ಟ್ರಸ್ಟಿ ಸಿಸ್ಟಮ್ ಬಳಕೆ ಮಾಡಿತು. ಇದೊಂದು ಕೈದಿಗಳ ಶ್ರೇಣೀಕೃತ ವ್ಯವಸ್ಥೆಯಾಗಿದ್ದು, ಇತರೆ ಕೈದಿಗಳ ನಿಯಂತ್ರಣ ಮತ್ತು ಶಿಕ್ಷೆ ಜಾರಿಗೆ ಕೆಲವು ಕೈದಿಗಳನ್ನು ಇದು ಬಳಸಿಕೊಳ್ಳುತ್ತದೆ.[೬೯] ೧೯೭೦ ರ ನಾಗರಿಕ ಹಕ್ಕುಗಳ ವಕೀಲ ರಾಯ್ ಹೇಬರ್ ಕೈದಿಗಳಿಂದ ಹೇಳಿಕೆಗಳನ್ನು ಪಡೆಯವುದನ್ನು ಆರಂಭಿಸಿದರು. ಇದು ತರುವಾಯ ೧೯೬೯ರಿಂದ ೧೯೭೧ರವರೆಗೆ ಮಿಸಿಸಿಪ್ಪಿ ರಾಜ್ಯ ಬಂದೀಖಾನೆಯಲ್ಲಿ ಕೈದಿಗಳು ಅನುಭವಿಸಿದ ಹತ್ಯೆಗಳು, ಅತ್ಯಾಚಾರಗಳು, ದಂಡನೆ ಪೆಟ್ಟುಗಳು ಮತ್ತು ಇತರೆ ದೌರ್ಜನ್ಯಗಳಿಂದ ಕೂಡಿದ ಒಟ್ಟು ಐವತ್ತು ಪುಟಗಳ ವಿವರಗಳನ್ನು ಒಳಗೊಂಡಿತ್ತು. ಗೇಟ್ಸ್ v. ಕಾಲಿಯರ್ (೧೯೭೨) ಎಂದು ಕರೆಯಲಾಗುವ ಲ್ಯಾಂಡ್ ಮಾರ್ಕ್ ಪ್ರಸಂಗದಲ್ಲಿ ಹ್ಯಾಬರ್ ಪ್ರತಿನಿಧಿಸಿದ ನಾಲ್ಕು ಜನ ಕೈದಿಗಳು ಪರ್ಚ್‌ಮನ್ ಫಾರ್ಮ್ ಮೇಲ್ವಿಚಾರಕನ ಮೇಲೆ ಅಮೆರಿಕ ಸಂಯುಕ್ತ ಸಂಸ್ಥಾನದ ಸಂವಿಧಾನದನ್ವಯ ಅವರ ಹಕ್ಕುಗಳನ್ನು ಉಲ್ಲಂಘಿಸಿದಕ್ಕಾಗಿ ಮೊಕದ್ದಮೆಯನ್ನು ಹೂಡಿದರು. ಫೆಡರಲ್ ನ್ಯಾಯಾಧೀಶರಾದ ವಿಲಿಯಂ ಸಿ. ಕೇಡಿ , ಪರ್ಚ್ ಮನ್ ಬಂದೀಖಾನೆ ಕ್ರೂರ ಮತ್ತು ವಿಲಕ್ಷಣವಾದ ಶಿಕ್ಷೆಯನ್ನು ನೀಡುವ ಮೂಲಕ ಕೈದಿಗಳ ನಾಗರಿಕ ಹಕ್ಕನ್ನು ಉಲ್ಲಂಘಿಸಿದೆ ಎಂದು ಬರೆಯುವ ಮೂಲಕ ನಿವಾಸಿಗಳ ಪರವಾಗಿ ತೀರ್ಪು ನೀಡಿದರು. ಅಲ್ಲದೇ ಅವರು ಎಲ್ಲಾ ಸಂವಿಧಾನ ಬಾಹಿರ ಸ್ಥಿತಿಗಳನ್ನು ಮತ್ತು ಅಭ್ಯಾಸಗಳನ್ನು ತಕ್ಷಣವೇ ನಿಲ್ಲಿಸಬೇಕಾಗಿ ಆದೇಶಿಸಿದರು. ಕೈದಿಗಳ ಮೇಲೆ ಮಾಡುತ್ತಿದ್ದ ಜನಾಂಗೀಯ ವರ್ಣಭೇಧವನ್ನು ಕೊನೆಗಾಣಿಸಲಾಯಿತು. ಅಲ್ಲದೇ ಇತರರ ಮೇಲೆ ಕೆಲವು ಕೈದಿಗಳಿಗೆ ಅಧಿಕಾರ ಮತ್ತು ನಿಯಂತ್ರಣವನ್ನು ನೀಡುವ ಟ್ರಸ್ಟೀ ವ್ಯವಸ್ಥೆಯನ್ನು ಕೂಡ ರದ್ದು ಮಾಡಲಾಯಿತು.[೭೦] ನ್ಯಾಯಾಧೀಶರಾದ ಕಿಯಾಡಿಯವರ ಕಟು ತೀರ್ಪಿನ ನಂತರ ಬಂದೀಖಾನೆಯನ್ನು ೧೯೭೨ ರಲ್ಲಿ ನವೀಕರಿಸಲಾಯಿತು. ಅವರ ತೀರ್ಪಿನಲ್ಲಿ : " ಬಂದೀಖಾನೆಯು ಶಿಷ್ಟಾಚಾರದ ಆಧುನಿಕ ಗುಣಮಟ್ಟಗಳಿಗೆ ಅಪಮಾನ" ಎಂದು ಬರೆದಿದ್ದರು. ಇತರ ಸುಧಾರಣೆಗಳೊಂದಿಗೆ ವಸತಿಗಳನ್ನು ಮಾನವ ವಾಸಕ್ಕೆ ಯೋಗ್ಯವಾಗಿಸಲಾಯಿತು ಹಾಗು "ಟ್ರಸ್ಟಿ"ಗಳ ವ್ಯವಸ್ಥೆಯನ್ನು (ಈ ವ್ಯವಸ್ಥೆಯಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿಗಳಿಗೆ ಬಂದೂಕುಗಳನ್ನು ಕೊಟ್ಟು ಇತರ ಕೈದಿಗಳನ್ನು ಕಾವಲು ಕಾಯಲು ಬಿಡುತ್ತಿದ್ದರು)ರದ್ದುಗೊಳಿಸಲಾಯಿತು.[೭೧] ಉತ್ತರದ ಮತ್ತು ಪಶ್ಚಿಮದ ರಾಜ್ಯಗಳ ಬಂದೀಖಾನೆಗಳಲ್ಲಿ , ಕರಿಯ ಕೈದಿಗಳು ಅಸಾಮಂಜ್ಯಸ ಪ್ರಮಾಣದಲ್ಲಿದ್ದರು. ಅಲ್ಲದೇ ಬಿಳಿಯ ಜೈಲು ಅಧಿಕಾರಿಗಳು ಇವರನ್ನು ಎರಡನೆ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತಿದ್ದರು. ಮರಣದಂಡನೆ ವಿಧಿಸಲಾದ ಕೈದಿಗಳಲ್ಲೂ ಕೂಡ ಕರಿಯರು ಅಸಾಮಂಜ್ಯಸ ಪ್ರಮಾಣದಲ್ಲಿದ್ದರು. ಎಲ್ಡ್ ರಿಡ್ಜ್ ಕ್ಲೆವರ್ ರ ಸೋಲ್ ಆನ್ ಐಸ್ ಪುಸ್ತಕವನ್ನು ಕ್ಯಾಲಿಫೋರ್ನಿಯಾ ಬಂದೀಖಾನೆ ವ್ಯವಸ್ಥೆಯಲ್ಲಿ ಅವರಿಗಾದ ಅನುಭವದ ಮೇಲೆ ಬರೆದಿದ್ದರು. ಇದು ಕರಿಯರಲ್ಲಿ ಉಗ್ರವಾದವನ್ನು ಉದ್ದೀಪಿಸಿತು.[೭೨]

ಶೀತಲ ಸಮರ

[ಬದಲಾಯಿಸಿ]

ಈ ವರ್ಷಗಳ ಕಾಲಾವಧಿಯಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಫೆಡರಲ್ ಸರ್ಕಾರದ ಕ್ರಮಗಳಿಗೆ ಅಂತರರಾಷ್ಟ್ರೀಯ ಸನ್ನಿವೇಶವಿತ್ತು. ಇದು ಯುರೋಪ್‌ನಲ್ಲಿ ತನ್ನ ಸ್ಥಾನಮಾನವನ್ನು ಉಳಿಸಿಕೊಳ್ಳಬೇಕಿತ್ತು. ಅಲ್ಲದೇ ತೃತೀಯ ಪ್ರಪಂಚದ ಜನರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿಸುವ ಅಗತ್ಯವಿತ್ತು.[೭೩] ಕೋಲ್ಡ್ ವಾರ್ ಸಿವಿಲ್ ರೈಟ್ಸ್: ರೇಸ್ ಅಂಡ್ ದಿ ಇಮೇಜ್ ಆಫ್ ಅಮೇರಿಕನ್ ಡೆಮಾಕ್ರಸಿ ಯಲ್ಲಿ , ಇತಿಹಾಸ ತಜ್ಞೆ ಮೇರಿ ಎಲ್. ಡ್ಯೂಡ್ ಜೈಕ್, ಶೀತಲ ಸಮರದ ಸೈದ್ಧಾಂತಿಕ ಹೋರಾಟದಲ್ಲಿ, ಕಮ್ಯೂನಿಸ್ಟ್ ಟೀಕಾಕಾರರು, ಅಮೆರಿಕಾ ಸಂಯುಕ್ತ ಸಂಸ್ಥಾನದ ಅನೇಕ ನಾಗರಿಕರು ವರ್ಣಭೇಧ ನೀತಿಗೆ ಬಲಿಯಾಗಿರುವಾಗ ಅದು ತನ್ನನ್ನು "ಮುಕ್ತ ಪ್ರಪಂಚದ ನಾಯಕ" ನೆಂಬಂತೆ ಚಿತ್ರಿಸಿಕೊಂಡಿರುವ ಬೂಟಾಟಿಕೆಯನ್ನು ಸುಲಭವಾಗಿ ಗುರುತಿಸಬಲ್ಲರು ಎಂಬುದನ್ನು ತೋರಿಸಿದ್ದಾರೆ. ಅವರು ಅಮೆರಿಕ ಸಂಯುಕ್ತ ಸಂಸ್ಥಾನ ನಾಗರಿಕ ಹಕ್ಕುಗಳ ಕಾಯ್ದೆ ರಚನೆಗೆ ಸರ್ಕಾರ ಬೆಂಬಲ ಸೂಚಿಸುವಂತೆ ಮಾಡಲು ಪ್ರಮುಖ ಕಾರಣವಾಗಿದೆ ಎಂದು ವಾದಿಸಿದ್ದಾರೆ.

ಸಾಕ್ಷ್ಯಚಿತ್ರಗಳು

[ಬದಲಾಯಿಸಿ]
 • ಫ್ರೀಡಮ್ ಆನ್ ಮೈ ಮೈಂಡ್ , ಇದು ೧೧೦ ನಿಮಿಷಗಳ ಸಾಕ್ಷ್ಯಚಿತ್ರವಾಗಿದ್ದು, ೧೯೯೪ ರಲ್ಲಿ ಬಿಡುಗಡೆಮಾಡಲಾಯಿತು. ನಿರ್ಮಾಪಕ/ನಿರ್ದೇಶಕರು: ಕಾನಿ ಫೀಲ್ಡ್ ಮತ್ತು ಮರ್ಲಿನ್ ಮಲ್‌ಫೋರ್ಡ್, ೧೯೯೪ ರಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಅಕಾಡಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತು.
 • ಐಸ್ ಆನ್ ದಿ ಪ್ರೈಸ್ , PBS ದೂರದರ್ಶನ ಸರಣಿಗಳು.
 • ಡೇರ್ ನಾಟ್ ವಾಕ್ ಅಲೋನ್ , ಫ್ಲೋರಿಡಾದ ಸೇಂಟ್ ಆಗಸ್ಟಿನ್‌ನಲ್ಲಿ ನಡೆದ ನಾಗರಿಕ ಹಕ್ಕುಗಳ ಚಳವಳಿಯ ಬಗ್ಗೆ ಮಾಡಲಾದ ಸಾಕ್ಷ್ಯಚಿತ್ರ. ೨೦೦೯ ರಲ್ಲಿ NAACP ಇಮೇಜ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತು.
 • ಕ್ರಾಸಿಂಗ್ ಇನ್ ಸೇಂಟ್ ಅಗಸ್ಟೀನ್ , ಇದನ್ನು ೨೦೧೦ ರಲ್ಲಿ ಆಂಡ್ರೀವ್ ಯಂಗ್ ನಿರ್ಮಿಸಿದ್ದಾರೆ. ೧೯೬೪ ರಲ್ಲಿ ಸೇಂಟ್ ಅಗಸ್ಟೀನ್ ನಲ್ಲಿ ನಡೆದ ನಾಗರಿಕ ಹಕ್ಕುಗಳ ಚಳವಳಿಯಲ್ಲಿ ಇವರಿಗೆ ಅಹಿತಕರ ಅನುಭವವಾಗಿತ್ತು. AndrewYoung.Org. ನಿಂದ ಮಾಹಿತಿ ದೊರೆಯುತ್ತದೆ.Org.

ಕಾರ್ಯಕರ್ತ ಸಂಘಟನೆಗಳು

[ಬದಲಾಯಿಸಿ]
ರಾಷ್ಟ್ರೀಯ/ಪ್ರಾದೇಶಿಕ ನಾಗರಿಕ ಹಕ್ಕು ಸಂಘಟನೆಗಳು
 • ಕಾಂಗ್ರೆಸ್ ಆಫ್ ರೇಷಿಯಲ್ ಇಕ್ವಾಲಿಟಿ (CORE)
 • ನ್ಯಾಷನಲ್ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸಡ್ಮೆಂಟ್ ಆಫ್ ಕಲರ್ಡ್ ಪೀಪಲ್ (NAACP)
 • ಸದರನ್ ಕ್ರಿಶ್ಚಿಯನ್ ಲೀಡರ್ಷಿಪ್ ಕಾನ್‌ಫರೆನ್ಸ್ (SCLC)
 • ಸ್ಟೂಡೆಂಟ್- ನಾನ್ ವೈಲೆಂಟ್ ಕೊಆರ್ಡಿನೇಟಿಂಗ್ ಕಮಿಟಿ (SNCC)
 • ಸದರನ್ ಕಾನ್ಫರೆನ್ಸ್ ಎಜುಕೇಷನಲ್ ಫಂಡ್ (SCEF)
 • ನ್ಯಾಷನಲ್ ಕೌನ್ಸಿಲ್ ಆಫ್ ನಿಗ್ರೋ ವಿಮೆನ್ (NCNW)
 • ಲೀಡರ್ ಷಿಪ್ ಕಾನ್ಫರೆನ್ಸ್ ಆಫ್ ಸಿವಿಲ್ ರೈಟ್ಸ್ (LCCR)
 • ಮೆಡಿಕಲ್ ಕಮಿಟೀ ಫಾರ್ ಹ್ಯೂಮನ್ ರೈಟ್ಸ್ (MCHR)
 • ಸದರನ್ ಸ್ಟೂಡೆಂಟ್ ಆರ್ಗನೈಸಿಂಗ್ ಕಮಿಟಿ(SSOC)
 • ಕಾಮನ್ ಗ್ರೌಂಡ್ ರಿಲೀಫ್
ರಾಷ್ಟ್ರೀಯ ಆರ್ಥಿಕ ಅಧಿಕಾರ ಪಡೆದ ಸಂಘಟನೆಗಳು
 • ಅರ್ಬನ್ ಲೀಗ್
 • ಆಪರೇಷನ್ ಬ್ರೆಡ್ ಬಾಸ್ಕೆಟ್
ಸ್ಥಳೀಯ ನಾಗರಿಕ ಹಕ್ಕು ಸಂಘಟನೆಗಳು
 • ರೀಜನಲ್ ಕೌನ್ಸಿಲ್ ಆಫ್ ನಿಗ್ರೋ ಲೀಡರ್ಷಿಪ್ (ಮಿಸಿಸಿಪ್ಪಿ)
 • ಕೌನ್ಸಿಲ್ ಆಫ್ ಫೆಡರೇಟೆಡ್ ಆರ್ಗನೈಸೇಷನ್ಸ್ (ಮಿಸಿಸಿಪ್ಪಿ)
 • ವಿಮೆನ್ಸ್ ಪೊಲಿಟಿಕಲ್ ಕೌನ್ಸಿಲ್ (ಮೊಂಟ್ಗೊಮೆರಿ, AL)
 • ಮೊಂಟ್ಗೊಮೇರಿ ಇಂಪ್ರೂಮೆಂಟ್ ಅಸೋಸಿಯೇಷನ್ (ಮೊಂಟ್ಗೊಮೇರಿ, AL)
 • ಆಲ್ಬನಿ ಮೂಮೆಂಟ್ (ಆಲ್ಬನಿ, GA)
 • ವರ್ಜೀನಿಯಾ ಸ್ಟೂಡೆಂಟ್ ಸಿವಿಲ್ ರೈಟ್ಸ್ ಕಮಿಟಿ

ಇವನ್ನೂ ಗಮನಿಸಿ‌

[ಬದಲಾಯಿಸಿ]

ಟೆಂಪ್ಲೇಟು:Portal box

ಸಾಮಾನ್ಯ

[ಬದಲಾಯಿಸಿ]
 • ಆಫ್ರಿಕನ್-ಅಮೆರಿಕನ್ ಮಾನವ ಹಕ್ಕುಗಳ ಚಳವಳಿ (೧೮೯೬–೧೯೫೪)
 • ಆಫ್ರಿಕನ್ ಅಮೇರಿಕನ್ ನಾಗರಿಕ ಹಕ್ಕುಗಳ ಚಳವಳಿಯ ಘಟನೆಗಳ ಅನುಕ್ರಮ
 • ನಾಗರಿಕ ಹಕ್ಕುಗಳ ಚಳವಳಿಯ ಅನುಭವಿಗಳು
 • ೯೯೮೧ರ ಎಕ್ಸಿಕ್ಯೂಟಿವ್ ಆರ್ಡರ್ (ಜಾರಿಗೆ ತರುವ ಅಧಿಕಾರವಿರುವ ಆದೇಶ), ಅಮೆರಿಕಾ ಸಂಯುಕ್ತ ಸಂಸ್ಥಾನದ ಸೈನ್ಯದಲ್ಲಿ ವರ್ಣ ಬೇಧ ನೀತಿ ಜಾರಿಯಲ್ಲಿರುವ ಘಟಕಗಳನ್ನು ಕೊನೆಗಾಣಿಸಲಾಯಿತು.
 • ಸೆಯೇಟಲ್ ನ ನಾಗರಿಕ ಹಕ್ಕುಗಳು ಮತ್ತು ಕಾರ್ಮಿಕರ ಇತಿಹಾಸ ಯೋಜನೆ
 • ಅಮೇರಿಕನ್ ನಾಗರಿಕ ಹಕ್ಕುಗಳ ಚಳವಳಿಯ ಛಾಯಾಚಿತ್ರಕಾರರು
 • ಉತ್ತರ ಐರ್ಲೆಂಡ್ ನಾಗರಿಕ ಹಕ್ಕುಗಳ ಸಂಘಟನೆ—ಆಫ್ರಿಕನ್-ಅಮೆರಿಕನ್ ನಾಗರಿಕ ಹಕ್ಕುಗಳ ಚಳವಳಿಯಿಂದ ಸ್ಫೂರ್ತಿಗೊಂಡಿದೆ.
 • ೧೯೬೮ರ ಚಳವಳಿಗಳು

ಕಾರ್ಯಕರ್ತರು

[ಬದಲಾಯಿಸಿ]

ಸಂಬಂಧಿತ ಕಾರ್ಯಕರ್ತರು ಮತ್ತು ಕಲಾವಿದರು

[ಬದಲಾಯಿಸಿ]

ಉಲ್ಲೇಖಗಳು‌

[ಬದಲಾಯಿಸಿ]
 1. ೧.೦ ೧.೧ ೧.೨ ೧.೩ ೧.೪ ಸಿವಿಲ್ ರೈಟ್ಸ್ ಆಕ್ಟ್ ಆಫ್ 1964
 2. ಬ್ಲ್ಯಾಕ್-ಅಮೇರಿಕನ್ ರೆಪ್ರೆಸೆಂಟೇಟೇವ್ಸ್ ಅಂಡ್ ಸೆನೆಟರ್ಸ್ ಬೈ ಕಾಂಗ್ರೆಸ್, 1870–ಪ್ರೆಸೆಂಟ್ Archived 2009-01-01 ವೇಬ್ಯಾಕ್ ಮೆಷಿನ್ ನಲ್ಲಿ.—U.S. ಹೌಸ್ ಆಫ್ ರೆಪ್ರೆಸೆಂಟೇಟೀವ್ಸ್
 3. ಸಿ. ವ್ಯಾನ್ ವುಡ್ ವರ್ಡ್, ದಿ ಸ್ಟ್ರೇಂಜ್ ಕರಿಯರ್ ಆಫ್ ಜಿಮ್ ಕ್ರೌವ್ , ಮೂರನೇ ರೆವೆರೆಂಡ್. ed. (ಆಕ್ಸ್ ಫರ್ಡ್ ಯುನಿವರ್ಸಿಟಿ ಪ್ರೆಸ್, ೧೯೭೪), pp. ೬೭–೧೦೯.
 4. ಬರ್ಮಿಂಗ್ ಹ್ಯಾಮ್ ಸೆಗ್ರೆಗೇಶನ್ ಲಾಸ್[ಶಾಶ್ವತವಾಗಿ ಮಡಿದ ಕೊಂಡಿ] ~ ನಾಗರಿಕ ಹಕ್ಕುಗಳ ಚಳವಳಿಯ ಅನುಭವಿಗಳು
 5. "ದಿ ಟಾಲ್ ಹ್ಯಾಸ್ಸೆ ಬಸ್ ಬಾಯ್ಕಾಟ್—ಫಿಫ್ಟಿ ಇಯರ್ಸ್ ಲೇಟರ್," ದಿ ಟಾಲ್ ಹ್ಯಾಸ್ಸೆ ಡೆಮೊಕ್ರಾಟ್ , ೨೦೦೬ ರ ಮೇ ೨೧,
 6. ಕ್ಲರ್ಮನ್, ಮೈಕೆಲ್ ಜೆ.,ಬ್ರೌನ್ v. ಬೋರ್ಡ್ ಆಫ್ ಎಜುಕೇಶನ್ ಅಂಡ್ ದಿ ಸಿವಿಲ್ ರೈಟ್ಸ್ ಮೂಮೆಂಟ್ [ವಿದ್ಯುನ್ಮಾನ ಮೂಲ] : ಜಿಮ್ ಕ್ರೌವ್ ರಿಂದ ನಾಗರಿಕ ಹಕ್ಕುಗಳ ಸಂಕ್ಷಿಪ್ತಗೊಳಿಸಲಾದ ಆವೃತ್ತಿ : ದಿ ಸುಪ್ರೀಮ್ ಕೋರ್ಟ್ ಅಂಡ್ ದಿ ಸ್ಟ್ರಗಲ್ ಫಾರ್ ದಿ ರೇಷಿಯಲ್ ಇಕ್ವಾಲಿಟಿ, ಆಕ್ಸ್ ಫರ್ಡ್ ; ನ್ಯೂಯಾರ್ಕ್ : ಆಕ್ಸ್ ಫರ್ಡ್ ಯುನಿವರ್ಸಿಟಿ ಪ್ರೆಸ್, ೨೦೦೭, p.೫೫
 7. ರೈಸಾ ಎಲ್. ಗೊಲುಲಿಬಫ್, ದಿ ಲಾಸ್ಟ್ ಪ್ರಾಮಿಸ್ ಆಫ್ ಸಿವಿಲ್ ರೈಟ್ಸ್ , ಹಾರ್ವರ್ಡ್ ಯುನಿವರ್ಸಿಟಿ ಪ್ರೆಸ್, MA:ಕೇಂಬ್ರಿಜ್, ೨೦೦೭, p. ೨೪೯–೨೫೧
 8. ಬ್ರೌನ್ ವಿ ಬೋರ್ಡ್ ಆಫ್ ಎಜುಕೇಶನ್ ಡಿಸಿಷನ್ ~ ನಾಗರಿಕ ಹಕ್ಕುಗಳ ಚಳವಳಿಯ ಅನುಭವಿಗಳು
 9. ಡಬ್ಲೂ. ಚ್ಯಾಫೆ, ದಿ ಅನ್ ಫಿನಿಷ್ದ್ ಜರ್ನಿ
 10. ದಿ ಲಿಟ್ಟಲ್ ರಾಕ್ ನೈನ್ ~ ನಾಗರಿಕ ಹಕ್ಕುಗಳ ಚಳವಳಿ ಅನುಭವಿಗಳು
 11. ಮಿನಿಜೀನ್ ಬ್ರೌನ್ ಟಿಕಿ, America.gov
 12. ಫಸ್ಟ್ ಸದರನ್ ಸಿಟ್-ಇನ್, ಗ್ರೀನ್ಸ್ ಬೊರೊ NC ~ ನಾಗರಿಕ ಹಕ್ಕುಗಳ ಚಳವಳಿ ಅನುಭವಿಗಳು
 13. Chafe, William Henry (1980). Civilities and civil rights : Greensboro, North Carolina, and the Black struggle for freedom. New York: Oxford University Press. p. 81. ISBN 0-19-502625-X. {{cite book}}: Cite has empty unknown parameter: |coauthors= (help)
 14. "ರಿಚ್ ಮಂಡ್, ವರ್ಜೀನಿಯಾ". Archived from the original on 2009-02-11. Retrieved 2011-03-21.
 15. ಅಟ್ಲಾಂಟಾ ಸಿಟ್-ಇನ್ಸ್ – ನಾಗರಿಕ ಹಕ್ಕುಗಳ ಅನುಭವಿಗಳು
 16. ೧೬.೦ ೧೬.೧ ಅಟ್ಲಾಂಟಾ ಸಿಟ್-ಇನ್ಸ್ Archived 2013-01-17 ವೇಬ್ಯಾಕ್ ಮೆಷಿನ್ ನಲ್ಲಿ. – ದಿ ನ್ಯೂ ಜಾರ್ಜಿಯಾ ಎನ್ ಸೈಕ್ಲಪೀಡಿಯಾ
 17. "America's First Sit-Down Strike: The 1939 Alexandria Library Sit-In". City of Alexandria. Retrieved 2010-02-11.
 18. Davis, Townsend (1998). Weary Feet, Rested Souls: A Guided History of the Civil Rights Movement. New York: W. W. Norton & Company. p. 311. ISBN 0-393-04592-7. {{cite book}}: Cite has empty unknown parameter: |coauthors= (help)
 19. ನ್ಯಾಷ್ ವಿಲ್ಲೆ ಸ್ಟೂಡೆಂಟ್ ಮೂಮೆಂಟ್ ~ ನಾಗರಿಕ ಹಕ್ಕುಗಳ ಚಳವಳಿ ಅನುಭವಿಗಳು
 20. ಆನ್ ಅಪೀಲ್ ಫಾರ್ ಹ್ಯೂಮನ್ ರೈಟ್ಸ್ Archived 2010-04-01 ವೇಬ್ಯಾಕ್ ಮೆಷಿನ್ ನಲ್ಲಿ. – ಕಮಿಟಿ ಆನ್ ದಿ ಅಪೀಲ್ ಫಾರ್ ಹ್ಯೂಮನ್ ರೈಟ್ಸ್(COAHR)
 21. "ಅಟ್ಲಾಂಟ ಸಿಟ್-ಇನ್ಸ್". Archived from the original on 2013-01-17. Retrieved 2011-03-21.
 22. ದಿ ಕಮಿಟಿ ಆನ್ ದಿ ಅಪೀಲ್ ಫಾರ್ ಹ್ಯೂಮನ್ ರೈಟ್ಸ್ (COAHR) ಅಂಡ್ ದಿ ಅಟ್ಲಾಂಟ ಸ್ಟೂಡೆಂಟ್ ಮೂಮೆಂಟ್t Archived 2012-05-13 ವೇಬ್ಯಾಕ್ ಮೆಷಿನ್ ನಲ್ಲಿ. – ದಿ ಕಮಿಟಿ ಆನ್ ದಿ ಅಪೀಲ್ ಫಾರ್ ಹ್ಯೂಮನ್ ರೈಟ್ಸ್ ಅಂಡ್ ದಿ ಅಟ್ಲಾಂಟಾ ಸ್ಟೂಡೆಂಟ್ ಮೂಮೆಂಟ್.
 23. ಸ್ಟೂಡೆಂಟ್ ಬಿಗಿನ್ ಟು ಲೀಡ್ Archived 2016-01-13 ವೇಬ್ಯಾಕ್ ಮೆಷಿನ್ ನಲ್ಲಿ. – ದಿ ನ್ಯೂ ಜಾರ್ಜಿಯಾ ಎನ್‌ಸೈಕ್ಲೋಪೀಡಿಯಾ—ಅಟ್ಲಾಂಟ ಸಿಟ್-ಇನ್ಸ್
 24. Carson, Clayborne (1981). In Struggle: SNCC and the Black Awakening of the 1960s. Cambridge: Harvard University Press. p. 311. ISBN 0-674-44727-1. {{cite book}}: Cite has empty unknown parameter: |coauthors= (help)
 25. ಸ್ಟೂಡೆಂಟ್ ನಾನ್ ವೈಲೆಂಟ್ ಕೊಆರ್ಡಿನೇಟಿಂಗ್ ಕಮಿಟಿ ~ ನಾಗರಿಕ ಹಕ್ಕುಗಳ ಚಳವಳಿಯ ಅನುಭವಿಗಳು
 26. ಫ್ರೀಡಮ್ ರೈಡ್ಸ್ ~ ನಾಗರಿಕ ಹಕ್ಕುಗಳ ಚಳವಳಿಯ ಅನುಭವಿಗಳು
 27. ವೊಟರ್ ರಿಜಿಸ್ಟ್ರೇಷನ್ ಅಂಡ್ ಡೈರೆಕ್ಟ್-ಆಕ್ಷನ್ ಇನ್ ಮ್ಯಾಕ್ ಕಾಂಬ್ MS ~ ನಾಗರಿಕ ಹಕ್ಕುಗಳ ಚಳವಳಿ ಅನುಭವಿಗಳು
 28. ಕೌನ್ಸಿಲ್ ಆಫ್ ಫೆಡರೇಟೆಡ್ ಆರ್ಗನೈಸೇಷನ್ ಫಾರ್ಮಡ್ ಇನ್ ಮಿಸಿಸಿಪ್ಪಿ ~ ನಾಗರಿಕ ಹಕ್ಕುಗಳ ಚಳವಳಿಯ ಅನುಭವಿಗಳು
 29. ಮಿಸಿಸಿಪ್ಪಿ ವೋಟರ್ ರೆಜಿಸ್ಟ್ರೇಷನ್—ಗ್ರೀನ್ ವುಡ್ ~ ನಾಗರಿಕ ಹಕ್ಕುಗಳ ಚಳವಳಿಯ ಅನುಭವಿಗಳು
 30. ೩೦.೦ ೩೦.೧ ದಿ ಫಂಡಿಂಗ್ ಆಫ್ ಸೈನ್ಟಿಫಿಕ್ ರೇಸಿಸಮ್: ವಿಕ್ ಲಿಫ್ ಡ್ರೇಪರ್ ಅಂಡ್ ದಿ ಪಯೊನಿಯರ್ ಫಂಡ್ ಬೈ ವಿಲಿಯಂ ಹೆಚ್, . ಟಕರ್, ಯುನಿವರ್ಸಿಟಿ ಆಫ್ ಇಲಿನಾಯ್ಸ್ ಪ್ರೆಸ್ (೨೦೦೭ ರ ಮೇ ೩೦), pp ೧೬೫–೬೬.
 31. ನಿಯೋ-ಕಾನ್‌ಫೆಡರಸಿ: ಅ ಕ್ರಿಟಿಕಲ್ ಇಂಟರ್ಡಕ್ಷನ್ , ಇವೊನ್ ಹೇಗ್ (ಸಂಪಾದಕ), ಹ್ಯೇಡಿ ಬೆರಿಚ್ (ಸಂಪಾದಕ), ಎಡ್ವರ್ಡ್ ಹೆಚ್. ಸೆಬೆಸ್ಟಾ (ಸಂಪಾದಕ) ರವರಿಂದ, ಯುನಿವರ್ಸಿಟಿ ಆಫ್ ಟೆಕ್ಸಾಸ್ ಪ್ರೆಸ್ (೨೦೦೮ ರ ಡಿಸೆಂಬರ್ ೧) pp. ೨೮೪–೮೫
 32. ೩೨.೦ ೩೨.೧ "A House Divided | Southern Poverty Law Center". Splcenter.org. Archived from the original on 2010-10-28. Retrieved 2010-10-30.
 33. ೩೩.೦ ೩೩.೧ ಮೆಡ್ ಗರ್ ಎವರ್ಸ್ ಜೆನ್ನಿ ಬ್ರೌನ್ ರವರಿಂದ, ಹೊಲೊವೇ ಹೌಸ್ ಪಬ್ಲಿಷಿಂಗ್, ೧೯೯೪, pp. ೧೨೮–೧೩೨.
 34. ಕ್ಯಾರಿಯಿಂಗ್ ದಿ ಬರ್ಡನ್: ದಿ ಸ್ಟೋರಿ ಆಫ್ ಕ್ಲೈಡ್ ಕೆನ್ನಾರ್ಡ್ Archived 2007-10-09 ವೇಬ್ಯಾಕ್ ಮೆಷಿನ್ ನಲ್ಲಿ.. ಫ್ರಮ್: ಡಿಸ್ಟ್ರಿಕ್ಟ್ ೧೨೫.k೧೨.il.us. ೨೦೦೭ರ ನವೆಂಬರ್‌ ೫ರಂದು ಮರುಸಂಪಾದಿಸಲಾಯಿತು.
 35. "ಆರ್ಕೈವ್ ನಕಲು". Archived from the original on 2009-09-17. Retrieved 2021-08-09.
 36. ಜೇಮ್ಸ್ ಮೆರೆಡಿತ್ ಇಂಟಿಗ್ರೇಟ್ಸ್ ಒಲೆ ಮಿಸ್ ~ ನಾಗರಿಕ ಹಕ್ಕುಗಳ ಚಳವಳಿ ಅನುಭವಿಗಳು
 37. ಆಲ್ಬೆನಿ GA, ಮೂಮೆಂಟ್ ~ ನಾಗರಿಕ ಹಕ್ಕುಗಳ ಚಳವಳಿ ಅನುಭವಿಗಳು
 38. ದಿ ಬರ್ಮಿಂಗ್ ಹ್ಯಾಮ್ ಕಂಪೈನ್ ~ ನಾಗರಿಕ ಹಕ್ಕುಗಳ ಚಳವಳಿ ಅನುಭವಿಗಳು
 39. ಲೆಟರ್ ಫ್ರಮ್ ಅ ಬರ್ಮಿಂಗ್ ಹ್ಯಾಮ್ ಜೈಲ್ Archived 2008-04-07 ವೇಬ್ಯಾಕ್ ಮೆಷಿನ್ ನಲ್ಲಿ. ~ ಕಿಂಗ್ ರಿಸರ್ಚ್ ಅಂಡ್ ಎಜುಕೇಶನ್ ಇನ್ ಸ್ಟಿಟ್ಯೂಟ್ ಅಟ್ ಸ್ಟ್ಯಾನ್ ಫೋರ್ಡ್ ಯುನಿವರ್ಸಿಟಿ.
 40. ಬಾಸ್, ಎಸ್. ಜಿನಾಥನ್(೨೦೦೧) ಬ್ಲೆಸ್ಡ್ ಆರ್ ದಿ ಪೀಸ್ ಮೇಕರ್ಸ್: ಮಾರ್ಟಿನ್‌ ಲೂಥರ್ ಕಿಂಗ್, ಜೂ., ಏಯೈಟ್ ವೈತ್ ರಿಲೀಜಿಯಸ್ ಲೀಡರ್ಸ್, ಅಂಡ್ ದಿ "ಲೆಟರ್ ಫ್ರಮ್ ಬರ್ಮಿಂಗ್ ಹ್ಯಾಮ್ ಜೈಲ್". ಬ್ಯಾಟನ್ ರೋಗ್: LSU ಪ್ರೆಸ್. ISBN ೦-೮೦೭೧-೨೬೫೫-೧
 41. ಸ್ಟ್ಯಾಂಡಿಗ್ ಇನ್ ದಿ ಸ್ಕೂಲ್ ಹೌಸ್ ಡೋರ್ ~ ನಾಗರಿಕ ಹಕ್ಕುಗಳ ಚಳವಳಿಯ ಅನುಭವಿಗಳು
 42. "ರೇಡಿಯೋ ಅಂಡ್ ಟೆಲಿವಿಷನ್ ರಿಪೋರ್ಟ್ ಟು ದಿ ಅಮೇರಿಕನ್ ಪೀಪಲ್ ಆನ್ ಸಿವಿಲ್ ರೈಟ್ಸ್," ಜೂನ್೧೯೬೩ ರ ಜೂನ್ ೧೧ ಟ್ರಾನ್ಸ್ ಕ್ರಿಪ್ಟ್ ಫ್ರಮ್ ದಿ JFK ಲೈಬ್ರರಿ. Archived 2007-02-05 ವೇಬ್ಯಾಕ್ ಮೆಷಿನ್ ನಲ್ಲಿ.
 43. ಮೆಡ್ ಗರ್ ಎವರ್ಸ್, ಎ ವರ್ತ್ ವೈಲ್ ಆರ್ಟಿಕಲ್, ಆನ್ ದಿ ಮಿಸಿಸಿಪ್ಪಿ ರೈಟರ್ಸ್ ಪೇಜ್ , ಮಿಸಿಸಿಪ್ಪಿ ವಿಶ್ವವಿದ್ಯಾನಿಲಯದ ಇಂಗ್ಲೀಷ್ ವಿಭಾಗದ ಅಂತರಜಾಲ ತಾಣ
 44. ಮೆಡ್ಗರ್ ಎವರ್ಸ್ ಅಸೋಸಿಯೇಷನ್ ~ ನಾಗರಿಕ ಹಕ್ಕುಗಳ ಚಳವಳಿಯ ಅನುಭವಿಗಳು
 45. ೪೫.೦ ೪೫.೧ ಸಿವಿಲ್ ರೈಟ್ಸ್ ಬಿಲ್ ಸಬ್ಮಿಟೆಡ್, ಅಂಡ್ ಡೇಟ್ ಆಫ್ JFK ಮರ್ಡರ್, ಪ್ಲಸ್ ಗ್ರಾಫಿಕ್ ಇವೆಂಟ್ ಆನ್ ದಿ ಮಾರ್ಚ್ ಆನ್ ವಾಷಿಂಗ್ಟನ್ . Archived 2007-10-12 ವೇಬ್ಯಾಕ್ ಮೆಷಿನ್ ನಲ್ಲಿ. ಇದು ಅಬ್ಬೆವಿಲ್ಲೆ ಪ್ರೆಸ್ ಅಂತರಜಾಲ ತಾಣ. ದಿ ಸಿವಿಲ್ ರೈಟ್ಸ್ ಮೂಮೆಂಟ್ ‌ ಪುಸ್ತಕದಿಂದ ದೊಡ್ಡ ಮಾಹಿತಿ ನೀಡುವ ಲೇಖನ (ISBN ೦-೭೮೯೨-೦೧೨೩-೨).
 46. ೪೬.೦ ೪೬.೧ "ಆರ್ಕೈವ್ ನಕಲು". Archived from the original on 2010-03-02. Retrieved 2011-03-21.
 47. ೪೭.೦ ೪೭.೧ ದಿ ಮಿಸಿಸಿಪ್ಪಿ ಮೂಮೆಂಟ್ ಅಂಡ್ ದಿ MFDP ~ ನಾಗರಿಕ ಹಕ್ಕುಗಳ ಚಳವಳಿಯ ಅನುಭವಿಗಳು
 48. ಮಿಸಿಸಿಪ್ಪಿ: ಸಬ್ ವರ್ಷನ್ ಆಫ್ ದಿ ರೈಟ್ ಟು ವೋಟ್ ~ ನಾಗರಿಕ ಹಕ್ಕುಗಳ ಚಳವಳಿಯ ಅನುಭವಿಗಳು
 49. McAdam, Doug (1988). Freedom Summer. Oxford University Press. ISBN 0-19-504367-7.
 50. Carson, Clayborne (1981). In Struggle: SNCC and the Black Awakening of the 1960s. Harvard University Press.
 51. ವೆಟರನ್ಸ್ ರೋಲ್ ಕಾಲ್ ~ ನಾಗರಿಕ ಹಕ್ಕುಗಳ ಚಳವಳಿಯ ಅನುಭವಿಗಳು
 52. ಫ್ರೀಡಮ್ ಬ್ಯಾಲೋಟ್ ಇನ್ MS ~ ನಾಗರಿಕ ಹಕ್ಕುಗಳ ಚಳವಳಿಯ ಅನುಭವಿಗಳು
 53. MLKಸ್ ನೋಬೆಲ್ ಪೀಸ್ ಪ್ರೈಸ್ ಅಕ್ಸೆಪ್ಟೆನ್ಸ್ ಸ್ಪೀಚ್ ೧೯೬೪ ರ ಡಿಸೆಂಬರ್ ೧೦
 54. "Coretta Scott King". Spartacus.schoolnet.co.uk. Archived from the original on 2010-07-05. Retrieved 2010-10-30.
 55. ಬಾಬ್ ಸ್ಪಿವ್ಯಾಕ್, ಇಂಟರ್ವ್ಯೂ ಆಫ್ ದಿ ಅಟರ್ನಿ ಜನರಲ್, ೧೯೬೨ ರ ಮೇ ೧೨
 56. ಸ್ಚೆಲ್ ಸಿಂಗರ್, ಆರ್ಥರ್Jr, ರಾಬರ್ಟ್ ಕೆನಡಿ ಅಂಡ್ ಹಿಸ್ ಟೈಮ್ಸ್ (೨೦೦೨)
 57. ಮಾರ್ಟಿನ್‌ ಲೂಥರ್ ಕಿಂಗ್, ಜೂ. ನೇಷನ್ ೧೯೬೨ ರ ಮಾರ್ಚ್ ೩
 58. Michael E. Eidenmuller (1963-06-11). "John F. Kennedy - Civil Rights Addess". American Rhetoric. Retrieved 2010-10-30.
 59. "Ripple of Hope in the Land of Apartheid: Robert Kennedy in South Africa, June 1966". Archived from the original on 2005-03-13. Retrieved 2011-03-21.
 60. ಫ್ರಮ್ ಸ್ವಸ್ಥಿಕಾ ಟು ಜಿಮ್ ಕ್ರೌವ್ —PBS ಸಾಕ್ಷ್ಯಚಿತ್ರ
 61. ಕ್ಯಾನಾಟೋ, ವಿನ್ ಸೆಂಟ್ "ದಿ ಅನ್‌ಗವರ್ನೇಬಲ್ ಸಿಟಿ: ಜಾನ್ ಲಿಂಡ್ಸೆ ಅಂಡ್ ಹಿಸ್ ಸ್ಟ್ರಗಲ್ ಟು ಸೇವ್ ನ್ಯೂಯಾರ್ಕ್" ಬೆಟರ್ ಬುಕ್ಸ್, ೨೦೦೧. ISBN ೦-೪೬೫-೦೦೮೪೩-೭
 62. ನೋ ಪ್ಲೇಸ್ ಲೈಕ್ ಹೋಮ್ Archived 2011-06-04 ವೇಬ್ಯಾಕ್ ಮೆಷಿನ್ ನಲ್ಲಿ. ಟೈಮ್ ಮ್ಯಾಗ್ಜೀನ್.
 63. ಡಾ. ಮ್ಯಾಕ್ಸ್ ಹರ್ಮನ್. [೧] Archived 2008-03-19 ವೇಬ್ಯಾಕ್ ಮೆಷಿನ್ ನಲ್ಲಿ. " ಎಥ್ನಿಕ್ ಸಕ್ಸೆಷನ್ ಅಂಡ್ ಅರ್ಬನ್ ಅನ್ ರೆಸ್ಟ್ ಇನ್ ನೆವಾರ್ಕ್ ಅಂಡ್ ಡೆಟ್ರಾಯ್ಟ್ ಡ್ಯೂರಿಂಗ್ ದಿ ಸಮ್ಮರ್ ಆಫ್ ೧೯೬೭".
 64. ಮ್ಯಾಕ್ಸ್ ಎ. ಹರ್ಮನ್, ed. "ದಿ ಡೆಟ್ರಾಯ್ಟ್ ಅಂಡ್ ನೆವಾರ್ಕ್ ರೈಯ್ಟ್ಸ್ ಆಫ್ 1967". Archived 2008-04-29 ವೇಬ್ಯಾಕ್ ಮೆಷಿನ್ ನಲ್ಲಿ. ರಟ್ಜರ್ಸ್-ನೇವಾರ್ಕ್ ಡಿಪಾರ್ಟ್ಮೆಂಟ್ ಆಫ್ ಸೋಷಿಯಾಲಜಿ ಅಂಡ್ ಆಂತ್ರಪಾಲಜಿ.
 65. "How a Campaign for Racial Trust Turned Sour". Aliciapatterson.org. 1964-07-17. Archived from the original on 2011-05-15. Retrieved 2010-10-30.
 66. ಯೂತ್ ಇನ್ ದಿ ಗೆಟ್ಟೊ: ಅ ಸ್ಟಡಿ ಆಫ್ ದಿ ಕಾನ್ಸಿಕ್ವೆನ್ಸ್ ಆಫ್ ಪವರ್ ಲೆಸ್ ನೆಸ್, ಹಾರ್ಲೆಮ್ ಯೂತ್ ಆಪರ್ಚ್ಯುನಿಟೀಸ್ ಅನ್ ಲಿಮಿಟೆಡ್, Inc., ೧೯೬೪
 67. ಪಾವರ್ಟಿ ಅಂಡ್ ಪಾಲಿಟಿಕ್ಸ್ ಇನ್ ಹಾರ್ಲೆಮ್, ಆಲ್ಫೊನ್ಸೊ ಪಿಂಕಿ ಅಂಡ್ ರೋಜರ್ ವೂಕ್, ಕಾಲೇಜ್ ಅಂಡ್ ಯುನಿವರ್ಸಿಟಿ ಪ್ರೆಸ್ ಸರ್ವೀಸ್, Inc., ೧೯೭೦
 68. "Riding On". Time. Time Inc. 2007-07-07. Archived from the original on 2008-03-04. Retrieved 2007-10-23.
 69. "ACLU Parchman Prison". Archived from the original on 2008-03-07. Retrieved 2007-11-29.
 70. "Parchman Farm and the Ordeal of Jim Crow Justice". Retrieved 2006-08-28.
 71. Goldman, Robert M. Goldman (1997). ""Worse Than Slavery": Parchman Farm and the Ordeal of Jim Crow Justice – book review". Hnet-online. Retrieved 2006-08-29. {{cite web}}: Unknown parameter |month= ignored (help)
 72. Cleaver, Eldridge (1967). Soul on Ice. New York, NY: McGraw-Hill.
 73. "ಡ್ಯೂಡ್ಜೈಕ್, ಎಮ್.ಎಲ್.: ಕೋಲ್ಡ್ ವಾರ್ ಸಿವಿಲ್ ರೈಟ್ಸ್: ರೇಸ್ ಅಂಡ್ ದಿ ಇಮೇಜ್ ಆಫ್ ಅಮೇರಿಕನ್ ಡೆಮೊಕ್ರಸಿ". Archived from the original on 2006-09-10. Retrieved 2011-03-21.

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
 • ಅರ್ಸೆನಾಲ್ಟ್ ರೆಮಂಡ್. ಫ್ರೀಡಮ್ ರೈಡರ್ಸ್: 1961 ಅಂಡ್ ದಿ ಸ್ಟ್ರಗಲ್ ಫಾರ್ ರೇಷಿಯಲ್ ಜಸ್ಟೀಸ್. ನ್ಯೂ ಯಾರ್ಕ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ೧೯೬೮. ಐಎಸ್‌ಬಿಎನ್‌ ೦-೧೯-೫೧೩೬೭೪-೮
 • ಬರ್ನೆಸ್, ಕ್ಯಾಥರೀನ್ ಎ. ಜರ್ನಿ ಫ್ರಮ್ ಜಿಂ ಕ್ರೌವ್: ದಿ ಡಿಸೆಗರೇಷನ್ ಆಫ್ ಸದರನ್ ಟ್ರಾನ್ಸಿಟ್, ಕೊಲಂಬಿಯಾ ಯುನಿವರ್ಸಿಟಿ ಪ್ರೆಸ್ ೧೯೮೩.
 • ಬೇಟೊ, ಡೇವಿಡ್ ಟಿ. ಮತ್ತು ಬೇಟೊ, ಲಿಂಡಾ ರಾಯ್ ಸ್ಟರ್, ಬ್ಲ್ಯಾಕ್ ಮ್ಯಾವ್ರಿಕ್: ಟಿ.ಆರ್.ಅಮ್. ಹೊವರ್ಡ್ಸ್ ಫೈಟ್ ಫಾರ್ ಸಿವಿಲ್ ರೈಟ್ಸ್ ಅಂಡ್ ಎಕನಾಮಿಕ್ ಪವರ್, ಯುನಿವರ್ಸಿಟಿ ಆಫ್ ಇಲಿನಾಯ್ಸ್ ಪ್ರೆಸ್, ೨೦೦೯. ISBN ೯೭೮-೦-೨೫೨-೦೩೪೨೦-೬
 • ಬ್ರಾಂಚ್, ಟೇಲರ್. ಅಟ್ ಕ್ಯಾನಾನ್ಸ್ ಎಡ್ಜ್: ಅಮಿರಿಕಾ ಇನ್ ದಿ ಕಿಂಗ್ ಇಯರ್ಸ್, ೧೯೬೫–೧೯೬೮. ನ್ಯುಯಾರ್ಕ್: ಸೈಮನ್ ಅಂಡ್ ಸ್ಚುಸ್ಟರ್, ೨೦೦೬. ISBN ೦-೬೮೪-೮೫೭೧೨-X.
 • ಬ್ರಾಂಚ್ ಟೇಲರ್. ಪಾರ್ಟಿಂಗ್ ದಿ ವಾಟರ್ಸ್: ಅಮೇರಿಕಾ ಇನ್ ದಿ ಕಿಂಗ್ ಇಯರ್ಸ್, ೧೯೫೪–೧೯೬೩. ನ್ಯೂಯಾರ್ಕ್: ಸೈಮನ್ ಅಂಡ್ ಸ್ಕುಸ್ಟೆರ್, ೧೯೮೮. ಐಎಸ್‌ಬಿಎನ್‌ ೦-೬೭೧-೪೬೦೯೭-೮
 • ಬ್ರಾಂಚ್, ಟೇಲರ್. ಪಿಲ್ಲರ್ ಆಫ್ ಫೈರ್ : ಅಮೆರಿಕಾ ಇನ್ ದಿ ಕಿಂಗ್ ಇಯರ್ಸ್, ೧೯೬೩–೧೯೬೫. : ಸೈಮನ್ ಮತ್ತು ಸ್ಚುಸ್ಟರ್, ೧೯೯೮. ಐಎಸ್‌ಬಿಎನ್‌ ೦-೬೮೪-೮೦೮೧೭-೬
 • ಬ್ರೆಟ್ಮೆನ್, ಜಾರ್ಜ್. ದಿ ಅಸೋಸಿಯೇಷನ್ ಆಫ್ ಮ್ಯಾಲ್ಕಮ್ X. ನ್ಯೂಯಾರ್ಕ್: ಪಾತ್ ಫೈಂಡರ್ ಪ್ರೆಸ್. ೧೯೭೬.
 • ಕಾರ್ಸನ್,ಕ್ಲೆಬಾರ್ನ್. ಇನ್ ಸ್ಟ್ರಗಲ್: SNCC ಅಂಡ್ ದಿ ಬ್ಲ್ಯಾಕ್ ಅವೇಕನಿಂಗ್ ಆಫ್ ದಿ ೧೯೬೦ಸ್ . ಕೇಂಬ್ರಿಜ್‌, MA: ಹಾರ್ವರ್ಡ್‌‌ ಯೂನಿವರ್ಸಿಟಿ ಪ್ರೆಸ್. ೧೯೮೦. ಐಎಸ್‌ಬಿಎನ್‌ ೦-೩೭೪-೫೨೩೫೬-೮
 • ಕಾರ್ಸನ್, ಕ್ಲೇಬಾರ್ನ್; ಗ್ಯಾರೊ, ಡೇವಿಡ್J.;ಕೊವ್ಯಾಕ್, ಬಿಲ್; ಪೊಲ್ಸ್ ಗ್ರೋ, ಕರೊಲ್, ಎಡ್ಸ್. ರಿಪೋರ್ಟಿಂಗ್ ಸಿವಿಲ್ ರೈಟ್ಸ್: ಅಮೆರಿಕನ್ ಜರ್ನಲಿಸಮ್ ೧೯೪೧–೧೯೬೩ ಮತ್ತು ರಿಪೋರ್ಟಿಂಗ್ ಸಿವಿಲ್ ರೈಟ್ಸ್: ಅಮೆರಿಕನ್ ಜರ್ನಲಿಸಮ್೧೯೬೩–೧೯೭೩. ನ್ಯೂಯಾರ್ಕ್: ಲೈಬ್ರರಿ ಆಫ್ ಅಮೇರಿಕ, ೨೦೦೩. ISBN ೧-೯೩೧೦೮೨-೨೮-೬ and ISBN ೧-೯೩೧೦೮೨-೨೯-೪.
 • ಚಂದ್ರ, ಸಿದ್ಧಾರ್ಥ್ ಮತ್ತು ಏಂಜೆಲಾ ವಿಲಿಯಮ್ಸ್-ಫಾಸ್ಟರ್. "ದಿ ,’ ರೆವಲ್ಯೂಷನ್ ಆಫ್ ರೈಸಿಂಗ್ ಎಕ್ಸ್‌ಪೆಕ್ಟೇಷನ್ ರಿಲೇಟಿವ್ ಡಿಪ್ರೈವೇಷನ್, ಅಂಡ್ ದಿ ಅರ್ಬನ್ ಸೋಷಿಯಲ್ ಡಿಸ್ಆರ್ಡರ್ಸ್ ಆಫ್ ದಿ ೧೯೬೦ ಸ್: ಎವಿಡೆನ್ಸ್ ಫ್ರಮ್ ಸ್ಟೇಟ್-ಲೆವೆಲ್ ಡೇಟಾ." ಸೋಷಿಯಲ್ ಸೈನ್ಸ್ ಹಿಸ್ಟ್ರಿ, ೨೯(೨):೨೯೯–೩೩೨, ೨೦೦೫.
 • ಫೇರ್ ಕ್ಲಾಗ್, ಆಡಮ್. ಟು ರೆಡೀಮ್ ದಿ ಸೋಲ್ ಆಫ್ ಅಮೇರಿಕ: ದಿ ಸದರನ್ ಕ್ರಿಸ್ಚಿಯನ್ ಲಿಡರ್ಶಿಪ್ ಕಾಲ್ಫರೆನ್ಸ್ ಅಂಡ್ ಮಾರ್ಟಿನ್‌ ಲೂಥರ್ ಕಿಂಗ್ . ದಿ ಯುನಿವರ್ಸಿಟಿ ಆಫ್ ಜಾರ್ಜಿಯಾ ಪ್ರೆಸ್, ೧೯೮೭.
 • ಡೊನರ್, ಎರಿಕ್ ಮತ್ತು ಜೊಶೋ ಬ್ರೌನ್ ಫಾರೆವರ್ ಫ್ರೀ: ದಿ ಸ್ಟೋರಿ ಆಫ್ ಇಮ್ಯಾನ್ಸಿಪೇಷನ್ ಅಂಡ್ ರಿಕನ್ ಸ್ಟ್ರಕ್ಷನ್. ಆಲ್ಫ್ರೆಡ್ ಎ. ಕ್ನೊಫ್: ನ್ಯೂಯಾರ್ಕ್, ೨೦೦೫. p. ೨೨೫–೨೩೮. ISBN ೯೭೮-೦-೩೭೫-೭೦೨೭೪-೭
 • ಗ್ಯಾರೋ ಡೇವಿಡ್ ಜೆ. ಬಿಯರಿಂಗ್ ದಿ ಕ್ರಾಸ್: ಮಾರ್ಟಿನ್‌ ಲೂಥರ್ ಕಿಂಗ್ ಅಂಡ್ ದಿ ಸದರನ್ ಕ್ರಿಸ್ಚಿಯನ್ ಲೀಡರ್ಶಿಪ್ ಕಾನ್ಫರೆನ್ಸ್ . ೮೦೦ ಪುಟಗಳು. ನ್ಯೂಯಾರ್ಕ್: ವಿಲಿಯಂ ಮರೋ, ೧೯೮೬. ISBN ೦-೬೮೮-೦೪೭೯೪-೭.
 • ಗ್ಯಾರೋ, ಡೇವಿಡ್ ಜೆ. ದಿ FBI ಅಂಡ್ ಮಾರ್ಟಿನ್‌ ಲೂಥರ್ ಕಿಂಗ್ . ನ್ಯೂಯಾರ್ಕ್‌: W. W. ನಾರ್ಟನ್‌. ೧೯೮೧. ವೈಕಿಂಗ್ ಪ್ರೆಸ್ ರಿಪ್ರಿಂಟ್ ಎಡಿಷನ್. ೧೯೮೩. ISBN ೦--೧೪-೦೦೬೪೮೬-೯. ಯಾಲೆ ಯುನಿವರ್ಸಿಟಿ ಪ್ರೆಸ್ ; ಪರಿಷ್ಕೃತ ಮತ್ತು ವಿಸ್ತರಿತ ಆವೃತ್ತಿ. ೨೦೦೬. ISBN ೦-೩೦೦-೦೮೭೩೧-೪.
 • ಗ್ರೀನೆ, ಕ್ರಿಸ್ಟಿನ. ಅವರ್ ಸಪರೇಟ್ ವೇಸ್: ವಿಮೆನ್ ಅಂಡ್ ದಿ ಬ್ಲ್ಯಾಕ್ ಫ್ರೀಡಮ್ ಮೂಮೆಂಟ್ ಇನ್ ಡರ್ಹ್ಯಾಮ್ . ಉತ್ತರ ಕ್ಯಾರೊಲಿನ ಚಾಪೆಲ್ ಹಿಲ್: ಯುನಿವರ್ಸಿಟಿ ಆಫ್ ನಾರ್ತ್ ಕರೋಲಿನಾ ಪ್ರೆಸ್, ೨೦೦೫.
 • ಹೊಲ್ಸರ್ಟ್,ಫೇತ್ (ಮತ್ತು ಇತರ ೫ ಜನರು) ಹ್ಯಾಂಡ್ಸ್ ಆನ್ ದಿ ಫ್ರೀಡಮ್ ಪ್ಲೊ ಪರ್ಸನಲ್ ಅಕೌಂಟ್ಸ್ ಬೈ ವಿಮೆನ್ ಇನ್ SNCC . ಯುನಿವರ್ಸಿಟಿ ಆಫ್ ಇಲಿನಾಯ್ಸ್ ಪ್ರೆಸ್, ೨೦೧೦. ISBN ೯೭೮-೦-೨೫೨-೦೩೫೫೭-೯.
 • ಹೊರೆನ್, ಗೆರಾಲ್ಡ್. ದಿ ಫೈರ್ ಥಿಸ್ ಟೈಮ್: ದಿ ವ್ಯಾಟ್ಸ್ ಅಪ್ರೈಸಿಂಗ್ ಅಂಡ್ ದಿ ೧೯೬೦ಸ್ . ಚಾರ್ಲೊಟೆಸ್ವಿಲ್ಲೆ: ಯುನಿವರ್ಸಿಟಿ ಪ್ರೆಸ್ ಆಫ್ ವರ್ಜೀನಿಯಾ. (೧೯೯೫). ಡಾ ಕ್ಯಾಪೊ ಪ್ರೆಸ್; ೧ಸ್ಟ್ ಡಾ ಕ್ಯಾಪೊ ಪ್ರೆಸ್ ಇಡ್ ಎಡಿಷನ್. ೧೯೯೭ ರ ಅಕ್ಟೋಬರ್‌ ೧ ISBN ೦-೩೦೬-೮೦೭೯೨-೦
 • ಕಿರ್ಕ್, ಜಾನ್ ಎ. ಮಾರ್ಟಿನ್‌ ಲೂಥರ್ ಕಿಂಗ್, ಜೂ. . ಲಂಡನ್: ಲಾಂಗ್ಮನ್, ೨೦೦೫. ISBN ೦-೫೮೨-೪೧೪೩೧-೮
 • ಕಿರ್ಕ್, ಜಾನ್ ಎ. ರಿಡಿಫೈನಿಂಗ್ ದಿ ಕಲರ್ ಲೈನ್: ಬ್ಲ್ಯಾಕ್ ಆಕ್ಟಿವಿಸಮ್ ಇನ್ ಲಿಟಲ್ ರಾಕ್, ಅರ್ಕಾನ್ಸಾಸ್, ೧೯೪೦–೧೯೭೦ . ಗ್ಯೇನ್ಸ್ ವಿಲ್ಲೆ: ಯುನಿವರ್ಸಿಟಿ ಆಫ್ ಫ್ಲೋರಿಡಾ ಪ್ರೆಸ್, ೨೦೦೨. ISBN ೦-೮೧೩೦-೨೪೯೬-X
 • ಕೌಸೆರ್, ಜೆ. ಮಾರ್ಗನ್, "ದಿ ಸುಪ್ರೀಮ್ ಕೋರ್ಟ್ ಅಂಡ್ ದಿ ಅನ್ ಡೂಯಿಂಗ್ ಆಫ್ ದಿ ಸೆಕೆಂಡ್ ರಿಕನ್ಟ್ರಕ್ಷನ್," ನ್ಯಾಷನಲ್ ಫೋರಮ್, (ಸ್ಪ್ರಿಂಗ್ 2000). Archived 2010-11-16 ವೇಬ್ಯಾಕ್ ಮೆಷಿನ್ ನಲ್ಲಿ.
 • ಕ್ರಿನ್,ರಾಂಡಿ. "ಜೇಮ್ಸ್ ಎಲ್. ಬೆವೆಲ್, ದಿ ಸ್ಟ್ರೇಟಜಿಸ್ಟ್ ಆಫ್ ದಿ ೧೯೬೦ಸ್ ಸಿವಿಲ್ ರೈಟ್ಸ್ ಮೂಮೆಂಟ್", ೧೯೮೪ ಪೇಪರ್ ವಿತ್ ೧೯೮೮ ಆಡೆಂಡಮ್, ಪ್ರಿಂಟೆಡ್ ಇನ್ "ವಿ ಶಲ್ ಒವರ್ ಕಮ್ , ವಾಲ್ಯೂಮ್II" ಡೇವಿದ್ ಗ್ಯಾರೋ ಸಂಪಾದನೆ, ನ್ಯೂಯಾರ್ಕ್: ಕಾರ್ಲ್ಸನ್ ಪಬ್ಲಿಷಿಂಗ್ ಕೋ., ೧೯೮೯.
 • ಮ್ಯಾಲ್ಕಾಲ್ಮ್ X ( ಅಲೆಕ್ಸ್ ಹ್ಯಾಲೆಸಹಾಯದೊಂದಿಗೆ). ದಿ ಆಟೋಬಯೋಗ್ರಫಿ ಆಫ್ ಮ್ಯಾಲ್ಕಾಲ್ಮ್ X. ನ್ಯೂಯಾರ್ಕ್: ರಾಂಡಮ್ ಹೌಸ್, ೧೯೬೫. ಕಾಗದ ಕವಚದ ಪುಸ್ತಕ ISBN ೦-೩೪೫-೩೫೦೬೮-೫. ಹಾರ್ಡ್ ಕವರ್ISBN ೦-೩೪೫-೩೭೯೭೫-೬.
 • ಮಾರ್ಬಲ್, ಮ್ಯಾನಿಂಗ್. ರೇಸ್, ರಿಫಾರ್ಮ್ ಅಂಡ್ ರೆಬೆಲಿಯನ್: ದಿ ಸೆಕೆಂಡ್ ರೀಕನ್ಟ್ರಕ್ಷನ್ ಇನ್ ಬ್ಲ್ಯಾಕ್ ಅಮೆರಿಕ, ೧೯೪೫–೧೯೮೨ . ೨೪೯ ಪುಟಗಳು. ಯುನಿವರ್ಸಿಟಿ ಪ್ರೆಸ್ ಆಫ್ ಮಿಸಿಸಿಪ್ಪಿ, ೧೯೮೪. ISBN ೦-೩೪೫-೩೫೦೬೮-೫.
 • ಮ್ಯಾಕ್ ಆಡಮ್, ಡೌಗ್. ಪಾಲಿಟಿಕಲ್ ಪ್ರೊಸಸ್ ಅಂಡ್ ದಿ ಡೆವಲಪ್ಮೆಂಟ್ ಆಫ್ ಬ್ಲ್ಯಾಕ್ ಇನ್ ಸರ್ಜನ್ಸಿ, ೧೯೩೦–೧೯೭೦ , ಷಿಕಾಗೊ: ಯುನಿವರ್ಸಿಟಿ ಆಫ್ ಷಿಕಾಗೊ ಪ್ರೆಸ್. ೧೯೮೨.
 • ಮ್ಯಾಕ್ ಆಡಮ್, ಡೌಗ್, 'ದಿ USಸಿವಿಲ್ ರೈಟ್ಸ್ ಮೂಮೆಂಟ್: ಪವರ್ ಫ್ರಂ ಬಿಲೊ ಅಂಡ್ ಎಬೋ ೧೯೪೫-೭೦', ಇನ್ ಆಡಮ್ ರಾಬರ್ಟ್ಸ್ ಮತ್ತು ಟಿಮೊತಿ ಗ್ಯಾರ್ಟನ್ ಆಶ್ (eds.), ಸಿವಿಲ್ ರೆಸಿಸ್ಟೆನ್ಸ್ ಅಂಡ್ ಪವರ್ ಪಾಲಿಟಿಕ್ಸ್: ದಿ ಎಕ್ಸ್‌ಪಿರಿಯನ್ಸ್ ಆಫ್ ನಾನ್ ವೈಲೆಂಟ್ ಫ್ರಮ್ ಗಾಂಧೀ ಟು ದಿ ಪ್ರೆಸೆಂಟ್. ಆಕ್ಸ್ ಫರ್ಡ್ ಅಂಡ್ ನ್ಯೂಯಾರ್ಕ್: ಆಕ್ಸ್ ಫರ್ಡ್ ಯುನಿವರ್ಸಿಟಿ ಪ್ರೆಸ್, ೨೦೦೯. ISBN ೯೭೮-೦-೧೯-೯೫೫೨೦೧-೬.
 • ಮಿನ್ಚಿನ್, ಟಿಮೊತಿ ಜೆ. ಹೈರಿಂಗ್ ದಿ ಬ್ಲ್ಯಾಕ್ ವರ್ಕರ್: ದಿ ರೇಷಿಯಲ್ ಇಂಟಿಗ್ರೇಷನ್ ಆಫ್ ದಿ ಸದರನ್ ಟೆಕ್ಸ್ ಟೈಲ್ ಇಂಡಸ್ಟ್ರೀ, 1960–1980 . ಯುನಿವರ್ಸಿಟಿ ಆಫ್ ನಾರ್ತ್ ಕರೋಲಿನಾ ಪ್ರೆಸ್, ೧೯೯೯. ISBN ೦-೮೦೭೮-೨೪೭೦-೪.
 • ಮೊರೀಸ್, ಆಲ್ಡನ್ ಡಿ. ದಿ ವರಿಜಿನ್ಸ್ ಆಫ್ ದಿ ಸಿವಿಲ್ ರೈಟ್ಸ್ ಮೂಮೆಂಟ್: ಬ್ಲ್ಯಾಕ್ ಕಮ್ಯೂನಿಟೀಸ್ ಆರ್ಗನೈಸಿಂಗ್ ಫಾರ್ ಚೇಂಜ್ . ನ್ಯೂಯಾರ್ಕ್: ದಿ ಫ್ರೀ ಪ್ರೆಸ್, ೧೯೮೪. ISBN ೦-೦೨-೯೨೨೧೩೦-೭
 • ಸೊಕೊಲ್, ಜ್ಯಾಸನ್. ದೆರ್ ಗೋಸ್ ಮೈ ಎವ್ರಿಥಿಂಗ್: ವೈಟ್ ಸೌತನರ್ಸ್ ಇನ್ ದಿ ಏಜ್ ಆಫ್ ದಿ ಸಿವಿಲ್ ರೈಟ್ಸ್, ೧೯೪೫–೧೯೭೫ . ನ್ಯೂಯಾರ್ಕ್: ಕ್ನಾಫ್, ೨೦೦೬.
 • ಪ್ಯಾಟರ್ಸನ್, ಜೇಮ್ಸ್ ಟಿ. ಬ್ರೌನ್ v ಬೋರ್ಡ್ ಆಫ್ ಎಜುಕೇಷನ್, ಎ ಸಿವಿಲ್ ರೈಟ್ಸ್ ಮೈಲ್‌ನ್ ಅಂಡ್ ಇಟ್ಸ್ ಟ್ರಬಲ್ಡ್ ಲೆಗಸಿ. ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೨೦೦೭. ಐಎಸ್‌ಬಿಎನ್ ೦-೧೯-೫೧೫೬೩೨-೩
 • ರಾನ್ಸ್ ಬಿ, ಬಾರ್ಬರಾ. ಎಲಾ ಬೇಕರ್ ಅಂಡ್ ದಿ ಬ್ಲ್ಯಾಕ್ ಪ್ರೀಡಮ್ ಮೂಮೆಂಟ್, ಎ ರಾಡಿಕಲ್ ಡೆಮೊಕ್ರಟಿಕ್ ಮೂಮೆಂಟ್ ವಿಷನ್ . ದಿ ಯುನಿವರ್ಸಿಟಿ ಆಫ್ ನಾರ್ತ್ ಕರೋಲಿನಾ ಪ್ರೆಸ್, ೨೦೦೩.
 • ಟಿಸೆಸಿಸ್, ಅಲೆಗ್ಸಾಂಡರ್. ವಿ ಶಲ್ ಒವರ್ ಕಮ್: ಅ ಹಿಸ್ಟ್ರಿ ಆಫ್ ಸಿವಿಲ್ ರೈಟ್ಸ್ ಅಂಡ್ ದಿ ಲಾ . ನ್ಯೂ ಹ್ಯಾವೆನ್: ಯಾಲೆ ಯುನಿವರ್ಸಿಟಿ ಪ್ರೆಸ್, ೨೦೦೮. ISBN ೯೭೮-೦-೩೦೦-೧೧೮೩೭-೭
 • ವಿಲಿಯಮ್ಸ್, ಜೌನ್. ಐಸ್ ಆಫ್ ದಿ ಪ್ರೈಸ್: ಅಮೆರಿಕಾಸ್ ಸಿವಿಲ್ ರೈಟ್ಸ್ ಇಯರ್ಸ್, ೧೯೫೪–೧೯೬೫ . ನ್ಯೂಯಾರ್ಕ್ : ಪೆಂಗ್ವಿನ್ ಬುಕ್ಸ್, ೧೯೮೭. ISBN ೦-೧೪-೦೦೯೬೫೩-೧
 • ವೆಸ್ಟ್ ಹೈಡರ್, ಜೇಮ್ಸ್ ಎಡ್ವರ್ಡ್. "ಮೈ ಫಿಯರ್ ಈಸ್ ಫಾರ್ ಯು": ಆಫ್ರಿಕನ್ ಅಮೆರಿಕನ್ಸ್, ರೇಸಿಸಮ್, ಎಂಡ್ ದಿ ವಿಯೆಟ್ನಾಂ ವಾರ್ . ಯುನಿವರ್ಸಿಟಿ ಆಫ್ ಸಿನ್ಸಿನಾಟಿ, ೧೯೯೩.
 • ವುಡ್ ವರ್ಡ್, ಸಿ.ವ್ಯಾನ್. ದಿ ಸ್ಟ್ರೇಂಜ್ ಕೆರಿಯರ್ ಆಫ್ ಜಿಮ್ ಕ್ರೌವ್ . ಮೂರನೇ ಪರಿಷ್ಕೃತ ಆವೃತ್ತಿ ೧೯೫೫; ಆಕ್ಸ್ ಫರ್ಡ್ ಯುನಿವರ್ಸಿಟಿ ಪ್ರೆಸ್, ೧೯೭೪. ISBN ೦-೧೯-೫೦೧೮೦೫-೨

ಬಾಹ್ಯ ಕೊಂಡಿಗಳು‌

[ಬದಲಾಯಿಸಿ]