ವಿಷಯಕ್ಕೆ ಹೋಗು

ಜಾರ್ಜಿಯ (ಅಮೇರಿಕ ದೇಶದ ರಾಜ್ಯ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಟೇಟ್ ಆಫ್ ಜಾರ್ಜಿಯ
Flag of Georgia State seal of Georgia
ಧ್ವಜ ಮುದ್ರೆ
ಅಡ್ಡಹೆಸರು: Peach State, Empire State of the South
ಧ್ಯೇಯ: Wisdom, Justice, and Moderation
Map of the United States with Georgia highlighted
Map of the United States with Georgia highlighted
ಅಧಿಕೃತ ಭಾಷೆ(ಗಳು) English
ರಾಜಧಾನಿ ಅಟ್ಲಾಂಟ
ಅತಿ ದೊಡ್ಡ ನಗರ ಅಟ್ಲಾಂಟ
ಅತಿ ದೊಡ್ಡ ನಗರ ಪ್ರದೇಶ ಅಟ್ಲಾಂಟ
ವಿಸ್ತಾರ  Ranked 24th in the US
 - ಒಟ್ಟು 59,425 sq mi
(153,909 km²)
 - ಅಗಲ 230 miles (370 km)
 - ಉದ್ದ 298 miles (480 km)
 - % ನೀರು 2.6
 - Latitude 30.356 - 34.985° N
 - Longitude 80.840 - 85.605° W
ಜನಸಂಖ್ಯೆ  9thನೆಯ ಅತಿ ಹೆಚ್ಚು
 - ಒಟ್ಟು 9,685,744 (2008 est.)[೧]
8,186,453 (2000)
 - ಜನಸಂಖ್ಯಾ ಸಾಂದ್ರತೆ 141.4/sq mi  (54.59/km²)
18thನೆಯ ಸ್ಥಾನ
 - Median income  $43,217 (28th)
ಎತ್ತರ  
 - ಅತಿ ಎತ್ತರದ ಭಾಗ Brasstown Bald[೨]
4,784 ft  (1,458 m)
 - ಸರಾಸರಿ 591 ft  (180 m)
 - ಅತಿ ಕೆಳಗಿನ ಭಾಗ Atlantic Ocean[೨]
0 ft  (0 m)
ಸಂಸ್ಥಾನವನ್ನು ಸೇರಿದ್ದು  January 2, 1788 (4th)
Governor Sonny Perdue (R)
Lieutenant Governor Casey Cagle (R)
U.S. Senators Saxby Chambliss (R)
Johnny Isakson (R)
Congressional Delegation 7 Republicans, 6 Democrats (list)
Time zone Eastern: UTC-5/-4
Abbreviations GA US-GA
Website www.georgia.gov

ಜಾರ್ಜಿಯ (ಉಚ್ಛಾರ ) ಅಮೇರಿಕ ಸಂಯುಕ್ತ ಸಂಸ್ಥಾನದ ಆಗ್ನೇಯ ಭಾಗದ ಒಂದು ರಾಜ್ಯ. ಇದರ ರಾಜಧಾನಿ ಅಟ್ಲಾಂಟ. ಇದರ ದಕ್ಷಿಣಕ್ಕೆ ಫ್ಲಾರಿಡ; ಪೂರ್ವಕ್ಕೆ ಅಟ್ಲಾಂಟಿಕ್ ಮಹಾಸಾಗರ ಮತ್ತು ದಕ್ಷಿಣ ಕ್ಯಾರೊಲಿನ; ಹಾಗು ಪಶ್ಚಿಮಕ್ಕೆ ಅಲಬಾಮ ಇವೆ.

ಜಾರ್ಜಿಯವು ಪ್ರಥಮವಾಗಿ ಸ್ಥಾಪಿತವಾದ ಅಮೆರಿಕದ 13 ರಾಜ್ಯಗಳಲ್ಲಿ ಒಂದು. ಇಂಗ್ಲೆಂಡಿನ 2ನೆಯ ಜಾರ್ಜ್ ದೊರೆಯಿಂದ ಸನ್ನದು ಪಡೆದು 1732ರಲ್ಲಿ ವಸಾಹತು ಪ್ರಾಂತ್ಯವಾಗಿ ಇದು ಸ್ಥಾಪಿತವಾಯಿತಾದ್ದರಿಂದ ಇದಕ್ಕೆ ಜಾರ್ಜಿಯ ಎಂಬ ಹೆಸರು ಬಂದಿದೆ.

ಭೌಗೋಳಿಕ ಮಾಹಿತಿ[ಬದಲಾಯಿಸಿ]

ಪ.ರೇ. 80° 53`-85° 30` ನಡುವೆ ಹಬ್ಬಿದೆ. ಉತ್ತರದಲ್ಲಿ ಟೆನಸೀ ಮತ್ತು ಉತ್ತರ ಕಾರಲೈನ ರಾಜ್ಯಗಳು. ದಕ್ಷಿಣದಲ್ಲಿ ಫ್ಲಾರಿಡಾ ರಾಜ್ಯ, ಪೂರ್ವದಲ್ಲಿ ದಕ್ಷಿಣ ಕ್ಯಾರಲೈನ ರಾಜ್ಯ ಮತ್ತು ಅಟ್ಲಾಂಟಿಕ್ ಸಾಗರ ; ಪಶ್ಚಿಮದಲ್ಲಿ ಆಲಭಾಮ ರಾಜ್ಯ-ಇವು ಇದರ ಮೇರೆಗಳು. ವಿಸ್ತೀರ್ಣ 58,876 ಚ. ಮೈ. ಜನಸಂಖ್ಯೆ 45,89,575 (1970ಅಂ.). ರಾಜಧಾನಿ ಅಟ್ಲಾಂಟ (4,97,421). ಮೇಲ್ಮೈಲಕ್ಷಣ : ಜಾರ್ಜಿಯದಲ್ಲಿ 5 ಭೌಗೋಳಿಕ ವಿಭಾಗಳಿವೆ. ಅವುಗಳಲ್ಲಿ ಮುಖ್ಯವಾದ್ದು 35,000ಚ.ಮೈ. ವಿಸ್ತೀರ್ಣವಾಗಿರುವ ಅಟ್ಲಾಂಟಿಕ್ ತೀರ ಭಾಗ. ಸಾಗರದ ಅಂಚಿನಲ್ಲಿ ಫಲವತ್ತಾದ ಹಲವು ದ್ವೀಪಗಳುಂಟು. ಪೀಡ್‍ಮಾಂಟ್ ಪ್ರಸ್ಥಭೂಮಿ ಇದೆ. ಇದು ಅಟ್ಲಾಂಟದ ಕಡೆಗೆ ಏರುತ್ತ ಸಾಗುತ್ತದೆ. 50 ಮೈ.ಗಳ ದೂರದಲ್ಲಿ 500`ಗಳಿಂದ 2,000`ಗಳವರೆಗೆ ಏರುತ್ತವೆ. ಈ ಪ್ರಸ್ಥಭೂಮಿಯ ಉತ್ತರಕ್ಕೆ ಮೂರು ಕಿರು ಪರ್ವತಸೀಮೆಗಳುಂಟು. ಅವುಗಳಲ್ಲಿ ಈಶಾನ್ಯಭಾಗದಲ್ಲಿರುವ ಬ್ಯೂರಿಡ್ಜ್ ಪರ್ವತ ಅತ್ಯಂತ ದೊಡ್ಡದು. ಇದು ಅಪಲೇಚಿಯನ್ ಪರ್ವತಶ್ರೇಣಿಯ ಒಂದು ಭಾಗ. ಇದು ಜಾರ್ಜಿಯದಲ್ಲಿ ದಕ್ಷಿಣ ಮತ್ತು ಪಶ್ಚಿಮದ ಕಡೆಗೆ ಅನುಕ್ರಮವಾಗಿ 48 ಮೈ. ಮತ್ತು 92 ಮೈ. ದೂರ ಹಬ್ಬಿದೆ. ರಾಜ್ಯದ ವಾಯುವ್ಯ ತುದಿಯಲ್ಲಿರುವ ಕಿಂಬರ್ ಲ್ಯಾಂಡ್ ಪ್ರಸ್ಥಭೂಮಿ. ಇದು ಅಲೆಗಾನಿ ಪರ್ವತಶ್ರೇಣಿಗೆ ಸೇರಿದ್ದು, ಈ ಎರಡು ಪ್ರದೇಶಗಳ ನಡುವೆ, ಸೀಡರ್‍ಟೌನ್ವರೆಗೆ ಗ್ರೇಟ್ ಕಣಿವೆ ವಿಸ್ತರಿಸಿದೆ. ಜಾರ್ಜಿಯ ಪರ್ವತಗಳು ಕೆನಡದಿಂದ ಆಲಭಾಮ ರಾಜ್ಯದ ಮಧ್ಯಭಾಗದವರೆಗೆ ಹಬ್ಬಿರುವ ಪರ್ವತ ವ್ಯವಸ್ಥೆಯ ಒಂದು ಭಾಗ. ರಾಜ್ಯದಲ್ಲಿರುವ ಅತ್ಯುನ್ನತ ಶಿಖರ ಭ್ರಾಸ್‍ಟೌನ್‍ಭಾಲ್ಡ್ (4,784`). ಇದು ಬ್ಲ್ಯೂರಿಡ್ಜ್ ಪರ್ವತದಲ್ಲಿದೆ. ಅಟ್ಲಾಂಟದ ಬಳಿ ಪೀಡ್‍ಮಾಂಟ್ ಪ್ರಸ್ಥಭೂಮಿಯ ಮೇಲ್ಭಾಗದಲ್ಲಿರುವ ಸ್ಟೋನ್ ಪರ್ವತ ಬಹುಶಃ ಪ್ರಪಂಚದ ಅತ್ಯಂತ ದೊಡ್ಡ ಅನಾವೃತ ಗ್ರಾನೈಟ್ ಶಿಲೆ.

ರಾಜ್ಯದ ಈಶಾನ್ಯದ ಕೊನೆಯಲ್ಲಿಯ ಬ್ಲ್ಯೂರಿಡ್ಜ್ ಪರ್ವತದ ಬಳಿಯಿಂದ ರಾಜ್ಯದ ಜಲವಿಭಾಗ ರೇಖೆ ಆರಂಭವಾಗಿ ನೈಋತ್ಯಾಭಿಮುಖವಾಗಿ ಅಟ್ಲಾಂಟದ ಕಡೆಗೆ ಸಾಗುತ್ತವೆ. ಇಲ್ಲಿಂದ ಆಗ್ನೇಯಕ್ಕೆ ಹರಿಯುವ ನದಿಗಳು ಅಟ್ಲಾಂಟಿಕ್ ಸಾಗರವನ್ನೂ ಅದರಿಂದ ಆ ಕಡೆಯ ನದಿಗಳು ಮೆಕ್ಸಿಕೋ ಖಾರಿಯನ್ನೂ ಸೇರುತ್ತವೆ. ಗ್ರೇಟ್ ವ್ಯಾಲಿ ಕಣಿವೆ ಮತ್ತು ಬ್ಲ್ಯೂ ರಿಡ್ಜ್ ಪರ್ವತಗಳ ಪಶ್ಚಿಮಭಾಗದಲ್ಲಿ ಎಟೊವಾ ಮತ್ತು ಊಸ್ಟನಾಲ ನದಿಗಳೂ ಅವುಗಳ ಉಪನದಿಗಳೂ ಹರಿಯುತ್ತವೆ. ಈ ನದಿಗಳು ರೋಮ್ ಬಳಿಯಲ್ಲಿ ಕೂಡಿ ಕೂಸ ನದಿಯಾಗಿ ಪರಿಣಮಿಸುತ್ತವೆ. ಕಂಬಲ್ರ್ಯಾಂಡ್ ಪ್ರಸ್ಥಭೂಮಿಯೂ ಬ್ಲ್ಯೂರಿಡ್ಜ್ ಪಶ್ಚಿಮ ಭಾಗವೂ ಟೆನಸೀ ಕಣಿವೆಯ ಒಂದು ಭಾಗ. ದಕ್ಷಿಣ ಕ್ಯಾರಲೈನ ರಾಜ್ಯದ ಗಡಿಯಾಗಿ ಹರಿಯುವ ಸವಾನ, ಜಾರ್ಜಿಯದ ದಕ್ಷಿಣ ಮಧ್ಯ ಭಾಗದಲ್ಲಿ ಕೂಡಿ ಆಲ್ಟಮಹಾ ಆಗಿ ಪರಿಣಮಿಸುವ ಓಕೋನೀ ಮತ್ತು ಓಕ್‍ಮಲ್ಗೀ, ಆಗ್ನೇಯ ಭಾಗದಲ್ಲಿ ಹರಿಯುವ ಸಟಿಲ, ರಾಜ್ಯದ ನೈಋತ್ಯದ ತುದಿಯಲ್ಲಿ ಸಂಗಮಿಸಿ ಆಪಲಾ-ಚಿಕೋಲ ಎಂಬ ಹೆಸರು ಪಡೆಯುವ ಫಿಂಟ್ ಮತ್ತು ಚಟ್ಟಹೂಚೀ-ಇವು ಈ ರಾಜ್ಯದ ಮುಖ್ಯ ನದಿಗಳು. ಇವುಗಳಲ್ಲಿ ಸಟಿಲ ನದಿಯ ಹೊರತು ಇತರ ನದಿಗಳು ಪೀಡ್‍ಮಾಂಟ್‍ನ ಮೇಲ್ಭಾಗದಲ್ಲಿ ಹುಟ್ಟಿ ಹರಿಯುತ್ತವೆ. ಅವು ದಕ್ಷಿಣ ಭಾಗದಲ್ಲಿ ಮಾತ್ರ ನೌಕಾಯಾನಕ್ಕೆ ಯೋಗ್ಯ. ರಾಜ್ಯದ ಆಗ್ನೇಯ ಭಾಗದಲ್ಲಿ ಒಕೆಫಿನೋಕೀ ಜವುಗು ಪ್ರದೇಶವಿದೆ. ಇದು ಕೃಷಿಗೆ ಬಹುತೇಕ ಅನುಪಯುಕ್ತ. ಇಲ್ಲಿ ರಾಷ್ಟ್ರೀಯ ಅಭಯಾರಣ್ಯಗಳುಂಟು.

ವಾಯುಗುಣ[ಬದಲಾಯಿಸಿ]

ಜಾರ್ಜಿಯದ ವಾಯುಗುಣ ತೀವ್ರವಲ್ಲ. ಮಾಧ್ಯವಾರ್ಷಿಕ ಉಷ್ಣತೆಗಳ ಅಂತರ 57°-68°ಈ. 14°-20°ಈ). ಜನವರಿಯ ಸರಾಸರಿ ಉಷ್ಣತೆ ಪರ್ವತ ಪ್ರದೇಶದಲ್ಲಿ 40ಲಿಈ.; ಕರಾವಳಿಯಲ್ಲಿ 54ಲಿಈ ಜುಲೈ ಸರಾಸರಿ 74ಲಿ-82ಲಿಈ. ಮಾಧ್ಯ ವಾರ್ಷಿಕ ಮಳೆ ಸು. 50”. ಪರ್ವತ ಪ್ರದೇಶದಲ್ಲಿ ವರ್ಷಕ್ಕೆ 7”-10” ಹಿಮಪಾತವಾಗುತ್ತದೆ; ಅಟ್ಲಾಂಟದಲ್ಲಿ ಸು. 3” ; ಕರಾವಳಿಯಲ್ಲಿ ಇಲ್ಲವೇ ಇಲ್ಲವೆನ್ನಬಹುದು. ಸಸ್ಯಗಳು : ಜಾರ್ಜಿಯದಲ್ಲಿ ಸುಮಾರು 250 ಸ್ಥಳೀಯ ಜಾತಿಗಳ ಮರಗಳಿವೆ. ಪರ್ವತ ಪ್ರದೇಶದಲ್ಲಿ ಓಕ್, ಹಿಕರಿಗಳುಂಟು. ಹೆಮ್ಲಾಕ್, ಮೇಪಲ್, ಚೆಸ್‍ನೆಟ್, ಚೆರಿ ಮತ್ತು ಆಷ್ ಮರಗಳೂ ಇವೆ. ಕರಾವಳಿಯಲ್ಲಿ ಸೈಪ್ರಸ್ ಮತ್ತು ತೆಂಗುಜಾತಿಯ ಮರಗಳು ಬೆಳೆಯುತ್ತವೆ. ಮಿಮೋಸ, ಮ್ಯಾಗ್ನೋಲಿಯ, ಡಾಗ್‍ವುಡ್, ಟ್ಯೂಲಿಪ್ ಮುಂತಾದ ಹೂಮರಗಿಡಗಳುಂಟು. ಪ್ರಾಣಿಜೀವನ : ಜಾರ್ಜಿಯದಲ್ಲಿ 79 ಉರಗ ಜಾತಿಗಳುಂಟು. ಅವುಗಳಲ್ಲಿ 40 ಹಾವು, 23 ಆಮೆ, 13 ಹಲ್ಲಿ, 5 ಮೊಸಳೆ ಜಾತಿಗಳೂ 160 ಪಕ್ಷಿ ಜಾತಿಗಳೂ ಇವೆ. ಭಾಬ್‍ವೈಟ್ ಮತ್ತು ವರ್ಜಿನಿಯ ಕ್ವೇಲ್ ಪಕ್ಷಿಗಳನ್ನು ಬೇಟೆಯಾಡುತ್ತಾರೆ. ಕಡಲತೀರ ಹಾಗೂ ಪರ್ವತ ಪ್ರದೇಶಗಳಲ್ಲಿ ಕಾಡು ಪಾರಿವಳ ಹೇರಳವಾಗಿವೆ. ಸಾರಗ, ಕರಡಿ, ಮೊಲ, ಅಳಿಲು, ಒಪಾಸಮ್, ನರಿ ಬೀವರ್, ಭ್ಯಾಡ್ಜರ್, ಪುನುಗು ಬೆಕ್ಕು, ಚಿರತೆ ಮೊದಲಾದ ಪ್ರಾಣಿಗಳುಂಟು. ಕ್ಯಾಟ್‍ಫಿಷ್, ಡಾಲ್ಫಿನ್, ಸಿಂಪಿ (ಆಯ್‍ಸ್ಟರ್), ನಳ್ಳಿ ಮುಂತಾದ ಜಲಪ್ರಾಣಿಗಳಿವೆ.

ಇತಿಹಾಸ[ಬದಲಾಯಿಸಿ]

ವಸಾಹತು ಕಾಲ[ಬದಲಾಯಿಸಿ]

ಫ್ಲಾರಿಡದಿಂದ ಸ್ಪ್ಯಾನಿಷರೂ ಲವೀಸೀಯಾನದಿಂದ ಫ್ರೆಂಚರೂ ಮಾಡುತ್ತಿದ್ದ ದಾಳಿಯಿಂದ ದಕ್ಷಿಣ ಕ್ಯಾರಲೈನ ಭಾಗವನ್ನು ರಕ್ಷಿಸುವ, ಬಹಿಷ್ಕøತವಾಗಿ ದೇಶ ಬಿಟ್ಟು ಬಂದ ಪ್ರಾಟೆಸ್ಟಂಟರಿಗೂ ಇಂಗ್ಲೆಂಡಿನ ಬಡ ಜನರಿಗೂ ನೆಲೆ ಕಲ್ಪಿಸುವ ಉದ್ದೇಶದಿಂದ ಬ್ರಿಟಿಷ್ ಸರ್ಕಾರ ಜಾರ್ಜಿಯ ವಸಾಹತನ್ನು ಏರ್ಪಡಿಸಿತು. ಅದರ ಸ್ಥಾಪನೆಗೆ ಇಂಗ್ಲೆಂಡಿನ ದೊರೆ 2ನೆಯ ಜಾರ್ಜ್ ಸನ್ನದು ನೀಡಿದ ; ಇಂಗ್ಲೆಂಡಿನ ಪಾರ್ಲಿಮೆಂಟ್ 10,000 ಪೌಂಡ್ ನೀಡಿತು. ಇಲ್ಲಿ ರೇಷ್ಮೆ, ದ್ರಾಕ್ಷಿ, ಸೆಣಬು, ಆಲಿವ್ ಮತ್ತು ಔಷಧಮೂಲಿಕೆಗಳ ಕೃಷಿಗೆ ಉತ್ತೇಜನ ಕೊಟ್ಟು ಅವುಗಳನ್ನು ಇಂಗ್ಲೆಂಡಿಗೆ ತರಿಸಿಕೊಳ್ಳಲಾಗುತ್ತಿತ್ತು. ಇಂಗ್ಲೆಂಡಿನಿಂದ ಮೊದಲ ತಂಡದ ಇಂಗ್ಲಿಷ್ ನೆಲಸಿಗರು ಓಗಲ್‍ತಾರ್ಪ್ ಎಂಬವನ ನಾಯಕತ್ವದಲ್ಲಿ ಬಂದು ಸವಾನದಲ್ಲಿ ನೆಲಸಿದರು (1733). ಇಂಗ್ಲಿಷರೂ ಜರ್ಮನಿಯ ಲೂತರ್ ಕ್ರೈಸ್ತ ಪಂಥದವರೂ ಸ್ಕಾಟ್ಲೆಂಡ್ ಮತ್ತು ಸ್ವಿಟ್‍ಜóರ್ಲೆಂಡ್ ಜನರೂ ಪೋರ್ಚುಗೀಸರೂ ಯೆಹೂದ್ಯರೂ ಜಾರ್ಜಿಯಕ್ಕೆ ಬಂದ ಮೊದಲ ವಲಸೆಗಾರರು. ಆದರೆ ವಲಸೆಗಾರರು ಅಧಿಕಾಧಿಕವಾಗಿ ಬಂದದ್ದು 1750ರ ತರುವಾಯ-ವರ್ಜಿನಿಯ ಮತ್ತು ಕ್ಯಾರಲೈನ ಪ್ರಾಂತ್ಯಗಳಿಂದ.

ಸ್ಪ್ಯಾನಿಷರ ದಾಳಿಗಳನ್ನು ತಡೆಗಟ್ಟುವುದು ಜಾರ್ಜಿಯಕ್ಕೆ ಸಾಧ್ಯವಾದರೂ ಆರ್ಥಿಕ ಅಡಚಣೆಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲಿ ಸಾಕಷ್ಟು ಕಾರ್ಮಿಕರು ದೊರಕುವುದು ಕಷ್ಟವಾಗಿತ್ತು. 1749ರ ತರುವಯ ಗುಲಾಮರನ್ನು ತರಿಸಿಕೊಳ್ಳಲು ಅನುಮತಿ ದೊರಕಿತು. ರಮ್‍ಮದ್ಯದ ಮೇಲೆ ಹಾಕಿದ್ದ ನಿಷೇಧವನ್ನು ಇಂಗ್ಲೆಂಡಿನ ಪಾರ್ಲಿಮೆಂಟ್ ತೆಗೆದುಹಾಕಿತು; ಭೂಹಿಡುವಳಿಯ ಕಠಿಣ ನಿಯಮಗಳನ್ನು ರದ್ದುಪಟಿಸಿತು. ಇಂಗ್ಲೆಂಡಿನ ದೊರೆ ನೀಡಿದ್ದ ಸನ್ನದಿನ ಅವಧಿ ಮುಗಿದ ಮೇಲೆ (1753) ಜಾರ್ಜಿಯ ಇಂಗ್ಲೆಂಡಿನ ವಸಾಹತು ಪ್ರಾಂತ್ಯವಾಯಿತು.

ಜಾರ್ಜಿಯ ಕ್ರಮಕ್ರಮವಾಗಿ ಆಭಿವೃದ್ಧಿ ಹೊಂದಿತು. ಅಮೆರಿಕ ಖಂಡದಲ್ಲೆ ಅತ್ಯಂತ ಪ್ರಗತಿ ಹೊಂದಿದ ವಸಾಹತಾಯಿತು. ಇಂಗ್ಲೆಂಡ್ ಸರ್ಕಾರದಿಂದ ಅದಕ್ಕೆ ಯಾವ ತೊಂದರೆ ಇಲ್ಲದಿದ್ದರೂ ಇತರ ಪ್ರಾಂತ್ಯಗಳಿಗೆ ಬೆಂಬಲ ನೀಡುವ ಸಲುವಾಗಿ ಅದು ಸ್ವಾತಂತ್ರ್ಯಕ್ಕಾಗಿ ಇಂಗ್ಲೆಂಡಿನ ವಿರುದ್ಧ ಹೋರಾಟದಲ್ಲಿ ಸೇರಿತು(1775-83). ಇಂಗ್ಲೆಂಡಿನ ಪಕ್ಷ ಮತ್ತು ಅಮೆರಿಕದ ಕ್ರಾಂತಿಕಾರಿ ಪಕ್ಷ-ಇವುಗಳ ಬಲ ಸಮನಾಗಿತ್ತು. ಜಾರ್ಜಿಯಕ್ಕೆ ಸೇರಿದ ಸವಾನವನ್ನು 1778ರಲ್ಲೂ ಆಗಸ್ಟ್ ಮತ್ತು ಸನ್‍ಬರಿ ನಗರಗಳನ್ನು 1779ರಲ್ಲೂ ಬ್ರಿಟಿಷರು ವಶಪಡಿಸಿಕೊಂಡರು. ಆದರೆ 1780ರ ತರುವಾಯ ಕ್ರಾಂತಿಕಾರಿ ದಳಗಳು ಉತ್ತರ ಭಾಗಗಳಲ್ಲಿ ಜಯಗಳಿಸಿದುವು. ಪರಿಸ್ಥಿತಿ ಬದಲಾಯಿಸಿತು. ಆ ತರುವಾಯ ಕ್ರಾಂತಿಕಾರಿ ಪಕ್ಷದಲ್ಲಿ ಒಡಕುಗಳುಂಟಾಗಿ ಜಾರ್ಜಿಯದ ಆಡಳಿತ ಹದಗೆಟ್ಟಿತು. 1777ರಲ್ಲಿ ರಾಜ್ಯದ ಸಂವಿಧಾನವನ್ನು ಅಂಗೀಕರಿಸಿದರೂ 1781ರವರೆಗೆ ಅಲ್ಲಿಯ ಆಡಳಿತದಲ್ಲಿ ಸಾಮರಸ್ಯವಿರಲಿಲ್ಲ.

ರಾಜ್ಯವ್ಯವಸ್ಥೆಯ ಕಾಲ[ಬದಲಾಯಿಸಿ]

ಅಮೆರಿಕ ಸ್ವಾತಂತ್ರ್ಯ ಯುದ್ಧದ ತರುವಾಯ 1787ರಲ್ಲಿ ನಡೆದ ಅಮೆರಿಕನ್ ಸಂವಿಧಾನ ಸಭೆಯಲ್ಲಿ ಜಾರ್ಜಿಯದ ಪ್ರತಿನಿಧಿಗಳು ಕೇಂದ್ರ ಸರ್ಕಾರವನ್ನು ಬಲಗೊಳಿಸುವ ನಿರ್ಣಯಗಳಿಗೆ ಬೆಂಬಲ ನೀಡಿದರು. ಅಮೆರಿಕ ಸಂಯುಕ್ತ ಸಂಸ್ಥಾನಗಳ ಸಂವಿಧಾನವನ್ನು (ಜನವರಿ 2, 1788) ಒಮ್ಮತದಿಂದ ಒಪ್ಪಿದ ರಾಜ್ಯಗಳಲ್ಲಿ ಜಾರ್ಜಿಯ ಮೂರನೆಯದು. ಕೇಂದ್ರಕ್ಕೂ ಜಾರ್ಜಿಯ ರಾಜ್ಯಕ್ಕೂ ನಡುವೆ ಆಗಾಗ್ಗೆ ಸಂಭವಿಸುತ್ತಿದ್ದ ಘರ್ಷಣೆಗಳು ರಾಜ್ಯ ಹಕ್ಕುಗಳನ್ನು ಕುರಿತ ಸಿದ್ಧಾಂತಕ್ಕೆ ಎಡೆಕೊಟ್ಟವು; ಯಾಜುó ಪ್ರದೇಶವನ್ನು ಜಾರ್ಜಿಯ ಅಕ್ರಮವಾಗಿ ಭೂವಿಕ್ರಯ ಕಂಪೆನಿಗಳಿಗೆ ಮಾರಿದಾಗ ಅಮೆರಿಕದ ಸೆನೆಟ್ ಅದರ ಬಗ್ಗೆ ವಿಚಾರಣಾ ಸಮಿತಿಯೊಂದನ್ನು ನೇಮಿಸಿತು. ಆ ಭೂಮಿಯ ಬಗ್ಗೆ ಜಾರ್ಜಿಯಕ್ಕೆ ಯಾವ ಹಕ್ಕೂ ಇಲ್ಲವೆಂದು ಸಮಿತಿ ತೀರ್ಮಾನಿಸಿತು. ಕೇಂದ್ರ ಸರ್ಕಾರ ಆ ಪ್ರದೇಶಕ್ಕೆ ಪ್ರಾದೇಶಿಕ ಸರ್ಕಾರವೊಂದನ್ನು ಏರ್ಪಡಿಸಿತು (1800). ಜಾರ್ಜಿಯಕ್ಕೆ ಈ ಕ್ರಮ ಒಪ್ಪಿಗೆಯಾಗಲಿಲ್ಲ. ಅದು ಪ್ರತಿಭಟನೆ ಸಲ್ಲಿಸಿತು. ಕೊನೆಗೆ ಭೂಮಿಯನ್ನು ಕೇಂದ್ರಕ್ಕೆ ಬಿಟ್ಟುಕೊಡಬೇಕೆಂದೂ ಗಡಿಯ ಆದಿವಾಸಿಗಳ ಭೂಭಾಗಗಳನ್ನು ಜಾರ್ಜಿಯದ ಉಪಯೋಗಕ್ಕಾಗಿ ಕೇಂದ್ರ ಬಿಡಿಸಿಕೊಡಬೇಕೆಂದೂ ತೀರ್ಮಾನವಾಯಿತು. ಕ್ರೀಕ್ಸ್ ಆದಿವಾಸಿಗಳು ತಮ್ಮ ಭೂಮಿಯನ್ನು ಬಿಟ್ಟುಕೊಡುವ ಬಗ್ಗೆ ವ್ಯವಹಾರ ನಡೆದು 1827ರಲ್ಲಿ ಅಂತಿಮ ಕರಾರು ಏರ್ಪಟ್ಟಿತು. 1828ರಲ್ಲಿ ಜಾರ್ಜಿಯದ ಆಧಿಕಾರ ಚೆರೋಕೀ ಜನರ ಪ್ರದೇಶಕ್ಕೆ ವ್ಯಾಪಿಸಿತು. ಈ ಕ್ರಮಕ್ಕೆ ಆಗಿನ ರಾಷ್ಟ್ರಾಧ್ಯಕ್ಷ ಆಂಡ್ರ್ಯೂ ಜ್ಯಾಕ್ಸನನ ಬೆಂಬಲವಿತ್ತು. ಚೆರೋಕೀ ಇಂಡಿಯನರು ಈ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಈ ಜನ ಪ್ರತ್ಯೇಕ ಸಮುದಾಯವಾದ ಕಾರಣ ಜಾರ್ಜಿಯಕ್ಕೆ ಅವರ ಮೇಲೆ ಅಧಿಕಾರವ್ಯಾಪ್ತಿ ಇಲ್ಲವೆಂಬುದು ನ್ಯಾಯಾಲಯ ನೀಡಿದ ತೀರ್ಪು. ಜ್ಯಾಕ್ಸನ್ ಉಚ್ಚ ನ್ಯಾಯಾಲಯದ ತೀರ್ಮಾನವನ್ನು ಜಾರಿ ಮಾಡಲು ನಿರಾಕರಿಸಿದನಲ್ಲದೆ ಚಿರೊಕೀ ಇಂಡಿಯನರು ಜಾರ್ಜಿಯದ ಹೊರಗೆ ನೆಲೆಸುವಂತೆ ವ್ಯವಸ್ಥೆ ಮಾಡಿದ (1838).

ಗುಲಾಮ ನೀತಿ, ಅಮೆರಿಕದ ಅಂತರ್ಯುದ್ಧ[ಬದಲಾಯಿಸಿ]

ರಾಜ್ಯ ಸ್ಥಾಪನೆಯಾದ ಕಾಲದಲ್ಲಿ ರಾಜಕೀಯ ಸಾಮರಸ್ಯವಿತ್ತು. ಆದರೆ ಕ್ರಮೇಣ ಒಡಕುಂಟಾಯಿತು. ತೀರಪ್ರದೇಶದವರೂ ಗುಲಾಮರನ್ನು ಹೊಂದಿದ್ದ ಉತ್ತರದವರೂ ಒಂದು ಪಂಗಡವಾದರು. ಇದಕ್ಕೆ ವಿಲಿಯಂ ಎಚ್. ಕ್ರಾಫರ್ಡ್ ಮತ್ತು ಜಾರ್ಜ್ ಎಂ.ಟ್ರೂಪ್ ನಾಯಕರು. ಗುಲಾಮ ಪದ್ಧತಿಯನ್ನು ವಿರೋಧಿಸುತ್ತಿದ್ದವರದು ಮತ್ತು ಗಡಿ ಜನರದು ಇನ್ನೊಂದು ಪಂಗಡ. ಜಾನ್ ಕ್ಲಾರ್ಕನೂ ಅವನ ತಂದೆ ಎಲಿಜನೂ ಇದರ ನಾಯಕರು. ಕಾಲಕ್ರಮದಲ್ಲಿ ಟ್ರೂಪನ ಪಕ್ಷ ವಿಗ್ ಪಕ್ಷದೊಂದಿಗೆ ಸೇರಿಹೋಯಿತು; ಕ್ಲಾರ್ಕನ ಪಕ್ಷ ಪ್ರೆಸಿಡೆಂಟ್ ಜ್ಯಾಕ್‍ಸನನ ನಾಯಕತ್ವದಲ್ಲಿದ್ದ ಡೆಮೊಕ್ರಾಟಿಕ್ ಪಕ್ಷವನ್ನು ಸೇರಿತು. ಗುಲಾಮರನ್ನು ಕೊಳ್ಳುವ ಪದ್ಧತಿಯನ್ನು ಎತ್ತಿಹಿಡಿಯುತ್ತಿದ್ದ 11 ರಾಜ್ಯಗಳು ಅಮೆರಿಕದ ಒಕ್ಕೂಟದಿಂದ ಪ್ರತ್ಯೇಕವಾದುವು (1860-61). ಇದರಲ್ಲಿ ಜಾರ್ಜಿಯವೂ ಸೇರಿತ್ತು. ಅಮೆರಿಕದ ಅಂತರ್ಯುದ್ಧಕ್ಕೆ (1861-65) ಕಾರಣವಾದ ಘಟನೆ ಇದು.

ಅಂತರ್ಯುದ್ಧದಲ್ಲಿ ಜಾರ್ಜಿಯಕ್ಕೆ ಸಂಬಂಧಪಟ್ಟಂತೆ ಕರ್ನಲ್ ಅಲೆಗ್ಸಾಂಡರ್ ಲಾಟನ್, ಪುಲಸ್ಕಿ ಕೋಟೆ ಹಿಡಿದ ; ಜಾರ್ಜಿಯದ ಗವರ್ನರ್ ಜೋಸೆಫ್ ಎಮರ್ಸನ್ ಬ್ರೌನ್ ಆಗಸ್ಟ ನಗರದ ಕೇಂದ್ರ ಮದ್ದಿನ ಕಾರ್ಖಾನೆ ವಶಪಡಿಸಿಕೊಂಡ. 1861 ಕೊನೆಯ ಹೊತ್ತಿಗೆ ಒಕ್ಕೂಟ ಸರ್ಕಾರದ ಯುದ್ಧನೌಕೆಗಳು ಟೈಬೀದ್ವೀಪ, ಪುಲಸ್ಕಿ ಕೋಟೆ, ಸೇಂಟ್ ಮೇರಿ, ಬ್ರನ್ಸ್‍ವಿಕ್ ಮತ್ತು ಸೇಂಟ್ ಸೈಮನ್ಸ್ ದ್ವೀಪ-ಇವುಗಳನ್ನು ಆಕ್ರಮಿಸಿಕೊಂಡವು. 1863ರಲ್ಲಿ ಒಕ್ಕೂಟ ಸೈನ್ಯ ಟೆನಸೀ ಕಣಿವೆಯ ಮೂಲಕ ಬಂದು ಜಾರ್ಜಿಯಕ್ಕೆ ಮುತ್ತಿಗೆ ಹಾಕಿತು; ಅದೇ ವರ್ಷ ಸೆಪ್ಟೆಂಬರ್ 6ರಂದು ಅಟ್ಲಾಂಟ ನಗರವನ್ನು ಸುಟ್ಟು ಹಾಕಿತು. ಸವಾನ ನಗರ ಒಕ್ಕೂಟಪಡೆಯ ವಶವಾಯಿತು. ಜನರಲ್ ಜೆ.ಎಚ್.ವಿಲ್ಸನ್ 1865ರಲ್ಲಿ ಕೊಲಂಬಸ್ ಮತ್ತು ವೆಸ್ಟ್ ಪಾಯಿಂಟ್ ನಗರಗಳನ್ನು ವಶಪಡಿಸಿಕೊಂಡ.

ರಾಜ್ಯ ಪುನರ್ವ್ಯವಸ್ಥೆ[ಬದಲಾಯಿಸಿ]

ಅಂತರ್ಯುದ್ಧದ ತರುವಾಯ ಅಧ್ಯಕ್ಷ ಆಂಡ್ರ್ಯೂ ಜಾಕ್ಸನ್ ದಕ್ಷಿಣ ರಾಜ್ಯಗಳ ಪುನರ್ರಚನೆಗೆ ಯೋಜನೆ ರೂಪಿಸಿದ. ನವೆಂಬರ್ 1865ರಲ್ಲಿ ಜಾರ್ಜಿಯದ ಶಾಸಕಾಂಗದ ಸದಸ್ಯರ ಮತ್ತು ಇತರ ಅಧಿಕಾರಿಗಳ ಆಯ್ಕೆಯಾಯಿತು. ಚಾಲ್ರ್ಸ್ ಜೆ.ಜೆಂಕಿನ್ಸ್ ಗವರ್ನರ್ ಆಗಿ ನೇಮಕವಾದ. 1867ರಲ್ಲಿ ಸೈನಿಕ ಸರ್ಕಾರಕ್ಕೆ ರಾಜ್ಯ ಒಳಪಟ್ಟಿತು. 1868ರಲ್ಲಿ ಪರಿಷ್ಕøತ ಸಂವಿಧಾನದ ಅಂಗೀಕಾರವಾಗಿ ಗವರ್ನರ್ ಮತ್ತು ವಿಧಾನ ಮಂಡಲ ಸದಸ್ಯರ ಚುನಾವಣೆಯಾಯಿತು. ರಿಪಬ್ಲಿಕನ್ ಅಭ್ಯರ್ಥಿ ರೂಫಸ್ ಬ್ರೌನ್ ಬುಲಕ್ ಗವರ್ನರ್ ಆಗಿ ಚುನಾಯಿತನಾದ. ಅದೇ ವರ್ಷ ಸೆಪ್ಟಂಬರ್‍ನಲ್ಲಿ ಡೆಮೊಕ್ರಾಟಿಕ್ ಪಕ್ಷ ರಿಪಬ್ಲಿಕನ್ ಪಕ್ಷದ ಬಿಳಿಯರೊಡನೆ ಸೇರಿ ರಾಜ್ಯದ ವಿಧಾನ ಮಂಡಲದಿಂದ 27 ನೀಗ್ರೋ ಸದಸ್ಯರನ್ನು ತೆಗೆದುಹಾಕಿ, ಚುನಾವಣೆಯಲ್ಲಿ ಸೋತ ಬಿಳಿಯ ಅಭ್ಯರ್ಥಿಗಳನ್ನು ಸೇರಿಸಿತು. ಪ್ರತೀಕಾರವಾಗಿ ಅಮೆರಿಕದ ಕಾಂಗ್ರೆಸ್ ಜಾರ್ಜಿಯದ ಪ್ರತಿನಿಧಿಗಳನ್ನು ತೆಗೆದುಹಾಕಿ, ಜಾರ್ಜಿಯವನನ್ನು ಸೈನಿಕ ಅಧಿಕಾರಕ್ಕೆ ಒಳಪಡಿಸಿತು. ವರ್ಣಭೇದದಿಂದ ಯಾರಿಗೂ ಪಕ್ಷಪಾತವಾಗಬಾರದೆಂಬುದಾಗಿ ಅನಂತರ ನಿರ್ಣಯವಾಯಿತು. ಹೊಸ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಶಾಸನ ಮಂಡಲದ ಉಭಯ ಸದನಗಳಲ್ಲೂ ಬಹುಮತ ದೊರಕಿತು. 1870ರ ಜುಲೈ 15ರಂದು ಜಾರ್ಜಿಯ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಅಂತಿಮವಾಗಿ ಸೇರಿತು.

ಹೀಗೆ ವ್ಯವಸ್ಥೆಗೊಂಡ ರಾಜ್ಯದಲ್ಲಿ ಡೆಮೊಕ್ರಾಟಿಕ್ ಪಕ್ಷ ಬಹುಕಾಲ-1964ರವರೆಗೆ ಪ್ರಬಲವಾಗಿತ್ತು. ಗ್ರಾಮಾಂತರ ಮತದಾರರಿಗೆ ಪ್ರತಿನಿಧಿಗಳ ಸಭೆಯಲ್ಲಿ ಸರಿಯಾದ ಪ್ರಾತಿನಿಧ್ಯವಿಲ್ಲದಿದ್ದುದರಿಂದ ಕೌಂಟಿ ಆಡಳಿತ ಘಟಕ ಚುನಾವಣಾ ಕ್ಷೇತ್ರಗಳಿಗೆ ಬದಲಾಗಿ, ಜನಸಂಖ್ಯಾನುಗುಣವಾಗಿ ಚುನಾವಣಾ ಜಿಲ್ಲೆಗಳಿರಬೇಕೆಂದು ಅಮೆರಿಕದ ಪರಮೋಚ್ಚ ನ್ಯಾಯಾಲಯ ತೀರ್ಪು ಕೊಟ್ಟಿತು. ರಾಜ್ಯ ಸಂಘಟನೆ : ಸರ್ಕಾರದಲ್ಲಿ ಮಿತವ್ಯಯ ಮತ್ತು ದಕ್ಷತೆಯನ್ನು ತರಲು ಗವರ್ನರ್ ರಿಚರ್ಡ್ ಬಿ.ರಸೆಲ್.102 ಆಡಳಿತ ಘಟಕಗಳಿಗೆ ಬದಲಾಗಿ 18 ಆಡಳಿತ ವಿಭಾಗಗಳನ್ನು ಏರ್ಪಡಿಸಿದ (1931). ಸರ್ಕಾರಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಆಡಳಿತಕ್ಕೆ ಬೋರ್ಡ್ ಆಫ್ ರೀಜೆಂಟ್ಸ್ ಎಂಬ ಮಂಡಲಿ ಏರ್ಪಟ್ಟಿತು. ರಸೆಲನ ತರುವಾಯ 1933ರಲ್ಲಿ ಗವರ್ನರ್ ಆದ ಯುಜೀನ್ ಟಾಲ್ಮಾಡ್ಜ್ 4 ವರ್ಷಕಾಲ ಕೇಂದ್ರ ಸರ್ಕಾರದ ಆಡಳಿತ ಕ್ರಮವನ್ನು ಪ್ರತಿಭಟಿಸಿದ; ಮತ್ತೆ 1937ರಲ್ಲಿ ಅಧಿಕಾರಕ್ಕೆ ಬಂದು ಎಲ್ಲ ಜನಾಂಗಗಳಿಗೂ ಸಮಾನ ಸಾಮಾಜಿಕ ಹಕ್ಕುಗಳನ್ನು ಸಾಧಿಸಿಕೊಡಲು ಮತ್ತು ಬಿಳಿಯರ ಹೆಚ್ಚಳಿಕೆಯನ್ನು ತೊಡೆದುಹಾಕಲು ಪ್ರಯತ್ನಿಸಿದ. 1942ರಲ್ಲಿ ಅವನನ್ನು ಸೋಲಿಸಿ ಗವರ್ನರ್ ಆದ ಎಲಿಸ್ ಗಿಬ್ಸ್ ಆರ್ನಾಲ್ಡ್ ಮತದಾನ ವಯಸ್ಸನ್ನು 18ಕ್ಕೆ ಇಳಿಸಿದ. 1945ರಲ್ಲಿ ಸುಮಾರು 50 ಬದಲಾವಣೆಗಳಿಂದ ಕೂಡಿದ ಹೊಸ ಸಂವಿಧಾನ ಅಂಗೀಕೃತವಾಯಿತು. ನೀಗ್ರೋಗಳ ಬಗ್ಗೆ ಪಕ್ಷಪಾತ ನೀತಿ ಹೆಚ್ಚಾಗುತ್ತಿರಲು 1954ರಲ್ಲಿ ಅಮೆರಿಕದ ಉಚ್ಚ ನ್ಯಾಯಾಲಯ ಸಾರ್ವತ್ರಿಕ ಶಾಲೆಗಳಲ್ಲಿ ನೀಗ್ರೋಗಳನ್ನು ಪ್ರತ್ಯೇಕಿಸುವುದು ಸಂವಿಧಾನ ವಿರುದ್ಧವೆಂದು ತೀರ್ಮಾನಿಸಿತು. ನೀಗ್ರೋ ಮತ್ತು ಬಿಳಿಯರ ಶಾಲೆಗಳ ಸಂಘಟನೆ ನಿಧಾನವಾಗಿ ಸಾಗಿತು.

ಸರ್ಕಾರ[ಬದಲಾಯಿಸಿ]

1945ರಲ್ಲಿ ಅಂಗೀಕರಿಸಲಾದ ಸಂವಿಧಾನದ ಪ್ರಕಾರ ರಾಜ್ಯದ ಸೆನೆಟ್ ಸಭೆಯಲ್ಲಿ 54 ಸದಸ್ಯರೂ ಪ್ರತಿನಿಧಿಗಳ ಸಭೆಯಲ್ಲಿ 205 ಸದಸ್ಯರೂ ಇರುತ್ತಾರೆ. ಉಭಯಸದನಗಳ ಸದಸ್ಯರ ಅಧಿಕಾರಾವಧಿ 2 ವರ್ಷ. ಗವರ್ನರ್ ಮತ್ತು ಲೆಫ್ಟಿನೆಂಟ್ ಗವರ್ನರ್ ಚುನಾವಣೆ 4 ವರ್ಷಗಳಿಗೊಮ್ಮೆ. ಜಾರ್ಜಿಯಕ್ಕೆ ಕಾಂಗ್ರೆಸಿನ ಸೆನೆಟಿನ 2 ಮತ್ತು ಪ್ರತಿನಿಧಿಗಳ ಸಭೆಯಲ್ಲಿ 10 ಸ್ಥಾನಗಳಿವೆ. ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆ 7.

ಶಿಕ್ಷಣ[ಬದಲಾಯಿಸಿ]

ಅಮೆರಿಕ ಸ್ವಾತಂತ್ರ್ಯ ಸಮರದ ತರುವಾಯ ಜಾರ್ಜಿಯದಲ್ಲಿ ಪ್ರೌಢಶಾಲೆಗಳು ಏರ್ಪಟ್ಟವು. ಪ್ರಾಥಮಿಕ ಶಾಲೆಗಳಲ್ಲಿ ಉಚಿತ ಶಿಕ್ಷಣಕ್ಕೆ 1868ರ ಸಂವಿಧಾನ ಅವಕಾಶ ನೀಡಿತು. 1912ರಿಂದ ಪ್ರೌಢಶಾಲಾ ವ್ಯಾಸಂಗ ಸಾರ್ವತ್ರಿಕ ಶಿಕ್ಷಣ ಪದ್ಧತಿಯ ಅಂಗವಾಯಿತು.

ಆತೆನ್ಸ್‍ನ ಜಾರ್ಜಿಯ ವಿಶ್ವವಿದ್ಯಾಲಯ (1785) ರಾಜ್ಯದ ಅತ್ಯಂತ ಹಳೆಯ ವಿಶ್ವವಿದ್ಯಾಲಯ. 1828ರಲ್ಲಿ ವೈದ್ಯಕೀಯ ಕಾಲೇಜು ಆಗಸ್ಟ ನಗರದಲ್ಲಿ ಏರ್ಪಟ್ಟಿತು. ಅಟ್ಲಾಂಟದಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆ, ಮಿಲೆಡ್ಜ್‍ವಿಲಿಯಲ್ಲಿ ಮಹಿಳಾ ಕಾಲೇಜು; ಆಲ್ಬನಿ, ಪೋರ್ಟ್ ವ್ಯಾಲಿ ಮತ್ತು ಸವಾನ ನಗರಗಳಲ್ಲಿ ನೀಗ್ರೋ ಕಾಲೇಜುಗಳು ಸ್ಥಾಪಿತವಾದುವು. ಆರ್ಥಿಕತೆ : ಎರಡನೆಯ ಮಹಾಯುದ್ಧದವರೆಗೆ ಜಾರ್ಜಿಯದ ಮುಖ್ಯ ಕಸುಬು ವ್ಯವಸಾಯವಾಗಿತ್ತು. ಅನಂತರ ಕೃಷಿಯ ಯಾಂತ್ರೀಕರಣದಿಂದ ವ್ಯವಸಾಯಾವಲಂಬಿಗಳ ಸಂಖ್ಯೆ ಕಡಿಮೆಯಾಯಿತು. ಕೈಗಾರಿಕೆ ತ್ವರಿತವಾಗಿ ಅಭಿವೃದ್ಧಿಗೊಂಡಿತು. ಜಾರ್ಜಿಯದ ಮುಖ್ಯ ಬೆಳೆ ಹತ್ತಿ, ಹೊಗೆಸೊಪ್ಪು, ನೆಲಗಡಲೆ, ಪೀಚ್ ಹಣ್ಣು. ಕೋಳಿಸಾಗಣೆ, ಪಶುಪಾಲನೆ, ತೀರಪ್ರದೇಶದಲ್ಲಿ ಮೀನುಗಾರಿಕೆ-ಇವೂ ನಡೆಯುತ್ತವೆ. ಕಯೊಲಿನ್, ಸುಣ್ಣಕಲ್ಲು, ಸಿಮೆಂಟ್, ಬಾಕ್ಸೈಟ್, ಜೇಡಿಮಣ್ಣು ಇಲ್ಲಿಯ ಖನಿಜಗಳು. ಬಟ್ಟೆ ತಯಾರಿಕೆ ಮರಗೆಲಸ-ಇವು ಇಲ್ಲಿಯ ಪ್ರಮುಖ ಕೈಗಾರಿಕೆಗಳು.

ರಾಜ್ಯದ ಹಿರಿಯ ಪಟ್ಟಣಗಳು ಅಟ್ಲಾಂಟ (4,97,421), ಆಗಸ್ಟ (59,864), ಕೊಲಂಬಸ್ (1,55,028), ಮಾಕಾನ್ (33,445) ಮತ್ತು ಸವಾನ (18,349), ಅಟ್ಲಾಂಟ ರಾಜಧಾನಿ, ಪ್ರಮುಖ ರೈಲ್ವೆ ಜಂಕ್ಷನ್. ರಾಜ್ಯದಲ್ಲಿ 97,525 ಮೈ. ಉದ್ದದ ಹೆದ್ದಾರಿಗಳಿವೆ. ವಿಮಾನ ನಿಲ್ದಾಣಗಳು 131 (1967); ರೈಲುಮಾರ್ಗ 5,705 ಮೈ.ಬ್ರನ್ಸ್‍ವಿಕ್ (19,585) ಮತ್ತು ಸವಾನ ರೇವುಪಟ್ಟಣಗಳು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಮೂಲಗಳು[ಬದಲಾಯಿಸಿ]

  1. "Annual Estimates of the Resident Population for the United States, Regions, States, and Puerto Rico: April 1, 2000 to July 1, 2008". United States Census Bureau. Retrieved 2009-02-01.
  2. ೨.೦ ೨.೧ "Elevations and Distances in the United States". U.S Geological Survey. 29 April 2005. Archived from the original on 1 ಜೂನ್ 2008. Retrieved November 3 2006. {{cite web}}: Check date values in: |accessdate= (help); Unknown parameter |dateformat= ignored (help)