ಆಟೋಕ್ಲೇವ್
Uses | Sterilization |
---|---|
Inventor | Charles Chamberland |
Related items | Waste autoclave |
ಆಟೋಕ್ಲೇವ್ ಉಪಕರಣಗಳು ಮತ್ತು ವಸ್ತುಗಳನ್ನು ಕ್ರಿಮಿರಹಿತಗೊಳಿಸಲು ಬಳಸುವ ಸಾಧನ. ಇದು ರಾಸಾಯನಿಕ ಅಥವಾ ಭೌತಕ್ರಿಯಾಪರಿಣಾಮ ಅಥವಾ ಪ್ರಯೋಗವರ್ಧನವಾಗಿ ಉಪಯೋಗಿಸಲು ಉಷ್ಣ ಮತ್ತು ಸಂಮರ್ದಗಳನ್ನು ತಡೆದಿಟ್ಟುಕೊಳ್ಳುವಂಥ ಪಾತ್ರೆ (ಯಾಂತ್ರಿಕ ಉಷ್ಣಬಲೋಪಕರಣ). ಅಡಿಗೆಗೆ ಉಪಯೋಗಿಸುವ ಪ್ರೆಷರ್ ಕುಕ್ಕರನ್ನು ಒಂದು ರೀತಿಯ ಆಟೋಕ್ಲೇವ್ ಎಂದೇ ಹೇಳಬಹುದು. ವಸ್ತುಗಳನ್ನು ಅಧಿಕ ಹಬೆಯಲ್ಲಿ 121°C ಉಷ್ಣಾಂಶಕ್ಕೆ ಒಳಪಡಿಸಲಾಗುತ್ತದೆ. ಸಾಮಾನ್ಯವಾಗಿ ಇವುಗಳನ್ನು 15 ರಿಂದ 20 ನಿಮಿಷಗಳ ಕಾಲ ಅವುಗಳ ಗಾತ್ರವನ್ನು ಆಧರಿಸಿ ಇಡಲಾಗುತ್ತದೆ.[೧] ಚಾರ್ಲ್ಸ್ ಚೇಂಬರ್‌ಲ್ಯಾಂಡ್ ಎಂಬುವನು ಇದನ್ನು 1879 ರಲ್ಲಿ ಆವಿಷ್ಕಾರ ಮಾಡಿದನು. ಇದಕ್ಕೆ ಪೂರ್ವಗಾಮಿಯಾದ ಹಬೆಯ ಪಾತ್ರೆಯನ್ನು ಡೆನಿಸ್ ಪ್ಯಾಪಿನ್ 1679 ರಲ್ಲಿ ನಿರ್ಮಿಸಿದನು.[೨][೩] ಈ ಹೆಸರು ಫ್ರೆಂಚ್ ನ ಆಟ್ ಮತ್ತು ಲ್ಯಾಟೀನ್‍ನ ಕ್ಲೇವಿಸ್ ಎಂಬ ಪದದಿಂದ ಬಂದಿದೆ. ತನ್ನಷ್ಟಕ್ಕೆ ತಾನೇ ಮುಚ್ಚಿಕೊಳ್ಳುವ ಸಾಧನವೆಂಬುದು ಇದರ ಅರ್ಥವಾಗಿದೆ.[೪]
ವಿಧಗಳು
[ಬದಲಾಯಿಸಿ]ಆಟೋಕ್ಲೇವ್‌ಗಳಲ್ಲಿ ಎರಡು ಪ್ರಮುಖ ವಿಧಗಳಿವೆ:
- ವಾಸ್ತವವಾಗಿ ಒಲೆ ಮೇಲಿನ ಆಟೋಕ್ಲೇವ್‍ಗಳು ಆಡುಗೆಗೆ ಬಳಸುವ ಪ್ರೆಷರ್ ಕುಕರ್‌ನಂತೆ ಇರುತ್ತವೆ. ಪ್ರತಿ ಘಟಕವು ಸಂಪೂರ್ಣವಾದ ಮುಚ್ಚಳವನ್ನು ಮತ್ತು ಹೊರಗೆ ಒತ್ತಡಮಾಪಕವನ್ನು ಹೊಂದಿರುತ್ತದೆ. ಈ ಘಟಕಗಳಿಗೆ ಹೊರಗಿನ ಶಾಖದ ಮೂಲಗಳ ಅವಶ್ಯಕತೆ ಇರುತ್ತದೆ. ಅಲ್ಲದೇ ಇದು ಅನುಭವವಿಲ್ಲದವರ ಕೈಯಲ್ಲಿ ಅತ್ಯಂತ ಅಪಾಯಕಾರಿಯಾಗಿರುತ್ತದೆ. ಇವುಗಳನ್ನು ಕೇವಲ ಅನುಭವವಿರುವ ವೃತ್ತಿಪರರು ಮಾತ್ರ ಬಳಸಬಹುದು.
- ಮುಂದಿನಿಂದ ತುಂಬುವ ಆಟೋಕ್ಲೇವ್‍ಗಳನ್ನು ಅವುಗಳ ಅನುಕೂಲದ ಕಾರಣ ಹೆಚ್ಚು ಬಳಸಲಾಗುತ್ತದೆ. ಆದರೆ ಹೆಚ್ಚಿನವನ್ನು ಅತ್ಯಂತ ಜಾಗರೂಕತೆಯಿಂದ ಬಳಸಬೇಕಾಗುತ್ತದೆ. ಈ ಘಟಕಗಳು ಪೆಟ್ಟಿಗೆಯ ಆಕಾರದಲ್ಲಿ ಇರುತ್ತವೆ. ಅಲ್ಲದೇ ಸ್ವಸಂಪೂರ್ಣವಾಗಿರುತ್ತವೆ. ಕ್ರಿಮಿಶುದ್ಧೀಕರಣಕ್ಕಾಗಿ ನೀರನ್ನು ಆವಿಯಾಗಿಸಲು ಶಾಖವನ್ನು ಉತ್ಪತ್ತಿ ಮಾಡುವ ಘಟಕವನ್ನು ಹೊಂದಿರುತ್ತವೆ. ಆಟೋಕ್ಲೇವ್‍ನ ನಿಯಂತ್ರಕಗಳು ನಿರ್ವಾಹಕನಿಗೆ ಎಷ್ಟು ಬೇಕೋ ಅಷ್ಟು ತಾಪಮಾನವನ್ನು ನಿಗದಿಪಡಿಸಲು ಅವಕಾಶ ನೀಡುತ್ತವೆ. ಅಲ್ಲದೇ ಎಲ್ಲಿಯವರೆಗೆ ಆ ಯಂತ್ರ ಕಾರ್ಯನಿರ್ವಹಿಸಬೇಕೆಂದು ನಿರ್ಧರಿಸುವಂತಹ ಅವಕಾಶವನ್ನು ಕೂಡ ನೀಡುತ್ತವೆ. ಕೋಶದ ತಾಪಮಾನ/ಒತ್ತಡವನ್ನು ಕಂಡುಹಿಡಿಯುವ ಮಾಪಕವೂ ಕೂಡ ಇರುತ್ತದೆ.
ಉಪಯೋಗಗಳು
[ಬದಲಾಯಿಸಿ]ಆಟೋಕ್ಲೇವ್‍ಗಳನ್ನು ಸೂಕ್ಷ್ಮ ಜೀವ ವಿಜ್ಞಾನ, ವೈದ್ಯಶಾಸ್ತ್ರ, ಹಚ್ಚೆ ಹಾಕುವುದು, ದೇಹ ಚುಚ್ಚುವಿಕೆ, ಪಶು ವಿಜ್ಞಾನ, ಶೀಲಿಂಧ್ರ ಶಾಸ್ತ್ರ, ದಂತಚಿಕಿತ್ಸಾ ಶಾಸ್ತ್ರ, ಪಾದಚಿಕಿತ್ಸೆ ಮತ್ತು ಕೃತಕ ಅವಯವ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ಈ ಬಲಬಂಧಿತ ಪಾತ್ರೆಯನ್ನು ರಾಸಾಯನಿಕ ಮತ್ತು ಇತರ ಕೈಗಾರಿಕೋದ್ಯಮಗಳಲ್ಲಿ ವಿಶೇಷವಾಗಿ ಬಳಸುತ್ತಾರೆ. ಕ್ರಿಮಿತಜ್ಞರು ಕ್ರಿಮಿಕೀಟಗಳ ಅನುತ್ಪಾದನ ವಾತಾವರಣ ರಚನೆಯಲ್ಲಿ, ಅವುಗಳ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಮತ್ತು ಕೊಳಚೆ ವಾತಾವರಣ ನಿವೃತ್ತಿಯಲ್ಲಿ ವಿಶೇಷವಾಗಿ ಈ ಶುದ್ಧೀಕರಣ ವಿಧಾನವನ್ನು ಬಳಸುತ್ತಾರೆ.
ಇದರಲ್ಲಿ ಹಾಕುವ ವಸ್ತುಗಳು ಗಾಜಿನ ಸಾಮಾನು, ವೈದ್ಯಕೀಯ ತ್ಯಾಜ್ಯ, ಪಾತ್ರೆಗಳು, ಪ್ರಾಣಿಗಳ ಬೋನಿನ ಮೆತ್ತೆ ಮತ್ತು ಲೈಸೋಜೆನಿ ಮಾಂಸದುಂಡೆಯನ್ನು ಒಳಗೊಂಡಿರುತ್ತದೆ.[೫]
ಆಟೋಕ್ಲೇವ್‍ಗಳನ್ನು ತ್ಯಾಜ್ಯದ ಸಂಸ್ಕರೆಣೆಗೆ ಮತ್ತು ಕ್ರಿಮಿಶುದ್ಧೀಕರಣಕ್ಕೆ ಬಳಸುತ್ತಿರುವುದು ಹೆಚ್ಚುತ್ತಿದೆ. ಉದಾಹರಣೆಗೆ: ಆಸ್ಪತ್ರೆಯ ರೋಗಕಾರಕ ತ್ಯಾಜ್ಯಗಳಿಗೆ ಬಳಸಲಾಗುತ್ತದೆ. ಈ ವರ್ಗದಲ್ಲಿನ ಯಂತ್ರಗಳನ್ನು ಹೆಚ್ಚಾಗಿ ಮೂಲ ಆಟೋಕ್ಲೇವ್‍ನ ತತ್ವಗಳನ್ನು ಆಧರಿಸಿಯೇ ನಿರ್ವಹಿಸಲಾಗುತ್ತದೆ. ಇವುಗಳಲ್ಲಿ ಒತ್ತಡಕ್ಕೇರಿಸಿದ ಹಬೆಯನ್ನು ಬಳಸಿಕೊಂಡು ಮತ್ತು ಹೆಚ್ಚಾಗಿ ಕಾಯಿಸಿದ ನೀರಿನಿಂದ ಸೋಂಕುಕಾರಕಗಳ ಪದಾರ್ಥಗಳನ್ನು ತಟಸ್ಥಗೊಳಿಸಬಹುದು. ಹೊಸ ಪೀಳಿಗೆಯ ತ್ಯಾಜ್ಯ ಪರಿವರ್ತಕಗಳು ಯಾವುದೇ ಹಬೆಯ ಪಾತ್ರೆಗಳನ್ನು ಉಪಯೋಗಿಸದೆ ಸೂಕ್ಷ್ಮ ಜೀವಾಣು ಬೆಳೆಸುವ ಮಾಧ್ಯಮ, ರಬ್ಬರ್ ವಸ್ತುಗಳು, ನಿಲುವಂಗಿ, ಬಟ್ಟೆ, ಗ್ಲವ್ಸ್‌ಗಳಲ್ಲಿರುವ ಕ್ರಿಮಿಗಳನ್ನು ನಾಶಮಾಡುವುದರಲ್ಲಿ ಅದೇ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿವೆ. ಇದು ವಿಶೇಷವಾಗಿ ಅವನ್‍ನ ಅತಿ ಹೆಚ್ಚು ತಾಪಮಾನದ ಬಿಸಿಗಾಳಿಯನ್ನು ತಡೆದುಕೊಳ್ಳಲಾಗದ ವಸ್ತುಗಳಿಗೆ ಹೆಚ್ಚು ಉಪಯುಕ್ತವಾಗಿದೆ. ಎಲ್ಲಾ ಸಿರಿಂಜ್‍ಗಳಿಗೆ, ಬಿಸಿಗಾಳಿ ಅವನ್ ಹೆಚ್ಚು ಉತ್ತಮ ಕ್ರಿಮಿನಾಶಕ ವಿಧಾನವಾಗಿದೆ.
ಗಾಳಿಯನ್ನು ತೆಗೆಯುವುದು
[ಬದಲಾಯಿಸಿ]ಒಳಗಿರುವ ಎಲ್ಲಾ ಗಾಳಿಯು ಹೊರಹೋಗಿದೆ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಬಿಸಿ ನೀರಿಗೆ ಶುಷ್ಕತೆಯನ್ನು ಪಡೆಯುವ ಸಾಮರ್ಥ್ಯ ಕಡಿಮೆಯಿರುತ್ತದೆ. ಶುಷ್ಕತೆಯನ್ನು 134°C ಉಷ್ಣಾಂಶದ ಹಬೆಯಲ್ಲಿ 3 ನಿಮಿಷಗಳಲ್ಲಿ ಪಡೆಯಬಹುದು. ಅದೇ ಶುಷ್ಕತೆಯನ್ನು ಬಿಸಿಗಾಳಿಯಲ್ಲಿ 160°C ಉಷ್ಣಾಂಶದಲ್ಲಿ ಪಡೆಯಲು ಎರಡು ಗಂಟೆಗಳು ಬೇಕಾಗುತ್ತದೆ.[೬] ಗಾಳಿಯನ್ನು ತೆಗೆಯುವ ವಿಧಾನಗಳು ಈ ಕೆಳಕಂಡವುಗಳನ್ನು ಒಳಗೊಂಡಿವೆ:
ಕೆಳಮುಖವಾದ ಸ್ಥಳಪಲ್ಲಟನ (ಅಥವಾ ಗುರುತ್ವದ ರೀತಿಯಲ್ಲಿ) - ಹಬೆಯು ಕೋಶವನ್ನು ಪ್ರವೇಶಿಸಿದಾಗ ಇದು ಮೇಲಿನ ಜಾಗವನ್ನು ಆವರಿಸುತ್ತದೆ. ಇದು ಗಾಳಿಗಿಂತ ಕಡಿಮೆ ಸಾಂದ್ರತೆಯನ್ನು ಹೊಂದಿರುತ್ತದೆ. ಆದಕಾರಣ ದಂಬೆಯ ಮೂಲಕ ಇದು ಗಾಳಿಯನ್ನು ಕೆಳಗಿಳಿಯುವಂತೆ ಮಾಡುತ್ತದೆ. ಹಲವುವೇಳೆ ತಾಪಮಾನ ಸಂವೇದಕ ಸಾಧನವನ್ನು ದಂಬೆಯಲ್ಲಿ ಇಡಲಾಗುತ್ತದೆ. ವಿಸರ್ಜನೆ ನಿಂತಾಗ ಮಾತ್ರ ಗಾಳಿ ನಿರ್ವಾತಗೊಳಿಸುವಿಕೆ ಸಂಪೂರ್ಣವಾಗುತ್ತದೆ. ಹಬೆ ಬಲೆ ಅಥವಾ ಸೋಲನಾಯ್ಡ್ ಕವಾಟವನ್ನು ಉಪಯೋಗಿಸಿ ಅದರ ರಭಸವನ್ನು ನಿಯಂತ್ರಿಸಬಹುದು. ಕೆಲವೊಮ್ಮೆ ಸೋರಿಕೆ ಕವಾಟಗಳನ್ನು ಸೋಲನಾಯ್ಡ್ ಕವಾಟಗಳ ಜೊತೆಯಲ್ಲಿ ಸೇರಿಸಿ ಕೂಡ ಉಪಯೋಗಿಸಬಹುದು. ಹಬೆ ಮತ್ತು ಗಾಳಿ ಬೆರೆತಾಗ ಆ ಮಿಶ್ರಣವನ್ನು ಕೋಶದ ಕೆಳಗಿನ ಸ್ಥಳವನ್ನು ಬಿಟ್ಟು ಬೇರೆ ಜಾಗಕ್ಕೆ ನೂಕುವಂತಹ ಸಾಧ್ಯತೆಗಳೂ ಇವೆ.
ಹಬೆಯ ಸ್ಪಂದನ (ಸ್ಟೀಮ್ ಪಲ್ಸಿಂಗ್) - ಹಬೆಯ ಸ್ಪಂದನಗಳನ್ನು ಬಳಸಿಕೊಂಡು ಗಾಳಿಯನ್ನು ದುರ್ಬಲಗೊಳಿಸುವುದು. ಪರ್ಯಾಯವಾಗಿ ಕೋಶವನ್ನು ಒತ್ತಡಕೊಳಪಡಿಸಲಾಗುವುದು, ನಂತರ ವಾಯುಮಂಡಲದ ಒತ್ತಡದ ಹತ್ತಿರಕ್ಕೆ ಕಡಿಮೆಗೊಳಿಸಲಾಗುವುದು.
ನಿರ್ವಾತ ಪಂಪ್‍ಗಳು -ನಿರ್ವಾತ ಪಂಪ್ ಅನ್ನು ಕೋಶದಲ್ಲಿರುವಂತಹ ಆವಿಯ ಮಿಶ್ರಣ/ ಗಾಳಿಯನ್ನು ಎಳೆದುಕೊಳ್ಳಲು ಬಳಸಲಾಗುತ್ತದೆ.
ಸೂಪರ್ ಅಟ್ಮೊಸ್ಫರಿಕ್ - ಈ ರೀತಿಯ ಆವರ್ತವನ್ನು ನಿರ್ವಾತ ಪಂಪ್‍ಗಳಲ್ಲಿ ಬಳಸಲಾಗುತ್ತದೆ. ಇದು ನಿರ್ವಾತದ ಜೊತೆಯಲ್ಲಿ ಪ್ರಾರಂಭವಾಗಿ ಆವಿ ಸ್ಪಂದನಗಳನ್ನು ಅನುಸರಿಸುತ್ತದೆ. ಅನಂತರ ನಿರ್ವಾತ ಆವಿ ಸ್ಪಂದನದಿಂದ ಅನುಸರಿಸಲ್ಪಡುತ್ತದೆ. ಸ್ಪಂದನದ ಸಂಖ್ಯೆಗಳು ಆರಿಸಲ್ಪಟ್ಟ ಆಟೋಕ್ಲೇವ್ ಮತ್ತು ಆವರ್ತದ ಮೇಲೆ ಅವಲಂಬಿಸಿರುತ್ತವೆ.
ಸಬ್ ಅಟ್ಮೋಸ್ಫರಿಕ್ -ಇದು ಸೂಪರ್ ಅಟ್ಮೊಸ್ಫರಿಕ್ ಆವರ್ತಗಳಂತೆಯೇ ಇರುವುದು. ಆದರೆ ಕೋಶದ ಒತ್ತಡ ಕ್ರಿಮಿಶುದ್ಧೀಕರಣಕ್ಕೆ ಬೇಕಾಗುವಷ್ಟು ತಾಪಮಾನ ಪಡೆಯುವವರೆಗೂ ವಾಯುಮಂಡಲದ ಒತ್ತಡಕಿಂತ ಅಧಿಕವಾಗುವುದಿಲ್ಲ.
ವೈದ್ಯಶಾಸ್ತ್ರದಲ್ಲಿ ಆಟೋಕ್ಲೇವ್‍ಗಳು
[ಬದಲಾಯಿಸಿ]ವೈದ್ಯಕೀಯ ಆಟೋಕ್ಲೇವ್‍ಗಳು ಹಬೆಯನ್ನು ಕ್ರಿಮಿಶುದ್ಧೀಕರಣಕ್ಕಾಗಿ ಮತ್ತು ಇತರ ಉದ್ದೇಶಗಳಿಗೆ ಬಳಸುವ ಸಾಧಾನಗಳಾಗಿವೆ. ಇದರ ಅರ್ಥ ಎಲ್ಲಾ ಬ್ಯಾಕ್ಟೀರಿಯ, ವೈರಸ್, ಶಿಲಿಂಧ್ರಗಳು, ಮತ್ತು ಬೀಜಕಗಳನ್ನು ನಿಷ್ಕ್ರಿಯಗೊಳಿಸುವುದು ಎಂದು. ಆದರೂ, ಕ್ರೂಯೆಟ್ಸ್‌ಫೆಲ್ಡ್ಟ್-ಜಾಕೋಬ್ ಕಾಯಿಲೆಗೆ ಸಂಬಂಧಿಸಿರುವ ಪ್ರಿಯಾನ್‍ಗಳಂತಹವು ಆಕ್ಟೋಕ್ಲೇವ್ ನ 3 ನಿಮಿಷಕ್ಕೆ 134°C ತಾಪಮಾನದಲ್ಲಿ ಅಥವಾ 15 ನಿಮಿಷಕ್ಕೆ 121°C ತಾಪಮಾನದಲ್ಲಿ ನಾಶವಾಗದಿರಬಹುದು. ಅಲ್ಲದೇ ಕೆಲವು ಹೊಸದಾಗಿ ಕಂಡುಹಿಡಿಯಲಾದ ಜೀವಿಗಳು ಉದಾಹರಣೆಗೆ ಸ್ಟ್ರೇನ್ 121ಗಳಂತಹವು 121°C ಕ್ಕಿಂತ ಹೆಚ್ಚಿನ ತಾಪಮಾನದಲ್ಲೂ ಕೂಡ ಬದುಕಬಲ್ಲವು.
ಆಟೋಕ್ಲೇವ್‍ಗಳನ್ನು ಅನೇಕ ವೈದ್ಯಕೀಯ ವ್ಯವಸ್ಥೆಗಳಲ್ಲಿ ಮತ್ತು ಕ್ರಿಮಿಶುದ್ಧೀಕರಣ ಮಾಡಬೇಕಿರುವ ಇತರ ಸ್ಥಳಗಳಲ್ಲಿ ಕಾಣಬಹುದು. ಇಂದು ಕ್ರಿಮಿನಾಶಗೊಳಿಸಿ ಮತ್ತೆ ಬಳಸಬಹುದಾದ ಸಾಮಗ್ರಿಗಳಿಗಿಂತ ಒಮ್ಮೆ ಬಳಸಿದ ಸಾಮಗ್ರಿಗಳನ್ನು ಉಪಯೋಗಿಸಲು ಅನೇಕ ವಿಧಾನಗಳಿವೆ. ಇದನ್ನು ಮೊದಲು ಚರ್ಮದಡಿಯಲ್ಲಿ ಹಾಕುವ ಇಂಜೆಕ್ಷನ್ ಸೂಜಿಗೆ ಬಳಸಲಾಯಿತು, ಆದರೆ ಇಂದು ಅನೇಕ ಶಸ್ತ್ರ ಚಿಕಿತ್ಸೆಯ ಉಪಕರಣಗಳು (ಉದಾಹರಣೆಗೆ:ಸೂಜಿಯನ್ನು ಇಟ್ಟುಕ್ಕೊಳ್ಳುವ, ಇಕ್ಕುಳ, ಚಿಕ್ಕಚಾಕು) ಸಾಮಾನ್ಯವಾಗಿ ಪುನಃ ಬಳಸುವುದಕ್ಕಿಂತ ಒಮ್ಮೆ ಬಳಸುವ ಸಾಮಗ್ರಿಗಳಾಗಿವೆ.
ಆರ್ದ್ರ ತಾಪವನ್ನು ಬಳಸುವುದರಿಂದ ತಾಪ ಅಸ್ಥಿರ ಉತ್ಪನ್ನಗಳು (ಉದಾಹರಣೆಗೆ ಕೆಲವು ಪ್ಲಾಸ್ಟಿಕ) ಈ ವಿಧಾನದಲ್ಲಿ ಶುಧ್ಧಿಯಾಗುವುದಿಲ್ಲ ಅಥವಾ ಅವು ಕರಗಿ ಹೋಗುತ್ತವೆ. ಕೆಲವು ಪೇಪರ್ ಅಥವಾ ಇತರ ಉತ್ಪನ್ನಗಳು ಹಬೆಯಿಂದ ಹಾಳಾದರೆ ಅವುಗಳನ್ನು ಬೇರೊಂದು ರೀತಿಯಲ್ಲಿ ಕ್ರಿಮಿಶುದ್ಧಗೊಳಿಸಬಹುದು. ಎಲ್ಲಾ ಆಟೋಕ್ಲೇವ್‍ಗಳಲ್ಲಿ ಶುದ್ಧಮಾಡಬೇಕಾದ ವಸ್ತುಗಳು ಮತ್ತು ಹಬೆಯನ್ನು ಸರಿ ಸಮನಾಗಿ ಒಳಬಿಡಲು ವಸ್ತುಗಳನ್ನು ಯಾವಾಗಲೂ ಬೇರ್ಪಡಿಸಲಾಗುತ್ತದೆ.
ಪುರಸಭೆಯ ಘನರೂಪದ ತ್ಯಾಜ್ಯಗಳಿಗಿಂತ ಮೊದಲು ಆಟೋಕ್ಲೇವಿಂಗ್ ಅನ್ನು ಯಾವಾಗಲು ವೈದ್ಯಕೀಯ ತ್ಯಾಜ್ಯಗಳ ಕ್ರಿಮಿಶುದ್ಧೀಕರಣಕ್ಕಾಗಿ ಬಳಸಲಾಗುತ್ತಿತ್ತು. ದಹನಕ್ರಿಯೆಯ ಉಪ ಉತ್ಪನ್ನಗಳನ್ನು ದಹನ ಮಾಡುವವರು ಪರಿಸರ ಮತ್ತು ಆರೋಗ್ಯದ ಮೇಲೆ ತೋರಿಸಿದ ಕಾಳಜಿಯಿಂದ, ವಿಶೇಷವಾಗಿ ಪ್ರತ್ಯೇಕ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವಂತಹ ಸಣ್ಣ ಘಟಕಗಳಿಂದ ಈ ಬಳಕೆಯು ಭಸ್ಮೀಕರಣದ ಪರ್ಯಾಯ ಬಳಕೆಯಾಗಿ ಬೆಳೆಯಿತು. ಭಸ್ಮೀಕರಣ ಅಥವಾ ಅದೇ ರೀತಿಯ ಉಷ್ಣದ ಆಕ್ಸೀಡೀಕರಣ ವಿಧಾನವನ್ನು ರೋಗಕಾರಕ ತ್ಯಾಜ್ಯಗಳಿಗೆ ಮತ್ತು ಅತ್ಯಂತ ವಿಷಮಯ ಅಥವಾ ಸೋಂಕು ಹರಡಿರುವ ವೈದ್ಯಕೀಯ ತ್ಯಾಜ್ಯಗಳಿಗೆ ಇಂದಿಗೂ ಕಡ್ಡಾಯಗೊಳಿಸಲಾಗಿದೆ.
ಆಟೋಕ್ಲೇವ್‍ನ ಗುಣಮಟ್ಟದ ಖಾತ್ರಿ
[ಬದಲಾಯಿಸಿ]ಆಟೋಕ್ಲೇವ್ ಸರಿಯಾದ ನಿರ್ದಿಷ್ಟ ಸಮಯಕ್ಕೆ ಸರಿಯಾದ ತಾಪಮಾನವನ್ನು ತಲುಪುತ್ತದೆ ಅಥವಾ ಇಲ್ಲವೆಂಬುದನ್ನು ಖಚಿತಪಡಿಸಲು ಭೌತ, ರಾಸಾಯನಿಕ ಮತ್ತು ಜೀವ ವಿಜ್ಞಾನ ಸೂಚಕ ಸಾಧನಗಳನ್ನು ಬಳಸಲಾಗುತ್ತದೆ.
ರಾಸಾಯನಿಕಸೂಚಕ ಸಾಧನಗಳನ್ನು ವೈದ್ಯಕೀಯ ಪ್ಯಾಕಿಂಗ್‍ನಲ್ಲಿ, ಆಟೋಕ್ಲೇವ್ ಟೇಪಿನಲ್ಲಿ ನೋಡಬಹುದು. ಸೂಚಕಗಳ ಬಣ್ಣ ಬದಲಾದರೆ ಪ್ರಸ್ತುತದ ಸ್ಥಿತಿ ತಿಳಿಯುತ್ತದೆ. ಈ ಬಣ್ಣ ಬದಲಾವಣೆ ಪ್ಯಾಕೇಜ್‍ನ ಒಳಗಿರುವ ವಸ್ತು ಅಥವಾ ಟೇಪ್‍ನ ಒಳಗಿನ ವಸ್ತು ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಸೂಚಿಸುತ್ತದೆ. ಜೀವ ವಿಜ್ಞಾನ ಸೂಚಕ ಸಾಧನಗಳು ಶಾಖವನ್ನು ತಡೆದುಕೊಳ್ಳುವ ಬ್ಯಾಕ್ಟೀರಿಯಗಳ ಬೀಜಕವನ್ನು ಒಳಗೊಂಡಿರುತ್ತವೆ (ಜಿಯೋ ಬ್ಯಸಿಲಸ್ ಸ್ಟಿಯರೋ ತರ್ಮೊಫಿಲಸ್ ). ಒಂದುವೇಳೆ ಆಟೋಕ್ಲೇವ್ ಸರಿಯಾದ ತಾಪಮಾನ ತಲುಪದಿದ್ದರೆ ಬೀಜಕಗಳು ವರ್ಧಿಸುತ್ತವೆ; ಅದಲ್ಲದೇ ಅವುಗಳ ಚಯಾಪಚಯ ಕ್ರಿಯೆಗಳು pH- ಸೆನ್ಸಿಟೀವ್ ರಾಸಾಯನಿಕದ ಬಣ್ಣವನ್ನು ಬದಲಾಯಿಸುತ್ತವೆ. ಕೆಲವು ಭೌತ ಸೂಚಕಗಳು ಮಿಶ್ರಲೋಹದ ವಿನ್ಯಾಸವನ್ನು ಹೊಂದಿರುತ್ತವೆ. ಇವನ್ನು ಆಗ ಸ್ಥಿರಪಡಿಸಿರುವಂತಹ ಸಮಯದ ನಂತರವೇ ಕರಗುವಂತೆ ರೂಪಿಸಲಾಗಿರುತ್ತದೆ. ಲೋಹವು ಕರಗಿದರೆ ಬದಲಾವಣೆಯನ್ನು ನೋಡಬಹುದು.
ಕೆಲವು ಕಂಪ್ಯೂಟರ್‌ಗಳಿಂದ ನಿಯಂತ್ರಿಸಲ್ಪಡುವ ಆಟೋಕ್ಲೇವ್‍ಗಳನ್ನು ಕ್ರಿಮಿಶುದ್ಧೀಕರಣ ಆವರ್ತವನ್ನು ನಿಯಂತ್ರಿಸಲು F0 (F-nought) ವ್ಯಾಲ್ಯುಗಾಗಿ ಬಳಸಲಾಗುತ್ತದೆ. F0 ವ್ಯಾಲ್ಯೂಗಳನ್ನು 15 ನಿಮಿಷಗಳಿಗೆ ಸರಿಸಮನಾದ ಕ್ರಿಮಿಶುದ್ಧೀಕರಣ ಮಾಡುವ 121 °C (250 °F) ನಲ್ಲಿ 15 psi (100 kPa)ಕ್ಕಿಂತ ಹೆಚ್ಚಿನ ವಾಯುಮಂಡಲದ ಒತ್ತಡದಲ್ಲಿ ನಿಮಿಷಗಳ ಸಂಖ್ಯೆಗಳ ರೂಪದಲ್ಲಿ ವ್ಯವಸ್ಥಿತಗೊಳಿಸಿರಲಾಗುತ್ತದೆ. ನಿಖರವಾದ ತಾಪಮಾನ ನಿಯಂತ್ರಿಸಲು ಕಷ್ಟವಾಗುವುದರಿಂದ ಅದನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ; ಅದಲ್ಲದೇ ಅದಕ್ಕನುಸಾರ ಕ್ರಿಮಿಶುದ್ಧೀಕರಣ ಕ್ರಿಯೆಗೆ ಸಮಯ ಅಳವಡಿಸಲಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ ಮೈಕ್ರೋ ಬಯೋಲಜಿ, ಜಾಕ್ವೆಲಿನ್ ಬ್ಲಾಕ್, ಪ್ರಿಂಟೈಸ್ ಹಾಲ್,1993 ಪುಟ 334
- ↑ "Chronological reference marks - Charles Chamberland (1851–1908)". Pasteur Institute. Retrieved 2007-01-19.
{{cite web}}
: Cite has empty unknown parameters:|month=
and|coauthors=
(help) - ↑ http://www.merriam-webster.com/dictionary/autoclave
- ↑ http://www.merriam-webster.com/dictionary/autoclave
- ↑ "Sterilization Cycles". Consolidated Machine Corporation. Retrieved 2009-06-30.
- ↑ AS NZS 4815-2006 P33&P35