ವಿಷಯಕ್ಕೆ ಹೋಗು

ಇಕ್ಕುಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಕ್ಕುಳ ಎಂದರೆ ವಸ್ತುಗಳನ್ನು ನೇರವಾಗಿ ಕೈಗಳಿಂದ ಹಿಡಿಯುವುದರ ಬದಲಾಗಿ ಬಿಗಿಯಾಗಿ ಹಿಡಿಯಲು ಮತ್ತು ಎತ್ತಲು ಬಳಸಲಾದ ಒಂದು ಪ್ರಕಾರದ ಉಪಕರಣ. ನಿರ್ದಿಷ್ಟ ಬಳಕೆಗೆ ಅಳವಡಿಸಿಕೊಳ್ಳಲಾದ ಇಕ್ಕುಳಗಳ ಅನೇಕ ರೂಪಗಳಿವೆ. ಕೆಲವು ಕೇವಲ ದೊಡ್ಡ ಚಿಮುಟಗಳು ಅಥವಾ ನಿಪರ್‌ಗಳಾಗಿರುತ್ತವೆ, ಆದರೆ ಬಹುತೇಕ ಇಕ್ಕುಳಗಳು ಈ ಕೆಲವು ವರ್ಗಗಳಲ್ಲಿ ವರ್ಗೀಕರಿಸಲ್ಪಡುತ್ತವೆ:

  1. ದೊಡ್ಡ ತೋಳುಗಳಿರುವ ಮತ್ತು ಸಣ್ಣ ಚಪ್ಪಟೆ ವೃತ್ತಾಕಾರದ ಕೊನೆಯಲ್ಲಿ ಅಂತ್ಯಗೊಳ್ಳುವ ಇಕ್ಕುಳಗಳು. ಇವು ಕೈಹಿಡಿಗೆ ಹತ್ತಿರವಿರುವ ಸಂಧಿಯಲ್ಲಿ ಅಚ್ಚುಗೂಟವನ್ನು ಹೊಂದಿರುತ್ತವೆ. ಇವನ್ನು ನಾಜೂಕಾದ ವಸ್ತುಗಳನ್ನು ಹಿಡಿಯಲು ಬಳಸಲಾಗುತ್ತದೆ. ಬೆರಳುಗಳನ್ನು ಸುಟ್ಟುಕೊಳ್ಳದೆ ಅಥವಾ ಕೊಳೆ ಮಾಡಿಕೊಳ್ಳದೆ ಕಲ್ಲಿದ್ದಲಿನ ತುಂಡುಗಳನ್ನು ಎತ್ತಿ ಬೆಂಕಿಯ ಮೇಲೆ ಇಡಲು ಬಳಸಲಾದ ಸಾಮಾನ್ಯ ಬೆಂಕಿ ಇಕ್ಕುಳಗಳು ಈ ಪ್ರಕಾರದ್ದಾಗಿವೆ. ಜಾಲರದ ಮೇಲೆ ಬೇಯಿಸಲು ಬಳಸಲಾದ ಇಕ್ಕುಳಗಳು, ಸ್ಯಾಲಡ್ ಅಥವಾ ಸ್ಪೆಗೆಟಿಯನ್ನು ಬಡಿಸಲು ಬಳಸಲಾದ ಇಕ್ಕುಳಗಳು ಇದೇ ಪ್ರಕಾರದ ಅಡಿಗೆಮನೆಯ ಪಾತ್ರೆಪರಡಿಯಾಗಿದೆ. ಇವು ನಾಜೂಕು ನಿಖರತೆಯಿಂದ ಆಹಾರವನ್ನು ಚಲಿಸುವ, ತಿರುಗಿಸುವ, ಅಥವಾ ಒಂದೇ ಹಿಡಿತದಲ್ಲಿ ಒಂದು ಪೂರ್ಣ ಒಬ್ಬೆಯನ್ನು ಪಡೆಯುವ ರೀತಿಯನ್ನು ಒದಗಿಸುತ್ತವೆ.
  2. ಲಂಘಕದಿಂದ ಶಿರದಲ್ಲಿ ಜಂಟಿ ಹಾಕಲಾದ ಒಂದು ಅಥವಾ ಎರಡು ಪಟ್ಟಿಗಳ ಸುತ್ತ ಬಗ್ಗಿಸಲಾದ ಲೋಹದ ಒಂದೇ ಪಟ್ಟಿಯನ್ನು ಹೊಂದಿರುವ ಇಕ್ಕುಳಗಳು, ಉದಾಹರಣೆಗೆ ಸಕ್ಕರೆ ಇಕ್ಕುಳ (ಸಾಮಾನ್ಯವಾಗಿ ತುಂಡು ಸಕ್ಕರೆಯನ್ನು ಬಡಿಸಲು ಪಂಜ ಅಥವಾ ಚಮಚ ಆಕಾರದ ಕೊನೆಗಳಿರುವ ಬೆಳ್ಳಿ ಇಕ್ಕುಳ), ಶತಾವರಿ ಇಕ್ಕುಳ, ಇತ್ಯಾದಿ.
  3. ಅಚ್ಚುಗೂಟ ಅಥವಾ ಸಂಧಿಯನ್ನು ಹಿಡಿಯುವ ಕೊನೆಗಳ ಹತ್ತಿರ ಇರಿಸಿರುವ ಇಕ್ಕುಳಗಳು. ಇವನ್ನು ಗಟ್ಟಿ ಮತ್ತು ಭಾರದ ವಸ್ತುಗಳನ್ನು ಹಿಡಿಯಲು ಬಳಸಲಾಗುತ್ತದೆ. ಬೈರಿಗೆಯವನ ದುಂಡು ಇಕ್ಕುಳ, ಕಮ್ಮಾರನ ಇಕ್ಕುಳ ಅಥವಾ ಮೂಸೆ ಇಕ್ಕುಳಗಳು ಈ ಬಗೆಯದ್ದಾಗಿರುತ್ತವೆ.
"https://kn.wikipedia.org/w/index.php?title=ಇಕ್ಕುಳ&oldid=840758" ಇಂದ ಪಡೆಯಲ್ಪಟ್ಟಿದೆ