ಅಲ್ಪಸಂಖ್ಯಾಸಾಮ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಲ್ಪಸಂಖ್ಯಾಸಾಮ್ಯ ಮಾರುಕಟ್ಟೆಯ ಒಂದು ರೂಪ. ಇದರಲ್ಲಿ ಮಾರುಕಟ್ಟೆ ಅಥವಾ ಉದ್ಯಮ ಮಾರಾಟಗಾರರು ಒಂದು ಸಣ್ಣ ಸಂಖ್ಯೆಯಲ್ಲಿ ಸೇರಿ ಮಾರುಕಟ್ಟೆನ್ನು ನಿಯಂತ್ರಿಸುತ್ತಾರೆ. ಅಲ್ಪಸಂಖ್ಯಾಸಾಮ್ಯಗಳು ವಿವಿಧ ರೀತಿಯ ಒಳಸಂಚಿನಿಂದ ಉಂಟಾಗುತ್ತದೆ. ಇದರಿಂದ ಪೋಟಿ ಕಡಿಮೆಯಾಗುತ್ತದೆ ಹಾಗೂ ಗ್ರಾಹಕರಿಗೆ ಹೆಚ್ಚಿನ ಬೆಲೆಗಳಿಗೆ ಮುನ್ನಡೆಸುತ್ತದೆ. ಅಲ್ಪಸಂಖ್ಯಾಸಾಮ್ಯ ತನ್ನದೆ ಆದ ಮಾರುಕಟ್ಟೆ ರಚನೆ ಹೊಂದಿದೆ. ಕಡಿಮೆ ಮಾರಾಟಗಾರರು ಇರುವುದರಿಂದ, ಪ್ರತಿಯೊಬ್ಬ ಅಲ್ಪಸಂಖ್ಯಾಸ್ವಾಮ್ಯದ ಮಾರುಕಟ್ಟೆಯ ಸದಸ್ಯರಿಗೆ ಇತರರ ಕಾರ್ಯಗಳ ಬಗ್ಗೆ ಅರಿವು ಇರುತ್ತದೆ. ಆಟ ಸಿದ್ಧಾಂತದ ಪ್ರಕಾರ, ಒಂದು ಸಂಸ್ಥೆಯ ನಿರ್ಧಾರ ಪ್ರಭಾವ ಹೊಂದಿ ಇತರ ಸಂಸ್ಥೆಗಳ ನಿರ್ಧಾರಗಳನ್ನು ಪ್ರಭಾವಿಸುತ್ತದೆ. ಅಲ್ಪಸಂಖ್ಯಾಸ್ವಾಮ್ಯದ ಮಾರುಕಟ್ಟೆಯ ಸದಸ್ಯರು ತಂತ್ರಕುಶಲತೆ ಯೋಜನೆ ಮಾಡುವಾಗ ಇತರ ಮಾರುಕಟ್ಟೆ ಸಹಭಾಗಿಗಳ ಸಾಧ್ಯತೆ ಪ್ರತಿಕ್ರಿಯೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ವಿವರಣೆ[ಬದಲಾಯಿಸಿ]

ಅಲ್ಪಸಂಖ್ಯಾಸಾಮ್ಯ ಸಾಮಾನ್ಯ ಮಾರುಕಟ್ಟೆ ರೂಪ, ಇದರಲ್ಲಿ ಕೆಲವು ಸಂಖ್ಯೆಯ ಸಂಸ್ಥೆಗಳು ಸ್ಪರ್ಧಿಸುತ್ತರೆ. ಅಲ್ಪಸಂಖ್ಯಾಸಾಮ್ಯ ಒಂದು ಪರಿಮಾಣಾತ್ಮಕ ವಿವರಣೆ ಆದ್ದರಿಂದ ನಾಲ್ಕು ಸಂಸ್ಥೆಯ ಸಾಂದ್ರತೆಯ ಅನುಪಾತ ಸಾಮಾನ್ಯವಾಗಿ ಬಳಸಿಕೊಳ್ಳುತ್ತವೆ. ಈ ಅಳತೆ ಶೇಕಡಾವಾರು ಒಂದು ಉದ್ಯಮದಲ್ಲಿ ನಾಲ್ಕು ದೊಡ್ಡ ಸಂಸ್ಥೆಗಳ ಮಾರುಕಟ್ಟೆ ಪಾಲನ್ನು ವ್ಯಕ್ತಪಡಿಸುತ್ತದೆ. ಉದಾಹರಣೆಗೆ, ನಾಲ್ಕನೇ ತ್ರೈಮಾಸಿಕದಲ್ಲಿ 2008, ವೆರಿಜೋನ್, AT & T, ಸ್ಪ್ರಿಂಟ್, ಮತ್ತು T- ಮೊಬೈಲ್ ಒಟ್ಟಿಗೆ ಅಮೇರಿಕಾದ ಸೆಲ್ಯುಲರ್ ಫೋನ್ ಮಾರುಕಟ್ಟೆಯ 89% ನಿಯಂತ್ರಿಸಿತು.[೧] ಅಲ್ಪಸಂಖ್ಯಾಸ್ವಾಮ್ಯತೆ ಸ್ಪರ್ಧೆಯಿಂದ ವಿವಿಧ ರೀತಿಯ ಫಲಿತಾಂಶಗಳ ವ್ಯಾಪಕ ಹುಟ್ಟಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ, ಸಂಸ್ಥೆಗಳು ಏಕಸ್ವಾಮ್ಯ ರೀತಿಯಲ್ಲಿ ಬೆಲೆ ಹೆಚ್ಚಿಸಲು ಮತ್ತು ಹೆಚ್ಚು ಉತ್ಪಾದನೆ ನಿರ್ಬಂಧಿಸಲು ನಿರ್ಬಂಧಿತ ವಹಿವಾಟು (ತಂತ್ರ, ಮಾರುಕಟ್ಟೆ ಹಂಚಿಕೆ ಇತ್ಯಾದಿ) ಬಳಸಬಹುದು. ಇಂತಹ ತಂತ್ರವು ಒಂದು ಔಪಚಾರಿಕ ಒಪ್ಪಂದದಲ್ಲಿದ್ದರೆ ಅದನ್ನು 'ಕಾರ್ಟೆಲ್' ಎಂದು ಕರೆಯಲಾಗುತ್ತದೆ. ಇಂತಹ ಕಾರ್ಟೆಲ್ ಗೆ ಪ್ರಾಥಮಿಕ ಉದಾಹರಣೆ ಎಂದರೆ ಅಂತಾರಾಷ್ಟ್ರೀಯ ತೈಲ ಬೆಲೆ ಮೇಲೆ ಗಾಢವಾದ ಪ್ರಭಾವ ಹೊಂದಿರುವ OPEC ಆಗಿದೆ. ಸಂಸ್ಥೆಗಳು ಸಾಮಾನ್ಯವಾಗಿ ಅಸ್ಥಿರ ಮಾರುಕಟ್ಟೆಯಲ್ಲಿ ಸ್ಥಿರಗೊಳಿಸಲು ತಂತ್ರಹೂಡುವ ಪ್ರಯತ್ನ ಮಾಡುತ್ತದೆ ಏಕೆಂದರೆ ಬಂಡವಾಳ ಮತ್ತು ಉತ್ಪನ್ನ ಅಭಿವೃದ್ಧಿ ಈ ಮಾರುಕಟ್ಟೆಗಳಲ್ಲಿಯೂ ಅಂತರ್ಗತವಾಗಿರುವ ಅಪಾಯಗಳನ್ನು ಕಡಿಮೆಗೊಳಿಸಲು. ಹೆಚ್ಚಿನ ರಾಷ್ಟ್ರಗಳಲ್ಲಿ ಇಂತಹ ತಂತ್ರಕ್ಕೆ ವಿರುದ್ಧ ಕಾನೂನು ನಿರ್ಬಂಧಗಳನ್ನು ಇವೆ. ಇಂತಹ ತಂತ್ರ ನಡೆಯಲು ಔಪಚಾರಿಕ ಒಪ್ಪಂದ ಬೇಕಾಗಿಲ್ಲ. ಉದಾಹರಣೆಗೆ, ಕೆಲವು ಕೈಗಾರಿಕೆಗಳಲ್ಲಿ ಎಲ್ಲರು ಒಪ್ಪಿಕೊಂಡ ಮಾರುಕಟ್ಟೆ ನಾಯಕ ಅನೌಪಚಾರಿಕವಾಗಿ ಬೆಲೆಗಳನ್ನು ನಿಗದಿಪಡಿಸುತ್ತದೆ, ಅದಕ್ಕೆ ಬೇರೆ ನಿರ್ಮಾಪಕರು ಪ್ರತಿಕ್ರಿಯಿಸುತ್ತರೆ. ಇದನ್ನು ಬೆಲೆ ನಾಯಕತ್ವ ಎನ್ನುತ್ತೇವೆ. ಇತರ ಸಂದರ್ಭಗಳಲ್ಲಿ, ಅಲ್ಪಸಂಖ್ಯಾಸಾಮ್ಯದ ಮಾರಾಟಗಾರರ ನಡುವೆ ಪೈಪೋಟಿಯು ತೀವ್ರವಾಗಿರುತ್ತದೆ ಆಗ ಬೆಲೆಯೂ ಸಾಕಷ್ಟು ಕಡಿಮೆಯಾಗಿದ್ದು ಉತ್ಪಾದನೆ ಹೆಚ್ಚಾಗಿರುತ್ತದೆ. ಇದರಿಂದ ಪರಿಪೂರ್ಣ ಪೈಪೋಟಿಗೆ ಸಮೀಪಿಸುತ್ತಿರುವ ದಕ್ಷ ಫಲಿತಾಂಶಕ್ಕೆ ಕಾರಣವಾಗಬಹುದು. ಅಲ್ಪಸಂಖ್ಯಾಸಾಮ್ಯದಲ್ಲಿ ಒಂದು ಉದ್ಯಮದಲ್ಲಿ ಹೆಚ್ಚು ಸಂಸ್ಥೆಗಳಿದ್ದರೆ ಆಗ ಹೆಚ್ಚು ಪೋಟಿ ಇರುತ್ತದೆ. ಉದಾಹರಣೆಗೆ, ಸಂಸ್ಥೆಗಳು ಪ್ರಾದೇಶಿಕವಾಗಿ ಆಧರಿಸಿ ಮತ್ತು ಪರಸ್ಪರ ನೇರವಾಗಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿಲ್ಲ. ಹೀಗಾಗಿ ಅಲ್ಪಸಂಖ್ಯಾಸಾಮ್ಯಗಳ ಕಲ್ಯಾಣ ವಿಶ್ಲೇಷಣೆ ಮಾರುಕಟ್ಟೆಯ ರಚನೆ ವ್ಯಾಖ್ಯಾನಿಸಲು ಬಳಸಲಾಗುವ ನಿಯತಾಂಕ ಮೌಲ್ಯಗಳು ಸಂವೇದನಾಶೀಲವಾಗಿರುತ್ತದೆ. ಅಲ್ಪಸಂಖ್ಯಾಸಾಮ್ಯ ಸಿದ್ಧಾಂತ ಅಲ್ಪಸಂಖ್ಯಾಸಾಮ್ಯಗಳ ಪ್ರವೃತ್ತಿಯ ಮಾದರಿಗೆ ಕ್ರೀಡಾ ಸಿದ್ಧಾಂತದ ಮಾದರಿಯನ್ನು ಭಾರೀ ಉಪಯೋಗಿಸುತ್ತದೆ:

 • ಸ್ಟಾಕೆಲ್ಬರ್ಗ್ ರವರ ದ್ವಿಸ್ವಾಮ್ಯ. ಈ ಮಾದರಿಯಲ್ಲಿ, ಸಂಸ್ಥೆಗಳು ಅನುಕ್ರಮವಾಗಿ ಮುಂದುವರೆಯುತ್ತದೆ.
 • ಕೊರ್ನೆಟ್ ರವರ ದ್ವಿಸ್ವಾಮ್ಯ. ಈ ಮಾದರಿಯಲ್ಲಿ, ಸಂಸ್ಥೆಗಳು ಏಕಕಾಲದಲ್ಲಿ ಪ್ರಮಾಣಗಳನ್ನು ಆಯ್ಕೆ ಮಾಡುತ್ತದೆ.
 • ಬರ್ಟ್ರಾಂಡ್ ರವರ ಅಲ್ಪಸಂಖ್ಯಾಸಾಮ್ಯ. ಈ ಮಾದರಿಯಲ್ಲಿ, ಸಂಸ್ಥೆಗಳು ಏಕಕಾಲದಲ್ಲಿ ಬೆಲೆ ಆಯ್ಕೆ ಮಾಡುತ್ತದೆ.

ಗುಣಲಕ್ಷಣಗಳು[ಬದಲಾಯಿಸಿ]

ಲಾಭವನ್ನು ಗರಿಷ್ಟಗೊಳಿಸುವ ಪರಿಸ್ಥಿತಿಗಳು ಅಲ್ಪಸಂಖ್ಯಾಸಾಮ್ಯದಿಂದ ಲಾಭ ಹೆಚ್ಚಿಸುತ್ತದೆ. ಬೆಲೆ ನಿರ್ಧರಿಸುವ ಸಾಮರ್ಥ್ಯ ಅಲ್ಪಸಂಖ್ಯಾಸಾಮ್ಯಗಳು ಬೆಲೆಯನ್ನು ಪಡೆಯುವವರಲ್ಲೆ ಬದಲಿಗೆ ಬೆಲೆಯನ್ನು ನಿರ್ಧರಿಸುವವರು. ಪ್ರವೇಶ ಮತ್ತು ನಿರ್ಗಮನ ಪ್ರವೇಶಕ್ಕೆ ತಡೆ ಹೆಚ್ಚು. ಪ್ರಮುಖ ಅಡ್ಡಿಗಳೆಂದರೆ ಸರ್ಕಾರದ ಪರವಾನಗಿ, ಪ್ರಮಾಣಾನುಗುಣ ಉಳಿತಾಯ, ಅರಿಮೆಯೋಲೆ, ದುಬಾರಿ ಮತ್ತು ಸಂಕೀರ್ಣ ತಂತ್ರಜ್ಞಾನಕ್ಕೆ ಪ್ರವೇಶಾವಕಾಶ, ಮತ್ತು ಸ್ಥಾನಿಕ ಸಂಸ್ಥೆಗಳ ಕಾರ್ಯತಂತ್ರದ ಕ್ರಮಗಳ ವಿನ್ಯಾಸಗಳು ಹೊಸ ಸಂಸ್ಥೆಗಳನ್ನು ಹೊರೆಗುಂದಿಸಿ ನಾಶಪಡಿಸುತ್ತದೆ. ಪ್ರವೇಶಕ್ಕೆ ತಡೆ ಹೆಚ್ಚುವರಿ ಮೂಲಗಳು ಸಾಮಾನ್ಯವಾಗಿ ಅಸ್ತಿತ್ವದಲ್ಲಿರುವ ಸಂಸ್ಥೆಗಳಿಗೆ ಅನುಕೂಲವನ್ನು ಸರ್ಕಾರದ ನಿಯಂತ್ರಣ ಉಂಟುಮಾಡಿ ಹೊಸ ಸಂಸ್ಥೆಗಳಿಗೆ ಮಾರುಕಟ್ಟೆಯಲ್ಲಿ ಪ್ರವೇಶಿಸಲು ತೊಂದರೆ ಕೊಡುತ್ತದೆ. ಸಂಸ್ಥೆಗಳ ಸಂಖ್ಯೆ ಕಡಿಮೆ ಸಂಸ್ಥೆಗಳಿರುವಿದರಿಂದ ಒಂದು ಸಂಸ್ಥೆಯ ಕ್ರಮಗಳು ಬೇರೆ ಸಂಸ್ಥೆಯ ಕ್ರಮಗಳ ಮೇಲೆ ಪ್ರಭಾವ ಬೀರುತ್ತದೆ. ದೀರ್ಘಾವಧಿ ಲಾಭ ಅಲ್ಪಸಂಖ್ಯಾಸಾಮ್ಯಗಳು ದೀರ್ಘಾವಧಿಯಲ್ಲಿ ಅಸಹಜ ಲಾಭ ಉಳಿಸಿಕೊಳ್ಳಬಹುದು. ಪ್ರವೇಶದ ಹೆಚ್ಚಿನ ಅಡೆತಡೆಗಳನ್ನು ಹೆಚ್ಚುವರಿ ಲಾಭ ಹಿಡಿಯಲು ಮಾರುಕಟ್ಟೆ ಪ್ರವೇಶಿಸದಂತೆ ಉಪವೃತ್ತಿ ಸಂಸ್ಥೆಗಳು ತಡೆಗಟ್ಟಿವೆ. ಉತ್ಪನ್ನ ಭಿನ್ನತೆ ಉತ್ಪನ್ನ ಏಕರೂಪದ (ಸ್ಟೀಲ್) ಅಥವಾ ಪ್ರತ್ಯೇಕವಾಗಿಸಲ್ಪಟ್ಟವು (ವಾಹನಗಳು) ಇರಬಹುದು. ಪರಿಪೂರ್ಣ ಜ್ಞಾನ ಪರಿಪೂರ್ಣ ಜ್ಞಾನದ ಬಗ್ಗೆ ಊಹೆಗಳು ಬದಲಾಗಬಹುದು ಆದರೆ ವಿವಿಧ ಆರ್ಥಿಕ ಅಂಶಗಳ ಜ್ಞಾನ ಸಾಮಾನ್ಯವಾಗಿ ಆಯ್ದದ್ದು ಎಂದು ವಿವರಿಸಬಹುದು. ಅಲ್ಪಸಂಖ್ಯಾಸಾಮ್ಯಗಳಿಗೆ ತಮ್ಮ ವೆಚ್ಚ ಮತ್ತು ಬೇಡಿಕೆ ಕಾರ್ಯಗಳ ಬಗ್ಗೆ ಪರಿಪೂರ್ಣ ಜ್ಞಾನವಿದೆ ಆದರೆ ತಮ್ಮ ಅಂತರ ಸಂಸ್ಥೆಯ ಬಗ್ಗೆ ಮಾಹಿತಿ ಅಪೂರ್ಣ ಇರಬಹುದು. ಖರೀದಿದಾರರಿಗೆ ಬೆಲೆ, ವೆಚ್ಚ ಮತ್ತು ಉತ್ಪನ್ನದ ಗುಣಮಟ್ಟದ ಬಗ್ಗೆ ಮಾತ್ರ ಅಪೂರ್ಣ ಜ್ಞಾನ. ಪರಸ್ಪರಾವಲಂಬನೆ ಅಲ್ಪಸಂಖ್ಯಾಸಾಮ್ಯದ ವಿಶೇಷ ವೈಶಿಷ್ಟ್ಯವೆಂದರೆ ಪರಸ್ಪರಾವಲಂಬನೆ. ಅಲ್ಪಸಂಖ್ಯಾಸಾಮ್ಯಗಳು ಸಾಮಾನ್ಯವಾಗಿ ಕೆಲವು ದೊಡ್ಡ ಸಂಸ್ಥೆಗಳ ರಚಿತವಾಗಿರುತ್ತದೆ. ಪ್ರತಿ ಸಂಸ್ಥೆಯು ದೊಡ್ಡದಾಗಿರುವುದರಿಂದ ಇದರ ಕ್ರಮಗಳು ಮಾರುಕಟ್ಟೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದ್ದರಿಂದ ಸ್ಪರ್ಧಾತ್ಮಕ ಸಂಸ್ಥೆಗಳಿಗೆ ಸಂಸ್ಥೆಯ ಮಾರುಕಟ್ಟೆಯ ಕ್ರಮಗಳ ಬಗ್ಗೆ ಅರಿವು ಇರುತ್ತದೆ ಮತ್ತು ಸೂಕ್ತವಾಗಿ ಪ್ರತಿಕ್ರಿಯಿಸಲು ಯತ್ನಿಸುತ್ತದೆ. ಇತರ ಬೆಲೆ ಪೋಟಿ ಅಲ್ಪಸಂಖ್ಯಾಸಾಮ್ಯಗಳು ಬೆಲೆಗಿಂತ ನಿಯಮಗಳ ಮೇಲೆ ಸ್ಪರ್ಧಿಸುತ್ತರೆ. ಸ್ವಾಮಿನಿಷ್ಠೆ ಯೋಜನೆಗಳು, ಜಾಹೀರಾತು, ಮತ್ತು ಉತ್ಪನ್ನ ಭಿನ್ನತೆ ಇವೆಲ್ಲವು ಇತರ ಬೆಲೆ ಪೋಟಿಯ ಉದಾಹರಣೆಗಳು.

ಮಾಡೆಲಿಂಗ್[ಬದಲಾಯಿಸಿ]

ಅಲ್ಪಸಂಖ್ಯಾಸಾಮ್ಯ ಮಾರುಕಟ್ಟೆಯ ಕಾರ್ಯಾಚರಣೆ ವಿವರಿಸಲು ಒಂದೇ ಮಾದರಿ ಇಲ್ಲ. ಏಕೆಂದರೆ ಮಾದರಿಗಳು ವಿವಿಧ ಮತ್ತು ಸಂಕೀರ್ಣತೆಯ ಅಸ್ತಿತ್ವದಲ್ಲಿರುತ್ತದೆ. ಬೆಲೆ, ಪ್ರಮಾಣ, ತಾಂತ್ರಿಕ ನಾವೀನ್ಯತೆ, ಮಾರ್ಕೆಟಿಂಗ್, ಮತ್ತು ಖ್ಯಾತಿ ಆಧಾರದ ಮೇಲೆ ಎರಡು ಅಥವಾ ಹತ್ತು ಸಂಸ್ಥೆಗಳು ಸ್ಪರ್ಧಿಸುವ ಮಾದರಿಯಲ್ಲಿರುತ್ತದೆ. ಅದೃಷ್ಟವಾಗಿ, ಕೆಲವು ಸಂದರ್ಭಗಳಲ್ಲಿ ಪರಿಗಣಿಸುವ ಮೂಲಕ ಮಾರುಕಟ್ಟೆ ವರ್ತನೆಯನ್ನು ವಿವರಿಸಲು ಪ್ರಯತ್ನಿಸುವ ಸರಳೀಕೃತ ಮಾದರಿಗಳ ಸರಣಿ ಇವೆ. ಕೆಲವೊಂದು ಉತ್ತಮ ಪರಿಚಿತ ಮಾದರಿಗಳೆಂದರೆ ಪ್ರಬಲ ಸಂಸ್ಥೆಯ ಮಾದರಿ, ಕೋರ್ನಾಟ್-ನ್ಯಾಶ್ ಮಾದರಿ, ಬರ್ಟ್ರಾಂಡ್ ಮಾದರಿ ಮತ್ತು ಕಿಂಕ್ಡ್ ಡಿಮಾಂಡ್ ಮಾದರಿ.

ಕೋರ್ನಾಟ್-ನ್ಯಾಶ್ ಮಾದರಿ[ಬದಲಾಯಿಸಿ]

ಕೋರ್ನಾಟ್-ನ್ಯಾಶ್ ಮಾದರಿ ಸರಳ ಅಲ್ಪಸಂಖ್ಯಾಸಾಮ್ಯ ರೂಪದರ್ಶಿ. ಈ ಮಾದರಿ ಎರಡು "ಸಮ ಸ್ಥಾನದಲ್ಲಿರುವ ಸಂಸ್ಥೆಗಳು" ಎಂದು ಭಾವಿಸುತ್ತದೆ. ಸಂಸ್ಥೆಗಳು ಪ್ರಮಾಣ ಹೆಚ್ಚಾಗಿ ಬೆಲೆಯ ಆಧಾರದ ಮೇಲೆ ಪೈಪೋಟಿ ಮಾಡುತ್ತದೆ ಮತ್ತು ಪ್ರತಿ ಸಂಸ್ಥೆಯು ಇತರ ಸಂಸ್ಥೆಯ ವರ್ತನೆಯನ್ನು ನಿವಾರಿಸಲಾಗಿದೆ ಎಂದು ಊಹಿಸಿಕೊಂಡು ಒಂದು ಔಟ್ಪುಟ್ ನಿರ್ಧಾರ ಮಾಡುತ್ತದೆ. ಮಾರುಕಟ್ಟೆ ಬೇಡಿಕೆ ವಕ್ರರೇಖೆಯ ರೇಖೀಯ ಎಂದು ಭಾವಿಸಲಾಗಿದೆ ಮತ್ತು ಕನಿಷ್ಠ ವೆಚ್ಚಗಳು ಸ್ಥಿರವಾಗಿರುತ್ತದೆ. ಕೋರ್ನಾಟ್-ನ್ಯಾಶ್ ಸಮತೋಲನ ಕಂಡುಹಿಡಿಯಲು ಪ್ರತಿ ಸಂಸ್ಥೆಯು ಇತರ ಸಂಸ್ಥೆಯ ಔಟ್ಪುಟ್ ಬದಲಾವಣೆಗೆ ಹೇಗೆ ಪ್ರತಿಕ್ರಿಯಿಸುತ್ತದೆ ಒಂದು ನಿರ್ಧರಿಸಬೇಕು. ಸಮತೋಲನ ಮಾರ್ಗ ವರ್ತನೆಗಳ ಸರಣಿಯಾಗಿದೆ. ಬಿಂದು ಎರಡೂ ಸಂಸ್ಥೆಯು ಪಡುವ ಕಡೆ ಬರುವವರೆಗೆ ವಿನ್ಯಾಸವು ಮುಂದುವರೆಯುತ್ತದೆ. ಸಮತೋಲನ ಎರಡು ಸಂಸ್ಥೆಯ ಪ್ರತಿಕ್ರಿಯೆ ಕಾರ್ಯಗಳ ಛೇದನ ಕ್ರಿಯೆಯಾಗಿರುತ್ತದೆ. ಪ್ರತಿಕ್ರಿಯೆ ಕಾರ್ಯ ಒಂದು ಸಂಸ್ಥೆಯು ಇತರ ಸಂಸ್ಥೆಯ ಪ್ರಮಾಣ ಆಯ್ಕೆಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ತೋರಿಸುತ್ತದೆ.

ಬರ್ಟ್ರಾಂಡ್ ಮಾದರಿ[ಬದಲಾಯಿಸಿ]

ಬರ್ಟ್ರಾಂಡ್ ಮಾದರಿಗೆ ಮೂಲಭೂತ ಕೋರ್ನಾಟ್-ನ್ಯಾಶ್ ಮಾದರಿ, ಆದರೆ ಇದರಲ್ಲಿ ಮಾರ್ಪಡಿಸಬಹುದಾದ ಆಯಕಟ್ಟು ಮಾತ್ರ ಬೆಲೆಯ ಬದಲಿಗೆ ಪ್ರಮಾಣವಾಗಿರುತ್ತದೆ.

ಬರ್ಟ್ರಾಂಡ್ ಮಾದರಿ

ಮಾದರಿಯ ತೆಗಹುಗಳೆಂದರೆ:

 • ಎರಡು ಸಂಸ್ಥೆಗಳು ಮಾತ್ರ ಮಾರುಕಟ್ಟೆಯಲ್ಲಿ ಇರುತ್ತದೆ.
 • ಅವರು ಸದೃಶ ಉತ್ಪನ್ನವನ್ನು ಉತ್ಪತ್ತಿ ಮಾಡುತ್ತಾರೆ.
 • ಅವರು ನಿರಂತರ ಕನಿಷ್ಠ ವೆಚ್ಚದಲ್ಲಿ ಉತ್ಪಾದಿಸುತ್ತರೆ.
 • ಸಂಸ್ಥೆಗಳು ಏಕಕಾಲದಲ್ಲಿ PA ಮತ್ತು PB ಬೆಲೆಯನ್ನು ಆಯ್ಕೆ ಮಾಡುತ್ತದೆ.
 • ಸಂಸ್ಥೆಗಳ ಉತ್ಪನ್ನಗಳು ಪರಿಪೂರ್ಣ ಬದಲಿಯಾಗಿರುತ್ತದೆ.
 • ಒಂದು ವೇಳೆ PA = PB ಇದ್ದರೆ ಮಾರಾಟ ಸಮವಾಗಿ ವಿಭಜನೆಯಾಗುತ್ತದೆ.

ಒಂದು ನ್ಯಾಶ್ ಸಮತೋಲನವೆಂದರೆ PA = PB = MC. ಸಂಸ್ಥೆಗಳು ಯಾವ ಕಾರಣಕ್ಕೂ ತಂತ್ರಗಳನ್ನು ಬದಲಾಯಿಸುವಂತಿಲ್ಲ. ಒಂದು ವೇಳೆ ಸಂಸ್ಥೆಗಳು ಬೆಲೆಯನ್ನು ಹೆಚ್ಚಿಸಿದರೆ ಆಗ ಅದು ತನ್ನ ಗ್ರಾಹಕರನ್ನು ಕಳೆದುಕೊಳ್ಳುತ್ತದೆ. ಒಂದು ವೇಳೆ ಸಂಸ್ಥೆಗಳು ಬೆಲೆಯನ್ನು ಕಡಿಮೆಮಾಡಿದ್ದರೆ P < MC ಆಗ ಅದು ಮಾರಾಟ ಮಾಡಿರುವ ಪ್ರತಿಯೊಂದು ಘಟಕದಲ್ಲಿ ಹಣ ಕಳೆದುಕೊಳ್ಳುತ್ತದೆ. ಬರ್ಟ್ರಾಂಡ್ ಸಮತೋಲನ ಸ್ಪರ್ಧಾತ್ಮಕ ಪರಿಣಾಮವಾಗಿ ಒಂದೇ. ಪ್ರತಿ ಸಂಸ್ಥೆಯು P = MC (ಕನಿಷ್ಠ ವೆಚ್ಚಗಳು)ನ್ನು ಉತ್ಪಾದಿಸುತ್ತದೆ ಮತ್ತು ಇದರಲ್ಲಿ ಶೂನ್ಯ ಲಾಭ ಇರುತ್ತದೆ. ಬರ್ಟ್ರಾಂಡ್ ಮಾದರಿಯ ಸಾಮಾನ್ಯೀಕರಣವೆಂದರೆ ಬರ್ಟ್ರಾಂಡ್-ಎಡ್ಜ್ವರ್ತ್ ಮಾದರಿ, ಇದು ಸಾಮರ್ಥ್ಯದ ತೊಂದರೆಗಳು ಮತ್ತು ಸಾಮಾನ್ಯ ವೆಚ್ಚ ಕಾರ್ಯಗಳನ್ನು ಅನುಮತಿಸುತ್ತದೆ.

ಉದಾಹರಣೆಗಳು[ಬದಲಾಯಿಸಿ]

ಕೈಗಾರಿಕೀಕರಣ ಆರ್ಥಿಕತೆಗಳಲ್ಲಿ, ಪ್ರವೇಶಕ್ಕೆ ತಡೆ ಇರುವುದರಿಂದ ಅನೇಕ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾಸಾಮ್ಯ ಉಂಟಾಗುತ್ತಿದೆ. ಒಂದು ಅಲ್ಪಸಂಖ್ಯಾಸಾಮ್ಯ ಮಾರುಕಟ್ಟೆ ಷೇರುಗಳನ್ನು ಸಾಮಾನ್ಯವಾಗಿ ಉತ್ಪನ್ನ ಅಭಿವೃದ್ಧಿ ಮತ್ತು ಜಾಹೀರಾತು ನಿರ್ಧರಿಸುತ್ತದೆ. ಆಸ್ಟ್ರೇಲಿಯಾ

 • ಅತ್ಯಂತ ಮಾಧ್ಯಮ ಕೋಡಿಗಳು ನ್ಯೂಸ್ ಕಾರ್ಪೊರೇಷನ್, ಟೈಮ್ ವಾರ್ನರ್, ಫೇರ್ಫ್ಯಾಕ್ಸ್ ಮೀಡಿಯಾ'ದ ಒಡೆತನದಲ್ಲಿದೆ.
 • ದಿನಸಿ ಚಿಲ್ಲರೆಗಳನ್ನು ಕೋಲ್ಸ್ ಗುಂಪು ಮತ್ತು ವೂಲ್ಸ್ ವರ್ತ್ ನಿಯಂತ್ರಿಸುತ್ತವೆ.

ಕೆನಡಾ

 • ಏಳ್ಯ್ ಕಂಪನಿಗಳು (ರಾಯಲ್ ಬ್ಯಾಂಕ್ ಆಫ್ ಕೆನಡಾ, ಟೊರೊಂಟೊ ಡೊಮಿನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ನೋವಾ ಸ್ಕಾಟಿಯ, ಬ್ಯಾಂಕ್ ಆಫ್ ಮಾಂಟ್ರಿಯಲ್, ಕೆನಡಿಯನ್ ಇಂಪೀರಿಯಲ್ ಬ್ಯಾಂಕ್ ಆಫ್ ಕಾಮರ್ಸ್, ದೆಸ್ಜಾರ್ಡಿನ್ಸ್ ಗ್ರೂಪ್ ಮತ್ತು ನ್ಯಾಷನಲ್ ಬ್ಯಾಂಕ್ ಆಫ್ ಕೆನಡಾ) ಬ್ಯಾಂಕಿಂಗ್ ಉದ್ಯಮವನ್ನು ನಿಯಂತ್ರಿಸುತ್ತವೆ.
 • ೪ ಕಂಪನಿಗಳು ಇಂಟರ್ನೆಟ್ ಸೇವೆ ನೀಡುವ ಮಾರುಕಟ್ಟೆಯನ್ನು ನಿಯಂತ್ರಿಸುತ್ತದೆ (ರೋಜರ್ಸ್ ಕಮ್ಯುನಿಕೇಷನ್ಸ್, ಬೆಲ್ ಕೆನಡಾ, ಟೆಲುಸ್, ಷಾ ಕಮ್ಯುನಿಕೇಷನ್ಸ್).

ಇಂಡಿಯಾ

 • ಪೆಟ್ರೋಲಿಯಂ ಹಾಗು ಅನಿಲ ಉದ್ಯಮಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ, ರಿಲಯನ್ಸ್ ಪೆಟ್ರೋಲಿಯಂ, ಮತ್ತು ಟಾಟಾ ಪವರ್ ನಿಯಂತ್ರಿಸುತ್ತವೆ.
 • ಭಾರತದಲ್ಲಿ ದೂರಸಂಪರ್ಕದ ಬಹುತೇಕವನ್ನು ಏರ್ಟೆಲ್, ವೋಡಾಫೋನ್ ಇಂಡಿಯಾ, ಐಡಿಯಾ ಸೆಲ್ಯೂಲರ್, ರಿಲಯನ್ಸ್ ಕಮ್ಯುನಿಕೇಷನ್ಸ್, ಹಾಗೂ ಟಾಟಾ ಟೆಲಿಸರ್ವಿಸಸ್ ಹಾಗು ಟಾಟಾ ಸ್ಕೈ ನಿಯಂತ್ರಿಸುತ್ತವೆ.

ಯೂನೈಟೆಡ್ ಕಿಂಗ್ಡಮ್

 • ಮಾರ್ಜಕ ಮಾರುಕಟ್ಟೆಯನ್ನು ಎರಡು ಆಟಗಾರರು, ಯೂನಿಲಿವರ್ ಮತ್ತು ಪ್ರಾಕ್ಟರ್ & ಗ್ಯಾಂಬಲ್ ನಿಯಂತ್ರಿಸುತ್ತವೆ.[೨]
 • ನಾಲ್ಕು ಕಂಪನಿಗಳು (ಟೆಸ್ಕೊ, ಸೇನ್ಸ್ಬರಿಸ್, ಆಸ್ದಾ ಮತ್ತು ಮಾರಿಸನ್ಸ್) ಕಿರಾಣಿ ಮಾರುಕಟ್ಟೆಯಲ್ಲಿ 74,4% ಪಾಲು ಹೊಂದಿದ್ದಾರೆ.

ಬೇಡಿಕೆ ವಕ್ರರೇಖೆ[ಬದಲಾಯಿಸಿ]

ಕಿಂಕ್ಡ್ ಬೇಡಿಕೆ

ಅಲ್ಪಸಂಖ್ಯಾಸಾಮ್ಯ ಕಂಪನಿಗಳು ಅಪೂರ್ಣ ಪೈಪೋಟಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಜಿಗುಟಾದ ಮೇಲ್ಮುಖವಾಗಿರುವ ಬೇಡಿಕೆ ವಕ್ರರೇಖೆಯ ಜೊತೆ ತೀವ್ರ ಬೆಲೆಯ ಪೈಪೋಟಿಯ ದಾಖಲಿಸುತ್ತದೆ, ಸಂಸ್ಥೆಗಳು ಹೆಚ್ಚಿನ ಆದಾಯ ಮತ್ತು ಮಾರುಕಟ್ಟೆ ಪಾಲನ್ನು ಸೇರಿಕೊಳ್ಳುವ ಸಲುವಾಗಿ ಅ ಬೆಲೆ ಸ್ಪರ್ಧೆ ಬಳಸಿಕೊಳ್ಳುತ್ತದೆ. 'ಕಿಂಕ್ಡ್' ಬೇಡಿಕೆಯ ವಕ್ರಾಕೃತಿ ವಾಡಿಕೆಯ ಬೇಡಿಕೆ ವಕ್ರಾಕೃತಿಗೆ ಹೋಲುತ್ತದೆ ಏಕೆಂದರೆ ಬೇಡಿಕೆ ವಕ್ರಾಕೃತಿಗಳು ಕೆಳಮುಖವಾಗಿ ಇಳಿಜಾರು. ಅದು ಒಂದು ಪರಿಕಲ್ಪಿತ ಪೀನ ಬಾಗಿಯ ಬಿಡುವಿನ ಜೊತೆ ಬಾಗಿದ 'ಕಿಂಕ್' ಬೇರ್ಪಡಿಸಲಾಗುತ್ತದೆ. ಹೀಗಾಗಿ ಆ ಸಮಯದಲ್ಲಿ ಮೊದಲ ನಿಷ್ಪನ್ನ ಸಿಲುಕಿಲ್ಲದಾಗಿರುತ್ತದೆ ಮತ್ತು ಬಿಡುವಾದ ಕನಿಷ್ಠ ಆದಾಯ ರೇಖೆಯನ್ನು ನೆಗೆಯಲು ಕಾರಣವಾಗುತ್ತದೆ. ಸಾಂಪ್ರದಾಯಿಕ ಅರ್ಥಶಾಸ್ತ್ರ ಸಿದ್ಧಾಂತ, ಕೆಲವು ಮಾರುಕಟ್ಟೆ ಶಕ್ತಿಯನ್ನು ಹೊಂದಿರುವ ಒಂದು ಲಾಭವನ್ನು ಗರಿಷ್ಠಗೊಳಿಸುವ ನಿರ್ಮಾಪಕ ನಿಷ್ಠ ಆದಾಯವನ್ನು ಕನಿಷ್ಠ ವೆಚ್ಚಗಳಿಗೆ ಹೊಂದಿಸಿ ಸಮನಾಗಿರುತ್ತದೆಂದು ಭಾವಿಸುತ್ತದೆ. ಈ 'ಕಿಂಕ್'ನ ಒಂದು ಪ್ರೇರಣೆ ಕಲ್ಪನೆ ಎಂದರೆ ಅಲ್ಪಸಂಖ್ಯಾಸಾಮ್ಯ ಅಥ್ವಾ ಏಕಸ್ವಾಮ್ಯ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಸಂಸ್ಥೆಗಳು ತಮ್ಮ ಬೆಲೆಗಳನ್ನು ಹೆಚ್ಚಿಸುವಿದಿಲ್ಲ, ಏಕೆಂದರೆ ಸಣ್ಣ ಬೆಲೆ ಹೆಚ್ಚಳದಿಂದ ಅನೇಕ ಗ್ರಾಹಕರನ್ನು ಕಳೆದುಕೊಳ್ಳುತ್ತಾರೆ. ತುಲನಾತ್ಮಕವಾಗಿ ಕಡಿಮೆ ಬೆಲೆಗಳು ಹೊಂದಿರುವ ಪರಿಣಾಮವಾಗಿ ದೊಡ್ಡ ಮಾರುಕಟ್ಟೆ ಪಾಲನ್ನು ಹೊಂದಲು ಭರವಸೆ ಇದೆ ಆದ್ದರಿಂದ ಈ ಸ್ಪರ್ಧಿಗಳು ಸಾಮಾನ್ಯವಾಗಿ ಬೆಲೆ ಹೆಚ್ಚಳ ನಿರ್ಲಕ್ಷಿಸುತ್ತಾರೆ. ಇಂತಹ ಕ್ರಿಯಾಶೀಲ ಇತರ ಸಂಸ್ಥೆಗಳ ಬೆಲೆ ಪೈಪೋಟಿಯಲ್ಲಿ ಪ್ರಾರಂಭವಾಗುತ್ತದೆ ಏಕೆಂದರೆ, ದೊಡ್ಡ ಬೆಲೆ ಇಳಿಕೆ ಕೆಲವೇ ಗ್ರಾಹಕರನ್ನು ಗಳಿಸುತ್ತದೆ. ಬೆಲೆ ಏರಿಕೆ ಮತ್ತು ಬೆಲೆ ಇಳಿಕೆ ಕಡಿಮೆಯಾದ್ದರಿಂದ ತಿರುವು ಹೆಚ್ಚು ಬೆಲೆ-ಸ್ಥಿತಿಸ್ಥಾಪಕವಾಗಿರುತ್ತದೆ. ಸಿದ್ಧಾಂತ ಊಹಿಸುವುದೇನೆಂದರೆ ಸಂಸ್ಥೆಗಳು ದೀರ್ಘಾವಧಿಯಲ್ಲಿ ಉದ್ಯಮ ನಮೂದಿಸುತ್ತದೆ ಎಂದು.

ಹೊರಗಿನ ಕೊಂಡಿಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]