ವಿಷಯಕ್ಕೆ ಹೋಗು

ಬೆಲೆ ನಿಗದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Expression error: Unexpected < operator.

ಮಾರಾಟಕ್ಕಿರುವ ಉತ್ಪನ್ನದ ಮೇಲಿನ ಒಂದು ಬೆಲೆ ಪಟ್ಟಿ.

ಬೆಲೆ ನಿಗದಿ ಎಂದರೆ, ಒಂದು ವ್ಯಾಪಾರ ಸಂಸ್ಥೆಯು ಅದರ ಉತ್ಪನ್ನಗಳ ಬದಲಿಗೆ ಏನನ್ನು ಸ್ವೀಕರಿಸುತ್ತದೆ ಎಂಬುದನ್ನು ನಿರ್ಧರಿಸುವ ಪ್ರಕ್ರಿಯೆ. ಬೆಲೆ ನಿಗದಿಯ ಅಂಶಗಳಲ್ಲಿ ಉತ್ಪಾದನಾ ವೆಚ್ಚ, ಮಾರುಕಟ್ಟೆ ಸ್ಥಳ, ಪೈಪೋಟಿ, ಮಾರುಕಟ್ಟೆಯ ಸ್ಥಿತಿ, ಹಾಗು ಉತ್ಪನ್ನದ ಗುಣಮಟ್ಟ ಸೇರಿದೆ. ಬೆಲೆ ನಿಗದಿಯು ಮೈಕ್ರೋ ಅರ್ಥಶಾಸ್ತ್ರದ ಬೆಲೆ ನಿಗದಿ ಸಿದ್ಧಾಂತದಲ್ಲಿ ಒಂದು ಪ್ರಮುಖ ಅಂಶವೂ ಸಹ ಆಗಿದೆ. ಬೆಲೆ ನಿಗದಿಯು ಆರ್ಥಿಕ ಮಾದರಿಯ ಒಂದು ಮೂಲಭೂತ ಅಂಶವಾಗಿರುವುದರ ಜೊತೆಗೆ ಮಿಶ್ರ ಮಾರುಕಟ್ಟೆಯ ನಾಲ್ಕು Ps ಗಳಲ್ಲಿ ಒಂದಾಗಿದೆ. ಇತರ ಮೂರು ಅಂಶಗಳೆಂದರೆ ಪ್ರಾಡಕ್ಟ್(ಉತ್ಪನ್ನ), ಪ್ರಮೋಶನ್(ಮಾರಾಟ ಪ್ರಚಾರ), ಹಾಗು ಪ್ಲೇಸ್(ಸ್ಥಳ). ನಾಲ್ಕು Psಗಳಲ್ಲಿ ಕೇವಲ ಬೆಲೆಯು ವರಮಾನವನ್ನು ಉತ್ಪಾದಿಸುವ ಅಂಶವಾಗಿದೆ, ಉಳಿದೆಲ್ಲ ಅಂಶಗಳು ವೆಚ್ಚವನ್ನು ಆಧರಿಸಿವೆ.

ಬೆಲೆ ನಿಗದಿಯು, ಖರೀದಿ ಹಾಗು ಮಾರಾಟ ಆದೇಶಗಳಿಗೆ ಬೆಲೆಯನ್ನು ದೈಹಿಕವಾಗಿ ಅಥವಾ ಸ್ವಯಂಚಾಲಿತವಾಗಿ ಬಳಸುವ ಪ್ರಕ್ರಿಯೆ, ಇದು ಈ ಕೆಳಕಂಡ ಅಂಶಗಳನ್ನು ಆಧರಿಸಿವೆ, ಉದಾಹರಣೆಗೆ: ಒಂದು ನಿಗದಿ ಬೆಲೆ, ಗುಣಮಟ್ಟ ಕುಗ್ಗುವಿಕೆ, ಪ್ರಚಾರ ಅಥವಾ ಮಾರಾಟ ಅಭಿಯಾನ, ನಿರ್ದಿಷ್ಟ ಮಾರಾಟಗಾರನು ನಮೂದಿಸಿದ ಬೆಲೆ, ನಮೂದಿನಲ್ಲಿ ಚಾಲ್ತಿಯಲ್ಲಿರುವ ಬೆಲೆ, ಹಡಗಿನಲ್ಲಿ ಸಾಗಿಸಿದ ಸರಕುಗಳ ಪ್ರಮಾಣ ಅಥವಾ ಸರಕುಪಟ್ಟಿಯ ದಿನಾಂಕ, ವಿವಿಧ ಕೋರಿಕೆಗಳು ಅಥವಾ ಸರಕಿನ ಸಂಯೋಜನೆ, ಹಾಗು ಇತರ ಹಲವು. ಸ್ವಯಂಚಾಲಿತ ವ್ಯವಸ್ಥೆಗಳಿಗೆ ಹೆಚ್ಚಿನ ವ್ಯವಸ್ಥೆ ಹಾಗು ನಿರ್ವಹಣೆಯ ಅಗತ್ಯವಿದೆ ಆದರೆ ಇದು ಬೆಲೆ ನಿಗದಿಯ ದೋಷಗಳನ್ನು ತಡೆಗಟ್ಟಬಹುದು. ಗ್ರಾಹಕನ ಅಗತ್ಯವನ್ನು, ಅವನು ಉತ್ಪನ್ನವನ್ನು ಖರೀದಿಸುವ ಇಚ್ಛೆ ಹಾಗು ಆತನ ಸಾಮರ್ಥ್ಯವನ್ನು ಪರಿಗಣಿಸಿ ಮಾತ್ರ ಅದನ್ನು ಬೇಡಿಕೆಯನ್ನಾಗಿ ಮಾರ್ಪಡಿಸಿಕೊಳ್ಳಬಹುದು. ಈ ರೀತಿಯಾಗಿ ಬೆಲೆ ನಿಗದಿಯು ವ್ಯಾಪಾರದಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ.

ಬೆಲೆ ನಿಗದಿಯನ್ನು ಒಳಗೊಂಡ ಪ್ರಶ್ನೆಗಳು

[ಬದಲಾಯಿಸಿ]

ಬೆಲೆ ನಿಗದಿಯು ಈ ರೀತಿಯಾದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ:

ಈ ಪ್ರಶ್ನೆಯು, ಬೆಲೆ ನಿಗದಿಯ ಚರ್ಚೆಗೆ ವಿಶಿಷ್ಟವಾದ ಒಂದು ಆರಂಭಿಕ ಹಂತವಾಗಿದೆ, ಆದಾಗ್ಯೂ, ಒಬ್ಬ ಮಾರಾಟಗಾರನು ಕೇಳಬಹುದಾದ ಉತ್ತಮ ಪ್ರಶ್ನೆಯೆಂದರೆ - ಮಾರಾಟಗಾರನು ಒದಗಿಸುವ ಉತ್ಪನ್ನಗಳಿಗೆ, ಸೇವೆಗಳಿಗೆ ಹಾಗು ಇತರ ಅಗ್ರಾಹ್ಯಗಳಿಗೆ ಗ್ರಾಹಕರು ಎಷ್ಟರ ಮಟ್ಟಿಗೆ ಮೌಲ್ಯ ವನ್ನು ನಿಗದಿಮಾಡಿದ್ದಾರೆ.

ವಲಯಾಧಾರಿತ ಬೆಲೆ ನಿಗದಿಎಂದು ಉಲ್ಲೇಖಿಸಲಾಗುವ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಬೆಲೆ ಬದಲಾವಣೆಯಾಗುತ್ತದೆಯೇ?

  • ನಿಗದಿಯಾದ ಪ್ರಮಾಣದಲ್ಲಿ ರಿಯಾಯಿತಿಯಿರಬೇಕೆ?
  • ಪೈಪೋಟಿಗಾರರು ಎಷ್ಟು ಬೆಲೆಯನ್ನು ನಿಗದಿಪಡಿಸಿದ್ದಾರೆ?
  • ನೀವು ಒಂದು ಬೆಲೆ ಸ್ಕಿಮಿಂಗ್(ಬೆಲೆಯನ್ನು ಏರಿಸಿ, ನಂತರ ಕಡಿಮೆ ಮಾಡುವುದು)ಕಾರ್ಯವಿಧಾನ ಅಥವಾ ಒಂದು ಬೆಲೆ ನಿಗದಿ ಭೇದನದ ಕಾರ್ಯವಿಧಾನವನ್ನು ಬಳಸಬೇಕೆ?
  • ಬೆಲೆಯು ಯಾವ ರೀತಿಯ ಭಾವನೆಯನ್ನು ತಲುಪಿಸಬೇಕು?
  • ನೀವು ಮಾನಸಿಕ ಬೆಲೆ ನಿಗದಿಯನ್ನು ಬಳಸುತ್ತೀರಾ?
  • ಗ್ರಾಹಕರಿಗೆ ಬೆಲೆ ಸೂಕ್ಷ್ಮತೆಯು ಹಾಗು ಸ್ಥಿತಿ ಸ್ಥಾಪಕತ್ವದ ವಿಷಯಗಳು ಎಷ್ಟು ಪ್ರಮುಖವಾಗಿರುತ್ತದೆ(ಉದಾಹರಣೆಗೆ "ಬೆಲೆ ಪಟ್ಟಿಯು ನೀಡುವ ಆಘಾತ")
  • ವಾಸ್ತವ ಬೆಲೆ ನಿಗದಿಯನ್ನು ಬಳಕೆ ಮಾಡಬಹುದೇ?
  • ಬೆಲೆ ತಾರತಮ್ಯ ಅಥವಾ ಆದಾಯ ವ್ಯವಸ್ಥಾಪನೆಯು ಸಮಂಜಸವಾಗಿದೆಯೆ?
  • ಚಿಲ್ಲರೆ ಮಾರಾಟದ ಬೆಲೆ ನಿರ್ವಹಣೆ, ಬೆಲೆ ತಂತ್ರ, ಅಥವಾ ಬೆಲೆ ತಾರತಮ್ಯಕ್ಕೆ ಕಾನೂನಿನಲ್ಲಿ ನಿರ್ಬಂಧವಿದೆಯೇ?
  • ಬೆಲೆಯ ಅಂಶಗಳು ಈಗಾಗಲೇ ಉತ್ಪನ್ನ ವರ್ಗದಲ್ಲಿ ಅಸ್ತಿತ್ವದಲ್ಲಿದೆಯೇ?
  • ಬೆಲೆ ನಿಗದಿಯಲ್ಲಿ ನಾವು ಎಷ್ಟರ ಮಟ್ಟಿಗೆ ನಮ್ಯವಾಗಿರಬಹುದು?: ವ್ಯಾಪಾರವು ಹೆಚ್ಚು ಸ್ಪರ್ಧಾತ್ಮಕವಾಗಿದ್ದರೆ, ನಾವು ಕಡಿಮೆ ನಮ್ಯತೆಯನ್ನು ಹೊಂದಿರುತ್ತೇವೆ.
    • ಬೆಲೆಯ ಮಿತಿಯನ್ನು ಉತ್ಪಾದನಾ ಅಂಶಗಳಾದ ವೆಚ್ಚ(ಸಾಮಾನ್ಯವಾಗಿ ಕೇವಲ ವ್ಯತ್ಯಾಸ ಸಾಧ್ಯವಾದ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ), ಆರ್ಥಿಕತೆಯ ಪ್ರಮಾಣ, ಗರಿಷ್ಠ ವೆಚ್ಚ, ಹಾಗು ನಿರ್ವಹಣಾ ಸಾಮರ್ಥ್ಯದ ಪ್ರಮಾಣ
    • ಬೆಲೆಯ ಮಿತಿಯನ್ನು ಬೇಡಿಕೆಯ ಅಂಶಗಳಾದ ಬೆಲೆ ಸ್ಥಿತಿ ಸ್ಥಾಪಕತ್ವ ಹಾಗು ಬೆಲೆ ಅಂಶಗಳು ನಿರ್ಧರಿಸುತ್ತವೆ
  • ವರ್ಗಾವಣಾ ಬೆಲೆ ನಿಗದಿಯು ಪರಿಗಣಿತವಾಗುತ್ತದೆಯೇ?
  • ಬೆಲೆ ಪೈಪೋಟಿಯಲ್ಲಿ ಒಳಪಡುವಂತಹ ಅವಕಾಶಗಳಾವುವು?
  • ಬೆಲೆಯು ಎಷ್ಟರ ಮಟ್ಟಿಗೆ ಪ್ರಕಟವಾಗುವಂತಿರಬೇಕು? - ಬೆಲೆಯು ತಟಸ್ಥವಾಗಿರಬೇಕೆ? (ಅದೆಂದರೆ: ಅದೊಂದು ಪ್ರಮುಖ ಭಿನ್ನವಾದ ಅಂಶವಲ್ಲ), ಅದು ಅತೀಹೆಚ್ಚು ಗೋಚರವಾಗಬೇಕೆ? (ಒಂದು ಕಡಿಮೆ ಬೆಲೆಯ ಉತ್ಪನ್ನವನ್ನು ಪ್ರಚಾರದ ಮೂಲಕ ಮಾರಾಟ ಮಾಡುವುದು, ಅಥವಾ ಒಂದು ಉತ್ತಮ ಗುಣಮಟ್ಟದ ಉತ್ಪನ್ನದ ಪ್ರತಿಷ್ಠಿತ ಕಲ್ಪನೆಯನ್ನು ಬಲಪಡಿಸುವುದು), ಅಥವಾ ಇದನ್ನು ಮರೆಮಾಚಬೇಕೆ? ಈ ರೀತಿಯಾಗಿ ವ್ಯಾಪಾರಸ್ಥರಿಗೆ ಬೆಲೆ ಪರಿಗಣನೆಯು ಅಡಚಣೆಯಾಗದೇ ಉತ್ಪನ್ನದ ಬಗ್ಗೆ ಆಸಕ್ತಿಯನ್ನು ಹುಟ್ಟಿಕೊಳ್ಳುವುದಕ್ಕೆ ಅವಕಾಶಮಾಡಿಕೊಡುವುದು).
  • ಜಂಟಿ ಉತ್ಪಾದನಾ ಬೆಲೆ ನಿಗದಿಯ ಪರಿಗಣನೆಗಳಿವೆಯೇ?
  • ಉತ್ಪನ್ನವನ್ನು ಖರೀದಿಸಲು ಇರುವ ಬೆಲೆರಹಿತ ವೆಚ್ಚಗಳಾವುವು? (ಉದಾಹರಣೆಗೆ: ಮಳಿಗೆಗೆ ತಲುಪಲು ತೆಗೆದುಕೊಳ್ಳುವ ಸಮಯ, ಮಳಿಗೆಯಲ್ಲಿ ಕಾಯುವ ಸಮಯದ, ಉತ್ಪನ್ನದ ಖರೀದಿಯ ಜೊತೆ ಸೇರಿದ ಅಹಿತಕರ ಅಂಶಗಳು - ದಂತವೈದ್ಯ -> ನೋವು, ಮೀನುಮಾರುಕಟ್ಟೆ -> ವಾಸನೆಗಳು)
  • ಯಾವ ತೆರನಾದ ಹಣ ಸಂದಾಯವನ್ನು ಸ್ವೀಕರಿಸಬೇಕು? (ಹಣ, ಚೆಕ್ಕು, ಕ್ರೆಡಿಟ್ ಕಾರ್ಡ್, ವಿನಿಮಯ) ಬೆಲೆ ನಿಗದಿ

ಒಂದು ಬೆಲೆಯು ಮಾಡಬೇಕಾದ ಕೆಲಸ

[ಬದಲಾಯಿಸಿ]

ಉತ್ತಮವಾಗಿ ಆಯ್ಕೆಗೊಂಡ ಒಂದು ಬೆಲೆಯು ಮೂರು ಕಾರ್ಯಗಳನ್ನು ಮಾಡಬೇಕು:

  • ವ್ಯಾಪಾರ ಸಂಸ್ಥೆಯ ಹಣಕಾಸಿನ ಗುರಿಗಳನ್ನು ಸಾಧಿಸಬೇಕು (ಉದಾಹರಣೆಗೆ, ಲಾಭದಾಯಕತೆ)
  • ಮಾರುಕಟ್ಟೆಯ ವಾಸ್ತವಾಂಶಗಳಿಗೆ ಹೊಂದಿಕೊಳ್ಳುವಂತಿರಬೇಕು(ಗ್ರಾಹಕರು ನಿಗದಿಯಾದ ಬೆಲೆಗೆ ಖರೀದಿಸುತ್ತಾರೆಯೇ?)

ಒಂದು ಉತ್ಪನ್ನದ ಸ್ಥಾನಕ್ಕೆ ಬೆಂಬಲವಾಗಿರಬೇಕು ಹಾಗು ಮಿಶ್ರ ಮಾರುಕಟ್ಟೆಯ ಇತರ ವ್ಯತ್ಯಾಸಗಳೊಂದಿಗೆ ಸ್ಥಿರತೆಯನ್ನು ಸಾಧಿಸಬೇಕು

ಬೆಲೆಯು,ಬಳಸಿದ ವಿತರಣೆ ಮಾರ್ಗದ ವಿಧಾನ, ಬಳಸಿದ ಮಾರಾಟ ಪ್ರಚಾರದ ವಿಧಾನ ಹಾಗು ಉತ್ಪನ್ನದ ಗುಣಮಟ್ಟದಿಂದ ಪ್ರಭಾವಿತವಾಗಿವೆ.

      • ಉತ್ಪಾದನೆ ವೆಚ್ಚವು ದುಬಾರಿಯಾಗಿದ್ದರೆ, ವಿತರಣೆಯು ಲಭ್ಯವಾಗಿರದಿದ್ದರೆ ಹಾಗು ಉತ್ಪನ್ನವು ವ್ಯಾಪಕವಾದ ಜಾಹಿರಾತು ಪ್ರಚಾರ ಹಾಗು ಪ್ರಚಾರ ಚಟುವಟಿಕೆಗಳಿಂದ ಬೆಂಬಲಿತವಾಗಿದ್ದರೆ ಅಂತಹ ಸಮಯದಲ್ಲಿ ಬೆಲೆಯು ಸಾಮಾನ್ಯವಾಗಿ ಅಧಿಕವಾಗಿರುತ್ತದೆ
      • ಒಂದು ಕನಿಷ್ಠ ಬೆಲೆಯು ಉತ್ಪನ್ನದ ಗುಣಮಟ್ಟ, ಪರಿಣಾಮಕಾರಿ ಪ್ರಚಾರಗಳು, ಅಥವಾ ಒಂದು ವಿತರಕರ ಚುರುಕಾದ ಮಾರಾಟ ಪ್ರಯತ್ನವೆಲ್ಲವೂ ಒಂದು ಕಾರ್ಯರೂಪಕ್ಕೆ ಬರಬಲ್ಲ ಪರ್ಯಾಯವಾಗಿರುತ್ತದೆ.

ವ್ಯಾಪಾರಸ್ಥರ ದೃಷ್ಟಿಕೋನದಲ್ಲಿ, ಒಂದು ಸಮರ್ಥ ಬೆಲೆ ಎಂದರೆ ಗ್ರಾಹಕರು ಹಣ ಸಂದಾಯ ಮಾಡಲು ತಯಾರಿರುವ ಗರಿಷ್ಠ ಮಟ್ಟಕ್ಕೆ ಅತೀ ಸಮೀಪದ ಬೆಲೆ. ಆರ್ಥಿಕ ಶಬ್ದದಲ್ಲಿ, ಗ್ರಾಹಕರ ಮೌಲ್ಯಾಧಿಕ್ಯವನ್ನು ಉತ್ಪಾದಕರಿಗೆ ವರ್ಗಾವಣೆ ಮಾಡುವ ಒಂದು ಬೆಲೆ. ಒಂದು ಉತ್ತಮ ಬೆಲೆ ನಿಗದಿ ಕಾರ್ಯನೀತಿ ಎಂದರೆ ಬೆಲೆಯ ಕನಿಷ್ಠ ಮಿತಿ(ಅದಕ್ಕಿಂತ ಕಡಿಮೆ ಬೆಲೆಯಿಂದ ವ್ಯಾಪಾರ ಸಂಸ್ಥೆಯು ನಷ್ಟಕ್ಕೆ ಗುರಿಯಾಗುತ್ತದೆ) ಹಾಗು ಬೆಲೆಯ ಏರುಮಿತಿಯ(ಅಧಿಕ ಬೆಲೆಯಿಂದ ವ್ಯಾಪಾರ ಸಂಸ್ಥೆಯು ಉತ್ಪಾದನೆಗೆ ಬೇಡಿಕೆಯಿಲ್ಲದ ಪರಿಸ್ಥಿತಿಯನ್ನು ಅನುಭವಿಸುತ್ತದೆ) ನಡುವೆ ಸಾಧಿಸುವ ಸಮತೋಲನ.

ಪರಿಭಾಷಾ ಶಾಸ್ತ್ರ

[ಬದಲಾಯಿಸಿ]

ಬೆಲೆ ನಿಗದಿಗೆ ನಿರ್ದಿಷ್ಟವಾದ ಅಸಂಖ್ಯಾತ ಶಬ್ದಗಳು ಹಾಗು ಕಾರ್ಯನೀತಿಗಳಿವೆ:

ಪರಿಣಾಮಕಾರಿ ಬೆಲೆ

[ಬದಲಾಯಿಸಿ]

ಪರಿಣಾಮಕಾರಿ ಬೆಲೆ ಎಂದರೆ, ರಿಯಾಯಿತಿಗಳು, ಮಾರಾಟ ಪ್ರಚಾರಗಳು, ಹಾಗು ಇತರ ಪ್ರೋತ್ಸಾಹಕಗಳನ್ನು ಲೆಕ್ಕ ಹಾಕಿದ ನಂತರ ವ್ಯಾಪಾರ ಸಂಸ್ಥೆಯು ಗಳಿಸುವ ಬೆಲೆ.

ಪ್ರೈಸ್ ಲೈನಿಂಗ್

[ಬದಲಾಯಿಸಿ]

ಪ್ರೈಸ್ ಲೈನಿಂಗ್ ಎಂದರೆ ಒಬ್ಬ ಮಾರಾಟಗಾರನ ಎಲ್ಲ ಉತ್ಪನ್ನಗಳಿಗೆ ಬಳಸುವ ಒಂದು ಸೀಮಿತ ಸಂಖ್ಯೆಯ ಬೆಲೆಗಳು. ಈ ಸಂಪ್ರದಾಯವನ್ನು ಹಳೆ ಫೈವ್ ಅಂಡ್ ಡೈಂ ಮಳಿಗೆಯಲ್ಲಿ ಆರಂಭಿಸಲಾಯಿತು. ಇದರಂತೆ ಎಲ್ಲ ಉತ್ಪನ್ನಗಳ ಬೆಲೆಯು 5 ಅಥವಾ 10 ಸೆಂಟ್‌ಗಳಾಗಿದ್ದವು. ಇದರ ಮೂಲ ತಾರ್ಕಿಕ ವಿವರಣೆಯೆಂದರೆ ಒಂದು ಸಮಗ್ರ ಶ್ರೇಣಿಯ ಉತ್ಪನ್ನಗಳಿಗೆ ಈ ಮೊತ್ತವು ಯೋಗ್ಯ ಬೆಲೆ ಅಂಶಗಳೆಂದು ನಿರೀಕ್ಷಿತ ಗ್ರಾಹಕರು ಅಭಿಪ್ರಾಯಪಡುತ್ತಾರೆ. ಇದರ ನಿರ್ವಹಣೆಯು ಸುಲಭವಾಗಿರುವುದರ ಅನುಕೂಲವನ್ನು ಹೊಂದಿದೆ, ಆದರೆ ಇದರ ಅನನುಕೂಲವೆಂದರೆ ಅನಮ್ಯತೆ, ಹಣದುಬ್ಬರ ಅಥವಾ ಅಸ್ಥಿರ ಬೆಲೆಗಳಿರುವ ಸಂದರ್ಭಗಳಲ್ಲಿ ಇದು ವಿಶೇಷವಾಗಿರುತ್ತದೆ.

ನಷ್ಟದ ಬಿಕರಿ

[ಬದಲಾಯಿಸಿ]

ಒಂದು ನಷ್ಟದ ಬಿಕರಿ ಎಂದರೆ ಒಂದು ಉತ್ಪನ್ನದ ಬೆಲೆಯನ್ನು ವಹಿವಾಟಿನ ಮಿತಿಗಿಂತ ಕಡಿಮೆ ಬೆಲೆಗೆ ನಿಗದಿ ಪಡಿಸಲಾಗಿರುತ್ತದೆ. ಇದು ಆ ನಿರ್ದಿಷ್ಟ ವಸ್ತುವನ್ನು ಉತ್ಪಾದಿಸುವ ವ್ಯಾಪಾರ ಸಂಸ್ಥೆಗೆ ನಷ್ಟವನ್ನು ಉಂಟು ಮಾಡುವುದರ ಜೊತೆಗೆ ಮಳಿಗೆಗೆ ಗ್ರಾಹಕರನ್ನು ಆಕರ್ಷಿಸುತ್ತದೆ ಹಾಗೂ ಇವರಲ್ಲಿ ಕೆಲವು ಗ್ರಾಹಕರು ಇತರ, ಹೆಚ್ಚಿನ ದರದ ವಸ್ತುಗಳನ್ನು ಖರೀದಿಸುತ್ತಾರೆಂಬ ಆಶಯವನ್ನು ಹೊಂದಿರುತ್ತದೆ.

ಪ್ರಚಾರದ ಬೆಲೆ ನಿಗದಿ

[ಬದಲಾಯಿಸಿ]

ಪ್ರಚಾರದ ಬೆಲೆ ನಿಗದಿಯು , ಮಿಶ್ರ ಮಾರುಕಟ್ಟೆಯಲ್ಲಿ ಬೆಲೆ ನಿಗದಿಯ ಒಂದು ಪ್ರಧಾನ ಅಂಶವನ್ನು ಉದಾಹರಣೆಯಾಗಿ ಉಲ್ಲೇಖಿಸುತ್ತದೆ.

ಬೆಲೆ/ಗುಣಮಟ್ಟದ ಸಂಬಂಧ

[ಬದಲಾಯಿಸಿ]

ಬೆಲೆ/ಗುಣಮಟ್ಟದ ಸಂಬಂಧ ವೆಂದರೆ ಅಧಿಕ ಬೆಲೆಯು ಉತ್ತಮ ಗುಣಮಟ್ಟದ ಸಂಕೇತವೆಂಬ ಗ್ರಾಹಕರ ಪರಿಕಲ್ಪನೆಯನ್ನು ಸೂಚಿಸುತ್ತದೆ. ಪರೀಕ್ಷಿಸಲು ಕಷ್ಟಕರವಾದ ಸಂಕೀರ್ಣ ಉತ್ಪನ್ನಗಳು, ಹಾಗು ಬಳಕೆಯಾಗುವವರೆಗೂ ಪರೀಕ್ಷಿಸಲು ಬಾರದ ಅನುಭವಜನ್ಯ ಉತ್ಪನ್ನಗಳೊಂದಿಗೆ(ಉದಾಹರಣೆಗೆ ಹೆಚ್ಚಿನ ಸೇವೆಗಳು)ಈ ಸಂಬಂಧದಲ್ಲಿನ ನಂಬಿಕೆಗೆ ಪ್ರಮುಖವಾಗಿರುತ್ತದೆ. ಒಂದು ಉತ್ಪನ್ನವನ್ನು ಸುತ್ತುವರಿಯುವ ಅನಿಶ್ಚಿತತೆ ಹೆಚ್ಚಾಗಿದ್ದರೆ, ಹೆಚ್ಚಿನ ಗ್ರಾಹಕರು ಬೆಲೆ/ಗುಣಮಟ್ಟದ ಕಲ್ಪಿತ ಸಿದ್ಧಾಂತದ ಮೇಲೆ ಅವಲಂಬಿಸಿರುತ್ತಾರಲ್ಲದೆ ಆ ಉತ್ಪನ್ನಕ್ಕೆ ಅಧಿಕ ಮೌಲ್ಯವನ್ನು ಸಂದಾಯ ಮಾಡಲು ತಯಾರಿರುತ್ತಾರೆ. ಒಂದು ಅತಿ ಮುಖ್ಯ ಉದಾಹರಣೆಯೇನರೆ ಟ್ವಿನ್ಕೀಸ್ ಎಂಬ ಕೇಕ್‌ನ ಬೆಲೆ ನಿಗದಿ, ಕೇಕ್ ನ ಬೆಲೆಯನ್ನು ಕಡಿತಗೊಳಿಸಿದಾದ ಗುಣಮಟ್ಟವು ಕಡಿಮೆಯಾಗಿರಬಹುದೆಂದು ಅಭಿಪ್ರಾಯಪಡಲಾಯಿತು. ಬೆಲೆ/ಪರಿಮಾಣದ ಸಂಬಂಧದ ಮೇಲೆ ಗ್ರಾಹಕರಿಂದ ಅತಿಯಾದ ಅವಲಂಬನೆಯು ಎಲ್ಲ ಉತ್ಪನ್ನಗಳು ಹಾಗು ಸೇವೆಗಳ ಬೆಲೆಯಲ್ಲಿ ಹೆಚ್ಚಳವನ್ನು ಉಂಟುಮಾಡಬಹುದು,ಕಡಿಮೆ ಗುಣಮಟ್ಟದ ಉತ್ಪನ್ನ ಕೂಡ.ಇದರಿಂದ ಬೆಲೆ/ಗುಣಮಟ್ಟದ ಸಂಬಂಧ ಅನ್ವಯವಾಗುವುದಿಲ್ಲ.[ಸಾಕ್ಷ್ಯಾಧಾರ ಬೇಕಾಗಿದೆ]

ಅಧಿಕ ಮೌಲ್ಯದ ಬೆಲೆ ನಿಗದಿ

[ಬದಲಾಯಿಸಿ]

ಅಧಿಕ ಮೌಲ್ಯದ ಬೆಲೆ ನಿಗದಿ (ಘನತೆ ಬೆಲೆ ನಿಗದಿ ಎಂದೂ ಕರೆಯಲಾಗುತ್ತದೆ) ಎಂಬುದು ಸ್ಥಾನಮಾನ ಪ್ರಜ್ಞೆಯ ಗ್ರಾಹಕರನ್ನು ಆಕರ್ಷಿಸಲು ಸ್ಥಿರವಾಗಿ ಬೆಲೆ ನಿಗದಿಯನ್ನು ಸಂಭಾವ್ಯ ಬೆಲೆ ಶ್ರೇಣಿಯ ಅತ್ಯುತ್ತಮಕ್ಕೆ ಸಮನಾಗಿ, ಅಥವಾ ಹತ್ತಿರದಲ್ಲಿ ನಿಗದಿ ಪಡಿಸುವ ಕಾರ್ಯ ನೀತಿ. ಮಾರುಕಟ್ಟೆಯಲ್ಲಿ ಅಧಿಕ ಮೌಲ್ಯದ ಬೆಲೆ ನಿಗದಿಯಲ್ಲಿ ಪಾಲ್ಗೊಳ್ಳುವ ವ್ಯಾಪಾರ ಸಂಸ್ಥೆಗಳಲ್ಲಿ ರೋಲೆಕ್ಸ್ ಹಾಗು ಬೆಂಟ್ಲೆ ಸಂಸ್ಥೆಗಳು ಸೇರಿವೆ. ಜನರು ಅಧಿಕ ಮೌಲ್ಯದ ಉತ್ಪನ್ನವನ್ನು ಕೊಂಡುಕೊಳ್ಳುತ್ತಾರೆ ಏಕೆಂದರೆ:

  1. ಅವರು ಅಧಿಕ ಬೆಲೆಯು ಉತ್ತಮ ಗುಣಮಟ್ಟದ ಸಂಕೇತವೆಂದು ಅಭಿಪ್ರಾಯ ಪಡುತ್ತಾರೆ;

ಇವರು ಇದನ್ನು ಪ್ರತಿಷ್ಠೆಯ ಸಂಕೇತವೆಂದು ಭಾವಿಸುತ್ತಾರೆ - "ಅವರು ಇದಕ್ಕೆ ಅರ್ಹರಾಗಿದ್ದಾರೆ;" ಇದು ಗ್ರಾಹಕ ಯಶಸ್ಸು ಹಾಗು ಸಾಮಾಜಿಕ ಸ್ಥಾನಮಾನವನ್ನು ಪ್ರಮಾಣೀಕರಿಸುತ್ತದೆ; ಮಾಲೀಕ ವಿಶೇಷ ಗುಂಪಿನ ಸದಸ್ಯ ಎಂದು ಇತರರಿಗೆ ಸೂಚನೆ ನೀಡುತ್ತದೆ;

  1. ಈ ಸತತ ಪ್ರಯತ್ನಕ್ಕೆ ದೋಷರಹಿತ ನಿರ್ವಹಣೆಯ ಅಗತ್ಯವಿದೆ - ಅಸಮರ್ಪಕ ಉತ್ಪನ್ನದ ವೆಚ್ಚವು ಅಧಿಕವಾಗಿದ್ದು, ಅತ್ಯುತ್ತಮವಾದುದನ್ನು ಖರೀದಿ ಮಾಡದೆ ಬೇರೆ ಮಾರ್ಗವಿಲ್ಲ - ಉದಾಹರಣೆಗೆ: ಹಾರ್ಟ್ ಪೇಸ್ ಮೇಕರ್ (ಹೃದಯದ ಸ್ನಾಯುವನ್ನು ಪ್ರಚೋದಿಸಿ, ಅದನ್ನು ಸುಸ್ಥಿತಿಯಲ್ಲಿಡುವ ಕೃತಕ ವಿದ್ಯುದುಪಕರಣ).

ಗೋಲ್ಡಿಲಾಕ್ಸ್ ಬೆಲೆ ನಿಗದಿ

[ಬದಲಾಯಿಸಿ]

ಒಂದು ಉತ್ಪನ್ನಕ್ಕೆ ಅಧಿಕ ಬೆಲೆಯೊಂದಿಗೆ "ಚಿನ್ನದ-ಲೇಪ"ದ ರೂಪವನ್ನು ಒದಗಿಸುವ ವಿಧಾನಕ್ಕೆ ಗೋಲ್ಡಿಲಾಕ್ಸ್ ಪ್ರೈಸಿಂಗ್ ಎಂಬ ಪದವನ್ನು ಬಳಸಲಾಗುತ್ತದೆ. ಈ ವಿಧಾನದಿಂದ ಉತ್ಪನ್ನದ ಬೆಲೆಯ ನಂತರದ ಬೆಲೆಯ ಆಯ್ಕೆಯು ಸಮಂಜಸ ಬೆಲೆಯಾಗಿ ಕಂಡುಬರುತ್ತದೆ;ಉದಾಹರಣೆಗೆ, ಬಿಸಿನೆಸ್ ಕ್ಲಾಸ್ ಏರ್‌ಲೈನ್ ಸೀಟುಗಳಿಗಿಂತ ಹೆಚ್ಚಿನ ದರದ ಪ್ರಥಮ ದರ್ಜೆಯ ಆಯ್ಕೆಯನ್ನು ನೀಡುವ ಮೂಲಕ ಬಿಸಿನೆಸ್ ಕ್ಲಾಸ್ ಏರ್‌ಲೈನ್ ಸೀಟುಗಳು ಹಣಕ್ಕೆ ಉತ್ತಮ ಮೌಲ್ಯವೆಂದು ಪ್ರೋತ್ಸಾಹಿಸುವುದು.

[ಸಾಕ್ಷ್ಯಾಧಾರ ಬೇಕಾಗಿದೆ]ಇದೆ ರೀತಿಯಾಗಿ, ವಿಕ್ಟೋರಿಯನ್ ಇಂಗ್ಲೆಂಡ್‌ನಲ್ಲಿ ತೃತೀಯ ದರ್ಜೆಯ ರೈಲ್ವೆ ಬಂಡಿಗಳು ಕಿಟಕಿಗಳಿಲ್ಲದೆ ನಿರ್ಮಾಣಗೊಂಡಿದ್ದಾಗಿ ಹೇಳಲಾಗುತ್ತದೆ, ಇದು ತೃತೀಯ-ದರ್ಜೆಯ ಗ್ರಾಹಕರನ್ನು ಶಿಕ್ಷೆಗೆ ಗುರಿಪಡಿಸುವ ಸಲುವಾಗಿ ಅಲ್ಲ(ಇದಕ್ಕೆ ಯಾವುದೇ ಆರ್ಥಿಕವಾಗಿ ಉತ್ತೇಜಕ ಸವಲತ್ತುಗಳಿರಲಿಲ್ಲ). ಅಗ್ಗದ ಆಯ್ಕೆಯನ್ನು ಸ್ವೀಕರಿಸುವ ಬದಲಿಗೆ ಎರಡನೇ ದರ್ಜೆ ಸೀಟುಗಳಿಗೆ ಹಣ ಪಾವತಿಗೆ ಶಕ್ತರಾದವರು ಅದರಲ್ಲೇ ಪ್ರಯಾಣಿಸುವಂತೆ ಪ್ರೇರೇಪಣೆ ನೀಡುವುದು.[ಸಾಕ್ಷ್ಯಾಧಾರ ಬೇಕಾಗಿದೆ] ಇದನ್ನು ಬೆಲೆ ತಾರತಮ್ಯದ ಒಂದು ಸಂಭಾವ್ಯ ಪರಿಣಾಮವೆಂದು ಸಹ ಕರೆಯಲಾಗುತ್ತದೆ. ಇದರ ಹೆಸರು ಗೋಲ್ಡಿಲಾಕ್ಸ್ ಕಥೆಯಿಂದ ಹುಟ್ಟಿಕೊಂಡಿದೆ. ಕಥೆಯಲ್ಲಿ ಗೋಲ್ಡಿಲಾಕ್ಸ್ ತುಂಬಾ ಬಿಸಿಯಾದ ಅಥವಾ ತುಂಬಾ ತಣ್ಣನೆಯ ಗಂಜಿಯನ್ನು ಆಯ್ಕೆ ಮಾಡಿಕೊಳ್ಳಲಿಲ್ಲ ಬದಲಿಗೆ ಅವನು "ಸರಿಯಾದ" ಹದವಿರುವ ಗಂಜಿಯನ್ನು ಆಯ್ಕೆ ಮಾಡಿದ. ಹೆಚ್ಚು ತಾಂತ್ರಿಕತೆಯಿಂದ ಕೂಡಿದ ಬೆಲೆ ನಿಗದಿಯ ಈ ರೂಪವು ವಿಪರೀತಗಳ(ಬೆಲೆ ಅತೀ ಹೆಚ್ಚು ಅತೀ ಕಡಿಮೆ) ವಿರೋಧಕ್ಕೆ ಸಾಮಾನ್ಯ ಒಲವನ್ನು ಬಳಸಿಕೊಳ್ಳುತ್ತದೆ.
ಈ ವಿಧಾನವನ್ನು ವಿದ್ವತ್ಪೂರ್ಣವಾಗಿ "ಫ್ರೇಮಿಂಗ್" ಎಂದು ಕರೆಯಲಾಗುತ್ತದೆ. ಮೂರು ಆಯ್ಕೆಗಳನ್ನು ಒದಗಿಸಿ(ಉದಾಹರಣೆಗೆ, ಸಣ್ಣ, ಮಧ್ಯಮ, ದೊಡ್ಡದು; ಮೊದಲ, ಬಿಸಿನೆಸ್, ಹಾಗು ಕೋಚ್ ದರ್ಜೆಗಳು) ಗ್ರಾಹಕರು ಮಧ್ಯದ ಆಯ್ಕೆಯನ್ನು ಆರಿಸುವಂತೆ ಕುಶಲ ತಂತ್ರವನ್ನು ಬಳಸಬಹುದು ಹಾಗು ಈ ರೀತಿಯಾಗಿ, ಮಧ್ಯದ ಆಯ್ಕೆಯು ವ್ಯಾಪಾರಿಗೆ ಹೆಚ್ಚು ಲಾಭವನ್ನು ಒದಗಿಸುತ್ತದೆ, ಏಕೆಂದರೆ ಈ ಆಯ್ಕೆಯನ್ನು ಸಾಧಾರಣವಾಗಿ ಎಲ್ಲರೂ ಆರಿಸಿಕೊಳ್ಳುತ್ತಾರೆ.

ಬೇಡಿಕೆ ಆಧಾರಿತ ಬೆಲೆ ನಿಗದಿ

[ಬದಲಾಯಿಸಿ]

ಬೆಲೆ ನಿಗದಿಯ ವಿಧಾನದಲ್ಲಿ ಬೇಡಿಕೆ-ಆಧಾರಿತ ಬೆಲೆ ನಿಗದಿ ಯು ಗ್ರಹಿಸಲಾದ ಮೌಲ್ಯವನ್ನು ಆಧರಿಸಿ - ಗ್ರಾಹಕರ ಬೇಡಿಕೆಯನ್ನು ಒಂದು ಪ್ರಮುಖ ಅಂಶವಾಗಿ ಬಳಕೆ ಮಾಡುತ್ತದೆ. ಇದರಲ್ಲಿ: ಪ್ರೈಸ್ ಸ್ಕಿಮ್ಮಿಂಗ್(ಹೆಚ್ಚಿನ ಬೆಲೆಯಿಂದ ಕಡಿಮೆ ಬೆಲೆಗೆ ಇಳಿಸುವುದು), ಬೆಲೆ ತಾರತಮ್ಯ ಹಾಗು ಆದಾಯ ನಿರ್ವಹಣೆ, ಪ್ರೈಸ್ ಪಾಯಿಂಟ್ಸ್(ಉತ್ಪನ್ನಕ್ಕೆ ಬೇಡಿಕೆ ಅತ್ಯಧಿಕವಾಗಿರುವ ಬೆಲೆ) ಮಾನಸಿಕ ಬೆಲೆ ನಿಗದಿ, ಬಂಡಲ್ ಪ್ರೈಸಿಂಗ್(ಸಂಯುಕ್ತ ವಸ್ತುವಾಗಿ ಅನೇಕ ವಸ್ತುಗಳ ಮಾರಾಟ), ಭೇದನ ಬೆಲೆ ನಿಗದಿ(ಆರಂಭಿಕ ಕಡಿಮೆ ಪ್ರವೇಶದರ), ಪ್ರೈಸ್ ಲೈನಿಂಗ್ ಮೌಲ್ಯಾಧಾರಿತ ಬೆಲೆ ನಿಗದಿ, ಜಿಯೋ(ಬೌಗೋಳಿಕ ಮಾನದಂಡ ಬಳಕೆ) ಹಾಗು ಅಧಿಕ ಮೌಲ್ಯದ ಬೆಲೆ ನಿಗದಿ. ಬೆಲೆ ನಿಗದಿಯ ಅಂಶಗಳೆಂದರೆ ಉತ್ಪಾದನಾ ವೆಚ್ಚ, ಮಾರುಕಟ್ಟೆ, ಪೈಪೋಟಿ, ಮಾರುಕಟ್ಟೆ ಸ್ಥಿತಿ, ಉತ್ಪನ್ನದ ಗುಣಮಟ್ಟ.

ಬಹು ಆಯಾಮದ ಬೆಲೆ ನಿಗದಿ

[ಬದಲಾಯಿಸಿ]

ಬಹು ಆಯಾಮದ ಬೆಲೆ ನಿಗದಿ ಎಂದರೆ ಒಂದು ಉತ್ಪನ್ನ ಅಥವಾ ಸೇವೆಯ ಬೆಲೆ ನಿಗದಿಯು ಹಲವು ಸಂಖ್ಯೆಗಳನ್ನು ಬಳಕೆ ಮಾಡಿಕೊಳ್ಳುತ್ತದೆ. ಈ ವಿಧಾನದಲ್ಲಿ, ಬೆಲೆಯು ಒಂದು ಏಕೈಕ ಹಣದ ಮೊತ್ತವನ್ನು ಒಳಗೊಂಡಿರುವುದಿಲ್ಲ (ಉದಾಹರಣೆಗೆ, ಒಂದು ಕಾರಿನ ಅಂಟು ಚೀಟಿಯ ಮೇಲೆ ಬರೆಯಲಾಗಿರುವ ಬೆಲೆ), ಆದರೆ ಇದು ಹಲವಾರು ಆಯಾಮಗಳನ್ನು ಒಳಗೊಂಡಿರುತ್ತವೆ(ಉದಾಹರಣೆಗೆ, ಮಾಸಿಕ ಸಂದಾಯಗಳು, ಕಂತಿನ ಸಂಖ್ಯೆಗಳು, ಹಾಗು ಡೌನ್‌ಪೇಮೆಂಟ್(ಆರಂಭದ ಪಾವತಿ). ವಿಧಾನವು ಬೆಲೆಯ ಮಾಹಿತಿಯ ಬಗ್ಗೆ ಗ್ರಾಹಕರು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹಾಗು ಪ್ರಕ್ರಿಯೆಯ ಮೇಲೆ ಗಮನಾರ್ಹ ಪ್ರಭಾವ ಬೀರುತ್ತದೆಂದು ಸಂಶೋಧನೆಯು ತೋರಿಸಿದೆ.[]

ಬೆಲೆ ಸೂಕ್ಷ್ಮತೆಯ ಒಂಬತ್ತು ನಿಯಮಗಳು

[ಬದಲಾಯಿಸಿ]

ತಮ್ಮ ಪುಸ್ತಕ, ದಿ ಸ್ತ್ರ್ಯಾಟಿಜಿ ಅಂಡ್ ಟ್ಯಾಕ್ಟಿಕ್ಸ್ ಆಫ್ ಪ್ರೈಸಿಂಗ್ ನಲ್ಲಿ, ಥಾಮಸ್ ನಗ್ಲೇ ಹಾಗು ರೀಡ್ ಹೋಲ್ಡೆನ್, ಒಂದು ಉತ್ಪನ್ನದ ಖರೀದಿಗೆ ಸಂಬಂಧಿಸಿದಂತೆ ಒಬ್ಬ ಗ್ರಾಹಕನ ಬೆಲೆ ಸೂಕ್ಷ್ಮತೆಗೆ ಪ್ರಭಾವ ಬೀರುವ 9 ನಿಯಮಗಳನ್ನು ಪಟ್ಟಿ ಮಾಡಿದ್ದಾರೆ. [][]

  1. ಉಲ್ಲೇಖಿತ ಬೆಲೆ ಪರಿಣಾಮ ಗ್ರಹಿಸುವ ಪರ್ಯಾಯಗಳಿಗೆ ಸಂಬಂಧಿಸಿದಂತೆ ಉತ್ಪನ್ನದ ದರ ಹೆಚ್ಚಾಗಿದ್ದರೆ ಗೊತ್ತಾದ ಉತ್ಪನ್ನಕ್ಕೆ ಖರೀದಿದಾರರ ಬೆಲೆ ಸೂಕ್ಷ್ಮತೆಯು ಹೆಚ್ಚಾಗುತ್ತದೆ.
 ಗ್ರಹಿಸುವ ಪರ್ಯಾಯಗಳು ಗ್ರಾಹಕ ವಲಯ, ಸಂದರ್ಭ ಹಾಗು ಇತರ ಅಂಶಗಳಿಂದ ವ್ಯತ್ಯಾಸವನ್ನು ಹೊಂದಿರುತ್ತದೆ.
  1. ಕಷ್ಟಕರ ಹೋಲಿಕೆ ಪರಿಣಾಮ ಒಂದು ಅತ್ಯಂತ ಪರಿಚಿತ/ ಹೆಚ್ಚು ಹೆಸರುವಾಸಿಯಾದ ಉತ್ಪನ್ನವನ್ನು ಇತರ ಸಂಭಾವ್ಯ ಪರ್ಯಾಯ ಉತ್ಪನ್ನಗಳ ಜೊತೆ ತುಲನೆ ಮಾಡಲು ಕಷ್ಟವೆನಿಸಿದಾಗ ಗ್ರಾಹಕರು ಬೆಲೆಯ ಬಗ್ಗೆ ಕಡಿಮೆ ಸೂಕ್ಷ್ಮತೆಯನ್ನು ಹೊಂದಿರುತ್ತಾರೆ.
  2. ಬದಲಾವಣೆ ವೆಚ್ಚದ ಪರಿಣಾಮ ಸರಬರಾಜುದಾರರನ್ನು ಬದಲಾಯಿಸಲು ಖರೀದಿದಾರ ಮಾಡುವ ಉತ್ಪನ್ನ-ನಿರ್ದಿಷ್ಟ ಹೂಡಿಕೆ ಹೆಚ್ಚಿದ್ದರೆ, ಪರ್ಯಾಯಗಳ ನಡುವಿನ ಆಯ್ಕೆಯಲ್ಲಿ ಕಡಿಮೆ ಬೆಲೆ ಸೂಕ್ಷ್ಮತೆಯನ್ನು ಹೊಂದಿರುತ್ತಾನೆ.
  3. ಬೆಲೆ-ಗುಣಮಟ್ಟದ ಪರಿಣಾಮ ಹೆಚ್ಚಿನ ದರಗಳು ಹೆಚ್ಚಿನ ಗುಣಮಟ್ಟದ ಸೂಚನೆಯಾಗಿದ್ದರೆ, ಖರೀದಿದಾರರು ಬೆಲೆಗೆ ಕಡಿಮೆ ಸೂಕ್ಷ್ಮತೆಯನ್ನು ಹೊಂದಿರುತ್ತಾರೆ. ನಿರ್ದಿಷ್ಟವಾಗಿ ಈ ಪರಿಣಾಮಕ್ಕೆ ಒಳಪಡುವ ಸಂಬಂಧಿತ ಉತ್ಪನ್ನಗಳೆಂದರೆ: ಪ್ರತಿಷ್ಠಿತ ಉತ್ಪನ್ನಗಳು, ವಿಶೇಷ ಉತ್ಪನ್ನಗಳು, ಹಾಗು ಗುಣಮಟ್ಟದ ಬಗ್ಗೆ ಕನಿಷ್ಠ ಸೂಚನೆಗಳನ್ನು ನೀಡುವ ಉತ್ಪನ್ನಗಳು.
  4. ವೆಚ್ಚದ ಪರಿಣಾಮ ಖರೀದಿದಾರರ ಲಭ್ಯ ಆದಾಯ ಅಥವಾ ಆಯವ್ಯಯದ ಶೇಕಡಾವಾರು ದೊಡ್ಡ ಪ್ರಮಾಣಕ್ಕೆ ವೆಚ್ಚವು ಕಾರಣವಾಗಿದ್ದರೆ ಖರೀದಿದಾರರು ಹೆಚ್ಚು ಬೆಲೆ ಸೂಕ್ಷ್ಮತೆಯನ್ನು ಹೊಂದಿರುತ್ತಾರೆ.
  5. ಅಂತಿಮ-ಲಾಭದ ಪರಿಣಾಮ ಗೊತ್ತಾದ ಖರೀದಿಯ ಹೆಚ್ಚಿನ ಒಟ್ಟಾರೆ ಅನುಕೂಲವನ್ನು ಈ ಪರಿಣಾಮವು ಉಲ್ಲೇಖಿಸುತ್ತದೆ. ಇದನ್ನು ಎರಡು ಭಾಗಗಳಲ್ಲಿ ವಿಂಗಡಿಸಲಾಗಿದೆ: ಹುಟ್ಟಿದ ಬೇಡಿಕೆ: ಅಂತಿಮ ಅನುಕೂಲದ ಬೆಲೆಗೆ ಗ್ರಾಹಕರು ಹೆಚ್ಚಿನ ಸೂಕ್ಷ್ಮತೆಯನ್ನು ಹೊಂದಿದ್ದರೆ, ಅಂತಹ ಅನುಕೂಲಕ್ಕೆ ಕೊಡುಗೆ ನೀಡುವ ಉತ್ಪನ್ನಗಳ ಬೆಲೆಯ ಬಗ್ಗೆ ಅವರು ಹೆಚ್ಚಿನ ಸೂಕ್ಷ್ಮತೆಯನ್ನು ಹೊಂದಿರುತ್ತಾರೆ. ಬೆಲೆಯ ಪ್ರಮಾಣಾನುಗುಣ ವೆಚ್ಚ: ಬೆಲೆ ಪ್ರಮಾಣಾನುಗುಣ ವೆಚ್ಚವು,ಅಂತಿಮ ಅನುಕೂಲಕ್ಕೆ ನೆರವಾಗುವ ಗೊತ್ತಾದ ಘಟಕ(ಉತ್ಪನ್ನ)ದ ಅಂತಿಮ ಅನುಕೂಲದ ಒಟ್ಟು ಶೇಕಡಾವಾರು ವೆಚ್ಚವನ್ನು ಉಲ್ಲೇಖಿಸುತ್ತದೆ. (ಉದಾಹರಣೆಗೆ, CPU ಹಾಗು PCಗಳ ಬಗ್ಗೆ ಯೋಚಿಸಿ). ಅಂತಿಮ ಲಾಭದ ಒಟ್ಟು ವೆಚ್ಚದಲ್ಲಿ ಘಟಕಗಳ ಪಾಲು ಸಣ್ಣ ಪ್ರಮಾಣದಲ್ಲಿದ್ದರೆ, ಅಂತಹ ವಸ್ತುಗಳ ಬೆಲೆಯ ಬಗ್ಗೆ ಗ್ರಾಹಕರು ಕಡಿಮೆ ಸೂಕ್ಷ್ಮತೆಯನ್ನು ತೋರುತ್ತಾರೆ.

ಹಂಚಿಕೆ-ವೆಚ್ಚದ ಪರಿಣಾಮ ಗ್ರಾಹಕರು ತಾವು ಕೊಂಡುಕೊಳ್ಳುವ ವಸ್ತುಗಳ ಬೆಲೆಯು ಸಣ್ಣ ಪ್ರಮಾಣದಲ್ಲಿದ್ದರೆ, ಆಗ ಅವರು ಬೆಲೆಯ ಬಗ್ಗೆ ಕಡಿಮೆ ಸೂಕ್ಷ್ಮತೆಯನ್ನು ತೋರುತ್ತಾರೆ.

ನ್ಯಾಯವಾದ ಬೆಲೆಯ ಪರಿಣಾಮ ಗ್ರಾಹಕರು ತಾವು ಕೊಂಡುಕೊಳ್ಳುವ ವಸ್ತುಗಳಿಗೆ ಸಂಬಂಧಿಸಿದಂತೆ "ನ್ಯಾಯವಾದ" ಅಥವಾ "ಸಮಂಜಸ" ಎಂಬ ಗ್ರಹಿಕೆಯ ಪರಿಮಿತಿಯನ್ನು ಮೀರಿದ್ದರೆ, ಅಂತಹ ಉತ್ಪನ್ನದ ಬೆಲೆಯ ಬಗ್ಗೆ ಹೆಚ್ಚು ಸೂಕ್ಷ್ಮತೆಯನ್ನು ತೋರುತ್ತಾರೆ.

  1. ಬೆಲೆ ರೂಪಿಸುವ ಪರಿಣಾಮ ಬೆಲೆಯು ಒಂದು ಉಪಯೋಗಕ್ಕೆ ಬರದ ಲಾಭಕ್ಕಿಂತ ಹೆಚ್ಚಾಗಿ ಒಂದು ನಷ್ಟವೆಂದು ಗ್ರಹಿಸಲ್ಪಟ್ಟರೆ ಅಂತಹ ಸಂದರ್ಭದಲ್ಲಿ ಗ್ರಾಹಕರು ಬೆಲೆ ಏರಿಕೆಯ ಬಗ್ಗೆ ಹೆಚ್ಚಿನ ಸೂಕ್ಷ್ಮತೆಯನ್ನು ಹೊಂದಿರುತ್ತಾರೆ, ಇದಲ್ಲದೆ ಬೆಲೆಯನ್ನು ಒಟ್ಟು ಹಣದ ಒಂದು ಭಾಗಕ್ಕಿಂತ ಪ್ರತ್ಯೇಕವಾಗಿ ಪಾವತಿಸಿದಾಗ ಹೆಚ್ಚಿನ ಬೆಲೆಸೂಕ್ಷ್ಮತೆಯನ್ನು ಹೊಂದಿರುತ್ತಾರೆ.

ಮಾರ್ಗಗಳು

[ಬದಲಾಯಿಸಿ]

ಬೆಲೆ ನಿಗದಿಯು ಒಂದು ಅತ್ಯಂತ ಪರಿಣಾಮಕಾರಿಯಾದ ಲಾಭಕರ ಸನ್ನೆಕೋಲು.[] ಬೆಲೆ ನಿಗದಿಯನ್ನು ಮೂರು ಹಂತಗಳಲ್ಲಿ ಸಮೀಪಿಸಬಹುದು.ಉದ್ಯಮ, ಮಾರುಕಟ್ಟೆ, ಹಾಗು ವಹಿವಾಟಿನ ಹಂತ.


ಉದ್ಯಮದ ಹಂತದಲ್ಲಿ ಬೆಲೆ ನಿಗದಿಯು ಉದ್ಯಮದ ಒಟ್ಟಾರೆ ಆರ್ಥಿಕತೆಯ ಬಗ್ಗೆ ಗಮನ ಹರಿಸುತ್ತದೆ, ಇದರಲ್ಲಿ ಸರಬರಾಜುದಾರನ ಬೆಲೆಯಲ್ಲಿ ಬದಲಾವಣೆಗಳು ಹಾಗು ಗ್ರಾಹಕನ ಬೇಡಿಕೆಯಲ್ಲಿ ಬದಲಾವಣೆಗಳು ಸೇರಿರುತ್ತವೆ.

ಮಾರುಕಟ್ಟೆ ಹಂತದಲ್ಲಿ ಬೆಲೆ ನಿಗದಿಯು, ಸ್ಪರ್ಧಾತ್ಮಕ ಉತ್ಪನ್ನಗಳು ಹಾಗೂ ಖರೀದಿಸುವ ಉತ್ಪನ್ನದ ನಡುವೆ ಮೌಲ್ಯದ ವ್ಯತ್ಯಾಸವನ್ನು ತುಲನೆ ಮಾಡಿ ಬೆಲೆಯ ಸ್ಪರ್ಧಾತ್ಮಕ ಸ್ಥಾನದ ಮೇಲೆ ಗಮನಹರಿಸುತ್ತದೆ.

ರೆಫೆರೆನ್ಸ್ ಅಥವಾ ದರ ಪಟ್ಟಿಯಿಂದ ದೂರವಿರುವ ರಿಯಾಯಿತಿಗಳ ಅನುಷ್ಠಾನವನ್ನು ನಿರ್ವಹಿಸಲು ವಹಿವಾಟಿನ ಹಂತದ ಬೆಲೆ ನಿಗದಿಯು ಗಮನಹರಿಸುತ್ತದೆ. ಇದು ಇನ್‌ವಾಯಿಸ್ ಅಥವಾ ರಿಸೀಟ್‌ನಲ್ಲಿ ಅಥವಾ ಅದರಿಂದ ಹೊರಗೆ ಉಂಟಾಗುತ್ತದೆ.

ಬೆಲೆ ನಿಗದಿ ಕಾರ್ಯತಂತ್ರ

[ಬದಲಾಯಿಸಿ]

ಮೈಕ್ರೋಮಾರ್ಕೆಟಿಂಗ್ ಎಂದರೆ ಸಂದರ್ಭಕ್ಕೆ ತಕ್ಕಂತೆ ಉತ್ಪನ್ನಗಳು, ನಿರ್ದಿಷ್ಟ ಬ್ರಾಂಡ್‌ಗಳು(ಮೈಕ್ರೋಬ್ರಾಂಡ್ಸ್), ಹಾಗು ಮಾರಾಟ ಪ್ರಚಾರಗಳನ್ನು ಒಂದು ಮಾರುಕಟ್ಟೆಯೊಳಗೆ ಮೈಕ್ರೋ ಸೆಗ್ಮೆಂಟ್ಸ್ ಗಳ ಅವಶ್ಯಕತೆಗಳು ಹಾಗು ಬೇಡಿಕೆಗಳನ್ನು ಪೂರೈಸಲು ಹೊಂದಿಕೊಳ್ಳುವಂತೆ ಮಾಡುವ ರೂಢಿ. ಇದು ಮಾರುಕಟ್ಟೆ ಕಸ್ಟಮೈಸೇಶನ್(ಗಿರಾಕಿಗಳ ಇಷ್ಟದಂತೆ ತಯಾರಿಸುವ) ಒಂದು ಮಾದರಿ. ಇದು ಗ್ರಾಹಕ/ಉತ್ಪನ್ನದ ಬೆಲೆ ನಿಗದಿಯ ಸಂಯೋಜನೆಯೊಂದಿಗೆ ಮಳಿಗೆ ಅಥವಾ ವೈಯಕ್ತಿಕ ಮಟ್ಟದಲ್ಲಿ ವ್ಯವಹರಿಸುತ್ತದೆ.

ಬೆಲೆ ನಿಗದಿ ದೋಷಗಳು

[ಬದಲಾಯಿಸಿ]

ಹಲವು ವ್ಯಾಪಾರ ಸಂಸ್ಥೆಗಳು ಬೆಲೆ ನಿಗದಿಗೆ ಸಂಬಂಧಿಸಿದಂತೆ ಸಾಮಾನ್ಯವಾದ ತಪ್ಪುಗಳನ್ನು ಎಸಗುತ್ತವೆ. ಬರ್ನ್ಸ್ಟೆಯಿನ್ ರ ಲೇಖನ "ಸಪ್ಲೈಅರ್ ಪ್ರೈಸಿಂಗ್ ಮಿಸ್ಟೇಕ್ಸ್"[][] ಈ ರೀತಿಯಾದ ಹಲವು ದೋಷಗಳನ್ನು ಪಟ್ಟಿ ಮಾಡುತ್ತದೆ, ಇದರಲ್ಲಿ:

  • ರಿಯಾಯಿತಿ ಮಾರಾಟದ ಮೇಲೆ ದುರ್ಬಲ ನಿರ್ವಹಣೆ
  • ಪೈಪೋಟಿದಾರನು ನಿಗದಿ ಮಾಡಿದ ಮಾರಾಟದ ಬೆಲೆಗಳು ಹಾಗು ಆತನ ಮಾರುಕಟ್ಟೆ ಪಾಲನ್ನು ಕಂಡು ಹಿಡಿಯಲು ಇರುವ ಅಸಮರ್ಪಕ ವ್ಯವಸ್ಥೆಗಳು


  • ಕಾಸ್ಟ್-ಅಪ್ ಬೆಲೆ ನಿಗದಿ
  • ಬೆಲೆ ಏರಿಕೆಯನ್ನು ಕಳಪೆಯಾಗಿ ಜಾರಿಗೆ ತರುವುದು
  • ವಿಶ್ವವ್ಯಾಪಿಯಾಗಿ ಅಸ್ಥಿರವಾಗಿರುವ ಬೆಲೆಗಳು
  • ಲಾಭದಾಯಕತೆಯ ಕ್ರಮಗಳ ಹೆಚ್ಚಳಕ್ಕೆ ವಿರುದ್ಧವಾಗಿ ಮಾರಾಟ ಪ್ರತಿನಿಧಿಗಳಿಗೆ ಡಾಲರ್ ಮೊತ್ತದಲ್ಲಿ ಹಣವನ್ನು ನೀಡುವುದು

ಇವನ್ನೂ ನೋಡಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. ಎಸ್ಟೆಲಾಮಿ, H: "ಕನ್ಸ್ಯೂಮರ್ ಪರ್ಸೆಪ್ಶನ್ಸ್ ಆಫ್ ಮಲ್ಟಿ-ಡೈಮೆಂಶನಲ್ ಪ್ರೈಸಸ್", ಅಡ್ವಾನ್ಸಸ್ ಇನ್ ಕನ್ಸ್ಯೂಮರ್ ರಿಸರ್ಚ್, 1997.
  2. ನಗ್ಲೇ, ಥಾಮಸ್ ಅಂಡ್ ಹೋಲ್ಡೆನ್, ರೀಡ್. ದಿ ಸ್ತ್ರ್ಯಾಟಿಜಿ ಅಂಡ್ ಟ್ಯಾಕ್ಟಿಕ್ಸ್ ಆಫ್ ಪ್ರೈಸಿಂಗ್. ಪ್ರೆಂಟೈಸ್‌ ಹಾಲ್‌, 2002. ಪುಟಗಳು 84–104.
  3. ಮೈಂಡ್ ಆಫ್ ಮಾರ್ಕೆಟಿಂಗ್, "ಹೌ ಯುವರ್ ಪ್ರೈಸಿಂಗ್ ಅಂಡ್ ಮಾರ್ಕೆಟಿಂಗ್ ಸ್ತ್ರ್ಯಾಟಿಜಿ ಶುಡ್ ಬಿ ಇನ್ಫ್ಳುಯೆನ್ಸ್ಡ್ ಬೈ ಯುವರ್ ಕಸ್ಟಮರ್'ಸ್ ರೆಫಾರೆನ್ಸ್ ಪಾಯಿಂಟ್" Archived 2010-05-28 ವೇಬ್ಯಾಕ್ ಮೆಷಿನ್ ನಲ್ಲಿ.
  4. Dolan, Simon (1996). Power Pricing. The Free Press. ISBN 0-684-83443-X.
  5. ಬರ್ನ್ಸ್ಟೆಯಿನ್, ಜೆರೊಲ್ಡ್: "ಯೂಸ್ ಸಪ್ಲಯರ್ಸ್ ಪ್ರೈಸಿಂಗ್ ಮಿಸ್ಟೇಕ್ಸ್", ಕಂಟ್ರೋಲ್, 2009.
  6. "ಕಂಟ್ರೋಲ್ ಗ್ಲೋಬಲ್". Archived from the original on 2010-12-24. Retrieved 2010-06-30.

ಬಾಹ್ಯ ಕೊಂಡಿಗಳು ಹಾಗು ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • ವಿಲ್ಲಿಯಮ್ ಪೌಂಡ್ಸ್ಟೋನ್, ಪ್ರೈಸ್ಲೆಸ್ : ದಿ ಮಿಥ್ ಆಫ್ ಫೇರ್ ವ್ಯಾಲ್ಯೂ (ಅಂಡ್ ಹೌ ಟು ಟೇಕ್ ಅಡ್ವಾನ್ಟೇಜ್ ಆಫ್ ಇಟ್) ಹಿಲ್ ಅಂಡ್ ವಾಂಗ್, 2010

ಇಂಜಿನಿಯರಿಂಗ್ ನ್ಯೂ ಪ್ರಾಡಕ್ಟ್ ಸಕ್ಸೆಸ್ಸ್: ದಿ ನ್ಯೂ ಪ್ರಾಡಕ್ಟ್ ಪ್ರೈಸಿಂಗ್ ಪ್ರೋಸೆಸ್ಸ್ ಅಟ್ ಎಮರ್ಸನ್ ಎಲೆಕ್ಟ್ರಿಕ್. Archived 2009-12-29 ವೇಬ್ಯಾಕ್ ಮೆಷಿನ್ ನಲ್ಲಿ.ಏ ಕೇಸ್ ಸ್ಟಡಿ ಬೈ ಜೆರ್ರಿ ಬರ್ನ್ಸ್ಟೆಯಿನ್ ಅಂಡ್ ಡೇವಿಡ್ ಮಸಿಯಸ್. Archived 2009-12-29 ವೇಬ್ಯಾಕ್ ಮೆಷಿನ್ ನಲ್ಲಿ.ಆಸ್ ಪಬ್ಲಿಶ್ಡ್ ಇನ್ ಇಂಡಸ್ಟ್ರಿಯಲ್ ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್. Archived 2009-12-29 ವೇಬ್ಯಾಕ್ ಮೆಷಿನ್ ನಲ್ಲಿ.