ಅರೋಮಾಥೆರಪಿ (ಸುಗಂಧ ಚಿಕಿತ್ಸೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರೋಮಾಥೆರಪಿ (ಸುಗಂಧ ಚಿಕಿತ್ಸೆ) ಇದು ವ್ಯಕ್ತಿಗಳ ಮನೋಭಾವವನ್ನು, ಅರಿವಳಿಕೆ ಕಾರ್ಯಗಳನ್ನು ಅಥವಾ ಆರೋಗ್ಯವನ್ನು ಪರಿವರ್ತಿಸುವ ಉದ್ಧೇಶದಿಂದ ಸಾರಭೂತ ತೈಲ ಎಂದು ಪರಿಚಿತವಾಗಿರುವ, ಬಹುಬೇಗ ಬದಲಾಗಬಹುದಾದ ಸಸ್ಯ ಸಂಪನ್ಮೂಲಗಳನ್ನು ಮತ್ತು ಇತರ ಸುಗಂಧ ಪೂರಿತ ಮಿಶ್ರಣಗಳಗಳನ್ನು ಬಳಸಿಕೊಳ್ಳುವ ಬದಲಿ ವೈದ್ಯಶಾಸ್ತ್ರದ ಒಂದು ವಿಧಾನವಾಗಿದೆ. ಅರೋಮಾಥೆರಪಿಯ ಪರಿಣಾಮಕಾರಕತೆಯನ್ನು ಇನ್ನೂ ವೈಜ್ಞಾನಿಕವಾಗಿ ಸಾಭೀತುಪಡಿಸಬೇಕಾಗಿದೆ, ಆದಾಗ್ಯೂ ಉಪಸ್ಥಿತವಿರುವ ಕೆಲವು ಸಾಕ್ಷ್ಯಾಧಾರಗಳು ಚಿಕಿತ್ಸೆಗೆ ಸಂಬಂಧಿಸಿದಂತೆ ಸಾರಭೂತ ತೈಲಗಳು ಸೂಕ್ತವಾದವುಗಳು ಎಂದು ಸೂಚಿಸಿವೆ.[೧]

ಹಾಗಾಗಿ ಟೀ ಗಿಡಗಳಂತಹ[೨] ಕೆಲವು ಅವಶ್ಯಕ ತೈಲಗಳು ಸೂಕ್ಷ್ಮ ಜೀವಿ-ವಿರೋಧಿ ಪರಿಣಾಮಗಳನ್ನು ಪ್ರದರ್ಶಿಸಿದವು, ಮತ್ತು ಅವು ಸಾಂಕ್ರಾಮಿಕ ರೋಗಗಳ ಚಿಕೆತ್ಸೆಯಲ್ಲಿ ಕೂಡ ಬಹಳ ಉಪಯುಕ್ತವಾದವುಗಳು ಎಂದು ಸೂಚಿಸಲಾಗಿತ್ತು. ಸುಗಂಧ ಚಿಕಿತ್ಸೆಯ ಫಲದಾಯಕತೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳು, ಇದನ್ನು ನಿರ್ಧಿಷ್ಟ ನ್ಯೂನ ವಿಧಾನಶಾಸ್ತ್ರೀಯವಾದ ಜಾಗರೂಕ ಕೂಲಂಕಷವಾದ ಅಧ್ಯಯನಗಳಲ್ಲಿ ವೈಧ್ಯಕಿಯ ಪರಿಸ್ಥಿತಿಗಳು ಕುಂಟಿತಗೊಂಡ ಸಮಯದಲ್ಲಿ ಚಿಕಿತೆಗಾಗಿ ಬಳಸಿಕೊಳ್ಳುತ್ತಿದ್ದರು ಎಂದು ಸೂಚಿಸುತ್ತದೆ.[೩]

ಇತಿಹಾಸ[ಬದಲಾಯಿಸಿ]

ಸುಗಂಧ ಚಿಕಿತ್ಸೆಯು ಒಣಗಿದ ಸಸ್ಯ ಮೂಲಗಳನ್ನು ಕೊಬ್ಬು ಮಿಶ್ರಿತ ತೈಲದಲ್ಲಿ ನೆನೆಹಾಕಿ ಮಿದುಗೊಳಿಸಿ, ಬೇಯಿಸಿ ಮತ್ತು ನಂತರದಲ್ಲಿ ಅದನ್ನು ಶೋಧಿಸಿ ಕಷಾಯ ಮಾಡಿದ ಸುಗಂಧ ಪೂರಿತ ತೈಲಗಳ ಬಳಕೆಯೊಂದಿಗೆ ಪ್ರಾಚೀನ ಮೂಲಗಳನ್ನು ಹೊಂದಿರಬಹುದು. ಈ ರೀತಿಯ ಹಲವು ತೈಲಗಳು, ರೋಗನಿವಾರಣಾ ಉಪಕರಣಗಳ ಸಮಯದ ಮೇಲಿನ ನಂಬಿಕೆಯೊಂದಿಗೆ ಮೊದಲನೇ ಶತಮಾನದಲ್ಲಿ ಬರೆಯಲಾದ ಡೆ ಮಟಿರಿಯಾ ಮೆಡಿಕಾ ಎಂಬ ಪುಸ್ತಕದಲ್ಲಿ ಡಿಯೋಸ್ಕೊರೈಡ್ಸ್‌ನಿಂದ ವಿವರಿಸಲ್ಪಟ್ಟಿವೆ.[೪] ಯಾವಾಗ ಅವಿಸೆನ್ನಾ ಹಬೆ ಸಾಂದ್ರೀಕರಣವನ್ನು ಬಳಸಿಕೊಂಡು ಸಾರಭೂತ ತೈಲಗಳನ್ನು ಪ್ರತ್ಯೇಕಿಸಿದನೋ ಅಲ್ಲಿಯವರೆಗೆ ಹನ್ನೊಂದನೇಯ ಶತಮಾನದಲ್ಲಿ[೫] ಸಾಂದ್ರೀಕರಣದ ಸಂಶೋಧನೆಯಾಗುವ ವರೆಗೂ ಸಾಂದ್ರೀಕರಿಸಿದ ಸಾರಭೂತ ತೈಲಗಳು ವೈಧ್ಯ ಪದ್ದತಿಯ ಔಷದಗಳಾಗಿದ್ದವು.[೬]
ಯೂರೋಪಿನ ಚಿಕ್ಕ ಸಂಖ್ಯೆಯ ವಿಜ್ಞಾನಿಗಳು ಮತ್ತು ವೈದ್ಯರುಗಳಿಂದ ಸರಿ ಸುಮಾರು 1907ರ ಸಮಯದಲ್ಲಿ ಸುಗಂಧ ಚಿಕಿತ್ಸೆಯ ಕಲ್ಪನೆಯು ಮೊಟ್ಟ ಮೊದಲ ಬಾರಿಗೆ ಚರ್ಚೆಗೊಳಪಟ್ಟಿತು.[weasel words] 1937ರಲ್ಲಿ ಈ ಪದವು ಮೊದಲು ಗೋಚರಿಸಿದ್ದು ರಸಾಯನ ಶಾಸ್ತ್ರಜ್ಞನಾದ ರೆನಿ-ಮೌರಿಸ್ ಗ್ಯಾಟ್‌ಪೋಸ್‌ನ ಫ್ರೆಂಚ್ ಪುಸ್ತಕದ ವಿಷಯವಾದ "ಆರೋಮಾಥೆರಪಿ: ಲೆಸ್ ಹ್ಯೂಲ್ಸ್ ಎಸೆನ್‌‍ಶಿಯಲ್ಸ್, ಹಾರ್ಮೋನ್ಸ್ ವೆಜಿಟೇಲ್ಸ್ " ನಲ್ಲಿ  ಇದರ ಇಂಗ್ಲೀಷ್ ಆವೃತ್ತಿಯನ್ನು 1993ರಲ್ಲಿ ಪ್ರಕಟಿಸಲಾಯಿತು.[೭] ರಲ್ಲಿ ನಡೆದ ಪ್ರಯೋಗಾಲಯದ ಒಂದು ಸ್ಪೋಟದಲ್ಲಿ ಗ್ಯಾಟ್‌ಪೋಸ್ ತನ್ನ ಕೈಯನ್ನು ಬಹು ಗಂಬೀರವಾಗಿ ಸುಟ್ಟುಕೊಂಡನು. ಉದ್ದೇಶಪೂರ್ವಕವಾಗಿ ಮತ್ತು ಪರಿಣಾಮಕಾರಿಯಾಗಿ ಲ್ಯಾವೆಂಡರ್ ತೈಲದಿಂದ ಚಿಕಿತ್ಸೆಗೊಳಪಡಿಸಿದ್ದ ಆ ಸುಟ್ಟ ಕೈ ಆತನಿಗೆ ಗ್ಯಾಸ್ ಗ್ಯಾಂಗ್ರೀನ್ ಎಂಬ ಕಾಯಿಲೆಯನ್ನು ಪರಿಚಯಿಸಿತು.[ಸೂಕ್ತ ಉಲ್ಲೇಖನ ಬೇಕು]
ಜೀನ್ ವಾಲ್‌ನೆಟ್ ಎಂಬ ಒಬ್ಬ ಫ್ರೆಂಚ್ ಸುಶ್ರೂಷಕ ಸಾರಭೂತ ತೈಲಗಳ ವೈದ್ಯಕೀಯ ಉಪಯೋಗವನ್ನು ಕಂಡುಹಿಡಿದನು, ಅದನ್ನು ಅವನು IIನೇ ಮಹಾಯುದ್ಧದ ಸಮಯದಲ್ಲಿ ಗಾಯಗೊಂಡ ಸೈನಿಕರಿಗೆ ಚಿಕಿತ್ಸೆಯನ್ನು ನೀಡಲು ರೋಗ ನಿರೋಧಕಗಳಾಗಿ ಬಳಸಿಕೊಂಡನು.[೮]

ಲೇಪನದ ಕ್ರಮಗಳು[ಬದಲಾಯಿಸಿ]

ರೋಮಾಥೆರಪಿಯ ಲೇಪನದ ಕ್ರಮಗಳು ಈ ಕೆಳಗಿನಂತಿವೆ:
  • ಗಾಳಿಯಲ್ಲಿ ಪ್ರಸರಣ : ನೈಸರ್ಗಿಕ ಸುವಾಸನೆ ಅಥವಾ ನೈಸರ್ಗಿಕ ಸೋಂಕು ನಿವಾರಣೆಗಾಗಿ.
  • ನೇರ ಉಸಿರೆಳೆದುಕೊಳ್ಳುವಿಕೆ : ಉಸಿರಾಟದ ಸೋಂಕು ನಿವಾರಣೆಗಾಗಿ, ರಕ್ತಸಂಚಾರದ ತೊಂದರೆ ನಿವಾರಣೆ, ಉಗುಳುವುದು ಮತ್ತು ಜೊತೆಗೆ ಮಾನಸಿಕ ಪರಿಣಾಮಗಳಿಗಾಗಿ.
  • ಮೇಲ್ಮೈ ಲೇಪನ : ಸಾಮಾನ್ಯ ಮಾಲೀಸು ಮಾಡುವಿಕೆ, ಸ್ನಾನ, ಸಂಕುಚಿತ ಸ್ಥಿತಿಯಲ್ಲಿ, ಚರ್ಮ ರಕ್ಷಣಾ ಚಿಕಿತ್ಸೆ ಮುಂತಾದವುಗಳಲ್ಲಿ.

ಉಪಕರಣಗಳು[ಬದಲಾಯಿಸಿ]

ಒಳಗೊಂಡಿರುವ ಕೆಲವು ಉಪಕರಣಗಳು ಈ ಕೆಳಗಿನಂತಿವೆ:
ಹಲವು ಟರ್ಪೇನ್-ಮೂಲದ ಅಲ್ಲಿಯಮ್ ಜಾತಿಯ ಗಿಡದ ಪರಿಮಳಯುಕ್ತ ತೈಲಗಳು ಮತ್ತು ಸಲ್ಫರ‍್‌ಯುಕ್ತ ಸಂಯೋಜಕಗಳು ಫಿಟೋನ್‌ಸೈಡ್‌ಗಳಾಗಿವೆ[ಸೂಕ್ತ ಉಲ್ಲೇಖನ ಬೇಕು], ಹಾಗಾಗಿ ನಂತರದವುಗಳನ್ನು ಅವುಗಳ ಒಪ್ಪಿಕೊಳ್ಳಲಾಗದ ಸುವಾಸನೆಯಿಂದಾಗಿ ಸುಗಂಧ ಚಿಕಿತ್ಸೆಯಲ್ಲಿ ಅತೀ ಕಡಿಮೆ ಬಳಸಿಕೊಳ್ಳಲಾಗಿದೆ
ಅನೇಕ ಮೂಲಿಕೆಗಳಿಂದ ಡಿಸ್ಟೀಲ್ಲಟ್‌ಗಳನ್ನು ಭಟ್ಟಿ ಇಳಿಸಬಹುದಾಗಿದ್ದು ಅವುಗಳನ್ನು ಅಡಿಗೆಯಲ್ಲಿ, ಔಷಧಿ ಮತ್ತು ಚರ್ಮರಕ್ಷಣೆಯಲ್ಲಿ ಬಳಸಬಹುದಾಗಿದೆ.[ಸೂಕ್ತ ಉಲ್ಲೇಖನ ಬೇಕು] ಸಾಮಾನ್ಯ ಮೂಲಿಕೆ ಡಿಸ್ಟಿಲ್ಲೇಟ್‌ಗಳೆಂದರೆ ಗುಲಾಬಿ, ನಿಂಬೆ ಮುಲಾಮು ಮತ್ತು ಕ್ಯಮೊಮೈಲ್.

ಸಿದ್ಧಾಂತ[ಬದಲಾಯಿಸಿ]

ಸುಗಂಧ ಚಿಕಿತ್ಸೆ ಇದು ಸಾರಭೂತ ತೈಲಗಳ ಮೂಲಕ ರೋಗಗಳನ್ನು ನಿಯಂತ್ರಿಸುವ ಅಥವಾ ಚಿಕಿತ್ಸಿಸುವ ಪದ್ದತಿ. ಪರಿಣಾಮಗಳ ಅಭಿಪ್ರಾಯವನ್ನು ವಿವರಿಸಲು ಎರಡು ಮೂಲಭೂತ ಯಾಂತ್ರಿಕ ರಚನೆಗಳನ್ನು ಮಂಡಿಸಲಾಯಿತು. ಮೊದಲನೆಯದು ಘ್ರಾಣ ಸಂಬಂಧಿ ವ್ಯವಸ್ತೆಯ ಮೂಲಕ ಮೆದುಳಿನ, ಪ್ರಮುಖವಾಗಿ ಅಂಗ ವ್ಯವಸ್ತೆಯ ಮೇಲೆ ಅರೋಮಾದ ಪ್ರಭಾವ[ಸೂಕ್ತ ಉಲ್ಲೇಖನ ಬೇಕು]. ಎರಡನೆಯದು ಔಷಧ ವಿಜ್ಞಾನದ ಮೇಲೆ ಸಾರಭೂತ ತೈಲದ ನೇರ.[೯] ಪರಿಣಾಮ  ಎಲ್ಲಿಯವರೆಗೆ ದೇಹ ಮತ್ತು ಅರೋಮೆಟಿಕ್ ತೈಲಗಳ ನಡುವಿನ ಒಡಂಬಡಿಕೆಯ ಖಚಿತವಾದ ಜ್ಞಾನವು ಅರೋಮಾ ಚಿಕಿತ್ಸಕರ ಮೂಲಕ ಪದೇ ಪದೇ ಕೇಳಲ್ಪಡುವುದೋ ಅಲ್ಲಿಯವರೆಗೆ ಸುಗಂಧ ಚಿಕಿತ್ಸೆಯ ಫಲದಾಯಕತೆ ಸಾಭೀತಾಗುವುದಿಲ್ಲ. 
ಆದರೂ, ಇತರ ತಾಂತ್ರಿಕತೆಯ ಜೊತೆಗಿನ ಸುಗಂಧ ಚಿಕಿತ್ಸೆಯ ಕೆಲವು ಪ್ರಾಥಮಿಕ ಚಿಕಿತ್ಸಕ ಅಧ್ಯಯನಗಳು ಗುಣಾತ್ಮಕ ಪರಿಣಾಮವನ್ನು ತೋರಿವೆ.[೧೦][೧೧]
ಇಂದಿನ ಇಂಗ್ಲೀಷ್-ಮಾತನಾಡುವ ಜಗತ್ತಿನಲ್ಲಿ, ವೃತ್ತಿಗಾರರು ಮಸಾಜಿನಲ್ಲಿ ಸಾರಭೂತ ತೈಲದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ[ಸೂಕ್ತ ಉಲ್ಲೇಖನ ಬೇಕು]. ಅಗತ್ಯವಾದುದನ್ನು ಪೂರೈಸುವ ಮಾದರಿಯಲ್ಲಿ ಅತ್ಯಂತ ಉತ್ತಮವಾಗಿದೆ ಮತ್ತು ಅವೈಜ್ಞಾನಿಕ ವಂಚನೆಯಲ್ಲಿ ತುಂಬಾ ಕೆಟ್ಟದ್ದಾಗಿದೆ ಎಂದು ಸುಗಂಧ ಚಿಕಿತ್ಸೆಯು ಹೇಳಲ್ಪಡುತ್ತದೆ.[೧೨]

ಆಯ್ಕೆ ಮತ್ತು ಕೊಳ್ಳುವಿಕೆ[ಬದಲಾಯಿಸಿ]

ಘಟಕಗಳ (ಆಹಾರ ರಾಸಾಯನಿಕಗಳ ಸೂಚಕವಾದ ಸಎಫ್.ಸಿ.ಸಿ ಎಂದು ಸೂಚಿಸಿದ ಘಟಕಗಳು) ಉತ್ತಮ ದರ್ಜೆಯ ಪ್ರಮಾಣವನ್ನು ಹೊಂದಿರುವ ತೈಲವು ಸಾಮಾನ್ಯವಾಗಿ ತೈಲದಲ್ಲಿ ಇರಲೇಬೇಕಾದ ನಿರ್ಧಿಷ್ಟವಾದ ಪ್ರಮಾಣದ ಅರೋಮಾ ರಾಸಾಯನಿಕಗಳನ್ನು ಹೊಂದಿರಬೇಕು.[ಸೂಕ್ತ ಉಲ್ಲೇಖನ ಬೇಕು] ಆದರೆ ಆ ತೈಲಕ್ಕಾಗಿ ಎಫ್.ಸಿ.ಸಿ ನಿಂದ ಪ್ರಾರಂಭಿಸಿದ ಮಾನದಂಡಗಳನ್ನು ಮುಟ್ಟುವ ನಿಟ್ಟಿನಲ್ಲಿ ರಾಸಾಯನಿಕಗಳನ್ನು ಸಮ್ಮಿಶ್ರ ರೂಪದಲ್ಲಿ ಸೇರಿಸಬಾರದು ಎಂಬುದಕ್ಕೆ ಯಾವುದೇ ನಿಯಮಗಳಿರಲಿಲ್ಲ[ಸೂಕ್ತ ಉಲ್ಲೇಖನ ಬೇಕು]. ಉದಾಹರಣೆಗೆ, ಎಫ್‌.ಸಿ.ಸಿಯ ಪರಿವಿಡಿಯನ್ನು ಸರಿಗಟ್ಟುವ ನಿಟ್ಟಿನಲ್ಲಿ ಲೆಮೊನ್‌ಗ್ರಾಸ್‌ ಸಾರಭೂತ ತೈಲವು ಪ್ರತಿಶತ 75ರಷ್ಟು ಅಲ್ಡಿಹೈಡ್[ಸೂಕ್ತ ಉಲ್ಲೇಖನ ಬೇಕು] ಅನ್ನು ಆ ತೈಲದಲ್ಲಿ ಹೊಂದಿರಬೇಕಿತ್ತು, ಆದರೆ ಆ ಅಲ್ಡಿಹೈಡ್ ಲೆಮೊನ್‌ಗ್ರಾಸ್‌‌ನಿಂದ ಬರುವುದಕ್ಕೂ ಬದಲಾಗಿ ರಾಸಾಯನಿಕ ಶುದ್ಧೀಕರಣದಿಂದ ಬರಬಹುದಿತ್ತು. ಎಫ್‌.ಸಿ.ಸಿ ತೈಲಗಳೆಲ್ಲವೂ "ಆಹಾರ ಗುಣಮಟ್ಟದವುಗಳು" ಎಂದು ಹೇಳಬೇಕಾದರೆ ಅವುಗಳು ತೀರಾ ಅಗತ್ಯವಾಗಿ ಬೇಡವಾದ ಸಂದರ್ಭದಲ್ಲಿ ಅವುಗಳನ್ನು ನೈಸರ್ಗಿಕವಾಗಿ ಕಾಣುವಂತೆ ಮಾಡಬೇಕಾಗುತ್ತದೆ.
ಸುಗಂಧ ಚಿಕಿತ್ಸೆಗೆ ಅತ್ಯಂತ ಸೂಕ್ತವಾದ ಸಾರಗುಂದದ ಸಾರಭೂತ ತೈಲಗಳು ಚಿಕಿತ್ಸಕ ದರ್ಜೆ ಗಳಾಗಿ ಹೆಸರಿಸಲ್ಪಟ್ಟಿವೆ, ಆದರೆ ಕೈಗಾರಿಕೆಗಳ ಮೇಲೆ ನಿಯಂತ್ರಣವಿಲ್ಲದ ರಾಷ್ಟ್ರಗಳಲ್ಲಿ ಚಿಕಿತ್ಸಕ ದರ್ಜೆಗಳು ಕೈಗಾರಿಕೆಗಳ ಬಹುಮತಾಭಿಪ್ರಾಯಗಳ ಮೇಲೆ ನಿರ್ಧರಿತವಾಗುತ್ತದೆ ಮತ್ತು ಇದು ನಿಯಂತ್ರಿತ ವಿಭಾಗಕ್ಕೆ ಸೇರಿರುವುದಿಲ್ಲ[ಸೂಕ್ತ ಉಲ್ಲೇಖನ ಬೇಕು]. ಕೆಲವು ಅರೋಮಾ ಚಿಕಿತ್ಸಕರು ಅವರು ಬಳಸುವ ತೈಲದ ಮೂಲ ಮತ್ತು ಅದರ ಪ್ರಮಾಣಗಳಿಗೆ ಸಂಬಂಧಿಸಿದಂತೆ ತಪ್ಪುದಾರಿಯ ಹಕ್ಕು ಸಾಧಿಸಲು ಈ ಸನ್ನಿವೇಶದ ಲಾಭವನ್ನು ಪಡೆದುಕೊಳ್ಳುತ್ತಾರೆ. ಈ ರೀತಿಯಲ್ಲಿ, ತೈಲಗಳ ನಿರ್ಮಲತ್ವದ ಮೇಲಿರುವ ಹಕ್ಕುದಾರಿಕೆಯು ಸೀಮಿತ ಮೌಲ್ಯವನ್ನು ಹೊಂದಿದ್ದ ಮಾಸ್‌ ಸ್ಪೆಕ್ಟ್ರಾಮೆಟ್ರಿ ಅಥವಾ ಗ್ಯಾಸ್‌ ಕ್ರೊಮೊಟೊಗ್ರಫಿ ಇಂದಾಗಿ ತಿಳಿಯಾಯಿತು, ಅಂದಿನಿಂದ ತೈಲದ ಮೂಲಕ ಗಳಿಸಬಹುದಾದ ಹಲವಾರು ರಾಸಾಯಕನಿಕ ಗಳನ್ನು ಪ್ರದರ್ಶಿಸಲು ಈ ರೀತಿಯ ಪ್ರಯೋಗಗಳನ್ನು ಮಾಡಬಹುದಾಗಿತ್ತು[ಸೂಕ್ತ ಉಲ್ಲೇಖನ ಬೇಕು]. ಸಾರಭೂತ ತೈಲದಲ್ಲಿ ನೈಸರ್ಗಿಕವಾಗಿಯೇ ಸಂಬವಿಸುವ ಹಲವಾರು[which?] ರಾಸಾಯನಿಕಗಳು ಸುಗಂಧ ದೃವ್ಯ ಕೈಗಾರಿಕೆಯಲ್ಲಿ ತಯಾರಿಸಲ್ಪಡುತ್ತವೆ ಮತ್ತು ಕಡಿಮೆ ಬೆಲೆಯಲ್ಲಿ ಲಭ್ಯವಿದೆ ಎಂವ್ಬ ಕಾರಣಕ್ಕೆ ಸಾರಭೂತ ತೈಲಗಳ ಕಲಬೆರಕೆಯನ್ನು ಮಾಡಲಾಗುತ್ತದೆ ನೈಸರ್ಗಿಕವಾಗಿ ಸಂಭವಿಸುವ ರಾಸಾಯನಿಕಗಳು ಮತ್ತು ಕೃತಕ ಮಿಶ್ರಣದ ನಡುವಿನ ವಿಭಜಿನೆಗೆ ಸಂಬಂಧಿಸಿದಂತೆ ಯಾವುದೇ ಮಾರ್ಗಗಳಿಲ್ಲ.
ಸಾರಭೂತ ತೈಲವು ಕಲಬೆರಕೆಯಾಗಿದೆಯೇ ಎಂಬುದನ್ನ ನಿರ್ಧರಿಸುವ ಪ್ರಮುಖ ಸಾಧನವೆಂದರೆ ಶಿಕ್ಷಿತ ರಹಸ್ಯ ವರದಿಗಾರಿಕೆ[which?]. ಹಲವಾರು ಜನರು[who?] ಕೂಡ ನೈಸರ್ಗಿಕ ಮತ್ತು ಮಿಶ್ರಿತ ಸುಗಂಧವನ್ನು ಪತ್ತೆ ಹಚ್ಚಬಹುದು, ಆದರೆ ಇದಕ್ಕೆ ಅನುಭವದ ಅಗತ್ಯವಿದೆ[ಸೂಕ್ತ ಉಲ್ಲೇಖನ ಬೇಕು].

ಜನಪ್ರಿಯ ಉಪಯೋಗಗಳು[ಬದಲಾಯಿಸಿ]

  • ನಿಂಬೆ ತೈಲವು ಸುಧಾರಿತ ಮತ್ತು ಒತ್ತಡ-ನಿವಾರಕ/ಖಿನ್ನತೆಯ-ನಿವಾರಕವಾಗಿದೆ. ಜಪಾನಿಯರ ಅಧ್ಯಯನದ ಪ್ರಕಾರ ದ್ರವ ರೂಪದಲ್ಲಿರುವ ನಿಂಬೆ ಸಾರಭೂತ ತೈಲವು ಇಲಿಗಳಲ್ಲಿ ಒತ್ತಡವನ್ನು ಕಡಿಮೆ ಮಾಡಿರುವ ಪ್ರಯೋಗವನ್ನು ತಿಳಿಸುತ್ತದೆ.[೧೩] ಒಹಿಯೋ ಸ್ಟೇಟ್ ವಿಶ್ವವಿದ್ಯಾಲಯದ ಸಂಶೋಧನೆಯು ನಿಂಬೆ ತೈಲವು ಅರೋಮಾದಿಂದಾಗುವ ಒಬ್ಬ ಮನುಷ್ಯನ ಭಾವನೆಗಳನ್ನು ಹೆಚ್ಚಿಸಲು ಮತ್ತು ನೆಮ್ಮದಿಯನ್ನು ಪಡೆಯಲು ಸಹಕರಿಸುತ್ತದೆ ಎಂದು ಸೂಚಿಸುತ್ತದೆ.[೧೪]
  • ಥೈಮ್ ತೈಲ[೧೫]

ಫಲದಾಯಕತೆ[ಬದಲಾಯಿಸಿ]

ಸುಗಂಧ ಚಿಕಿತ್ಸೆಗೆ ಸೇರಿಸಬಹುದಾದ ಕೆಲವು ಉಪಯೋಗಗಳೆಂದರೆ ಯಾವುದೇ ನೈಸರ್ಗಿಕ ಮಾನಸಿಕ ಪರಿಣಾಮಗಳಿಲ್ಲದೆ ಪ್ಲೆಸಿಬೋ ಪರಿಣಾಮದಿಂದ ಹುಟ್ಟಬಹುದಾದ ಸಮಾಧಾನತೆ ಮತ್ತು ಮಾನಸಿಕ ಸ್ಪಷ್ಟತೆ.  ಹೆಚ್ಚಿನ ವೈಧ್ಯಕೀಯ ವೃತ್ತಿಪರರಲ್ಲಿರುವ ಬಹುಮತ ಅಭಿಪ್ರಾಯವೆಂದರೆ ಕೆಲವು ಅರೋಮಾಗಳು ಮನೋಭಾವನೆ ಮತ್ತು ಮಾನಸಿಕ ನೆಮ್ಮದಿಯ ಮೇಲೆ ಪ್ರದರ್ಶನ ಪರಿಣಾಮಗಳನ್ನು ಹೊಂದಿರುವಾಗ ಮತ್ತು ರೋಗಿಗಳಿಗೆ ಸಂಬಂಧಿತ ಉಪಯೋಗಗಳನ್ನೂ ಕೂಡ ಹೊಂದಿರಬಹುದು, ಆದರೆ ಪ್ರಸ್ತುತವಾಗಿ ಸುಗಂಧ ಚಿಕಿತ್ಸೆಗೆ ಮಾಡಲಾದ ಈ ಹಕ್ಕುಸಾಧನೆಯನ್ನು ಪ್ರೋತ್ಸಾಹಿಸಲು ಅಲ್ಲಿ ಸಮರ್ಪಕವಾದ ಸಾಕ್ಷಿಗಳು ಇರದಿರುವುದು.[೧೬] ಸುಗಂಧ ಚಿಕಿತ್ಸೆಯ ಕಾರಣ ಮತ್ತು ಪರಿಣಾಮಗಳ ಮೇಲಿನ ವಿಜ್ಞಾನಿಕ ಸಂಶೋಧನೆಯು ಸೀಮಿತವಾಗಿದೆ, ಆದಾಗ್ಯೂ ಪ್ರಣಾಳದಲ್ಲಿನ ಪ್ರಯೋಗವು ಕೆಲವು ಸೂಕ್ಷ್ಮಾಣುಜೀವಿ ವಿರೋಧಕ ಮತ್ತು ರೋಗನಿರೋಧಕ ಸೂಕ್ಷ್ಮಾಣುಜೀವಿ ಪರಿಣಾಮಗಳನ್ನು ಬಹಿರಂಗಪಡಿಸಿತು.[೧೭]

[೧೮]

ಆಹ್ಲಾದಕರ ಪರಿಮಳಯುಕ್ತ ಮಸಾಜಿನ ಸಂತೋಷದ ಹೊರತಾಗಿ ಸುಗಂಧ ಚಿಕಿತ್ಸೆ ಮಸಾಜಿನ ದೀರ್ಘಾವದಿಯ ಪರಿಣಾಮದ ಬಗ್ಗೆ ಯಾವುದೇ ಪುರಾವೆಗಳಿಲ್ಲ.[೧೯]
ಗಂಬೀರ ಬುದ್ಧಿಮಾಂದ್ಯ ಚಿಕಿತ್ಸೆಯ ವೈಧ್ಯಕೀಯ ಮಾನಸಿಕತೆಗೆ ಸಂಬಂಧಿಸಿದ ಎರಡು ಕುರುಡು ಅಧ್ಯಯನಗಳು ಪ್ರಖಟಗೊಂಡವು.[೨೦][೨೧] ಸಾರಭೂತ ತೈಲಗಳು ಹಲ್ಲಿಗೆ ಸಂಬಂಧಿಸಿದ ಮೌತ್ ವಾಶ್ ಉತ್ಪನ್ನದಲ್ಲಿ ಪ್ರದರ್ಶನ ಪರಿಣಾಮವನ್ನು ಹೊಂದಿದ್ದವು.[೨೨]
ಸ್ಕೆಪ್ಟಿಕಲ್ ಸಾಹಿತ್ಯವು ಸೂಚಿಸುವಂತೆ ಸುಗಂಧ ಚಿಕಿತ್ಸೆಯು ರೋಗಗಳನ್ನು ಉಪಶಮನ ಮಾಡುತ್ತದೆ ಎಂಬ ದಾಖಲೆಗೆ ಬದಲಾಗಿ ಅದರ ಉಪಯೋಗಕ್ಕೆ ಸಂಬಂಧಿಸಿದಂತೆ ಅನೆಕ್‌ಡಾಟಲ್ ಪುರಾವೆಯ ಮೇಲೆ ನಿರ್ಧರಿತವಾಗಿದೆ.
ವಿಜ್ಞಾನಿಗಳು ಮತ್ತು ವೈದ್ಯಕೀಯ ವೃತ್ತಿಪರರು ಸುಗಂಧ ಚಿಕಿತ್ಸೆಯು ಸೀಮಿತ ವೀಜ್ಞಾನಿಕ ಬೆಂಬಲವನ್ನು ಹೊಂದಿದೆ ಎಂದು ಗುರುತಿಸಿದ್ದಾರೆ, ಆದರೆ ವಿಮರ್ಶೆಗಾರರು ಹಲವಾರು ಸುಗಂಧ ಚಿಕಿತ್ಸೆ ಪ್ರಯೋಗಶೀಲರ ಹಕ್ಕುಸಾಧನೆಯು ದತ್ತಾಂಶಗಳ ಪರಿಧಿಯ ಹೊರಗೆ ಹೋಗಿದೆ ಮತ್ತು ಈ ಎಲ್ಲಾ ಅಧ್ಯಯನಗಳು ಸಂಪೂರ್ಣವಾಗಿ ನಿಯಂತ್ರಿಸಲ್ಪಟ್ಟಿಲ್ಲ ಹಾಗೂ ವಿಮರ್ಶೆಗೆ ಒಳಪಟ್ಟಿಲ್ಲ ಎಂದು ವಾದಿಸಿದ್ದಾರೆ.
ಸುಗಂಧ ಚಿಕಿತ್ಸೆಯ ಕೆಲವು ಸಿದ್ಧಾಂತ ಪ್ರತಿಪಾದಕರು[who?] ಪ್ರತಿಯೊಂದು ವಿಧದ ತೈಲದ ಹಕ್ಕುಸಾಧನೆಯ ಪರಿಣಾಮವು ಗ್ರಹಣಾ ಶಕ್ತಿಯೊಂದಿಗೆ ಪರಸ್ಪರ ಪ್ರತಿಕ್ರಿಯಿಸುವ ತೈಲದಲ್ಲಿನ ರಾಸಾಯನಿಕದಿಂದ ಆಗಿರುವುದಲ್ಲ ಎಂದು ನಂಬುತ್ತಾರೆ, ಆದರೆ ತೈಲವು ಗಿಡದ ಲೈಪ್ ಫೋರ್ಸ್‌ನ ಸತ್ವವನ್ನು ಹೊಂದಿರುವುದರಿಂದ ಅದು ದೇಹಲ್ಲಿನ ಶಕ್ತಿಯನ್ನು ಸಮತೋಲನ ಮಾಡುತ್ತದೆ ಮತ್ತು ದೇಹದ ಶಕ್ತಿಯ ಮೂಲಗಳಿಂದ ಋಣಾತ್ಮಕ ನಡುಕವನ್ನು ನೀಗಿಸಿ ರೋಗಗಳನ್ನು ಗುಣಪಡಿಸಿ ಉತ್ತಮ ಆರೋಗ್ಯವನ್ನು ಹೆಚ್ಚಿಸುತ್ತದೆ. ರೋಗವನ್ನು ಗಣಪಡಿಸಿದ ಸಾಧನೆಗೆ ಸಂಬಂಧಿಸಿದಂತೆ ಯಾವುದೇ ವೈಜ್ಞಾನಿಕ ಪುರಾವೆಗಳು ಇಲ್ಲ ಎಂದು ವಾದಿಸಲಾಗಿದೆ, ಮತ್ತು ಹಕ್ಕುಸಾಧಿಸಲ್ಪಟ್ಟ ಶಕ್ತಿಗಳು ಮತ್ತು ಪ್ರಸ್ತುತ ಸ್ಕೆಪ್ಟಿಕ್ಸ್‌ಗಳು ಈ ಸುಗಂಧ ಚಿಕಿತ್ಸೆಯನ್ನು ಹುಸಿವಿಜ್ಞಾನ ಅಥವಾ ಕಪಟ ಪಾಂಡಿತ್ಯ ಎಂದು ತಿರಸ್ಕರಿಸಿವೆ.

ಸುರಕ್ಷತೆಗೆ ಸಂಬಂಧಿಸಿದ ವಿಷಯಗಳು[ಬದಲಾಯಿಸಿ]

ಇದಕ್ಕೆ ಸಂಬಂಧಿಸಿದಂತೆ ಹಲವಾರು ಹಲವಾರು ಸುರಕ್ಷತಾ ವಿಧಾನಗಳಿವೆ
ಏಕೆಂದರೆ ಸಾರಭೂತ ತೈಲಗಳು ಅತೀ ಸಾಂದ್ರವಾಗಿದ್ದು ಅದನ್ನು ಲೇಪಿಸಿಕೊಂಡ ಸಮಯದಲ್ಲಿ ಅವು ಚರ್ಮಕ್ಕೆ ಕಿರಿಕಿರ್ಯನ್ನುಂಟು ಮಾಡಬಹುದು ಮತ್ತು ಅದು ಸಾರಗುಂದಿಸದ ತೈಲವಾಗಿದೆ.[ಸೂಕ್ತ ಉಲ್ಲೇಖನ ಬೇಕು]  ಆದ್ದರಿಂದ, ಅವು ಸಾಮಾನ್ಯವಾಗಿ ಮೇಲ್ಮೈ ಲೇಪನಕ್ಕಾಗಿ ರೋಗವಾಹಕ ತೈಲದಿಂದ ನಿಸ್ಸಾರಗೊಳಿಸಿ ತಯಾರಿಸಲಾದ ತೈಲವಾಗಿವೆ.  ಲೆಮನ್ ಅಥವಾ ಲೈಮ್ ನಂತಹ ಸಿಪ್ಪೇ ಸುಲಿದ ನಿಂಬೇ ಜಾತಿಯ ತೈಲಗಳಿಂದ ಫೊಟೋಟಾಕ್ಸಿಕ್ ನಂತಹ ಪ್ರತಿಪರಿಣಾಮಗಳು ಕೂಡ ಸಂಭವಿಸಬಹುದು.[೨೩] ಮತ್ತೂ, ಹಲವು ಸಾರಭೂತ ತೈಲಗಳು ಸೂಕ್ಷ್ಮಗ್ರಾಹಕ ರಾಸಾಯನಿಕಗಳನ್ನು ಹೊಂದಿರುತ್ತವೆ (ಇದರ ಅರ್ಥ, ಈ ತೈಲಗಳ ಹಲವಾರು ಬಾರಿಯ ಲೇಪನವು ನಂತರದಲ್ಲಿ ಚರ್ಮದ ಮೇಲೆ ಮತ್ತು ದೇಹದ ಉಳಿದ ಇತರ ಭಾಗದ ಮೇಲೂ ಪ್ರತಿ ಪರಿಣಾಮವನ್ನು ಬೀರಬಹುದು). ಒಂದು ವೇಳೆ ಮೂಲ ಗಿಡಗಳನ್ನು ಮಾತ್ರ ಕೃಷಿ ಮಾಡಿದ್ದರೆ ಆ ಕೀಟನಾಶಕಗಳಿಂದ ಕೆಲವು ರಾಸಾಯನಿಕ ಅಲರ್ಜಿಗಳು ಕೂಡ ಸಂಭವಿಸಬಹುದು.[೨೪][೨೫] ಕೆಲವು ತೈಲಗಳು ಪ್ರಮುಖವಾಗಿ ಬೋರಲು ಬೀಳುವ ಬೆಕ್ಕಿನಂತಹ ಕೆಲವು ಸ್ಥಳೀಯ ಪ್ರಾಣಿಗಳಿಗೆ ವಿಷವಾಗಿ ಪರಿಣಮಿಸಬಹುದು.[೨೬][೨೭]
ಎರಡು ಸಾಮಾನ್ಯ ತೈಲಗಳಾದ ಲ್ಯಾವೆಂಡರ್ ಮತ್ತು ಟೀ ಗಿಡ ಗೈನೆಕೊಮಾಸ್ತಿಯಾ ಎಂಬ ಕಾಯಿಲೆಗೆ, ಸ್ಥನ ಅಂಗಾಂಶಗಳ ಅಸ್ವಾಭಾವಿಕ ಬೆಳವಣಿಗೆ ಮತ್ತು ಅಪ್ರಾಪ್ತ ವಯಸ್ಕ ಹುಡುಗರಲ್ಲಿ ಪ್ರ ಪರಿಣಾಮವನ್ನು ಬೀರಬಹುದು, ಆದಾಗ್ಯೂ ಈ ವಿಷಯವು ಕೇವಲ ಮೂರು ಹುಡುಗರ‍ ಪರಿವೀಕ್ಷಣೆಯ ಆಧಾರದ ಮೇಲೆ ರಚಿಸಲಾಗಿದೆ ಎಂದು ವರದಿಯು ತಿಳಿಸಿದೆ (ಮತ್ತು ಇದು ಒಂದು ವಿಜ್ಞಾನಿಕ ಅಧ್ಯಯನವಲ್ಲ), ಮತ್ತು ಆ ಎರಡು ಹುಡುಗರ ತೂಕವು ಅವರ ವಯಸ್ಸಿನ ತೂಕದ ಸರಾಸರಿಗಿಂತ ಹೆಚ್ಚಾಗಿತ್ತು ಹಾಗಾಗಿ ಅವರು ಮೊದಲೆ ಗೈನೆಕೊಮಾಸ್ತಿಯಾಗೆ ಗುರಿಯಾಗಿದ್ದರು.[೨೮]
ಕೇಂಬ್ರಿಜ್ ವಿಶ್ವವಿಧ್ಯಾಲಯದ ಮಕ್ಕಳ ಹಾರ್ಮೋನುಗಳ ತಜ್ಞ "...ಈ ತೈಲಗಳು ಈಸ್ಟ್ರೋಜೆನ್‌ಗಳನ್ನು ಅನುಕರಿಸಬಲ್ಲವು" ಮತ್ತು "ಜನರು ಈ ಉತ್ಪನ್ನಗಳನ್ನು ಬಳಸುವಾಗ ಸ್ವಲ್ಪ ಜಾಗರೂಕರಾಗಿರಬೇಕು" ಎಂದು ಹೇಳಿದ್ದಾನೆ.[೨೯]
ಹಲವಾರು ಜೈವಿಕ ಚಟುವಟಿಕೆಯ ವಸ್ತುಗಳೊಂದಿಗೆ ಸಾರಭೂತ ತೈಲವು ಸಾಮಾನ್ಯ ಸಾರ್ವಜನಿಕರಿಗೆ ಸುರಕ್ಷಿತವಾಗಿರಬಹುದು ಆದರೆ ಅದು ಗರ್ಬಿಣಿ ಮತ್ತು ಹಾಲುಣಿಸುವ ಮಹಿಳೆಯರ ಮೇಲೆ ಹಾನಿಯುಂಟು ಮಾಡಬಹುದು.
ಹಾಗಾಗಿ ಕೆಲವರು ಚಿಕಿತ್ಸಕ ಉದ್ದೇಶಗಳಿಗಾಗಿ ಸಾರಭೂತ ತೈಲದ ಶಾಸನದ ಪರವಾಗಿ ವಾದಿಸುತ್ತಾರೆ, ಆದರೆ ಪರವಾನಿಗೆಯನ್ನು ಪಡೆದ ಸುಗಂಧ ಚಿಕಿತ್ಸೆ ವೃತ್ತಿಪರರು ಸಾರಭೂತ ತೈಲದ ಅತೀ ವಿಷಯುಕ್ತ ಸ್ವಭಾವದಿಂದಾಗಿ ಸ್ವಂತ ಉಪಯೋಗಕ್ಕೆ ಾನುಮತಿಯನ್ನು ನೀಡುವುದಿಲ್ಲ. ಕೆಲವು ಅತಿ ಸಾಮಾನ್ಯವಾದ ನೀಲಗಿರಿಯಂತಹ ತೈಲಗಳು ಆಂತರಿಕವಾಗಿ ಸೇವಿಸಿದಾಗ ಅತ್ಯಂತ ವಿಷಯುಕ್ತವಾಗಿ ಪರಿಣಮಿಸುತ್ತವೆ. ಒಂದು ಚಮಚಕ್ಕಿಂತಲೂ ಕಡಿಮೆ ಇರುವ ಔಷದದ ಅಳತೆಯು ಅರ್ಥಗರ್ಭಿತವಾದ ವೈಧ್ಯಕೀಯ ಸೋಂಕುಗಳಿಗೆ ಕಾರಣವಾಗಿದೆ ಮತ್ತು 4ರಿಂದ 5ಮಿಲಿ. ತೈಲದ ಸೇವನೆಯಿಂದ ಅತೀ ವಿಷಯುಕ್ತವಾದದ್ದು ಕೂಡ ಸಂಭವಿವಬಹುದು ಎಂದು ವರದಿ ಮಾಡಲಾಗಿದೆ.[೩೦] 
ವಿಷಯುಕ್ತ ಪ್ರತಿಪರಿಣಾಮಗಳ ಕೆಲವು ವರಧಿಯಾದ ಸಂಗತಿಗಳೆಂದರೆ ಸೇಜ್, ಹೈಸೊಪ್, ಥುಜಾ ಮತ್ತು ಸೆಡರ್‌ನಂತಹ ತೈಲಗಳ ಸೇವನೆಯಿಂದಾಗಿ ಉಂಟಾದ ಲಿವರ್ ಹಾನಿ ಮತ್ತು ಸ್ಥಂಬನಗಳು.[೩೧] ಒಂದು ವೇಳೆ ತೈಲಗಳನ್ನು ಮಕ್ಕಳ ಕೈಗೆಟುಕುವ ನೇರಕ್ಕಿಂತ ದೂರದಲ್ಲಿ ಇಡದೇ ಹೋದರೆ ಆಕಸ್ಮಿಕ ಸೇವನೆಗಳು ಕೂಡ ಸಂಭವಿಸಬಹುದು.
ಸೇವಿಸಲ್ಪಟ್ಟ ಮತ್ತು ಚರ್ಮಕ್ಕೆ ಲೇಪಿಸಲ್ಪಟ್ಟ ತೈಲಗಳು ಸಾಂಪ್ರದಾಯಿಕ ಔಷದದೊಂದಿಗೆ ಸಂಭಾವ್ಯವಾಗಿ ಋಣಾತ್ಮಕ ಸಂಬಂಧವನ್ನು ಹೊಂದಬಹುದು.  ಉದಾಹರಣೆಗೆ, ಮಿಥೈಲ್ ಸ್ಯಾಲಿಸೈಲೇಟ್‌ ನಂತಹ ಅತೀ ಪ್ರಬಲ ತೈಲಗಳಾದ ಸ್ವೀಟ್ ಬಿರ್ಚ್ ಮತ್ತು ವಿಂಟರ್‌ಗ್ರೀನ್ ತೈಲಗಳ ಮೇಲ್ಮೈ ಲೇಪನವು ಆಂಟಿಕಾಫ್‌ಲ್ಯಾಂಟ್ ವಾರ್‌ಫ್ರೇನ್ ಬಳಕೆಯಿಂದ ರಕ್ತಸ್ರಾವಕ್ಕೆ ಕಾರಣವಾಗಬಹುದು.
ಕಲಬೆರಕೆ ಮಾಡಿದ ತೈಲಗಳು ಕೂಡ ಅವುಗಳಲ್ಲಿ ಬಳಸಲಾದ ಪದಾರ್ಥಗಳ ಆಧಾರದ ಮೇಲೆ ಹಲವಾರು ಸಮಸ್ಯೆಗಳನ್ನು ತರಬಹುದು.

ಆಕರಗಳು[ಬದಲಾಯಿಸಿ]

  1. Edris AE (2007). "Pharmaceutical and therapeutic potentials of essential oils and their individual volatile constituents: a review". Phytotherapy Research. 21 (4): 308–23. doi:10.1002/ptr.2072. PMID 17199238. {{cite journal}}: Unknown parameter |month= ignored (help)
  2. Carson CF, Hammer KA, Riley TV (2006). "Melaleuca alternifolia (Tea Tree) oil: a review of antimicrobial and other medicinal properties". Clinical Microbiology Reviews. 19 (1): 50–62. doi:10.1128/CMR.19.1.50-62.2006. PMC 1360273. PMID 16418522. {{cite journal}}: Unknown parameter |month= ignored (help)CS1 maint: multiple names: authors list (link)
  3. van der Watt G, Janca A (2008). "Aromatherapy in nursing and mental health care". Contemporary Nurse. 30 (1): 69–75. PMID 19072192. {{cite journal}}: Unknown parameter |month= ignored (help)
  4. ಗುಂಥರ್, ಆರ್. ಟಿ. (ed.) (1959). ದಿ ಗ್ರೀಕ್ ಹರ್ಬಲ್ ಆಪ್ ಡಯಾಸ್ಕೋರೈಡ್ಸ್ (1655ರಲ್ಲಿ ಜಾನ್ ಗುಡಿಯರ್‌ನಿಂದ ಭಾಷಾಂತರಿಸಲಾಯಿತು). ನ್ಯೂಯಾರ್ಕ್: ಹೆಫ್‍ನರ್ ಪಬ್ಲಿಶಿಂಗ್. OCLC 3570794
  5. ಫೋರ್ಬ್ಸ್ ಆರ್. ಜಿ. (1970). ಅ ಶಾರ್ಟ್ ಹಿಸ್ಟರಿ ಆಪ್ ದಿ ಆರ್ಟ್ ಆಪ್ ಡಿಸ್ಟಿಲೇಶನ್ . ಲೀಡೆನ್: ಇ.ಜೆ. ಬ್ರಿಲ್. OCLC 2559231
  6. Ericksen, Marlene (2000). Healing With Aromatherapy. New York: McGraw-Hill. p. 9. ISBN 0-658-00382-8.
  7. ಗಟ್ಟೆಫೋಸ್, ಆರ್.-ಎಮ್., ಅಂಡ್ ಟಿಸೆರಾಂಡ್, ಆರ್. (1993). ಗಟ್ಟೆಫೋಸ್ ಅರೋಮಾಥೆರಪಿ . ಸ್ಯಾಪ್ರೊನ್ ವಾಲ್ಡೆನ್: ಸಿ. ಡಬ್ಲ್ಯೂ. ಡ್ಯಾನಿಯಲ್. ಐಎಸ್‌ಬಿಎನ್‌ 0-8247-9755-8.
  8. ವಾಲ್‌ನೆಟ್, ಜೆ., ಅಂಡ್ ಟಿಸೆರಾಂಡ್, ಆರ್. (1990). ದಿ ಪ್ರಾಕ್ಟೀಸ್ ಆಪ್ ಅರೋಮಾಥೆರಪಿ: ಅ ಕ್ಲಾಸಿಕ್ ಕಾಂಪೆಂಡಿಮ್ ಆಪ್ ಪ್ಲಾಂಟ್ ಮೆಡಿಸಿನ್ಸ್ ಆಂಡ್ ದೆರ್ ಹೀಲಿಂಗ್ ಪ್ರಾಪರ್ಟೀಸ್ . ರೊಚೆಸ್ಟರ್, ವಿಟಿ: ಹೀಲಿಂಗ್ ಆರ್ಟ್ಸ್ ಪ್ರೆಸ್. ಐಎಸ್‌ಬಿಎನ್‌ 0-521-22515-9.
  9. Prabuseenivasan S, Jayakumar M, Ignacimuthu S (2006). "In vitro antibacterial activity of some plant essential oils". BMC Complementary and Alternative Medicine. 6: 39. doi:10.1186/1472-6882-6-39. PMC 1693916. PMID 17134518.{{cite journal}}: CS1 maint: multiple names: authors list (link) CS1 maint: unflagged free DOI (link)
  10. Kim HJ (2007). "[Effect of aromatherapy massage on abdominal fat and body image in post-menopausal women]". Taehan Kanho Hakhoe Chi (in Korean). 37 (4): 603–12. PMID 17615482. Archived from the original on 2011-07-22. Retrieved 2010-07-26. {{cite journal}}: Unknown parameter |month= ignored (help)CS1 maint: unrecognized language (link)
  11. Rho KH, Han SH, Kim KS, Lee MS (2006). "Effects of aromatherapy massage on anxiety and self-esteem in korean elderly women: a pilot study". The International Journal of Neuroscience. 116 (12): 1447–55. doi:10.1080/00207450500514268. PMID 17145679. {{cite journal}}: Unknown parameter |month= ignored (help)CS1 maint: multiple names: authors list (link)
  12. ಬಾರೆಟ್, ಸ್ಟಿಫೆನ್. "ಅರೋಮಾಥೆರಪಿ: ಮೇಕಿಂಗ್ ಡಾಲರ್ಸ್ ಔಟ್ ಆಪ್ ಸೆಂಟ್ಸ್", ಸೈನ್ಸ್ ಅಂಡ್ ಸೂಡೂಸೈನ್ಸ್ ರಿವ್ಯೂ ಇನ್ ಮೆಂತಲ್ ಹೆಲ್ತ್ . ಸೈಂಟಿಪಿಕ್ ರಿವ್ಯೂ ಆಪ್ ಮೆಂಟಲ್ ಹೆಲ್ತ್ ಪ್ರಾಕ್ಟೀಸ್ (SRMHP). 2009-06-29ರಂದು ಪಡೆಯಲಾಗಿದೆ
  13. "Lemon oil vapor causes an anti-stress effect via modulating the 5-HT and DA activities in mice". PubMed.gov. 2006-06-15. Retrieved 2007-04-26. {{cite web}}: Unknown parameter |coauthors= ignored (|author= suggested) (help)
  14. ಒಹಿಯೋ ಸ್ಟೇಟ್ ಯುನಿವರ್ಸಿಟಿ ರೀಸರ್ಚ್, ಮಾರ್ಚ್ 3, 2008 Archived 2011-10-18 ವೇಬ್ಯಾಕ್ ಮೆಷಿನ್ ನಲ್ಲಿ. ಈ ಅಧ್ಯಯನವು ಸೈಕೋನ್ಯೂರೋಎಂಡೋಕ್ರಿನೊಲೊಜಿ ಜರ್ನಲ್‌ನಲ್ಲಿ ಮಾರ್ಚ್ 2008ರಲ್ಲಿ ಪ್ರಕಟವಾಯಿತು.
  15. ಆಂಟಿ ಮೈಕ್ರೊಬಿಯಲ್ ಅಂಡ್ ಅಂಟಿಪ್ಲಾಸ್ಮಿಡ್ ಆಕ್ಟಿವಿಟೀಸ್ ಆಪ್ ಎಸೆನ್‌ಶಿಯಲ್ ಆಯಿಲ್
  16. http://www.cancer.gov/cancertopics/pdq/cam/ಅರೋಮಾಥೆರಪಿ/HealthProfessional/page3[ಶಾಶ್ವತವಾಗಿ ಮಡಿದ ಕೊಂಡಿ] cancer.gov - ಅರೋಮಾಥೆರಪಿ ಮತ್ತು ಸಾರಭೂತ ತೈಲ
  17. "Antibacterial and antifungal properties of essential oils". Curr Med Chem. 10 (10): 813–29. 2003 May. PMID 12678685. {{cite journal}}: Check date values in: |date= (help); Cite has empty unknown parameter: |coauthors= (help)
  18. "Essential oils of aromatic plants with antibacterial, antifungal, antiviral, and cytotoxic properties--an overview". Forsch Komplementmed. 2: 79–90. 2009 Apr;16. Epub 2009 Apr 3. PMID 19420953. {{cite journal}}: Check date values in: |date= (help); Cite has empty unknown parameter: |coauthors= (help)
  19. http://pmj.sagepub.com/cgi/content/abstract/18/2/87 Archived 2010-03-23 ವೇಬ್ಯಾಕ್ ಮೆಷಿನ್ ನಲ್ಲಿ. ವಿಶ್ರಾಂತಿದಾಮದಲ್ಲಿ ಅರೋಮಾಥೆರಪಿ ಮಸಾಜಿನ ಒಂದು ಯಾದೃಚ್ಛಿಕ ನಿಯಂತ್ರಿತ ಪ್ರಯೋಗ.
  20. Ballard CG, O'Brien JT, Reichelt K, Perry EK (2002). "Aromatherapy as a safe and effective treatment for the management of agitation in severe dementia: the results of a double-blind, placebo-controlled trial with Melissa". J Clin Psychiatry. 63 (7): 553–8. PMID 12143909. {{cite journal}}: Cite has empty unknown parameters: |quotes=, |laydate=, |laysource=, and |laysummary= (help); Unknown parameter |month= ignored (help)CS1 maint: multiple names: authors list (link)
  21. Holmes C, Hopkins V, Hensford C, MacLaughlin V, Wilkinson D, Rosenvinge H. (2002). "Lavender oil as a treatment for agitated behaviour in severe dementia: a placebo controlled study". Int J Geriatr Psychiatry. 17 (4): 305–8. doi:10.1002/gps.593. PMID 11994882. {{cite journal}}: Cite has empty unknown parameters: |quotes=, |laydate=, |laysource=, and |laysummary= (help); Unknown parameter |month= ignored (help)CS1 maint: multiple names: authors list (link)
  22. Stoeken, JE; Paraskevas, S; Van Der Weijden, GA (2007 July). "The long-term effect of a mouthrinse containing essential oils on dental plaque and gingivitis: a systematic review". Periodontol. 78 (7): 1218–28. doi:10.1902/jop.2007.060269. PMID 17608576. {{cite journal}}: Check date values in: |date= (help); Cite has empty unknown parameter: |coauthors= (help)
  23. ಸ್ವಾಭಾವಿಕ ವರ್ಣದ್ರವ್ಯ ಹೊದಿಕೆಯ ಮಾಕ್ಯುಲ್‌ಗಳು ಮತ್ತು ಗೆರೆ ಪಟ್ಟಿಗಳು
  24. Edwards, J.; Bienvenu, F.E. (1999). "Investigations into the use of flame and the herbicide, paraquat, to control peppermint rust in north-east Victoria, Australia". Australasian Plant Pathology. 28 (3): 212–224. doi:10.1071/AP99036. {{cite journal}}: |access-date= requires |url= (help)
  25. Adamovic, D.S.; et al. "Variability of herbicide efficiency and their effect upon yield and quality of peppermint (Mentha X Piperital L.)". Retrieved 6 June 2009. {{cite web}}: Cite has empty unknown parameter: |coauthors= (help); Explicit use of et al. in: |first= (help)
  26. "ದಿ ಲ್ಯಾವೆಂಡರ್ ಕ್ಯಾಟ್-ಕ್ಯಾಟ್ಸ್ ಅಂಡ್ ಎಸೆನ್‌ಶಿಯಲ್ ಆಯಿಲ್ ಸೇಪ್ಟಿ". Archived from the original on 2008-07-27. Retrieved 2010-07-26.
  27. K. Bischoff, F. Guale (1998). "Australian tea tree (Melaleuca alternifolia) Oil Poisoning in three purebred cats". Journal of Veterinary Diagnostic Investigation. 10 (108). Archived from the original ([ಮಡಿದ ಕೊಂಡಿ]Scholar search) on 2006-10-15. Retrieved 2006-10-17. {{cite journal}}: External link in |format= (help)
  28. Henley, D. V.; Lipson, N; Korach, KS; Bloch, CA (2007). "Prepubertal gynecomastia linked to lavender and tea tree oils". New England Journal of Medicine. 356 (5): 479–85. doi:10.1056/NEJMoa064725. PMID 17267908.
  29. "Oils make male breasts develop". BBC News Online. London. 1 February 2007. Retrieved 2007-09-09.
  30. ನೀಲಗಿರಿ ತೈಲ (PIM 031)
  31. Millet Y, Jouglard J, Steinmetz MD, Tognetti P, Joanny P, Arditti J. (1981). "Toxicity of some essential plant oils. Clinical and experimental study". Clin Toxicol. 18 (12): 1485–98. doi:10.3109/15563658108990357. PMID 7333081. {{cite journal}}: Cite has empty unknown parameters: |quotes=, |laydate=, |laysource=, and |laysummary= (help); Unknown parameter |month= ignored (help)CS1 maint: multiple names: authors list (link)

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • ಬರ್ಕ್ ಎಲ್. ಮತ್ತು ಚೇಂಬರ್ಸ್ ಪಿ. (1995). ದಿ ವೆರಿ ಎಸೆನ್ಸ್: ಅ ಗೈಡ್ ಟು ಅರೋಮಾಥೆರಪಿ . ಸಿಲ್ವರ್ ಲಿಂಕ್. OCLC 60274302
  • ಲಿಸ್-ಬಾಲ್ಚಿನ್, ಮರಿಯಾ (2006). ಅರೋಮಾಥೆರಪಿ ಸೈನ್ಸ್: ಅ ಗೈಡ್ ಫಾರ್ ಹೆಲ್ತ್ ಕೇರ್ ಪ್ರೊಫೇಶನಲ್ಸ್ . ಲಂಡನ್: ಫಾರ್ಮಾಸಿಉಟಿಕಲ್ ಪ್ರೆಸ್. ಐಎಸ್‌ಬಿಎನ್‌ 0-7922-7391-5.
  • ಶ್ಚಾಬೆಲ್ಟ್, ಕುರ್ಟ್ (1998).
ಅಡ್ವಾನ್ಸ್ಡ್ ಅರೋಮಾಥೆರಪಿ: ದಿ ಸೈನ್ಸ್ ಆಪ್ ಎಸೆನ್‌ಶಿಯಲ್ ಆಯಿಲ್ ಥೆರಪಿ . ರೋಚೆಸ್ಟರ್, ವಿಟಿ: ಹೀಲಿಂಗ್ ಆರ್ಟ್ಸ್ ಪ್ರೆಸ್. ಐಎಸ್‌ಬಿಎನ್‌ 0-471-80580-7.
  • ಶ್ಚಾಬೆಲ್ಟ್, ಕುರ್ಟ್ (1999). ಮೆಡಿಕಲ್ ಅರೋಮಾಥೆರಪಿ: ಹೀಲಿಂಗ್ ವಿತ್ ಎಸೆನ್‍ಶಿಯಲ್ ಆಯಿಲ್ . ಬರ್ಕಲೀ, ಸಿಎ: ಪ್ರಾಗ್. ಐಎಸ್‌ಬಿಎನ್‌ 1-59474-023-2
  • ವಾಲ್‌ನೆಟ್ , ಜೀನ್; ಅಂಡ್ ಟೀಸರಾಂಡ್, ರಾಬರ್ಟ್ (1990). ದಿ ಪ್ರಾಕ್ಟಿಸ್ ಆಪ್ ಅರೋಮಾಥೆರಪಿ: ಅ ಕ್ಲಾಸಿಕ್ ಕಾಂಪೆಡಿಯಮ್ ಆಪ್ ಪ್ಲಾಂಟ್ ಮೆಡಿಸಿನ್ಸ್ ಅಂಡ್ ದೆರ್ ಹೀಲಿಂಗ್ ಪ್ರಾಪರ್ಟಿಸ್ . ರೊಚೆಸ್ಟರ್, ವಿಟಿ: ಹೀಲಿಂಗ್ ಆರ್ಟ್ಸ್ ಪ್ರೆಸ್. ಐಎಸ್‌ಬಿಎನ್‌ 0-521-22515-9.
  • National Research Council (2003). Food Chemicals Codex. Washington D.C.: National Academy Press. ISBN 0309088666.
  • ವ್ಯಾನ್‌ಜೆಕ್, ಕ್ರಿಸ್ಟೋಪರ್ (2003). ಬ್ಯಾಡ್ ಮೆಡಿಸಿನ್: ಮಿಸ್‌ಕನ್ಸೆಪ್‌ಶನ್ ಅಂಡ್ ಮಿಸ್ ಯೂಸಸ್ ರಿವೀಲ್ಡ್, ಪ್ರಾಮ್ ಡಿಸ್ಟನ್ಸ್ ಹೀಲಿಂಘ್ ಟು ವಿಟಾಮಿನ್ O . ನ್ಯೂಯಾರ್ಕ್: ಜೆ. ವಿಲೇ. ಐಎಸ್‌ಬಿಎನ್‌ 0-06-095339-X
  • ವಾಲ್‌ನೆಟ್, ಜೀನ್; ಆಂಡ್ ಟೀಸರಾಂಡ್, ರಾಬರ್ಟ್ (1982). ದಿ ಪ್ರಾಕ್ಟಿಸ್ ಆಪ್ ಅರೋಮಾಥೆರಪಿ . ಸ್ಯಾಪ್ರನ್ ವಾಲ್ದನ್: ಡ್ಯಾನಿಯಲ್. ಐಎಸ್‌ಬಿಎನ್‌ 0-7922-7391-5.

ಹೊರಗಿನ ಕೊಂಡಿಗಳು[ಬದಲಾಯಿಸಿ]

ನಿಯತಕಾಲಿಕಗಳು
ಟೀಕೆಗಳು