ಅನಿಲ
ಅನಿಲ ದ್ರವ್ಯಗಳ ನಾಲ್ಕು ಸ್ಥಿತಿಗಳಲ್ಲಿ ಒಂದು .ಉಳಿದ ಮೂರು ಘನ,ದ್ರವ ಮತ್ತು ಪ್ಲಾಸ್ಮಾ.ಅಣುಗಳು ಸ್ವತಂತ್ರವಾಗಿ ಇರುವ ದ್ರವ್ಯವನ್ನು ಅನಿಲ ಎನ್ನುವರು. ಶುದ್ಧ ಅನಿಲವು ಪ್ರತ್ಯೇಕವಾದ ಪರಮಾಣು ಆಗಿರಬಹುದು{ಉದಾ:ನಿಯಾನ್) ಅಥವಾ ಒಂದೇ ವಸ್ತುವಿನ ಅಣುಗಳಾಗಿರಬಹುದು (ಉದಾ:ಆಮ್ಲಜನಕ) ಅಥವಾ ಹಲವಾರು ಪರಮಾಣು ಮತ್ತು ಅಣುಗಳ ಸಂಯುಕ್ತ ವಸ್ತುಗಳಾಗಿರಬಹುದು (ಉದಾ:ಇಂಗಾಲದ ಡೈ ಆಕ್ಸೈಡ್). ಅನಿಲ ಮಿಶ್ರಣವು ವಾಯುವಿನ ಹಾಗೆ ವಿವಿಧ ಶುದ್ಧ ಅನಿಲಗಳನ್ನು ಹೊಂದಿರಬಹುದು.
ದ್ರವ್ಯದ ಅನಿಲ ಸ್ಥಿತಿಯು ದ್ರವ ಮತ್ತು ಪ್ಲಾಸ್ಮಾ ಸ್ಥಿತಿಗಳ ನಡುವೆ ಕಂಡುಬರುತ್ತದೆ, ಮತ್ತು ಪ್ಲಾಸ್ಮಾ ಸ್ಥಿತಿ ಅನಿಲಗಳಿಗೆ ಮೇಲ್ಭಾಗದ ತಾಪಮಾನದ ಗಡಿಯನ್ನು ಒದಗಿಸುತ್ತದೆ.
ಸರಳೀಕೃತ ಮಾದರಿಗಳು
[ಬದಲಾಯಿಸಿ]ಅತ್ಯಂತ ವ್ಯಾಪಕವಾಗಿ ಚರ್ಚಿಸಲಾದ ಅನಿಲ ಮಾದರಿಗಳು ಹೀಗಿವೆ ಪರಿಪೂರ್ಣ ಅನಿಲ, ಆದರ್ಶ ಅನಿಲ ಮತ್ತು ನಿಜ ಅನಿಲ. ಒಂದು ನಿರ್ದಿಷ್ಟ ಉಷ್ಣಬಲ ವ್ಯವಸ್ಥೆಯ ವಿಶ್ಲೇಷಣೆಯನ್ನು ಸುಗಮವಾಗಿಸಲು ಈ ಪ್ರತಿಯೊಂದು ಮಾದರಿಯು ಅದರದೇ ಊಹೆಗಳ ಸಮೂಹವನ್ನು ಹೊಂದಿದೆ.
ಆದರ್ಶ ಅನಿಲ ನಿಯಮವು ಆದರ್ಶ ಅಥವಾ ಪರಿಪೂರ್ಣ ಅನಿಲದ ದ್ರವ್ಯ ಸಮೀಕರಣ ಮತ್ತು ಇದು
ಇಲ್ಲಿ ಒತ್ತಡ, ಘನ ಅಳತೆ, ಹಾಗೇ ಅನಿಲದ ಪರಿಮಾಣ ಮತ್ತು ಸಾರ್ವತ್ರಿಕ ಅನಿಲ ನಿಯತಾಂಕ, 8,314 ಜೆ / (ಮೋಲ್ ಕೆ) ವಾಗಿದೆ ಮತ್ತು ತಾಪಮಾನವಾಗಿದೆ. ಈ ಸಮೀಕರಣವನ್ನು ಹೀಗೆಯು ಬರೆಯ ಬಹುದು
ಇಲ್ಲಿ ನಿರ್ದಿಷ್ಟ ಅನಿಲ ನಿಯತಾಂಕ ಮತ್ತು ಸಾಂದ್ರತೆಯಾಗಿದೆ.