ಅನಂತ್ ಕುಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅನಂತಕುಮಾರ್ ಇಂದ ಪುನರ್ನಿರ್ದೇಶಿತ)
ಎಚ್.ಎನ್ ಅನಂತ್ ಕುಮಾರ್

HN Ananth Kumar

Ananth Kumar
ಅನಂತ್ ಕುಮಾರ್ ಮೇ 12, 2017 ರಂದು ನವದೆಹಲಿಯಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತಿರುವದು

ಸಂಸದೀಯ ವ್ಯವಹಾರಗಳ ಸಚಿವ
ಅಧಿಕಾರ ಅವಧಿ
5 July 2016 – 12 November 2018
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪೂರ್ವಾಧಿಕಾರಿ ವೆಂಕಯ್ಯ ನಾಯ್ಡು
ಉತ್ತರಾಧಿಕಾರಿ Vacant

ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು
ಅಧಿಕಾರ ಅವಧಿ
26 May 2014 – 12 November 2018
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪೂರ್ವಾಧಿಕಾರಿ ಶ್ರೀಕಾಂತ್ ಕುಮಾರ್ ಜೇನಾ
ಉತ್ತರಾಧಿಕಾರಿ Vacant

ನಾಗರಿಕ ವಿಮಾನಯಾನ ಸಚಿವ
ಅಧಿಕಾರ ಅವಧಿ
19 March 1998 – 13 October 1999
ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ
ಪೂರ್ವಾಧಿಕಾರಿ ಚಾಂದ್ ಮಹಲ್ ಇಬ್ರಾಹಿಂ
ಉತ್ತರಾಧಿಕಾರಿ ಶರದ್ ಯಾದವ್

Member of the ಭಾರತೀಯ Parliament
for ಬೆಂಗಳೂರು ದಕ್ಷಿಣ
ಅಧಿಕಾರ ಅವಧಿ
1996 – 12 November 2018
ಪೂರ್ವಾಧಿಕಾರಿ ಕೆ. ವೆಂಕಟಗಿರಿ ಗೌಡ
ಉತ್ತರಾಧಿಕಾರಿ Vacant
ವೈಯಕ್ತಿಕ ಮಾಹಿತಿ
ಜನನ (೧೯೫೯-೦೭-೨೨)೨೨ ಜುಲೈ ೧೯೫೯
ಬೆಂಗಳೂರು, ಮೈಸೂರು ರಾಜ್ಯ (ಈಗ ಕರ್ನಾಟಕ)
ಭಾರತ
ಮರಣ 12 November 2018(2018-11-12) (aged 59)[೧]
ಬೆಂಗಳೂರು, ಕರ್ನಾಟಕ
ಭಾರತ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ಸಂಗಾತಿ(ಗಳು) ತೇಜಸ್ವಿನಿ ಕುಮಾರ್
ಮಕ್ಕಳು ಇಬ್ಬರು ಹೆಣ್ಣುಮಕ್ಕಳು
ಅಭ್ಯಸಿಸಿದ ವಿದ್ಯಾಪೀಠ ಕರ್ನಾಟಕ ವಿಶ್ವವಿದ್ಯಾಲಯ
ಜಾಲತಾಣ ananth.org

ಅನಂತ್ ಕುಮಾರ್ (22 ಜುಲೈ 1959 - 12 ನವೆಂಬರ್ 2018) ಭಾರತೀಯ ಜನತಾ ಪಕ್ಷದ ಭಾರತೀಯ ರಾಜಕಾರಣಿಯಾಗಿದ್ದರು. 1996 ರಿಂದ ಅವರು ಲೋಕಸಭೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ನರೇಂದ್ರ ಮೋದಿ ಸರಕಾರದಲ್ಲಿ ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವರಾಗಿ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿ ಸೇವೆ ಸಲ್ಲಿಸಿದ್ದರು., [೨]

ಬಾಲ್ಯ, ವಿದ್ಯಾಭ್ಯಾಸ[ಬದಲಾಯಿಸಿ]

ಅನಂತ ಕುಮಾರ್ ರವರು, ೨೨ ಜುಲೈ, ೧೯೫೯, ರಂದು, 'ಶ್ರೀ ಎಚ್. ಎನ್. ನಾರಾಯಣ ಶಾಸ್ತ್ರಿ, ಮತ್ತು 'ಗಿರಿಜಾ,' ದಂಪತಿಗಳ ಮಗನಾಗಿ ಜನಿಸಿದರು. 'ರಾಷ್ಟ್ರೀಯ ಸ್ವಯಂ-ಸೇವಕಸಂಘದಲ್ಲಿ ಅವರಿಗೆ ಆಸಕ್ತಿ ಇತ್ತು.. ತಮ್ಮ ಬಿ ಎ (ಕಲಾ) ಪದವಿಯನ್ನು ಕೆ. ಎಸ್. ಆರ್ಟ್ಸ್ ಕಾಲೇಜ್, ಹುಬ್ಬಳ್ಳಿಯಿಂದ ಮತ್ತು ಎಲ್. ಎಲ್. ಎಮ್ [ಲಾ] ಪದವಿಯನ್ನು, ಜೆ. ಎಸ್. ಎಸ್. ಲಾ ಕಾಲೇಜ್ ಮೈಸೂರನಲ್ಲಿ ಗಳಿಸಿದರು.

ಅನಂತ ಕುಮಾರ್ ತಂದೆ ನಾರಾಯಣ ಶಾಸ್ತ್ರಿ ರೈಲ್ವೆ ಉದ್ಯೋಗಿಯಾಗಿದ್ದು ಹಲವು ವರ್ಷಗಳ ಕಾಲ ಹುಬ್ಬಳ್ಳಿಯಲ್ಲೇ ವಾಸವಾಗಿದ್ದರು. 1970-80ರ ದಶಕದಲ್ಲಿ ಅನಂತ್ ಅವರ ಜೀವನ ಹುಬ್ಬಳ್ಳಿಯಲ್ಲೇ ಸಾಗಿತ್ತು. ಅವರ ತಾಯಿ ಗಿರಿಜಾ ಶಾಸ್ತ್ರಿ ಸಾಮಾಜಿಕ ಕಾರ್ಯಕರ್ತೆ, ಜತೆಗೆ ಹುಬ್ಬಳ್ಳಿ ಜನಸಂಘದ ಸಕ್ರಿಯ ಸದ್ಯರಾಗಿದ್ದರು. ಸೆಪ್ಟೆಂಬರ್ 3, 1985 ರಿಂದ ಸೆಪ್ಟಂಬರ್ 2, 1986 ರವರೆಗೆ ಹುಬ್ಬಳ್ಳಿ-ಧಾರವಾಡ ಪುರಸಭೆಯ ಎರಡನೇ ಮಹಿಳಾ ಉಪ ಮೇಯರ್ ಆಗಿ ಅವರು ಸೇವೆ ಸಲ್ಲಿಸಿದ್ದರು.

ಸಾರ್ವಜನಿಕ ಜೀವನ[ಬದಲಾಯಿಸಿ]

ರಾಜಕೀಯದಲ್ಲಿ ಮೇಲೇರುವ ಮಹಾತ್ವಾಕಾಂಕ್ಷೆ ಹೊಂದಿದ್ದ ಅನಂತ ಕುಮಾರ್, 1987ರಲ್ಲಿ ಬಿಜೆಪಿ ಸೇರಿದರು. ಬಿಜೆಪಿ ರಾಜ್ಯ ಕಾರ್ಯದರ್ಶಿ, ರಾಜ್ಯ ಯುವ ಮೋರ್ಚಾ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಕಾರ್ಯದರ್ಶಿಯಾಗಿ ಜವಾಬ್ದಾರಿ ಹೊತ್ತಿದ್ದರು. ಕರ್ನಾಟಕದಲ್ಲಿ, ಬಾಲ್ಯದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ, ತತ್ವಗಳಿಂದ ಪ್ರೇರಿತರಾಗಿದ್ದರು. 'ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್' ನ ವಿದ್ಯಾರ್ಥಿ ವಿಭಾಗದಲ್ಲಿ ಸೇರಿಕೊಂಡರು. ತುರ್ತು-ಪರಿಸ್ಥಿತಿಯ ಸಂದರ್ಭದಲ್ಲಿ ಅವರನ್ನು ೪೦ ದಿನ ಸೆರೆಮನೆಯಲ್ಲಿಟ್ಟಿದರು. ತಮ್ಮ ಚಿಕ್ಕವಯಸ್ಸಿನಲ್ಲೇ, ಕರ್ನಾಟಕ ವಲಯದ ಬಿ. ಜೆ.ಪಿ ಯ ಜನರಲ್ ಸೆಕ್ರೆಟರಿಯಾಗಿ, ಚುನಾಯಿತರಾಗಿದ್ದರು. ನಂತರ, ೧೯೮೫ ರಲ್ಲಿ ಅದರ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾದರು.'ಆಖಿಲ ಭಾರತೀಯ ವಿದ್ಯಾರ್ಥಿ ಫರಿಷತ್', ನಿಂದ ಮುಂದೆ 'ಜನತಾಪಾರ್ಟಿ.' ಯ ದೊಡ್ಡ ಹುದ್ದೆಗಳಿಗೆ ಅವರನ್ನು ಆರಿಸಲಾಯಿತು. ಬಿ. ಜೆ. ಪಿ ಯ ರಾಜ್ಯಮಟ್ಟದ ಅಧ್ಯಕ್ಷರಾಗಿ ನಾಮಿನೇಟ್,' ಆದರು. 'ಯುವ-ಮೋರ್ಚ' ದಲ್ಲಿ ಅವರು ನಡೆಸಿದ ಕಾರ್ಯವೈಖರಿಯನ್ನು ಗಮನಿಸಿ ಅವರನ್ನು, ೧೯೯೬ ರಲ್ಲಿ, ರಾಷ್ಟ್ರಮಟ್ಟದ ರಾಜಕೀಯವಲಯದಲ್ಲಿ ಕಾರ್ಯದರ್ಶಿಯನ್ನಾಗಿ ಆಯ್ಕೆಮಾಡಿದರು. 'ರಾಮಜನ್ಮಭೂಮಿಯ ಕಾರಣಕ್ಕೆ ಹೋರಡಿದ ವ್ಯಕ್ತಿ,' ಹೋರಾಡಿ, ಕರ್ನಾಟಕದಿಂದ ಆಯ್ಕೆಯಾದ ಪ್ರತಿನಿಧಿಗಳಲ್ಲಿ ಅವರೊಬ್ಬ ಪ್ರಮುಖರಾಗಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಂತೆ ರಾಜ್ಯದಲ್ಲಿ ಬಿಜೆಪಿಯನ್ನು ಬಲಪಡಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ತಳಮಟ್ಟದಿಂದ ಪಕ್ಷ ಕಟ್ಟಿದ ಅವರು ದಕ್ಷಿಣ ಭಾರತದಲ್ಲಿ ಮೊದಲ ಬಿಜೆಪಿ ಸರಕಾರ ರಚಿಸಲು ಕಾರಣರಾದರು.

ಮಂತ್ರಿ ಪದವಿ[ಬದಲಾಯಿಸಿ]

'ದಕ್ಷಿಣ ಬೆಂಗಳೂರಿನ ಎಲೆಕ್ಟೊರಲ್ ಕಾಲೇಜ್', ನಲ್ಲಿ ಅವರ ವರ್ಚಸ್ಸು ಹೆಚ್ಚಿ, ಪಾರ್ಟಿಯ ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದರು. ಕರ್ನಾಟಕದಿಂದ ಮುಂದೆ, ಲೋಕಸಭೆಗೆ ನಿಂತರು. ೧೯೯೮ ರಲ್ಲಿ ಅವರು ಪುನರ್ ಚುನಾಯಿತರಾದರು. ಅನಂತ್ ಕುಮಾರ್, ಪ್ರಧಾನ ಮಂತ್ರಿ, 'ಅಟಲ್ ಬಿಹಾರಿ ವಾಜಪೇಯಿ,' ರವರ ಮಂತ್ರಿಮಂಡಲದಲ್ಲಿ, 'ವಿಮಾನಯಾನ ಇಲಾಖೆಯ ಸಚಿವರಾಗಿದ್ದರು,' ಆವರು ಅತಿ ಚಿಕ್ಕಪ್ರಾಯದ ಮಂತ್ರಿಯಾಗಿದ್ದರು. ನಾಗರಿಕ ವಿಮಾನಯಾನ ಸಚಿವರಾಗಿ, ಪ್ರವಾಸೋದ್ಯಮ, ಕ್ರೀಡೆ, ಯುವ ವ್ಯವಹಾರ ಮತ್ತು ಸಂಸ್ಕೃತಿ, ನಗರಾಭಿವೃದ್ದಿ ಮತ್ತು ಬಡತನ ನಿರ್ಮೂಲನೆಯಂತಹ ಖಾತೆಗಳನ್ನು ನಿಭಾಯಿಸಿದ್ದಾರೆ.

2014ರ ಗೆಲುವು[ಬದಲಾಯಿಸಿ]

2014ರಲ್ಲಿ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಅವರಿಂದ ಪ್ರಬಲ ಪ್ರತಿಸ್ಪರ್ಧೆ ಕಂಡುಬಂದಿತ್ತು. ಆದರೆ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ಅವರು 2 ಲಕ್ಷ ಮತಗಳ ಅಂತರದಿಂದ ಪ್ರಚಂಡ ಗೆಲುವು ಸಾಧಿಸಿದ್ದರು.

ನಿರ್ವಹಿಸಿದ ಹುದ್ದೆಗಳು[ಬದಲಾಯಿಸಿ]

  • ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಕಾರ್ಯದರ್ಶಿ,ಕರ್ನಾಟಕ:1982-85
  • ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿ : 1985-87
  • ಭಾರತೀಯ ಜನತಾ ಪಾರ್ಟಿಯ ಕರ್ನಾಟಕ ಘಟಕದ ಕಾರ್ಯದರ್ಶಿ : 1987-88, 1988-95
  • ಭಾರತೀಯ ಜನತಾ ಪಾರ್ಟಿಯ ಕಾರ್ಯದರ್ಶಿ: 1995 -98
  • ಆರು ಬಾರಿ ಬೆಂಗಳೂರು ದಕ್ಷೀಣ ಲೋಕಸಭಾ ಕ್ಷೇತ್ರದಿಂದ ಆಯ್ಕೆ: 1996, 1988, 1999, 2004, 2009, 2014.
  • ಆಡಳಿತ ಮಂಡಳಿಯ ಸದಸ್ಯರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು
  • ಪಾರ್ಲಿಮೆಂಟರಿ ಕನ್ಸಲ್ಟೇಟಿವ್ ಕಮಿಟಿಯ ಸದಸ್ಯ, ಕೈಗಾರಿಕಾ ಸಚಿವಾಲಯ : 1996-97
  • ರೈಲ್ವೆ ಸಚಿವಾಲಯ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರು : 1996-97
  • ಕೇಂದ್ರ ನಾಗರಿಕ ವಿಮಾನ ಖಾತೆಯ : March 1998- October 1999
  • ಕೇಂದ್ರ ಪ್ರವಾಸೋದ್ಯಮ ಸಚಿವ : January 1999 -October 1999
  • ಕೇಂದ್ರ ಕ್ರೀಡಾ ಮತ್ತು ಯುವಜನ ಸಚಿವ : October 1999- 2 February 2000
  • ಕೇಂದ್ರ ಪ್ರವಾಸೋದ್ಯಮ ಸಚಿವ : February 2000 -September 2001
  • ಕೇಂದ್ರ ನಗರಾಭಿವೃದ್ದಿ ಸಚಿವ : September 2001- July
  • ಭಾರತೀಯ ಜನತಾ ಪಾರ್ಟಿಯ ಕರ್ನಾಟಕದ ಅಧ್ಯಕ್ಷರು : 2003-2004
  • ಅಧ್ಯಕ್ಷರು, ಕಲ್ಲಿದ್ದಲು & ಉಕ್ಕು ಸಮಿತಿ: August 2004
  • ಸಂಸತ್ತಿನ ಸಾಮಾನ್ಯ ಉದ್ದೇಶಗಳ ಸಮಿತಿಯ ಸದಸ್ಯರು : 2004
  • ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಭಾರತೀಯ ಜನತಾ ಪಕ್ಷ: ರಿಂದ 2004
  • ಅಧ್ಯಕ್ಷರು, ಹಣಕಾಸು ಕುರಿತು ಪಾರ್ಲಿಮೆಂಟರಿ ಸ್ಥಾಯಿ ಸಮಿತಿ:2007
  • ಸದಸ್ಯ, ವ್ಯವಹಾರ ಸಲಹಾ ಸಮಿತಿ: 2007

ಅದಮ್ಯ ಚೇತನ ಸಂಸ್ಥೆ[ಬದಲಾಯಿಸಿ]

ತಮ್ಮ ತಾಯಿ ಗಿರಿಜಾ ಶಾಸ್ತ್ರಿ ಸ್ಮರಣಾರ್ಥ ಅವರ ಪತ್ನಿ ತೇಜಸ್ವಿನಿ ಮುನ್ನಡೆಸುತ್ತಿರುವ ಸಾಮಾಜಿಕ ಸೇವೆಯ ಸರ್ಕಾರೇತರ ಸಂಸ್ಥೆ "ಅದಮ್ಯ ಚೇತನ"ದ ಸಲಹೆಗಾರರಾಗಿದ್ದರು.

ವಿಶ್ವಸಂಸ್ಥೆಯಲ್ಲಿ ಕನ್ನಡ ಭಾಷಣ[ಬದಲಾಯಿಸಿ]

ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದು.

ನಿಧನ[ಬದಲಾಯಿಸಿ]

೧೨ ನವೆಂಬರ್ ೨೦೧೮ ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿತ್ತು [೩]

ಉಲ್ಲೇಖಗಳು[ಬದಲಾಯಿಸಿ]

  1. "Ananth Kumar: Union Minister Ananth Kumar passes away". K R Balasubramanyam. The Economic Times. 12 November 2018. Retrieved 12 November 2018.
  2. oneindia.com/elections/assembly-elections-2018-bjp-leader-ananth-kumar-profile-132399.html ಕೇಂದ್ರ ಸಚಿವ ಅನಂತಕುಮಾರ್ ಪರಿಚಯ Archived 2013-08-08 ವೇಬ್ಯಾಕ್ ಮೆಷಿನ್ ನಲ್ಲಿ.,
  3. ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ[ಶಾಶ್ವತವಾಗಿ ಮಡಿದ ಕೊಂಡಿ], 12 Nov 2018, ಕನ್ನಡಪ್ರಭ

ಬಾಹ್ಯ ಸಂಪರ್ಕ-ಕೊಂಡಿಗಳು[ಬದಲಾಯಿಸಿ]