ಅಧ್ಯಕ್ಷ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಧ್ಯಕ್ಷ
ಚಲನಚಿತ್ರದ ಪೋಸ್ಟರ್
ನಿರ್ದೇಶನನಂದ ಕಿಶೋರ್
ಲೇಖಕಪೋನ್ ರಾಮ್
ಪಾತ್ರವರ್ಗಶರಣ್
ಹಿಬಾ ಪಟೇಲ್
ಸಂಗೀತಅರ್ಜುನ್ ಜನ್ಯ
ಸಂಕಲನಕೆ.ಎಂ.ಪ್ರಕಾಶ್
ಸ್ಟುಡಿಯೋಶ್ರೀ ಶಂಕರ್ ಮೂವೀಸ್
ಬಿಡುಗಡೆಯಾಗಿದ್ದು
 • 15 ಆಗಸ್ಟ್ 2014 (2014-08-15)
ದೇಶಭಾರತ
ಭಾಷೆಕನ್ನಡ

ಅಧ್ಯಕ್ಷ ಇದು ೨೦೧೪ರ ಭಾರತೀಯ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು, ಇದನ್ನು ನಂದ ಕಿಶೋರ್ ಅವರು ನಿರ್ದೇಶಿಸಿದ್ದಾರೆ.[೧] ಈ ಚಿತ್ರದಲ್ಲಿ ಶರಣ್ ಮತ್ತು ಹಿಬಾ ಪಟೇಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರೆ[೨], ರವಿ ಶಂಕರ್, ಮಾಳವಿಕಾ ಅವಿನಾಶ್ ಮತ್ತು ಚಿಕ್ಕಣ್ಣ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವು ತಮಿಳಿನ ವರುತಪದಾತ ವಲಿಬರ್ ಸಂಗಂ ಎನ್ನುವ ಚಿತ್ರದ ರಿಮೇಕ್ ಆಗಿದೆ.[೩]

ಸಾರಾಂಶ[ಬದಲಾಯಿಸಿ]

ತನ್ನ ಮಗಳು ಐಶ್ವರ್ಯಾ (ಹೆಬಾ ಪಟೇಲ್) ತಾನು ಪ್ರೀತಿಸಿದ ವ್ಯಕ್ತಿಯೊಂದಿಗೆ ಓಡಿಹೋದ ಕಾರಣದಿಂದ ಆಕೆಯನ್ನು ಹತ್ಯೆಗೈದ ಬಗ್ಗೆ ಶಿವರುದ್ರ ಗೌಡರ (ಪಿ. ರವಿಶಂಕರ್) ಮನೆಗೆ ಪೊಲೀಸರು ಬರುವುದರಿಂದ ಚಿತ್ರ ಪ್ರಾರಂಭವಾಗುತ್ತದೆ. ಚಂದ್ರು (ಶರಣ್) ಮತ್ತು ನಾರಾಯಣ (ಚಿಕ್ಕಣ್ಣ) ಇಬ್ಬರು ಸ್ನೇಹಿತರು, ಅವರು ಚಿ.ತು. ಸಂಘ ಎಂಬ ಸಂಘದ ನಾಯಕರಾಗಿದ್ದಾರೆ. ಶಾಲೆಯಲ್ಲಿ ಶಿಕ್ಷಕಿಯಾಗಿರುವ ಕಲ್ಯಾಣಿ (ಅಸ್ಮಿತಾ ಸೂದ್) ರನ್ನು ಚಂದ್ರು ಪ್ರೀತಿಸುತ್ತಿರುತ್ತಾನೆ. ಚಂದ್ರು ಅವಳಿಗೆ ಒಂದು ಪ್ರೇಮ ಪತ್ರವನ್ನು ಬರೆಯುತ್ತಾನೆ, ಆದರೆ ಯಾರಾದರೂ ಅದನ್ನು ಅವಳಿಗೆ ಕೊಡಬೇಕೆಂದು ಬಯಸುತ್ತಾನೆ. ಆಗ ಕಂಡ ಐಶ್ವರ್ಯಳಿಗೆ ಪತ್ರವನ್ನು ತಲುಪಿಸಲು ಹೇಳುತ್ತಾನೆ. ಐಶ್ವರ್ಯಾ ತನ್ನ ಶಿಕ್ಷಕಿಯಾದ ಕಲ್ಯಾಣಿಗೆ ಪತ್ರವನ್ನು ನೀಡುತ್ತಾಳೆ. ಅದಕ್ಕೆ ಕಲ್ಯಾಣಿ ತನ್ನ ಪ್ರಸ್ತಾಪವನ್ನು ನಿರಾಕರಿಸುತ್ತಾಳೆ. ಆದರೆ ಐಶ್ವರ್ಯ ಅದನ್ನು ಚಂದ್ರುವಿಗೆ ಬಹಿರಂಗಪಡಿಸುವುದಿಲ್ಲ.

ಗೌಡ ಐಶ್ವರ್ಯಾಗೆ ಮದುವೆಯನ್ನು ಗೊತ್ತುಮಾಡುತ್ತಾನೆ. ಆದರೆ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಬಯಕೆಯಿಂದ ಅವಳು ಮದುವೆಯಾಗಲು ಸಿದ್ಧಳಿಲ್ಲ. ಅವಳ ಪ್ರಯತ್ನಗಳ ಹೊರತಾಗಿಯೂ, ಅವಳಿಗೆ ಅವಳ ಮದುವೆಯನ್ನು ತಡೆಯಲು ಆಗುವುದಿಲ್ಲ. ಆಕೆಯ ಮದುವೆಯ ಬಗ್ಗೆ ಹೋರ್ಡಿಂಗ್ ನಿಲ್ಲಿಸಿದ್ದು, ಅದನ್ನು ತಡೆಯಲು ಚಂದ್ರು ಮತ್ತು ನಾರಾಯಣ ನಿರ್ಧರಿಸುತ್ತಾರೆ. ಅವರು ಪೊಲೀಸ್ ಠಾಣೆಗೆ ಹೋಗಿ ಆಯುಕ್ತರ ಬಳಿಗೆ ಹೋಗುವುದಾಗಿ ಪೊಲೀಸರಿಗೆ ಬೆದರಿಕೆ ಹಾಕುತ್ತಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಗೌಡರೊಂದಿಗೆ ಮಾತನಾಡಿ ಮದುವೆಯನ್ನು ನಿಲ್ಲಿಸುವಂತೆ ಮಾಡುತ್ತಾನೆ. ಇದು ಚಂದ್ರುವಿನ ಮೇಲೆ ಐಶ್ವರ್ಯ ಹೃದಯದಲ್ಲಿ ಪ್ರೀತಿಯನ್ನು ಬೆಳಗಿಸುತ್ತದೆ. ಒಂದು ದಿನ ಕಲ್ಯಾಣಿ ಬೇರೆ ಮದುವೆಯಾಗುತ್ತಿರುವ ಸುದ್ದಿಯನ್ನು ಐಶ್ವರ್ಯಾ ಚಂದ್ರುವಿಗೆ ತಲುಪಿಸುತ್ತಾಳೆ. ಅವನು ಜೀವನದಲ್ಲಿ ಮುಂದುವರಿಯಲು ನಿರ್ಧರಿಸುತ್ತಾರೆ. ಗ್ರಾಮ ಉತ್ಸವದ ಸಂದರ್ಭದಲ್ಲಿ ರೆಕಾರ್ಡ್ ಡ್ಯಾನ್ಸ್ ಆಯೋಜಿಸುವ ಕುರಿತು ನಾರಾಯಣ ಮತ್ತು ಚಂದ್ರು ಶಿವರುದ್ರೇ ಗೌಡ ಅವರೊಂದಿಗೆ ಚರ್ಚಿಸಿ ಯಶಸ್ವಿಗೊಳ್ಳುತ್ತಾರೆ. ಹಬ್ಬದ ದಿನದಂದು ಐಶ್ವರ್ಯ ಸೀರೆಯಲ್ಲಿ ಉಟ್ಟಿರುವುದನ್ನು ನೋಡಿ ಅವನು ಅವಳನ್ನು ಪ್ರೀತಿಸಲು ಆರಂಭಿಸುತ್ತಾನೆ. ಉತ್ಸವದಲ್ಲಿ, ಗೌಡ ಅವರು ಚಂದ್ರು ಅವರ ಸವಾಲನ್ನು ಸ್ವೀಕರಿಸುತ್ತಾರೆ ಮತ್ತು ಆಧುನಿಕ ಹಾಡುಗಳಿಗೆ ನೃತ್ಯ ಮಾಡುತ್ತಾರೆ. ಅದೇ ರಾತ್ರಿ, ಐಶ್ವರ್ಯಾಳ ಮದುವೆಯನ್ನು ನಿಲ್ಲಿಸಿದ ವ್ಯಕ್ತಿ ಚಂದ್ರು ಎಂದು ಪೊಲೀಸರು ಗೌಡರಿಗೆ ಬಹಿರಂಗಪಡಿಸುತ್ತಾರೆ.

ಒಂದು ದಿನದ ನಂತರ ಚಂದ್ರು, ಐಶ್ವರ್ಯ ಮೇಲಿನ ಪ್ರೀತಿಯ ಬಗ್ಗೆ ಅವಳಿಗೆ ಹೇಳುತ್ತಾನೆ. ಆದರೆ ಅವಳು ಅವನನ್ನು ತಿರಸ್ಕರಿಸುತ್ತಾಳೆ. ಒಂದು ಗ್ಯಾಂಗ್ ಬಂದು ಅವನನ್ನು ಹೊಡೆದಾಗ ಚಂದ್ರು ದುಃಖದ ಹಾಡನ್ನು ಕೇಳುತ್ತಾ ಹೊರನಡೆಯುತ್ತಾನೆ. ಅವನ ಮೇಲೆ ಹಲ್ಲೆ ನಡೆಸಿದ್ದು ಶಿವರುದ್ರೇ ಗೌಡರ ಗೂಂಡಾಗಳ ಗುಂಪು ಎಂದು ಅವನು ನಂತರ ಕಂಡುಕೊಳ್ಳುತ್ತಾನೆ. ಆದ್ದರಿಂದ, ಚಂದ್ರು ಮತ್ತು ನಾರಾಯಣ ಗೌಡನ ಗನ್ ಅನ್ನು ಕದಿಯಲು ನಿರ್ಧರಿಸುತ್ತಾರೆ. ಅದನ್ನು ಕದ್ದ ನಂತರ ಅವರು ತೊಂದರೆಗೆ ಸಿಲುಕುತ್ತಾರೆ. ಯಾರಿಗೂ ತಿಳಿಯದೆ ಐಶ್ವರ್ಯಾ ಅವರ ಒತ್ತಾಯದ ಮೇರೆಗೆ ಚಂದ್ರು ಬಂದೂಕನ್ನು ಹಿಂತಿರುಗಿಸುತ್ತಾನೆ. ಚಂದ್ರು ಮತ್ತು ಐಶ್ವರ್ಯಾ ಸಂಬಂಧದ ಬಗ್ಗೆ ತಿಳಿದಿರುವ ಐಶ್ವರ್ಯಾ ಅವರ ತಾಯಿ, ಇದು ಸರಿಯಲ್ಲ ಮತ್ತು ಇದನ್ನು ನಿಲ್ಲಿಸಬೇಕು ಎಂದು ಎಚ್ಚರಿಸಿತ್ತಾರೆ. ಗೌಡನ ಹಸು ಪಟ್ಟಣದಿಂದ ಹೊರಗೆ ಹೋದಾಗ ಬಾವಿಗೆ ಬೀಳುತ್ತದೆ ಮತ್ತು ಅದನ್ನು ಹೊರ ತಗಿಯಲು ಚಂದ್ರು ಸಹಾಯ ಮಾಡುತ್ತಾನೆ. ಒಂದು ರಾತ್ರಿ, ಚಂದ್ರು ಐಶ್ವರ್ಯಾಳೊಂದಿಗೆ ಅವಳ ಮನೆಯಲ್ಲಿಯೇ ಇರುತ್ತಾನೆ ಮತ್ತು ಅವನು ಆಕೆಯ ತಂದೆ ನಿದ್ರೆಯಲ್ಲಿ ನಡೆಯುವುದನ್ನು ನೋಡುತ್ತಾನೆ. ಮರುದಿನ ಬೆಳಿಗ್ಗೆ ಬಂದ ಗೌಡರು ಇನ್ನು ನಿದ್ದೆಯಲ್ಲಿ ನಡೆಯುತ್ತಿದ್ದಾರೆ ಎಂದು ಭಾವಿಸಿ ಅವರ ಮಗಳನ್ನು ಇಷ್ಟಪಡುವ ಬಗ್ಗೆ ಗೌಡನಿಗೆ ಹೇಳುತ್ತಾನೆ. ಅವನು ನಿಜವಾಗಿಯೂ ಎಚ್ಚರವಾಗಿರುತ್ತಾನೆ ಎಂದು ತಿಳಿದ ನಂತರ, ಅವನು ಆ ಮನೆಯಿಂದ ಹೊರಗೆ ಓಡುತ್ತಾನೆ.

ಗೌಡ ತನ್ನ ಮಗಳಿಗೆ ತಾನು ಇಷ್ಟಪಡುವ ಹುಡುಗನೊಂದಿಗೆ ಮದುವೆ ಮಾಡುವುದಾಗಿ ಘೋಷಿಸುತ್ತಾನೆ. ಆದರೆ ಮದುವೆಯ ಹಿಂದಿನ ರಾತ್ರಿ ಐಶ್ವರ್ಯಾ ಚಂದ್ರು ಜೊತೆ ಓಡಿಹೋಗಲು ನಿರ್ಧರಿಸುತ್ತಾಳೆ. ರಾತ್ರಿಯಲ್ಲಿ ಓಡಿಹೋಗುವಾಗ, ಅವರು ಅವಳ ತಂದೆಯನ್ನು ನೋಡುತ್ತಾರೆ ಮತ್ತು ಅವನು ಕೂಡ ಓಡಿಹೋಗುವಂತೆ ಹೇಳುತ್ತಾನೆ. ನೀವಿಬ್ಬರೂ ಎಂದಿಗೂ ಹಿಂತಿರುಗ ಬಾರದೆಂದು ತಾಕೀತು ಮಾಡಿ ಅವರಿಗೆ ಸ್ವಲ್ಪ ಹಣವನ್ನು ನೀಡುತ್ತಾರೆ. ಅವರು ಮದುವೆಯಾಗುವುದನ್ನು ಗೌಡ ನೋಡುತ್ತಾನೆ ಮತ್ತು ನಂತರ ಅವನು ತನ್ನ ಅಂಗಿಯ ಮೇಲೆ ರಕ್ತದೊಂದಿಗೆ ಮನೆಗೆ ನಡೆಯುತ್ತಾನೆ (ರಕ್ತವು ಅವನು ಕೊಂದ ಮೇಕೆಯದ್ದು) ಮತ್ತು ತನ್ನ ಪ್ರತಿಷ್ಠೆ ಕಾರಣದಿಂದಾಗಿ ಅವನು ತನ್ನ ಮಗಳನ್ನು ಕೊಂದನೆಂದು ಎಲ್ಲರಿಗೂ ಸುಳ್ಳು ಹೇಳುತ್ತಾನೆ. ಚಂದ್ರು ಮತ್ತು ಐಶ್ವರ್ಯಾ ಹಿಂದಿರುಗಿ ಶಿವರುದ್ರೇ ಗೌಡರ ಯೋಜನೆಗಳನ್ನು ಹಾಳುಮಾಡುತ್ತಾರೆ ಮತ್ತು ಚಂದ್ರು ಅವರು ತಮ್ಮ ತಂದೆ ಹೆಚ್ಚಿನ ಹಣವನ್ನು ನೀಡದಿದ್ದರಿಂದ ಹಿಂದಿರುಗಿದೆವು ಎಂದು ಹೇಳುತ್ತಾನೆ. ಗೌಡ ಮತ್ತು ಚಂದ್ರು ಸಂತೋಷದಿಂದ ನಗುವುದರೊಂದಿಗೆ ಚಿತ್ರ ಕೊನೆಗೊಳ್ಳುತ್ತದೆ.

ಪಾತ್ರವರ್ಗ[ಬದಲಾಯಿಸಿ]

 • ಶರಣ್, ಚಂದ್ರು ಆಗಿ
 • ಹಿಬಾ ಪಟೇಲ್, ಐಶ್ವರ್ಯ ಆಗಿ
 • ರವಿ ಶಂಕರ್, ಶಿವರುದ್ರೇ ಗೌಡ ಆಗಿ
 • ಅಸ್ಮಿತಾ ಸೂದ್, ಕಲ್ಯಾಣಿಯಾಗಿ
 • ಮಾಳವಿಕಾ ಅವಿನಾಶ್, ಪೊಲೀಸ್ ಪಾತ್ರದಲ್ಲಿ
 • ಚಿಕ್ಕಣ್ಣ, ನಾರಾಯಾಣನಾಗಿ
 • ರಮೇಶ್ ಭಟ್, ಚಂದ್ರುವಿನ ತಂದೆಯಾಗಿ

ಧ್ವನಿಸುರುಳಿ[ಬದಲಾಯಿಸಿ]

Untitled

ಅರ್ಜುನ್ ಜನ್ಯ ಚಿತ್ರಕ್ಕಾಗಿ ಹಿನ್ನಲೆ ಸಂಗೀತ ಮತ್ತು ಹಾಡುಗಳನ್ನು ಸಂಯೋಜಿಸಲು ಸಹಿ ಮಾಡಿದ್ದಾರೆ.[೪] ಹಾಡುಗಳಿಗೆ ಸಾಹಿತ್ಯವನ್ನು ವಿ. ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್ ಮತ್ತು ಕೆ.ಕಲ್ಯಾಣ ಅವರು ಬರೆದಿದ್ದಾರೆ.

ಹಾಡುಗಳು
ಸಂ.ಹಾಡುಸಾಹಿತ್ಯಗಾಯಕ(ರು)ಸಮಯ
1."ಅಧ್ಯಕ್ಷ ಅಧ್ಯಕ್ಷ"ವಿ.ನಾಗೇಂದ್ರ ಪ್ರಸಾದ್ಪುನೀತ್ ರಾಜ್‍ಕುಮಾರ್, ಎಲ್.ಎನ್.ಶಾಸ್ತ್ರಿ4:29
2."ಕಣ್ಣಿಗೂ ಕಣ್ಣಿಗೂ"ಕೆ.ಕಲ್ಯಾಣ್ಟಿಪ್ಪು, ಅರ್ಚನಾ ರವಿ4:02
3."ಓಪನ್ ಹೇರು ಬಿಟ್ಕೊಂಡು"ಯೋಗರಾಜ್ ಭಟ್ವಿಜಯ್ ಪ್ರಕಾಶ್3:52
4."ಫೋನು ಇಲ್ಲ"ಯೋಗರಾಜ್ ಭಟ್ವಿಜಯ್ ಪ್ರಕಾಶ್4:26
5."ಸುಮ್ ಸುಮ್ನೆ"ಕೆ.ಕಲ್ಯಾಣ್ಪಲಕ್ ಮುಚ್ಚಲ್3:30
ಒಟ್ಟು ಸಮಯ:20:19

ಉಲ್ಲೇಖಗಳು[ಬದಲಾಯಿಸಿ]

 1. "Sharan's 'Adhyaksha' is a Delightful Comedy Caper", ನ್ಯೂ ಇಂಡಿಯನ್ ಎಕ್ಸ್ಪ್ರೆಸ್, 2014-08-16
 2. "Adhyaksha (2014)", ಫಿಲ್ಮಿಬೀಟ್
 3. "I don't regret being typecast as a comedy artist: Sharan". ದಿ ಟೈಮ್ಸ್ ಆಫ್ ಇಂಡಿಯಾ. 14 August 2014. Retrieved 15 August 2014.
 4. "Adhyaksha (Original Motion Picture Soundtrack) – EP". ಐ-ಟ್ಯೂನ್ಸ್. Retrieved 21 August 2014.

ಬಾಹ್ಯ ಕೊಂಡಿಗಳು[ಬದಲಾಯಿಸಿ]