ವಿಷಯಕ್ಕೆ ಹೋಗು

ಅಜಿಂಕ್ಯ ರಹಾನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಜಿಂಕ್ಯ ರಹಾನೆ

ಭಾರತ
ವೈಯಕ್ತಿಕ ಮಾಹಿತಿ
ಪೂರ್ಣಹೆಸರು ಅಜಿಂಕ್ಯ ಮಧುಕರ್ ರಹಾನೆ
ಅಡ್ಡಹೆಸರು ಜಿಂಕ್ಸ್,ಅಜ್ಜು
ಹುಟ್ಟು ಜೂನ್ ೦೬ ೧೯೮೮
ಅಹ್ಮದ್ ನಗರ ಜಿಲ್ಲೆ, ಭಾರತ
ಪಾತ್ರ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್
ಬ್ಯಾಟಿಂಗ್ ಶೈಲಿ ಬಲಗೈ
ಬೌಲಿಂಗ್ ಶೈಲಿ ಬಲಗೈ ಮಧ್ಯಮ
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ
ಟೆಸ್ಟ್ ಪಾದಾರ್ಪಣೆ (cap ೨೭೮) ಮಾರ್ಚ್ ೨೨ ೧೯೮೯: v ಆಸ್ಟ್ರೇಲಿಯ.
ಕೊನೆಯ ಟೆಸ್ಟ್ ಪಂದ್ಯ ಅಗಸ್ಟ್ ೧೨ ೨೦೧೭: v ಶ್ರೀಲಂಕಾ
ODI ಪಾದಾರ್ಪಣೆ (cap ೧೯೧) ೦೩ ಸೆಪ್ಟೆಂಬರ್ ೨೦೧೧: v ಇಂಗ್ಲೆಂಡ್
ಕೊನೆಯ ODI ಪಂದ್ಯ ೦೧ ಅಕ್ಟೋಬರ್ ೨೦೧೭: v ಆಸ್ಟ್ರೇಲಿಯ
ODI ಅಂಗಿಯ ಸಂಖ್ಯೆ ೨೭
ಪ್ರಾದೇಶಿಕ ತಂಡದ ಮಾಹಿತಿ
ವರ್ಷಗಳು ತಂಡ
೨೦೦೭ರಿಂದ ಮುಂಬಯಿ
೨೦೦೮-೨೦೧೦ ಮುಂಬೈ ಇಂಡಿಯನ್ಸ್
೨೦೧೧-೨೦೧೫ ರಾಜಸ್ಥಾನ್ ರಾಯಲ್ಸ್ (squad no. 3)
೨೦೧೬ ರೈಸಿಂಗ್ ಪುಣೆ ಸೂಪರ್ ಜೈಯಂಟ್ಸ್ (squad no. 3)
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟ್ಏ.ದಿ.ಪಟಿ-೨೦ ಕ್ರಿಕೆಟ್ಪಟ್ಟಿ ಎ
ಪಂದ್ಯಗಳು ೪೦ ೮೪ ೨೦ ೧೦೪
ಒಟ್ಟು ರನ್ನುಗಳು ೨೮೦೯ ೨೮೨೨ ೩೦೫೭ ೮೬೨೬
ಬ್ಯಾಟಿಂಗ್ ಸರಾಸರಿ ೪೭.೬೧ ೩೫.೨೭ ೩೩.೫೯ ೫೬.೦೧
೧೦೦/೫೦ ೯/೧೨ ೦೩/೨೩ ೧/೨೫ ೨೯/೩೬
ಅತೀ ಹೆಚ್ಚು ರನ್ನುಗಳು ೧೮೮ ೧೧೧ ೧೦೩ ೨೬೫
ಬೌಲ್ ಮಾಡಿದ ಚೆಂಡುಗಳು - - - ೪೨
ವಿಕೇಟುಗಳು - - -
ಬೌಲಿಂಗ್ ಸರಾಸರಿ - - - ೧೪.೩೩
೫ ವಿಕೆಟುಗಳು ಇನ್ನಿಂಗ್ಸಿನಲ್ಲಿ - - - -
೧೦ ವಿಕೆಟುಗಳು ಪಂದ್ಯದಲ್ಲಿ - - - -
ಶ್ರೇಷ್ಠ ಬೌಲಿಂಗ್ - - ೩/೧೦ ೨/೩೬
ಕ್ಯಾಚುಗಳು /ಸ್ಟಂಪಿಂಗ್‍ಗಳು ೫೨/- ೪೭/– ೧೬ ೧೦೭/–

ದಿನಾಂಕ ೦೨ ಅಕ್ಟೋಬರ್, ೨೦೧೭ ವರೆಗೆ.
ಮೂಲ: Cricinfo

ಅಜಿಂಕ್ಯ ಮಧುಕರ್ ರಹಾನೆ ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಭಾರತಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕ. ಇವರು ಬಲಗೈ ಅರಂಭಿಕ ಆಟಗಾರ. []

ಆರಂಭಿಕ ಜೀವನ

[ಬದಲಾಯಿಸಿ]

ರಹಾನೆಯವರು ಜೂನ್ ೦೬, ೧೯೮೮ರಲ್ಲಿ ಅಹ್ಮದ್ ನಗರ ಜಿಲ್ಲೆಯ ಮಧುಕರ್ ಬಾಬು ರಹಾನೆ ಹಾಗು ಸುಜಾತ ರಹಾನೆಯವರಿಗೆ ಜನಿಸಿದರು. ತಮ್ಮ ೧೭ನೇ ವಯಸ್ಸಿನಲ್ಲಿ ರಹಾನೆ, ಭಾರತದ ಮಾಜಿ ಕ್ರಿಕೆಟಿಗನಾದ ಪ್ರವೀಣ್ ಆಮ್ರೆ ಅವರಲ್ಲಿ ಕ್ರಿಕೆಟ್ ತರಬೇತಿಯನ್ನು ಪಡೆಯಲು ಆರಂಭಿಸಿದರು. ಎಸ್.ವಿ.ಜೋಶಿ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಕ್ರಿಕೆಟ್ ವೃತ್ತಿಯನ್ನು ಶುರುಮಾಡಿದರು.

ವೃತ್ತಿ ಜೀವನ

[ಬದಲಾಯಿಸಿ]

ಅಂತರರಾಷ್ಟ್ರೀಯ ಕ್ರಿಕೆಟ್

[ಬದಲಾಯಿಸಿ]

ಅಗಸ್ಟ್ ೩೧ ೨೦೧೧ರಲ್ಲಿ ಇಂಗ್ಲೆಂಡ್ ವಿರುಧ್ಧ ನಡೆದ ಟಿ-೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು. ವೆಲ್ಲಿಂಗ್ಟನ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ತಮ್ಮ ಪ್ರಥಮ ಶತಕವನ್ನು ಬಾರಿಸಿದರು. ಮಾರ್ಚ್ ೨೦೧೩ರಲ್ಲಿ ಬಾರ್ಡರ್-ಗವಾಸ್ಕರ್ ಪ್ರಶಸ್ತಿಯ ಸರಣಿಯಲ್ಲಿ ರಹಾನೆಯವರು ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು.

ಐಪಿಎಲ್ ಕ್ರಿಕೆಟ್

[ಬದಲಾಯಿಸಿ]

ಮುಂಬೈ ಇಂಡಿಯನ್ಸ್ ತಂಡದಿಂದ ಐಪಿಎಲ್ ಜಗತ್ತಿಗೆ ಪಾದಾರ್ಪನೆ ಮಾಡಿದ ರಹಾನೆಯವರು ನಂತರ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರಿ ತಮ್ಮ ವೃತ್ತಿಯಲ್ಲಿ ಯಶಸ್ಸುಗಳಿಸಿದರು.ರಾಜಸ್ಥಾನ್ ರಾಯಲ್ಸ್ Archived 2013-01-15 ವೇಬ್ಯಾಕ್ ಮೆಷಿನ್ ನಲ್ಲಿ. ತಂಡದಲ್ಲಿ ಇವರು ಅರಂಭಿಕನಾಗಿ ಆಡುವಾಗ ಇವರಿಗೆ ರಾಹುಲ್ ದ್ರಾವಿಡ್ ರವರ ಮಾರ್ಗದರ್ಶನ ಸಿಕ್ಕಿತು, "ರಾಹುಲ್ ದ್ರಾವಿಡ್ ಅವರು ನನ್ನ ಪ್ರತಿಭೆಯನ್ನು ತೋರಿಸಲು ನನಗೆ ಅವಕಾಶವನ್ನು ನೀಡಿದರು, ಅವರಿಂದ ಸಾಕಷ್ಟನ್ನು ಕಲಿತ್ತಿದ್ದೇನೆ."[] ೨೦೧೮ ರಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್ ಮೆನ್ ಮುನ್ನಡೆಸುತ್ತಿದ್ದ ರಾಯಲ್ಸ್ ತಂಡವನ್ನು ರಹಾನೆಯವರು ಮುನ್ನಡೆಸಿದ್ದರು. ೨೦೨೦ರ ಐಪಿ ಎಲ್ ನಲ್ಲಿ ಇವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇವರು ಎರಡು ಶತಕಗಳನ್ನು ಬಾರಿಸಿದ್ದಾರೆ.

ಸಾಧನೆಗಳು

[ಬದಲಾಯಿಸಿ]

ಟೆಸ್ಟ್ ಕ್ರಿಕೆಟ್

[ಬದಲಾಯಿಸಿ]
  • ಒಂದೇ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸಿದ ಭಾರತದ ೫ನೇ ಕ್ರಿಕೆಟಿಗ .[]
  • ಒಂದೇ ಪಂದ್ಯದಲ್ಲಿ ಅತ್ಯಧಿಕ ಕ್ಯಾಚ್ಗಳು (೮).[]

ಟಿ-೨೦ ಕ್ರಿಕೆಟ್

[ಬದಲಾಯಿಸಿ]
  • ಒಂದೇ ಒವರಿನಲ್ಲಿ ಎಲ್ಲಾ ೬ ಎಸೆತಗಳನ್ನ ಬೌಂಡ್ರಿಗೆ ಬಾರಿಸಿದ ಮೊದಲ ಕ್ರಿಕೆಟಿಗ (ಆರ್.ಸಿ.ಬಿ ವಿರುದ್ಧದ ಪಂದ್ಯದಲ್ಲಿ).
  • ಟಿ-೨೦ ಪಂದ್ಯದಲ್ಲಿ ಗರಿಷ್ಠ ಸಂಖ್ಯೆಯ ಕ್ಯಾಚ್ಗಳನ್ನು ಪಡೆದ ಆಟಗಾರನಾಗಿ ಇತರೆ ಐದು ಆಟಗಾರರ ಜೊತೆ ಜಂಟಿ ದಾಖಲೆಯನ್ನು ಹೊಂದಿದ್ದಾರೆ.

ಶ್ರೇಯಾಂಕ

[ಬದಲಾಯಿಸಿ]
  • ಪ್ರಸ್ತುತ ರಹಾನೆಯವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸುವ ಶ್ರೇಯಾಂಕಗಳಲ್ಲಿ,
    • ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ೯ನೇ ಸ್ಥಾನವನ್ನು ಹೊಂದಿದ್ದಾರೆ.[]
    • ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ೨೩ನೇ ಸ್ಥಾನವನ್ನು ಹೊಂದಿದ್ದಾರೆ.[]

ಪ್ರಶಸ್ತಿಗಳು

[ಬದಲಾಯಿಸಿ]
  1. ಸೀಯಟ್ ವರ್ಷದ ಕ್ರಿಕೆಟಿಗ ೨೦೧೪-೧೫[]
  2. ಎಂ.ಎ.ಚಿದಂಬರಂ ತ್ರೋಫಿ ೨೦೦೬-೦೭[]
  3. ಭಾರತೀಯ ಕ್ರಿಕೆಟ್ ಮಂಡಳಿಯು ೨೦೧೬ರಲ್ಲಿ ಅರ್ಜುನ ಪ್ರಶಸ್ತಿಗೆ ರಹಾನೆಯವರ ಹೆಸರನ್ನು ಶಿಫಾರಸು ಮಾಡಿತು.[]

ಉಲ್ಲೇಖಗಳು

[ಬದಲಾಯಿಸಿ]
  1. http://www.cricbuzz.com/profiles/1447/ajinkya-rahane
  2. http://www.forbesindia.com/article/2014-celebrity-100/ajinkya-rahanes-steady-road-to-stardom/39207/0
  3. http://timesofindia.indiatimes.com/sports/2016-asia-cup/top-stories/4th-Test-Ajinkya-Rahane-becomes-fifth-Indian-to-score-twin-centuries/articleshow/50062034.cms?
  4. http://www.espncricinfo.com/sri-lanka-v-india-2015/content/story/909495.html
  5. https://www.icc-cricket.com/rankings/mens/player-rankings/test/batting
  6. https://www.icc-cricket.com/rankings/mens/player-rankings/odi/batting
  7. http://timesofindia.indiatimes.com/sports/india-in-australia/top-stories/Ajinkya-Rahane-Kumar-Sangakkara-conferred-with-CEAT-awards/articleshow/47419825.cms?
  8. http://www.rediff.com/cricket/report/awards/20071216.htm
  9. "ಆರ್ಕೈವ್ ನಕಲು". Archived from the original on 2016-05-07. Retrieved 2017-07-15.