ವಿಷಯಕ್ಕೆ ಹೋಗು

ಅಜಯ್ ದೇವ್ ಗನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Ajay Devgn
Born
Vishal Veeru Devgan[]

(1969-04-02) ೨ ಏಪ್ರಿಲ್ ೧೯೬೯ (ವಯಸ್ಸು ೫೫)
Other namesAjay Devgan[]
Occupation(s)Film actor, Director, Producer
Years active೧೯೯೧ - present
SpouseKajol (೧೯೯೯-present)
Websitehttp://ajaydevgn.com/

ಅಜಯ್ ದೇವ್ ಗನ್ (ಹಿಂದಿ:अजय देवगन, ಉರ್ದು: اجے دیوگن, ಪಂಜಾಬಿ: ਅਜੈ ਦੇਵਗਨ), ಜನ್ಮ ನಾಮ ವಿಶಾಲ್ ವೀರೂ ದೇವ್ ಗನ್ (ಹಿಂದಿ:विशाल वीरू देवगन, ಉರ್ದು: وشال ویرو دیوگن, ಪಂಜಾಬಿ: ਵਿਸ਼ਾਲ ਵੀਰੂ ਦੇਵਗਨ), ೨ ಏಪ್ರಿಲ್ ಎರಡನೆಯ ದಿನಾಂಕ ೧೯೬೯ ರಲ್ಲಿ ನವದೆಹಲಿ, ಭಾರತ),[] ದಲ್ಲಿ ಜನಿಸಿದರು. ಅಜಯ್ ದೇವ್ ಗನ್ ಎಂದೇ ಹಿಂದೆ ಖ್ಯಾತರಾದ ಇವರು ಭಾರತದ ಒಬ್ಬ ಪ್ರಮುಖ ಚಿತ್ರನಟ, ನಿರ್ದೇಶಕ, ಹಾಗೂ ನಿರ್ಮಾಪಕರಾಗಿದ್ದಾರೆ.[] ಅವರು ಫೂಲ್ ಔರ್ ಕಾಂಟೆ ಎಂಬ ಚಿತ್ರದ ಮೂಲಕ, ೧೯೯೧ರಲ್ಲಿ, ಚಲನಚಿತ್ರಜಗತ್ತಿಗೆ ಪಾದಾರ್ಪಣೆ ಮಾಡಿದರು ಮತ್ತು ಚೊಚ್ಚಲ ಚಿತ್ರದಲ್ಲಿನ ನಟನೆಗೆ ನೀಡುವ ಫಿಲ್ಮ್ ಫೇರ್ ಶ್ರೇಷ್ಠನಟ ಪ್ರಶಸ್ತಿಯನ್ನು ಈ ಚಿತ್ರದಲ್ಲಿನ ಅಭಿನಯದ ಮೂಲಕ ತಮ್ಮದಾಗಿಸಿಕೊಂಡರು. ಅವರು ನಂತರ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರು; ಅವುಗಳ ಪೈಕಿ ಕೆಲವೆಂದರೆ, ಜಿಗರ್ (೧೯೯೨), ದಿಲ್ ವಾಲೆ (೧೯೯೪), ಸುಹಾಗ್ (೧೯೯೪), ನಾಜಯಾಝ್ (೧೯೯೫), ದಿಲ್ ಜಲೆ (೧೯೯೬) ಮತ್ತು ಇಷ್ಕ್ (೧೯೯೭). In ೧೯೯೯ರಲ್ಲಿ, ದೇವ್ ಗನ್ ಮಹೇಶ್ ಭಟ್ ರ ನಾಟಕ ಝಖ್ಮ್ ನಲ್ಲಿನ ಅಭಿನಯಕ್ಕಾಗಿ ತಮ್ಮ ಪ್ರಥಮ ರಾಷ್ಟ್ರೀಯ ಚಲನಚಿತ್ರದ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಅದೇ ದಶಕದಲ್ಲಿ ಅವರು ನಟಿಸಿದ ಚಿತ್ರಗಳ ಪೈಕಿ ಕೆಲವೆಂದರೆ ಪ್ಯಾರ್ ತೋ ಹೋನಾ ಹೀ ಥಾ , ಹಮ್ ದಿಲ್ ದೇ ಚುಕೇ ಸನಮ್ ಮತ್ತು ಕಚ್ಚೇ ದಾಗೇ . ೨೦೦೦ದ ದಶಕದ ಆರಂಭದಲ್ಲಿ ಅವರು ನಟಿಸಿದ ಚಿತ್ರಗಳ ಪೈಕಿ ಕೆಲವೆಂದರೆ ಲಜ್ಜಾ (೨೦೦೧) ಮತ್ತು ಕಂಪನಿ (೨೦೦೨). ೨೦೦೩ರಲ್ಲಿ ಅವರು ತಮ್ಮ ಎರಡನೆಯ ಫಿಲ್ಮ್ ಫೇರ್ ರಾಷ್ಟ್ರೀಯ ಚಲನಚಿತ್ರದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಭಗತ್ ಸಿಂಘ್ ರ ಪಾತ್ರದ ಅಮೋಘ ಅಭಿನಯದ ಮೂಲಕ ಪಡೆದರು. ರಾಜ್ ಕುಮಾರ್ ಸಂತೋಷಿಯವರು ನಿರ್ಮಾಪಕರಾಗಿ ತೆಗೆದ ಜೀವನಚಿತ್ರಣವಾದ ದ ಲೆಜೆಂಡ್ ಆಫ್ ಭಗತ್ ಸಿಂಘ್ ನ ಪಾತ್ರಕ್ಕೆ ಅವರಿಗೆ ಈ ಪ್ರಶಸ್ತಿ ಲಭಿಸಿತು. ಅವರ ಯಶಸ್ವೀ ಚಿತ್ರಗಳ ಪೈಕಿ ಪ್ರಮುಖವಾದುವೆಂದರೆ ರೈನ್ ಕೋಟ್ (೨೦೦೪), ಯುವಾ (೨೦೦೪) ಮತ್ತು ಓಂಕಾರ (೨೦೦೬), ಗೋಲ್ ಮಾಲ್ (೨೦೦೬), ಗೋಲ್ ಮಾಲ್ ರಿಟರ್ನ್ಸ್ (೨೦೦೮), 'All The Best: Fun Begins (೨೦೦೯) ೨೦೦೮ರಲ್ಲಿ ಅವರು ನಿರ್ದೇಶನಕ್ಷೇತ್ರಕ್ಕೂ ಕಾಲಿಟ್ಟು ಯೂ, ಮಿ, ಔರ್ ಹಮ್ ಚಿತ್ರವನ್ನು ನಿರ್ದೇಶಿಸಿದರು;ಈ ಚಿತ್ರದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು ಹಾಗೂ ಅವರೊಂದಿಗೆ ನಾಯಕಿಯಾಗಿ ಅವರ ಪತ್ನಿ ನಟಿ ಕಾಜೋಲ್ ಅಭಿನಯಿಸಿದರು.

ಜೀವನ ಚರಿತ್ರೆ

[ಬದಲಾಯಿಸಿ]

ದೇವ್ ಗನ್ ಮತ್ತು ಅವರ ಕುಟುಂಬದವರು ಮೂಲತಃ ಪಂಜಾಬ್ ನವರು. ಅಚರ ತಂದೆ, ವೀರೂ ದೇವ್ ಗನ್, ಒಬ್ಬ ಸ್ಟಂಟ್ ನಿರ್ದೇಶಕರು ಹಾಗೂ ಅವರ ತಾಯಿ ವೀಣಾ ದೇವ್ ಗನ್ ಒಂದು ಚಿತ್ರವನ್ನು ನಿರ್ಮಿಸಿದ್ದಾರೆ. ಅವರ ಸಹೋದರರಾದ ಅನೀಲ್ ದೇವ್ ಗನ್ ಒಬ್ಬ ಹಿಂದಿ ಚಿತ್ರ ನಿರ್ದೇಶಕರಾಗಿದ್ದಾರೆ. ಅವರು ಜುಹುವಿನಲ್ಲಿರುವ ಬಾಪು ಸ್ಕೂಲ್ ನಲ್ಲಿ ವ್ಯಾಸಂಗ ಮಾಡಿದರು ಮತ್ತು ಮಿಥಾಬಾಯ್ ಕಾಲೇಜಿನಲ್ಲಿ ಪದವಿ ಪೂರೈಸಿದರು. ಫೆಬ್ರವರಿ ೨೩, ೧೯೯೯ರಂದು ಅವರು ಚಲನಚಿತ್ರ ತಾರೆ ಕಾಜಲ್ ರನ್ನು ವಿವಾಹವಾದರು. ಪತ್ರಿಕೆಯೊಂದು ಅವರು ಮದುವೆಯು ವಾಯುವ್ಯ ಬಾಂಬೆಯಲ್ಲಿರುವ ಅಂಧೇರಿಯಲ್ಲಿನ ಗುರುದ್ವಾರದಲ್ಲಿ ನಡೆಯಲಿದೆ ಎಂದು ಬಹಿರಂಗಬಡಿಸಿಬಿಟ್ಟ ಪರಿಣಾಮವಾಗಿ ಅವರು ತಮ್ಮ ಮದುವೆಯನ್ನು ತಮ್ಮ ಮನೆಯಾದ ದೇವ್ ಗನ್ ನಿವಾಸ್ ಗೆ ಬದಲಾಯಿಸಬೇಕಾಯಿತು.[]ಟೆಂಪ್ಲೇಟು:Irrel ಈ ದಂಪತಿಗಳಿಗೆ ಎರಡು ಮಕ್ಕಳು; ಮಗಳು ನ್ಯಾಸಾ ೨೦೦೩ರ ಏಪ್ರಿಲ್ ನಲ್ಲಿ ಜನಿಸಿದರೆ ಮಗ ಯುಗ್ ೨೦೧೦ರ ಸೆಪ್ಟೆಂಬರ್ ನಲ್ಲಿ ಜನಿಸಿದನು.[] ೨೦೦೯ರ ಆಗಸ್ಟ್ ನಲ್ಲಿ ದೇವ್ ಗನ್ ತಮ್ಮ ಹೆಸರಿನ ಅಂತ್ಯಭಾಗವಾದ ಗನ್ ನಲ್ಲಿನ ಇಂಗ್ಲಿಷ್ ಅಕ್ಷರ ಎ ಅನ್ನು ತೆಗೆದುಹಾಕಿದರು.[][] ಚಿತ್ರಗಳ ಶೂಟಿಂಗ್ ಗೆ, ಚಿತ್ರಪ್ರಚಾರಸಂಬಂಧಿತ ಕಾರ್ಯಗಳಿಗೆ ಮತ್ತು ವೈಯಕ್ತಿಕ ಪ್ರವಾಸಿಗಳಿಗೆಂದು ಒಂದು ಖಾಸಗಿ ವಿಮಾನವನ್ನು ಹೊಂದಿದ ಮೊದಲ ಬಾಲಿವುಡ್ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.[]

ವೃತ್ತಿಜೀವನ

[ಬದಲಾಯಿಸಿ]

ಅಜಯ್ ದೇವ್ ಗನ್ ಫೂಲ್ ಔರ್ ಕಾಂಟೆ (೧೯೯೧)ಚಿತ್ರದ ಮೂಲಕ ಬಾಲಿವುಡ್ ಜಗತ್ತಿಗೆ ಪಾದಾರ್ಪಣೆ ಮಾಡಿದರು ಹಾಗೂ ಆ ಚಿತ್ರವು ೯,೫೦,೦೦,೦೦೦[] ರೂಗಳನ್ನು ಗಳಿಸಿದ್ದಲ್ಲದೆ ಅವರಿಗೆ a ಫಿಲ್ಮ್ ಫೇರ್ ಶ್ರೇಷ್ಠ ಚೊಚ್ಚಲ ಅಭಿನಯ[] ಪ್ರಶಸ್ತಿಯನ್ನೂ ತಂದುಕೊಟ್ಟಿತು. ೧೯೯೨ರಲ್ಲಿ ಅವರು ಜಿಗರ್ ಎಂಬ ಚಿತ್ರದಲ್ಲಿ ಕರಿಷ್ಮಾ ಕಪೂರ್ ರೊಡನೆ ನಟಿಸಿದರೂ ಮತ್ತು ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸಂಪಾದಿಸಿದ ಹಣ ರೂ. ೭,೦೦,೦೦,೦೦೦.[೧೦] ೧೯೯೩ರಲ್ಲಿ ಅವರು ನಿರ್ದೇಶಕ ದೀಪಕ್ ಬಹ್ರಿ/೦}ಯವರ ನಿರ್ದೇಶನದಲ್ಲಿ ಸಾಹಸಮಯ ಚಿತ್ರ ಯವರ ನಿರ್ದೇಶನದಲ್ಲಿ ಸಾಹಸಮಯ ಚಿತ್ರ {೧)ಏಕ್ ಹೀ ರಾಸ್ತಾ{/1}ದಲ್ಲಿ ನಟಿಸಿದರು[೧೧] ಮತ್ತು ದೀಪಕ್ ಪವಾರ್ ನಿರ್ದೇಶನದಲ್ಲಿ ಸಾಹಸಮಯ ಚಿತ್ರ ಪ್ಲಾಟ್ ಫಾರ್ಮ್ ನಲ್ಲಿ ಅಭಿನಯಿಸಿದರು. ೧೯೯೪ರಲ್ಲಿ ದೇವ್ ಗನ್ ಹ್ಯಾರಿ ಬವೇಜಾರವರ ದಿಲ್ ವಾಲೆ , ಮತ್ತು ಸುಹಾಗ್ ಹಾಗೂ ವಿಜಯ್ ಪಥ್" ಗಳಲ್ಲಿ ನಟಿಸಿದರು.[೧೨] ೧೯೯೫ರಲ್ಲಿ ಅವರು ಮಹೇಶ್ ಭಟ್ ರ "ನಾಜವಾಝ್" ನಲ್ಲಿ ಅಭಿನಯಿಸಿದ ಪಾತ್ರವು ಅವರ ಹೆಸರನ್ನು ಫೀಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿಗೆ ಸೂಚಿಸುವ ಮಟ್ಟದ್ದಾಗಿತ್ತು.[೧೩] ೧೯೯೬ರಲ್ಲಿ ಅವರು ನಟಿಸಿದ ಚಿತ್ರ "ದಿಲ್ ಜಲೆ".[೧೪] ೧೯೯೭ರಲ್ಲಿ ದೇವ್ ಗನ್ ಇಷ್ಕ್ ನಂತಹ ಹಾಸ್ಯಪ್ರಧಾನ ಚಿತ್ರಗಳಲ್ಲಿ ಅಭಿನಯಿಸಲು ಆರಂಭಿಸಿದರು.[೧೫] ೧೯೯೮ರಲ್ಲಿ ಅವರು "ಮೇಜರ್ ಸಾಬ್" ಚಿತ್ರದಲ್ಲಿ ಮಿಂಚಿದರು. ಅದೇ ವರ್ಷ ಻ವರು ಪ್ಯಾರ್ ತೋ ಹೋನಾ ಹೀ ಥಾ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರು. ನಂತರ ಅವರು ಮಹೇಶ್ ಭಟ್ ರ ಝಖ್ಮ್ ನಲ್ಲಿ ಅಭಿನಯಿಸಿದರು. ಅವರು ತಮ್ಮ ನಟನಾಕೌಶಲದಿಂದ ಹಲವಾರು ಪ್ರಶಸ್ತಿಗಳನ್ನು ಗೆದ್ದರು; ಅದರಲ್ಲಿ ರಾಷ್ಟ್ರೀಯ ಚಲನಚಿತ್ರದ ಶ್ರೇಷ್ಠ ನಟ ಪ್ರಶಸ್ತಿ ಮತ್ತು ಶ್ರೇಷ್ಠ ನಟನೆಗೆ ಸ್ಟಾರ್ ಸ್ಕ್ರೀನ್ ಪ್ರಶಸ್ತಿಗಳೂ ಸೇರಿವೆ [ಸೂಕ್ತ ಉಲ್ಲೇಖನ ಬೇಕು][೧೬] ದೇವ್ ಗನ್ ೧೯೯೯ರಲ್ಲಿ ನಟಿಸಿದ ಚಿತ್ರಗಳ ಪೈಕಿ ಸಂಜಯ್ ಲೀಆ ಬನ್ಸಾಲಿಯವರ ಚಿತ್ರ ಹಮ್ ದಿಲ್ ದೇ ಚುಕೇ ಸನಮ್ ಹಾಗೂ "ಹಿಂದುಸ್ತಾನ್ ಕೀ ಕಸಮ್" ಮತ್ತು "ಕಚ್ಚೇ ಧಾಗೆ"ಗಳು ಸೇರಿವೆ.[೧೭] ೨೦೦೦ದಲ್ಲಿ ಅವರು ಹ್ಯಾರಿ ಬವೇಜಾರ "ದೀವಾನೇ"ಯಲ್ಲಿ ಅಭಿನಯಿಸಿದರು. ಈ ಚಿತ್ರದಲ್ಲಿ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡರು - ಒಬ್ಬ ಕಳ್ಳ ಮತ್ತು ಒಬ್ಬ ಪೊಲೀಸ್ ಅಧಿಕಾರಿಯ ಪಾತ್ರಗಳು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ನೆಲಕಚ್ಚಿತು.[೧೮] ಅದೇ ವರ್ಷ ಅವರು ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯೇ ತಯಾರಿಸಿದ "ರಾಜು ಚಾಚಾ" ಚಿತ್ರದಲ್ಲಿ ತನ್ನ ಪತ್ನಿ ಕಾಜೋಲ್l ರೊಡನೆ ಅಭಿನಯಿಸಿದರು. ನಿರ್ಮಾಣದ ದುಬಾರಿ ವೆಚ್ಚದ ಕಾರಣಗಳಿಂದ ಈ ಚಿತ್ರವೂ ನಿರ್ಮಾಪಕರ ಕೈ ಕಚ್ಚಿತು.[೧೮] ೨೦೦೧ರಲ್ಲಿ ಅವರು "ಯೇ ರಾಸ್ತೇ ಹೈ ಪ್ಯಾರ್ ಕೇ" ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಮತ್ತು ಪ್ರೀತಿ ಝಿಂಟಾರೊಡನೆ ಅಭಿನಯಿಸಿದರು.ಈ ಚಿತ್ರವೂ ಸಹ ಗಳಿಕೆಯಲ್ಲಿ ಸುಮಾರು ಎನ್ನಿಸಿತಷ್ಟೆ.[೧೯] ಅವರ ನಂತರದ ಚಿತ್ರ"ಲಜ್ಜಾ" ದಲ್ಲಿ ಮನೀಷಾ ಕೊಯಿರಾಲಾ, ಮಾಧುರಿ ದೀಕ್ಷಿತ್, ಜಾಕಿ ಷ್ರಾಫ್f ಮತ್ತು ಅನಿಲ್ ಕಪೂರ್ ಇದ್ದರು;ಈ ಚಿತ್ರದಲ್ಲಿನ ಅವರ ಅಭಿನಯ ಅವರಿಗೆ "ಫಿಲ್ಮ್ ಫೇರ್ ಶ್ರೇಷ್ಠ ಪೋಷಕ ನಟ ಪ್ರಶಸ್ತಿ"ಯನ್ನು ತಂದುಕೊಟ್ಟಿತು. ಆದರೆ ಗಳಿಕೆಯಲ್ಲಿ ಈ ಚಿತ್ರವೂ ಎಣಿಸಿದಷ್ಟು ಫಲಕಾರಿಯಾಗಲಿಲ್ಲ.[೧೯] ನಂತರ ಅವರು ಮಹೇಶ್ ಮಂಜ್ರೇಕರ್ ರ "ತೇರಾ ಮೇರಾ ಸಾಥ್ ರಹೇ"ಯಲ್ಲಿ ಅಭಿನಯಿಸಿದರು. ೨೦೦೨ರಲ್ಲಿ ಅವರು ರಾಂ ಗೋಪಾಲ್ ವರ್ಮ ರಮುಂಬಯಿ ಭೂಗತ ಜಗ "ದ ಕಾಲ್ಪನಿಕ ಚಿತ್ರಣವಾದಕಂಪನಿ"(ಚಿತ್ರ)ದಲ್ಲಿ ಕಾಣಿಸಿಕೊಂಡರು. ಆ ಚಿತ್ರದಲ್ಲಿನ ಅವರ "ಮಲ್ಲಿಕ್" ಪಾತ್ರಕ್ಕೆ ಅವರ ಹೆಸರು "ಫಿಲ್ಮ್ ಫೇರ್ ಶ್ರೇಷ್ಠ ನಟ ಪ್ರಶಸ್ತಿ"ಗೆ ಸೂಚಿತವಾಯಿತು ಹಾಗೂ ಅವರು "ಫಿಲ್ಮ್ ಫೇರ್ ನ ಶ್ರೇಷ್ಠ ಅಭಿನಯಕ್ಕಾಗಿ ನೀಡುವ ಪ್ರಶಸ್ತಿ"ಯನ್ನು ಪಡೆದರು.[ಸೂಕ್ತ ಉಲ್ಲೇಖನ ಬೇಕು] ಇದು ಗಳಿಕೆಯಲ್ಲೂ ಜಯ ಸಾಧಿಸಿತು.[clarification needed][೨೦] ಮುಂದಿನ ಚಿತ್ರ "ಹಮ್ ಕಿಸೀ ಸೇ ಕಮ್ ನಹೀ"ಯಲ್ಲಿ ಅವರು ಅಮಿತಾಭ್ ಬಚ್ಚನ್, ಸಂಜಯ್ ದತ್ ಮತ್ತು ಐಶ್ವರ್ಯ ರೈಯೊಡನೆ ಅಭಿನಯಿಸಿದರು.[೨೦] ಅದೇ ವರ್ಷ ಅವರು ರಾಜ್ ಕುಮಾರ್ ಸಂತೋಷಿನಿರ್ಮಿಸಿದ ವ್ಯಕ್ತಿಯ ಕಥೆ ಹೊಂದಿದ ಚಿತ್ರ "ದ ಲೆಜೆಂಡ್ ಆಫ್ ಭಗತ್ ಸಿಂಘ್"ನಲ್ಲಿ ಅಭಿನಯಿಸಿದರು.[೨೧] ಇದೂ ಗಳಿಕೆಯಲ್ಲಿ ಸೋತಿತು,[clarification needed].[೨೦] ಆದರೆ ಅವರು "ಫಿಲ್ಮ್ ಫೇರ್ ವಿಮರ್ಶಕರ ಶ್ರೇಷ್ಠ ಅಭಿನಯ ಪ್ರಶಸ್ತಿ" ಹಾಗೂ ತಮ್ಮ ಜೀವನದ ಎರಡನೆಯ "ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಸ್ರೇಷ್ಠ ನಟ" ಪ್ರಶಸ್ತಿಗಳನ್ನು ತಮ್ಮ ನಟನಾಕೌಶಲ್ಯದಿಂದ ಗೆದ್ದುಕೊಂಡರು. ಅವರು ನಂತರ ಅನೀಝ್ ಬಾಝ್ಮೀಯವರ "ದೀವಾನ್ಗೀ"ಯಲ್ಲಿ ಅಭಿನಯಿಸಿದರು;ಈ ಚಿತ್ರವು ಭಾಗಶಃ ವಿಲಿಯಂ ಡೀಹ್ಲ್ ರ ಆಂಗ್ಲಭಾಷಾ ಕಾದಂಬರಿ "ಪ್ರೈಮಲ್ ಫಿಯರ್"ನಿಂದ ಪ್ರೇರಿತವಾಗಿತ್ತು. ಅವರು ತಮ್ಮ ನಕಾರಾತ್ಮಕ ಪಾತ್ರಗಳಿಗೂ ಹಲವಾರು ಪ್ರಶಸ್ತಿಗಳನ್ನು ಪಡೆದರು; ಅವುಗಳ ಪೈಕಿ "ಪಿಲ್ಮ್ ಫೇರ್ ಸ್ರೇಷ್ಠ ಖಳನಾಯಕ ಪ್ರಶಸ್ತಿ", "ಸ್ಟಾರ್ ಸ್ಕ್ರೀನ್ ಶ್ರೇಷ್ಠ ಖಳನಾಯಕ ಪ್ರಶಸ್ತಿ" ಮತ್ತು "ನಕಾರಾತ್ಮಕ ಪಾತ್ರಗಳಲ್ಲಿ ಶ್ರೇಷ್ಠ ಅಭಿನಯಕ್ಕಾಗಿ ಝೀ ಸಿನೇ ಪ್ರಶಸ್ತಿ"ಗಳೂ ಸೇರಿವೆ. ಇದರ ಗಳಿಕೆಯೂ ತಕ್ಕ ಮಟ್ಟದ್ದಾಗಿತ್ತಷ್ಟೆ.[೨೦] ೨೦೦೩ರಲ್ಲಿ ಅವರುರಾಮ್ ಗೋಪಾಲ್ ವರ್ಮರ "ಭೂತ್" ನಲ್ಲಿ ಊರ್ಮಿಳಾ ಮತೋಂದ್ಕರ್ ರೊಡನೆ ನಟಿಸಿದರು, ಈ ಚಿತ್ರವು ವಿಮರ್ಶಕರ ಮೆಚ್ಚಿಗೆ ಪಡೆಯಿತು. ಗಲ್ಲಾಪೆಟ್ಟಿಗೆಯಲ್ಲೂ ಇದು ಗೆದ್ದುಕೊಂಡಿತು.[೨೨] ಅವರು ನಂತರ ಸಾಹಸಮಯ ಕೌತುಕಭರಿತ ಚಿತ್ರ "Qayamat: City Under Threat" ದಲ್ಲಿ ತಮ್ಮ ಚೊಚ್ಚಲ ಚಿತ್ತದಲ್ಲಿ ಅಭಿನಯಿಸುತ್ತಿದ್ದ ನೆಹಾ ಧುಪಯಾರೊಡನೆ ನಟಿಸಿದರು, ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶ ಗಳಿಸಿತು,[೨೨] ಇದಕ್ಕೆ ಕಾರಣ ಶ್ರೇಷ್ಠ ತಾಂತ್ರಿಕ ಉಪಕರಣಗಳು ಹಾಗೂ ಚೆನ್ನಾಗಿ ಚಿತ್ರಿಸಿದ ಸಾಹಸ ದೃಶ್ಯಗಳು. ಅವರು ನಂತರ ಮಿಲನ್ ಲೂಥ್ರಿಯಾರ ಪ್ರಣಯಭರಿತ ಚಿತ್ರ "ೋರಿ ಚೋರಿ"ಯಲ್ಲಿ (೨}ರಾಣಿ ಮುಖರ್ಜಿ ಮತ್ತು ಸೋನಾಲಿ ಬೇಂದ್ರೆಯೊಡನೆ ನಟಿಸಿದರು, ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಸೋತಿತು.[೨೨] ಅದೇ ವರ್ಷ ಅವರು ಪ್ರಕಾಶ್ ಝಾರ ಚಿತ್ರ "ಗಂಗಾಜಲ್"ನಲ್ಲಿ ಕಾಣಿಸಿಕೊಂಡರು ಮತ್ತು ಅವರ ಹೆಸರನ್ನು "ಫಿಲ್ಮ್ ಫೇರ್ ಶ್ರೇಷ್ಠ ನಟ ಪ್ರಶಸ್ತಿ"ಗಾಗಿ ಸೂಚಿಸಲಾಯಿತು. ಅವರು ಮುಂದಿನ ಚಿತ್ರ ರೋಹಿತ್ ಶೆಟ್ಟಿಯವರ ಚೊಚ್ಚಲ ನಿರ್ದೇಶನದ "ಜಮೀನ್" ,[೨೩] ೧೬,೦೦,೦೦,೦೦೦ ಗಳಿಸಿತು.[೨೨] ನಂತರ ಅವರು ಜೆ.ಪಿ.ದತ್ತರ ಸಮರ ಚಿತ್ರ "LOC ಕಾರ್ಗಿಲ್"ನಲ್ಲಿ ಅಭಿನಯಿಸಿದರು.

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

[ಬದಲಾಯಿಸಿ]

ಇತರ ಪ್ರಶಸ್ತಿಗಳು ಹಾಗೂ ನಾಮನಿರ್ದೇಶನಗಳ ಪೈಕಿ ದೇವ್ ಗನ್ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಮೂರು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
Year (ಚಿತ್ರೀಕರಣ) ಪಾತ್ರ ಪ್ರಶಸ್ತಿಗಳು
೧೯೯೧ ಫೂಲ್ ಔರ್ ಕಾಂಟೆ ಅಜಯ್‌ ವಿಜೇತೆ, ಫಿಲ್ಮ್‌ಫೇರ್‌ ಅತ್ಯುತ್ತಮ ಆರಂಭಿಕ ನಟಿ ಪ್ರಶಸ್ತಿ,
೧೯೯೨ ಜಿಗರ್ ರಾಜ್ "ರಾಜು" ವರ್ಮ
೧೯೯೩ ದಿಲ್ ಹೈ ಬೇತಾಬ್ ಅಜಯ್‌
ದಿವ್ಯ ಶಕ್ತಿ ಪ್ರಶಾಂತ್ ವರ್ಮ
ಪ್ಲಾಟ್ ಫಾರ್ಮ್ ರಾಜು
ಸಂಗ್ರಾಮ್‌ ರಾಜ ಎಸ್. ಸಿಂಗ್

ಕನ್ವರ್

ಶಕ್ತಿಮಾನ್ ಅಮರ್‌
ಏಕ್ ಹಿ ರಾಸ್ತಾ ಕರನ್ ಸಿಂಘ್
ಬೇದರ್ದಿ ವಿಜಯ್ ಸಕ್ಸೇನಾ
ಧನ್ ವಾನ್ ಕಾಶಿನಾಥ್
೧೯೯೪ ದಿಲ್ವಾಲೆ ಅರುಣ್ ಸಕ್ಸೇನಾ
ಕಾನೂನ್ ವಿಶಾಲ್
ವಿಜಯ್ ಪಥ್ ಕರಣ್
ಸುಹಾಗ್ ಅಜಯ್ ಆರ್. ಶರ್ಮ/ಮಲ್ಹೋತ್ರ
(೧೯೯೫). ನಾಜಯಾಝ್ ಜೈ ಭಕ್ಷಿ ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
ಹಲ್‌ಚಲ್‌‌ ದೇವ
ಗುಂಡಾರಾಜ್ ಅಜಯ್ ಚವ್ಹಾಣ್
ಹಕೀಕತ್‌‌ ಶಿವ/ಅಜಯ್
೧೯೯೬ ಜಂಗ್ ಅಜಯ್ ಬಹದ್ದೂರ್

ಸಕ್ಸೇನಾ

ಜಾನ್ ಕರಣ್
ದಿಲ್ ಜಲೆ ಶ್ಯಾಮ್‌‌
೧೯೯೭ ಇತಿಹಾಸ್ ಕರಣ್
ಇಷ್ಕ್‌ ಅಜಯ್ ರೈ
೧೯೯೮ ಮೇಜರ್ ಸಾಬ್ ವೀರೇಂದ್ರ ಪ್ರತಾಪ್ ಸಿಂಘ್
ಪ್ಯಾರ್ ತೋ ಹೋನಾ ಹೀ ಥಾ ಶೇಖರ್
ಸರ್‌ ಉಟಾ ಕೆ ಜಿಯೊ ವಿಶೇಷ ಪಾತ್ರ
ಝಖ್ಮ್ ಅಜಯ್ ಆರ್. ದೇಸಾಯ್ ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
ವಿಜೇತ: ಉತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
೧೯೯೯ ದಿಲ್ ಕ್ಯಾ ಕರೆ ಆನಂದ್ ಕಿಶೋರ್
ಕಚ್ಚೇ ಧಾಗೆ ಅಫ್ತಾಬ್
ಹೋಗೀ ಪ್ಯಾರ್ ಕೀ ಜೀತ್ ರಾಜು
ಹಮ್‌ ದಿಲ್‌ ದೆ ಚುಕೆ ಸನಮ್‌ ವನ್ ರಾಜ್ ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
ಹಿಂದೂಸ್ತಾನ್‌ ಕಿ ಕಸಮ್‌‌ ಅಜಯ್/ತೌಹೀದ್
ಗೈರ್ ವಿಜಯ್ ಕುಮಾರ್/ದೇವ್
ತಕ್ಷಕ್ ಇಶಾನ್ ಸಿಂಘ್
೨೦೦೦ ದೀವಾನೆ ವಿಶಾಲ್/ಅರುಣ್
ರಾಜು ಚಾಚಾ ಶೇಖರ್/ರಾಜು ಚಾಚಾ
೨೦೦೧ ಯೇ ರಾಸ್ತೇ ಹೈ ಪ್ಯಾರ್ ಕೇ ವಿಕ್ಕಿ/ರೋಹಿತ್ ವರ್ಮ
ಲಜ್ಜಾ ಬುಲ್ವಾ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ನಾಮಕರಣ
ತೇರಾ ನಾಮ್ ಸಾತ್ ರಹೇ ರಾಜ್ ದೀಕ್ಷಿತ್
೨೦೦೨ ಕಂಪನಿ ಮಲ್ಲಿಕ್ ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
ಹಮ್ ಕಿಸೀ ಸೇ ಕಮ್ ನಹೀ ರಾಜ
ದ ಲೆಜೆಂಡ್ ಆಫ್ ಭಗತ್ ಸಿಂಘ್ ಸರ್ದಾರ್ ಭಗತ್ ಸಿಂಘ್ ವಿಜೇತ, ಅತ್ಯುತ್ತಮ ನಟನೆಗೋಸ್ಕರ ಫಿಲ್ಮ್‌ಫೇರ್‌ ಕ್ರಿಟಿಕ್ಸ್‌ ಪ್ರಶಸ್ತಿ
ವಿಜೇತ: ಉತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
ದೀವಾನಗಿ ತರಂಗ್ ಭರಧ್ವಾಜ್ ವಿಜೇತೆ, ಫಿಲ್ಮ್‌ಫೇರ್‌ ಅತ್ಯುತ್ತಮ ಖಳನಾಯಕಿ ಪ್ರಶಸ್ತಿ,
೨೦೦೩ ಭೂತ್ ವಿಶಾಲ್
Qayamat: City Under Threat ರಚಿತ್
ಚೋರಿ ಚೋರಿ ರಣ್ ಬೀರ್ ಮಲ್ಹೋತ್ರ
ಗಂಗಾಜಲ್ ಎಸ್.ಪಿ. ಅಮಿತ್ ಕುಮಾರ್ ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
ಪರ್ವಾನಾ ಪರ್ವಾನಾ
ಝಮೀನ್ ಕರ್ನಲ್ ರಣವೀರ್ ರಣಾವತ್
LOC ಕಾರ್ಗಿಲ್ ಕ್ಯಾಪ್ಟನ್ ಮನೋಜ್ ಪಾಂಡೆ
೨೦೦೪ ಖಾಕೀ ಯಶ್ವಂತ್ ಅಂಗ್ರೆ ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ಖಳನಟ ಪ್ರಶಸ್ತಿ
ಮಾಸ್ತಿ ಇಂಸ್ಪೆಕ್ಟರ್ ಸಿಖಂದರ್
ಯುವಾ ಮೈಕಲ್ ಮುಖರ್ಜಿ
Taarzan: The Wonder Car ದೇವೆನ್ ಚೌಧರಿ (ವಿಶೇಷ ಪಾತ್ರದಲ್ಲಿ)
ರೈನ್ ಕೋಟ್ ಮನೋಜ್
೨೦೦೫ ಇನ್ಸಾನ್ ಅಜಿತ್ ರಾಥೋಡ್
ಬ್ಲ್ಯಾಕ್ಮೇಲ್ ಶೇಖರ್ ಮೋಹನ್
ಝಮೀರ್ ಸೂರಜ್ ಚೌಹಾಣ್
ಟ್ಯಾಂಗೋ ಚಾರ್ಲೀ ಹವಾಲ್ದಾರ್ ಮಹಮ್ಮದ್ ಆಲಿ
ಕಾಲ್‌ ಕಾಳಿ ಪ್ರತಾಪ್ ಸಿಂಘ್ ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ಖಳನಟ ಪ್ರಶಸ್ತಿ
ಮೈ ಐಸಾ ಹೀ ಹೂ ನೀಲ್
ಅಪಹರನ್ ಅಜಯ್ ಶಾಸ್ತ್ರಿ ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
ಶಿಕಾರ್ ಗೌರವ್ ಗುಪ್ತ
೨೦೦೬ ಗೋಲ್ ಮಾಲ್ ಗೋಪಾಲ್‌
ಓಂಕಾರ ಓಂಕಾರ "ಓಮಿ" ಶುಕ್ಲ ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
೨೦೦೭ ಕ್ಯಾಶ್ ಕರಣ್/ಡಾಕ್
ರಾಮ್ ಗೋಪಾಲ್ ವರ್ಮಾ ಕಿ ಆಗ್ ಹೀರೇಂದ್ರ ಚವಾಣ್ (ಹೀರೂ)
೨೦೦೮ ಹಲ್ಲಾ ಬೋಲ್ ಅಷ್ಫಖ್ ಖಾನ್/ಸಮೀರ್ ಖಾನ್
ಸಂಡೇ ACP ರಾಜ್ ವೀರ್ ರಾಂಧವ
ಯು, ಮಿ ಔರ್ ಹಮ್ ಅಜಯ್‌
ಮೆಹಬೂಬ ಕರಣ್
ಗೋಲ್ ಮಾಲ್ ರಿಟರ್ನ್ಸ್ ಗೋಪಾಲ್‌
೨೦೦೯ All The Best: Fun Begins ಪ್ರೇಮ್ ಛೋಪ್ರಾ
ಲಂಡನ್‌ ಡ್ರಿಮ್ಸ್‌ ಅರ್ಜುನ್
೨೦೧೦ ಅತಿಥಿ ತುಮ್ ಕಬ್ ಜಾವೋಗೆ ಪುನೀತ್
ತೀನ್ ಪಟ್ಟಿ ಸನ್ನಿ (ವಿಶೇಷ ಪಾತ್ರದಲ್ಲಿ)
ರಾಜ್ ನೀತಿ ಸೂರಜ್‌‌‌
ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬಯಿ ಸುಲ್ತಾನ್ ಮಿರ್ಝಾ
ಆಕ್ರೋಶ್ ಪ್ರತಾಪ್ ಕುಮಾರ್
ಗೋಲ್ ಮಾಲ್ ೩ ಗೋಪಾಲ್‌
ಟೂನ್ ಪುರ್ ಕಾ ಸೂಪರ್ ಹೀರೋ ಆದಿತ್ಯ ಡಿಸೆಂಬರ್ ೨೪ರಂದು ಬಿಡುಗಡೆಯಾಗಲಿದೆ.
೨೦೧೧ ದಿಲ್ ತೋ ಬಚಾ ಹೈ ಜೀ ನರೇನ್ ಜನವರಿ ೨೮, ೨೦೧೧ರಂದು ಬಿಡುಗಡೆಯಾಗಲಿದೆ[೨೪]
ತೆರ್ಝ್ ಚಿತ್ರೀಕರಣದ ಬಗ್ಗೆ ಹೇಳಿಕೆ ನೀಡಲಾಗಿದೆ
ಸಿಂಗಮ್ ಪ್ರಕಟಿಸಲಾಗಿದೆ- ಈ ಚಿತ್ರವು ಸೂರ್ಯ ಶಿವಕುಮಾರ್ ಅಭಿನಯಿಸಿರುವ ತಮಿಳು ಚಲನಚಿತ್ರ ಸಿಂಗಮ್ ನ ಮರುತಯಾರಿಕೆ

ನಿರ್ಮಾಪಕ

[ಬದಲಾಯಿಸಿ]
Year (ಚಿತ್ರೀಕರಣ) ಇತರ ಟಿಪ್ಪಣಿಗಳು
೨೦೦೦ ರಾಜು ಚಾಚಾ
೨೦೦೮ ಯು, ಮೆ ಔರ್ ಹಮ್
೨೦೦೯ All The Best: Fun Begins

ನಿರ್ದೇಶಕಿ

[ಬದಲಾಯಿಸಿ]
Year (ಚಿತ್ರೀಕರಣ) ಇತರ ಟಿಪ್ಪಣಿಗಳು
೨೦೦೮ ಯು, ಮೆ ಔರ್ ಹಮ್

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ "Ajay Devgn turns 41". hindustantimes.com. Archived from the original on 2011-01-27. Retrieved 2011-01-11.
  2. Dubey, Bharati (October 13, 2009). "Kyunki his name is Ajay Devgan". indiatimes.com.
  3. Srinivasan, V S (Frbruary 25th 1999). "Quietly were they wed". Rediff on the net. p. 1. Archived from the original on 4 ಫೆಬ್ರವರಿ 2012. Retrieved 21 September 2010. {{cite web}}: Check date values in: |date= (help)CS1 maint: bot: original URL status unknown (link)
  4. The Sunday Tribune. "It takes two tango bonding of the bubbly belle & the brooder". Tribuneindia.com. Retrieved Sunday, April 27, 2003. {{cite web}}: Check date values in: |accessdate= (help)
  5. Sawf News. "Ajay Devgan gets birthday surprise on ROCK N ROLL sets". Sawfnews.com. Archived from the original on 15 ಜುಲೈ 2012. Retrieved 1 April 2008.
  6. Seema Sinha. "xtra-marital affairs happen: Ajay Devgn". Indiatimes.com. Retrieved 21 October 2010.
  7. "Ajay Devgan buys a personal aircraft". The Times Of India. 10 October 2010.
  8. "Box Office 1991". BoxOfficeIndia.Com. Archived from the original on 8 ಜುಲೈ 2012. Retrieved 10 January 2007.
  9. Sampurn Wire. "Ajay Devgan a versatility expert". Thaindian.com. Archived from the original on ಆಗಸ್ಟ್ 27, 2011. Retrieved Monday, June 07, 2010. {{cite web}}: Check date values in: |accessdate= (help)
  10. "Box Office 1992". BoxOfficeIndia.Com. Archived from the original on 4 ಡಿಸೆಂಬರ್ 2012. Retrieved 10 January 2007.
  11. "Box Office 1993". BoxOfficeIndia.Com. Archived from the original on 2012-07-21. Retrieved 2008-04-20.
  12. "Box Office 1994". BoxOfficeIndia.Com. Archived from the original on 7 ಜನವರಿ 2013. Retrieved 20 April 2008.
  13. "Box Office 1995". BoxOfficeIndia.Com. Archived from the original on 7 ಜುಲೈ 2012. Retrieved 10 January 2007.
  14. "Box Office 1996". BoxOfficeIndia.Com. Archived from the original on 21 ಜುಲೈ 2012. Retrieved 10 January 2007.
  15. "Box Office 1997". BoxOfficeIndia.Com. Archived from the original on 21 ಜನವರಿ 2011. Retrieved 10 January 2007.
  16. "Box Office 1998". BoxOfficeIndia.Com. Archived from the original on 29 ಜೂನ್ 2012. Retrieved 10 January 2007.
  17. "Box Office 1999". BoxOfficeIndia.Com. Archived from the original on 25 ಜನವರಿ 2008. Retrieved 10 January 2007.
  18. ೧೮.೦ ೧೮.೧ "Box Office 2000". BoxOfficeIndia.Com. Archived from the original on 20 ಜುಲೈ 2012. Retrieved 10 January 2007.
  19. ೧೯.೦ ೧೯.೧ "Box Office 2001". BoxOfficeIndia.Com. Archived from the original on 17 ಜನವರಿ 2012. Retrieved 10 January 2007.
  20. ೨೦.೦ ೨೦.೧ ೨೦.೨ ೨೦.೩ "Box Office 2002". BoxOfficeIndia.Com. Archived from the original on 17 ಜನವರಿ 2012. Retrieved 10 January 2007.
  21. Arpita Jindani. "Ajay to play coveted shaheed bhagat singh role". Smashits.com. Archived from the original on 2011-07-16. Retrieved 2011-01-11.
  22. ೨೨.೦ ೨೨.೧ ೨೨.೨ ೨೨.೩ "Box Office 2003". BoxOfficeIndia.Com. Archived from the original on 21 ಜನವರಿ 2011. Retrieved 10 January 2007.
  23. Sukanya Verma. "Directed by Rohit Shetty!". Rediff.com. Retrieved September 25, 2003.
  24. "Bhandarkar to release 'Dil Toh Bachcha Hai Ji' in January". Indian Express. Retrieved 2010-11-20.


ಬಾಹ್ಯ ಕೊಂಡಿಗಳು

[ಬದಲಾಯಿಸಿ]