ವಿಷಯಕ್ಕೆ ಹೋಗು

ಅಜಯ್ ಜಡೇಜಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಜಯ್ ಜಡೇಜಾ
೨೦೧೨ರಲ್ಲಿ ಜಡೇಜಾ
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಅಜಯ್‌ಸಿಂಹಜಿ ದೌಲತ್‌ಸಿನ್ಹಜಿ ಜಡೇಜಾ
ಹುಟ್ಟು (1971-02-01) ೧ ಫೆಬ್ರವರಿ ೧೯೭೧ (ವಯಸ್ಸು ೫೩)
ಜಾಮ್‌ನಗರ, ಗುಜರಾತ್, ಭಾರತ
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ ಬೌಲಿಂಗ್
ಸಂಬಂಧಗಳುದೌಲತ್‌ಸಿನ್ಹಜಿ ಜಡೇಜಾ (ತಂದೆ)
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ 196)೧೩ ನವೆಂಬರ್ ೧೯೯೨ v ದಕ್ಷಿಣ ಆಫ್ರಿಕಾ
ಕೊನೆಯ ಟೆಸ್ಟ್೨೬ ಫೆಬ್ರವರಿ ೨೦೦೦ v ದಕ್ಷಿಣ ಆಫ್ರಿಕಾ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೮೫)೨೮ ಫೆಬ್ರವರಿ ೧೯೯೨ v ಶ್ರೀಲಂಕಾ
ಕೊನೆಯ ಅಂ. ಏಕದಿನ​೩ ಜೂನ್ ೨೦೦೦ v ಪಾಕಿಸ್ತಾನ
ಅಂ. ಏಕದಿನ​ ಅಂಗಿ ನಂ.

ಅಜಯ್‌ಸಿಂಹಜಿ ದೌಲತ್‌ಸಿನ್ಹಜಿ ಜಡೇಜಾ[೧] ಇವರನ್ನು ಅಜಯ್ ಜಡೇಜಾ ಎಂದು ಕರೆಯುತ್ತಾರೆ. ಇವರು ಒಬ್ಬ ಭಾರತೀಯ ಮಾಜಿ ವೃತ್ತಿಪರ ಕ್ರಿಕೆಟ್ ಆಟಗಾರ. ಇವರು ೧೯೯೨ ಮತ್ತು ೨೦೦೦ರ ನಡುವಿನ ಏಕದಿನ ಅಂತಾರಾಷ್ಟ್ರೀಯ ಸ್ವರೂಪದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಿಯಮಿತ ಸದಸ್ಯರಾಗಿದ್ದರು. ಭಾರತಕ್ಕಾಗಿ ಇವರು ೧೫ ಟೆಸ್ಟ್ ಪಂದ್ಯಗಳು ಮತ್ತು ೧೯೬ ಓಡಿಐ ಪಂದ್ಯಗಳನ್ನು ಆಡಿದ್ದಾರೆ. ಅವರು ಸಾಂದರ್ಭಿಕವಾಗಿ ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಜಡೇಜಾ ಅಫ್ಘಾನಿಸ್ತಾನದ ಕ್ರಿಕೆಟ್ ತಂಡದೊಂದಿಗೆ ತಂಡದ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ.[೨]

ಅವರು ಕ್ರಿಕೆಟ್ ಆಡುವುದನ್ನು ತೊರೆದ ನಂತರ, ಅವರು ೨೦೧೫ರಲ್ಲಿ ದೆಹಲಿ ಕ್ರಿಕೆಟ್ ತಂಡದ ತರಬೇತುದಾರರಾಗಿ ಕೆಲಸ ಮಾಡಿದರು. ೨೦೦೦ರ ದಶಕದಲ್ಲಿ ಅವರು ಕೆಲವು ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿದರು ಮತ್ತು ನೃತ್ಯ ರಿಯಾಲಿಟಿ ಶೋ ಜಲಕ್ ದಿಖ್ಲಾ ಜಾದಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡರು.

ವೈಯಕ್ತಿಕ ಜೀವನ

[ಬದಲಾಯಿಸಿ]

ಜಡೇಜಾ ಅವರು ಹಿಂದಿನ ನವನಗರದ ರಾಜಮನೆತನದಲ್ಲಿ ಜನಿಸಿದರು.[೩][೪] ಇವರ ಮನೆತನವು ಕ್ರಿಕೆಟ್ ವಂಶಾವಳಿಯಾಗಿದೆ. ಅವರ ಸಂಬಂಧಿಕರು ಕೆ. ಎಸ್. ರಂಜಿತ್‌ಸಿನ್‌ಜಿ ಅವರ ನಂತರ ಇವರ ಹೆಸರನ್ನು ರಣಜಿ ಟ್ರೋಫಿ ಎಂದು ಹೆಸರಿಸಲಾಗಿದೆ. ಮತ್ತು ಕೆ. ಎಸ್. ದುಲೀಪ್‌ಸಿನ್‌ಜಿ ಇವರ ಹೆಸರನ್ನು ದುಲೀಪ್ ಟ್ರೋಫಿ ಎಂದು ಹೆಸರಿಸಲಾಗಿದೆ. ಜಡೇಜಾ ಅವರ ತಂದೆ ದೌಲತ್‌ಸಿನ್ಹಜಿ ಜಡೇಜಾ ಅವರು ಜಾಮ್‌ನಗರ ಲೋಕಸಭೆಯಿಂದ ೩ ಬಾರಿ ಸಂಸದರಾಗಿದ್ದರು. ಅವರ ತಾಯಿ ಕೇರಳದ ಅಲಪ್ಪುಳದ ಮೂಲದವರು.[೫] ಜಡೇಜಾ ಇವರು ಜಯಾ ಜೇಟ್ಲಿ ಅವರ ಪುತ್ರಿ ಅದಿತಿ ಜೇಟ್ಲಿ ಅವರನ್ನು ವಿವಾಹವಾದ್ದರು. ಇವರಿಗೆ ಐಮನ್ ಮತ್ತು ಅಮೀರ ಎಂಬ ಇಬ್ಬರು ಮಕ್ಕಳಿದ್ದಾರೆ.

ಅವರು ತಮ್ಮ ಶಾಲಾ ಶಿಕ್ಷಣವನ್ನು ನವದೆಹಲಿಯ ಭಾರತೀಯ ವಿದ್ಯಾ ಭವನದಲ್ಲಿ ಪ್ರಾರಂಭಿಸಿದರು. ನಂತರ ಅವರು ತಮ್ಮ ಕಾಲೇಜ್ ಶಿಕ್ಷಣವನ್ನು ರಾಜ್‌ಕೋಟ್‌ನ ರಾಜ್‌ಕುಮಾರ್ ಕಾಲೇಜಿನಲ್ಲಿ ಪ್ರಾರಂಭಿಸಿದರು. ನಂತರ, ನವದೆಹಲಿಯ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇವರು ಉನ್ನತ ಶಿಕ್ಷಣವನ್ನು ದೆಹಲಿಹಿಂದೂ ಕಾಲೇಜಿನಲ್ಲಿ ಪ್ರಾರಂಭಿಸಿದರು.[೬]

ಅಂತರರಾಷ್ಟ್ರೀಯ ವೃತ್ತಿಜೀವನ

[ಬದಲಾಯಿಸಿ]

ಇವರು ಭಾರತ ತಂಡದ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರು. ೧೯೯೬ ರಲ್ಲಿ ಬೆಂಗಳೂರಿನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಕ್ವಾರ್ಟರ್-ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ವಕಾರ್ ಯೂನಿಸ್ ಅವರ ಅಂತಿಮ ಎರಡು ಓವರ್‌ಗಳಲ್ಲಿ ೪೦ ರನ್ ಸೇರಿದಂತೆ ೨೫ ಎಸೆತಗಳಲ್ಲಿ ೪೫ ರನ್‍ಗಳಿಸಿದ್ದರು. ಜಡೇಜಾ, ಮೊಹಮ್ಮದ್ ಅಜರುದ್ದೀನ್ ಅವರೊಂದಿಗೆ ಜಿಂಬಾಬ್ವೆ ಮತ್ತು ಶ್ರೀಲಂಕಾ ವಿರುದ್ಧ ಕ್ರಮವಾಗಿ ೪ ಮತ್ತು ೫ ನೇ ವಿಕೆಟ್‌ಗೆ ಅತಿ ಹೆಚ್ಚು ಏಕದಿನ ಜೊತೆಯಾಟದ ದಾಖಲೆಯನ್ನು ಹೊಂದಿದ್ದಾರೆ. ಜಡೇಜಾ ಅವರು ಫೀಲ್ಡಿಂಗ್‌ಗೆ ಹೆಸರುವಾಸಿಯಾಗಿದ್ದಾರೆ.

ಶಾರ್ಜಾದಲ್ಲಿ ಇಂಗ್ಲೆಂಡ್ ವಿರುದ್ಧ ೧ ಓವರ್‌ನಲ್ಲಿ ೩ ರನ್‌ಗಳಿಗೆ ೩ ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಪಂದ್ಯವನ್ನು ಗೆಲ್ಲಿಸಿದ್ದರು. ೩ ಜೂನ್ ೨೦೦೦ರಂದು ಪೆಪ್ಸಿ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಜಡೇಜಾ ಕೊನೆಯ ಬಾರಿಗೆ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.

ಚಿತ್ರಕಥೆ

[ಬದಲಾಯಿಸಿ]

೨೦೦೩ರ ಖೇಲ್ ಚಿತ್ರದಲ್ಲಿ ಸನ್ನಿ ಡಿಯೋಲ್ ಮತ್ತು ಸುನಿಲ್ ಶೆಟ್ಟಿ ಜೊತೆ ಜಡೇಜಾ ನಟಿಸಿದ್ದಾರೆ. ಅವರು ವಿ.ಕೆ.ಕುಮಾರ್ ನಿರ್ದೇಶನದ ೨೦೦೯ರ ಚಲನಚಿತ್ರ ಪಲ್ ಪಲ್ ದಿಲ್ ಕೆ ಸ್ಸಾತ್ ನಲ್ಲಿ ಸಹ ನಟಿಸಿದ್ದಾರೆ.[೭]

ಜಡೇಜಾ ಮೊದಲ ಸೀಸನ್‌ನಲ್ಲಿ ಸೆಲೆಬ್ರಿಟಿ ಡ್ಯಾನ್ಸ್ ಶೋ ಜಲಕ್ ದಿಖ್ಲಾ ಜಾದಲ್ಲಿ ಸ್ಪರ್ಧಿಯಾಗಿದ್ದರು. ಅವರು ಟಿವಿ ಶೋ ಕಾಮಿಡಿ ಸರ್ಕಸ್, ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್‌ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.[೮]

ಅವರು ಅಭಿಷೇಕ್ ಕಪೂರ್ ಅವರ ಚಲನಚಿತ್ರ ಕೈ ಪೋ ಚೆಯಲ್ಲಿ ಅತಿಥಿ ಪಾತ್ರವನ್ನು ಮಾಡಿದರು.[೯]

ಮ್ಯಾಚ್ ಫಿಕ್ಸಿಂಗ್ ಹಗರಣ

[ಬದಲಾಯಿಸಿ]

ಇವರು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರಲು ಕಾರಣ, ೩ ಜೂನ್ ೨೦೦೦ ರಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅವರನ್ನು ಕ್ರಿಕೆಟ್‌ನಿಂದ ನಿಷೇಧಿಸಿತು. ನಂತರ, ೨೭ ಜನವರಿ ೨೦೦೩ರಂದು ದೆಹಲಿ ನ್ಯಾಯಾಲಯವು ಅವರ ನಿಷೇಧವನ್ನು ತೆಗೆದುಹಾಕಿತು. ಹೀಗಾಗಿ ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ಮತ್ತೆ ಆಡಲು ಸಾಧ್ಯವಾಗಲಿಲ್ಲ.[೧೦]

ಉಲ್ಲೇಖಗಳು

[ಬದಲಾಯಿಸಿ]
  1. "Ajay Jadeja, Cricket players". ESPNcricinfo.
  2. "Cricket World Cup Ajay Jadeja named Afg's team mentor". www.indianexpress.com.
  3. The Journal of Indo-judaic Studies, Volumes 1–4. Society for Indo-Judaic Studies. 1998. p. 95.
  4. "I am suffering irreparably: Ajay Jadeja Ajay Jadeja studied in the esteemed Sardar Patel Vidyalaya, New Delhi". Times of India. 7 January 2003. Retrieved 25 June 2013.
  5. "'അജയ് ഭായ് നമസ്‌കാരം, സുഖമാണല്ലോ അല്ലേ' ജഡേജയോട് മലയാളത്തില്‍ സഞ്ജു; മറുപടിയും മലയാളത്തില്‍!". Mathrubhumi (in ಮಲಯಾಳಂ). 29 June 2022. Retrieved 30 June 2022.
  6. "Ajay Jadeja: The good, the bad & the ugly. undefined News - Times of India". The Times of India (in ಇಂಗ್ಲಿಷ್). January 12, 2002. Retrieved 2022-07-01.
  7. "Pal Pal Dil Ke Saath – The Times of India". The Times of India.
  8. Page 84 of Ajay Jadeja, Roshni Chopra on the sets of Comedy Circus, Ajay Jadeja, Roshni Chopra on the sets of Comedy Circus Photos
  9. "Rajinikanth ready for action- Timesofap". Archived from the original on 19 February 2014. Retrieved 2012-10-27.
  10. "Renamed Ajay Jadeja..." www.midday.com.