ವಿಷಯಕ್ಕೆ ಹೋಗು

ಅಚಂತಾ ಶರತ್ ಕಮಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಚಂತಾ ಶರತ್ ಕಮಲ್ (ಜನನ ೧೨ ಜುಲೈ ೧೯೮೨) ಒಬ್ಬ ಭಾರತೀಯ ವೃತ್ತಿಪರ ಟೇಬಲ್ ಟೆನ್ನಿಸ್ ಆಟಗಾರ. ಅವರು ಒಂಬತ್ತು ಬಾರಿ ಹಿರಿಯ ರಾಷ್ಟ್ರೀಯ ಚಾಂಪಿಯನ್ ಆದ ಮೊದಲ ಭಾರತೀಯ ಟೇಬಲ್ ಟೆನ್ನಿಸ್ ಆಟಗಾರರಾಗಿದ್ದಾರೆ ಮತ್ತು ಎಂಟು ಬಾರಿ ರಾಷ್ಟ್ರೀಯ ಚಾಂಪಿಯನ್ ಕಮಲೇಶ್ ಮೆಹ್ತಾ ಅವರ ದಾಖಲೆಯನ್ನು ಮುರಿದರು. ೨೦೧೯ ರಲ್ಲಿ ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. []

ಅವರ ಐಟಿಟಿಫ಼್ ವಿಶ್ವ ಶ್ರೇಯಾಂಕವು ಮೇ ಹೊತ್ತಿಗೆ ೩೨ ಆಗಿದೆ . ಅವರು ಜೂ ಸೆ ಹ್ಯುಕ್ ಮತ್ತು ಚುವಾಂಗ್ ಚಿಹ್-ಯುವಾನ್ ಅವರನ್ನು ಸೋಲಿಸಿದರು, [] ಶರತ್ ಅವರು ೨೦೦೪ ರಲ್ಲಿ ಕೌಲಾಲಂಪುರದಲ್ಲಿ ನಡೆದ ೧೬ ನೇ ಕಾಮನ್‌ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಸಿಂಗಲ್ಸ್ ಚಿನ್ನವನ್ನು ಗೆದ್ದರು. ಅವರು ೨೦೦೪ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ . ಅವರು ಪ್ರಸ್ತುತ  ಜರ್ಮನಿಯ ಡಸೆಲ್ಡಾರ್ಫ್‌ನಲ್ಲಿ ವಾಸಿಸುತ್ತಿದ್ದಾರೆ. [ ಅಪ್ಡೇಟ್ ಅಗತ್ಯವಿದೆ ] ಕಳೆದ ಕೆಲವು ವರ್ಷಗಳಿಂದ  ಅವರು ಯುರೋಪಿಯನ್ ಲೀಗ್‌ನಲ್ಲಿ ಭಾಗವಹಿಸಿದ್ದರು . ಅವರು ಪ್ರಸ್ತುತ  ಬೊರುಸ್ಸಿಯಾ ಡಸೆಲ್ಡಾರ್ಫ್ ಕ್ಲಬ್‌ಗಾಗಿ ಜರ್ಮನ್ ಬುಂಡೆಸ್ಲಿಗಾದಲ್ಲಿ ಆಡುತ್ತಿದ್ದಾರೆ.

ಅವರು ಜುಲೈ ೨೦೧೦ ರಲ್ಲಿ ಮಿಚಿಗನ್‌ನ ಗ್ರಾಂಡ್ ರಾಪಿಡ್ಸ್‌ನಲ್ಲಿ ನಡೆದ ಯು.ಎಸ್ ಓಪನ್ ಟೇಬಲ್ ಟೆನಿಸ್ ಪುರುಷರ ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿದ್ದಾರೆ. ಪಂದ್ಯಾವಳಿಯ ಅವಧಿಯಲ್ಲಿ ಅವರು ೭ ಗೇಮ್‌ಗಳ ಮಹಾ ಯುದ್ಧದಲ್ಲಿ ೪-೩ ರಲ್ಲಿ ಗೆದ್ದುಕೊಳ್ಳಲು ಹಾಲಿ ಚಾಂಪಿಯನ್ ಸ್ಲೋವಾಕಿಯಾದ ಥಾಮಸ್ ಕೀನಾಥ್ ಅವರನ್ನು ಸೋಲಿಸಿದರು. ಅದೇ ವರ್ಷದಲ್ಲಿ ಅವರು ಈಜಿಪ್ಟ್ ಓಪನ್ ಅನ್ನು ಹಾಂಗ್ ಕಾಂಗ್‌ನ ಲಿ ಚಿಂಗ್ ಅವರನ್ನು ೧೧-೭, ೧೧-೯, ೧೧-೮, ೧೧-೪ ನೇರ ಸೆಟ್‌ಗಳಲ್ಲಿ ಸೋಲಿಸಿದರು; ಹೀಗಾಗಿ ಐಟಿಟಿಎಫ಼್ ಪ್ರೊ ಟೂರ್‌ನಲ್ಲಿ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾದರು. [] ಫೇವರಿಟ್ ಮತ್ತು ಒಂಬತ್ತು ಬಾರಿಯ ಚಾಂಪಿಯನ್ ಇಂಗ್ಲೆಂಡ್ ಅನ್ನು ಸೋಲಿಸುವ ಮೂಲಕ ಅದೇ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿಯನ್ನು ಗೆದ್ದ ಭಾರತೀಯ ಪುರುಷರ ತಂಡದ ನಾಯಕತ್ವವನ್ನೂ ಅವರು ವಹಿಸಿದ್ದರು.

೨೦೦೬ ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅವರು ಚಿನ್ನದ ಪದಕವನ್ನು ಗೆದ್ದರು, ಸಿಂಗಾಪುರದ ವಿರುದ್ಧದ ಟೇಬಲ್ ಟೆನ್ನಿಸ್ ಟೀಮ್ ಈವೆಂಟ್‌ನಲ್ಲಿ ಭಾರತೀಯ ತಂಡವು ಚಿನ್ನವನ್ನು ಗೆಲ್ಲಲು ಸಹಾಯ ಮಾಡುವುದರ ಜೊತೆಗೆ ಪ್ರೇಕ್ಷಕರ ನೆಚ್ಚಿನ ಆಸ್ಟ್ರೇಲಿಯಾದ ವಿಲಿಯಂ ಹೆನ್ಜೆಲ್ ಅವರನ್ನು ಫೈನಲ್‌ನಲ್ಲಿ ಸೋಲಿಸಿದರು. ಅವರು ಸುಭಜಿತ್ ಜೊತೆಗೂಡಿ ೨೦೧೦ [] ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಡಬಲ್ಸ್ ಚಿನ್ನವನ್ನು ಗೆದ್ದರು. ಅವರು ೨೦೧೮ ರ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೂರು ಪದಕಗಳನ್ನು ಗೆದ್ದರು, ಪುರುಷರ ಟೀಮ್ ಈವೆಂಟ್‌ನಲ್ಲಿ ಆಂಟನಿ ಅಮಲ್‌ರಾಜ್, ಹರ್ಮೀತ್ ದೇಸಾಯಿ, ಸತ್ಯನ್ ಜ್ಞಾನಶೇಖರನ್ ಮತ್ತು ಸನಿಲ್ ಶೆಟ್ಟಿ ಅವರೊಂದಿಗೆ ಪುರುಷರ ಡಬಲ್ಸ್‌ನಲ್ಲಿ ಸತ್ಯನ್ ಜ್ಞಾನಶೇಖರನ್ ಅವರೊಂದಿಗೆ ಬೆಳ್ಳಿ ಮತ್ತು ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕಗಳನ್ನು ಗೆದ್ದರು. [] [] []

ಅವರು ಅಥೆನ್ಸ್‌ನಲ್ಲಿ ೨೦೦೪ ರ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು ಮತ್ತು ಇನ್ನೂ ಅಗ್ರ ಭಾರತೀಯ ಟಿಟಿ ಆಟಗಾರರಾಗಿದ್ದಾರೆ. ೨೦೦೬ರಲ್ಲಿ ಕತಾರ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.

೩೦೦೭ ರಲ್ಲಿ ಉತ್ತರ ಕೊರಿಯಾದ ಪ್ಯೊಂಗ್ಯಾಂಗ್‌ನಲ್ಲಿ ನಡೆದ ಪ್ಯೊಂಗ್ಯಾಂಗ್ ಆಹ್ವಾನಿತ ಪಂದ್ಯಾವಳಿಯನ್ನು ಗೆದ್ದ ಮೊದಲ ಭಾರತೀಯರಾಗಿದ್ದರು. ಇದು ಆಗಸ್ಟ್ ೨೦೦೭ ರಲ್ಲಿ ನಡೆದ ಪಂದ್ಯಾವಳಿಯ ೨೧ನೇ ಆವೃತ್ತಿಯಾಗಿದೆ. ಜೂನ್ ೨೦೦೭ರಲ್ಲಿ ನಡೆದ ಜಪಾನ್ ಪ್ರೊ ಟೂರ್‌ನಲ್ಲಿ ವಿಶ್ವ ಸರ್ಕ್ಯೂಟ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನವು ಬಂದಿತು, ಅಲ್ಲಿ ಅವರು ವಿಶ್ವ ನಂ.೧೯, ಲೀ ಜಂಗ್ ವೂ (ದಕ್ಷಿಣ ಕೊರಿಯಾ) ಅವರನ್ನು ಸೋಲಿಸಿದರು. ಈ ವಿಜಯದ ನಂತರ ಅವರು ವಿಶ್ವ ನಂ. ೭೩ ರ ತಮ್ಮ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವನ್ನು ತಲುಪಿದರು ಮತ್ತು ಜನವರಿ ೨೦೧೧ ರಲ್ಲಿ ಅವರ ಶ್ರೇಯಾಂಕವು ೪೪ ತಲುಪಿದೆ. ಶರತ್ ಅವರು ೨೦೦೮ ರಲ್ಲಿ ಬೀಜಿಂಗ್ ಒಲಿಂಪಿಕ್ಸ್‌ಗೆ ಆಯ್ಕೆಯಾದ ಏಕೈಕ ಭಾರತೀಯ ಪುರುಷರ ಟೇಬಲ್ ಟೆನಿಸ್ ಆಟಗಾರರಾಗಿದ್ದರು.

೨೦೧೦-೧೧ರ ಋತುವಿನಲ್ಲಿ ಅವರು ಟಿ.ಎಸ್.ವಿ ಗ್ರ್ಯಾಫೆಲ್ಫಿಂಗ್‌ಗಾಗಿ ಜರ್ಮನ್ ಮೇಜರ್ ಲೀಗ್‌ನಲ್ಲಿ (ಬುಂಡೆಸ್ಲಿಗಾ) ಆಡಿದರು ಮತ್ತು ಅಗ್ರ ಜರ್ಮನ್ ಟಿಟಿ ಆಟಗಾರರ ವಿರುದ್ಧ ಗೆಲುವುಗಳೊಂದಿಗೆ ಲೀಗ್‌ನಲ್ಲಿ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ೨೦೧೧-೧೨ ಋತುವಿನಲ್ಲಿ ಎಸ್.ವಿ ವೆರ್ಡರ್ ಬ್ರೆಮೆನ್ ಪರ ಆಡಿದ್ದರು. ಮೇ ೨೦೧೩ ನಲ್ಲಿ ಜರ್ಮನಿಗೆ ಹಿಂದಿರುಗುವ ಮೊದಲು ಸ್ವೀಡಿಷ್ ಲೀಗ್‌ನಲ್ಲಿ ಆಡಿದರು. " ಶರತ್ ಮತ್ತು ತಂಡವು ಜರ್ಮನಿಯಲ್ಲಿ ಪ್ರತಿಷ್ಠಿತ ಕಪ್ ಟೂರ್ನಮೆಂಟ್ ೨೦೧೩ ರ ಡಚ್ ಪೋಕಲ್ ಅನ್ನು ಗೆದ್ದಿದೆ. ಪ್ರಸ್ತುತ ತಂಡವು ೨೦೧೩–೧೪ರ ಬುಂಡೆಸ್ಲಿಗಾ ಋತುವಿನಲ್ಲಿ ಎರಡನೇ ಸ್ಥಾನದಲ್ಲಿದೆ.

ಏಷ್ಯನ್ ಒಲಿಂಪಿಕ್ ಅರ್ಹತೆಯಲ್ಲಿ ಇರಾನ್‌ನ ನೋಶಾದ್ ಅಲಮಿಯನ್ ಅವರನ್ನು ಸೋಲಿಸಿದ ನಂತರ ಶರತ್ ೨೦೧೬ ರ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. [] ಆದಾಗ್ಯೂ, ಅವರು ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ರೊಮೇನಿಯಾದ ಆಡ್ರಿಯನ್ ಕ್ರಿಸನ್‌ಗೆ ಸೋಲುವ ಮೊದಲ ಸುತ್ತಿನಲ್ಲಿ ನಿರ್ಗಮಿಸಿದರು. [] ಅವರು ಪಿ.ಎಸ್.ಬಿ.ಬಿ ನುಂಗಂಬಾಕ್ಕಂ ಶಾಲೆ [೧೦] (2000 ನೇ ಸಾಲಿನ) ಮತ್ತು ಲೊಯೋಲಾ ಕಾಲೇಜು, ಚೆನ್ನೈನ ಹಳೆಯ ವಿದ್ಯಾರ್ಥಿ. [೧೧] [೧೨] ಅವರು ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನಲ್ಲಿ ಅಧಿಕಾರಿಯಾಗಿ ಉದ್ಯೋಗಿಯಾಗಿದ್ದಾರೆ. [೧೩]

ಶರತ್‌ಗೆ ೪ ನೇ ವಯಸ್ಸಿನಲ್ಲಿ ಅವರ ತಂದೆ ಟೇಬಲ್ ಟೆನ್ನಿಸ್‌ಗೆ ಪರಿಚಯಿಸಿದರು. ಶರತ್ ಅವರ ತಂದೆ ಅವರ ಚಿಕ್ಕಪ್ಪ ಮುರಳೀಧರ ರಾವ್ ಅವರೊಂದಿಗೆ ಆಟದ ತಾಂತ್ರಿಕತೆಗಳನ್ನು ಕಲಿಸಿದರು ಮತ್ತು ಅವರನ್ನು ವೃತ್ತಿಪರ ಪ್ಯಾಡ್ಲರ್ ಆಗಿ ಬೆಳೆಸಿದರು.

ಸೋಲನ್ನು ಒಪ್ಪಿಕೊಳ್ಳುವುದಕ್ಕಿಂತ ಯಾವಾಗಲೂ ಗೆಲ್ಲಲೇಬೇಕೆಂಬ ಹಂಬಲವಿದ್ದ ಶರತ್‌ಗೆ ತನ್ನ ಮನೋಧರ್ಮವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ.ಸೋತಾಗ ಅವರು ಆಗಾಗ ಹತಾಶರಾಗುತ್ತಿದ್ದರು. ಅವರ ತಂದೆ ಮತ್ತು ಚಿಕ್ಕಪ್ಪ ಅವರಿಗೆ ಮಾನಸಿಕ ಸ್ಥಿತಿಯಲ್ಲಿ ಸಹಾಯ ಮಾಡಿದರು. ಅವನ ಹತಾಶೆಯನ್ನು ನಿಭಾಯಿಸಲು ಶರತ್‌ನ ಚಿಕ್ಕಪ್ಪ ಅವನಿಗೆ ಕಟ್ಟುನಿಟ್ಟಾದ ನಿಯಮವನ್ನು ಮಾಡಿದ್ದರು. ಅವರು ಪ್ರತಿದಿನ ಶಾಲೆಗೆ ಮೊದಲು ಮತ್ತು ನಂತರ ತಮ್ಮ ಚಿಕ್ಕಪ್ಪನೊಂದಿಗೆ ಟೇಬಲ್ ಟೆನ್ನಿಸ್ ಅಭ್ಯಾಸ ಮಾಡುತ್ತಿದ್ದರು. ೧೬ನೇ ವಯಸ್ಸಿನಲ್ಲಿ, ಶರತ್ ಕಮಲ್ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಶರತ್ ಕಮಲ್ ಅವರು ವೃತ್ತಿಪರ ಟೇಬಲ್ ಟೆನಿಸ್‌ಗೆ ಪ್ರವೇಶಿಸಿದಾಗಿನಿಂದ ಯಾವಾಗಲೂ ಉನ್ನತ ಫಾರ್ಮ್‌ನಲ್ಲಿದ್ದಾರೆ.

ರಾಜ್ಯ ಕೂಟಗಳಲ್ಲಿ ಯಶಸ್ಸಿನ ನಂತರ, ಶರತ್ ರಾಷ್ಟ್ರಮಟ್ಟಕ್ಕೆ ಮುನ್ನಡೆದರು. ೨೦೦೩ ರಲ್ಲಿ, ಶರತ್ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಚಾಂಪಿಯನ್ ಆದರು.

ವೃತ್ತಿ

[ಬದಲಾಯಿಸಿ]

೨೦೦೪ ರ ಕಾಮನ್‌ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಶರತ್ ಅವರ ಮೊದಲ ಅಂತರರಾಷ್ಟ್ರೀಯ ಪದಕ ಗೆದ್ದರು.ಅಲ್ಲಿ ಅವರು ಪುರುಷರ ಸಿಂಗಲ್ಸ್ ಮತ್ತು ಪುರುಷರ ತಂಡದಲ್ಲಿ ಆಡಿ ಸ್ಪರ್ಧೆಯನ್ನು ಗೆದ್ದರು. ಅವರು ೨೦೦೪ ರ ಅಥೆನ್ಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಾಗ ಅವರ ವೃತ್ತಿಜೀವನದ ಗ್ರಾಫ್ ಹೊಸ ಎತ್ತರವನ್ನು ತಲುಪಿತು. ಶರತ್ ಅವರು ೨೦೦೪ರ ಸಮ್ಮರ್ ಒಲಿಂಪಿಕ್ಸ್‌ನಲ್ಲಿ ತಮ್ಮ ಚೊಚ್ಚಲ ಒಲಿಂಪಿಕ್ಸ್ ಗೆ ಪಾದರ್ಪಣೆ ಮಾಡಿದರು. ಅವರು ಮೊದಲ ಸುತ್ತಿನಲ್ಲಿ ೧೧-೪,೧೨-೧೦,೧೧-೬,೧೧-೧೩,೧೧-೭ ರಲ್ಲಿ ಅಲ್ಜೀರಿಯಾದ ಮೊಹಮದ್ ಸೋಫಿಯಾನೆ ಬೌಡ್ಜಡ್ಜಾ ಅವರನ್ನು ಸೋಲಿಸಿದರು ಆದರೆ ಎರಡನೇ ಸುತ್ತಿನಲ್ಲಿ ಹಾಂಗ್ ಕಾಂಗ್‌ನ ಕೊ ಲೈ ಚಾಕ್ ವಿರುದ್ಧ ೧೧-೯,೧೧-೫ ರಲ್ಲಿ ಸೋತರು.

ಶಹರತ್ ೨೦೦೫ ರ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ಗೆ ಪಾದಾರ್ಪಣೆ ಮಾಡಿದರು ಆದರೆ ಮೊದಲ ಸುತ್ತಿನಲ್ಲಿ ಚೀನಾದ ದಂತಕಥೆ ವಾಂಗ್ ಲಿಕಿನ್‌ಗೆ ೧೧-೮,೧೧-೮,೧೧-೫,೯-೧೧ ಮತ್ತು ೧೧-೮ ರಲ್ಲಿ ಸೋತರು.

ಶರತ್ ಅವರು ೨೦೦೬ ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಟೇಬಲ್ ಟೆನಿಸ್‌ನಲ್ಲಿ ತಮ್ಮ ಚೊಚ್ಚಲ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಪಾದಾರ್ಪಣೆ ಮಾಡಿದರು. ಅವರು ಪುರುಷರ ಡಬಲ್ಸ್‌ಗಾಗಿ ಸೌಮ್ಯದೀಪ್ ರಾಯ್ ಅವರೊಂದಿಗೆ ಜೊತೆಯಾದರು ಆದರೆ ಕ್ವಾರ್ಟರ್-ಫೈನಲ್‌ನಲ್ಲಿ ಆಂಡ್ರ್ಯೂ ಬಗ್ಗಲೆ ಮತ್ತು ಆಂಡ್ರ್ಯೂ ರಶ್ಟನ್ ವಿರುದ್ಧ ೮-೧೧,೧೨-೧೦,೭-೧೧,೧೧-೬ ಮತ್ತು ೪-೧೧ರಲ್ಲಿ ಸೋತರು. ಆದರೆ ಸಿಂಗಲ್ಸ್ ವಿಭಾಗದಲ್ಲಿ ಶರತ್ ಅವರು ಆಸ್ಟ್ರೇಲಿಯಾದ ವಿಲಿಯಂ ಹೆನ್ಜೆಲ್ ಅವರನ್ನು ೧೧-೫,೮-೧೧,೫-೧೧,೧೧-೮,೧೧-೮,೭-೧೧,೧೧-೮ ರಿಂದ ಸೋಲಿಸಿ ಚಿನ್ನದ ಪದಕ ಗೆದ್ದರು. ನಂತರ ಪುರುಷರ ತಂಡ ವಿಭಾಗದ ಫೈನಲ್‌ನಲ್ಲಿ ಸಿಂಗಾಪುರ ತಂಡವನ್ನು 3–2ರಲ್ಲಿ ಸೋಲಿಸಿ ಚಿನ್ನದ ಪದಕ ಗೆದ್ದರು. ಡಿಸೆಂಬರ್‌ನಲ್ಲಿ, ಶರತ್ ೨೦೦೬ ರ ಏಷ್ಯನ್ ಗೇಮ್ಸ್‌ನಲ್ಲಿ ಏಷ್ಯನ್ ಗೇಮ್ಸ್‌ಗೆ ಪಾದಾರ್ಪಣೆ ಮಾಡಿದರು. ೧೩ನೇ ಶ್ರೇಯಾಂಕದ ಅವರು ೩೧ನೇ ಸುತ್ತಿಗೆ ಬೈ ಪಡೆದರು. ಅವರು ವಿಯೆಟ್ನಾಂನ ಡೋನ್ ಕಿಯೆನ್ ಕ್ವೊ ಅವರನ್ನು ೧೧-೬,೧೧-೭,೧೩-೧೫,೧೧-೫,೧೧-೯ 32 ರ ಸುತ್ತಿನಲ್ಲಿ ಸೋಲಿಸಿದರು. ಡಬಲ್ಸ್‌ನಲ್ಲಿ, ಶರತ್ ಪ್ರಿ-ಕ್ವಾರ್ಟರ್‌ನಲ್ಲಿ ಚಿಯಾಂಗ್ ಪೆಂಗ್- ಲುಂಗ್ ವಿರುದ್ಧ ,೫-೧೧,೮-೧೧,೯-೧೧ ರಿಂದ ಸೋತರು. ಅವರು ೩೧ ರ ಸುತ್ತಿನಲ್ಲಿ ೯-೧೧,೯-೧೧,೯-೧೧ ರಲ್ಲಿ ವಿಯೆಟ್ನಾಂ ಜೋಡಿಗೆ ಸೋತರು, ಅಲ್ಲಿ ಅವರು ಸೌಮ್ಯದೀಪ್ ರಾಯ್ ಅವರೊಂದಿಗೆ ಜೋಡಿಯಾದರು. ಟೀಮ್ ಈವೆಂಟ್‌ನಲ್ಲಿ, ಅವರು ಎರಡು ಪಂದ್ಯಗಳನ್ನು ಗೆದ್ದರು ಮತ್ತು ಎರಡು ಪಂದ್ಯಗಳಲ್ಲಿ ಸೋತರು. ಅಂತಿಮವಾಗಿ, ಅವರ ತಂಡವು ಮುಂದಿನ ಸುತ್ತಿಗೆ ಮುನ್ನಡೆಯಲು ಸಾಧ್ಯವಾಗದೆ ಗುಂಪಿನಲ್ಲಿ ಮೂರನೇ ಸ್ಥಾನ ಗಳಿಸಿತು.

ಉಲ್ಲೇಖಗಳು

[ಬದಲಾಯಿಸಿ]
  1. Sportstar, Team. "Kamal, Chhetri, Punia and Gambhir to receive Padma Shri Award". Sportstar (in ಇಂಗ್ಲಿಷ್). Retrieved 2021-05-08.
  2. "Current WR - Men". results.ittf.link. Retrieved 2018-04-14.
  3. "Rediff News". Rediff India. Retrieved 2010-07-12.
  4. "Rediff Sports". Rediff India. Retrieved 2010-10-13.
  5. "CWG 2018: Iconic Achantha Sharath Kamal bows out with TT bronze". Times of India. 15 April 2018. Retrieved 15 April 2018.
  6. "CWG 2018: Sathiyan G, Sharath Kamal settle for Silver in men's doubles table tennis". India Today. 14 April 2018. Retrieved 15 April 2018.
  7. "Commonwealth Games 2018: Sharath Kamal leads India to gold medal in men's table tennis team event". Firstpost. 10 April 2018. Retrieved 15 April 2018.
  8. "Achanta Sharath Kamal qualifies for Rio 2016". Inshorts. 16 April 2016. Retrieved 8 August 2016.
  9. "TT Players Mouma, Manika, Soumyajit and Kamal Lose in 1st Round". The Quint. 7 August 2016. Retrieved 8 August 2016.
  10. "PSBB Alumni". PSBB Schools. Archived from the original on 2011-07-21. Retrieved 2009-08-28.
  11. "Fresh Faces". India Today. Retrieved 2009-08-06."Fresh Faces".
  12. "Achanta Sharath Kamal Fan Webpage". Achanta Sharath Kamal. Archived from the original on 2010-05-28. Retrieved 2010-05-20.
  13. "Sharath Kamal storms into final". The Hindu. Chennai, India. 2006-03-26. Archived from the original on 2006-04-20. Retrieved 2006-03-26.