ಇಂಡಿಯನ್ ಆಯಿಲ್ ಕಾರ್ಪೊರೇಷನ್
ಸಂಸ್ಥೆಯ ಪ್ರಕಾರ | State-owned enterprise Public (ಎನ್‌ಎಸ್‌ಇ: IOC) |
---|---|
ಸ್ಥಾಪನೆ | 1964 |
ಮುಖ್ಯ ಕಾರ್ಯಾಲಯ | ನವ ದೆಹಲಿ, India |
ಪ್ರಮುಖ ವ್ಯಕ್ತಿ(ಗಳು) | Brij Mohan Bansal, Chairman |
ಉದ್ಯಮ | Oil and Gas |
ಉತ್ಪನ್ನ | Oil Petroleum Natural gas Petrochemical Fuel Lubricant |
ಆದಾಯ | ₹೨,೫೩,೯೬೪.೧೦ ಕೋಟಿ (ಯುಎಸ್$೫೬.೩೮ ಶತಕೋಟಿ) (2009-10)[೧] |
ನಿವ್ವಳ ಆದಾಯ | ₹೧೦,೯೯೮.೬೮ ಕೋಟಿ (ಯುಎಸ್$೨.೪೪ ಶತಕೋಟಿ) (2009-10) [೧] |
ಒಟ್ಟು ಆಸ್ತಿ | $29.672 billion (2009-10)[೨] |
ಒಟ್ಟು ಪಾಲು ಬಂಡವಾಳ | $11.686 billion (2009-10) [೨] |
ಉದ್ಯೋಗಿಗಳು | 36,307 (2009) |
ಜಾಲತಾಣ | Iocl.com |
ಇಂಡಿಯನ್ ಆಯಿಲ್ ಕಾರ್ಪೊರೇಷನ್ , ಅಥವಾ ಇಂಡಿಯನ್ ಆಯಿಲ್ , (ಎನ್‌ಎಸ್‌ಇ: IOC) ಎನ್ನುವುದು ಭಾರತದ ಸರ್ಕಾರಿ-ಮಾಲೀಕತ್ವದ ತೈಲ ಮತ್ತು ಅನಿಲ ಕಂಪನಿಯಾಗಿದೆ. ಇದು ಭಾರತದ ಅತೀ ದೊಡ್ಡ ವಾಣಿಜ್ಯಿಕ ಸಂಸ್ಥೆಯಾಗಿದ್ದು, 2009 ರ ಫಾರ್ಚ್ಯೂನ್ ಗ್ಲೋಬಲ್ 500 ಪಟ್ಟಿಯಲ್ಲಿ 105 ನೇ ಶ್ರೇಣಿಯನ್ನು ಪಡೆದುಕೊಂಡಿದೆ. ಇಂಡಿಯನ್ ಆಯಿಲ್ ಮತ್ತು ಅದರ ಅಂಗಸಂಸ್ಥೆಗಳು ಪೆಟ್ರೋಲಿಯಂ ಮಾರುಕಟ್ಟೆಯಲ್ಲಿ 47% ರಷ್ಟು, ಸಂಸ್ಕರಣೆ ಸಾಮರ್ಥ್ಯದಲ್ಲಿ 40% ರಷ್ಟು ಮತ್ತು ಭಾರತದಲ್ಲಿನ ಪೈಪ್‌ಲೈನ್‌ಗಳ ಪ್ರಮುಖ ವಿಭಾಗದಲ್ಲಿ 67% ಪಾಲನ್ನು ಹೊಂದಿವೆ. ಇಂಡಿಯಲ್ ಆಯಿಲ್ ಕಂಪನಿಗಳ ಸಮೂಹವು ಭಾರತದಲ್ಲಿ 19 ತೈಲ ಸಂಸ್ಥರಣಾಗಾರಗಳಲ್ಲಿ 10 ರ ಮಾಲೀಕತ್ವ ಮತ್ತು ಕಾರ್ಯನಿರ್ವಹಣೆಯನ್ನು ಹೊಂದಿದ್ದು, ಪ್ರತಿ ವರ್ಷ 60.2 ಮಿಲಿಯನ್ ಮೆಟ್ರಿಕ್ ಟನ್‌ನಷ್ಟು ಸಂಯೋಜಿತ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದೆ. ರಾಷ್ಟ್ರದಲ್ಲಿ ಇಂಡಿಯನ್ ಆಯಿಲ್ 17606 ರಷ್ಟು ಸಂಖ್ಯೆಯಲ್ಲಿ ಅತಿದೊಡ್ಡ ಮತ್ತು ವ್ಯಾಪಕವಾದ ಇಂಧನ ಕೇಂದ್ರಗಳ ಸರಣಿಯನ್ನು ಹೊಂದಿದೆ (15557 ಸಾಮಾನ್ಯ ಆರ್ಓಗಳು ಮತ್ತು 2049 ಕಿಸಾನ್ ಸೇವಾ ಕೇಂದ್ರಗಳು). ಇದು ಆಟೋ ಎಲ್‌ಪಿಜಿ ವಿತರಣಾ ಕೇಂದ್ರಗಳನ್ನು (ಎಎಲ್‌ಡಿಎಸ್) ಸಹ ಪ್ರಾರಂಭಿಸಿದೆ. ಇದು ತನ್ನ 4,900 ಭಾರತೀಯ ಹಂಚಿಕೆದಾರರ ನೆಟ್‌ವರ್ಕ್ ಮುಖಾಂತರ 47.5 ಮಿಲಿಯನ್‌ಗೂ ಹೆಚ್ಚು ಮನೆಗಳಿಗೆ ಇಂಡೇನ್ ಅಡುಗೆ ಅನಿಲವನ್ನು ಪೂರೈಸುತ್ತದೆ. ಇದಕ್ಕೆ ಹೆಚ್ಚಿನದಾಗಿ, ಫರಿದಾಬಾದ್ ನಲ್ಲಿರುವ ಭಾರತೀಯ ಆಯಿಲ್‌ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ಆರ್ & ಡಿ) ವು ಕಾರ್ಪೊರೇಶನ್‌ನ ಕಾರ್ಯನಿರ್ವಹಣೆ ವಿಭಾಗಗಳಿಗೆ ಮತ್ತು ದೇಶದ ಮತ್ತು ವಿದೇಶದ ತನ್ನ ಗ್ರಾಹಕರಿಗೆ ಅಗತ್ಯವಾದ ತಂತ್ರಜ್ಞಾನ ಪರಿಹಾರಗಳನ್ನು ಬೆಂಬಲಿಸುತ್ತದೆ, ಅಭಿವೃದ್ಧಿಪಡಿಸುತ್ತದೆ ಮತ್ತು ಒದಗಿಸುತ್ತದೆ. ತರುವಾಯು, ಇಂಡಿಯನ್ ಆಯಿಲ್ ಟೆಕ್ನಾಲಜೀಸ್ ಲಿಮಿಟೆಡ್ - ಪೂರ್ಣ ಸ್ವಾಮ್ಯದ ಅಂಗಸಂಸ್ಥೆಯನ್ನು 2003 ರಲ್ಲಿ ಇಂಡಿಯನ್ ಆಯಿಲ್‌ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಮಾರುಕಟ್ಟೆ ಮಾಡುವ ಗುರಿಯೊಂದಿಗೆ ಸ್ಥಾಪಿಸಲಾಯಿತು. ಇದನ್ನು ರಾಯಲ್ ಡಚ್ ಶೆಲ್ ಮತ್ತು ಬ್ರಿಟಿಷ್ ಪೆಟ್ರೋಲಿಯಂನ ಆರ್ & ಡಿ ವಿಭಾಗಗಳಿಂದ ಆದರ್ಶಪ್ರಾಯವಾಗಿ ಪಡೆಯಲಾಗಿದೆ.
ಇತಿಹಾಸ
[ಬದಲಾಯಿಸಿ]ಇಂಡಿಯಲ್ ಆಯಿಲ್ ಕಂಪನಿ ಲಿಮಿಟೆಡ್ ಆಗಿ 1959 ರಲ್ಲಿ ಇಂಡಿಯಲ್ ಆಯಿಲ್ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇಂಡಿಯ್ ರಿಫೈನರೀಸ್ ಲಿಮಿಟೆಡ್‌ನೊಡನೆ ವಿಲೀನದೊಂದಿಗೆ 1964 ರಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ರೂಪಿತವಾಯಿತು.
ಉತ್ಪನ್ನಗಳು
[ಬದಲಾಯಿಸಿ]ಇಂಡಿಯಲ್ ಆಯಿಲ್‌ನ ಉತ್ಪನ್ನ ಶ್ರೇಣಿಗಳು ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ಆಟೋ ಎಲ್‌ಪಿಜಿ, ವಿಮಾನದ ಟರ್ಬೈನ್ ಇಂಧನ, ಲೂಬ್ರಿಕೆಂಟ್‌ಗಳು, ನಾಫ್ತಾ, ಬಿಟುಮೆನ್, ಪ್ಯಾರಾಫಿನ್, ಕೆರೋಸಿನ್ ಮುಂತಾದವು. ಎಕ್ಸ್‌ಟ್ರಾ ಪ್ರೀಮಿಯಂ ಪೆಟ್ರೋಲ್, ಎಕ್ಸ್‌ಟ್ರಾ ಮೈಲ್ ಡೀಸೆಲ್, ಸರ್ವೋ ಲೂಬ್ರಿಕೆಂಟ್‌ಗಳು, ಇಂಡೇನ್ ಎಲ್‌ಪಿಜಿ, ಆಟೋಗ್ಯಾಸ್ ಎಲ್‌ಪಿಜಿ, ಇಂಡಿಯನ್ ಆಯಿಲ್ ಏವಿಯೇಶನ್‌ಗಳು ಪ್ರಮುಖ ಬ್ರಾಂಡ್‌ಗಳಲ್ಲಿ ಕೆಲವು ಆಗಿವೆ.
ಇತ್ತೀಚೆಗೆ ಇಂಡಿಯನ್ ಆಯಿಲ್ ಕ್ರಯೋಜೆನಿಕ್ ಸಾಗಾಣಿಕೆಯ ಮೂಲಕ ಎಲ್ಎನ್‌ಜಿ (ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್) ಪೂರೈಸುವ ಹೊಸ ವ್ಯಾಪಾರ ಸ್ವರೂಪವನ್ನು ಪರಿಚಿಯಿಸಿದೆ. ಇದನ್ನು "ಮನೆಬಾಗಿಲಲ್ಲಿ ಎಲ್‌ಎನ್‌ಜಿ" ಎಂದು ಕರೆಯಲಾಗುತ್ತದೆ. ಎಲ್‌ಎನ್‌ಜಿಯ ಪ್ರಧಾನ ಕಚೇರಿಯು ದೆಹಲಿಯ ಲೋಧಿ ರಸ್ತೆಯಲ್ಲಿರುವ ಸ್ಕೋಪ್ ಕಾಂಪ್ಲೆಕ್ಸ್‌ನಲ್ಲಿದೆ.ಇಂಡಿಯನ್ ಆಯಿಲ್‌ನ ಉತ್ಪನವಾದ LPGಯನ್ನು ಪ್ರಧಾನಮಂತ್ರಿ ನರೇಂದ್ರಮೋದಿಯವರ ಗ್ರಾಮಿಣ ಪ್ರದೇಶದ ಕುಟುಂಬದ ಸದಸ್ಯರಿಗೆ ಉಚಿತವಾಗಿ ೨೦೧೭ರಲ್ಲಿ ಕೂಡಲು ಆರಂಭಿಸಿದಾರೆ ಇದರಿಂದ ಅರಣ್ಯನಾಶ ಮತ್ತು ವಾಯುಮಾಲಿನ್ಯ ತಡೆಗಟ್ಟಲಾಗಿದೆ
ಸಂಸ್ಕರಣಾಗಾರಗಳು
[ಬದಲಾಯಿಸಿ]- ಮೇಲಿನ ಅಸ್ಸಾಮ್‌ನಲ್ಲಿರುವ ದಿಗ್‌ಬೋಯಿ ಸಂಸ್ಕರಣಾಗಾರವು ಭಾರತದ ಅತ್ಯಂತ ಹಳೆಯ ಸಂಸ್ಕರಣಾಗಾರವಾಗಿದ್ದು, ಇದು 1901 ರಲ್ಲಿ ಕಾರ್ಯಾರಂಭ ಮಾಡಿತು. ಮೂಲಭೂತವಾಗಿ ಅಸ್ಸಾಮ್ ಆಯಿಲ್ ಕಂಪನಿಯ ಭಾಗವಾಗಿದ್ದು, 1981 ರಲ್ಲಿ ಇದು ಇಂಡಿಯಲ್ ಆಯಿಲ್‌ನ ಭಾಗವಾಯಿತು. 1901 ರಿಂದ ಇದರ ನೈಜವಾದ ಸಂಸ್ಕರಣಾ ಸಾಮರ್ಥ್ಯವು 0.5 ಎಮ್ಎಮ್‌ಟಿಪಿಎ ಆಗಿತ್ತು. ಈ ಸಂಸ್ಕರಣಾಗಾರದ ಆಧುನೀಕರಿಸುವಿಕೆಯ ಯೋಜನೆಯು ಪೂರ್ಣಗೊಳಿಸಲಾಗಿದೆ ಮತ್ತು ಇದೀಗ ಸಂಸ್ಕರಣಾಗಾರವು 0.65 ಎಮ್ಎಮ್‌ಟಿಪಿಎ ನಷ್ಟು ಹೆಚ್ಚಿಸಿದ ಸಾಮರ್ಥ್ಯವನ್ನು ಹೊಂದಿದೆ.
- ಗುವಹಾಟಿ ಸಂಸ್ಕರಣಾಗಾರವು, ರಾಷ್ಟ್ರದ ಮೊದಲ ಸಾರ್ವಜನಿಕ ಕ್ಷೇತ್ರದ ಸಂಸ್ಕರಣಾಗಾರವಾಗಿದ್ದು, ಇದನ್ನು ರೊಮಾನಿಯನ್ ಸಹಯೋಗದೊಂದಿಗೆ ನಿರ್ಮಿಸಲಾಗಿದೆ ಮತ್ತು ಇದನ್ನು ಭಾರತದ ಮೊದಲ ಪ್ರಧಾನಮಂತ್ರಿಯವರಾದ. ದಿವಂಗತ ಪಂಡಿತ್ ಜವಹರಲಾಲ್ ನೆಹರು ಅವರು 1962 ರ ಜನವರಿ 1 ರಂದು ಉದ್ಭಾಟಿಸಿದರು.
- ಬಿಹಾರದಲ್ಲಿರುವ ಬರೌನಿ ಸಂಸ್ಕರಣಾಗಾರವನ್ನು ರಷ್ಯಾ ಮತ್ತು ರೊಮಾನಿಯಾದ ಸಹಯೋಗದೊಂದಿಗೆ ನಿರ್ಮಿಸಲಾಗಿದೆ. ಇದು 1964 ರಲ್ಲಿ 1 ಎಮ್ಎಮ್‌ಟಿಪಿಎ ಸಾಮರ್ಥ್ಯದೊಂದಿಗೆ ಪ್ರಾರಂಭಗೊಂಡಿತು. ಇಂದು ಇದರ ಸಾಮರ್ಥ್ಯವು 6 ಎಮ್ಎಮ್‌ಟಿಪಿಎ ಆಗಿದೆ.
- ಪಶ್ಚಿಮ ಭಾರತದ ಗುಜರಾತಿನ ಕೊಯಾಲಿಯಲ್ಲಿರುವ ಗುಜರಾತ್ ಸಂಸ್ಕರಣಾಗಾರವು ಇಂಡಿಯನ್ ಆಯಿಲ್‌ನ ಅತಿದೊಡ್ಡ ಸಂಸ್ಕರಣಾಗಾರವಾಗಿದೆ. ಈ ರಿಫೈನರಿಯನ್ನು 1965 ರಲ್ಲಿ ಕಾರ್ಯಾರಂಭ ಮಾಡಲಾಯಿತು. ಇದರಲ್ಲಿ ರಾಷ್ಟ್ರದ ಮೊದಲ ಹೈಡ್ರೋಕ್ರಾಕಿಂಗ್ ಘಟಕವೂ ಸಹ ಇದೆ. ಇದರ ಪ್ರಸ್ತುತ ಸಾಮರ್ಥ್ಯವು 13.70 ಎಮ್ಎಮ್‌ಟಿಪಿಎ ಆಗಿದೆ.
- ಕೊಲ್ಕತ್ತಾದಿಂದ 136 ಕಿಮೀ ಕೆಳಪ್ರದೇಶದಲ್ಲಿ ಪೂರ್ಬಾ ಮೇದಿನಿಪುರ (ಪೂರ್ವ ಮಿಡ್ನಾಪುರ) ಜಿಲ್ಲೆಯಲ್ಲಿರುವ ಹಲ್ದಿಯಾ ಸಂಸ್ಕರಣಾಗಾರವು ಕಾರ್ಪೊರೇಷನ್‌ನ ಏಕೈಕ ಸಮುದ್ರ ತೀರದ ಸಂಸ್ಕರಣಾಗಾರವಾಗಿದೆ. ಇದನ್ನು 1975 ರಲ್ಲಿ 2.5 ಎಮ್ಎಮ್‌ಟಿಪಿಎ ಸಾಮರ್ಥ್ಯದೊಂದಿಗೆ ಕಾರ್ಯಾರಂಭ ಮಾಡಲಾಯಿತು, ಅಂದಿನಿದ ಇದನ್ನು 5.8 ಎಮ್ಎಮ್‌ಟಿಪಿಎ ಗೆ ಹೆಚ್ಚಿಸಲಾಗಿದೆ
- ಇಂಡಿಯನ್ ಆಯಿಲ್‌ನ ಅಧೀನದಲ್ಲಿರುವ ಆರನೇ ರಿಫೈನರಿಯಾಗಿ 6.0 ಎಮ್ಎಮ್‌ಟಿಪಿಎ ಮೂಲ ಸಾಮರ್ಥ್ಯದೊಡನೆ 1982 ರಲ್ಲಿ ಮಥುರಾ ಸಂಸ್ಕರಣಾಗಾರವನ್ನು ಕಾರ್ಯಾರಂಭ ಮಾಡಲಾಯಿತು. ಆಗ್ರಾ ಮತ್ತು ದೆಹಲಿಯ ಐತಿಹಾಸಿಕ ನಗರಗಳ ಮಧ್ಯದಲ್ಲಿರುವ ಮಥುರಾ ಸಂಸ್ಕರಣಾಗಾರದ ಸಾಮರ್ಥ್ಯವನ್ನು 7.5 ಎಮ್ಎಮ್‌ಟಿಪಿಎ ಗೆ ಹೆಚ್ಚಿಸಲಾಗಿದೆ.
- ಪಾಣಿಪತ್ ಸಂಸ್ಕರಣಾಗಾರ ವು ಇಂಡಿಯಲ್ ಆಯಿಲ್‌ನ ಏಳನೇ ಸಂಸ್ಕರಣಾಗಾರವಾಗಿದೆ. 6 ಎಮ್ಎಮ್‌ಟಿಪಿಎಯೊಂದಿಗಿನ ಮೂಲ ಸಂಸ್ಕರಣಾಗಾರವನ್ನು 1998 ರಲ್ಲಿ ನಿರ್ಮಿಸಲಾಯಿತು ಮತ್ತು ಕಾರ್ಯನಿರ್ವಹಣೆಯನ್ನು ಪ್ರಾರಂಭಿಸಲಾಯಿತು. ಪಾಣಿಪತ್ ಸಂಸ್ಕರಣಾಗಾರದ ವಿಸ್ತರಣಾ ಯೋಜನೆಯ ಪ್ರಾರಂಭದೊಂದಿಗೆ ಅದರ ಸಂಸ್ಕರಣಾ ಸಾಮರ್ಥ್ಯವನ್ನು ಪ್ರತಿ ವರ್ಷಕ್ಕೆ 6 ಎಮ್ಎಮ್‌ಟಿಪಿಎ ಇಂದ 12 ಎಮ್ಎಮ್‌ಟಿಪಿಎ ಗೆ ದ್ವಿಗುಣಗೊಳಿಸಲಾಗಿದೆ.
ಪೂರಕ ಸಂಸ್ಕರಣಾಗಾರಗಳು - ಬೊಂಬೈಗಾವ್ ಸಂಸ್ಕರಣಾಗಾರ (2.95 ಎಮ್ಎಮ್‌ಟಿಪಿಎ), ಚೆನ್ನೈ ಪೆಟ್ರೋಲಿಯಂ (9.5 ಎಮ್ಎಮ್‌ಟಿಪಿಎ)
ಸಮೂಹ ಕಂಪನಿಗಳು ಮತ್ತು ಜಂಟಿ ಸಹಯೋಗಗಳು
[ಬದಲಾಯಿಸಿ]- ಇಂಡಿಯಲ್ ಆಯಿಲ್ ಟೆಕ್ನಾಲಜೀಸ್ ಲಿಮಿಟೆಡ್: ಇಂಡಿಯಲ್ ಆಯಿಲ್ ಟೆಕ್ನಾಲಜಿ ಎನ್ನುವುದು ಐಓಸಿಎಲ್‌ನ ಮಾರುಕಟ್ಟೆ ವಿಭಾಗವಾಗಿದ್ದು, ಇದು ಫರೀದಾಬಾದ್ನ ಇಂಡಿಯಲ್ ಆಯಿಲ್ ಆರ್&ಡಿ ಕೇಂದ್ರದವರು ಅಭಿವೃದ್ಧಿಪಡಿಸಿದ ಸಂಪೂರ್ಣ ಶ್ರೇಣಿಯ ತಂತ್ರಜ್ಞಾನಗಳನ್ನು ಮಾರುಕಟ್ಟೆ ಮಾಡುತ್ತದೆ. ಇಂಡಿಯಲ್ ಆಯಿಲ್ ಟೆಕ್ನಾಲಜೀಸ್ ಲಿಮಿಟೆಡ್‌ನ ಕೇಂದ್ರ ಕಚೇರಿಯು ಇಂಡಿಯನ್ ಆಯಿಲ್‌ನ ಆರ್&ಡಿ ಕೇಂದ್ರದಲ್ಲಿ ನೆಲೆಸಿದೆ.
- ಇಂಡಿಯಲ್ ಆಯಿಲ್ (ಮಾರಿಷಸ್) ಲಿಮಿಟೆಡ್.
- ಲಂಕಾ ಐಓಸಿ ಪಿಎಲ್‌ಸಿ - ಶ್ರೀಲಂಕಾ ದಲ್ಲಿ ರಿಟೇಲ್ ಮತ್ತು ಸಂಗ್ರಹಣೆ ಕಾರ್ಯಾಚರಣೆಗಳಿಗಾಗಿ ಸಮೂಹ ಕಂಪನಿ. ಇದು ಕೊಲಂಬೋ ಶೇರು ವಿನಿಮಯ ಕೇಂದ್ರ ದಲ್ಲಿ ಪಟ್ಟಿ ಮಾಡಲ್ಪಟ್ಟಿದೆ. ಇದು ಶ್ರೀಲಂಕಾ ಸರ್ಕಾರದೊಡನೆ ಸಬ್ಸಿಡಿ ಪಾವತಿಗೆ ಸಂಬಂಧಿಸಿದಂತೆ ಕಹಿಯಾದ ವಿವಾದವೊಂದರಲ್ಲಿ ಸಿಲುಕಿತ್ತು, ನಂತರ ಅದನ್ನು ಪರಿಹರಿಸಿಕೊಳ್ಳಲಾಯಿತು.[ಸೂಕ್ತ ಉಲ್ಲೇಖನ ಬೇಕು]
- ಐಓಸಿ ಮಧ್ಯ ಪ್ರಾಚ್ಯ ಎಫ್‌ಜೆಡ್ಇ
- ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್
- ಬೊಂಗೈಗಾಂವ್ ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್.
- ಗ್ರೀನ್ ಗ್ಯಾಸ್ ಲಿಮಿಟೆಡ್ - ನಗರ-ವ್ಯಾಪ್ತಿಯ ಅನಿಲ ವಿತರಣೆ ವ್ಯವಸ್ಥೆಗಳಿಗೆ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್.ನೊಂದಿಗಿನ ಜಂಟಿ ಸಹಯೋಗ.
- ಭಾರತದಲ್ಲಿ ವಾರ್ಷಿಕ ಎಫ್‌ಸಿಸಿ (ದ್ರಾವಣೀಕರಿಸಿದ ಕ್ಯಾಟಲಿಟಿಕ್ ಕ್ರ್ಯಾಕಿಂಗ್) ವೇಗವರ್ಧಕ ಮತ್ತು ಸಂಯೋಜನೀಯಗಳ 15,000 ಟನ್‌ಗಳ ತಯಾರಿಕೆಗಾಗಿ ಯುಎಸ್‌ಎ ಯ ಇಂಟರ್‌ಕ್ಯಾಟ್ ಸಂಸ್ಥಯೊಂದಿಗಿನ ಸಹಯೋಗದಲ್ಲಿ ಇಂಡೋ ಕ್ಯಾಟ್ ಪ್ರೈವೇಟ್ ಲಿಮಿಟೆಡ್.
- ಆಯಿಲ್ ಇಂಡಿಯಾ ಲಿಮಿಟೆಡ್., ಆಯಿಲ್ ಎಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ ದೊಂದಿಗೆ ಹಲವಾರು ಪರಿಶೋಧನೆ ಮತ್ತು ಉತ್ಪಾದನೆ ಸಹಯೋಗಗಳು
ಅಂತರರಾಷ್ಟ್ರೀಯ ಶ್ರೇಯಾಂಕಗಳು
[ಬದಲಾಯಿಸಿ]2007 ರ ಹಣಕಾಸು ವರ್ಷದ ಸಾಧನೆಯ ಆಧಾರದಲ್ಲಿ ಫಾರ್ಚ್ಯೂನ್ ಗ್ಲೋಬಲ್ 500 ಪಟ್ಟಿಯಲ್ಲಿ ಇಂಡಿಯನ್ ಆಯಿಲ್ 116ನೇ ಸ್ಥಾನ (2008 ರಲ್ಲಿ) ವನ್ನು ಪಡೆಯುವ ಮೂಲಕ ಈ ಪಟ್ಟಿಯಲ್ಲಿ ಉನ್ನತ ಶ್ರೇಯಾಂಕ ಪಡೆದ ಭಾರತೀಯ ಕಂಪನಿಯಾಗಿದೆ. ಇದು ವಿಶ್ವದಲ್ಲೇ 18 ನೇ ಅತೀದೊಡ್ಡ ಪೆಟ್ರೋಲಿಯಂ ಕಂಪನಿಯಾಗಿದೆ ಮತ್ತು ಏಷ್ಯಾ-ಫೆಸಿಫಿಕ್ ಪ್ರಾಂತ್ಯದಲ್ಲಿನ ರಾಷ್ಟ್ರೀಯ ತೈಲ ಕಂಪನಿಗಳಲ್ಲಿ ಅಗ್ರಗಣ್ಯ ಪೆಟ್ರೋಲಿಯಂ ಟ್ರೇಡಿಂಗ್ ಕಂಪನಿಯಾಗಿದೆ. 2008 ರ ಫೋರ್ಬ್ಸ್ ಗ್ಲೋಬಲ್ 2000 ಪಟ್ಟಿಯಲ್ಲಿನ 303 ನೇ ಸ್ಥಾನದಲ್ಲಿ ಐಓಸಿಎಲ್ ಕಾಣಿಸಿಕೊಂಡಿದೆ.
ನಿಷ್ಠಾವಂತಿಕೆ ಕಾರ್ಯಕ್ರಮಗಳು
[ಬದಲಾಯಿಸಿ]ಎಕ್ಸ್‌ಟ್ರಾಪವರ್ ಫ್ಲೀಟ್ ಕಾರ್ಡ್ ಕಾರ್ಯಕ್ರಮವನ್ನು ದೊಡ್ಡ ಮೋಟಾರು ಕಾರುಗಳ ನಿರ್ವಾಹಕರುಗಳನ್ನು ಉದ್ದೇಶಿಸಿ ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ಇದು 1 ಮಿಲಿಯನ್ ಗ್ರಾಹಕರ ಮೂಲವನ್ನು ಹೊಂದಿದೆ. ಎಕ್ಸ್‌ಟ್ರಾ ರಿವಾರ್ಡ್ಸ್ ಎನ್ನುವುದು ರಿಟೇಲ್ ಗ್ರಾಹಕರಿಗಾಗಿ ಇತ್ತೀಚೆಗೆ ಪ್ರಾರಂಭಿಸಲಾದ ನಿಷ್ಠಾವಂತಿಕೆ ಕಾರ್ಯಕ್ರಮವಾಗಿದ್ದು, ಇಲ್ಲಿ ಗ್ರಾಹಕರು ಸಂಸ್ಥೆಯಲ್ಲಿನ ಖರೀದಿಗೆ ರಿವಾರ್ಡ್ ಅಂಕಗಳನ್ನು ಸಂಪಾದಿಸಬಹುದು
ಪ್ರತಿಸ್ಪರ್ಧಿಗಳು
[ಬದಲಾಯಿಸಿ]ಇಂಡಿಯಲ್ ಆಯಿಲ್ ಕಾರ್ಪೊರೇಶನ್ ಎರಡು ಪ್ರಮುಖ ದೇಶೀಯ ಪ್ರತಿಸ್ಪರ್ಧಿಗಳನ್ನು ಹೊಂದಿದ್ದು, ಅವುಗಳೆಂದರೆ, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ. ಎರಡೂ ಸಹ ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನಂತೆಯೇ ಸರ್ಕಾರಿ-ಸ್ವಾಮ್ಯದ ಸಂಸ್ಥೆಗಳಾಗಿವೆ. ಎರಡು ಖಾಸಗಿ ಪ್ರತಿಸ್ಪರ್ಧಿಗಳಿದ್ದು, ಅವು ಯಾವುವೆಂದರೆ ರಿಲಯನ್ಸ್ ಪೆಟ್ರೋಲಿಯಂ ಮತ್ತು ಎಸ್ಸಾರ್ ಆಯಿಲ್.
ಆತಂಕಗಳು
[ಬದಲಾಯಿಸಿ]ಮಾರ್ಕೆಟಿಂಗ್ ವ್ಯವಸ್ಥಾಪಕರಾಗಿದ್ದು ಮತ್ತು ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಲಖ್ನೋದಿಂದ ಎಂಬಿಎ ಪಡೆದ ಮಂಜುನಾಥ್ ಷಣ್ಮುಗಂ ಅವರನ್ನು ಉತ್ತರ ಪ್ರದೇಶ ರಾಜ್ಯದಲ್ಲಿ ಭ್ರಷ್ಟ ಪೆಟ್ರೋಲ್ ಸ್ಟೇಶನ್ ಅನ್ನು ಮುಚ್ಚಲು ಪ್ರಯತ್ನಿಸಿದಾಗ 2005 ರಲ್ಲಿ ಕೊಲೆ ಮಾಡಲಾಯಿತು ಮತ್ತು ಆಗ ತನ್ನ ಮಾರುಕಟ್ಟೆ ವ್ಯವಹಾರಗಳಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಕಳವಳವನ್ನು ಹೊಂದಿತು.[೩] ಕಾರ್ಪೊರೇಶನ್‌ನ ಮಥುರಾದ ಸಂಸ್ಕರಣಾ ಘಟಕದ ಕಾರಣದಿಂದ ಉಂಟಾಗುವ ವಾಯು ಮಾಲಿನ್ಯ ದ ಅಪಾಯದ ಕಾರಣದಿಂದ ಅದು ಸತತವಾಗಿ ಸುದ್ದಿ Archived 2008-12-27 ವೇಬ್ಯಾಕ್ ಮೆಷಿನ್ ನಲ್ಲಿ. ಯಲ್ಲಿದ್ದಿತು.
ತೈಲ ಉದ್ಯಮ ಅಭಿವೃದ್ಧಿ ಮಂಡಳಿ
[ಬದಲಾಯಿಸಿ]ಭಾರತವು ಸುಮಾರು ಎರಡು ವಾರಗಳ ಬಳಕೆಗೆ ಸಾಕಾಗುವ 37.4 ಬಿಲಿಯನ್ ಬ್ಯಾರಲ್‌ಗಳ ಗಾತ್ರದ ಧ್ಯೇಯೋದ್ದೇಶದ ಕಚ್ಚಾ ತೈಲ ಸಂಗ್ರಹಣೆಯ ಅಭಿವೃದ್ದಿಯನ್ನು ಪ್ರಾರಂಭಿಸಿದೆ.[೪] ಪೆಟ್ರೋಲಿಯಂ ಸಂಗ್ರಹಣೆಯನ್ನು ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಇಂಡಿಯನ್ ಆಯಿಲ್) ನಿಂದ ಆಯಿಲ್ ಇಂಡಸ್ಟ್ರಿ ಡೆವಲಪ್‌ಮೆಂಟ್ ಬೋರ್ಡ್ (ಓಐಡಿಬಿ) ಗೆ ವರ್ಗಾಯಿಸಲಾಗಿದೆ.[೫] ಯೋಜನಾ ವ್ಯವಸ್ಥೆಯ ಸಂಗ್ರಹಣೆಗಾಗಿ ನಿಯಂತ್ರಿತ ಸರ್ಕಾರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಓಐಡಿಬಿ ಯು ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ಐಎಸ್‌ಪಿಆರ್‌ಎಲ್) ಅನ್ನು ಸ್ಥಾಪಿಸಿದೆ.[೬]
ಇವನ್ನೂ ನೋಡಿ
[ಬದಲಾಯಿಸಿ]- ಜಾಗತಿಕ ತಂತ್ರಕುಶಲತೆಯ ಪೆಟ್ರೋಲಿಯಂ ಸಂಗ್ರಹಣೆಗಳು
- ಇಂಡಿಯಲ್ ಆಯಿಲ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ ಮ್ಯಾನೇಜ್‌ಮೆಂಟ್
ಬಾಹ್ಯ ಕೊಂಡಿಗಳು
[ಬದಲಾಯಿಸಿ]- - ಇಂಡಿಯನ್ ಆಯಿಲ್ ಗ್ರಾಹಕರ ಪೋರ್ಟಲ್ /ಎಲೆಡ್ಜರ್ -ಮಾಹಿತಿ ವ್ಯವಸ್ಥೆ ವಿಭಾಗ -ಕೇಂ.ಕ-ಮುಂಬಯಿ Archived 2010-08-24 ವೇಬ್ಯಾಕ್ ಮೆಷಿನ್ ನಲ್ಲಿ.
- - ಇಂಡಿಯನ್ ಆಯಿಲ್ ಉದ್ಯೋಗಿಗಳ ಪೋರ್ಟಲ್ /ಎಲೆಡ್ಜರ್ -ಮಾಹಿತಿ ವ್ಯವಸ್ಥೆ ವಿಭಾಗ -ಕೇಂ.ಕ-ಮುಂಬಯಿ Archived 2010-07-23 ವೇಬ್ಯಾಕ್ ಮೆಷಿನ್ ನಲ್ಲಿ.
- - ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್.ಮಾರುಕಟ್ಟೆ ವಿಭಾಗ -ಮಾಹಿತಿ ವ್ಯವಸ್ಥೆ ವಿಭಾಗ -ಕೇಂ.ಕ-ಮುಂಬಯಿ Archived 2015-04-09 ವೇಬ್ಯಾಕ್ ಮೆಷಿನ್ ನಲ್ಲಿ.
- www.IOCL.com
- ಲಂಕಾ ಐಓಸಿ ಪಿಎಲ್‌ಸಿ Archived 2010-12-29 ವೇಬ್ಯಾಕ್ ಮೆಷಿನ್ ನಲ್ಲಿ.
- ಫಾರ್ಚೂನ್ ಗ್ಲೋಬಲ್ ೫೦೦ ನಲ್ಲಿ ಐಓಸಿಎಲ್
- ಐಓಸಿ ನಿರ್ದೇಶಕರ ಸಂದರ್ಶನ Archived 2009-01-11 ವೇಬ್ಯಾಕ್ ಮೆಷಿನ್ ನಲ್ಲಿ.
- ಫೋರ್ಬ್ಸ್ ೨೦೦೦ ಪಟ್ಟಿಯಲ್ಲಿ ಐಓಸಿಎಲ್
- ಎಕ್ಸ್‌ಟ್ರಾ ಪವರ್ ಫ್ಲೀಟ್ ಕಾರ್ಡ್
- ಇಂಡಿಯನ್ ಆಯಿಲ್ ಟೆಕ್ನಾಲಜೀಸ್ ಲಿಮಿಟೆಡ್. Archived 2015-08-01 ವೇಬ್ಯಾಕ್ ಮೆಷಿನ್ ನಲ್ಲಿ.
- ಉದ್ಯೋಗಿಗಳ ಪೋರ್ಟಲ್ Archived 2008-01-30 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "BSE 2010 Data". http://www.bseindia.com. Retrieved 2010-08-26.
{{cite web}}
: External link in
(help)|publisher=
- ↑ ೨.೦ ೨.೧ "Fortune Global 500 2010 Rankings - Indian Oil Corporation". Money.cnn.com. Retrieved 2010-08-26.
- ↑ "Manjunath Shanmugam Trust". Syg.com. 2006-11-19. Archived from the original on 2011-08-09. Retrieved 2010-08-26.
- ↑ "Alexander's Gas & Oil Connections - India to build up storage of crude oil". Gasandoil.com. 2004-09-21. Archived from the original on 2009-04-18. Retrieved 2010-08-26.
- ↑ "Strategic oil reserves to come directly under Govt". The Hindu Business Line. 2006-04-02. Retrieved 2010-08-26.
- ↑ 20 Jun, 2007, 09.18PM IST,PTI (2007-06-20). "'India to form crude oil reserve of 5 mmt'- Oil & Gas-Energy-News By Industry-News-The Economic Times". Economictimes.indiatimes.com. Retrieved 2010-08-26.
{{cite web}}
: CS1 maint: multiple names: authors list (link) CS1 maint: numeric names: authors list (link)
- Pages using the JsonConfig extension
- CS1 errors: external links
- CS1 maint: multiple names: authors list
- CS1 maint: numeric names: authors list
- Orphaned articles from ಮಾರ್ಚ್ ೨೦೧೯
- All orphaned articles
- Articles with hatnote templates targeting a nonexistent page
- Articles with unsourced statements from January 2010
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ನವದೆಹಲಿಯಲ್ಲಿರುವ ಕಂಪನಿಗಳು
- ಭಾರತದ ಅನಿಲ ಮತ್ತು ತೈಲ ಕಂಪನಿಗಳು
- ಭಾರತದ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲ್ಪಟ್ಟಿರುವ ಕಂಪನಿಗಳು
- ಸರ್ಕಾರಿ ಒಡೆತನದ ಭಾರತದಲ್ಲಿರುವ ಕಂಪನಿಗಳು
- ಇಂಡಿಯನ್ ಆಯಿಲ್ ಕಾರ್ಪೊರೇಶನ್