ಅಕ್ರಿಡಿನ್
ಹೆಸರುಗಳು | |
---|---|
ಐಯುಪಿಎಸಿ ಹೆಸರು
Acridine
| |
Other names
2,3-Benzoquinoline[೧]
| |
ಗುಣಗಳು | |
ಆಣ್ವಿಕ ಸೂತ್ರ | C13H9N |
ಮೋಲಾರ್ ದ್ರವ್ಯರಾಶಿ | ೧೭೯.೨೨ g mol−1 |
Appearance | White powder |
ಸಾಂದ್ರತೆ | 1.005 g/cm3 (20 °C)[೨] |
ಕರಗು ಬಿಂದು |
106-110 °C, 269 K, -60 °F ( |
ಕುದಿ ಬಿಂದು |
344.86 °C, 618 K, 653 °F ( |
ಕರಗುವಿಕೆ ನೀರಿನಲ್ಲಿ | 46.5 mg/L[೨] |
ಕರಗುವಿಕೆ | Soluble in CCl4, alcohols, (C2H5)2O, C6H6[೨] |
ಅಮ್ಲತೆ (pKa) | 5.58 (20 °C)[೨] |
ಉಷ್ಣರಸಾಯನಶಾಸ್ತ್ರ | |
ರೂಪಗೊಳ್ಳುವ ಸ್ಟ್ಯಾಂಡರ್ಡ್ ಶಾಖಪ್ರಮಾಣ ΔfH |
179.4 kJ/mol[೨] |
ದಹನದ ಸ್ಟ್ಯಾಂಡರ್ಡ್ ಶಾಖಪ್ರಮಾಣ ΔcH |
6581.3 kJ/mol[೩] |
ಸ್ಟ್ಯಾಂಡರ್ಡ್ ಮೋಲಾರ್ ಎಂಟ್ರಪಿ S |
208.03 J/mol·K[೩] |
ವಿಶಿಷ್ಟ ಉಷ್ಣ ಸಾಮರ್ಥ್ಯ, C | 205.07 J/mol·K[೩] |
Hazards | |
Lethal dose or concentration (LD, LC): | |
LD50 (median dose)
|
500 mg/kg (mice, oral)[೧] |
Except where otherwise noted, data are given for materials in their standard state (at 25 °C [77 °F], 100 kPa). > | |
Infobox references | |
ಅಕ್ರಿಡಿನ್ ಸಾರಜನಕದ ಪರಮಾಣುವೊಂದನ್ನುಳ್ಳ ಮಿಶ್ರಚಕ್ರೀಯ (ಹೆಟೆರೋಸೈಕ್ಲಿಕ್) ಸಂಯುಕ್ತ ಇದನ್ನು ಪಕ್ಕಕ್ಕೆ ತೋರಿಸಿರುವ ಅಣುಸೂತ್ರದಿಂದ ನಿರೂಪಿಸಬಹುದು. ಒಂದಕ್ಕೊಂದು ಸೇರಿಕೊಂಡಿರುವ ಮೂರು ಚಕ್ರಗಳನ್ನುಳ್ಳ ಈ ಸಂಯುಕ್ತ ರಚನೆ (ರಿಂಗ್ ಸ್ಟ್ರಕ್ಚರ್) ಆ್ಯಂಥ್ರಸೀನ್ ರಚನೆಯನ್ನು ಹೋಲುತ್ತದೆ.
ತಯಾರಿಕೆ
[ಬದಲಾಯಿಸಿ]ಕಲ್ಲಿದ್ದಲಿನಿಂದ ಉತ್ಪತ್ತಿಯಾಗುವ ಟಾರೆಣ್ಣೆಯಲ್ಲಿ ಈ ಸಂಯುಕ್ತ ಅಲ್ಪ ಪ್ರಮಾಣದಲ್ಲಿ ದೊರೆಯುತ್ತದೆ. ಕೃತಕವಾಗಿಯೂ ಇತರ ಸಂಯುಕ್ತಗಳಿಂದಲೂ ಅಕ್ರಿಡಿನ್ನನ್ನು ತಯಾರಿಸಬಹುದು.
ಗುಣಗಳು
[ಬದಲಾಯಿಸಿ]ಶುದ್ಧ ಅಕ್ರಿಡಿನ್ನಿನ ರೂಪ ವರ್ಣ ರಹಿತ ಸೂಜಿಯಾಕಾರದ ಹರಳುಗಳಂತಿರುತ್ತದೆ. ಅಕ್ರಿಡಿನ್ ಮತ್ತು ಅದರ ಇತರ ಸಂಯುಕ್ತಗಳೆಲ್ಲವೂ ತಮ್ಮದೇ ಆದ ಒಂದು ವಿಶಿಷ್ಟ ವಾಸನೆಯನ್ನು ಹೊಂದಿವೆ. ದ್ರಾವಣ ರೂಪದಲ್ಲಿದ್ದಾಗ ಹಳದಿ ಹಸಿರುಮಿಶ್ರಿತವಾಗಿ ಗೋಚರಿಸುವ ಕಿರಣಸ್ಫುರಣ ಅಥವಾ ಪ್ರತಿದೀಪ್ತಿಯನ್ನು (ಫೋರಸೆನ್ಸ್) ಇವು ಪ್ರದರ್ಶಿಸಬಲ್ಲುವು.
ಉಪಯೋಗಗಳು
[ಬದಲಾಯಿಸಿ]ಅಕ್ರಿಡಿನ್ನಿನಿಂದ ನೇರವಾಗಿ ಹೆಚ್ಚು ಉಪಯೋಗವಿಲ್ಲದಿದ್ದರೂ ಬಣ್ಣಗಳಾಗಿ ಉಪಯೋಗಿಸಲಾಗುತ್ತಿರುವ ಅಕ್ರಿಡಿನ್ ಆರೆಂಜ್, ಅಕ್ರಿಡಿನ್ ಯೆಲ್ಲೋ, ಕ್ರೈಸಾನಿಲಿನ್, ಟ್ರಿಪಫ್ಲೇವಿನ್ ಮತ್ತು ಬೆಂಜೋಫ್ಲೇವಿನ್‍ಗಳಲ್ಲಿ ಅಕ್ರಿಡಿನ್ನಿನ ಮಾತೃವೃತ್ತ (ಪೇರೆಂಟ್ ರಿಂಗ್ ) ಇದೆ. ಮಲೇರಿಯಾ ಜ್ವರಕ್ಕೆ ಮದ್ದಾಗಿರುವ ಅಟೆಬ್ರಿನ್ ಮತ್ತು ಅಮೀಬದ ರಕ್ತಭೇದಿಯ ಚಿಕಿತ್ಸೆಯಲ್ಲಿ ಉಪಯೋಗಿಸುವ ರಿವನಾಲ್ ಸಂಯುಕ್ತಗಳು ಅಕ್ರಿಡಿನ್ ರಚನೆಯಿಂದ ಜನ್ಯವಾದವು.