ಅಕ್ರಿಡಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಕ್ರಿಡಿನ್
Acridine chemical structure
ಹೆಸರುಗಳು
ಐಯುಪಿಎಸಿ ಹೆಸರು
Acridine
Other names
2,3-Benzoquinoline[೧]
ಗುಣಗಳು
ಆಣ್ವಿಕ ಸೂತ್ರ C13H9N
ಮೋಲಾರ್ ದ್ರವ್ಯರಾಶಿ ೧೭೯.೨೨ g mol−1
Appearance White powder
ಸಾಂದ್ರತೆ 1.005 g/cm3 (20 °C)[೨]
ಕರಗು ಬಿಂದು

106-110 °C, 269 K, -60 °F (
at 760 mmHg[೨])

ಕುದಿ ಬಿಂದು

344.86 °C, 618 K, 653 °F (
at 760 mmHg[೨])

ಕರಗುವಿಕೆ ನೀರಿನಲ್ಲಿ 46.5 mg/L[೨]
ಕರಗುವಿಕೆ Soluble in CCl4, alcohols, (C2H5)2O, C6H6[೨]
ಅಮ್ಲತೆ (pKa) 5.58 (20 °C)[೨]
ಉಷ್ಣರಸಾಯನಶಾಸ್ತ್ರ
ರೂಪಗೊಳ್ಳುವ
ಸ್ಟ್ಯಾಂಡರ್ಡ್ ಶಾಖಪ್ರಮಾಣ
ΔfHo298
179.4 kJ/mol[೨]
ದಹನದ
ಸ್ಟ್ಯಾಂಡರ್ಡ್ ಶಾಖಪ್ರಮಾಣ
ΔcHo298
6581.3 kJ/mol[೩]
ಸ್ಟ್ಯಾಂಡರ್ಡ್
ಮೋಲಾರ್ ಎಂಟ್ರಪಿ
So298
208.03 J/mol·K[೩]
ವಿಶಿಷ್ಟ ಉಷ್ಣ ಸಾಮರ್ಥ್ಯ, C 205.07 J/mol·K[೩]
Hazards
Lethal dose or concentration (LD, LC):
500 mg/kg (mice, oral)[೧]
Except where otherwise noted, data are given for materials in their standard state (at 25 °C [77 °F], 100 kPa).

>

Infobox references

ಅಕ್ರಿಡಿನ್ ಸಾರಜನಕಪರಮಾಣುವೊಂದನ್ನುಳ್ಳ ಮಿಶ್ರಚಕ್ರೀಯ (ಹೆಟೆರೋಸೈಕ್ಲಿಕ್) ಸಂಯುಕ್ತ ಇದನ್ನು ಪಕ್ಕಕ್ಕೆ ತೋರಿಸಿರುವ ಅಣುಸೂತ್ರದಿಂದ ನಿರೂಪಿಸಬಹುದು. ಒಂದಕ್ಕೊಂದು ಸೇರಿಕೊಂಡಿರುವ ಮೂರು ಚಕ್ರಗಳನ್ನುಳ್ಳ ಈ ಸಂಯುಕ್ತ ರಚನೆ (ರಿಂಗ್ ಸ್ಟ್ರಕ್ಚರ್) ಆ್ಯಂಥ್ರಸೀನ್ ರಚನೆಯನ್ನು ಹೋಲುತ್ತದೆ.

ತಯಾರಿಕೆ[ಬದಲಾಯಿಸಿ]

ಕಲ್ಲಿದ್ದಲಿನಿಂದ ಉತ್ಪತ್ತಿಯಾಗುವ ಟಾರೆಣ್ಣೆಯಲ್ಲಿ ಈ ಸಂಯುಕ್ತ ಅಲ್ಪ ಪ್ರಮಾಣದಲ್ಲಿ ದೊರೆಯುತ್ತದೆ. ಕೃತಕವಾಗಿಯೂ ಇತರ ಸಂಯುಕ್ತಗಳಿಂದಲೂ ಅಕ್ರಿಡಿನ್ನನ್ನು ತಯಾರಿಸಬಹುದು.

ಗುಣಗಳು[ಬದಲಾಯಿಸಿ]

ಶುದ್ಧ ಅಕ್ರಿಡಿನ್ನಿನ ರೂಪ ವರ್ಣ ರಹಿತ ಸೂಜಿಯಾಕಾರದ ಹರಳುಗಳಂತಿರುತ್ತದೆ. ಅಕ್ರಿಡಿನ್ ಮತ್ತು ಅದರ ಇತರ ಸಂಯುಕ್ತಗಳೆಲ್ಲವೂ ತಮ್ಮದೇ ಆದ ಒಂದು ವಿಶಿಷ್ಟ ವಾಸನೆಯನ್ನು ಹೊಂದಿವೆ. ದ್ರಾವಣ ರೂಪದಲ್ಲಿದ್ದಾಗ ಹಳದಿ ಹಸಿರುಮಿಶ್ರಿತವಾಗಿ ಗೋಚರಿಸುವ ಕಿರಣಸ್ಫುರಣ ಅಥವಾ ಪ್ರತಿದೀಪ್ತಿಯನ್ನು (ಫೋರಸೆನ್ಸ್) ಇವು ಪ್ರದರ್ಶಿಸಬಲ್ಲುವು.

ಉಪಯೋಗಗಳು[ಬದಲಾಯಿಸಿ]

ಅಕ್ರಿಡಿನ್ನಿನಿಂದ ನೇರವಾಗಿ ಹೆಚ್ಚು ಉಪಯೋಗವಿಲ್ಲದಿದ್ದರೂ ಬಣ್ಣಗಳಾಗಿ ಉಪಯೋಗಿಸಲಾಗುತ್ತಿರುವ ಅಕ್ರಿಡಿನ್ ಆರೆಂಜ್, ಅಕ್ರಿಡಿನ್ ಯೆಲ್ಲೋ, ಕ್ರೈಸಾನಿಲಿನ್, ಟ್ರಿಪಫ್ಲೇವಿನ್ ಮತ್ತು ಬೆಂಜೋಫ್ಲೇವಿನ್‍ಗಳಲ್ಲಿ ಅಕ್ರಿಡಿನ್ನಿನ ಮಾತೃವೃತ್ತ (ಪೇರೆಂಟ್ ರಿಂಗ್ ) ಇದೆ. ಮಲೇರಿಯಾ ಜ್ವರಕ್ಕೆ ಮದ್ದಾಗಿರುವ ಅಟೆಬ್ರಿನ್ ಮತ್ತು ಅಮೀಬದ ರಕ್ತಭೇದಿಯ ಚಿಕಿತ್ಸೆಯಲ್ಲಿ ಉಪಯೋಗಿಸುವ ರಿವನಾಲ್ ಸಂಯುಕ್ತಗಳು ಅಕ್ರಿಡಿನ್ ರಚನೆಯಿಂದ ಜನ್ಯವಾದವು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  1. ೧.೦ ೧.೧ ಉಲ್ಲೇಖ ದೋಷ: Invalid <ref> tag; no text was provided for refs named fca
  2. ೨.೦ ೨.೧ ೨.೨ ೨.೩ ೨.೪ ೨.೫ ೨.೬ ಉಲ್ಲೇಖ ದೋಷ: Invalid <ref> tag; no text was provided for refs named crc
  3. ೩.೦ ೩.೧ ೩.೨ ಟೆಂಪ್ಲೇಟು:Nist
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: