ನಿಶಾನ್ ಕೆ ಪಿ ನಾಣಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿಶಾನ್
ಜನನ
ನಿಶಾನ್ ಕೆ ಪಿ ನಾಣಯ್ಯ [೧]

ಉದ್ಯೋಗಅಭಿನೇತೃ
ಸಕ್ರಿಯ ವರ್ಷಗಳು2009 - ಪ್ರಸಕ್ತ

ನಿಶಾನ್ ಕೆ ಪಿ ನಾಣಯ್ಯ, (ಜನನ: ೦೭ನೇ ಡಿಸೆಂಬರ್ ೧೯೮೫)ನವರು ನಿಶಾನ್ ಎಂದು ಪ್ರಸಿದ್ಧರಾಗಿರುವ ಭಾರತೀಯ ಚಲನಚಿತ್ರ ನಟರು. ಕರ್ನಾಟಕದವರಾದ ಇವರು ಮುಖ್ಯವಾಗಿ ಮಲಯಾಳಮ್ ಚಲನಚಿತ್ರ ರಂಗದಲ್ಲಿ ವಿಖ್ಯಾತರು. ೨೦೦೯ರಲ್ಲಿ "ಸೈಕ್‌ಲ್ ಕಿಕ್" ಎನ್ನುವ ಹಿಂದಿ ಚಿತ್ರದ ಮೂಲಕ ಅಭಿನಯರಂಗವನ್ನು ಪ್ರವೇಶಿಸಿದರು. ಆದರೆ ಕಾರಣವಶಾತ್ ಈ ಚಿತ್ರ ಬಿಡುಗಡೆಯಾಗಲಿಲ್ಲ. ಅದೇ ವರ್ಷ ಮಲಯಾಳಮ್ ಚಿತ್ರರಂಗದ ಶ್ಯಾಮಪ್ರಸಾದರ "ಋತು" ಚಿತ್ರದಲ್ಲಿ ನಾಯಕ ಪಾತ್ರ ದೊರಕಿತು. ೨೦೧೦ರಲ್ಲಿ ಸಿಬಿ ಮಲಯಿಳ್ ಅವರ "ಅಪೂರ್ವರಾಗಮ್" ಚಿತ್ರದ ಮೂಲಕ ರಸಿಕರ ಗಮನವನ್ನು ಸೆಳೆದರು.

ಜನನ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

ಕರ್ನಾಟಕದ ಕೊಡಗಿನಲ್ಲಿ ಕೊಡವ ಜನಾಂಗದವರಾಗಿ ಹುಟ್ಟಿದರೂ ನಿಶಾನ್ ಅವರ ಬಾಲ್ಯವೆಲ್ಲಾ ಪಶ್ಚಿಮ ಬಂಗಾಳಕೊಲ್ಕತ್ತಾದಲ್ಲಿ ಕಳೆಯಿತು. ತಂದೆ, ಪ್ರಸಾದ್, ಕಸ್ಟಮ್ಸ್ ಇಲಾಖೆಯ ನಿವೃತ್ತ ಡೆಪ್ಯುಟಿ ಕಮಿಶನರ್ ಹಾಗೂ ತಾಯಿ ಸದ್ಗೃಹಿಣಿ. ತಂಗಿ, ಶೃತಿ ಪ್ರಸಾದ್ ಕಳ್ಳಿಚಂಡ ಅವರು ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಾಗಿ ಅಧ್ಯಯನ ನಡೆಸುತ್ತಿದ್ದಾರೆ.

ನಿಶಾನ್ ವಿಶ್ವವಿದ್ಯಾನಿಲಯದ ಟೆನ್ನಿಸ್ ಕ್ರೀಡಾಪಟು. ಬಳಿಕ ಪುಣೆಯ ಫಿಲ್ಮ್ ಇನ್ಸ್ಟಿಟ್ಯೂಟ್‌ನಿಂದ ಡಿಪ್ಲೋಮಾ ಪಡೆದರು.[೨]

ಚಿತ್ರರಂಗದಲ್ಲಿ[ಬದಲಾಯಿಸಿ]

ತದನಂತರ ಬಾಲಿವುಡ್ ನಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಮುಂಬೈಗೆ ತೆರಳಿದರು. ಅಲ್ಲಿ ಸುಭಾಷ್ ಘೈ ನಿರ್ಮಾಣದ "ಸೈಕ್‌ಲ್ ಕಿಕ್" ಎಂಬ ಚಿತ್ರದಲ್ಲಿ ಅಭಿನಯಿಸಿದರು. ಚಿತ್ರವು ತಡವಾಗಿ ೨೦೧೧ರಲ್ಲಿ ಬಿಡುಗಡೆಯಾಯಿತು.[೨]

೨೦೦೯ರಲ್ಲಿ ಬಿಡುಗಡೆಗೊಂಡ "ಮನೋರಮಾ" ತೆಲುಗು ಚಿತ್ರದಲ್ಲಿ ಅಭಿನಯಿಸಲು ಅವಕಾಶ ದೊರೆತಾಗ ತನ್ನ ಅಭಿನಯ ಕ್ಷೇತ್ರವನ್ನು ವಿಸ್ತಾರಗೊಳಿಸಲು ನಿಶಾನ್ ದಕ್ಷಿಣ ಭಾರತಕ್ಕೆ ಬಂದರು.[೨] ಈ ಚಿತ್ರದಲ್ಲಿಯ ಅವರ ಅಭಿನಯವು ಜನಮನ್ನಣೆಯನ್ನು ಪಡೆದರೂ ನಿಶಾನ್ ಬಾಲಿವುಡ್‌ಗೆ ಮರಳಿದರು. ಇದೇ ಸಮಯದಲ್ಲಿ ಮಲಯಾಳಮ್ ಚಿತ್ರ ಜಗತ್ತಿನ ನಿರ್ದೇಶಕ ಶ್ಯಾಮಪ್ರಸಾದರ "ಋತು" ಚಿತ್ರದಲ್ಲಿ ನಾಯಕನ ಪಾತ್ರವನ್ನು ವಹಿಸಲು ಕರೆ ಬಂತು. ಈ ಚಿತ್ರದ ನಂತರ ಸಿಬು ಮಲಯಿಳ್ ಅವರ "ಅಪೂರ್ವ ರಾಗಂ" ಚಿತ್ರದಲ್ಲಿ ಗಮನೀಯ ಪಾತ್ರ ಅವರ ಪಾಲಿಗೆಬಂತು.

ನಿಶಾನ್ ಅವರ ಮುಂದಿನ "ಈ ಅಟುತ್ತ ಕಾಲತ್ತ್" ದಿಟ್ಟ ಹಾಗೂ ನೈಜ ಕಥನಶೈಲಿಗಳಲ್ಲಿ ಹೊಸ ಮಾರ್ಗವನ್ನು ತುಳಿದ ಚಿತ್ರವೆಂದು ವಿಮರ್ಶಕರ ಮೆಚ್ಚುಗೆಯನ್ನು ಪಡೆಯಿತು. ಅವರ ರುಸ್ತಮನ ಪಾತ್ರ ವೀಕ್ಷಕರ ಮತ್ತು ವಿಮರ್ಶಕರನ್ನು ಮೆಚ್ಚಿಸಿತು. ಇದಾದ ಮೇಲೆ ಮಲಯಾಳಮ್ ಚಿತ್ರರಂಗದಲ್ಲೇ ಎಂಟು-ಹತ್ತು ಚಿತ್ರಗಳಲ್ಲಿ ಅಭಿನಯಿಸಲು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು.

ಫಿಲ್ಮೋಗ್ರಫಿ[ಬದಲಾಯಿಸಿ]

ಕ್ರ ಸಂ ಚಿತ್ರದ ಹೆಸರು ಬಿಡುಗಡೆಯ ವರ್ಷ ಭಾಷೆ ನಿರ್ದೇಶಕ ಸಹನಟರು ಪಾತ್ರ ಟಿಪ್ಪಣಿ
ಸೈಕ್‌ಲ್ ಕಿಕ್ ೨೦೧೧ ಹಿಂದಿ ಶಶಿ ಸುದಿಗಲ ಸನ್ನಿ ಹಿಂದುಜ, ಗಿರಿಜಾ ಓಕ್ ರಾಮು ೨ ವರ್ಷ ತಡವಾಗಿ ಬಿಡುಗಡೆಯಾಯಿತು
ಋತು ೨೦೦೯ ಮಲಯಾಳಮ್ ಶ್ಯಾಮಪ್ರಸಾದ್ ಆಸಿಫ್ ಅಲಿ, ರೀಮಾ ಕಲ್ಲಿಂಕಲ್ ಶರತ್ ವರ್ಮ
ಮನೋರಮ ೨೦೦೯ ತೆಲುಗು ಈಶ್ವರ್ ರೆಡ್ಡಿ ಚಾರ್ಮಿ ಅಪರಿಚಿತ
ಅಪೂರ್ವ ರಾಗಮ್ ೨೦೧೦ ಮಲಯಾಳಮ್ ಸಿಬಿ ಮಲಯಿಳ್ ಆಸಿಫ್ ಅಲಿ, ನಿತ್ಯಾ ಮೆನೊನ್ ರೂಪೇಶ್
ಗ್ರಾಮಮ್ ೨೦೧೧ ಮಲಯಾಳಮ್ ಮೋಹನ್ ನೆಡುಮುಡಿ ವೇಣು, ಸಂವೃತ ಸುನಿಲ್ ಕಣ್ಣನ್
ನಾಟ್ ಔಟ್ ೨೦೧೧ ಮಲಯಾಳಮ್ ಕುಟ್ಟಿ ನಡುವಿಲ್ ಮಿತ್ರಾ ಕುರಿಯನ್, ಅನೂಪ್ ಚಂದ್ರನ್ ಪವಿತ್ರನ್
ಇತು ನಮ್ಮುಟೆ ಕಥ ೨೦೧೧ ಮಲಯಾಳಮ್ ರಾಜೇಶ್ ಕಣ್ಣಂಕರ ಆಸಿಫ್ ಅಲಿ, ಅನನ್ಯ, ಜಗತಿ ಸಂತೋಷ್
ಈ ಅಟುತ್ತ ಕಾಲತ್ತ್ ೨೦೧೨ ಮಲಯಾಳಮ್ ಅರುಣ್ ಕುಮಾರ್ ಅರವಿಂದ್ ಇಂದ್ರಜಿತ್ ಸುಕುಮಾರನ್, ಅನೂಪ್ ಮೆನೊನ್, ಮೈಥಿಲಿ ರುಸ್ತಮ್
ಅನ್ನುಮ್, ಇನ್ನುಮ್, ಎನ್ನುಮ್ ೨೦೧೩ ಮಲಯಾಳಮ್ ರಾಜೇಶ್ ನಾಯರ್ ಜಿಶ್ಣು, ಫರೀಸ ಜೋಮ್ಮನ್‌ಬಕ್ಸ್ ರಾಯ್
೧೦ ಡೇವಿಡ್ ೨೦೧೩ ಹಿಂದಿ ಬೆಜೊಯ್ ನಂಬಿಯಾರ್ ವಿಕ್ರಮ್, ತಬು, ಇಶಾ ಶ್ರಾವಣಿ ಪೀಟರ್
೧೧ ಡೇವಿಡ್ ೨೦೧೩ ತಮಿಳು ಬೆಜೊಯ್ ನಂಬಿಯಾರ್ ವಿಕ್ರಮ್, ತಬು, ಇಶಾ ಶ್ರಾವಣಿ ಪೀಟರ್
೧೨ ೧೦:೩೦ ಎ ಎಮ್ ಲೋಕಲ್ ಕಾಲ್ ೨೦೧೩ ಮಲಯಾಳಮ್ ಮನು ಸುಧಾಕರ್ ಶೃತಾ ಶಿವದಾಸ್, ಕೈಲಾಶ್ ಅಲ್ಬಿ
೧೩ ರೇಡಿಯೊ ೨೦೧೩ ಮಲಯಾಳಮ್ ಉಮರ್ ಮೊಹಮದ್ ಇನಿಯಾ, ಸರಯೂ
೧೪ ಕ್ಲೈಮ್ಯಾಕ್ಸ್ ೨೦೧೩ ಮಲಯಾಳಮ್ ಸುರೇಶ್ ಕೃಷ್ಣ, ಸಾನಾ ಖಾನ್
೧೫ ಲ್ಯಾವೆಂಡರ್ ೨೦೧೩ ಮಲಯಾಳಮ್ ಅಲ್ತಸ್ ಅಲಿ ಅನೂಪ್ ಮೆನೊನ್, ರೆಹಮಾನ್, ಸೋನಾಲಿ ದೇಬ್‌ರಾಜ್
೧೬ ಶೂಟ್ ಔಟ್ ೨೦೧೩ ತಮಿಳು
೧೭ ಅಮೇಯ ೨೦೧೩ ಮಲಯಾಳಮ್ ಅಶ್ರಫ್ ಮುಹಮ್ಮದ್ ಅನನ್ಯ
೧೮ ಪ್ರಿವ್ಯೂ ೨೦೧೩ ಮಲಯಾಳಮ್ ಹಾಶಿಮ್ ಮಾರಿಕರ್ ಲಕ್ಷ್ಮಿ ರೈ
೧೯ ೧೨೦ ಮಿನಿಟ್ಸ್ ೨೦೧೩ ಮಲಯಾಳಮ್ ಜಿ ಕಾಮರಾಜ್ ಸಂಜನಾ ಸಿಂಘ್, ಅಕ್ಷತಾ
೨೦ ಬದ್ಲಾಪುರ್ ಬಾಯ್ಸ್ ೨೦೧೩ ಹಿಂದಿ ಶೈಲೇಶ್ ವರ್ಮ ಶರಣ್ಯಾ ಮೋಹನ್

ಪ್ರಶಸ್ತಿಗಳು[ಬದಲಾಯಿಸಿ]

  • ಏಶ್ಯಾನೆಟ್ ಫಿಲ್ಮ್ ಪ್ರಶಸ್ತಿ ಅತ್ಯುತ್ತಮ ಹೊಸ ನಟ (೨೦೦೯)

References[ಬದಲಾಯಿಸಿ]

  1. "K. P. Nishan Nanaiah biography"[ಶಾಶ್ವತವಾಗಿ ಮಡಿದ ಕೊಂಡಿ]. Yahoo.com. Retrieved 2011-01-17.
  2. ೨.೦ ೨.೧ ೨.೨ P.K.Ajith Kumar (2010-09-24). "Making a mark". ದಿ ಹಿಂದೂ. Archived from the original on 2012-11-08. Retrieved 2013-05-16. {{cite web}}: Italic or bold markup not allowed in: |publisher= (help)

External links[ಬದಲಾಯಿಸಿ]