ವಿಷಯಕ್ಕೆ ಹೋಗು

ರಾಷ್ಟ್ರೀಯ ಹೆದ್ದಾರಿ ೪

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"ರಾಷ್ಟ್ರೀಯ ಹೆದ್ದಾರಿ ೪" (ರಾಹೆ ೪) ವು ಪಶ್ಚಿಮದಿಂದ ದಕ್ಷೀಣ ಮುಖವಾಗಿರುವ ಪ್ರಮುಖವಾದ ರಾಷ್ಟ್ರೀಯ ಹೆದ್ದಾರಿ. ರಾಷ್ಟ್ರೀಯ ಹೆದ್ದಾರಿ ೪, ಭಾರತದ ಪ್ರಮುಖ ನಗರಗಳಾದ ಮುಂಬಯಿ, ಪುಣೆ, ಬೆಂಗಳೂರು ಹಾಗೂ ಚೆನ್ನೈ ಗಳನ್ನು ಜೋಡಿಸುತ್ತದೆ. ರಾಹೆ ೪ , [convert: invalid number] ಉದ್ದವಾಗಿದ್ದು, ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹಾದು ಹೋಗುತ್ತದೆ.

ರಾಷ್ಟ್ರೀಯ ಹೆದ್ದಾರಿ ೪ ವು, ಗೋಲ್ಡನ್ ಕ್ವಾಡ್ರಿಲಾಟರಲ್ ನ ಸುಮಾರು ೯೦% ಮುಂಬಯಿ- ಚೆನ್ನೈ ಹೆದ್ದಾರಿಯನ್ನು ಒಳಗೊಂಡಿದೆ. ಈ ಮಹತ್ವಾಂಕ್ಷೆಯ ಯೋಜನೆಯು ರಾಹೆ ೪ನ್ನು, ಎರಡರಿಂದ , ಚತುಷ್ಪದವನ್ನಾಗಿ ವಿಸ್ತರಿಸುತ್ತದೆ. ಈ ಹೆದ್ದಾರಿಯನ್ನು ಕರ್ನಾಟಕದಲ್ಲಿ ಪುಣೆ- ಬೆಂಗಳೂರು (ಪಿಬಿ) ರಸ್ತೆಯೆಂದೂ ಕರೆಯುತ್ತಾರೆ. ಇದು ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ಪ್ರಮುಖ ನಗರಗಳಾದ ಸಾತಾರ, ಕರಾಡ, ಕೊಲ್ಲಾಪುರ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ , ದಾವಣಗೆರೆ ಮತ್ತು ತುಮಕೂರು ಗಳನ್ನು ಕೂಡಿಸುತ್ತದೆ.

ರಾಹೆ ೪ , ಪುಣೆಯನ್ನು ದೇಹು ರೋಡ್‍ನಿಂದ ಕತ್ರಜವರೆಗೆ ಹೊರಗಿನಿಂದ ಹಾದು ಹೊಗುತ್ತದೆ. ಪುಣೆಯಲ್ಲಿ ಕತ್ರಜ ಘಾಟನ್ನು ಸುರಂಗ ಮಾರ್ಗವಾಗಿ ಹೋಗಿ , ಸುಮಾರು ೧ ಘಂಟೆಯ ಪ್ರಯಾಣವನ್ನು ಕಡಿತಗೊಳಿಸುತ್ತದೆ.

ರಾಹೆ ೪, ಸಾಂಗ್ಲಿಯಿಂದ ಸುಮಾರು [convert: invalid number]ನಿಂದ ಹೊರ ಹಾಯುತ್ತದೆ. ಸಾಂಗ್ಲಿ -ಮಿರಜ್ ಅವಳಿ ನಗರಗಳಿಗೆ [convert: invalid number] ಅಂತರದಲ್ಲಿ ೨ ಹೊರ ರಸ್ತೆಗಳನ್ನು ಹೊಂದಿದೆ.

ಪ್ರಮುಖ ಪಟ್ಟಣ ಹಾಗೂ ನಗರಗಳು

[ಬದಲಾಯಿಸಿ]

ಮಹಾರಾಷ್ಟ್ರ :

ಕರ್ನಾಟಕ :

ಆಂಧ್ರಪ್ರದೇಶ

ತಮಿಳುನಾಡು

ಗ್ಯಾಲರಿ

[ಬದಲಾಯಿಸಿ]