ವಿಷಯಕ್ಕೆ ಹೋಗು

ಒಸಾಮಾ ಬಿನ್ ಲಾಡೆನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಸಾಮಾ ಬಿನ್ ಲಾಡೆನ್
أسامة بن لادن
ಜನನ(೧೯೫೭-೦೩-೧೦)೧೦ ಮಾರ್ಚ್ ೧೯೫೭
ಮರಣMay 2, 2011(2011-05-02) (aged 54)
ರಾಷ್ಟ್ರೀಯತೆಸೌದಿ ಅರೇಬಿಯ

ಒಸಾಮಾ ಬಿನ್ ಮೊಹಮ್ಮದ್ ಬಿನ್ ಅವದ್ ಬಿನ್ ಲಾಡೆನ್ (ಅರೇಬಿಕ್: أسامة بن محمد بن عوض بن لادن, ೧೦ ಮಾರ್ಚ್ ೧೯೫೭– ೨ ಮೇ ೨೦೧೧[][]) ಸೌದಿ ಅರೇಬಿಯದ ಶ್ರೀಮಂತ ಬಿನ್ ಲಾಡೆನ್ ಪರಿವಾರದ ಸದಸ್ಯ, ಜಿಹಾದಿ ಭಯೋತ್ಪಾದಕ ಸಂಸ್ಥೆಯಾದ ಅಲ್ ಖೈದಾದ ಸಂಸ್ಥಾಪಕ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸೆಪ್ಟೆಂಬರ್ ೧೧ ೨೦೦೧ರಂದು ನಡೆದ ದಾಳಿ ಮತ್ತು ಇನ್ನೂ ಅನೇಕ ನಾಗರಿಕ ಮತ್ತು ಸೈನ್ಯ ಗುರಿಗಳ ಮೇಲೆ ನಡೆದ ದಾಳಿಗಳ ಜವಾಬ್ದಾರ.

ಜನನ,ವಿದ್ಯಾಭ್ಯಾಸ ಹಾಗೂ ಮುಂದಿನ ಜೀವನ

[ಬದಲಾಯಿಸಿ]

ತಂದೆ, ಮಹಮದ್ ಲಾಡೆನ್. ತಾಯಿ, ಹಮೀದಾ ಆಲ್ ಅತ್ತಾಸ್, ಇವರ ಏಕೈಕ ಪುತ್ರನೇ ಒಸಾಮಾ ಬಿನ್ ಲಾಡೆನ್. ಮಹಮದ್ ಲಾಡೆನ್ ರ ೧೦ ನೆಯ ಪತ್ನಿ ಹಮೀದಾ, ೧೯೫೭ ರ, ಮಾರ್ಚ್ ೧೦ ರಂದು, ಸೌದಿ ಅರೇಬಿಯದ 'ರಿಯಾದ್' ನಗರದಲ್ಲಿ ಜನ್ಮ ಕೊಟ್ಟರು. ಆಕೆ ಸಿರಿಯಾ ದೇಶದ ಡಮಾಸ್ಕಸ್ ನಗರದ 'ಅಲಾವಿ' ಬುಡಕಟ್ಟಿಗೆ ಸೇರಿದವರು. ಒಸಾಮಾ, ೧೯೬೮ ರಿಂದ ೧೯೭೬ ರ ವರೆಗೆ ಜೆಡ್ಡಾದ 'ಆಲ್ ತಗೇರ್ ಮಾದರಿ ಶಾಲೆ'ಯಲ್ಲಿ ವಿದ್ಯಾರ್ಜನೆ ಮಾಡಿ, ೭೦ ರ ದಶಕದ ಅಂತ್ಯದಲ್ಲಿ 'ಕಿಂಗ್ ಅಬ್ದುಲ್ ಅಝೀಝ್ ವಿಶ್ವ ವಿದ್ಯಾಲಯದಲ್ಲಿ 'ಅರ್ಥ ಶಾಸ್ತ್ರ' ಹಾಗೂ 'ಆಡಳಿತ ನಿರ್ವಹಣೆಯಲ್ಲಿ ಪದವಿ' ಗಳಿಸಲು ಕಾಲೇಜ್ ಸೇರಿದರು. ಕಾಲೇಜ್ ಶಿಕ್ಷಣದ ಬಳಿಕ ತಮ್ಮ ಕುಟುಂಬದ ಉದ್ಯೋಗದಲ್ಲಿ ಶಾಮಿಲ್ ಗೊಳ್ಳುವ ಯೋಜನೆಯಿತ್ತು.

ಬಿನ್ ಲಾಡೆನ್ ಸ್ವಭಾವ

[ಬದಲಾಯಿಸಿ]

ಮಿತಭಾಷಿ, ಕವಿಯ ಮನಸ್ಸಿನ, ಭಾವಜೀವಿ, ಅಂತರ್ಮುಖಿ, ಇಸ್ಲಾಂ ಧಾರ್ಮಿಕ ಗ್ರಂಥಗಳಲ್ಲಿ ಅತೀವ ಆಸಕ್ತ. ಕಾಲೇಜಿನಲ್ಲಿ ಇಸ್ಲಾಂಧರ್ಮದ ಬಗ್ಗೆ ಪಾಠಮಾಡುತ್ತಿದ್ದ ಮಹಮದ್ ಕುತುಬ್ ಎಂಬುವರಿಂದ ಸಾಕಷ್ಟು ಪ್ರಭಾವಿತರಾಗಿದ್ದರು. 'ಮುಸ್ಲಿಮ್ ಬ್ರದರ್ ಹುಡ್' ಎಂಬ ಮೂಲಭೂತವಾದಿ ಸಂಘಟನೆಯ 'ಸಯ್ಯದ್ ಕುತುಬ್' ಮತ್ತು 'ಅಬ್ದುಲ್ಲಾ ಅಜಾಮ್' ಅವರ ನಿಕಟವರ್ತಿಯಾಗಿದ್ದ 'ಮಹಮದ್ ಕುತುಬ್' ತನ್ನ ಮೆಚ್ಚಿನ ವಿದ್ಯಾರ್ಥಿಯ ಬಗ್ಗೆ 'ಅಜಾಮ್'ಗೆ ಮಾಹಿತಿ ನೀಡಿದರು. 'ಅಜಾಮ್' ಜೊತೆಯಲ್ಲಿ ಗಂಟೆಗಟ್ಟಲೆ ಧರ್ಮದ ವಿಚಾರಗಳನ್ನು ಚರ್ಚಿಸುತ್ತಾ ಅಂತಿಮ ವರ್ಷದ ಪದವಿ ಪರೀಕ್ಷೆ ಬಂದದ್ದೇ ಅವರಿಗೆ ತಿಳಿಯಲಿಲ್ಲ. 'ಒಸಾಮಾ' ಕಾಲೇಜಿಗೆ ಶರಣುಹೊಡೆದು ಹೊರಗೆ ಹೊರಟರು.

ಲಾಡೆನ್ ನ ಮರಣೋತ್ತರ ಇಚ್ಛಾಪತ್ರ

[ಬದಲಾಯಿಸಿ]

ಲಾಡೆನ್, ತಾವೊಬ್ಬ ಮಹಾ-ಆತಂಕಿಯಾದರೂ ಯಾವುದೇ ಕಾರಣಕ್ಕೂ ಅವರ ಮಕ್ಕಳ್ಯಾರೂ ಆ ವ್ಯವಸಾಯದಲ್ಲಿ ಭಾಗಿಯಾಗಬಾರದೆಂದು 'ಉಯಿಲಿ'ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಅದನ್ನು ತಮ್ಮ ವೈಯಕ್ತಿಕ ಜೀವನದಲ್ಲಿ ಅಳವಡಿಸಿದ್ದೂ ನಿಜವಾಗಿದೆ. ತಮ್ಮ ಬಿಡುವಿಲ್ಲದ ಕಾರ್ಯಾಚರಣೆಯಲ್ಲಿ ಮಕ್ಕಳ ಹಾಗೂ ಪರಿವಾರದಬಗ್ಗೆ ಗಮನ ಹರಿಸಲಾಗದ್ದಕ್ಕೆ ಕ್ಷಮೆಕೇಳಿರುತ್ತಾರೆ. ತನ್ನ ಹೆಂಡತಿಯರಿಗೆ ಸ್ಪಷ್ಟವಾಗಿ ಅರುಹಿರುವುದೇನೆಂದರೆ, ತಮ್ಮ ಮರಣಾನಂತರ ಮಕ್ಕಳ ಯೋಗಕ್ಷೇವನ್ನು ಪ್ರಧಾನವಾಗಿ ಪರಿಗಣಿಸಬೇಕು. ಅದಕ್ಕಾಗಿ, ಅವರು ಬೇರೆ ಮದುವೆಯಾಗಕೂಡದು. ತನ್ನ ೨೪ ಮಕ್ಕಳನ್ನು ಚೆನ್ನಾಗಿ ಪೋಷಿಸುವ ಜವಾಬ್ದಾರಿ ಹೊರಬೇಕು. ತಾವು ಬಿಟ್ಟುಹೋಗುವ ೧೮ ಮಿಲಿಯನ್ ಡಾಲರ್ ಆಸ್ತಿಯನ್ನು ಹೇಗೆ ವಿತರಿಸಿಕೊಳ್ಳಬೇಕೆನ್ನುವ ಬಗ್ಗೆ ಯಾವ ಮಾಹಿತಿಯೂ ದೊರೆತಿಲ್ಲ. ಮಕ್ಕಳ್ಯಾರೂ ರಾಜಕೀಯ ಚಟುವಟಿಕೆಗಳಲ್ಲಿ ತಮ್ಮನ್ನು ಒಡ್ಡಿಕೊಳ್ಳಬಾರದು. ಧಾರ್ಮಿಕ ಚರ್ಚೆಗಳ ಬಗ್ಗೆ ತಲೆಕೆಡೆಸಿಕೊಳ್ಳಬಾರದು. ಕಾಲೇಜ್ ಗೆ ಶರಣುಹೊಡೆದ ನಂತರ ಒಸಾಮ, ೧೯೭೯ ರ ಡಿಸೆಂಬರ್ ನಲ್ಲಿ ಅವರ ಗುರು, ಡಾ. ಅಝಾಮ್ ನ ಹೇಳಿಕೆಯಂತೆ, ಪಾಕಿಸ್ತಾನಕ್ಕೆ ಹೋಗಿ, ಅಲ್ಲಿನ ಪ್ರಮುಖ ಸಂಘಟನೆಗಳಲ್ಲೊಂದಾದ ’ಜಮಾತೆ ಇಸ್ಲಾಮಿಯ’ ದ ಚಿಂತಕ 'ಬುರ್ಹಾನುದ್ದೀನ್ ರಬಾನಿ'ಯವರನ್ನು ಪ್ರಥಮಬಾರಿಗೆ ಭೆಟ್ಟಿಯಾದರು. ಆಫ್ಘಾನಿಸ್ತಾನದಲ್ಲಿ ಸೋವಿಯಟ್ ಒಕ್ಕೂಟದ ವಿರುದ್ಧ 'ಜಿಹಾದ್' (ಧರ್ಮಯುದ್ಧ)ಘೋಷಿಸಿದ್ದ ಒಕ್ಕೂಟದ ೭ ಕಮಾಂಡರ್ ಗಳಲ್ಲಿ ಒಬ್ಬರಾಗಿದ್ದರು. ಈ ಸಂಘಟನೆಗೆ ರೂಪುಕೊಟ್ಟ ಅಝಾಮ್ ಇಸ್ಲಾಮಾಬಾದ್ ನ ’ಅಂತಾರಾಷ್ಟ್ರೀಯ ಇಸ್ಲಾಮಿಕ್ ವಿಶ್ವವಿದ್ಯಾಲಯ’ದಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ಆಗ ಪಾಕೀಸ್ತಾನದಲ್ಲಿ ಪ್ರಶಿಕ್ಷಣಗಳಿಸಿದ ಕೆಲವೇ 'ಮುಜಾಹಿದ್ದೀನ್' ಗಳು 'ಆಫ್ಘಾನಿಸ್ತಾನ'ಕ್ಕೆ ಹೋಗಿ, ಗೆರಿಲ್ಲಾ ದಾಳಿಯಲ್ಲಿ ರಷ್ಯನ್ ಸೇನೆಗಳ ವಿರುದ್ಧ ಕಾಯಾಚರಣೆಗಳನ್ನು ಕೈಗೊಂಡು ಮರಳುತ್ತಿದ್ದರು.

ಸಿ.ಐ.ಎ.ಕಾರ್ಯಾಚರಣೆಯಲ್ಲಿ ಸಕ್ರಿಯರಾದರು

[ಬದಲಾಯಿಸಿ]

ಪಾಕೀಸ್ತಾನದ ಗುಪ್ತಚರರ ಸಂಸ್ಥೆ, ISI ನ ಮುಖ್ಯಸ್ಥ ಹಮೀದ್ ಗುಲ್ ರನ್ನು ಒಸಾಮಾ ಭೆಟ್ಟಿಯಾದರು. ಅಂದಿನ ದಿನಗಳಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆ ಪರೋಕ್ಷವಾಗಿ ಆಫ್ಘಾನಿಸ್ಥಾನದಲ್ಲಿ ನಡೆಸಿದ್ದ ’ಆಪರೇಷನ್ ಸೈಕ್ಲೋನ್’ ಕಾರ್ಯಾಚರಣೆಯಲ್ಲಿ ಸಿ ಐ ಎ ಹಾಗೂ ಮುಜಾಹಿದ್ದೀನ್ ಸಂಘಟನೆಗಳ ಮಧ್ಯೆ ಐ ಎಸ್ ಐ ಮಧ್ಯವರ್ತಿಯಾಗಿ ಪಾತ್ರವಹಿಸಿತ್ತು. ಸಿ ಐ ಎ ಪಡೆಗಳು ಪರೋಕ್ಷವಾಗಿ 'ಮುಜಾಹಿದ್ದೀನ್' ಗಳಿಗೆ ಪಾಕೀಸ್ತಾನದಲ್ಲಿ ಸೈನ್ಯ ತರಬೇತಿ ಕೊಟ್ಟು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಿ ಆಫ್ಘಾನಿಸ್ತಾಕ್ಕೆ ಹೋಗಿ ಕದನಮಾಡಲು ಪ್ರೇರೇಪಿಸುತ್ತಿದ್ದವು.

'ಒಸಾಮಾ ಬಿನ್ ಲಾಡೆನ್‌'ನ ಸಾವನ್ನು ಭಾನುವಾರ, ಮೇ ೧, ೨೦೧೧ ರಂದು ಸುಮಾರು ರಾತ್ರಿ ೧೦:೩೦ .ವೇಳೆಗೆ ವರದಿ ಮಾಡಲಾಯಿತು. ಅಮೆರಿಕಾದ ಮಿಲಿಟರಿ ಪಡೆ ಪಾಕಿಸ್ತಾನದ ಅಬ್ಬೋತ್ತಬಾದ್‌ನಲ್ಲಿ, (Abbottabad), ಒಸಾಮಾ ಬಿನ್ ಲಾಡೆನ್‌ನನ್ನು ೪೦ ನಿಮಿಷದ ಗುಂಡಿನ ಚಕಮಕಿಯ ನಂತರ ಗುಂಡು ಹೊಡೆದು ಹತ್ಯೆಗೈದು, ನಂತರ ಆತನ ಶವವನ್ನು ವಶಕ್ಕೆ ತೆಗದುಕೊಂಡರು, ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಮೇ ೧, ೨೦೧೧ ರಂದು ಅಧಿಕೃತ ಪ್ರಕಟಣೆಯಲ್ಲಿ ಬಿನ್ ಲಾಡೆನ್‌ನನ್ನು ಒಂದು ಸಣ್ಣ ವಿಶೇಷ ಕಾರ್ಯಪಡೆಯು ಕೊಂದು ಹಾಕಿರುವುದಾಗಿ ಹೇಳಿಕೆ ನೀಡಿದರು. ಈ ಕಾರ್ಯಾಚರಣೆಯನ್ನು ಪಾಕಿಸ್ತಾನದಲ್ಲಿ ನೆಲೆಹೂಡಿರುವ ಅಮೆರಿಕಾದ ಜಾಯಿಂಟ್ ಸ್ಪೆಶಲ್ ಆಪರೇಶನ್ಸ್ ಕಮಾಂಡ್‌ ಪಡೆಗಳು ಹಾಗು ಅಮೆರಿಕಾದ ಕೇಂದ್ರೀಯ ಗುಪ್ತಚರ ಸಂಸ್ಥೆ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (ಸಿ ಐ ಎ) ನಡೆಸಿದವು.

ಉಲ್ಲೇಖಗಳು

[ಬದಲಾಯಿಸಿ]
  1. "In an intelligence driven operation, Osama Bin Ladin was killed in the surroundings of Abbottabad in the early hours of this morning". May 2, 2011. Archived from the original on ಮೇ 23, 2012. Retrieved May 2, 2011.
  2. Adam Brookes, "US forces kill Osama Bin Laden in Pakistan", May 2, 2011, BBC News. Accessed May 2, 2011.

ಅಧಿಕ ಓದಿಕೆ

[ಬದಲಾಯಿಸಿ]