ವಿಷಯಕ್ಕೆ ಹೋಗು

ಅನಿಲ್ ಕಪೂರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Anil Kapoor

Anil Kapoor in San Diego, ಕ್ಯಾಲಿಫೊರ್ನಿಯ (24 July 2009)
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(1959-12-24) ೨೪ ಡಿಸೆಂಬರ್ ೧೯೫೯ (ವಯಸ್ಸು ೬೫)
ಮುಂಬೈ, ಮಹಾರಾಷ್ಟ್ರ, India
ವೃತ್ತಿ Actor/Producer
ವರ್ಷಗಳು ಸಕ್ರಿಯ 1979–present
ಪತಿ/ಪತ್ನಿ Sunita Kapoor (1984–present)

ಅನಿಲ್ ಕಪೂರ್ (ಹಿಂದಿ:अनिल कपूर, ಪಂಜಾಬಿ:ਅਨਿਲ ਕਪੂਰ,1959 ಡಿಸೆಂಬರ್ 24ರಂದು ಜನನ) ಭಾರತೀಯ ನಟ ಮತ್ತು ನಿರ್ಮಾಪಕರಾಗಿದ್ದು, ಮುಖ್ಯವಾಗಿ ಅವರು ಬಾಲಿವುಡ್ ಚಲನಚಿತ್ರಗಳಲ್ಲಿ ಪಾತ್ರವಹಿಸುತ್ತಾರೆ. ಅವರು ಯಶ್ ಚೋಪ್ರಾ ಅವರ ಚಿತ್ರ ಮಶಾಲ್ (1984 )ನ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಯನ್ನು ಗೆದ್ದಿದ್ದಾರೆ. ಕಪೂರ್ ಅವರು ತಮ್ಮ ಪ್ರಥಮ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು 1988ರಲ್ಲಿ N. ಚಂದ್ರಾ ಅವರ ತೇಜಾಬ್ ಚಿತ್ರದ ಅಭಿನಯಕ್ಕಾಗಿ ಹಾಗು ನಂತರ 1992ರಲ್ಲಿ ಇಂದ್ರ ಕುಮಾರ್ ಅವರ ಬೇಟಾ ಚಿತ್ರದ ಅಭಿನಯಕ್ಕಾಗಿ ಗಳಿಸಿದ್ದಾರೆ. ಆಗಿನಿಂದ ಅವರು ಅತ್ಯುತ್ತಮ ನಟನೆಗೆ ಫಿಲ್ಮ್‌ಫೇರ್ ವಿಮರ್ಶಕರ ಪ್ರಶಸ್ತಿಗಳಿಸಿದ ವಿರಾಸತ್ (1997 ), ಬಿವಿ No.1 (1999); ಎರಡನೇ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಗೆದ್ದ ತಾಲ್ , ಅತ್ಯುತ್ತಮ ನಟನೆಗೆ ಪ್ರಥಮ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದ ಪುಕಾರ್ (2000 ),ನೋ ಎಂಟ್ರಿ (2005 )ಮತ್ತು ವೆಲ್‌ಕಂ (2007 )ಚಲನಚಿತ್ರಗಳಲ್ಲಿ ಪಾತ್ರವಹಿಸಿದ್ದಾರೆ. ಕಪೂರ್ ಅವರ ಅಂತಾರಾಷ್ಟ್ರೀಯ ಚಿತ್ರದಲ್ಲಿ ಪ್ರಥಮ ಪಾತ್ರವು ಡ್ಯಾನಿ ಬಾಯ್ಲ್ ಅವರ ಅಕಾಡೆಮಿ ಪ್ರಶಸ್ತಿ ವಿಜೇತ ಚಿತ್ರ ಸ್ಲಮ್‌ಡಾಗ್ ಮಿಲಿಯನೇರ್ , ಚಿತ್ರದ ಪಾತ್ರವಾಗಿದೆ. ಅದಕ್ಕಾಗಿ ಅವರು ಚಲನಚಿತ್ರದಲ್ಲಿ ಪಾತ್ರವೊಂದರ ಮನೋಜ್ಞ ಅಭಿನಯಕ್ಕಾಗಿ ಚಿತ್ರತೆರೆ ನಟರ ಗಿಲ್ಡ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಸಾಹಸ ಸರಣಿ 24 ರ ಎಂಟನೇ ಸೀಸನ್‌ನಲ್ಲಿ ಅವರ ಅಭಿನಯವು ಅಮೆರಿಕದ ಮಾಧ್ಯಮದಿಂದ ಅತ್ಯುತ್ಸಾಹದ ವಿಮರ್ಶೆಗಳನ್ನು ಗಳಿಸಿತು.[][]

ಜಾಗತಿಕವಾಗಿ, ಅನಿಲ್ ಕಪೂರ್ ಅವರು ಭಾರತೀಯ ಚಿತ್ರನಟರ ಪೈಕಿ ಅತ್ಯಂತ ಮನ್ನಣೆ ಗಳಿಸಿದ ನಟರಾಗಿದ್ದಾರೆ.[]

ವೈಯಕ್ತಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ಅನಿಲ್ ಕಪೂರ್ ಅವರು ಮುಂಬೈನ ತಿಲಕನಗರ್‌ನ ಚಾಲ್‌(ವಠಾರ)ನಲ್ಲಿ ಪಂಜಾಬಿ[] ಕುಟುಂಬದಲ್ಲಿ ಚಲನಚಿತ್ರ ನಿರ್ಮಾಪಕ ಸುರೀಂದರ್ ಕಪೂರ್ ಮತ್ತು ಅವರ ಪತ್ನಿ ನಿರ್ಮಲ್ ಅವರಿಗೆ ಜನಿಸಿದರು. ಅವರು ಮುಂಬೈನ ಹೊರವಲಯ ಚೆಂಬೂರ್‌ನಲ್ಲಿರುವ ಅವರ್ ಲೇಡಿ ಆಫ್ ಪರ್ಪೆಚ್ಯುಯಲ್ ಸಕರ್ ಹೈಸ್ಕೂಲ್-ಚೆಂಬೂರ್ ಮತ್ತು ನಂತರ ಸೇಂಟ್ ಕ್ಸೇವಿಯರ್ ಕಾಲೇಜು, ಮುಂಬೈನಲ್ಲಿ ಶಿಕ್ಷಣ ಪಡೆದರು.[] ಕಪೂರ್ ಅವರ ಅಣ್ಣ ಬೋನಿ ಕಪೂರ್ ಚಲನಚಿತ್ರ ನಿರ್ಮಾಪಕರು ಹಾಗು ತಮ್ಮ ಸಂಜಯ್ ಕಪೂರ್ ಕೂಡ ನಟರಾಗಿದ್ದಾರೆ. 1984ರಲ್ಲಿ ಅವರು ಸುನಿತಾ ಕಪೂರ್(ಕುಟುಂಬದ ಹೆಸರು(ನೀ)ಬಾಂಬಾನಿ)ರವರನ್ನು ವಿವಾಹವಾದರು ಮತ್ತು ಅವರಿಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಹರ್ಷವರ್ಧನ್ ಕಪೂರ್ ಇದ್ದಾರೆ. ಕಪೂರ್ ಅವರ ಹಿರಿಯ ಪುತ್ರಿ ನಟಿಯಾಗಿರುವ ಸೋನಂ ಕಪೂರ್.ರಿಯಾ ಕಪೂರ್ ನ್ಯೂಯಾರ್ಕ್‌ನ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದು ಈಗ ಮುಂಬೈನಲ್ಲಿ ನಿರ್ಮಾಪಕಿಯಾಗಿದ್ದಾರೆ.

ವೃತ್ತಿಜೀವನ

[ಬದಲಾಯಿಸಿ]

ನಟನಾಗಿ

[ಬದಲಾಯಿಸಿ]

1980ರ ದಶಕ

[ಬದಲಾಯಿಸಿ]

ಕಪೂರ್ ಉಮೇಶ್ ಮೆಹ್ರಾ ಅವರ ಹಮಾರೆ ತುಮಾರೆ (1979 )ಚಿತ್ರದಲ್ಲಿ ಪೋಷಕ ನಟರಾಗಿ ಬಾಲಿವುಡ್ ಚಿತ್ರರಂಗಕ್ಕೆ ಚೊಚ್ಚಲ ಪ್ರವೇಶ ಮಾಡಿದರು. ಹಮ್ ಪಾಂಚ್ (1980) ಮತ್ತು ಶಕ್ತಿ" (1982) ಮುಂತಾದ ಚಿತ್ರಗಳಲ್ಲಿ ಕೆಲವು ಸಣ್ಣ ಪುಟ್ಟ ಪಾತ್ರಗಳ ನಂತರ, 1983ರ ಹಿಂದಿ ಚಲನಚಿತ್ರ ವೋಹ್ ಸಾತ್ ದಿನ್ ‌ನಲ್ಲಿ ಪ್ರಥಮ ಮುಖ್ಯ ಪಾತ್ರವನ್ನು ವಹಿಸಿದರು. ಆ ಚಿತ್ರದಲ್ಲಿ ಅತ್ಯುತ್ತಮ ಅಭಿನಯದ ಕೌಶಲ ಪ್ರದರ್ಶಿಸಿದ್ದು, ಅವರ ಪಾತ್ರದ ಅಸಂಖ್ಯಾತ ಛಾಯೆಗಳಿಗೆ ಅಗತ್ಯವಾದ ಸಂಪೂರ್ಣ ಸಹಜತೆ, ಮುಗ್ಧತೆ,ಕುಶಾಗ್ರತೆ ಮತ್ತು ಪಕ್ವತೆಯ ಪ್ರತಿಯೊಂದು ಅಂಶವನ್ನು ಬಿಂಬಿಸುತ್ತಾರೆ.[] ಕಪೂರ್ ನಂತರ ಟಾಲಿವುಡ್ ಮತ್ತು ಸ್ಯಾಂಡಲ್‌ವುಡ್ ‌ಚಿತ್ರಗಳಲ್ಲಿ ಅಭಿನಯಕ್ಕೆ ಯತ್ನಿಸಿದ್ದು, ತೆಲುಗು ಚಿತ್ರ ವಂಶ ವೃಕ್ಷಂ ಮತ್ತು ಮಣಿ ರತ್ನಂ ರವರ ಕನ್ನಡ ಚೊಚ್ಚಲ ಚಿತ್ರ ಪಲ್ಲವಿ ಅನು ಪಲ್ಲವಿ (1983ರಲ್ಲಿ ಬಿಡುಗಡೆ, ಪ್ರಮುಖ ಪಾತ್ರದಲ್ಲಿ ಪ್ರಥಮ ಚಿತ್ರ)ಗಳಲ್ಲಿ ಅಭಿನಯಿಸಿದರು. ನಂತರ ಅವರುಯಶ್ ಚೋಪ್ರಾ'ಅವರ ಚಿತ್ರಮಶಾಲ್ (1984)ನಲ್ಲಿ ನಯವಾದ ಅಭಿನಯ ನೀಡಿದ್ದಾರೆ. ಅದರಲ್ಲಿ ಅವರು ತಮ್ಮ ಪಾತ್ರದ ಮೇಲೆ ನಿಯಂತ್ರಣ ಸಾಧಿಸಿ, ದಂತಕಥೆಯಾದ ದಿಲಿಪ್ ಕುಮಾರ್ ಅವರ ನಟನಾ ಚಾತುರ್ಯದ ಎದುರು ವೃತ್ತಿಜೀವನವನ್ನು ರೂಪಿಸುವ ಅಭಿನಯವನ್ನು ನೀಡುವ ಮೂಲಕ ಚಲನಚಿತ್ರದ ಅಚ್ಚರಿಯ ಅಂಶವಾದರು. ಇದರಲ್ಲಿ ಅವರು ಒರಟಾದ 'ತಾಪೋರಿ (ರೌಡಿ)ಪಾತ್ರವನ್ನು ನಿರ್ವಹಿಸಿದರು ಹಾಗು ಇದು ಭಾರತೀಯ ಸಿನೆಮಾದಲ್ಲಿ ತಾಪೋರಿ ಪಾತ್ರಗಳ ಆಗಮನದ ಸಂಕೇತವಾಗಿದೆ. ಈ ಪಾತ್ರಕ್ಕಾಗಿ ಅವರು ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ಪ್ರಥಮ ಫಿಲ್ಮ್‌ಪೇರ್ ಪ್ರಶಸ್ತಿಯನ್ನು ಗೆದ್ದುಕೊಂಡರು.[] ಕಪೂರ್ ಅವರ 1985ರ ಬಿಡುಗಡೆ ಯುದ್ದ್(ಚಿತ್ರ) ಸಾಧಾರಣ ಯಶಸ್ವಿಯಾಯಿತು.[] 1985ರ ಚಿತ್ರ ಸಾಹೇಬ್‌ ನಲ್ಲಿ ಮಧ್ಯಮ ವರ್ಗದ ಕ್ರೀಡಾಪಟುವಾಗಿ ಅವರ ಸೂಕ್ಷ್ಮ ಚಿತ್ರಣವು ಅತ್ಯಂತ ಭರವಸೆಯ, ಗಲ್ಲಾ ಪೆಟ್ಟಿಗೆ ಯಶಸ್ವಿ ಚಿತ್ರ ಎನಿಸಿದೆ.[] 1986ರಲ್ಲಿ ಕಪೂರ್ ಯಶಸ್ವಿ ಚಿತ್ರ ಜಾನ್‌ಬಾಜ್‌ ನಲ್ಲಿ ಸ್ವೇಚ್ಛಾಚಾರದ ಸುಖಲೋಲುಪನ ಪಾತ್ರವನ್ನು ನಿರ್ವಹಿಸಿದ್ದು, ಫಿರೋಜ್ ಖಾನ್ ಸಹನಟರಾಗಿ ಅಭಿನಯಿಸಿದ್ದಾರೆ.[೧೦][೧೧] ಅವರ 1986ರಲ್ಲಿ ಬಿಡುಗಡೆಯಾದ ಇನ್ನೊಂದು ಚಿತ್ರ ಇನ್ಫಾಫ್ ಕಿ ಆವಾಜ್ ಗಲ್ಲಾ ಪೆಟ್ಟಿಗೆ ಯಶಸ್ವಿ ಚಿತ್ರವಾಯಿತು.[೧೨] ಅದೇ ವರ್ಷ ಬಸು ಚಟರ್ಜಿ ನಿರ್ದೇಶನದ ಚಮೇಲಿ ಕಿ ಶಾದಿ ಯಲ್ಲಿ ಅವರು ನಟಿಸಿ, ಹಾಸ್ಯಪಾತ್ರದಲ್ಲಿ ತಮ್ಮ ಕೌಶಲವನ್ನು ಪ್ರದರ್ಶಿಸಿದರು.[೧೩] ನ್ಯಾಯಕ್ಕಾಗಿ ಹೋರಾಡುವ, ಕೋಪ ಪ್ರದರ್ಶಿಸುವ, ವೃತ್ತಿಜೀವನ ರೂಪಿಸಿದ ಕಿರಿಯ ವಕೀಲನ ಪಾತ್ರವನ್ನು ನಿರ್ವಹಿಸಿದ ಮೇರಿ ಜಂಗ್ (1985 )ಮುಂತಾದ ಚಿತ್ರಗಳ ಅಪಾರ ವಾಣಿಜ್ಯಕ ಯಶಸ್ಸು, ತರುವಾಯ ಕಪೂರ್ ಪಕ್ವ ನಟರೆಂಬ ಸತ್ಯವನ್ನು ದೃಢಪಡಿಸಿತು ಹಾಗು ಪ್ರೇಕ್ಷಕರು ಮತ್ತು ವಿಮರ್ಶಕರಿಬ್ಬರೂ ಅವರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವರ್ಷದ ಅತ್ಯಂತ ಯಶಸ್ವಿ ಚಿತ್ರ ಕರ್ಮ (1986 )ದಲ್ಲಿ ಹಾಸ್ಯಪ್ರಜ್ಞೆಯ ತಾಪೋರಿ ಪಾತ್ರವನ್ನು ಕಪೂರ್ ನಿರ್ವಹಿಸಿದರು.[೧೪] ಶೇಖರ್ ಕಪೂರ್ ಅವರ ವೈಜ್ಞಾನಿಕ ಕಲ್ಪನೆ ಆಧಾರಿತ, ವರ್ಷದ ಅತ್ಯಂತ ಯಶಸ್ವಿ ಚಿತ್ರ ಮಿ. ಇಂಡಿಯ (1987)ದಲ್ಲಿ ಕಪೂರ್ ತಮ್ಮ ಮುಖ್ಯ ಪಾತ್ರದಿಂದಾಗಿ ಜೀವನದ ಎಲ್ಲ ಕ್ಷೇತ್ರಗಳ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರರಾದರು.[೧೫] ಚಿತ್ರವು ಅತ್ಯಂತ ದೊಡ್ಡ ಗಲ್ಲಾ ಪೆಟ್ಟಿಗೆ ಯಶಸ್ಸಿನ ಚಿತ್ರವಾಯಿತು ಮತ್ತು ಅವರಿಗೆ ಸೂಪರ್‌ಸ್ಟಾರ್ ಸ್ಥಾನಮಾನವನ್ನು ತಂದುಕೊಟ್ಟಿತು.[೧೬] ಅನಿಲ್ ಕಪೂರ್ ಅವರು ಮಹೇಶ್ ಭಟ್ ನಿರ್ದೇಶನದ ಚಿತ್ರ ಟಿಕಾನಾ ದಲ್ಲಿ ಅಷ್ಟೇ ಪರಿಣಾಮಕಾರಿ ಪಾತ್ರವನ್ನು ನಿರ್ವಹಿಸಿದ್ದಾರೆ.[೧೭] 1988ರಲ್ಲಿ ಅವರಿಗೆ ಪ್ರಥಮ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಲಭ್ಯವಾಯಿತು. 1988ರ ಗಲ್ಲಾಪೆಟ್ಟಿಗೆ ಸೂರೆಮಾಡಿದ ಯಶಸ್ವಿ ತೇಜಾಬ್ ಚಿತ್ರದಲ್ಲಿ ಅವರ ಮನೋಜ್ಞ ಅಭಿನಯಕ್ಕಾಗಿ ಈ ಪ್ರಶಸ್ತಿ ಸಿಕ್ಕಿತು.[೧೮] ಅನಿಲ್ ಗಲ್ಲಾಪೆಟ್ಟಿಗೆಯಲ್ಲಿ ಸೋತ ರಾಮ್ ಅವತಾರ್ ಮುಂತಾದ ಚಿತ್ರಗಳಲ್ಲೂ ತಾವು ಚಿತ್ರಕ್ಕೆ ಶ್ರೀರಕ್ಷೆ ಎಂದು ಸಾಬೀತು ಮಾಡಿದರು.[೧೯] ನಂತರದ ವರ್ಷದಲ್ಲಿ ಅವರು ಹೆಚ್ಚು ಮೆಗಾ ವಾಣಿಜ್ಯ ಮತ್ತು ವಿಮರ್ಶಾತ್ಮಕ ಯಶಸ್ಸುಗಳ ರಾಮ್ ಲಖನ್ (1989ರಲ್ಲಿ ಎರಡನೇ ಅತ್ಯಧಿಕ ಗಲ್ಲಾ ಪೆಟ್ಟಿಗೆ ಗಳಿಕೆಯ ಚಿತ್ರವಾಯಿತು)ದಲ್ಲಿ ಅಭಿನಯಿಸಿದರು. ಆ ಚಿತ್ರದಲ್ಲಿನ ಒನ್ ಟು ಕಾ ಫೋರ್ ಗೀತೆಯಿಂದ ಪ್ರೇಕ್ಷಕರು ಹುಚ್ಚೆದ್ದು ಕುಣಿದರು.[೨೦] ಅತ್ಯಂತ ಮೆಚ್ಚುಗೆಯ ಚಿತ್ರ ಪರಿಂದಾ ನಲ್ಲಿ ಕಪೂರ್ ದೃಢವಿಶ್ವಾಸದಿಂದ ಪಾತ್ರ ನಿರ್ವಹಿಸಿದರು ಮತ್ತು ಅವರ ಪಾತ್ರದಲ್ಲಿನ ತನ್ಮಯತೆಯನ್ನು ಸಮರ್ಥವಾಗಿ ಪ್ರದರ್ಶಿಸಿದರು.[೨೧] ರಖ್‌ವಾಲಾ ದಲ್ಲಿ ಕಪೂರ್ ಪುನಃ ತಾಪೋರಿ(ರೌಡಿ) ಪಾತ್ರವನ್ನು ನಿರ್ವಹಿಸಿದರು ಮತ್ತು ಚಿತ್ರವು ಯಶಸ್ವಿಯಾಯಿತು.[೧೬][೨೨] ಕಪೂರ್ 1989ರ ಯಶಸ್ವಿ ಚಿತ್ರ ಈಶ್ವರ್‌ ನಲ್ಲಿ ಭ್ರಾಂತಿ,ಕಲ್ಪನೆಯಲ್ಲಿ ಮುಳುಗಿದ ವ್ಯಕ್ತಿಯ ವಿಲಕ್ಷಣ ಸ್ವಭಾವದ ಚಿತ್ರಣದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಈ ಚಿತ್ರವು ನಟರಾಗಿ ಅವರ ಕೌಶಲವನ್ನು ಸಾಬೀತು ಮಾಡಿತು.[೨೩]

1990ರ ದಶಕ

[ಬದಲಾಯಿಸಿ]

1990ರ ವರ್ಷದಲ್ಲಿ ಅತ್ಯಂತ ಯಶಸ್ವಿ ಕಿಶನ್ ಕನ್ಹಯ್ಯ ದಲ್ಲಿ ಅವಳಿ ಸಹೋದರರಾಗಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಅದೇ ವರ್ಷ ಘರ್ ಹೊ ತೊ ಐಸಾ ದೊಂದಿಗೆ ತರ್ಕಬದ್ಧ ಗಲ್ಲಾ ಪೆಟ್ಟಿಗೆ ಯಶಸ್ಸನ್ನು ಗಳಿಸಿದರು.[೨೪] ಕಪೂರ್ ಆವಾರ್ಗಿ ಯಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿದ ಅಭಿನಯ ನೀಡಿದ್ದಾರೆ. ಅನೇಕ ವಿಮರ್ಶಕರು ಇದನ್ನು ಎಂದಿಗೂ ನೀಡಿರದ ಅತ್ಯುತ್ತಮ ಅಭಿನಯವೆಂದು ಕೊಂಡಾಡಿದ್ದಾರೆ.[೨೫] ಯಶ್ ಚೋಪ್ರಾ ಅವರ ಭಾವಪ್ರಧಾನ ಕಥೆಯ ಲಾಮ್ಹೆ ನಲ್ಲಿ ಮಧ್ಯವಯಸ್ಸಿನ ವ್ಯಕ್ತಿಯಾಗಿ ಸಂಯಮದ, ಆದರೆ ಮನಸೆಳೆಯುವ ಪಾತ್ರವನ್ನು ನೀಡಿದ್ದಾರೆ. ಇದು ಭಾರತೀಯ ಸಿನೆಮಾದ ಮೈಲಿಗಲ್ಲಿನ ಚಿತ್ರವಾಗಿದ್ದು, ಇದುವರೆಗೂ ಯಶ್ ಛೋಪ್ರಾರ ಅತ್ಯುತ್ತಮ ಕೆಲಸವಾಗಿದೆ. ಕಪೂರ್ ಮೀಸೆರಹಿತವಾಗಿ ಅಭಿನಯಿಸಿದ ಪ್ರಥಮ ಚಿತ್ರ ಇದಾಗಿದೆ. ಚಲನಚಿತ್ರವು ಭಾರತದಲ್ಲಿ ಗಲ್ಲಾ ಪೆಟ್ಟಿಗೆ ವೈಫಲ್ಯವಾಗಿದ್ದರೂ, ಇದು ಸಾಗರೋತ್ತರ ರಾಷ್ಟ್ರಗಳಲ್ಲಿ ಯಶಸ್ವಿ ಚಿತ್ರವೆಂದು ಸಾಬೀತಾಯಿತು. ಕಪೂರ್ ಅವರ 1991ರ ಬಿಡುಗಡೆಯಾದ ಬೇನಾಂ ಬಾದ್‌ಶಾಹ್ ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಸಾಧಾರಣಕ್ಕಿಂತ ಹೆಚ್ಚಿನ ಸ್ಥಾನ ಗಳಿಸಿತು.[೨೬] 1992ರಲ್ಲಿ ಕಪೂರ್, ಇಂದ್ರಕುಮಾರ್ ಅವರ ಬೇಟಾ ದಲ್ಲಿ ನಾಯಕಿ ಮಾಧುರಿ ದೀಕ್ಷಿತ್ ಎದುರಾಗಿ ಚೈತನ್ಯಶಾಲಿ ಅಭಿನಯಕ್ಕಾಗಿ ಎರಡನೇ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸ್ವೀಕರಿಸಿದರು(ವರ್ಷದ ಅತ್ಯಂತ ಗಲ್ಲಾಪೆಟ್ಟಿಗೆ ಯಶಸ್ವಿ ಚಿತ್ರ).[೨೭] ಕಪೂರ್ ಖೇಲ್‌ ನಲ್ಲಿ ಹಾಸ್ಯಪ್ರಸಂಗವನ್ನು ಅತ್ಯಂತ ಮನೋಜ್ಞವಾಗಿ ಅಭಿನಯಿಸಿದರು ಮತ್ತು ಅವರ ಹಾಸ್ಯದ ಸಂದರ್ಭವು ಚಿತ್ರದಲ್ಲಿ ಗಮನಸೆಳೆಯುವ ಅಂಶಗಳಲ್ಲಿ ಒಂದಾಗಿದೆ.[೨೮] 1993ರಲ್ಲಿ ಬೋನಿ ಕಪೂರ್ ಅವರ ಹೆಚ್ಚು ವಿಳಂಬವಾದ ಮೆಗಾ ಬಜೆಟ್ ಚಿತ್ರ ರೂಪ್ ಕಿ ರಾಣಿ ಚೋರೋನ್ ಕ ರಾಜಾ ಗಲ್ಲಾಪೆಟ್ಟಿಗೆಯಲ್ಲಿ ಸೋತಿತು ಮತ್ತು ಆ ಸಮಯದ ಚಿತ್ರೋದ್ಯಮದ ದೊಡ್ಡ ತಾರೆ ಎಂಬ ಕಪೂರ್ ಖ್ಯಾತಿಗೆ ಕಳಂಕ ತಟ್ಟಿತು. ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಯಶಸ್ಸಿನ ಚಿತ್ರ ಶ್ರೀದೇವಿ ಜತೆ ನಟಿಸಿರುವ ಲಾಡ್ಲಾ . ಈ ಚಿತ್ರವನ್ನು ನಿತಿನ್ ಮನ್‌ಮೋಹನ್ ನಿರ್ಮಿಸಿದ್ದಾರೆ.[೨೯] ಕಪೂರ್ ಸಂಗೀತಪ್ರಧಾನ ಯಶಸ್ವಿ ಚಿತ್ರದಲ್ಲಿ ಮಂದಬುದ್ಧಿಯ ಪ್ರೇಮಿಯಾಗಿ ಮನೋಜ್ಞ ಅಭಿನಯ ನೀಡಿದ್ದಾರೆ.1942: A Love Story 1995ರ ಅವರ ಬಿಡುಗಡೆ ತ್ರಿಮೂರ್ತಿ(ಚಿತ್ರ) ಗಲ್ಲಾಪೆಟ್ಟಿಗೆ ಸೋಲಿನ ಚಿತ್ರವಾಯಿತು. ಆದರೂ ಕಪೂರ್ ಅಭಿನಯವು ಮನ್ನಣೆ ಗಳಿಸಿತು.[೩೦] ಸಾಧಾರಣ ಯಶಸ್ಸಿನ ಘರ್ವಾಲಿ ಬಾಹರ್ವಾಲಿ ಯಲ್ಲಿ ಕಪೂರ್ ತಕ್ಕಮಟ್ಟಿನ ಅಭಿನಯ ನೀಡಿದ್ದಾರೆ.[೩೧] ಕೆಲವು ಗಲ್ಲಾ ಪೆಟ್ಟಿಗೆ ಸೋಲುಗಳ ನಂತರ, ಲೋಫರ್ (1996 )ಮುಂತಾದ ಚಿತ್ರಗಳಲ್ಲಿ ಗಲ್ಲಾ ಪೆಟ್ಟಿಗೆ ಯಶಸ್ಸನ್ನು ಗಳಿಸಿದರು.[೩೨] ಜುಡೈ ನಲ್ಲಿ ಇಬ್ಬರು ಪತ್ನಿಯರ ನಡುವೆ ಹೆಣೆದುಕೊಂಡ ಪ್ರೀತಿಸುವ ಪತಿಯ ಚಿತ್ರಣವು ಮೆಚ್ಚುಗೆ ಗಳಿಸಿದ್ದು, ಇದು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಿತು.[೩೩] ದೀವಾನಾ ಮಸ್ತಾನ (1997), ಬಿವಿ ನಂ.1 (1999) ಮತ್ತು ಹಮ್ ಆಪ್ಕೆ ದಿಲ್ ಮೇ ರೆಹ್ತೆ ಹೇ (1999) ಗಲ್ಲಾ ಪೆಟ್ಟಿಗೆ ಯಶಸ್ಸಿನ ಚಿತ್ರಗಳಾಗಿವೆ.[೩೪] ಕಪೂರ್ ಅವರು ತಾಲ್ ‌(1999 )ನಲ್ಲಿ ಉತ್ಸಾಹಭರಿತ ಆದರೆ ವಂಚನೆಯ ಸಂಗೀತ ಸೂಪರ್‌ಸ್ಟಾರ್ ಆಗಿ ಅವರ ಅಸಾಮಾನ್ಯ ಪಾತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಬ್ಬರಿಗೂ ಆಘಾತ ಉಂಟುಮಾಡುತ್ತದೆ.[೩೫] ತೇವಾರ್ ಮಗನ್(1992 ) ತಮಿಳುಚಿತ್ರದ ರೀಮೇಕ್(ಮರುನಿರ್ಮಾಣ) ವಿರಾಸತ್‌ ನಲ್ಲಿ ಅಮೋಘ ಅಭಿನಯಕ್ಕಾಗಿ ಉತ್ಸಾಹಶೀಲ ವಿಮರ್ಶೆಯು ಕೇಳಿಬಂತು. ತೇವಾರ್ ಮಗನ್‌ ನಲ್ಲಿ ಕಮಲ ಹಾಸನ್ ಕಪೂರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಅಪಯಶಸ್ಸು ಗಳಿಸಿದ ಜೂಟ್ ಭೋಲಾ ಕಾವಾ ಕಾಟೆ ಯಲ್ಲಿ ಕೂಡ ಅವರು ನಟಿಸಿದ್ದು, ಇದು ಜೂಹಿ ಚಾವ್ಲಾ ನಟನೆಯೊಂದಿಗೆಪ್ರಸಿದ್ಧ ಚಿತ್ರನಿರ್ಮಾಪಕ ಹೃಷಿಕೇಶ್ ಮುಖರ್ಜಿ ಅವರ ಕೊನೆಯ ವಾಣಿಜ್ಯಚಿತ್ರದ ಬಿಡುಗಡೆಯಾಗಿದೆ. ಚಿತ್ರದ ಉತ್ತರಾರ್ಧದಲ್ಲಿ ಅವರು ಮತ್ತೊಮ್ಮೆ ತಮ್ಮ ಮೀಸೆಯನ್ನು ತೆಗೆದರು. ನಟ ಸಜೀದ್ ಖಾನ್ ಪತ್ನಿಯಾಗಿ ಅವರ ಪಾತ್ರದಲ್ಲಿ ಮನರಂಜನೀಯ ಹಾಸ್ಯ ಸಂದರ್ಭಗಳು ವೀಕ್ಷಕರ ಮನಸೆಳೆದವು.

ಕಪೂರ್ ಅವರ 2000ನೇ ವರ್ಷದ ಪ್ರಥಮ ಬಿಡುಗಡೆ ಬುಲಾಂಡಿ (2000 ಚಿತ್ರ)ಯಲ್ಲಿ ಅವರು ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಿರಿಯ ಠಾಕುರ್ ಪಾತ್ರದಲ್ಲಿ ಅವರು ಸಂಯಮ ಮತ್ತು ಪರಿಪಕ್ವತೆ ತೋರಿಸಿದ್ದಾರೆ.[೩೬] ಅವರು 2000ನೇ ವರ್ಷ ರಾಜಕುಮಾರ್ ಸಂತೋಷಿ ಅವರ ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿದ ಪುಕಾರ್ ಚಿತ್ರದಲ್ಲಿನ ಪಾತ್ರಕ್ಕಾಗಿ ಅತ್ಯುತ್ತಮ ನಟ ವಿಭಾಗದಲ್ಲಿ ಪ್ರಥಮ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಕಪೂರ್ 200ನೇ ವರ್ಷದಲ್ಲಿ ಹಮಾರಾ ದಿಲ್ ಆಪ್ಕೆ ಪಾಸ್ ಹೈ ಚಿತ್ರದೊಂದಿಗೆ ಪುನಃ ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸನ್ನು ಗಳಿಸಿದರು.[೩೭][೩೮] ಕಪೂರ್, ತಡವಾಗಿ ಬಿಡುಗಡೆಯಾದ ಚಿತ್ರ ಕಾರೋಬಾರ್ ನಲ್ಲಿ ರಾಜೀವ್ ಪಾತ್ರದ ಮೂಲಕ ಎಲ್ಲರ ಗಮನವನ್ನು ಸೆಳೆದರು, ಚಿತ್ರವನ್ನು ರಾಕೇಶ್ ರೋಶನ್ ನಿರ್ದೇಶಿಸಿದ್ದರು, ಚಿತ್ರದಲ್ಲಿ ಕಪೂರ್ ರ ಸಂಭಾಷಣಾ ಶೈಲಿಯು ಮೆಚ್ಚುಗೆಗೆ ಪಾತ್ರವಾಗಿದೆ.[೩೯] ಶಂಕರ್ ನಿರ್ದೇಶನದ ನಾಯಕ್ ಚಿತ್ರದಲ್ಲಿ ಮನೋಜ್ಞ ಅಭಿನಯವನ್ನು ನೀಡಿದ್ದಾರೆ, ಇದನ್ನು ಹಲವರು ಅವರ ಉತ್ತಮ ಪ್ರದರ್ಶನಗಳಲ್ಲಿ ಒಂದೆಂದು ಪರಿಗಣಿಸಿದ್ದಾರೆ.[೪೦][೪೧][೪೨][೪೩] 2002ರಲ್ಲಿ, ಕಪೂರ್ ಬಧಾಯಿ ಹೋ ಬಧಾಯಿ ಚಿತ್ರದಲ್ಲಿ ಒಬ್ಬ ದಡೂತಿ ವ್ಯಕ್ತಿಯ ಪಾತ್ರದಲ್ಲಿ ಅತ್ಯುತ್ತಮ ಅಭಿನಯವನ್ನು ನೀಡಿದರು, ಚಿತ್ರದ ಕಥೆಯನ್ನು ಹಾಲಿವುಡ್ ನ ಯಶಸ್ವೀ ಚಿತ್ರ ನಟ್ಟಿ ಪ್ರೊಫೆಸರ್ ನಿಂದ ತೆಗೆದುಕೊಳ್ಳಲಾಗಿದೆ.[೪೪][೪೫] ಇಂದ್ರ ಕುಮಾರ್ ನಿರ್ದೇಶನದ ರಿಷ್ತೆ ಚಿತ್ರದಲ್ಲಿ ಮತ್ತೊಂದು ಅಮೋಘ ಅಭಿನಯವನ್ನು ನೀಡುವುದರ ಮೂಲಕ ಮೇಲಿನ ಸ್ಥಾನಕ್ಕೆ ಏರಿದರು.[೪೬][೪೭] ಓಂ ಜೈ ಜಗದೀಶ್ ಚಿತ್ರದಲ್ಲಿ ಅಚ್ಚರಿಯ ಅಭಿನಯವನ್ನು ನೀಡಿದರು.[೪೮] ಕಪೂರ್ ಮೊದಲ ಬಾರಿ ಅರ್ಮಾನ್ ಚಿತ್ರದ ಮೂಲಕ ಬಾಲಿವುಡ್ ದಂತಕಥೆ ಅಮಿತಾಭ್ ಬಚ್ಚನ್ ರ ಜೊತೆ ಪಾತ್ರವನ್ನು ಮಾಡಿದರು, ಹಾಗು ನರಶಸ್ತ್ರಚಿಕಿತ್ಸಾತಜ್ಞನಾಗಿ ತಮ್ಮ ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸಿದರು.[೪೯][೫೦] 2003ರಲ್ಲಿ ಬಿಡುಗಡೆಯಾದ, ಕಲ್ಕತ್ತಾ ಮೇಲ್ ಚಿತ್ರದಲ್ಲಿ, ತಮ್ಮ ಮನೋಜ್ಞ ಅಭಿನಯವನ್ನು ನೀಡಿದರು. ಚಿತ್ರಕಥೆಯನ್ನು ಆಧರಿಸಿದ ಅವರ ಪಾತ್ರವು ಅಭಿನಯದ ವಿಪುಲ ಅವಕಾಶದಿಂದ ಕೂಡಿತ್ತು. ಚಿತ್ರವು ಪ್ರಬಲವಾದ ತಾರಾಬಳಗವನ್ನು ಹೊಂದಿದ್ದರೂ, ವಾಸ್ತವವಾಗಿ ಇದು ಕಪೂರ್ ಅವರ ಏಕವ್ಯಕ್ತಿ ಪ್ರದರ್ಶನವೆನಿಸಿಕೊಂಡಿತು.[೫೧][೫೨] ಮುಸಾಫಿರ್ ಚಿತ್ರದಲ್ಲಿನ ಮನೋಜ್ಞ ಅಭಿನಯದಿಂದ ಅವರು ಬೆಳ್ಳಿ ತೆರೆಯಲ್ಲಿ ಮನರಂಜಿಸಿದರು. [೫೩][೫೪] ಮೈ ವೈಫ್'ಸ್ ಮರ್ಡರ್ ಎಂಬ ರೋಮಾಂಚಕ ಚಿತ್ರದಲ್ಲಿ ರೋಗಪೀಡಿತನಾದ ಪತಿಯ ಪಾತ್ರದಲ್ಲಿ ಅಚ್ಚರಿಗೊಳಿಸುವ ಸಂಯಮದ ಅಭಿನಯ ನೀಡಿದರು, ಚಿತ್ರವನ್ನು ಸ್ವತಃ ಅವರೇ ನಿರ್ಮಿಸಿದ್ದರು.[೫೫][೫೬][೫೭][೫೮] ಅನೀಸ್ ಬಾಜ್ಮೀಯವರ ಸೂಪರ್ ಹಿಟ್ ಹಾಸ್ಯ ಚಿತ್ರ ನೋ ಎಂಟ್ರಿ (2005)ಯಲ್ಲಿ ಅದೇ ವರ್ಷ ಕಪೂರ್ ಅಭಿನಯಿಸಿದರು. ಚಿತ್ರವು ಆ ವರ್ಷದಲ್ಲಿ ಅಧಿಕ ಹಣ ಸೂರೆ ಮಾಡಿದ ಚಿತ್ರವಾಯಿತು.[೫೯] ಕಪೂರ್ 2005ರ ರೋಮಾಂಚಕ ಚಿತ್ರ ಚಾಕೊಲೇಟ್ ನಲ್ಲಿ ನಿಸ್ತೇಜ ಪಾತ್ರವನ್ನು ಕುಶಲತೆಯಿಂದ ನಿರ್ವಹಿಸಿದರು.[೬೦][೬೧] 2007ನೇ ವರ್ಷದ ಅನಿಲ್ ರ ಮೊದಲ ಚಿತ್ರ Salaam-e-Ishq: A Tribute to Love ಭಾರತದಲ್ಲಿ ವಿಫಲವಾದರೂ, ವಿದೇಶಗಳ ಗಲ್ಲಾಪಟ್ಟಿಗೆಯಲ್ಲಿ ಯಶಸ್ಸನ್ನು ಗಳಿಸಿತು.[೬೨] 21ನೇ ಡಿಸೆಂಬರ್ 2007ರಲ್ಲಿ ಅನೀಜ್ ಬಾಜ್ಮಿಯವರ ವೆಲ್ಕಂ ಚಿತ್ರವೂ ಬಿಡುಗಡೆಯಾಯಿತು ಹಾಗು ಚಿತ್ರವನ್ನು ವರ್ಷದ ಯಶಸ್ವೀ ಚಿತ್ರವೆಂದು ಘೋಷಿಸಲಾಯಿತು.[೬೩] ಸುಭಾಶ್ ಘಾಯ್ ರ ಬ್ಲ್ಯಾಕ್ ಅಂಡ್ ವೈಟ್ ನಲ್ಲಿ ಕಪೂರ್ ರ ಸಂವೇದನಾಶೀಲ ನಟನೆಯು ಶ್ಲಾಘನೆಗೆ ಪಾತ್ರವಾಯಿತು.[೬೪][೬೫][೬೬] 2008ರ ಅವರ ಮೊದಲ ಚಿತ್ರ, ಅಬ್ಬಾಸ್ ಮಸ್ತಾನ್ ರ ರೋಮಾಂಚಕ ಚಿತ್ರ, ರೇಸ್ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡಿತು. ವಿಜಯ್ ಕೃಷ್ಣ ಆಚಾರ್ಯರ, ತಶನ್ ಚಿತ್ರದ ಮೂಲಕ ಯಶ್ ರಾಜ್ ಫಿಲಂಸ್‌ಗೆ ಮತ್ತೆ ಅನಿಲ್ ಹಿಂತಿರುಗಿದರು. ಆದರೆ ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಸೋಲನ್ನು ಕಂಡಿತು. ಇವರ ಇತ್ತೀಚಿನ ಚಿತ್ರ, ಸ್ಲಂಡಾಗ್ ಮಿಲಿಯನೇರ್ ಅವರ ಮೊದಲ ಇಂಗ್ಲಿಷ್ ಭಾಷೆಯ ಚಿತ್ರವಾಗಿದೆ, ಚಿತ್ರವು 12 ನವೆಂಬರ್ 2008ರಲ್ಲಿ ಬಿಡುಗಡೆಯಾಯಿತು, ಹಾಗು ಯುವರಾಜ್ ಚಿತ್ರವು 21ನೇ ನವೆಂಬರ್ 2008ರಲ್ಲಿ ಬಿಡುಗಡೆಯಾಯಿತು. ಸಲ್ಮಾನ್ ಖಾನ್ ಹಾಗು ಕತ್ರೀನ ಕೈಫ್ ರನ್ನು ಮುಖ್ಯಭೂಮಿಕೆಯಲ್ಲಿ ಒಳಗೊಂಡ ಯುವರಾಜ್ ಚಿತ್ರವು, ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಗಳಿಸುವಲ್ಲಿ ವಿಫಲವಾಯಿತು. ಮತ್ತೊಂದು ಕಡೆಯಲ್ಲಿ, ಸ್ಲಂಡಾಗ್ ಮಿಲಿಯನೇರ್ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿತು ಹಾಗು ವಿಶ್ವಾದ್ಯಂತ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು, ಚಿತ್ರ ನಿರ್ಮಾಣಕ್ಕೆ ಕೇವಲ US $15 ದಶಲಕ್ಷ ವೆಚ್ಚವಾಗಿತ್ತು. ಆದರೆ ಚಿತ್ರವು ವಿಶ್ವವ್ಯಾಪಿಯಾಗಿ $352 ದಶಲಕ್ಷ ಹಣವನ್ನು ಬಾಚಿಕೊಂಡಿತು. ಜನವರಿ 2009ರಲ್ಲಿ, ಸ್ಲಂಡಾಗ್ ಮಿಲಿಯನೇರ್ ತಂಡದೊಂದಿಗೆ 66ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡರು, ಚಿತ್ರವು ನಾಲ್ಕು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಗಳಿಸಿತು. ಕಪೂರ್ 2008ರ ಬ್ಲ್ಯಾಕ್ ರೀಲ್ ಅವಾರ್ಡ್ಸ್ ನಲ್ಲಿ ಸ್ಲಮ್ ಡಾಗ್‌ನ ಅತ್ಯುತ್ತಮ ಸಮಗ್ರಪಾತ್ರಕ್ಕಾಗಿ ನಾಮನಿರ್ದೇಶನವನ್ನು ಹಾಗು ಚಲನಚಿತ್ರದಲ್ಲಿ ಪಾತ್ರವೊಂದರ ಮನೋಜ್ಞ ಅಭಿನಯಕ್ಕಾಗಿ ಚಿತ್ರತೆರೆ ನಟರ ಗಿಲ್ಡ್ ಪ್ರಶಸ್ತಿಯನ್ನು ಗಳಿಸಿದರು.

2010ರಲ್ಲಿ, ಕಪೂರ್ ಅಮೆರಿಕನ್ ಕಿರುತೆರೆ ಸರಣಿ 24 ರ ಎಂಟನೇ ಸರಣಿಯಲ್ಲಿ ನಟಿಸಿದರು, ಇದರಲ್ಲಿ ಕಾಲ್ಪನಿಕ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಕಮಿಸ್ತಾನ್ ನ ಅಧ್ಯಕ್ಷ ಒಮರ್ ಹಸ್ಸನ್ ಪಾತ್ರವನ್ನು ನಿರ್ವಹಿಸಿದ್ದರು. ಆ ವರ್ಷದ ಅಕ್ಟೋಬರ್ ತಿಂಗಳಲ್ಲಿ Mission: Impossible IV ಹಾಗು ಪವರ್ ಎರಡರಲ್ಲೂ ಖಳನಾಯಕನ ಪಾತ್ರಕ್ಕೆ ಆಯ್ಕೆ ಮಾಡಲಾಯಿತು.[೬೭]

ನಿರ್ಮಾಪಕನಾಗಿ

[ಬದಲಾಯಿಸಿ]

2002ರಲ್ಲಿ ತಮ್ಮ ಮೊದಲ ಹಾಸ್ಯಪ್ರಧಾನ ಚಿತ್ರ ಬಧಾಯಿ ಹೋ ಬಧಾಯಿ ಚಿತ್ರವನ್ನು ನಿರ್ಮಿಸಿ ಅದರಲ್ಲಿ ನಟಿಸಿದರು. ಇದರ ನಂತರ ಮೈ ವೈಫ್'ಸ್ ಮರ್ಡರ್ (2005), ಹಾಗು ಗಾಂಧಿ, ಮೈ ಫಾದರ್ (2007)ನಲ್ಲಿ ಪಾತ್ರವಹಿಸಿದರು. ಗಾಂಧಿ, ಮೈ ಫಾದರ್ ಚಿತ್ರವು ಮಹಾತ್ಮ ಗಾಂಧಿ ಹಾಗು ಅವರ ಪುತ್ರ ಹರಿಲಾಲ್ ಗಾಂಧಿ ನಡುವಿನ ಸಂಬಂಧದ ಬಗ್ಗೆ ಕೇಂದ್ರೀಕರಿಸುತ್ತದೆ (2007) ಹಾಗು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಚಿತ್ರಕ್ಕೆ - ವಿಶೇಷ ಜ್ಯೂರಿ ಪ್ರಶಸಿ/ ವಿಶೇಷ ಉಲ್ಲೇಖ(ಚಲನಚಿತ್ರ)ನೀಡಲಾಯಿತು. ಅಕ್ಷಯ್ ಖನ್ನ ಹಾಗು ಅರ್ಶದ್ ವಾರ್ಸಿ ಅಭಿನಯದ ಶಾರ್ಟ್ ಕಟ್: ದಿ ಕಾನ್ ಇಸ್ ಆನ್ ಚಿತ್ರವನ್ನೂ ಸಹ ನಿರ್ಮಾಣ ಮಾಡಿದರು.

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

[ಬದಲಾಯಿಸಿ]

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ಇತರ ಟಿಪ್ಪಣಿಗಳು
1979 ಹಮಾರೆ ತುಮ್ಹಾರೆ ವಿಪಿನ್
1980 ಏಕ್ ಬಾರ್ ಕಹೋ
ವಂಶ ವೃಕ್ಷಂ ತೆಲುಗು ಚಿತ್ರ
1981 ಹಮ್ ಪಾಂಚ್
1982 ಶಕ್ತಿ ರವಿ ಕುಮಾರ್
1983 ಪಲ್ಲವಿ ಅನುಪಲ್ಲವಿ ವಿಜಯ್ ಕನ್ನಡ ಚಿತ್ರ
ವೋ ಸಾತ್ ದಿನ್ ಪ್ರೇಂ ಪ್ರತಾಪ್ ಪಟಿಯಾಲವಾಲೆ
1984 ಮಶಾಲ್ ರಾಜಾ ಫಿಲಂಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ವಿಜೇತ
ಅಂದರ್ ಬಾಹರ್ ರಾಜಾ
ಲೈಲಾ ಕುಮಾರ್ ದೇಶ್ರಾಜ್ ಸಿಂಗ್
ಲವ್ ಮ್ಯಾರೇಜ್
1985 ಸಾಹೇಬ್ ಸುನಿ ಶರ್ಮ
ಯುದ್ಧ್ ಸರ್ಕಾರಿ ವಕೀಲ ಅವಿನಾಶ್/ಜೂನಿಯರ್ ದ್ವಿಪಾತ್ರದಲ್ಲಿ
ಮೊಹಬ್ಬತ್ ಶೇಖರ್
ಮೇರಿ ಜಂಗ್ ಅರುಣ್‌ ವರ್ಮಾ ನಾಮನಿರ್ದೇಶನಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ{/0
1986 ಕಹಾ ಕಹಾ ಸೆ ಗುಜರ್
ಪ್ಯಾರ್ ಕಾ ಸಿಂಧೂರ್
ಚಮೇಲಿ ಕಿ ಶಾದಿ ಚರಣ್‌ದಾಸ್
ಆಪ್ ಕೆ ಸಾಥ್ ವಿಮಲ್
ಜಾನ್ ಬಾಜ್ ಅಮರ್ ಸಿಂಗ್
ಪ್ಯಾರ್ ಕಿಯಾ ಹೈ ಪ್ಯಾರ್ ಕರೆಂಗೆ ಆನಂದ್‌
ಕರ್ಮ ಜಾನಿ/ಗ್ಯಾನೇಶ್ವರ್
ಇನ್ಸಾಫ್ ಕಿ ಆವಾಜ್
1987 ಇತಿಹಾಸ್
Mr. ಇಂಡಿಯಾ ಅರುಣ್ ವರ್ಮ/Mr.ಇಂಡಿಯಾ ಮೊದಲ ಭಾರತೀಯ ಸ್ಕಿ-ಫೈ(ವೈಜ್ಞಾನಿಕ ಕಾದಂಬರಿ ಆಧಾರಿತ) ಚಿತ್ರ
ಹಿಫಾಜತ್ ರಾಮ್ ಕುಮಾರ್/ರಾಜ್ ಕುಮಾರ್
ಠಿಕಾನ ರವಿ
1988 ಕಸಮ್
ರಾಮ್-ಅವತಾರ್ ಅವತಾರ್
ವಿಜಯ್ ಅರ್ಜುನ್
ಸೋನೆ ಪೇ ಸುಹಾಗಾ ರವಿ ಕುಮಾರ್/ಜೋಗಿಂದರ್
ತೇಜಾಬ್ ಮಹೇಶ್ ದೇಶಮುಖ್ (ಮುನ್ನಾ) ವಿಜೇತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
ಇನ್ತೆಕಾಂ
1989 ರಾಮ್ ಲಖನ್ ಇನ್ಸ್‌ಸ್ಪೆಕ್ಟರ್ ಲಖನ್ ಪ್ರತಾಪ್ ಸಿಂಗ್
ಜೋಷೀಲೆ ಕರಣ್
ಈಶ್ವರ್ ಈಶ್ವರ್ ಚಂದ್ ವಿಷ್ಣುನಾಥ್ ಬ್ರಹ್ಮಾನಂದ್ ನಾಮನಿರ್ದೇಶನ ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
ರಖವಾಲ
ಅಭಿಮನ್ಯು ಮನ್ನು/ಅಭಿಮನ್ಯು ಅಮೆರಿಕ ಪುರಿ
/ಅಬ್ದುಲ್ ಜಬ್ಬಾರ್
ಆಗ್ ಸೆ ಖೇಲೆಂಗೆ ಇನ್ಸ್ಪೆಕ್ಟರ್ ರವಿ ಸಕ್ಸೇನಾ /ರಾಜ ಸಕ್ಸೇನಾ
ಕಾಲ ಬಜಾರ್ ವಿಜಯ್
ಪರಿಂದಾ ಕರಣ್ ಆಸ್ಕರ್ಸ್ ಗೆ ಅಧಿಕೃತ ಪ್ರವೇಶ ಪಡೆದ ಭಾರತೀಯ ಚಿತ್ರ
1990 ಆವಾರ್ಗಿ ಆಜಾದ್
ಕಿಷೆನ್ ಕನೈಯ್ಯ ಕಿಷೆನ್/ಕನೈಯ್ಯ ದ್ವಿಪಾತ್ರ
ಘರ್ ಹೋ

ತೋ ಐಸಾ

ಜೀವನ್ ಏಕ್ ಸಂಘರ್ಷ್ ಕರಣ್
ಅಂಬಾ
ಜಮೈ ರಾಜಾ ರಾಜಾ
1991 ಜಿಗರ್ವಾಲಾ ಅಮರ್ ಸಿಂಗ್
ಬೇನಾಮ್ ಬಾದಶ ದೀಪಕ್
ಪ್ರತೀಕಾರ್ ಕೃಷ್ಣ ಶ್ರೀವಾಸ್ತವ್
ಲಮ್ಹೆ ವೀರೇಂದ್ರ ಪ್ರತಾಪ್ ಸಿಂಘ್ ನಾಮನಿರ್ದೇಶನ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
1992 ಬೇಟಾ ರಾಜು ವಿಜೇತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
ಜಿಂದಗಿ ಏಕ್ ಜುವ ಹರಿಕಿಶನ್ ಅಲಿಯಾಸ್ ಹ್ಯಾರಿ
ಹಮ್ಲಾ ಶಿವ
ಖೇಲ್ ದೇವದಾಸ್/ಅರುಣ್ ಕುಮಾರ್
ಹೀರ ರಾಂಜ್ಹ ದೀದ್ಹೋ/ರಾಂಜ್ಹ
ಅಪರಾಧಿ ಶಿವ
1993 ರೂಪ್ ಕಿ ರಾಣಿ ಚೋರೊಂಕಾ ಕಾ ರಾಜಾ ರಮೇಶ್ ವರ್ಮ /ರೋಮಿಯೋ
ಗುರು ದೇವ್ ಗುರು(ಗೌರವ್)
1994 ಲಾಡ್ಲಾ ರಾಜು
ಅಂದಾಜ್ ಅಜಯ್‌
1942: A Love Story ನರೇನ್ ಸಿಂಗ್ ನಾಮನಿರ್ದೇಶನ ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
Mr. ಆಜಾದ್ ಆಜಾದ್
1995 ತ್ರಿಮೂರ್ತಿ ಆನಂದ್ ಸಿಂಗ್/ಸಿಕಂದರ್ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ನಾಮಕರಣ
1996 ರಾಜಕುಮಾರ್ ರಾಜಕುಮಾರ್
ಲೋಫರ್ ರವಿ ಕುಮಾರ್
Mr. ಬೇಚಾರ ಆನಂದ್ ವರ್ಮ
1997 ಜುದಾಯಿ ರಾಜ್‌
ವಿರಾಸತ್ ಶಕ್ತಿ ಠಾಕೂರ್ ವಿಜೇತ, ಅತ್ಯುತ್ತಮ ನಟನೆಗಾಗಿ ಫಿಲ್ಮ್‌ಫೇರ್‌ ವಿಮರ್ಶಕರ ಪ್ರಶಸ್ತಿ
ನಾಮನಿರ್ದೇಶನ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
ದೀವಾನಾ ಮಸ್ತಾನಾ ರಾಜ್ ಕುಮಾರ್ (ರಾಜ)/ಇನ್ಸ್ಪೆಕ್ಟರ್. ಬನ್ಸಿ ರಾವ್
ಚಂದ್ರಲೇಖ ಮಲಯಾಳಂ ಚಿತ್ರ, ಅತಿಥಿ ಪಾತ್ರ
1998 ಕಭಿ ನಾ ಕಭಿ ರಾಜೇಶ್ವರ್ (ಅಲಿಯಾಸ್ ರಾಜ)
ಘರ್ವಾಲಿ ಬಹರ್ವಾಲೀ ಅರುಣ್
ಝೂಟ್ ಬೋಲೇ ಕೌವ ಕಾಟೆ ಶಂಕರ್ ಶರ್ಮ/ರಾಮನುಜ್
1999 ಹಮ್ ಆಪಕೆ ದಿಲ್ ಮೆ ರೆಹತೆ ಹೈ ವಿಜಯ್
ಬಿವಿ ನಂ.1 ಲಖನ್ ನಾಮನಿರ್ದೇಶನ, ಫಿಲ್ಮ್‌ಫೇರ್‌ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ
ಮನ್ನ್ ರಾಜ್‌
ತಾಲ್ ವಿಕ್ರಾಂತ್ ಕಪೂರ್ ಫಿಲ್ಮ್‌ಫೇರ್‌ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ವಿಜೇತರು
2000 ಬುಲಂದಿ ಧರಂರಾಜ್ "ದಾದಾ" ಠಕೂರ್/ಅರ್ಜುನ್ ಠಕೂರ್
ಪುಕಾರ್ ಮೇಜರ್ ಜೈದೇವ್ ರಾಜ್ವಂಶ್ ವಿಜೇತ, ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
ನಾಮನಿರ್ದೇಶನ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
ಹಮಾರಾ ದಿಲ್ ಆಪಕೆ ಪಾಸ್ ಹೈ ಅವಿನಾಶ್
ಕಾರೋಬಾರ್ ರಾಜೀವ್
2001 ಲಜ್ಜಾ ರಾಜು
ನಾಯಕ್ ಶಿವಾಜಿ ರಾವ್ ಗಾಯಕ್ವಾಡ್
2002 ಬಧಾಯಿ ಹೊ ಬಧಾಯಿ ರಾಜಾ
ಓಂ ಜೈ ಜಗದೀಶ್ ಓಂ ಬಾತ್ರ
ರಿಷ್ತೆ ಸುರಾಜ್ ಸಿಂಗ್
2003 ಅರ್ಮಾನ್ Dr. ಆಕಾಶ್ ಸಿನ್ಹಾ
ಕಲ್ಕತ್ತಾ ಮೇಲ್ ಅವಿನಾಶ್
2004 ಮುಸಾಫಿರ್ ಲಕ್ಕಿ
2005 ಬೇವಫಾ ಆದಿತ್ಯ ಸಹಾಯ್
ಮೈ ವೈಫ್'ಸ್ ಮರ್ಡರ್ ರವಿ ಪಟವರ್ಧನ್
ನೋ ಎಂಟ್ರಿ ಕಿಷೆನ್ ನಾಮನಿರ್ದೇಶನ, ಫಿಲ್ಮ್‌ಫೇರ್‌ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ
ಚಾಕಲೇಟ್ ಅಡ್ವೋಕೇಟ್ ಕ್ರಿಶನ್ ಪಂಡಿತ್
2006 ಹಮ್ಕೋ ದೀವಾನ ಕರ್ ಗಯೇ ಕರಣ್ ಒಬೆರಾಯ್
ಡರ್ನಾ ಜರೂರಿ ಹೇ ಕರಣ್ ಚೋಪ್ರ
2007 Salaam-e-Ishq: A Tribute To Love ವಿನಯ್
ವೆಲ್ ಕಮ್ ಸಾಗರ್ ಪಾಂಡೆ ಅಲಿಯಾಸ್ ಮಜ್ನು ಭಾಯ್ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ನಾಮನಿರ್ದೇಶನ
2008 ಮೈ ನೇಮ್ ಇಸ್ ಆಂಟನಿ ಗೊಂಜಾಲ್ವಿಸ್ ಖುದ್ದು ತಮ್ಮದೇ ಪಾತ್ರ ನಿರ್ವಹಣೆ
ಬ್ಲಾಕ್ & ವೈಟ್ ರಾಜನ್ ಮಾಥುರ್ ಆಗಿ ವಿಶೇಷ ಪಾತ್ರ
ರೇಸ್ ಇನ್ಸ್ಪೆಕ್ಟರ್ ರಾಬರ್ಟ್ ಡಿ'ಕೋಸ್ಟ (R.D.)
ತಶನ್ ಲಖನ್ ಸಿಂಗ್ ಬಲ್ಲೆಬಾಜ್ (ಭೈಯ್ಯಾಜಿ)
ಸ್ಲಮ್‌ಡಾಗ್ ಮಿಲಿಯನೇರ್ ಪ್ರೇಮ್‌ ಕುಮಾರ್‌ ನಾಮನಿರ್ದೇಶನ-ಚಲನಚಿತ್ರದಲ್ಲಿನ ಅದ್ಭುತ ಪಾತ್ರ ಪೋಷಣೆಗಾಗಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ
ಯುವರಾಜ್ ಗ್ಯಾನೇಶ್ ಯುವರಾಜ್
2009 Shortcut: The Con is on ಅತಿಥಿ ನಟನಾಗಿ ಖುದ್ದು ತಮ್ಮದೇ ಪಾತ್ರ ನಿರ್ವಹಣೆ
ವಾಂಟೆಡ್‌ ಜಲ್ವಾ ಹಾಡಿನಲ್ಲಿ ಅತಿಥಿ ಪಾತ್ರನಿರ್ವಹಣೆ
2010 24 ಕಮಿಸ್ತಾನದ ಅಧ್ಯಕ್ಷ ಒಮರ್ ಹಸ್ಸನ್ ನಿಯಮಿತ ಸರಣಿ (ಸರಣಿ 8)
ನೋ ಪ್ರಾಬ್ಲಮ್ ಇನ್ಸ್ಪೆಕ್ಟರ್ ಅರ್ಜುನ್ ಸಿಂಗ್
2011 ಪವರ್ ಬಾಲರಾಜ್‌

ಚಿತ್ರೀಕರಣಗೊಳ್ಳುತ್ತಿದೆ, 12ನೇ ಆಗಸ್ಟ್ 2011ರಲ್ಲಿ ಬಿಡುಗಡೆಗೊಳ್ಳಲಿದೆ[೬೭]

ತೇಜ್ಜ್ ಚಿತ್ರೀಕರಣಗೊಳ್ಳುತ್ತಿದೆ
Mission: Impossible – Ghost Protocol ಬ್ರಿಜ್ ನಾಥ್ ಚಿತ್ರೀಕರಣಗೊಳ್ಳುತ್ತಿದೆ, 16ನೇ ಡಿಸೆಂಬರ್ 2011ರಲ್ಲಿ ಬಿಡುಗಡೆಗೊಳ್ಳಲಿದೆ
ರೇಸ್ 2 ಇನ್ಸ್ಪೆಕ್ಟರ್ ರಾಬರ್ಟ್ ಡಿ'ಕೋಸ್ಟ (R.D.) ಪೂರ್ವ-ನಿರ್ಮಾಣ ಹಂತದಲ್ಲಿದೆ

ನಿರ್ಮಾಪಕ

[ಬದಲಾಯಿಸಿ]
  • 2002: ಬಧಾಯಿ ಹೋ ಬಧಾಯಿ
  • 2005: ಮೈ ವೈಫ್'ಸ್ ಮರ್ಡರ್
  • 2007: ಗಾಂಧಿ, ಮೈ ಫಾದರ್
  • 2009: Short Kut: The Con is On
  • 2010: ಆಯಿಷಾ
  • 2010: ನೋ ಪ್ರಾಬ್ಲಮ್

ಉಲ್ಲೇಖಗಳು

[ಬದಲಾಯಿಸಿ]
  1. Subhash K Jha (23 January 2010). "Anil Kapoor trying to get '24' to India". Times of India. Retrieved 8 February 2010.
  2. K Jha, Subhash (22 January 2010). "Anil Kapoor outstages his '24′co-stars, gets rave reviews". Thaindian.com. Archived from the original on 20 ಜನವರಿ 2012. Retrieved 7 December 2010.
  3. "The 14th Annual WIEF Presents: India- Breaking Boundaries". Whartonindia.com. 2010-03-27. Archived from the original on 2010-07-25. Retrieved 2010-08-09.
  4. ದೆಹಲಿಯಲ್ಲಿ ಸೋನಂ ಕಪೂರ್
  5. ಅನಿಲ್ ಕಪೂರ್ - ಜೀವನಚರಿತ್ರೆ
  6. "Film Review - Woh Saat Din". Planet-Bollywood. 1996-08-20. Archived from the original on 2011-05-17. Retrieved 2010-08-09.
  7. "Mashaal - movie review by Amit". Planet Bollywood. Retrieved 2010-08-09.
  8. "Yudh - box office, news, reviews". Ibosnetwork.com. 1985-05-03. Retrieved 2010-08-09.
  9. "Saaheb box office, news, reviews". Ibosnetwork.com. 1985-02-15. Retrieved 2010-08-09.
  10. "Janbaaz box office, news, reviews". Ibosnetwork.com. Archived from the original on 2013-01-26. Retrieved 2010-08-09.
  11. "Film Review: Janbaaz". Planet Bollywood. Archived from the original on 2011-06-16. Retrieved 2010-09-02.
  12. "Insaaf Ki Awaaz - box office, news, reviews". Ibosnetwork.com. 1986-11-14. Archived from the original on 2013-01-26. Retrieved 2010-08-09.
  13. "Chameli Ki Shaadi - movie review by Shahid Khan". Planet Bollywood. Retrieved 2010-08-09.
  14. "BoxOffice India.com". BoxOffice India.com. Archived from the original on 2010-09-18. Retrieved 2010-08-09.
  15. ಟಾಪ್ ಗ್ರಾಸಸ್ ಬೈ ಡೀಕೇಡ್ಸ್ ಎಂಡ್ ಇಯರ್ಸ್ - 1987 Archived 2013-01-25 at Archive.is. Ibosnetwork.com
  16. ೧೬.೦ ೧೬.೧ ಟಾಪ್ ಅರ್ನರ್ಸ್ 1980-1989. Boxofficeindia.com
  17. "Thikana - movie review by Akshay Shah". Planet Bollywood. Retrieved 2010-08-09.
  18. "BoxOffice India.com". BoxOffice India.com. Archived from the original on 2012-01-11. Retrieved 2010-08-09.
  19. "Ram Avtaar - Movie review". Planet Bollywood. Retrieved 2010-09-02.
  20. "BoxOffice India.com". BoxOffice India.com. Archived from the original on 2010-09-18. Retrieved 2010-08-09.
  21. "Parinda - Film Review". Planet Bollywood. Archived from the original on 2010-08-19. Retrieved 2010-09-02.
  22. ರಖವಾಲ: ಫಿಲ್ಮ್ ಡೀಟೈಲ್ಸ್ Archived 2013-01-26 at Archive.is. Ibosnetwork.com
  23. "Eeshwar box office, news, reviews". Ibosnetwork.com. 1989-02-24. Archived from the original on 2013-01-25. Retrieved 2010-08-09.
  24. "BoxOffice India.com". BoxOffice India.com. Archived from the original on 2012-07-22. Retrieved 2010-08-09.
  25. "Awaargi - Film Review". Planet Bollywood. Archived from the original on 2010-08-30. Retrieved 2010-09-02.
  26. "BoxOffice India.com". BoxOffice India.com. Archived from the original on 2013-09-21. Retrieved 2010-08-09.
  27. "BoxOffice India.com". BoxOffice India.com. Archived from the original on 2012-07-22. Retrieved 2010-08-09.
  28. "Khel - Film Review". Planet Bollywood. Archived from the original on 2010-11-16. Retrieved 2010-09-02.
  29. "Laadla - box office, news, reviews". Ibosnetwork.com. 1994-03-25. Archived from the original on 2012-09-07. Retrieved 2010-08-09.
  30. "Film Review: Trimurti". Planet Bollywood. Archived from the original on 2010-09-18. Retrieved 2010-09-02.
  31. "Film Review - Gharwali Baharwali". Planet Bollywood. Archived from the original on 2011-06-16. Retrieved 2010-09-02.
  32. "ಬಾಕ್ಸ್ ಆಫೀಸ್ 1996". Archived from the original on 2012-07-31. Retrieved 2012-07-31.
  33. "Film Review - Judaai". Planet Bollywood. Archived from the original on 2011-06-16. Retrieved 2010-09-02.
  34. ಬಾಕ್ಸ್ ಆಫೀಸ್ 1997. Boxofficeindia.com. 2010-09-02ರಲ್ಲಿ ಮರುಸಂಪಾದಿಸಲಾಗಿದೆ
  35. ಬಾಕ್ಸ್ ಆಫೀಸ್ 1999. Boxofficeindia.com. 2010-09-02ರಲ್ಲಿ ಮರುಸಂಪಾದಿಸಲಾಗಿದೆ
  36. Sukanya Verma. "Stars save the day". Rediff. Retrieved 2010-09-02.
  37. "Hamara Dil Aapke Paas Hai Movie Review - Hindi Movie". Apunkachoice.com. Retrieved 2010-08-09.
  38. "Film Reviews". Planet-Bollywood. 2000-08-25. Archived from the original on 2010-08-23. Retrieved 2010-08-09.
  39. "Karobaar - Movie Review". Retrieved 2010-09-02.
  40. "Nayak - The Real Hero (2001) - Review". Archived from the original on 4 ಫೆಬ್ರವರಿ 2002. Retrieved 9 August 2010.
  41. "'Nayak' By N K Deoshi Film critic review". ApunKaChoice.Com. Retrieved 2010-08-09.
  42. "'Nayak' Review". Planet Bollywood. Archived from the original on 2011-06-16. Retrieved 2010-08-09.
  43. "Nayak Movie Review". Archived from the original on 2010-04-24. Retrieved 2010-08-09.
  44. "Film Review - Badhaai Ho Badhaai". Planet-Bollywood. 2002-06-14. Archived from the original on 2011-06-16. Retrieved 2010-08-09.
  45. "Badhai Ho Badhai Movie Review - Hindi Movie". Apunkachoice.com. Retrieved 2010-08-09.
  46. "Film Review - Rishtey". Planet-Bollywood. 2002-12-06. Archived from the original on 2011-06-16. Retrieved 2010-08-09.
  47. "Rishtey Review - Rishtey Movie Review on fullhyd.com". .fullhyderabad.com. Retrieved 2010-08-09.
  48. "Om Jai Jagadish : Movie Review by Taran Adarsh". Bollywoodhungama.com. 2002-07-19. Retrieved 2010-08-09.
  49. "Film Review - Armaan". Planet-Bollywood. 2003-05-16. Archived from the original on 2011-06-16. Retrieved 2010-08-09.
  50. "Armaan Review - Armaan Movie Review on fullhyd.com". Fullhyderabad.com. Archived from the original on 2010-08-28. Retrieved 2010-08-09.
  51. "Film Review - Calcutta Mail". Planet-Bollywood. 2003-09-05. Archived from the original on 2010-04-24. Retrieved 2010-08-09.
  52. "Anil's cleverly packaged one-man show". Rediff.com. Retrieved 2010-08-09.
  53. "Musafir : Movie Review by Taran Adarsh". Bollywoodhungama.com. 2004-12-10. Retrieved 2010-08-09.
  54. "Bollywood - Film Review - Musafir". Planetbollywood.com. 2004-12-10. Archived from the original on 2010-04-03. Retrieved 2010-08-09.
  55. "My Wife's Murder: Movie review by Taran Adarsh". Bollywood Hungama. Retrieved 2010-08-09.
  56. "Film Review - My Wifes Murder". Planet Bollywood. Archived from the original on 2011-06-16. Retrieved 2010-08-09.
  57. "Anil Kapoor's A Series Of Unfortunate Events". Rediff. Retrieved 2010-08-09.
  58. "My Wifes Muder: Review". Archived from the original on 2011-07-21. Retrieved 2010-08-09.
  59. "ಬಾಕ್ಸ್ ಆಫೀಸ್ 2005". Archived from the original on 2012-07-29. Retrieved 2012-07-29.
  60. "Chocolate Bollywood Movie Review". IndiaGlitz. 2005-09-17. Retrieved 2010-08-09.
  61. "Movie Review:Chocolate". Sify.com. Retrieved 2010-08-09.
  62. "BoxOffice India.com". BoxOffice India.com. Archived from the original on 2012-05-25. Retrieved 2010-08-09.
  63. "Top Grosses by Decades and Years - 2007". IBOS. Archived from the original on 2012-12-08. Retrieved 2010-08-09.
  64. "Black and White: Review by Taran Adarsh". Bollywood Hungama. Archived from the original on 2012-10-21. Retrieved 2010-08-09.
  65. "Black & White is a relevant watch". Rediff. Retrieved 2010-08-09.
  66. "Black & White Review by Subhash K Jha". 8 March 2008. Archived from the original on 2012-10-08. Retrieved 2010-08-09.
  67. ೬೭.೦ ೬೭.೧ Pradhan Singh, Manisha (2010-10-08). "Amitabh Bachchan, Anil Kapoor, Sanjay Dutt & Ajay Devgn starrer Power begins shooting". BusinessofCinema. Archived from the original on 2011-11-07. Retrieved 2010-10-08. {{cite news}}: Italic or bold markup not allowed in: |publisher= (help)


ಬಾಹ್ಯ ಕೊಂಡಿಗಳು

[ಬದಲಾಯಿಸಿ]