ಚಾಲ್
'chawl'
[ಬದಲಾಯಿಸಿ]'ಶೌಚಾಲಯ ಕ್ಯೂ,' ತಕ್ಷಣ 'ಚಾಲ್' ಗಳ ಇರುವಿಕೆಯನ್ನು ಸೂಚಿಸುತ್ತದೆ
[ಬದಲಾಯಿಸಿ]'ಚಾಲ್,' ಅಂದಕೂಡಲೇ ೩-೪ ಮಹಡಿಯ ಇಟ್ಟಿಗೆ ಮತ್ತು ಮರದಿಂದ ನಿರ್ಮಿಸಿದ ನಾಟಿ-ಕೆಂಪು ಹೆಂಚಿನ ಸಾಮಾನ್ಯ ಮನೆಯ ಕಲ್ಪನೆ ಹೆಚ್ಚಾಗಿ ಮುಂಬಯಿ ನಲ್ಲಿ, ಮತ್ತು ಪುಣೆಯಲ್ಲಿ ( ಮಹಾರಾಷ್ಟ್ರದಲ್ಲಿ) ವಾಸಿಸಿದರಿಗೆ ತಕ್ಷಣ ಮೂಡುತ್ತದೆ. ಕಟ್ಟಡದ ಹತ್ತಿರದಲ್ಲೇ, 'ಶೌಚಾಲಯ, ಅಥವಾ '[ಸಂಡಾಸ್]' ಮನೆಯಿರುತ್ತದೆ. ಅದಕ್ಕೆ ಬೆಳಿಗ್ಯೆ 'ಶೌಚಾಲಯ ಕ್ಯೂ,' ಎಲ್ಲರಿಗೂ ತಕ್ಷಣ ಕಾಣಿಸುವ ಒಂದು ಮರೆಯಲಾರದ ನೋಟ. ಉದ್ದನೆಯ ಓಣಿಯಲ್ಲಿ ಒಂದು ಕಡೆ ಬಾಲ್ಕನಿಯ ಕಟ-ಕಟೆ ಇದ್ದರೆ ಅದಕ್ಕೆ ವಿರುದ್ಧವಾಗಿ ಹಲವಾರು ಖೋಲಿಗಳಿರುತ್ತವೆ.(ರೂಂ) ಒಂದು ರೂಮಿಗೆ ಗಾಳಿಬೆಳಕಿಗೆ ಅನುವುಮಾಡಿಕೊಡುವ ಒಂದು ಕಿಟಕಿಯನ್ನು ಮಾತ್ರ ಒದಗಿಸಿರುತ್ತಾರೆ. ಪ್ರತಿ ಅಂತಸ್ತಿಗೆ ಹತ್ತಲು ಮರದಲ್ಲಿ ಮಾಡಿದ ಗಟ್ಟಿ ಮೆಟ್ಟಲುಗಳು ಹಾಗೂ ಹತ್ತುವ ಸಮಯದಲ್ಲಿ ಕೈಗೆ ಆಧಾರ ಕೊಡಲು ಗಟ್ಟಿ-ಮರದ ಕೋಲು, ಇರುತ್ತವೆ. ಕೆಂಪು ಹೆಂಚಿನ ಮನೆಗಳು, ಮುಂಬಯಿನ ಕೆಲವು ಬಗೆಯ ಮಧ್ಯಮ-ಕೆಳ ವರ್ಗದ ವಸತಿಗೃಹಗಳಿಗೆ 'ಚಾಲ್' ಎನ್ನುತ್ತಾರೆ. ಇವು ೪-೫ ಮಹಡಿಯಷ್ಟು ಎತ್ತರಕ್ಕೆ ಇರಬಹುದು. ೧೦ -೨೦ ಮನೆಗಳು ಒಟ್ಟಿಗೆ ಇರುತ್ತವೆ. ಕೆಲವು 'ಚಾಲ್' ಗಳು ೨-೩ ಅಂತಸ್ತು ಇರಬಹುದು. ಅವಕ್ಕೆ ಇಲ್ಲಿನ ಜನ 'ಖೋಲಿ' ಎನ್ನುತ್ತಾರೆ. 'ಒಂದೇ ರೂಂ,' ನಲ್ಲಿ ಒಂದು ಬಚ್ಚಲಿರುತ್ತದೆ. (ಮೋರಿ) ೧೯೦೦ ರಲ್ಲಿ, ಅಗಲೇ ಬೊಂಬಾಯಿನಲ್ಲಿ ೫೦ ವರ್ಷಗಳಿಂದ ಬೇರುಬಿಟ್ಟಿದ್ದ ಹತ್ತಿಕಾರ್ಖಾನೆಯಲ್ಲಿ ಸಾವಿರಾರು ಜನ ಕಾರ್ಮಿಕರು ದುಡಿಯುತ್ತಿದ್ದರು. ಮಹಾರಾಷ್ಟ್ರದ ಅಕ್ಕ-ಪಕ್ಕದ 'ಕೊಂಕಣ', ಪ್ರದೇಶವಾದ 'ರಾಯ್ಘಡ್,' 'ಚಿಪ್ಲೂಣ್, 'ರತ್ನಾಗಿರಿ,' 'ಸಿಂಧುದುರ್ಗ್,' ಗಳಿಂದ ರೈತಾಪಿ ವರ್ಗದ ಜನ ಬರುತ್ತಿದ್ದರು. ಅವರು ತಮ್ಮ ಹೊಲಗಳಲ್ಲಿ ಕೆಲಸ ಬರುವ ತನಕ, ಬೊಂಬಾಯಿನ ಗಿರಣಿಗಳಲ್ಲಿ ಶ್ರಮಿಸಿ ನಂತರ ತೆರಳುತ್ತಿದ್ದರು.
'ಚಾಲ್' ಗಳು, ಹೀಗಿದ್ದವು
[ಬದಲಾಯಿಸಿ]ಸಾಮಾನ್ಯವಾಗಿ ಒಂದುರೂಮಿನಲ್ಲಿ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಳ್ಳಬೇಕು. ಪಾತ್ರೆತೊಳೆಯಲು, ಬಟ್ಟೆಒಗೆಯಲು, ಮತ್ತು ಸ್ನಾನವನ್ನೂ ಮಾಡಲು, ಒಂದು 'ಮೋರಿ' ಯನ್ನು ಕಟ್ಟಿರುತ್ತಾರೆ. ಮಲಗಲು, ಇರಲು ಜಾಗ, ಅಡುಗೆಗೆ, ಊಟಮಾಡಲು, ಅದೇ ಸರ್ವಸ್ವ. ಹೊಸದಾಗಿ ಮದುವೆಯಾದವರೂ ಅಲ್ಲೇ ಇರುತ್ತಾರೆ. 'ಬಚ್ಚಲಿಗೆ ಕಾಣಿಸದಿರಲೆಂದು ಒಂದು ಬಟ್ಟೆಯ-ತೆರೆಹಾಕಿರುತ್ತಾರೆ. ಬಾಡಿಗೆ ತಿಂಗಳಿಗೆ, ೧,೦೦೦ ರೂಪಾಯಿಗಳು. [20 USD] ಒಂದು 'ಬ್ಲಾಕ್,' ನಲ್ಲಿ ವಾಸಿಸುವ ಎಲ್ಲ ಪರಿವಾರಗಳಿಗೂ ಒಂದು ಸಾಮಾನ್ಯ 'ಲೆಟ್ರಿನ್,' ಇರುತ್ತದೆ. '[ಸಂಡಾಸ್]' ಪ್ರತಿ ಬ್ಲಾಕ್ ನಲ್ಲೂ ೪-೫ 'ಲೆಟ್ರಿನ್ ರೂಮ್,' ಗಳಿರುತ್ತವೆ. ಕೆಲವು 'ಟೆನೆಮೆಂಟ್,' ಗಳಲ್ಲಿ ಖಾಸಗಿ ಸ್ನಾನಗೃಹಗಳಿರುತ್ತವೆ. ಆದರೆ ಅದಕ್ಕೆ ಬಾಡಿಗೆ ಅತಿ ದುಬಾರಿ. ಚಾಲ್ ಗಳಿಗಿಂತಾ ೫೦% ಹೆಚ್ಚು ಬಾಡಿಗೆ, ತೆರಬೇಕಾಗುತ್ತದೆ. ಗೊತ್ತಿದ್ದಂತೆ 'ಚಾಲ್' ನ ವಾಸಿಗಳಿಗೆ, 'ಏಕಾಂತ,' ದ ಪ್ರಶ್ನೆಯೇ ಇರುವುದಿಲ್ಲ. ಹತ್ತಿರದಲ್ಲೇ ಒತ್ತಟ್ಟಾಗಿ ಕಟ್ಟಿರುವುದರಿಂದ, ನಗರದಲ್ಲಿ ಏನು ಘಟನೆಗಳು ಆದರೂ ಚಾಡಿಮಾತುಗಳು, ಗಾಳಿವರ್ತಮಾನಗಳೂ, ಎಲ್ಲರಿಗೂ ತಕ್ಷಣ ತಿಳಿದುಹೋಗುತ್ತದೆ. ಕೆಲವುವೇಳೆ ಇದು ಒಂದು ವಿಧದಲ್ಲಿ ಅನುಕೂಲವಾದದ್ದು. ಎಲ್ಲರೂ ಒಟ್ಟಾಗಿ ಸ್ನೇಹದಿಂದ ಭೇದಭಾವವಿಲ್ಲದೆ ಒಗ್ಗಟ್ಟಾಗಿ ಇರಲು ಸಾಧ್ಯ. ಒಬ್ಬರನ್ನೊಬ್ಬರು ಅರಿತುಕೊಂಡು ನೆರವಾಗುತ್ತಾ, ಜೀವನ ನಿರ್ವಹಣೆ ಮಾಡಬಹುದು.
ಮರಾಠಿ-ರಂಗಭೂಮಿಯಲ್ಲಿ, ಹಲವು ನಾಟಕಗಳಲ್ಲಿ 'ಚಾಲ್-ಜೀವನ ಶೈಲಿ,' ಮೂಡಿಬಂದಿದೆ
[ಬದಲಾಯಿಸಿ]ಈ ತರಹದ ವಾಸ್ತವ್ಯವನ್ನು ಕುರಿತು, 'ಮರಾಠಿ ಭಾಷೆ,' ಯಲ್ಲಿ ಹಲವಾರು ನಾಟಕಗಳು, ಅಭಿನಯಿಸಲ್ಪಟ್ಟಿವೆ. ಅವಲ್ಲಿ ಕೆಲವು ಜನಪ್ರಿಯವಾಗಿವೆ. ಕಾದಂಬರಿಗಳಲ್ಲಿ 'ಸ್ಲಮ್ ಡಾಗ್ ಮಿಲಿಯನೇರ್,' ಮತ್ತೊಂದು ಉದಾಹರಣೆ. ವಿಕಾಸ್ ಸ್ವರೂಪ್ ಮತ್ತು 'ಕಥಾ,' ಎಂಬ ಚಿತ್ರದ ಪರಿವಾರ, 'ಸಾಯಿಪರಂಜಪೆ,' ಯವರು ದಿಗ್ದರ್ಶಿಸಿದ ಹಿಂದಿ ಭಾಷೆಯ ನಾಟಕ, 'ಕಥಾ', ವಾಸ್ತವ ಚಿತ್ರ ಮತ್ತು 'ಡ್' ಚಿತ್ರದಲ್ಲಿ ನಾಯಕ-ನಟರು 'ಚಾಲ್' ನಲ್ಲಿನ ಜೀವನವನ್ನು ಚೆನ್ನಾಗಿ ಅಭಿನಯಿಸಿ, ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಕಂಕ್ರೀಟ್ ನಿಂದ ನಿರ್ಮಿಸಿದ, 'ಕಾಂಕ್ರೀಟ್ ಚಾಲ್,' ಗಳು, ಕೆಲವು 'ಚಾಲ್ ಕಟ್ಟಡಗಳು', 'ಗ್ಲೋಬ್ ಮಿಲ್ ಪ್ಯಾಸೇಜ್,' ಬಳಿ, ಶ್ರೀರಾಮ್ ಮಿಲ್ ಹತ್ತಿರ ಪ್ರಾರಂಭವಾದವು. ಅವೂ ಚಾಲ್ ಗಳೇ. ಆದರೆ, ಕಾಂಕ್ರೀಟ್-ಚಾಲ್ ಗಳು.
ಮಿಲ್ ಗಳು ಚಾಲ್ತಿಯಲ್ಲಿದ್ದಾಗ, ಪರೇಲ್ ಉಪನಗರದಲ್ಲಿನ ಕಾರ್ಮಿಕರ, ಅತಿ ಸೋವಿ-ವಸತಿ ಏರ್ಪಾಡುಗಳು
[ಬದಲಾಯಿಸಿ]'ಯು. ಪಿ', 'ಬಿಹಾರ', ಮತ್ತಿತರ ಸ್ಥಳಗಳಿಂದ ಬಂದ ಕೆಲಸಗಾರರು 'ಪರೇಲ್,' ಎಂಬ ಬೊಂಬಾಯಿನ ಮಿಲ್ ವಲಯದ ಹತ್ತಿರವೇ ಇರುವ, ಉಪನಗರದಲ್ಲಿ 'ಚಾಲ್' ಗಳಲ್ಲಿ ವಾಸಿಸುತ್ತಿದ್ದರು. ಆದರೆ ಅವರದು ಕೇವಲ ಮಲಗಲು ಮಾಡಿದ ಜಾಗದ ಏರ್ಪಾಡು ಮಾತ್ರ. ರೈಲ್ವೆ ಡಬ್ಬಿಯಲ್ಲಿರುವಂತೆ ಮಲಗಲು ಸೀಟ್ ಗಳಿರುತ್ತವೆ. ಒಂದರಮೇಲೊಂದು, ಇದರಲ್ಲಿ ಬಾಡಿಗೆ ಅತಿ ಕಡಿಮೆ. ಬೇರೆ ಸ್ನಾನ, ಸಂಡಾಸ್ ಮುಂತಾದವುಗಳಿಗೆ ಅವರು ಪಕ್ಕದ 'ಸಂಡಾಸ್-ಸ್ನಾನದ ಮನೆ,' ಗಳನ್ನು ಅವಲಂಭಿಸುತ್ತಿದ್ದರು.