ಸಾಕ್ಷರತೆ
This article's lead section may not adequately summarize key points of its contents. (September 2009) |
ಈ ಲೇಖನವನ್ನು ಪ್ರಬಂಧ ಮಾದರಿಯಲ್ಲಿ ಬರೆಯಲಾಗಿದೆ.(September 2010) |
ಈ ವಿಭಾಗದಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (April 2010) |
The examples and perspective in this article may not represent a worldwide view of the subject. (January 2010) |
'ಸಾಕ್ಷರತೆಯನ್ನು ಸಾಂಪ್ರದಾಯಿಕವಾಗಿ ಓದುವ ಮತ್ತು ಬರೆಯುವ ಸಾಮರ್ಥ್ಯವೆಂದು ಬಣ್ಣಿಸಲಾಗಿದೆ. ವಿವಿಧ ಸೈದ್ಧಾಂತಿಕ ಕ್ಷೇತ್ರಗಳ ವ್ಯಾಪ್ತಿ ಮೂಲಕ ಈ ಪರಿಕಲ್ಪನೆಯನ್ನು ಹೇಳಲಾಗಿದೆ ಮತ್ತು ವ್ಯಾಖ್ಯಾನಿಸಲಾಗಿದೆ.
ವಿಶ್ವಸಂಸ್ಥೆಯ ಶಿಕ್ಷಣ,ವಿಜ್ಞಾನ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ಸಾಕ್ಷರತೆಯನ್ನು ವಿವಿಧ ಸನ್ನಿವೇಶಗಳಿಗೆ ಸಂಬಂಧಿಸಿದ ಮುದ್ರಿತ ಮತ್ತು ಲಿಖಿತ ವಸ್ತುಗಳನ್ನು ಗುರುತುಹಿಡಿಯುವ, ತಿಳಿವಳಿಕೆ ಮಾಡಿಕೊಳ್ಳುವ, ವ್ಯಾಖ್ಯಾನಿಸುವ ,ಸೃಷ್ಟಿಮಾಡುವ, ಸಂವಹಿಸುವ, ಎಣಿಕೆಮಾಡುವ ಮತ್ತು ಬಳಸುವ ಸಾಮರ್ಥ್ಯವೆಂದು ವ್ಯಾಖ್ಯಾನಿಸಿದೆ. ಸಾಕ್ಷರತೆಯು ವ್ಯಕ್ತಿಗಳು ತಮ್ಮ ಗುರಿಗಳ ಸಾಧನೆಗೆ, ತಮ್ಮ ಜ್ಞಾನ ಮತ್ತು ಸಾಮರ್ಥ್ಯ ಬೆಳವಣಿಗೆಗೆ ಹಾಗೂ ಅವರ ಸಮುದಾಯ ಮತ್ತು ವಿಶಾಲ ವ್ಯಾಪ್ತಿಯ ಸಮಾಜದಲ್ಲಿ ಪಾಲ್ಗೊಳ್ಳಲು ಅನುವು ಮಾಡುವ ಅವಿಚ್ಛಿನ್ನ ಕಲಿಕೆಯನ್ನು ಒಳಗೊಂಡಿದೆ."
21ನೇ ಶತಮಾನದಲ್ಲಿ ಸಾಕ್ಷರತೆ
[ಬದಲಾಯಿಸಿ]ಸಾಕ್ಷರತೆಯನ್ನು ಕುರಿತ ನಮ್ಮ ತಿಳಿವಳಿಕೆಯಲ್ಲಿ ವಿಕಾಸದ ಎರಡನೇ ಸ್ವರೂಪವನ್ನು ತಿಳಿಯುವುದಕ್ಕಾಗಿ ಈ ಲೇಖನವನ್ನು ಓದುವಾಗ ಅಭ್ಯಸಿಸುವ ಸಂವಹನದ ಸ್ವರೂಪವವನ್ನು ಪರ್ಯಾಲೋಚಿಸುವ ಅಗತ್ಯವಿದೆ. ನಾವು ಮಾಹಿತಿಯನ್ನು ಮುಟ್ಟಿಸಲು ಯಾವುದೇ ವ್ಯಕ್ತಿ ಅಥವಾ ಸಣ್ಣ ವ್ಯಕ್ತಿಗಳ ಗುಂಪುಗಳ ಮೇಲೆ ನಾವಿನ್ನು ಅವಲಂಬಿತವಾಗಿಲ್ಲ. ಸಾಂಪ್ರದಾಯಿಕ ಸುದ್ದಿ ಹೊರಮಾರ್ಗಗಳು ಬ್ಲಾಗ್‌ಗಳು,ವೇದಿಕೆಗಳು, ಟ್ವಿಟರ್‌ಗಳು ಮತ್ತು ದಿಢೀರ್ ಸಂದೇಶದ ಮೂಲಕ ಜನಪ್ರಿಯತೆಗಾಗಿ ಹೋರಾಡುತ್ತಿವೆ. 2009ರ ಜೂನ್‌ನಲ್ಲಿ ಇರಾನ್ ಕ್ರಾಂತಿಯ ಸಂದರ್ಭದಲ್ಲಿ, ಇಂತಹ ಸುದ್ದಿಮೂಲಗಳು ಅತ್ಯಮೂಲ್ಯವಾಗಿತ್ತು. US ವಿದೇಶಾಂಗ ಇಲಾಖೆ ಅಧಿಕಾರಿಗಳು ಟ್ವಿಟರ್‌ಗೆ ವೆಬ್‌ತಾಣದ ನಿರ್ವಹಣೆಯನ್ನು ಮುಂದೂಡುವಂತೆ ತಿಳಿಸಿತು. ಏಕೆಂದರೆ ಇದರಿಂದಾಗಿ ಟ್ವೀಟ್ಸ್ ಮೂಲಕ ಮಾಹಿತಿ ಹರಿವಿಗೆ ತಡೆಯಾಗಿತ್ತು.[೧][೨]
ಈ ಕಲ್ಪನೆಯು ಮಾಹಿತಿ ಅವಕಾಶದ ಚಿತ್ರಣವನ್ನು ಕಾಯಂ ಬದಲಾಯಿಸಿತು ಹಾಗು 21ನೇ ಶತಮಾನದಲ್ಲಿ ಸಾಕ್ಷರತೆಯನ್ನು ಅಭ್ಯಾಸವಾಗಿ ತಿಳಿದುಕೊಳ್ಳಲು ಅವಿಭಾಜ್ಯವಾಯಿತು.[೩] ವಿದ್ಯಾರ್ಥಿಯೊಬ್ಬ ಓದಬಹುದೇ(ನಿಜವಾಗಲೂ ಪಠ್ಯವನ್ನು ವಿಸಂಕೇತಿಸುವುದು) ಮತ್ತು ಬರೆಯಬಹುದೇ(ಪಠ್ಯವನ್ನು ಸಂಕೇತಭಾಷೆಗೆ ಪರಿವರ್ತನೆ)ಎಂದು ಪರಿಗಣಿಸುವುದು ಸಾಕಾಗುವುದಿಲ್ಲ. 'ಅನೇಕರಿಂದ ಅನೇಕರ' ಮಟ್ಟದಿಂದ ಅದು ಇರುವ ಕಡೆ ಸಂವಹನ ಸಾಧ್ಯವಾಗದ ಸಮಾಜದಿಂದ ನಾವು ಪರಿವರ್ತನೆಯನ್ನು ಪೂರ್ಣಗೊಳಿಸಬೇಕಾದರೆ ಶಿಕ್ಷಣ ಮತ್ತು ಒಟ್ಟಾರೆಯಾಗಿ ಸಮಾಜದಲ್ಲಿ ಸಾಕ್ಷರತೆ ಕುರಿತು ಹೆಚ್ಚು ಅರ್ಥಪೂರ್ಣ ಅಂಶಗಳನ್ನು ಪರಿಗಣಿಸುವುದು ಅವಶ್ಯಕವಾಗಿದೆ.
ಆರ್ಥಿಕ ಪರಿಣಾಮ
[ಬದಲಾಯಿಸಿ]ಒಂದು ಪ್ರದೇಶದ ಮಾನವ ಬಂಡವಾಳ ವೃದ್ಧಿಗೆ ಸಾಕ್ಷರತೆಯು ನಿರ್ಣಾಯಕ ಮಾಪನವಾಗಿದೆಯೆಂದು ಅನೇಕ ನೀತಿ ವಿಶ್ಲೇಷಕರು ಪರಿಗಣಿಸಿದ್ದಾರೆ. ವಿದ್ಯಾವಂತ ಜನರನ್ನು ಅವಿದ್ಯಾವಂತ ಜನರಿಗಿಂತ ಕಡಿಮೆ ಖರ್ಚಿನಲ್ಲಿ ತರಬೇತಿ ನೀಡಬಹುದೆಂಬ ಆಧಾರದ ಮೇಲೆ ಈ ಪ್ರತಿಪಾದನೆಯನ್ನು ಮಾಡಲಾಗಿದೆ. ಸಾಮಾನ್ಯವಾಗಿ ವಿದ್ಯಾವಂತ ಜನರು ಅಧಿಕ ಸಾಮಾಜಿಕ-ಆರ್ಥಿಕ ಸ್ಥಾನಮಾನ ಹೊಂದಿರುತ್ತಾರೆ ಮತ್ತು ಉತ್ತಮ ಆರೋಗ್ಯ ಮತ್ತು ಉದ್ಯೋಗದ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಸಾಕ್ಷರತೆಯು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಮತ್ತು ಉನ್ನತ ಶಿಕ್ಷಣಕ್ಕೆ ಅವಕಾಶ ನೀಡುತ್ತದೆ ಎಂದು ನೀತಿನಿರೂಪಕರು ವಾದಿಸುತ್ತಾರೆ.
ಉದಾಹರಣೆಗೆ ಭಾರತದ ಕೇರಳದಲ್ಲಿ 1960ರ ದಶಕದಲ್ಲಿ ಹೆಣ್ಣುಮಕ್ಕಳ ಸಾವಿನ ಪ್ರಮಾಣ ಗಮನಾರ್ಹವಾಗಿ ಕುಸಿಯಿತು. 1948ರ ನಂತರ ಶೈಕ್ಷಣಿಕ ಸುಧಾರಣೆಗಳಿಗೆ ಅನುಗುಣವಾಗಿ ಹೆಣ್ಣುಮಕ್ಕಳಿಗೆ ಶಾಲಾಶಿಕ್ಷಣ ನೀಡಿ, ಅವರು ಕುಟುಂಬಗಳ ಪೋಷಣೆ ಮುಂದುವರಿಸಿದಾಗ ಈ ಬೆಳವಣಿಗೆ ಕಂಡುಬಂತು. ಆದಾಗ್ಯೂ ಇತ್ತೀಚಿನ ಸಂಶೋಧಕರು, ಇಂತಹ ಸಹಸಂಬಂಧಗಳು ಸಾಕ್ಷರತೆಯಿಂದ ಮಾತ್ರವಲ್ಲದೇ ಶಾಲೆಯ ಶಿಕ್ಷಣದ ಒಟ್ಟಾರೆ ಪರಿಣಾಮಗಳಿಂದ ಉಂಟಾಗಿದೆಯೆಂದು ವಾದಿಸುತ್ತಾರೆ.[ಸೂಕ್ತ ಉಲ್ಲೇಖನ ಬೇಕು] ಸಾಕ್ಷರತೆಯಿಂದ ಸಂಪತ್ತು ವೃದ್ಧಿಸುವ ಸಾಮರ್ಥ್ಯ ಸೇರಿದಂತೆ, ಸಾಂಸ್ಕೃತಿಕ ರೂಢಿಗಳು ಮತ್ತು ಶಾಲೆಗಳಿಗೆ ಸುಲಭದ ಪ್ರವೇಶ ಮತ್ತು ಬೋಧನಾ ಸೇವೆಗಳ ಮೂಲಕ ಸಂಪತ್ತು ಸಾಕ್ಷರತೆಗೆ ಉತ್ತೇಜಿಸಬಹುದು.[ಸೂಕ್ತ ಉಲ್ಲೇಖನ ಬೇಕು]
ವಿಶಾಲ ಮತ್ತು ಪೂರಕ ಅರ್ಥನಿರೂಪಣೆಗಳು
[ಬದಲಾಯಿಸಿ]ಲಿಖಿತ ಭಾಷೆಯನ್ನು ಸಕ್ರಿಯವಾಗಿ ಮತ್ತು ನಿಷ್ಕ್ರಿಯವಾಗಿ ಬಳಸುವ ಸಾಮರ್ಥ್ಯ ಎಂದು ಸಾಂಪ್ರದಾಯಿಕವಾಗಿ ಪರಿಗಣಿಸಲಾಗಿದೆ. ಸಾಕ್ಷರತೆಯ ಕೆಲವು ಅರ್ಥನಿರೂಪಣೆಗಳು ಓದುವ, ಬರೆಯುವ, ಅರ್ಥಸೂಚಿಸುವ,ಕೇಳುವ ಮತ್ತು ಮಾತನಾಡುವ ಸಾಮರ್ಥ್ಯವೆಂದು ಪರಿಗಣಿಸಿವೆ.[೪] 1980ರ ದಶಕದೀಚೆಗೆ,ಸಾಕ್ಷರತೆಯು ಸೈದ್ಧಾಂತಿಕವೆಂದು ಕೆಲವರು ವಾದಿಸಿದ್ದಾರೆ. ಅದರ ಅರ್ಥ ಸಾಕ್ಷರತೆಯು ಒಂದು ಸನ್ನಿವೇಶದಲ್ಲಿ ಅದಕ್ಕೆ ಸಂಬಂಧಿಸಿದ ಮೌಲ್ಯಗಳೊಂದಿಗೆ ಏಕಸಾಲಿನಲ್ಲಿ ಸದಾ ಅಸ್ತಿತ್ವದಲ್ಲಿರುತ್ತದೆ.[೫][೬] ಪೂರ್ವಭಾವಿ ಕೆಲಸವು ಸಾಕ್ಷರತೆಯನ್ನು ಸ್ವನಿಯಂತ್ರಣದಿಂದ ಅಸ್ತಿತ್ವದಲ್ಲಿದೆಯೆಂದು ಅಭಿಪ್ರಾಯಪಟ್ಟಿದೆ.[೭][೮][೯][೧೦]
ಸಾಕ್ಷರತೆಯ ಅರ್ಥನಿರೂಪಣೆಯನ್ನು ವಿಸ್ತರಿಸಬೇಕು ಎಂದು ಕೆಲವರು ವಾದಮಂಡಿಸಿದ್ದಾರೆ. ಉದಾಹರಣೆಗೆ, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಇಂಗ್ಲೀಷ್ ಉಪನ್ಯಾಸಕರ ರಾಷ್ಟ್ರೀಯ ಮಂಡಳಿ ಮತ್ತು ಅಂತಾರಾಷ್ಟ್ರೀಯ ವಾಚನ ಕೂಟವು ಅರ್ಹತೆಗಳ ಸಾಂಪ್ರದಾಯಿಕ ಪಟ್ಟಿಗೆ ಚಾಕ್ಷುಕ ನಿರೂಪಣೆಯನ್ನು ಸೇರಿಸಿದೆ. ಇದೇ ರೀತಿ,ಸ್ಕಾಟ್‌ಲೆಂಡ್‌ನಲ್ಲಿ ಸಾಕ್ಷರತೆಯನ್ನು ಕುಟುಂಬದ ಸದಸ್ಯರಾಗಿ, ನೌಕರರಾಗಿ, ಪೌರರಾಗಿ ಮತ್ತು ಜೀವಮಾನಪೂರ್ತಿ ಶಿಕ್ಷಣಾರ್ಥಿಗಳಾಗಿ, ಓದುವ ಮತ್ತು ಬರೆಯುವ ಹಾಗು ಗಣಿತಜ್ಞತೆಯನ್ನು ಬಳಸುವ ,ಮಾಹಿತಿಯನ್ನು ನಿಭಾಯಿಸುವ, ಕಲ್ಪನೆಗಳು ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸುವ, ನಿರ್ಧಾರ ಕೈಗೊಳ್ಳುವ ಮತ್ತು ಸಮಸ್ಯೆಗಳನ್ನು ಬಿಡಿಸುವ ಸಾಮರ್ಥ್ಯ ಎಂದು ವ್ಯಾಖ್ಯಾನಿಸಲಾಗಿದೆ.[೧೧]
ಅನೇಕ ಸಮಾಜಗಳಲ್ಲಿ ಮೂಲ ಸಾಕ್ಷರತೆಯ ಮಾನದಂಡವು ಸುದ್ದಿಪತ್ರಿಕೆಯನ್ನು ಓದುವುದಾಗಿದೆ. ವಾಣಿಜ್ಯದಲ್ಲಿ ಅಥವಾ ಸಮಾಜದಲ್ಲಿ ಸಾಮಾನ್ಯವಾಗಿ ಸಂವಹನದಲ್ಲಿ ಗಣಕಯಂತ್ರಗಳನ್ನು ಮತ್ತು ಇತರೆ ಅಂಕೀಯ ತಂತ್ರಜ್ಞಾನಗಳನ್ನು ಬಳಸುವ ಸಾಮರ್ಥ್ಯದ ಅಗತ್ಯವು ಹೆಚ್ಚಾಗಿ ಕಂಡುಬಂದಿದೆ.[೧೨] 1990ರ ದಶಕದಿಂದೀಚೆಗೆ ಅಂತರ್ಜಾಲವು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ವ್ಯಾಪಕವಾಗಿ ಬಳಕೆಗೆ ಬಂದಾಗಿನಿಂದ, ಸಾಕ್ಷರತೆಯ ಅರ್ಥನಿರೂಪಣೆಯು ವೀಕ್ಷಕ ತಂತ್ರಾಂಶಗಳು(ವೆಬ್ ಬ್ರೌಸರ್) ಪದ ಸಂಸ್ಕರಣೆ ಕ್ರಮವಿಧಿಗಳು ಹಾಗು ಪಠ್ಯ ಸಂದೇಶಗಳು ಮುಂತಾದ ಸಾಧನಗಳನ್ನು ಬಳಸುವ ಸಾಮರ್ಥ್ಯ ಒಳಗೊಂಡಿದೆ ಎಂದು ಕೆಲವರು ಪ್ರತಿಪಾದಿಸಿದ್ದಾರೆ. ಇದೇರೀತಿಯ ವಿಸ್ತರಿತ ಪರಿಣತಿಯ ಗುಂಪುಗಳನ್ನು ಬಹುಮಾಧ್ಯಮ ಸಾಕ್ಷರತೆ, ಗಣಕಯಂತ್ರದ ಸಾಕ್ಷರತೆ, ಮಾಹಿತಿ ಸಾಕ್ಷರತೆ,ಮತ್ತು ತಾಂತ್ರಿಕ ಸಾಕ್ಷರತೆ ಎಂದು ಕರೆಯಲಾಗಿದೆ.[೧೩][೧೪] ಕೆಲವು ವಿದ್ವಾಂಸರು ಬಹುಸಾಕ್ಷರತೆಗಳ ಕಲ್ಪನೆಯನ್ನು ಪ್ರಸ್ತಾಪಿಸಿದ್ದಾರೆ. ಅವು ಕ್ರಿಯಾತ್ಮಕ ಸಾಕ್ಷರತೆ, ವಿಮರ್ಶಾತ್ಮಕ ಸಾಕ್ಷರತೆ ಮತ್ತು ಅಲಂಕಾರಿಕ ಸಾಕ್ಷರತೆಯನ್ನು ಒಳಗೊಂಡಿದೆ.
"ಕಲೆಗಳ ಸಾಕ್ಷರತೆ" ಕಾರ್ಯಕ್ರಮಗಳು ಅಮೆರಿಕ ಸಂಯುಕ್ತ ಸಂಸ್ಥಾನದ ಕೆಲವು ಕಡೆಗಳಲ್ಲಿ ಅಸ್ತಿತ್ವದಲ್ಲಿದೆ.[೧೫]
ಶೈಕ್ಷಣಿಕ ವಲಯದಿಂದ ಅಧ್ಯಯನದಲ್ಲಿರುವ ಇತರೆ ಪ್ರಕಾರಗಳು ವಿಮರ್ಶಾತ್ಮಕ ಸಾಕ್ಷರತೆ, ಮಾಧ್ಯಮ ಸಾಕ್ಷರತೆ, ಪರಿಸರ ಸಾಕ್ಷರತೆ ಮತ್ತು ಆರೋಗ್ಯ ಸಾಕ್ಷರತೆಯನ್ನು ಒಳಗೊಂಡಿದೆ.[೧೬] ಸಾಕ್ಷ್ಯ ಆಧಾರಿತ ನಿರ್ಧಾರ ಕೈಗೊಳ್ಳುವಿಕೆ ಮೇಲೆ ಹೆಚ್ಚಿನ ಮಹತ್ವ ಹಾಗು ಸಾಂಖ್ಯಿಕ ರೇಖಾಚಿತ್ರ ಹಾಗು ಮಾಹಿತಿ, ಸಾಂಖ್ಯಿಕ ಸಾಕ್ಷರತೆಯ ಬಳಕೆಯು ಸಾಕ್ಷರತೆಯ ಅತೀ ಮುಖ್ಯ ಅಂಶವಾಗಿದೆ. ಅಂತಾರಾಷ್ಟ್ರೀಯ ಅಂಕಿಅಂಶ ಸಾಕ್ಷರತೆ ಯೋಜನೆ ಯನ್ನು ಸಮಾಜದ ಎಲ್ಲ ಸದಸ್ಯರ ನಡುವೆ ಸಾಂಖ್ಯಿಕ ಸಾಕ್ಷರತೆಯ ಉತ್ತೇಜನಕ್ಕೆ ಮುಡುಪಿಡಲಾಗಿದೆ.
ಸಾಕ್ಷರತೆಯು ಸಂವಹನ ನಡೆಯುವ ಸಮುದಾಯದ ಸಾಂಸ್ಕೃತಿಕ,ರಾಜಕೀಯ,ಐತಿಹಾಸಿಕ ಸನ್ನಿವೇಶಗಳನ್ನು ಒಳಗೊಂಡಿದೆಯೆಂದು ವಾದಿಸಲಾಗಿದೆ.[೧೭]
ಮನೆಯಲ್ಲಿ ಸಾಕ್ಷರ ವ್ಯಕ್ತಿಯ ಸಂಪರ್ಕದಿಂದ ಸಾಕ್ಷರತೆಯ ಬಹುಮಟ್ಟಿನ ಪ್ರಯೋಜನಗಳು ಲಭ್ಯವಾಗುತ್ತವೆ ಎಂದು ಸತ್ಯವನ್ನು ಪರಿಗಣಿಸಿ, ಕೌಶಿಕ್ ಬಸು ಮತ್ತು ಜೇಮ್ಸ್ ಫಾಸ್ಟರ್ ಕೃತಿಗಳಿಂದ ಆರಂಭಿಸಿ,ಅರ್ಥಶಾಸ್ತ್ರದ ಇತ್ತೀಚಿನ ಸಾಹಿತ್ಯವು 'ನಿಕಟ ಸಂಪರ್ಕದ ಅನಕ್ಷರಸ್ಥ' ಮತ್ತು 'ಪ್ರತ್ಯೇಕಗೊಂಡ ಅನಕ್ಷರಸ್ಥ'ನ ನಡುವೆ ಭೇದ ಗುರುತಿಸುತ್ತದೆ. ಮೊದಲನೆಯದು, ಅನಕ್ಷರಸ್ಥ ವ್ಯಕ್ತಿ ಇತರೆ ಸಾಕ್ಷರ ವ್ಯಕ್ತಿಗಳ ಜತೆ ಮನೆಯೊಂದರಲ್ಲಿ ವಾಸಿಸುವುದನ್ನು ಉಲ್ಲೇಖಿಸಿದೆ ಮತ್ತು ಎರಡನೆಯದು ಎಲ್ಲ ಅನಕ್ಷರಸ್ಥರಿಂದ ಕೂಡಿದ ಮನೆಯಲ್ಲಿ ವಾಸಿಸುವ ಅನಕ್ಷರಸ್ಥನಿಗೆ ಸಂಬಂಧಿಸಿದೆ. ಬಡರಾಷ್ಟ್ರಗಳಲ್ಲಿ ಅನೇಕ ಜನರು ಕೇವಲ ಅನಕ್ಷರಸ್ಥರು ಮಾತ್ರವಲ್ಲ, ಆದರೆ ಪ್ರತ್ಯೇಕಗೊಂಡ(ಒಂಟಿ) ಅನಕ್ಷರಸ್ಥರು.
ಇತಿಹಾಸ
[ಬದಲಾಯಿಸಿ]ಶಿಕ್ಷಣದ ಇತಿಹಾಸವು ಸುದೀರ್ಘ ಗತಕಾಲವನ್ನು ಹೊಂದಿದೆ. ಕಲಿಕೆಯ ಮೊದಲ ಸ್ಥಾನಗಳು ಭಾರತ, ಮೆಸೊಪೊಟೇಮಿಯ ಮತ್ತು ಈಜಿಪ್ಟ್ ಮತ್ತು ನಂತರದ ದಿನಾಂಕದಲ್ಲಿ ಗ್ರೀಸ್ ಒಳಗೊಂಡಿದೆ. ನಳಂದ ವಿಶ್ವವಿದ್ಯಾನಿಲಯವು(ಭಾರತ)ವಿಶ್ವದಲ್ಲೇ ಅತ್ಯಂತ ಹಳೆಯ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. ಅಲ್ಲಿಗೆ ಚೀನದ ಭಿಕ್ಕು ಕ್ಸುಯಾನ್‌ಜಾಂಗ್(ಹ್ಯುಯೆನ್ ತ್ಸಾಂಗ್ ಎಂದು ಹೆಸರಾದ) 625BCಯಲ್ಲಿ ಬೌದ್ಧ ತತ್ವಶಾಸ್ತ್ರ ಮತ್ತು ಗಣಿತವನ್ನು ಕಲಿಯಲು ಆಗಮಿಸಿದ್ದ. ಆದರೂ ಸಾಕ್ಷರತೆಯು ಬರವಣಿಗೆಯ ಇತಿಹಾಸದವರೆಗೆ ಅನೇಕ ಸಾವಿರ ವರ್ಷಗಳ ಹಿಂದಿನ ಇತಿಹಾಸ ಹೊಂದಿದ್ದರೂ, ಸಾಕ್ಷರತೆಯ ರಚನೆಯು ಇತಿಹಾಸದುದ್ದಕ್ಕೂ ವ್ಯತ್ಯಾಸ ಹೊಂದಿದೆ. ಒಂದು ಕಾಲದಲ್ಲಿ,ತನ್ನ ಹೆಸರನ್ನು ಸಹಿ ಹಾಕಲು ಅರಿತಿದ್ದರೆ ಸಾಕ್ಷರ ವ್ಯಕ್ತಿಯೆಂದು ಪರಿಗಣಿಸಲಾಗಿತ್ತು. ಕೆಲವು ಕಾಲಗಳಲ್ಲಿ ಲ್ಯಾಟಿನ್ ಓದುವ, ಬರೆಯುವ ಸಾಮರ್ಥ್ಯದ ಮೇಲೆ ಸಾಕ್ಷರತೆಯನ್ನು ಅಳೆಯಲಾಗುತ್ತಿತ್ತು. ಅವನ ಅಥವಾ ಅವಳ ದೇಶೀಯ ಭಾಷೆಯನ್ನು ಓದುವ ಅಥವಾ ಬರೆಯುವ ವ್ಯಕ್ತಿಯ ಸಾಮರ್ಥ್ಯವು ನಗಣ್ಯವಾಗಿತ್ತು. ಇದಕ್ಕೆ ಮುಂಚೆ,ಸಾಕ್ಷರತೆಯು ವೃತ್ತಿಪರ ಬರಹಗಾರರ ವ್ಯಾಪಾರಿ ರಹಸ್ಯವಾಗಿತ್ತು. ಅನೇಕ ಐತಿಹಾಸಿಕ ಸಾಮ್ರಾಜ್ಯಗಳು ಈ ವೃತ್ತಿಯ ರೂಪರೇಖೆಯನ್ನು ಕಾಯ್ದುಕೊಂಡಿದ್ದವು. ಕೆಲವುಬಾರಿ, ಇಂಪೀರಿಯಲ್ ಅರಾಮಿಕ್ ಪ್ರಕರಣದ ರೀತಿ. ಸಂಪೂರ್ಣ ಅನ್ಯ ಭಾಷೆ ಮಾತನಾಡುವ ಮತ್ತು ಬರೆಯುವ ನೆಲಗಳಿಂದ ಕೂಡ ಅದನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಉನ್ನತ ಸಾಕ್ಷರತೆ ಪ್ರಮಾಣಗಳನ್ನು ಹೊಂದಿರುವ ಕೆಲವು ಆಧುನಿಕ ಪೂರ್ವ ಸಮಾಜಗಳು ಪ್ರಾಚೀನ ಗ್ರೀಸ್[೧೮] ಮತ್ತು ಇಸ್ಲಾಮಿಕ್ ಕ್ಯಾಲಿಫೇಟ್ ಒಳಗೊಂಡಿದೆ.[೧೯] ನಂತರದ ಪ್ರಕರಣದಲ್ಲಿ, ಕಾಗದದ ವ್ಯಾಪಕ ಅಳವಡಿಕೆ ಮತ್ತು ಮಕ್ತಾಬ್ ಮತ್ತು ಮದ್ರಸಾ ಶಿಕ್ಷಣಸಂಸ್ಥೆಗಳ ಹುಟ್ಟು ಮೂಲಭೂತ ಪಾತ್ರವನ್ನು ನಿರ್ವಹಿಸಿತು.[೨೦]
ಯುರೋಪ್‌ನಲ್ಲಿ ಸಾಕ್ಷರತೆ
[ಬದಲಾಯಿಸಿ]12 ಮತ್ತು 13ನೇ ಶತಮಾನದ ಇಂಗ್ಲೆಂಡ್‌ನಲ್ಲಿ, ಬೈಬಲ್‌ನ ನಿರ್ದಿಷ್ಟ ಸಾಲನ್ನು ಓದುವ ಸಾಮರ್ಥ್ಯವು ಸಾಮಾನ್ಯ ಕಾನೂನು ಪ್ರತಿವಾದಿಗೆ ಕ್ರೈಸ್ತ ಪುರೋಹಿತ ಅನುಕೂಲದ ನಿಬಂಧನೆಯ ಅರ್ಹತೆಯನ್ನು ಗಳಿಸಿಕೊಡುತ್ತಿತ್ತು. ಇದು ಚರ್ಚಿನ ಸೂತ್ರ ಪಾಲಿಸುವ ಕೋರ್ಟ್‌ನಲ್ಲಿ ವ್ಯಕ್ತಿಯನ್ನು ವಿಚಾರಣೆಗೆ ಅರ್ಹಗೊಳಿಸುತ್ತಿತ್ತು. ನೇಣುಶಿಕ್ಷೆಯ ಸಂಭವನೀಯತೆ ಇರುವ ಮತಾತೀತ ಶಿಕ್ಷೆಯ ಬದಲಿಗೆ ಅಲ್ಲಿ ಶಿಕ್ಷೆಗಳು ಹೆಚ್ಚು ಮೃದುತ್ವದಿಂದ ಕೂಡಿದ್ದವು. ಇದು ಕ್ರೈಸ್ತ ಪುರೋಹಿತ ವರ್ಗಕ್ಕೆ ಸೇರಿರದ ಪ್ರತಿವಾದಿಗಳನ್ನು ಸಾಕ್ಷರರನ್ನಾಗಿಸಿ, ಕ್ರೈಸ್ತ ಪುರೋಹಿತ ಅನುಕೂಲದ ನಿಬಂಧನೆಯ ಹಕ್ಕನ್ನು ಪ್ರತಿಪಾದಿಸಲು ಬಾಗಿಲು ತೆರೆಯಿತು. ಏಕೆಂದರೆ ಸಾಕ್ಷರತೆ ಪರೀಕ್ಷೆಗೆ ಬಳಸುತ್ತಿದ್ದ ಬೈಬಲ್ಲಿನ ಸಾಲು Psalm 51 (Miserere mei, Deus... - "ಓ ದೇವರೇ, ನನ್ನ ಮೇಲೆ ದಯೆಯಿಡು..") ಸೂಕ್ತ ಪಂಕ್ತಿಯನ್ನು ನೆನಪಿಟ್ಟುಕೊಂಡ ಅನಕ್ಷರಸ್ಥ ವ್ಯಕ್ತಿ ಕೂಡ ಕ್ರೈಸ್ತ ಪುರೋಹಿತ ಅನುಕೂಲದ ನಿಬಂಧನೆಯ ಹಕ್ಕನ್ನು ಪ್ರತಿಪಾದಿಸಬಹುದಿತ್ತು.[೨೧]
ಮಧ್ಯಾವಧಿ 18ನೇ ಶತಮಾನದಲ್ಲಿ ಓದುವ ಮತ್ತು ಅನುವಾದಿತ ಗ್ರಂಥವನ್ನು ಗ್ರಹಿಸುವ ಸಾಮರ್ಥ್ಯದಿಂದ ವೇಲ್ಸ್ ಅತ್ಯಧಿಕ ಸಾಕ್ಷರತೆ ಪ್ರಮಾಣಗಳಲ್ಲಿ ಒಂದೆನಿಸಿತು. ಇದು ಸುತ್ತುವ ಶಾಲೆಗಳ ಗ್ರಿಫಿತ್ ಜೋನ್ಸ್ ವ್ಯವಸ್ಥೆಯ ಫಲಶ್ರುತಿಯಾಗಿದ್ದು, ವೆಲ್ಶ್‌ನಲ್ಲಿ ಪ್ರತಿಯೊಬ್ಬರೂ ಬೈಬಲ್ ಓದಲು ಅನುಕೂಲ ಕಲ್ಪಿಸುವ ಗುರಿಯನ್ನು ಹೊಂದಿತ್ತು. ಇದೇ ರೀತಿ, 18ನೇ ಶತಮಾನದ ನ್ಯೂ ಇಂಗ್ಲೆಂಡ್‌ನ ಅರ್ಧದಷ್ಟು ಜನಸಂಖ್ಯೆಯು ಸಾಕ್ಷರರಾಗಿದ್ದು, ಬಹುಶಃ ಬೈಬಲ್ ವಾಚನ ಪ್ರಾಮುಖ್ಯತೆಯ ಅತೀಸಂಪ್ರದಾಯಸ್ಥ ನಂಬಿಕೆಯ ಪರಿಣಾಮವೆನ್ನಲಾಗಿದೆ. ಅಮೆರಿಕ ಕ್ರಾಂತಿಯ ಸಂದರ್ಭದಲ್ಲಿ ನ್ಯೂ ಇಂಗ್ಲೆಂಡ್‌ನಲ್ಲಿ ಸಾಕ್ಷರತೆ ಪ್ರಮಾಣವು ಸುಮಾರು ಶೇಕಡ 90ಎಂದು ಸೂಚಿಸಲಾಗಿದೆ.
ಓದುವ ಸಾಮರ್ಥ್ಯವು ಬರೆಯುವ ಸಾಮರ್ಥ್ಯದ ಅವಶ್ಯಕತೆಯನ್ನು ಸೂಚಿಸುತ್ತಿರಲಿಲ್ಲ. 1686ರ ಸ್ವೀಡನ್ ಸಾಮ್ರಾಜ್ಯದ ಚರ್ಚ್ ಕಾನೂನು(ಕ್ರೈಕೊಲೇಜನ್ ) (ಆ ಸಮಯದಲ್ಲಿ ಈಗಿನ ಸ್ವೀಡನ್, ಫಿನ್‌ಲ್ಯಾಂಡ್ ಮತ್ತು ಎಸ್ಟೋನಿಯವನ್ನು ಒಳಗೊಂಡಿತ್ತು) ಜನರ ಮೇಲೆ ಸಾಕ್ಷರತೆಯನ್ನು ಜಾರಿಮಾಡಿತು ಹಾಗು 18ನೇ ಶತಮಾನದ ಕೊನೆಯಲ್ಲಿ ಓದುವ ಸಾಮರ್ಥ್ಯವು 100ರ ಸಮೀಪದಲ್ಲಿತ್ತು. 19ನೇ ಶತಮಾನದ ಕೊನೆಯಲ್ಲಿ, ಅನೇಕ ಸ್ವೀಡನ್ನರು, ವಿಶೇಷವಾಗಿ ಮಹಿಳೆಯರು ಬರವಣಿಗೆಯನ್ನು ಕಲಿತಿರಲಿಲ್ಲ. ಸ್ಕಾಂಡಿನೇವಿಯ, ಫ್ರಾನ್ಸ್ ಮತ್ತು ಪ್ರಷ್ಯಾಗಿಂತ ಇಂಗ್ಲೆಂಡ್ ಸ್ಥಿತಿ ತೀರಾ ಕೆಟ್ಟದಾಗಿತ್ತು. 1841ರ ಕೊನೆಯಲ್ಲಿ ಎಲ್ಲ ಇಂಗ್ಲೀಷರ ಪೈಕಿ 33% ಹಾಗು ಇಂಗ್ಲೀಷ್ ಮಹಿಳೆಯರ ಪೈಕಿ 44% ಮಾತ್ರ ವಿವಾಹದ ಪ್ರಮಾಣಪತ್ರಗಳಿಗೆ ತಮ್ಮ ಗುರುತಿನಿಂದ ಸಹಿ ಮಾಡಿದ್ದರು. ಏಕೆಂದರೆ ಅವರು ಬರೆಯಲು ಅಸಮರ್ಥರಾಗಿದ್ದರು.(ಸರ್ಕಾರದ ಆರ್ಥಿಕ ನೆರವಿನ ಸಾರ್ವಜನಿಕ ಶಿಕ್ಷಣವು 1870ರಲ್ಲಿ ಮಾತ್ರ ಅದೂ ಸೀಮಿತ ಆಧಾರದ ಮೇಲೆ ಇಂಗ್ಲೆಂಡ್‌ನಲ್ಲಿ ಲಭ್ಯವಾಯಿತು).
ಖಂಡೀಯ ಐರೋಪ್ಯ ರಾಷ್ಟ್ರಗಳು ಶೈಕ್ಷಣಿಕ ಸುಧಾರಣೆಯನ್ನು ನಿಖರವಾಗಿ ಅನುಷ್ಠಾನಕ್ಕೆ ತರಲು ಹೆಚ್ಚು ಯಶಸ್ವಿಯಾಗಿದ್ದಾರೆ. ಏಕೆಂದರೆ ಐರೋಪ್ಯ ಸರ್ಕಾರಗಳು ಒಟ್ಟಾರೆಯಾಗಿ ಜನಸಂಖ್ಯೆಯ ಮೇಲೆ ಬಂಡವಾಳ ಹೂಡಿಕೆಗೆ ಹೆಚ್ಚು ಬಯಸಿದ್ದರು ಎಂದು ಇತಿಹಾಸಜ್ಞ ಅರ್ನೆಸ್ಟ್ ಗೆಲ್ನರ್ ವಾದಿಸಿದ್ದಾರೆ.[೨೨] ಸಾಕ್ಷರತೆ ಮಟ್ಟಗಳನ್ನು ಹೆಚ್ಚಿಸಲು ಸಾರ್ವಜನಿಕ ಶಿಕ್ಷಣವು ಕೊಡುಗೆ ನೀಡಿದೆ ಎಂಬ ಅಭಿಪ್ರಾಯವನ್ನು ಬಹುತೇಕ ಇತಿಹಾಸಜ್ಞರು ಹಂಚಿಕೊಂಡಿದ್ದಾರೆ.
ಸಾಕ್ಷರತೆಯ ಇಂದಿನ ದಿನದ ಪರಿಕಲ್ಪನೆಗಳು 15ನೇ ಶತಮಾನದಲ್ಲಿ ಚಲಿಸುವ ವಿಧದ ಮುದ್ರಣ ಯಂತ್ರದ ಆವಿಷ್ಕಾರಕ್ಕೆ ಹೆಚ್ಚು ಸಂಬಂಧಿಸಿದ್ದರೂ, ಮಧ್ಯಾವಧಿ 19ನೇ ಶತಮಾನದ ಕೈಗಾರಿಕಾ ಕ್ರಾಂತಿ ಸಂಭವಿಸುವ ತನಕ, ಕೈಗಾರೀಕೃತ ಸಮಾಜದ ಎಲ್ಲ ವರ್ಗಗಳಿಗೆ ಕಾಗದ ಮತ್ತು ಪುಸ್ತಕಗಳು ಆರ್ಥಿಕವಾಗಿ ಕೈಗೆಟಕುವ ಬೆಲೆಯಲ್ಲಿ ಸಿಗುವುದು ಸಾಧ್ಯವಾಗಿರಲಿಲ್ಲ. ಅಲ್ಲಿಯವರೆಗೆ ಕೇವಲ ಜನಸಂಖ್ಯೆಯ ಶೇಕಡಾವಾರು ಸಣ್ಣ ಪ್ರಮಾಣ ಮಾತ್ರ ಸಾಕ್ಷರರಾಗಿದ್ದು, ಶ್ರೀಮಂತ ವ್ಯಕ್ತಿಗಳು ಮತ್ತು ಸಂಸ್ಥೆಗಳು ಮಾತ್ರ ನಿರೋಧಕ ಪ್ರಮಾಣದ ದುಬಾರಿ ವಸ್ತುಗಳನ್ನು ಕೊಳ್ಳಲು ಸಮರ್ಥವಾಗಿತ್ತು. ಅಗ್ಗದ ಕಾಗದ ಮತ್ತು ಪುಸ್ತಕಗಳ ಅಭಾವವು ಕೂಡtoday[update][[ವರ್ಗ:Articles containing potentially dated statements from ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".]] ಕೆಲವು ಕಡಿಮೆ ಕೈಗಾರಿಕೀಕೃತ ರಾಷ್ಟ್ರಗಳಲ್ಲಿ ಸಾರ್ವರ್ತಿಕ ಸಾಕ್ಷರತೆಗೆ ಅಡ್ಡಿಯಾಗಿತ್ತು.
ಇನ್ನೊಂದು ದೃಷ್ಟಿಕೋನದಿಂದ ನೋಡಿದರೆ, ಸಾಮೂಹಿಕ ಶಾಲಾ ಶಿಕ್ಷಣದ ಪರಿಚಯವು ದುಡಿಯುವ ವರ್ಗಕ್ಕೆ ಅವಕಾಶವಿದ್ದ ಸಾಕ್ಷರತೆಯ ವಿಧಾನವನ್ನು ನಿಯಂತ್ರಿಸುವ ಆಂಶಿಕ ಪ್ರಯತ್ನವಾಗಿತ್ತು ಎಂದು ಇತಿಹಾಸಜ್ಞ ಹಾರ್ವೆ ಗ್ರಾಫ್ ವಾದಿಸಿದ್ದಾರೆ. ಗ್ರಾಫ್ ಪ್ರಕಾರ, ಸಾಕ್ಷರತೆಯ ಕಲಿಕೆಯು ಔಪಚಾರಿಕ ವ್ಯವಸ್ಥೆಗಳ(ಶಾಲೆಗಳು ಮುಂತಾದವು)ಹೊರಗೆ ವೃದ್ಧಿಯಾಯಿತು ಹಾಗು ಈ ಅನಿಯಂತ್ರಿತ, ಗಂಭೀರ ಓದುವಿಕೆಯು ಜನಸಂಖ್ಯೆಯ ಆಮೂಲಾಗ್ರ ಸುಧಾರಣೆ ವೃದ್ಧಿಗೆ ದಾರಿ ಕಲ್ಪಿಸುತ್ತದೆ. ಸಾಮೂಹಿಕ ಶಾಲೆಯ ಶಿಕ್ಷಣವು ಸಾಕ್ಷರತೆಯನ್ನು ಹದಕ್ಕೆ ತರುವ, ನಿಯಂತ್ರಿಸುವ ಗುರಿಯನ್ನು ಹೊಂದಿತ್ತೇ ಹೊರತು ಅದನ್ನು ಹರಡುವುದಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತು.[೨೩] ಸಾಮೂಹಿಕ ಸಾಕ್ಷರತೆಯನ್ನು ಔಪಚಾರಿಕ ಶಾಲಾ ಶಿಕ್ಷಣ ಅಥವಾ ಬರವಣಿಗೆಯಲ್ಲಿ ಬೋಧನೆ ಇಲ್ಲದೆಯೂ ಸಾಧಿಸಬಹುದು ಎಂದು ಸ್ವೀಡನ್ ಉದಾಹರಣೆಯನ್ನು ಬಳಸಿಕೊಂಡು,ಗ್ರಾಫ್ ಗಮನಸೆಳೆದರು.[೨೪]
ಉತ್ತರ ಅಮೆರಿಕದಲ್ಲಿ ಸಾಕ್ಷರತೆ
[ಬದಲಾಯಿಸಿ]ಅಧಿಕಾರದ ಅವಕಾಶವಿದ್ದ ಜನರನ್ನು ವಿಂಗಡಿಸಲು ಮತ್ತು ನಿಯಂತ್ರಿಸಲು ಸಾಕ್ಷರತೆಯನ್ನು ಒಂದು ಮಾರ್ಗವಾಗಿ ಬಳಸಲಾಯಿತು. ಏಕೆಂದರೆ ಸಾಕ್ಷರತೆಯು ಕಲಿಕೆ ಮತ್ತು ಸಂವಹನಕ್ಕೆ ಅನುಮತಿ ಕಲ್ಪಿಸುತ್ತದೆ. ಇದನ್ನು ಮೌಖಿಕ ಮತ್ತು ಸಂಕೇತ ಭಾಷೆ ಏಕೈಕವಾಗಿ ಮಾಡಲು ಅಸಾಧ್ಯವಾಗಿದೆ. ಅನಕ್ಷರತೆಯನ್ನು ಚಳವಳಿ ಅಥವಾ ಕ್ರಾಂತಿಯನ್ನು ತಪ್ಪಿಸುವ ವಿಧಾನವಾಗಿ ಕೆಲವು ಸ್ಥಳಗಳಲ್ಲಿ ಜಾರಿಗೆ ತರಲಾಗಿತ್ತು. ಅಮೆರಿಕದಲ್ಲಿ ಅಂತರ್ಯುದ್ಧ ಯುಗದ ಸಂದರ್ಭದಲ್ಲಿ, ಬಿಳಿ ವರ್ಣೀಯ ಪೌರರು ಅನೇಕ ಸ್ಥಳಗಳಲ್ಲಿ, ಸಾಕ್ಷರತೆ ವಿರೋಧಿ ಕಾನೂನನ್ನು ಅನುಮೋದಿಸಿದರು. ಸಾಕ್ಷರತೆಯ ಶಕ್ತಿಯನ್ನು ಅರಿತಿದ್ದ ಅವರು ಗುಲಾಮರಿಗೆ ಓದುವುದು ಮತ್ತು ಬರೆಯುವುದನ್ನು ಕಲಿಸುವುದಕ್ಕೆ ನಿಷೇಧ ವಿಧಿಸಿದ್ದರು. ಅಂತರ್ಯುದ್ಧದ ನಂತರದ ವರ್ಷಗಳಲ್ಲಿ ಒಬ್ಬ ವ್ಯಕ್ತಿಯ ಮತದಾನದ ಹಕ್ಕನ್ನು ನಿರ್ಧರಿಸಲು ಅವರ ಓದುವ ಮತ್ತು ಬರೆಯುವ ಸಾಮರ್ಥ್ಯವನ್ನು ಬಳಸಿಕೊಳ್ಳಲಾಯಿತು. ಇದು ಮುಂಚಿನ ಗುಲಾಮರು ಮತದಾರರ ಪಟ್ಟಿಯಲ್ಲಿ ಸೇರುವುದರಿಂದ ತಪ್ಪಿಸಲು ಯಶಸ್ವಿಯಾಯಿತು ಮತ್ತು ಯಥಾಸ್ಥಿತಿಯನ್ನು ಕಾಯ್ದುಕೊಂಡರು.[೨೫] ಕೆನಡಾದಲ್ಲಿ, ಕಳಪೆ ಸಾಕ್ಷರತೆ ಕೌಶಲ್ಯಗಳನ್ನು ಹೊಂದಿದ ವಯಸ್ಕರ ಶೇಕಡಾವಾರು ಪ್ರಮಾಣವು ರಾಷ್ಟ್ರಮಟ್ಟದಲ್ಲಿ 42%ಕ್ಕಿಂತ ಸ್ವಲ್ಪ ಜಾಸ್ತಿಯಾಗಿತ್ತು. ನ್ಯೂಫೌಂಡ್‌ಲ್ಯಾಂಡ್ ಮತ್ತು ಲ್ಯಾಬ್ರಡಾರ್ ಪ್ರಾಂತ್ಯದಲ್ಲಿ ವ್ಯತ್ಯಾಸಗಳು 75%ಕ್ಕಿಂತ ಹೆಚ್ಚು ಮೀರಿಹೋಗಿತ್ತು.
ದಕ್ಷಿಣ ಅಮೆರಿಕದಲ್ಲಿ ಸಾಕ್ಷರತೆ
[ಬದಲಾಯಿಸಿ]ಬ್ರೆಜಿಲ್‌ನಲ್ಲಿ 1964ರಲ್ಲಿ ಬ್ರೆಜಿಲ್ ರೈತರಿಗೆ ಓದುವುದನ್ನು ಬೋಧಿಸಿದ ಕಾರಣಕ್ಕಾಗಿ ಪಾಲೊ ಫ್ರೈರೆಯನ್ನು ಬಂಧಿಸಲಾಯಿತು ಮತ್ತು ಗಡೀಪಾರು ಮಾಡಲಾಯಿತು.[೨೬]
ಆಫ್ರಿಕಾದಲ್ಲಿ ಸಾಕ್ಷರತೆ
[ಬದಲಾಯಿಸಿ]ಸಬ್-ಸಹರಾನ್ ಆಫ್ರಿಕಾದಲ್ಲಿ ಸಾಕ್ಷರತೆಯು ವಸಾಹತುಶಾಹಿ ಜತೆ ಸಂಬಂಧ ಹೊಂದಿದೆ. ಆದರೆ ಸ್ಥಳೀಯ ಸಂಪ್ರದಾಯಗಳ ಜತೆ ಮೌಖಿಕ ಭಾಷೆ ಸಂಬಂಧ ಹೊಂದಿದೆ.[೨೭]
ಇಥಿಯೋಪಿಯದಲ್ಲಿ 1975ರಲ್ಲಿ ಪರಿಚಯಿಸಿದ ರಾಷ್ಟ್ರೀಯ ಸಾಕ್ಷರತೆ ಆಂದೋಳನದಲ್ಲಿ ಸಾಕ್ಷರತೆ ಪ್ರಮಾಣಗಳನ್ನು 1984ರಲ್ಲಿ ಅನಧಿಕೃತವಾಗಿ 37% ಮತ್ತು ಅಧಿಕೃತವಾಗಿ 63% ಹೆಚ್ಚಿಸಿತು.[೨೮] ಆದಾಗ್ಯೂ,ಅಮಾರಿಕ್ ಭಾಷೆಯಲ್ಲಿ ಸಾಕ್ಷರತೆಯನ್ನು ಇತರೆ ಜನಾಂಗೀಯ ಲಕ್ಷಣಗಳಲ್ಲಿ ನಕಾರಾತ್ಮಕವಾಗಿ ಕಾಣಲಾಯಿತು.[clarification needed] ಇದು ಆ ದೇಶದಲ್ಲಿ ಹೆಚ್ಚಿನ ಪ್ರಮಾಣದ ಅನಕ್ಷರತೆಗೆ ದಾರಿ ಕಲ್ಪಿಸಿತು.[ಸೂಕ್ತ ಉಲ್ಲೇಖನ ಬೇಕು]
ಸಾಕ್ಷರತೆ ಬೋಧನೆ
[ಬದಲಾಯಿಸಿ]ಅಮೆರಿಕದಲ್ಲಿ ಇಂಗ್ಲೀಷ್ ಸಾಕ್ಷರತೆ ಬೋಧನೆಯು ಪ್ರಸಕ್ತ ಪ್ರತ್ಯೇಕ ವಿಸಂಕೇತಿಸುವ(ಬಳಕೆ ಭಾಷೆಗೆ ತರುವುದು) ಕೌಶಲ್ಯಗಳ ಮೇಲೆ ಗಮನಹರಿಸುವ ಸಾಕ್ಷರತೆ ಪರಿಕಲ್ಪನೆಯಿಂದ ಮೇಲುಗೈ ಪಡೆದಿದೆ. ಈ ದೃಷ್ಟಿಕೋನದಿಂದ,ಸಾಕ್ಷರತೆ ಅಥವಾ ಓದುವುದು ಅನೇಕ ಉಪಕೌಶಲ್ಯಗಳನ್ನು ಒಳಗೊಂಡಿದ್ದು, ಅವುಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತದೆ. ಈ ಕೌಶಲ್ಯದ ಗುಂಪುಗಳಲ್ಲಿ ಧ್ವನಿಶಾಸ್ತ್ರದ ಅರಿವು, ಧ್ವನಿ (ವಿಸಂಕೇತಿಕರಣ), ನಿರರ್ಗಳ ಭಾಷೆ, ಗ್ರಹಿಕೆಯ ಸಾಮರ್ಥ್ಯ ಮತ್ತು ಶಬ್ದಕೋಶ. ಪ್ರತಿಯೊಂದು ಉಪಕೌಶಲ್ಯಗಳ ಗುಂಪುಗಳ ಬಗ್ಗೆ ಪ್ರಾವೀಣ್ಯತೆ ಗಳಿಸುವುದು ಕೌಶಲ್ಯಪೂರ್ಣ ಓದುಗರಾಗಲು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ.[೨೯]
ಇದೇ ದೃಷ್ಟಿಕೋನದಿಂದ, ವರ್ಣಮಾಲೆಯ ಭಾಷೆಯ ಓದುಗರು ಮೂಲ ಓದುವ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ವರ್ಣಮಾಲೆಯ ತತ್ವವನ್ನು ಅರ್ಥಮಾಡಿಕೊಳ್ಳಬೇಕು. ಅಕ್ಷರಗಳು ಮತ್ತು ಶಬ್ದಗಳ ನಡುವೆ ವರ್ಣಾನುಕ್ರಮದ ಅನುರೂಪತೆಯ ಪ್ರಮಾಣವು ವ್ಯತ್ಯಾಸ ಹೊಂದಿದ್ದರೂ ಕೂಡ ಬರವಣಿಗೆ ವ್ಯವಸ್ಥೆಯು ಒಂದು ಪ್ರತ್ಯೇಕ ಭಾಷೆಯ ಶಬ್ದಗಳನ್ನು ಪ್ರತಿನಿಧಿಸುವ ಚಿಹ್ನೆಗಳನ್ನು ಬಳಸಿಕೊಂಡಿದ್ದರೆ ಅದನ್ನು ವರ್ಣಾನುಕ್ರಮ(ವರ್ಣಮಾಲೆ) ಎನ್ನುತ್ತೇವೆ. [ಸೂಕ್ತ ಉಲ್ಲೇಖನ ಬೇಕು] ಉಚ್ಚಾರಾಂಶ ಬರವಣಿಗೆ ವ್ಯವಸ್ಥೆ(ಜಪಾನಿನ ಕಾನಾ ಮುಂತಾದವು) ಏಕ ಉಚ್ಚಾರಾಂಶವನ್ನು ಬಿಂಬಿಸಲು ಚಿಹ್ನೆಯನ್ನು ಬಳಸುತ್ತದೆ ಮತ್ತು ಗುರುತುಗಳ ಬರವಣಿಗೆ ವ್ಯವಸ್ಥೆಯು(ಚೈನೀಸ್ ಮುಂತಾದವು) ಮಾರ್ಫೀಮ್(ರೂಪಿಮೆ) ಸೂಚಿಸಲು ಚಿಹ್ನೆಯೊಂದನ್ನು ಬಳಸುತ್ತದೆ.
ಸಾಕ್ಷರತೆಯನ್ನು ಬೋಧಿಸಲು ಅನೇಕ ಮಾರ್ಗಗಳಿವೆ. ಸಾಕ್ಷರತೆ ಅಂದರೇನು ಮತ್ತು ವಿದ್ಯಾರ್ಥಿಗಳು ಅದನ್ನು ಹೇಗೆ ಉತ್ತಮವಾಗಿ ಕಲಿಯಬಹುದು ಎಂಬ ಮಾಹಿತಿಯ ಊಹೆಗಳಿಂದ ಪ್ರತಿಯೊಂದು ರೂಪುಗೊಂಡಿರುತ್ತದೆ. ನಾದಶಾಸ್ತ್ರ(ಶಾಬ್ದಪಾಠಕ್ರಮ) ಬೋಧನೆಯು, ಉದಾಹರಣೆಗೆ, ಪದದ ಮಟ್ಟದಲ್ಲಿ ಓದಲು ಗಮನಹರಿಸುತ್ತದೆ. [ಸೂಕ್ತ ಉಲ್ಲೇಖನ ಬೇಕು] ಇದು ಓದುಗರಿಗೆ ಪದಗಳನ್ನು ನಿರ್ಮಿಸುವ ಅಕ್ಷರಗಳು ಅಥವಾ ಅಕ್ಷರಗಳ ಸಮೂಹದ ಕಡೆ ಗಮನಹರಿಸಲು ಬೋಧಿಸುತ್ತದೆ. ನಾದಶಾಸ್ತ್ರ(ಶಾಬ್ದಪಾಠಕ್ರಮ)ಬೋಧಿಸುವ ಸಾಮಾನ್ಯ ವಿಧಾನವು ಸಂಶ್ಲೇಷಿತ ನಾದಶಾಸ್ತ್ರವಾಗಿದ್ದು, ಅದರಲ್ಲಿ ಅನನುಭವಿ ಓದುಗ ಪ್ರತಿಯೊಂದು ಪ್ರತ್ಯೇಕ ಶಬ್ದವನ್ನು ಉಚ್ಚರಿಸಿ ಇಡೀ ಪದವನ್ನು ಉಚ್ಚರಿಸಲು ಅವುಗಳನ್ನು "ಸಂಯೋಜಿಸು"ತ್ತಾನೆ.[ಸೂಕ್ತ ಉಲ್ಲೇಖನ ಬೇಕು] ನಾದಶಾಸ್ತ್ರದ ಇನ್ನೊಂದು ವಿಧಾನವೆಂದರೆ ಹುದುಗಿದ ನಾದಶಾಸ್ತ್ರ ಬೋಧನೆ. ಇಡೀ ಭಾಷೆಯನ್ನು ಓದುವ ಬೋಧನೆಯಲ್ಲಿ ಅನೇಕ ಬಾರಿ ಬಳಸಲಾಗುತ್ತದೆ. ಅನನುಭವಿ ಓದುಗರು ಪದಗಳಲ್ಲಿರುವ ಪ್ರತ್ಯೇಕ ಅಕ್ಷರಗಳ ಬಗ್ಗೆ ಸರಿಯಾದ ಕಾಲದಲ್ಲಿ, ಸರಿಯಾದ ಸ್ಥಳದ ಆಧಾರದ ಮೇಲೆ ಕಲಿಯುತ್ತಾರೆ. ಅದನ್ನು ಪ್ರತಿಯೊಬ್ಬ ವಿದ್ಯಾರ್ಥಿಯ ಓದುವ ಮತ್ತು ಬರೆಯುವ ಕಲಿಕೆಯ ಅಗತ್ಯಗಳನ್ನು ತುಂಬಲು ಹೊಂದಿಸಲಾಗಿರುತ್ತದೆ.[ಸೂಕ್ತ ಉಲ್ಲೇಖನ ಬೇಕು] ಬೋಧಕರು ಸಮಯಸಾಧಕತನದಿಂದ ನಾದಶಾಸ್ತ್ರ ಬೋಧನೆಯನ್ನು ಕಥೆಗಳು ಅಥವಾ ವಿದ್ಯಾರ್ಥಿ ಬರವಣಿಗೆಯ ಸಂದರ್ಭದಲ್ಲಿ ಒದಗಿಸುತ್ತಾರೆ. ಇದು ನಿರ್ದಿಷ್ಟ ಅಕ್ಷರ ಅಥವಾ ಅಕ್ಷರಗಳ ಗುಂಪಿನ ಅನೇಕ ಉದಾಹರಣೆಗಳನ್ನು ಒಳಗೊಂಡಿರುತ್ತದೆ. ಹುದುಗಿದ ಬೋಧನೆಯು ಹೊಸ ಮತ್ತು ಕಷ್ಟದ ಪದಗಳನ್ನು ಓದಲು ಅರ್ಥಪೂರ್ಣ ಸಂದರ್ಭವನ್ನು ಬಳಸಿಕೊಂಡು ಅಕ್ಷರ-ಶಬ್ದ ಜ್ಞಾನವನ್ನು ಸಂಯೋಜಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು]
ಇವನ್ನೂ ನೋಡಿ
[ಬದಲಾಯಿಸಿ]- ಕ್ರಿಯಾತ್ಮಕ ಸಾಕ್ಷರತೆ
- ಶಿಕ್ಷಣ ಪ್ರಮಾಣಗಳು
- ಸಾಕ್ಷರ ಪರಿಸರ
- ಹೊಸ ಸಾಕ್ಷರತೆಗಳು
- ಗಣಿತಜ್ಞತೆ
- ರಾಜಕೀಯ ಸಾಕ್ಷರತೆ
- ವೈಜ್ಞಾನಿಕ ಸಾಕ್ಷರತೆ
- ಮೈSಉರು ವಿಶ್ವವಿದ್ಯಾನಿಲಯದ ವಿಶ್ವಕೋಶದಲ್ಲಿ ಅಕ್ಷರತೆ ಕುರಿತಾದ ಲೇಖನ
ಉಪಕ್ರಮಗಳು
- ಜಾಗತಿಕ ಸಾಕ್ಷರತೆ ಯೋಜನೆ
- ಅಂತಾರಾಷ್ಟ್ರೀಯ ಸಾಕ್ಷರತೆ ದಿನ
- ಸಡ್ಬರಿ ಶಾಲೆಗಳಲ್ಲಿ ಓದುವುದು ಮತ್ತು ಬರೆಯುವುದರ ಕಲಿಕೆ
- ಲಿಕ್‌ಬೆಜ್
- ಸಾಕ್ಷರತೆ ಫ್ಲೋರಿಡಾ!
- ಯೋಜನೆ LISTEN
- USAನಲ್ಲಿ ಶಿಕ್ಷಣದ ಮಾಪನ
- ಸೊಸೈಟಿ ಫಾರ್ ದಿ ಸೈಂಟಿಫಿಕ್ ಸ್ಟಡಿ ಆಫ್ ರೀಡಿಂಗ್ (SSSR)
- ಕ್ವಿಕ್ ಸ್ಮಾರ್ಟ್
- ಅಮೆರಿಕ ಸಂಯುಕ್ತಸಂಸ್ಥಾನದ ಸಾಕ್ಷರತೆ ದಶಕ
- WALTIC (ಬರಹಗಾರರ ಮತ್ತು ಸಾಹಿತ್ಯಕ ಅನುವಾದಕರ ಅಂತಾರಾಷ್ಟ್ರೀಯ ಸಮ್ಮೇಳನ)
ಉಲ್ಲೇಖಗಳು
[ಬದಲಾಯಿಸಿ]Constructs such as ibid., loc. cit. and idem are discouraged by Wikipedia's style guide for footnotes, as they are easily broken. Please improve this article by replacing them with named references (quick guide), or an abbreviated title. (August 2010) |
- ↑ ಟ್ವಿಟ್ಟರ್ಸ್ ರೋಲ್ ಇನ್ ದಿ ಇರಾನಿಯನ್ ರಿವಾಲ್ಯೂಷನ್ Archived 2009-07-29 ವೇಬ್ಯಾಕ್ ಮೆಷಿನ್ ನಲ್ಲಿ., ಪಾಲಿಟಿಕ್ಸ್‌ಆನ್‌ಲೈನ್, ಜೂನ್ 16, 2009.
- ↑ ಇರಾನ್ ಎಲೆಕ್ಷನ್ಸ್: ಎ ಟ್ವಿಟರ್ ರಿವಾಲ್ಯೂಷನ್?, ದಿ ವಾಷಿಂಗ್ಟನ್ ಪೋಸ್ಟ್, ಜೂನ್ 17, 2009
- ↑ ಲ್ಯಾಂಕ್‌ಶಿಯರ್, C. & ನಾಬೆಲ್, M. (2006). ಹೊಸ ಸಾಕ್ಷರತೆಗಳು: ಪ್ರತಿದಿನದ ಅಭ್ಯಾಸಗಳು ಮತ್ತು ತರಗತಿ ಕಲಿಕೆ ಫಿಲಾಡೆಲ್ಫಿಯ: ಓಪನ್ ಯೂನಿವರ್ಸಿಟಿ ಪ್ರೆಸ್
- ↑ Moats, Louisa (2000). Speech to print: language essentials for teachers. Baltimore: Paul H. Brookes Pub. ISBN 1-55766-387-4.
- ↑ Goody, Jack (1986). The logic of writing and the organization of society. Cambridge, UK: Cambridge University Press. ISBN 0-521-33962-6.
- ↑ Jack Goody (1986). The logic of writing and the organization of society. Google Books. ISBN 9780521339629.
{{cite book}}
:|work=
ignored (help) - ↑ Brian V. Street (1984). Literacy in theory and practice. Cambridge University Press. ISBN 9780521289610.
- ↑ Brian V. Street (1984). "Overview". Literacy in theory and practice. Cambridge University Press. ISBN 9780521289610.
{{cite book}}
: Unknown parameter|chapterurl=
ignored (help) - ↑ Brian V. Street (1984). "The 'Autonomous' Model I". Literacy in theory and practice. Cambridge University Press. ISBN 9780521289610.
{{cite book}}
: Unknown parameter|chapterurl=
ignored (help) - ↑ Brian V. Street (1984). "The 'Autonomous' Model II". Literacy in theory and practice. Cambridge University Press. ISBN 9780521289610.
{{cite book}}
: Unknown parameter|chapterurl=
ignored (help) - ↑ ಕರಿಕ್ಯುಲಮ್ ಫ್ರೇಂವರ್ಕ್ ಫಾರ್ ಅಡಲ್ಟ್ ಲಿಟರಸಿ ಇನ್ ಸ್ಕಾಟ್‌ಲ್ಯಾಂಡ್ Archived 2009-03-25 ವೇಬ್ಯಾಕ್ ಮೆಷಿನ್ ನಲ್ಲಿ. (pdf)
- ↑ ಲಿಟರಸಿ ಇನ್ ದಿ ಇನ್ಫೋರ್ಮೇಷನ್ ಏಜ್ :ಫೈನಲ್ ರಿಪೋರ್ಟ್ ಆಫ್ ದಿ ಇಂಟರ್‌ನ್ಯಾಷನಲ್ ಅಡಲ್ಟ್ ಲಿಟರಸಿ ಸರ್ವೆ, OECD 2000. Archived 2007-01-02 ವೇಬ್ಯಾಕ್ ಮೆಷಿನ್ ನಲ್ಲಿ.(PDF). Archived 2007-01-02 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Kress, Gunther R. (2003). Literacy in the new media age. New York: Routledge. ISBN 0-415-25356-X.
- ↑ "Literacy in the New Media Age". Archived from the original on 2010-07-07.
- ↑ McKenna, Michael C.; Richards, Janet C. (2003). Integrating multiple literacies in K-8 classrooms: cases, commentaries, and practical applications. Hillsdale, N.J: L. Erlbaum Associates. ISBN 0-8058-3945-3.
{{cite book}}
: CS1 maint: multiple names: authors list (link) - ↑ ಜಾರ್ಕಾಡೂಲಾಸ್, C., ಪ್ಲೆಸೆಂಟ್, A., & ಗ್ರೀರ್, D. (2006). ಅಡ್ವಾನ್ಸಿಂಗ್ ಹೆಲ್ತ್ ಲಿಟರಸಿ: ತಿಳಿವಳಿಕೆ ಮತ್ತು ಕಾರ್ಯದ ಚೌಕಟ್ಟು ಜೋಸಿ-ಬಾಸ್: ಸಾನ್‌ಫ್ರಾನ್ಸಿಸ್ಕೊ, CA.
- ↑ ನೋಬೆಲ್, M. (1999). ಎವರಿಡೆ ಲಿಟರಸೀಸ್: ಸ್ಟೂಡೆಂಟ್ಸ್, ಡಿಸ್ಕೋರ್ಸ್ ಎಂಡ್ ಸೋಶಿಯಲ್ ಪ್ರಾಕ್ಟೀಸ್ ನ್ಯೂಯಾರ್ಕ್: ಲ್ಯಾಂಗ್; ಜೀ, J. P. (1996). ಸೋಷಿಯಲ್ ಲಿಗ್ವಿಸ್ಟಿಕ್ಸ್ ಎಂಡ್ ಲಿಟರಸೀಸ್ : ಐಡಿಯಾಲಜೀಸ್ ಇನ್ ಡಿಸ್ಕೋರ್ಸಸ್ ಫಿಲಾಡಲ್ಫಿಯ: ಫಾಲ್ಮರ್
- ↑ ಓಸ್ಟ್‌ಲರ್ N. ಎಂಪೈರ್ಸ್ ಆಫ್ ದಿ ವರ್ಲ್ಡ್: ಎ ಲಾಂಗ್ವೇಜ್ ಹಿಸ್ಟರಿ ಆಫ್ ದಿ ವರ್ಲ್ಡ್. ಹಾರ್ಪರ್ ಪೆರೆನ್ನಿಯಲ್, p. 267.
- ↑ Andrew J. Coulson. "Delivering Education" (PDF). Hoover Institution: 117. Retrieved 2008-11-22.
{{cite journal}}
: Cite journal requires|journal=
(help); Invalid|ref=harv
(help) - ↑ Edmund Burke (June 2009). "Islam at the Center: Technological Complexes and the Roots of Modernity". Journal of World History. 20 (2). University of Hawaii Press: 165–186 [178–82]. doi:10.1353/jwh.0.0045.
{{cite journal}}
: Invalid|ref=harv
(help) - ↑ Baker, John R. (2002). An introduction to English legal history. London: Butterworths LexisNexis. ISBN 0-406-93053-8.
- ↑ Gellner, Ernest (1983). Nations and nationalism. Ithaca, N.Y: Cornell University Press. ISBN 0-8014-9263-7.
- ↑ Graff, Harvey J. (1991). The literacy myth: cultural integration and social structure in the nineteenth century. Transaction Publishers. p. xxvi. ISBN 9780887388842.
{{cite book}}
: Invalid|ref=harv
(help) - ↑ op.cit. Graff 1991, pp. xxii, xxiv.
- ↑ Gordon, Elaine H.; Gordon, Edward E. (2003). Literacy in America: historic journey and contemporary solutions. New York: Praeger. p. 255. ISBN 0-275-97864-8.
{{cite book}}
: CS1 maint: multiple names: authors list (link) - ↑ ಲೌಂಡ್, ಪೀಟರ್ “ಫ್ರಯರೆ`ಸ್ ಲೈಫ್ ಎಂಡ್ ವರ್ಕ್.”
- ↑ ಕ್ರಿಸ್ಟೋಫರ್ L.ಮಿಲ್ಲರ್ ಥಿಯರೀಸ್ ಆಫ್ ಆಪ್ರಿಕನ್ಸ್: ಫ್ರಾಂಕೋಫೋನ್ ಲಿಟರೇಚರ್ ಎಂಡ್ ಎಂತ್ರಪೊಲಜಿ ಇನ್ ಆಫ್ರಿಕಾ . ಯೂನಿವರ್ಸಿಟಿ ಆಫ್ ಚಿಕಾಗೊ ಪ್ರೆಸ್ 2003. ISBN 978-0-226-52802-1. p. 69.
- ↑ Thomas P. Ofcansky; LaVerle Berry, eds. (1991). "Literacy". Ethiopia: A Country Study. Washington: GPO for the Library of Congress. ISBN 0844407399.
{{cite book}}
: Invalid|ref=harv
(help) - ↑ National Institute of Child Health and Human Development (2000). "Report of the National Reading Panel: Teaching Children to Read: An Evidence-Based Assessment of the Scientific Research Literature on Reading and its Implications for Reading Instruction: Reports of the Subgroups". U.S. Government Printing Office.
{{cite journal}}
: Cite journal requires|journal=
(help); Invalid|ref=harv
(help)
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಉನೆಸ್ಕೋ ಲಿಟರಸಿ ಪೋರ್ಟಲ್
- UNESCO ಎಫೆಕ್ಟಿವ್ ಲಿಟರಸಿ ಪ್ರ್ಯಾಕ್ಟೀಸ್ ಡಾಟಾಬೇಸ್
- ಸಾಕ್ಷರತೆ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- ದಿ ನ್ಯಾಷನಲ್ ಸ್ಟ್ರಾಟಜೀಸ್ ಫಾರ್ ಪ್ರೈಮರಿ ಲಿಟರಸಿ Archived 2012-12-23 at Archive.is
- ದಿ ಡಿಜಿಟಲ್ ಆರ್ಕೀವ್ ಆಪ್ ಲಿಟರಸಿ ನ್ಯಾರೇಟೀವ್ಸ್ Archived 2009-04-01 ವೇಬ್ಯಾಕ್ ಮೆಷಿನ್ ನಲ್ಲಿ.
- ನ್ಯಾಷನಲ್ ಲಿಟರಸಿ ಟ್ರಸ್ಟ್
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: periodical ignored
- CS1 errors: unsupported parameter
- CS1 maint: multiple names: authors list
- CS1 errors: missing periodical
- CS1 errors: invalid parameter value
- Pages using ISBN magic links
- Wikipedia introduction cleanup from September 2009
- All pages needing cleanup
- Articles covered by WikiProject Wikify from September 2009
- All articles covered by WikiProject Wikify
- Wikipedia articles needing style editing from September 2010
- All articles needing style editing
- Articles needing additional references from April 2010
- All articles needing additional references
- Articles with limited geographic scope from January 2010
- Articles with hatnote templates targeting a nonexistent page
- Articles with unsourced statements from May 2010
- Articles with unsourced statements from October 2007
- Articles with invalid date parameter in template
- All articles containing potentially dated statements
- Wikipedia articles needing clarification from January 2010
- Articles with unsourced statements from October 2009
- Articles with ibid from August 2010
- Articles with Open Directory Project links
- Webarchive template archiveis links
- Articles that show a Medicine navs template
- ಅನ್ವಯಿಕ ಭಾಷಾಶಾಸ್ತ್ರ
- ಸಾಕ್ಷರತೆ
- ಮಾನವೀಯ ಕೌಶಲ್ಯಗಳು
- ಓದುವುದು
- ಬರವಣಿಗೆ ಶೈಲಿ
- ಜ್ಞಾನ
- ಸಾಮಾಜಿಕ ಅರ್ಥಶಾಸ್ತ್ರ
- ಶಿಕ್ಷಣ