ಭಾರತದಲ್ಲಿ ಮೀಸಲಾತಿ
This article has multiple issues. Please help improve it or discuss these issues on the talk page. (Learn how and when to remove these template messages)
No issues specified. Please specify issues, or remove this template. |
This article has been nominated to be checked for its neutrality. (March 2010) |
ಭಾರತ ಸರ್ಕಾರವು ಇಂದು ಭಾರತೀಯ ಕಾನೂನು ಆಧಾರಿತ ಮೀಸಲಾತಿಯ ಸೌಲಭ್ಯವನ್ನು ಶೇಕಡಾವಾರು ಪ್ರಮಾಣದ ಮೇಲೆ ಸರ್ಕಾರಿ ಮತ್ತು ಸಾರ್ವಜನಿಕ ಕಂಪನಿಗಳ ನೇಮಕಾತಿಯಲ್ಲಿ ಸೇವಾವಕಾಶವನ್ನು ಒದಗಿಸುತ್ತಿದೆ. ಅಷ್ಟೇ ಅಲ್ಲದೇ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಮೀಸಲಾತಿ ನೀಡುತ್ತದೆ.ಆದರೆ ಧಾರ್ಮಿಕ/ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಈ ನಿಯಮಗಳಿಂದ ಹೊರತುಪಡಿಸಲಾಗಿದೆ. ಪ್ರಮುಖವಾದುದ್ದೆಂದರೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಅಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಸರ್ಕಾರ ಇದನ್ನು ಜಾರಿಗೊಳಿಸಿದೆ.ಇದನ್ನು ನೀಡುವ ಕಾರಣವೆಂದರೆ ಅವರು ಇಂತಹ ಸೇವಾವಲಯಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತ ಪ್ರಮಾಣದ ಪ್ರಾತಿನಿಧಿತ್ವ ಹೊಂದಿರುವುದಿಲ್ಲ.ಈ ಕೊರತೆ ನೀಗಿಸಲು ಭಾರತ ಸರ್ಕಾರವು ಈ ಕೋಟಾ ಪದ್ದತಿಯನ್ನು ಜಾರಿಗೊಳಿಸಿದೆ. ಈ ಮೀಸಲಾತಿ ಸೂತ್ರವನ್ನು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳಿಗೆ ಭಾರತದ ಸಂಸತ್ತಿನಲ್ಲೂ ಪಾರ್ಲಿಮೆಂಟ್ ಆಫ್ ಇಂಡಿಯಾದಲ್ಲಿಯೂ ಪ್ರತಿನಿಧಿತ್ವ ವಹಿಸಲು ನೀಡಿದೆ. ಕೇಂದ್ರ ಸರ್ಕಾರವು ಉನ್ನತ [೧] ಶಿಕ್ಷಣ ಮತ್ತು ಇನ್ನಿತರ ಸೌಲಭ್ಯಕ್ಕಾಗಿ 27% ಮೀಸಲಾತಿ ನೀಡಿದೆ.ಆಯಾ ರಾಜ್ಯಗಳು ತಮಗೆ ಅನುಕೂಲಕರ ಪ್ರಮಾಣದಲ್ಲಿ ಕೊಟಾವನ್ನು ನಿಗದಿ ಮಾಡಿಕೊಳ್ಳಬಹುದು. ಆದರೆ ಸರ್ವೋಚ್ಚ [೨] ನ್ಯಾಯಾಲಯದ ಆದೇಶದ ಪ್ರಕಾರ ಈ ಮೀಸಲಾತಿ ಪ್ರಮಾಣವು ಶೇ.50 ಕ್ಕಿಂತ ಹೆಚ್ಚಾಗಬಾರದು. ಆದರೆ ಭಾರತದ ರಾಜಸ್ಥಾನದಂತಹ ರಾಜ್ಯಗಳಲ್ಲಿ ಇದು 68% ರಷ್ಟಿದೆ, ಯಾಕೆಂದರೆ ಇದರಲ್ಲಿ 14% ಪ್ರಮಾಣವನ್ನು ಮುಂದವರೆದ ಜನಾಂಗದವರಿಗೂ ಕಲ್ಪಿಸಲಾಗಿದೆ.[೩]
ಮೀಸಲಾತಿ ಉದ್ದೇಶವು ಸಾಮಾಜಿಕ ವೈವಿಧ್ಯದಲ್ಲಿ ತಾರತಮ್ಯ ಅನುಭವಿಸುವ ಜನಾಂಗಗಳ ಹಕ್ಕು ರಕ್ಷಿಸುವ ಪ್ರಮುಖ ಉದ್ದೇಶವಾಗಿದೆ. ಒಟ್ಟು ಜನಸಂಖ್ಯೆಯಲ್ಲಿ ಕಡಿಮೆ ಪ್ರಾತಿನಿಧ್ಯ ಕಂಡ ಸಮುದಾಯವನ್ನು ಸಾಮಾನ್ಯ ಸರಾಸರಿಯೊಂದಿಗೆ ಮೇಳೈಸುವುದೇ ಇದರ ಪ್ರಮುಖ ಗುರಿಯೂ ಆಗಿದೆ. ಕಡಿಮೆ ಪ್ರಾತಿನಿಧ್ಯ ಕಂಡು ಹಿಡಿಯಲು ಜಾತಿ ಅತ್ಯಂತ ಸೂಕ್ತ ಮಾನದಂಡವಾಗಿದೆ. ಇದೂ ಅಲ್ಲದೇ ಅತ್ಯಂತ ಕಡಿಮೆ ಪ್ರಾತಿನಿಧ್ಯ ಪಡೆದ ಇನ್ನೂ ಹಲವು ವರ್ಗಗಳಿವೆ. ಅದರಲ್ಲೂ ಲಿಂಗ ತಾರತಮ್ಯವಿದೆ.(ಮಹಿಳೆಯರ ಪ್ರಾತಿನಿಧ್ಯವೂ ಕಡಿಮೆಯೇ)ರಾಜ್ಯದ ಸ್ಥಳೀಯ ಜನಸಂಖ್ಯೆಗೆ ಹೋಲಿಸಿದರೆ,(ಈಶಾನ್ಯ ರಾಜ್ಯಗಳು ಅದಲ್ಲದೇ ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಪ್ರಾತಿನಿಧ್ಯದ ಸರಾಸರಿ ಕಡಿಮೆ.)ಗ್ರಾಮೀಣ ಭಾಗದಲ್ಲಿನ ಜನರ ಪಾಲ್ಗೊಳ್ಳುವಿಕೆ ವಿರಳ,ಎಂಬುದನ್ನು ನ್ಯಾಶನಲ್ ಫೆಮಿಲಿ ಹೆಲ್ತ್ ಅಂಡ್ ನ್ಯಾಶನಲ್ ಸ್ಯಾಂಪಲ್ ಸರ್ವೆ ಇದನ್ನು ಅಧ್ಯಯನ ಮಾಡಿ ಪತ್ತೆ ಹಚ್ಚಿದೆ.
ಇಲ್ಲಿ ಕಡಿಮೆ ಪ್ರಾತಿನಿಧ್ಯ ಅಂದರೆ ಅವರು ಪ್ರಮುಖ ವಾಹಿನಿಯಲ್ಲಿ ಬರದಿರುವುದಕ್ಕೆ ಪ್ರಮುಖ ಕಾರಣವೆಂದರೆ ಭಾರತದ ಜಾತಿ ಪದ್ದತಿಯೆಂದು ಸುಲಭವಾಗಿ ಗುರುತಿಸಬಹುದು. ಭಾರತದ ಸ್ವಾತಂತ್ರ್ಯಾನಂತರ,ತನ್ನ ಸಂವಿಧಾನ ಕಾನ್ ಸ್ಟಿಟುಶನ್ ಆಫ್ ಇಂಡಿಯಾ ದಲ್ಲಿ ಕೆಲವು ನಿರ್ಧಿಷ್ಟ ಜಾತಿ-ವರ್ಗಗಳನ್ನು ಗುರುತಿಸಿದೆ.ಪರಿಶಿಷ್ಟ ಜಾತಿಗಳು (SC) ಮತ್ತು ಪರಿಶಿಷ್ಟ ಪಂಗಡಗಳು (ST)ಇತ್ಯಾದಿ. ಹೀಗೆ ಸಂವಿಧಾನ ರಚನೆಗಾರರು SCs ಮತ್ತು STs ಎಂಬ ಗುಂಪು ಈ ಜಾತಿ ಪದ್ದತಿಯಿಂದ ಹುಟ್ಟಿಕೊಂಡಿದ್ದು,ಇದು ಐತಿಹಾಸಿಕವಾಗಿ ಈ ವರ್ಗವು ಶೋಷಣೆಗೊಳಗಾಗಿದ್ದು ಅದಕ್ಕಾಗಿ ದೇಶ ಕಟ್ಟುವ ಚಟುವಟಿಕೆಗಳಲ್ಲಿ ಈ ಸಮುದಾಯ ಪಾಲ್ಗೊಳ್ಳದಿರಲು ಆಗಲಿಲ್ಲ,ಇಂತಹ ಒಂದು ಕಾರಣದಿಂದ ವಿಶೇಷ ಸೌಲಭ್ಯ ಮೀಸಲಾತಿಗೆ ಅವಕಾಶ ನೀಡಲಾಗಿದೆ. ಆದ್ದರಿಂದ ಸಂವಿಧಾನವು 15% ಮತ್ತು 7.5% ರಷ್ಟು ಮೀಸಲಾತಿಯನ್ನು ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ/ ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ನೀಡಿದೆ.SCs ಮತ್ತು STs ಈ ಪಟ್ಟಿಯಲ್ಲಿನ ಸಮುದಾಯಕ್ಕೆ ಮೊದಲ ಐದು ವರ್ಷಗಳ ವರೆಗೆ ನಿಗದಿ ಮಾಡಿ ಅದನ್ನು ಆಯಾ ಸಂದರ್ಭಕ್ಕೆ ವಿಸ್ತರಿಸುವ ಅವಕಾಶ ಕಲ್ಪಿಸಲಾಗಿದೆ. ಈ ಅವಧಿಯು ಇದುವರೆಗೂ ಅಡಳಿತ ಮಾಡಿದ ಸರ್ಕಾರಗಳಿಂದ ಮುಂದುವರೆಸುತ್ತಲೇ ಬರಲಾಗಿದೆ.
ನಂತರ ಈ ಮೀಸಲಾತಿಯನ್ನು ಇತರ ವರ್ಗಗಳಿಗೂ ವಿಸ್ತರಿಸಲಾಯಿತು. ಸರ್ವೋಚ್ಚ ನ್ಯಾಯಾಲಯವು ಈ ಮೀಸಲಾತಿಯು 50% ಕ್ಕಿಂತ ಹೆಚ್ಚಾಗಬಾರದೆಂಬ ನಿಯಮ ರೂಪಿಸಿ ಸಮಾನವಕಾಶದ ಮಾರ್ಗ ಸೂಚಿಸಿದೆ.(ಸಂವಿಧಾನವು ಸಮಾನ ಅವಕಾಶದ ಉಲ್ಲಂಘನೆಗೆ ಅವಕಾಶ ನೀಡಿಲ್ಲ)ಆದರಿಂದ ಮೀಸಲಾತಿ ಮೇಲೆ ಒಂದು ನಿರ್ಭಂದ ವಿಧಿಸಿದೆ. ಕೆಲವು ರಾಜ್ಯಗಳಲ್ಲಿ ಈ 50% ಪರಿಧಿಯನ್ನು ಮೀಸಲಾತಿ ನೀಡಿದ ನಿದರ್ಶನಗಳು ಇದ್ದು ಅದರ ಬಗ್ಗೆ ವಿಚಾರಣೆ-ಪ್ರಕರಣಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿವೆ. ಉದಾಹರಣೆಗೆ ತಮಿಳುನಾಡಿನಲ್ಲಿ ಈ ಮೀಸಲಾತಿ ಪ್ರಮಾಣವು 69% ಮತ್ತು 87% ರಷ್ಟನ್ನು ಆಯಾ ವರ್ಗಗಳಿಗೆ ಅನ್ವಯಿಸುವಂತೆ ನೀಡಲಾಗುತ್ತಿದೆ.(ಕೆಳಗಿನ ವರ್ಗವಾರು ತಮಿಳುನಾಡಿನ ವಿವರ ನೋಡಿ)
ಆಚರಣೆಯ ಇತಿಹಾಸ
[ಬದಲಾಯಿಸಿ]ಹಿಂದುಳಿದ ವರ್ಗಗಳಿಗೆ (BCs) ಸ್ವಾತಂತ್ರ್ಯ ಪೂರ್ವದಲ್ಲಿಯೇ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಲಾಗಿತ್ತು.ವಿಶಾಲ ಪ್ರದೇಶದಲ್ಲಿ ಪ್ರೆಸಿಡೆನ್ಸಿ ಆಡಳಿತ ಪ್ರದೇಶಗಳಲ್ಲಿ ಮತ್ತು ವಿಂಧ್ಯ ಪ್ರದೇಶದಲ್ಲಿದ ರಾಜರ ಆಡಳಿತಾವಧಿಯಲ್ಲಿ ಈ ಸವಲತ್ತು ನೀಡಲಾಗಿತ್ತು. ಛತ್ರಪತಿ ಶಾಹುಜಿ ಮಹಾರಾಜ,ಮಹಾರಾಷ್ಟ್ರದಲ್ಲಿನ ಮಹಾರಾಜಾ ಆಫ್ ಕೊಲ್ಲಾಪುರ್ ಇವರುಗಳು 1902 ರ ಮುಂಚೆಯೇ ರಾಜ್ಯಾಡಳಿತಗಳಲ್ಲಿ ಹಿಂದುಳಿದವರ ಪಾಲನ್ನು ನೀಡಲು ಮೀಸಲಾತಿ ನೀತಿ ರೂಪಿಸಿದ್ದರು. ಆಗಿನ 1902 ರ ಒಂದು ಸೂಚನಾ ಪತ್ರವು ಕೊಲ್ಹಾಪುರ್ ದ ಆಡಳಿತದಲ್ಲಿ 50% ರಷ್ಟು ಮೀಸಲಾತಿಯನ್ನು ಹಿಂದುಳಿದ ಸಮುದಾಯ/ ವರ್ಗದವರಿಗೆ ನೀಡಿತ್ತು, ಭಾರತದಲ್ಲಿನ ಶೋಷಿತ ವರ್ಗದ ಕಲ್ಯಾಣಕ್ಕೆ ಮಾಡಿದ ಮೊದಲ ನೋಟಿಫಿಕೇಶನ್ ಇದಾಗಿದೆ.
ಆದರೆ ಅಸ್ಪ್ರಶ್ಯತೆಯು ಎಲ್ಲೆಡೆಗೂ ಒಂದೇ ತೆರನಾಗಿ ಇರಲಿಲ್ಲವಾದ್ದರಿಂದ ಹಿಂದುಳಿದವರನ್ನು ಗುರುತಿಸುವುದು ಸುಲಭವಾಗಿರಲಿಲ್ಲ. ಇನ್ನೂ ಹೆಚ್ಚೆಂದರೆ ಈ ಅಸ್ಪ್ರಶ್ಯತೆ ಮತ್ತು ವಿಭಾಗಿಕರಣವು ಉತ್ತರ ಭಾರತಕ್ಕಿಂತ ದಕ್ಷಿಣದಲ್ಲೇ ಹೆಚ್ಚು ಪ್ರಚಲಿತವಾಗಿತ್ತು. ಅದಲ್ಲದೇ ಒಂದು ಪ್ರದೇಶದಲ್ಲಿ ಅಸ್ಪ್ರಶ್ಯವೆನಿಸಿದ ಜಾತಿ/ಸಮುದಾವು ಇನ್ನೊಂದು ಪ್ರದೇಶದಲ್ಲಿ ಅದೇ ವಿಧದಲ್ಲಿ ಅನುಸರಣೆಯಾಗುತ್ತಿರಲಿಲ್ಲ. ಕೆಲವು ಸಾಂಪ್ರದಾಯಿಕ ವೃತ್ತಿಪರತೆ ಹೊಂದಿದ ಜಾತಿಗಳು ಹಿಂದು ಮತ್ತು ಹಿಂದುಯೇತರ ವರ್ಗಗಳಲ್ಲಿ ಸ್ಥಾನ ಪಡೆದಿದ್ದವು. ಈ ಜಾತಿಗಳನ್ನು ಮನುಕಾಲದ ಆರಂಭದಿಂದಲೂ ಅದೇ ವಿಧವಾದ ವೃತ್ತಿಗಳಲ್ಲಿ ಕಾಣಬಹುದಾಗಿದೆ. ಮಧ್ಯಕಾಲೀನ ಅನುಕ್ರಮಣ ಸಮಯದಲ್ಲಿ ದೇಶದಲ್ಲಿನ ವಿವಿಧ ಸಮುದಾಯಗಳ ವಿವರ ನೀಡಲಾಗಿತ್ತು. ಬ್ರಿಟಿಶ್ ವಸಾಹತು ಕಾಲದಲ್ಲಿ 1802 ರ ಸುಮಾರಿಗೆ ದೊಡ್ಡ ಪ್ರಮಾಣದಲ್ಲಿ ಈ ಜಾತಿವಾರು ಪಟ್ಟಿ ಮಾಡುವ ಕಾರ್ಯ ನಡೆಯಿತು. ಇದು 1881 ರಿಂದ 1931 ರ ವರೆಗೆ ನಡೆದ ಜನಗಣತಿ ಅವಧಿಯಲ್ಲಿ ಹೆಚ್ಚು ಪ್ರಚಲಿತವಾಯಿತು.
ಅದೇ ತೆರನಾಗಿ ಹಿಂದುಳಿದ ವರ್ಗಗಳ ಚಳವಳಿಯು ಅದೇ ಕಾಲದಲ್ಲಿ ತನ್ನ ತಲೆ ಎತ್ತಿ ಪ್ರತಿಭಟಿಸಿದ್ದು ಮೊದಲು ತಮಿಳುನಾಡಿನಲ್ಲಿ. ಹೀಗೆ ಸಮಾಜ ಸುಧಾರಕರ ನಿರಂತರ ಪ್ರಯತ್ನಗಳು ನಡೆದವು,ಅವರೆಂದರೆ: ರೆಟ್ಟಮಲೈ ಸ್ರಿನಿವಾಸ್ ಪರೈಯಾರ್ ,ಅಯೊತಿದಾಸ್ ಪಂಡಿತರ್ www.paraiyar.webs.com, ಜ್ಯೋತಿಬಾ ಪುಲೆPhule, ಬಾಬಾಸಾಹೇಬ ಅಂಬೇಡ್ಕರ್, ಛತ್ರಪತಿ ಸಾಹು ಜಿ ಮಹಾರಾಜ ಮತ್ತು ಇನ್ನಿತರರು,ಮೇಲ್ವರ್ಗ ಮತ್ತು ಅಸ್ಪ್ರಶ್ಯರ ನಡುವೆ ನಿರ್ಮಿಸಿದ್ದ ಗೋಡೆಯನ್ನು ಕೆಡವಿಹಾಕಿದರು.
ಭಾರತವು ಹಲವಾರು ಸ್ವಗೋತ್ರ ಸಮುದಾಯಗಳಲ್ಲಿ ವಿಂಗಡಣೆಯಾಗಿದೆ.ಇಲ್ಲಿ ಜಾತಿಗಳು ಮತ್ತು ಉಪಜಾತಿಗಳು ಶತಮಾನಗಳಿಂದಲೂ ಸಾಮಾಜಿಕ ವರ್ಗಗಳ ದರ್ಜೆಗಳನ್ನು ಜಾತಿ ಪದ್ದತಿ ಎಂದು ಕರೆಯಲಾಗುತ್ತಿದೆ. ಈ ಮೀಸಲಾತಿ ಪ್ರತಿಪಾದಕರು ಈ ಸಾಂಪ್ರದಾಯಿಕ ಜಾತಿ ಪದ್ದತಿಯಿಂದ ಗಂಭೀರ ಪ್ರಮಾಣದ ಶೋಷಣೆ ಮತ್ತು ಬಹಿಷ್ಕಾರಗಳು ಕೆಳಜಾತಿಗಳಲ್ಲಿ ನಡೆಯುತ್ತವೆ ಎಂದು ಅಭಿಪ್ರಾಯಪಟ್ಟರು.ಇದರಿಂದ ಅಂತಹ ವರ್ಗಗಳು ಹಲವು ಸ್ವಾತಂತ್ರ್ಯಗಳಿಂದ ವಂಚಿತರಾಗುತ್ತಾರೆ,ಶಿಕ್ಷಣವನ್ನೊಳಗೊಂಡಂತೆ ಇದು ಪರಿಣಾಮ ಬೀರುತ್ತದೆ. ಜಾತಿಯನ್ನು ಪ್ರಾಚೀನ ಗ್ರಂಥಗಳಲ್ಲಿಯೂ ಅಂದರೆ "ಮನುಸ್ಮೃತಿ"ಯಲ್ಲಿ "ವರ್ಣಾಶ್ರಮ ಧರ್ಮ"ದಡಿ ವಿಂಗಡಿಸಲಾಗಿದೆ.ಇದರಲ್ಲಿ ಅವರವರ ವೃತ್ತಿಗಳ ಮೇಲೆ ಅವರಿಗೆ ಸಮಾಜದಲ್ಲಿ ಸ್ಥಾನಮಾನ ನೀಡಲಾಗಿತ್ತು. "ವರ್ಣ "ಎಂಬುದನ್ನು ವರ್ಣಾಶ್ರಮದಲ್ಲಿ (ವರ್ಣ+ಆಶ್ರಮ)ಎಂಬುದನ್ನು 'ಬಣ್ಣ'ಕ್ಕೆ ಹೋಲಿಸಿ ಅರ್ಥೈಸಬಾರದು. ಭಾರತದಲ್ಲಿನ ಜಾತಿ ಪದ್ದತಿ ಆಚರಣೆಯು ಈ ನಿಯಮವನ್ನು ಪಾಲಿಸುತಿತ್ತು.
-
- 1882 - ಹಂಟರ್ ಆಯೋಗ ನೇಮಕ. ಮಹಾತ್ಮಾ ಜ್ಯೊತಿರಾವ್ ಫುಲೆ ಅವರು ಉಚಿತ ಶಿಕ್ಷಣ ಮತ್ತು ಸರ್ಕಾರಿ ಕೆಲಸಗಳಲ್ಲಿ ಅಗತ್ಯ ಮೀಸಲಾತಿ ನೀಡುವಂತೆ,ಅದು ಜಾತಿಗೆ ಸರಾಸರಿ/ಪ್ರಾತಿನಿಧ್ಯ ನೀಡುವಂತೆ ಅವರು ಒತ್ತಾಯಿಸಿದರು.
- ಆಗ 1891-ರಲ್ಲಿ ಸರ್ಕಾರಿ ಕೆಲಸಗಳಲ್ಲಿ ಮೀಸಲಾತಿ ಬೇಕೆಂಬ ಬೇಡಿಕೆಯು 1891 ರ ಆರಂಭದಲ್ಲೇ ಕೇಳಿ ಬಂತು.ಟ್ರ್ಯಾವಂಕೂರ್ ರಾಜಮನೆತನದ ಆಡಳಿತದಲ್ಲಿ ಸ್ಥಳೀಯರಲ್ಲದವರನ್ನು ಕೆಲಸಗಳಲ್ಲಿ ನೇಮಕ ಮಾಡಿಕೊಂಡು ಸ್ಥಳೀಯ ಪ್ರತಿಭೆಗಳನ್ನು ಕಡೆಗಣಿಸಲಾಯಿತೆಂದು ಹೋರಾಟ ಮಾಡಲಾಯಿತು.
- ನಂತರ 1901-ರಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ರಾಜ ಶಾಹು ಮಹಾರಾಜರ ಆಡಳಿತದಲ್ಲಿ ಮೀಸಲಾತಿಗಳನ್ನು ಜಾರಿಗೊಳಿಸಲಾಯಿತು. ಅದಾಗಲೇ ಬರೋಡಾ ಮತ್ತು ಮೈಸೂರು ಸಂಸ್ಥಾನಗಳಲ್ಲಿ ಮೀಸಲಾತಿ ಜಾರಿಯಲ್ಲಿತ್ತು.
- ಮುಂದೆ 1908- ರ ಹೊತ್ತಿಗೆ ಹಲವಾರು ಜಾತಿಗಳು ಮತ್ತು ಸಮುದಾಯಗಳಿಗೆ ಬ್ರಿಟಿಶ್ ಆಡಳಿತದಲ್ಲಿ ಕಡಿಮೆ ಪ್ರಾತಿನಿಧ್ಯದ ಇವುಗಳಿಗೆ ಮೀಸಲಾತಿ ಕಲ್ಪಿಸಲಾಯಿತು.
- ಹೀಗೆ 1909- ರಲ್ಲಿ ಗವರ್ಮೆಂಟ್ ಆಫ್ ಇಂಡಿಯಾ ಆಕ್ಟ್ 1909 ರ ಭಾರತೀಯ ಸರ್ಕಾರದ ಕಾನೂನಿನಲ್ಲಿ ಸವಲತ್ತುಗಳನ್ನು ಕಲ್ಪಿಸಲಾಯಿತು.
- ಅದರ ಹಿಂದೆಯೇ 1919 -ರಲ್ಲಿ ಮೊಂಟ್ಯಾಗು-ಚೆಲ್ಮ್ಸ್ ಫೊರ್ಡ್ ರಿಫಾರ್ಮ್ಸ್ ಅಂದರೆ ಚೆಲ್ಮ್ಸ್ ಫೊರ್ಡ್ ಅವರ ಸುಧಾರಣೆಗಳು ಜಾರಿಯಾದವು.
- 1919-ರಲ್ಲಿ ಗವರ್ನ್ ಮೆಂಟ್ ಆಫ್ ಇಂಡಿಯಾ ಆಕ್ಟ್ 1919 ರಲ್ಲಿ ಭಾರತೀಯ ಕಾನೂನು ರೀತ್ಯಾ ಸವಲತ್ತುಗಳನ್ನು ಒದಗಿಸುವಲ್ಲಿ ಸಫಲವಾಯಿತು.
- 1921-ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕೋಮುಸಮುದಾಯಕ್ಕಾಗಿ (G O),ಸರ್ಕಾರಿ ಆದೇಶವೊಂದನ್ನು ಹೊರಡಿಸಿ ಬ್ರಾಹ್ಮಣೇತರರಿಗೆ ಶೇಕಡಾ 44,ಬ್ರಾಹ್ಮಣರಿಗೆ ಶೇಕಡಾ 16,ಶೇಕಡಾ 16 ಮುಸ್ಲಿಮ್ ರಿಗೆ,ಶೇಕಡಾ 16 ಆಂಗ್ಲೊಇಂಡಿಯನ್ಸ/ಕ್ರಿಶ್ಚಿಯನ್ ರಿಗೆ ಮತ್ತು ಎಂಟರ ಶೇಕಡಾವನ್ನು ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ಪ್ರಕಟಿಸಿತು.
- ಮುಂದೆ 1935-ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒಂದು ಪೂನಾ ಪ್ಯಾಕ್ಟ್ ಎನ್ನುವ ಒಪ್ಪಂದ ಮಾಡಿ ಕೆಳದರ್ಜೆಯ ಮತ್ತು ತುಳಿತಕ್ಕೊಳಗಾದವರಿಗಾಗಿ ಪ್ರತ್ಯೇಕ ಮತಕ್ಷೇತ್ರಗಳ ಹಂಚಿಕೆ ಬಗ್ಗೆ ಕಾರ್ಯಕ್ರಮ ಹಾಕಿಕೊಂಡಿತು.
- 1935 - ರಲ್ಲಿ ಗವರ್ನೆ ಮೆಂಟ್ ಆಫ್ ಇಂಡಿಯಾ ಆಕ್ಟ್ 1935 ಇದು ಭಾರತ ಸರ್ಕಾರದ ಕಾನೂನನ್ನು ಜಾರಿಗೊಳಿಸಿತು.
- 1942- ರಲ್ಲಿ ಬಿ.ಆರ್ ಅಂಬೇಡ್ಕರ್ ಅವರು ಅಖಿಲ ಭಾರತ ತುಳಿತಕ್ಕೊಳಗಾದ ವರ್ಗಗಳ ಒಕ್ಕೂಟವನ್ನು ರಚಿಸಿ ಪರಿಶಿಷ್ಟ ಜಾತಿಯವರ ಮುಂದುವರಿಯುವಿಕೆಗೆ ಒತ್ತು ನೀಡಿದರು. ಅವರೂ ಕೂಡಾ ಸರ್ಕಾರಿ ಕೆಲಸ-ಸೇವೆಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ನೀಡುವಂತೆ ಬೇಡಿಕೆಯೊಡ್ಡಿದರು.
- 1946-ರಲ್ಲಿ 1946 ಕ್ಯಾಬಿನೆಟ್ ಮಿಶನ್ ಟು ಇಂಡಿಯಾ ತನ್ನ ನಿಯೋಗದಲ್ಲಿ ಆಯಾ ಜನಸಂಖ್ಯೆ ಅನುಪಾತಕ್ಕನುಗುಣವಾಗಿ ಪ್ರಾತಿನಿಧ್ಯ ನೀಡಲು ಆಗ್ರಹಿಸಿ ಹಲವಾರು ಶಿಫಾರಸ್ಸುಗಳನ್ನು ಮಾಡಿತು.
- 1947-ಭಾರತ ಸ್ವಾತಂತ್ರ್ಯ ಪಡೆಯಿತು. ಡಾ.ಅಂಬೇಡ್ಕರ್ ಅವರನ್ನು ಭಾರತೀಯ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಭಾರತದ ಸಂವಿಧಾನವು ಧರ್ಮ, ಜನಾಂಗ,ಜಾತಿ, ಲಿಂಗ ಮತ್ತು ಜನನದ ಸ್ಥಳದ ಮೇಲೆ ತಾರತಮ್ಯ ಮಾಡುವುದನ್ನು ಕಡಾಖಂಡಿತವಾಗಿ ನಿರಾಕರಿಸಿತು.[೪]. ಅವಕಾಶಗಳಲ್ಲಿ ಸಮಾನತೆ ನೀಡುವಲ್ಲಿ ಸಂವಿಧಾನವು ಎಲ್ಲಾ ನಾಗರಿಕರಿಗೆ ಸಮಾನತೆಯೊಂದಿಗೆ "ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜನರಿಗಾಗಿ ಅಥವಾ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗಗಗಳಿಗಾಗಿ ವಿಶೇಷ ನಿಯಮಾವಳಿಗಳನ್ನು ರಚಿಸಿತು".[೪] ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳಿಗೆ ರಾಜಕೀಯದಲ್ಲಿ ಪ್ರಾತಿನಿಧ್ಯ ದೊರಕಿಸಲು 10 ವರ್ಷಗಳ ಕಾಲ ಪ್ರತ್ಯೇಕ ಮತಕ್ಷೇತ್ರಗಳನ್ನು ಹಂಚಿಕೆ ಮಾಡಿತು.ಇವುಗಳು ಬರಬರುತ್ತಾ ಪ್ರತಿ 10 ವರ್ಷಕ್ಕೊಮ್ಮೆ ಸಾಂವಿಧಾನಿಕ ತಿದ್ದುಪಡಿ ಗಳ ಮೂಲಕ ಹಾಗೆಯೇ ವಿಸ್ತರಿಸಲಾಯಿತು.
- 1947-1950- ರ ವಿಧಾನಮಂಡಲಗಳ ಚರ್ಚೆಗಳು.
- 26/01/1950-ಭಾರತ ಸಂವಿಧಾನ ಜಾರಿಯಾಯಿತು.
- 1953-ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರ ಪ್ರಗತಿ ವೀಕ್ಷಣೆಗೆ ಕಾಲೇಕರ್ ಆಯೋಗವನ್ನು ನೇಮಿಸಲಾಯಿತು. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಬಗೆಗಿನ ವರದಿಯನ್ನು ಸಮ್ಮತಿಸಲಾಯಿತು. ಆದರೆ ಇನ್ನಿತರ ಹಿಂದುಳಿದವರ OBC ಶಿಫಾರಸುಗಳನ್ನು ತಿರಸ್ಕರಿಸಲಾಯಿತು.
- 1956-ಕಾಕಾ ಕಾಲೇಕರ್ ಅವರ ಕಾನೂನು ರೀತ್ಯ ವಿಷಯ ಸೂಚಿ ಪಟ್ಟಿಯನ್ನು ತಿದ್ದುಪಡಿ ಮಾಡಲಾಯಿತು.
- 1976-ಶೆಡ್ಯುಲ್ ಗಳನ್ನು ತಿದ್ದುಪಡಿಗೊಳಗಾದವು.
- 1979- ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರ ಪರಿಸ್ಥಿತಿಗಳ ಮಂಡಲ್ ಆಯೋಗವನ್ನು ನೇಮಕ ಮಾಡಲಾಯಿತು.[೫] ಈ ಆಯೋಗವು ಉಪ-ಜಾತಿಗಳ ಬಗ್ಗೆ ಅಂದರೆ ಇನ್ನುಳಿದ ಹಿಂದುಳಿದ ವರ್ಗಗಳ (OBC) ಬಗ್ಗೆ ನಿಖರ ಮಾಹಿತಿ ಕಲೆಹಾಕಲು ಸಾಧ್ಯವಾಗಲಿಲ್ಲ.ಅದು 1930 ಜನಗಣತಿಯ ಅಂಕಿಅಂಶಗಳನ್ನು ಅನುಸರಿಸಿ ಮತ್ತೆ 1,257 ಸಮುದಾಯಗಳನ್ನು ಪಟ್ಟಿ ಮಾಡಿ ಒಟ್ಟು OBC ಜನಸಂಖ್ಯೆಯು 52% ರಷ್ಟಿದೆ ಎಂದು ಹೇಳಿತು.[೬][೬]
- 1980-ಆಯೋಗವು ಪ್ರಸಕ್ತ ಮೀಸಲಾತಿ ಪ್ರಮಾಣಗಳಿಗೆ ಬದಲಾವಣೆ ತರುವಂತೆ ಶಿಫಾರಸು ಮಾಡಿತು.ಅದನ್ನು 22% ರಿಂದ 49.5% ಗೆ ಹೆಚ್ಚಿಸುವಂತೆ ಸಲಹೆ ಮಾಡಿತು.ಹೀಗೆ ಇನ್ನಿತರ ಹಿಂದುಳಿದ ಜಾತಿಗಳ ಸಂಖ್ಯೆಯು 2297 ಕ್ಕೇರಿತು.ಇದು ಮಂಡಲ್ ಆಯೋಗ ಸಿದ್ದಪಡಿಸಿದ ಪಟ್ಟಿಗಿಂತ 60% ರಷ್ಟು ಅಧಿಕವಾಗಿತ್ತು.
- 1990-ಮಂಡಲ್ ಆಯೋಗದ ಶಿಫಾರಸುಗಳನ್ನು ಅನುಸರಿಸಿ ಸರ್ಕಾರಿ ಸೇವೆಗಳಲ್ಲಿ ಮೀಸಲಾತಿಯನ್ನು ವಿಶ್ವನಾಥ್ ಪ್ರತಾಪ ಸಿಂಗ್ ಅವರು ತಮ್ಮ ಅವಧಿಯಲ್ಲಿ ಅನುಷ್ಟಾನಗೊಳಿಸಿದರು. ವಿದ್ಯಾರ್ಥಿ ಸಂಘಟನೆಗಳು ರಾಷ್ಟ್ರದಾದ್ಯಂತ ಚಳವಳಿ ಹಮ್ಮಿಕೊಂಡವು. ರಾಜೀವ್ ಗೊಸ್ವಾಮಿ, ಡೆಲ್ಹಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯು ಸ್ವಯಂ-ಆತ್ಮಾಹುತಿ ಗೆ ಪ್ರಯತ್ನಿಸಿದರು. ಹಲವಾರು ವಿದ್ಯಾರ್ಥಿಗಳ ಇದನ್ನೇ ಅನುಕರಿಸಿದರು.
- 1991-ರಲ್ಲಿ ನರಸಿಂಹರಾವ್ ಸರ್ಕಾರವು ಮುಂದುವರೆದ ಜಾತಿಗಳಲ್ಲಿನ ಬಡವರಿಗೆ 10% ರಷ್ಟು ಮೀಸಲಾತಿಯನ್ನು ಪ್ರಕಟಿಸಿತು.
- 1992-ರಲ್ಲಿ ಸರ್ವೋಚ್ಚ ನ್ಯಾಯಾಲಯವು ಇಂದಿರಾ ಸಾಹನಿ ಪ್ರಕರಣದಲ್ಲಿ ಇನ್ನಿತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಎತ್ತಿಹಿಡಿಯಿತು. ಅದಲ್ಲದೇ ಮೀಸಲಾತಿಗಳು ಮತ್ತು ನ್ಯಾಯಾಂಗದ ವಿಧಿ-ವಿಧಾನಗಳನ್ನು ಗಮನಿಸಿ
- 1995- ಸಂಸತ್ತು 77 ನೆಯ ಸಾಂವಿಧಾನಿಕ ತಿದ್ದುಪಡಿಯನ್ನು ಆರ್ಟ್ 16(4) ನಿಯಾಮಾವಳಿಗೆ ತಂದು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಬಡ್ತಿಯಲ್ಲೂ ಮೀಸಲಾತಿ ಕಲ್ಪಿಸಿತು. ನಂತರ ಮುಂದಿನ 85ನೆಯ ತಿದ್ದುಪಡಿಯಲ್ಲಿ ತಾರ್ಕಿಕ ಸುಸಂಬಂಧಿತ ಹಿರಿತನದ ಬಡಿಗೆ ಅವಕಾಶ ನೀಡಲಾಯಿತು.
- 1998-ಮೊದಲ ಬಾರಿಗೆ ಕೇಂದ್ರ ಸರ್ಕಾರವು ದೊಡ್ಡ ಮಟ್ಟದಲ್ಲಿ ಸರ್ವೇಕ್ಷಣೆ ನಡೆಸಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಯ ಬಗ್ಗೆ ವಿವಿಧ ಸಾಮಾಜಿಕ ಸಮೂದಾಯಗಳನ್ನು ಪಟ್ಟಿ ಮಾಡಿತು. ಆದರೆ ರಾಷ್ಟ್ರೀಯ ಮಾದರಿ ಸರ್ವೇಕ್ಷಣೆಯು ಇದನ್ನು 32% ಎಂದು [70]ತೋರಿಸಿದೆ. ಭಾರತದಲ್ಲಿನ OBC ಗಳ ನಿಖರ ಸಂಖ್ಯೆ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.ಈ ಜನಗಣತಿ ಆಧಾರವು ರಾಜಕೀಯ ವಿಭಜನೆಗೆ ಕಾರಣವಾಗಿದೆ. ಇದು ದೊಡ್ಡ ಪ್ರಮಾಣದ ಸಂಖ್ಯೆಯಾಗಿದೆ ಎಂದು ಹೇಳಲಾಗಿದ್ದರೂ ಮಂಡಲ್ ಆಯೋಗ ಮತ್ತು ರಾಷ್ಟ್ರೀಯ ಮಾದರಿ ಸರ್ವೇಕ್ಷಣೆಯ [೧] ಅಂಕಿಅಂಶಗಳಿಗಿಂತ ಕೆಳಗಿದೆ. ಅಂಕಿಅಂಶಗಳನ್ನು ಸುಳ್ಳು ಸಂಖ್ಯಾ ಬಲದಿಂದ ಸಿದ್ದಪಡಿಸಲಾಗಿದೆ ಎಂದು ಮಂಡಲ್ ಆಯೋಗವನ್ನು ಟೀಕಿಸಲಾಯಿತು. ರಾಷ್ಟ್ರೀಯ ಸರ್ವೇಕ್ಷಣೆ [೨] ಪ್ರಕಾರ ಕೆಲವು ಪ್ರದೇಶಗಳಲ್ಲಿ OBC ಯು ಮುಂದುವರಿದ ಜಾತಿಗಳ ಸಂಖ್ಯಾಬಲವನ್ನು ಮೀರಿಸುತ್ತದೆ.
- ಆಗ 2005,ಆಗಸ್ಟ್ 12-ಸರ್ವೋಚ್ಚ ನ್ಯಾಯಾಲಯದ 7 ನ್ಯಾಯಾಧೀಶರ ಪೀಠ ಆಗಸ್ಟ್ 12,2005 ರಲ್ಲಿ ಪಿ.ಎ ಇನಾಮದಾರ್ & ಅದರ್ಸ್ ವಿರುದ್ದ ಮಾಹಾರಾಷ್ಟ್ರ ರಾಜ್ಯ;ರಾಜ್ಯವು ಅಲ್ಪಸಂಖ್ಯಾತ ಮತ್ತು ಅಲ್ಪಸಂಖ್ಯಾತರಹಿತ-ಅನುದಾನರಹಿತ ವಿದ್ಯಾಸಂಸ್ಥೆಗಳಲ್ಲಿಮೀಸಲಾತಿ ನೀತಿಯನ್ನು ಅನುಷ್ಟಾನಗೊಳಿಸಬೇಕಾಗಿಲ್ಲ.ಇದರಲ್ಲಿ ವೃತ್ತಿಪರ ಕಾಲೇಜುಗಳೂ ಸೇರಿವೆ.
- 2005- ರಲ್ಲಿ 93 ನೆಯ ಸಾಂವಿಧಾನಿಕ ತಿದ್ದುಪಡಿ ತಂದು.ಇನ್ನಿತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿತಲ್ಲದೇ ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿಗೆ ಸೂಚಿಸಿತು. ಇದು ಸರ್ವೋಚ್ಚ ನ್ಯಾಯಾಲಯದ ಆಗಸ್ಟ್ 2005 ರ ತೀರ್ಪಿಗೆ ವ್ಯತಿರಿಕ್ತವಾಗಿತ್ತು.
- 2006-ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿದ ಪೀಠವು ಎಂ.ನಾಗರಾಜ್ & ಅದರ್ಸ್ ವಿರುದ್ದ ಯುನಿಯನ್ ಆಫ್ ಇಂಡಿಯಾ & ಅದರ್ಸ್ ಸಾಂವಿಧಾನಿಕ ಆರ್ಟ್ 335 ನಿಯಮ 16(4) (A) 16(4)(B) ಗಳಿಗೆ ಸಿಂಧುತ್ವ ನೀಡಿತು.
- 2006-ರಲ್ಲಿ ಕೇಂದ್ರ ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಇನ್ನಿತರ ಹಿಂದುಳಿದ ವರ್ಗಕ್ಕೆ ಮೀಸಲಾತಿ ಪ್ರಕಟಿಸಲಾಯಿತು. ಒಟ್ಟು ಮೀಸಲಾತಿ 49.5% ಕ್ಕೇರಿತು. ಇತ್ತೀಚಿನ ಬೆಳವಣಿಗೆ ನೋಡಿ
- 2007-ರಲ್ಲಿ ಸರ್ವೋಚ್ಚ ನ್ಯಾಯಾಲವು ಕೇಂದ್ರ ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿನ OBC ಮೀಸಲಾತಿಗೆ ತಡೆ ನೀಡಿತು.
- 2008- ಭಾರತದ ಸರ್ವೋಚ್ಚ ನ್ಯಾಯಾಲಯವು 2008 ಏಪ್ರಿಲ್ 10 ರಂದು ಸರ್ಕಾರದ ನಿಧಿ ಸಹಾಯದಿಂದ ನಡೆಯುತ್ತಿರುವ ಸಂಸ್ಥೆಗಳಲ್ಲಿ 27% ರಷ್ಟು OBC ಮೀಸಲಾತಿ ಪ್ರಮಾಣವನ್ನು ಎತ್ತಿಹಿಡಿಯಿತು. ಅದು ಸ್ಪಷ್ಟವಾಗಿ ಹೇಳಿದ್ದೆಂದರೆ "ಕೆನೆ ಪದರನ್ನು"ಈ ಮೀಸಲಾತಿ ಪರಿಧಿಯಿಂದ ಹೊರಗಿಡಬೇಕೆಂದು ಸೂಚಿಸಿತು. ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿ ಬಗೆಗೆ ಸರ್ವೋಚ್ಚ ನ್ಯಾಯಾಲವು ಉತ್ತರ ನೀಡಲಿಲ್ಲ,ಯಾವಾಗ ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿ ಬಗ್ಗೆ ಕಾನೂನು ರಚಿಸಿದಾಗ ಈ ಪ್ರಶ್ನೆ ಉದ್ಭವಿಸುತ್ತದೆ,ಆಗ ಮಾತ್ರ ಇದಕ್ಕೆ ಉತ್ತರ ದೊರಕೀತು. ಈ ತೀರ್ಪು ಅದರ ಪ್ರತಿಪಾದಕರು ಮತ್ತು ವಿರೋಧಿಸುವವರು ಎಂಬ ಮಿಶ್ರ ಪ್ರತಿಕ್ರಿಯೆ ಹುಟ್ಟಿಸಿತು.
ಕೆನೆ ಪದರನ್ನು ಗುರುತಿಸಲು ಹಲವಾರು ಮಾನದಂಡಗಳನ್ನು ಶಿಫಾರಸು ಮಾಡಲಾಯಿತು:[೭]
ಯಾರು ವಾರ್ಷಿಕ 250,000 ರೂಪಾಯಿಗಿಂತ ಹೆಚ್ಚಿನ ಆದಾಯ ಹೊಂದಿರುತ್ತಾರೋ ಅವರು ಮೀಸಲಾತಿ ಪರಿಧಿಗೆ ಬರಲಾರರು. ಅದಲ್ಲದೇ ವೈದ್ಯರ ಮಕ್ಕಳು,ಎಂಜನೀಯರ್ ಗಳು,ಚಾರ್ಟರ್ಡ್ ಅಕೌಂಟಂಟ್ ಗಳು,ನಟರು,ಮಾಧ್ಯಮ ವೃತ್ತಿಪರರು,ಬರೆಹಗಾರರು,ಅಧಿಕಾರಿಗಳು,ರಕ್ಷಣಾ ಇಲಾಖೆ ಅಧಿಕಾರಿಗಳು,ಕರ್ನಲ್ ದರ್ಜೆ ಅಥವಾ ಅದಕ್ಕಿಂತ ಹೆಚ್ಚಿನ ದರ್ಜೆ,ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳ ಮಕ್ಕಳು ಮತ್ತು ಕೇಂದ್ರ-ರಾಜ್ಯ ಸರ್ಕಾರದಲ್ಲಿ A ಮತ್ತು B ವರ್ಗದ ಅಧಿಕಾರಿಗಳ ಮಕ್ಕಳು MP ಗಳು ಮತ್ತು MLA ಗಳ ಮಕ್ಕಳಿಗೂ ಮೀಸಲಾತಿ ಕೋಟಾಗಳನ್ನು ತೆಗೆದು ಹಾಕುವಂತೆ ಅದು ಸಂಸತ್ತಿಗೆ ಮನವಿ ಮಾಡಿತು.
ಮೀಸಲಾತಿಗಳು ಮತ್ತು ನ್ಯಾಯಾಂಗ
[ಬದಲಾಯಿಸಿ]ಭಾರತೀಯ ನ್ಯಾಯಾಂಗವು ಕೆಲವು ಮೀಸಲಾತಿಗಳನ್ನು ಎತ್ತಿ ಹಿಡಿದಿದೆ,ಕೆಲವೊಂದನ್ನು ಮರುಪರಿಷ್ಕರಿಸಿ ಜಾರಿಗೊಳಿಸುವಂತೆ ಆದೇಶಿಸಿದೆ. ಮೀಸಲಾತಿ ಬಗೆಗಿನ ಹಲವಾರು ತೀರ್ಪುಗಳನ್ನು ಭಾರತದ ಸಂಸತ್ತಿನಲ್ಲಿ ಮಂಡಿಸಿ ಅವುಗಳಿಗೆ ಸೂಕ್ತ ತಿದ್ದುಪಡಿ ಮಾಡಲಾಗಿದೆ,ಇದಕ್ಕಾಗಿ ಆಗಾಗ ಅಗತ್ಯ ಸಾಂವಿಧಾನಿಕ ತಿದ್ದುಪಡಿ ಮೂಲಕ ಪರಿಷ್ಕರಿಸಲಾಗಿದೆ. ಭಾರತದ ನ್ಯಾಯಾಂಗದ ಹಲವಾರು ತೀರ್ಪುಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಗುರಾಗಿ ತೆಗೆದುಕೊಂಡ ಸಂದರ್ಭಗಳೂ ಇವೆ. ಭಾರತದ ನ್ಯಾಯಾಲಯಗಳ ಪ್ರಮುಖ ತೀರ್ಪುಗಳು ಮತ್ತು ಅದರ ಅನುಷ್ಟಾನದ ಸ್ಥಿತಿ-ಗತಿ,:[೮][೯]
ವರ್ಷಗಳು | ತೀರ್ಪು | ಅನುಷ್ಟಾನದ ವಿವರಗಳು |
---|---|---|
1951 | (ನ್ಯಾಯಾಲಯದ ಪ್ರಕಾರ ಜಾತಿ ಮೂಲದ ಮೀಸಲಾತಿಗಳು ಪ್ರತಿ ಕೋಮು-ವರ್ಗ ಆಧಾರದಮೂಲಕ ನೀಡುವ ಮೀಸಲಾತಿಯು ಖಂಡ ಆರ್ಟಿಕಲ್ 15(1) ನಿಯಮವನ್ನು ಉಲ್ಲಂಘಿಸುತ್ತದೆ.ಮದ್ರಾಸ್ ರಾಜ್ಯ ವಿರುದ್ದ. ಶ್ರ್ರೀಮತಿ. ಚಂಪಕಮ್ ದೊರೆರಾಜನ್ AIR 1951 SC 226) | 1ನೆಯ ಸಾಂವಿಧಾನಿಕ ತಿದ್ದುಪಡಿ(Art. 15 (4)) ತೀರ್ಪುಗಳನ್ನೇ ಅಸಿಂಧುಗೊಳಿಸುವ ತಿದ್ದುಪಡಿ ಇದಾಗಿದೆ. |
1963 | ನ್ಯಾಯಾಲಯವು ಎಂ,ಆರ್ ಬಾಲಾಜಿ ವಿರುದ್ದ AIR 1963 SC 649 ಮೈಸೂರು ಪ್ರಕರಣದಲ್ಲಿ ಮೀಸಲಾತಿಯನ್ನು 50% ಕ್ಕೆ ಸೀಮಿತಗೊಳಿಸಿದೆ | ಬಹುತೇಕ ಎಲ್ಲಾ ರಾಜ್ಯಗಳು ತಮಿಳುನಾಡು ಹೊರತುಪಡಿಸಿ (69% ರಷ್ಟು 9 ನೆಯ ಶೆಡ್ಯುಲ್ )ರಾಜಸ್ಥಾನ್ (68% ಪ್ರಮಾಣ ಇದರಲ್ಲಿ 14% ರಷ್ಟು ಮುಂದುವರೆದ ಜಾತಿಗಳು,ಗುಜ್ಜಾರ್ ರ ಚಳವಳಿ ನಂತರ)ಇಲ್ಲಿ ಮೀಸಲಾತಿಯು 50% ಕ್ಕಿಂತ ಹೆಚ್ಚಿಲ್ಲ. ತಮಿಳುನಾಡು 1980 ರಲ್ಲಿ ತನ್ನ ಪರಿಮಿತಿ ಮೀರಿತು. ಆಂಧ್ರ ಪ್ರದೇಶವು 2005 ರಲ್ಲಿ ಪರಿಮಿತಿ ದಾಟಲು ಪ್ರಯತ್ನಿಸಿತು,ಮತ್ತೆ ಇದನ್ನು ಉಚ್ಚ ನ್ಯಾಯಾಲಯ ತಡೆಯೊಡ್ಡಿತು. |
1992 | ಸರ್ವೋಚ್ಚ ನ್ಯಾಯಾಲಯವು ಇಂದಿರಾ ಸಾಹನಿ & ಇನ್ನುಳಿದವರ ವಿರುದ್ದ ಯುನಿಯನ್ ಆಫ್ ಇಂಡಿಯಾ ಸರ್ವೋಚ್ಚ ನ್ಯಾಯಾಲಯವು AIR 1993 SC 477 : 1992 Supp (3)SCC 217 ಕೇಂದ್ರ ಸರ್ಕಾರಿ ಸೇವೆಗಳಲ್ಲಿ ಇನ್ನಿತರ ಹಿಂದುಳಿದ ಜಾತಿಗಳಿಗೆ ಪ್ರತ್ಯೇಕ ಮೀಸಲಾತಿಯನ್ನು ಜಾರಿಗೊಳಿಸಲು ಸೂಚಿಸಿತು.. | ನ್ಯಾಯಾಲಯದ ತೀರ್ಪುಗಳ ಅನುಷ್ಠಾನ |
ಇನ್ನುಳಿದ ಹಿಂದುಳಿದ ವರ್ಗಗಳಲ್ಲಿನ ಕೆನೆ ಪದರನ್ನು ತೆಗೆದು ಹಾಕುವಂತೆ ಆದೇಶಿಸಿತು,ಈಗಾಗಲೇ ಸಾಕಷ್ಟು ಈ ಸವಲತ್ತನ್ನು ಅನುಭವಿಸಿದವರಿಗೆ ಮೀಸಲಾತಿ ಇಲ್ಲ ಎಂದು ವಿವರಿಸಿತು. | ತಮಿಳುನಾಡು ಹೊರತುಪಡಿಸಿ ಎಲ್ಲಾ ರಾಜ್ಯಗಳು ಇದನ್ನು ಜಾರಿಗೆ ತಂದವು ಇತ್ತೀಚಿನ ಮೀಸಲಾತಿ ಮಸೂದೆಯಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ನೀಡುವ ಮೀಸಲಾತಿ ಸಂದರ್ಭದಲ್ಲಿ ಕೆಲವೆಡೆ ರಾಜ್ಯಗಳಲ್ಲಿ ಕೆನೆ ಪದರನ್ನು ತೆಗೆದಿಲ್ಲ (ಇನ್ನೂ ಸ್ಥಾಯಿ ಸಮಿತಿಯ ಪರಿಶೀಲನೆಯಲ್ಲಿದೆ). | |
ಮೀಸಲಾತಿಗಳನ್ನು 50% ರ ಮಿತಿ ದಾಟದಂತೆ ಆದೇಶಿಸಿತು. | ತಮಿಳು ಹೊರತುಪಡಿಸಿ ಎಲ್ಲಾ ರಾಜ್ಯಗಳು ಅಳವಡಿಸಿದವು | |
ಮುಂದುವರಿದ ಜಾತಿಗಳಲ್ಲಿನ ಆರ್ಥಿವಾಗಿ ಹಿಂದುಳಿದವರಿಗೆ ನೀಡುವ ಪ್ರತ್ಯೇಕ ಮೀಸಲಾತಿಯು ಅಸಿಂಧುಗೊಳಿಸಿತು. | ತೀರ್ಪುಗಳು ಜಾರಿಗೊಂಡಿದ್ದು | |
ಸಾಮಾನ್ಯವಾಗಿ ಮ್ಯಾನೇಜರ್,ಎಸ್. ರೈಲ್ವೆ. v. ರಂಗಾಚಾರಿ AIR 1962 SC 36, ಪಂಜಾಬ ರಾಜ್ಯ v. ಹಿರಾಲಾಲ್ 1970(3) SCC 567, ಅಖಿಲ ಭಾರತೀಯ ಶೋಷಿತ ಕರ್ಮಚಾರಿ ಸಂಘ (ರೈಲ್ವೆ) v. ಯುನಿಯನ್ ಆಫ್ ಇಂಡಿಯಾof India (1981) 1 SCC 246 ಇದರಲ್ಲಿ ಮೀಸಲಾತಿ ಮೂಲಕ ನೇಮಕ ಅಥವಾ ನಿಯಮಾವಳಿ (Article) 16(4) ಇದರಲ್ಲಿ ಭಡ್ತಿಗಳೂ ಸೇರಿವೆ. ಇದನ್ನು ಇಂದಿರಾ ಸಹಾನಿ & Ors v ಯುನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮೀರಿದ ತೀರ್ಪು ಬಂದಿದೆ AIR 1993 SC 477 : 1992 Supp (3) SCC 217 ಇದರಲ್ಲಿ ಬಡ್ತಿಯಲ್ಲಿ ಮೀಸಲಾತಿಗಳನ್ನು ಅಳವಡಿಸಲಾಗುವುದಿಲ್ಲ.ಯುನಿಯನ್ ಆಫ್ ಇಂಡಿಯಾ Vs ವರ್ಪಾಲ್ ಸಿಂಗ್ AIR 1996 SC 448,ಅಜಿತ್ ಸಿಂಗ್ ಜನುಜಾ & (ಅದರ್ಸ್ )Ors Vs ಪಂಜಾಬ ರಾಜ್ಯ AIR 1996 SC 1189,ಅಜಿತ್ ಸಿಂಗ್ ಜನುಜಾ & Ors Vs ಪಂಜಾಬ ರಾಜ್ಯ & ಅದರ್ಸ Ors AIR 1999 SC 3471,M.G. ಬಡಪ್ಪನವರ್ Vs ಕರ್ನಾಟಕ ರಾಜ್ಯ 2001 (2) SCC 666. | ಅಶೋಕಕುಮಾರ್ ಗುಪ್ತಾ: ವಿದ್ಯಾಸಾಗರ ಗುಪ್ತಾ Vs ಉತ್ತರ ಪ್ರದೇಶ ರಾಜ್ಯ. 1997 (5) SCC 20177th ಸಾಂವಿಧಾನಿಕ ತಿದ್ದುಪಡಿ (Art 16(4 A) & (16 4B) ತೀರ್ಪನ್ನು ಅಸಿಂಧು ಮಾಡಲು ಈ ಕಾನೂನು ತಿದ್ದುಪಡಿ.ಎಂ. ನಾಗರಾಜ್ & ಅದರ್ಸ್ v. ಯುನಿಯನ್ ಆಫ್ ಇಂಡಿಯಾ ಮತ್ತು ಅದರ್ಸ್. AIR 2007 SC 7 ತಿದ್ದುಪಡಿಗಳನ್ನು ಸಾಂವಿಧಾನಿಕವಾಗಿ ಇವೆ ಎನ್ನಲು ಈ ತಿದ್ದುಪಡಿ.1. ಆರ್ಟ್. 16(4)(A) ಮತ್ತು 16(4)(B) ಈ ನಿಯಮಾವಳಿಯಿಂದ ಮುಂದುವರೆದಿದ್ದು (Art). 16(4). ಈ ಸಾಂವಿಧಾನಿಕ ತಿದ್ದುಪಡಿಗಳು (ಆರ್ಟ್ )ವಿಧಿ-ವಿಧಾನದ ರಚನೆಯನ್ನು ಬದಲಾಯಿಸಲಾರವು. 16(4).2. ಹಿಂದುಳಿದಿರುವಿಕೆ ಮತ್ತು ಪ್ರಾತಿನಿಧ್ಯದಲ್ಲಿನ ಕೊರತೆಯು ಇದನ್ನು ನಿಯಂತ್ರಿಸುವ/ಕಡ್ಡಾಯಗೊಳಿಸುವ ಕಾರಣಗಳು ರಾಜ್ಯಗಳ ಆಡಳಿತಗಳು ಮೀಸಲಾತಿಯನ್ನು ಅಳವಡಿಸುವಂತೆ ಕಡ್ಡಾಯ/ಅನಿವಾರ್ಯಗೊಳಿಸುತ್ತಿವೆ.3. ಸರ್ಕಾರವು ಈ ಮೀಸಲಾತಿಯಲ್ಲಿ ವರ್ಗೀಕರಣದ ಕೇಡರ್ ಗಳ ಪ್ರಕಾರ ಪಟ್ಟಿ ಸಿದ್ದಪಡಿಸಿ ವರ್ಗ/ಸಮೂಹಗಳಿಗೆ ಸೇವೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಿದೆ ಎಂದು ಹೇಳಬೇಕಾಗುತ್ತದೆ. ನೇಮಕಾತಿಯ ಅನುಕ್ರಮಣ ಪಟ್ಟಿಯಲ್ಲಿ ಅಂತರ್ಗತ ಪರಿಕಲ್ಪನೆ ಪ್ರಕಾರ ಇದರ ಸ್ಥಾನಪಲ್ಲಟಕ್ಕೆ ಸಂಬಂಧಿಸಿದ್ದು ಆದರೆ ಸೇವೆಗಳ ಮೂಲಾಧಾರ ಅಲ್ಲ.4. ಯಾವುದೇ ಅಧಿಕಾರಿ ಘಟಕವು ಹಿಂದುಳಿದವರ್ಗಕ್ಕೆ/ಪಂಗಡಕ್ಕೆ ಪ್ರಾತಿನಿಧ್ಯದ ಕೊರತೆ ಕಂಡುಕೊಂಡರೆ ಅಲ್ಲಿ ನೇರ ನೇಮಕಾತಿಗೆ ಅವಕಾಶ ನೀಡಿ ಮುಕ್ತವಾಗಿ ಇದನ್ನು ಅಳವಡಿಸಬೇಕಾಗುತ್ತದೆ.5. ಹಿಂದುಳಿದ ವರ್ಗಗಳ ಮೀಸಲಾತಿ ತುಂಬದ ಸ್ಥಾನಗಳು ವಿಶಿಷ್ಟ ಗುಂಪು ಎಂದು ಪರಿಗಣಿಸಿ ಅದರ ಪರಿಮಿತಿಯನ್ನು 50% ಕ್ಕೆ ಸೀಮಿತಗೊಳಿಸಲಾಗದು.6. ಮೀಸಲಾತಿ ಅಡಿಯ ಅಭ್ಯರ್ಥಿಯು ಸಾಮಾನ್ಯ ವರ್ಗದಡಿ ಆಯ್ಕೆಯಾದರೆ ಅದನ್ನು ಮೀಸಲಾತಿಗೆ ಸಂಬಂಧಿಸಿದ ನೇಮಕ ಎಂದು ಹೇಳಲಾಗದು.ಮೀಸಲಾತಿ ಅಭ್ಯರ್ಥಿಯು ಸಾಮಾನ್ಯ ವರ್ಗದಲ್ಲಿ ಪೈಪೋಟಿ ಮಾಡಬಹುದಾಗಿದೆ.7. ಮೀಸಲಾತಿ ವರ್ಗದ ಅಭ್ಯರ್ಥಿಯು ಸಾಮಾನ್ಯ ವರ್ಗದಡಿ ಬಡ್ತಿಯಲ್ಲಿ ಸ್ಪರ್ಧಿಸಿ ಅದನ್ನು ಸಾಮಾನ್ಯ ಕೋಟಾದಡಿ ಸ್ಥಾನವನ್ನು ಪಡೆಯುವ ಸ್ವಯಂ ಹಕ್ಕಿನಡಿ ಆತನಿಗೆ ಅವಕಾಶವಿದೆ. ಅವರ ಆಯ್ಕೆಯ ನಂತರ ಅವರನ್ನು ಸಾಮಾನ್ಯ ಸ್ಥಾನದಲ್ಲಿ ರೋಸ್ಟರ್ ಪ್ರಕಾರ ಹೊಂದಾಣಿಕೆ ಮಾಡಬಹುದು.ಅದೇ ಪ್ರಕಾರ ರೋಸ್ಟರ್ ಅನುಕ್ರಮದ ವರ್ಗದ ದರ್ಜೆಯಲ್ಲಿ ಅವರು ಅದರ ಸಮಸ್ಥಾನಕ್ಕೂ ಸ್ಪರ್ಧಿಸಬಹುದಾಗಿದೆ.8. ಪ್ರತಿಯೊಂದು ಸ್ಥಾನಕ್ಕೆ ಮೀಸಲಿರುವ ಹಿಂದುಳಿದ ವರ್ಗದ ಅಭ್ಯರ್ಥಿಯ ಜಾಗೆಯಲ್ಲಿ ಅದೇ ವರ್ಗದ ಅಭ್ಯರ್ಥಿಯ ನೇಮಕ ಕಡ್ಡಾಯವಾಗಿದ್ದು ಖಾಲಿ ಸ್ಥಾನವನ್ನು ಅದೇ ವರ್ಗದ ಅಭ್ಯರ್ಥಿಯಿಂದ ಮಾತ್ರ ತುಂಬತಕ್ಕದ್ದು.(ಸ್ಥಾನಪಲ್ಲಟ ನಿಯಮದಂತೆ)ಆರ.ಕೆ.ಸಭರ್ ವಾಲ್ Vs ಪಂಜಾಬ್ ರಾಜ್ಯ AIR 1995 SC 1371 : (1995) 2 SCC 745.ರೋಸ್ಟರ್ ಪದ್ದತಿಯ ನೇಮಕಾತಿಯಲ್ಲಿ ಈ ಸ್ಥಾನ ತುಂಬಲು ಅದೇ ವರ್ಗದ-ಬಲದ ವ್ಯಕ್ತಿಯ ಆಯ್ಕೆ ಸಮಂಜಸವಾಗಿದೆ,ಇದು 50% ರ ಸೀಮಿತದಲ್ಲಿರಬೇಕು. | |
ಯುನಿಯನ್ ಆಫ್ ಇಂಡಿಯಾದಲ್ಲಿ Vs ವರ್ಫ್ಪಾಲ್ ಸಿಂಗ್ AIR 1996 SC 448 ಮತ್ತು ಅಜಿತ್ ಸಿಂಗ್ ಜನುಜಾ & ಅದರ್ಸ್ Vs ಪಂಜಾಬ್ ರಾಜ್ಯ AIR 1996 SC 1189 ಈ ಪ್ರಕರಣದಲ್ಲಿ ಬಡ್ತಿ ವಿಚಾರದಲ್ಲಿ ಅವರ ಸೇವಾ ಹಿರಿತನಕ್ಕಿಂತ ಅವರ ಕೆಟಗರೀಸ್ ವರ್ಗೀಕರಣಕ್ಕೆ ಸಂಬಂಧಿಸಿದ್ದು ಅದನ್ನು ಅಭ್ಯರ್ಥಿಗಳು ಸಾಮಾನ್ಯ ವರ್ಗದ ಅಭ್ಯರ್ಥಿಗಳೊಂದಿಗೆ ಹೋಲಿಸಲಾಗದೇ ನೇರವಾಗಿ ಬಡ್ತಿಗೆ ಪಾತ್ರರಾಗುತ್ತಾರೆ.ಇದು ನಿಯಂತ್ರಣ ಸಮಿತಿಯ ಸಲಹೆ ಮೇರೆಗೆ ಪರಿಗಣಿಸಲಾಗುತ್ತದೆ. ಇದನ್ನು ಜಗದೀಶ್ ಲಾಲ್ ಮತ್ತಿತರರು ಹಾಗು ಹರ್ಯಾಣಾ ರಾಜ್ಯದ ಮತ್ತು ಇತರರ (1997) 6 SCC 538 ಪ್ರಕರಣದಲ್ಲಿ ಹಿಂದೆ ತೆಗೆದು ಅದನ್ನು ಮೀರಿ ನಿರ್ಣಯಗಳ ತೆಗೆದುಕೊಳ್ಳಲಾಯಿತು.ಅಧಿಕೃತ ಕಚೇರಿ ಕಾರ್ಯದಲ್ಲಿ ಅವರ ಬಡ್ತಿಯನ್ನು ಪರಿಗಣಿಸಿ ರೊಸ್ಟರ್ ಆಧಾರದಲ್ಲಿ ಕ್ರಮ ಕೈಗೊಳ್ಳಲಾಯಿತು.ಅಂದರೆ ನಿರಂತರ ಸೇವಾವಧಿ ಕೂಡ ಇಲ್ಲಿ ಬಡ್ತಿಗೆ ಅನುಕೂಲವಾಗಲಿದೆ ಎಂದು ಸೂಚಿಸಲಾಯಿತು.ಅಜಿತ್ ಸಿಂಗ್ ಜನುಜಾ & ಅದರ್ಸ್ Vs ಪಂಜಾಬ್ ರಾಜ್ಯ & Ors AIR 1999 SC 3471 ಇದರಲ್ಲಿ ಜಗದೀಶ್ ಲಾಲ್,ಎಂ.ಜಿ. ಬಡಪ್ಪನವರ್ Vs ಕರ್ನಾಟಕ ರಾಜ್ಯ 2001(2) SCC 666 : AIR 2001 SC 260 ಇಅರ ಪ್ರಕಾರ ರೊಸ್ಟರ್ ಪದ್ದತಿಯ ಬಡ್ತಿಗಳು ಕೆಲ ತಾತ್ಕಾಲಿಕ ಸಮಯಕ್ಕೆ ಮಾತ್ರ ಸೀನಿತವಾಗಿದ್ದು,ವಿಶೇಷ ಉದ್ದೇಶಗಳ ಈಡೇರಿಕೆಗೆ ಅನುಕೂಲವಾಗುತ್ತದೆ.ಆದರೆ ರೊಸ್ಟರ್ ಪದ್ದತಿಗನುಗುಣವಾಗಿ ಸ್ಥಾನ ಪಲ್ಲಟಗೊಳ್ಳುವ ಅಭ್ಯರ್ಥಿಯು ಸಾಮಾನ್ಯ ಅಭ್ಯರ್ಥಿಯ ಸೇವಾ ಹಿರಿತನವನ್ನು ಸರಿಗಟ್ಟಲಾಗದು.ಹೀಗಾಗಿ ಸಾಂದರ್ಭಿಕ ಬಡ್ತಿಗಳು ಸಾಮಾನ್ಯ ವ್ಯಕ್ತಿಗಳ ಬಡ್ತಿಗೆ ಪೂರಕವಲ್ಲ ಎಂದು ವಿವರಿಸಲಾಯಿತು. | ಈ ಅನುಗತ ಸೇವಾ ಹಿರಿತನದ ಬಗ್ಗೆ ಸಂವಿಧಾನದ 85ನೆಯ ತಿದ್ದುಪಡಿಯನ್ನು Art 16 (4)(A) ನಲ್ಲಿ ಸೇರಿಸಲಾಗಿದೆ.ಇದರಿಂದ ಅಸ್ತಿತ್ವದಲ್ಲಿರುವ ತೀರ್ಪು ಸಿಂಧುವಾಗುವುದಿಲ್ಲ.ಎಂ. ನಾಗರಾಜ & ಅದರ್ಸ್ v. ಯುನಿಯನ್ ಆಫ್ ಇಂಡಿಯಾ ಮತ್ತು ಅದರ್ಸ್ . AIR 2007 SC 71 ಪ್ರಕಾರ ತಿದ್ದುಪಡಿಗಳು ಸಂವಿಧಾನಾತ್ಮಕವಾಗಿವೆ ಎಂದು ಹೇಳುತ್ತದೆ.ಜಗದೀಶ್ ಲಾಲ್ ಮತ್ತು ಇತರರು v.ಹರ್ಯಾಣಾ ರಾಜ್ಯ ಮತ್ತಿತರರು (1997) 6 SCC 538 ಇಲ್ಲಿ ನಿರಂತರ ಅಧಿಕೃತ ಕಚೇರಿ ಸೇವಾವಧಿಯನ್ನು ಪರಿಗಣಿಸಲಾಗುತ್ತದೆ.ರೊಸ್ಟರ್ ಮೂಲಕ ಬಡ್ತಿಗೆ ಅವರು ಭಾಧ್ಯರಾಗುತ್ತರಲ್ಲದೇ ಸೇವಾ ಹಿರಿತನದ ಸವಲತ್ತುಗಳಿಗೂ ಭಾಧ್ಯಸ್ತರಾಗಿರುತ್ತಾರೆ. | |
ಎಸ್. ವಿನೋದಕುಮಾರ್ Vs. ಯುನಿಯನ್ ಆಫ್ ಇಂಡಿಯಾ 1996 6 SCC 580 ಅಹರತೆಗೆ ಬೇಕಾಗುವ ಅಂಕಗಳು ಮತ್ತು ಮೌಲ್ಯಮಾಪನದ ಮೀಸಲಾತಿ ಅಂಶಗಳು ಬಡ್ತಿಯಲ್ಲಿ ಪರಿಗಣಿಸಲಾಗುವುದಿಲ್ಲ. | ಸಾಂವಿಧಾನಿಕ (82ನೆಯ) ತಿದ್ದುಪಡಿ ಕಾನೂನನ್ನು ನಿಯಮಾವಳಿ ಆರ್ಟ್ 335 ಗೆ ಕೊನೆಯಲ್ಲಿ ಸೇರಿಸಲಾಯಿತು.ಎಂ. ನಾಗರಾಜ್ & ಅದರ್ಸ್ v. ಯುನಿಯನ್ ಆಫ್ ಇಂಡಿಯಾ ಅಂಡ್ ಅದರ್ಸ್. AIR 2007 SC 71 ಇದು ತಿದ್ದುಪಡಿಗಳು ಸಾಂವಿಧಾನಿಕವಾಗಿ ಸಿಂಧು ಎಂದು ಹೇಳಿತು. | |
1994 | ಸರ್ವೋಚ್ಚ ನ್ಯಾಯಾಲಯವು 50% ರ ಮಿತಿಯನ್ನು ಪಾಲಿಸುವಂತೆ ಸಲಹೆ ಮಾಡಿತು. | ತಮಿಳು ನಾಡು ಮೀಸಲಾತಿಗಳು ಸಂವಿಧಾನದ 9ನೆಯ ಶೆಡುಲ್ಯುನಡಿ ಸೂಚಿಸಲಾಗಿದೆ.ಐ.ಆರ್. ಕೊಯಿಲೊ(ಮೃತ) LRS.ನಿಂದ Vs. ತಮಿಳುನಾಡು ರಾಜ್ಯ T.N. 2007 (2) SCC 1 : 2007 AIR(SC) 861 ಇದರ ಪ್ರಕಾರ ಸಂವಿಧಾನದ ಈ ಒ(ಬತ್ತನೆಯ) ಶೆಡ್ಯುಲ್ ಕಾನೂನಡಿ ಇದರ ತೀರ್ಪುಗಳನ್ನು ಇನ್ನೊಂದು ಸಾರಿ ಸವಾಲೊಡ್ಡದಂತೆ ಅದು ಸೂಚಿಸಿತು.ಇಂತಹ ಕಾನೂನುಗಳು ಯಾವಾಗಲೂ ನಿಯಮಾವಳಿಗೆ ಸ್ವಾಧೀನವಾಗಿವೆ ಎಂದೂ ಪ್ರತಿಪಾದಿಸಿತು. ಯಾವುದೇ ಕಾನೂನು ಭಾಗ III ರ ನಿಯಮಗಳನ್ನು ಉಲ್ಲಂಘಿಸಿದರೆ ಅದಕ್ಕೆ ಪೂರಕವಾದ ನಿಯಮಾವಳಿಗಳನ್ನು ಒಂಬಂತ್ತನೆಯ ಶೆಡ್ಯುಲ್ ನಲ್ಲಿ, ಇದನ್ನು 1973 ರ ಏಪ್ರಿಲ್ 24 ರ ವಿಧಿನಿಯಮದಲ್ಲಿ ನಮೂದಿಸಲಾಗಿದೆ.ಇಂತಹ ಯಾವುದೇ ಉಲ್ಲಂಘನೆ/ ಹಕ್ಕು ಭಂಗದ ಪ್ರಕರಣವನ್ನು ನ್ಯಾಯಾಲಯದಲ್ಲಿ ಮುಕ್ತವಾಗಿ ಪ್ರಶ್ನಿಸಬಹುದಾಗಿದೆ.ವಿಧಿ ಅಥವಾ ಕಲಮು 21 ರಲ್ಲಿ ತಿಳಿಸಿದಂತೆ ಇದರ ಜೊತೆಗೆ ವಿಧಿ 14 ನ್ನೂ ಸೇರಿಸಲಾಗಿದೆ.ಅದರೊಂದಿಗೆ 19 ವಿಧಿಯನ್ನು ಉಲ್ಲೇಖ ಮಾಡುವ ನಿಯಮಗಳನ್ನು ಇಲ್ಲಿ ಬಳಸಿಕೊಳ್ಳಬಹುದಾಗಿದೆ. ಕ್ರಮ ಕೈಗೊಂಡ ಅಥವಾ ಆಕ್ರಮಣಕಾರಿ ಎನಿಸುವ ಕ್ರಮಗಳನ್ನು ಮುಕ್ತವಾಗಿ ಪ್ರಶ್ನಿಸಲಾಗದು. |
2005 | ಉನ್ನಿ ಕೃಷ್ಣನ್ , ಜೆ.ಪಿ. & ಅದರ್ಸ್. Vs.ಆಂಧ್ರಪ್ರದೇಶ ರಾಜ್ಯ & ಅದರ್ಸ್. (1993 (1) SCC 645) ಇದರಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಕ್ರಿಯೆಯು ವ್ಯವಹಾರ-ವ್ಯಾಪಾರವಲ್ಲ ಅಥವಾ ಅದು ವೃತ್ತಿಪರರು, ವಿಧಿ 19(1)(g)ನಲ್ಲಿ ಸೂಚಿಸಿರುವಂತೆ ಮಾಡುವ ಕೆಲಸದ ವಿವರಣೆಯಲ್ಲ. ಇದನ್ನು ನಂತರ ಟಿ.ಎಂ.ಎ. ಪೈ ಪ್ರತಿಷ್ಟಾನ v. ಕರ್ನಾಟಕ ರಾಜ್ಯof (2002) 8 SCC 481,ಪಿ.ಎ.ಇನಾಮ್ದಾರ್ v. ಮಹರಾಷ್ಟ್ರ ರಾಜ್ಯ 2005 AIR(SC) 3226 ಇದರಲ್ಲಿ ಸರ್ವೋಚ್ಚ ನ್ಯಾಯಾಲಯವು ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಮೀಸಲಾತಿಗಳನ್ನು ಹೇರುವಂತಿಲ್ಲ ಎಂದು ಸೂಚಿಸಿತು.ಇದನ್ನು ಹೀಗೆ ಹಿಂದಕ್ಕೆ ಸರಿಸಲಾಯಿತು. | 93 ನೆಯ ಸಾಂವಿಧಾನಿಕ ತಿದ್ದುಪಡಿ ವಿಧಿ 15(5) ನ್ನು ಜಾರಿಗೊಳಿಸಿತು.ಅಶೋಕಕುಮಾರ್ ಠಾಕೂರ್ vs. ಯುನಿಯನ್ ಆಫ್ ಇಂಡಿಯಾ [೧೦] 1. ಸಂವಿಧಾನದ (ತೊಂಬತ್ಮೂರನೆಯ ತಿದ್ದುಪಡಿ)ಕಾನೂನು,2005 ಇದು ಸಂವಿಧಾನದ "ಮೂಲ ಆಶಯ"ವನ್ನು ಕಡೆಗಣಿಸುವುದಿಲ್ಲ.ಇಲ್ಲಿ ರಾಜ್ಯ ಉಸ್ತುವಾರಿಯ ಸಂಸ್ಥೆಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳು ಇದಕ್ಕೆ ಸಂಬಂಧಿಸಿದವುಗಳಲ್ಲ. "ಇಲ್ಲಿ ಪ್ರಶ್ನೆಯೆಂದರೆ ಸಂವಿಧಾನದ (ತೊಂಬತ್ಮೂರನೆಯ ತಿದ್ದುಪಡಿ)2005 ರ ಕಾನೂನು ಸಾಂವಿಧಾನಿಕವಾಗಿ ಸಿಂಧುವೇ ಅಥವಾ ಅಸಿಂಧುವೇ ಎಂಬುದು "ಖಾಸಗಿ ಅನುದಾನರಹಿತ"ಶಿಕ್ಷಣ ಸಂಸ್ಥೆಗಳು ಇದಕ್ಕೆ ಸಂಬಂಧಿಸಿವೆಯೇ ಎಂಬುದನ್ನು ಕಾದು ನೋಡಬೇಕಾಗುತ್ತದೆ,ಇದನ್ನು ಸೂಕ್ತ ಪ್ರಕರಣದಡಿ ಪರಿಶೀಲಿಸಬೇಕಾಗುತ್ತದೆ.2.ಕೆನೆ ಪದರು "ಕೂಡಾ ಹಿಂದುಳಿದ ವರ್ಗದವರನ್ನು ಗುರುತಿಸುವ ಒಂದು ಪ್ರಮುಖ ಮಾನದಂಡವಾಗಿದೆ. ಆದ್ದರಿಂದ ತಾತ್ವಿಕವಾಗಿ "ಕೆನೆ ಪದರು"ತತ್ವವನ್ನು STs ಮತ್ತು SCs, ಗಳಿಗೆ ಅನ್ವಯಿಸಲಾಗುವುದಿಲ್ಲ,ಏಕೆಂದರೆ STs ಮತ್ತು SCs ಗಳು ಪ್ರತ್ಯೇಕವಾಗಿ ಅವರದೇ ವರ್ಗಕ್ಕೆ ಸೇರಿರುತ್ತಾರೆ.3. ಆದ್ಯತೆಗನುಸಾರವಾಗಿ ಹತ್ತು ವರ್ಷಕ್ಕೊಮ್ಮೆ ಇದನ್ನು ಸಾಂದರ್ಭಿಕವಾಗಿ ಬದಲಾವಣೆಗೆ ಒಳಪಡುತ್ತದೆ.4. ಕೇವಲ ಒಂದು ಪದವಿ (ತಾಂತ್ರಿಕ ಶಿಕ್ಷಣದ ಪದವಿಯಲ್ಲ) ಅಥವಾ ವೃತ್ತಿಪರರು ಶೈಕ್ಷಣಿಕವಾಗಿ ಮುಂದುವರೆದವರೆಂದು ಹೇಳಲಾಗದು.5. ಕೆನೆ ಪದರು ತೆಗೆದು ಹಾಕುವ ತತ್ವವು OBC'ಗಳಿಗೆ ಮಾತ್ರ ಅಳವಡಿಕೆಯಾಗುತ್ತದೆ.6. ಕೇಂದ್ರ ಸರ್ಕಾರವು ಇನ್ನುಳಿದ ಹಿಂದುಳಿದ ವರ್ಗಗಗಳ (OBCs)ಅಭ್ಯರ್ಥಿಗಳಿಗೆ ನೀಡುವ ಅಂಕಗಳ ಪ್ರಮಾಣವು ಇನ್ನಿತರ ಸಾಮಾಜಿಕ ಹಿತಾಸಕ್ತಿಗಳ ರಕ್ಷಣೆ ಹಾಗು ಪ್ರತಿಭೆಯ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಇದರಿಂದ ಗುಣಮಟ್ಟ ಮತ್ತು ಪ್ರತಿಭೆ ಘಾಸಿಗೊಳಗಾಗುವುದಿಲ್ಲ ಇಂತಹ ನಿಯಮಾವಳಿಗಳ ಪಾಲಿಸಿದ ನಂತರ ಖಾಲಿ ಉಳಿದ ಸ್ಥಾನಗಳಿಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನು ನೇಮಕ ಮಾಡಬಹುದು.7. ಸದ್ಯ ಹಿಂದುಳಿದ ವರ್ಗಗಳ ಬಗೆಗಿನ ನಿರ್ಧಾರ ಕುರಿತಂತೆ ಭಾರತದ ಕೇಂದ್ರ ಒಕ್ಕೂಟ ಸರ್ಕಾರವು (ಕೇಂದ್ರ ಸರ್ಕಾರ) ಒಂದು ತಿಳಿವಳಿಕೆ ಸೂಚನೆ ನೀಡಬೇಕಾಗುತ್ತದೆ. ಕೆನೆಪದರಿನ ಅಭ್ಯರ್ಥಿಗಳನ್ನು ತೆಗೆದ ನಂತರ ಕೇಂದ್ರ ಸರ್ಕಾರವು ಇದನ್ನು ಮಾಡಬೇಕಾಗುತ್ತದೆ,ಇದಕ್ಕಾಗಿ ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಅಗತ್ಯ ಅಂಕಿಅಂಶಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಇಂತಹ ತಿಳಿವಳಿಕೆಯ ಪತ್ರವನ್ನು ಅದರಲ್ಲಿ ತಪ್ಪಾಗಿ ಸೇರಿದ ಅಥವಾ ಬಿಟ್ಟುಹೋದ ವಿಷಯಗಳ ಕುರಿತು ಪ್ರಶ್ನಿಸಬಹುದಾಗಿದೆ. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತದ ಪ್ರದೇಶಗಳಲ್ಲಿನ ನೈಜ ಪರಿಸ್ಥಿತಿ ಅವಲೋಕಿಸಿ ತಕ್ಕ ನಿಯಮಾವಳಿ ರಚಿಸಬೇಕಾಗುತ್ತದೆ. ಹೀಗೆ ಇನ್ನಿತರ ಹಿಂದುಳಿದ ವರ್ಗಗಳನ್ನು (OBCs.) ಸೂಕ್ತ-ಸರಿಯಾದ ಕ್ರಮದಲ್ಲಿ ಗುರುತಿಸಬೇಕಾಗುತ್ತದೆ. ಈ ಹಿಂದುಳಿದ ವರ್ಗಗಳ ಗುರುತಿಸಲು ನೇಮಕವಾದ ಆಯೋಗವು ಹೇಗೆ ಪಾಲಿಸಬೇಕೆಂಬುದನ್ನು ಇಂದ್ರ ಸಾಹನಿ 1 ಪ್ರಕರಣದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ.ಕೇವಲ ಯಾರನ್ನು ತೆಗೆದುಹಾಕಬೇಕು ಯಾರನ್ನು ಸೇರಿಸಬೇಕೆಂಬುದನ್ನು ಮಾತ್ರ ಅಭಸಿಸುವಂತಿಲ್ಲ.8. ಸಂಸತ್ತು ಇದಕ್ಕಾಗಿ ಸಮಯಾವಧಿಯನ್ನು ನಿಗದಿ ಮಾಡಿ ಯಾವ ಮಗು ದೇಶದಲ್ಲಿನ ಮೂಲಭೂತ ಶಿಕ್ಷಣಕ್ಕೆ ತನ್ನನ್ನು ತೊಡಗಿಸಿಕೊಂಡಿದೆಯೇ ಎಂದು ನೋಡಬೇಕು. ಇದನ್ನು ಆರು ತಿಂಗಳಲ್ಲೇ ಮಾಡಬೇಕು.ಯಾಕೆಂದರೆ ಮುಕ್ತ ಹಾಗು ಕಡ್ಡಾಯ ಶಿಕ್ಷಣವು ಅತ್ಯಂತ ಆದ್ಯತೆಯ ಮೂಲಭೂತ ಹಕ್ಕಾಗಿದೆ.(Art.21 A) ಶಿಕ್ಷಣವಿಲ್ಲದೇ ಇನ್ನುಳಿದ ಹಕ್ಕುಗಳ ಬಗ್ಗೆ ಅವುಗಳ ಆಚರಣೆ ಬಗ್ಗೆ ತಿಳಿಯುವುದು ಅತ್ಯಂತ ಕಠಿಣ ಕೆಲಸವಾಗಿದೆ.9. ಯಾವ ಶಿಕ್ಷಣ ಸಂಸ್ಥೆಯು ತನ್ನನ್ನು ಮೀಸಲಾತಿ ವರ್ಗೀಕರಣದಲ್ಲಿ ಸೇರಿಸಬೇಕೆ ಬೇಡವೆ ಎಂಬ ಬಗ್ಗೆ ಅಗತ್ಯ ಕಾಗದಪತ್ರ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ.ಯಾವ ಶೆಡ್ಯುಲ್ ನಲ್ಲಿ ಇದು ಒಳಗೊಳ್ಳುತ್ತದೆ.(ಮೀಸಲಾತಿ ಪಟ್ಟಿಯಿಂದ ಹೊರಗಿರುವ ಶಿಕ್ಷಣ ಸಂಸ್ಥೆಗಳು)ಹೀಗೆ ಶಿಕ್ಷಣ ಸಂಸ್ಥೆಯು ಕೇಂದ್ರಕ್ಕೆ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ ಅದನ್ನು ಯಾವ ವರ್ಗಕ್ಕೆಸೇರಿಸ ಬೇಕೆಂಬುದನ್ನು ನಿಯಮಾವಳಿಗಳು 4 ರಲ್ಲಿ ಮೇಲೆ ತಿಳಿಸಲಾದ ಕಾನೂನಲ್ಲಿ ಪರಿಗಣಿಸಲಾಗುತ್ತದೆ.10. ಇದರ ಪ್ರಕಾರ SEBC ಗಳ ಗುರುತಿಸುವಿಕೆಯು ಸಾಮಾನ್ಯವಾಗಿ ಜಾತಿಯ ಮೇಲೆಯೇ ನಡೆಯುತ್ತದೆ.ಆದ್ದರಿಂದ SEBC ಗಳ ಗುರುತಿಸುವಿಕೆಯು ಸಂವಿಧಾನದ ವಿಧಿ ಅಥವಾ ಕಲುಮು 15(1)ನ್ನು ಉಲ್ಲಂಘಿಸಲಾರದು. |
ಪ್ರಸ್ತುತ ಪ್ರಕರಣಗಳು
- ನೋಡಿ,ಭಾರತ ಸಂವಿಧಾನದಲ್ಲಿನ ಕಲಮುಗಳು 12, 14, 15, 16, 19, 335
- ಮದ್ರಾಸ್ ರಾಜ್ಯ Vs. ಶ್ರ್ರೀಮತಿ. ಚಂಪಕಮ್ ದೊರೈರಂಜನ್ AIR 1951 SC 226
- ಜನರಲ್ ಮ್ಯಾನೇಜರ್,ಎಸ್.ರೈಲ್ವೆ v.ರಂಗಾಚಾರಿ AIR 1962 SC 36
- ಎಂ ಆರ್ ಬಾಲಾಜಿ v. ಮೈಸೂರು ರಾಜ್ಯ AIR 1963 SC 649
- ಟಿ. ದೇವದಾಸನ್ v ಯುನಿಯನ್ AIR 1964 SC 179.
- ಸಿ. ಎ. ರಾಜೇಂದ್ರನ್ v. ಯುನಿಯನ್ ಆಫ್ ಇಂಡಿಯಾ AIR 1965 SC 507.
- ಚಾಮರಾಜ v ಮೈಸೂರು AIR 1967 Mys 21
- ಬೇರಿಯಮ್ ಕೆಮಿಕಲ್ಸ್ ಲಿ. Vs ಕಂಪನಿ ಲಾ ಬೋರ್ಡ್ AIR 1967 SC 295
- ಪಿ. ರಾಜೇಂದ್ರನ್ Vs. ಮದ್ರಾಸ್ ರಾಜ್ಯ AIR 1968 SC 1012
- ತ್ರಿಲೋಕ ನಾಥ Vs. ಜಮ್ಮು ಮತ್ತು ಕಾಶ್ಮೀರ್ ರಾಜ್ಯ AIR 1969 SC 1
- ಪಂಜಾಬ್ ರಾಜ್ಯ vs. ಹೀರಾ ಲಾಲ್ 1970(3) SCC 567
- ಸ್ಟೇಟ್ ಆಫ್ ಎ.ಪಿ Vs ಯು.ಎಸ್.ವಿ. ಬಲರಾಮ್ AIR 1972 SC 1375
- ಕೇಶವಾನಂದ ಭಾರತಿ v ಸ್ಟೇಟ್ ಆಫ್ ಕೇರಳ AIR 1973 SC 1461
- ಸ್ಟೇಟ್ ಆಫ್ ಕೇರಳ Vs ಎನ್. ಎಂ. ಥಾಮಸ್ AIR 1976 SC 490 : (1976) 2 SCC 310
- ಜಯಶ್ರೀ Vs. ಸ್ಟೇಟ್ ಆಫ್ ಕೇರಳ AIR 1976 SC 2381
- ಮಿನರ್ವಾ ಮಿಲ್ಸ್ ಲಿ .Vs ಯುನಿಯನ್ (1980) 3 SCC 625 : AIR 1980 SC 1789
- ಅಜಯ್ ಹಸಿಯಾ v ಖಾಲಿದ್ ಮುಜಿಬ್ AIR 1981 SC 487
- ಅಖಿಲ ಭಾರತೀಯ್ಹ ಶೋಷಿತ ಕರ್ಮಚಾರಿ ಸಂಘ Vs ಯುನಿಯನ್(1981) 1 SCC 246
- ಕೆ. ಸಿ. ವಸಂತ ಕುಮಾರ v. ಕರ್ನಾಟಕ AIR 1985 SC 1495
- ಕಂಟ್ರೋಲರ್ & ಆಡಿಟರ್-ಜನರಲ್ ಆಫ್ ಇಂಡಿಯಾ, ಗ್ಯಾನ್ ಪ್ರಕಾಶ್ Vs ಕೆ. ಎಸ್. ಜಗನ್ನಾಥನ್(1986) 2 SCC 679
- ಇಂದುಸ್ತಾನ್ ಜಿಂಕ್ ಲಿ. Vs ಎ. ಪಿ. ಸ್ಟೇಟ್ ಎಲ್ಕ್ಟ್ರಿಸಿಟಿ ಬೋರ್ಡ್ (1991) 3SCC 299
- ಇಂದಿರಾ ಸಹಾನಿ & ಅದರ್ಸ್v. ಯುನಿಯನ್ ಆಫ್ ಇಂಡಿಯಾ AIR 1993 SC 477 : 1992 Supp (3) SCC 217
- ಉನ್ನಿ ಕೃಷ್ಣನ್ v. ಸ್ಟೇಟ್ ಆಫ್ ಎ.ಪಿ. ಮತ್ತು ಅದರ್ಸ್. (1993 (1) SCC 645)
- ಆರ್ ಕೆ K ಸಭರ್ ವಾಲ್ Vs ಸ್ಟೇಟ್ ಆಫ್ ಪಂಜಾಬ್ AIR 1995 SC 1371 : (1995) 2 SCC 745
- ಯುನಿಯನ್ ಆಫ್ ಇಂಡಿಯಾ Vs ವರ್ಪಾಲ್ ಸಿಂಗ್ AIR 1996 SC 448
- ಅಜಿತ್ ಸಿಂಗ್ ಜುನುಜಾ & ಅದರ್ಸ್ Vs ಸ್ಟೇಟ್ ಆಫ್ ಪಂಜಾಬ್ AIR 1996 SC 1189
- ಅಶೋಕ ಕುಮಾರ ಗುಪ್ತಾ: ವಿದ್ಯಾಸಾಗರ ಗುಪ್ತಾ Vs ಸ್ಟೇಟ್ ಆಫ್ ಉತ್ತರಪ್ರದೇಶ. 1997 (5) SCC 201
- ಜಗದೀಶ್ ಲಾಲ್ ಮತ್ತು ಅದರ್ಸ್ v. ಸ್ಟೇಟ್ ಆಫ್ ಹರ್ಯಾನಾ ಮತ್ತು ಅದರ್ಸ್ (1997) 6 SCC 538
- ಚಂದರ್ ಪಾಲ್ & ಅದರ್ಸ್ Vs ಸ್ಟೇಟ್ ಆಫ್ ಹರ್ಯಾನಾ (1997) 10 SCC 474
- ಪೊಸ್ಟ್ ಗ್ರ್ಯಾಜ್ವೇಟ್ ಇನ್ ಸ್ಟಿಟುಟೆ ಆಫ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್, ಚಂಡಿಗಢ್ Vs. ಫ್ಯಾಕಲ್ಟಿ ಅಸೊಶಿಯೇಶನ್ 1998 AIR(SC) 1767 : 1998 (4) SCC 1
- ಅಜಿತ್ ಸಿಂಗ್ ಜನುಜಾ & ಅದರ್ಸ್ Vs ಸ್ಟೇಟ್ ಆಫ್ ಪಂಜಾಬ್ & ಅದರ್ಸ್ AIR 1999 SC 3471
- ಇಂದಿರಾ ಸಾಹಾನಿ Vs. ಯುನಿಯನ್ ಆಫ್ ಇಂಡಿಯಾ. AIR 2000 SC 498
- ಎಂ ಜಿ ಬಡಪ್ಪನವರ Vs ಸ್ಟೇಟ್ ಆಫ್ ಕರ್ನಾಟಕ 2001(2) SCC 666 : AIR 2001 SC 260
- ಟಿ.ಎಂ.ಎ. ಪೈ ಪ್ರತಿಷ್ಟಾನ v. ಸ್ಟೇಟ್ ಆಫ್ ಕರ್ನಾಟಕ (2002) 8 SCC 481
- NTR ಯುನ್ವರ್ಸಿಟಿ ಆಫ್ ಹೆಲ್ತ್ ಸೈನ್ಸ್ ವಿಜಯವಾಡಾ v. ಜಿ ಬಾಬು ರಾಜೇಂದ್ರ ಪ್ರಸಾದ (2003) 5 SCC 350
- ಇಸ್ಲಾಮಿಕ್ ಅಕಾಡಮಿ ಆಫ್ ದ್ಜುಕೇಶನ್ & ಎನದರ್. v. ಸ್ಟೇಟ್ ಆಫ್ ಕರ್ನಾಟಕ & ಅದರ್ಸ್. (2003) 6 SCC 697
- ಸುರಭಿ ಚೌಧರಿ & ಅದರ್ಸ್. v. ಯುನಿಯನ್ ಆಫ್ ಇಂಡಿಯಾ & ಅದರ್ಸ್. (2003) 11 SCC 146
- ಪಿ.ಎ. ಇನಾಮ್ದಾರ್ v. ಸ್ಟೇಟ್ ಆಫ್ ಮಹಾರಾಷ್ಟ್ರ 2005 AIR(SC) 3226
- ಐ.ಆರ್. ಕೊಯಿಲ್ಹೊ(ಮೃತ) by LRS. Vs. ಸ್ಟೇಟ್ ಆಫ್ T.N. 2007 (2) SCC 1 : 2007 AIR(SC) 861
- ಎಂ. ನಾಗರಾಜ & ಅದರ್ಸ್ v. ಯುನಿಯನ್ ಆ ಫ್ ಇಂಡಿಯಾ ಮತ್ತು ಅದರ್ಸ್. AIR 2007 SC 71
- ಅಶೋಕ ಕುಮಾರ್ ಠಾಕೂರ್ Vs ಯುನಿಯನ್ ಆಫ್ ಇಂಡಿಯಾ 2008
ಮೀಸಲಾತಿಯ ವಿಧಾನಗಳು
[ಬದಲಾಯಿಸಿ]ಶಿಕ್ಷಣ ಸಂಸ್ಥೆಗಳು ಮತ್ತು ಕೆಲಸಗಳಲ್ಲಿನ ಮೀಸಲಾತಿಯು ವಿವಿಧ ಮಾನದಂಡಗಳನ್ನು ಅವಲಂಬಿಸಿದೆ. ಈ ಮೀಸಲಾತಿ ಪ್ರಮಾಣದ ಪದ್ದತಿಯು ವಿಶಿಷ್ಟ ಗುಂಪುಗಳ ಅನುಪಾತವನ್ನು ಬದಿಗಿಟ್ಟು ಈ ಕ್ರಮಕ್ಕೆ ಮುಂದಾಗುತ್ತದೆ. ನಿಗದಿತ ಸಮುದಾಯಕ್ಕೆ ಸೇರಿದವರು ಕೊಡಮಾಡಿದ ಅನುಪಾತದ ಮೇಲೆ ಸ್ಪರ್ಧಿಸಬೇಕಾಗುತ್ತದೆ,ಆದರೆ ಅದೇ ಮೀಸಲಾತಿಯ ಗುಂಪುಗಳು (ಮೀಸಲಾತಿ ಮತ್ತು ಮುಕ್ತ) ಎರದರಲ್ಲಿಯೂ ಸ್ಪರ್ಧಿಸಬಹುದು. ಉದಾಹರಣೆಗಾಗಿ 10 ರಲ್ಲಿಯ 2 ಗುಮಾಸ್ತರ ಹುದ್ದೆಗಳನ್ನು ಮಾಜಿ ಸೈನಿಕರಿಗೆ ಮೀಸಲಾಗಿಟ್ಟಾಗ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಆದ್ಯತೆ ನೀಡಲಾಗುತ್ತದೆ,ಆದರೆ ಅವರು ಈ ಮೀಸಲಾತಿ ಮತ್ತು ಸಾಮಾನ್ಯ ವರ್ಗದಲ್ಲೂ ಸ್ಪರ್ಧಿಸಬಹುದಾಗಿದೆ.
ಜಾತಿ ಆಧಾರಿತ
[ಬದಲಾಯಿಸಿ]ಪರಿಶಿಷ್ಟ ಜಾತಿಗಳು,ಪರಿಶಿಷ್ಟ ವರ್ಗಗಳು ಮತ್ತು ಇನ್ನಿತರ ಹಿಂದುಳಿದ ಜಾತಿಗಳ (ಹುಟ್ಟುವಾಗಿನ ಜಾತಿ ಮೂಲಾಧಾರ)ನೇಮಕಾತಿಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಲ್ಲಿನ ಖಾಲಿ ಹುದ್ದೆಗಳ ಮೇರೆಗೆ ಆಯ್ಕೆ ಮಾಡಲಾಗುತ್ತದೆ. ಈ ಜಾತಿ ಪರಗಣನೆಯೋ ಹುಟ್ಟುವಾಗಿನದ್ದಾಗಿರಬೇಕೆ ವಿನಹ ಪರಿವರ್ತನೆಯಾದದ್ದಲ್ಲ. ಒಬ್ಬ ವ್ಯಕ್ತಿಯು ತನ್ನ ಧರ್ಮವನ್ನು ಬದಲಿಸಬಹುದು,ಆತನ ಆರ್ಥಿಕ ಮಟ್ಟ ಏರು-ಪೇರಾಗಬಹುದು.ಜಾತಿಯು ಶಾಶ್ವತ.
ಕೇಂದ್ರ ಸರ್ಕಾರದ ಧನ ಸಹಾಯದ ಶಿಕ್ಷಣ ಸಂಸ್ಥೆಗಳಲ್ಲಿ ಒಟ್ಟು ಲಭ್ಯ ಸ್ಥಳಗಳಲ್ಲಿ 22.5% ರಷ್ಟು ಸ್ಥಾನಗಳನ್ನು ಪರಿಶಿಷ್ಟ ಜಾತಿಗಳು (ದಲಿತ) ಮತ್ತು ಪರಿಶಿಷ್ಟ ವರ್ಗಗಳು (ಆದಿವಾಸಿ) ವಿದ್ಯಾರ್ಥಿಗಳಿಗೆ ಮೀಸಲಿಡಲಾಗುತ್ತದೆ.(15% ರಷ್ಟುSCs 7.5% ರಷ್ಟು STs ಗಳಿಗೆ) ಈ ಮೀಸಲಾತಿಯ ಶೇಕಡಾವಾರನ್ನು 49.5% ರಷ್ಟು ಹೆಚ್ಚಳ ಮಾಡಲಾಗಿದೆ.ಇದರಲ್ಲಿ ಹೆಚ್ಚುವರಿ 27% ರಷ್ಟು ಮೀಸಲಾತಿಯನ್ನು OBC ಗೆ 10ನೀಡಲಾಗುತ್ತದೆ. AIIMS ನಲ್ಲಿ 14% ರಷ್ಟು ಸ್ಥಾನಗಳು SC ವರ್ಗಗಳಿಗೆ,ಮತ್ತು 8% ST ವರ್ಗಗಳಿಗೆ ಮೀಸಲಾಗಿವೆ. ಅದಲ್ಲದೇ ಕನಿಷ್ಟ 50% ಅಂಕ ಪಡೆದ SC/ST ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಾತಿ ಅವಕಾಶ ಕಲ್ಪಿಸಲಾಗಿದೆ. ಈ ಅನುಪಾತವನ್ನು ಕೆಲವು ಮತಕ್ಷೇತ್ರಗಳಲ್ಲಿಯೂ ಅನುಸರಿಸಲಾಗುತ್ತಿದೆ.ಕೆಲವೆಡೆ ಕೆಲವೇ ಕೆಲವು ಸಮುದಾಯಗಳಿಗೆ ಈ ಕ್ಷೇತ್ರ ಮೀಸಲಾಗಿರುತ್ತವೆ. ತಮಿಳುನಾಡುನಂತಹ ರಾಜ್ಯಗಳಲ್ಲಿ SC ಗಳಿಗೆ 18% ಆದರೆ ST ಗಳಿಗೆ 1% ರಷ್ಟಾಗಿದೆ.ಇದು ಸ್ಥಳೀಯ ಜನಸಂಖ್ಯೆ ಆಧಾರವಾಗಿ ಪರಿಗಣಿಸಲಾಗಿದೆ. ಆಂಧ್ರಪ್ರದೇಶದಲ್ಲಿ 25% ರಷ್ಟು ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಸೇವೆಗಳಲ್ಲಿ BC ಗಳಲ್ಲಿ SC ಗಳಿಗೆ 15%,ST ಗಳಿಗೆ 6% ಮತ್ತು 4% ರಷ್ಟನ್ನು ಮುಸ್ಲಿಮ್ ರಿಗೆ ಮೀಸಲಾತಿ ಕಲ್ಪಿಸಲಾಗಿದೆ.
ಆಡಳಿತ ನಿಯಂತ್ರಣದಲ್ಲಿರುವ ಮೀಸಲಾತಿ ಪ್ರಮಾಣ
[ಬದಲಾಯಿಸಿ]ಈ ಆಡಳಿತ ನಿಯಂತ್ರಣದಲ್ಲಿರುವ ಮೀಸಲಾತಿ ಪ್ರಮಾಣದಲ್ಲಿ ಬಹಳಷ್ಟು ವಿವಾದಗಳಿಗೆ ಮೀಸಲಾತಿ ಬೆಂಬಲಿಗರು ಇದನ್ನು ಬಹುವಾಗಿ ವಿರೋಧಿಸಿದ್ದಾರೆ. ಇದನ್ನು ಶಿಕ್ಷಣ ತಜ್ಞರು ತೀವ್ರವಾಗಿ ಟೀಕಿಸುತ್ತಾರೆ,ಈ ಪ್ರಮಾಣವು ಯಾವುದೇ ಜಾತಿ,ಆರ್ಥಿಕ್ ಸ್ಥಿತಿಗತಿ ನೋಡದೇ ಕೇವಲ ಹಣ ಇರುವವರಿಗೆ ಎಂದು ಅವರು ಹೇಳುತ್ತಾರೆ.ಇದನ್ನು ಹಣ ಇರುವ ಯಾರು ಬೇಕಾದರೂ ಕೊಂಡುಕೊಳ್ಳಬಹುದು. ಖಾಸಗಿ ಕಾಲೇಜುಗಳಲ್ಲಿ 15% ರಷ್ಟು ಸ್ಥಾನಗಳನ್ನು ಆ ಕಾಲೇಜು ಆಡಳಿತ ಮಂಡಳಿ ನಿರ್ಧರಿಸಿದ ವಿದ್ಯಾರ್ಥಿಗಳಿಗೆ ಮಾತ್ರ ನೀಡಲಾಗುತ್ತದೆ. ಇದಕ್ಕಾಗಿ ಕಾಲೇಜುಗಳು ತಮ್ಮದೇ ಆದ ಮಾನದಂಡಗಳನ್ನು ಹೊಂದಿದ್ದು ಕನಿಷ್ಟ % ಶೇಕಡಾವಾರು ಪ್ರವೇಶ ಪರೀಕ್ಷೆಯಲ್ಲಿ ಅಥವಾ 10+2 ಅಂಕಗಳನ್ನು ಪರಿಗಣಿಸಲಾಗುತ್ತದೆ.
ಲಿಂಗ ಆಧಾರಿತ
[ಬದಲಾಯಿಸಿ]ಮಹಿಳೆಯರಿಗಾಗಿ ಮೀಸಲಾತಿಗಳು ಮಹಿಳೆಯರು 33% ರಷ್ಟು ಮೀಸಲಾತಿಗಳನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಡೆಯುತ್ತಾರೆ.(ಗ್ರಾಮ ಮಟ್ಟದ ವಿಧಾನ ಮಂಡಲ),ಇದು ಸ್ಥಳೀಯ ಗ್ರಾಮ ಸರ್ಕಾರ ಅಥವಾ ಮುನ್ಸಿಪಲ್ ಚುನಾವಣೆಗಳ ಮೂಲಕ ಇದು ಅಸ್ತಿತ್ವಕ್ಕೆ ಬರುತ್ತವೆ. ಒಂದು ಸುದೀರ್ಘ ಯೋಜನೆಯಡಿ ಇದನ್ನು ಸಂಸತ್ತು ಮತ್ತು ಶಾಸಕಾಂಗಗಳಲ್ಲೂ ಅರುವ ಉದ್ದೇಶ ಹೊಂದಲಾಗಿದೆ. ಇನ್ನೂ ಹೆಚ್ಚೆಂದರೆ ಮಹಿಳೆಯರಿಗೆ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಆದ್ಯತೆ ಮೇರೆಗೆ ಪರಿಗಣಿಸಲಾಗುತ್ತದೆ ಇಂತಹ ಆದ್ಯತೆ ಬಗ್ಗೆ ಕೆಲವು ಪುರುಷರು ಇದನ್ನು ಲಿಂಗತಾರತಮ್ಯವೆಂದು ಕರೆಯುತ್ತಾರೆ,ಶಾಲೆ,ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಸೂಕ್ತ ಕ್ರಮವಲ್ಲ ಎನ್ನುವವರೂ ಇದ್ದಾರೆ. ಭಾರತದಲ್ಲಿನ ಹಲವು ಕಾನೂನು ಕಾಲೇಜುಗಳಲ್ಲಿ ಮಹಿಳೆಯರಿಗೆ 30% ರಷ್ಟು ಮೀಸಲಾತಿ ಇದೆ. ಸದ್ಯದ ಪ್ರಗತಿಪರ ರಾಜಕಾರಣದಲ್ಲಿ ಮಹಿಳೆಯರಿಗೆ ಆದ್ಯತೆ ಮೇರೆಗೆ ಎಲ್ಲಾ ಕ್ಷೇತ್ರದಲ್ಲೂ ಉತ್ತಮ ಸ್ಥಾನದ ಅಗತ್ಯವನ್ನು ಭಾರತದಲ್ಲಿ ಕಂಡುಕೊಳ್ಳಲಾಗಿದೆ.ಇದರಿಂದ ದೇಶದ ಎಲ್ಲಾ ನಾಗರಿಕರಿಗೆ ಸಮಾನವಕಾಶದ ಸಂದರ್ಭ ಒದಗಲಿದೆ.
.ಮಹಿಳಾ ಮೀಸಲಾತಿ ಮಸೂದೆಯು ಇತ್ತೀಚೆಗೆ 2010 ಮಾರ್ಚ್ 9 ರಂದು ರಾಜ್ಯಸಭೆಯಲ್ಲಿ 186 ಸದಸ್ಯರ ಬೆಂಬಲ ಓರ್ವರ ವಿರೋಧದಿಂದ ಸಮ್ಮತಿ ಪಡೆಯಿತು. ಸದ್ಯ ಈ ಮಸೂದೆ ಲೇಕಸಭೆಗೆ ಹೋಗಿ ಅಲ್ಲಿ ಅನುಮೋದನೆ ಪಡೆಯುವ ನಿರೀಕ್ಷೆ ಇದೆ. GHAGad LHDalHad:LKHadd:lKHadklHDal:Hal;khaDHL;Ad
ಧರ್ಮ ಆಧಾರಿತ
[ಬದಲಾಯಿಸಿ]ತಮಿಳುನಾಡು ಸರ್ಕಾರವು ಮುಸ್ಲಿಮ್ ಮತ್ತು ಕ್ರಿಶ್ಚನ್ ರಿಗೆ 3.5% ರಷ್ಟು ಮೀಸಲಾತಿ ನೀಡಿದೆ.OBC ಯ ಮೀಸಲಾತಿಯನ್ನು 30% ರಿಂದ 23% ಕ್ಕೆ ಪರಿವರ್ತಿಸಿದೆ.ಇದರಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚೇಯನ್ ರಲ್ಲದವರಿಗೆ ಮೀಸಲಾತಿ ಇರುವುದಿಲ್ಲ.[೧೧] ಸರ್ಕಾರದ ವಾದದ ಪ್ರಕಾರ ಈ ಮೀಸಲಾತಿಯು ಧಾರ್ಮಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಮಾಡಲಾಗಿದ್ದು ಆದರೆ ಧಾರ್ಮಿಕತೆಯನ್ನೇ ಕೇವಲ ಅವಲಂಬಿಸಿಲ್ಲ.[೧೧]
ಆಂಧ್ರಪ್ರದೇಶದ ಆಡಳಿತವು ಮುಸ್ಲಿಮ್ ರಿಗೆ 4% ರಷ್ಟು ಮೀಸಲಾತಿಯನ್ನು ನೀಡಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಕೇರಳ ಲೋಕಸೇವಾ ಆಯೋಗವು ಮುಸ್ಲಿಮ್ ರಿಗೆ 12% ರಷ್ಟು ಮೀಸಲಾತಿ ನೀಡಿದೆ. ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ತಮ್ಮ ಧರ್ಮದವರಿಗೆ 50% ರಷ್ಟು ಮೀಸಲಾತಿ ನೀಡಲು ಅವಕಾಶವಿದೆ. ಕೇಂದ್ರ ಸರ್ಕಾರವು ಹಲವಾರು ಮುಸ್ಲಿಮ್ ಸಮುದಾಯಗಳನ್ನು ಹಿಂದುಳಿದ ಮುಸ್ಲಿಮ್ ರೆಂದು ಪರಿಗಣಿಸಿ ಅಗತ್ಯ ಮೀಸಲಾತಿ ಒದಗಿಸಿದೆ.
ರಾಜ್ಯದ ಸ್ಥಳಿಯರು
[ಬದಲಾಯಿಸಿ]ಅಪವಾದವೆಂಬಂತೆ ಆಯಾ ರಾಜ್ಯಸರ್ಕಾರಗಳು ತಮ್ಮ ಸ್ಥಳೀಯರಿಗೆ ಎಲ್ಲಾ ಸರ್ಕಾರಿ ಮತ್ತು ಇತರ ಸೇವೆಗಳನ್ನು ನೀಡುತ್ತಿವೆ. ಚಂಡೀಗಢ PEC ನಲ್ಲಿ ಆರಂಭದಲ್ಲಿ 80% ರಷ್ಟು ಸ್ಥಾನಗಳನ್ನು ಸ್ಥಳೀಯರಿಗೆ ನೀಡಲಾಗುತಿತ್ತು.ಈಗ ಅದು 50% ರಷ್ಟಿದೆ.
ಪದವಿಪೂರ್ವ ಕಾಲೇಜುಗಳು
[ಬದಲಾಯಿಸಿ]ಸಂಸ್ಥೆಗಳಾದ JIPMER ನಲ್ಲಿ ಸ್ನಾತಕೋತ್ತರ ಸ್ಥಾನಗಳನ್ನು ಯಾರು ತಮ್ಮ MBBS ನ್ನು JIPMER ನಲ್ಲಿ ಪೂರ್ಣ ಮಾಡಿದ್ದಾರೋ ಅವರಿಗೆ ಸ್ಥಾನಗಳ ಮೀಸಲಿಟ್ಟಿದೆ. AIIMS] ಸಂಸ್ಥೆಯು ತನ್ನ 120 ಸ್ನಾತಕೋತ್ತರ ಸ್ಥಾನಗಳಲ್ಲಿ 33% ರಷ್ಟನ್ನು 40 ಪದವಿಪೂರ್ವ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿದೆ.(ಯಾರು ಅಲ್ಲಿ MBBSನ್ನು ಅಲ್ಲಿ ಮುಗಿಸಿರುತ್ತಾರೋ ಅವರಿಗೆ ಸ್ನಾತಕೋತ್ತರ ಪ್ರವೇಶಕ್ಕೆ ಅವಕಾಶ,ಆದರೆ ಇದನ್ನು ನ್ಯಾಯಾಲಯವೊಂದು ಕಾನೂನು ಬಾಹಿರ ಎಂದು ಹೇಳಿದೆ).
ಇನ್ನಿತರ ಮಾನದಂಡ
[ಬದಲಾಯಿಸಿ]ಕೆಲವು ಮೀಸಲಾತಿಗಳನ್ನು:
- ಪುತ್ರರು/ಪುತ್ರಿಯರು/ಮೊಮ್ಮಕ್ಕಳು/ಮರಿಮೊಮ್ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರು .
- ದೈಹಿಕ ಅಂಗವಿಕಲತೆ.
- ಕ್ರೀಡಾಪಟುಗಳು.
- ಅನಿವಾಸಿ ಭಾರತೀಯರಿಗೆ (NRI) ಕೆಲಮಟ್ಟಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡಲಾಗಿದೆ. ಅವರು ಹೆಚ್ಚು ಶುಲ್ಕ ನೀಡಬೇಕಾಗುತ್ತದೆ,ಅದನ್ನೂ ವಿದೇಶೀ ಕರೆನ್ಸಿಯಲ್ಲಿ(ವಿಶೇಷವಾಗಿ:NRI ಗಳಿಗೆ IIT ನಿಂದ 2003ರಿಂದ ಮೀಸಲಾತಿ ಕಿತ್ತುಹಾಕಲಾಗಿದೆ).
- ವಿವಿಧ ಸಂಘಟನೆಗಳಿಂದ ಪ್ರಾಯೋಜಿತ ವಿದ್ಯಾರ್ಥಿಗಳು.
- ಯಾರು ಸಶಸ್ತ್ರ ಮೀಸಲು ಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ.(ಮಾಜಿ ಸೈನಿಕರ ಪ್ರಮಾಣ)
- ಸಶಸ್ತ್ರ ಸೈನಿಕ ಪಡೆಯಲ್ಲಿದ್ದಾಗ ಕಾರ್ಯಾಚರಣೆಯಲ್ಲಿ ಮೃತಪಟ್ಟ ಸಿಬ್ಬಂದಿ ಅವಲಂಬಿತರಿಗೆ.
- ತಾಯ್ನಾಡಿಗೆ ವಾಪಸ್ಸಾದ ಯುದ್ದ ಕೈದಿಗಳಿಗೆ.
- ಅಂತರ್ -ಜಾತೀಯ ವಿವಾಹದಿಂದ ಜನಿಸಿದವರಿಗೆ
- ಸರ್ಕಾರದ ಆಡಳಿತದ ಶಾಲೆಗಳಲ್ಲಿ/PSU ಗಳಲ್ಲಿ ಅಲ್ಲಿನ ಸಿಬ್ಬಂದಿಯ ಮಕ್ಕಳಿಗೆ ವಿಶೇಷ ಮೀಸಲಾತಿ ಸವಲತ್ತು.(ಉದಾಹರಣೆಗೆ ಸೈನಿಕ ಶಾಲೆಗಳು,PSU ಶಾಲೆಗಳು ಇತ್ಯಾದಿ)
- ಕೆಲವೆಡೆ ಸಂದಾಯದ ಅನುಕ್ರಮಣ ಮೀಸಲಾತಿಗಳನ್ನು ಪೂಜಾಸ್ಥಾನಗಳಲ್ಲಿ,ದೇಗುಲಗಳಲ್ಲಿ ನೀಡಲಾಗುತ್ತದೆ.(ಉದಾಹರಣೆಗೆ ತಿರುಪತಿ ಬಾಲಾಜಿ ದೇವಸ್ಥಾನ,ತಿರುಪತಿ ಮುರುಗನ್ (ಬಾಲಾಜಿ) ದೇವಸ್ಥಾನ)
- ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಹಿರಿಯ ನಾಗರಿಕರಿಗೆ/PH ಅಂಗವಿಕಲರಿಗೆ
ಸವಲತ್ತು ಸಡಿಲಿಕೆಗಳು(ವಿನಾಯತಿಗಳು)
[ಬದಲಾಯಿಸಿ]ಕೆಲವು ದೇಶದ ಅತ್ಯುನ್ನುತ ಪದವಿ-ಪೂರ್ವ ಮತ್ತು ಪದವಿ ಕಾಲೇಜುಗಳಾದ IITs, ದಿ IIMಗಳಲ್ಲಿ ಇವು ವಿಶ್ವದಲ್ಲೇ ಹೆಸರುವಾಸಿ ಇವುಗಳ ಪ್ರವೇಶ ಪರೀಕ್ಷೆಗಳಲ್ಲಿ ಮಾತ್ರ ಸವಲತ್ತಿನ ಸಡಲಿಕೆ ಇದೆ ಆದರೆ ಎಲ್ಲ ಹಂತಗಳಲ್ಲಿ ಮೀಸಲಾತಿ ಇರುವುದಿಲ್ಲ. ಕೆಲವು ಮಾನದಂಡಗಳನ್ನು ಮೀಸಲಾತಿ ವರ್ಗಕ್ಕೆ ನೀಡಿದರೆ ಇನ್ನುಳಿದನ್ನು ಪೂರ್ಣವಾಗಿ ತೆಗೆದು ಹಾಕಲಾಗಿದೆ. ಉದಾಹರಣೆಗಳೆಂದರೆ:
- ಕನಿಷ್ಟ ಪ್ರೌಢ ಶಾಲಾ ಅಂಕಗಳಲ್ಲಿ ಮೀಸಲಾತಿ ಸ್ಥಾನಗಳಿಗೆ ವಿನಾಯತಿಗಳನ್ನು ನೀಡಲಾಗುತ್ತದೆ.
- ಕಾಲಾವಧಿ
- ಶುಲ್ಕಗಳು,ವಸತಿನಿಲಯದ ಕೊಠಡಿ ಬಾಡಿಗೆ ಇತ್ಯಾದಿ.
ಇದರಲ್ಲಿ ಗಮನಿಸಬೇಕಾದ ವಿಷಯವೆಂದರೆ ಒಂದು ಸಂಸ್ಥೆಯ ಪದವಿಧರರು ಉನ್ನತ ಶಿಕ್ಷಣಕ್ಕೆ ಬೇಕಾದ ಮಾನದಂಡಕ್ಕೆ ವಿನಾಯತಿ ಇಲ್ಲ.(ಉದಾಹರಣೆಗೆ IIT ಗಳಲ್ಲಿ)ಪ್ರೊಗ್ರಾಮಿಂಗ್ ವಿನಾಯತಿ ಅಥವಾ ಕನಿಷ್ಟ ವಿದ್ಯಾಹರ್ಯತೆ ಅಗತ್ಯವಾಗಿದೆ.
ತಮಿಳುನಾಡಿನಲ್ಲಿ ಮೀಸಲಾತಿ ನೀತಿ
[ಬದಲಾಯಿಸಿ]ಐತಿಹಾಸಿಕ ದೃಷ್ಟಿಕೋನದಿಂದ
[ಬದಲಾಯಿಸಿ]ತಮಿಳುನಾಡಿನಲ್ಲಿ ದೇಶದ ಇನ್ನಿತರ ಮೀಸಲಾತಿ ನೀತಿಗಿಂತ ಭಿನ್ನವಾಗಿದೆ ಯಾಕೆಂದರೆ ಅದರ ಐತಿಹಾಸಿಕ ಹಿನ್ನಲೆ ಇದಕ್ಕೆ ಕಾರಣ. ಆಗ 2006 ರ ಮೇ ನಲ್ಲಿ ಮೀಸಲಾತಿ ವಿರೋಧಿ ಧ್ವನಿ ದೆಹಲಿಯಲ್ಲಿ ಮೊಳಗಿದಾಗ ಚೆನ್ನೈನಲ್ಲಿ ಅಸಹನೀಯ ಶಾಂತಿ ನೆಲೆಸಿತ್ತು. ನಂತರ ಮೀಸಲಾತಿ-ವಿರೋಧಿ ಸಂಖ್ಯೆ ಹೆಚ್ಚಾದಾಗ ಚೆನ್ನೈನಲ್ಲಿ ಮೀಸಲಾತಿ ಬೇಕೆಂದು ನಗರದಲ್ಲಿ ಸಣ್ಣ ಪ್ರತಿಭಟನೆ ನಡೆಯಿತು. ಚೆನ್ನೈನಲ್ಲಿನ ವೈದ್ಯರ ಸಮೂಹ ಅದರ ಸಾಮಾಜಿಕ (DASE) ಸಂಘಟನೆಯು ಈ ಪ್ರತಿಭಟನೆಯ ಮುಂಚೂಣಿಯಲ್ಲಿತ್ತು.ಕೇಂದ್ರ ಸರ್ಕಾರದ ಆಡಳಿತವಿರುವ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಗೆ ಆಗ್ರಹಿಸಿತು.
ಸದ್ಯದ ಪ್ರವೃತ್ತಿ
[ಬದಲಾಯಿಸಿ]ಸದ್ಯ ಒಟ್ಟಾರೆ ಮೀಸಲಾತಿ ಪ್ರಮಾಣವು 69% ರಷ್ಟಿದ್ದು ಇಅರಲ್ಲಿ ಎಷ್ಟು ಯಾವ ವರ್ಗಕ್ಕೆ ಎನ್ನುವುದಕ್ಕಿಂತ ಎಲ್ಲರಿಗೂ ಅದಲ್ಲದೇ ವರ್ಗಕ್ಕೆ ಸೇರದವರ ಭಾಗವೆಷ್ಟೆಂಬುದನ್ನೂ ಪರಿಗಣಿಸಲಾಗುತ್ತದೆ.ವಿದ್ಯಾರ್ಥಿಗಳಿಗೆ ಸಾಕಷ್ಟು ಸಂಖ್ಯಾಬಲದ ಪ್ರವೇಶ ನೀಡಬೇಕೆಂಬುದು ಅವರ ಅಭಿಪ್ರಾಯ. ಒಂದು ವೇಳೆ 100 ಸ್ಥಾನಗಳು ಲಭ್ಯವಿದ್ದರೆ ಸಮುದಾಯ-ಪಂಗಡ ಗಮನಿಸದೇ ಮೊದಲು ಎರಡು ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ.(ಮೀಸಲಾತಿ ಇರಬಹುದು ಮೀಸಲಾತಿ ಇಲ್ಲದಿರಬಹುದು)ಮೊದಲನೆಯದು 31 ಸ್ಥಾನಗಳಿಗೆ ಇನ್ನೊಂದು 50 ಸ್ಥಾನಗಳಿಗೆ ಇದು 69% ಮತ್ತು 50% ರಷ್ಟರ ಮೀಸಲಾತಿಗನುಗುಣವಾಗಿ ವಿಂಗಡಿಸಲಾಗುತ್ತದೆ. ಯಾವುದೇ ಮೀಸಲಾತಿರಹಿತದ ವಿದ್ಯಾರ್ಥಿಗಳು 50 ಮತ್ತು 31 ರ ವಿದ್ಯಾರ್ಥಿ ಕೋಟಾದಲ್ಲಿ ಬರದಿದ್ದರೆ ಇಂತಹ ವಿದ್ಯಾರ್ಥಿಗಳನ್ನು ಸುಪರ್ -ನ್ಯುಮರಿ ಕೋಟಾ ಪ್ರಮಾಣದಲ್ಲಿ ಪ್ರವೇಶವಕಾಶ ನೀಡಲಾಗುತ್ತದೆ.ಇಲ್ಲಿ 100 ಸಂಖ್ಯೆಯನ್ನು ಇದಕ್ಕೆ ಸೇರ್ಪಡೆ ಮಾಡಲಾಗುತ್ತದೆ. ಅದೇ 31 ಸ್ಥಾನಗಳ ಪಟ್ಟಿಯನ್ನು ಮೀಸಲಾತಿರಹಿತ ಮುಕ್ತ ಪ್ರವೇಶಕ್ಕೆ ಉಪಯೋಗಿಸಲಾಗುವುದು.69 ಸ್ಥಾನಗಳನ್ನು 60% ರ ಮೀಸಲಾತಿ ಕೋಟಾದಡಿ ಭರ್ತಿ ಮಾಡಲಾಗುವುದು.(30 obc,20 mbc,18 ಸ್ಥಾನಗಳು sc ಮತ್ತು 1 ಸ್ಥಾನ st ಗಳಿಗೆ) ಹೀಗೆ ಪರಿಣಾಮಕಾರಿ ಮೀಸಲಾತಿ ಶೇಕಡಾವಾರು ಎಷ್ಟು ಮೀಸಲಾತಿ-ರಹಿತ 50 ರ ಕೆಟಗರಿಯಲ್ಲಿ ಎಷ್ಟಿದ್ದಾರೆಂದು ಪರಿಗಣಿಸಲಾಗುತ್ತದೆ.ಆದರೆ 31 ರ ಮೆರಿಟ್ ಪಟ್ಟಿಯಲ್ಲಲ್ಲ. ಒಂದು ತೆರನಾದ ವರ್ಗೀಕರಣದ ಎಲ್ಲಾ 19 (31 ರಿಂದ 50 ರ ಪಟ್ಟಿಯಲ್ಲಿ)ಇದು ಮೀಸಲಾತಿ ರಹಿತರ ವಿದ್ಯಾರ್ಥಿಗಳು ಪಟ್ಟಿ ಇದು ಒಟ್ಟು ಮೀಸಲತಿಯ 58%(69/119)/119 ಅಥವಾ 74% ಇದರೊಂದಿಗೆ 19% ನ್ನು ಮೀಸಲಾತಿರಹಿತ ವಿದ್ಯಾರ್ಥಿಗಳ ಸಮೂಹವನ್ನು 'ಮೀಸಲಾತಿ' ಎಂದು ಪರಿಗಣಿಸಲಾಗುತ್ತದೆ! ಇನ್ನೊಂದು ವಿಶಿಷ್ಟವೆದರೆ ಈ 19 ವಿದ್ಯಾರ್ಥಿಗಳು 31 ರ ಪಟ್ಟಿಗೆ ಸೇರುವುದಿಲ್ಲ.ಇವರು ಮೀಸಲಾತಿರಹಿತರ ಕೆಟಗರಿಯಲ್ಲಿದ್ದರೂ ಇದಕ್ಕೆ ಸೇರುವುದಿಲ್ಲ.ಇಲ್ಲಿ ಸುಪರ್ -ನ್ಯುಮರಿ ಸ್ಥಾನಗಳ ಪ್ರಶ್ನೆ ಉದ್ಭವಿಸುವುದಿಲ್ಲ.ಹೀಗೆ ರಾಜ್ಯ ಕಾನೂನಿಂದ ನಿಗದಿಯಾಗಿರುವ 69% ಕಡ್ಡಾಯ ಮೀಸಲಾತಿ ಅನ್ವಯವಾಗುತ್ತದೆ.
ಕಾಲಾನುಕ್ರಮಣಿ
[ಬದಲಾಯಿಸಿ]ಮೂಲಗಳು Rediff.com ನ ಹೊಸ ಲೇಖನ [೧೨].
- 1951
- 16% ಮೀಸಲಾತಿ SC/ST ವರ್ಗಗಳಿಗೆ ಮತ್ತು 25% ಮೀಸಲಾತಿ OBC ಗಳಿಗೆ ಎಂದು ನಿಗದಿಪಡಿಸಲಾಯಿತು. ಒಟ್ಟು ಮೀಸಲಾತಿ 41% ಕ್ಕೆ ತಲುಪಿತು.
- 1971
- ಸತ್ಯನಾಥನ್ ಆಯೋಗವು "ಕೆನೆ ಪದರನ್ನು" ಜಾರಿಗೊಳಿಸಿತು.ಅದು ಹಿಂದುಳಿದ ವರ್ಗಗಳಿಗೆ 16% ರಷ್ಟು ಮೀಸಲಾತಿ ಪ್ರಕಟಿಸಿತು.ಅದಲ್ಲದೇ 17% ರಷ್ಟು ಅತ್ಯಂತ ಹಿಂದುಳಿದ ವರ್ಗಗಳಿಗೆ (MBCs)ಮೀಸಲಾಯಿತು.
- DMK ಸರ್ಕಾರವು OBC ಮೀಸಲಾತಿಯನ್ನು 31% ಕ್ಕೇರಿಸಿತು.ಅದಲ್ಲದೇ SC/ST ಮೀಸಲಾತಿಯನ್ನು 18% ಕ್ಕೇರಿಸಲಾಯಿತು. ಒಟ್ಟು ಮೀಸಲಾತಿ ಹೀಗೆ 49% ಕ್ಕೇರಿತು.
- 1980
- ADMK ಸರ್ಕಾರವು "ಕೆನೆ ಪದರನ್ನು"OBC ಮೀಸಲಾತಿಯ ಸವಲತ್ತಿನಿಂದ ಕೈಬಿಟ್ಟಿತು. ಮೀಸಲಾತಿ ಸವಲತ್ತು ಪಡೆಯಲು ವಾರ್ಷಿಕ ಆದಾಯವು 9000 ರೂಪಾಯಿಗಳಿಗೆ ನಿಗದಿ ಮಾಡಲಾಯಿತು. DMK ಮತ್ತು ಇನ್ನಿತರ ಪಕ್ಷಗಳು ಈ ನಿರ್ಧಾರವನ್ನು ಪ್ರತಿಭಟಿಸಿದವು.
- ಕೆನೆಪದರು ಪದ್ದತಿ ಹಿಂದೆಗೆದ ನಂತರ ಮೀಸಲಾತಿ % ಶೇಕಡಾವಾರನ್ನು 50%ಕ್ಕೇರಿಸಲಾಯಿತು. ಒಟ್ಟು ಮೀಸಲಾತಿ ಪ್ರಮಾಣ 68% ಕ್ಕೆ ನಿಂತಿತು.
- 1989
- ರಾಜ್ಯಾದ್ಯಾಂತ ವನ್ನಿಯಾರ್ ಸಂಗಮ್ ಸಮುದಾಯದಿಂದ ರಸ್ತೆ ಚಳವಳಿ ಆರಂಭವಾಯಿತು.(ಇದು ಪಟ್ಟಾಳಿ ಮಕ್ಕಳ್ ಕಚ್ಚಿಯ ಮೂಲ ಸಂಘಟನೆ)20% ರಷ್ಟು ರಾಜ್ಯ ಸರ್ಕಾರದಲ್ಲಿ ಮತ್ತು 2% ರಷ್ಟು ಕೇಂದ್ರ ಸರ್ಕಾರದಲ್ಲಿ ವನ್ನಿಯಾರ್ ಜಾತಿ ಸಮುದಾಯಕ್ಕೆ ಮಾತ್ರ ಮೀಸಲಾತಿ ನೀಡುವಂತೆ ಅದು ಒತ್ತಾಯಿಸಿತು.
- DMK ಸರ್ಕಾರವು OBC ಮೀಸಲಾತಿಯನ್ನು 2 ಭಾಗಗಳಲ್ಲಿ ವಿಭಜಿಸಿತು,30% OBC ಗೆ ಮತ್ತು 20% MBCಗೆ ಕೊಡಮಾಡಿತು.ಪರಿಶಿಷ್ಟ ವರ್ಗದವರಿಗೆ 1% ರಷ್ಟು ಮೀಸಲಾತಿಯನ್ನು ಪ್ರಕಟಿಸಲಾಯಿತು. ಒಟ್ಟು ಮೀಸಲಾತಿ 69%.ರಷ್ಟಾಯಿತು.
- 1992
- ಸರ್ವೋಚ್ಚ ನ್ಯಾಯಾಲಯವು ಮಂಡಲ್ ಆಯೋಗದ ಕುರಿತಾದ ತೀರ್ಪಿನಲ್ಲಿ ಮೀಸಲಾತಿಯ ಪ್ರಮಾಣ 50% ಗಿಂತ ಹೆಚ್ಚಾಗಬಾರದು,ಅಲ್ಲದೇ "ಕೆನೆ ಪದರ"ನ್ನು ಮೀಸಲಾತಿ ಸವಲತ್ತಿನಿಂದ ಹೊರಗಿಡಬೇಕೆಂದು ಸೂಚಿಸಿತು.
- 1994
- ತಮಿಳುನಾಡು ಸರ್ಕಾರಕ್ಕೆ ನ್ಯಾಯಾಲಯವು 50% ರ ಮಟ್ಟವನ್ನು ಪಾಲಿಸುವಂತೆ ಸೂಚಿಸಿತು,ಅದು ಪ್ರಖ್ಯಾತ ವಕೀಲ ಕೆ.ಎಂ ವಿಜಯನ್ ಅವರು ವಾಯಿಸ್ ಕಂಜುಮರ್ ಫೋರಮ್ ನಿಂದ ಈ ಮನವಿ ಅರ್ಜಿಯನ್ನು ಉಲ್ಲಖಿಸಿ ನ್ಯಾಯಾಲಯ ತನ್ನ ಆದೇಶ ನೀಡಿತ್ತು. ಆಗಿನ ಉಸ್ತುವಾರಿ ನಿಗಾ ಸಮಿತಿಯ ಓರ್ವ ಸದಸ್ಯ ಆನಂದಕೃಷ್ಣನ್ ಮತ್ತು ಆಗಿನ ಅಣ್ಣಾ ಯುನ್ವರ್ಸಿಟಿಯ ಅಧ್ಯಕ್ಷರಾಗಿದ್ದ ಅವರು 50% ಮೀಸಲಾತಿ ಪಾಲಿಸಲಾಗುವುದೆಂದು ಹೇಳಿದರು.
- 69% ಮೀಸಲಾತಿಯು 9ನೆಯ ಶೆಡ್ಯುಲ್ ನಲ್ಲಿ ಸೇರಿಸಲಾಗುತ್ತದೆ.
- ಆಗ ಕೆ.ಎಂ ವಿಜಯನ್ ಅವರ ಮೇಲೆ ಭೀಕರ ಹಲ್ಲೆ ಮಾಡಲಾಯಿತು,ಅವರು ನವದೆಹಲಿಗೆ ತೆರಳುವಾಗ ಅವರ ಮೇಲೆ ದಾಳಿ ನಡೆಸಲಾಯಿತು.ಅವರು 69% ಮೀಸಲಾತಿಯನ್ನು 9ನೆಯ ಶೆಡ್ಯುಲ್ ನಲ್ಲಿ ಸೇರಿಸಿದ್ದರ ಬಗ್ಗೆ ಮನವಿ ಸಲ್ಲಿಸಲು ಹೋಗುತ್ತಿದ್ದರು.[೧೩]
- ೨೦೦೬
- ಸರ್ವೋಚ್ಚ ನ್ಯಾಯಾಲಯವು ಕೆನೆ ಪದರನ್ನು ತೆಗೆದು ಹಾಕುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿತು.
- ಮೇ 2006 -ಆಗಷ್ಟ್ 2006
- ಮೀಸಲಾತಿ ವಿರೋಧಿ ಪ್ರತಿಭಟನೆಗಳು ದೇಶಾದ್ಯಂತ ತೀವ್ರಗೊಂಡವು.[೧೪][೧೫][೧೬]). ಮೀಸಲಾತಿ ಬೆಂಬಲಿಗರು ಮಾಧ್ಯಮಗಳ ಉತ್ಪ್ರೇಕ್ಷೆಯಿಂದ ಇದು ತೀವ್ರಗೊಂಡಿತೆಂದು ಟೀಕಿಸಿದರು.[೧೭] ತಮಿಳುನಾಡು ಶಾಂತವಾಗಿತ್ತು. ಇದರಿಂದಾಗಿ ಮೇಲ್ವರ್ಗದ ಜಾತಿಗಳ ಜನರ ಸಂಖ್ಯೆಯು ತಮಿಳುನಾಡಿನಲ್ಲಿ(13%)ಆಯಿತು,ಇದು ಮೊದಲು 36% ರಷ್ಟಿತ್ತು.
- ಇದಕ್ಕಾಗಿ ಪರ್ಯಾಯ ಪದ್ದತಿಗಳನ್ನು ಪರಿಚಯಿಸಲು ಶಿಕ್ಷಣ ತಜ್ಞ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪುರೋಷತ್ತಮ ಅಗ್ರವಾಲ್ ಅವರು ಮಲ್ಟಿಪಲ್ ಇಂಡೆಕ್ಸ್ ರಿಲೇಟೆಡ್ ಅಫರ್ಮೇಟಿವ್ ಆಕ್ಸನ್ (MIRAA)ಈ ಪರಿಹಾರ ಸೂತ್ರ ಸೂಚಿಸಿದರು.http://www.sabrang.com/cc/archive/2006/june06/report3.html ಇವರೊಂದಿಗೆ ಸೆಂತರ್ ಫಾರ್ ದಿ ಸ್ಟಡಿ ಆಫ್ ಡೆವಲ್ಪಿಂಗ್ ಸೊಸೈಟೀಸ್ ನ ಪ್ರೊ.ಸತೀಶ್ ದೇಶಪಾಂಡೆ ಮತ್ತು ಡಾ.ಯೋಗೇಂದ್ರ ಯಾದವ್ ಕೂಡ ತಮ್ಮ ಅಭಿಪ್ರಾಯಗಳನ್ನು ಕ್ರೋಢೀಕರಿಸಿದರು.- http://www.hindu.com/2006/05/22/stories/2006052202261100.htm Archived 30 November 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ಅದೇ ತೆರನಾಗಿ ಡಾ.ಸ್ಯಾಮ್ ಪಿತ್ರೊಡಾ ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಕ್ಷ [ಪ್ರಧಾನಿ ಡಾ.ಮನಮೋಹನ್ ಸಿಂಗ ಅವರ ಸಲಹಾ ಸಮಿತಿ ತಿಳಿಸಿದಂತೆ] ಮೀಸಲಾತಿಯನ್ನು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ OBC ಗಳಿಗೆ 69% ಕ್ಕೇರಿಸುವುದನ್ನು ತೀವ್ರವಾಗಿ ವಿರೋಧಿಸಿದರು. (http://www.indiadaily.org/entry/sam-pitroda-review-quota-policy Archived 26 July 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ರಾಷ್ಟ್ರೀಯ ಜ್ಞಾನ ಆಯೋಗದ ಸಂಚಾಲಕ ಸದಸ್ಯ ಪ್ರತಾಬ್ ಭಾನು ಮೆಹ್ತಾ ಇಂಥ ಮೀಸಲಾತಿ ನೀತಿ ಪ್ರತಿಭಟಿಸಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು.[ಡಾ.ಮೆಹ್ತಾರ ಬಹಿರಂಗ ರಾಜಿನಾಮೆ ಪತ್ರ letter of resignation - http://www.indianexpress.com/story/4916.html].
- ಭಾರತದ ಪ್ರಧಾನಿಗಳು ಇದರ ಉಸ್ತುವಾರಿಯನ್ನು ನೋಡಿಕೊಳ್ಳಲು ಸಮಿತಿಯೊಂದನ್ನು ರಚಿಸಿ ಅದಕ್ಕೆ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದಾರೆ.ಮೀಸಲಾತಿಯಲ್ಲಿ ಅದರ ಅನುಷ್ಟಾನದಲ್ಲಿ ಸಲಹೆ ನೀಡುವುದಲ್ಲದೇ ಇತರ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸವಲತ್ತು,ಹಾಗು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಸೀಟು ಹೆಚ್ಚಿಸುವ ಕುರಿತು ಅವರು ಸಲಹೆ ನೀಡಲಿದ್ದಾರೆ.
- ಈ ಮೇಲ್ವಿಚಾರಣಾ ಉಸ್ತುವಾರಿ ಸಮಿತಿಯು ಕೇಂದ್ರ ಶೈಕ್ಷಣಿಕ ಸಂಸ್ಥೆಗಳಲ್ಲಿ ಇತರ ಹಿಂದುವಳಿದ ವರ್ಗದ ಮೀಸಲಾತಿ ಪ್ರಮಾಣವನ್ನು ಅವರು ಅಧ್ಯಯನ ಮಾಡಿ ಮಧ್ಯಂತರ ವರದಿ ನೀಡಲಿದ್ದಾರೆ.[೩] Archived 17 June 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- OBC ಮೀಸಲಾತಿ ಮಸೂದೆಯು ಲೋಕಸಭೆಯಲ್ಲಿ ಮಂಡನೆಯಾಗಿ ನಂತರ ಸ್ಥಾಯಿ ಸಮಿತಿಗೆ ಶಿಫಾರಸುಗೊಂಡಿತು. ಅದು ಕೆನೆ ಪದರು ಭಾಗವನ್ನು ಅದು ಕೈಬಿಡಲಿಲ್ಲ.(ಈ ಕೆಟಗರಿಯಲ್ಲಿ ಸಿರಿವಂತ ಮತ್ತು ಶ್ರೀಮಂತ ವರ್ಗ)ಸರ್ವೋಚ್ಚ ನ್ಯಾಯಾಲಯದ ಸೂಚನೆ ಮೇರೆಗೆ ಈ ಸವಲತ್ತುಗಳನ್ನು ಈ ವರ್ಗ ಇನ್ನಿತರ ಹಿಂದುಳಿದವರಿಗೆ ಬಿಟ್ಟು ಕೊಡಬೇಕಿದೆ.[೪]
- ತಮಿಳುನಾಡಿನಲ್ಲಿನ 69% ರಷ್ಟಾದ ಮೀಸಲಾತಿಯನ್ನು ಸರ್ವೋಚ್ಚ ನ್ಯಾಯಾಲಯವು ಈ 9 ಸದಸ್ಯರ ಪೀಠಕ್ಕೆ 9ನೆಯ ಶೆಡ್ಯುಲ್ ಗೆ ಶಿಫಾರಸು ಮಾಡಿದೆ.
- ಸೆಪ್ಟೆಂಬರ್ 6, 2005.
- ಕೇಂದ್ರ ಸರ್ಕಾರವು ತೃಪ್ತಿಕರವಾದ ಅಂಕಿಅಂಶಗಳಿಲ್ಲದೇ ಈ ಮೀಸಲಾತಿ ಪದ್ದತಿಯನ್ನು ಪರಿಚಯಿಸಲು ಹೊರಟಿದೆ ಎಂಬುದನ್ನು ಸರ್ವೋಚ್ಚ ನ್ಯಾಯಾಲಯವು ಮನಗೊಂಡಿದೆ.
- ಈ ಮೇಲುಸ್ತುವಾರಿ ಸಮಿತಿಯು ತನ್ನ ಅಂತಿಮ ವರದಿಯನ್ನು ನೀಡಿದೆ.
- ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಲು ಮಾಡಿದ ಸಾಂವಿಧಾನಿಕ ತಿದ್ದುಪಡಿಯನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ. ಅದು 50% ರ ಮೀಸಲಾತಿ ಮಿತಿಯನ್ನು ಅನುಸರಿಸುವಂತೆ ಸಲಹೆ ಮಾಡಿದೆ.ಅಲ್ಲದೇ ಕೆನೆಪದರನ್ನು ತೆಗೆದು ಅದನ್ನು ಅನುಭವಿಸುತ್ತಿರುವ ಸಿರಿವಂತ ವರ್ಗಗಳನ್ನು ಕೈಬಿಡಬೇಕೆಂದು ಅದು ಸೂಚಿಸಿದೆ.[೫]
- ಸಂಸತ್ತಿನ ಸ್ಥಾಯಿ ಸಮಿತಿಯು ಕೆನೆಪದರಿನಲ್ಲಿ ಬಾರದ ಹಿಂದುಳಿದ ವರ್ಗದವರಿಗೆ ಈ ಸವಲತ್ತುಗಳು ದೊರೆಯಬೇಕು.(ಹಿಂದುಳಿದವರಲ್ಲಿಯ ಬಡವರಿಗೆ) ನಿಜವಾದ ಹಿಂದುಳಿದ ವರ್ಗದ ಬಡವರನ್ನು ಗುರುತಿಸುವ ಸರ್ವೇಕ್ಷಣೆ ನಡೆಸಬೇಕೆಂದು ಸಂಸತ್ ಸಮಿತಿ ಸಲಹೆ ಮಾಡಿದೆ.[೬]
- ಸಾಚಾರ ಸಮಿತಿಯಲ್ಲಿ ಭಾರತದಲ್ಲಿನ ಮುಸ್ಲಿಮ್ ರ ಹಿಂದುಳಿದಿರುವಿಕೆಯನ್ನು ವರದಿ ಮಾಡಿದೆ. ಭಾರತದ ಮುಸ್ಲಿಮ್ ರನ್ನು ಮೇಲೆ ತರುವ ಸಲುವಾಗಿ ಅದು ಹಲವಾರು ಶಿಫಾರಸುಗಳನ್ನು ಮಾಡಿದೆ. ಸದ್ಯ ಮುಸ್ಲಿಮೇತರ OBC ಗಳ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೆಚ್ಚು ಕಡಿಮೆ ಅವರ ಜನಸಂಖ್ಯೆಗೆ ಅನುಪಾತದಲ್ಲಿದೆ. ನಿಜವಾದ ಅಗತ್ಯವಿರುವ ಜನರನ್ನು ಗುರುತಿಸುವ ಸಲುವಾಗಿ ಪರ್ಯಾಯ ಪದ್ದತಿಗಳನ್ನು ಕಂಡು ಹಿಡುವಂತೆ ಅದು ಶಿಫಾರಸು ಮಾಡಿದೆ.[೭]
- ಕೇಂದ್ರ ಸಚಿವ ಸಂಪುಟ ಸಭೆಯು ಸಂಸತ್ತಿನ ಸ್ಥಾಯಿ ಸಮಿತಿಯ ಶಿಫಾರಸುಗಳನ್ನು ತಿರಸ್ಕರಿಸಿತು.ಕೆನೆಪದರಲ್ಲಿ (ಆಗರ್ಭ ಸ್ರೀಮಂತರು)ಬರುವವರನ್ನೂ ಸೇರಿಸಿ ಮಸೂದೆ ತರಲು ನಿರ್ಧರಿಸಿತು. ಸಂಸತ್ತು OBC ಮೀಸಲಾತಿಗಳನ್ನು ಧ್ವನಿ ಮತದ ಮೂಲಕ ಮಸೂದೆ ಜಾರಿಗೊಳಿಸಿತು.[೮]
- ಏಪ್ರಿಲ್ 21
- ನಂತರಭಾರತದ ಸರ್ವೋಚ್ಚ ನ್ಯಾಯಾಲಯವು 2008 ಏಪ್ರಿಲ್ 10 ರಂದು ಇನ್ನಿತರ ಹಿಂದುಳಿದ ವರ್ಗದ ಜಾತಿಗಳವರಿಗೆ (OBCs)ಗಳಿಗೆ 27% ರಷ್ಟು ಮೀಸಲಾತಿಗಳನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ನೀಡುವುದನ್ನು ಎತ್ತಿ ಹಿಡಿಯಿತು.ಅದಲ್ಲದೇ ಹಿಂದುಳಿದ ಜಾತಿಗಳಲ್ಲಿನ ಕೆನೆಪದರನ್ನು ತೆಗೆಯದಿರಲು ಸಲಹೆ ಮಾಡಿತು.[೧೮][೧೯]
ಜನಸಂಖ್ಯಾ ಅಂಕಿಅಂಶ
[ಬದಲಾಯಿಸಿ]- SC/ST
- ಕೇವಲ SC/ST ಜನರನ್ನು ಮಾತ್ರ ಭಾರತದ ಜನಗಣತಿಯಲ್ಲಿ ಸಮಗ್ರವಾಗಿ ಎಣಿಕೆ ಮಾಡಲಾಗಿದೆ. ಒಟ್ಟು SC/ST ಜನಸಂಖ್ಯೆಯು 24.4%.ರಷ್ಟಿದೆ.[೨೦]
- ಇನ್ನಿತರ ಹಿಂದುಳಿದ ವರ್ಗಗಳು
- ಆದರೆ 1931 ರ ನಂತರ ಜನಗಣತಿಯಲ್ಲಿ SC/ST ಅಲ್ಲದ ಜಾತಿ ಗುಂಪುಗಳ ಎಣಿಕೆ ಮಾಡಿಲ್ಲ ಮಂಡಲ್ ಆಯೋಗ ಕೂಡ OBC ಜನಸಂಖ್ಯೆಯನ್ನು 1931 ರ ಜನಗಣತಿ ಆಧರಿಸಿ 52% ಎಂದು ಉಲ್ಲೇಖಿಸಿದೆ.ಮಂಡಲ್ ಆಯೋಗವು ಪ್ರಕಟಿಸಿರುವ OBC ಜನಸಂಖ್ಯೆಯ ಆಧಾರದ ತರ್ಕದ ಮೇಲೆ ಉದ್ಭವಿಸಿದ ಇನ್ನೂ ವಿವಾದಗಳು ಇನ್ನೂ ತಣ್ಣಗಾಗಿಲ್ಲ. ಪ್ರಖ್ಯಾತ ಮತದಾನ ಶಾಸ್ತ್ರಜ್ಞ ಮತ್ತು ಸಂಶೋಧಕ CSDS ದ ಡಾ.ಯೋಗೇಂದ್ರ ಯಾದವ್ ಅವರ ಪ್ರಕಾರ ಜನಗಣತಿಯ [ಅವರನ್ನು ಮತದಾನ ಶಾಸ್ತ್ರಜ್ಞದ ಪ್ರಯೋಗಶೀಲ ವಿಜ್ಞಾನಿ ಎನ್ನಲಾಗುತ್ತದೆ.]ಈ ಮಂಡಲ್ ಜನಗಣತಿಗೆ ಯಾವುದೇ ವೈಜ್ಞಾನಿಕ ತಾತ್ವಿಕ ಆಧಾರವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. "ಅವರು ಹೇಳುವ ಪ್ರಕಾರ " ಇದು ಆಧಾರರಹಿತ ರಚನೆ SC/ST,ಮುಸ್ಲಿಮ್ಸ್ ಮತ್ತು ಇನ್ನಿತರರ ಸಂಖ್ಯೆಯನ್ನು ಕಡಿಮೆ ಮಾಡಿ ಈ ನಿರ್ಣಯಕ್ಕೆ ಬರುವುದು ಸಮಂಜಸವಲ್ಲ".ಎಂದಿದ್ದಾರೆ.
ನ್ಯಾಶನಲ್ ಸ್ಯಾಂಪಲ್ ಸರ್ವೆ ದ 1999-2000 (NSS 99-00)ಪ್ರಕಾರ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 36 ರಷ್ಟು ಜನರು ಇನ್ನಿತರ ಹಿಂದುಳಿದ ಜನಾಂಗದ (OBC)ಜನರಿದ್ದಾರೆಂದು ತಿಳಿಸಿತು. ಮುಸ್ಲಿಮ್ OBC ಗಳನ್ನು ಹೊರತುಪಡಿಸಿದರೆ ಇದು 32 ಶೇಕಡಾವಾರು ನಿಲ್ಲುತ್ತದೆ. ನ್ಯಾಶನಲ್ ಫ್ಯಾಮಿಲಿ ಹೆಲ್ತ್ ಸ್ಟ್ಯಾಟಿಸ್ಟಿಕ್ಸ್ (NFHS)ತನ್ನ ಸರ್ವೇಕ್ಷಣೆಯಲ್ಲಿ ಅಂಕಿಅಂಶವನ್ನು ಮುಸ್ಲಿಮ್ ರಹಿತ OBCs ಗಳನ್ನು 29.8 ಶೇಕಡಾ ಎಂದು ಹೇಳಿದೆ.[೨೧] ಈ ಸರ್ವೇಕ್ಷಣೆಗಳನ್ನು ಮೇಲುಸ್ತುವಾರಿ ಸಮಿತಿಯು ತನ್ನ ಅಧ್ಯಯನಗಳಲ್ಲಿ ವ್ಯಾಪಕವಾಗಿ ಬಳಸಿವೆ.ಡಾ.ಯೋಗೆಂದ್ರ ಯಾದವ್ ಅವರು ಕೂಡಾ ಈ ಅಂಕಿಅಂಶಗಳಲ್ಲಿ ತಮ್ಮ ಪ್ರಯೋಗಗಳನ್ನು ಕೈಗೊಂಡಿದ್ದಾರೆ.[೯] Archived 21 July 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ರಾಜ್ಯ ಜನಸಂಖ್ಯೆಯನ್ನು NSS 99-00 ರಲ್ಲಿ ಇನ್ನಿತರ ವಿಭಾಗಗಳಲ್ಲಿ ನೋಡಬಹುದು.
ವಾದ ವಿವಾದಗಳು
[ಬದಲಾಯಿಸಿ]ಮೀಸಲಾತಿಗಳ ಬಗೆಗೆ ಹಲವಾರು ವಾದ-ವಿವಾದಗಳಿವೆ,ಇದಕ್ಕೆ ಬೆಂಬಲಿಸುವವರೂ ಇದನ್ನು ವಿರೋಧಿಸುವವರೂ ಇದ್ದಾರೆ. ಕೆಲವು ವಾದವಿವಾದಗಳು ಪರಸ್ಪರ ವ್ಯಾಜ್ಯಕ್ಕೆ ಮೂಲವಾದರೆ ಇನ್ನು ಕೆಲವೆಡೆ ವಿಷಯನಾಧರಿಸಿ ಒಟ್ಟಾಭಿಪ್ರಾಯಕ್ಕೆ ಬಂದ ಪ್ರಸಂಗಗಳೂ ಇವೆ.
ಮೀಸಲಾತಿ ಬೆಂಬಲಿಗರ ವಾದಗಳು
[ಬದಲಾಯಿಸಿ]- ಮೀಸಲತಿಗಳು ರಾಜಕೀಯ ಅಗತ್ಯತೆ ಹುಟ್ಟುಹಾಕಿವೆ.ವಿಶಾಲವಾದ ದೇಶದಲ್ಲಿ ಬಹುಜನರಿಗೆ ಹೆಚ್ಚು ಅವಕಾಶಗಳು ದೊರೆಯಬೇಕಿವೆ. ಎಲ್ಲಾ ಸರ್ಕಾರಗಳು ಮೀಸಲಾತಿಗಳ ಜೀವಂತವಿಡಲು/ಅಥವಾ ಹೆಚ್ಚಿಸಲು ಬೆಂಬಲಿಸಿವೆ. ಮೀಸಲಾತಿಗಳು ಕಾನೂನುಸಮ್ಮತ ಮತ್ತು ಬದ್ದತೆಯುಳ್ಳವಾಗಿವೆ. ಗುಜ್ಜರ್ ಪ್ರತಿಭಟನೆಗಳು (ರಾಜಸ್ತಾನ್ 2007-2008)ಮೀಸಲಾತಿಗಳು ಅಗತ್ಯ ಎಂಬುದನ್ನು ತೋರಿಸಿವೆ.ಇದು ಭಾರತವನ್ನು ಶಾಂತಿಯುತವಾಗಿಡಲು ಸಹಕಾರಿ.
- ಮೀಸಲಾತಿಗಳು ಶಿಕ್ಷಣದ ಗುಣಮಟ್ಟವನ್ನು ಕಡಿಮೆಗೊಳಿಸುತ್ತಿರುವುದೇನೋ ನಿಜ ಆದರೆ ನಿರ್ಣಾಯಕ ಕ್ರಿಯಾ ಯೋಜನೆಗಳು ಇನ್ನಿತರ ದೇಶಗಳಲ್ಲಿಯೂ ಇವೆ.ಉದಾಹರಣೆಗೆ USA,ದಕ್ಷಿಣ ಆಫ್ರಿಕಾ, ಮಲೆಶ್ಯಾಬ್ರ್ಯಾಜಿಲ್ಇತ್ಯಾದಿ.ಹೀಗೆಇದರ ಬಗ್ಗೆ ಹಾರ್ವರ್ಡ್ ಯುನ್ವರ್ಸಿಟಿ ಒಂದು ಅಧ್ಯಯನ ಮಾಡಿ ಈ ದೇಶಗಳಲ್ಲಿನ ಕಡ್ಡಾಯ ಯೋಜನೆಗಳು ಕೆಳಮಟ್ಟದ ತುಳಿತಕ್ಕೊಳಗಾದ ಸಮುದಾಯಕ್ಕೆ ಉಪಯುಕ್ತವಾಗಿವೆ.[೨೨] ಆದರೆ ಕರಿಯರು ಕಡಿಮೆ ಅಂಕಗಳೊಂದಿಗೆ ಉನ್ನತ ಶಿಕ್ಷಣಸಂಸ್ಥೆಗಳಿಗೆ ಸೇರಿಕೊಂಡ ನಂತರ ಉತ್ತಮ ಸ್ಕೋರ್ ಗಳಲ್ಲಿ ಪಾಸಾದ ಬಿಳಿಯರೊಂದಿಗೆ ಸ್ಪರ್ಧಿಸುತ್ತಾರೆ. ಅವರು ತಮ್ಮ ಸರಿಜೋಡಿಯಾದ ಸಹಪಾಠಿ ಬಿಳಿಯರಿಗಿಂತ ಮೊದಲೇ ಪದವಿಗಳನ್ನು ಪಡೆಯಲು ಸಮರ್ಥರಾಗುತ್ತಾರೆ. ಅವರು ಈ ಸವಲತ್ತಿನಿಂದಾಗಿ ಬಿಳಿಯರಿಗಿಂತ ವೃತ್ತಿಪರ ಕಾನೂನು ಪದವ,ವಹಿವಾಟು ಮತ್ತು ಔಷಧಿ ವಿಜ್ಞಾನದಲ್ಲಿ ಅದೇ ಸಂಸ್ಥೆಯಿಂದ ಪದವಿ ಪಡೆಯುತ್ತಾರೆ. ಅವರು ಬಿಳಿಯರಿಗಿಂತ ನಾಗರಿಕ ಮತ್ತು ಸಮುದಾಯದ ಚಟುವಟಿಕೆಗಳಲ್ಲಿ ಹೆಚ್ಚು ಕ್ರಿಯಾಶೀಲರಾಗುತ್ತಾರೆ.[೨೩]
- ಆದರೆ ಈ ಮೀಸಲಾತಿ ಯೋಜನೆಗಳು ಶಿಕ್ಷಣದಲ್ಲಿ ಗುಣಮಟ್ಟ ಕಡಿಮೆ ತರಬಹುದಾದರೂ ಕಡ್ಡಾಯದ ಕ್ರಿಯಾತ್ಮಕ ಯೋಜನೆಗಳಿಂದ ಕೆಳವರ್ಗದ ಜನಸಾಮುದಾಯಕ್ಕೆ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಕಾಣಲು ಅನುಕೂಲವಾಗುತ್ತದೆ. (ತಮಿಳುನಾಡಿಗೆ ಸಂಬಂಧಿಸಿದ್ ವಿಧಿ-ವಿಧಾನ ನೋಡಿ)ಶಿಕ್ಷಣದಲ್ಲಿನ ಮೀಸಲಾತಿಯೊಂದೇ ಪರಿಹಾರವಲ್ಲ ಅದು ಹಲವು ಪರಿಹಾರಗಳಲ್ಲೊಂದು. ತುಳಿತಕ್ಕೊಳಗಾದ ಕಡಿಮೆ ಪ್ರಾತಿನಿಧ್ಯ ಹೊಂದಿರು ಜಾತಿಗಳು ವರ್ಗಗಳಿಗೆ ಅವರನ್ನು ಬೇರೆಡೆ ಕ್ಷೇತ್ರದಲ್ಲಿ ಪರಿಣತರನ್ನಾಗಿ ಮಾಡಬಹುದಾಗಿದೆ.
- ಮೀಸಲಾತಿ ಯೋಜನೆಗಳು ಶಿಕ್ಷಣದಲ್ಲಿ ಗುಣಮಟ್ಟದ ಕೊರತೆ ತಂದರೂ ಹಿಂದುಳಿದ ವರ್ಗಗಳ ಅತ್ಯಂತ ಕಡಿಮೆ ಅವಕಾಶ ಪಡೆದವರಿಗೆ ಇದು ವರದಾನವಾಗಲಿದೆ. ಈ ಮೀಸಲಾತಿಯು ಕೆಳದರ್ಜೆಯ ಸಮಾಜದಲ್ಲಿ ತಿರಸ್ಕೃತ ಜನಕ್ಕೆ ಹಳ್ಳಿಗರಿಗೆ ಒಂದು ಆಶಾದಾಯಕ ಕಿರಣವಾಗಿದೆ.ಜಾತಿಆಧಾರಿತ ತಾರತಮ್ಯವನ್ನು ಅದು ಹೋಗಲಾಡಿಸುತ್ತದೆ.(ಸುಮಾರು 60% ರಷ್ಟು ಭಾರತದ ಜನಸಂಖ್ಯೆಯು ಹಳ್ಳಿಗಳಲ್ಲಿ ವಾಸವಾಗಿದೆ)
- ಮೀಸಲಾತಿ ವಿರೋಧಿಸುವವರು ದೊಡ್ಡ ಪ್ರಮಾಣದಲ್ಲಿ ಪ್ರತಿಭಾ ಪಲಾಯನವಾಗುತ್ತಿದೆ ಎಂದು ವಾದಿಸುತ್ತಾರೆ. ಆದರೆ ಈ ಬ್ರೇನ್ -ಡ್ರೇನ್ ಎನ್ನುವಂತಹದು ಹೆಚ್ಚು ಬೇಕೆಂದು" ದುರಾಸೆ ಪಡುವವರಿಂದಾಗುತ್ತದೆ. ಆದರೆ ಈ ಮೀಸಲಾತಿ ಬ್ರೇನ್ -ಡ್ರೇನ್ ಗೆ ಅತ್ಯಂತ ಸಣ್ಣ ಕಾರಣವಾಗಿರಬಹುದು.ಆದರೆ ಮನುಷ್ಯ-ಮನುಷ್ಯರ ನಡುವಿನ ಈ ಭೇದಭಾವ ಸರಿಯಲ್ಲ ಎಂಬ ಸಾಮಾನ್ಯ ನಿಯಮವೂ ನಮಗೆ ತಿಳಿದಿರಬೇಕಾಗಿದೆ. ಮೀಸಲಾತಿಗಳನ್ನು ವಿರೋಧಿಸುವವರು ರಾಷ್ಟ್ರಾಭಿಮಾನದ ಕೊರತೆಯಿಂದ ನರಳುತ್ತಾರೆ,ಈ ಪ್ರತಿಭಾ ಪಲಾಯನ ಅವರಿಗೆ ಅನ್ವಯಿಸುವುದಿಲ್ಲವೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.
- ಪ್ರತಿಭೆ ಮತ್ತು ಉತ್ತಮ ಫಲಿತಾಂಶಗಳ ಬಗ್ಗೆ ಮೀಸಲಾತಿ ವಿರೋಧಿಗಳಲ್ಲಿ ಸರಿಯಾದ ಮಾಹಿತಿಗಳಿಲ್ಲ. ಸಮಾನತೆ ಇಲ್ಲದೇ ಹೋದರೆ ಪ್ರತಿಭಾವಂತತನಕ್ಕೆ ಯಾವುದೇ ಮಹತ್ವ ಇಲ್ಲ. ಮೊದಲು ಎಲ್ಲರನ್ನೂ ಒಂದೇ ಮಟ್ಟಕ್ಕೆ ತರಬೇಕು,ಸಮಾಜದ ಯಾವದೇ ಪಂಗಡ ಸಮುದಾಯವಿರಲಿ ಅದು ತನ್ನತನ ಕಾಯ್ದುಕೊಂಡರೆ ಅದೇ ಪ್ರತಿಭೆಯ ಪ್ರೇರಣೆಗೆ ಕಾರಣವಾಗುತ್ತದೆ. ಇದರ ನಂತರ ನಾವು ಪ್ರತಿಭೆ ಬಗ್ಗೆ ಮಾತನಾಡೋಣ. ಮುಂದುವರೆದ ಜನರು ಹಿಂದೆ ಹೋಗೋವುದನ್ನು ತಿಳಿದಿಲ್ಲ ಅದಕ್ಕೆ ಕಾರಣ ಮೀಸಲಾತಿಗಳು ಅಥವಾ "ಪ್ರತಿಭೆಯ" ಕೊರತೆಯೋ ಗೊತ್ತಿಲ್ಲ ಈ ಮೀಸಲಾತಿಗಳುಮುಂದುವರೆದವರು ಇನ್ನಷ್ಟು "ಶ್ರೀಮಂತರಾಗುವಲ್ಲಿ ಅಡತಡೆಯಾಗಿವೆ,ಬಡವರು ಹಿಂದುಳಿದವರು ಇನ್ನಷ್ಟು ಬಡವರಾಗುತ್ತಿದ್ದಾರೆ." ಚೀನಾದಲ್ಲಿ ಜನರು ಹುಟ್ಟಿನಿಂದ ಸಮಾನತೆಯುಳ್ಳವರಾಗಿದ್ದಾರೆ. ಜಪಾನ್ ನಲ್ಲಿ ಉತ್ತಮ ವಿದ್ಯಾಹರ್ಯತೆಯುಳ್ಳ ವ್ಯಕ್ತಿಯು ತನ್ನ ಪಾಲಿನ ಕೆಲಸವನ್ನು ನಿಗದಿತ ವೇಳೆಯಲ್ಲಿ ಪೂರ್ಣಗೊಳಿಸಿ ಮತ್ತೆ ತನ್ನ ಶ್ರಮದಾಯಕ ಕೆಲಸಕ್ಕೆ ಮರುಳುತ್ತಾನೆ;ಹೀಗೆ ಆತ ಹೆಚ್ಚು ಆದಾಯ ಗಳಿಸುತ್ತಾನೆ. ಹೀಗೆ ಮುಂದುವರೆದ ಕುಶಲ ಕೆಲಸಗಾರರು ಉತ್ತಮ ಕೆಲಸ ಮಾಡಿ ತಮ್ಮ ಜೀವನವಿಡೀ ಸಂತೋಷವಾಗಿರುವ ಗುಟ್ಟೆಂದರೆ ಅವರ ಸತತ ಕಾರ್ಯೋನ್ಮುಖತೆ.
ಮೀಸಲಾತಿ-ವಿರೋಧಿ ವಾದಗಳ ಮಂಡನೆ
[ಬದಲಾಯಿಸಿ]- ಜಾತಿಗಳ ಆಧಾರಿತ ಮೀಸಲಾತಿಯು ಕೇವಲ ಸಮಾಜದಲ್ಲಿ ಜಾತೀಯ ಗುಣಲಕ್ಷಣಗಳ ಪ್ರಬಲತೆಗೆ ಕಾರಣವಾಗುತ್ತದೆ.ಸಾಂವಿಧಾನಿಕವಾಗಿ ನೀಡಿದ ಸಮಾನತೆ ಅರ್ಥವನ್ನು ಅದು ದುರ್ಬಲಗೊಳಿಸಿ ಸಾಮಾಜಿಕತೆ ಪರಿಕಲ್ಪನೆಗೆ ಧಕ್ಕೆ ತರುತ್ತವೆ. ಮೀಸಲಾತಿಯು ರಾಜಕೀಯತೆಯ ಸಣ್ಣತನದ ಒಂದು ಸಲಕರಣೆಯಾಗಿದೆ.
- ಪ್ರಮಾಣಗಳ ನಿಗದಿಯು ಒಂದು ತಾರತಮ್ಯ ಕ್ಕೆ ಕಾರಣವಾಗಿ ಅದು ವ್ಯತಿರಿಕ್ತವಾಗಿ ಸಮಾನತೆ ಹಕ್ಕಿಗೆ ಚ್ಯುತಿ ತರುತ್ತದೆ.
- ಮೀಸಲಾತಿಗಳು ಚುನಾವಣೆಗಳನ್ನು ಕೆಲವು ಆಯ್ದ ಜಾತಿಗಳ ಗುತ್ತಿಗೆಯಾಗಿಸಬಹುದು,ಇಲ್ಲವೆ ಭಾರತೀಯ ಸಮಾಜವನ್ನು ಹೋಳು ಮಾಡಬಹುದು. ಕೇವಲ ಒಂದು ಜಾತಿ ಗುಂಪಿಗೆ ಮತಕ್ಷೇತ್ರಗಳ ಮೀಸಲಿಡುವುದು, ಅದು ಜಾತಿ ಹೆಸರಿನಲ್ಲಿ ಪ್ರತಿಭಟನೆ,ಭ್ರಷ್ಟಾಚಾರ ಮತ್ತು ರಾಜಕೀಯ ಇಚ್ಛಾಶಕ್ತಿಯನ್ನು ಕುಂದಿಸುತ್ತದೆ. ಇದು ಮೀಸಲಾತಿಗಳ ಪರ ವಾದವಲ್ಲ.
- ಮೀಸಲಾತಿ ನೀತಿಯು ಸಾಮಾಜಿಕ ಅಥವಾ ರಾಜಕೀಯ ತತ್ವದ ವಿಶಾಲ ತಳಹದಿಯ ವಿಷಯವನ್ನೊಳಗೊಂಡಿಲ್ಲ. ಬೇರೆ ಜಾತಿಗಳಿಗೆ ಈ ಮೀಸಲಾತಿ ವಿಸತರಿಸುವ ಮುನ್ನ ಈ ಮೊದಲಿನ ಸ್ಥಿತಿಯ ಅವಲೋಕಿಸಬೇಕು.ಕಳೆದೆಅ 60 ವರ್ಷಗಳಿಂದ ನೀಡಿರುವ ಈ ಸವಲತ್ತಿನ ಕನಿಷ್ಟ ಅನುಕೂಲಗಳ ಅಧ್ಯಯನವಾಗಬೇಕು.
- ಸುಮಾರು 60% ಕ್ಕೂ ಹೆಚ್ಚು ಜನರು ಗ್ರಾಮೀಣ ಭಾರತದಲ್ಲಿದ್ದು ಅವರಿಗೆ ಆರೋಗ್ಯ,ಮೂಲಭೂತ ಸೌಲಭ್ಯ ಅಗತ್ಯವಿದೆಯೇ ವಿನಹ ನಗರ ಪ್ರದೇಶಗಳ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯಲ್ಲ.
- "ಮುಂದುವರೆದ"ಜಾತಿಗಳ ಬಡವರು ಹಿಂದುಳಿದ ಜಾತಿಗಳ ಶ್ರೀಮಂತರ ಜೊತೆಗೆ ಯಾವುದೇ ಸಾಮಾಜಿಕ ಸಂಬಂಧ ಬೆಳಸಲಾಗದು. ಸಾಂಪ್ರದಾಯಿಕವಾಗಿ ಹಿಂದಿನಿಂದಲೂ ಬ್ರಾಹ್ಮಣರು ಬಡವಾರಿಗಿಯೇ ಉಳಿದಿದ್ದಾರೆ.
- ಹಲವರು ಮೀಸಲಾತಿ ಬೆಂಬಲಕ್ಕೆ ಮಂಡಲ್ ಆಯೋಗವನ್ನೇ ಉದಾಹರಿಸುತ್ತಾರೆ. ಮಂಡಲ್ ಆಯೋಗದ ಪ್ರಕಾರ ಭಾರತೀಯ ಹಿಂದುಳಿದ ಜನಾಂಗದಲ್ಲಿ52% ರಷ್ಟು OBC ಗೆ ಸೇರಿದರೆ,ನ್ಯಾಶನಲ್ ಸ್ಯಾಂಪಲ್ ಸರ್ವೆ 1999-2000 ಪ್ರಕಾರ ಕೇವಲ 36% (32% ಮುಸ್ಲಿಮ್ OBC ರನ್ನು ಹೊರತುಪಡಿಸಿ)[೨೪]
- ಈ ನೀತಿಯು ಈಗಾಗಲೇ ಪ್ರತಿಭಾಪಲಾಯನಕ್ಕೆ ದಾರಿ ಮಾಡಿದೆ.ಇದು ಇನ್ನಷ್ಟು ಏರಿಕೆಯಾಗಲಿದೆ.[೧೦] Archived 4 December 2008[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಪದವಿ ಪೂರ್ವ ಮತ್ತು ಪದವೀಧರರು ಉನ್ನತ ಶಿಕ್ಷಣಕ್ಕಾಗಿ ಬೇರೆ ವಿಶ್ವವಿದ್ಯಾಲಯಗಳಿಗೆ ತೆರಳುತ್ತಾರೆ.
- ಮೀಸಲಾತಿ ಕುರಿತ ಬೆಂಬಲಿತ ವಾದಗಳು US ನ ಸಂಶೋಧನೆ ಅವಲಂಬಿಸಿವೆ,ಯಾಕೆಂದರೆ US ನಲ್ಲಿ ಈ ತೆರನಾದ ಕ್ರಿಯಾತ್ಮಕ ನೀತಿಗಳ ರೂಪಿಸಿಲ್ಲ.ಅಲ್ಲಿ ಮೀಸಲಾತಿ-ಪ್ರಮಾಣದ ಕೋಟಾಗಳಿಲ್ಲ ಎಂಬುದನ್ನು ಅರಿಯಬೇಕು. ಮೀಸಲಾತಿ ಪ್ರಮಾಣಗಳ ನಿಗದಿ ಅಥವಾ ಎಗೆದು ಹಾಕುವ ಪ್ರಕ್ರಿಯೆ USA ದಲ್ಲಿಲ್ಲ.ಒಬ್ಬ ವ್ಯಕ್ತಿಯ ಪರವಾಗಿರುವುದನ್ನು ಸಾಂವಿಧಾನಿಕವಾಗಿ ಒಪ್ಪಲಾಗದು.[೨೫]. ಇನ್ನೂ ಹೆಚ್ಚೆಂದರೆ ಓಲೈಕೆಯಂತಹ ಕ್ರಿಯಾ ವಿಶೇಷಣಗಳನ್ನು ಕ್ಯಾಲಿಫೊರ್ನಿಯಾ,ವಾಶಿಂಗ್ಟನ್ ,ಮಿಚಿಗನ್ ,ನೆಬ್ರಾಸ್ಕಾ ಮತ್ತು ಕನೆಕ್ಟಿ ಕಟ್ ಗಳಲ್ಲಿ ನಿಷೇಧಿಸಲಾಗಿದೆ.[೨೬] ಇಲ್ಲಿ "ಕಡ್ಡಾಯ ಕ್ರಿಯಾಯೋಜನೆ"ಎಂಬ ನುಡಿಗಟ್ಟು ಸಾಮಾಜಿಕವಾಗಿ ಭಾರತದಲ್ಲಿ ಎರಡು ಪದ್ದತಿಗಳ ತಾರತಮ್ಯವನ್ನು ತಂದೊಡ್ಡುತ್ತದೆ.
- ಇಂದು ಮಾದರಿ ಭಾರತದಲ್ಲಿ ನಗರ ಪ್ರದೇಶದ ಹಲವಾರು ಉದ್ಯಮಗಳು, ವ್ಯವಹಾರದ ಅವಕಾಶಗಳು ಉನ್ನತ ಜಾತಿಯವರಲ್ಲದವರ ಕೈಯಲ್ಲಿವೆ. ನಗರದಲ್ಲಿ ಮೇಲ್ಜಾತಿಯವರಾಗಿದ್ದವರಿಗೆ ಯಾವುದೇ ಸವಲತ್ತಿಲ್ಲ
- ಎಲ್ಲರೂ ಯೋಚಿಸಬೇಕಾದ ಒಂದು ವಿಷಯ ಎನೆಂದರೆ ಮೀಸಲಾತಿಯನ್ನು ಒಂದು ಸಮುದಾಯಕ್ಕೆ ಅಂತ ಕೊಟ್ಟಾಗ ನಮಗೆ ಹೇಗಾದ್ರೂ ಕೆಲಸ ಸಿಕ್ಕೇ ಸಿಗುತ್ತೆ ಅಂತ ತಿಳಿದ ಅವರು ಮೂವತ್ತೋ ನಲವತ್ತೊ ಪ್ರತಿಶತ ಅಂಕಗಳನ್ನುಮಾತ್ರ ಗಳಿಸುವಲ್ಲಿ ತೃಪ್ತರಾಗುತ್ತಾರೆ. ಇದರಿಂದ ಎನಾಗುತ್ತೆ ಇಡೀ ಸಮುದಾಯದಲ್ಲಿ ನಲವತ್ತು ಅಂಕ ಗಳಿಸಿದವರೆ ಎಲ್ಲರೂ ಆದರೆ ಸಮುದಾಯದ ಬುದ್ಧಿಮಟ್ಟ ಕುಸಿಯುತ್ತದೆ. ಮೀಸಲಾತಿ ಇಲ್ಲದ ಮೇಲ್ವರ್ಗದವರಿಗೋ ಜೀವಿಸಬೇಕು ಅಂತ ಹೇಳಿದಲ್ಲಿ ತೊಂಬತ್ತು ಅಂಕ ಪಡೆಯಲೇ ಬೇಕು. ಆದ್ದರಿಂದ ಮೇಲ್ವರ್ಗದಲ್ಲಿ ಜನಿಸಿದವರು ಬುದ್ಧಿಮಟ್ಟವನ್ನು ಹೆಚ್ಚಿನ ಅಂಶದಲ್ಲಿ ಕಾಯ್ದುಕೊಂಡು ಹೋಗಲು ಯಶಸ್ವೀ ಆಗುತ್ತಾರೆ. ಆದ್ದರಿಂದ ಮೀಸಲಾತಿ ಎನ್ನುವುದು ಸಮುದಾಯಕ್ಕೆ ಸಮುದಾಯವನ್ನೇ ಶಾಶ್ವತವಾಗಿ ದಡ್ಡರನ್ನು ಮಾಡುವ ಒಂದು ಕ್ರಮ. ಹಾಗಾಗಿ ಆಯಾ ಸಮುದಾಯದವರೇ ಸ್ವತಃ ಮೀಸಲಾತಿಯನ್ನು ಕೈ ಬಿಡುವುದು ಉತ್ತಮ.
ಇತರೆ ಪ್ರಮುಖ ಸಲಹೆಗಳು.
[ಬದಲಾಯಿಸಿ]ಈ ನೀತಿಗೆ ಕೆಲವು ಸಲಹೆಗಳನ್ನು ನೀಡಿ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಯತ್ನಿಸಲಾಗಿದೆ.
ಸಾಚಾರ್ ಸಮಿತಿಯ ಶಿಫಾರಸುಗಳು
- ಭಾರತದಲ್ಲಿನ ಮುಸ್ಲಿಮ್ ರ ಹಿಂದುಳಿದಿರುವಿಕೆ ಅಧ್ಯಯನಕ್ಕಗಿ ನೇಮಕವಾದ ಸಾಚಾರ್ ಸಮಿತಿ ನಿಜವಾದ ಬದವರ ಪತ್ತೆಗೆ ಕೆಲವು ಶಿಫಾರಸು ಮಾಡಿದೆ.[೧೧]
- ಪ್ರತಿಭೆಯ ಆಧಾರಿತ ಅಂಕಗಳು:60
- ಮನೆಯ ಆದಾಯದ ಅಂಕಿಗಳ ಅಧಾರಿತ(ಜಾತಿ ಪರಿಗಣನೆ ಇಲ್ಲ):13
- ಯಾವಜಿಲ್ಲೆಯಲ್ಲಿ(ಗ್ರಾಮೀಣ/ನಗರದ&ಧರ್ಮ): ಅಭ್ಯರ್ಥಿಯು ಓದಿದ್ದಾನೆಂಬುದನ್ನು ಪರಿಗಣಿಸಲಾಗವುದಿಲ್ಲ: 13
- ಅಂಕಗಳು ಕುಂಟುಂಬದ ವೃತ್ತಿ ಮತ್ತುಜಾತಿಯ ಆಧಾರ ಅವಲಂಬಿಸಿದೆ.:14
- ಒಟ್ಟುಅಂಕಗಳು : 100
ಸಾಚಾರ ಸಮಿತಿ ಪ್ರಕಾರ ಶೈಕ್ಷಣಿಕ ಸಂಸ್ಥೆಗಳಲ್ಲಿರುವ OBC ಹಿಂದುಗಳು ತಮ್ಮ ಜನಸಂಖ್ಯಾ ಅನುಪಾತಕ್ಕೆ ಪೂರಕವಾಗಿದ್ದಾರೆ.[೨೭]. ಭಾರತದ ಮಾನವ ಸಂಪನ್ಮೂಲ ಇಲಾಖೆಯ ಸಚಿವರು ಸಾಚಾರ್ ಸಮಿತಿಯ ಭಾರತೀಯ ಮುಸ್ಲಿಒಮ್ ರ ಕುರಿತ ಶಿಫಾರಸುಗಳ ಪರಿಶೀಲನೆಗೆ ಒಂದು ಸಮಿತಿ ರಚಿಸಿದರು.ಆದರೆ ಉಳಿದವರ ಬಗ್ಗೆ ಚಕಾರವೆತ್ತದೆ ಅದರ ಸಲಹೆಗಳಿಗೂ ಕಿವಿಗೊಡದೇ ಸುಮ್ಮನಾದರು. ಇದರಲ್ಲಿರುವ ದೋಷವೆಂದರೆ ಮೊದಲ ಶ್ರೇಣಿ ಪಡೆದ ಅಭ್ಯರ್ಥಿ ಪ್ರವೇಶ ಅಥವಾ ಪ್ರವೇಶಕ್ಕೆ ಅಯೋಗ್ಯನಾಗುವ ಸಾಧ್ಯತೆ ಇದೆ.ಇದು ಸಮಾನತೆಯ ತತ್ವಕ್ಕೆ ಮತ್ತು ನೈಸರ್ಗಿಕ ನ್ಯಾಯಕ್ಕೆ ತದ್ವಿರುದ್ದವಾದುದು.
ಸಮಾಜ ಸುಧಾರಣೆಯ ಅಧ್ಯಯನ ಕೇಂದ್ರದ ಸಲಹೆ
- ಕೇವಲ ಜಾತಿಯೇ ಮಹತ್ವದ ಅಂಶವಾದರೆ ಸರ್ಕಾರಿ ಸೇವೆ ಮತ್ತು ಅನುಕೂಲ ಪಡೆಯಲು ಇನ್ನಿತರ ಅಂಶಗಳಾದ ಲಿಂಗ,ಆರ್ಥಿಕ ಸ್ಥಿತಿಗತಿಗಳು,ಭೌಗೋಳಿಕ ಅಸಮಾನತೆಗಳು, ಶಾಲಾಶಿಕ್ಷಣ ಪಡೆಯುವ ಆಗೆ ಇತ್ಯಾದಿಗಳ ಕಡೆಗಡಣೆಯಾಗುತ್ತದೆ. ಉದಾಹರಣೆಗೆ ಹಳ್ಳಿಯಲ್ಲಿ ಓದುವ ಮಗು ಮತ್ತು ನಗರ ಪ್ರದೇಶದ ಉತ್ತಮ ಶಾಲೆಯಲ್ಲಿ ಕಲಿಯುವ ಮಗು ಭೇದಭಾವಕ್ಕೆ ಗುರಿಯಾಗುತ್ತವೆ;ಇಲ್ಲಿ ಜಾತಿ ಪರಿಗಣನೆ ಇಲ್ಲ. ಈ ಕಡ್ಡಾಯ ಕ್ರಿಯಾಶೀಲತೆ ನೀತಿಯು ಸಮಾಜದಲ್ಲಿ ಅನರೋಗ್ಯಕರ ಸ್ಪರ್ಧೆಗೆ ಕಾರಣವಾಗುತ್ತದೆ.ಕೆಲಸದ ಸ್ಥಳದಲ್ಲಿ ಪರಸ್ಪರ ಸಮಾನತೆ ಕಠಿಣವಾಗುತ್ತದೆ ಎಂದು ಕೆಲವು ಶಿಕ್ಷಣ ತಜ್ಞರು ಅಭಿಪ್ರಾಯಪಡುತ್ತಾರೆ. ಈ ಕುರಿತಂತೆಅ ಜವಾಹರಲಾಲ ನೆಹರೂ ಯುನ್ವರ್ಸಿಟಿಯ ಪ್ರೊಫೆಸರ್ ಪುರೋಷತ್ತಮ ಅಗರವಾಲ್ ಅವರ ಕೊಡುಗೆ ಬಹು ಮೌಲ್ಯಯುಳ್ಳದ್ದಾಗಿದೆ.ಇದನ್ನು ಅವರು ಮಲ್ಟಿಪಲ್ ಇಂಡೆಕ್ಸ್ ರಿಲೇಟೆಡ್ ಅಫರ್ಮೇಟಿವ್ ಆಕ್ಶನ್ [MIRAA] ಎಂದು ಹೆಸರಿಸಿದ್ದಾರೆ.(ಇಲ್ಲಿ ನೋಡಿ: http://www.sabrang.com/cc/archive/2006/june06/report3.html)ಇದರ ಜೊತೆಗೆ ಅಭಿವೃದ್ಧಿ ಹೊದುತ್ತಿರುವ ಸಮಾಜಗಳ ಅಧ್ಯಯನ ಕೇಂದ್ರದ [CSDS]ಡಾ:ಸತೀಶ್ ದೇಶಪಾಂಡೆ ಮತ್ತು ಡಾ.ಯೋಗೇಂದ್ರ ಯಾದವ್ ಇದರ ಬಗ್ಗೆ ಕೆಲವು ಸಲಹೆ ನೀಡಿದ್ದಾರೆ.
ಇತರರ ಶಿಫಾರಸುಗಳು
- ಮೀಸಲಾತಿಗಳ ನಿರ್ಧಾರಗಳನ್ನು ವಾಸ್ತವ ಆಧಾರಗಳಿಗನುಸಾರವಾಗಿ ತೆಗೆದುಕೊಳ್ಳಬೇಕು.
- ಮೊದಲು ಪ್ರಾಥಮಿಕ (ಪ್ರೌಢಶಾಲಾಶಿಕ್ಷಣ) ನೀಡುವಲ್ಲಿ ಒತ್ತು ನೀಡಬೇಕು.ಎಲ್ಲಾ ವರ್ಗದ ಗುಂಪುಗಳು ಉನ್ನತ ಶಿಕ್ಷಣ,ವಿಶ್ವವಿದ್ಯಾಲಯಗಳಲ್ಲಿ ಅವಕಾಶ ಪಡೆಯುವಂತಾಗಲು ಆರಂಭಿಕ ಶಿಕ್ಷಣ ನೀಡಬೇಕು.ಇದರಿಂದ ನೈಜ ಸ್ಪರ್ಧೆಗಳ ಎದುರಿಸಲು ಸಾಧ್ಯವಾಗುತ್ತದೆ.
- ಪ್ರತಿಷ್ಟಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನಾವಕಾಶಗಳ ಹೆಚ್ಚಿಸಬೇಕು.(ಉದಾಹರಣೆಗೆ IITs)
- ಸರ್ಕಾರವು ಮೀಸಲಾತಿ ಕುರಿತ ಸುದೀರ್ಘಾವಧಿಯ ಯೋಜನೆ ರೂಪಿಸಬೇಕು.
- ಸರ್ಕಾರವು ಅಂತರ್ ಜಾತೀಯ ವಿವಾಹಗಳನ್ನು [೨೮] ಉತ್ತೇಜಿಸಬೇಕು.ಇದರಿಂದ ದೊಡ್ಡ ಪ್ರಮಾಣದಲ್ಲಿ [೨೯] ತಮಿಳುನಾಡಿನಲ್ಲಿನಂತೆ ಜಾತಿ ಪದ್ದತಿ ಹೋಗಲಾಡಿಸಬಹುದು.[೩೦]
ಇದರಿಂದ ಮೂಲಭೂತವಾದ ಜಾತಿ ಪದ್ದತಿ-ಆಚರಣೆಗಳು ಅಳಿದುಹೋಗಬಹುದು. ಅಂತರ್ ಜಾತೀಯ ವಿಹಾಹದಿಂದ ಜನಿಸಿದ ಮಗುವಿಗೆ ಮೀಸಲಾತಿ ಅವಕಾಶ ನೀಡುವುದರಿಂದ ಸಮಾಜದಲ್ಲಿನ ಜಾತಿ ಪದ್ದತಿಯನ್ನು ವಿನಾಶ ಮಾಡಬಹುದು.
- ಮೀಸಲಾತಿಗಳನ್ನು ಜಾತಿಆಧಾರದ ಮೇಲೆ ಕೊಡುವುದಕ್ಕಿಂತ ಕುಟುಂಬದ ಆದಾಯವನ್ನು ಪರಿಗಣಿಸಬೇಕು.ಆದರೆ ಇದು ಸಂಬಳದ ಮೇಲೆ ಜೀವನ ನಡೆಸುತ್ತಿರುವ ಮಧ್ಯಮವರ್ಗದ ಕುಟುಂಬದವರಿಗೆ ಅದು ಅನುಕೂಲವಾಗುವುದಿಲ್ಲ.ಇದರ ಬದಲಾಗಿ ವ್ಯಾಪಾರಿಗಳು ಇದರ ಲಾಭ ಪಡೆಯಬಹುದಾಗಿದೆ.
- ದೇಶದ ತೆರಿಗೆ ಕೊಡುವ ಜನರು ಮತ್ತು ಅವರ ಮಕ್ಕಳು ಈ ಸವಲತ್ತುಗಳಿಗೆ ಹಕ್ಕುದಾರರಾಗಿರುತ್ತಾರೆ. ಈ ಮಾಸೂದೆಯ ಭಾರತದ ಅತ್ಯಂತ ಬಡವ್ಯಕ್ತಿಗೆ ತಲುಪಬೇಕೆಂದು ಸರ್ಕಾರ ಕ್ರಮಗಳನ್ನು ಕೈ ಗೊಂಡಿದೆ. ಹೀಗೆ ಸಂಪತ್ತಿನ ಗಣನೆ ಮಾಡುವುದರಿಂದ ಜನರು ಸರ್ಕಾರಕ್ಕೆ ನೀಡುವ ಆದಾಯ ತೆರಿಗೆಯನ್ನು ತಪ್ಪಿಸಿ ಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇಂತಹ ವಿಷಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಾಗುತ್ತದೆ.T
- ಅತ್ಯಧುನಿಕ ಮಾಹಿತಿ ತಂತ್ರ ಜ್ಞಾನಬಳಸಿಕೊಂಡು ಸರ್ಕಾರವು ಜಾತಿವಾರು ಎಣಿಕೆ ಮಾಡಬೇಕು. ಜನಸಂಖ್ಯೆಯ ಒಟ್ಟುಆದಾಯ ಅವರ ವೃತ್ತಿಕೆಲಸ ಹಾಗು ಅವರ ಸಂಪತ್ತಿನ ಬಗ್ಗೆ ನಿಖರವಾದ ಮಾಹಿತಿಯನ್ನು ಸಂಗ್ರಹಿಸಬೇಕು. ಅಂತಿಮವಾಗಿ ಜನಾಭಿಪ್ರಾಯವನ್ನು ಪರಿಗಣಿಸಿ ಅವರಿಗೆ ಆಗತ್ಯವಿರುವ ರೀತಿಯಲ್ಲಿ ನಿಯಮಾವಳಿಗಳನ್ನು ರಚಿಸಲಾಗುತ್ತದೆ. ವಿವಿಧ ಅಭಿಪ್ರಾಯಗಳುಳ್ಳ ಜನರ ಇಚ್ಚೆಯ ಮೇರೆಗೆ ಶೈಕ್ಷಣಿಕ ಸಂಸ್ಥೆ ಗಳನ್ನು ಸ್ಥಾಪಿಸಲು ಸರ್ಕಾರ ಅನುಮತಿ ನೀಡುತ್ತದೆ. ಅಂದರೆ ಮೀಸಲಾತಿಗಳನ್ನು ಆಯಾ ಸಂದರ್ಭಕ್ಕೆಅನುಗಣವಾಗಿ ಆಡಳಿತದ ನಿಯಂತ್ರಣದಲ್ಲಿರುವ ಸ್ಥಾನ ಗಳನ್ನು ಹಂಚಿಕೆ ಮಾಡಬಹುದಾಗಿದೆ. ಇಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲದೆ, ದಾರ್ಮಿಕ ಅಥವ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆ ಗಳನ್ನು ತಮ್ಮಿಂದ ನಿಯಮಾವಳಿಗಳನ್ನು ರಚಿಸಬಹುದಾಗಿದೆ .
- ಆದಾಯ ಅನುಸಾರವಾಗಿ ಮತ್ತು ಅದರಲ್ಲಿ ಸರ್ಕಾರಿ ನೌಕರರನ್ನ ವಿಂಗಡಿಸಿ ,ಜಾತಿ ಮೀಸಲಾತಿ ಬಿಟ್ಟು ಬಡವರಿಗೆ ಮಾತ್ರ ಮೀಸಲಾತಿ ಕೊಡುವುದು ಸೂಕ್ತ.ಶಿಕ್ಷಣಕ್ಕೆ %ಶೇಕಡಾವಾರು ಮೀಸಲಾತಿ ನೀಡದೆ ಶಾಲೆಯ ಶುಲ್ಕಗಳಲ್ಲಿ ಕಡಿತಗೊಳಿಸಿ , ಸರ್ಕಾರಿ ಕೆಲಸಗಳಲ್ಲಿ %ಶೇಕಡಾ ಎಂದು ಕಾಯ್ದಿರಿಸಿಬೇಕು.
ಹಾಗೆ ಸರಕಾರದ ಸವಲತ್ತುಗಳಲ್ಲೂ %ಶೇಕಡಾವರು ಕಾಯ್ದಿರಿಸಿಬೇಕು.
ಇವನ್ನೂ ಗಮನಿಸಿ
[ಬದಲಾಯಿಸಿ]- ಭಾರತದ ಮಹಿಳಾ ಮೀಸಲಾತಿ ಮಸೂದೆ
- ಧನ್ಗರ್ (ಗೌಳಿಗರು)ಪರಿಶಿಷ್ಟ ಬುಡಕಟ್ಟು ವರ್ಗದ ವಿವಾದ
- ರಾಷ್ಟ್ರೀಕರಣ
- ಸಮಾಜವಾದ
- ಭಾರತದಲ್ಲಿ ಜಾತಿ ರಾಜಕಾರಣಗಳು
ಉಲ್ಲೇಖಗಳು
[ಬದಲಾಯಿಸಿ]- ↑ "ಡೆ ಝವರ್ಟ,ದಿ ಲಾಜಿಕ್ ಆಫ್ ಅಫರ್ಮೇಟಿವ್ ಆಕ್ಷ ನ್: ಕಾಸ್ಟ್,ಕ್ಲಾಸ& ಕೋಟಾಸ್ ಇನ್ ಇಂಡಿಯಾ,Acta Sociologica 2000; 43; 235". Archived from the original on 26 ಅಕ್ಟೋಬರ್ 2009. Retrieved 25 ಅಕ್ಟೋಬರ್ 2010.
- ↑ "ಆರ್ಕೈವ್ ನಕಲು". Archived from the original on 1 ಜೂನ್ 2011. Retrieved 25 ಅಕ್ಟೋಬರ್ 2010.
- ↑ "ಆರ್ಕೈವ್ ನಕಲು". Archived from the original on 1 ಜೂನ್ 2008. Retrieved 25 ಅಕ್ಟೋಬರ್ 2010.
- ↑ ೪.೦ ೪.೧ ಭಾರತದ ಸಂವಿಧಾನ(ಶಾಸನ)(ರಾಜ್ಯವ್ಯವಸ್ಥೆ)
- ↑ [117]^ಭಟ್ಟಾಚಾರ್ಯ ಅಮಿತ್, . "Who are the OBCs?". Archived from the original on 27 ಜೂನ್ 2006. Retrieved 19 ಏಪ್ರಿಲ್ 2006.ಟೈಮ್ಸ್ ಆಫ್ ಇಂಡಿಯಾ ,8 ಏಪ್ರಿಲ್ 2006.
- ↑ ೬.೦ ೬.೧ Ramaiah, A (6 ಜೂನ್ 1992). "Identifying Other Backward Classes" (PDF). Economic and Political Weekly. pp. 1203–1207. Archived from the original (PDF) on 30 ಡಿಸೆಂಬರ್ 2005. Retrieved 27 ಮೇ 2006.
{{cite web}}
: Cite has empty unknown parameter:|curly=
(help) - ↑ "New Cutoff for OBCs". The Telegraph. 11 ಏಪ್ರಿಲ್ 2008. Retrieved 11 ಏಪ್ರಿಲ್ 2008.
- ↑ IndianExpress.com :: Court, quota and cream
- ↑ "www.ಸೇವ್ ಬ್ರಾಂಡ್ ಇಂಡಿಯ.org". Archived from the original on 21 ಜುಲೈ 2011. Retrieved 25 ಅಕ್ಟೋಬರ್ 2010.
- ↑ ಸುಪ್ರೀಮ್ ಕೋರ್ಟ್ ನ ತೀರ್ಪು ಅಶೋಕ್ ಕುಮಾರ್ ಠಾಕೂರ್ vs. Archived 15 July 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಯೂನಿಯನ್ ಆಫ್ ಇಂಡಿಯಾ
- ↑ ೧೧.೦ ೧೧.೧ Viswanathan, S. (16 ನವೆಂಬರ್ 2007). "A step forward". Frontline. Vol. 24, no. 22. Archived from the original on 20 ನವೆಂಬರ್ 2010. Retrieved 25 ಅಕ್ಟೋಬರ್ 2010..
- ↑ ಇವ್ಯಾಲ್ಯುವೇಟಿಂಗ್ ತಮಿಳ್ ನಾಡುಸ್ 69% ಕೋಟಾ
- ↑ "ಆರ್ಕೈವ್ ನಕಲು". Archived from the original on 28 ಮೇ 2007. Retrieved 25 ಅಕ್ಟೋಬರ್ 2010.
- ↑ ಮೀಸಲಾತಿ-ವಿರೋಧಿ ಪ್ರತಿಭಟನೆಗಳ ವ್ಯಾಪಕ ಹರಡುವಿಕೆ
- ↑ ರಾಷ್ಟ್ರದಾದ್ಯಂತ ಮೀಸಲಾತಿ ವಿರೋಧಿ ಚಳವಳಿ ನಿರಂತರ
- ↑ "Doc's hunger strike enters 10th day". CNN-IBN, Global Broadcast News. 23 ಮೇ 2006. Archived from the original on 12 ಮೇ 2008. Retrieved 27 ಮೇ 2006.
- ↑ "ದಿ ಹಿಂದು:ಅಭಿಪ್ರಾಯ, ನಾಯಕರ ಲೇಖನಗಳು / ಭಾರತದ ಮಾಧ್ಯಮಗಳಲ್ಲಿ ಜಾತಿ ವಿಷಯಗಳು". Archived from the original on 27 ಜನವರಿ 2010. Retrieved 25 ಅಕ್ಟೋಬರ್ 2010.
- ↑ "ಸರ್ವೋಚ್ಚನ್ಯಾಯಾಲಯವು ಮೀಸಲಾತಿಯನ್ನು ಎತ್ತಿ ಹಿಡಿಯಿತು.ಕೆನೆಪದರನ್ನು ಬದಿಗಿಟ್ಟಿತು". Archived from the original on 21 ಆಗಸ್ಟ್ 2008. Retrieved 25 ಅಕ್ಟೋಬರ್ 2010.
- ↑ ಸರ್ವೋಚ್ಚ ನ್ಯಾಯಾಲಯವು IIMs,IITs ಗಳಲ್ಲಿ ಮೀಸಲಾತಿ ಪ್ರಮಾಣಕ್ಕೆ ಸಮ್ಮತಿಸಿದೆ.
- ↑ "Population". Registrar General & Census Commissioner, India. Archived from the original on 26 ಮೇ 2006. Retrieved 27 ಮೇ 2006.
- ↑ "36% population is OBC, not 52%". South Asian Free Media Association. 8 ಮೇ 2006. Archived from the original on 18 ಮೇ 2011. Retrieved 27 ಮೇ 2006.
- ↑ ಕಾನೂನು ಮೊಕದ್ದಮೆಗಳ ಬಗ್ಗೆ U-M ಮಾಹಿತಿ
- ↑ "ಸವಲತ್ತುಗಳನ್ನು ಎಲ್ಲರಿಗೂ ತಲುಪಿಸಲು ಒಂದು ಅಧ್ಯಯನಕ್ಕೆ ಇರಬೇಕಾದ ಕೇಂದ್ರ ಉನ್ನತ ಶಿಕ್ಷಣ ಸಂಸ್ಥೆಗಳು". Archived from the original on 13 ಜೂನ್ 2010. Retrieved 25 ಅಕ್ಟೋಬರ್ 2010.
- ↑ ಕೋಟಾ:ಜಸ್ಟ್ ಹೌ ಮೇನಿ OBCs ಆರ್ ದೇರ್?
- ↑ http://supct.law.cornell.edu/supct/03highlts.html#2
- ↑ http://en.wikipedia.org/wiki/Affirmative_action_in_the_United_States#California
- ↑ Image:CurrentEducation.jpg
- ↑ "ಸ್ಟಾಟಿಸ್ಟಿಕಲ್ ಹ್ಯಾಂಡ್ ಬುಕ್- ಸೋಶಿಯಲ್ ವೆಲ್ಫೇರ್l". Archived from the original on 9 ಜೂನ್ 2007. Retrieved 25 ಅಕ್ಟೋಬರ್ 2010.
- ↑ "ದಿ ಹಿಂದು:ತಮಿಳುನಾಡು /ತಿರುನೆಲ್ವೆಲಿ ನಿವ್ಸ್: ಅಸಿಸ್ಟಟನ್ಸ್ ಡಿಸ್ಟ್ರಿಬ್ಯೂಟೆಡ್". Archived from the original on 5 ಡಿಸೆಂಬರ್ 2010. Retrieved 25 ಅಕ್ಟೋಬರ್ 2010.
- ↑ "ದಿ ಹಿಂದು:ತಮಿಳುನಾಡು /ಟುಟಿಕಾರಿನ್ ನಿವ್ಸ್:ವೆಲ್ಫೆರ್ ಅಸಿಸ್ಟನ್ಸ್ ಡಿಸ್ಟ್ರಿಬ್ಯೂಟೆಡ್". Archived from the original on 21 ನವೆಂಬರ್ 2010. Retrieved 25 ಅಕ್ಟೋಬರ್ 2010.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಕೇಂದ್ರದ ಇತರೆ ಹಿಂದುಳಿದ ವರ್ಗಗಳ ಪಟ್ಟಿ
- ವೈ ರೆಜರ್ವೇಶನ್ಸ್ ಫಾರ್ OBCs ಈಸ್ ಮಸ್ಟ್ V.B.ರಾವತ್ ರಿಂದ
- ದಿ ಮಿಥ್ ಆಫ್ ಇನ್ ಎಫೆಸಿಯನ್ಸಿ. ಶೀತಲ್ ಶರ್ಮರಿಂದ
- ರಾಡಿಕಲ್ ನೋಟ್ಸ್:ವಿವೇಚನಾ ಪೂರ್ಣವಾದ ಸಾಮಾನ್ಯಶಾಲಾ ಶಿಕ್ಷಣ ಭಾರತದಲ್ಲಿ ಜಾರಿ. ಅನಿಲ್ ಸದ್ಗೋಪಾಲ. (28 ಫೆಬ್ರವರಿ 2008)(ಆನ್ ರೈಟು ಟು ಎಜುಕೇಷನ್)
- ಮೀಸಲಾತಿಯ ಸವಲತ್ತನ್ನು ವಿವೇಕದಿಂದ ಕಾನೂನು ಬದ್ದವಾಗಿ ನ್ಯಾಯಾಲಯದ ಸೂಚನೆಯಡಿ ಜಾರಿಮಾಡ ಬೇಕೆಂದು ಇದರ ಹಿಂದಿನ ಉದ್ದೇಶ- ಸಾಸ್ವತ್ ಪಟ್ಟನಾಯಕ್(19 ಏಪ್ರಿಲ್ 2007)
- ಕ್ರಿಟಿಕ್ಸ್ ಸ್ಲ್ಯಾಮ್ ಇಂಡಿಯನ್ಸ್ ಏಜುಕೇಶನ್ ಕೋಟಾಸ್ -BBC ಆರ್ಟಿಕಲ್ ಆನ್ ರಿಸರ್ವ್ ಡಿಸ್ಕ್ರಿಮಿನೇಶನ್ ಇನ್ ದಿ ಇಂಡಿಯನ್ ರಿಜರ್ವೇಶನ್ ಸಿಸ್ಟಮ್
- ಮೀಸಲಾತಿ ವಿರೋಧಿ ಅದಿಕೃತ ವೆಬ್ ಸೈಟ್, Archived 1 July 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.COM Archived 1 July 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ಸರ್ವೋಚ್ಚ ನ್ಯಾಯಾಲವು ಶೇಕಡ 27% OBCಗೆ ಎತ್ತಿಹಿಡಿದಿದೆ. Archived 25 July 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ಮೀಸಲಾತಿಗಳು:ದೊಡ್ಡ ಪ್ರಮಾಣದ ಬಗ್ಗೆ Archived 22 July 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ಮೀಸಲಾತಿ ವಿರೋಧಿ ಪ್ರತಿಭಟನೆ Archived 7 October 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ಹಿಂದುಳಿದ ಸೂಚ್ಯಾಂಕ ಗಣನೆ Archived 22 July 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ಭಾರತೀಯ ಉದ್ಯಮ ಸಹ ಅದನ್ನು ಗಮನಿಸುತ್ತದೆ.
- ದಕ್ಷಿಣ ದಾಖಲೆಗಳ ಮೂಂಚೂಣಿ
- ರಿಸರ್ವೆಶನ್ ಪಾಲಿಸಿ ಫೊರುಮ್ ಆರ್ಟಿಕಲ್ Archived 20 November 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ಮೀಸಲಾತಿಯ ಪರಿಶೀಲನೆ
- ಮೀಸಲಾತಿಯು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕಾರಿ
- ಮಲ್ಟಿಪಲ್ ಇನ್ಡೆಕ್ಸ್ ರಿಲೆಟೆಡ್ ಅಫೆರ್ಮೆಟಿವ್ ಆಕ್ಶನ್ (ಅಲ್ಟೆರ್ನೆಟಿವ್ ಪ್ರಪೊಸಲ್ )
- ಮೀಸಲಾತಿಯ ಜಾರಿಯನ್ನು ಹಿರಿಯ ಹಿಂದುಳಿದ ವರ್ಗದ ಸದಸ್ಯರೊಬ್ಬರಿಂದ ಪರೀಕ್ಷಿಸಲ್ಪಡುತ್ತದೆ.
- ಮೀಸಲಾತಿಯ ಪ್ರಶ್ನೆ
- ವಿಭಾಗದ ಸದಸ್ಯರಿಂದ OBC ಮೀಸಲಾತಿಗಳನ್ನು ಪರಿಗಣಿಸುವ ಅವಕಾಶ ಇರುತ್ತದೆ.
- ಎಲ್ಲಾ ಪರ್ಯಾಯ ಸಲಹೆಗಳು
- ಮೀಸಲಾತಿಗಳು ದಕ್ಷಿಣ ರಾಜ್ಯಗಳಲ್ಲಿಜಾರಿಯಲ್ಲಿವೆ.
- ಉತ್ತರಪ್ರದೇಶದಲ್ಲಿ ಸ್ವಯಂ ಮೀಸಲಾತಿಯನ್ನುಖಾಸಗಿ ಸಂಸ್ಥೆಗಳಲ್ಲಿಒದಗಿಸಿದೆ.
- ರಂಗನಾಥ ಆಯೋಗವು ಮುಸ್ಲಿಮರಿಗೆ10%ರಷ್ಟು ಮೀಸಲಾತಿಯನ್ನುಒದಗಿಸಿದೆ.
- ಮೀಸಲಾತಿ ಮುಸ್ಲಿಮರಿಗೆ ಅನುಕೂಲವಾಗುವುದಿಲ್ಲ.ಇದು ಕೇವಲ ಮಾಯಾ ಪೆಟ್ಟಿಗೆಯಾಗಿದೆ.
- ಬುಲ್ಸ್ ಐ
- Pages using the JsonConfig extension
- CS1 errors: empty unknown parameters
- Webarchive template warnings
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages using duplicate arguments in template calls
- Articles with multiple maintenance issues
- Pages using multiple issues with unknown parameters
- Articles needing POV-check from March 2010
- Articles with invalid date parameter in template
- Articles with hatnote templates targeting a nonexistent page
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Use dmy dates from September 2010
- ಭಾರತದ ಕಾನೂನು
- ಭಾರತದಲ್ಲಿನ ಜಾತಿ ಪದ್ದತಿ
- ಭಾರತದ ರಾಜಕೀಯ(ರಾಜ್ಯಶಾಸ್ತ್ರ)
- ಭಾರತದಲ್ಲಿ ಮೀಸಲಾತಿ
- ಭಾರತದಲ್ಲಿ ಜಾತಿಗಳು