ವಾಹನ
ಗೋಚರ
ವಾಹನವು ವರ್ಗಾವಣೆ, ಸಾಗಣೆ ಅಥವಾ ಸಾರಿಗೆಗೆ ಬಳಸಲಾಗುವ ಒಂದು ಯಂತ್ರಚಾಲಿತ ಸಾಧನ. ಹಲವುವೇಳೆ ಅವುಗಳನ್ನು ತಯಾರಿಸಲಾಗುತ್ತದಾದರೂ (ಉದಾಹರಣೆಗೆ ಸೈಕಲ್‌ಗಳು, ಕಾರುಗಳು, ಮೋಟರ್‌ಸೈಕಲ್‌ಗಳು, ರೈಲು ಗಾಡಿಗಳು, ಹಡಗುಗಳು, ದೋಣಿಗಳು, ಮತ್ತು ವಿಮಾನ), ಮಾನವರಿಂದ ತಯಾರಿಸಲಾಗದ ಕೆಲವು ಇತರ ಸಾರಿಗೆ ಸಾಧನಗಳನ್ನೂ ವಾಹನಗಳೆಂದು ಕರೆಯಬಹುದು; ಉದಾಹರಣೆಗೆ ಹಿಮಗುಡ್ಡೆಗಳು ಮತ್ತು ಮರದ ತೇಲುವ ಕಾಂಡಗಳು. ವಾಹನಗಳು ಇಂಜಿನ್‌ಗಳಿಂದ ಚಾಲಿತವಾಗಿರಬಹುದು ಅಥವಾ ಮನುಷ್ಯರನ್ನೂ ಒಳಗೊಂಡಂತೆ ಪ್ರಾಣಿಗಳಿಂದ ಎಳೆಯಲ್ಪಡಬಹುದು, ಉದಾಹರಣೆಗೆ, ಸಾರೋಟು, ಮಜಲುಗಾಡಿ, ಹೇಸರಗತ್ತೆಯಿಂದ ಎಳೆಯಲ್ಪಡುವ ಗಾಡಿ, ಎತ್ತಿನಬಂಡಿ ಅಥವಾ ರಿಕ್ಷಾ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |