ರಾಜ್ ಠಾಕ್ರೆ
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. (January 2009) |
Raj Thackeray | |
---|---|
Raj Thackeray | |
ವೈಯಕ್ತಿಕ ಮಾಹಿತಿ | |
ಜನನ | ಮುಂಬೈ, ಮಹಾರಾಷ್ಟ್ರ, India | ೧೪ ಜೂನ್ ೧೯೬೮
ರಾಜಕೀಯ ಪಕ್ಷ | Maharashtra Navnirman Sena, Founder & President (Since 2006) |
ಸಂಗಾತಿ(ಗಳು) | Sharmila Thackeray |
ಮಕ್ಕಳು | 1 son (Amit Thackeray); 1 daughter (Urvashi Thackeray) |
ವಾಸಸ್ಥಾನ | ಮುಂಬೈ, ಮಹಾರಾಷ್ಟ್ರ, India |
ಧರ್ಮ | Hindu |
Raj Shrikant Thackeray (ಮರಾಠಿ:राज ठाकरे) (born 14 June 1968) is the founder president of hardline Marathi ethnocentric regional political party, the Maharashtra Navnirman Sena ("Maharashtra Reformation Army") in the state of ಮಹಾರಾಷ್ಟ್ರ, India.ರಾಜ್ ಶ್ರೀಕಾಂತ ಠಾಕರೆ (ಜೂನ್ 14,1968) ಮಹಾರಾಷ್ಟ್ರದ ಮುಂಬಯಿನಲ್ಲಿ ಮರಾಠಿ ಮೂಲದ ಕೆಚ್ಚೆದೆಯ ತನ್ನದೇ ಸಿದ್ದಾಂತದ ಮಹಾರಾಷ್ಟ್ರ ನವನಿರ್ಮಾಣ ಸೇನಾ ("ಮಹಾರಾಷ್ಟ್ರ ರಿಫಾರ್ಮೇಶನ್ ಆರ್ಮಿ) ಎಂಬ ಪ್ರಾದೇಶಿಕ ರಾಜಕೀಯ ಪಕ್ಷವನ್ನು ಭಾರತದ ಮಹಾರಾಷ್ಟ್ರದ ಮುಂಬಯಿನಲ್ಲಿ ಸ್ಥಾಪಿಸಿದ್ದಾರೆ. ಶಿವ ಸೇನಾ ದ ಹಿಂದಿನ [[ಮುಖ್ಯಸ್ಥ {/0{0}}ಬಾಳ್ ಠಾಕರೆ]] ಅವರ ಸೋದರ ಸಂಬಂಧಿ,ಅಲ್ಲದೇ ಸದ್ಯದ ಶಿವಸೇನಾ ಕಾರ್ಯಾಧ್ಯಕ್ಷ ಉದ್ದವ ಠಾಕರೆ ಅವರ ಸಂಬಂಧಿಯಾಗಿದ್ದಾರೆ.
ವೈಯಕ್ತಿಕ ಜೀವನ
[ಬದಲಾಯಿಸಿ]ರಾಜ್ ಠಾಕರೆ ಜೂನ್ 14ರ 1968ರಲ್ಲಿ ಕಾಯಸ್ಥ(CKP)ಕುಟುಂಬದಲ್ಲಿ ಜನಿಸಿದ್ದಾರೆ ಅವರಿಗೆ ಜನ್ಮತ: ಸ್ವರಾಜ್ ಠಾಕರೆ ಎಂದು [೧] ಹೆಸರಿಡಲಾಗಿತ್ತು. ಆತನ ತಂದೆ ಶ್ರೀಕಾಂತ ಠಾಕರೆ ಶಿವ ಸೇನಾ ಮುಖ್ಯಸ್ಠ ಬಾಳಾಸಾಹೇಬ್ ಠಾಕರೆ ಅವರ ಕಿರಿಯ ಸಹೋದರ,ಆತನ ತಾಯಿ ಬಾಳಾಸಾಹೇಬ್ ಠಾಕರೆಯವರ ಪತ್ನಿಯ ಕಿರಿಯ ಸಹೋದರಿಯಾಗಿದ್ದಾರೆ. ಮರಾಠಿ ಚಲನಚಿತ್ರದ ನಟ, ನಿರ್ಮಾಪಕ ಮತ್ತು ಪ್ರಸಿದ್ದ ನಿರ್ದೇಶಕ ಮೋಹನ್ ವಾಘ್ ಅವರ ಪುತ್ರಿ ಶರ್ಮಿಳಾ ಅವರನ್ನು ರಾಜ್ ವಿವಾಹವಾಗಿದ್ದಾರೆ. ಅವರಿಗೆ ಪುತ್ರ ಅಮಿತ್ ಪುತ್ರಿ ಊರ್ವಶಿ ಎಂಬಿಬ್ಬರು ಮಕ್ಕಳಿದ್ದಾರೆ. ಇವರಿಬ್ಬರೂ ಮುಂಬಯಿನ ಸ್ಕಾಟಿಶ್ ಹೈಸ್ಕೂಲ್ ನಲ್ಲಿ ಓದುತ್ತಿದ್ದಾರೆ.
ದಾದರನ ಉಪನಗರವಾಗಿರುವ ಕೇಂದ್ರ ಮುಂಬಯಿನಲ್ಲಿರುವ ಬಾಲ ಮೋಹನ್ ವಿದ್ಯಾ ಮಂದಿರ ಸ್ಕೂಲ್ ನಲ್ಲಿ ರಾಜ್ ಠಾಕರೆ ತಮ್ಮ ವಿದ್ಯಾಭ್ಯಾಸ ನಡೆಸಿ ಪ್ರಖ್ಯಾತ ಸರ್ ಜೆ.ಜೆ. ಕಾಲೇಜ್ ಆಫ್ ಆರ್ಟ್ ನಲ್ಲಿ ತಮ್ಮ ಪದವಿ ಪಡೆದುಕೊಂಡಿದ್ದಾರೆ.
ತಮ್ಮ ತಂದೆ ಮತ್ತು ಚಿಕ್ಕಪ್ಪರಂತೆ ರಾಜ್ ಕೂಡಾ ಸ್ವಾಭಾವಿಕ ಕಲಾವಿದ ಮತ್ತು ಒಬ್ಬ ವ್ಯಂಗ್ಯ ಚಿತ್ರಕಾರ. ಆತನನ್ನು ಪ್ರಶ್ನಿಸಿದಾಗ ರಾಜಕಾರಣ ಸೇರದಿದ್ದರೆ "ತಾನು ವಾಲ್ಟ್ ಡಿಸ್ನಿಯ ಸ್ಟುಡಿಯೊದಲ್ಲಿ ಕಾರ್ಯ ನಿರ್ವಹಿಸುವ ಅಭಿಲಾಷೆ ಕಾಲೇಜು ದಿನಗಳಿದ್ದಾಗಲೇ ಇತ್ತೆಂದು ಅವರು ಹೇಳುತ್ತಾರೆ." ನಾನು ರಾಜಕಾರಣಕ್ಕೆ ಪ್ರವೇಶ ಪಡೆಯುವ ಮುನ್ನವೇ ಕಾರ್ಟೂನ್ , ವ್ಯಂಗ್ಯ ಚಿತ್ರಗಳನ್ನು ಬಿದಿಸುತ್ತಿದ್ದೆ. ಚಿತ್ರನಿರ್ಮಾಣ ಕೂಡಾ ಒಂದು ಹವ್ಯಾಸವಾಗಿದೆ. ನಾನು ಇವೆರಡರಲ್ಲಿಯಾವದಾದರೊಂದನ್ನು ಆಯ್ಕೆ [೨][೩] ಮಾಡಿಕೊಳ್ಳುತ್ತಿದ್ದೆ. [೪]
ತಮ್ಮ ಸಹೋದರ ಸಂಬಂಧಿ ಉದ್ದವ ಠಾಕರೆಯಂತೆ ಅವರೊಬ್ಬ ವಿಭಿನ್ನ ಛಾಯಾಗ್ರಾಹಕರಾಗಿದ್ದಾರೆ. ಅವರು ತಮ್ಮ ಚಿಕ್ಕಪ್ಪ 'ಬಾಳ್ ಕೇಶವ ಠಾಕರೆ 'ಅವರ ಛಾಯಾ-ಜೀವನಚರಿತ್ರೆಯನ್ನು ಅವರ ಆತ್ಮ ಚರಿತ್ರೆಯ ಮಾದರಿಯಲ್ಲಿ [೫] ಪ್ರಕಟಿಸಿದ್ದಾರೆ.
ವಿವಾದಗಳು
[ಬದಲಾಯಿಸಿ]ಪ್ರಾದೇಶಿಕತೆ ಸಿದ್ದಾಂತ:2008 ಯುಪಿ ಮತ್ತು ಬಿಹಾರಿಗಳ ವಿರುದ್ಧ ಹಿಂಸಾಕೃತ್ಯ.
[ಬದಲಾಯಿಸಿ]ಫೆಬ್ರವರಿ2008ರಲ್ಲಿ ರಾಜ್ ಠಾಕರೆ ಆಂದೋಲನ (ಪ್ರತಿಭಟನೆ)ದ ಮಾದರಿಯಲ್ಲಿ MNS ಸಂಘಟನೆಯನ್ನು ಅವರು ಮುನ್ನೆಡೆಸಿ ಅದರ ನೇತೃತ್ವ ವಹಿಸಿಕೊಂಡಿದ್ದಾರೆ.ಮಹಾರಾಷ್ಟ್ರದಲ್ಲಿ ಉತ್ತರ ಭಾರತೀಯರಾದ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಜನತೆಯ ಪ್ರಾಬಲ್ಯ ತಡೆಯಲು ಅದರಲ್ಲೂ ಮುಖ್ಯವಾಗಿ ಭಾರತದ ವಾಣಿಜ್ಯ ರಾಜಧಾನಿಯಾಗಿರುವ ಮುಂಬಯಿನಲ್ಲಿನ ವಲಸಿಗರ ಪ್ರಾಬಲ್ಯ ತಡೆಯಲು ಈ ಸಂಘಟನೆಯು ಕೆಲಸ ಆರಂಭಿಸಿದೆ. ಶಿವಾಜಿ ಪಾರ್ಕ್ ನಲ್ಲಿ ನಡೆದ ಬೃಹತ್ ರಾಲಿಯಲ್ಲಿ ಇದೇ ರೀತಿಯ ದಾದಾಗಿರಿ (ಪ್ರಾಬಲ್ಯದ ಮುಂದುವರಿಕೆ)ಮುಂದುವರೆದರೆ ಮಹಾರಾಷ್ಟ್ರ ಮತ್ತು ಮುಂಬಯಿನಲ್ಲಿನ ಜನತೆ ನಿಮ್ಮನ್ನು ಈ ಮೆಟ್ರೊಪಾಲಿಟಿನಿಂದ ಹೊರಹಾಕಬೇಕಾಗುತ್ತದೆ ಎಂದು ರಾಜ್ [೬] ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ ಠಾಕರೆ ಸಮಾಜವಾದಿ ನಾಯಕ ಅಬಿ ಆಜ್ಮಿಯವರೊಂದಿಗೆ ಈ ದೊಂಬಿಯಲ್ಲಿ ಪಾಲ್ಗೊಂಡದ್ದಕ್ಕಾಗಿ ಬಂಧನಕ್ಕೊಳಗಾಗಿ ನಂತರ 15,000ರೂಪಾಯಿ ದಂಡ ಪಾವತಿಸಿ ಬಿದುಗಡೆಯಾದರು. ಇಡೀ ಭಾರತಾದ್ಯಂತ ರಾಜ್ ಠಾಕರೆಯ ಈ ಕ್ರಮವನ್ನು ಸ್ವಾರ್ಥಮತ್ತು ರಾಜಕೀಯ ಉದ್ದೇಶದೆಂದು ಟೀಕಿಸಲಾಯಿತು. ರಾಜ್ ಠಾಕರೆ ಅವರ ಮುಂಬಯಿ ಬಗೆಗಿನ ಈ ಆಲೋಚನೆಯನ್ನು ವಿರೋಧಿಸಿ ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು.
ಕಿನಿ ಕೊಲೆ ಪ್ರಕರಣದಲ್ಲಿ ಖುಲಾಸೆ
[ಬದಲಾಯಿಸಿ]ಜುಲೈ 1996ರ ಸುಮಾರಿಗೆ ರಮೇಶ ಕಿನಿ ಪುಣೆಯ ಚಿತ್ರಮಂದಿರದಲ್ಲಿ ಕೊಲೆಗೀಡಾಗಿದ್ದರು. ಕೇಂದ್ರ ಮುಂಬಯಿನ ಪುರಾತನ ಕಟ್ಟಡವೊಂದರಲ್ಲಿ ಕಿನಿ ಬಾಡಿಗೆಗಿದ್ದ.ಮನೆ ಮಾಲಿಕ ಲಕ್ಷ್ಮಿಕಾಂತ ಶಹಾ ಈತನನ್ನು ಬಾಡಿಗೆ ಮನೆಯಿಂದ ಓಡಿಸಲು ಪ್ರಯತ್ನಿಸುತ್ತಿದ್ದ. ಶಹಾ ಕೂಡಾ ರಾಜ್ ಠಾಕರೆಯ ಬಾಲ್ಯ ಸ್ನೇಹಿತನಾಗಿದ್ದನು. ರಾಜ್ ಮತ್ತು ಆತನ ಸಂಗಡಿಗರು ಮನೆ ಖಾಲಿ ಮಾಡಿಸುವ ವಿಚಾರದಲ್ಲಿ ಆತನ ಹತ್ಯೆ ಮಾಡಿದರೆಂದು ಹೇಳಲಾಗುತ್ತದೆ. ಈ ಪ್ರಕರಣವನ್ನು CBI ತನಿಖೆಗೆ ವಹಿಸಲಾಯಿತು ಆದರೆ ಇದೊಂದು ಆತ್ಮಹತ್ಯೆ ಪ್ರಕರಣವೆಂದು ಸಿಬಿಐ [೭] ತಳ್ಳಿಹಾಕಿತು.
ಕೋಹಿನೂರ್ ಮಿಲ್ ವಿವಾದ
[ಬದಲಾಯಿಸಿ]ದಾದರ್ ನಲ್ಲಿರುವ ಶಿವಸೇನಾ ಪಕ್ಷದ ಕಚೇರಿ ಸೇನಾ ಭವನದ ಬಳಿಯಿರುವ ಕೋಹಿನೂರ್ ಮಿಲ್ ನಂ.3ರ ಐದು ಎಕರೆ ಜಾಗವನ್ನು ರಾಜ್ ಮತ್ತು ಉಮೇಶ ಜೋಶಿ (ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತುಲೋಕಸಭೆಯ ಮಾಜಿ ಸ್ಪೀಕರ್ ಮನೋಹರ ಜೋಶಿ ಅವರ ಪುತ್ರ)ಸೇರಿ ಅತ್ಯಧಿಕ ಎನ್ನುವ 421ಕೋಟಿ ರೂಪಾಯಿಗಳಿಗೆ ಖರೀದಿಸಿದ್ದು ದೊಡ್ಡ ವಿವಾದಕ್ಕೀಡಾಯಿತು. NCPಯ ಮುಂಬಯಿ ಮೂಲದ ನಾಯಕ ಸಚಿನ್ ಅಹಿರ್ ಕೋಹಿನೂರ್ ಮಿಲ್ ಭೂಮಿ ಖರೀದಿ ಬಗ್ಗೆ ತಮ್ಮ ಆಕ್ಷೇಪಣೆಗಳನ್ನು ಎತ್ತಿದರಲ್ಲದೇ ಈ ಭೂಮಿ ಖರೀದಿಗಾಗಿ ನಲ್ವತ್ತು ಬಿಡ್ ಗಳಿದ್ದರೂ ಕೇವಲ ಮೂರನ್ನು ಮಾತ್ರ ಇದರ ಹರಾಜಿನಲ್ಲಿ ಆಯ್ಕೆ ಮಾಡಿಕೊಂಡಿದ್ದನ್ನು ಅವರು ಅಕ್ಷೇಪಿಸಿದರು. ಇದಕ್ಕಾಗಿ ಮರುಬಿಡ್ ಮಾಡುವಂತೆ ಮತ್ತು ಇದರಲ್ಲಿ ಪಾರದರ್ಶಕತೆ ಇಲ್ಲ ಎಂದು ಸಚಿನ್ ಅಕ್ಷೇಪಣೆ [೮] ವ್ಯಕ್ತಪಡಿಸಿದರು.
ಜಯಾಬಚ್ಕನ್ ಹಿಂದಿ ಮಾತನಾಡುವ ಕುರಿತ ಬಗ್ಗೆ ಅವರ ಪ್ರತಿಕ್ರಿಯೆ.
[ಬದಲಾಯಿಸಿ]ಜಯಾ ಬಚ್ಚನ್ ಪ್ರಖ್ಯಾತ ನಟಿ ಮತ್ತು ರಾಜ್ಯಸಭಾ ಸದಸ್ಯೆಯಾಗಿದ್ದಾಗ ಹಿಂದಿ ಚಿತ್ರ ದ್ರೋಣದ ಸಂಗೀತ ಬಿದುಗಡೆ ಕಾರ್ಯಕ್ರಮದಲ್ಲಿ ಇದರಲ್ಲಿನ ಕೆಲವು ಶಬ್ದಗಳು ರಾಜ್ ಠಾಕರೆ ಅವರಿಗೆ ನೋವನ್ನುಂಟು ಮಾದಿದವೆಂದು ಹೇಳಲಾಗಿದೆ. ಮಹಾರಾಷ್ಟ್ರಿಯನ್ನರ ಅಭಿಮಾನಕ್ಕೆ ಧಕ್ಕೆಯಾಗುವ ಈ ವಿಷಯದ ಬಗ್ಗೆ ಬಹಿರಂಗ ವೇದಿಕೆಯಲ್ಲಿ ಕ್ಷಮೆ ಕೇಳದಿದ್ದರೆ ಬಚ್ಚನ್ ನಟಿಸಿದ ಎಲ್ಲಾ ಚಿತ್ರಗಳನ್ನು ಬಹಿಷ್ಕರಿಸುವುದಾಗಿ ರಾಜ್ ಬೆದರಿಕೆ ಹಾಕಿದರು. MNS ನ ಕಾರ್ಯಕರ್ತರು ಜಯಾಬಚ್ಚನ್ ಅವರ ಪತಿ ಅಮಿತಾಬ್ ಬಚ್ಚನ್ ನಟಿಸಿದ್ದ ದಿ ಲಾಸ್ಟ್ ಲಿಯರ್ ಪ್ರದರ್ಶನ ನಡೆಯುತ್ತಿದ್ದ ಎಲ್ಲಾ ಚಿತ್ರಗಳ ಮೇಲೆ ದಾಳಿ ನಡೆಸಿದರು. ಅಮಿತಾಭ್ ಕ್ಷಮೆ ಕೇಳಿದ ನಂತರವೇ ಚಲನಚಿತ್ರದ ಪ್ರದರ್ಶನ [೯] ಆರಂಭವಾಯಿತು.
ಸಿನೇಮಾ ನಿರ್ದೇಶಕ ಗೊಲ್ಡೀ ಬೆಹಲ್ ಅವರು ತಮ್ಮ ಪ್ರಾಸ್ತಾವಿಕ ಭಾಷಣವನ್ನು ಇಂಗ್ಲಿಷ್ ನಲ್ಲಿ ಮಾಡಿದ್ದು ಮತ್ತು ಜಯಾ ಅವರ ಹೇಳಿಕೆಗಳ ಬಗೆಗಿನ ತಪ್ಪು ಅಭಿಪ್ರಾಯದಿಂದ ಉಂಟಾದ ವಿವಾದವು ಈ ಘಟನೆಗೆ ಕಾರಣವಾಯಿತಲ್ಲದೇ ನಟಿ ಪ್ರಿಯಾಂಕಾ ಚೊಪ್ರಾ ಅವರು ಹಿಂದಿಯಲ್ಲಿ ತಮ್ಮ ಭಾಷಣ ಮಾಡಬೇಕಾದ ಅನಿವಾರ್ಯವೂ [೧೦][೧೧] ಉಂಟಾಯಿತು.
ಛತ್ ಪೂಜಾದ ಬಗೆಗಿನ ಅಭಿಪ್ರಾಯ ಮತ್ತು ವಲಸಿಗರು
[ಬದಲಾಯಿಸಿ]ತನ್ನ ಪಕ್ಷದ ಭಾಷಣದ ಸಂದರ್ಭದಲ್ಲಿ ರಾಜ್ ಈ ಛತ್ ಪೂಜಾ ಎನ್ನುವ ಹಬ್ಬದ ಆಚರಣೆಯನ್ನು ಕೆಲವು ಉತ್ತರ ಭಾರತದ ನಾಯಕರು ರಾಜಕೀಯಗೊಳಿಸುತ್ತಿರುವದಲ್ಲದೇ ಇದೊಂದು ವ್ಯವಸ್ಥಿತ "ನಾಟಕ "ಮತ್ತು ದುರಹಂಕಾರದ ತೋರಿಕೆ ಎಂದು ಅವರು ಟೀಕಿಸಿದರು ಛತ್ ಪೂಜಾ ಎನ್ನುವುದು ಒಂದು ರಾಜಕೀಯ ಪಕ್ಷಗಳ ಗಿಮಿಕ್ ಉತ್ತರ ಭಾರತೀಯರ ಮತಗಳನ್ನು ಸೆಳೆಯುವ ತಂತ್ರ ಇದಾಗಿದೆ ಎಂದು ರಾಜ್ ಹೇಳಿದರು. ಈ ಪೂಜೆಯನ್ನು ನದಿ ದಂಡೆಗಳ ಮೇಲೆ ಮಾಡುತ್ತಾರೆಯೇ ವಿನಹ ಸಮುದ್ರದ ಕಿನಾರೆಯಲ್ಲಿ ಇದನ್ನು ಆಚರಿಸುವುದು ಯಾವ ಪುರುಷಾರ್ಥಕ್ಕೆ ಎಂದು ಅವರು ಪ್ರಶ್ನಿಸಿದ್ದಾರೆ.ಅವರು ಮಹಾರಾಷ್ಟ್ರದಲ್ಲಿದ್ದು ಉತ್ತರ ಪ್ರದೇಶದ ದಿನಾಚರಣೆ ನಡೆಸುವುದು ಸರಿಯಾದುದಲ್ಲ.ಅವರು ಕೇವಲ ಮಹಾರಾಷ್ಟ್ರ ದಿನಾಚರಣೆ ಮಾಡಬೇಕೆಂದು ಅವರು ಬೇಡಿಕೆ [೧೨] ಇಟ್ಟಿದ್ದಾರೆ. ಪಾಟ್ನಾ ಸಿವಿಲ್ ಕೋರ್ಟನಲ್ಲಿ ಈ ಹೇಳಿಕೆಗಳ ವಿರುದ್ದವಾಗಿ ಫೆಬ್ರವರಿ 8ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಟಿಶನ್ )[೧೩] ಸಲ್ಲಿಸಲಾಯಿತು. ಆತನ ಈ ಪ್ರತಿಕ್ರಿಯೆಗಳು ಎಲ್ಲಾ ಕಡೆಯಿಂದ ಯಾವದೇ ಸೂಕ್ತ ಸ್ಪಂದನೆಗೆ ಒಳಗಾಗಲಿಲ್ಲ,ಬಹುಮುಖ್ಯವಾಗಿ ಉತ್ತರ ಭಾರತೀಯ ರಾಜ್ಯಗಳ ರಾಜಕಾರಣಿಗಳು ಅಷ್ಟಾಗಿ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಕೇಂದ್ರದ ಆಗಿನ ಭಾರತೀಯ ರೈಲ್ವೆಗಳ ಖಾತೆ ಸಚಿವ ಮತ್ತು ಬಿಹಾರ ರಾಜ್ಯದ ಹಿಂದಿನ ಮುಖ್ಯಮಂತ್ರಿ ಲಾಲು ಪ್ರಸಾದ ಯಾದವ್ ತಾವು ಛತ್ ಪೂಜಾವನ್ನು ಈ ಬಾರಿ ರಾಜ್ ಠಾಕರೆ ಮನೆ ಮುಂದೆ ಮಾಡುವುದಾಗಿ ಘೋಷಣೆ ಮಾಡಿದರು. ರಾಜ್ ಅವರನ್ನು ತಮಾಷೆ ಮಾಡಿದ ಅವರು "ಆತ [ರಾಜ್]ರಾಜಕಾರಣದಲ್ಲಿ ಇನ್ನೂ ಬಾಲಕನಾಗಿದ್ದಾನೆ"[೧೨] ಎಂದರು. ದಿ ನವನಿರ್ಮಾಣ ಸೇನಾ ನಾಯಕ ಇವರು ಭಾರತದ ಅತ್ಯಂತ ದೊಡ್ದ ಕೈಗಾರಿಕಾ ಪ್ರದೇಶವನ್ನು ಉದ್ಯೋಗ ಅರಸುವ ನೆಪದಲ್ಲಿ ಗುಡಿಸಿ ಹಾಕುತ್ತಿದ್ದಾರೆ ಎಂದು ಅವರು [೧೪] ಟೀಕಿಸಿದ್ದಾರೆ.
ಈ ವಲಸಿಗರು ಸ್ಥಳೀಯ ಸಂಸ್ಕೃತ್ಯನ್ನು ಅಮಾನ್ಯ ಮಾಡುತ್ತಿದ್ದಾರೆಂದುMNS ಮುಖ್ಯಸ್ಥ ಆಪಾದಿಸಿದರು. ವಲಸಿಗರು ಇಲ್ಲಿಯೇ ಶಾಸ್ವತ ವಾಸಿಗಳಾಗಿರುವವರು ಮರಾಠಿ ಮಾಣೂಸ್ ಮತ್ತು ಆತನ ಸಂಸ್ಕೃತಿಯನ್ನು ಗೌರವಿಸಬೇಕು ಅಲ್ಲದೇ ಹೊಸದಾಗಿ ವಲಸೆ ಬರುವವರನ್ನು ಮಹಾನಗರ ನಿರಾಕರಿಸುವುದು ಎಂದು ಅವರಿಫೆಬ್ರವರಿ 9ರಂದು ತಮ್ಮ ಅಭಿಪ್ರಾಯಕ್ಕೆ [೧೫] ಬದ್ದರಾದರು.
ಬಾಂಬೆ-ಮುಂಬಯಿ ವಿವಾದ:ವೇಕ್ ಅಪ್ ಸಿಡ್
[ಬದಲಾಯಿಸಿ]ಪುಣೆ ಮತ್ತು ಮುಂಬಯಿನ ಕೆಲವು ಚಿತ್ರಮಂದಿರಗಳಲ್ಲಿ ಆಕ್ಟೋಬರ್ 2ರಂದು 2009ರಲ್ಲಿ ಪ್ರದರ್ಶನವಾಗುತ್ತಿದ್ದ ವೇಕ್ ಅಪ್ ಸಿಡ್ ಚಿತ್ರದ ಪ್ರದರ್ಶನವನ್ನುMNS ಕಾರ್ಯಕರ್ತರು ತಡೆದು ಅಡ್ಡಿಯನ್ನುಂಟು ಮಾಡಿದರು.ಇದರಲ್ಲಿ ಮುಂಬಯಿ ಬದಲಾಗಿ ಬಾಂಬೆ ಎಂದು ಬಳಸಿದ್ದನ್ನುMNS ತೀವ್ರವಾಗಿ ಖಂಡಿಸಿತು. ಮುಂಬಯಿ ನಗರವನ್ನು ಬಾಂಬೆ ಎಂದು ಹಲವಾರು ಸಂಭಾಷಣೆಗಳಲ್ಲಿ ಈ [೧೬] ಚಿತ್ರದಲ್ಲಿ ಬಳಸಿದ್ದನ್ನು ಅದು ವಿವರಿಸಿತಲ್ಲದೇ ಕೆಲವು ಹಾಡುಗಳಲ್ಲಿ(ಹೆಸರಾಂತ ಸಿನೇಮಾ ಸಾಹಿತಿಜಾವೇದ ಅಕ್ತರ್ ) ಪ್ರಾದೇಶಿಕ ಅಸಮಂಜಸ ರೂಪಕಗಳನ್ನುಅದು ಟೀಕಿಸಿತು. ಚಿತ್ರದ ನಿರ್ಮಾಪಕ ಕರನ್ ಜೊಹರ್ ಶೀಘ್ರದಲ್ಲೇ ರಾಜ್ ಠಾಕರೆ ಮನೆಗೆ ತೆರಳಿ ತಮ್ಮ ಎಲ್ಲಾ 700 ಸನ್ನಿವೇಶಗಳಲ್ಲಿ ಮುಂಬಯಿ ಎಂದು ತಿದ್ದುವುದಾಗಿ ತಿಳಿಸಿದರಲ್ಲದೇ ಘಟನೆಗೆ ವಿಷಾದ ವ್ಯಕ್ತಪಡಿಸಿ [೧೭] ಕ್ಷಮೆಯಾಚಿಸಿದರು.
ಹಾರಾಷ್ಟ್ರ ರಾಜ್ಯ ವಿಧಾನಸಭೆಯಲ್ಲಿ ಶಾಸಕರೂ ಕೂಡಾ ಘಟನೆಯನ್ನು ತರಾಟೆಗೆ ತೆಗೆದುಕೊಂಡರು.
[ಬದಲಾಯಿಸಿ]ಸೋಮವಾರ ನವೆಂಬರ್ 9 2009ರಂದು ಮಹಾರಾಷ್ಟ್ರ ರಾಜ್ಯ ವಿಧಾನ ಸಭೆಯಲ್ಲಿ MNS ನ ಶಾಸಕರು ಸಮಾಜವಾದಿ ಪಕ್ಷದ ಅಬು ಆಸಿಮ್ ಆಜ್ಮಿ ಮರಾಠಿ ಬದಲಾಗಿ ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸುವುದನ್ನು ತೀವ್ರವಾಗಿ ಖಂಡಿಸಿದರು.ಈಗಾಗಲೇ ರಾಜ್ ಠಾಕರೆ "(ಮರಾಠಿಯಲ್ಲಿ ಪ್ರಮಾಣ ವಚನ ಸ್ವೀಕರಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದರು"). MNS ದ ಎಚ್ಚರಿಕೆಯ ನಂತರವೂ ಆಜ್ಮಿ ಹಿಂದಿಯಲ್ಲಿಯೇ ತಮ್ಮ ಪ್ರಮಾಣವಚನ ಮುಂದುವರಿಸಿದ್ದು ನಾಯಕರನ್ನು ಕೆರಳಿಸಿತು. ಆಜ್ಮಿ ಅವರನ್ನು ತಳ್ಳಲಾಯಿತು,ಹಲ್ಲೆ ಮತ್ತು ಕಪಾಳ ಮೋಕ್ಷಕ್ಕೂ MNS ಶಾಸಕರು ಮುಂದಾದರು ಇನ್ನುಳಿದ ಶಾಸಕರು ಆಜ್ಮಿಯವರ ರಕ್ಷಣೆಗೆ ಬರುವ ಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಇನ್ನುಳಿದ MNS ಶಾಸಕರು ವಿಧಾನಸಭೆಯಲ್ಲಿ ಅಕ್ರಮವಾಗಿ ತಂದಿದ್ದಬಟ್ಟೆಗಳ ಬ್ಯಾನರ್ ಗಳನ್ನು ಪ್ರದರ್ಶಿಸಿ ಘೋಷಣೆಗಳ ಕೂಗು ಹಾಕಿದರು.ಅದೂ ಅಲ್ಲದೇ ಶಾಸಕರ ಆಸನಗಳಿಗೂ ಹಾನಿ ಮುಟ್ಟಿತು. ಈ ಘಟನೆಯನ್ನುಖಂಡಿಸಿದ ವಿಧಾನಸಭೆ ಕೂಡಲೇ ರೆಸ್ ಲೂಶನ್ ವೊಂದನ್ನು ಪಾಸ್ ಮಾಡಿ ನಾಲ್ವರು MNS ಶಾಸಕರನ್ನು ಅಮಾನತುಗೊಳಿಸುವ ಕ್ರಮಕ್ಕೆ ಮುಂದಾಯಿತು.ಆ ಶಾಸಕರೆಂದರೆ-ಶಿಶಿರ್ ಶಿಂದೆ,ರಮೇಶ್ ವಾಂಜಳೆ, ರಾಮ್ ಕದಮ್ ಮತ್ತು ವಸಂತ ಗೀತೆ ನಾಲ್ಕು ವರ್ಷಗಳ ಕಾಲ ಈ ಅಮಾನತು ಜಾರಿಯಾಯಿತು. ಮುಂಬಯಿ ಮತ್ತು ನಾಗ್ಪುರ್ ನಗರಗಳಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುವಾಗ ಅವರ ಪ್ರವೇಶವನ್ನು ಕೂಡಾ ನಿಷೇಧಿಸಲಾಯಿತು. MNS ಸದಸ್ಯರು ಕೇವಲ ಅಬು ಆಜ್ಮಿ ಅವರನ್ನೇ ಗುರಿಯಾಗಿಸಿಕೊಂಡಿದ್ದರೆಂದು ಕಾಣುತ್ತದೆ ಯಾಕೆಂದರೆ ಇನ್ನೂ ಕೆಲವರು ಸಂಸ್ಕೃತಗಳಲ್ಲಿ ಪ್ರಮಾಣ ವಚನ ಸ್ವೀಕರಿಸಿದರೂ ಅವರು ಆಕ್ಷೇಪಣೆ [೧೮] ಮಾಡಲಿಲ್ಲ.
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2012-03-06. Retrieved 2021-08-29.
- ↑ http://www.apakistannews.com/raj-thakre-wanted-to-work-with-walt-disney-84833
- ↑ "ಆರ್ಕೈವ್ ನಕಲು". Archived from the original on 2009-03-27. Retrieved 2010-03-09.
- ↑ http://www.mumbaipluses.com/thaneplus/index.aspx?page=article§id=2&contentid=2009020120090202165023716e7fc947f§xslt=&comments=true&pageno=1
- ↑ "Raj: Sainik Rebel Now a Scholar?". DNA. Dec 07, 2005. Retrieved 2009-10-23.
{{cite news}}
: Check date values in:|date=
(help) - ↑ "Raj Thackeray dares Maharashtra govt on north Indians' stand". NDTV. May 3, 2008. Archived from the original on 2009-03-27. Retrieved 2009-01-06.
Addressing a crowded public meeting at Shivaji Park in central Mumbai, the place where his uncle and Shiv Sena chief Bal Thackeray addresses his annual Dussehra rallies, Raj warned if the dadagiri of north Indians in Mumbai and Maharashtra continued, he would be compelled to make them leave the metropolis.
- ↑ http://www.rediff.com/news/1996/0209dili.htm
- ↑ http://www.business-standard.com/india/storypage.php?autono=214951
- ↑ "ಆರ್ಕೈವ್ ನಕಲು". Archived from the original on 2011-06-08. Retrieved 2021-08-29.
- ↑ https://www.youtube.com/watch?v=NI6sMRqoP1o
- ↑ https://www.youtube.com/watch?v=8L8sgbbYZO0
- ↑ ೧೨.೦ ೧೨.೧ "Jaya takes on Raj; MNS, SP activists clash in Mumbai". ದಿ ಹಿಂದೂ. 2008-02-03. Retrieved 2008-04-04.
{{cite news}}
: Italic or bold markup not allowed in:|publisher=
(help) - ↑ "Petition against Raj Thackeray in Patna court". Zee News. Retrieved 2008-04-04.
- ↑ "Right-wing Mumbai leader arrested". BBC NEWS. 2008-02-13. Retrieved 2008-07-26.
- ↑ "'Respect Marathi manoos or leave Mumbai'". Rediff. 2008-02-09. Retrieved 2008-04-04.
- ↑ "ಆರ್ಕೈವ್ ನಕಲು". Archived from the original on 2012-12-06. Retrieved 2010-08-08.
- ↑ http://movies.rediff.com/report/2009/oct/02/wake-up-sid-in-trouble.htm
- ↑ "Azmi attacked over Hindi oath, four MNS members suspended". The Hindustan Times. November 9, 2009. Archived from the original on 2009-11-12. Retrieved 2009-11-09.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- MNS ಪಕ್ಷದ ವೆಬ್ ಸೈಟ್ Archived 2018-12-12 ವೇಬ್ಯಾಕ್ ಮೆಷಿನ್ ನಲ್ಲಿ.
- ದಿ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಸುಧೀಂದ್ರ ಕುಲಕರ್ಣಿಯವರ ಟೀಕೆಗೆ ರಾಜ್ ಠಾಕರೆಯ ಪ್ರತಿಕ್ರಿಯೆ Archived 2008-03-28 ವೇಬ್ಯಾಕ್ ಮೆಷಿನ್ ನಲ್ಲಿ.
- ರಾಜ್ ಮಟ್ಟ ಹಾಕಲು ನೂತನ ಕಾನೂನು ನೀತಿ Archived 2009-03-27 ವೇಬ್ಯಾಕ್ ಮೆಷಿನ್ ನಲ್ಲಿ.
- SMS ಗಳ ಮೂಲಕ ಭಾರತೀಯರ ಮುಂಬಯಿ ದೊಂಬಿಯ ಬಗ್ಗೆ ಸುದ್ದಿಯ ಮಹಾಪೂರ
- Pages using the JsonConfig extension
- CS1 errors: dates
- CS1 errors: markup
- ಚೊಕ್ಕಗೊಳಿಸಬೇಕಿರುವ ವಿಕಿಪೀಡಿಯ ಲೇಖನಗಳು from January 2009
- ಚೊಕ್ಕಗೊಳಿಸಬೇಕಿರುವ ಎಲ್ಲ ಲೇಖನಗಳು
- Articles with hatnote templates targeting a nonexistent page
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಭಾರತೀಯ ರಾಜಕಾರಣಿಗಳು
- 1986ರಲ್ಲಿ ಜನಿಸಿದವರು
- ಮರಾಠಿ ಜನರು