ವಿಷಯಕ್ಕೆ ಹೋಗು

ಮನೋಹರ ಜೋಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Manohar Joshi

11th Chief Minister of Maharashtra State  ಭಾರತ
ಅಧಿಕಾರ ಅವಧಿ
14 March 1995 – 31 January 1999
ಪೂರ್ವಾಧಿಕಾರಿ Sharad Pawar
ಉತ್ತರಾಧಿಕಾರಿ Narayan Rane

ಅಧಿಕಾರ ಅವಧಿ
10 May 2002 – 2 June 2004
ಪೂರ್ವಾಧಿಕಾರಿ G. M. C. Balayogi
ಉತ್ತರಾಧಿಕಾರಿ Somnath Chatterjee
ವೈಯಕ್ತಿಕ ಮಾಹಿತಿ
ಜನನ (1937-10-02) ೨ ಅಕ್ಟೋಬರ್ ೧೯೩೭ (ವಯಸ್ಸು ೮೭)
ರಾಜಕೀಯ ಪಕ್ಷ Shiv Sena
ಧರ್ಮ Hindu

ಮನೋಹರ ಗಜಾನನ ಜೋಶಿ , (ಮರಾಠಿ:मनोहर गजानन जोशी) (ಜನನ ಡಿಸೆಂಬರ್ 2, 1937 - ಫೆಬ್ರವರಿ 23, 2024) ಅವರು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ ಭಾರತೀಯ ರಾಜಕಾರಣಿಯಾಗಿದ್ದಾರೆ. ಇವರು ಶಿವಸೇನಾ ರಾಜಕೀಯ ಪಕ್ಷದ ಪ್ರಮುಖ ನಾಯಕರಾಗಿದ್ದಾರೆ. ಇವರು 1995 ರಿಂದ 1999 ರವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿಗಳಾಗಿದ್ದರು.

ಹಿನ್ನೆಲೆ ಮತ್ತು ಕುಟುಂಬ

[ಬದಲಾಯಿಸಿ]

ಇವರು ರಾಯಘಡ ಜಿಲ್ಲೆಯ ಕೆಳ-ಮಧ್ಯಮ ವರ್ಗದ ದೇಶಸ್ಥ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು. ಇವರ ಪೂರ್ವಜರು ಬೀಡ್ ಜಿಲ್ಲೆಯಿಂದ ರಾಯಘಡ ಜಿಲ್ಲೆಯ ಗೋರೆಗಾಂವ್‌ಗೆ ವಲಸೆ ಬಂದಿದ್ದರು ಮತ್ತು ಹಿಂದಿನ 'ಬ್ರಾಹ್ಮೆ' ಕುಟುಂಬದವರು ತಮ್ಮ ವೃತ್ತಿಯ ಕಾರಣದಿಂದ 'ಜೋಶಿ' ಉಪನಾಮವನ್ನು ಸೇರಿಸಿಕೊಂಡಿದ್ದರು. ಅಧ್ಯಯನ ಮಾಡುತ್ತಿರುವಾಗ ಇವರು ತಮ್ಮ ಇತರ ಮಧ್ಯಮ ವರ್ಗದ ಸಂಬಂಧಿಗಳಿಂದ ಸಹಾಯವನ್ನು ಪಡೆದರು. ಇವರು 1964 ರ ಮೇ 14 ರಂದು ಶ್ರೀಮತಿ. ಅನಘಾ ಜೋಶಿಯವರನ್ನು ವಿವಾಹವಾದರು ಮತ್ತು ಇವರಿಗೆ ಉನ್ಮೇಶ್ ಎನ್ನುವ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ. 2010 ರಲ್ಲಿ ಶ್ರೀ ಮನೋಹರ ಜೋಶಿಯವರಿಗೆ ಮುಂಬಯಿ ವಿಶ್ವವಿದ್ಯಾನಿಲಯವು ಡಾಕ್ಟರೇಟ್ (ರಾಜ್ಯಶಾಸ್ತ್ರದಲ್ಲಿ) ಪ್ರದಾನ ಮಾಡಿತು.

ಕೊಹಿನೂರ್‌ನ ನಿರ್ಮಾಣ

[ಬದಲಾಯಿಸಿ]

ಕಾನೂನಿನಲ್ಲಿ ಎಂಎ ಪಡೆದ ಬಳಿಕ ಜೋಶಿಯವರು ಅಧಿಕಾರಿಯಾಗಿ ಮುಂಬಯಿ ಕಾರ್ಪೊರೇಶನ್ (ಬಿಎಮ್‌ಸಿ) ಸೇರಿದರು, ಆದರೆ ಅವರ ಕೈಗಾರಿಕೋದ್ಯಮಿಯ ಕೌಶಲ್ಯಗಳು ಕೊಹಿನೂರ್ ತಾಂತ್ರಿಕ/ವೃತ್ತಿಪರ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಲು ಪ್ರೇರೇಪಿಸಿತು ಮತ್ತು ಇದು 1970 ರ ದಶಕದಲ್ಲಿ ಅರೆ-ಕೌಶಲ್ಯಪೂರ್ಣ ಯುವಕರಿಗೆ ಎಲೆಕ್ಟ್ರಿಷಿಯನ್, ಪ್ಲಂಬರ್, ಟಿವಿ/ರೇಡಿಯೋ/ಸ್ಕೂಟರ್ ರಿಪೇರಿ ಮಾಡುವವರ ತರಬೇತಿಯನ್ನು ನೀಡುವ ಸಂಸ್ಥೆಯ ಯೋಚನೆಯು ಅನನ್ಯವಾಗಿತ್ತು. ಕೆಳ ಮಧ್ಯಮ-ವರ್ಗದ ಮರಾಠಿ ಯುವ ಜನತೆಯಲ್ಲಿ ಛಾಯಾಚಿತ್ರಣವು ಇವರನ್ನು ಅತೀ ಜನಪ್ರಿಯರನ್ನಾಗಿ ಮಾಡಿತು, ಈ ಯವಕರು ಆ ಸಮಯದಲ್ಲಿ ಶಿವಸೇನೆಯ ಸಿದ್ಧಾಂತಗಳ ಬಗ್ಗೆ ಅನುಕಂಪವನ್ನು ಹೊಂದಿದ್ದರು. ಅಂತಿಮವಾಗಿ, ಅವರು ಮುಂಬಯಿ, ಪುಣೆ, ನಾಗಪುರ, ನಾಸಿಕ್ ಹಾಗೂ ಇತರಡೆಗಳಲ್ಲಿ ಕೊಹಿನೂರ್‌ನ ಇನ್ನಷ್ಟು ಶಾಖೆಗಳನ್ನು ಪ್ರಾರಂಭಿಸಿದರು ಮತ್ತು ನಂತರ ಅವರು ನಿರ್ಮಾಣ ಹಾಗೂ ಬಂಡವಾಳ-ಸಂಬಂಧಿತ ವ್ಯವಹಾರಗಳಿಗೆ ಪ್ರವೇಶಿಸಿದರು.

ಮನೋಹರ ಜೋಶಿಯವರು ಮಹಾರಾಷ್ಟ್ರದ ಖಂಡಾಲದಲ್ಲಿ ಕೊಹಿನೂರ್ ಬ್ಯುಸಿನೆಸ್ ಸ್ಕೂಲ್ ಮತ್ತು ಕೊಹಿನೂರ್-ಐಎಮ್ಐ (ಸತ್ಕಾರ) ಸಂಸ್ಥೆಗಳನ್ನು ಸಹ ಸ್ಥಾಪಿಸಿದರು, ಇವುಗಳು ತಮ್ಮ ಕ್ಷೇತ್ರಗಳಲ್ಲಿ ಪ್ರಧಾನ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದವು. ಜೋಶಿಯವರು ಸರಳ ಮತ್ತು ಅತೀ ಶಾಂತ ಸ್ವಭಾವದ ವ್ಯಕ್ತಿಯಾಗಿದ್ದಾರೆ.

ರಾಜಕೀಯ ಜೀವನ

[ಬದಲಾಯಿಸಿ]

ಶಿವಸೇನೆಯಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗುವ ಮೂಲಕ ಜೋಶಿಯವರು ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. 1976 ರಿಂದ 1977 ರವರೆಗೆ ಇವರು ಮುಂಬಯಿನ ಮೇಯರ್ ಆಗಿದ್ದರು. 1990 ರಲ್ಲಿ ಇವರು ಶಿವಸೇನೆ ಟಿಕೆಟ್‌ನಿಂದ ವಿಧಾನಸಭೆಗೆ ಆಯ್ಕೆಯಾದರು. ರಾಜ್ಯದಲ್ಲಿ ಚುನಾವಣೆಯಲ್ಲಿ ಸೇನಾ-ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸಮ್ಮಿಶ್ರ ಕೂಟವು ಕಾಂಗ್ರೆಸ್ ಅನ್ನು ಪರಾಭವಗೊಳಿಸಿದಾಗ ಜೋಶಿಯವರು ಪ್ರಥಮ-ಕಾಂಗ್ರೆಸ್ಸೇತರ ಮಹಾರಾಷ್ಟ್ರದ ಮುಖ್ಯಮಂತ್ರಿಯವರಾದರು. 1999 ರ ಸಾಮಾನ್ಯ ಚುನಾವಣೆಗಳಲ್ಲಿ ಜೋಶಿಯವರು ಮಧ್ಯ ಮುಂಬಯಿ ಕ್ಷೇತ್ರದಿಂದ ಗೆಲ್ಲುವ ಮೂಲಕ ಲೋಕಸಭೆಗೆ ಬಡ್ತಿ ಪಡೆದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರದ ಆಡಳಿತಾವಧಿಯ ಸಂದರ್ಭದಲ್ಲಿ 2002 ರಿಂದ 2004 ರವರೆಗೆ ಜೋಶಿಯವರು ಲೋಕಸಭೆಯ ಸ್ಪೀಕರ್ ಆಗಿದ್ದರು.

ಇವರು ನಿಧಾನವಾಗಿ ಶಿವಸೇನೆಯ ಹುದ್ದೆಗಳಲ್ಲಿ ಮೇಲಕ್ಕೇರಿದರು. ಜೋಶಿಯವರು ಶಿವಸೇನೆಯಲ್ಲಿ ಭಾರಿ ಪ್ರಭಾವಿಯಾಗಿದ್ದರು ಮತ್ತು ಇತರರು ಪಕ್ಷದ ಅಧ್ಯಕ್ಷರಾದ ಬಾಳಾಸಾಹೇಬ್ ಠಾಕ್ರೆ ಅವರನ್ನು ಭೇಟಿ ಮಾಡದಂತೆ ತಪ್ಪಿಸುತ್ತಿದ್ದಾರೆ ಎಂದು ಜೋಶಿಯವರ ಮೇಲೆ ನಾರಾಯಣ ರಾಣೆಯವರು ಆರೋಪಿಸಿದ್ದರು. 1991 ರಲ್ಲಿ ಜೋಶಿಯವರಿಗೆ ತ್ವರಿತವಾಗಿ ಬಡ್ತಿ ನೀಡಿದಾಗ, ಚಗಲ್ ಭುಜಬಲ್ ಅವರು ಪಕ್ಷವನ್ನು ತ್ಯಜಿಸಿದರು. ಜೋಶಿಯವರು ಗೌರವಪೂರ್ಣ ವ್ಯಕ್ತಿತ್ವವುಳ್ಳವರಾಗಿದ್ದರು ಮತ್ತು ಅವರು ಶಿವಸೇನೆಯಲ್ಲಿ ಅದ್ಭುತವಾದ ಪ್ರಭಾವವನ್ನು ಹೊಂದಿದ್ದರು.

ಮಧ್ಯ ಮುಂಬಯಿ ಲೋಕಸಭಾ ಕ್ಷೇತ್ರದಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಪರಿಚಿತರಾದ ಕಾಂಗ್ರೆಸ್ ಅಭ್ಯರ್ಥಿಯ ಕೈಯಲ್ಲಿ ಸೋತ ಬಳಿಕ ಜೋಶಿಯವರನ್ನು 2006 ರ ಮಾರ್ಚ್ 20 ರಂದು [] ಜೋಶಿಯವರನ್ನು ಆರು ವರ್ಷಗಳ ಕಾಲಾವಧಿಗೆ ರಾಜ್ಯಸಭೆಗೆ ಚುನಾಯಿಸಲಾಯಿತು.

ಜೋಶಿಯವರು ಸೌಹಾರ್ದಯುತ ವೈಯಕ್ತಿಕ ಮತ್ತು ವ್ಯಾವಹಾರಿಕ ಸಂಬಂಧವನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷರಾದ ರಾಜ್ ಥಾಕ್ರೆ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾದ ಶರದ್ ಪವಾರ್ ಅವರೊಂದಿಗೆ ಹೊಂದಿದ್ದಾರೆ.

ವ್ಯವಹಾರದಲ್ಲಿ

[ಬದಲಾಯಿಸಿ]

ತಾಂತ್ರಿಕ ಶಿಕ್ಷಣ, ಹೋಟೆಲ್‌ಗಳು, ನಿರ್ಮಾಣ ಮತ್ತು ರಿಯಲ್ ಎಸ್ಟೇಟ್‌ ಉದ್ಯಮಗಳನ್ನು ಒಳಗೊಂಡಿರುವ ಕೊಹಿನೂರ್ ಶ್ರೇಣಿ ಕಂಪನಿಗಳ ಮಾಲೀಕರಾಗಿದ್ದಾರೆ. ಜೋಶಿಯವರು ಎಮ್ಎನ್ಎಸ್ ಮುಖ್ಯಸ್ಥರಾದ ರಾಜ್ ಥಾಕ್ರೆಯವರೊಂದಿಗೆ ಸೇರಿ ಕೆಲವು ವರ್ಷಗಳ ಹಿಂದೆ ಮುಂಬಯಿನಲ್ಲಿ ಕೊಹಿನೂರ್ ಮಿಲ್ ಭೂಮಿಯನ್ನು ಖರೀದಿಸಲು 400 ಕೋಟಿ ರೂಪಾಯಿಗಳನ್ನು ಪಾವತಿಸಿದ ಸಂದರ್ಭದಲ್ಲಿ (ಸುಮಾರು ಯುಎಸ್‌ಡಿ 82 ಮಿಲಿಯನ್‌ಗಳು) ವಿವಾದಕ್ಕೆ ಒಳಗಾಗಿದ್ದರು. ಜೋಶಿಯವರು ಈ ಭಾರಿ ಮೊತ್ತದ ಅತೀ ಚಿಕ್ಕ ಭಾಗದಷ್ಟೇ ವೈಯಕ್ತಿಕ ಆಸ್ತಿಯನ್ನು ಘೋಷಣೆ ಮಾಡಿದ ಬಗ್ಗೆ, ಅತೀ ತ್ವರಿತ ಕಾಲಾವಧಿಯಲ್ಲಿ ಇಷ್ಟು ಹೆಚ್ಚಿನ ಮೊತ್ತದ ಹಣವನ್ನು ಇಬ್ಬರೂ ಸಂಗ್ರಹಿಸಿದ ಸಾಮರ್ಥ್ಯದ ಬಗ್ಗೆ, ಮತ್ತು ಇವರೀರ್ವರಿಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಭೂಮಿಯನ್ನು ಏಕೆ ಮಾರಾಟ ಮಾಡಲಾಯಿತು ಎಂಬ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.

ಅಲಂಕರಿಸಿದ ಹುದ್ದೆಗಳು

[ಬದಲಾಯಿಸಿ]
  • 1967-1972 - ಕಾರ್ಪೊರೇಟರ್, ಬಾಂಬೆ ಮುನ್ಸಿಪಲ್ ಕಾರ್ಪೊರೇಶನ್
  • 1972-1989 - ಸದಸ್ಯ, ಮಹಾರಾಷ್ಟ್ರ ವಿಧಾನ ಪರಿಷತ್ತು
  • 1976-1977 - ಮುಂಬಯಿನ ಮೇಯರ್
  • 1990-1991 - ಮಹಾರಾಷ್ಟ್ರ ವಿಧಾನಸಭೆಯ ಸದಸ್ಯರು ಮತ್ತು ವಿರೋಧ ಪಕ್ಷದ ನಾಯಕರು
  • 1995-1999 -ಮಹಾರಾಷ್ಟ್ರದ ಮುಖ್ಯಮಂತ್ರಿ
  • 1999-2004 - ಲೋಕಸಭೆಯ ಸದಸ್ಯರು
  • 2002-2004 - ಲೋಕಸಭೆಯ ಸ್ಪೀಕರ್
  • 2002 ರಿಂದ 2004 ಬೃಹತ್ ಕೈಗಾರಿಕೆ ಸಚಿವರು
  • 2006-ಇಲ್ಲಿಯವರೆಗೆ - ರಾಜ್ಯಸಭೆಯ ಸದಸ್ಯರು

ಇವನ್ನೂ ಗಮನಿಸಿ‌

[ಬದಲಾಯಿಸಿ]
  • ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಪಟ್ಟಿ

ಉಲ್ಲೇಖಗಳು‌‌

[ಬದಲಾಯಿಸಿ]

ಬಾಹ್ಯ ಕೊಂಡಿಗಳು‌‌

[ಬದಲಾಯಿಸಿ]
ಪೂರ್ವಾಧಿಕಾರಿ
Sharad Pawar
Chief Minister of Maharashtra
March 14, 1995–January 31, 1999
ಉತ್ತರಾಧಿಕಾರಿ
Narayan Rane
ಪೂರ್ವಾಧಿಕಾರಿ
G. M. C. Balayogi
Speaker of Lok Sabha
2002–2004
ಉತ್ತರಾಧಿಕಾರಿ
Somnath Chatterjee