ವಿಷಯಕ್ಕೆ ಹೋಗು

ಕೈಜೆನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೈಝೆನ್ (改善 "ಸುಧಾರಣೆ" ಎಂಬ ಅರ್ಥ ಕೊಡುವ ಜಪಾನೀ ಶಬ್ದ) ಎಂಬ ಪದ ಇಂಗ್ಲೀಷಿನಲ್ಲಿ ಅಳವಡಿಸಿಕೊಂಡ ಜಪಾನೀ ಶಬ್ದವಾಗಿದ್ದು, ಇದು ಉತ್ಪಾದನಾ ಕಾರ್ಯಗಳು, ಸಾಮಾನ್ಯ ವ್ಯಾವಹಾರಿಕ ಚಟುವಟಿಕೆಗಳು ಮತ್ತು ಸಾಮಾನ್ಯವಾಗಿ ಜೀವನವನ್ನೂ ಒಳಗೊಂಡಂತೆ ಎಲ್ಲವನ್ನೂ ಅವುಗಳ ವ್ಯಾಖ್ಯಾನ ಮತ್ತು ಬಳಕೆಗನುಗುಣವಾಗಿ ನಿರಂತರವಾಗಿ ಸುಧಾರಣೆ ಮಾಡುವುದರೆಡೆಗೆ ಕೇಂದ್ರೀಕರಿಸಿರುವ ಒಂದು ತತ್ವ ಅಥವಾ ಪದ್ಧತಿಯಾಗಿದೆ.

ಕೈಝೆನ್ ಶಬ್ದವನ್ನು ವ್ಯವಹಾರದ ಅರ್ಥಕ್ಕೆ ಉಪಯೋಗಿಸಿಕೊಂಡು ಮತ್ತು ಕೆಲಸಮಾಡುವ ಸ್ಥಳದಲ್ಲಿ ಅಳವಡಿಸಿಕೊಂಡಾಗ, ವ್ಯವಹಾರದ ಎಲ್ಲ ಕೆಲಸಗಳಲ್ಲಿ, ಅಂದರೆ ಉತ್ಪಾದನೆಯಿಂದ ನಿರ್ವಹಣೆಯವರೆಗೆ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಂದ ಕೆಲಸಗಾರರವರೆಗೆ ಎಲ್ಲವನ್ನೂ ನಿರಂತರವಾಗಿ ಸುಧಾರಿಸುವ ಚಟುವಟಿಕೆಗಳು ಎಂದು ಅರ್ಥೈಸಬಹುದು.[] ಗುಣಮಟ್ಟದ ಚಟುವಟಿಕೆಗಳು ಮತ್ತು ಕಾರ್ಯವಿಧಾನಗಳನ್ನು ಸುಧಾರಿಸುವ ಮೂಲಕ, ದುಂದುವೆಚ್ಚವನ್ನು ಕಡಿಮೆ ಮಾಡುವುದು ಕೈಜೆನ್‌ನ ಉದ್ದೇಶವಾಗಿದೆ(ನೇರ ಉತ್ಪಾದನೆಯನ್ನು ನೋಡಿ). ಜಪಾನೀ ಯುದ್ಧ ನಂತರದ ಆರ್ಥಿಕ ಚಮತ್ಕಾರದ ಸಮಯದಲ್ಲಿ ಕೆಲವು ಜಪಾನೀ ವ್ಯವಹಾರಗಳಲ್ಲಿ ಕೈಜೆನ್ ಮೊದಲು ಕಾರ್ಯಗತಗೊಂಡಿತು ಮತ್ತು ಅಲ್ಲಿಂದ ಪ್ರಪಂಚದ ವ್ಯವಹಾರಗಳ ತುಂಬೆಲ್ಲಾ ಹರಡಿತು.[]

ಪರಿಚಯ

[ಬದಲಾಯಿಸಿ]

ಜಪಾನೀ ಶಬ್ದ "ಕೈಜೆನ್" ಎಂದರೆ "ಸುಧಾರಣೆ", ಆದರೆ ನಿರ್ವಹಣೆಯಲ್ಲಿ, ಹೆಚ್ಚು ವಿಶಾಲವಾದ ಅರ್ಥದಲ್ಲಿ, ಸಣ್ಣ ಏರಿಕೆಗಳಲ್ಲಿ ನಿರಂತರವಾದ ಸುಧಾರಣೆ.[]

ಕೈಜೆನ್ ಪ್ರತಿದಿನದ ಚಟುವಟಿಕೆಯಾಗಿದ್ದು, ಇದರ ಉದ್ದೇಶ ಸಾಮಾನ್ಯ ಉತ್ಪಾದಕತೆಯ ಸುಧಾರಣೆಯನ್ನು ಮೀರಿ ಹೋಗುತ್ತದೆ. ಸರಿಯಾಗಿ ಮಾಡಿದಾಗ, ಇದು ಕೆಲಸಮಾಡುವ ಸ್ಥಳವನ್ನು ಹೆಚ್ಚು ಮಾನವೀಯಗೊಳಿಸುವಂತಹುದಾಗಿದೆ, ಹೆಚ್ಚಿನ ಕಠಿಣ ಕೆಲಸವನ್ನು ತೆಗೆದುಹಾಕುತ್ತದೆ ("ಮುರಿ"), ಜನರಿಗೆ ವೈಜ್ಞಾನಿಕ ವಿಧಾನಗಳನ್ನು ಉಪಯೋಗಿಸಿ ತಮ್ಮ ಕೆಲಸಗಳಲ್ಲಿ ಹೇಗೆ ಪ್ರಯೋಗಗಳನ್ನು ಮಾಡಬೇಕು ಮತ್ತು ಆಯ್ಕೆ ಮಾಡುವುದನ್ನು ಕಲಿಯುವುದು ಹೇಗೆ ಎಂಬುದನ್ನು ಕಲಿಸುತ್ತದೆ ಮತ್ತು ವ್ಯವಹಾರದ ಕಾರ್ಯವಿಧಾನದಲ್ಲಿ ದುಂದು ವೆಚ್ಚ ಮಾಡುವುದನ್ನು ಕಡಿಮೆ ಮಾಡುತ್ತದೆ. ಒಟ್ಟಾರೆಯಾಗಿ, ಈ ಪ್ರಕ್ರಿಯೆಯು ಕೆಲಸಗಾರರಿಗೆ ಮಾನವೀಯ ವಿಧಾನವನ್ನು ಕಲಿಸುತ್ತದೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದಕ್ಕೆ ದಾರಿ ಮಾಡುತ್ತದೆ: "ಕಂಪನಿಯ ಮಾನವ ಸಂಪನ್ಮೂಲವನ್ನು ಹೆಚ್ಚು ಬೆಳೆಸುವುದು ಹಾಗೂ ಕೈಜೆನ್ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಹೊಗಳುವುದು ಮತ್ತು ಹುರಿದುಂಬಿಸುವುದು ಇದರ ಉದ್ದೇಶವಾಗಿದೆ."[] ಇದರ ನೆರವೇರಿಕೆಯ ಯಶಸ್ಸಿಗೆ "ಸುಧಾರಣೆಯಲ್ಲಿ ಕೆಲಸಗಾರರ ಭಾಗವಹಿಸುವಿಕೆ"ಯ ಅವಶ್ಯಕತೆ ಇದೆ.[]

ಸಂಘಟನೆಯ ಎಲ್ಲಾ ಸ್ತರಗಳ ಕೆಲಸಗಾರರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಿಂದ ಹಿಡಿದು ಕೆಳಗಿನ ಹಂತದವರೆಗೂ, ಹೊರಗಿನ ಪಾಲುದಾರರಿಗೆ ಅನ್ವಯಿಸಿದಾಗ ಅವರೂ ಸಹ, ಕೈಜೆನ್‌ನಲ್ಲಿ ಭಾಗವಹಿಸಬಹುದು. ಕೈಜೆನ್ ವಿನ್ಯಾಸವನ್ನು ವ್ಯಕ್ತಿಗತ, ಸಲಹಾ ವ್ಯವಸ್ಥೆ, ಚಿಕ್ಕ ಗುಂಪು ಅಥವಾ ದೊಡ್ಡ ಗುಂಪುಗಳಾಗಿ ಮಾಡಬಹುದು. ಟೊಯೋಟಾದಲ್ಲಿ, ಇದು ಸಾಮಾನ್ಯವಾಗಿ ಕೆಲಸ ಮಾಡುವ ಸ್ಥಳ ಅಥವಾ ಸ್ಥಳೀಯ ಪ್ರದೇಶದಲ್ಲಿ ಸ್ಥಳೀಯ ಸುಧಾರಣೆಯಾಗಿದ್ದು, ಇದರಲ್ಲಿ ಚಿಕ್ಕ ಗುಂಪು ಅವರ ಸ್ವಂತ ಕೆಲಸ ಮಾಡುವ ವಾತಾವರಣ ಮತ್ತು ಉತ್ಪಾದಕತೆಯನ್ನು ಸುಧಾರಿಸುವಲ್ಲಿ ತೊಡಗಿಸಿಕೊಂಡಿವೆ. ಈ ಗುಂಪು ಆಗಾಗ ಮೇಲ್ವಿಚಾರಕರಿಂದ ಕೈಜೆನ್ ಕಾರ್ಯವಿಧಾನದ ಮೂಲಕ ಮಾರ್ಗದರ್ಶಿಸಲ್ಪಡುತ್ತದೆ, ಮತ್ತು ಕೆಲವೊಮ್ಮೆ ಇದೇ ಈ ಮೇಲ್ವಿಚಾರಕರ ಪ್ರಮುಖ ಕೆಲಸವಾಗಿರುತ್ತದೆ. ವಿಶಾಲವಾದ, ಕಂಪನಿಗಳಲ್ಲಿ ವಿವಿಧ ಶಾಖೆಗಳ ವ್ಯಾಪ್ತಿಯಲ್ಲಿ ಕೈಜೆನ್ ಸಂಪೂರ್ಣ ಗುಣಮಟ್ಟದ ನಿರ್ವಹಣೆಯನ್ನು ಸೃಷ್ಟಿಸುತ್ತದೆ, ಮತ್ತು ಯಂತ್ರಗಳು ಮತ್ತು ಗಣಕ ಯಂತ್ರಗಳ ಸಾಮರ್ಥ್ಯವನ್ನು ಉಪಯೋಗಿಸಿ ಉತ್ಪಾದನೆಯನ್ನು ಸುಧಾರಿಸುವುದರ ಮೂಲಕ ಮಾನವ ಶ್ರಮವನ್ನು ಕಡಿಮೆಗೊಳಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಕೈಜೆನ್ (ಟೊಯೋಟಾದಲ್ಲಿ) ಸಾಮಾನ್ಯವಾಗಿ ಚಿಕ್ಕ ಸುಧಾರಣೆಗಳನ್ನು ಮಾಡುತ್ತದೆಯಾದರೂ, ಚಿಕ್ಕ ಸುಧಾರಣೆಗಳನ್ನು ನಿರಂತರವಾಗಿ ಜೋಡಿಸುವ ಸಂಸ್ಕೃತಿ ಮತ್ತು ಅಧಿಕ ಉತ್ಪಾದನಾ ಸುಧಾರಣೆಯ ರೂಪದಲ್ಲಿ ಒಳ್ಳೆಯ ಗುಣಮಟ್ಟದ ಹೆಚ್ಚಿನ ಫಲಿತಾಂಶವನ್ನು ನೀಡುತ್ತದೆ. ಈ ತತ್ವವು ಇಪ್ಪತ್ತನೆ ಶತಮಾನದ ಮಧ್ಯ ಭಾಗದ "ಆದೇಶ ಮತ್ತು ನಿಯಂತ್ರಣ" ದಂತಹ ಸುಧಾರಣಾ ಕಾರ್ಯಕ್ರಮಕ್ಕಿಂತ ಬೇರೆ ರೀತಿಯಾಗಿದೆ. ಕೈಜೆನ್ ವಿಧಾನವು ಬದಲಾವಣೆಗಳನ್ನು ಮಾಡುತ್ತಾ ಮತ್ತು ಫಲಿತಾಂಶಗಳನ್ನು ಗಮನಿಸುತ್ತಾ, ನಂತರ ಹೊಂದಿಸುವುದನ್ನು ಒಳಗೊಂಡಿರುತ್ತದೆ. ಬೃಹತ್ ಪ್ರಮಾಣದಲ್ಲಿ ಪೂರ್ವಯೋಜನೆ ಮತ್ತು ವಿಸ್ತಾರವಾದ ಯೋಜನೆ ಅನುಸೂಚನೆಗಳ ಬದಲಾಗಿ ಚಿಕ್ಕ ಪ್ರಯೋಗಗಳನ್ನು ಅಳವಡಿಸಲಾಗುತ್ತದೆ, ಮತ್ತು ನಂತರದಲ್ಲಿ ಹೊಸ ಸುಧಾರಣೆಗಳ ಸಲಹೆ ದೊರೆತಂತೆಯೇ ತ್ವರಿತವಾಗಿ ಅವುಗಳನ್ನು ಅಳವಡಿಸಿಕೊಳ್ಳಬಹುದಾಗಿದೆ.[ಸೂಕ್ತ ಉಲ್ಲೇಖನ ಬೇಕು] ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ಜೀವ ಬೆದರಿಕೆಯ ಸಮಸ್ಯೆಗಳ ಜೊತೆ ವ್ಯವಹರಿಸುವಾಗ ಕೈಜೆನ್ (ಟೊಯೋಟಾದಲ್ಲಿ ಜಾರಿಯಲ್ಲಿರುವ) ಅಷ್ಟು ಅರ್ಹವಾದುದಲ್ಲ ಎಂದು ಇತ್ತೀಚಿನ ಘಟನೆಗಳು ಸೂಚಿಸುತ್ತವೆ ನ್ಯಾಷನಲ್ ಹೈವೆ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಶನ್‌ನಲ್ಲಿ ದಾಖಲಿಸಿದ ಮೊಕದ್ದಮೆಯಲ್ಲಿ ಟೊಯೋಟಾ, ಅಮೇರಿಕ ಮತ್ತು ಯುರೋಪಿನಲ್ಲಿ ಕಾರಿನ ಪೆಡಲುಗಳನ್ನು ತಯಾರಿಸಲು ಉಪಯೋಗಿಸುವ ವಸ್ತುಗಳು ಒಂದೇ ಆಗಿವೆ ಎಂಬುದು - ಎರಡಕ್ಕೂ ಒಂದೇ ಬಿಡಿಭಾಗಗಳ ತಯಾರಕರಾದ ಎಲ್‌ಕಾರ್ಟ್ ಸಿಟಿಎಸ್ ಇಂಡಸ್ಟ್ರಿಯವರು ವಸ್ತುಗಳನ್ನು ಪೂರೈಸಿದ್ದಾರಾದರೂ - 2009ರ ಅಕ್ಟೋಬರ್‌ವರೆಗೂ ತನಗೆ ತಿಳಿದಿರಲಿಲ್ಲ. ಟೊಯೋಟಾ ಕಳೆದ ಬೇಸಿಗೆಯಲ್ಲಿ ಯುರೋಪಿನ ಮಾದರಿಯ ಮೇಲೆ ಬದಲಾವಣೆ ಮಾಡಿದೆಯಾದರೂ, ಸಿಟಿಎಸ್ ತಯಾರಿಸಿದ ಪೆಡಲುಗಳ ಜೊತೆ ಇರುವ ಯಾವುದೇ ತೊಂದರೆಗಳ ಬಗ್ಗೆ ತಿಳಿದಿರಲಿಲ್ಲ ಎಂದು ಟೊಯೋಟಾ ಅಮೇರಿಕದ ಅಧಿಕಾರಿಗಳಿಗೆ ಹೇಳಿದೆ. ಬದಲಾಗಿ, ಅನಿಲದ ಪೆಡಲುಗಳು ಫ್ಲೋರ್‌ಮ್ಯಾಟ್ ಒಳಗೆ ಸಿಕ್ಕಿಕೊಂಡಿರುತ್ತವೆ ಎಂದು ನಂಬಿತ್ತೆಂದು ಟೊಯೋಟಾ ಹೇಳಿತು, ಗ್ರಾಹಕರಿಗೆ ವಿಷಯವನ್ನು ಸೂಚಿಸಲಾಗಿ ನಂತರ ಹಿಂದಕ್ಕೆ ಕರೆಯಿಸಿಕೊಳ್ಳಲಾಯಿತು.[]

ಆಧುನಿಕ ಬಳಕೆಯಲ್ಲಿ, ಯಾವುದಾದರೊಂದು ವಿಷಯವನ್ನು ಪರಿಹರಿಸಲು ಒಂದು ವಾರದ ಕಾಲಕ್ಕಾಗಿ ವಿನ್ಯಾಸಗೊಳಿಸಿದ ಕೇಂದ್ರೀಕೃತ ಕೈಜೆನ್‌ಅನ್ನು " ಕೈಜೆನ್ ಬ್ಲಿಟ್ಸ್" ಅಥವಾ "ಕೈಜೆನ್ ಕಾರ್ಯಕ್ರಮ" ಎನ್ನುತ್ತಾರೆ. ಇವುಗಳು ವ್ಯಾಪ್ತಿಯಲ್ಲಿ ಸೀಮಿತವಾಗಿವೆ, ಮತ್ತು ಅವುಗಳಿಂದ ಉದ್ಭವಿಸುವ ಸಮಸ್ಯೆಗಳನ್ನು ವಿಶಿಷ್ಟವಾಗಿ ನಂತರದ ಬ್ಲಿಟ್ಸ್‌ಗಳಲ್ಲಿ ಉಪಯೂಗಿಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಇತಿಹಾಸ

[ಬದಲಾಯಿಸಿ]

ಜಪಾನಿನಲ್ಲಿ ಎರಡನೆ ಮಹಾಯುದ್ಧದ ನಂತರ, ಅಮೇರಿಕದ ಉದ್ಯೋಗ ದಳವು ಸಂಖ್ಯಾಶಾಸ್ತ್ರದ ನಿಯಂತ್ರಣ ವಿಧಾನಗಳಲ್ಲಿ ನುರಿತ ಮತ್ತು ಕೈಗಾರಿಕೆಯಲ್ಲಿ ಯುದ್ಧ ಶಾಖೆಗಳ ತರಬೇತಿ(TWI)ಯ ಕಾರ್ಯಕ್ರಮಗಳ ಬಗ್ಗೆ ಚೆನ್ನಾಗಿ ತಿಳಿದಿರುವ ಅಮೇರಿಕದ ತಜ್ಞರನ್ನು, ಜಪಾನನ್ನು ಮತ್ತೆ ಒಗ್ಗೂಡಿಸುವ ಉದ್ದೇಶದಿಂದ ಕರೆತಂದಿತು. TWI ಕಾರ್ಯಕ್ರಮಗಳು ವೃತ್ತಿ ಸೂಚನೆಗಳು (ಗುಣಮಟ್ಟದ ಕೆಲಸ) ಮತ್ತು ಕಾರ್ಯ ವಿಧಾನಗಳು (ಪ್ರಕ್ರಿಯೆ ಸುಧಾರಣೆ)ಗಳನ್ನು ಒಳಗೊಂಡಿರುತ್ತವೆ. ಎಡ್ವರ್ಡ್ಸ್ ಡೆಮಿಂಗ್ ಕಲಿಸಿದ ಶೆವ್ಹಾರ್ಟ್ ಚಕ್ರ ಮತ್ತು ಜೊಸೆಫ್ ಎಮ್. ಜುರನ್ ಕಲಿಸಿದ ಬೇರೆ ಸಂಖ್ಯಾಶಾಸ್ತ್ರಗಳ ಮೇಲಿನ ವಿಧಾನಗಳೊಡನೆ ಸೇರಿ ಇವು 1950ರ ದಶಕದಲ್ಲಿ ಜಪಾನಿನಲ್ಲಾದ ಕೈಜೆನ್ ಕ್ರಾಂತಿಯ ತಳಹದಿಗಳಾದವು.[]

ಅಳವಡಿಕೆ

[ಬದಲಾಯಿಸಿ]

ಟೊಯೋಟಾ ಉತ್ಪಾದನಾ ವ್ಯವಸ್ಥೆ ಕೈಜೆನ್‌ಗಾಗಿ ಪ್ರಸಿದ್ಧವಾಗಿದೆ. ಇದರಲ್ಲಿ, ಒಂದು ಸರಣಿಯ ಎಲ್ಲಾ ಕೆಲಸಗಾರರು ಅವರ ಮೇಲ್ವಿಚಾರಕರೂ ಸೇರಿ ಯಾವುದೇ ಅಸಹಜತೆಯುಂಟಾದ ಸಂದರ್ಭದಲ್ಲಿ ಸರಣಿಯಲ್ಲಿ ನಡೆಯುತ್ತಿರುವ ಉತ್ಪಾದನೆಯ ಪ್ರಕ್ರಿಯೆಯನ್ನು ನಿಲ್ಲಿಸಬೇಕಾಗುತ್ತದೆ ಮತ್ತು ಅಸಹಜತೆಯನ್ನು ಬಗೆಹರಿಸುವುದಕ್ಕಾಗಿ ಸಲಹೆ ನೀಡಬೇಕಾಗುತ್ತದೆ. ಈ ಪ್ರಕ್ರಿಯೆಯು ಕೈಜೆನ್ ಅನ್ನು ಹುಟ್ಟುಹಾಕುತ್ತದೆ.

ಪಿಡಿಸಿಎ ಚಕ್ರಗಳು

ಕೈಜೆನ್ ಚಟುವಟಿಕೆಗಳ ಚಕ್ರವನ್ನು ಹೀಗೆ ವ್ಯಖ್ಯಾನಿಸಬಹುದು:

  • ಕಾರ್ಯಾಚರಣೆಯ ಗುಣಮಟ್ಟ ಪ್ರಮಾಣೀಕರಿಸುವುದು
  • ಪ್ರಮಾಣೀಕೃತ ಕಾರ್ಯಾಚರಣೆಯನ್ನು ಅಳತೆ ಮಾಡುವುದು (ಚಕ್ರದ ವೇಳೆ ಮತ್ತು ಕಾರ್ಯಾಚರಣೆಯಲ್ಲಿರುವ ವಸ್ತುಗಳ ಮೊತ್ತವನ್ನು ಕಂಡುಕೊಳ್ಳುವುದು)
  • ಅವಶ್ಯಕತೆಗಳಿಗೆ ಅನುಗುಣವಾಗಿ ವ್ಯಾಪ್ತಿಯ ಅಳತೆ
  • ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಅವಶ್ಯಕತೆಯನ್ನು ಪೂರೈಸಲು ಹೊಸ ವಿಧಾನ ಕಂಡುಕೊಳ್ಳುವುದು
  • ಹೊಸ, ಸುಧಾರಿಸಿದ ಕಾರ್ಯಾಚರಣೆಗಳನ್ನು ಪ್ರಮಾಣೀಕರಿಸುವುದು
  • ಕೊನೆಯಿಲ್ಲದಂತೆ ಚಕ್ರ ಮುಂದುವರೆಸುವುದು

ಇದನ್ನು ಶೆವ್ಹಾರ್ಟ್ ಚಕ್ರ, ಡೆಮಿಂಗ್ ಚಕ್ರ , ಅಥವಾ ಪಿಡಿಸಿಎ ಎಂದೂ ಕರೆಯುತ್ತಾರೆ. ಮಸಾಕಿ ಇಮೈ ಎಂಬುವವನು ಈ ಪದವನ್ನು ತನ್ನ ಕೈಜೆನ್ : ದ ಕೀ ಟು ಜಪಾನ್ಸ್ ಕಾಂಪಿಟೀಟಿವ್ ಸಕ್ಸಸ್‌ ಎಂಬ ಪುಸ್ತಕದಲ್ಲಿ ಪ್ರಸಿದ್ಧಿಗೊಳಿಸಿದ್ದಾನೆ.

ಕೈಜೆನ್ ತತ್ವಗಳನ್ನು ವ್ಯವಹಾರದ ವಿಧಾನಗಳಿಗೆ ಅನ್ವಯಿಸುವುದರ ಹೊರತಾಗಿ, ಅಂಥೋನಿ ರಾಬಿನ್ಸ್ ಮತ್ತು ರಾಬರ್ಟ್ ಮೌರರ್ ಇಬ್ಬರೂ ವೈಯಕ್ತಿಕ ಬೆಳವಣಿಗೆಯ ತತ್ವಗಳಾಗಿ ಪ್ರಸಿದ್ಧಿಗೊಳಿಸಿದ್ದಾರೆ. ರಾಬಿನ್‌ಸನ್‌ನ ಕೈಜೆನ್‌ನಲ್ಲಿನ CANI (ಸ್ಥಿರ ಮತ್ತು ಎಂದೂ ಕೊನೆಗೊಳ್ಳದ ಸುಧಾರಣೆ) ವಿಧಾನದ ಮೂಲವನ್ನು ಅವನ ಲೆಸನ್ಸ್ ಇನ್ ಮಾಸ್ಟರಿ ಸರಣಿಯಲ್ಲಿ ಚರ್ಚಿಸಲಾಗಿದೆ.

ದ ಟೊಯೋಟಾ ವೆ ಫೀಲ್ಡ್ ಬುಕ್ ಎಂಬ ಪುಸ್ತಕದಲ್ಲಿ ಬ್ರಿಜೇಶ್ ರಾವತ್, ಜೆಫರಿ ಲೈಕರ್, ಮತ್ತು ಡೆವಿಡ್ ಮೈರ್ ಇವರು ನಿರಂತರ ಸುಧಾರಣೆಯಲ್ಲಿ ಕೈಜೆನ್ ಬ್ಲಿಟ್ಜ್ ಮತ್ತು ಕೈಜೆನ್ ಬರ್ಸ್ಟ್ (ಅಥವಾ ಕೈಜೆನ್ ಕಾರ್ಯಕ್ರಮ)ಗಳು ಕೆಲಸ ಮಾಡುವ ರೀತಿಯನ್ನು ಚರ್ಚಿಸಿದ್ದಾರೆ. ಒಂದು ಕೈಜೆನ್ ಬ್ಲಿಟ್ಜ್, ಅಥವಾ ತ್ವರಿತ ಸುಧಾರಣೆ, ಎಂಬುದು ಒಂದು ನಿರ್ಧಿಷ್ಟ ಕಾರ್ಯಾಚರಣೆ ಅಥವಾ ಚಟುವಟಿಕೆಯ ಮೇಲೆ ಕೇಂದ್ರೀಕೃತವಾದ ಚಟುವಟಿಕೆಯಾಗಿದೆ. ದುಂದು ವೆಚ್ಚವನ್ನು ಗುರುತಿಸುವುದು ಮತ್ತು ತಕ್ಷಣ ಅದನ್ನು ತೆಗೆದುಹಾಕುವುದು ಇದರ ಮೂಲ ಪರಿಕಲ್ಪನೆಯಾಗಿದೆ. ಮೌಲ್ಯದ ಹರಿವಿನಲ್ಲಿ ವಿಶಿಷ್ಟ ಕಾರ್ಯಾಚರಣೆಯ ಮೇಲೆ ನಿರ್ಧಿಷ್ಟವಾದ ಕೈಜೆನ್ ಚಟುವಟಿಕೆಯು ಕೈಜೆನ್ ಬರ್ಸ್ಟ್‌ನ ಮತ್ತೊಂದು ರೀತಿಯಾಗಿದೆ.[]

ಕೈಜೆನ್‌ನ ಮುಖ್ಯ ಅಂಶಗಳೆಂದರೆ ಗುಣಮಟ್ಟ, ಪ್ರಯತ್ನ, ಎಲ್ಲ ಕೆಲಸಗಾರರ ತೊಡಗಿಸಿಕೊಳ್ಳುವಿಕೆ, ಬದಲಾಯಿಸುವ ಮನಸ್ಸು ಮತ್ತು ಸಂವಹನ.

ಕೈಜೆನ್‌ನ ಐದು ಮುಖ್ಯ ಅಂಶಗಳು

[ಬದಲಾಯಿಸಿ]
  • ತಂಡಕಾರ್ಯ
  • ವೈಯಕ್ತಿಕ ಶಿಸ್ತು
  • ಸುಧಾರಿತ ನೈತಿಕ ಸ್ಥೈರ್ಯ
  • ಗುಣಮಟ್ಟದ ವಲಯಗಳು
  • ಸುಧಾರಣೆಗೆ ಸಲಹೆಗಳು

ಮುಖ್ಯ ಫಲಿತಾಂಶಗಳು

[ಬದಲಾಯಿಸಿ]
  • ದುಂದುವೆಚ್ಚವನ್ನು ತೆಗೆದುಹಾಕುವುದು ಮತ್ತು ದಕ್ಷತೆಯನ್ನು ಸೇರಿಸುವುದು.
  • ಒಳ್ಳೆಯ ಸಂಘಟಿತ ಕಾರ್ಯಾಗಾರದಲ್ಲಿ ಕೈಜೆನ್‌ನ 5Sಗಳು
    • ಸೈರಿ - ಅಚ್ಚುಕಟ್ಟು
    • ಸೈಟೊನ್ - ವ್ಯವಸ್ಥಿತ ಸ್ಥಿತಿ
    • ಸೈಸೊ - ಸ್ವಚ್ಛತೆ
    • ಸೈಕೆಟ್ಸು - ಗುಣಮಟ್ಟಗೊಳಿಸುವುದು
    • ಶಿತ್ಸುಕೆ - ಶಿಸ್ತನ್ನು ಉಳಿಸುವುದು

ವಿಮರ್ಶೆ

[ಬದಲಾಯಿಸಿ]

ಮೊದಲನೆಯದಾಗಿ ಕೈಜೆನ್ ಪ್ರತಿಕ್ರಿಯಾತ್ಮಕ ಚಟುವಟಿಕೆಯಾಗಿದ್ದು, ಇದರಲ್ಲಿ ನೀವು ಏನಾದರೂ ತಪ್ಪಿದೆಯೇ ಎಂದು "ಪರೀಕ್ಷಿಸು"ತ್ತೀರಿ, ಮತ್ತು ಸರಿಪಡಿಸುತ್ತೀರಿ (ವಿಭಿನ್ನವಾಗಿ, ಸಮಸ್ಯೆಯ ನಿರ್ವಹಣೆಯು ಸಕ್ರಿಯಾತ್ಮಕವಾದದ್ದು). ಕೆಳಗಿನ ಸ್ಥರಗಳ ಕಾರ್ಯಾಚರಣೆಗಾಗಿ ಇದು ಕೆಲಸಮಾಡುತ್ತದೆಯಾದರೂ, ಇದರಲ್ಲಿ ಕ್ರಿಯಾತ್ಮಕ ಅಂಶವನ್ನು ಸೇರಿಸುವ ಮೂಲಕ ಇದನ್ನು ಸುಧಾರಿಸಬೇಕು ಮತ್ತು ಆ ಮೂಲಕ ಪ್ರತಿಯೊಬ್ಬನೂ ಕಾರ್ಯಾಚರಣೆಯಲ್ಲಿ ಅಭಿವೃದ್ಧಿಯನ್ನು ತರಲು ಪ್ರಯತ್ನಿಸುವಂತೆ ಮಾಡಬೇಕು - ಬಹುಮುಖ್ಯವಾಗಿ ಕಂಪನಿಯ ಅಭಿವೃದ್ಧಿಗೆ ಮುಖ್ಯವಾಗಿ ಏನು ಬೇಕು ಎಂಬುದು ಕೆಲಸಗಾರರಿಗೆ ತಿಳಿದಿರಬೇಕು. ಕೆಲಸಗಾರರು ಶಿಫಾರಸ್ಸು ಮಾಡಿದ ಆದರೆ ಕಂಪನಿಯ ಸುಧಾರಣೆಯ ಗುರಿಗೆ ಸರಿಹೊಂದದ ಸಂಗತಿಗಳಿಗೂ ಸಹ ಇದರಲ್ಲಿ ಅವಕಾಶ ಇರಬೇಕು. ಎಷ್ಟೋ ಬಾರಿ ಕೆಲಸಗಾರರು ಒಂದು ಸಂಸ್ಥೆಯ ಆಭಿವೃದ್ಧಿಗಾಗಿ ಎತ್ತಿ ತೋರಿಸಿದ ವಿಷಯವನ್ನು ಗುರುತಿಸಲು ಮತ್ತು ಅದನ್ನು ಅಳವಡಿಸಿಕೊಳ್ಳಲು ಸಂಸ್ಥೆಯ ಮಾಲೀಕರು ಸೋತ ಕಾರಣದಿಂದಾಗಿಯೇ ಬಹಳ ಹೊಸ ಕಂಪನಿಗಳು ಜನ್ಮ ತಳೆದಿವೆ.

ಇವನ್ನೂ ಗಮನಿಸಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. Imai, Masaaki (1986). Kaizen: The Key to Japan's Competitive Success. New York, NY, USA: Random House.
  2. ಯುರೋಪು ಜಪಾನ ಕೇಂದ್ರ , ಗುಂಪು ಕಾರ್ಯಾಚರಣೆಯನ್ನು ಸುಧಾರಿಸಲು ಕೈಜೆನ್ ಯೋಜನೆಗಳು, ಮೈಕೆಲ್ ಕೊಲೆನ್ಸೊ, ಲಂಡನ್: ಪಿಯರ್ಸನ್ ಎಜುಕೆಶನ್ ಲಿಮಿಟೆಡ್ , 2000
  3. Stamatis, D.H. (1997). TQM engineering handbook. CRC Press. p. 107. ISBN 9780824700836. Retrieved 6 February 2010.
  4. Tozawa, Bunji (1995). The improvement engine: creativity & innovation through employee involvement: the Kaizen teian system. Productivity Press. p. 34. ISBN 9781563270109. Retrieved 6 February 2010. {{cite book}}: Unknown parameter |coauthors= ignored (|author= suggested) (help)
  5. Laraia, Anthony C. (1999). The Kaizen Blitz: accelerating breakthroughs in productivity and performance. John Wiley and Sons. p. 26. ISBN 9780471246480. Retrieved 6 February 2010. {{cite book}}: Unknown parameter |coauthors= ignored (|author= suggested) (help)
  6. KANTER, JAMES; MAYNARD, MICHELINE; TABUCHI, HIROKO (6 February 2010). "Toyota's Pattern Is Slow Response on Safety Issues". Retrieved 6 February 2010.
  7. Huntzinger, Jim (2002). "The Roots of Lean: Training within Industry—the origin of Kaizen" (PDF). AME Target. 18 (1): 13. Archived from the original (PDF) on 2009-12-29. Retrieved 2008-05-09. {{cite journal}}: Unknown parameter |month= ignored (help)
  8. Liker, J. (2006). The Toyota Way Fieldbook. New York, NY, USA: McGraw-Hill. {{cite book}}: Cite has empty unknown parameter: |unused_data= (help); Unknown parameter |coauthor s= ignored (help)


ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • Cooper, Mary Pat (2008). Kaizen Sketchbook: The Comprehensive Illustrated Field Guide to Kaizen. Moffitt Associates. ISBN 978-0-615-19011-2.
  • Dinero, Donald (2005). Training Within Industry: The Foundation of Lean. Productivity Press. ISBN 1-56327-307-1.
  • Emiliani, B. (2007). Better Thinking, Better Results: Case Study and Analysis of an Enterprise-Wide Lean Transformation (2e. ed.). Kensington, CT, USA: The CLBM, LLC. ISBN 978-0-9722591-2-5. {{cite book}}: Unknown parameter |coauthors= ignored (|author= suggested) (help)
  • Imai, Masaaki (1986). Kaizen: The Key to Japan's Competitive Success. McGraw-Hill/Irwin. ISBN 0. {{cite book}}: Check |isbn= value: length (help)
  • Imai, Masaaki (1997-03-01). Gemba Kaizen: A Commonsense, Low-Cost Approach to Management (1e. ed.). McGraw-Hill. ISBN 0-07-031446-2.
  • Scotchmer, Andrew (2008). 5S Kaizen in 90 Minutes. Management Books 2000 Ltd. ISBN 978-1-8525254-7-7. {{cite book}}: Unknown parameter |years= ignored (help)

ಹೊರಗಿನ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಕೈಜೆನ್&oldid=1139032" ಇಂದ ಪಡೆಯಲ್ಪಟ್ಟಿದೆ