ಟೋಯೋಟಾ ಉತ್ಪಾದನಾ ವ್ಯವಸ್ಥೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಟೋಯೋಟಾ ಪ್ರೊಡಕ್ಷನ್ ಸಿಸ್ಟಮ್ (ಟಿಪಿಎಸ್) (Toyota Production System (TPS)) ಟೊಯೋಟಾ ಅಭಿವೃದ್ಧಿಪಡಿಸಿದ ನಿರ್ವಹಣಾ ತತ್ವಶಾಸ್ತ್ರ ಮತ್ತು ಅಭ್ಯಾಸಗಳನ್ನು ಒಳಗೊಂದ ಸಮಗ್ರ ಸಾಮಾಜಿಕ-ತಾಂತ್ರಿಕ ವ್ಯವಸ್ಥೆಯಾಗಿದೆ. ಟಿಪಿಎಸ್ ಸರಬರಾಜುದಾರರು ಮತ್ತು ಗ್ರಾಹಕರೊಂದಿಗೆ ಸಂವಹನ ಸೇರಿದಂತೆ ವಾಹನ ತಯಾರಕರಿಗೆ ಉತ್ಪಾದನೆ ಮತ್ತು ಜಾರಿ ವ್ಯವಸ್ಥೆಯನ್ನು ಆಯೋಜಿಸುತ್ತದೆ. ಈ ವ್ಯವಸ್ಥೆಯು ಹೆಚ್ಚು ಸಾಮಾನ್ಯವಾದ "ನೇರ ಉತ್ಪಾದನೆಯ(Lean Manufacturing)" ಒಂದು ಪ್ರಮುಖ ಮುನ್ಸೂಚಕವಾಗಿದೆ. ಜಪಾನಿನ ಕೈಗಾರಿಕಾ ಎಂಜಿನಿಯರುಗಳಾದ ತೈಚಿ ಓನೋ ಮತ್ತು ಈಜಿ ಟೊಯೋಡಾ 1948 ಮತ್ತು 1975 ರ ನಡುವೆ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು.[೧]ಮೂಲತಃ "ಜಸ್ಟ್-ಇನ್-ಟೈಮ್ ಪ್ರಡಕ್ಷನ್" ಎಂದು ಕರೆಯಲ್ಪಡುವ, ಟೊಯೋಟಾದ ಸ್ಥಾಪಕರಾದ ಸಕಚಿ ಟೊಯೋಡಾ, ಅವರ ಮಗ ಕೀಚಿಯೊ ಟೊಯೋಡಾ ಮತ್ತು ಎಂಜಿನಿಯರ್ ತೈಚಿ ಒನೊ ಸೃಷ್ಟಿಸಿದ ವಿಧಾನದ ಮೇಲೆ ಇದು ನಿರ್ಮಿತವಾಗುತ್ತದೆ. ಟಿಪಿಎಸ್ ಆಧಾರವಾಗಿರುವ ತತ್ವಗಳನ್ನು ಟಯೋಟಾ ಉತ್ಪಾದನಾ ವ್ಯವಸ್ಥೆಯಲ್ಲಿ ಮತ್ತು ನಿರ್ವಹಣಾ ವಿಧಾನದಲ್ಲಿ ಆಧಾರವಾಗಿರುವ ತತ್ವಗಳ ಮತ್ತು ನಡವಳಿಕೆಗಳ ಗಣವಾದ ದಿ ಟೊಯೋಟಾ ವೇ ದಲ್ಲಿ ಅಳವಡಿಸಲಾಗಿದೆ.

ಗುರಿಗಳು[ಬದಲಾಯಿಸಿ]

ಟಿಪಿಎಸ್ ನ ಮುಖ್ಯ ಉದ್ದೇಶಗಳು ಅತಿಹೊರೆ (ಮುರಿ) ಮತ್ತು ಅಸಮಂಜತತೆ (ಮುರಾ) ಇವುಗಳನ್ನು ಇಲ್ಲದಂತೆ ಮಾಡುವುದು ಮತ್ತು ಪೋಲು(ದುಂದುವೆಚ್ಚ)ನ್ನು (ಮುಡಾ) ತೊಡೆದುಹಾಕುವಿಕೆ ಆಗಿದೆ. ಸಂಸ್ಕರಣಾ ಪ್ರಮಿತಿಯ ವಿತರಣೆಯ ಮೇಲಿನ ಅತ್ಯಂತ ಮಹತ್ವದ ಪರಿಣಾಮಗಳು ಅಗತ್ಯವಿರುವ ಫಲಿತಾಂಶಗಳನ್ನು ಸಲೀಸಾಗಿ ತಲುಪಿಸುವ ಅಸಮಂಜತತೆಯನ್ನು ನಿವಾರಿಸುವ ಸಂಸ್ಕರಣೆಯನ್ನು ವಿನ್ಯಾಸಗೊಳಿಸುವ ಮೂಲಕ ಸಾಧಿಸಲಾಗುತ್ತದೆ. ಒತ್ತಡವು "ಮುಡಾ" (ಪೋಲು) ವನ್ನು ಉತ್ಪತ್ತಿ ಮಾಡುವ ಕಾರಣದಿಂದಾಗಿ ಸಂಸ್ಕರಣೆಯನ್ನು "ಮುರಿ" (ಅತಿಹೊರೆ) ಇಲ್ಲದೆಯೇ ಅವಶ್ಯಕವಾದಷ್ಟು ಹೊಂದಿಕೊಳ್ಳುವ ಎಂದು ಖಾತ್ರಿಪಡಿಸುವುದು ಕೂಡಾ ನಿರ್ಣಾಯಕವಾಗಿದೆ. ಅಂತಿಮವಾಗಿ ಪೋಲು(ದುಂದುವೆಚ್ಚ)ನ (ಮುಡಾ) ಕಡಿತ ಅಥವಾ ಅದನ್ನು ತೊಡೆದುಹಾಕುವ ಕೌಶಲ್ಯಯುತ ಸುಧಾರಣೆಗಳು ಬಹಳ ಮೌಲ್ಯಯುತವಾಗಿವೆ.

ಟಿಪಿಎಸ್ ನಲ್ಲಿ ಈ ಕೆಳಕಂಡ ಎಂಟು ವಿಧದ "ಪೋಲು (ಮುಡಾ) ನ ಬಗ್ಗೆ ಯೋಚನೆ ಮಾಡಲಾಗುತ್ತದೆ.[೨]

 1. ಅತಿಉತ್ಪಾದನೆಯ ಪೋಲು
 2. ಕಾಯುವಿಕೆಯ ಪೋಲು
 3. ಸಾಗಾಣಿಕೆಯ ಪೋಲು
 4. ತನ್ನಷ್ಟಕ್ಕೆ ಸಂಸ್ಕರಣೆಯಾಗುವ ಪೋಲು
 5. ಈಗಿರುವ ದಾಸ್ತಾನಿನ ಪೋಲು
 6. ಚಲನೆಯ ಪೋಲು
 7. ದೋಷಯುಕ್ತ ಉತ್ಪನ್ನಗಳ ತಯಾರಿಕೆಯ ಪೋಲು
 8. ಅನುಪಯೋಗಿ ಕೆಲಸಗಾರರ ಪೋಲು

ಟಿಪಿಎಸ್ ನ ಪರಿಣಾಮಗಳನ್ನು ಅವಲೋಕಿಸಿದಾಗ ಮೂರರಲ್ಲಿ ಪೋಲು(ದುಂದುವೆಚ್ಚ)ನ್ನು (ಮುಡಾ) ತೊಡೆದುಹಾಕುವಿಕೆಯು ಕಾರ್ಯಗತಗೊಳಿಸಲು ಸುಲಭವಾಗಿರುವುದರಿಂದ ಬಹಳ ಜನರ ಆಲೋಚನೆಗಳಲ್ಲಿ ಪ್ರಭಾವ ಬೀರಿರುವುದು. ಟಿಪಿಎಸ್ ನಲ್ಲಿ ಬಹಳ ಪ್ರಾರಂಭಿಕೆಗಳು, ಅಸಮಂಜತತೆ (ಮುರಾ) ಮತ್ತು ಅತ್ಯೋಟದ ಕಡಿತವು, ಪೋಲಾಗುವುದನ್ನು ನಿವಾರಿಸುವುದರಿಂದ, ಅ ಕಡಿತಗಳ ಮೇಲೆ ನಿರ್ದಿಷ್ಟ ಗಮನ ವಿಲ್ಲದೆಯೂ ಪ್ರಚೋದಿಸಿಲ್ಪಡುವವು.

ಪರಿಕಲ್ಪನೆ[ಬದಲಾಯಿಸಿ]

ಟೋಯೋಟಾ ಮೊಟಾರ್ ಕಾರ್ಪೋರೆಶನ್ ೧೯೯೨ರಲ್ಲಿ ಮೊದಲ ಬಾರಿಗೆ ಟಿಪಿಎಸ್ ನ ಅಧಿಕೃತ ವಿವರಣೆಯನ್ನು ಪ್ರಕಾಶಿಸಿರುತು; ಈ ಕಿರುಪುಸ್ತಕವು ೧೯೯೮ ರಲ್ಲಿ ಪರಿಷ್ಕರಿಸಲ್ಪಟ್ಟಿತು.[೩]ಮುನ್ನುಡಿಯಲ್ಲಿ "ಪೋಲನ್ನು ತೊಡೆದುಹಾಕುವ ಮೂಲಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಟಿಪಿಎಸ್(TPS) ಒಂದು ಚೌಕಟ್ಟಾಗಿದೆ" ಎಂದು ಹೇಳಲಾಗಿದೆ: ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಜನರು ಗ್ರಾಹಕರಿಗೆ ಮೌಲ್ಯವನ್ನು ಉತ್ಪಾದಿಸದೆ ಇರುವ ವಸ್ತು, ಶ್ರಮ ಮತ್ತು ಸಮಯದ ಖರ್ಚುಗಳನ್ನು ಗುರುತಿಸಲು ಕಲಿಯುತ್ತಾರೆ ಮತ್ತು ಇದಲ್ಲದೆ, 'ಇದು ಹೇಗೆ' ಎನ್ನುವ ವಿಧಾನವು ತಪ್ಪುವುದು ನಮ್ಮೊಂದಿಗಿರುವುದು. ಈ ಕಿರುಪುಸ್ತಕವು ಕೈಪಿಡಿಯಲ್ಲ. ಬದಲಿಗೆ, ಇದು ನಮ್ಮ ಉತ್ಪಾದನಾ ಪದ್ದತಿಯ ಆಧಾರದ ಮೇಲೆ ಪರಿಕಲ್ಪನೆಗಳ ಅವಲೋಕನವಾಗಿದೆ. ಇದು ಸಕಾರಾತ್ಮಕ ಬದಲಾವಣೆಗೆ ಬದ್ಧತೆಯೊಂದರಲ್ಲಿ ನಿರ್ವಹಣೆ ಮತ್ತು ಉದ್ಯೋಗಿಗಳು ಒಟ್ಟುಗೂಡಿದಾಗ ಎಲ್ಲೆಲ್ಲಿ ಮತ್ತು ಯಾವಾಗಾವಾಗ ಉತ್ಪಾದಕತೆ ಮತ್ತು ಗುಣಮಟ್ಟದಲ್ಲಿ ಶಾಶ್ವತವಾದ ಲಾಭಗಳು ಸಾಧ್ಯವೆಂದು ನೆನಪಿಸುವುದು ". ಟಿಪಿಎಸ್ ಪರಿಕಲ್ಪನೆಯ ಎರಡು ಪ್ರಮುಖ ಸ್ತಂಭಗಳಲ್ಲಿ ಆಧಾರವಾಗಿದೆ:

 1. ಜಸ್ಟ್-ಇನ್-ಟೈಮ್- [೪]ಎಂದರೆ ಯಾವುದು, ಯಾವಾಗ, ಮತ್ತು ಎಷ್ಟು ಅಗತ್ಯವಿದೆಯೋ ಅಷ್ಟು ಮಾತ್ರ ಮಾಡುವುದು.
 2. ಜಿಡೋಕ-[೫] ಎಂದರೆ ಮಾನವ ಸ್ಪರ್ಷವಿರುವ ಯಾಂತ್ರೀಕೃತತೆ.

ಟೊಯೋಟಾ ಈ ಪರಿಕಲ್ಪನೆಗಳನ್ನು ಕಂಪೆನಿ ಮತ್ತು ವ್ಯವಹಾರದಲ್ಲಿನ ನಿರ್ದಿಷ್ಟ ಅವಶ್ಯಕತೆಗಳಿಗೆ ಮತ್ತು ಷರತ್ತುಗಳಿಗೆ ಆಚರಣೆಗೆ ತರಲು ಮತ್ತು ಅವುಗಳನ್ನು ಅನ್ವಯಿಸಲು ಹಲವಾರು ಪರಿಕರಗಳನ್ನು ಅಭಿವೃದ್ಧಿಪಡಿಸಿದೆ.

ಉಗಮಗಳು[ಬದಲಾಯಿಸಿ]

ಈ ವ್ಯವಸ್ಥೆಯು, ಕಂಪನಿಯ ಯಾವುದೇ ಇತರ ಅಂಶಗಳಿಗಿಂತ ಹೆಚ್ಚು, ಟೊಯೋಟಾ ಕಂಪೆನಿಯು ಇಂದಿನ ಕಂಪೆನಿಯಾಗಿರುವುದಕ್ಕೆ ಕಾರಣವಾಗಿದೆ. ಟೊಯೊಟಾ ವಾಹನ ತಯಾರಿಕಾ ಮತ್ತು ಉತ್ಪಾದನಾ ಉದ್ಯಮದಲ್ಲಿ ದೀರ್ಘಕಾಲದಿಂದ ನಾಯಕನಾಗಿ ಗುರುತಿಸಲ್ಪಟ್ಟಿದೆ.[೬]

ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಟಿಪಿಎಸ್ ಹಿಂದಿರುವ ವಿಜ್ಞಾನವಾಗಿದೆ.

ಟೊಯೋಟಾ ತಮ್ಮ ವ್ಯವಸ್ಥೆಗೆ ಸ್ಫೂರ್ತಿಯನ್ನು "ಅಮೆರಿಕಾದ ಆಟೋಮೋಟಿವ್ ಉದ್ಯಮದಿಂದಲ್ಲ(ಆ ಸಮಯದಲ್ಲಿ ವಿಶ್ವದ ಅತಿದೊಡ್ಡ ಅತಿದೊಡ್ಡ), ಆದರೆ ಒಂದು ಸೂಪರ್ಮಾರ್ಕೆಟ್ ಅನ್ನು ಭೇಟಿ ಮಾಡುವುದರಿಂದ ಪಡೆಯಿತು" ಎಂಬುದು ಕಟ್ಟುಕತೆ.

ಟೊಯೋಟಾ ಸಂಸ್ಥೆಯ ಸ್ಥಾಪಕರಾದ ಕೈಚಿರೋ ಟೊಯೋಡಾರಿಂದ ಜಸ್ಟ್-ಇನ್-ಟೈಮ್ ಪ್ರಡಕ್ಷನ್ ಎಂಬ ಕಲ್ಪನೆಯ ಉಗಮವಾಯಿತು. ಈ ಕಲ್ಪನೆಯನ್ನು ಹೇಗೆ ಕಾರ್ಯಗತಗೊಳಿಸುವುದು ಎನ್ನುವುದು ಸವಾಲಾಗಿತ್ತು. ಅಮೇರಿಕನ್ ಸೂಪರ್ಮಾರ್ಕೆಟ್ಗಳ ವಿವರಣೆಗಳನ್ನು ಓದಿದಾಗ, ಓಹ್ನೋ ಅವರು ಕಾರ್ಖಾನೆಯಲ್ಲಿ ಸಾಧಿಸಲು ಪ್ರಯತ್ನಿಸುತ್ತಿರುವುದಕ್ಕೆ ಮಾದರಿಯಾಗಿ ಸೂಪರ್ ಮಾರ್ಕೆಟ್ ಅನ್ನು ಕಂಡರು.

ಉಲ್ಲೇಖಗಳು[ಬದಲಾಯಿಸಿ]

 1. Strategos-International. Toyota Production System and Lean Manufacturing.
 2. Ohno, Taiichi (March 1998), Toyota Production System: Beyond Large-Scale Production, Productivity Press, ISBN 978-0-915299-14-0 
 3. Toyota Motor Corporation: The Toyota Production System – Leaner manufacturing for a greener planet; TMC, Public Affairs Division, Tokyo, 1998
 4. ibidem, p. 11 ff.
 5. ibidem, p. 25 ff.
 6. Brian Bremner, B. and C. Dawson (November 17, 2003). "Can Anything Stop Toyota?: An inside look at how it's reinventing the auto industry". Business Week.