ಜೆಟ್ ಏರ್ವೇಸ್
ಚಿತ್ರ:Jet-Airways-Logo.png | ||||
| ||||
ಸ್ಥಾಪನೆ | 1993 | |||
---|---|---|---|---|
Hubs | ||||
Secondary hubs | ||||
Focus cities | ||||
Frequent-flyer program | JetPrivilege | |||
Airport lounge | Jet Lounge | |||
Subsidiaries |
| |||
Fleet size | 84 (+ 44 orders) | |||
Destinations | 68 | |||
Company slogan | The Joy of Flying | |||
Parent company | Tailwinds Limited | |||
Headquarters | ಮುಂಬೈ, India | |||
Key people | Naresh Goyal, founder and chairman | |||
Website | www.jetairways.com |
ಜೆಟ್ ಏರ್ವೇಸ್ ಇಂಡಿಯಾದ ಮುಂಬಯಿ ಮೂಲದ ಒಂದು ಏರ್‌ಲೈನ್. ಏರ್ ಇಂಡಿಯಾ ನಂತರದ ಇಂಡಿಯಾದ ಅತಿ ದೊಡ್ಡ ಏರ್‌ಲೈನ್ ಇದಾಗಿದೆ ಮತ್ತು ಡೊಮೆಸ್ಟಿಕ್ ಕ್ಷೇತ್ರದಲ್ಲಿ ಮಾರುಕಟ್ಟೆಯ ಮುಂದಾಳಾಗಿದೆ. ಇದರಿಂದ ಪ್ರತಿದಿನ ವಿಶ್ವದಾದ್ಯಂತ 68 ನಿರ್ಧಿಷ್ಟ ಸ್ಥಳಗಳಿಗೆ ಸುಮಾರು 400 ವಿಮಾನಗಳು ಕಾರ್ಯ ನಿರ್ವಹಿಸುತ್ತವೆ.ಜುಲೈ 2008ರಲ್ಲಿ, ಯಾವ? ಮ್ಯಾಗಜೀನ್ ಜೆಟ್ ಏರ್‌ವೇಸ್ ಅನ್ನು ಸಿಂಗಪುರ್ ಏರ್‍ಲೈನ್ಸ್ ನಂತರ ವಿಶ್ವದ ಅತಿ ಉತ್ತಮ ಲಾಂಗ್-ಹೌಲ್ ಏರ್‌ಲೈನ್ ಎಂದು ವರದಿಮಾಡಿದೆ[೧]. ಸ್ಮಾರ್ಟ್ ಟ್ರಾವೆಲ್ ಏಷಿಯಾ.ಕಾಮ್ ಸೆಪ್ಟೆಂಬರ್ 2008ರಲ್ಲಿ ಆಯೋಜಿಸಿದ್ದ ಮತದಾನದಲ್ಲಿ, ಜೆಟ್ ಏರ್‌ವೇಸ್ ವಿಶ್ವದ ಏಳನೆಯ ಅತಿ ಉತ್ತಮ ಏರ್‌ಲೈನ್ ಎಂದು ಆಯ್ಕೆಯಾಗಿತ್ತು.[೨] ಪೂರೈಸುವ ಖಾದ್ಯಗಳ ಗುಣಮಟ್ಟದ ಸಮೀಕ್ಷೆಯಲ್ಲಿ ಜೆಟ್ ಏರ್‌ವೇಸ್ ಗೆಲುವು ಪಡೆದಿದೆ ಎಂದು ವರದಿ ಮಾಡಿರುವುದು ಯಾವ? ಮ್ಯಾಗಜೀನ್.[೩][೪] ಜೆಟ್ ಏರ್‌ವೇಸ್‌ನಿಂದ ಎರಡು ಕಡಿಮೆ-ದರದ ಏರ್‌ಲೈನ್‌ಗಳು ಸಹ ಕಾರ್ಯನಿರ್ವಹಿಸುತ್ತವೆ, ಅವೆಂದರೆ ಜೆಟ್‌ಲೈಟ್ (ಮೊದಲಿನ ಹೆಸರು ಏರ್ ಸಹಾರಾ) ಮತ್ತು ಜೆಟ್ ಏರ್‌ವೇಸ್ ಕನೆಕ್ಟ್.
ಇತಿಹಾಸ
[ಬದಲಾಯಿಸಿ]ಜೆಟ್ ಏರ್‌ವೇಸ್ 1992ರ ಏಪ್ರಿಲ್ 1ರಂದು ಏರ್ ಟ್ಯಾಕ್ಸಿ ಕಾರ್ಯನಿರ್ವಹಣೆ ಮಾಡುವುದಕ್ಕಾಗಿ ಸಂಘಟಿತಗೊಂಡಿತು.ಇದು ಭಾರತೀಯ ವಾಣಿಜ್ಯ ಏರ್‌ಲೈನ್ ಕಾರ್ಯಾಚರಣೆ ನಿರ್ವಹಿಸಲು 1993 ಮೇ 5ರಂದು ಪ್ರಾರಂಬಿಸಿತು ಪ್ಲೀಟ್‌ನ ಜೊತೆಗೆ ನಾಲ್ಕು ಬೋಯಿಂಗ್ 737-300 ವಿಮಾನಗಳನ್ನು ಗುತ್ತಿಗೆ ಪಡೆಯಿತು. ಜನವರಿ 1994ರಲ್ಲಿ, ಕಾನೂನು ಹೊಂದಿದ ಬದಲಾವಣೆಗಳೊಂದಿಗೆ ಜೆಟ್ ಏರ್‌ವೇಸ್ ಸುವ್ಯವಸ್ಥಿತವಾದ ಏರ್‌ಲೈನ್ ಹೊಂದಲು ಅರ್ಜಿ ಸಲ್ಲಿಸಿತು, ಅದಕ್ಕೆ 1995ರ ಜನವರಿ 4ರಂದು ಸಮ್ಮತಿ ದೊರಕಿತು. ಇದು ಅಂತರರಾಷ್ಟ್ರೀಯ ಕಾರ್ಯಾಚರಣೆಯನ್ನು ಮೊದಲು ಶ್ರೀಲಂಕಾಕ್ಕೆ 2004ರ ಮಾರ್ಚ್‌ನಲ್ಲಿ ಪ್ರಾರಂಭಿಸಿತು ಕಂಪನಿಯು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಪಟ್ಟಿಯಲ್ಲಿ ಸೇರಿದಾಗ, 80% ಷೇರುಗಳು ನರೇಶ್ ಗೋಯಲ್ ಅವರ ಹಿಡಿತದಲ್ಲಿದ್ದವು, ಅವನು ಜೆಟ್‌ನ ಪೋಷಕ ಕಂಪನಿಯಾದ, 10,017 ಜನ ಕೆಲಸಗಾರರಿರುವ ಟೈಲ್‌ವಿಂಡ್ಸ್‌ನ ಒಡೆತನ ಹೊಂದಿದ್ದನು (ಮಾರ್ಚ್ 2007ರ ವೇಳೆಗೆ).[೫]
ನರೇಶ್ ಗೋಯಲ್, ಈಗಾಗಲೇ ಜೆಟ್ಏರ್(ಖಾಸಗಿ) ಲಿಮಿಟೆಡ್‌ನ ಒಡೆತನ ಹೊಂದಿರುವ, ವ್ಯಾಪಾರ ಹಾಗೂ ಮಾರುಕಟ್ಟೆಯ ಸರಬರಾಜನ್ನು ವಿದೇಶಗಳಿಗೆ ಒದಗಿಸುತ್ತಿರುವ ಭಾರತೀಯ ಏರ್‌ಲೈನ್ಸ್ ಇದಾಗಿದೆ, ಜೆಟ್ ಏರ್‌ವೇಸ್ ತನ್ನ ಪೂರ್ಣ ಪ್ರಮಾಣದ-ಸೇವೆಯನ್ನು ಒದಗಿಸುವಲ್ಲಿ ರಾಜ್ಯಗಳ-ಒಡೆತನದ ಇಂಡಿಯನ್ ಏರ್‌ಲೈನ್ಸ್/0}ನ ವಿರುದ್ಧ ಸ್ಪರ್ಧೆ ಹೊಂದಿದೆ ಇಂಡಿಯನ್ ಏರ್‌ಲೈನ್ಸ್ 1953ರ ಸಮಯದಲ್ಲಿ ಡೊಮೆಸ್ಟಿಕ್ ಮಾರುಕಟ್ಟೆಯಲ್ಲಿ ತನ್ನ ಪೂರ್ಣಾಧಿಕಾರವನ್ನು ಹೊಂದಿ ಆನಂದಿಸಿತು, ನಂತರ ಎಲ್ಲಾ ಪ್ರಮುಖ ಇಂಡಿಯನ್ ಏರ್ ಟ್ರಾನ್ಸ್‌ಪೋರ್ಟ್ ಸೇವೆ ಒದಗಿಸುವ ಕಂಪನಿಗಳನ್ನು ಏರ್ ಕಾರ್ಪೊರೇಷನ್ಸ್ ಆಕ್ಟ್(1953) ಪ್ರಕಾರ ರಾಷ್ಟ್ರೀಕೃತಗೊಳಿಸಲಾಯಿತು, ಹಾಗೂ 1994ರ ಜನವರಿಯಲ್ಲಿ, ಏರ್ ಕಾರ್ಪೊರೇಷನ್ಸ್ ಆಕ್ಟ್‌ಅನ್ನು ತೆಗೆದುಹಾಕಿದಾಗ, ಜೆಟ್ ಏರ್‌ವೇಸ್ ಕಾರ್ಯನಿರ್ವಹಣೆಯ ವೇಳಾಪಟ್ಟಿಯನ್ನು ಪಡೆಯುವ ಮೂಲಕ ಏರ್‌ಲೈನ್‌ನಲ್ಲಿ ತನ್ನ ಸ್ಥಾನ ಸ್ಥಿರವಾಗಿಸಿಕೊಂಡಿತು
1990ರ ಮೊದಲಭಾಗದಲ್ಲಿ ಇಂಡಿಯನ್ ವ್ಯಾಪಾರವು ಕುಸಿಯದಂತೆ ತಡೆದ ಎರಡೇ ಖಾಸಗಿ ಕಂಪನಿಗಳೆಂದರೆ ಜೆಟ್ ಏರ್‌ವೇಸ್ ಮತ್ತು ಏರ್ ಸಹಾರಾ 2006 ಜನವರಿಯಲ್ಲಿ, ಜೆಟ್ ಏರ್‌ವೇಸ್ ಕಂಪನಿಯು ಏರ್ ಸಹಾರಾ ಕಂಪನಿಯನ್ನು US$500 ಮಿಲಿಯನ್ ನಗದು ಹಣವನ್ನು ಕೊಟ್ಟು ಕೊಂಡುಕೊಳ್ಳುವುದಾಗಿ ಪ್ರಕಟಿಸಿತು, ಹೀಗೆ ಒಂದು ಕಂಪನಿಯ ಅಧಿಕಾರವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಮೂಲಕ ಇಂಡಿಯನ್ ವಾಯುಯಾನ ಇತಿಹಾಸದಲ್ಲಿಯೇ ಅತಿ ದೊಡ್ಡ ದಾಖಲೆ ಸೃಷ್ಟಿಸಿತು. ಇದರ ಪಲಿತಾಂಶದ ಏರ್‌ಲೈನ್ ದೇಶದ ಅತಿ ದೊಡ್ಡದೆನಿಸಿತು [೬] ಆದರೆ ವ್ಯವಹಾರವು ಜೂನ್ 2006ರಲ್ಲಿ ನೆಲಕಚ್ಚಿತು.2007ರ ಏಪ್ರಿಲ್ 12ರಂದು, ಜೆಟ್ ಏರ್‌ವೇಸ್ 14.5 ಬಿಲಿಯನ್ ರೂಪಾಯಿಗಳಿಗೆ (US$340 ಮಿಲಿಯನ್) ಏರ್ ಸಹಾರವನ್ನು ಕೊಂಡುಕೊಳ್ಳಲು ತನ್ನ ಸಮ್ಮತಿ ನೀಡಿತು. ಏರ್ ಸಹಾರಾವು ಜೆಟ್‌ಲೈಟ್ ಎಂದು ಪುನಃ ನಾಮಕರಣಗೊಂಡಿತು, ಮತ್ತು ಇದನ್ನು ಕಡಿಮೆ-ವೆಚ್ಚದ ಸಾಗಣೆ ಮತ್ತು ಪೂರ್ಣಸೇವೆಯ ಏರ್ ಲೈನ್‌ಗಳ ಮಧ್ಯಮ ಸೇವೆಗಳೊಂದಿಗೆ ಮಾರುಕಟ್ಟೆಗೆ ಪರಿಚಯಿಸಿತು. 2008ರ ಆಗಸ್ಟ್‌ನಲ್ಲಿ, ಜೆಟ್ ಲೈಟ್‌ನ ಯೋಜನೆಗಳು ಸಂಪೂರ್ಣ ಜೆಟ್ ಏರ್‌ವೇಸ್‌ನ ಭಾಗಗಳಿಂದಾಗಿವೆ ಎಂದು ಜೆಟ್ ಏರ್‌ವೇಸ್ ಪ್ರಕಟಿಸಿತು.[೭] 2008ರ ಅಕ್ಟೋಬರ್‌ನಲ್ಲಿ, ಜೆಟ್ ಏರ್‌ವೇಸ್ 1900 ನೌಕರರನ್ನು ಕೆಲಸದಿಂದ ತೆಗೆದುಹಾಕಿತು, ಇಂಡಿಯನ್ ವಾಯುಯಾನ ಇತಿಹಾಸದಲ್ಲಿಯೇ ಅತಿ ಹೆಚ್ಚು ನೌಕರರನ್ನು ವಜಾಮಾಡಿದ ಸಂಗತಿಯಾತಿತು.[೮] ಆದಾಗ್ಯೂ, ನಂತರದ ದಿನಗಳಲ್ಲಿ ತನ್ನ ಕೆಲಸಗಾರರನ್ನು ಮರುನೇಮಕ ಮಾಡಿಕೊಂಡು ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿತು. ಸಿವಿಲ್ ವಾಯುಯಾನ ಮಂತ್ರಿ 0}ಪ್ರಫುಲ್l ಪಟೇಲ್ ಅವರು ಕಂಪನಿಯ ನಿರ್ಧಾರವನ್ನು ವಿಮರ್ಶಿಸಿದ ನಂತರ ಆಡಳಿತ ಮಂಡಳಿಯು ಅದನ್ನು ಪುನರ್‌ಪರಿಶೀಲಿನಿದೆ ಎಂದು ಹೇಳಿಕೆ ನೀಡಿದ್ದಾರೆ.[೯][೧೦] ಅಕ್ಟೋಬರ್ 2008ರಲ್ಲಿ, ಜೆಟ್ ಏರ್‌ವೇಸ್ ಮತ್ತು ರೈವಲ್ ಕಿಂಗ್‌ಫಿಷರ್ ಏರ್‌ಲೈನ್ಸ್ ಒಂದು ಒಪ್ಪಂದವನ್ನು ಪ್ರಕಟಿಸಿದವು ಅದರಲ್ಲಿ ಪ್ರಾಥಮಿಕವಾಗಿ ಡೊಮೆಸ್ಟಿಕ್ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಕೋಡ್ ಶೇರಿಂಗ್‌ಗೆ ಸಮ್ಮತಿ ನೀಡಿದ್ದವು, ವೆಚ್ಚವನ್ನು ಕಡಿಮೆ ಮಾಡುವುದಕ್ಕಾಗಿ ಜೊತೆಯಾಗಿ ಇಂಧನ ನಿರ್ವಹಣೆ, ಸಾಮಾನ್ಯ ಸ್ಥಳ ನಿರ್ವಹಣೆ, ಜೊತೆಯಾಗಿ ವೈಮಾನಿಕ ತಂಡಗಳ ಹಾಗೂ ಒಂದೇ ವಿಧವಾದ ಹಾರುವ ಕಾರ್ಯಕ್ರಮಗಳನ್ನು ಉಪಯೋಗಿಸಿಕೊಳ್ಳುವಿಕೆ.[೧೧] 2009ರ ಮೇ 8ರಂದು, ಜೆಟ್ ಏರ್‌ವೇಸ್, ಜೆಟ್ ಏರ್‌ವೇಸ್ ಕನೆಕ್ಟ್ ಹೆಸರಿನ ಮತ್ತೊಂದು ಮಿತ- ವ್ಯಯದ ಏರ್‌ಲೈನ್ ಒಂದನ್ನು ಪ್ರಾರಂಭಿಸಿತು. ಕಡಿಮೆ ಪ್ರಯಾಣಿಕರಿಂದಾಗಿ ಸ್ಥಗಿತಗೊಂಡಿದ್ದ ಜೆಟ್ ಏರ್‌ವೇಸ್‌ನ ಹೆಚ್ಚುವರಿ ವಿಮಾನಗಳನ್ನು ಹೊಸ ಏರ್‌ಲೈನ್ಸ್ ಬಳಸಿಕೊಂಡಿತು. ಅದು ಜೆಟ್ ಏರ್‌ವೇಸ್‌ನ ಆಪರೇಟರ್ ಕೋಡ್ ಕೂಡ ಬಳಸಿಕೊಂಡಿತು ಜೆಟ್‌ಲೈಟ್ ನೆಟ್‌ವರ್ಕ್ ಅನ್ನು ವಿಸ್ತರಿಸುವ ಬದಲಾಗಿ ಹೊಸ ಬ್ರ್ಯಾಂಡ್ ಅನ್ನು ಬಿಡುಗಡೆಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲು ಕಾರಣ ಎರಡೂ ಬೇರೆ ಬೇರೆ ಆಪರೇಟರ್ ಕೋಡ್‌ಗಳನ್ನು ಹೊಂದಿದ್ದು ನಿಯಂತ್ರಣ ಮಂಡಳಿಯಿಂದ ವಿಮಾನಗಳ ವರ್ಗವಣೆಯಲ್ಲುಂಟಾಗಬಹುದಾಗಿದ್ದ ವಿಳಂಬ.[೧೨] 2009ರ ಸೆಪ್ಟೆಂಬರ್ 8ರಿಂದ, ಜೆಟ್ ಏರ್‌ವೇಸ್ ಚಾಲಕರು ಆರೋಗ್ಯದ ಮತ್ತು ಕೆಲಸಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂಬ ಕಾರಣವನ್ನು ನೀಡಿ ಮುಷ್ಕರ ಪ್ರಾರಂಭಿಸಿದರು "ಇಬ್ಬರು ಹಿರಿಯ ವಿಮಾನ ಚಾಲಕರನ್ನು ಕೆಲಸದಿಂದ ವಜಾ ಮಾಡಿದ್ದನ್ನು ಖಂಡಿಸಿ" ಎಲ್ಲ ವಿಮಾನ ಚಾಲಕರು ಮುಷ್ಕರ ಹೂಡಿದ್ದಾಗಿ ಕಾರಣ ತಿಳಿಸಿದರು.[೧೩] 2009ರ ಸೆಪ್ಟೆಂಬರ್ 9ರಂದು, ಇದೇ ಕಾರಣಕ್ಕಾಗಿ ತನ್ನ 160 ಡೊಮೆಸ್ಟಿಕ್ ವಿಮಾನಗಳನ್ನು ರದ್ದುಗೊಳಿಸಬೇಕಾಯಿತು[೧೪] . ಐದು-ದಿನಗಳ ವಿಮಾನ ಚಾಲಕರ ಮುಷ್ಕರ 2009ರ ಸೆಪ್ಟೆಂಬರ್ 13ರಂದು ಅಂತ್ಯಗೊಂಡಿತು. ಕಂಪನಿಯ ಸುಮಾರು 400ಕ್ಕು ಹೆಚ್ಚು ವಿಮಾನಚಾಲಕರ ಆರೋಗ್ಯ ಸರಿಯಿಲ್ಲವೆಂದಾಗ ಇದು ಸುಮಾರು 800 ವಿಮಾನಗಳ ರದ್ದುಗೊಳಿಸುವುದಕ್ಕೆ ಕಾರಣವಾಯಿತು. ಇಂಡಿಯಾದ ಮಾಧ್ಯಮಗಳ ವರದಿಯಂತೆ, ಏರ್‌ಲೈನ್ ಈ ಮುಷ್ಕರದಿಂದಾಗಿ ಒಂದು ದಿನಕ್ಕೆ $8m (£4.79m) ನಷ್ಟು ವೆಚ್ಚ ಭರಿಸಬೇಕಾಯಿತು.[೧೫]
ಅಂತರರಾಷ್ಟ್ರೀಯ ಕಾರ್ಯಾಚರಣೆಗಳು
[ಬದಲಾಯಿಸಿ]ಜೆಟ್ ಏರ್‌ವೇಸ್ , ಸರ್ಕಾರದಿಂದ ಮನ್ನಣೆ ಪಡೆದುಕೊಂಡು ಮಾರ್ಚ್ 2004 ಚೆನ್ನೈ-ಕೊಲಂಬೊ ಮಧ್ಯೆ ತನ್ನ ಅಂತರರಾಷ್ಟ್ರೀಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.2005ರ ಮಾರ್ಚ್‌ನಲ್ಲಿ ಮುಂಬಯಿ-ಲಂಡನ್ ಮಧ್ಯೆ ಮತ್ತು 2005ರ ಅಕ್ಟೋಬರ್‌ನಲ್ಲಿ ಡೆಲ್ಲಿ-ಲಂಡನ್ ಮಧ್ಯೆ ಸೌತ್ ಆಫ್ರಿಕನ್ ಏರ್‌ವೇಸ್‌ನಿಂದ ಏರ್‌ಬಸ್ A340-300Eಗಳನ್ನು ಗುತ್ತಿಗೆ ಪಡೆದು ಪ್ರಾರಂಭಿಸಿತು. ಅಮೃತ್‌ಸರ್-ಲಂಡನ್‌ನ ಸೇವೆಯು 2006ರ ಆಗಸ್ಟ್‌ನಲ್ಲಿ ಪ್ರಾರಂಭವಾಯಿತು ಹಾಗೂ ಅಹಮದಾಬಾದ್-ಲಂಡನ್ 2007 ಏಪ್ರಿಲ್‌ನಲ್ಲಿ ಪ್ರಾರಂಭವಾಯಿತು ಆದರೆ ಈ ಮಾರ್ಗಗಳ ಸೇವೆಯನ್ನು ಕ್ರಮವಾಗಿ 2008ರ ಡಿಸೆಂಬರ್ ಹಾಗೂ ಜನವರಿ 2008ರಲ್ಲಿ ಕಡಿಮೆ ಪ್ರಮಾಣದ ಪ್ರಯಾಣಿಕರಿಂದಾಗಿ ಸ್ಥಗಿತಗೊಳಿಸಲಾಯಿತು. 2007 ರ ಮೇ 2ರಂದು ತನ್ನ ಟ್ರಾನ್ಸ್-ಅಟ್ಲಾಂಟಿಕ್ ಉತ್ತರ ಅಮೆರಿಕಾದ ಕಾರ್ಯಾಚರಣೆಗೆ ಬ್ರಸೆಲ್ಸ್ ಏರ್‌ಪೋರ್ಟ್ ಅನ್ನು ತನ್ನ ಯೂರೋಪಿಯನ್ ಹಬ್ ಎಂದು ಜೆಟ್ ಏರ್‌ವೇಸ್ ಪ್ರಕಟಿಸಿತು.ಅದು ತನ್ನ 0}ಮುಂಬಯಿ-ಬ್ರಸೆಲ್ಸ್-ನೆವಾರ್ಕ್ ಸೇವೆಯನ್ನು 2007ರ ಆಗಸ್ಟ್‌ನಲ್ಲಿ ನಂತರ 2007ರ ಸೆಪ್ಟೆಂಬರ್‌ನಲ್ಲಿ ಡೆಲ್ಲಿ-ಬ್ರಸೆಲ್ಸ್-ಟೊರೊಂಟೊ ಮತ್ತು 2007ರ ಅಕ್ಟೋಬರ್‌ನಲ್ಲಿ ಚೆನ್ನೈ-ಬ್ರಸೆಲ್ಸ್-ನ್ಯೂಯಾರ್ಕ್ ಸಿಟಿ ಮಧ್ಯೆ ಪ್ರಾರಂಭಿಸಿತು.2008ರ ಮೇನಲ್ಲಿ ತನ್ನ ಟ್ರಾನ್ಸ್-ಪೆಸಿಫಿಕ್ಮುಂಬಯಿ-ಶಾಂಗಾಯ್-ಸ್ಯಾನ್ ಫ್ರಾನ್ಸಿಸ್ಕೊಸೇವೆಯ ಜೊತೆಗೆ ಬೆಂಗಳೂರು-ಬ್ರಸೆಲ್ಸ್ ಸೇವೆಯನ್ನು ಪ್ರಾರಂಭಿಸಿತು; ಈ ಮಾರ್ಗಗಳನ್ನು 2009ರ ಮಾರ್ಚ್ ವೇಳೆಗೆ ವಿಶ್ವಾದ್ಯಂತ ಆರ್ಥಿಕ ಕುಸಿತದಿಂದ ಪ್ರಯಾಣಿಕರ ಕೊರತೆಯಿಂದಾಗಿ ಸ್ಥಗಿತಗೊಳಿಸಲಾಯಿತು. 2009ರ ಉದ್ದಕ್ಕೂ, ಜೆಟ್ ಏರ್‌ವೇಸ್ ತನ್ನ ಸೇವೆಗಳನ್ನು ಮಧ್ಯ ಪೂರ್ವದ ಹೊಸ ಸ್ಥಳಗಳಿಗೆ ಮತ್ತು ಸೇವೆ ಹೊಂದಿರುವ ಅಂತರರಾಷ್ಟ್ರೀಯ ಸ್ಥಳಗಳಿಗೆ ತಮ್ಮ ಸೇವೆಯನ್ನು ಹೆಚ್ಚಿಸುತ್ತಾ ಹೋಯಿತು.
ಅಂಕಿಅಂಶಗಳು
[ಬದಲಾಯಿಸಿ]ಪ್ರಯಾಣಿಕರು | % ಹೆಚ್ಚಳ/ಕಡಿಮೆ (in PAX) |
RPK | ಕಾರ್ಗೊ ಸಾಗಣೆ (ಟನ್‌ಗಳಲ್ಲಿ) |
% ಹೆಚ್ಚಳ/ಕಡಿಮೆ (in Cargo) |
ವಿಮಾನಗಳ ಹಾರಾಟ (Block Hours) |
ಪ್ರಯಾಣಿಕರ ಆಸನಗಳ ಅಂಶ(%) | ||
ಏಪ್ರಿಲ್-05 ರಿಂದ ಮಾರ್ಚ್-06 | 9,115,459 | - | 7,875 | 105,173 | - | 165,729 | 73.7% | |
ಏಪ್ರಿಲ್-೦೬ ರಿಂದ ಮಾರ್ಚ್-07 | 9,900,970 | 8.62% | 8,538 | 117,946 | 12.14% | 190,911 | 70.2% | |
ಏಪ್ರಿಲ್-07 ರಿಂದ ಮಾರ್ಚ್-08 | 9,786,980 | 1.15% | 8,565 | 114,240 | 3.14% | 194,916 | 70.9% | |
ಏಪ್ರಿಲ್-08 ರಿಂದ ಮಾರ್ಚ್-09 | 7,972,757 | 18.54% | 6,884 | 85,046 | 25.55% | 181,232 | 66.9% |
ಪ್ರಯಾಣಿಕರು | % ಹೆಚ್ಚಳ/ಕಡಿಮೆ (in PAX) |
RPK | ಕಾರ್ಗೊ ಸಾಗಣೆ (ಟನ್‌ಗಳಲ್ಲಿ) |
% ಹೆಚ್ಚಳ/ಕಡಿಮೆ (in Cargo) |
ವಿಮಾನಗಳ ಹಾರಾಟ (Block Hours) |
ಪ್ರಯಾಣಿಕರ ಆಸನಗಳ ಅಂಶ(%) | |
ಏಪ್ರಿಲ್-05 ರಿಂದ ಮಾರ್ಚ್-06 | 441,142 | - | 1,701 | 10,724 | - | 17,857 | 65.0% |
ಏಪ್ರಿಲ್-06 ರಿಂದ ಮಾರ್ಚ್-07 | 825,904 | 87.22% | 3,770 | 23,846 | 122.36% | 36,238 | 68.0% |
ಏಪ್ರಿಲ್-07 ರಿಂದ ಮಾರ್ಚ್-08 | 1,641,930 | 98.80% | 8,350 | 51,517 | 116.04% | 72,598 | 67.5% |
ಏಪ್ರಿಲ್-08 ರಿಂದ ಮಾರ್ಚ್-09 | 3,107,278 | 89.25% | 14,559 | 96,386 | 87.10% | 131,775 | 68.2% |
Corporate identity
[ಬದಲಾಯಿಸಿ]ಜೆಟ್ ಏರ್‌ವೇಸ್‌ನ' ಪ್ರಸ್ತುತ ಲಿವರಿಯು 2007ರಲ್ಲಿ ಪರಿಚಯಿಸಲ್ಪಟ್ಟಿತು.[೧೬] ಜೆಟ್ ಏರ್‌ವೇಸ್ ಹಿಂದಿನ ಸಂಸ್ಥೆಯ ಹೊಂದಿದ ತನ್ನ ಹಿಂದಿನ ಸಂಸ್ಥೆಯ ವಿನ್ಯಾಸವಾದ ಕಡು ನೀಲಿ ಹಾಗೂ ಬಂಗಾರದ ಬಣ್ಣವನ್ನು ಈಗಲೂ ಉಳಿಸಿಕೊಂಡಿದೆ, ಜೊತೆಯಲ್ಲಿ ಏರ್‌ಲೈನ್‌ನ "ಹಾರುತ್ತಿರುವ ಸೂರ್ಯ"ನ ಲೋಗೋ ಕೂಡ ಇದೆ.[೧೬] ಲ್ಯಾಂಡರ್ ಅಸೋಸಿಯೇಟ್ಸ್‌ನ ಜೊತೆಯಲ್ಲಿ ಹೊಸ ಲಿವರಿಯನ್ನು ಸೃಷ್ಟಿಸಿತು, ಅದಕ್ಕೆ ಹಳದಿ ಮತ್ತು ಬಂಗಾರದ ಬಣ್ಣದ ರಿಬ್ಬನ್‌ಗಳನ್ನು ಸೇರಿಸಿದೆ . ಅದೇ ಸಮಯಕ್ಕೆ ಇಟಾಲಿಯನ್ ಡಿಸೈನರ್ ರೊಬರ್ಟೊ ಕ್ಯಾಪುಸಿ ವಿನ್ಯಾಸಗೊಳಿಸಿದ ಹೊಸ ಹಳದಿ ಸಮವಸ್ತ್ರವನ್ನು ಸಹ ಪರಿಚಯಿಸಿತು.[೧೬] ವಿಶ್ವವ್ಯಾಪಿ ಬ್ರ್ಯಾಂಡ್‌ಗಳ ಪುನರ್-ಬಿಡುಗಡೆಯ ಜೊತೆಯಲ್ಲಿ ಜೆಟ್ ಏರ್‌ವೇಸ್ ಹೊಸ ಗುರುತನ್ನು ಪರಿಚಯಿಸಿತು ಅದು ಹೊಸ ಆಸನಗಳ ವ್ಯವಸ್ಥೆಯೊಂದಿಗೆ ಹೊಸ ವಿಮಾನಗಳನ್ನು ಸಹ ಒಳಗೊಂಡಿತ್ತು.[೧೬]
ನಿರ್ಧಿಷ್ಟ ಸ್ಥಳಗಳು
[ಬದಲಾಯಿಸಿ]ಜೆಟ್ ಏರ್‌ವೇಸ್ 44 ಡೊಮೆಸ್ಟಿಕ್ ಸ್ಥಳಗಳಿಗೆ, ಏಷಿಯಾ, ಯರೋಪ್ ಮತ್ತು ಉತ್ತರ ಅಮೇರಿಕಾದ್ಯಂತ ಸುಮಾರು 17 ದೇಶಗಳ 21 ಅಂತರರಾಷ್ಟ್ರೀಯ ನಿರ್ಧಿಷ್ಟ ಸ್ಥಳಗಳಿಗೆ ತನ್ನ ಸೇವೆಯನ್ನು ಒದಗಿಸುತ್ತದೆ.
ಫ್ಲೀಟ್
[ಬದಲಾಯಿಸಿ]ಜೆಟ್ ಏರ್‌ವೇಸ್’ ಫ್ಲೀಟ್ ಸೆಪ್ಟೆಂಬರ್ 2009ರ ವೇಳೆಗೆ ಕೆಳಕಂಡ ವಿಮಾನಗಳನ್ನು ಹೊಂದಿದೆ:[೧೭]
ಜೆಟ್ ಏರ್‌ವೇಸ್ ಫ್ಲೀಟ್ | |||||
ವಿಮಾನ | ಸೇವೆಯಲ್ಲಿರುವವು | ವರ್ಗಗಳು | ಆಯ್ಕೆಗಳು | ಪ್ರಯಾಣಿಕರು (ಪ್ರಥಮ/ಪ್ರಿಮಿಯರ್/ಎಕಾನಮಿ) |
ಟಿಪ್ಪಣಿಗಳು |
---|---|---|---|---|---|
ATR 72-500 | 14 | [6]; | – | 62 (0/0/62) | All will be dry leased. |
Airbus A330-200 | 10 2 |
5 | 5 | 220 (0/30/190) 226 (0/30/196) |
2 dry leased from ILFC. |
Boeing 737-700 | 13 | – | – | 112 (0/16/96) 135 (0/0/135) |
7 dry leased. |
Boeing 737-800 | 37 | 20 | – | 140 (0/16/124) 144 (0/24/120) 175 (0/0/175) |
14 dry leased. |
Boeing 737-900 | 2 | – | – | 160 (0/28/132) | |
Boeing 777-300ER | 10 | 2 | – | 312 (8/30/274) | 4 dry leased to Turkish Airlines 3 to be dry leased to Royal Brunei Airlines |
Boeing 787-8 | – | 10 | – | ??? (0/??/???) | Deliveries starting 2013. |
ಒಟ್ಟು | 88 | 44 | 5 | ಕೊಲ್‌ಸ್ಪ್ಯಾನ್=2 |
ಡಿಸೆಂಬರ್ 2009ರ ವೇಳೆಗೆ, ಜೆಟ್ ಏರ್‌ವೇಸ್ ಫ್ಲೀಟ್‌ಗೆ ಸರಾಸರಿ 4.54 ವರ್ಷಗಳಾಗುತ್ತವೆ.[೧೮]
ಮೊದಲಿನ ಫ್ಲೀಟ್
[ಬದಲಾಯಿಸಿ]ಸೌತ್ ಆಫ್ರಿಕನ್ ಏರ್‌ವೇಸ್‌ನಿಂದ ಬೋಯಿಂಗ್ 737-300/400/500 ಮತ್ತು ಏರ್‌ಬಸ್ A340-300Eಗಳನ್ನು ಗುತ್ತಿಗೆ ಪಡೆದು ಹಾಗೂ ಸ್ವಯಂಒಡೆತನದ ಮಿಶ್ರ ಫ್ಲೀಟ್‌ಗಳಿಂದ ಕಾರ್ಯ ನಿರ್ವಹಿಸುತ್ತಿತ್ತು.
ಸೇವೆಗಳು
[ಬದಲಾಯಿಸಿ]ಕ್ಯಾಬಿನ್ ದರ್ಜೆಗಳು
[ಬದಲಾಯಿಸಿ]ಇದರ ಹೊಸ ಬೋಯಿಂಗ್ 777-300ER ಹಾಗೂ ಏರ್‌ಬಸ್ A330-200 ವಿಮಾನಗಳನ್ನು ಪ್ರಾರಂಭಿಸುವುದರೊಂದಿಗೆ, ಜೆಟ್ ಏರ್‌ವೇಸ್ ಎಲ್ಲಾ ದರ್ಜೆಗಳಲ್ಲು ಸುಧಾರಿಸಿದ ಆಸನಗಳ ಹೊಸ ಕ್ಯಾಬಿನ್‌ಗಳನ್ನು ಪರಿಚಯಿಸಿತು. ಬೋಯಿಂಗ್ 777-300ER ವಿಮಾನದಲ್ಲಿ: ಪ್ರಥಮ, ಪ್ರೀಮಿಯರ್ (ವ್ಯಾಪಾರಿ), ಮತ್ತು ಮಿತವ್ಯಯದ ಮೂರು ದರ್ಜೆಯ ಸೇವೆಗಳಿವೆ. ಏರ್‌ಬಸ್ A330-200 ವಿಮಾನದಲ್ಲಿ ಪ್ರೀಮಿಯರ್ ಮತ್ತು ಮಿತವ್ಯಯದ ಎರಡು ದರ್ಜೆಗಳಿವೆ: ಎಲ್ಲಾ ಏರ್‌ಬಸ್ A330-200 ಮತ್ತು ಬೋಯಿಂಗ್ 777-300ER ವಿಮಾನಗಳಲ್ಲಿ ಈ ದರ್ಜೆಗಳಿವೆ. ಬೋಯಿಂಗ್ 737 ವಿಮಾನಗಳು ವೈವಿದ್ಯಮಯವಾಗಿ ಸೃಷ್ಠಿಸಲಾಗಿತ್ತು. ಜೆಟ್ ಏರ್‌ವೇಸ್ ಮೂರು-ಸ್ಟಾರ್‌ಗಳ ವ್ಯಾಪಾರಿ ದರ್ಜೆಯನ್ನು ಹೊಂದಿದೆ ಮತ್ತು ಪ್ರಥಮ ದರ್ಜೆ, ಹಾಗೂ ಸ್ಕೈಟ್ರಾಕ್ಸ್‌ನಿಂದ ಪುನರಾವಲೋಕನಗೊಂಡ ಮೊದಲ ಇಪ್ಪತ್ತೈದು ವ್ಯಾಪಾರಿ ದರ್ಜೆಗಳು ಮಿತವ್ಯಯದ ದರ್ಜೆಯು ಕೂಡಾ ಸ್ಕೈಟ್ರಾಕ್ಸ್‌ನಿಂದ ಪುನರಾವಲೋಕನಗೊಂಡು ಮೂರು ಸ್ಟಾರ್‌ಗಳನ್ನು ಗಳಿಸಿದೆ.
- ಮೊದಲ ದರ್ಜೆ ಬೋಯಿಂಗ್ 777-೩೦೦ಏ ಎಲ್ಲಾ ವಿಮಾನಗಳಲ್ಲೂ ಪ್ರಥಮ ದರ್ಜೆಯ ಲಭ್ಯತೆ ಇದೆ. ಎಲ್ಲಾ ಆಸನಗಳು ಸಿಂಗಪುರ್ ಏರ್‌ಲೈನ್‌ನ ಪ್ರಥಮ ದರ್ಜೆಯ ಹಾಗೆಯೇ ಪೂರ್ಣವಾಗಿ- ಸಮತಟ್ಟಾದ ಹಾಸಿಗೆಯಾಗಿ ಪರಿವರ್ತಿತವಾಗುವಂತಿವೆ, ಆದರೆ ಸ್ವಲ್ಪ ಚಿಕ್ಕದು. ಅದು ಎಲ್ಲಾ ಆಸನಗಳಲ್ಲಿ ಧ್ವನಿ-ಚಿತ್ರಗಳನ್ನು ಪ್ರಯಾಣಿಕರ ಇಚ್ಛೆಯಂತೆ(AVOD) ನೋಡಬಹುದಾದಂತಹ 21-ಇಂಚು ಅಗಲವಾದ ಪರದೆಯ LCD ಮಾನಿಟರ್, ಮತ್ತು USB ಪೋರ್ಟ್ ಇತ್ಯಾದಿಗಳನ್ನು ಹೊಂದಿದ ಖಾಸಗಿ ವಿಶ್ವದ ಇಪ್ಪತ್ತೆರಡನೆ ಏರ್‌ಲೈನ್ ಆಗಿತ್ತು, ಜೆಟ್ ಏರ್‌ವೇಸ್ ತನ್ನ ವಿಮಾನಗಳಲ್ಲಿ ಸಂಪೂರ್ಣವಾಗಿ-ಆವರಿಸಿರುವಂತೆ ಜೋಡಣೆಯನ್ನು ಹೊಂದಿರುವ ಇಂಡಿಯಾದ ಮೊದಲ ಏರ್‌ಲೈನ್ ಆಗಿದೆ; ಪ್ರತಿಯೊಂದು ಜೋಡಣೆಯಲ್ಲಿ ಏಕಾಂತ ಕಂಪಾರ್ಟ್‌ಮೆಂಟ್‌ಗಳಿಗೆ ಮುಚ್ಚಬಹುದಾದಂತಹ ಬಾಗಿಲು ಸಹ ಇದೆ.
ಸ್ಕೈಟ್ರಾಕ್ಸ್ ಗ್ರಾಹಕ ಏರ್‌ಲೈನ್ ಪರಿಶೀಲಕರು ಇತ್ತೀಚೆಗೆ ಜೆಟ್ ಏರ್‌ವೇಸ್‌ಅನ್ನು ವಿಶ್ವದ 14ನೆಯ ಉತ್ತಮ ಪ್ರಥಮ ದರ್ಜೆಯನ್ನು ಹೊಂದಿರುವಂತಹದ್ದು ಎಂದಿದ್ದಾರೆ.
- ಪ್ರೀಮಿಯರ್
ಏರ್‌ಬಸ್ A330-200 ಮತ್ತು ಬೋಯಿಂಗ್ 777-300ER ಅಂತರರಾಷ್ಟ್ರೀಯ ಫ್ಲೀಟ್‌ನಲ್ಲಿರುವ ಪ್ರೀಮಿಯರ್ (ವ್ಯಾಪಾರಿ ದರ್ಜೆ) ಆಸನಗಳು ಸಂಪೂರ್ಣ-ಸಮಾನಾಂತರವಾಗುವ ಹಾಸಿಗೆಯನ್ನು ಹಾಗೂ AVOD ಮನೋರಂಜನೆಯನ್ನು ಸಹ ಹೊಂದಿವೆ. ಆಸನಗಳನ್ನು ಹೆರಿಂಗ್‌ಬೋನ್ ರೀತಿಯಲ್ಲಿ ರೂಪುಗೊಳಿಸಲಾಗಿದೆ, (ಬೋಯಿಂಗ್ 777-300ERರಲ್ಲಿ 1-2-1, ಮತ್ತು ಏರ್‌ಬಸ್ A330-200ರಲ್ಲಿ 1-1-1), ಜೊತೆಯಲ್ಲಿ ಎಲ್ಲಾ ಆಸನಗಳಿಗೂ ಹಜಾರವನ್ನು ತಲುಪುವಲ್ಲಿ ನೇರ ಹಾದಿ ಕಲ್ಪಿಸಲಾಗಿದೆ. ILFCನಿಂದ ಗುತ್ತಿಗೆ ಪಡೆದ A330-200ಗಳಲ್ಲಿ ಪ್ರೀಮಿಯರ್ ಆಸನಗಳನ್ನು ಹೆರಿಂಗ್‌ಬೋನ್-ಅಲ್ಲದ ಶೈಲಿಯಲ್ಲಿ ವಿಶೇಷವಾಗಿ ರೂಪುಗೊಳಿಸಲಾಗಿದೆ. ಪ್ರತಿ ಪ್ರೀಮಿಯರ್ ಆಸನದಲ್ಲು ಒಂದು 15.4-ಇಂಚಿನ ಫ್ಲಾಟ್ ಪರದೆಯ AVOD ಹೊಂದಿದ LCD TV ಗಳನ್ನು ಅಳವಡಿಸಲಾಗಿದೆ. USB ಪೋರ್ಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಗೆ ಬೇಕಾಗುವ ಪವರ್ ಕೂಡಾ ಎಲ್ಲ ಆಸನಗಳಲ್ಲಿ ಲಭ್ಯವಿದೆ. ಶಾರ್ಟ್-ಹಾಲ್/ಡೊಮೆಸ್ಟಿಕ್ ಬೋಯಿಂಗ್ 737-700/800ರಲ್ಲಿ, ಎಲ್ಲ ಹೊಸ ವಿಮಾನಗಳು AVODಯನ್ನು ಒಳಗೊಂಡಿವೆ. ಎಲ್ಲಾ ಆಸನಗಳು ನಿರ್ಧಿಷ್ಟವಾದ ವ್ಯಾಪಾರಿ-ದರ್ಜೆಯ ಜೊತೆಗೆ ಎಲೆಕ್ಟ್ರಾನಿಕ್ ರಿಕ್ಲೈನ್ ಹಾಗೂ ಮಸಾಜರ್‌ಗಳನ್ನೂ ಒಳಗೊಂಡಿವೆ.
- ಮಿತವ್ಯಯದ ದರ್ಜೆ
ಜೆಟ್‌ನ ಏರ್‌ಬಸ್ A330-2000 ಮತ್ತು ಬೋಯಿಂಗ್ 777-300ER ವಿಮಾನಗಳ ಮಿತವ್ಯಯದ ದರ್ಜೆಯು 32-ಇಂಚಿನ ಆಸನಗಳನ್ನು ಹೊಂದಿದೆ. ಬೋಯಿಂಗ್ 777-300ER/ಏರ್‌ಬಸ್ A330-200ನಲ್ಲಿರುವ ಆಸನಗಳು ಪಾದಕ್ಕೆ ವಿಶ್ರಾಂತಿ ನೀಡುವ "ಹ್ಯಾಮಾಕ್-ಸ್ಟೈಲ್" ಅನ್ನು ಹೊಂದಿವೆ. ಬೋಯಿಂಗ್ 777-300ERರಲ್ಲಿ ಪಕ್ಕಪಕ್ಕದಲ್ಲಿ 3-3-3 , ಏರ್‌ಬಸ್ A330-200ನಲ್ಲಿ 2-4-2 ಮತ್ತು ಬೋಯಿಂಗ್ 737ರಲ್ಲಿ 3-3 ಕ್ಯಾಬಿನ್‌ಗಳಿರುವಹಾಗೆ ರೂಪಿಸಲಾಗಿದೆ.777-300ER/A330-200ರಲ್ಲಿ ಪ್ರತಿ ಮಿತವ್ಯಯ ದರ್ಜೆಯ ಆಸನವು 10.6-ಇಂಚಿನ ಟಚ್ ಸ್ಕ್ರೀನ್ AVOD ಹೊಂದಿರುವ LCD TV ಗಳನ್ನು ಹೊಂದಿವೆ.
ಕೆಲ ಹೊಸದಾಗಿ ತೆಗೆದುಕೊಂಡ ಬೋಯಿಂಗ್ 37-700/800 ವಿಮಾನಗಳು ಕೂಡಾ AVOD ಹೊಂದಿದ ವೈಯಕ್ತಿಕ LCD ಪರದೆಗಳನ್ನು ಹೊಂದಿವೆ.
ಏರ್‌ವಸ್ A330-200 ಮತ್ತು ಬೋಯಿಂಗ್ 777-300ER ಎಲ್ಲಾ ಮೂರೂ ದರ್ಜೆಗಳಲ್ಲಿ ಸಮಯ ದಿನ ಹಾಗೂ ವಿಮಾನವಿರುವ ಸ್ಥಳವನ್ನು ಸೂಚಿಸುವ ಬೆಳಕಿನ ವ್ಯವಸ್ಥೆ ಹಾಗೂ ಮೂಡ್ ಲೈಟಿಂಗ್ ವ್ಯವಸ್ಥೆ ಕೂಡಾ ಅಳವಡಿಸಲಾಗಿದೆ.
thumb|right|ಬೋಯಿಂಗ್ 737-800ನ ಆನ್-ಬೋರ್ಡ್ ಮಿತವ್ಯಯ ದರ್ಜೆಯಲ್ಲಿ ಜೆಟ್‌ಸ್ಕ್ರೀನ್ IFE
ವಿಮಾನದ ಒಳಗೆ ಮನೋರಂಜನೆ
[ಬದಲಾಯಿಸಿ]ಜೆಟ್ ಏರ್‌ವೇಸ್' ಪ್ಯಾನಸಾನಿಕ್ eFX IFE ಸಿಸ್ಟಂ ಅನ್ನು ಬೋಯಿಂಗ್ 737-700/800ರಲ್ಲಿ ಮತ್ತು ಪ್ಯಾನಸಾನಿಕ್ eX2 IFE ಸಿಸ್ಟಂಅನ್ನು ಏರ್‌ಬಸ್ A330-200/ಬೋಯಿಂಗ್ 777-300ERನಲ್ಲೂ ಹೊಂದಿದೆ, "ಜೆಟ್ ಸ್ಕ್ರೀನ್ " ಎಂದು ಕರೆಯಲಾಗುವ, ಇದು ಧ್ವನಿ ಹಾಗೂ ದೃಶ್ಯ ಕಾರ್ಯಕ್ರಮಗಳನ್ನು ಪ್ರಯಾಣಿಕರ ಅಪೇಕ್ಷೆಯ ಮೇರೆಗೆ ಸಾದರಪಡಿಸಲಾಗುತ್ತದೆ (ಪ್ರಯಾಣಿಕರು ಅವರಿಗೆ ಬೇಕಾದ ಹಾಗೆ ಪ್ರಾರಂಭಿಸುವುದು, ನಿಲ್ಲಿಸುವುದು, ಹಿಂದಕ್ಕೆ ಓಡಿಸುವುದು, ಮತ್ತು ಮುಂದಕ್ಕೆ ಓಡಿಸುವುದನ್ನು ಮಾಡಬಹುದು). ಅದು ಸುಮಾರು 100 ಚಲನಚಿತ್ರಗಳು, 80 TV ಕಾರ್ಯಕ್ರಮಗಳು, 11 ಧ್ವನಿ ಚಾನಲ್‌ಗಳು ಮತ್ತು ಒಂದು 125 ಶೀರ್ಷಿಕೆಗಳಿರುವ CD ಲೈಬ್ರರಿಯನ್ನು ಹೊಂದಿದೆ. ಈ ಸಿಸ್ಟಂನಲ್ಲಿ ವೈಯಕ್ತಿಕ ಟಚ್ ಸ್ಕ್ರೀನ್ ಹೊಂದಿರು ಮಾನಿಟರ್‌ಗಳೊಂದಿಗೆ ಎಲ್ಲ ವರ್ಗಗಳ ಪ್ರತಿಯೊಂದು ಸೀಟ್‌ಗಳಲ್ಲಿ ಈ ಸೌಲಭ್ಯ ಲಭ್ಯವಿದೆ.[೧೯]
ವಿಮಾನ ನಿಲ್ದಾಣದ ವಿಶ್ರಾಂತಿ ಗೃಹಗಳು
[ಬದಲಾಯಿಸಿ]ಜೆಟ್ ಏರ್‌ವೇಸ್, ತನ್ನ ಮೊದಲ ಹಾಗೂ ಉನ್ನತ ವರ್ಗದ ಪ್ರಯಾಣಿಕರಿಗೆ ಹಾಗೂ ಜೆಟ್ ಪ್ರಿವಿಲೇಜ್ ಪ್ಲಾಟಿನಂ , ಗೋಲ್ಡ್ ಅಥವಾ ಸಿಲ್ವರ್ ಕಾರ್ಡ್ ಸದಸ್ಯತ್ವ ಹೊಂದಿರುವವರಿಗೆ ವಿಶ್ರಾಂತಿ ಗೃಹಗಳ ಸೌಲಭ್ಯವನ್ನು ಒದಗಿಸುತ್ತದೆ. ಬ್ರಸೆಲ್ಸ್‌ನ ಅಂತರಾಷ್ಟ್ರೀಯ ವಿಶ್ರಾಂತಿ ಗೃಹ ಶಾವರ್ಸ್, ವ್ಯಾಪಾರ ಕೇಂದ್ರಗಳು, ಮನೋರಂಜನಾ ಸೌಲಭ್ಯಗಳು ಮತ್ತು ಮಕ್ಕಳ ಆಟದ ಮೈದನಗಳನ್ನೂ ಸಹ ಹೊಂದಿದೆ.[೨೦] ವಿಶ್ರಾಂತಿ ಗೃಹಗಳಿರುವ ಸ್ಥಳಗಳು
- ಭಾರತೀಯ ವಿಶ್ರಾಂತಿ ಗೃಹಗಳು
- ಅಂತರಾಷ್ಟ್ರೀಯ ವಿಶ್ರಾಂತಿ ಗೃಹಗಳು
ಜೆಟ್ ಪ್ರಿವಿಲೇಜ್
[ಬದಲಾಯಿಸಿ]ಜೆಟ್ ಏರ್‌ವೇಸ್‌ನ ಜೆಟ್ ಪ್ರಿವಿಲೇಜ್ ’ ಮೇಲಿಂದ ಮೇಲೆ ಪ್ರಯಾಣಿಸುವವರಿಗಾಗಿ ಒಂದು ಸೌಲಭ್ಯ .
ಕೋಡ್‌ಶೇರ್ ಒಪ್ಪಂದಗಳು
[ಬದಲಾಯಿಸಿ]ಜೆಟ್ ಏರ್‌ವೇಸ್ ತನ್ನ ಕೋಡ್‌ಶೇರ್ ಒಪ್ಪಂದಗಳನ್ನು ಈ ಕೆಳಕಂಡ ಏರ್‌ಲೈನ್‌ಗಳೊಂದಿಗೆ ಹೊಂದಿದೆ[೨೧]:
ಜೆಟ್ ಏರ್ವೇಸ್ ಕೋಡ್‌ಶೇರ್ ಒಪ್ಪಂದಗಳು | ||
ಏರ್ ಲೈನ್ | ಕೋಡ್‌ಶೇರ್ ಮಾರ್ಗಗಳು | |
---|---|---|
ಮಧ್ಯದಲ್ಲಿ | ಮತ್ತು | |
ಏರ್ ಕೆನಡಾ | ಲಂಡನ್-ಹೆತ್ರೋ | ಕಾಲ್ಗೇರಿ, ಎಡ್ಮನ್ಟನ್, ಮಾಂಟ್ರೀಯಲ್-ಟ್ರುಡೀ, ಒಟ್ಟಾವ, ಟೊರೊಂಟೊ-ಪಿಯರ್ಸನ್, ವ್ಯಾನ್ಕಾವರ್ |
ಆಲ್ ನಿಪ್ಪಾನ್ ಏರ್ವೇಸ್ | ಮುಂಬಯಿ | ಟೋಕಿಯೋ-ನಾರಿಟಾ |
ಅಮೆರಿಕನ್ ಏರ್ಲೈನ್ಸ್ | ದೆಹಲಿ | ಚಿಕಾಗೋ-O'Hare |
ನ್ಯೂಯಾರ್ಕ್-JFK | ಬಾಲ್ಟಿಮೋರ್, ಬಾಸ್ಟನ್, ಕ್ಲೆವ್ಲ್ಯಾಂಡ್, ಡಲ್ಲಾಸ್/ಫೋರ್ಟ್ ವರ್ತ್, ರೆಲೀಗ್-ಡರ್ಹಾಮ್, ವಾಷಿಂಗ್ಟನ್-ರೀಗನ್ | |
ಬ್ರಸೆಲ್ಸ್ ಏರ್ಲೈನ್ಸ್ | ಬ್ರುಸೆಲ್ಸ್ | ಬರ್ಮಿಂಗ್ಹ್ಯಾಮ್, ಬಾರ್ಸಿಲೋನ, ಬರ್ಲಿನ್, ಜೆನಿವಾ, ಹ್ಯಾಮ್ಬರ್ಗ್, ಲಿಯಾನ್, ಮ್ಯಾಡ್ರಿಡ್, ಮ್ಯಾಂಚೆಸ್ಟರ್, ಮಾರ್ಸಿಲ್ಲೆ, ಪ್ಯಾರಿಸ್-ಚಾರ್ಲ್ಸ್ ಡೆ ಗಾಲ್ಲೆ, ಟೌಲೌಸ್, ವಿಯೆನ್ನಾ, ಓಸ್ಲೊ |
Etihad Airways | ಅಬುಧಾಬಿ | ಚೆನ್ನೈ, ಡೆಲ್ಲಿ, ಕೊಚ್ಚಿ, ಕೋಯಿಕೋಡ್, ಮುಂಬಯಿ, ತ್ರಿವೆಂಡ್ರಮ್ |
ಜೆಟ್ ಲೈಟ್ | ಡೊಮೆಸ್ಟಿಕ್ ಮಾರ್ಗಗಳು | ಡೊಮೆಸ್ಟಿಕ್ ಮಾರ್ಗಗಳು |
ಮಲೇಷಿಯಾ ಏರ್ಲೈನ್ಸ್ | ಕೌಲಲಂಪುರ್ | ಚೆನ್ನೈ, ಬೆಂಗಳೂರು, ಡೆಲ್ಲಿ, ಹೈದರಾಬಾದ್, ಮುಂಬಯಿ |
Qantas | ಸಿಂಗಾಪುರ್-ಚಂಗಿ | ಅಡೆಲೈಡ್, ಬ್ರಿಸ್ಬೇನ್, ಮೆಲ್ಬೋರ್ನ್, ಪೆರ್ಥ್, ಸಿಡ್ನಿ |
ವರ್ಜಿನ್ ಅಟ್ಲಾಂಟಿಕ್ | ಮುಂಬಯಿ | ಲಂಡನ್-ಹೆತ್ರೋ |
ಜೆಟ್ ಏರ್‌ವೇಸ್ ಕೆಳಕಂಡ ಏರ್‌ಲೈನ್‌ಗಳ ಜೊತೆ ವ್ಯಾಪಾರ ಒಪ್ಪಂದವನ್ನೂ ಸಹ ಹೊಂದಿದೆ:
ಜೆಟ್ ಏರ್‌ವೇಸ್‌ಗೆ ಸ್ಕೈಟ್ರಾಕ್ಸ್ 3 ಸ್ಟಾರ್‌ಗಳ ರೇಟಿಂಗ್ ಕೊಟ್ಟಿದೆ.
- ಬ್ಯುಸಿನೆಸ್ ಟ್ರಾವೆಲರ್ಸ್‌ನ 20ನೆ ವಾರ್ಷಿಕ ’ಬೆಸ್ಟ್ ಇನ್ ಬ್ಯುಸಿನೆಸ್ ಟ್ರಾವೆಲ್’ ಅವಾರ್ಡ್ಸ್‌ನಲ್ಲಿ ವಿಶ್ವದ ಉತ್ತಮ ಪ್ರಥಮ-ದರ್ಜೆ ಸೇವೆ ಅವಾರ್ಡ್
- 2006ರಲ್ಲಿ ಗೆಲಿಲಿಯೋ ಎಕ್ಸ್‌ಪ್ರೆಸ್ ಟ್ರಾವೆಲ್ ವರ್ಲ್ಡ್ 6ನೆಯ ಸಾಲಿನ ಸಂಪೂರ್ಣ ಸೇವೆ ಒದಗಿಸುವ ಏರ್‌ಲೈನ್ ಪ್ರಶಸ್ತಿ
- 2007ರ ಫ್ರೆಡೀ ಅವಾರ್ಡ್ಸ್‌ನಿಂದ ನೈಸ್ ಕಸ್ಟಮರ್ ಸರ್ವಿಸ್
- 2006ರ SATTE ಅವಾರ್ಡ್ಸ್‌ನಿಂದ ವೈಭವಪೂರ್ಣ ಬೆಳವಣಿಗೆಯುಳ್ಳ ಇಂಡಿಯನ್ ಡೊಮೆಸ್ಟಿಕ್ ಏರ್‌ಲೈನ್
- ಬ್ಯುಸಿನೆಸ್ ಟ್ರಾವೆಲರ್ ಅವಾರ್ಡ್ಸ್‌ನಿಂದ ಉತ್ತಮ ವ್ಯಾಪಾರ ದರ್ಜೆ & ಉತ್ತಮ ಮಿತವ್ಯಯದ ದರ್ಜೆ
- 2007 & 2006ರ ಸಾಲಿನ ಫ್ರೆಡೀ ಅವಾರ್ಡ್ಸ್‌ನಿಂದ ವರ್ಷದ ಉತ್ತಮ ಪ್ರೋಗ್ರಾಮ್ ಪ್ರಶಸ್ತಿ
- 2008ರ ಫ್ರೆಡೀ ಪ್ರಶಸ್ತಿಗಳ 21ನೆಯ ವಾರ್ಷಿಕ ಸಾಲಿನ ಕಾರ್ಯಕ್ರಮದಲ್ಲಿ ಎರಡನೆಯ ಬಾರಿಗೆ ಉತ್ತಮ ಎಲೈಟ್ ಲೆವೆಲ್ ಪ್ರಶಸ್ತಿ
- 2005ರ ಫ್ರೆಡೀ ಮರ್ಕ್ಯುರಿ ಅವಾರ್ಡ್ಸ್‌ನಿಂದ ಬೆಸ್ಟ್ ಬೋನಸ್ ಪ್ರಮೋಶನ್
- 2010ರ ಏವಿಯನ್ ಅವಾರ್ಡ್ಸ್‌ನಿಂದ ಉತ್ತಮ ಸಮಗ್ರ ಮನೋರಂಜನೆ ಪ್ರಶಸ್ತಿ
- 2006ರ SATTE ಅವಾರ್ಡ್ಸ್‌ನಲ್ಲಿ ಇಂಡಿಯಾದ ಅತಿ ಹೆಚ್ಚು ಜನಪ್ರಿಯ ಡೊಮೆಸ್ಟಿಕ್ ಏರ್‌ಲೈನ್
- 2006ರ ಏವಿಯನ್ ಅವಾರ್ಡ್ಸ್‌ನಲ್ಲಿ ಉತ್ತಮ ಸಿಂಗಲ್ ವಿಮಾನದೊಳಗಿನ ಧ್ವನಿ ಕಾರ್ಯಕ್ರಮ
- 2006ರ ವಿಶ್ವದ ಟ್ರಾವೆಲ್ ಅವಾರ್ಡ್ಸ್‌ನಿಂದ ಇಂಡಿಯನ್ ಏರ್‌ಲೈನ್
- 2002ರಲ್ಲಿ ಬೀವರ್‌ನಿಂದ ವಿಶ್ವಸನೀಯ ರವಾನೆಗಾಗಿ ಹೊಂದಿರುವ ಉತ್ತಮ ತಂತ್ರಜ್ಞಾನಕ್ಕಾಗಿ ಪ್ರಶಸ್ತಿ
- ಸೆಕೆಂಡ್ ಗೋಯಲ್ ಅವಾರ್ಡ್‌ನಿಂದ ವಾಣಿಜ್ಯ ಏರ್‌ಲೈನ್ ಕ್ಷೇತ್ರ (ಡೊಮೆಸ್ಟಿಕ್)ದ ಪ್ರಯಾಣಿಕರ ಮತ್ತು ವಿಶ್ವಸನೀಯ ಗುರುತಿನ ಅವಾರ್ಡ್ .
- ಕಾರ್ಗೋ ಏರ್‌ಲೈನ್ ವರ್ಷದ ಪ್ರಶಸ್ತಿ ನಾರ್ಥ್ ಏಷಿಯಾದ ಉತ್ತಮ ಕಾರ್ಗೋ ಏರ್‌ಲೈನ್
- ಕಳೆದೆರಡು ವರ್ಷಗಳಿಂದ ನಿರಂತರ 5ನೆಯ ಬಾರಿಗೆ 18th TTG (ಟ್ರಾವೆಲ್ ಟ್ರೇಡ್ ಗ್ಯಾಜೆಟ್) ಟ್ರಾವೆಲ್ ಅವಾರ್ಡ್ಸ್2007 ನಿಂದ ಉತ್ತಮ ಡೊಮೆಸ್ಟಿಕ್ ಏರ್‌ಲೈನ್ ಪ್ರಶಸ್ತಿ
- ಸೂಡಾನ್‌ನ ಜುರಾಸಿಕ್ ಪಾರ್ಕ್‌ನಲ್ಲಿರುವ ಗ್ಲೋಬಲ್ ಮ್ಯಾನೇಜರ್‌ಗಳ ಉತ್ಕೃಷ್ಟ ಸೇವೆ ಪ್ರಶಸ್ತಿ
- 2003ರ ಬ್ಯುಸಿನೆಸ್ ವರ್ಲ್ಡ್‌ನ ಟ್ರಾವೆಲ್ ಮತ್ತು ಆಹಾರದ ಕ್ಷೇತ್ರದಲ್ಲಿ ಇಂಡಿಯಾದ ಹೆಚ್ಚು ಗೌರವಾನ್ವಿತ ಕಂಪನಿ ಪ್ರಶಸ್ತಿ
- 2006ರಲ್ಲಿ ಫ್ರೆಡೀ ಅವಾರ್ಡ್ಸ್‌ನಿಂದ ಕ್ರೆಡಿಟ್ ಕಾರ್ಡ್‌ಗಳ ಉತ್ತಮ ಸ್ನೇಹಿ ಎಂಬ ರನ್ನರ್ ಅಪ್ ಪ್ರಶಸ್ತಿ
- ಫ್ರೆಡೀ ಅವಾರ್ಡ್ಸ್‌ನಿಂದ ಅತ್ಯುತ್ತಮ ವೆಬ್‌ಸೈಟ್ ಪ್ರಶಸ್ತಿಯ ಮೊದಲ ರನ್ನರ್ ಅಪ್
- '
- ಬೋಯಿಂಗ್ 737 ಮುಂದಿನ ಪೀಳಿಗೆಯಲ್ಲಿ 0}IFE(ಸ್ಕೈ ಸ್ಕ್ರೀನ್) ಪರಿಚಯಿಸಿದ ವಿಶ್ವದ ಪ್ರಥಮ ಏರ್‌ಲೈನ್
- ಖಾಸಗಿ ಪ್ರಥಮ ದರ್ಜೆಯನ್ನು ತಮ್ಮ ಬೋಯಿಂಗ್ 777-300ERನಲ್ಲಿ ಪರಿಚಯಿಸಿದ ವಿಶ್ವದ ದ್ವಿತೀಯ ಏರ್‌ಲೈನ್
ಅಫಘಾತಗಳು ಮತ್ತು ಘಟನೆಗಳು
[ಬದಲಾಯಿಸಿ]- 2007ರ ಜೂನ್ 1ರಂದು, ಜೆಟ್ ಏರ್‌ವೇಸ್ ವಿಮಾನ 3307 , ATR 72-212A (ನೊಂದಾವಣೆ VT-JCE) ಭೂಪಾಲ್-ಇಂದೂರ್ ಮಾರ್ಗದಲ್ಲಿ ಚಲಿಸುತ್ತಿದ್ದ ವಿಮಾನ ಚಂಡಮಾರುತದಿಂದಾಗಿ ಅಫಘಾತಕ್ಕೀಡಾಯಿತು 45 ಜನ ಪ್ರಯಾಣಿಕರು ಹಾಗೂ 4 ಜನ ವಿಮಾನದ ತಂಡದವರಿದ್ದ ಈ ದುರ್ಘಟನೆಯಲ್ಲಿ ಸಾವು ಸಂಭವಿಸಲಿಲ್ಲ, ಆದಾಗ್ಯೂ ವಿಮಾನವು ಸರಿಪಡಿಸಲಾಗದಷ್ಟು ಜಖಂ ಆಗಿತ್ತು.[ಸೂಕ್ತ ಉಲ್ಲೇಖನ ಬೇಕು]
ಆಕರಗಳು
[ಬದಲಾಯಿಸಿ]- [೬] Archived 2016-08-14 ವೇಬ್ಯಾಕ್ ಮೆಷಿನ್ ನಲ್ಲಿ.
- [೭]
- ↑ [೧]
- ↑ http://www.newstrackindia.com/newsdetails/15340
- ↑ Jet Airways bags award - Newindpress.com
- ↑ "The Peninsula On-line: Qatar's leading English Daily". Archived from the original on 2016-03-04. Retrieved 2021-08-28.
- ↑ "Jet Airways India | Know investment options, shareholding structure, listings & stock codes". Archived from the original on 2008-12-05. Retrieved 2010-01-21.
- ↑ "Indian airline Jet Airways is to buy rival carrier Air Sahara in a deal worth $500 m (£284 m)". BBC News. 2006-01-19.
- ↑ JetLite may merge with Jet Airways this year
- ↑ Jet Air lays off 850 flight attendants
- ↑ Praful takes credit for reversal of Jet layoffs
- ↑ Business-standard Jet Airways article
- ↑ Jet and Kingfisher form Alliance
- ↑ "Jet Airways' low-fare service Konnect takes off today". The Hindu Business Line.
- ↑ [೨] ಏರ್‌ಲೈನ್ ಮುಷ್ಕರದ ಬಗ್ಗೆ BBC ವಾರ್ತೆಗಳ ಒಂದು ವರದಿ
- ↑ [೩] Archived 2015-04-05 ವೇಬ್ಯಾಕ್ ಮೆಷಿನ್ ನಲ್ಲಿ. ಸೆಪ್ಟೆಂಬರ್ 09, 2009ರಲ್ಲಿ ವಿಮಾನಗಳು ರದ್ದಾಗಿದ್ದು.
- ↑ [೪] ಏರ್‌ಲೈನ್ ಮುಷ್ಕರದ ಬಗ್ಗೆ BBC ವಾರ್ತೆಗಳ ಒಂದು ವರದಿ
- ↑ ೧೬.೦ ೧೬.೧ ೧೬.೨ ೧೬.೩ "Jet Airways sports new look". Business Standard. 04-2007. Retrieved 2009-03-03.
{{cite web}}
: Check date values in:|date=
(help); Italic or bold markup not allowed in:|publisher=
(help) - ↑ "ಫ್ಲೀಟ್ ಮಾಹಿತಿ". Archived from the original on 2009-04-17. Retrieved 2010-01-21.
- ↑ Jet Airways Fleet Age
- ↑ Verghese, Vijay (2007-7). "Finally, incredible India". The Nation. Archived from the original on 2008-08-30. Retrieved 2009-03-03.
{{cite web}}
: Check date values in:|date=
(help); Italic or bold markup not allowed in:|publisher=
(help) - ↑ "Jet opens lounge at Brussels airport". Business Standard. 2007-10. Retrieved 2009-03-03.
{{cite web}}
: Check date values in:|date=
(help); Italic or bold markup not allowed in:|publisher=
(help) - ↑ "Codeshare". Archived from the original on 2009-04-20. Retrieved 2010-01-21.
- ↑ [೫] Archived 2009-05-14 ವೇಬ್ಯಾಕ್ ಮೆಷಿನ್ ನಲ್ಲಿ. Awards
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Official website
- ಇಂಡಿಯನ್ ಏವಿಯೇಶನ್ ಬ್ಯುಸಿನೆಸ್ ಬ್ಲೂಮ್ಬರ್ಗ್ನಲ್ಲಿ ವಾರ್ತಾ ವರದಿ
- ಜೆಟ್ ಏರ್‌ವೇಸ್‌ನ ವಾರ್ತೆಯ ಟೈಮ್ಲೈನ್ Archived 2016-11-05 ವೇಬ್ಯಾಕ್ ಮೆಷಿನ್ ನಲ್ಲಿ.
- Jet Airways buyout of Air Sahara on BBC news Archived 2008-10-25 ವೇಬ್ಯಾಕ್ ಮೆಷಿನ್ ನಲ್ಲಿ.
- SWIP Archived 2010-01-22 ವೇಬ್ಯಾಕ್ ಮೆಷಿನ್ ನಲ್ಲಿ. The pilots of Jet Airways formed SWIP, The Society for Welfare of Indian Pilots, in 1998.
- AirPloyment ವಿಮಾನ ಚಾಲಕರ ಹುದ್ದೆಗಳು
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: markup
- CS1 errors: dates
- Articles with hatnote templates targeting a nonexistent page
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with unsourced statements from September 2009
- Commons category link is on Wikidata
- ಭಾರತೀಯ ಕಂಪನಿಗಳು
- ಏರ್ಲೈನ್ಸ್ ಅಫ್ ಇಂಡಿಯ
- IATA ಸದಸ್ಯರು
- ಏರ್ಲೈನ್ಸ್ ಸ್ಥಾಪನೆಯಾದದ್ದು 1992ರಲ್ಲಿ
- ಮುಂಬಯಿ ಮೂಲದ ಕಂಪನಿಗಳು
- ಸಂಚಾರ ವ್ಯವಸ್ಥೆ