ನವರಂಗ
ನವರಂಗ | |
---|---|
Conservation status | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | Chordata
|
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | P. brachyura
|
Binomial name | |
Pitta brachyura (Linnaeus, 1766)
| |
Synonyms | |
Corvus brachyurus |
ನವರಂಗ (Indian pitta) ಇದು Pittidae ಕುಟುಂಬದ ಪಕ್ಷಿ. ಇದರ ವೈಜ್ಞಾನಿಕ ಹೆಸರು Pitta brachyura. ಹಿಮಾಲಯ ಮೂಲದ ಈ ಪಕ್ಷಿಯು ಚಳಿಗಾಲದಲ್ಲಿ ದಕ್ಷಿಣ ಭಾರತ ಮತ್ತು ಶ್ರೀಲಂಕದ ಕಾಡುಗಳಿಗೆ ವಲಸೆ ಹೋಗುತ್ತದೆ.
ನಡಾವಳಿ ಮತ್ತು ಪರಿಸರ ವಿಜ್ಞಾನ
[ಬದಲಾಯಿಸಿ]ಒಂಟಿಯಾಗಿ ಓಡಾಡುವ ಈ ಪಕ್ಷಿಗಳು, ಹೆಚ್ಚಿನದಾಗಿ ದಟ್ಟ ಪೊದೆಗಳಿರುವೆಡೆ ಕಂಡುಬರುತ್ತವೆ. ಪೊದೆಗಳ ಕೆಳಗೆ ತರಗೆಲೆಗಳನ್ನು ಎತ್ತಿಹಾಕುತ್ತಾ ಅದರಡಿ ಹುದುಗಿರುವ ಕೀಟಗಳನ್ನು ಹಿಡಿಯುತ್ತಿರುತ್ತವೆ. ದೇಹದ ಆಕಾರಕ್ಕೆ ಹೋಲಿಸಿದರೆ ಉದ್ದವೆನಿಸುವ ಕಾಲುಗಳನ್ನು ಹೊಂದಿರುವ ಇವು ಹಾರುವುದಕ್ಕಿಂತ ನೆಲದಲ್ಲಿ ಓಡಾಡುವುದೇ ಹೆಚ್ಚು.
ವಿವರಣೆ
[ಬದಲಾಯಿಸಿ]ನವರಂಗಗಳು ಉಜ್ವಲ ಬಣ್ಣಗಳುಳ್ಳ, ಗಿಡ್ಡ ಕತ್ತಿನ ಪಕ್ಷಿಗಳು. ಇವು ಗಟ್ಟಿಯಾದ ತುಸು ಬಾಗಿದ ಕೊಕ್ಕನ್ನೂ ಮತ್ತು ನೀಳವಾದ ಬಲಿಷ್ಟ ಕಾಲುಗಳನ್ನೂ ಹೊಂದಿರುತ್ತವೆ. ಇವುಗಳ ಎದೆ ಮತ್ತು ಹೊಟ್ಟೆ ಕಂದು ಹಳದಿ ಬಣ್ಣವನ್ನು ಹೊಂದಿದ್ದು, ರೆಕ್ಕೆಯು ಹಸಿರು ಬಣ್ಣವನ್ನು ಹೊಂದಿರುತ್ತದೆ. ಕಣ್ಣಿನಿಂದ ಕತ್ತಿನ ಮೇಲ್ಬಾಗದ ವರೆಗೆ ಕಪ್ಪು ಪಟ್ಟಿ ಇರುತ್ತದೆ. ನೀಲಿ ಬಾಲದ ತುದಿಯಲ್ಲಿ ಕಪ್ಪು ಅಂಚು ಇರುತ್ತದೆ. ಕತ್ತಿನ ಮುಂಭಾಗದಲ್ಲಿ ಬಿಳಿ ಬಣ್ಣವಿರುತ್ತದೆ. ನೆತ್ತಿಯಲ್ಲಿ ಕಪ್ಪು ಬಣ್ಣವಿರುತ್ತದೆ. ಬಾಲದ ಕೆಳಭಾಗದಲ್ಲಿ ರಕ್ತಗೆಂಪು ಬಣ್ಣವಿರುತ್ತದೆ. ಹಾರುವಾಗ ರೆಕ್ಕೆಗಳ ತುದಿಯಲ್ಲಿ ಬಿಳಿ ಮಚ್ಚೆಗಳು ಸ್ಪಷ್ಟವಾಗಿ ಕಾಣುತ್ತವೆ.
ಸ್ಥಳೀಯ ಹೆಸರುಗಳು
[ಬದಲಾಯಿಸಿ]Indian Pitta ಎಂದು ಕರೆಯಲ್ಪಡುವ ಇವುಗಳಿಗೆ ಆ ಹೆಸರು ತೆಲಗು ಶಬ್ದ "పిట్ట" (ಪಿಟ್ಟ) ದಿಂದ ಬಂದಿದೆ. ಈ ಹಕ್ಕಿಗಳ ಬಣ್ಣ ಮತ್ತು ಅದರ ಗುಣಗಳ ಆಧಾರದ ಮೇಲೆ ಸ್ಥಳೀಯವಾಗಿ ವಿವಿಧ ಹೆಸರಿನಿಂದ ಕರೆಯಲಾಗುತ್ತದೆ.
ಉದಾಹರಣೆಗೆ-
ತೆಲಗು: పోలంకి పిట్ట (ಪೋಲಂಕಿ ಪಿಟ್ಟ),
ಕನ್ನಡ: ನವರಂಗ,
ಹಿಂದಿ: नवरंग् (ನವರಂಗ),
ಪಂಜಾಬಿ: ਨਵਰਂਗ (ನವರಂಗ),
ಗುಜರಾತಿ: નવરંગ્ (ನವರಂಗ),
ಮಲಯಾಳಂ: കാവി (ಕಾವಿ),
ತಮಿಳು: அருமநி குருவி (ಅರುಮನಿ ಕುರುವಿ- 6'O clock bird) ಎನ್ನುತ್ತಾರೆ.
ಹರಡುವಿಕೆ ಮತ್ತು ಆವಾಸಸ್ಥಾನ
[ಬದಲಾಯಿಸಿ]ಮೂಲತಃ ಹಿಮಾಲಯ ವಾಸಿಗಳಾದ ಈ ಹಕ್ಕಿಗಳು ಹಿಮಾಲಯದಲ್ಲಿ, ಉತ್ತರ ಪಾಕಿಸ್ತಾನದಿಂದ ನೇಪಾಳ ಮತ್ತು ಸಿಕ್ಕಿಂ ವರೆಗೂ ವ್ಯಾಪಿಸಿವೆ. ಕೆಲವೂಮ್ಮೆ ಮಧ್ಯ ಭಾರತ ಮತ್ತು ಪಶ್ಚಿಮ ಘಟ್ಟಗಳಲ್ಲಿಯೂ ಸಂತಾನೋತ್ಪತ್ತಿ ನಡೆಸುತ್ತವೆ. ಚಳಿಗಾಲದಲ್ಲಿ ದಕ್ಷಿಣ ಭಾರತ ಮತ್ತು ಶ್ರೀಲಂಕಾದ ವರೆಗೂ ವಲಸೆ ಹೋಗುತ್ತವೆ.
ಸಂತಾನೋತ್ಪತ್ತಿ ಮತ್ತು ಆಹಾರ
[ಬದಲಾಯಿಸಿ]ಇವು ಜೂನ್ ದಿಂದ ಅಗಸ್ಟ್ ವರೆಗೆ ಸಂತಾನೋತ್ಪತ್ತಿ ನಡೆಸುತ್ತವೆ. ನೆಲದ ಮೇಲೆ ಅಥವಾ ತಗ್ಗಿನ ಗಿಡಗಳ ಮೇಲೆ ಒಣ ಹುಲ್ಲು, ಕಡ್ಡಿಗಳನ್ನು ಬಳಸಿ ಗೂಡುಕಟ್ಟಿ, ತಿಳಿನೀಲಿ ಚುಕ್ಕೆಗಳಿರುವ ಬಿಳಿಯ 4 ರಿಂದ 5 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತವೆ. ಇವು ಅಕಶೇರುಕಗಳು, ಕ್ರಿಮಿ ಕೀಟಗಳು ಮತ್ತು ಮರಿ ಹುಳುಗಳನ್ನು ಆಹಾರವಾಗಿ ಸೇವಿಸುತ್ತವೆ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ BirdLife International (2012). "Pitta brachyura". IUCN Red List of Threatened Species. Version 2012.1. International Union for Conservation of Nature. Retrieved 16 July 2012.
{{cite web}}
: Invalid|ref=harv
(help)