ವಿಷಯಕ್ಕೆ ಹೋಗು

ಲಾಂಚ್ ವೆಹಿಕಲ್ ಮಾರ್ಕ್ 3

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
LVM3 (GSLV Mk III)[][]

Geosynchronous Satellite Launch Vehicle Mk III.
Function Medium-lift launch vehicle
Manufacturer Indian Space Research Organisation
Country of origin India
Cost per launch (೨೦೨೫) ₹400 crore (approx. $62M) []
Size
Height 43.43 m (142.5 ft)[]
Diameter 4.0 m (13.1 ft)
Mass 640,000 kg (1,410,000 lb)[]
Stages 3
Launch history
Status Active
Launch sites Satish Dhawan Space Centre SLP, Andhra Pradesh, India
Total launches 2
Successes 2
Failures 0
Partial failures 0
First flight
  • 18 December 2014 (suborbital)
  • 5 June 2017 (orbital)
Last flight 5 June 2017

ಜಿಎಸ್ಎಲ್ವಿ ಎಮ್ ಕೆ ೩ ಡಿ ೧

[ಬದಲಾಯಿಸಿ]
  • ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್ ೩ :ಡಿ 1: ಹೆಚ್ಚಿನ ವಿವರ;
  • ಜಿಸ್ಯಾಟ್–19 ಉಪಗ್ರಹವನ್ನು ಹೊತ್ತ ಭಾರತದ ಅತ್ಯಂತ ದೈತ್ಯ ರಾಕೆಟ್ ಜಿಎಸ್‌ಎಲ್‌ವಿ ಮಾರ್ಕ್ 3, ದಿನಾಂಕ. 5 ಜೂನ್ 2017 ಸೋಮವಾರ ಸಂಜೆ ಗಂ.5.28ಕ್ಕೆ ಶ್ರೀಹರಿಕೋಟಾದಿಂದ ಬಾಹ್ಯಾಕಾಶಕ್ಕೆ ಚಿಮ್ಮಿದೆ. 640 ಟನ್‌ ತೂಕದ ಮತ್ತು 42.23 ಮೀಟರ್‌ ಉದ್ದದ ಜಿಎಸ್‌ಎಲ್‌ವಿ ಮಾರ್ಕ್ 3 ಉಡಾವಣಾ ವಾಹಕವು ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಪ್ಯಾಡ್ನಿಂದ ಉಡಾವಣೆಗೊಂಡಿತು. ಉಡಾವಣೆಗೊಂಡ 21 ನಿಮಿಷಗಳಲ್ಲಿ ಉಪಗ್ರಹ ಯಶಸ್ವಿಯಾಗಿ ಕಕ್ಷೆ ಸೇರಿದೆ. ಜಿಸ್ಯಾಟ್–19 ಉಪಗ್ರಹ ಕಕ್ಷೆಗೆ ಸೇರಲು 16 ನಿಮಿಷ ತೆಗೆದುಕೊಂಡಿದೆ.ಭಾರಿ ವೇಗದ ಮತ್ತು ಉಪಗ್ರಹ ಆಧರಿತ ಅಂತರಜಾಲ ಸಂಪರ್ಕ ಸೇವೆಗೆ ಈ ಉಪಗ್ರಹ ನೆರವಾಗಲಿದೆ.

ಭಾರತಕ್ಕೆ ಐತಿಹಾಸಿಕ ದಿನ

[ಬದಲಾಯಿಸಿ]
  • ಗರಿಷ್ಠ ನಾಲ್ಕು ಟನ್‌ಗಳಷ್ಟು ಭಾರದ ಉಪಗ್ರಹಗಳನ್ನು ಹೊತ್ತುಕೊಂಡು ನಭಕ್ಕೆ ಚಿಮ್ಮಬಲ್ಲ ಸಾಮರ್ಥ್ಯವಿರುವ ಈ ರಾಕೆಟ್‌, 3,136 ಕೆಜಿ ತೂಕದ ಜಿಸ್ಯಾಟ್‌–19 ಉಪಗ್ರಹವನ್ನು ಭೂಸ್ಥಿರ ಕಕ್ಷೆಗೆ ಸೇರಿಸಿತು.: ಯಶಸ್ವಿ ಉಡಾವಣೆಯ ನಂತರ ಮಾತನಾಡಿದ ಇಸ್ರೊ ಅಧ್ಯಕ್ಷ ಎ.ಎಸ್‌. ಕಿರಣ್‌ಕುಮಾರ್‌, ‘ಇದೊಂದು ಐತಿಹಾಸಿಕ ದಿನ’ ಎಂದು ಬಣ್ಣಿಸಿದರು.
  • ‘ರಾಕೆಟ್‌ ಅನ್ನು 2002ರಲ್ಲಿ ವಿನ್ಯಾಸಗೊಳಿಸಿದ್ದರೂ 15 ವರ್ಷಗಳ ನಂತರ ಇಸ್ರೊ ತಂಡಕ್ಕೆ ಅದನ್ನು ಯಶಸ್ವಿಯಾಗಿ ಉಡಾಯಿಸಲು ಸಾಧ್ಯವಾಯಿತು’ ಎಂದು ಅವರು ಹೇಳಿದರು. ಈ ಯೋಜನೆಗಾಗಿ ಹಗಲಿರುಳು ದುಡಿದ ಇಸ್ರೊ ವಿಜ್ಞಾನಿಗಳ ತಂಡವನ್ನು ಅವರು ಅಭಿನಂದಿಸಿದರು. ಘನ, ದ್ರವ ಮತ್ತು ಕ್ರಯೊಜೆನಿಕ್‌ ರಾಕೆಟ್‌ ನೋದಕ (ಪ್ರೊಪಲ್ಷನ್‌) ತಂತ್ರಜ್ಞಾನಗಳ ನಿರ್ವಹಣೆಯಲ್ಲಿ ಇಸ್ರೊ ವಿಜ್ಞಾನಿಗಳು ಹೊಂದಿರುವ ಹೇರಳ ಅನುಭವದ ಆಧಾರದಲ್ಲಿ ಜಿಎಸ್‌ಎಲ್‌ವಿ ಮಾರ್ಕ್‌–3 ರಾಕೆಟ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಾಹುಬಲಿ

[ಬದಲಾಯಿಸಿ]
  • ಜಿಎಸ್‌ಎಲ್‌ವಿ ಮಾರ್ಕ್‌ 3–ಡಿ1ನ ಯಶಸ್ವಿ ಉಡಾವಣೆಯ ಸಂತಸದಲ್ಲಿ ಇಸ್ರೊ ವಿಜ್ಞಾನಿಗಳು, ಆ ದೈತ್ಯ ರಾಕೆಟ್‌ ಅನ್ನು ‘ಬಾಹುಬಲಿ’ ಮತ್ತು ‘ವಿಧೇಯ ಹುಡುಗ’ (ನಿಯಂತ್ರಣದಿಂದ ಕಳಿಸಿದ ಆಜ್ಞೆಗಳನ್ನು ಸರಿಯಾಗಿ ಫಲಿಸಿದೆ) ಎಂಬ ಅಡ್ಡ ಹೆಸರುಗಳಿಂದ ಕರೆದು ಸಂಭ್ರಮಿಸಿದರು. ‘ಇಸ್ರೊ, ಬಾಹುಬಲಿಗೆ ಜನ್ಮ ನೀಡಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ’ ಎಂದು ಯೋಜನೆ ನಿಯಂತ್ರಣ ಕೇಂದ್ರದಲ್ಲಿ ಹೊರಹೊಮ್ಮಿದ ಹರ್ಷೋದ್ಗಾರಗಳ ನಡುವೆಯೇ ಸ್ಪೇಸ್‌ ಅಪ್ಲಿಕೇಷನ್ಸ್‌ ಸೆಂಟರ್‌ನ ನಿರ್ದೇಶಕ ತಪನ್‌ ಮಿಶ್ರಾ ಹೇಳಿದರು.
  • ‘ಇದು ಕ್ರಾಂತಿಕಾರಕ ರಾಕೆಟ್‌, ಹಾರ್ಡ್‌ವೇರ್‌ಗಳ ವಿಚಾರದಲ್ಲಿ ಇದು ಭಾರಿ ಮುನ್ನಡೆ ಸಾಧಿಸಿದೆ. ಹೆಚ್ಚಿನ ಹಾರ್ಡ್‌ವೇರ್‌ಗಳನ್ನು ದೇಶೀಯವಾಗಿ ತಯಾರಿಸಲಾಗಿದೆ’ ಎಂದು ಇಸ್ರೊ ಪ್ರೊಪಲ್ಷನ್‌ ಕಾಂಪ್ಲೆಕ್ಸ್‌ ನಿರ್ದೇಶಕ ಪಿ.ವಿ. ವೆಂಕಟ ಕೃಷ್ಣನ್‌ ಹೇಳಿದರು. ‘ಇವನೊಬ್ಬ ಜಾಣ ಮತ್ತು ವಿಧೇಯ ಹುಡುಗ’ ಎಂದು ಕ್ರಯೊಜೆನಿಕ್‌ ಎಂಜಿನ್‌ ಹಂತದ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದ ಹಿರಿಯ ವಿಜ್ಞಾನಿಯೊಬ್ಬರು ಬಣ್ಣಿಸಿದರು.

ಅಂತರಿಕ್ಷಕ್ಕೆ ಮಾನವ

[ಬದಲಾಯಿಸಿ]
  • ದೈತ್ಯ ರಾಕೆಟ್‌ನ ಉಡಾವಣೆ ಯಶಸ್ವಿಯಾಗಿರುವುದರಿಂದ, ಅಂತರಿಕ್ಷಕ್ಕೆ ಮಾನವನನ್ನು ಕಳುಹಿಸುವ ಇಸ್ರೊದ ಬಹು ವರ್ಷಗಳ ಕನಸು ಗರಿಗೆದರಿದೆ. ಆಳ ಬಾಹ್ಯಾಕಾಶಕ್ಕೆ ತೆರಳಲು ಹೆಚ್ಚು ಭಾರ ಹೊರುವ ಸಾಮರ್ಥ್ಯದ ರಾಕೆಟ್‌ನ ಅವಶ್ಯಕತೆ ಇದೆ. 2020ರಲ್ಲಿ ಮಾನವನನ್ನು ಅಂತರಿಕ್ಷಕ್ಕೆ ಕಳುಹಿಸುವ ಗುರಿಯನ್ನು ಇಸ್ರೊ ಇಟ್ಟುಕೊಂಡಿದೆ. ಆ ಯೋಜನೆಗೆ ಈ ರಾಕೆಟ್‌ ಬಳಸುವ ಲೆಕ್ಕಾಚಾರವನ್ನು ಇಸ್ರೊ ಹಾಕಿಕೊಂಡಿದೆ

ಜಿಸ್ಯಾಟ್‌–19

[ಬದಲಾಯಿಸಿ]
  • ಬ್ಯಾಂಡ್‌ ಸಂವಹನ ಟ್ರಾನ್ಸ್‌ಪಾಂಡರ್‌ಗಳು, ಭೂಸ್ಥಿರ ವಿಕಿರಣ ಸ್ಪೆಕ್ಟ್ರೋಮೀಟರ್‌ (ಜಿಆರ್‌ಎಎಸ್‌ಪಿ), ಲೀಥಿಯಂ ಅಯಾನ್‌ ಬ್ಯಾಟರಿ, ಅತ್ಯಾಧುನಿಕ ವೈಮಾಂತರಿಕ್ಷ ತಂತ್ರಜ್ಞಾನಗಳಾದ ಚಿಕ್ಕದಾದ ಉಷ್ಣ ಕೊಳವೆ, ಫೈಬರ್‌ ಆಪ್ಟಿಕ್‌ ಗೈರೊ, ಮೈಕ್ರೊ–ಎಲೆಕ್ಟ್ರೊ ಮೆಕ್ಯಾನಿಕಲ್‌ ಸಿಸ್ಟಮ್‌ (ಎಂಇಎಂಎಸ್‌) ಆ್ಯಕ್ಸೆಲೆರೊಮೀಟರ್‌, ಕು–ಬ್ಯಾಂಡ್‌ ಟಿಟಿಸಿ ಟ್ರಾನ್ಸ್‌ಪಾಂಡರ್‌*
  • ಹತ್ತು ವರ್ಷಗಳ ಕಾಲ ಈ ಉಪಗ್ರಹ ಕಾರ್ಯನಿರ್ವಹಿಸಲಿದೆ.
  • ಜಿಎಸ್‌ಎಲ್‌ವಿ ಮಾರ್ಕ್‌ 3 ಯಶಸ್ವಿ ಉಡಾವಣೆಯಿಂದಾಗಿ ಮುಂದಿನ ಪೀಳಿಗೆಯ ರಾಕೆಟ್‌ ಮತ್ತು ಉಪಗ್ರಹಗಳ ಅಭಿವೃದ್ಧಿ ಭಾರತಕ್ಕೆ ಇನ್ನಷ್ಟು ಸುಲಭವಾಗಲಿದೆ.
  • ಉಡಾವಣೆ ಚಿತ್ರ ಮತ್ತು ಸೆಲ್ ಫಿ

ಅಭಿನಂದನೆ

[ಬದಲಾಯಿಸಿ]
  • ನರೇಂದ್ರ ಮೋದಿ, ಪ್ರಧಾನಿ
  • ವಿಜ್ಞಾನಿಗಳನ್ನು ಅಭನಂದಿಸಿ, 'ಬಾಹುಬಲಿ' ಮತ್ತು ‘ವಿಧೇಯ ಹುಡುಗ’ ಎಂದು ಕರೆದು ಸಂಭ್ರಮಿಸಿದರು.

ಸಂಕ್ಷಿಪ್ತ ವಿವರ

[ಬದಲಾಯಿಸಿ]
  • ಈ ಜಿಎಸ್‌ಎಲ್‌ವಿ ಮಾರ್ಕ್ 3 ನ್ನು 2002ರಲ್ಲಿ ವಿನ್ಯಾಸಗಳಿಸಲಾಗಿತ್ತು.
  • ಜಿಎಸ್‌ಎಲ್‌ವಿ ಮಾರ್ಕ್ 3, 4 ಟನ್ ಭಾರವನ್ನು (40ಕ್ವಿಂಟಲ್ ಅಥವಾ 4 ಸಾವಿರ ಕಿಲೋಗ್ರಾಂ) ಭೂಕ್ಷೆಯ ವರೆಗೆ ಹೊರುವ ಸಾಮರ್ಥ್ರ್ಯ ಹೊದಿದೆ, ಅದೇ ಕೆಳ ಹಂತ್ದ ಕಕ್ಷೆಗೆ 10 ಟನ್ ಭರವನ್ನು ಹೊತ್ತೊಯ್ಯಬಲ್ಲದು.
  • ಅದು 43.43 ಮೀಟರ್ ಎತ್ತರ ಇದೆ. ಇದು 13 ಮಹಡಿಗಳಷ್ಟು ಎತ್ತರ.[]

ಜಿಎಸ್‌ಎಲ್‌ವಿ ಮಾರ್ಕ್ 3 ಡಿ 1: ಹೆಚ್ಚಿನ ವಿವರ

[ಬದಲಾಯಿಸಿ]
  • ಸಂವಹನ ಉಪಗ್ರಹವ ಜಿಎಸ್ಎಟಿ -19 + ನ್ನು ಹೊತ್ತೊಯ್ಯುವ ಜಿಎಸ್ಎಲ್ವಿ ಎಂಕೆ 3-ಡಿ 1 ರಾಕೆಟ್ , 5. 28 ಗಂಟೆಗೆ ಶ್ರೀಹರಿಕೋಟದಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಎರಡನೇ ಬಿಡುಗಡೆ ಪ್ಯಾಡ್ನಿಂದ ಹೊರಬಂದಿತು. ಹೊರಹೋದ 16 ನಿಮಿಷಗಳ ನಂತರ, ವಾಹನಗಳು ಉಪಗ್ರಹವನ್ನು ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಯಲ್ಲಿ ಇರಿಸಿದೆ.
  • ಜಿಸಾಟ್ -19 ಟ್ರಾನ್ಸ್ಪೋಂಡರ್ಗಳನ್ನು ಮತ್ತು ಭೂಸ್ಥಾಯೀ ವಿಕಿರಣ ವರ್ಣಪಟಲವನ್ನು ಒಯ್ಯಿತು. ಸಾಧನವು ಚಾರ್ಜ್ಡ್ ಕಣಗಳ ಸ್ವಭಾವವನ್ನು ಮತ್ತು ಉಪಗ್ರಹಗಳ ಮೇಲಿನ ಬಾಹ್ಯಾಕಾಶ ವಿಕಿರಣದ ಪ್ರಭಾವ ಮತ್ತು ಅವುಗಳ ಎಲೆಕ್ಟ್ರಾನಿಕ್ ಘಟಕಗಳ ಮೇಲ್ವಿಚಾರಣೆ ಮತ್ತು ಅಧ್ಯಯನ ಮಾಡುತ್ತದೆ.
  • ಉSಐಗಿ ಒಞ III ರಾಕೆಟ್: ಸಂವಹನಗಳಲ್ಲಿ ಹೊಸ ಆಟದ-ಶಿಸ್ತಿನ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು
  • 1. ಜಿಎಸ್ಎಲ್ವಿ ಎಂ.ಕೆ. III ಡಿ 1 ರಾಕೆಟ್ ; ದಿ.5-6-.2017; 5.28 ಕ್ಕೆ ಚಿಮ್ಮಿಸಲು ನಿರ್ಧರಿಸಲಾಗಿದೆ; ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಪ್ಯಾಡ್ನಿಂದ.
  • 2. ಜಿಎಸ್ಎಲ್ವಿ ಎಂ.ಕೆ. III ಡಿ 1 ಮೂರು ಹಂತದ ವಾಹನ. ಸ್ಥಳೀಯ ಕ್ರೈಯೊಜೆನಿಕ್ ಮೇಲ್ ಹಂತದ ಎಂಜಿನ್; ಭಾರವಾದ ಸಂವಹನ ಉಪಗ್ರಹಗಳನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್ಫರ್ ಆರ್ಬಿಟ್ (ಜಿಟಿಓ) ಗೆ ಸಾಗಿಸಲು ವಿನ್ಯಾಸಗೊಳಿಸಲಾಗಿದೆ.
  • 3. ಕ್ರೈಯೊಜೆನಿಕ್ ಎಂಜಿನ್ನಿಂದ ಹೊರತುಪಡಿಸಿ, 28 ಟನ್ಗಳಷ್ಟು ಪ್ರೊಪೆಲ್ಲೆಂಟ್ಗಳನ್ನು ಹೊಂದಿರುವ ಅ25 ಎಂಬ ಹೆಸರಿನಿಂದ ಕರೆಯಲ್ಪಡುವ ಇದು ಎರಡು ಘನ ಪಟ್ಟಿ-ಮೋಟರ್ (ಎಸ್ 200) ಮತ್ತು ಒಂದು ಕೋರ್ ದ್ರವ ಬೂಸ್ಟರ್ (ಎಲ್ 110) ಅನ್ನು ಹೊಂದಿದೆ.
  • 4.ಈ ಕಾರ್ಯಾಚರಣೆ (ಮಿಷನ್) ಗಮನಾರ್ಹವಾಗಿದೆ
  • ಜಿಎಸ್ಎಲ್ವಿ ಎಂ.ಕೆ. III; , ಐದು ಪೂರ್ಣ-ಲೋಡ್ ಬೋಯಿಂಗ್ ಜಂಬೋ ಜೆಟ್ಸ್ನ ತೂಕಕ್ಕೆ ಸಮನಾಗಿರುತ್ತದೆ ಅಥವಾ 200 ಸಂಪೂರ್ಣ ಬೆಳೆದ ಆನೆಗಳಷ್ಟು ತೂಗುತ್ತದೆ, ಇದು ನಮ್ಮ ಸ್ವಂತ ನೆಲದಿಂದ ಹಾರುವ ಅತ್ಯಂತ ಹೆಚ್ಚು ತೂಕದ ರಾಕೆಟ್, ಈವರೆಗೆ ಇಸ್ರೋ 2,300 ಕ್ಕಿಂತ ಹೆಚ್ಚು ತೂಕವಿರುವ ಸಂವಹನ ಉಪಗ್ರಹಗಳಿಗೆ ವಿದೇಶಿ ಉಡಾವಣಾ ಸಾಧನಗಳನ್ನು ಅವಲಂಬಿಸಿತ್ತು.
  • 5. ಜಿಎಸ್ಎಲ್ವಿ ಎಂ.ಕೆ III ಡಿ 1 - 4000 ಕೆಜಿ ವರೆಗೆ ಜಿಟೆಓ ಮತ್ತು 10,000 ಕೆ.ಜಿ.ವರೆಗಿನ ತೂಕದ ವಸ್ತುವನ್ನು ಕಡಿಮೆ ಭೂ ಕಕ್ಷೆಗೆ ಏರಿಸುವ ಸಾಮರ್ಥ್ಯ ಹೊಂದಿದೆ.
  • 6. ಈ ಮಿಷನ್ ಈಕೆಳಗಿನ ವಿಷಯಗಳಲ್ಲಿ ಸಹ ಉಪಯೋಗ:
  • ಎ) ಭಾರತದ ಸಂವಹನ ಸಂಪನ್ಮೂಲಗಳನ್ನು ಹೆಚ್ಚಿಸುತ್ತದೆ
  • ಬಿ) ಒಂದೇ ಜಿಎಸ್ಎಟಿ -19 ಉಪಗ್ರಹವು ಬಾಹ್ಯಾಕಾಶದಲ್ಲಿ ಆರರಿಂದ ಏಳು ಹಳೆಯ ಸಂವಹನ ಉಪಗ್ರಹಗಳ ಸಮೂಹವನ್ನು ಹೊಂದಿರುವವುದಕ್ಕೆ ಸಮನಾಗಿರುತ್ತದೆ.
  • 7. ಇದು ಭಾರತದ ಭವಿಷ್ಯದ ರಾಕೆಟ್ ಆಗಿದ್ದು, ನಿಸ್ಸಂದೇಹವಾಗಿ ಮಾನವನ ಗಗನೌಟ್ಸ್ ಅಥವಾ ವ್ಯೋಮನಾಟ್ಸ್ ಎಂದು ಹೆಸರಿಸಬಹುದಾದ ಭಾರತೀಯ ಗಗನಯಾತ್ರಿಗಳನ್ನು ಸಾಗಿಸಬಹುದೆಂದು ನಿರ್ಣಯಿಸಲಾಗಿದೆ. ಮಾಜಿ ಇಸ್ರೋ ಅಧ್ಯಕ್ಷ ಕೆ ಕಸ್ತೂರಿರಂಗನ್ ಅವರು ಜಿಎಸ್ಎಲ್ವಿ ಎಂ.ಕೆ. III ಅನ್ನು ರಚಿಸಿದ ವ್ಯಕ್ತಿ; ಬಾಹ್ಯಾಕಾಶಕ್ಕೆ ಭಾರತೀಯರನ್ನು ಆಕಾಶನೌಕೆಯಲ್ಲಿ ಸಾಗಿಸುವ ಸ್ವ-ದೇಶದ ವಾಹನ ಎಂದು ಖಚಿತಪಡಿಸುತ್ತಾರೆ.
  • 8. ಜಿಸಾಟ್ -19 ಅತ್ಯಂತ ನವೀನ ಅಭಿವೃದ್ಧಿಯಾಗಿದ್ದು, ಮೊದಲ ಬಾರಿಗೆ ಉಪಗ್ರಹದಲ್ಲಿ ಯಾವುದೇ ಟ್ರಾನ್ಸ್ಪೋರ್ಡರ್ಗಳಿರುವುದಿಲ್ಲ. ಬದಲಿಗೆ ಮೊದಲ ಬಾರಿಗೆ, ಇಸ್ರೊ ಅನೇಕ ಹೊಸ ಆವರ್ತನ ಕಿರಣಗಳನ್ನು ಬಳಸಿಕೊಂಡು ಡೇಟಾವನ್ನು ಕೆಳಗಿಳಿಸುವ ಮೂಲಕ ಹೊಸ ರೀತಿಯಲ್ಲಿ ಬಳಸುತ್ತಿದೆ ಮತ್ತು ಆದ್ದರಿಂದ ಇದನ್ನು " ಹೆಚ್ಚಿನ ಸಂವಹನದ ಮೂಲಕ ಒಟ್ಟುಗೂಡಿದ (ಪುಟ್) ಸ್ಯಾಟಲೈಟ್ " ಎಂದು ಕರೆಯಲಾಗುತ್ತದೆ.
  • 9. ಜಿಸಾಟ್ -19 ದೇಶೀಯವಾಗಿ ತಯಾರಿಸಿದ ಲಿಥಿಯಂ-ಅಯಾನ್ ಬ್ಯಾಟರಿಗಳೊಂದಿಗೆ ಮೊದಲ ಬಾರಿಗೆ ಚಾಲಿತಗೊಳ್ಳಲಿದೆ. ಈ ಬ್ಯಾಟರಿಗಳನ್ನು ಮಾಡಲಾಗಿದ್ದು, ಇದರಿಂದಾಗಿ ಭಾರತದ ಸ್ವಾವಲಂಬನೆ ಅಂಶವು ಹೆಚ್ಚಾಗುತ್ತದೆ. ಇದಲ್ಲದೆ, ಇದೇ ರೀತಿಯ ಬ್ಯಾಟರಿಗಳನ್ನು ನಂತರ ಕಾರುಗಳು ಮತ್ತು ಬಸ್ಸುಗಳಂತಹ ವಿದ್ಯುತ್ ವಾಹನಗಳಿಗೆ ಬಳಸಬಹುದು.
  • 10. ಐಸರೊ "ಜಿನಟ್ -19" ಕೆಲವು ಸುಧಾರಿತ ಗಗನನೌಕೆ ತಂತ್ರಜ್ಞಾನಗಳನ್ನು "ಸೂಕ್ಷ್ಮಗೊಳಿಸಿದ ಶಾಖ ಪೈಪ್, ಫೈಬರ್ ಆಪ್ಟಿಕ್ ಗೈರೊ, ಮೈಕ್ರೋ ಎಲೆಕ್ಟ್ರೋ-ಮೆಕ್ಯಾನಿಕಲ್ ಸಿಸ್ಟಮ್ಸ್ (ಒಇಒS) ಅಕ್ಸೆಲೆರೊಮೀಟರ್" ಅನ್ನು ಒಳಗೊಂಡಿದೆ. ಇವುಗಳ ಎಲ್ಲಾ ಪ್ರಮುಖ ಬೆಳವಣಿಗೆಗಳನ್ನು ಪರೀಕ್ಷಿಸಲಾಗಿರುವುದರಿಂದ ಭವಿಷ್ಯದ ಕಾರ್ಯಾಚರಣೆಗಳಲ್ಲಿ ಅವು ಮುಖ್ಯವಾದ ವ್ಯವಸ್ಥೆಗಳಾಗುತ್ತವೆ.[]

ಉಲ್ಲೇಖ

[ಬದಲಾಯಿಸಿ]
  1. ೧.೦ ೧.೧ ೧.೨ "GSLV Mk III - ISRO". Archived from the original on 5 ಜೂನ್ 2017. Retrieved 6 June 2017.
  2. "ISRO successfully launches GSLV Mark-III, India's largest rocket". The Hindu. Retrieved 18 December 2014.
  3. "'Fat Boy' GSLV-MK III launches today: The rocket has cost India Rs 400 cr". Business_Standard. Retrieved 5 June 2017.
  4. ಜಿಎಸ್‌ಎಲ್‌ವಿ;ಯಶಸ್ವಿಯಾಗಿ ಕಕ್ಷೆ ಸೇರಿದ ಜಿಸ್ಯಾಟ್‌ –19 ಉಪಗ್ರಹ;5 Jun, 2017
  5. Jun 5, 2017, 08.23AM IST Agencies;GSLV Mk III rocket: All you need to know about this game-changer in communications