ವಿಷಯಕ್ಕೆ ಹೋಗು

ಕೆ. ರಾಧಾಕೃಷ್ಣನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Koppillil Radhakrishnan
2013 ರಲ್ಲಿ ರಾಧಾಕೃಷ್ಣನ್
ಜನನ (1949-08-29) ೨೯ ಆಗಸ್ಟ್ ೧೯೪೯ (ವಯಸ್ಸು ೭೫)
ಇರಿಂಜಲಕುಡಾ,
ಟ್ರಾವಂಕೂರ್-ಕೊಚ್ಚಿನ್,
ಡೊಮಿನಿಯನ್ ಆಫ್ ಇಂಡಿಯಾ
ಕಾರ್ಯಕ್ಷೇತ್ರಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮತ್ತು ಬಾಹ್ಯಾಕಾಶ ಸಂಶೋಧನೆ
ಸಂಸ್ಥೆಗಳುವಿಎಸ್ಎಸ್ಸಿ, ಇಸ್ರೋ
ಅಭ್ಯಸಿಸಿದ ವಿದ್ಯಾಪೀಠಐಐಟಿ ಖರಗ್ಪುರ್ (ಪಿಎಚ್ಡಿ, 2000)
ಐಐಎಂ ಬೆಂಗಳೂರು (ಪಿಜಿಡಿಎಂ, 1976)
ಸರ್ಕಾರಿ ಇಂಜಿನಿಯರಿಂಗ್ ಕಾಲೇಜು , ತ್ರಿಶೂರ್ | ಸರ್ಕಾರಿ ಎಂಜಿನ್ ಕಾಲೇಜ್ ತ್ರಿಶ್ಶುರ್]] (ಬಿಎಸ್ಸಿ ಎಂಜಿನ್, 1970)
ಪ್ರಸಿದ್ಧಿಗೆ ಕಾರಣಚಂದ್ರಯಾನ, MOM
ಗಮನಾರ್ಹ ಪ್ರಶಸ್ತಿಗಳುಪದ್ಮಭೂಷಣ (2014)[]

ಡಾ. ಕೊಪ್ಪಳ್ಳಿಲ್ ರಾಧಾಕೃಷ್ಣನ್ ಒಬ್ಬ ಸರ್ವಶ್ರೇಷ್ಠ ತಂತ್ರಪ್ರವೀಣರಾಗಿದ್ದಾರೆ; ಸಕಾರಾತ್ಮಕ ಮನೋಭಾವದ ಸಮರ್ಥ ಮತ್ತು ದಕ್ಷ ನಿರ್ವಾಹಕ; ಮತ್ತು ಅಪರೂಪದ ಕೌಶಲ್ಯದ ಸ್ಪೂರ್ತಿದಾಯಕ ನಾಯಕರು.[][][][]

ಡಾ ರಾಧಾಕೃಷ್ಣನ್ ಕೇರಳದಲ್ಲಿರುವ ಇರಿಂಜಲಕುಡ ಎಂಬ ಊರಲ್ಲಿ, ಆಗಸ್ಟ್ ೨೯, ೧೯೪೯ ರಂದು ಜನಿಸಿದರು. ಅವರು ಕೇರಳ ವಿಶ್ವವಿದ್ಯಾನಿಲಯದಿಂದ (೧೯೭೦) ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ, ಭಾರತೀಯ ಮ್ಯಾನೇಜ್ಮೆಂಟ್ ಸಂಸ್ಥೆ, ಬೆಂಗಳೂರಿನಿಂದ (೧೯೭೬) ತಮ್ಮ ಪಿಜಿಡಿಎಮಎಂ ಪೂರ್ಣಗೊಳಿಸಿದರು ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಖರಗ್ಪುರದಿಂದ "ಭಾರತೀಯ ಭೂ ವೀಕ್ಷಣೆಯ ವ್ಯವಸ್ಥೆ ಕೆಲವು ಸ್ಟ್ರಾಟಜೀಸ್" ಶಿರೋನಾಮೆಯ ಜೀವನ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದರು.

ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ಏವಿಯಾನಿಕ್ಸ್ ಇಂಜಿನಿಯರ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು, ಅವರು ಬಾಹ್ಯಾಕಾಶ ಉಡಾವಣಾ ವ್ಯವಸ್ಥೆಗಳ ಅನ್ವಯಗಳು ಮತ್ತು ಬಾಹ್ಯಾಕಾಶ ಕಾರ್ಯಕ್ರಮ ನಿರ್ವಹಣೆಯ ಕ್ಷೇತ್ರಗಳಲ್ಲಿ ಇಸ್ರೋದಲ್ಲಿ ಹಲವು ನಿರ್ಧಾರಕ ಸ್ಥಾನಮಾನಗಳನ್ನು ಹೊಂದಿದ್ದರು. ಅವರು ಭಾರತೀಯ ಸಾಗರ ಮಾಹಿತಿ ಸೇವೆಗಳ ರಾಷ್ಟ್ರೀಯ ಕೇಂದ್ರದ ಯೋಜನಾ ನಿರ್ದೇಶಕರಾಗಿದ್ದರು. ಅವರು ಇಂಟರ್ಗವರ್ನಮೆಂಟಲ್ ಓಷನೋಗ್ರಫಿಕ್ ಕಮಿಷನ್‍ನ ಉಪಾಧ್ಯಕ್ಷರಾಗಿದ್ದರು. ಹಿಂದೂ ಮಹಾಸಾಗರದ ಜಾಗತಿಕ ಸಾಗರ ವೀಕ್ಷಣಾ ವ್ಯವಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. 2006 ರಿಂದ ಅವರು ಬಾಹ್ಯಾಕಾಶದ ಶಾಂತಿಯುತ ಬಳಕೆ ಕುರಿತ ವಿಶ್ವಸಂಸ್ಥೆ ಸಮಿತಿಯ ಭಾರತೀಯ ನಿಯೋಗದ ಸಕ್ರಿಯ ಸದಸ್ಯರಾಗಿದ್ದಾರೆ. ಅವರು ೨೦೦೧-೨೦೦೫ ರಿಂದ ಯುನೆಸ್ಕೋದ ಅಂತರ ಸರ್ಕಾರಿ ಸಮುದ್ರಶಾಸ್ತ್ರೀಯ ಆಯೋಗದ ಉಪಾಧ್ಯಕ್ಷರಾಗಿದ್ದರು. ಜೊತೆಗೆ ಅವರು ಕರ್ನಾಟಕ ಸಂಗೀತದಲ್ಲಿ ನಿಪುಣ ಗಾಯಕ ಮತ್ತು ಕಥಕ್ಕಳಿ ಉತ್ಸಾಹಿ. ೨೦೧೪ ರಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ತಮ್ಮ ಪ್ರಚಂಡ ಕೊಡುಗೆಗಾಗಿ ಪದ್ಮ ಭೂಷಣ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಡಾ ರಾಧಾಕೃಷ್ಣನ್ ಚಂದ್ರಯಾನ ಕಾರ್ಯಾಚರಣೆಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು.[]

ಉಲ್ಲೇಖಗಳು

[ಬದಲಾಯಿಸಿ]
  1. "List of Padma awardees(accessdate=26 January 2014)". ದಿ ಹಿಂದೂ. 25 January 2014.
  2. "Isro, IISc men get top national honour". ದಿ ಟೈಮ್ಸ್ ಆಫ್‌ ಇಂಡಿಯಾ. 26 January 2014. {{cite news}}: Cite has empty unknown parameter: |dead-url= (help)
  3. "Board stamp on IIEST upgrade". The Telegraph. 3 January 2015. Archived from the original on 28 ಡಿಸೆಂಬರ್ 2016. {{cite news}}: Cite has empty unknown parameter: |dead-url= (help)
  4. "Board of Management". Indian Institute of Space Science and Technology. 2013. Archived from the original on 2013-05-16. Retrieved 2017-07-28.
  5. "Dr K Radhakrishnan made ISRO chief". Hindustan Times. 24 October 2009. Archived from the original on 27 ಅಕ್ಟೋಬರ್ 2009. {{cite news}}: Cite has empty unknown parameter: |dead-url= (help)
  6. Radhakrishnan, M. G. "New ISRO chief a noted Kathakali dancer". India Today. {{cite news}}: Cite has empty unknown parameter: |dead-url= (help)


ಬಾಹ್ಯ ಕೊಂಡಿಗಳು

[ಬದಲಾಯಿಸಿ]

Media related to K. Radhakrishnan at Wikimedia Commons

Government offices
Preceded by
ಜಿ. ಮಾಧವನ್ ನಾಯರ್
ಇಸ್ರೋ ಅಧ್ಯಕ್ಷ
2009–2014
Succeeded by
ಶೈಲೇಶ್ ನಾಯಕ್