ವಿಷಯಕ್ಕೆ ಹೋಗು

ಸುಧೀಂದ್ರ ವೆಂಕಟೇಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಿ.ಜಿ. ವೆಂಕಟೇಶ್
ಸುಧೀಂದ್ರ ವೆಂಕಟೇಶ್
ಜನನ (1968-05-21) ೨೧ ಮೇ ೧೯೬೮ (ವಯಸ್ಸು ೫೬)
ಇತರೆ ಹೆಸರುಸುಧೀಂದ್ರ ವೆಂಕಟೇಶ್
ವೃತ್ತಿ(ಗಳು)ಸಾರ್ವಜನಿಕ ಸಂಪರ್ಕ ಅಧಿಕಾರಿ, ಚಲನಚಿತ್ರ ಪ್ರಚಾರಕರ್ತರು
ಸಕ್ರಿಯ ವರ್ಷಗಳು1985– ಪ್ರಸ್ತುತ
ಸಂಗಾತಿ
ಮಂಜುಳ
(m. ೧೯೯೭)
ಮಕ್ಕಳು
ಪೋಷಕಗುರುರಾಜ್ ಮತ್ತು ಸುಧಾ

ಸುಧೀಂದ್ರ ವೆಂಕಟೇಶ್ ಎಂಬ ಹೆಸರಿನಿಂದ ಖ್ಯಾತರಾಗಿರುವ ಡಿ.ಜಿ. ವೆಂಕಟೇಶ್ ಕಳೆದ ನಾಲ್ಕು ದಶಕಗಳಿಂದ ಕನ್ನಡ ಚಲನಚಿತ್ರ ಉದ್ಯಮದಲ್ಲಿ ಸಿನಿಮಾ ಪ್ರಚಾರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.[]

ಪ್ರಾರಂಭಿಕ ಜೀವನ

[ಬದಲಾಯಿಸಿ]

ಸುಧಾ ಮತ್ತು ಗುರುರಾಜ್ ದಂಪತಿಗಳಿಗೆ ೨೧ ಮೇ ೧೯೬೮ರಲ್ಲಿ ಬೆಂಗಳೂರಲ್ಲಿ ಜನಿಸಿದರು.ಪ್ರಾಥಮಿಕ ಹಾಗೂ ಪದವಿಪೂರ್ವ ಶಿಕ್ಷಣವನ್ನು ಬೆಂಗಳೂರಿನಲ್ಲಿಯೇ ಪೂರೈಸಿದರು.

ವೃತ್ತಿ ಜೀವನ

[ಬದಲಾಯಿಸಿ]

ಡಿ.ವಿ. ಸುಧೀಂದ್ರ ಅವರು ೧೯೭೬ರಲ್ಲಿ ಚಲನಚಿತ್ರಗಳ ಪ್ರಚಾರ ಕಾರ್ಯಕ್ಕಾಗಿ ಸ್ಥಾಪಿಸಿದ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯಲ್ಲಿ ಡಿ.ವಿ. ಸುಧೀಂದ್ರ ಅವರ ಸಹಾಯಕರಾಗಿ ೧೯೮೫ರಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.[] ೨೦೦೬ರವರೆಗೆ ಸುಧೀಂದ್ರ ಅವರ ಸಹಾಯಕರರಾಗಿದ್ದ ವೆಂಕಟೇಶ್‌,ಅವರ ಬಳಿಕ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸಂಪೂರ್ಣ ಜವಾಬ್ದಾರಿ ಹೊತ್ತರು.[] ಅದೇ ವರ್ಷ ಬಿಡುಗಡೆಯಾದ ಕನ್ನಡ ಚಲನಚಿತ್ರ "ಮುಂಗಾರು ಮಳೆ", ಇವರು ಪೂರ್ಣಪ್ರಮಾಣದಲ್ಲಿ ಪ್ರಚಾರಕರ್ತರಾಗಿ ಕಾರ್ಯನಿರ್ವಹಿಸಿದ ಮೊದಲ ಚಿತ್ರವಾಯಿತು. ಸುಮಾರು ೧೨೦೦ಕ್ಕೂ ಮಿಕ್ಕಿ ಚಿತ್ರಗಳಿಗೆ ವೆಂಕಟೇಶ್‌ ಅವರು, ಪ್ರಚಾರಕರ್ತ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಈ ಚಲನಚಿತ್ರಗಳಲ್ಲಿ ಕನ್ನಡದ ಅತ್ಯಂತ ಜನಪ್ರಿಯ ಚಿತ್ರಗಳಾದ ದುನಿಯಾ, ಕೆ.ಜಿ.ಎಫ್.‌ ಭಾಗ ಒಂದು ಮತ್ತು ಎರಡು,ಐಶ್ವರ್ಯ, ಕಾಂತಾರ, ೭೭೭ ಚಾರ್ಲಿ, ರಾಜಕುಮಾರ, ಆಪ್ತಮಿತ್ರ ಮುಂತಾದವು ಸೇರಿವೆ. ಚಿತ್ರ ನಿರ್ಮಾಣ ಸಂಸ್ಥೆಗಳಾದ ಹೊಂಬಾಳೆ ಫಿಲಂಸ್, ರಾಕ್ಲೈನ್ ಪ್ರೊಡಕ್ಷನ್ಸ್, ಜಯಣ್ಣ ಕಂಬೈನ್ಸ್, ಶೈಲೇಂದ್ರ ಪ್ರೊಡಕ್ಷನ್ಸ್, ರಾಮೋಜಿ ಫಿಲಂಸ್, ಉಪೇಂದ್ರ ಪ್ರೊಡಕ್ಷನ್ಸ್, ಕಿಚ್ಚ ಕ್ರಿಯೇಷನ್ಸ್, ತೂಗುದೀಪ ಪ್ರೊಡಕ್ಷನ್ಸ್, ಪುಷ್ಕರ್ ಫಿಲಂಸ್, ಎಸ್.ವಿ ಪ್ರೊಡಕ್ಷನ್ಸ್ ಮುಂತಾದ ಸಂಸ್ಥೆಗಳ ಎಲ್ಲಾ ಚಲನಚಿತ್ರಗಳಿಗೂ ಇವರೇ ಪ್ರಚಾರಕರ್ತರು ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದಾರೆ.[]

ಪ್ರಶಸ್ತಿಗಳು

[ಬದಲಾಯಿಸಿ]

ಬೆಂಗಳೂರು ಮಹಾನಗರ ಪಾಲಿಕೆ ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಯೂನಿಯನ್ ಪತ್ರಿಕಾ ಪ್ರಶಸ್ತಿ, ನಗರ ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ, ವಿಐಪಿ ನ್ಯೂಸ್ ಕರ್ನಾಟಕ ಪ್ರಶಸ್ತಿ, ಆರ್ಯಭಟ ಸಾಂಸ್ಕೃತಿಕ ಪ್ರಶಸ್ತಿ ಸೇರಿ ಇನ್ನೂ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಉಲ್ಲೇಖ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Kannada film industry's leading PRO Sudheendra Venkatesh".
  2. ""ದ ಹಿಂದು" ಪತ್ರಿಕೆಯ ಜಾಲತಾಣದಲ್ಲಿ ಪ್ರಕಟವಾಗಿರುವ ವರದಿ".
  3. "22nd Sri Raghavendra Chitravani Awards".
  4. "ಕನ್ನಡ ಸಿನಿಲೋಕದ ಜನಪ್ರಿಯ ಪ್ರಚಾರಕ ಸುಧೀಂದ್ರ ವೆಂಕಟೇಶ್".