ಶ್ರೇಯಾಸ್ ಗೋಪಾಲ್
ವಯಕ್ತಿಕ ಮಾಹಿತಿ | |||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ರಾಮಸ್ವಾಮಿ ಶ್ರೇಯಸ್ ಗೋಪಾಲ್ | ||||||||||||||||||||||||||||||||||||||||||||||||||||
ಹುಟ್ಟು | ಬೆಂಗಳೂರು, ಕರ್ನಾಟಕ, ಭಾರತ | ೪ ಸೆಪ್ಟೆಂಬರ್ ೧೯೯೩||||||||||||||||||||||||||||||||||||||||||||||||||||
ಬ್ಯಾಟಿಂಗ್ | ಬಲಗೈ | ||||||||||||||||||||||||||||||||||||||||||||||||||||
ಬೌಲಿಂಗ್ | ಬಲಗೈ ಲೆಗ್ ಬ್ರೇಕ್ | ||||||||||||||||||||||||||||||||||||||||||||||||||||
ಪಾತ್ರ | ಆಲ್ ರೌಂಡರ್ | ||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | |||||||||||||||||||||||||||||||||||||||||||||||||||||
ವರ್ಷಗಳು | ತಂಡ | ||||||||||||||||||||||||||||||||||||||||||||||||||||
2013/14–2022/23 | ಕರ್ನಾಟಕ | ||||||||||||||||||||||||||||||||||||||||||||||||||||
2014–2017 | ಮುಂಬೈ ಇಂಡಿಯನ್ಸ್ (squad no. ೧೯) | ||||||||||||||||||||||||||||||||||||||||||||||||||||
2018–2021 | ರಾಜಸ್ಥಾನ್ ರಾಯಲ್ಸ್ (squad no. ೩೭) | ||||||||||||||||||||||||||||||||||||||||||||||||||||
2022 | ಸನ್ ರೈಸರ್ಸ್ ಹೈದರಾಬಾದ್ | ||||||||||||||||||||||||||||||||||||||||||||||||||||
2023– | ಕೇರಳ ಕ್ರಿಕೆಟ್ ತಂಡ | ||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | |||||||||||||||||||||||||||||||||||||||||||||||||||||
| |||||||||||||||||||||||||||||||||||||||||||||||||||||
ಮೂಲ: ESPNcricinfo, ೪ ಮೇ ೨೦೧೯ |
ರಾಮಸ್ವಾಮಿ ಶ್ರೇಯಾಸ್ ಗೋಪಾಲ್[೧] (ಜನನ 4 ಸೆಪ್ಟೆಂಬರ್ 1993). ಇವರು ಒಬ್ಬ ಭಾರತೀಯ ಕ್ರಿಕೆಟಿಗರು. ಇವರು ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತಾರೆ. ಕರ್ನಾಟಕ ತಂಡದ ಆಟಗಾರ. ಇವರು ಆಲ್ ರೌಂಡರ್ ಆಗಿದ್ದು, ಬಲಗೈನಲ್ಲಿ ಬ್ಯಾಟ್ ಮಾಡುತ್ತಾರೆ ಮತ್ತು ಬೌಲ್ ಲೆಗ್ ಬ್ರೇಕ್ ಮಾಡುತ್ತಾರೆ. ಇವರು ೨೦೧೧ ರಲ್ಲಿ ಭಾರತ ಅಂಡರ್ -೧೯ ಕ್ರಿಕೆಟ್ ತಂಡಕ್ಕಾಗಿ ಮೂರು ಏಕದಿನ ಪಂದ್ಯಗಳನ್ನು ಆಡಿದರು.[೨] ೧೩ ವರ್ಷದೊಳಗಿನವರು, ೧೫ ವರ್ಷದೊಳಗಿನವರು, ೧೬ ವರ್ಷದೊಳಗಿನವರು ಮತ್ತು ೧೯ ವರ್ಷದೊಳಗಿನವರಂತಹ ವಿವಿಧ ವಯೋಮಾನದ ಹಂತಗಳಲ್ಲಿ ಕರ್ನಾಟಕ ಕ್ರಿಕೆಟ್ ತಂಡದ ನಾಯಕತ್ವ ವಹಿಸಿದ್ದರು.[೩]
ವೈಯಕ್ತಿಕ ಜೀವನ
[ಬದಲಾಯಿಸಿ]ಶ್ರೇಯಸ್ ಗೋಪಾಲ್ ದಿ ಫ್ರಾಂಕ್ ಆಂಥೋನಿ ಪಬ್ಲಿಕ್ ಸ್ಕೂಲ್, ಬೆಂಗಳೂರು ನಲ್ಲಿ ಓದಿದ್ದಾರೆ. ಅವರು ಜೈನ್ ವಿಶ್ವವಿದ್ಯಾನಿಲಯದಿಂದ ತಮ್ಮ ಬಿಕಾಮ್ (ಬ್ಯಾಚುಲರ್ ಆಫ್ ಕಾಮರ್ಸ್) ಅನ್ನು ಪೂರ್ಣಗೊಳಿಸಿದರು.[೪]
ಅವರ ತಂದೆ ರಾಮಸ್ವಾಮಿ ಗೋಪಾಲ್ ಅವರು ೨೦ ವರ್ಷಗಳ ಕಾಲ ಕ್ಲಬ್ ಕ್ರಿಕೆಟಿಗರಾಗಿದ್ದರು, ಅವರ ತಾಯಿ ಅಮಿತಾ ರಾಜ್ಯ ಮಟ್ಟದಲ್ಲಿ ವಾಲಿಬಾಲ್ ಆಡುತ್ತಿದ್ದರು.[೫] ಅವರ ಬಾಲ್ಯದಲ್ಲಿ ಅವರು ತಮ್ಮ ರೋಲ್ ಮಾಡೆಲ್ ಆಗಿ ಅನಿಲ್ ಕುಂಬ್ಳೆ ಬೌಲಿಂಗ್ ಕ್ರಮವನ್ನು ಅನುಕರಿಸಲು ಇಷ್ಟಪಟ್ಟರು.[೬]
ದೇಶೀಯ ವೃತ್ತಿ
[ಬದಲಾಯಿಸಿ]ಗೋಪಾಲ್ 2013 ರಲ್ಲಿ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದರು. ಫೆಬ್ರವರಿ 12, 2014 ರಂದು, ಗೋಪಾಲ್ ಇರಾನಿ ಕಪ್ ಇತಿಹಾಸದಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಮೊದಲ ಹ್ಯಾಟ್ರಿಕ್ ಹೊಡೆದರು, ಇದು ಕರ್ನಾಟಕಕ್ಕೆ ಇರಾನಿ ಕಪ್ ಗೆಲ್ಲಲು ಸಹಾಯ ಮಾಡಿತು.[೭] ಆಗಸ್ಟ್ ೨೦೧೯ ರಲ್ಲಿ, ೨೦೧೯–೨೦ ದುಲೀಪ್ ಟ್ರೋಫಿಗಾಗಿ ಇಂಡಿಯಾ ಬ್ಲೂ ತಂಡದಲ್ಲಿ ಅವರು ಸ್ಥಾನವನ್ನು ಪಡೆದರು.[೮][೯]
ಅಕ್ಟೋಬರ್ ೨೦೧೮ ರಲ್ಲಿ, ೨೦೧೮–೧೯ ದೇವಧರ್ ಟ್ರೋಫಿಗಾಗಿ ಭಾರತದ ಎ ಕ್ರಿಕೆಟ್ ತಂಡದಲ್ಲಿ ಅವರನ್ನು ಹೆಸರಿಸಲಾಯಿತು.[೧೦]
ಇಂಡಿಯನ್ ಪ್ರೀಮಿಯರ್ ಲೀಗ್
[ಬದಲಾಯಿಸಿ]೨೦೧೪ ರ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಇವರನ್ನು ಖರೀದಿಸಿದರು, ಅಲ್ಲಿ ಅವರು ನಾಲ್ಕು ಋತುಗಳನ್ನು ಕಳೆದರು.
ಜನವರಿ ೨೦೧೮ ರಲ್ಲಿ, ಇವರನ್ನು ೨೦೧೮ ರ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಖರೀದಿಸಿತು.[೧೧] ೩೦ ಏಪ್ರಿಲ್ ೨೦೧೯ ರಂದು, ಇವರು ೨೦೧೯ ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ೩ ಸತತ ವಿಕೆಟ್‌ಗಳನ್ನು ತೆಗೆದರು, ಇದರಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರ ವಿಕೆಟ್‌ಗಳು ಸೇರಿವೆ.[೧೨] ಶ್ರೇಯಸ್ ಗೋಪಾಲ್ ಐಪಿಎಲ್‌ನ ಅತಿ ಕಡಿಮೆ ಪಂದ್ಯಗಳಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.[೧೩]
ಫೆಬ್ರವರಿ ೨೦೨೨ ರಲ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗಾಗಿ ೨೦೨೨ ಹರಾಜಿನಲ್ಲಿ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ಖರೀದಿಸಿತು.[೧೪]
೨೦೨೪ ರ ಐಪಿಎಲ್ ಹರಾಜಿನಲ್ಲಿ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿಸಿದರು.
ಉಲ್ಲೇಖಗಳು :
[ಬದಲಾಯಿಸಿ]- ↑ "Shreyas Gopal - CricketArchive profile". CricketArchive.
- ↑ "Under-19 ODI Matches played by Shreyas Gopal". CricketArchive.
- ↑ "Rahul Dravid is my cricketing God, says Shreyas Gopal". Times of India. Retrieved 10 August 2014.
- ↑ Notable Alumni Jain University
- ↑ "Rahul Dravid is my cricketing God, says Shreyas Gopal | New Zealand in India 2016 News - Times of India".
- ↑ IANS. "No Pressure, But Dream to Don India Colors Soon: Shreyas Gopal". India West (in ಇಂಗ್ಲಿಷ್). Archived from the original on 8 ಜುಲೈ 2020. Retrieved 8 July 2020.
- ↑ "Shreyas Gopal records first hat-trick of Irani Cup history - Times of India". The Times of India. Retrieved 4 May 2019.
- ↑ "Shubman Gill, Priyank Panchal and Faiz Fazal to lead Duleep Trophy sides". ESPNcricinfo. Retrieved 6 August 2019.
- ↑ "Duleep Trophy 2019: Shubman Gill, Faiz Fazal and Priyank Panchal to lead as Indian domestic cricket season opens". Cricket Country. Retrieved 6 August 2019.
- ↑ "Rahane, Ashwin and Karthik to play Deodhar Trophy". ESPNcricinfo. Retrieved 19 October 2018.
- ↑ "List of sold and unsold players". ESPNcricinfo. Retrieved 27 January 2018.
- ↑ "Gopal hat-trick in washout, RCB eliminated". ESPNcricinfo. Retrieved 1 May 2019.
- ↑ Rajarshi Gupta (May 1, 2019). "IPL 2019: Shreyas Gopal of Rajasthan Royals claims a hat-trick in 5-over game vs RCB". India Today (in ಇಂಗ್ಲಿಷ್). Retrieved 29 August 2021.
- ↑ "IPL 2022 auction: The list of sold and unsold players". ESPNcricinfo. Retrieved 13 February 2022.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಕ್ರೀಡಾಪಟು ವಿವರ: ಶ್ರೇಯಾಸ್ ಗೋಪಾಲ್ - ಇಎಸ್ಪಿಎನ್ ಕ್ರಿಕ್ಇನ್ಪೊನಿಂದ
- Shreyas Gopal Archived 4 March 2016 ವೇಬ್ಯಾಕ್ ಮೆಷಿನ್ ನಲ್ಲಿ.'s profile page on Wisden