ವಿಷಯಕ್ಕೆ ಹೋಗು

ಭಾರತದ ಬೂದು ಮುಂಗಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಂಗುಸಿ
Conservation status
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಹರ್ಪ್ಸ್ಟಿಡೇ
ಉಪಕುಟುಂಬ:
ಹರ್ಪಿಸ್ಟಿನೇ
ಕುಲ:
ಹರ್ಪಿಸ್ಟೆಸ್
ಪ್ರಜಾತಿ:
ಎಚ್.ಎಡ್ವರ್ಡ್೬ಸಿ
Binomial name
ಹೆರ್ಪೆಸ್ಟ್ಸ್ ಎಡ್ವಡ್ಸಿ (Herpestes edwardsii)

ಮುಂಗಸಿ ಅಥವಾ ಮುಂಗುಸಿ (Indian Grey Mongoose) ಇದರ ವೈಜ್ಞಾನಿಕ ಹೆಸರು: ಹರ್ಪೆಸ್ಟಿಸ್ ಎಡ್ವಡ್ಸಿ (Herpestes edwardsi) ಭಾರತದಲ್ಲಿ ಎಲ್ಲೆಡೆ ಕಂಡು ಬರುವ ಪ್ರಾಣಿ. ದಟ್ಟ ಅರಣ್ಯ ಪ್ರದೇಶದಲ್ಲಿ ವಾಸಿಸದೆ ಹೆಚ್ಚಾಗಿ ಪೊದೆಗಳಲ್ಲಿ, ಹಳೆಯ ಮರದ ಪೊಟರೆಗಳಲ್ಲಿ, ಹುತ್ತಗಳ ಬಳಿಯಲ್ಲಿ ಕಾಣಸಿಗುವುದು. ಕಂದು ಹಳದಿಯ ಬೂದು ಛಾಯೆಯ ಮೈ ಬಣ್ಣ. ಇದರ ಮೈಮೇಲಿನ ರೋಮಗಳ ಮೇಲೆ ಕರಿ ಎಳೆಗಪ್ಪು ಬಣ್ಣದ ಉಂಗುರಗಳಂತಹ ಗುರುತು ಇರುವುದು. ಇಲಿ, ಹೆಗ್ಗಣ, ಹಾವು, ಕಪ್ಪೆ, ಚೇಳು, ಹಣ್ಣುಗಳು ಇವುಗಳ ಆಹಾರ. ಇದು ಹಾವುಗಳ ದ್ವೇಷಿ. ಹಾವುಗಳನ್ನು ತನ್ನ ಚಾಣಾಕ್ಷತನದಿಂದ ನಿಗ್ರಹಿಸುವುದರಲ್ಲಿ ಅಗ್ರಗಣ್ಯ. ಹಾವಿನ ವಿಷಕ್ಕೆ ಸ್ವಲ್ಪ ಮಟ್ಟಿನ ಪ್ರತಿರೋಧವನ್ನು ಹೊಂದಿದೆ. ಸುಮಾರು ೬೦ ದಿನಗಳ ಗರ್ಭಾವಧಿ ಇದೆ. ಆಯುಃ ಪ್ರಮಾಣ ೭-೮ ವರ್ಷಗಳು.

ಉಲ್ಲೇಖಗಳು

[ಬದಲಾಯಿಸಿ]
  1. Choudhury, A., Wozencraft, C., Muddapa, D., Yonzon, P., Jennings, A. & Geraldine, V. (2008). Herpestes edwardsii. In: IUCN 2008. IUCN Red List of Threatened Species. Retrieved 22 March 2009. Database entry includes a brief justification of why this species is of least concern