ರಘುನಾಥ್ ಪ್ರಸನ್ನ
ಪಂಡಿತ್ ರಘುನಾಥ್ ಪ್ರಸನ್ನ ರವರು(೧೯೧೩- ಜೂನ್ ೧೯೯೯) ಒಬ್ಬ ಭಾರತೀಯ ಶಾಸ್ತ್ರೀಯ ಶೆಹನಾಯಿ ಮತ್ತು ಕೊಳಲು ವಾದಕರು. ಅವರು ಕೊಳಲು ವಾದನದಲ್ಲಿ ಶೆಹನಾಯಿ ತಂತ್ರಗಳನ್ನು ಬಳಸುವುದರಲ್ಲಿ ಹೆಸರುವಾಸಿಯಾಗಿದ್ದರು, ಗಾಯನ ಸಂಗೀತದಿಂದ ಪ್ರೇರಿತರಾಗಿದ್ದರು.
ವೈಯಕ್ತಿಕ ಜೀವನ ಮತ್ತು ಕುಟುಂಬ
[ಬದಲಾಯಿಸಿ]ರಘುನಾಥ್ ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ೧೯೧೩ರಲ್ಲಿ ಜನಿಸಿದರು. [೧] ಅವರು ಸರಸ್ವತಿ ದೇವಿ ಎಂಬುವವರನ್ನು ವಿವಾಹವಾದರು. ಈ ದಂಪತಿಗಳಿಗೆ ಏಳು ಮಕ್ಕಳಿದ್ದರು. ಅವರಲ್ಲಿ ಒಬ್ಬರು ಕೊಳಲು ಮತ್ತು ಶೆಹನಾಯಿ ವಾದಕ ರಾಜೇಂದ್ರ ಪ್ರಸನ್ನ, ಅವರ ಮಗ ರಿಷಬ್, ರಾಜೇಶ್ ಮತ್ತು ರಿತೇಶ್ ಬಾನ್ಸುರಿ ನುಡಿಸುತ್ತಾರೆ.
ವೃತ್ತಿ
[ಬದಲಾಯಿಸಿ]ರಘುನಾಥ್ ಪ್ರಸನ್ನ ಅವರ ತಮ್ಮ ತಂದೆ ಗೌರಿ ಶಂಕರ್ ಇಂದ ಶೆಹನಾಯಿಯನ್ನು ಮತ್ತು ವಾರಣಾಸಿಯ ದೌಜಿ ಮಿಶ್ರಾ ಅವರಿಂದ ಸಂಗೀತ ತರಬೇತಿ ಪಡೆದರು. ಶೆಹನಾಯಿ ವಾದನಕ್ಕೆ ಹೆಸರುವಾಸಿಯಾಗಿದ್ದ ಕುಟುಂಬಕ್ಕೆ ಕೊಳಲು (ತ್ರಿಪುರ ಬಾನ್ಸುರಿ ಮತ್ತು ಕೃಷ್ಣ ಬಾನ್ಸುರಿ) ವಾದನವನ್ನು ಪ್ರಥಮ ಬಾರಿಗೆ ಪರಿಚಯಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ .
ಚಿಕ್ಕ ವಯಸ್ಸಿನಲ್ಲಿ ಲಕ್ನೋ, ಅಲಹಾಬಾದ್ ಮತ್ತು ರಾಂಚಿ ಸೇರಿದಂತೆ ವಿವಿಧ ಆಕಾಶವಾಣಿ ಕೇಂದ್ರಗಳಲ್ಲಿ ಸಿಬ್ಬಂದಿ ಕಲಾವಿದರಾಗಿ ಕೆಲಸ ಮಾಡಿದರು. ನಂತರ, ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ಅಂತಿಮವಾಗಿ ಭಾರತ ಸರ್ಕಾರದ ಹಾಡು ಮತ್ತು ನಾಟಕ ವಿಭಾಗದಲ್ಲಿ ಸ್ಥಾನ ಪಡೆದರು.
ರಘುನಾಥ್ ಅವರು ತ್ರಿಪುರಾ ಮತ್ತು ಕೃಷ್ಣ ಬಾನ್ಸುರಿಗಳನ್ನು ನುಡಿಸಲು ಹೆಸರುವಾಸಿಯಾಗಿದ್ದರು.
ರಘುನಾಥ್ ಪ್ರಸನ್ನರವರ ತಂತ್ರಗಳನ್ನು ಅವರ ಕಿರಿಯ ಸಹೋದರರು ಮತ್ತು ಶಿಷ್ಯರಾದ ವಿಷ್ಣು ಮತ್ತು ಭೋಲಾನಾಥ್ ಪ್ರಸನ್ನಸ್, ಅವರ ಮಕ್ಕಳಾದ ರಾಕೇಶ್ ಮತ್ತು ರಾಜೇಂದ್ರ ಪ್ರಸನ್ನಸ್, ನಿರಂಜನ್ ಪ್ರಸಾದ್, ಮತ್ತು ಭಾನು ಮತ್ತು ರೋನು ಮಜುಂದಾರ್ಸ್ ಅವರು ಅಳವಡಿಸಿಕೊಂಡಿದ್ದಾರೆ.
೧೯೫೫ರಲ್ಲಿ ಅಲೈನ್ ಡೇನಿಯಲೌ ಅವರು ಆಂಥಾಲಜಿ ಆಫ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಆಲ್ಬಂನಲ್ಲಿ ರಘುನಾಥ್ ಪ್ರಸನ್ನರವರ ಶೆಹನಾಯಿ ಮತ್ತು ತ್ರಿಪುರಾ ಬಾನ್ಸುರಿಯನ್ನು ರೆಕಾರ್ಡ್ ಮಾಡಿದ್ದಾರೆ.
ಪ್ರಶಸ್ತಿಗಳು
[ಬದಲಾಯಿಸಿ]ಪ್ರಸನ್ನ ಅವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ೧೯೯೬ರಲ್ಲಿ ಪಡೆದರು .[೨]
ಉಲ್ಲೇಖಗಳು
[ಬದಲಾಯಿಸಿ]ಬಾಹ್ಯ ಕೊಂಡಿಗಳು
[ಬದಲಾಯಿಸಿ]- Official website
- Raghunath Prasanna at AllMusic