ವಿಷಯಕ್ಕೆ ಹೋಗು

ಮುಹರ್‍ರಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಹರ್‍ರಮ್ (ಅರಬ್ಬಿ: المحرم) — ಹಿಜರಿ ಕ್ಯಾಲೆಂಡರ್‌ನ ಪ್ರಥಮ ತಿಂಗಳು. ಇಸ್ಲಾಮೀ ನಂಬಿಕೆಯ ಪ್ರಕಾರ ನಾಲ್ಕು ಪವಿತ್ರ ತಿಂಗಳುಗಳಲ್ಲೊಂದು.[] ಇಸ್ಲಾಮೀ ವರ್ಷವು ಈ ತಿಂಗಳ ಒಂದನೇ ದಿನಾಂಕದಿಂದ ಆರಂಭವಾಗುತ್ತದೆ. ಇದನ್ನು ದೇವರ ತಿಂಗಳು (ಅರಬ್ಬಿ: شهر الله) ಎಂದು ಕೂಡ ಕರೆಯಲಾಗುತ್ತದೆ.[] ಈ ತಿಂಗಳ ಹತ್ತನೇ ದಿನಕ್ಕೆ ಮುಸಲ್ಮಾನರು ವಿಶೇಷ ಮಹತ್ವ ಕಲ್ಪಿಸುತ್ತಾರೆ. ಸುನ್ನಿ ಮುಸ್ಲಿಮರು ಆ ದಿನ ಉಪವಾಸ ಆಚರಿಸಿದರೆ ಶಿಯಾ ಮುಸ್ಲಿಮರು ಹುಸೈನ್ ಬಿನ್ ಅಲಿಯವರ ನಿಧನಕ್ಕಾಗಿ ಶೋಕಾಚರಣೆ ಮಾಡುತ್ತಾರೆ.[] ಮುಹರ್‍ರಮ್ ತಿಂಗಳಿಗೆ ಇಸ್ಲಾಮೀ ಪೂರ್ವ ಕಾಲದಿಂದಲೇ ಅರಬ್ಬರು ವಿಶೇಷ ಪಾವಿತ್ರ್ಯತೆ ನೀಡುತ್ತಿದ್ದರು. ಅವರು ಈ ತಿಂಗಳಲ್ಲಿ ಯುದ್ಧ ಮಾಡುತ್ತಿರಲಿಲ್ಲ.

ಅರಬ್ಬಿ ಭಾಷೆಯಲ್ಲಿ ಮುಹರ್‍ರಮ್ ಎಂದರೆ ನಿಷಿದ್ಧ.[] ಈ ತಿಂಗಳನ್ನು ಅರಬ್ಬರು ಯುದ್ಧ ನಿಷಿದ್ಧ ತಿಂಗಳೆಂದು ಪರಿಗಣಿಸುತ್ತಿದ್ದ ಕಾರಣ ಇದಕ್ಕೆ ಈ ಹೆಸರು ಬಂತೆಂದು ಹೇಳಲಾಗುತ್ತದೆ. ಇದಕ್ಕೆ ಪವಿತ್ರ ಎಂಬ ಅರ್ಥವೂ ಇದೆ. ಇಸ್ಲಾಂ ಧರ್ಮದ ನಂತರವೂ ಈ ತಿಂಗಳನ್ನು ಪವಿತ್ರ ಮತ್ತು ಯುದ್ಧ ನಿಷೇಧಿತ ತಿಂಗಳೆಂದು ಪರಿಗಣಿಸಲಾಗುತ್ತಿದೆ.

ವಿಶೇಷ ದಿನಗಳು

[ಬದಲಾಯಿಸಿ]

ಆಶೂರಾ

[ಬದಲಾಯಿಸಿ]

ಈ ತಿಂಗಳ ಹತ್ತನೇ ದಿನವನ್ನು ಆಶೂರಾ ದಿನ (ಅರಬ್ಬಿ: يوم عاشوراء) ಎಂದು ಕರೆಯಲಾಗುತ್ತದೆ. ಇಸ್ಲಾಮೀ ಪೂರ್ವ ಅರಬ್ಬರು ಈ ದಿನವನ್ನು ಗೌರವಿಸಿ ಉಪವಾಸ ಆಚರಿಸುತ್ತಿದ್ದರು. ಮುಹಮ್ಮದ್ ಪೈಗಂಬರರ ಕಾಲದಲ್ಲಿ ಕುರೈಷರು ಈ ದಿನ ಉಪವಾಸ ಆಚರಿಸುತ್ತಿದ್ದರು.[] ಈ ದಿನ ದೇವರು ಪ್ರವಾದಿ ಮೋಶೆ ಮತ್ತು ಅವರ ಅನುಯಾಯಿಗಳನ್ನು ಫರೋಹನ ಹಿಂಸೆಯಿಂದ ಪಾರು ಮಾಡಿದ ಕಾರಣ ದೇವರಿಗೆ ಧನ್ಯವಾದ ಸಲ್ಲಿಸುವುದಕ್ಕಾಗಿ ಯಹೂದಿಗಳು ಈ ದಿನ ಉಪವಾಸ ಆಚರಿಸುತ್ತಿದ್ದರು.[]

ಆಶೂರಾ ದಿನದಂದು ಮುಹಮ್ಮದ್ ಪೈಗಂಬರರ ಮೊಮ್ಮಗ (ಅಲಿ ಬಿನ್ ಅಬೂ ತಾಲಿಬ್‌ರ ಮಗ) ಹುಸೈನ್ ಬಿನ್ ಅಲಿ ಕರ್ಬಲಾ ಯುದ್ಧದಲ್ಲಿ ಮಡಿದರು. ಅವರ ಸಾವಿಗೆ ಶೋಕವನ್ನು ವ್ಯಕ್ತಪಡಿಸುತ್ತಾ ಶಿಯಾ ಮುಸ್ಲಿಮರು ಈ ದಿನ ಶೋಕಾಚರಣೆ ಮಾಡುತ್ತಾರೆ.[] ಆದರೆ ಸುನ್ನಿ ಮುಸ್ಲಿಮರು ಮುಹಮ್ಮದ್‌ರ ಆದೇಶದಂತೆ ಈ ದಿನ ಉಪವಾಸ ಆಚರಿಸುತ್ತಾರೆ.[]

ತಾಸೂಆ

[ಬದಲಾಯಿಸಿ]

ಈ ತಿಂಗಳ ಒಂಬತ್ತನೇ ದಿನವನ್ನು ತಾಸೂಆ (ಅರಬ್ಬಿ: تاسوعاء) ಎಂದು ಕರೆಯಲಾಗುತ್ತದೆ. ಈ ದಿನಕ್ಕೆ ಯಾವುದೇ ವಿಶೇಷ ಮಹತ್ವವಿಲ್ಲದಿದ್ದರೂ ಮುಹಮ್ಮದ್‌ರ ಆದೇಶದಂತೆ ಸುನ್ನಿ ಮುಸ್ಲಿಮರು ಈ ದಿನ ಉಪವಾಸ ಆಚರಿಸುತ್ತಾರೆ.[]

ಇದನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Sahih al-Bukhari: Hadith No. 4662. "Prophetic Commentary on the Qur'an". sunnah.com. Retrieved 28-02-2023. {{cite web}}: Check date values in: |access-date= (help)CS1 maint: numeric names: authors list (link)
  2. Sahih Muslim: Hadith No. 1163. "Chapter: The virtue of fasting Muharram". sunnah.com. Archived from the original on 28-02-2023. Retrieved 28-02-2023. {{cite web}}: Check date values in: |access-date= and |archive-date= (help)CS1 maint: numeric names: authors list (link)
  3. ೩.೦ ೩.೧ The Encyclopedia of Islam. Brill. 1993. p. 516. ISBN 9004094199.
  4. Wehr, Hans (1976). Cowan, J. Milton (ed.). A Dictionary of Modern Written Arabic (3rd ed.). Spoken Languages Services, Inc. p. 172. ISBN 0879500018.
  5. ೫.೦ ೫.೧ Sahih al-Bukhari: Hadith No. 2002. "Chapter: Observing Saum (fast) on the day of 'Ashura". sunnah.com. Retrieved 28-02-2023. {{cite web}}: Check date values in: |access-date= (help)CS1 maint: numeric names: authors list (link)
  6. Sahih Muslim: Hadith No. 1130. "Chapter: Fasting on the day of Ashura'". sunnah.com. Retrieved 28-02-2023. {{cite web}}: Check date values in: |access-date= (help)CS1 maint: numeric names: authors list (link)
  7. Sahih Muslim: Hadith No. 1134. "Chapter: Which day should be fasted for 'Ashura?". sunnah.com. Retrieved 28-02-2023. {{cite web}}: Check date values in: |access-date= (help)CS1 maint: numeric names: authors list (link)