ಸದಸ್ಯ:Tukaram kumbar/ನನ್ನ ಪ್ರಯೋಗಪುಟ
೦೯೦೦-ಚೀನಾ ದೇಶದಲ್ಲಿ ಗುಂಡು-ಮದ್ದು ಕಂಡುಹಿಡಿದರು.
೧೨೦೦-ಯುರೋಪ ಖOಡದಲ್ಲಿ ವಿಶ್ವವಿದ್ಯಾಲಯಗಳು ಸ್ಥಾಪನೆಗೊಂಡವು.
[ಬದಲಾಯಿಸಿ]೧೦೯೬-ಆಕ್ಸಫರ್ಡ ವಿಶ್ವವಿದ್ಯಾಲಯ-ಇಂಗ್ಲಾಂಡನಲ್ಲಿ ಸ್ಥಾಪನೆಗೊಂದಿತು.
೧೧೩೪-ಸ್ಪೇನ್ ದೇಶದಲ್ಲಿ ಸಲಮಂಕಾ ವಿಶ್ವವಿದ್ಯಾಲಯ.
೧೧೬೦-ಫ್ರಾಂಸನಲ್ಲಿ ಪ್ಯಾರಿಸ ವಿಸ್ವವಿದ್ಯಾಲಯ.
೧೨೦೯-ಇಂಗ್ಲಂಡನಲ್ಲಿ ಕ್ಯಾಂಬ್ರಿಜ್ ವಿಶ್ವವಿದ್ಯಾಲಯ.
೧೨೨೨-ಇಟಲಿಯಲ್ಲಿ ಪಡುವಾ ವಿಶ್ವವಿದ್ಯಾಲಯ.
೧೨೭೬-ಇಟಲಿಯಲ್ಲಿ ಕಾಗದ ತಯ್ಯಾರಿಕೆ ಆರಂಭವಾಯಿತು.
[ಬದಲಾಯಿಸಿ]೧೩೪೭-೧೪೦೦ ಯುರೋಪ್ ಖಂಡದಲ್ಲಿ ಹಂತ ಹಂತವಾಗಿ ಪ್ಲೇಗು ರೋಗ ವಿಸ್ತರಿಸಿತು. ೩೦% ಯುರೋಪಿಯನ್ನರು ಸಾವನಪ್ಪಿದರು.
೧೪೫೦-ಜರ್ಮನಿಯಲ್ಲಿ ಮುದ್ರಣ ಯಂತ್ರದ ಅವಿಸ್ಕಾರವಾಯಿತು.
[ಬದಲಾಯಿಸಿ]೧೪೭೦ರ ಹೊತ್ತಿಗೆ ಮುದ್ರಣ ಯಂತ್ರಗಳು ಯುರೋಪ್ ಖಂಡದ ವಿವಿಧ ನಗರಗಳಿಗೆ ವಿಸ್ತರಿಸಿದವು. ಇದರಿಂದ ಜನರಲ್ಲಿ ಜ್ಞಾನ ಹರಡಲು ಅನುಕೂಲವಾಯಿತು. ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಗ್ರಂಥಗಳು ಸುಲಭವಾಗಿ ದೊರೆಯಲಾರಂಭಿಸಿದವು.
೧೪೯೨-ಕೊಲಂಬಸನಿಂದ ಅಟ್ಲಾಂಟಿಕ ಸಾಗರದಲ್ಲಿ ಪಯಣ ಮತ್ತು ಹೊಸ ಭೂಖಂಡದ ಶೋಧ.
೧೪೯೮-ವಾಸ್ಕೋಡಿಗಾಮನಿಂದ ಯುರೋಪ ಖಂಡದಿಂದ ಭಾರತಕ್ಕೆ ತಲುಪುವ ಜಲಮಾರ್ಗದ ಶೋಧ.
ಭೂಮಿಯನ್ನು ಸುತ್ತುವ ಪ್ರಯತ್ನ ೧೫೨೨ - ಫರ್ಡಿನಂಡ ಮೆಗಲನನು ಸ್ಪೇನ್ ದೇಶದಿಂದ ಹಡಗಿನಲ್ಲಿ ಪ್ರಯಾಣಗೈದು, ಮೊಟ್ಟಮೊದಲಿಗೆ ಭೂಮಿಯನ್ನು ಸುತ್ತುವ ಪ್ರಯತ್ನದಲ್ಲಿ ಸಫಲನಾದನು. ಇದೊಂದು ಅಂದಿನ ಅದ್ಭುತ ಸಾಹಸವೇ ಸರಿ.
[ಬದಲಾಯಿಸಿ]ಅಂದು, ೨೬-೯-೧೫೧೯ರಂದು ಫರ್ಡಿನಂಡ್ ಮೆಗಲನ್‌ನು, ಐದು ಹಡಗುಗಳಲ್ಲಿ ೨೭೦ ಜನರ ತಂಡದೊOದಿಗೆ, ಯುರೋಪ ಖಂಡದ ಸ್ಪೇನ್ ದೇಶದಿಂದ ಸಮುದ್ರಯಾನ ಆರಂಭಿಸಿ, ೩೧-೩-೧೫೨೦ರಂದು ಅರ್ಜಂಟೈನಾ ತಲುಪಿದನು. ನಾವಿಕರು ೨೪-೮-೧೫೨೦ರ ವರೆಗೆ ಅಲ್ಲಿಯೇ ತಂಗಿದರು. ಅಲ್ಲಿ ನಾವಿಕರ ಜಗಳ ಆರಂಭವಾಯಿತು. ದಕ್ಷಿಣ ಅಮೇರಿಕ ಖಂಡದ ಪೂರ್ವ ಭಾಗದಿಂದ ಪಶ್ಚಿಮದೆಡೆಗೆ ದಾರಿ ಹುಡುಕಾಟದಲ್ಲಿ, ಒಂದು ಹಡಗು ಬಿರುಗಾಳಿಗೆ ತುತ್ತಾಯಿತು. ಇನ್ನೊಂದು ಹಡಗು ಸ್ವದೇಶಕ್ಕೆ ಮರಳಿತು. ಕೇವಲ ಮೂರು ಹಡಗುಗಳೊಂದಿಗೆ, ೨೧-೧೦-೧೫೨೦ರಂದು ದಕ್ಷಿಣ ಅಮೆರಿಕಾ ತುದಿಯಿಂದ ಪೆಸಿಫಿಕ್ ಸಾಗರ ಪ್ರವೇಶಿಸಿ ದೀರ್ಘಕಾಲ ಪ್ರಯಾಣಿಸಿ ೬-೩-೧೫೨೧ರಂದು ಗುಅನ ಎನ್ನುವ ಒಂದು ಚಿಕ್ಕ ದ್ವೀಪಕ್ಕೆ ತಲುಪಿದನು. ಗುಅನ್ ದಾಟಿ ಯಸಿಯಾ ಖಂಡದ ಫಿಲಿಪೈನ್ ದೇಶವನ್ನು ತಲುಪಿ, ಫಿಲಿಪೈನ್ ನಡುಗಡ್ಡೆಗಳಲ್ಲಿ, ಸ್ಥಳಿಯರೊಂದಿಗೆ ಒಂದು ಕಾದಾಟದಲ್ಲಿ ಮೆಗಲನ್ ಮರಣಹೊಂದಿದನು. ಉಳಿದ ೧೮ ಜನ ಪ್ರಯಾಣಿಕರು ವಿಕ್ಟೋರಿಯಾ ಹಡಗಿನಲ್ಲಿ, ಹಿಂದು ಮಹಾಸಾಗರ ದಾಟಿ, ಆಫ್ರಿಕಾ ಖಂಡದ ತುದಿಯ ಮುಖಾಂತರ ಆಫ್ರಿಕಾ ಖಂಡವನ್ನು ದಾಟಿ, ಯುರೋಪ ಖಂಡಕ್ಕೆ ಸಮುದ್ರಯಾನ ಗೈದರು. ೮-೯-೧೫೨೨ರಂದು ಅವರು ವಿಕ್ತೋರಿಯಾ ಹಡಗಿನಲ್ಲಿ ಸ್ಪೇನ್ ದೇಶವನ್ನು ಪ್ರವೇಶಿಸಿದರು. ಹೀಗೆ ನಾವಿಕರು ಮೂರು ವರುಷ ಸಾಗರದಲ್ಲಿ ಪ್ರಯಾಣಗೈದು, ಪ್ರಥಮಬಾರಿಗೆ ಪೂರ್ಣ ಭೂಮಿಗೆ ಸುತ್ತುವರಿಯುವುದರಲ್ಲಿ ಎಸೆಸ್ವಿಯಾದರು. ಪ್ರಯಾಣದ ಆರಂಭದಲ್ಲಿ ೨೭೦ ಜನ, ಆದರೆ ಅಂತ್ಯದಲ್ಲಿ ಕೇವಲ ೧೮ ಜನ ಮಾತ್ರ.
೧೫೩೩-ಪೋಲಂಡಿನ ಖಗೋಳ ವಿಜ್ಞಾನಿ ನಿಕೋಲಾಸ್ ಕೋಪರ್‌ನಿಕಸರ ಸೂರ್ಯಕೇಂದ್ರವಾದ.
[ಬದಲಾಯಿಸಿ]ಹಿOದಿನ ಟಾಲೆಮಿ ನಿರ್ಮಿತ ಭೂಕೇಂದ್ರವಾದಕ್ಕೆ ವಿರುಧ್ಧವಾಗಿ, ಕೊಪರ್ನಿಕಸ ಅವರು ಸೂರ್ಯಕೇOದ್ರವಾದವನ್ನು ಮಂಡಿಸಿದನು. ಎಲ್ಲಾ ಗ್ರಹಗಳು ವೃತ್ತಾಕಾರದಲ್ಲಿ ಸೂರ್ಯನನ್ನು ಸುತ್ತುತ್ತವೆ ಎಂದು ಪ್ರಕಟಿಸಿದನು. ಈ ಜಗದ ಕೇಂದ್ರ ಭೂಮಿ ಅಲ್ಲ, ಬದಲಿಗೆ ಸೂರ್ಯ ಎಂದು ವಿವರಿಸಿದನು. ೧೫೪೦ರಲ್ಲಿ ಅವರ ಕೃತಿ ಮುದ್ರಿತವಾಯಿತು.
ಟೈಕೊಬ್ರಾಹೆ
[ಬದಲಾಯಿಸಿ]೧೫೬೦-ಟೈಕೊಬ್ರಾಹೆಯು ವಿದ್ಯಾರ್ಥಿ ಇರುವಾಗ ಅಗಸ್ಟ ೨೧, ೧೫೬೦ರಂದು ಸೂರ್ಯ ಗ್ರಹಣ ಕಂಡು, ಖಗೋಳದತ್ತ ಅಕರ್ಷಿತನಾದನು. ರಾತ್ರಿಯಲ್ಲ ನಕ್ಷತ್ರಗಳ ಕಂಡು, ದತ್ತಾಂಶವನ್ನು ಕಲೆಹಾಕುವನು. ಇಪ್ಪತ್ತು ವರ್ಷಗಳಿಗೊಮ್ಮೆ ಸಂಭವಿಸುವ ಗುರು-ಶನಿ ಗ್ರಹಗಳ ಕೂಟ ಕಂಡನು. ಹಿಂದಿನವರ ಲೆಕ್ಕಾಚಾರಕ್ಕೂ ಅಂದು ಘಟಿಸಿದ ಘಟನೆಗೂ, ಒಂದು ತಿಂಗಳು ವ್ಯತ್ಯಾಸ ಕಂಡನು. ನಕ್ಷತ್ರಗಳ ಸ್ತಾನವನ್ನು ನಿಖರವಾಗಿ ಗುರುತಿಸಬೇಕೆಂದುಕೊOಡನು. ಸತತವಾಗಿ ದಿನಾಲು ರಾತ್ರಿ ಕಂಡದ್ದೆನ್ನಲ್ಲ ಬರೆದಿಡುವನು. ನವೆಂಬರ್ ೧೧, ೧೫೭೨ರಂದು ಆಕಾಶದಲ್ಲಿ ಒಂದು ಪ್ರಖರವಾಗಿ ಹೊಳೆಯುವ ಹೊಸ ನಕ್ಷತ್ರ ಗೋಚರಿಸಿತು. ಅದು ಒಂದು ವರ್ಷದೊಳಗೆ, ತನ್ನ ಪ್ರಕಾಶ ಕ್ಷೀಣಿಸುತ್ತಾ ಕಾಣೆಯಾಯಿತು. ಹಿಂದಿನವರ ನಕ್ಷತ್ರಗಳು ಸ್ಥಿರವಾಗಿವೆ ಎನ್ನುವ ಕಲ್ಪನೆಗೆ ವಿರುದ್ಧವಾದ ಘಟನೆ ಅದಾಗಿತ್ತು. ಅದೊಂದು ಸುಪರ್ ನೋವಾ ಆಗಿತ್ತು.೧೫೭೭ರಲ್ಲಿ ಕಾಣಿಸಿಕೊಂಡ ಧೂಮಕೇತುವನ್ನು ವೀಕ್ಷಿಸಿ, ಅದರ ಬಾಲ ಯಾವಾಗಲು ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಇರುವುದನ್ನು ಗಮನಿಸುದನು. ಮತ್ತು ಅದು ವಕ್ರಾಕಾರದಲ್ಲಿ ಸೂರ್ಯನ ಸುತ್ತುವಂತೆ ಕಂಡು ಮಾಯವಾಯಿತು.
೧೫೬೩-ಖಗೋಳ ವಿಜ್ಞಾನಿ ಟೈಕೊಬ್ರಾಹೆಯು ಸತತವಾಗಿ ನಕ್ಷತ್ರಗಳ ವೀಕ್ಷಣೆಗೈದು ಸಾವಿರಕ್ಕೂ ಅಧಿಕ ನಕ್ಷತ್ರಗಳ ನಿಖರವಾದ ನಕ್ಷತ್ರಪಟಲ ತಯ್ಯಾರಿಸಿದನು. ಅವನು ಕೆಪ್ಲರನನ್ನು ಸಹಾಯಕನಾಗಿ ನೇಮಿಸಿಕೊಂಡನು. ೧೬೦೧ರಲ್ಲಿ ಇದ್ದಕ್ಕಿದ್ದಂತೆ ತೀರಿಕೊಂಡನು. ಕೆಪ್ಲರನು ಟೈಕೋನ ದತ್ತಾಂಶವನ್ನು ಬಳಸಿ ಮೊದಲಿಗೆ ಮಂಗಳ ಗ್ರಹದ ಚಲನಪಥದ ಅದ್ಯಯನ ಗೈದನು. ಎಂಟು ವರ್ಷಗಳ ಅಧ್ಯಯನದ ನಂತರ, ಮಂಗಳ ಗ್ರಹವು ದೀರ್ಘ ವೃತ್ತದಲ್ಲಿ ಸೂರ್ಯನನ್ನು ಸುತ್ತುವುದು ಖಚಿತವಾಯಿತು. ಮಂಗಳ ಗ್ರಹ ಸೂರ್ಯನ ಸಮೀಪಕ್ಕೆ ಬಂದಂತೆ ವೇಗದಲ್ಲಿ ಹೆಚ್ಚಳವಾಗುವುದನ್ನು ಮತ್ತು ದೂರ ಹೋದಂತೆ ವೇಗದಲ್ಲಿ ಕಡಿಮೆಯಾಗುವುದನ್ನು ಕಂಡನು. ಮುಂದೆ ಆತನು ತನ್ನ ಮೊದಲ ಎರಡು ಗ್ರಹಚಲನ ನಿಯಮಗಳನ್ನು ಪ್ರಕಟಿಸಿದನು.
ಬ್ರೂನೋ- ಅವನ ಕಲ್ಪನೆಗಳು:-
[ಬದಲಾಯಿಸಿ]1548-1600 -ಬ್ರೂನೋ: ಈತನು ಹುಟ್ಟು ಬಂಡಾಯಗಾರ, ಸಂಪ್ರದಾಯ ವಿರೋಧಿ, ಸ್ವತಂತ್ರ ಚಿಂತನಶೀಲ ಭಯರಹಿತ ಪ್ರತಿಪಾದಕ. ಯುರೋಪಿನ ವಿವಿಧ ನಗರಗಳನ್ನು ಸಂಚರಿಸಿ ತನ್ನ ಮುಕ್ತ ಚಿಂತನೆಯ ಮುಫಲಗಳನ್ನು ವಿಪುಲವಾಗಿ ವಿವರಿಸಿದ. ಜನ ಈತನ ಹಿಂದೆ ಹುಚ್ಚೆದ್ದು ಕಿಕ್ಕಿರಿದರು.
ವಿಶ್ವದ ವ್ಯಾಪ್ತಿ ಅನಂತ. ಇದರಲ್ಲಿ ಕೇಂದ್ರವೆನ್ನುವ ಒಂದು ಬಿಂದಿ ಎಲ್ಲಿಯೂ ಇಲ್ಲ. ನಮ್ಮ ಸೂರ್ಯ ವಿಶ್ವದಾದ್ಯಂತ ಚಲ್ಲಾ ಪಿಲ್ಲಿ ಹರಡಿಹೋಗಿರುವ ಅಸಂಖ್ಯ ನಕ್ಸತ್ರಗಳ ಪೈಕಿ ಕೇವಲ ಒಂದು. ಈ ಎಲ್ಲ ನಕ್ಸತ್ರಗಳಿಗೂ ಸೂರ್ಯನಿಗಿರುವಂತೆ ಗ್ರಹವೆವಸ್ಥೆಗಲುಂಟು. ಅಂದಮೇಲೆ ಸೌರವ್ಯೂವ್ಹಗಳ ಸಂಖ್ಯ ಅನಂತ. ಅಂತೆಯೇ ಜೀವ ಭರಿತ ಪ್ರಪಂಚೆಗಳ ಸಂಖ್ಯಯೂ ಕೂಡ. ಪ್ರಪಂಚವೆಂದರೆ ಸೌರ್ಯವ್ಯೂವ್ಹ. ವಿಶ್ವವೆಂದರೆ ಅನಂತ ಸೌರ್ಯವ್ಯೂವ್ಹ. ಸಾಂತಮಾನವ ಅನಂತ ಸೃಷ್ಠಿಯ ವಿಸ್ತಾರ ಗ್ರಹಿಸಲು ಅಸಾಧ್ಯ. ಜ್ಞಾನಗಳಿಸುವ ಮಾರ್ಗವೊಂದೇ ಪರಿಪೂರ್ಣತೆಯೆಡಗಿನ ಋಜು ಪಥ, ಅಂಧ ಶ್ರೇಧ್ಯಯಲ್ಲ; ಎಂದು ಬ್ರೂನೋ ಸಾರಿದ.
ಅವನ ಅಂತ್ಯ:-
[ಬದಲಾಯಿಸಿ]ಇಂತಹ ನಾಸ್ತಿಕ, ಪಾಖಂಡಿ, ಧರ್ಮಲಂಡ, ಸಮಾಜದ್ರೋಹಿ, ಬರ್ಬರನಿಗೆ ಭಗವತ್ಸ್ರಷ್ಟಿಯಲ್ಲಿ ಬದುಕಿರಲು ಹಕ್ಕಿಲ್ಲವೆಂದು, ಭಗವದ್ಭಕ್ತರು ಸರ್ವಾನುಮತದಿಂದ ತೀರ್ಮಾನಿಸಿ, ಮರಣದಂಡನೆ ವಿಧಿಸಿದರು. 1600ರಲ್ಲಿ ಆತನನ್ನು ಜೀವಂತ ದಹಿಸಿ ಧರ್ಮ ಸಂರಕ್ಷಕರು, ಧರ್ಮ ಸಾಮ್ರಾಜ್ಯದ ಅಚಲತೆಯನ್ನು ಸ್ಥಿರಪಡಿಸಿದರು.
ಕೆಪ್ಲರನ ಗ್ರಹಗಳ ಚಲನೆಯ ನಿಯಮಗಳು
[ಬದಲಾಯಿಸಿ]೧೬೦೯-ಕೆಪ್ಲರನ ಗ್ರಹಗಳ ಚಲನೆಯ [ಪರಿಭ್ರಮಣೆಯ] ನಿಯಮಗಳು. ಗ್ರಹಗಳು ಸೂರ್ಯನನ್ನು ದೀರ್ಘ ವೃತ್ತಾಕಾರದಲ್ಲಿ ಸುತ್ತುತ್ತವೆ. ಗ್ರಹಗಳ ಕಕ್ಷ ಸೂರ್ಯನಿಂದ ದೂರವಿದ್ದಂತೆ, ವೇಗದಲ್ಲಿ ಕಡಿಮೆಯಾಗುತ್ತದೆ. ಗ್ರಹವು ದಿರ್ಘವೃತ್ತದಲ್ಲಿ ಚಲಿಸುವಾಗ, ಸಮಾನ ಸಮಯದಲ್ಲಿ ಸಮಾನ ಕ್ಷೇತ್ರವನ್ನು ಕ್ರಮಿಸುತ್ತದೆ.
೧೬೧೦-ಗೆಲೆಲಿಯೊ ಗೆಲಿಲಿಯ ಟೆಲಿಸ್ಕೋಪ್ ಅವಿಸ್ಕಾರ ಹಾಗು ಗುರುಗ್ರಹದ ನಾಲ್ಕು ಉಪಗ್ರಹಗಳ ಶೋಧ. ಆತನು ಶುಕ್ರ ಗ್ರಹದ [ಚಂದ್ರನ ಕಲೆಗಳಂತೆ ಇರುವ] ಕಲೆಗಳ ವೀಕ್ಷಣೆ ಗೈದನು ಮತ್ತು ಶನಿ ಗ್ರಹದ ಉಂಗುರದ ವೀಕ್ಷಣೆಗೈದನು.
೧೬೩೩-ಗೆಲೆಲಿಯೊ, ಭೂಮಿಯು ಸೂರ್ಯನ ಸುತ್ತ ತಿರುಗುತ್ತದೆ ಎಂದು ಬರೆದುದಕ್ಕೆ, ಇದು ಬೈಬಲ್ ಧರ್ಮಗ್ರಂಥದ ನಂಬಿಕೆಗೆ ವಿರೋಧಿ ಎಂದು, ಧರ್ಮಾಂಧರು ಆತನನ್ನು ರೋಮ ನಗರಕ್ಕೆ ಕರೆದು, ಆತನನ್ನು ಜೀವನಪೂರ್ತಿ ಗ್ರಹಬಂಧನಕ್ಕೆ ಒಳಪಡಿಸುವ ಶಿಕ್ಷೆ ವಿಧಿಸಿದರು.
ಧರ್ಮದ ಹೆಸರಿನಲ್ಲಿ ೩೦ ವರುಶಗಳ ಕಾಲ ಯುಧ:
೧೬೧೮-೧೬೪೮: ಮಧ್ಯ ಯುರೊಪ್‌ನಲ್ಲಿ [ಇಂದಿನ ಜರ್ಮನಿ] ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ ಪಂಥಗಳಲ್ಲಿ ಮೂವತ್ತು ವರ್ಷಗಳ ಕಾಲ ಯುಧಗಳು ನಡೆದವು. ರಾಜತಾಂತ್ರಿಕ, ಸಾಮಾಜಿಕ, ಧರ‍್ಮಿಕ, ಪೈಪೋಟಿಗಳು ಇದಕ್ಕೆ ಕಾರಣಗಳು. ಸಾಕಸ್ಟು ಸಾವು-ನೋವುಗಳು ಸಂಭವಿಸಿದವು. ರೋಗ--ರುಜುಗಳು ಹರಡಿದವು, ಆಹಾರದ ಕೊರತೆ ಉಂಟಾಯಿತು. ಸಾಮಾಜಿಕ ಜೀವನ ಕುಸಿಯಿತು. ಈ ಯುಧಗಳು ಯುರೋಪಿನ ಎಲ್ಲಾ ಭಾಗಗಳಿಗೆ ವಿಸ್ತರಿಸಿದವು.
೧೬೪೨-ಇಂಗ್ಲೆOಡ್‌ನಲ್ಲಿ ಸಾಮಾಜಿಕ-ಕ್ರಾಂತಿಯ ಆರಂಭವಾಯಿತು. ಸುಮಾರು ೧,೦೦,೦೦೦ ಜನರು ಪ್ರಾಣ ಕಳೆದುಕೊಂಡರು ಮತ್ತು ೧೦,೦೦೦ ಮನೆಗಳು ನೆಲಸಮವಾದವು. ೧೬೪೯ರಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೊಂಡಿತು. ಜನೆವರಿ ೩೦ರಂದು ದೊರೆ ಚಾರ್ಲ್ಸನ ಶಿರ-ಕ್ಷೇದಗೈದರು.
೧೬೫೪-ಪೂರ್ವ ಯುರೋಪನಲ್ಲಿ ಪ್ಲೇಗ್ ರೋಗ ಹರಡಿತು.
೧೬೮೮-ಪಾರ್ಲಿಮೆಂಟ್‌ನಿOದ ಇಂಗ್ಲೀಷ ಬಿಲ್ ಆಫ್ ರೈಟ್ಸ ಅಸ್ತಿತ್ವಕ್ಕೆ ಬಂದಿತು. ಇದರಿಂದ ಅರಸನ ಹಕ್ಕುಗಳು ಸೀಮಿತಗೊಂಡವು.
೧೬೬೦-ಲOಡನ್ ನಗರದಲ್ಲಿ ರಾಯಲ್ ಸೊಸೈಟಿಯ ಸ್ಥಾಪನೆಯಾಯಿತು. ವೈಜ್ಞಾನಿಕ ತಳಹದಿಯಲ್ಲಿ ನಿಸರ್ಗದ ಸತ್ತೆ ಶೋಧನೆ ಮತ್ತು ತಂತ್ರಗಾರಿಕೆಯ ಲಾಭ, ಇದರ ಗುರಿಯಾಯಿತು.
೧೬೬೬-ಫ್ರೆಂಚ್ ಅಕಾಡಮಿ ಆಫ್ ಸೈನ್ಸ ಸ್ಥಾಪಿತವಾಯಿತು.
೧೬೬೮-ಐಸಾಕ್ ನ್ಯೂಟನ್ನರು ಕಿರಣ ಪ್ರತಿಫಲನ ಟೆಲಿಸ್ಕೋಪ್ ರಚಿಸಿದರು. ಮತ್ತು೧೬೭೨-ಐಸಾಕ್ ನ್ಯೂಟನ್ನರು ರಾಯಲ್ ಸೊಸೈಟಿಯ ಸದಶ್ಯರಾದರು.
ಎಡ್ಮಂಡ ಹ್ಯಾಲಿ
[ಬದಲಾಯಿಸಿ]೧೬೭೯-ಎಡ್ಮಂಡ ಹ್ಯಾಲಿಯವರು ದಕ್ಷಿಣಗೋಳದ ೩೪೧ ನಕ್ಷತ್ರಗಳ ಪಟ್ಟಿಯನ್ನು ಪ್ರಕಟಿಸುತ್ತಾರೆ. ಮತ್ತು ಅವರು ರಾಯಲ್ ಸೊಸೈಟಿಯ ಸದಶ್ಯರಾದರು.
೧೬೮೪-ಎಡ್ಮಂಡ ಹ್ಯಾಲಿಯವರು ಗುರುತ್ವ ನಿಯಮದ ಕುರಿತು ಮಾತನಾಡಲು, ಕ್ಯಾಂಬ್ರಿಜ್ ನಲ್ಲಿ ಐಸಾಕ್ ನ್ಯೂಟನ್ ರನ್ನು ಕಾಣಲು ಬರುತ್ತಾರೆ. ನ್ಯೂಟನ್ನರ ಕೃತಿ ನಿರ್ಮಾಣಕ್ಕೆ ಧನಸಹಾಯ ಮಾಡುತ್ತಾರೆ.
೧೬೮೭-ನ್ಯೂಟನ್ನರ ಗ್ರಂಥ 'ಪ್ರಿನ್ಸಿಪಿಯಾ ಮೆಥೆಮೆಟಿಕಾ' ಮೂರು ಪುಸ್ತಕಗಳ ರೂಪದಲ್ಲಿ ಪ್ರಕಟವಾಯಿತು.
೧೭೦೦-ಜರ್ಮನಿಯಲ್ಲಿ ಬರ್ಲಿನ್ ವಿಜ್ಞಾನ ಅಕಾಡಮಿ ಸ್ಥಾಪನೆಗೊಂಡಿತು.
೧೭೦೩- ಸಅರ್ ಐಸಾಕ್ ನ್ಯೂಟನ್‌ರು ರಾಯಲ್ ಸೊಸೈಟಿಯ ಅದ್ಯಕ್ಷರಾದರು. ೧೭೨೭ರಲ್ಲಿ ಅವರು ಮರಣಹೊಂದಿದರು.
೧೭೦೫- ಖಗೋಳ ವಿಜ್ಞಾನಿಯಾದ ಎಡಮಂಡ ಹ್ಯಾಲಿಯು, ೧೩೩೭-೧೬೯೮ರ ವರೆಗೆ ಕಾಣಿಸಿಕೊಂಡ ಎಲ್ಲಾ ದೂಮಕೇತುಗಳ ಅಳವಾದ ಅಧ್ಯಯನ ಗೈದೂ, ೧೫೩೧, ೧೬೦೭ ಮತ್ತು ೧೬೮೨ಗಳಲ್ಲಿ ಕಾಣಿಸಿಕೊಂಡ ಧೂಮಕೇತುವು ಒಂದೆ ಎಂದು ವಿವರಿಸಿದರು. ಮತ್ತು ಅದು ಪುನಃ ೧೭೫೮ರಲ್ಲಿ ಕಾಣುವುದೆಂದು ಮುನ್ನುಡಿದರು. ಆದರೆ ಅವರು ೧೭೪೨ರಲ್ಲಿ ಮರಣಹೊಂದಿದರು. ಧೂಮಕೇತುವು ೧೭೫೮ ಕೊನೆಯಲ್ಲಿ ಪ್ರಕಟವಾಯಿತು. ಹರ್ಷಗೊಂಡ ವಿಜ್ಞಾನಿಗಳು ಅದನ್ನು ಹ್ಯಾಲಿಧೂಮಕೇತು ಎಂದು ಹೆಸರಿಸಿದರು. ಧೂಮಕೇತುಗಳು ಸಹ ಗ್ರಹಗಳಂತೆ ಸೂರ್ಯನನ್ನು ದೀರ್ಘ ವ್ರತ್ತದಲ್ಲಿ ಸುತ್ತುತ್ತವೆ ಎಂದು ಖಚಿತವಾಯಿತು.
೧೭೩೬-ಭೂಮಿಯ ಆಕಾರ ತಿಳಿಯಲು, ವಿಜ್ಞಾನಿಗಳು ಭೂಮಿಯ ಧ್ರುವಗಳತ್ತ ಪ್ರಯಾಣಗೈದು ಅಂಕಿಅOಶಗಳನ್ನು ಕಲೆಹಾಕಿದರು. ಇದರಿಂದ ಭೂಮೀ ಪೂರ್ಣ ದುಂದಾಗಿರದೆ, ಧ್ರುವಗಳತ್ತ ಸ್ವಲ್ಪ ಚಪ್ಪಟೆಯಾಗಿದೆ ಎಂದು ಕಂಡುಕೊOದರು.
ಜೋಸೆಫ್ ಬ್ಲ್ಯಾಕ್
[ಬದಲಾಯಿಸಿ]೧೭೫೬-ಜೋಸೆಫ್ ಬ್ಲ್ಯಾಕ್ ರವರು ಸುಣ್ಣದ ಕಲ್ಲನ್ನು ಬಲವಾಗಿ ಕಾಯಿಸಿದಾಗ, ಅದರಿಂದ ಒಂದು ಅನಿಲ ಹೊರಬೀಳುತ್ತದೆ. ಅದನ್ನು ಅವರು 'ಫಿಕ್ಸಡ ಏರ್' ಎಂದು ಹೆಸರಿಸಿದರು. ಈ ಕ್ರೀಯಯಲ್ಲಿ ಸುಣ್ಣದ ಕಲ್ಲು ಒಂದಿಸ್ಟು ಭಾರವನ್ನು ಕಳೆದುಕೊಂಡಿತು. ಈ ಅನಿಲವು ವಾತಾವರಣದ ಗಾಳಿಯ ಒಂದು ಭಾಗ ಎಂದು ಅವರು ಗುರುತಿಸಿದರು. ಹಾಗು ಜೀವಿಗಳು ಉಸಿರಾಟದಲ್ಲಿ ಈ ಅನಿಲವನ್ನು ದೇಹದಿಂದ ಹೊರಹಾಕುತ್ತವೆ ಎಂದು ತೋರಿಸಿದರು. ಉರಿಯುವ ದೀಪವು ಈ ಅನಿಲದಲ್ಲಿ ನಂದಿಹೋಗುವುದನ್ನು ಅವರು ಕಂಡರು.
೧೭೬೨-೬೪ರಲ್ಲಿ ಬ್ಲಾಕ್ ರವರು ನೀರಿನ ಗುಪ್ತೋಶ್ಣದ ಅಧ್ಯಯನ ಗೈದರು. ಉಷ್ಣವು ಒಂದು ಪ್ರವಹನ ಶಕ್ತಿ ಎಂದು ಕಂಡುಕೊಂಡರು. ಜೇಮ್ಸ ವ್ಯಾಟ್‌ರವರು ಈ ತತ್ವ ಬಳಸಿ ಉಗಿಯಂತ್ರ ನಿರ್ಮಿಸಿದರು. ಇವರ ಸುಧಾರಿತ ಯಂತ್ರವನ್ನು ಬಟ್ಟೆ ತಯ್ಯಾರಿಸುವ ಕಾರ್ಖಾನೆಗಳಲ್ಲಿ ಹೆರಳವಾಗಿ ಬಳಸಲಾಯಿತು.
೧೭೬೬-ಹೆನ್ರಿ ಕೆವೆಂಡಿಶರು ತಮ್ಮ ಪ್ರಯೋಗಶಾಲೆಯಲ್ಲಿ ಜಲಜನಕ ಅನಿಲ ಕಂಡುಹಿಡಿದರು. ೧೭೮೪ರಲ್ಲಿ ಕೆವೆಂಡಿಸನು ಜಲಜನಕ ಅನಿಲವು ಗಾಳಿಯಲ್ಲಿ ಉರಿದು ನೀರು ಊಂಟಾಗುವುದನ್ನು ತೋರಿಸಿದರು. ಇದರಿಂದ ನೀರು ಒಂದು ಸಂಯುಕ್ತ ವಸ್ತು ಎಂದು ವಿವರಿಸಿದರು.
೧೭೮೧-ಜೇಮ್ಸ ವ್ಯಾಟ್ ರಿಂದ ಸುಧಾರಿತ ಉಗಿಯಂತ್ರ ನಿರ್ಮಾಣವಾಯಿತು. ಅದಕ್ಕೊಂದು ಪ್ರತ್ಯಕವಾದ ಶೀತಲ-ಪೆಟ್ಟಿಗೆಯನ್ನು ಅಳವಡಿಸಿದರು. ಇದರಿಂದ ಉಗಿಯಂತ್ರದ ಕೆಲಸಮಾಡುವ ಸಾಮರ್ಥ್ಯ ಗಣನೀಯವಾಗಿ ಹೆಚ್ಚಳವಾಯಿತು.
೧೮೦೦-ಬೋಲ್ಟ ಮತ್ತು ವ್ಯಾಟ್ಸ ಕಂಪನಿಯು ಪ್ರಥಮಬಾರಿಗೆ ೪೯೬ ಉಗಿಯಂತ್ರಗಳನ್ನು ನಿರ್ಮಿಸಿತು. ಮೆಂಚೆಸ್ಟರ್‌ನಲ್ಲಿ ಉಗಿಯಂತ್ರ ಬಳಸಿ, ೫೦ಕ್ಕು ಅಧಿಕ ಬಟ್ಟೆ ತಯ್ಯಾರಿಸುವ ಕಾರ್ಖಾನೆಗಳ ಸ್ಥಾಪನೆಯಾಯಿತು. ಇಂಗ್ಲOಡನಲ್ಲಿ ಔದ್ಯೋಗಿಕ ಕ್ರಾಂತಿ ಪ್ರಾರಂಭವಾಯಿತು. ೧೮೧೨-೧೮೨೪-ಉಗಿಯOತ್ರ ಬಳಸಿ ಉಗಿಬಂಡಿ ನಿರ್ಮಾಣ ಮತ್ತು ಲಿವರ್ಪೂಲ್ - ಮೆಂಚೆಸ್ಟರ್ ಪಟ್ಟಣಗಳ ನಡುವೆ ಅಧಿಕ ಪ್ರಮಾಣದ ಸರಕು ಸಾಗಾಣೆ ಆರಂಭವಾಯಿತು.
೧೭೭೫-೧೭೮೩-ಅಮೇರಿಕಾ ಸ್ವಾತಂತ್ರ ಯುದ್ಧ .
೧೭೮೯- ಫ್ರೆಂಚ ಮಹಾ ಕ್ರಾಂತಿ.
೧೮೨೩-ಇOಗ್ಲೆOಡನಲ್ಲಿ ಸಮುದ್ರದ ಉಪಿನಿಂದ ಸೊಡಾ ತಯ್ಯಾರಿಸುವ ಕಾರ್ಖಾನೆ ಸ್ಥಾಪನೆಯಾಯಿತು.
೧೮೩೭-ಆಮೆರಿಕಾ ದೇಶದಲ್ಲಿ ತಂತಿಯಿOದ ಸುದ್ದಿ ತಲುಪಿಸುವ ತಂತ್ರದ ಅವಿಸ್ಕಾರ. ಮೋರ್ಸ-ಕೋಡ್ ಬಳಸಿ, ಅತೀ ವೇಗವಾಗಿ ಸುದ್ದಿ ಕಳುಹಿಸುವ ಸಾಧನೆಯ ಉಗಮ.
೧೮೪೦- ಲಂಡನ್ ನಗರದಲ್ಲಿ ರಸಗೊಬ್ಬರ ತಯ್ಯಾರಿಸುವ ಕಾರ್ಖಾನೆ ಆರಂಭವಾಯಿತು
೧೬೬೦ರಲ್ಲಿ ನಿಸರ್ಗದ ಸತ್ಯವನ್ನು ಅರಿಯುವ ಉದ್ದೇಶದಿಂದ, ಲಂಡನ್ ನಗರದಲ್ಲಿ ರಾಯಲ್ ಸೊಸೈಟಿ ಸ್ಥಾಪನೆಯಾಯಿತು.
೧೬೬೧ರಲ್ಲಿ ರಾಬರ್ಟ್ ಬಾಯ್ಲ್ ರು, ಮೂಲವಸ್ತುವಿನ, ಹಾಗು ಆಮ್ಲ ಮತ್ತು ಪ್ರತ್ಯಾಮ್ಲದ ವಿವರ ನೀಡಿದರು.
೧೬೬೫ರಲ್ಲಿ ರಾಬರ್ಟ್ ಹುಕ್ ಎನ್ನುವ ವಿಜ್ಞಾನಿ ಸೂಕ್ಷ್ಮ ದರ್ಶಕ ಅವಿಸ್ಕರಿಸಿದರು.
೧೬೬೬ರಲ್ಲಿ ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿ ಫ್ರೆಂಚ್ ಆಕೆಡೆಮಿ ಆಫ್ ಸೈನ್ಸ್ ಸ್ಥಾಪಿಸಲಾಯಿತು.
೧೬೭೬ರಲ್ಲಿ ಖಗೋಳ ವಿಜ್ಞಾನಿ ಓಲೆ ರೋಮರ್, ಮೊದಲಬಾರಿಗೆ ಬೆಳಕಿನ ವೇಗವನ್ನು ಕಂಡುಹಿಡಿದರು. ಬೆಳಕು ಸೂರ್ಯನಿಂದ ಭೂಮಿಗೆ ತಲುಪಲು ೮ ನಿಮಿಷ ಮತ್ತು ೧೨ ಸೆಕೆಂಡು ಬೇಕು ಎಂದು ಲೆಕ್ಕ ಹಾಕಿದರು. ಹೀಗೆ ಬೆಳಕು ನಿರ್ವಾತದಲ್ಲಿ ಸೆಕೆಂಡಿಗೆ ೩ ಲಕ್ಷ ಕಿಲೋಮೀಟರ್ ಚಲಿಸುವುದೆಂದು ವಿವರಿಸಿದರು.
೧೬೬೮ರಲ್ಲಿ ನ್ಯೂಟನ್ನರು ಪ್ರತಿಫನನ ಸಿಧಾಂತ ಬಳಸಿ, ಟೆಲಿಸ್ಕೋಪ್ ತಯ್ಯಾರಿಸಿದರು.
೧೬೮೭ರಲ್ಲಿ ನ್ಯೂಟನರ ಚಲನೆಯ ನಿಯಮಗಳು ಮತ್ತು ಅವರ ವಿಶ್ವ ಗುರುತ್ವ್ ನಿಯಮ ಪ್ರಕಟಗೊಂಡವು.
೧೮೦೦ರಲ್ಲಿ ಖಗೋಳ ವಿಜ್ಞಾನಿ ಹರ್ಶಲ್ ರು ೪೦ ಅಡಿ ಉದ್ದದ ಪ್ರತಿಫಲನ ಟೆಲಿಸ್ಕೊಪ್ ನಿರ್ಮಿಸಿ, ಅದರಿಂದ ವಿಶ್ವವನ್ನು ಅವಲೋಕಿಸಿದರು. ನ್ಯೂಟನರ ನಿಯಮಗಳು ಪೂರ್ಣ ವಿಶ್ವಕ್ಕೆ ಅನ್ವಯ ಎಂದು ಸಾರಿದರು.
------------------------------------------------------------------------------------------------
ಆಧುನಿಕ ವಿಜ್ಞಾನ ಬೆಳೆದದ್ದು ಕ್ರಿಸ್ತಶಕ 1500 ರ ನಂತರದಲ್ಲಿ.
[ಬದಲಾಯಿಸಿ]ವಿಶ್ವದ ಸಮಸ್ತ ಕ್ರೀಯೆಗಳಲ್ಲಿಯೂ ನಿರ್ದಿಷ್ಟ ಕ್ರಮವಿದೆ. ಈ ಕ್ರಮಗಳನ್ನು ಗ್ರಹಿಸಿ ಯುಕ್ತ ಭಾಷೆಯಲ್ಲಿ ವಿವರಿಸಬಲ್ಲ ಸಾಮರ್ಥ್ಯ ಮಾನವಮತಿಗಿದೆ. ತಪಾಶೆಣೆಗೆಂದು ತೆಗೆದುಕೊಂಡ ಸಮಸ್ಯೆ ಕುರಿತಂತೆ ವ್ಯವಸ್ಥಿತವಾಗಿ ಮಾಹಿತಿಗಳನ್ನು ಕಲೆಹಾಕುವುದು, ಇವುಗಳನ್ನು ಕ್ರಮಬದ್ಧವಾಗಿ ಅಳವಡಿಸಿ ವಿಶ್ಲೇಷಿಸಿ ಪ್ರಯೋಗಮಾಡುವುದು, ಮತ್ತು ಸಂಗತಿಗೆ ಸರಿದೂಗುವ ಸೂತ್ರ ನಿರೂಪಣೆ ಗೈಯುವುದು. ಇದೊಂದು ವ್ಯವಸ್ಥಿತ ಜ್ಞಾನ ಯಾತ್ರೆ. ಪ್ರಯೋಗ ಮಾರ್ಗ ಮತ್ತು ಪ್ರಯೋಗ ಬುದ್ಧಿ ಯೋಗ.
1600-ಸತ್ಯಾನ್ವೇಶಣೆಯ ಹೊಸ ತತ್ವಗಳು, ಮತ್ತು ಪ್ರಾಯೋಗಿಕ ಪರಿಶೀಲನಾ ಪಧತಿಯ ಉಗಮ. ಪ್ರಯೋಗಗಳ ಆಧಾರದ ಮೇಲೆ ಸತ್ಯವನ್ನು ನಿರ್ಧರಿಸುವ ತೀರ್ಮಾನವಾಯಿತು.
ಕೊಪರ್ನಿಕಸನ ಸಿಧಾಂತ:
[ಬದಲಾಯಿಸಿ]ಕೊಪರ್ನಿಕಸನು 1473 ರಲ್ಲಿ ಪೋಲ್ಯಾಂಡ್ ದೇಶದಲ್ಲಿ ಹುಟ್ಟಿದ. 1496 ರಲ್ಲಿ ಈತನು ಬೊಲೊಗ್ನಾ ವಿಶ್ವ ವಿದ್ಯಾಲಯಕ್ಕೆ ಸೇರಿದನು.
ಬಹಳ ಹಿಂದಿನ ಕಾಲದಿಂದಲೂ ಯುರೋಪಿಯನ್ನರು ಭೂಕೇಂದ್ರವಾದವನ್ನು ನಂಬಿದರು. ಆದರೆ ಖಗೋಳ ವೀಕ್ಷೆಣೆಯ ಕೆಲವು ಸಂಗತಿಗಳು ಈ ಸಿಧಾಂತಕ್ಕೆ ವಿರುದ್ಧವಾಗಿದ್ದವು. 1514-ಕೊಪರ್ನಿಕಸನು ಸೂರ್ಯನನ್ನು ಕೇಂದ್ರಬಿಂದುವಾಗಿಸಿ, ಬರಿಗಣ್ಣಿಗೆ ಕಾಣುವ ಎಲ್ಲ ಗ್ರಹಗಳು [ನಮ್ಮ ಭೂಮಿಯನ್ನು ಒಳಗೊಂಡು] ಸೂರ್ಯನನ್ನು ವಿವಿಧ ಕಕ್ಷೆಗಳಲ್ಲಿ ಸುತ್ತುತ್ತವೆ ಎಂದು ಸಾರಿದನು. ಜಗದ ಕೇಂದ್ರ ಭೂಮಿ ಅಲ್ಲ, ಬದಲಿಗೆ ಸೂರ್ಯ ಎಂದು ಕಂಡುಕೊಂಡನು. ಈ ತತ್ವವು ಅಂದಿನ ನಂಬಿಕೆಗೆ ವಿರುದ್ಧವಾಗಿ ಇರುವುದರಿಂದ, ಕೊಪರ್ನಿಕಸನು ಅದನ್ನು ಪ್ರಕಟಿಸಲಿಲ್ಲ. ಈ ತತ್ವವನ್ನು ತನ್ನ ಜೀವನದ ಕೊನೆಯ ಗಳಿಗೆಯಲ್ಲಿ ಪ್ರಕಟಿಸಲು ಅನುಮತಿ ನೀಡಿದನು. ಆತನ ಬದುಕಿನ ಕೊನೆಯ ದಿನಗಳಲ್ಲಿ,1543 ರಲ್ಲಿ ಆತನ ಕೃತಿಗಳು ಮುದ್ರಿತವಾದವು.
1600 ರ ಹೊತ್ತಿಗೆ ಖಗೋಲಶಾಸ್ತ್ರ ತಿರುವು ಕಂಡಿತು. ಈ ಭೂಮಿಯು ಜಗತ್ತಿನ ಕೇಂದ್ರ ಅಲ್ಲ, ಬದಲಿಗೆ ಸೂರ್ಯನು ಈ ಜಗದ ಕೇಂದ್ರವಸ್ತು ಎಂಬುದು ಸತ್ಯಸಂಗತಿಯಾಗಿ ಹೊರಹೊಮ್ಮಿತು.
1600 ರ ತರುವಾಯ ಗೆಲೆಲಿಯೋ ಅವರ ಟೆಲೆಸ್ಕೋಪ್ ಅನ್ವೇಷೆಣೆ ಹಾಗು ಆಕಾಶಕಾಯಗಳ ವೀಕ್ಷಣೆ ಯಿಂದ, ಕೊಪರ್ನಿಕಸರ ಸಿದ್ಧಾಂತಕ್ಕೆ ಪೂರಕ ಬಲ ದೊರೆಯಿತು.
1600-ನಿಕೊಲಸ್ ಕೋಪರ್ನಿಕಸ್ ರ ಸೂರ್ಯಕೇಂದ್ರವಾದದಿಂದ ನವಚೇತನ ಆರಂಭಗೊಂಡಿತು. ಖಗೋಳಶಾಸ್ತ್ರಕ್ಕೆ ಗೆಲಿಲಿಯೋ ಹಾಗು ಕೆಪ್ಲರರ ಕೊಡುಗೆ ಅಪಾರ.
1609- ಕೆಪ್ಲರ್ ನ ಗ್ರಹಗಳ ಚೆಲನೆಯ ನಿಯಮಗಳ ನಿರೂಪಣೆ.
1610- ಗೆಲೆಲಿಯೋ ಗೆಲಿಲೀ ತಮ್ಮ ಟೆಲಿಸ್ಕೋಪ್ ಬಳಸಿ, ಗುರುಗ್ರಹದ ನಾಲ್ಕು ಉಪಗ್ರಹಗಳನ್ನುಶೋಧಿಸಿದರು. They were called Galilean satellites.
1610- ಗೆಲೆಲಿಯೋ ಗೆಲಿಲೀ ಶುಕ್ರಗ್ರಹದ ಕಲೆಗಳನ್ನು [ಚಂದ್ರನ ಕಲೆಗಳಂತಿರುವ] ಪತ್ತೆಹಚ್ಚಿದರು.
1617-ಗೆಲೆಲಿಯೋ ಗೆಲಿಲೀ ಮೋಡದಂತೆ ಕಾಣುವ ಆಕಾಶ ಗಂಗೆಯು, ಒತ್ತೊತ್ತಾದ ನಕ್ಷತ್ರಗಳಪುಂಜವೆಂದು ತೋರಿಸಿದರು.
1633- ಗೆಲೆಲಿಯೋ ಗೆಲಿಲೀ ಭೂಮಿಯು ಸೂರ್ಯನನ್ನು ಸುತ್ತುತ್ತದೆ, ಎಂದು ಬರೆದುದಕ್ಕೆ,ಇದು ಬೈಬಲ್ ಧರ್ಮ ಗ್ರಂಥದ ವಿರೋಧಿ ಎಂದು, ಆತನನ್ನು ಗ್ರಹಬಂಧನಕ್ಕೆ ಒಳಪಡಿಸಿದರು. His writings were in support of Copernican heliocentric system of universe.
1642- ಇಂಗ್ಲೆಂಡಿನ ಅರಸ ಚಾರ್ಲ್ಸ್ I ಮತ್ತು ಪಾರ್ಲಿಮೆಂಟ್ ಗಳ ಮಧ್ಯ ಮತಭೇದದಿಂದ ಸಾಮಾಜಿಕ ಕ್ರಾಂತಿಯ ಆರಂಭ. English civil war started.
1649- ಇಂಗ್ಲೆಂಡ್ ನಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿತು. ಚಾರ್ಲ್ಸ್ ಅರಸನನ್ನು ಗಲ್ಲಿಗೇರಿಸಲಾಯಿತು.
1654-The black death strikes eastern Europe.
166೦- ಲಂಡನನಲ್ಲಿ ರಾಯಲ್ ಸೊಸೈಟಿಯ ಸ್ಥಾಪನೆಯಾಯಿತು.
1666- ತದನಂತರ ಪ್ಯಾರಿಷ್ ನಲ್ಲಿ ಫ್ರೆಂಚ್ ವಿಜ್ಞಾನ ಅಕಾಡಮಿಯ ಸ್ಥಾಪನೆ.
1661-ರಾಬರ್ಟ ಬಾಯ್ಲರವರ ವಾಯು ವತ್ತಡದ ನಿಯಮಗಳ ಶೋಧ. ಧಾತುವಿನ ಪರಿಕಲ್ಪನೆ. [The Skeptical Chemist in 1661]
ಐಸಾಕ್ ನ್ಯೂಟನ್ :
1642- ನ್ಯೂಟನ್ ಡಿಸೇಂಬೆರ್ 25ರಂದು ಪೂರ್ವ ಇಂಗ್ಲೆಂಡಿನ ರೈತರ ಮನೆಯಲ್ಲಿ ಜನಿಸಿದನು. ಅವನು ಹುಟ್ಟುವುದಕ್ಕೆ ಮುನ್ನವೇ ತಂದೆ ಇಲ್ಲದಾದನು. ಅವನು ಮಗುವಿರುವಾಗಲೇ ತಾಯೀ ಇನ್ನೊಬ್ಬನನ್ನು ಮದುವೆಯಾದಳು. ಚಿಕ್ಕವನಿರುವಾಗ ಅಜ್ಜಿಯ ಮನೆಯಲ್ಲಿ ಬೆಳೆದನು. ಹೆಚ್ಚಿನ ಸಮಯವನ್ನು ಏಕಾಂತವಾಗಿ ಕಳೆದನು.
1665-ನ್ಯೂಟನನು ಕ್ಯಾಂಬ್ರಿಜ್ ವಿಶ್ವವಿದ್ಯಾಲಯದಿಂದ ಪದವಿ ಪಡೆದನು. ಲಂಡನಿನಲ್ಲಿಯ ಪ್ಲೇಗ್ ಹಾವಳಿಯಿಂದಾಗಿ ತನ್ನ ಹಳ್ಳಿಯ ಹೊಲಕ್ಕೆ ಹೋದನು. ಅಲ್ಲಿರುವಾಗ ಕ್ಯಾಲ್ಕುಲಸ್ ಎನ್ನುವ ಗಣಿತ ಶ್ಯಾಸ್ತ್ರ ಕಂಡುಹಿಡಿದನು. ಸೂರ್ಯನ ಬೆಳಕಿನ ವಿಭಜನೆಯಿಂದ ಕಾಮನ ಬಿಲ್ಲಿನಂತಹ, ಬಣ್ಣಬಣ್ಣದ ಕಿರಣಗಳನ್ನು ಕಂಡನು. 1669ರಲ್ಲಿ ಅವನು ಗಣಿತ ಪ್ರಾಧ್ಯಾಪಕನಾಗಿ ಕ್ಯಾಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಮರಳಿದನು. 1672ರಲ್ಲಿ ಅವನು ರಾಯಲ್ ಸೊಸೈಟಿಯ ಸದಸ್ಯನಾದನು. ಅಲ್ಲಿ ತನ್ನ ಬೆಳಕಿನ ಸಂಶೋಧನೆಯ ಪ್ರಯೋಗಗಳನ್ನು ಪ್ರದರ್ಶಿಸಿದನು.
1684-ರಾಯಲ್ ಸೊಸೈಟಿಯ ಅಧ್ಯಕ್ಷನಾದ ಎಡ್ಮನ್ಡ್ ಹ್ಯಾಲಿ ನ್ಯೂಟನ್ನನ್ನು ಕ್ಯಾಂಬ್ರಿಜ್ ನಲ್ಲಿ ಭೆಟ್ಟಿ ಮಾಡಿದನು. ನ್ಯೂಟನನ ಕೃತಿ ಬಿಡುಗಡೆಗೆ ಧನಸಹಾಯ ಮಾಡಿದನು. 1687- ಐಸಾಕ್ ನ್ಯೂಟನ ರ ಪ್ರಿನ್ಸಿಪಿಯಾ ಮೆಥೆಮ್ಯಾಟಿಕಾ ಪುಸ್ತಕ ಪ್ರಕಟವಾಯಿತು.[Principia Mathematica]
ನ್ಯೂಟನ್ ರಚಿತ ವಿಶ್ವ ಗುರುತ್ವ ನಿಯಮ :
[ಬದಲಾಯಿಸಿ]M ಮತ್ತು m ರಾಶಿಗಳಿರುವ ಎರಡು ಕಾಯಗಳ ನಡುವಿನ ಅಂತರ r ಆಗಿದ್ದರೆ, ಇವುಗಳ ನಡುವೆ ವರ್ತಿಸುವ ಗುರುತ್ವಾಕರ್ಷಣೆ ಬಲ F = GMm/r2
ಭೂಮಿಯು ಸೂರ್ಯನ ಸುತ್ತ ಪರಿಭ್ರಮಿಸುವುದು ಮತ್ತು ಚಂದ್ರನು ಭೂಮಿಯನ್ನು ಪರಿಭ್ರಮಿಸುವುದು ಈ ನಿಯಮಕ್ಕೆ ಒಳಪಟ್ಟಿದೆ.
1688- ಪ್ರಜಾಪ್ರಭುತ್ವಗಳ ಸ್ಥಾಪನೆ ಮತ್ತು ಸಾಮಾಜಿಕ ನ್ಯಾಯ, ಪ್ರಜಾಹಿತ ಕೆಲಸಗಳು.
1689-The English parliament passes Bill of rights.
1700- ಜರ್ಮನಿಯಲ್ಲಿ ಬರ್ಲಿನ್ ವಿಜ್ಞಾನ ಅಕಾಡಮಿ ಸ್ಥಾಪನೆಯಾಯಿತು.
1705- ಖಗೋಳ ವಿಜ್ಞಾನಿ- ಎಡಮಂಡ್ ಹ್ಯಾಲಿಯು, 1337 ರಿಂದ 1698 ರ ವರೆಗೆ ಕಾಣಿಸಿಕೊಂಡ, 24 ಧೂಮಕೇತುಗಳ ಆಳವಾದ ಅಧ್ಯಯನ ಗೈದು; 1531, 1607 ಮತ್ತು 1682 ಗಳಲ್ಲಿ ಕಾಣಿಸಿಕೊಂಡಧೂಮಕೇತು ಒಂದೆ ಎಂದೂ, ಮತ್ತು ಅದು ಪುನಃ 1758ರಲ್ಲಿ ಕಾಣುವುದೆಂದು ಮುನ್ನುಡಿದನು. ಅವನು 1742 ರಲ್ಲಿ ಮರಣ ಹೊಂದಿದನು; ಧೂಮಕೇತುವು 1758 ರ ಕೊನೆಯಲ್ಲಿ ಪ್ರಕಟಗೊಂಡಿತು. ಹರ್ಶಗೊಂಡ ವಿಜ್ಞಾನಿಗಳು, ಅದನ್ನು ಹ್ಯಾಲಿ ಧುಮಕೇತು ಎಂದು ಕರೆದರು.ಧೂಮಕೇತುಗಳು ಗ್ರಹಗಳಂತೆ ಸೂರ್ಯನನ್ನು ಸುತ್ತುತ್ತವೆ ಎಂದು ಖಚಿತವಾಯಿತು.
1736-ಭೂಮಿಯ ಆಕಾರ ತಿಳಿಯಲು ವಿಜ್ಞಾನಿಗಳಿಂದ ಧ್ರುವಗಳತ್ತ ಪ್ರಯಾಣ ಮತ್ತು ಅಂಕಿ ಆಂಶಗಳ ಸಂಗ್ರಹಣೆ. ಭೂಮಿ ಪರಿಪೂರ್ಣ ದುಂಡಾಗಿ ಇಲ್ಲ, ಬದಲಿಗೆ ಧ್ರುವಗಳತ್ತ ಸ್ವಲ್ಪ ಚಪ್ಪಟೆ ಇದೆ ಎಂದು ಖಾತ್ರಿಯಾಯಿತು.
1746- ಔದ್ಯೋಗಿಕವಾಗಿ ದೊಡ್ಡ ಪ್ರಮಾಣದಲ್ಲಿ ಗಂಧಕಾಮ್ಲದ ತಯ್ಯಾರಿಕೆ [Lead Chamber process].
1760-ಯುರೋಪ ಖಂಡದಲ್ಲಿ ಔದ್ಯೋಗಿಕ ಕ್ರಾಂತಿಯ ಆರಂಭ.1769-ಪ್ರಥಮ ಬಾರಿಗೆ ಬಟ್ಟೆ ತಯ್ಯಾರಿಕೆಯಲ್ಲಿ ಉಗಿ ಯಂತ್ರದ ಬಳಕೆ.
1754-ಜೋಸೆಪ್ ಬ್ಲ್ಯಾಕ್ ರಿಂದ ಸುಣ್ಣದ ಕಲ್ಲಿನ ಪ್ರಯೋಗಗಳು. ಇಂಗಾಲದ ಡೈ ಆಕ್ಸಾಯಿಡ ಅನಿಲ ತಯ್ಯಾರಿಕೆ. [he called it as fixed air]
1762-1764 ರಲ್ಲಿ ಜೋಸೆಫ್ ಬ್ಲ್ಯಾಕ್ ಗುಪ್ತೋಷ್ಣದ ಅಧ್ಯಾಯನ ಗೈದರು. ಉಷ್ಣವು ಒಂದು ಪ್ರವಹನ ಶಕ್ತಿ ಎಂದು ಕಂಡುಕೊಂಡರು. ಉಪಕರಣ ತಯ್ಯಾರಕ ಜೇಮ್ಸ ವ್ಯಾಟ್ ಈ ತತ್ವ ಬಳಸಿ ಉಗಿ ಯಂತ್ರಕ್ಕೆ ಹೊಸದಾಗಿ ಒಂದು ಶೀತಲ-ಪೆಟ್ಟಿಗೆಯನ್ನು ಜೋಡಿಸಿದರು. ಈ ಸುಧಾರಣೆಯಿಂದ ಉಗಿಯಂತ್ರದ ಕಾರ್ಯ ಕ್ಷಮತೆಯಲ್ಲಿ ಹೆಚ್ಚಳ ಸಾಧ್ಯವಾಯಿತು.
1766- ಹೆನ್ರಿ ಕೆವೆಂದಿಶ್ ರಿಂದ ಜಲಜನಕ ಅನಿಲದ ಅನ್ವೇಷಣೆ.
1784 ರಲ್ಲಿ ಹೆನ್ರಿ ಕೆವೆಂದಿಶ್ ಜಲಜನಕವು ಗಾಳಿಯಲ್ಲಿಉರಿದು ನೀರು ಉಂಟಾಗುವುದನ್ನು ಅವಿಸ್ಕರಿಸಿದರು.
1774-ಜೋಸೆಫ್ ಪ್ರೀಸ್ಟ್ಲೆ ಯವರು ಪಾದರಸದ ಅಕ್ಸಯಿಡ್ ಅದಿರನ್ನು ಪೀನದರ್ಪಣದಿಂದ ಸೂರ್ಯನ ಕಿರಣಗಳನ್ನು ಕೇಂದ್ರೀಕರಿಸಿ ಕಾಯಿಸಿ, ಆಮ್ಲಜನಕ ಅನಿಲ ಕಂಡುಹಿಡಿದರು. ಅವರು ಪ್ಯಾರಿಸ್ ನಗರಕ್ಕೆ ಭೆಟ್ಟಿ ಕೊಟ್ಟಾಗ ಅಲ್ಲಿನ ವಿಜ್ಞಾನಿಗಳಿಗೆ ತಮ್ಮ ಪ್ರಯೋಗದ ಬಗ್ಗೆ ವಿವರಿಸಿದರು.
1779-ಲಾವೋಸಿಯರ್ ರಿಂದ ಉರಿಯುವ ಪರಿಕಲ್ಪನೆಯ ವಿವರಣೆಗಳು. ದಹನ ಕ್ರಿಯಯಲ್ಲಿ ಆಮ್ಲಜನಕ ಅನಿಲದ ಪಾತ್ರದ ಸತ್ಯ ವಿವರಣೆ; ಲಾವೋಸಿಯರರ ರಾಸಾಯನಿಕ ಶಾಸ್ತ್ರದ ತಳಹದಿಗೆ ಕಾರಣ ವಾಯಿತು. ಧಾತುಗಳನ್ನು ಹೆಸರಿಸುವಲ್ಲಿ ಮತ್ತು ಹೊಸ ಹೊಸ ಶಬ್ದಗಳ ಉಪಯೋಗವು ರಸಾಯನ ಶಾಸ್ತ್ರಕ್ಕೆ ಹೊಸ ಭಾಸೆ ಕೊಟ್ಟಿತು. ಲಾವೋಷಿಯೆರರು ಮೊದಲ ಬಾರಿಗೆ, ಅಂದು ತಿಳಿದಿರುವ ಎಲ್ಲಾ ಧಾತುಗಳ ಪಟ್ಟಿ ಮಾಡಿದರು.
ಅವರು ರಾಸಾಯನಿಕ ಬದಲಾವಣೆಯಲ್ಲಿ ವಸ್ತುವಿನ ರಾಶಿ ಸ್ಥಿರವಾಗಿರುತ್ತದೆ ಎಂದು ತೋರಿಸಿದರು.ರಾಸಾಯನಿಕ ಬದಲಾವಣೆಯಲ್ಲಿ ಪಾಲ್ಗೊಳ್ಳುವ ವಸ್ತುಗಳ ರಾಶಿಯು, ಉತ್ಪನ್ನವಾದ ವಸ್ತುಗಳ ರಾಶಿಗೆ ಸಮವಾಗಿ ಇರುತ್ತದೆಂದು ತೋರಿಸಿದರು. ವಸ್ತುಯು ನಾಶವಾಗದು ಅಥವಾ ಹೊಸದಾಗಿ ಹುಟ್ಟದು ಎಂದು ತೋರಿಸಿದರು.
ಆಧುನಿಕ ರಸಾಯನ ಶಾಸ್ತ್ರಕ್ಕೆ ಮೂಲಪುರುಷರಾದರು.
1780- ವಿಲಿಯಂ ಹರ್ಷೇಲ್ಲರು ಖಗೋಳ ವೀಕ್ಸ್ಹೆಣೆ ಗೈದು , ನ್ಯೂಟನ್ ರ ನಿಯಮಗಳ ಅನ್ವಯ ಎಲ್ಲೆಲ್ಲೂ ಸರಿ ಎಂದರು. ಈ ನಿಯಮಗಳು ಇಡೀ ವಿಶ್ವಕ್ಕೆ ಅನ್ವಯ ಎಂದು ಉದ್ಗರಿಸಿದರು.William Herschel exclaimed that Newtons laws were indeed universal !
ಅಗಾಧವಾದ [ನಕ್ಷೆತ್ರಪುಂಜದಲ್ಲಿ] ಆಕಾಶ ಗಂಗೆಯಲ್ಲಿ, ನಕ್ಷತ್ರವು ಒಂದು ತುಣುಕು. ನಕ್ಷತ್ರದ ಮಹಾ ವ್ಯಾಪ್ತಿಯಲ್ಲಿ ಭೂಮಿ ಒಂದು ತುಣುಕು. ಭೂಮಿಯ ಮಹಾವ್ಯಾಪ್ತಿಯಲ್ಲಿ ಮಾನವ ಒಂದು ತುಣುಕು. ಮಾನವನ ಮಹಾವ್ಯಾಪ್ತಿಯಲ್ಲಿ ಪರಮಾಣು ಒಂದು ತುಣುಕು.
1783- ಅಮೇರಿಕ ದೇಶವು ಬ್ರಿಟಿಷರಿಂದ ಸ್ವತಂತ್ರವಾಯಿತು.
1784-ಅದಿರಿನಿಂದ ಕಬ್ಬಿಣ ಬೆರ್ಪಡಿಸುವ ವಿಧಾನದಲ್ಲಿ ಸುಧಾರಣೆ.
1785-ಜೇಮ್ಸ ವ್ಯಾಟ್ ರಿಂದ ಉಗಿ ಯಂತ್ರದ ಸುಧಾರಣೆ ಮತ್ತು ಬಟ್ಟೆ ತಯ್ಯಾರಿಕೆಯ ಉದ್ಯೋಗದಲ್ಲಿ ಉಗಿ ಯಂತ್ರಗಳ ಯಾಂತ್ರಿಕ ಶಕ್ತಿಯ ಸಫಲ ಬಳಕೆ. ಉಗಿಯಂತ್ರಗಳು ಕಡಿಮೆ ವೆಚ್ಚದ ಯಾಂತ್ರಿಕ ಶಕ್ತಿಯ ಸಾಧನಗಳಾದವು. ಇದರಿಂದ ಯುರೋಪ ಖಂಡದಲ್ಲಿ ಔದ್ಯೋಗಿಕ ಕ್ರಾಂತಿ ಆರಂಭವಾಯಿತು.
1794- ಫ್ರೆಂಚ್ ಮಹಾ ಕ್ರಾಂತಿಯಲ್ಲಿ ಲಾವೊಲಿಸಿಯರ್ ವಿಜ್ಞಾನಿಯು ಕೊಲೆಯಾದನು.
1785-ಫ್ರೆಂಚ್ ಭೌತ ವಿಜ್ಞಾನಿ ಕೊಲಂಬಸ್ ರ ವಿದ್ಯುತ್ ಆವೇಶಗಳ ಆಕರ್ಷಣೆಯ ನಿಯಮ.
Coulomb's inverse-square law:-The magnitude of the electrostatic force of attraction or repulsion between two point charges is directly proportional to the product of the magnitudes of charges and inversely proportional to the square of the distance between them.
1800-ಇಟಲಿಯ ಭೌತಶಾಸ್ತ್ರ ಪ್ರಾಧ್ಯಾಪಕರಾದ ಅಲೆಸ್ಯಾಂಡ್ರೋ ವೋಲ್ಟಾ ರವರ ವಿದ್ಯುತ್ ಕೋಶದ ಆವಿಸ್ಕಾರ. Voltaic Pile
1808-ಡಾಲ್ಟನ್ ರ ಪರಮಾಣು ಸಿಧ್ಧಾಂತ ಮತ್ತು ಔದ್ಯೋಗಿಕ ರಸಾಯನ ಶಾಸ್ತ್ರದ ಬೆಳವಣಿಗೆ.ಎಲ್ಲಾ ವಸ್ತುಗಳು ಪರಮಾಣುಗಳೆಂಬ ಸೂಕ್ಷ್ಮ ಕಣಗಳಿಂದ ಆಗಿವೆ ಎಂದು ಡಾಲ್ಟನ್ ರವರು ಪ್ರತಿಪಾದಿಸಿದರು. ಪರಮಾಣುಗಳನ್ನು ಪರಮಾಣು ರಾಶಿಯಿಂದ ಗುರುತಿಸಲಾಗುತ್ತಿತ್ತು. ಭಿನ್ನ ಭಿನ್ನ ಜಾತಿಯ ಧಾತುಗಳ ಪರಮಾಣುಗಳು ಭಿನ್ನ ಭಿನ್ನ ರಾಶಿಯನ್ನು ಹೊಂದಿವೆ ಎಂದು ಪ್ರತಿಪಾದಿಸಿದರು.
1812-1824, ಯಾಂತ್ರಿಕ ಶಕ್ತಿ ಬಳಸಿ ಉಗಿ ಬಂಡಿಯ ನಿರ್ಮಾಣ ಮತ್ತು ಬ್ರಹತ ಪ್ರಮಾಣದಲ್ಲಿ ಸರಕು ಸಾಗಣೆ. [Stephenson was hired to build the 13-km Hetton colliery railway in 1820]. This line used a gauge of 4 ft 8 in (1,422 mm). The rails used for the line were wrought iron.
1828-ಸಮುದ್ರದ ಉಪ್ಪು ಬಳಸಿ ಸೋಡಾ ತಯ್ಯಾರಿಕೆ ಉದ್ಯೋಗ ಆರಂಭ ವಾಯಿತು. NaCl to Na2CO3. ಹೀಗೆ ರಾಸಾಯನ ಶಾಸ್ತ್ರದ ಬೆಳವಣಿಗೆ ಪ್ರಗತಿಯಲ್ಲಿ ಸಾಗಿತು.
1837- ತಂತಿಯಿಂದ ಮಾಹಿತಿ ಕಳುಹಿಸುವ ಸಾಧನದ ಆವಿಸ್ಕಾರ. Telegraph was invented.
1840-ರಾಸಾಯನಿಕ ವಿದ್ಯಾಲಯಗಳ ಸ್ಥಾಪನೆ.
ಮೈಕಲ್ ಫ್ಯಾರಡೆ
[ಬದಲಾಯಿಸಿ]1-3-1813 ರಂದು, ಮೈಕಲ್ ಫ್ಯಾರಡೆಯವರು ತಮ್ಮ 21 ನೇ ವಯಸ್ಸಿನಲ್ಲಿ ಇಂಗ್ಲೆಂಡಿನ ರಾಯಲ್ ಸಂಸ್ಥೆಯಲ್ಲಿ ತಮ್ಮ ಕೆಲಸವನ್ನು ಆರಂಭಿಸಿದರು. ಮೈಕಲರು ರಾಯಲ್ ಸಂಸ್ಥೆಯಲ್ಲಿ ಕೆಲಸದಲ್ಲಿರುವಾಗ, ಕೇವಲ 7 ತಿಂಗಳುಗಳಲ್ಲಿ, ಹಂಫ್ರಿ ದೇವಿಯವರು ಫ್ಯಾರಡೆಯನ್ನು 18 ತಿಂಗಳುಗಳ ಯೂರೋಪಿನ ಪ್ರವಾಸಕ್ಕಾಗಿ ತಮ್ಮ ಸೆಕ್ರೆಟರಿ ಆಗಿ ಕರೆದುಕೊಂಡು ಹೋದರು. ಈ ಪ್ರವಾಸದಲ್ಲಿ ಫ್ಯಾರಡೆಯವರು ಫ್ರಾನ್ಸನಲ್ಲಿ ಅಂಪೇರ್ ಹಾಗು ಮಿಲನ್ ನಲ್ಲಿ ಅಲೆಸ್ಯಾಂಡ್ರೋ ವೋಲ್ಟಾ ರಂತಹ ಶ್ರೇಷ್ಟ ವಿಜ್ಞಾನಿಗಳನ್ನು ಕಂಡರು. ಈ ಪ್ರವಾಸ ಅವರಿಗೆ ವಿಶ್ವವಿದ್ಯಾಲಯದಲ್ಲಿಯ ಶಿಕ್ಚಣದಂತಹ ಅನುಭವ ನೀಡಿತು ಮತ್ತು ಇದರಿಂದ ಫ್ಯಾರಡೆಯವರು ಹೆಚ್ಚಿನ ವೈಜ್ಞಾನಿಕ ತರಬೇತಿ ಪಡೆದರು. 1821 ರಲ್ಲಿ, ತಮ್ಮ 29 ನೇ ವಯಸ್ಸಿಗೆ ಅವರು ರಾಯಲ್ ಸಂಸ್ಥೆಯ ಹಾಗೂ ಪ್ರಯೋಗಶಾಲೆಯ ಸೂಪರಿಂಟೆಂಡೆಂಟ್ ಆಗಿ ಬಡತಿ ಪಡೆದರು. ಇದು ಅವರು ತಮ್ಮದೇ ಆದ ರೀತಿಯಲ್ಲಿ ಒಬ್ಬ ಪ್ರಮುಖ ವಿಜ್ಞಾನಿಯಾಗಿ ಬೆಳೆದುದಕ್ಕೆ ಸಾಕ್ಷಿಯಾಗಿದೆ. 1825 ರಲ್ಲಿ ತಮ್ಮ 33 ನೇ ವಯಸ್ಸಿಗೆ, ಫ್ಯಾರಡೆಯವರು ರಾಯಲ್ ಸಂಸ್ಥೆಯ ಪ್ರಯೋಗಾಲಯದ ನಿರ್ದೇಶಕರಾಗಿ ನೇಮಕಗೊಂಡರು.
1856-ಕಬ್ಬಿಣ ಮತ್ತು ಉಕ್ಕು ಉತ್ಪಾದನಾ ಸಾಮರ್ಥ್ಯೆಯ ಹೆಚ್ಚಳ. [Henry Bessemer’s process could produce 5 tons of Iron in a heat of one hour].
1860- ಜರ್ಮನಿಯಲ್ಲಿ ಜಾಗತಿಕ ಮಟ್ಟದಲ್ಲಿ ಮೊಟ್ಟಮೊದಲ ರಾಸಾಯನಿಕ ವಿಜ್ಞಾನಿಗಳ ಕೂಟ. [The Karlsruhe Congress] Germany.
1869-ಸೈಬೇರಿಯಾದ ವಿಜ್ಞಾನಿ ಮೆಂಡೆಲೇವ್ ಅವರಿಂದ ಧಾತುಗಳ ಆವರ್ತಕ ಕೋಸ್ಟಕದ ಪರಿಕಲ್ಪನೆ. ಹೀಗೆ ಅಧುನಿಕ ವಿಜ್ಞಾನ ಅಸ್ತಿತ್ವಕ್ಕೆ ಬಂದಿತು.
1876- ಅಮೆರಿಕಾ ದೇಶದಲ್ಲಿ ದೂರವಾಣಿಯ ಬಳಕೆ ಆರಂಭ. telephone was invented.
1894-ವಿಲಿಯಮ್ ರಾಮಸೇ ಅವರಿಂದ ನಿಷ್ಕ್ರಿಯ ಅನಿಲಗಳ [Noble gases] ಶೋಧ .
1900 ರ ವರೆಗೆ ವಿಜ್ಞಾನಿಗಳು ೮೮ ವಿವಿಧ ಪ್ರಕಾರದ ಮೂಲವಸ್ತುಗಳ ಶೋಧ ಗೈದರು.
1900- ಎಲ್ಲಾ ಧಾತುಗಳ ಪರಮಾಣುಗಳು, ಇಲೆಕ್ಟ್ರಾನ್ ಎನ್ನುವ ಸೂಕ್ಷ್ಮ ಕಣಗಳನ್ನು ಹೊಂದಿವೆ ಎಂದು ಜೆ ಜೆ ಥಾಮ್ಸನ್ ವಿವರಿಸಿದರು. ಈ ಸೂಕ್ಷ್ಮ ಕಣಗಳು ಋಣ ವಿದ್ಯುತ್ ಆವೇಶ ಹೊಂದಿವೆ ಎನ್ನುವುದು ಖಚಿತವಾಯಿತು.
1900-ಭೌತ ವಿಜ್ಞಾನಿ ಪ್ಲ್ಯಾಂಕ್ ರಿಂದ ಶಕಲ ಸಿಧಾಂತದ ಉಗಮ ವಾಯಿತು. [Quantum theory of radiation].
1905 ರಲ್ಲಿ ಐನ್ಸ್ಟೀನ್ ಎಂಬ ಮಹಾನ್ ವಿಜ್ಞಾನಿಯು ಸಾಪೇಕ್ಷೆ ಸಿಧಾಂತ ಬಳಸಿ; ವಸ್ತು ಮತ್ತು ಶಕ್ತಿಯ ಸಂಬಂಧದ ಸೂತ್ರವನ್ನು ಪ್ರಕಟಿಸಿದರು. E = mC2 ವಸ್ತು ಮತ್ತು ಶಕ್ತಿ ಎರಡು ಒಂದೇ ಇದ್ದು , ವಸ್ತುವನ್ನು ಶಕ್ತಿಯಾಗಿ ರೂಪಾಂತರಿಸಬಹುದು ಎಂದರು.
ಮುಂದಿನ ಮೂರು ದಶಕಗಳಲ್ಲಿ ಪರಮಾಣುಗಳು ಇಲೆಕ್ಟ್ರಾನ್, ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳೆಂಬ ಅತೀ ಸೂಕ್ಷ್ಮ ಕಣಗಳಿಂದ ಆಗಿವೆ ಎಂದು ಪ್ರಯೋಗಗಳಿಂದ ತಿಳಿದುಕೊಂಡರು.
1902- ರೈಟ್ ಸಹೋದರರಿಂದ ಅಮೆರಿಕಾ ದೇಶದಲ್ಲಿ ವಿಮಾನ ತಯ್ಯಾರಿಸಲಾಯಿತು.
1912- ಮಾನವ ದ್ವನಿಯ ರೇಡಿಯೋ ಪ್ರಸಾರ ಆರಂಭ.
1913- ಬೊಹರ್ ರ ಜಲಜನಕ ಪರಮಾಣುವಿನ ರಚನಾ ವಿನ್ಯಾಸ. ಪರಮಾಣುವಿನ ಸ್ಥಿರ ಶಕ್ತಿಯ ಕವಚಗಳ ಕಲ್ಪನೆ. ಇಲೆಕ್ಟ್ರಾನ್ ಗಳು ನಿರ್ದಿಷ್ಟ ಕವಚದಲ್ಲಿ ಮಾತ್ರ ಇರಬಹುದಾದ ಕಲ್ಪನೆ.
1928- ಶ್ರೋಡಿಂಗೆರ್ ವಿಜ್ಞಾನಿಯು ಪರಮಾಣು ರಚನೆಗೆ ಸಂಬಂಧಿಸಿದಂತೆ, ಶಕಲ ಸಿಧಾಂತದ ಮೂಲ ಸೂತ್ರವನ್ನು ಪ್ರಕಟಿಸಿದನು.
E𝟁 = H𝟁 , ಇದು ಎಲ್ಲಾ ಪರಮಾಣುಗಳ ರಚನೆ ಅರಿಯಲು ಪೂರಕವಾಯಿತು. ಪರಮಾಣುಗಳ s, p, d, ಮತ್ತು f, ಉಪಕವಚಗಳ ಪರಿಚಯವಾಯಿತು.
ಕ್ವಾಂಟಮ್ ಸಿಧಾಂತ:
ಗೆಲಿಲಿಯೋ ಮತ್ತು ನ್ಯೂಟನ್ ರನ್ನು ಭೌತಶಾಸ್ತ್ರದ ಪಿತಾಮಹಾ ಎನ್ನಬಹುದು. ನ್ಯೂಟನರ ಚಲನೆಯ ನಿಯಮಗಳು, ಮತ್ತು ವಿಶ್ವಗುರತ್ವ ನಿಯಮ ಇದಕ್ಕೆ ಸಾಕ್ಷಿ. ಮ್ಯಾಕ್ಸ್ ಪ್ಲ್ಯಾಂಕರ ವಿದ್ಯುತ್-ಆಯಸಕಾಂತ ವಿದ್ಯಮಾನದ ಸಮೀಕರಣಗಳು, ರೇಡಿಯೋ ಅಲೆಗಳನ್ನು ವಿವರಿಸುತ್ತವೆ.
ಕೆಂಪಗೆ ಕಾದ ಲೋಹದಿಂದ ಹೊರಡುವ ಶಕ್ತಿಯ-ಕಿರಣಗಳ ಅಧ್ಯಯನದಲ್ಲಿ, ಯಾವ ನಿಯಮವು ಇದನ್ನು ಎಸೆಸ್ವಿಯಾಗಿ ವಿವರಿಸಲು ಸಾಧ್ಯವಾಗಿರಲಿಲ್ಲ. ಈ ಸಮಸ್ಯೆಗೆ ೧೯೦೦ರಲ್ಲಿ ಮ್ಯಾಕ್ಸ್ ಪ್ಲ್ಯಾಂಕರು ಬೆಳಕಿನ ಶಕ್ತಿಯ-ಪೊಟ್ಟಣದ ಕಲ್ಪನೆ ರೋಪಿಸುತ್ತಾರೆ. ಬೆಳಕು, ನಿರ್ಧಿಷ್ಟ ಶಕ್ತಿಯ ಗುಚ್ಛಗಳ ರೂಪದಲ್ಲಿ ಚಲಿಸುತ್ತದೆ. ಮಳೆಯ ಹನಿಗಳು ನೆಲಕ್ಕುರುಳುವ ಹಾಗೆ. ನಿರ್ಧಿಷ್ಟ ಗಾತ್ರದ ಈ ಶಕ್ತಿಯ ಪೊಟ್ಟಣವನ್ನು ಕ್ವಾಂಟಮ್ ಎಂದು ಕರೆದರು. ಕ್ವಾಂಟಮ್ ಅನ್ನು E = hf ಎನ್ನುವ ಸೂತ್ರದಿಂದ ವಿವರಿಸಿದರು. ಇಲ್ಲಿ h =6.6261 × 10-34 Js ಒಂದು ಸ್ಥಿರಾಂಕ. ಇದನ್ನು ಪ್ಲ್ಯಾಂಕರ ಸ್ಥಿರಾಂಕ ಎನ್ನುವರು ಮತ್ತು f ಬೆಳಕಿನ ಶಕ್ತಿಯ ಆವರ್ತನ ಸಂಖ್ಯ .
ಐನ್ಸ್ಟೇನರು ಫೋಟೋ -ವಿದ್ಯುತ್ ಪರಿಣಾಮ ವಿವರಿಸಲು ಪ್ಲ್ಯಾಂಕರ E = hf ಸಮೀಕರಣ ಬಳಸಿದರು.
ಐನ್ಸ್ಟೇನರ ಫೋಟೋ -ವಿದ್ಯುತ್ ಪರಿಣಾಮದ ಸಮೀಕರಣ Kmax =hf - ɸ ಎಂದಿದೆ.
ಡಿ ಬ್ರಾಗ್ಲಿ ಯವರ ಚಲಿಸುವ ಎಲೆಕ್ಟ್ರಾನ್ ಕಣಕ್ಕೆ ಸಂಭಂದಿಸಿದ ಸಮೀಕರಣ λ = h/mv ಎಂದಿದೆ.
ಕ್ವಾಂಟಮ್ ಸಿಧಾಂತಕ್ಕಾಗಿ ಈ ಮೇಲಿನ ಮೂರೂ ಸಮೀಕರಣಗಳು ನೋಬಲ್ ಪಾರಿತೋಷಕ ಪಡೆದವು.
೧೯೨೬ರಲ್ಲಿ ಶ್ರೋಡಿಂಗರರ ಕ್ವಾನ್ಟಮ್ ಸಮೀಕರಣವು ಪರಮಾಣುವಿನ ಒಳರಚನೆ ವಿವರಿಸುವಲ್ಲಿ ಸಫಲವಾಯಿತು. ಇಲೆಕ್ಟ್ರಾನ್ ವಿನ್ಯಾಸದ ಗುಟ್ಟು ರಟ್ಟಾಯಿತು.
iℏ ∂Ψ/∂t = −ℏ2/2m ∂2Ψ/∂x2 +V(x)Ψ(x,t)
1934 ರ ಹೊತ್ತಿಗೆ ಯುರೇನಿಯಂ ಪರಮಾಣುವನ್ನು ಒಡೆಯಬಹುದೆಂಬ ತಂತ್ರಗಾರಿಕೆ ಕರಗತವಾಯಿತು.ಯುರೇನಿಯಂ-235, ಪರಮಾಣುಗಳನ್ನು ನ್ಯೂಟ್ರಾನ್ ಗಳಿಂದ ತಾಡಿಸಿದಾಗ, ಪರಮಾಣುವೂ ಒಡೆದು ತುಂಡರಿಸಿ, ಹಗುರವಾದ ಎರಡು ಪರಮಾಣುಗಳು ಉಂಟಾಗುತ್ತವೆ ಮತ್ತು ಜೊತೆಯಲ್ಲಿ ಅಪಾರ ಪ್ರಮಾಣದ ಶಕ್ತಿಯು ಬಿಡುಗಡೆಯಾಗುತ್ತದೆ, ಎಂದು ಪ್ರಯೋಗಗಳಿಂದ ಖಚಿತವಾಯಿತು.ಇದು ಪರಮಾಣು ಬಾಂಬ್ ಗಳ ಉತ್ಪಾದನೆಗೆ ಕಾರಣವಾಯಿತು.ಎರಡನೆಯ ಜಾಗತಿಕ ಯುದ್ಧದಲ್ಲಿ ಅಮೆರಿಕಾ ದೇಶವು ಜಪಾನ್ ದೇಶದ ಮೇಲೆ ಪರಮಾಣು ಬಾಂಬ್ ಪ್ರಯೋಗಿಸಿ ಕಂಡರಿಯದಷ್ಟು ಭೀಕರವಾದ, ಮನುಕುಲದ ನಾಶಕ್ಕೆ ಕಾರಣವಾಯಿತು.
1950 ರ ನಂತರದಲ್ಲಿ ಇಲೆಕ್ಟ್ರಾನಿಕ್ಸ್ ಎಂಬ ಹೊಸ ತಂತ್ರಜ್ಞಾನದ ಉದಯವಾಯಿತು. ಇದರಿಂದ ಮಾಹಿತಿ ತಂತ್ರಜ್ಞಾನದ ಬೆಳವಣಿಗೆ ಹಾಗು ಗಣಕಯಂತ್ರಗಳ ಉಗಮವಾಯಿತು. ಇದು ದೈನಂದಿನ ಚಟುವಟಿಕೆಗಳ ರೀತಿಯಲ್ಲಿ ಅಪಾರ ಬದಲಾವಣೆಗೆ ಕಾರಣವಾಯಿತು.
ಬಿಗ್ಬ್ಯಾಂಗ್ [ಮಹಾ ಸ್ಫೋಟ] ಸಿಧಾಂತ
ನಮ್ಮ ವಿಶ್ವದ ವಿಕಾಸ ಸುಮಾರು ೧೩.೭೫ಬಿಲಿಯನ್ ವರ್ಷಗಳ ಹಿಂದೆ ಪ್ರಾರಂಭಗಿರ ಬೇಕೆಂದು ತರ್ಕಿಸಿದ್ದಾರೆ.
ಮಹಾ ಸ್ಫೋಟ ಸಿಧಾಂತದ ಪ್ರಕಾರ ಮೊದಲು ಸ್ರಷ್ಠಿಯಾದದ್ದು ಲಕ್ಷಾಂತರ ಗೆಲಾಕ್ಸಿಗಳು. ಗೆಲಾಕ್ಸಿಗಳು ಲಕ್ಷಾಂತರ ನಕ್ಷೆತ್ರಗಳ ಸಮೂಹಗಳು. ನಕ್ಷತ್ರಗಳ ಪ್ರಧಾನ ದ್ರವ್ಯವು ಹೈಡ್ರೋಜೆನ್ , ಹೀಲಿಯಂ ಹಾಗೂ ಸ್ವಲ್ಪ ಪ್ರಮಾಣದ ಲಿಥಿಯಂ ಗಳು ಮಾತ್ರ.
ನಕ್ಷೆತ್ರಗಳು ತಮ್ಮ ಪ್ರಕಾಶ ಬೀರುವ ಶಕ್ತಿ ಕಳೆದುಕೊಂಡಾಗ, ಕೆಂಪು ಕುಳಿಗಳಾಗಿ ರೂಪಾಂತರ ವಾಗುತ್ತವೆಯಂತೆ. ಈ ಸ್ಥಿತಿಯಲ್ಲಿ ನಕ್ಷೆತ್ರದ ಕೇಂದ್ರದಲ್ಲಿ ಅಪಾರ ಉಷ್ಣ ಹಾಗೂ ಒತ್ತಡ ಉಂಟಾದಾಗ ಹಗುರವಾದ ಪರಮಾಣುಗಳು ಒತ್ತಡಕ್ಕೆ ಒಳಪಟ್ಟು ಭಾರವಾದ ಇಂಗಾಲ, ಆಮ್ಲಜನಕ, ಮ್ಯಾಗ್ನಿಷಿಯಂ, ಹೀಗೆ ಪರಮಾಣು ಸಂಖ್ಯ 26 ಇರುವ ಕಬ್ಬಿಣದ ವರೆಗಿನ, ಎಲ್ಲಾ ಧಾತುಗಳಾಗಿ ರೂಪಾಂತರ ವಾಗುತ್ತವೆಯಂತೆ. ಇದಕ್ಕಿಂತ ಭಾರವಾದ ಮುಂದಿನ ಪರಮಾಣುಗಳು ಅಂದರೆ ತಾಮ್ರ, ಬೆಳ್ಳಿ, ಬಂಗಾರ, ವುರೈನಿಯಂ, ಆದಿಗಳು ಸೂಪರ್ನೋವಾ ಕಾಲದಲ್ಲಿ ಉಂಟಾಗುತ್ತವೆ ಯೆಂಬ ವಾದ ಮಂಡಿಸಲಾಗಿದೆ.
ಕಾಲದೊಂದಿಗೆ ರಸಾಯನಶಾಸ್ತ್ರದ ಬೆಳವಣಿಗೆ:
[ಬದಲಾಯಿಸಿ]ಹಿಂದಿನವರು ಈ ಜಗತ್ತು ಆಕಾಶ , ಅಗ್ನಿ , ವಾಯು , ಜಲ ಮತ್ತು ಮಣ್ಣು ಎಂಬ ಪಂಚಮಹಾಭೂತಗಳಿಂದ ಆಗಿದೆ ಎಂದರು. ಈಗ ಅದನ್ನು ವಸ್ತು , ಶಕ್ತಿ , ಆಕಾಶ ಮತ್ತು ಕಾಲ ಎಂದು ವರ್ಗಿಕರಣ ಮಾಡಿದರು . ಭೂಮಿಯ ವಾಯುಗೋಳ, ಜಲ, ಮತ್ತು ಮಣ್ಣನ್ನು ಒಟ್ಟಿಗೆ ದ್ರವ್ಯ ಎಂದರು . ದ್ರವ್ಯವು ಸ್ಥಳವನ್ನು ಆಕ್ರಮಿಸುತ್ತದೆ . ಅದಕ್ಕೆ ದ್ರವ್ಯರಾಶಿ ಇದೆ.
೧೬೬೧ರಲ್ಲಿ ರಾಬರ್ಟ ಬಾಯ್ಲ್
[ಬದಲಾಯಿಸಿ]ಈತ ಧಾತುವಿನ ಪರಿಕಲ್ಪನೆ ನಿರೂಪಿಸಿದ . ಆತನು ಆಮ್ಲ ಮತ್ತು ಪ್ರತ್ಯಾಮ್ಲಗಳ ವಿವರಣೆ ನೀಡಿದ. ಈತನು ಗಾಳಿಯ ಗುಣಗಳು ಅಧ್ಯಯನ ಮಾಡಿ, ಒಂದು ನಿರ್ದಿಷ್ಟ ರಾಶಿಯ ಅನಿಲದ ಗಾತ್ರ, ಒತ್ತಡ, ಹಾಗೂ ಉಷ್ಣತೆಯ ಸಂಭಂದದ ನಿಯಮವನ್ನು ನಿರೂಪಿಸಿದನು.
ಒಂದೇ ಪ್ರಕಾರದ ಮೂಲ ಕಣಗಳಿಂದ ಆದ ದ್ರವ್ಯವನ್ನು ಧಾತು ಅಥವಾ ಮೂಲವಸ್ತು ಎಂದರು. ಒಂದು ಧಾತುವಿನ ಅತಿಸಣ್ಣ ಕಣಕ್ಕೆ ಪರಮಾಣು ಎಂದರು. ಒಂದೇ ಪ್ರಕಾರದ ಪರಮಾಣುಗಳಿಂದ ಆದ ವಸ್ತುವೇ ಧಾತು.
೧೮ನೇಯ ಶತಮಾನದಲ್ಲಿ ಯುರೋಪ ಖಂಡದಲ್ಲಿ ಜಲಜನಕ , ಆಮ್ಲಜನಕ ಮತ್ತು ಇಂಗಾಲದ ಡೈ ಅಕ್ಸಯಿಡ್ ಎನ್ನುವ ಅನಿಲಗಳ ಶೋಧ ಮತ್ತು ಅವುಗಳ ಗುಣಗಳ ಅಧ್ಯಯನ ನಡೆಯಿತು.
೧೭೫೪ರಲ್ಲಿ ಜೋಸೆಫ್ ಬ್ಲ್ಯಾಕ್
[ಬದಲಾಯಿಸಿ]ಎನ್ನುವ ಉಪನ್ಯಾಸಕನು ಸುಣ್ಣದ ಕಲ್ಲನ್ನು ಹೆಚ್ಚಿನ ಶಾಖ ಕೊಟ್ಟು ಕಾಯಿಸಿ, ಅದರಿಂದ ಇಂಗಾಲದ ಡೈ ಅಕ್ಸಯಿಡ್ ಅನಿಲ ಹೊರಸೂಸುವುದನ್ನು ಗಮನಿಸಿದನು. ಈ ಗಾಳಿಯಲ್ಲಿ ಉರಿಯುವ ದೀಪ ನಂದಿಹೋಯಿತು. ಪ್ರಾಣಿಗಳು ಇದರಲ್ಲಿ ಬದುಕಲಿಲ್ಲ. ಈತನು ನೀರಿನ ಗುಪ್ತೋಷ್ಣವನ್ನು ವಿವರಿಸಿದನು.
೧೭೬೬ರಲ್ಲಿ ಹೆನ್ರಿ ಕೆವೆಂಡಿಷ್
[ಬದಲಾಯಿಸಿ]ತನ್ನ ಪ್ರಯೋಗಶಾಲೆಯಲ್ಲಿ ಜಲಜನಕ ಅನಿಲವನ್ನು ಕಂಡುಹಿಡಿದನು. ಹಗುರವಾದ ಈ ಅನಿಲವು ವಾತಾವರಣದಲ್ಲಿರುವ ಆಮ್ಲಜನಕದೊಂದಿಗೆ ಕೂಡಿ ದಹಿಸುವುದನ್ನು ಗಮನಿಸಿದನು.
೧೭೭೪ರಲ್ಲಿ ಪ್ರೀಸ್ಟ್ಲೆಯು
[ಬದಲಾಯಿಸಿ]ಪಾದರಸದ ಆಕ್ಸಯಿಡ್ ಅದಿರನ್ನು, ಸೂರ್ಯನ ಕೇಂದ್ರೀಕೃತ ಕಿರಣಗಳಿಗೆ ಒಡ್ಡಿ, ಕಾಯಿಸಿ, ಆಮ್ಲಜನಕ ಅನಿಲ ಕಂಡುಹಿಡಿದನು. ಇದು ಕ್ರಿಯಾಶೀಲವಾದ ದಹನಾನುಕೂಲಿ ಅನಿಲವಾಗಿದೆ.
ಪ್ರೀಸ್ಟ್ಲೆಯು ಫ್ರಾನ್ಸ್ ದೇಶಕ್ಕೆ ಭೇಟಿನೀಡಿದಾಗ, ತನ್ನ ಪ್ರಯೋಗದ ಈ ಸಂಗತಿ ಲಾವೋಷಿರನಿಗೆ ವಿವರಿಸಿದನು.
೧೭೭೮ರಲ್ಲಿ ಫ್ರಾನ್ಸ ದೇಶದ ಲಾವೋಷಿಯೆರನು ದಹನ ಕ್ರಿಯೆಯನ್ನು ಸಮರ್ಥವಾಗಿ ವಿವರಿಸಿದನು . ಈತನು ಆಮ್ಲಜನಕ ಒಂದು ಧಾತು ಎಂದು ತೀರ್ಮಾನಿಸಿದನು. ವಾತಾವರಣದಲ್ಲಿ ಸಹಜವಾಗಿ ಆಮ್ಲಜನಕವು ಅನಿಲ ರೂಪದಲ್ಲಿ ಇರುತ್ತದೆ. . ಇದು ಕ್ರಿಯಾಶೀಲವಾಗಿದ್ದು ಅನ್ಯ ಧಾತುಗಳೊಂದಿಗೆ ರಾಸಾಯನಿಕವಾಗಿ ವರ್ತಿಸಿ ಆಕ್ಸಯಿಡು ಗಳನ್ನು ಉಂಟುಮಾಡುತ್ತದೆ ಎಂದು ತೋರಿಸಿದನು. ಗಾಳಿಯಲ್ಲಿ ೭೮% ಸಾರಜನಕ ಅನಿಲ ಮತ್ತು ೨೧% ಆಮ್ಲಜನಕ ಇದೆ. ಉಳಿದ ಭಾಗ ಜಡ ಅನಿಲಗಳದ್ದು. ನೀರಾವಿಯ ಪ್ರಮಾಣ ಸದಾ ಬದಲಾಗುತ್ತಇರುತ್ತದೆ.
೧೭೮೯ರಲ್ಲಿ ಲಾವೋಷಿಯರನು
[ಬದಲಾಯಿಸಿ]ಆಮ್ಲಜನಕ ಮತ್ತು ಜಲಜನಕ ಅನಿಲಗಳನ್ನು ಗುರುತಿಸಿದನು ಮತ್ತು ಹೆಸರಿಸಿದನು. ದಹನ ಕ್ರಿಯೆಯನ್ನು ಯಸೆಸ್ವಿಯಾಗಿ ವಿವರಿಸಿದನು. ಮೊದಲಬಾರಿಗೆ ಅಂದಿನವರೆಗೆ ಗೊತ್ತಿರುವ ೨೩ ಪ್ರಕಾರದ ಧಾತುಗಳ ಪಟ್ಟಿ ಮಾಡಿದನು . ಈತನು ರಾಸಾಯನಿಕ ಬದಲಾವಣೆಯಲ್ಲಿ ಭಾಗವಹಿಸುವ ಧಾತುಗಳ, ರಾಶಿ ಸಂರಕ್ಷೆಣೆಯ ನಿಯಮವನ್ನು ವಿವರಿಸಿದನು. ಯಾವಕರಣಕ್ಕೂ ವಸ್ತುವು ತನ್ನ ಮೂಲ ರಾಶಿಯನ್ನು ಕಳೆದುಕೊಳ್ಳುವುದಿಲ್ಲ ಎಂದು ವಿವರಿಸಿದನು. ಈತನನ್ನು ರಸಾಯನ ಶಾಸ್ತ್ರದ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ೧೭೯೪ರ ಫ್ರೆಂಚ್ ಕ್ರಾಂತಿಯಲ್ಲಿ ವಿಜ್ಞಾನಿ ಲಾವೊಸಿರನು ಕೊಲೆಯಾದನು.
೧೭೮೯ ರಲ್ಲಿ ಪ್ರೌಸ್ಟ್ ಎನ್ನುವ ವಿಜ್ಞಾನಿಯು
[ಬದಲಾಯಿಸಿ]ಎರಡು ವಿಭಿನ್ನ ಧಾತುಗಳು ರಾಸಾಯನಿಕವಾಗಿ ಸಂಯೋಗ ಹೊಂದುವಾಗ, ಅವು ಒಂದು ನಿರ್ದಿಷ್ಟ ರಾಶಿಯ ಅನುಪಾತದಲ್ಲಿ ಮಾತ್ರ ಸೇರಿಕೊಳ್ಳುತ್ತವೆ ಎಂದು ಪ್ರಕಟಿಸಿದನು.
೧೮೦೦ರಲ್ಲಿ ವೋಲ್ಟಾ ಎನ್ನುವ ವಿಜ್ಞಾನಿ
[ಬದಲಾಯಿಸಿ]ವಿದ್ಯುತ್ ಕೋಶ ಕಂಡಿಹಿಡಿದನು.
೧೮೦೦ರಲ್ಲಿ ನೀರಿನಲ್ಲಿ ವಿದ್ಯುತ್ ಪ್ರವಾಹ ಹರಿಸಿ , ನೀರನ್ನು ವಿಭಜಿಸಿ ಆಮ್ಲಜನಕ ಮತ್ತು ಜಲಜನಕ ಅನಿಲಗಳಾಗಿ ವಿಂಗಡಿಸಿದರು . ಆದ್ದರಿಂದ ನೀರು ಮೂಲವಸ್ತು ಅಲ್ಲ ಬದಲಿಗೆ ಇದೊಂದು ಸಂಯುಕ್ತ ವಸ್ತು ಎಂದು ಖಚಿತವಾಯಿತು.
ಈ ಪ್ರಯೋಗದಲ್ಲಿ ಹೊರಸೂಸಿದ ಜಲಜನಕ ಮತ್ತು ಆಮ್ಲಜನಕ ಅನಿಲಗಳ ಗಾತ್ರದ ಅನುಪಾತ ೨:೧ ಇರುತ್ತದೆ. ಅಂದರೆ ಎರಡು ವಿಭಿನ್ನ ಅನಿಲಗಳು ಒಂದು ನಿರ್ದಿಷ್ಟ ಗಾತ್ರದ ಅನುಪಾತದಲ್ಲಿ ಸೇರಿ, ಸಂಯುಕ್ತ ವಸ್ತು ರೂಪಗೊಳ್ಳುತ್ತದೆ ಎಂದು ಸಿದ್ದವಾಯಿತು. ಇದನ್ನು "ಗೆ ಲುಸಾಕರ ನಿಯಮ" ಎನ್ನುವರು.
ನೀರು ವಿಭಜಿಸುವ ರಾಸಾಯನಿಕ ಕ್ರಿಯೆಗೆ ಹೊರಗಿನಿಂದ ಶಕ್ತಿ ಒದಗಿಸಬೇಕಾಯಿತು. ಇದಕ್ಕೆ ವಿರುದ್ಧವಾಗಿ ಜಲಜನಕ ಮತ್ತು ಆಮ್ಲಜನಕ ಅನಿಲಗಳು ರಾಸಾಯನಿಕವಾಗಿ ಸೇರಿ, ನೀರು ಉಂಟಾಗುವ ಬದಲಾವಣೆಯಲ್ಲಿ ಶಕ್ತಿ ಹೊರಗೆ ಹಾಕಲಾಗುತ್ತದೆ. ಹೀಗೆ ಹೊರಗಿನಿಂದ ಶಕ್ತಿಯನ್ನು ಪಡೆದುಕೊಳ್ಳುವ ಅಥವಾ ಶಕ್ತಿಯನ್ನು ಹೊರಚೆಲ್ಲುವ, ಎರಡು ಪ್ರಕಾರದ ರಾಸಾಯನಿಕ ಕ್ರಿಯೆಗಳಿರುತ್ತವೆ.
೧೮೦೩ರಲ್ಲಿ ಡಾಲ್ಟನ್ ಎನ್ನುವ ವಿಜ್ಞಾನಿ
[ಬದಲಾಯಿಸಿ]ಧಾತುವಿನ ಪರಮಾಣು ಸಿಧಾಂತವನ್ನು ಮಂಡಿಸಿದನು. ಧಾತುಗಳು ಪರಮಾಣುಗಳೆಂಬ ಒಡೆಯಲಾಗದ ಅತಿಸಣ್ಣ ಕಣಗಳಿಂದ ಆಗಿವೆ ಎಂದು ವಿವರಿಸಿದನು . ವಿವಿಧ ಧಾತುಗಳ ಪರಮಾಣುಗಳು ಭಿನ್ನ ಭಿನ್ನ ಪರಮಾಣುರಾಶಿಯನ್ನು ಹೊಂದಿರುವುದಾಗಿ ತಿಳಿಸಿದನು. ಈತನು ಮೊದಲಬಾರಿಗೆ ಧಾತುಗಳ ಸಾಪೇಕ್ಷ [ಪರಮಾಣು] ರಾಶಿಗಳ ಪಟ್ಟಿ ಮಾಡಿದನು.
೧೮೧೧ರಲ್ಲಿ ಅವಗಾಡ್ರೋ ಎನ್ನುವ ವಿಜ್ಞಾನಿ
[ಬದಲಾಯಿಸಿ]ಅನಿಲಗಳ ಅಣು ರೂಪದ ಕಣಗಳ ಮೇಲೆ ಪ್ರಯೋಗಗಳನ್ನು ಮಾಡಿ; [ಸಾಮಾನ್ಯ ಉಷ್ಣತೆ ಹಾಗು ಒತ್ತಡದಲ್ಲಿ], ಸಮಾನ ಗಾತ್ರದ ಯಾವುದೇ ಎರಡು ಅನಿಲಗಳು ಸಮಾನ ಪ್ರಮಾಣದ ಕಣಗಳನ್ನು ಹೊಂದಿರುತ್ತವೆ ಎಂದು ವಿವರಿಸಿದನು.
ಸಮಾನ ಗಾತ್ರದ ಜಲಜನಕ ಹಾಗು ಅಮ್ಲಜನಕ ಅನಿಲಗಳ ರಾಶಿಯು ೧:೧೬ ಅನುಪಾತದಲ್ಲಿ ಇರುತ್ತದೆ. ಜಲಜನಕದ ಪರಮಾಣುವಿನ ಸಾಪೇಕ್ಷೆರಾಶಿ ೧ ಆದರೆ ಆಮ್ಲಜನಕದ್ದು ೧೬ ಆಗುತ್ತದೆ. ನೀರಿನ ಅಣು ರಾಶಿ ೧೮ ಇರುತ್ತದೆ. ೧೮ ಗ್ರಾಂ ನೀರನ್ನು ಒಂದು ಮೋಲ್ ನೀರು ಎನ್ನುವರು. ಒಂದು ಮೋಲ್ ನೀರಿನಲ್ಲಿ ೬.೦೨೨ x ೧೦ರ ಘಾತ ೨೩ ನೀರಿನ ಕಣಗಳಿವೆ. ಇದನ್ನು ಅವಗಾಡ್ರೋ ಸಂಖ್ಯೆ ಎಂದು ಸೂಚಿಸುವರು.
೧೮೧೨ರಲ್ಲಿ ಹಂಫ್ರಿ ಡೇವಿ ಎನ್ನುವ ವಿಜ್ಞಾನಿಯು
[ಬದಲಾಯಿಸಿ]ಲವಣಗಳ ಮೇಲೆ ಪ್ರಬಲವಾದ ವಿದ್ಯುತ್ ಹರಿಸಿ, ರಾಸಾಯನಿಕ ಬದಲಾವಣೆ ಉಂಟುಮಾಡಿ, ಹೊಸ ಧಾತುಗಳ ಶೋಧ ಮಾಡಿದನು. ಈತನು ಪೊಟ್ಯಾಸಿಯಂ ಸೋಡಿಯಂ, ಕ್ಯಾಲ್ಸಿಯಂ, ಮ್ಯಾಗ್ನೇಸಿಯಂ, ಬೇರಿಯಂ ಮತ್ತು ಸ್ಟ್ರಾಂಟಿಯಂ ಧಾತುಗಳನ್ನು ಕಂಡುಹಿಡಿದನು. ಅಲ್ಲದೆ ಕ್ಲೋರಿನ್ ಅನಿಲವೂ ಕೂಡಾ ಒಂದು ಧಾತು ಎಂದು ಸಿದ್ಧಮಾಡಿದನು.
೧೮೨೬ ರಲ್ಲಿ ಡಾಲ್ಟನ್ನ ಶಿಷ್ಯನಾದ ಬರ್ಜೆಲಿಯಸನೂ,
[ಬದಲಾಯಿಸಿ]ಧಾತುಗಳನ್ನು ಹೆಸರಿಸಿದ ಮತ್ತು ಅವುಗಳ ಹೆಸರಿನ ಮೂಲಾಕ್ಷರದಿಂದ ಧಾತುಗಳನ್ನು ಸಾಂಕೇತಿಕವಾಗಿ ಬರೆಯುವ ಕಲೆ ರೂಢಿಸಿದನು . ಇದರಿಂದ ಸಂಯುಕ್ತ ವಸ್ತುಗಳನ್ನು ಸಾಂಕೇತಿಕವಾಗಿ, ಅಣು ಸೂತ್ರದ ರೂಪದಲ್ಲಿ ಬರೆಯಲು ಅನುಕೂಲವಾಯಿತು. ಇತನು ತನ್ನ ಪ್ರಯೊಗ ಶಾಲೆಯಲ್ಲಿ ವಿವಿಧ ಧಾತುಗಳ ಪರಮಾಣು ರಾಶಿ ಕಂಡುಹಿಡಿದನು.
೧೮೨೮ರಲ್ಲಿ ವೋಹ್ಲರನು
[ಬದಲಾಯಿಸಿ]ಮೊದಲಬಾರಿಗೆ ನಿರಯವ ರಾಸಾಯನ ಪಧಾರ್ಥಗಳನ್ನು ಬಳಸಿ, ಜೀವಿಗಳಲ್ಲಿ ಕಂಡುಬರುವ ಯೂರಿಯಾ ಎನ್ನುವ ಸಾವಯವ ಪದಾರ್ಥವನ್ನು ತಯ್ಯಾರಿಸಿದನು. ಇದರಿಂದ ಜೀವಸ್ರಷ್ಠಿಯಲ್ಲಿ ಯಾವುದೇ ನಿಗೂಢ ಶಕ್ತಿಯ ಕೈವಾಡ ಇಲ್ಲ ಎನ್ನುವ ಅರಿವಾಯಿತು.
೧೮೩೦ರ ವರೆಗೆ ಕಂಡುಹಿಡಿದ ಮೂಲಧಾತುಗಳ ಸಂಖ್ಯೆ ೫೪ಕ್ಕೆ ಏರಿತು.
೧೮೩೪ರಲ್ಲಿ ಮೈಕಲ್ ಫ್ಯಾರಡೆಯವರು;
[ಬದಲಾಯಿಸಿ]"ಅಯಾನಿಕ್ ದ್ರಾವಣಗಳಲ್ಲಿ ವಿದ್ಯುತ್ ಹರಿಸಿದಾಗ ಉಂಟಾಗುವ ರಾಸಾಯನಿಕ ಬದಲಾವಣೆಯು, ದ್ರಾವಣದಲ್ಲಿ ಹರಿಸಿದ ಒಟ್ಟು ವಿದ್ಯುತ್ ಪರಿಮಾಣದ ಮೊತ್ತಕ್ಕೆ ಅನುರೂಪವಾಗಿ ಇರುತ್ತದೆ." ಎಂದರು.
೧೮೪೧ರಲ್ಲಿ ಲಂಡನ್ ಪಟ್ಟಣದಲ್ಲಿ ರಾಸಾಯನ ಶಾಸ್ತ್ರದ ಸಂಘ ಸ್ಥಾಪನೆಗೊಂಡಿತು.
೧೮೫೨ರಲ್ಲಿ ರಾಸಾಯನಿಕ ಸಂಯೋಗ ಸಾಮರ್ತ್ಯಯ ನಿರೂಪಣೆಯಾಯಿತು.
೧೮೫೯ರಲ್ಲಿ ಬನ್ಸೆನ್ನರು , ಸ್ಪೆಕ್ಟ್ರೊಸ್ಕೋಪ್ ಬಳಸಿ, ಪ್ರತಿಯೊಂದು ಧಾತುವು ತನ್ನದೇ ಆದ, ವಿಶಿಷ್ಟ ಬೆಳಕಿನ ವರ್ಣಪಟಲವನ್ನು ಉಂಟುಮಾಡುತ್ತದೆ ಎಂದು ಕಂಡುಹಿಡಿದರು. ಈ ವಿಧಾನವು ಹೊಸ ಧಾತುಗಳನ್ನುಕಂಡು ಹಿಡಿಯಲು ಅನುಕೂಲವಾಯಿತು.
೧೮೬೦ರಲ್ಲಿ ವಿಜ್ಞಾನಿ ಕೆಕೂಲೇಯವರ ನೇತ್ರಿತ್ವದಲ್ಲಿ , ಜರ್ಮನಿ ದೇಶದಲ್ಲಿ ಮೊದಲಬಾರಿಗೆ ಜಾಗತಿಕ ರಸಾಯನ ಶಾಸ್ತ್ರದ ವಿಜ್ಞಾನಿಗಳ ಸಮ್ಮೇಳನ ಏರ್ಪಟ್ಟಿತ್ತು. ಇದರಲ್ಲಿ ಒಟ್ಟು ೧೪೦ ಜನ ವಿವಿಧ ದೇಶದ ವಿಜ್ಞಾನಿಗಳು ಪಾಲ್ಗೊಂಡರು. ಸೈಬೀರಿಯಾದ ತರುಣ ವಿಜ್ಞಾನಿ ಮೆಂದೆಲೆಯವರೂ ಈ ಕೂಟದಲ್ಲಿ ಭಾಗವಹಿಸಿದ್ದರು.
೧೮೬೯ರಲ್ಲಿ, ವಿಜ್ಞಾನಿ ಮೆಂಡೆಲಿವರು
[ಬದಲಾಯಿಸಿ]ಧಾತುಗಳ ಆವರ್ತಕ ಕೋಷ್ಟಕವನ್ನು ಪ್ರಕಟಿಸಿದರು. ಅವರು ಅಲ್ಲಿಯವರೆಗೆ ತಿಳಿದಿರುವ ೬೬ ಪ್ರಕಾರದ ಧಾತುಗಳನ್ನು ಕೋಷ್ಟಕದಲ್ಲಿ ಅಡ್ಡಸಾಲು ಹಾಗು ಕಂಬಸಾಲುಗಳಾಗಿ ವರ್ಗಿಕರಿಸಿದರು. ಧಾತುಗಳನ್ನು ಅವುಗಳ ಪರಮಾಣು ರಾಶಿಯ ಏರಿಕೆಯ ಕ್ರಮದಲ್ಲಿ ಬರೆದರು.
೧೮೮೭ರಲ್ಲಿ ಆಮ್ಲ, ಪ್ರತ್ಯಾಮ್ಲ, ಮತ್ತು ಲವಣಗಳು ನೀರಿನಲ್ಲಿ ಕರಗಿ ಅಯಾನು ಗಳಾಗಿ ಬೇರ್ಪಡುತ್ತವೆ ಎಂದು ಕಂಡುಕೊಂಡರು.
೧೮೯೮ರಲ್ಲಿ ವಿಲಿಯಂ ರಾಮಸೇ ಎನ್ನುವ ವಿಜ್ಞಾನಿ,
[ಬದಲಾಯಿಸಿ]ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸದ ಜಡ ಅನಿಲಗಳನ್ನು ಕಂಡುಹಿಡಿದರು.
೧೯೦೦ರ ಹೊತ್ತಿಗೆ ಮೂಲಧಾತುಗಳ ಸಂಖ್ಯೆ ೮೮ಕ್ಕೆ ತಲುಪಿತು.
೧೮೯೭ರಲ್ಲಿ ಜೆ ಜೆ ಥಾಮ್ಸನ್ನರು
[ಬದಲಾಯಿಸಿ]ಕ್ಯಾಥೋಡ್ ಕಿರಣಗಳ ಪ್ರಯೋಗ ಮಾಡಿ, ಎಲ್ಲಾಧಾತುಗಳ ಪರಮಾಣುಗಳು ಋಣ ವಿದ್ಯುತ್ ಆವೇಶ ಹೊಂದಿರುವ, ಎಲೆಕ್ಟ್ರಾನ್ ಗಳೆಂಬ ಉಪಕಣಗಳು ಹೊಂದಿವೆ ಎಂದು ವಿವರಿಸಿದರು.
೧೯೧೧ರ ಹೊತ್ತಿಗೆ ಪರಮಾಣುವೂ ಋಣ ವಿದ್ಯುತ್ ಆವೇಶಯುಳ್ಳ ಎಲೆಕ್ಟ್ರಾನ್ ಮತ್ತು ಧನ ಆವೇಶಯುಳ್ಳ ಬೀಜಕೇಂದ್ರ ಹೊಂದಿದೆ ಎಂದು ರದರಫೋರ್ಡರ ಪ್ರಯೋಗಗಳಿಂದ ಖಚಿತವಾಯಿತು. ಮೂಲತಃ ಪರಮಾಣುವಿನ ರಾಶಿಯು ಪರಮಾಣುವಿನ ಬೀಜಕೇಂದ್ರದ್ದೇ ಆಗಿದೆ ಎಂದು, ಮತ್ತು ಎಲೆಕ್ಟ್ರಾನಿನ ರಾಶಿಯು ನಗಣ್ಯ ಎಂದು ತೀರ್ಮಾನಿಸಿದರು. ಪರಮಾಣುವಿನ ಹೆಚ್ಚಿನ ಗಾತ್ರ ಎಲೆಕ್ಟ್ರಾನುಗಳೇ ಆಕ್ರಮಿಸಿಕೊಂಡಿರುತ್ತವೆ.
೧೯೧೩ರಲ್ಲಿ ಡೆನ್ಮಾರ್ಕಿನ ವಿಜ್ಞಾನಿ ನೀಲ್ಸ ಬೊಹರರು,
[ಬದಲಾಯಿಸಿ]ಹೈಡ್ರೋಜನ್ ಪರಮಾಣುವಿನ ರಚನೆಯನ್ನು ಎಸೆಸ್ವಿಯಾಗಿ ವಿವರಿಸಿದರು. "ಪರಮಾಣುವಿನ ಬೀಜಕೇಂದ್ರದ ಸುತ್ತ ಎಲೆಕ್ಟ್ರಾನ್ ನಿರ್ಧಾರಿತ ಶಕ್ತಿ ಕವಚಗಳಲ್ಲಿ ಮಾತ್ರ ಸುತ್ತುತ್ತಿರುತ್ತದೆ." ಎಂದರು. ಜಲಜನಕದ ವಿಶಿಷ್ಟ ವರ್ಣಪಟಲವನ್ನು ಎಸೆಸ್ವಿಯಾಗಿ ವಿವರಿಸಿದರು.
೧೯೧೪ರಲ್ಲಿ ಆಂಗ್ಲ ವಿಜ್ಞಾನಿ ಹೆನ್ರಿ ಮೊಸೆಲಿಯವರು
[ಬದಲಾಯಿಸಿ]ಪರಮಾಣು ಸಂಖ್ಯೆಯ ವ್ಯಾಖ್ಯಾನ ನೀಡಿದರು. ಪರಮಾಣು ಸಂಖ್ಯೆಯು ಪರಮಾಣು ಬೀಜ ಹೊಂದಿರುವ ಒಟ್ಟು ಪ್ರೋಟಾನ್ ಗಳ ಸಂಖ್ಯೆಗೆ ಸಮ ಇರುತ್ತದೆ ಎಂದರು. ನಂತರ ಧಾತುಗಳ ಆವರ್ತಕ ಕೋಷ್ಟಕವನ್ನು ಧಾತುಗಳ ಪರಮಾಣು ಸಂಖ್ಯೆ ಬಳಸಿ ಕೋಷ್ಠಕದ ನ್ಯೂನತೆಗಳನ್ನು ತಿದ್ದಲಾಯಿತು. ಆಧುನಿಕ ಆವರ್ತಕ ಕೋಷ್ಟಕದಲ್ಲಿ ೧೮ ಕಂಭಸಾಲುಗಳಿವೆ.
೧೯೧೬ರಲ್ಲಿ ಜ್ಯೂಲಿಯಸರು , ಅಯಾನಿಕ್ ಸಂಯುಕ್ತಗಳ ರಚನೆಯಲ್ಲಿ, ಧಾತುಗಳ ಪರಮಾಣುವಿನ ಅಷ್ಟಕ ನಿಯಮ ವಿವರಿಸಿದರು.
೧೯೧೬ರಲ್ಲಿ ಅಮೆರಿಕೆಯ ವಿಜ್ಞಾನಿ ಲೆವಿಸರು, ರಾಸಾಯನಿಕ ಸಹವೇಲೆನ್ಸಿ ಬಂಧದ ನಿರೂಪಣೆ ಕೊಟ್ಟರು. ಲೆವಿಸರು ಸಹವೆಲೆನ್ಸಿ ಬಂಧ ಬಳಸಿ, ಸಂಯುಕ್ತ ಕಣಗಳ ಅಣುರಚನೆಯನ್ನು ಎಸೆಸ್ವಿಯಾಗಿ ವಿವರಿಸಿದರು.
೧೯೧೯ರಲ್ಲಿ ರದರ್ಫೋರ್ಡರು,
[ಬದಲಾಯಿಸಿ]ಪರಮಾಣು ಬೀಜಕೇಂದ್ರದಲ್ಲಿರುವ ಧನಾವೇಶಯುಳ್ಳ ಪ್ರೋಟಾನ್ ಕಣವನ್ನು ಕಂಡುಹಿಡಿದರು.
೧೯೨೪ರಲ್ಲಿ ಡಿ ಬ್ರೊಗ್ಲೆಯವರು ಎಲೆಕ್ಟ್ರಾನ್ ಕಣವು, ಅಲೆ ಹಾಗೂ ಕಣ ಎನ್ನುವ ದ್ವಿಗುಣ ಪ್ರಕೃತಿ ಹೊಂದಿದೆ ಎಂದು ನಿರೂಪಿಸಿದರು. ದ್ರವ್ಯದ ದ್ವಿಗುಣ ರೂಪ ಕಣ ಮತ್ತು ಅಲೆಯಂತಿದೆ ಎಂದರು.
೧೯೨೬ರಲ್ಲಿ ಶ್ರೋಡಿಂಗರರಿಂದ
[ಬದಲಾಯಿಸಿ]ಪರಮಾಣುವಿನ ರಚನೆಯ ಶಕಲಸಿಧಾಂತದ [ಕ್ವಾನ್ಟಮ್ ಸಿಧಾಂತ] ನಿರೂಪಣೆ. ಇವರ ಸಮೀಕರಣ ಬಳಸಿ [ಜಲಜನಕ] ಪರಮಾಣುವಿನ ರಚನೆಯನ್ನು ಮತ್ತು ಎಲೆಕ್ಟ್ರಾನ್ ವಿನ್ಯಾಸವನ್ನು ವಿವರಿಸಿದರು.
೧೯೩೨ರಲ್ಲಿ ಜೇಮ್ಸ್ ಚಾಡ್ವಿಕ್ ರವರು,
[ಬದಲಾಯಿಸಿ]ಪರಮಾಣು ಬೀಜಕೇಂದ್ರ ಹೊಂದಿರುವ ನ್ಯೂಟ್ರಾನ್ ಎನ್ನುವ ಉಪಕಣವನ್ನು ಕಂಡುಹಿಡಿದರು. ಈ ಕಣಕ್ಕೆ ಯಾವುದೇ ವಿದ್ಯುತ್ ಆವೇಷ ಇಲ್ಲ. ಹೀಗೆ ಒಂದು ಪರಮಾಣುವೂ ಎಲೆಕ್ಟ್ರಾನ್, ಪ್ರೋಟಾನ್, ಮತ್ತು ನ್ಯೂಟ್ರಾನ್ ಎನ್ನುವ ಸೂಕ್ಷ್ಮ ಕಣಗಳಿಂದ ಆಗಿದೆ ಎಂದು ತಿಳಿಯಿತು. ಪ್ರೋಟಾನ್ ಅಥವಾ ನ್ಯೂಟ್ರಾನ್ ಕಣದ ರಾಶಿಗೆ ಹೋಲಿಸಿದರೆ ಎಲೆಕ್ಟ್ರಾನ್ ಕಣದ ರಾಶಿಯು ನಗಣ್ಯ ಎನಿಸುತ್ತದೆ. ಆದರೆ ಎಲೆಕ್ಟ್ರಾನ್ ಮತ್ತು ಪ್ರೋಟಾನ್ ಗಳ ವಿದ್ಯುತ್ ಆವೇಶವು ಸಮ ಇರುತ್ತದೆ . ಒಂದು ಪರಮಾಣುವಿನ ಎಲೆಕ್ಟ್ರಾನ್ ಮತ್ತು ಪ್ರೋಟಾನ್ ಗಳ ಸಂಖ್ಯೆ ಸಮಾನವಾಗಿರುತ್ತದೆ.
ಪರಮಾಣುವೂ ಕಣ್ಣಿಗೆ ಕಾಣದ ಅತೀ ಸೂಕ್ಷ್ಮ ಕಣವಾದ್ದರಿಂದ ಅದನ್ನು ಪ್ರಾಯೋಗಿಕವಾಗಿ ಪರಿಪೂರ್ಣ ಅರಿಯಲು ವಿಜ್ಞಾನಿಗಳಿಗೆ ಒಂದು ವರೆ ಶತಮಾನದಷ್ಟು ಕಾಲ ಹಿಡಿಯಿತು. [1778 - 1932].
ಪ್ರಫುಲ್ಲಚಂದ್ರ ರಾಯ್
[ಬದಲಾಯಿಸಿ]ವಿಧ್ಯಾಭ್ಯಾಸ:
[ಬದಲಾಯಿಸಿ]ರಾಯ್ ಅವರು 2 ನೇ ಆಗಸ್ಟ್ 1861 ರಲ್ಲಿ ಬಂಗಾಳದ ಖುಲ್ನಾ ಜಿಲ್ಲೆಯಲ್ಲಿ ಜನಿಸಿದರು. ಅವರ ತಂದೆ ಹರೀಶಚಂದ್ರ ರಾಯ್ ಜಮೀನುದಾರರು ಮತ್ತು ಶ್ರೀಮಂತರಾಗಿದ್ದರು. 1870 ರಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಾರಣ ಅವರು ಕಲ್ಕತ್ತೆಗೆ ವಲಸೆ ಹೋದರು. ಇಲ್ಲಿ ಪ್ರಫುಲ್ಲಚಂದ್ರರನ್ನು ಹರೇ ಶಾಲೆಗೆ ಸೇರಿಸಲಾಯಿತು. ರಾಯ್ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ ಇದ್ದುದರಿಂದ ಹಲವಾರು ಪುಸ್ತಕಗಳನ್ನು ಓದುವುದರಲ್ಲಿ ನಿರತರಾದರು. ಕೇವಲ ತಮ್ಮ 10 ನೇ ವಯಸ್ಸಿಗೆ ಅವರು ಲ್ಯಾಟಿನ್ ಮತ್ತು ಗ್ರೀಕ್ ಭಷಗಳನ್ನು ಕಲಿತರು. ಅವರು ಇಂಗ್ಲೆಂಡ್, ರೋಮ್ ಮತ್ತು ಸ್ಪೇನ್ ದೇಶಗಳ ಇತಿಹಾಸದ ಅಧ್ಯಯನ ಗೈದರು. 1874 ರಲ್ಲಿ ಅವರು ಅಲ್ಬರ್ಟ್ ಶಾಲೆಗೆ ಸೇರಿದರು.
1879 ರಲ್ಲಿ ಅವರು ಪ್ರವೇಶ ಪರಿಕ್ಷೆಯಲ್ಲಿ ಪಾಸಾಗಿ, ಮೆಟ್ರೋಪಾಲಿಟನ್ ಕಾಲೇಜಿಗೆ ಸೇರಿದರು. ಮೆಟ್ರೋಪಾಲಿಟನ್ ಕಾಲೇಜಿನಲ್ಲಿ ಅವರು ಶ್ರೇಷ್ಠ ಅಧ್ಯಾಪಕರಾದ ಸುರೇಂದ್ರನಾಥ ಬ್ಯಾನರ್ಜಿ ಮತ್ತು ಪ್ರಸನ್ನಕುಮಾರ ಲಾಹಿರಿ ಅವರ ಪ್ರಭಾವಕ್ಕೆ ಒಳಗಾದರು. ಅವರು ರಾಯ್ ಯವರಲ್ಲಿ ಸ್ವಾತಂತ್ರಕ್ಕಾಗಿ ಹೋರಾಡುವ ರಾಷ್ಟ್ರ ಭಕ್ತಿ ಮತ್ತು ಭಾರತೀಯರ ಏಳಿಗೆಯ ಬೀಜ ಬಿತ್ತಿದರು. ರಾಯ್ ಅವರು ಮೆಟ್ರೋಪಾಲಿಟನ್ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ, ಆಗಾಗ್ಗೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಲೆಗ್ಜ್ಅಂಡರ್ ಪೆಡ್ಲ್ಯಾರ್ ಅವರ ರಸಾಯನ ಶಾಸ್ತ್ರದ ತರಗತಿಗಳಿಗೆ ಹಾಜರಾಗುತ್ತಿದ್ದರು. ಪೆಡ್ಲ್ಯಾರ್ ರವರು ಪ್ರಭಾವಿ ಶಿಕ್ಷಕರಲ್ಲದೆ, ಕುಶಲ ಪ್ರಯೋಗ-ಪರಿಣತರೂ ಆಗಿದ್ದರು. ಪ್ರಫ್ಫುಲ್ಲಚಂದ್ರರಿಗೆ ಸಾಹಿತ್ಯದಲ್ಲಿ ಅಭಿರುಚಿ ಇದ್ದರೂ, ಪೆಡ್ಲ್ಯಾರರವರ ಉಪನ್ಯಾಸಗಳು, ರಾಯ್ ಅವರು ಉನ್ನತ ಶಿಕ್ಷಣದಲ್ಲಿ ರಸಾಯನ ಶಾಸ್ತ್ರ ಆರಿಸಿಕೊಳ್ಳುವಂತೆ ಪ್ರಭಾವ ಬೀರಿದವು. ಆದರೂ ರಾಯ್ ಅವರು ಲ್ಯಾಟಿನ್, ಫ್ರೆಂಚ್ ಮತ್ತು ಸಂಸ್ಕೃತ ಭಾಷಗಳನ್ನು ಮನೆಯಲ್ಲಿ ಕಲಿತರು. ಹೀಗಾಗಿ ಅವರ ಬಹುಭಾಷಾ ಪಂಡಿತರಾದರು.
ಪ್ರಫುಲ್ಲಚಂದ್ರರು 1882 ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನ ಪಡೆದು ಇಂಗ್ಲೆಂಡಿಗೆ ತೆರಳಿದರು. ಇಂಗ್ಲೆಂಡಿನ ಎಡಿನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ.ಸಿ. ತರಗತಿಗಳಿಗೆ ಸೇರಿದರು. ವಿಶ್ವವಿದ್ಯಾಲಯದಲ್ಲಿ ರಸಾಯನ ಶಾಸ್ತ್ರದ ಉಪನ್ಯಾಸಕರಾದ ಕ್ರುಮ್ ಬ್ರೌನ್ ಅವರಿಂದ ಅತ್ಯಂತ ಪ್ರಭಾವಿತರಾದರು. ರಸಾಯನ ಶಾಸ್ತ್ರ ಅವರ ಪ್ರಿಯ ವಿಷಯವಾಯಿತು. ರಾಯ್ ಅವರು 1885 ರಲ್ಲಿ ವಿಜ್ಞಾನ ಪದವಿ ಪಡೆದು, ಸಂಶೋಧನೆಗೆ ಸೇರಿಕೊಂಡು, 1887 ರಲ್ಲಿ ತಮ್ಮ 27 ನೇ ವಯಸ್ಸಿಗೆ ಡಾಕ್ಟರೇಟ್ ಪದವಿಯನ್ನು ಸಂಪಾದಿಸಿದರು. 1888 ರಲ್ಲಿ ಅವರು ಸ್ವದೇಶಕ್ಕೆ ಮರಳಿದರು.
ಉಪನ್ಯಾಸಕರಾಗಿ:
[ಬದಲಾಯಿಸಿ]1889 ರಲ್ಲಿ ಪ್ರಫುಲ್ಲಚಂದ್ರರು ಕಲ್ಕತ್ತೆಯ ಪ್ರಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ನೇಮಕ ಗೊಂಡರು. ಬೇಗನೆ ಅವರು ಪ್ರಭಾವಿ ಮತ್ತು ಹುರಿದುಂಬಿಸುವ ಗುರುಗಳಾಗಿ ಖ್ಯಾತರಾದರು. ಅವರ ಉಪನ್ಯಾಸಗಳು ಚುಟುಕು ಮತ್ತು ಹರ್ಷದ ನಗುವಿನಿಂದ ತುಂಬಿರುತ್ತಿದ್ದವು. ಅವರು ರವೀಂದ್ರನಾಥರ ಪದ್ಯಗಳಿಂದ ಮತ್ತು ಅದಿಕಾಲದಲ್ಲಿ ನಾಗಾರ್ಜುನ ಬರೆದ, ರಸರತ್ನಾಕರದ ಉಕ್ತಿಗಳಿಂದ ವಿದ್ಯಾರ್ಥಿಗಳ ನಮರಂಜನೆ ಮಾಡುತ್ತಿದ್ದರು. ಎಲುಬುಗಳು ಸುಟ್ಟಾಗ ಶುದ್ಧ ಕ್ಯಾಲ್ಸಿಯಂ ಫಾಸ್ಫೇಟ್ ಆಗಿ ರೂಪಾಂತರ ವಾಗುವುದೆಂದು ತೋರಿಸಲು, ತರಗತಿಯಲ್ಲಿ ಎಲುಬು ಸುಟ್ಟ ಬೂದಿಯನ್ನು ತಮ್ಮ ಬಾಯಿಗೆ ಹಾಕಿಕೊಂಡು ತೋರಿಸುವರು. ಔದ್ಯೋಗೀಕರಣದಿಂದಲೇ ರಾಷ್ಟ್ರ ನಿರ್ಮಾಣ ಸಾದ್ಯ ಎಂದು ಪದೇ ಪದೇ ಹೇಳುತ್ತಿದ್ದರು. ಶಾಲೆಗಳಲ್ಲಿ ಮಾತೃಭಾಶೆಯಲ್ಲಿಯೇ ಕಲಿಯಬೇಕೆಂದು ನುಡಿಯುವರು. ಅದಕ್ಕಾಗಿ ಬೆಂಗಾಲಿಯಲ್ಲಿ ವಿಜ್ಞಾನ ಪಠ್ಯಸಾಹಿತ್ಯ ರಚಿಸಲಾರಿಂಭಿಸಿದರು. ಅವರು ಆಗಾಗ್ಗೆ ಸೈಬೀರಿಯಾದ ವಿಖ್ಯಾತ ವಿಜ್ಞಾನಿ ಮೆಂಡೆಲೀವರ ಕಥೆ ಹೇಳುತ್ತಿದ್ದರು. ಮೆಂಡೆಲೀವರು ಮೊದಲಬಾರಿಗೆ ಧಾತುಗಳ ಆವರ್ತಕ ಕೋಷ್ಟಕವನ್ನು ನಿರ್ಮಿಸಿದರು. ಮತ್ತು ತಮ್ಮ ತತ್ವಗಳನ್ನು ರಸಿಯನ್ ಭಾಷೆಯಲ್ಲಿ ಬರೆದಿದ್ದರು.
ದಿ ಬೆಂಗಾಲ್ ಕೆಮಿಕಲ್ ಐಂಡ್ ಫಾರ್ಮಸೆಟಿಕಲ್ ವರ್ಕ್ಸ್:
[ಬದಲಾಯಿಸಿ]ರಾಯ್ ಅವರು ಔಷಧಗಳನ್ನು ಭಾರತದಲ್ಲಿಯೇ ತಯ್ಯಾರಿಸಬೇಕೆಂದು ತೀರ್ಮಾನಿಸಿದರು . ಇದನ್ನು ಬೇಗನೆ ಆರಂಭಿಸಬೇಕೆಂದು ನಿರ್ಧರಿಸಿದರು. ರಾಯ್ ಅವರು ಶ್ರೀಮಂತರಾಗಿರಲಿಲ್ಲ. ಅವರು ಕೆಲವು ರಾಸಾಯನಗಳನ್ನು ಮನೆಯಲ್ಲಿಯೇ ತಯ್ಯಾರಿಸಿದರು. ಅವರ ಕೆಲಸವೂ ಅತಿ ರಭಸದಿಂದ ಸಾಗಿತು ಮತ್ತು ಅದಕ್ಕಾಗಿ ಒಂದು ಪ್ರತ್ತೇಕ ಕಂಪೆನಿಯನ್ನೇ ಆರಂಭಿಸಬೇಕಾಯಿತು. ಆದರೆ ಅದಕ್ಕೆ ರೂ 800ಗಳ ಹಣಕಾಸಿನ ನೆರವು ಬೇಕಾಗಿತ್ತು. ಆದರೆ ಇಷ್ಟು ಹಣವನ್ನು ಸಂಗ್ರಹಿಸಲು ಬಲ ಕಷ್ಟ ಪಡಬೇಕಾಯಿತು. ಇಷ್ಟೆಲ್ಲ ತೊಂದರೆಗಳಿದ್ದರೂ, ಅವರು ದಿ ಬೆಂಗಾಲ್ ಕೆಮಿಕಲ್ ಐಂಡ್ ಫಾರ್ಮಸೆಟಿಕಲ್ ವರ್ಕ್ಸ್ ಎನ್ನುವ ಕಂಪನಿಯನ್ನು ಸ್ಥಾಪಿಸಿದರು. ಈ ಹೊಸ ಫ್ಯಾಕ್ಟರಿಯನ್ನು ಧೈರ್ಯವಾಗಿ ಮುಂದುವರಿಸಿದರು. ಆರಂಭದಲ್ಲಿ ಇಲ್ಲಿ ತಯ್ಯಾರಿಸಿದ ರಾಸಾಯನಗಳನ್ನು ಮಾರಾಟ ಮಾಡುವುದು ಕಷ್ಟಕರವಾಗಿತ್ತು. ಅವು ಆಮುದು ಮಾಡಿಕೊಂಡ ರಸಾಯನಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಆದರೆ ಡಾಕ್ಟರ್ ಅಮೂಲ್ಯ ಚರಣ ಭೋಸ್ ರಂತಹ ಕೆಲವು ಗೆಳೆಯರು ಇವರ ಸಾಹಸವನ್ನು ಎತ್ತಿ ಹಿಡಿದರು. ಡಾಕ್ಟರ್ ಭೋಸರು ವೈದ್ಯಕೀಯ ಪ್ರಾಕ್ಟಿಷನರ್ ಆಗಿದ್ದರು. ಮತ್ತು ಅವರು ಹಲವಾರು ವೈದ್ಯರ ಸಹಾಯ-ಹಸ್ತ ನೀಡಿದರು. ಇವರೆಲ್ಲ ಹೊಸದಾಗಿ ಭಾರತೀಯ ಕಂಪನಿ ತಯ್ಯಾರಿಸಿದ ರಾಸಾಯನಗಳನ್ನು ಬಳಸಲು ಆರಂಭಿಸಿದರು. ಹಲವಾರು ರಸಾಯನ ಪದವೀಧರರು ಈ ಹೊಸ ಕಂಪನಿಗೆ ಕೆಲಸ ಮಾಡಲು ಸೇರಿಕೊಂಡರು. ಮತ್ತು ಸ್ವದೇಶಿ ಕಂಪೆನಿಯ ಅಭಿವೃದ್ದಿಗಾಗಿ ಕಠಿಣ ಕೆಲಸ ಮಾಡಿದರು. ಬಂಗಾಲ ಕೆಮಿಕಲ್ಸ್ ಪ್ರಸಿದ್ಧ ಫ್ಯಾಕ್ಟರಿ ಆಯಿತು.
ಭಾರತೀಯ ಸ್ವದೇಶಿಯ ಉದ್ಯೋಗಕ್ಕೆ ಪ್ರಫುಲ್ಲಚಂದ್ರರ ಕೊಡುಗೆ ಇನ್ನು ಹೆಚ್ಚಿತು. ಪ್ರತ್ಯಕ್ಷೆಯೋ ಅಪ್ರತ್ಯಕ್ಷೆಯೋ ಅವರು ಹಲವಾರು ಫ್ಯಾಕ್ಟಾರಿಗಳನ್ನು ಆರಂಭಿಸಲು ಸಹಾಯಕರಾದರು. ಬಟ್ಟೆ ಗಿರಣಿ, ಸಾಬೂನು ತಯ್ಯಾರಿಕೆ, ಸಕ್ಕರೆ ಕಾರ್ಖಾನೆ, ರಸಾಯನ ಉತ್ಪಾದನೆ, ಸೇರ್ಯಾಮಿಕ್ ಫ್ಯಾಕ್ಟಾರಿ ಮತ್ತು ಪುಸ್ತಕ ಮುದ್ರಣ ಮತ್ತು ಬಿಡುಗಡೆ, ಅದಿಗಳನ್ನು ಅವರ ಕ್ರಿಯಾತ್ಮಕ ಸಹಕಾರದಿಂದ ನಿರ್ಮಾಣಗೊಂಡವು. ಪರಕೀಯರ ಆಳ್ವಿಕೆಯ ಕಾಲದಲ್ಲಿ ಅವರು ದೇಶದ ಔದ್ಯೋಗೀಕರಣದಲಿ ಸಹಾಯಕ ಶಕ್ತಿಯಾಗಿ ನಿಂತರು. ಇದೇ ಸಮಯಕ್ಕೆ ಅವರು ತಮ್ಮ ಪ್ರೆಸಿಡೆನ್ಸಿ ಕಾಲೇಜಿನ ಪ್ರಯೋಗ ಶಾಲೆಯಲ್ಲಿ ಸಂಶೋಧನೆಯಲ್ಲಿ ನಿರತರಾಗಿರುತ್ತಿದ್ದರು.
ಸಂಶೋಧನೆ:
[ಬದಲಾಯಿಸಿ]ಪಾದರಸದ ನೈಟ್ರೈಟ್ ಹರಳುಗಳ ಪ್ರಕಟಣೆ, ಅವರಿಗೆ ಜಗತ್ತಿನಾದ್ದೆಂತ ಕೀರ್ತಿ ತಂದಿತು. ಅವರು ತಮ್ಮ ಪ್ರಯೋಗಶಾಲೆಯಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಸಂಶೋದನೆಯಲ್ಲಿ ದಾರಿದೀಪವಾದರು. ಅಂತರರಾಷ್ಟ್ರೀಯ ಪ್ರಮುಖ ವಿಜ್ಞಾನಿಕ ನಿಯತಕಾಲಿಕಗಳು, ಇವರ ಸಂಶೋಧನಗಳನ್ನು ಪ್ರಕಟಿಸಿದವು. ಆರಂಭದಿಂದಲೂ ಪ್ರಫುಲ್ಲಚಂದ್ರರು ಹಿಂದಿನ ಭಾರತೀಯ ರಸಾಯನ ವಿಜ್ಞಾನಿಗಳ ಕೆಲಸದಲ್ಲಿ ಅಭಿರುಚಿ ಉಳ್ಳವರಾಗಿದ್ದರು. ಫ್ರಂಚ್ ವಿಜ್ಞಾನಿ ಬೆರ್ತಲಾಟ್ ಅವರ ಪ್ರಸಿದ್ಧ ಪುಸ್ತಕ, ಗ್ರೀಕ್ ಆಲ್ಕೆಮಿ ಓದಿದಮೇಲೆ, ಅವರ ಕುತೂಹಲ ಹಿಂದಿನ ಭಾರತೀಯ ರಸಾಯನ ಪಂಡಿತರ ಕಡೆಗೆ ಹರಿಯಿತು. ಅವರು ಭಾರತದ ಹಿಂದಿನ ಕಾಲದ ಸಂಸ್ಕೃತ, ಪಾಳಿ, ಬೆಂಗಾಲಿಯಂತಹ, ಹಲವಾರು ಪುಸ್ತಕಗಳನ್ನು ಓದಲು ಆರಂಭಿಸಿದರು. ಅವರು ಪ್ರಸಿದ್ದ ಸಂಸ್ಕೃತ ಕೃತಿಯಾದ ರಸೇಂದ್ರಸಾರ-ಸಂಗ್ರಹದ ಮೇಲೆ ಒಂದು ಲೇಖನ ಬರೆದು ಬೇರ್ತ್ಲ್ಯಾಟ್ ರಿಗೆ ಕಳುಹಿಸಿದರು.
ಆ ಫ್ರೆಂಚ್ ವಿಜ್ಞಾನಿ ಅದನ್ನು ಒಳ್ಳೆಯ ಅಭಿರುಚಿಯ ಲೇಖನವೆಂದು ಹೊಗಳಿ ಪ್ರಕಟಿಸಿದರು. ಅವರು ರಾಯ್ ಅವರಿಗೆ ಅದಿಕಾಲದ ಹಿಂದೂ ರಸಾಯನ ಶಾಸ್ತ್ರದ ಮೇಲೆ ತಮ್ಮ ಸಂಶೋಧನೆ ಮುಂದುವರಿಸಿ, ಎಂದು ಬರೆದರು. ನಂತರ ಪ್ರಫ್ಫುಲ್ಲಚಂದ್ರರು ಹಲವಾರು ವರುಷಗಳ ಅಧ್ಯಯನ ಗೈದು ತಮ್ಮ ಪ್ರಸಿದ್ಧ ಪುಸ್ತಕ, "ಹಿಂದೂ ರಸಾಯನ ಶಾಸ್ತ್ರದ ಇತಿಹಾಸ" ಎಂಬ ತೃತಿಯನ್ನು ಬಿಡುಗಡೆ ಮಾಡಿದರು. ಅದು ಜಾಗತಿಕ ಮಟ್ಟದಲ್ಲಿ ಪ್ರಸಿದ್ದಿಗೆ ಪಾತ್ರವಾಯಿತು. ಅದರಲ್ಲಿ ಅತಿ ಹಿಂದಿನ ಕಾಲದಿಂದಲೇ ಹಿಂದುಗಳಿಗೆ ಉಕ್ಕು ತಯ್ಯಾರಿಸುವ , ಭಟ್ಟಿ ಇಳಿಸುವ, ಲವಣಗಳ, ಪಾದರಸದ ಸಲ್ಫಾಯ್ಡ್, ಅದಿಗಳ ತಿಳುವಳಿಕೆ ಇತ್ತು ಎಂಬ ಕುತೂಹಕರಿ ಮಾಹಿತಿ ಇತ್ತು.
1904 ರಲ್ಲಿ ಪ್ರಫುಲ್ಲಚಂದ್ರರು ಹೆಚ್ಚಿನ ಅಧ್ಯಯನಕ್ಕಾಗಿ ಯುರೋಪದ ಪ್ರವಾಸ ಮಾಡಿ ಹಲವಾರು ಪ್ರಸಿದ್ಧ ರಸಾಯನ ಪ್ರಯೋಗಾಲಯಗಳನ್ನು ಸಂದರ್ಶಿಸಿದರು. ರಾಯ್ ಅವರನ್ನುಇಂಗ್ಲೆಡ್, ಜರ್ಮನಿ, ಫ್ರಾನ್ಸ್, ಮತ್ತು ಅನ್ಯ ಯುರೋಪದ ರಾಷ್ಟ್ರಗಳಲ್ಲಿ, ವಿಶ್ವವಿದ್ಯಾಲಯಗಳ ವಿಜ್ಞಾನಿಗಳಿಂದ ಮತ್ತು ಸಂಶೋಧನಾ ಕೇಂದ್ರಗಳಿಂದ ಸ್ವಾಗತಿಸಲಾಯಿತು. ಅಲ್ಲಿ ಅವರೊಂದಿಗಿನ ಉಪಯುಕ್ತ ಚರ್ಚೆಯಿಂದ ಮಾಹಿತಿ ವಿನಿಮಯವಾಯಿತು. ಅವರು ರಾಯ್ ಅವರ ಪ್ರಸಿದ್ಧ ಪಾದರಸದ ನೈಟ್ರೈಟ್, ಅಮೋನಿಯಂ ನೈಟ್ರೈಟ್ ಹರಳುಗಳಂತಹ ಕೆಲಸಕ್ಕಾಗಿ ಹೊಗಳಿದರು. ಕೆಲವು ವಿಶ್ವವಿದ್ಯಾಲಯಗಳು ಅವರನ್ನು ಆನರರಿ ಡಾಕ್ಟರೇಟ್ ಪದವಿಯಿಂದ ಗೌರವಿಸಿದವು. ಅವರು ಪ್ರಸಿದ್ಧ ವಿಜ್ಞಾನಿಗಳಾದ ವಿಲಿಯಂ ರಾಮಸೇ, ಜೇಮ್ಸ್ ಡೇವರ್, ಪರ್ಕಿನ್, ವಾಂಟ್ ಹೊಫ್, ಮತ್ತು ಬೇರ್ತ್ಲ್ಯಾಟ್ ರೊಂದಿಗೆ ಸುಪರಿಚಿತರಾದರು.
1912 ರಲ್ಲಿ ಪ್ರಫುಲ್ಲಚಂದ್ರರು, ಬ್ರಿಟಿಷ್ ಸಾಮ್ರಾಜ್ಯದ ವಿಶ್ವವಿದ್ಯಾಲಯಗಳ ಸಭೆಯಲ್ಲಿ, ಕಲ್ಕತ್ತಾ ವಿಶ್ವವಿದ್ಯಾಲಯದ ಪರವಾಗಿ ಭಾಗವಹಿಸಲು, ಪುನಃ ಲಂಡನ್ ನಗರವನ್ನು ಭೇಟಿಕೊಟ್ಟರು. ವಿಶ್ವವಿದ್ಯಾಲಯಗಳ ಸಭೆಯಲ್ಲಿ ಸುದೀರ್ಘ ಮಾತನಾಡಿದರಲ್ಲದೆ ಲಂಡನ್ ರಸಾಯನ ಸಂಸ್ಥೆಯಲ್ಲಿ ಕೂಡ ಭಾಷಣಮಾಡಿದರು. ಅವರ ರಸಾಯನ ಶಾಸ್ತ್ರದ ಕೊಡುಗೆಗೆ ಸಅರ್ ವಿಲಿಯಮ್ ರಾಮಸೇಯವರು ಅಭಿನಂದಿಸಿದರು. ಈ ಸಂಧರ್ಭದಲ್ಲಿ ಮಾತನಾಡುತ್ತಾ " ಯುರೋಪಿಯನ್ನರಿಗೆ ಬಟ್ಟೆ ತಯ್ಯಾರಿಸುವ ವಿಷಯ ತಿಳಿಯದಕ್ಕಿಂತ ಮೊದಲೇ ಮತ್ತು ಅವರು ಪ್ರಾಣಿಗಳ ಚರ್ಮ ತೊಟ್ಟು ಕಾಡಿನಲ್ಲಿ ಅಡ್ಡಾಡುವಾಗ, ಭಾರತೀಯ ವಿಜ್ಞಾನಿಗಳು ಭವ್ಯವಾದ ರಸಾಯನಗಳ ಉತ್ಪಾದನೆ ಮಾಡುತ್ತಿದ್ದರು" ಎಂದರು.
1916 ರಲ್ಲಿ ರಾಯ್ ಅವರು ಪ್ರಸಿಡೆನ್ಸಿ ಕಾಲೇಜಿನಿಂದ ನಿವೃತ್ತರಾದರು. ಕಲ್ಕತ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಸಅರ್ ಅಶುತೋಷ್ ಮುಖರ್ಜಿ, ರಾಯ್ ಅವರನ್ನು ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜಿನಲ್ಲಿ ರಾಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿ ನೇಮಿಸಿದರು. ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜು ಹೊಸದಾಗಿ ಅದಾಗಲೇ ಆರಂಭ ಗೊಂಡಿತ್ತು. ಇಲ್ಲಿ ಪ್ರಫುಲ್ಲಚಂದ್ರರು ಹಲವಾರು ಯೋಗ್ಯ ವಿದ್ಯಾರ್ಥಿಗಳನ್ನು ಸಂಶೋಧನೆಯಲ್ಲಿ ತರಬೇತಿ ನೀಡಿದರು ಮತ್ತು ಅವರೊಂದಿಗೆ ಪ್ರಸಿದ್ಧ ರಾಸಾಯನಗಳನ್ನು ಕಂಡುಹಿಡಿದರು.
ಪ್ರಯೋಗಾಲಯದಲ್ಲಿ ಸಾಧನಗಳ ಕೊರತೆ ಇತ್ತು. ಉಪಕರಣಗಳ ಸೌಲಭ್ಯ ಇಲ್ಲದ್ದರಿಂದ ಹೆಚ್ಚಿನ ಸಂಶೋಧನೆ ಕೆಲಸ ಮಾಡಲು ತೊಂದರೆಯಾಗುತ್ತಿತ್ತು. ಕಾಲೇಜಿನ ಕಾನೂನಿನ ಪ್ರಕಾರ ಎಲ್ಲಾ ಉಪನ್ಯಾಸಕರು ಭಾರತೀಯರೇ ಆಗಿರಬೇಕಿತ್ತು. ಬಹುಶಃ ಈ ಕಾರಣಕ್ಕಾಗಿ ಅಂದಿನ ಬ್ರಿಟಿಷ್ ಸರಕಾರ, ಈ ಕಾಲೇಜಿಗೆ ಹೆಚ್ಚಿನ ಆರ್ಥಿಕ ಸಹಾಯ ಒದಗಿಸಲಿಲ್ಲ. ಆದರೂ ಇದ್ದ ಸವಲತ್ತುಗಳನ್ನು ಬಳಸಿಕೊಂಡು, ರಾಯ್ ಅವರು ಮತ್ತು ಅವರ ವಿದ್ಯಾರ್ಥಿಗಳು ಗಣನೀಯವಾದ ಕೆಲಸ ಮಾಡಿದರು. ಬೇಗನೆ ಕಾಲೇಜು ಉತ್ತಮವಾದ ಪ್ರಸಿದ್ದಿ ಗಳಿಸಿತು. ಪ್ರಫುಲ್ಲಚಂದ್ರರು ಸತತವಾಗ 20 ವರುಷಗಳ ಕಾಲ ಈ ಕಾಲೇಜಿನಲ್ಲಿ ತಮ್ಮ ಸೇವೆ ಸಲ್ಲಿಸಿದರು. ಅವರು ಕೊನೆಯ ವರೆಗೆ ಆಜನ್ಮ ಬ್ರಹ್ಮಚಾರಿಯಾಗಿಯೇ ಉಳಿದರು. ಈ 20 ವರುಷ, ಅವರು ಕಾಲೇಜಿನ ಮೊದಲ ಮಹಡಿಯ ಒಂದು ಸಾಧಾರಣ ಕೋಣೆಯಲ್ಲಿ ಜೀವಿಸಿದರು. ಅವರ ಕೆಲವು ದುಡ್ಡಿಲ್ಲದ ಬಡ ವಿಧ್ಯರ್ಥಿಗಳು, ಬೇರೆಕಡೆಗೆ ಇರಲು ಸಾಧ್ಯವಾಗದಿರುವಾಗ, ಇವರ ಕೋಣೆಯನ್ನೇ ಹಂಚಿಕೊಂಡು ಇರುತ್ತಿದ್ದರು.1936 ರಲ್ಲಿ ಅವರ 75 ವರುಷ ವಯಸ್ಸಿನಲ್ಲಿ ರಾಯ್ ಯವರು ಉಪನ್ಯಾಸಕ ವೃತ್ತಿಯಿಂದ ಬಿಡುಗಡೆಯಾದರು.
1921 ರಲ್ಲಿ ಅವರ 60 ವರುಷ ವಯಸ್ಸಿಗೆ, ಅವರು ತಮ್ಮ ಪಗಾರದ ಎಲ್ಲಾ ಹಣವನ್ನು ಮುಂಗಡವಾಗಿಯೇ ವಿಶ್ವವಿದ್ಯಾಲಯದ ರಾಸಾಯನ ವಿಭಾಗದ ಅಭಿವೃದ್ದಿಗಾಗಿ ಮತ್ತು ಎರಡು ರಿಸರ್ಚ್ ಫೆಲೋಶಿಪ್ ಹುಟ್ಟು ಹಾಕಲು ದೇಣಿಗೆಯಾಗಿ ನೀಡಿದರು. ಇದಲ್ಲದೆ, ಅವರು ಹತ್ತು ಸಾವಿರ ರೂಪಾಯಿಗಳನ್ನು ಪ್ರಸಿದ್ದ್ ಭಾರತೀಯ ರಸಾಯನ ಶಾಸ್ತ್ರಜ್ಞ ನಾಗಾರ್ಜುನ ಅವರ ಹೆಸರಲ್ಲಿ, ರಾಸಾಯನ ಶಾಸ್ತ್ರದ ವಾರ್ಸಿಕ ಸಂಶೋಧನೆಯ ಪಾರಿತೋಷಕಕ್ಕಾಗಿ ಕೊಟ್ಟರು. ಮತ್ತು ಹತ್ತು ಸಾವಿರ ರೂಪಾಯಿಗಳನ್ನು ಸಅರ್ ಅಸಿತೋಷ್ ಮುಖರ್ಜಿ ಹೆಸರಿನಲ್ಲಿ ಜೀವಶಾಸ್ತ್ರದಲ್ಲಿ ಸಂಶೋಧನಾ ಬಹುಮಾನಕ್ಕಾಗಿ ಕೊಟ್ಟರು. ಅವರ ಶ್ರೇಷ್ಠ ಕೆಲಸ ಮನಗಂಡು, ಅವರನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷರಾಗಿ ಹಾಗು ಭಾರತೀಯ ರಾಸಾಯನ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಮಾಡಿದರು. ಹಲವಾರು ದೇಶಿಯ ಹಾಗು ವಿದೇಶಿಯ ವಿಶ್ವವದ್ಯಾಲಯಗಳು ಅವರನ್ನು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದವು.
ಪ್ರಫುಲ್ಲಚಂದ್ರರು ರಾಷ್ಟ್ರೀಯ ವಿದ್ಯಾ ಕೌನ್ಸಿಲ್ ನ ಅಧ್ಯಕ್ಷರಾಗಿದ್ದರು. ಕೇವಲ ವಿಜ್ಞಾನದ, ಬಿಎಸ್.ಸಿ. ಅಥವಾ ಎಂ.ಎಸ.ಸಿ. ಡಿಗ್ರೀ ಪಡೆದುಕೊಂಡರೆ ಸಾಲದು, ಎಂದು ಅವರು ನಂಬಿದರು. ಬದಲಿಗೆ ವಿದ್ಯಾರ್ಥಿಗಳು ನಿಜವಾದ ಜ್ಞಾನ ಪಡೆಯಬೇಕು. ಅವರ ಆಯ್ಕೆಯಲ್ಲಿ, ಸರಕಾರಿ ನೌಕರಿಗಾಗಿ ಪದವಿ ಗಳಿಸುವುದು ವ್ಯರ್ಥ. ವಿದ್ಯಾರ್ಥಿಗಳು ತಾಂತ್ರಿಕ ವಿದ್ಯಪಡೆದು ತಮ್ಮದೇ ಆದ ವ್ಯವಹಾರದಲ್ಲಿ ತೊಡಗಿಸಿಕೊಳ್ಳಬೇಕು. ತರುಣರು ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.
ಪ್ರಫುಲ್ಲಚಂದ್ರರು ತಮ್ಮ ವಿದ್ಯಾರ್ಥಿಗಳತ್ತ ಹೆಚ್ಚಿನ ಪ್ರೀತಿಯುಳ್ಳವರು. ತಮ್ಮ ಶಿಷ್ಯರು ಪಾರಿತೋಷಕ, ಗೌರವ ಪಡೆದಾಗ ಅವರಿಗೆ ಅಪಾರ ಸಂತೋಷ ತರುತ್ತಿತ್ತು. ತಮಗಿಂತ ತಮ್ಮ ಶಿಸ್ಯಸರು ಪ್ರಗತಿ ಗೈದರೆ ಅವರಿಗೆ ಇನ್ನೂ ಆನಂದದ ವಿಷಯ. ಭಾರತೀಯ ಪ್ರಸಿದ್ಧ ವಿಜ್ಞಾನಿಗಳಾದ ಮೇಘನಾಥ್ ಷಾಹ ಮತ್ತು ಶಾಂತಿಸ್ವರೂಪ ಭಟನಾಗರ್, ರಾಯ್ ಅವರ ಶಿಷ್ಯರು. ಪ್ರಫುಲ್ಲಚಂದ್ರರು ಶಿಸ್ತಿನ ಜೀವನ ನಡೆಸಿದ, ತಮ್ಮ ಕೆಲಸ ತಾವೇ ಮಾಡಿಕೊಳ್ಳುವ ಅಪರೂಪದ ವ್ಯಕ್ತಿಯಾಗಿದ್ದರು. ಅವರು ತಮ್ಮ 83ನೆಯ ವಯಸ್ಸಿಗೆ, 16 ನೇ ಜೂನ್ 1944ರಲ್ಲಿ ತೀರಿಕೊಂಡರು.