ವಿಷಯಕ್ಕೆ ಹೋಗು

ಅಧುನಿಕಯುಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ.
ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ.


ಅಧುನಿಕ ಯುಗ:

[ಬದಲಾಯಿಸಿ]

೦೯೦೦-ಚೀನಾ ದೇಶದಲ್ಲಿ ಗುಂಡು-ಮದ್ದು ಕಂಡುಹಿಡಿದರು.

೧೨೦೦-ಯುರೋಪಖಂಡದಲ್ಲಿ ವಿಶ್ವವಿದ್ಯಾಲಯಗಳು ಸ್ಥಾಪನೆಗೊಂಡವು.

೧೦೯೬-ಆಕ್ಸಫರ್ಡ ವಿಶ್ವವಿದ್ಯಾಲಯ-ಇಂಗ್ಲಾಂಡನಲ್ಲಿ.

೧೧೩೪-ಸ್ಪೇನ್ ದೇಶದಲ್ಲಿ ಸಲಮಂಕಾ ವಿಶ್ವವಿದ್ಯಾಲಯ.

೧೧೬೦-ಫ್ರಾಂಸನಲ್ಲಿ ಪ್ಯಾರಿಸ ವಿಸ್ವವಿದ್ಯಾಲಯ.

೧೨೦೯-ಇಂಗ್ಲಂಡನಲ್ಲಿ ಕ್ಯಾಂಬ್ರಿಜ್ ವಿಶ್ವವಿದ್ಯಾಲಯ.

೧೨೨೨-ಇಟಲಿಯಲ್ಲಿ ಪಡುವಾ ವಿಶ್ವವಿದ್ಯಾಲಯ.

೧೨೭೬-ಇಟಲಿಯಲ್ಲಿ ಕಾಗದ ತಯ್ಯಾರಿಕೆ ಆರಂಭವಾಯಿತು,

೧೩೪೭-೧೪೦೦ ಯುರೋಪ್ ಖಂಡದಲ್ಲಿ ಹಂತ ಹಂತವಾಗಿ ಪ್ಲೇಗು ರೋಗ ವಿಸ್ತರಿಸಿತು. ೩೦% ಯುರೋಪಿಯನ್ನರು ಸಾವನಪ್ಪಿದರು.

೧೪೫೦-ಜರ್ಮನಿಯಲ್ಲಿ ಮುದ್ರಣ ಯಂತ್ರದ ಅವಿಸ್ಕಾರವಾಯಿತು. ೧೪೭೦ರ ಹೊತ್ತಿಗೆ ಮುದ್ರಣಯಂತ್ರಗಳು ಯುರೋಪ್ ಖಂಡದ ವಿವಿಧ ನಗರಗಳಿಗೆ ವಿಸ್ತರಿಸಿದವು. ಇದರಿಂದ ಜನರಲ್ಲಿ ಜ್ಞಾನ ಹರಡಲು ಅನುಕೂಲವಾಯಿತು. ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಗ್ರಂಥಗಳು ಸುಲಭವಾಗಿ ದೊರೆಯಲಾರಂಭಿಸಿದವು.

೧೪೯೨-ಕೊಲಂಬಸನಿಂದ ಅಟ್ಲಾಂಟಿಕ ಸಾಗರದಲ್ಲಿ ಪಯಣ ಮತ್ತು ಹೊಸ ಭೂಖಂಡಗಳ ಶೋಧ.

೧೪೯೮-ವಾಸ್ಕೋಡಿಗಾಮನಿಂದ ಯುರೋಪ ಖಂಡದಿಂದ ಭಾರತಕ್ಕೆ ತಲುಪುವ ಜಲಮಾರ್ಗದ ಶೋಧ.

ಫರ್ಡಿನಂಡ್ ಮೆಗಲನ್‌

[ಬದಲಾಯಿಸಿ]

೧೫೨೨-ಫರ್ಡಿನಂಡ್ ಮೆಗಲನ್‌ನು ಐದು ಹಡಗುಗಳಲ್ಲಿ ೨೭೦ ಜನರ ತಂಡದೊAದಿಗೆ, ೨೬-೯-೧೫೧೯ರಂದು ಯುರೋಪ ಖಂಡದಿಂದ ಸಮುದ್ರಯಾನ ಆರಂಭಿಸಿ, ೩೧-೩-೧೫೨೦ರಂದು ಅರ್ಜಂಟೈನಾ ತಲುಪಿದನು. ೨೪-೮ ೧೫೨೦ರ ವರೆಗೆ ಅಲ್ಲಿಯೇ ತಂಗಿದರು. ಅಲ್ಲಿ ನಾವಿಕರ ಜಗಳ ಆರಂಭವಾಗಿ, ಕೇವಲ ಮೂರು ಹಡಗುಗಳೊಂದಿಗೆ, ೨೧-೧೦-೧೫೨೦ರಂದು ದಕ್ಷಿಣ ಅಮೆರಿಕಾ ತುದಿಯಿಂದ ಪೆಸಿಫಿಕ್ ಸಾಗರ ಪ್ರವೇಶಿಸಿ;

ದೀರ್ಘಕಾಲ ಪ್ರಯಾಣಿಸಿ, ೬-೩-೧೫೨೧ರಂದು ಗುಅನ ಎನ್ನುವ ಒಂದು ಚಿಕ್ಕ ದ್ವೀಪಕ್ಕೆ ತಲುಪಿದನು. ಗುಅನ್ ದಾಟಿ ಯಸಿಯಾ ಖಂಡದ ಫಿಲಿಪೈನ್ ದೇಶವನ್ನು ತಲಿಪಿ, ಫಿಲಿಪೈನ್ ನಡುಗಡ್ಡೆಗಳಲ್ಲಿ ಒಂದು ಕಾದಾಟದಲ್ಲಿ ಮರಣಹೊಂದಿದನು. ಉಳಿದ ೧೮ ಜನಪ್ರಯಾಣಿಕರು ವಿಕ್ಟೋರಿಯಾ ಹಡಗಿನಲ್ಲಿ, ಹಿಂದು ಮಹಾಸಾಗರ ದಾಟಿ ಆಫ್ರಿಕಾ ಖಂಡದ ತುದಿಯ ಮುಖಾಂತರ ಆಫ್ರಿಕಾ ಖಂಡವನ್ನು ದಾಟಿ ಯುರೋಪ ಖಂಡಕ್ಕೆ ಸಮುದ್ರಯಾನ ಗೈದರು. ೮-೯-೧೫೨೨ರಂದು ಅವರು ವಿಕ್ತೋರಿಯಾ ಹಡಗಿನಲ್ಲಿ ಸ್ಪೇನ್ ದೇಶವನ್ನು ಪ್ರವೇಶಿಸಿದರು. ಹೀಗೆ ನಾವಿಕರು ಮೂರು ವರುಷ ಪ್ರಯಾಣಗೈದು, ಪ್ರಥಮಬಾರಿಗೆ ಪೂರ್ಣ ಭೂಮಿಗೆ ಸುತ್ತುಹಾಕಿದರು.

ನಿಕೋಲಾಸ್ ಕೋಪರ್‌ನಿಕಸ

[ಬದಲಾಯಿಸಿ]

೧೫೩೩-ಪೋಲಂಡಿನ ಖಗೋಳ ವಿಜ್ಞಾನಿ ನಿಕೋಲಾಸ್ ಕೋಪರ್‌ನಿಕಸರ ಸೂರ್ಯಕೇಂದ್ರವಾದ.

ಹಿಂದಿನ ಟಾಲೆಮಿ ನಿರ್ಮಿತ ಭೂಕೇಂದ್ರವಾದಕ್ಕೆ ವಿರುಧ್ಧವಾಗಿ, ಅವರು ಸೂರ್ಯಕೇಂದ್ರವಾದವನ್ನು ಮಂಡಿಸಿದನು. ಎಲ್ಲಾ ಗ್ರಹಗಳು ವೃತ್ತಾಕಾರದಲ್ಲಿ ಸೂರ್ಯನನ್ನು ಸುತ್ತುತ್ತವೆ ಎಂದು ಪ್ರಕಟಿಸಿದನು. ಈ ಜಗದ ಕೇಂದ್ರ ಭೂಮಿ ಅಲ್ಲ, ಬದಲಿಗೆ ಸೂರ್ಯ ಎಂದು ವಿವರಿಸಿದನು. ೧೫೪೦ರಲ್ಲಿ ಅವರ ಕೃತಿ ಮುದ್ರಿತವಾಯಿತು.

೧೬೦೦-ಸ್ವತಂತ್ರ ಚಿಂತನಶೀಲ, ಭಯರಹಿತ ಬ್ರೂನೋ; ಹುಟ್ಟು ಬಂದಾಯಗಾರ ಹಾಗು ಸಂಪ್ರದಾಯ ವಿರೋಧಿ. ಯುರೋಪಿನ ವಿವಿಧ ನಗರಗಳಲ್ಲಿ ಸಂಚರಿಸಿ ತನ್ನ ಮುಕ್ತ ಚಿಂತನೆಯ ಮುಫಲಗಳನ್ನು ವಿಪುಲವಾಗಿ ವಿವರಿಸಿದ. ಬ್ರೂನೋನ ವಿಚಾರಗಳನ್ನು ಸಹಿಸದ ಧರ್ಮಾಂಧರು ಮೋಸದಿಂದ ಈತನನ್ನು ರೋಮ ನಗರಕ್ಕೆ ಕರೆತಂದು ಜೀವಂತವಾಗಿ ದಹಿಸಿದರು.

ಟೈಕೊಬ್ರಾಹೆ

[ಬದಲಾಯಿಸಿ]

೧೫೬೦-ಟೈಕೊಬ್ರಾಹೆಯು ವಿದ್ಯಾರ್ಥಿ ಇರುವಾಗ ಅಗಸ್ಟ ೨೧, ೧೫೬೦ರಂದು ಸೂರ್ಯ ಗ್ರಹಣ ಕಂಡು, ಖಗೋಳದತ್ತ ಅಕರ್ಷಿತನಾದನು. ರಾತ್ರಿಯಲ್ಲ ನಕ್ಷತ್ರಗಳ ಕಂಡು, ದತ್ತಾಂಶವನ್ನು ಕಲೆಹಾಕುವನು. ಇಪ್ಪತ್ತು ವರ್ಷಗಳಿಗೊಮ್ಮೆ ಸಂಭವಿಸುವ ಗುರು-ಶನಿ ಗ್ರಹಗಳ ಕೂಟ ಕಂಡನು. ಹಿಂದಿನವರ ಲೆಕ್ಕಾಚಾರಕ್ಕೂ ಅಂದು ಘಟಿಸಿದ ಘಟನೆಗೂ, ಒಂದು ತಿಂಗಳು ವ್ಯತ್ಯಾಸ ಕಂಡನು. ನಕ್ಷತ್ರಗಳ ಸ್ತಾನವನ್ನು ನಿಖರವಾಗಿ ಗುರುತಿಸಬೇಕೆಂದುಕೊಂಡನು. ಸತತವಾಗಿ ದಿನಾಲು ರಾತ್ರಿ ಕಂಡದ್ದೆನ್ನಲ್ಲ ಬರೆದಿಡುವನು.

ನವೆಂಬರ್ ೧೧, ೧೫೭೨ರಂದು ಆಕಾಶದಲ್ಲಿ ಒಂದು ಪ್ರಖರವಾಗಿ ಹೊಳೆಯುವ ಹೊಸ ನಕ್ಷತ್ರ ಗೋಚರಿಸಿತು. ಅದು ಒಂದು ವರ್ಷದೊಳಗೆ, ತನ್ನ ಪ್ರಕಾಶ ಕ್ಷೀಣಿಸುತ್ತಾ ಕಾಣೆಯಾಯಿತು. ಹಿಂದಿನವರ ನಕ್ಷತ್ರಗಳು ಸ್ಥಿರವಾಗಿವೆ ಎನ್ನುವ ಕಲ್ಪನೆಗೆ ವಿರುದ್ಧವಾದ ಘಟನೆ ಅದಾಗಿತ್ತು. ಅದೊಂದು ಸುಪರ್ ನೋವಾ ಆಗಿತ್ತು.

೧೫೭೭ರಲ್ಲಿ ಕಾಣಿಸಿಕೊಂಡ ಧೂಮಕೇತುವನ್ನು ವೀಕ್ಷಿಸಿ, ಅದರ ಬಾಲ ಯಾವಾಗಲು ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಇರುವುದನ್ನು ಗಮನಿಸುದನು. ಮತ್ತು ಅದು ವಕ್ರಾಕಾರದಲ್ಲಿ ಸೂರ್ಯನ ಸುತ್ತುವಂತೆ ಕಂಡು ಮಾಯವಾಯಿತು.

೧೫೬೩-ಖಗೋಳ ವಿಜ್ಞಾನಿ ಟೈಕೊಬ್ರಾಹೆಯು ಸತತವಾಗಿ ನಕ್ಷತ್ರಗಳ ವೀಕ್ಷಣೆಗೈದು ಸಾವಿರಕ್ಕೂ ಅಧಿಕ ನಕ್ಷತ್ರಗಳ ನಿಖರವಾದ ನಕ್ಷತ್ರಪಟಲ ತಯ್ಯಾರಿಸಿದನು. ಅವನು ಕೆಪ್ಲರನನ್ನು ಸಹಾಯಕನಾಗಿ ನೇಮಿಸಿಕೊಂಡನು. ೧೬೦೧ರಲ್ಲಿ ಇದ್ದಕ್ಕಿದ್ದಂತೆ ತೀರಿಕೊಂಡನು. ಕೆಪ್ಲರನು ಟೈಕೋನ ದತ್ತಾಂಶವನ್ನು ಬಳಸಿ ಮೊದಲಿಗೆ ಮಂಗಳ ಗ್ರಹದ ಚಲನಪಥದ ಅದ್ಯಯನ ಗೈದನು. ಎಂಟು ವರ್ಷಗಳ ಅಧ್ಯಯನದ ನಂತರ, ಮಂಗಳ ಗ್ರಹವು ದೀರ್ಘ ವೃತ್ತದಲ್ಲಿ ಸೂರ್ಯನನ್ನು ಸುತ್ತುವುದು ಖಚಿತವಾಯಿತು. ಮಂಗಳ ಗ್ರಹ ಸೂರ್ಯನ ಸಮೀಪಕ್ಕೆ ಬಂದಂತೆ ವೇಗದಲ್ಲಿ ಹೆಚ್ಚಳವಾಗುವುದನ್ನು ಮತ್ತು ದೂರ ಹೋದಂತೆ ವೇಗದಲ್ಲಿ ಕಡಿಮೆಯಾಗುವುದನ್ನು ಕಂಡನು. ಮುಂದೆ ಆತನು ತನ್ನ ಮೊದಲ ಎರಡು ಗ್ರಹಚಲನ ನಿಯಮಗಳನ್ನು ಪ್ರಕಟಿಸಿದನು.

ಕೆಪ್ಲರನ ಗ್ರಹಗಳ ಚಲನೆಯ ನಿಯಮಗಳು

[ಬದಲಾಯಿಸಿ]

೧೬೦೯-ಕೆಪ್ಲರನ ಗ್ರಹಗಳ ಚಲನೆಯ [ಪರಿಭ್ರಮಣೆಯ] ನಿಯಮಗಳು.

ಗ್ರಹಗಳು ಸೂರ್ಯನನ್ನು ದೀರ್ಘ ವೃತ್ತಾಕಾರದಲ್ಲಿ ಸುತ್ತುತ್ತವೆ.

ಗ್ರಹಗಳ ಕಕ್ಷ ಸೂರ್ಯನಿಂದ ದೂರವಿದ್ದಂತೆ, ವೇಗದಲ್ಲಿ ಕಡಿಮೆಯಾಗುತ್ತದೆ.

ಗ್ರಹವು ದಿರ್ಘವೃತ್ತದಲ್ಲಿ ಚಲಿಸುವಾಗ, ಸಮಾನ ಸಮಯದಲ್ಲಿ ಸಮಾನ ಕ್ಷೇತ್ರವನ್ನು ಕ್ರಮಿಸುತ್ತದೆ.

೧೬೧೦-ಗೆಲೆಲಿಯೊ ಗೆಲಿಲಿಯ ಟೆಲಿಸ್ಕೋಪ್ ಅವಿಸ್ಕಾರ ಹಾಗು ಗುರುಗ್ರಹದ ನಾಲ್ಕು ಉಪಗ್ರಹಗಳ ಶೋಧ. ಆತನು ಶುಕ್ರ ಗ್ರಹದ [ಚಂದ್ರನ ಕಲೆಗಳಂತೆ ಇರುವ] ಕಲೆಗಳ ವೀಕ್ಷಣೆ ಗೈದನು ಮತ್ತು ಶನಿ ಗ್ರಹದ ಉಂಗುರದ ವೀಕ್ಷಣೆಗೈದನು.

೧೬೩೩-ಗೆಲೆಲಿಯೊ, ಭೂಮಿಯು ಸೂರ್ಯನ ಸುತ್ತ ತಿರುಗುತ್ತದೆ ಎಂದು ಬರೆದುದಕ್ಕೆ, ಇದು ಬೈಬಲ್ ಧರ್ಮಗ್ರಂಥದ ನಂಬಿಕೆಗೆ ವಿರೋಧಿ ಎಂದು, ಧರ್ಮಾಂಧರು ಆತನನ್ನು ರೋಮ ನಗರಕ್ಕೆ ಕರೆದು, ಆತನನ್ನು ಜೀವನಪೂರ್ತಿ ಗ್ರಹಬಂಧನಕ್ಕೆ ಒಳಪಡಿಸುವ ಶಿಕ್ಷೆ ವಿಧಿಸಿದರು.

೧೬೧೮-೧೬೪೮: ಮಧ್ಯ ಯುರೊಪ್‌ನಲ್ಲಿ [ಇಂದಿನ ಜರ್ಮನಿ] ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟಗಳಲ್ಲಿ ಮೂವತ್ತು ವರ್ಷಗಳ ಕಾಲ ಯುಧಗಳು ನಡೆದವು. ರಾಜತಾಂತ್ರಿಕ, ಸಾಮಾಜಿಕ, ಧಾರ‍್ಮಿಕ, ಪೈಪೋಟಿಗಳು ಇದಕ್ಕೆ ಕಾರಣಗಳು. ಇದರ ಪರಿನಣಾಮ, ಸಾಕಸ್ಟು ಸಾವು-ನೋವುಗಳು ಸಂಭವಿಸಿದವು. ರೋಗ--ರುಜುಗಳು ಹರಡಿದವು, ಆಹಾರದ ಕೊರತೆ ಉಂಟಾಯಿತು. ಸಾಮಾಜಿಕ ಜೀವನ ಕುಸಿಯಿತು. ಈ ಯುಧಗಳು ಯುರೋಪಿನ ಎಲ್ಲಾ ಭಾಗಗಳಿಗೆ ವಿಸ್ತರಿಸಿದವು.

೧೬೪೨-ಇಂಗ್ಲೆಂಡ್‌ನಲ್ಲಿ ಸಾಮಾಜಿಕ ಕ್ರಾಂತಿಯ ಆರಂಭವಾಯಿತು. ಸುಮಾರು ೧,೦೦,೦೦೦ ಜನರು ಪ್ರಾಣ ಕಳೆದುಕೊಂಡರು ಮತ್ತು ೧೦,೦೦೦ ಮನೆಗಳು ನೆಲಸಮವಾದವು.

೧೬೪೯ರಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೊಂಡಿತು. ಜನೆವರಿ ೩೦ರಂದು ದೊರೆ ಚಾರ್ಲ್ಸನ ಶಿರ-ಕ್ಷೇದಗೈದರು.

೧೬೫೪-ಪೂರ್ವ ಯುರೋಪನಲ್ಲಿ ಪ್ಲೇಗ್ ರೋಗ ಹರಡಿತು.

೧೬೮೮-ಪಾರ್ಲಿಮೆಂಟ್‌ನಿಂದ ಇಂಗ್ಲೀಷ ಬಿಲ್ ಆಫ್ ರೈಟ್ಸ ಅಸ್ತಿತ್ವಕ್ಕೆ ಬಂದಿತು. ಇದರಿಂದ ಅರಸನ ಹಕ್ಕುಗಳು ಸೀಮಿತಗೊಂಡವು.

೧೬೬೨-ಲಂಡನ್ ನಗರದಲ್ಲಿ ರಾಯಲ್ ಸೊಸೈಟಿಯ ಸ್ಥಾಪನೆಯಾಯಿತು. ವೈಜ್ಞಾನಿಕ ತಳಹದಿಯಲ್ಲಿ ನಿಸರ್ಗದ ಸತ್ತೆ ಶೋಧನೆ ಮತ್ತು ತಂತ್ರಗಾರಿಕೆಯ ಲಾಭ, ಇದರ ಗುರಿಯಾಯಿತು.

೧೬೬೬-ಫ್ರೆಂಚ್ ಅಕಾಡಮಿ ಆಫ್ ಸೈನ್ಸ ಸ್ಥಾಪಿತವಾಯಿತು.

೧೬೬೮-ಐಸಾಕ್ ನ್ಯೂಟನ್ನರು ಕಿರಣ ಪ್ರತಿಫಲನ ಟೆಲಿಸ್ಕೋಪ್ ರಚಿಸಿದರು. ಮತ್ತು

೧೬೭೨-ಐಸಾಕ್ ನ್ಯೂಟನ್ನರು ರಾಯಲ್ ಸೊಸೈಟಿಯ ಸದಶ್ಯರಾದರು.

೧೬೭೯-ಎಡ್ಮಂಡ ಹ್ಯಾಲಿಯವರು ದಕ್ಷಿಣಗೋಳದ ೩೪೧ ನಕ್ಷತ್ರಗಳ ಪಟ್ಟಿಯನ್ನು ಪ್ರಕಟಿಸುತ್ತಾರೆ. ಮತ್ತು ಅವರು ರಾಯಲ್ ಸೊಸೈಟಿಯ ಸದಶ್ಯರಾದರು.

೧೬೮೪-ಎಡ್ಮಂಡ ಹ್ಯಾಲಿಯವರು ಗುರುತ್ವ ನಿಯಮದ ಕುರಿತು ಮಾತನಾಡಲು, ಕ್ಯಾಂಬ್ರಿಜ್ ನಲ್ಲಿ ಐಸಾಕ್ ನ್ಯೂಟನ್ ರನ್ನು ಕಾಣಲು ಬರುತ್ತಾರೆ. ನ್ಯೂಟನ್ನರ ಕೃತಿ ನಿರ್ಮಾಣಕ್ಕೆ ಧನಸಹಾಯ ಮಾಡುತ್ತಾರೆ.

೧೬೮೭-ನ್ಯೂಟನ್ನರ ಗ್ರಂಥ 'ಪ್ರಿನ್ಸಿಪಿಯಾ ಮೆಥೆಮೆಟಿಕಾ' ಮೂರು ಪುಸ್ತಕಗಳ ರೂಪದಲ್ಲಿ ಪ್ರಕಟವಾಯಿತು.

೧೭೦೦-ಜರ್ಮನಿಯಲ್ಲಿ ಬರ್ಲಿನ್ ವಿಜ್ಞಾನ ಅಕಾಡಮಿ ಸ್ಥಾಪನೆಗೊಂಡಿತು.

೧೭೦೩- ಸಅರ್ ಐಸಾಕ್ ನ್ಯೂಟನ್‌ರು ರಾಯಲ್ ಸೊಸೈಟಿಯ ಅದ್ಯಕ್ಷರಾದರು.

೧೭೨೭ರಲ್ಲಿ ಅವರು ಮರಣಹೊಂದಿದರು.

ಎಡಮಂಡ ಹ್ಯಾಲಿ

[ಬದಲಾಯಿಸಿ]

೧೭೦೫- ಖಗೋಳ ವಿಜ್ಞಾನಿಯಾದ ಎಡಮಂಡ ಹ್ಯಾಲಿಯು, ೧೩೩೭-೧೬೯೮ರ ವರೆಗೆ ಕಾಣಿಸಿಕೊಂಡ ಎಲ್ಲಾ ದೂಮಕೇತುಗಳ ಅಳವಾದ ಅಧ್ಯಯನ ಗೈದೂ, ೧೫೩೧, ೧೬೦೭ ಮತ್ತು ೧೬೮೨ಗಳಲ್ಲಿ ಕಾಣಿಸಿಕೊಂಡ ಧೂಮಕೇತುವು ಒಂದೆ ಎಂದು ವಿವರಿಸಿದರು. ಮತ್ತು ಅದು ಪುನಃ ೧೭೫೮ರಲ್ಲಿ ಕಾಣುವುದೆಂದು ಮುನ್ನುಡಿದರು. ಆದರೆ ಅವರು ೧೭೪೨ರಲ್ಲಿ ಮರಣಹೊಂದಿದರು. ಧೂಮಕೇತುವು ೧೭೫೮ ಕೊನೆಯಲ್ಲಿ ಪ್ರಕಟವಾಯಿತು. ಹರ್ಷಗೊಂಡ ವಿಜ್ಞಾನಿಗಳು ಅದನ್ನು ಹ್ಯಾಲಿಧೂಮಕೇತು ಎಂದು ಹೆಸರಿಸಿದರು. ಧೂಮಕೇತುಗಳು ಸಹ ಗ್ರಹಗಳಂತೆ ಸೂರ್ಯನನ್ನು ದೀರ್ಘ ವ್ರತ್ತದಲ್ಲಿ ಸುತ್ತುತ್ತವೆ ಎಂದು ಖಚಿತವಾಯಿತು.

೧೭೩೬-ಭೂಮಿಯ ಆಕಾರ ತಿಳಿಯಲು, ವಿಜ್ಞಾನಿಗಳು ಭೂಮಿಯ ಧ್ರುವಗಳತ್ತ ಪ್ರಯಾಣಗೈದು ಅಂಕಿಅಂಶಗಳನ್ನು ಕಲೆಹಾಕಿದರು. ಇದರಿಂದ ಭೂಮೀ ಪೂರ್ಣ ದುಂದಾಗಿರದೆ, ಧ್ರುವಗಳತ್ತ ಸ್ವಲ್ಪ ಚಪ್ಪಟೆಯಾಗಿದೆ ಎಂದು ಕಂಡುಕೊಂದರು.

೧೭೫೬-ಜೋಸೆಫ್ ಬ್ಲಾö್ಯಕ್ ರವರು ಸುಣ್ಣದ ಕಲ್ಲನ್ನು ಬಲವಾಗಿ ಕಾಯಿಸಿದಾಗ, ಅದರಿಂದ ಒಂದು ಅನಿಲ ಹೊರಬೀಳುತ್ತದೆ. ಅದನ್ನು ಅವರು 'ಫಿಕ್ಸಡ ಏರ್' ಎಂದು ಹೆಸರಿಸಿದರು. ಈ ಕ್ರೀಯಯಲ್ಲಿ ಕಲ್ಲು ಒಂದಿಸ್ಟು ಭಾರವನ್ನು ಕಳೆದುಕೊಂಡಿತು. ಈ ಅನಿಲವು ವಾತಾವರಣದ ಗಾಳಿಯ ಒಂದು ಭಾಗ ಎಂದು ಗುರುತಿಸಿದರು. ಹಾಗು ಜೀವಿಗಳು ಉಸಿರಾತದಲ್ಲಿ ಈ ಅನಿಲವನ್ನು ದೇಹದಿಂದ ಹೊರಹಾಕುತ್ತವೆ ಎಂದು ತೋರಿಸಿದರು. ದೀಪವು ಈ ಅನಿಲದಲ್ಲಿ ನಂದಿಹೋಗುವುದನ್ನು ಕಂದರು.

೧೭೬೨-೬೪ರಲ್ಲಿ ಬ್ಲಾö್ಯಕ್ ರವರು ಗುಪ್ತೋಶ್ಣದ ಅಧ್ಯಯನಗೈದರು. ಉಷ್ಣವು ಒಂದು ಪ್ರವಹನ ಶಕ್ತಿ ಎಂದು ಕಂದುಕೊAದರು. ಜೇಮ್ಸ ವ್ಯಾಟ್‌ರವರು ಈ ತತ್ವ ಬಳಸಿ ಉಗಿಯಂತ್ರ ನಿರ್ಮಿಸಿದರು.

೧೭೬೬-ಹೆನ್ರಿ ಕೆವೆಂಡಿಶ್ ತಮ್ಮ ಪ್ರಯೋಗಶಾಲೆಯಲ್ಲಿ ಜಲಜನಕ ಅನಿಲ ಕಂಡುಹಿಡಿದರು.

೧೭೮೧-ಜೇಮ್ಸ ವ್ಯಾಟ್ ರಿಂದ ಸುಧಾರಿತ ಉಗಿಯಂತ್ರ ನಿರ್ಮಾಣವಾಯಿತು. ಅದಕ್ಕೊಂದು ಪ್ರತ್ಯಕವಾದ ಶೀತಲ-ಪೆಟ್ಟಿಗೆಯನ್ನು ಅಳವಡಿಸಿದರು. ಇದರಿಂದ ಉಗಿಯಂತ್ರದ ಕೆಲಸಮಾಡುವ ಸಾಮರ್ಥ್ಯ ಗಣನೀಯವಾಗಿ ಹೆಚ್ಚಳವಾಯಿತು.

೧೭೮೪ರಲ್ಲಿ ಕೆವೆಂಡಿಸನು ಜಲಜನಕ ಅನಿಲವು ಗಾಳಿಯಲ್ಲಿ ಉರಿದು ನೀರು ಊಂಟಾಗುವುದನ್ನು ತೋರಿಸಿದರು.ಇದರಿಂದ ನೀರು ಒಂದು ಸಂಯುಕ್ತ ವಸ್ತು ಎಂದು ವಿವರಿಸಿದರು.

೧೭೭೫-೧೭೮೩-ಅಮೇರಿಕಾ ಸ್ವಾತಂತ್ರ್ಯ ಯುದ್ಧ .

೧೭೮೯- ಫ್ರೆಂಚ ಮಹಾ ಕ್ರಾಂತಿ.

೧೮೦೦-ಬೋಲ್ಟ ಮತ್ತು ವ್ಯಾಟ್ಸ ಕಂಪನಿಯು ಪ್ರಥಮಬಾರಿಗೆ ೪೯೬ ಉಗಿಯಂತ್ರಗಳನ್ನು ನಿರ್ಮಿಸಿತು. ಮೆಂಚೆಸ್ಟರ್‌ನಲ್ಲಿ ಉಗಿಯಂತ್ರ ಬಳಸಿ, ೫೦ಕ್ಕು ಅಧಿಕ ಬಟ್ಟೆ ತಯ್ಯಾರಿಸುವ ಕಾರ್ಖಾನೆಗಳ ಸ್ಥಾಪನೆಯಾಯಿತು. ಇಂಗ್ಲಂಡನಲ್ಲಿ ಔದ್ಯೋಗಿಕ ಕ್ರಾಂತಿ ಪ್ರಾರಂಭವಾಯಿತು.

೧೮೧೨-೧೮೨೪-ಉಗಿಯಂತ್ರ ಬಳಸಿ ಉಗಿಬಂಡಿ ನಿರ್ಮಾಣ ಮತ್ತು ಸರಕು ಸಾಗಾಣೆ ಆರಂಭವಾಯಿತು.

೧೮೨೩-ಇಂಗ್ಲೆಂಡನಲ್ಲಿ ಸಮುದ್ರದ ಉಪಿನಿಂದ ಸೊಡಾ ತಯ್ಯಾರಿಸುವ ಕಾರ್ಖಾನೆ ಸ್ಥಾಪನೆಯಾಯಿತು.

೧೮೩೭-ಆಮೆರಿಕಾ ದೇಶದಲ್ಲಿ ತಂತಿಯಿಂದ ಸುದ್ದಿ ತಲುಪಿಸುವ ತಂತ್ರದ ಅವಿಸ್ಕಾರ. ಅತೀ ವೇಗವಾಗಿ ಸುದ್ದಿ ಕಳುಹಿಸುವ ಟೆಲೆಗ್ರಾಫ್ ಸಾಧನೆಯ ಉಗಮವಾಯಿತು.

೧೮೪೦- ಲಂಡನ್ ನಗರದಲ್ಲಿ ರಸಗೊಬ್ಬರ ತಯ್ಯಾರಿಸುವ ಕಾರ್ಖಾನೆ ಆರಂಭವಾಯಿತು.