ಸಾಗರ್ (ಚಲನಚಿತ್ರ)
ಗೋಚರ
ಸಾಗರ್ | |
---|---|
ನಿರ್ದೇಶನ | ಎಂ. ಡಿ. ಶ್ರೀಧರ್ |
ನಿರ್ಮಾಪಕ | ರಾಮು |
ಲೇಖಕ | ಬಿ. ಎ. ಮಧು (ಸಂಭಾಷಣೆ) |
ಚಿತ್ರಕಥೆ | ಎಂ. ಡಿ. ಶ್ರೀಧರ್ |
ಕಥೆ | ಕೆ. ಎಸ್. ಕುಮಾರ್ |
ಪಾತ್ರವರ್ಗ | ಪ್ರಜ್ವಲ್ ದೇವರಾಜ್, ಹರಿಪ್ರಿಯಾ, ರಾಧಿಕಾ ಪಂಡಿತ್ , ಸಂಜನಾ |
ಸಂಗೀತ | ಗುರುಕಿರಣ್ |
ಛಾಯಾಗ್ರಹಣ | ಎ. ವಿ. ಕೃಷ್ಣ ಕುಮಾರ್ |
ಸಂಕಲನ | ಪಿ. ಆರ್. ಸೌಂದರ್ ರಾಜ್ |
ಸ್ಟುಡಿಯೋ | ರಾಮು ಎಂಟರ್‌ಪ್ರೈಸಸ್ |
ವಿತರಕರು | ರಾಮು ಫಿಲಮ್ಸ್ |
ಬಿಡುಗಡೆಯಾಗಿದ್ದು | 10 ಆಗಸ್ಟ್ 2012 |
ಅವಧಿ | 2 ಗಂಟೆ 38 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಸಾಗರ್ ಪ್ರಜ್ವಲ್ ದೇವರಾಜ್, ರಾಧಿಕಾ ಪಂಡಿತ್, ಸಂಜನಾ ಮತ್ತು ಹರಿಪ್ರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 2012 ರ ಕನ್ನಡ ರೋಮ್ಯಾಂಟಿಕ್ ಕಥಾ ಚಿತ್ರ. ಎಂಡಿ ಶ್ರೀಧರ್ ಅವರ ಕಥೆ, ಚಿತ್ರಕಥೆ ಮತ್ತು ನಿರ್ದೇಶನವಿದೆ. ಗುರುಕಿರಣ್ ಚಿತ್ರದ ಸಂಗೀತ ನಿರ್ದೇಶಕರು. ರಾಮು ನಿರ್ಮಾಣದ ಈ ಚಿತ್ರಕ್ಕೆ ಕೃಷ್ಣ ಕುಮಾರ್ ಅವರ ಛಾಯಾಗ್ರಹಣವಿದೆ. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. ಈ ಚಲನಚಿತ್ರವನ್ನು ನಂತರ Ek Aur Mr. Sherdil ಎಂದು ಹಿಂದಿಗೆ ಡಬ್ ಮಾಡಲಾಯಿತು. [೧]
ಕಥಾವಸ್ತು
[ಬದಲಾಯಿಸಿ]ಶ್ರೀಮಂತ ಕೈಗಾರಿಕೋದ್ಯಮಿ ರಾಜಶೇಖರ ಮೂರ್ತಿ ಕುಟುಂಬದಿಂದ ಬಂದಿರುವ ಸಾಗರ್ (ಪ್ರಜ್ವಲ್ ದೇವರಾಜ್) ನ ಮದುವೆ ಪ್ರಿಯಾಂಕಾ (ಹರಿಪ್ರಿಯಾ) ಜೊತೆ ನಿಶ್ಚಯವಾದಾಗ ತಾನು ಕಾಜಲ್ ಅನ್ನು ಪ್ರೀತಿಸುತ್ತಿದ್ದೇನೆ ಎಂದು ಸುಳ್ಳು ಹೇಳಬೇಕಾಗಿ ಬರುತ್ತದೆ. ಮುಂದೆ ಏನಾಗುತ್ತದೆ ಎಂಬುದು ಚಿತ್ರದ ಉಳಿದ ಭಾಗವಾಗಿದೆ.
ಪಾತ್ರವರ್ಗ
[ಬದಲಾಯಿಸಿ]- ಸಾಗರ್ ಪಾತ್ರದಲ್ಲಿ ಪ್ರಜ್ವಲ್ ದೇವರಾಜ್
- ಕಾಜಲ್ ಆಗಿ ರಾಧಿಕಾ ಪಂಡಿತ್
- ಸಂಜನಾ ಗಲ್ರಾನಿ
- ಪ್ರಿಯಾಂಕಾ ಪಾತ್ರದಲ್ಲಿ ಹರಿಪ್ರಿಯಾ
- ಸೋನು ಪಾತ್ರದಲ್ಲಿ ದೇವ್ ಗಿಲ್
- ವಿನಯ ಪ್ರಸಾದ್
- ಅವಿನಾಶ್
- ಶರತ್ ಲೋಹಿತಾಶ್ವ
- ಸಂಗೀತಾ
- ಗಣೇಶ್ ರಾವ್ ಕೇಸರ್ಕರ್
- ಸುರೇಶ್ ಅಂಚನ್
- ಆದಿ ಲೋಕೇಶ್
- ಕಡ್ಡಿಪುಡಿ ಚಂದ್ರು
ಧ್ವನಿಮುದ್ರಿಕೆ
[ಬದಲಾಯಿಸಿ]ಕವಿರಾಜ್ ಅವರ ಸಾಹಿತ್ಯಕ್ಕೆ ಗುರುಕಿರಣ್ ಅವರು ಹಾಡುಗಳನ್ನು ರಚಿಸಿದ್ದಾರೆ. ಆನಂದ್ ಆಡಿಯೋ ಮೂಲಕ ಆಡಿಯೋ ವಿತರಿಸಲಾಗಿದೆ. [೨]
ಕ್ರಮಸಂಖ್ಯೆ # | ಹಾಡು | ಹಾಡುಗಾರರು | ಅವಧಿ |
---|---|---|---|
1 | "ಮೊದಲೇ ಏಕೆ ಸಿಗಲಿಲ್ಲ" | ಸೋನು ನಿಗಮ್ | 05:21 |
2 | "ಕೋಳಿ ಕೋಡಗನ್ನ ನುಂಗಿತ್ತ" | Naveen, ಚೈತ್ರಾ ಎಚ್.ಜಿ. | 04:50 |
3 | "ಒಂದು ಅರ್ಲಿ ಮಾರ್ನಿಂಗ್" | ಶಮಿತಾ ಮಲ್ನಾಡ್, ರಾಜೇಶ್ ಕೃಷ್ಣನ್ | 03:36 |
4 | "ಬೈಕು ಹತ್ತಿದರೆ" | ಗುರುಕಿರಣ್, ಶಮಿತಾ ಮಲ್ನಾಡ್, ಅನುರಾಧಾ ಭಟ್ | 04:01 |
5 | "ವೀಕೆಂಡು" | ರಾಜೇಶ್ ಕೃಷ್ಣನ್, ಶಮಿತಾ ಮಲ್ನಾಡ್ | 03:34 |
6 | "ಕೈ ಹಾಕಿ" | ಅನುರಾಧಾ ಭಟ್ , ಹೇಮಂತ್ ಕುಮಾರ್ | 04:17 |
ಉಲ್ಲೇಖಗಳು
[ಬದಲಾಯಿಸಿ]