ವಿಷಯಕ್ಕೆ ಹೋಗು

ಸಪ್ತಮಾತೃಕೆಯರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಪ್ತಮಾತೃಕೆಯರ ಪಕ್ಕದಲ್ಲಿ ಶಿವ ಮತ್ತು ಗಣೇಶ

ಸಪ್ತಮಾತೃಕೆಯರು[] ಮಾತೃ ದೇವಿಯರ ಒಂದು ಗುಂಪು. ಹಿಂದೂ ಧರ್ಮದಲ್ಲಿ ಇವರನ್ನು ಯಾವಾಗಲೂ ಒಟ್ಟಾಗಿ ಚಿತ್ರಿಸಲಾಗುತ್ತದೆ. ಸಪ್ತಮಾತೃಕೆಯರು ಆದಿ ಪರಾಶಕ್ತಿಯ ಭಿನ್ನ ರೂಪಗಳಾಗಿದ್ದಾರೆ. ಸಪ್ತಮಾತೃಕೆಯರು ವಿಭಿನ್ನ ದೇವರುಗಳ ಮೂರ್ತಿಮತ್ತಾಗಿರುವ ಶಕ್ತಿಗಳು. ಬ್ರಹ್ಮಾಣಿಯು ಬ್ರಹ್ಮನಿಂದ ಹೊರಹೊಮ್ಮಿದಳು, ವೈಷ್ಣವಿ ವಿಷ್ಣುವಿನಿಂದ, ಮಹೇಶ್ವರಿ ಶಿವನಿಂದ, ಇಂದ್ರಾಣಿ ಇಂದ್ರನಿಂದ, ಕೌಮಾರಿ ಸ್ಕಂದನಿಂದ, ವರಾಹಿ ವರಾಹನಿಂದ ಮತ್ತು ಚಾಮುಂಡ ದೇವಿಯಿಂದ,[] ಮತ್ತು ನಾರಸಿಂಹಿ ಹಾಗೂ ವಿನಾಯಕಿ ಹೆಚ್ಚುವರಿ ದೇವಿಯರು.

ಸಪ್ತಮಾತೃಕೆಯರು ಹಿಂದೂ ಧರ್ಮದ ದೇವತೆಗಳತ್ತ ಒಲವಿರುವ ತಂತ್ರವಾದದಲ್ಲಿ ಸರ್ವೋತ್ಕೃಷ್ಟ ಮಹತ್ವವನ್ನು ಪಡೆಯುತ್ತಾರೆ. ಶಾಕ್ತ ಪಂಥದಲ್ಲಿ, ಇವರು ಮಹಾನ್ ಶಾಕ್ತ ದೇವಿಗೆ ಅಸುರರೊಂದಿಗಿನ ಅವಳ ಹೋರಾಟದಲ್ಲಿ ನೆರವಾಗುತ್ತಾರೆ ಎಂದು ವರ್ಣಿಸಲಾಗಿದೆ. ಕೆಲವು ವಿದ್ವಾಂಸರು ಇವರನ್ನು ಶೈವ ದೇವತೆಗಳೆಂದು ಪರಿಗಣಿಸುತ್ತಾರೆ.

ಟಿಪ್ಪಣಿಗಳು

[ಬದಲಾಯಿಸಿ]
  1. Monier, Williams (1872). Sanskrit-English Dictionary. Clarendon. p. 765.
  2. Leeming, David; Fee, Christopher (2016). The Goddess: Myths of the Great Mother. Reaktion Books.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]