ವಿಷಯಕ್ಕೆ ಹೋಗು

ಬ್ರಹ್ಮಾಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬ್ರಹ್ಮಾಣಿ ಅಥವಾ ಬ್ರಾಹ್ಮಿ ಸಪ್ತಮಾತೃಕೆಯರಲ್ಲಿ ಒಬ್ಬಳು.[೧][೨] ಇವಳು ಪಾರ್ವತಿಯ ಒಂದು ರೂಪ ಮತ್ತು ಹಿಂದೂ ಧರ್ಮದಲ್ಲಿ ಇವಳು ಸೃಷ್ಟಿದೇವತೆಯಾದ ಬ್ರಹ್ಮನ ಶಕ್ತಿ ಎಂದು ಪರಿಗಣಿಸಲಾಗಿದೆ.

ಇವಳು ಆದಿ ಶಕ್ತಿಯ ಅಂಶವಾಗಿದ್ದಾಳೆ, ಮತ್ತು "ರಜೋಗುಣ"ವನ್ನು ಹೊಂದಿದ್ದಾಳೆ, ಮತ್ತು ಹಾಗಾಗಿ ಬ್ರಹ್ಮನ ಶಕ್ತಿಯ ಮೂಲವಾಗಿದ್ದಾಳೆ. ಇವಳನ್ನು "ಕುಲದೇವಿ ಮಾತೆ" ಎಂದೂ ಪೂಜಿಸಲಾಗುತ್ತದೆ.

ಮೂರ್ತಿಶಿಲ್ಪ

[ಬದಲಾಯಿಸಿ]

ಇವಳನ್ನು ಹಳದಿ ಬಣ್ಣದಲ್ಲಿ ನಾಲ್ಕು ತಲೆಗಳನ್ನು ಹೊಂದಿರುವಂತೆ ಚಿತ್ರಿಸಲಾಗುತ್ತದೆ. ಇವಳನ್ನು ನಾಲ್ಕು ಅಥವಾ ಆರು ತೋಳುಗಳಿರುವಂತೆ ಚಿತ್ರಿಸಬಹುದು. ಬ್ರಹ್ಮನಂತೆ, ಇವಳು ಜಪಮಾಲೆ ಅಥವಾ ಪಾಶ ಹಾಗೂ ಕಮಂಡಲು ಅಥವಾ ಕಮಲದ ಕಾಂಡ ಅಥವಾ, ಗಂಟೆಗಳು, ವೇದಗಳು ಹಾಗೂ ತ್ರಿಶೂಲವನ್ನು ಹಿಡಿದಿರುತ್ತಾಳೆ ಮತ್ತು ಹಂಸದ ಮೇಲೆ ಆಸೀನಳಾಗಿರುತ್ತಾಳೆ. ಇದು ಅವಳ ವಾಹನ. ಇವಳನ್ನು ಕಮಲದ ಮೇಲೆ ಕುಳಿತಿರುವಂತೆಯೂ ತೋರಿಸಲಾಗುತ್ತದೆ ಮತ್ತು ಅವಳ ಧ್ವಜದ ಮೇಲೆ ಹಂಸವಿರುತ್ತದೆ. ಇವಳು ವಿವಿಧ ಆಭರಣಗಳನ್ನು ಧರಿಸಿದ್ದು, ಕರಂಡ ಮುಕುಟ ಎಂದು ಕರೆಯಲ್ಪಡುವ ತನ್ನ ಬುಟ್ಟಿ ಆಕಾರದ ಕಿರೀಟದಿಂದ ಭಿನ್ನವಾಗಿದ್ದಾಳೆ.

ಉಲ್ಲೇಖಗಳು

[ಬದಲಾಯಿಸಿ]
  1. Dictionary of Hindu Lore and Legend (ISBN 0-500-51088-1) by Anna Dallapiccola
  2. Hindu Goddesses: Vision of the Divine Feminine in the Hindu Religious Traditions (ISBN 81-208-0379-5) by David Kinsley