ವಿಷಯಕ್ಕೆ ಹೋಗು

ಸದಸ್ಯ:Nishmitha.u/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಾರ್ಲೆ ಕುಣಿತ

ತಾಲೆ೯ ಕುಣಿತವು ಹಾಲಕ್ಕಿ ಒಕ್ಕಲಿಗರ ಹೆಣ್ಣುಮಕ್ಕಳ ಒಂದು ಪ್ರದಶಿ೯ಸುವ ಕಲೆ. ಹೊನ್ನಾವರ, ಕುಮಟಾ, ಗೋಕಣ೯, ಅಂಕೋಲ ಹಾಗು ಕಾರವಾರಗಳಲ್ಲಿರುವ ಹಾಲಕ್ಕಿ ನುಡಿವಾಗ ಹೆಣ್ಣುಮಕ್ಕಳು ಮಳೆ ಬಾರದಿದ್ದಾಗ ಈ ಕುಣಿತವನ್ನು ಪ್ರದಶಿ೯ಸುತ್ತಾರೆ. ಜಡೆ ಹೆಣೆದು ಮತ್ತೆ ಕಟ್ಟಿದ ಚಕ್ರತುರುಬಿಗೆ ಬಣ್ಣದ ಹೂವು, ಕುಪ್ಪಸವಿಲ್ಲದ ಎದೆಗೆ ಇಳಿಬಿಟ್ಟ ಬಣ್ಣಬಣ್ಣದ ಹತ್ತಾರು ಮಣಿಸರಗಳ ಮಾಲೆ, ತೋಳುಗಳಿಗೆ ನಾಲ್ಕಾರು ತೋಳುಬಂದಿಗಳ ಜೋಡಣೆ, ಕೈ ಕಾಲುಗಳ್ಳಿಗೆ ಬಿಳ್ಳಿಯ ಕಡಗ, ಕಿವಿಗೆ ಕಡಕು, ಮೂಗಿಗೆ ಮೂಗುತಿ, ಹಣೆಗೆ ಕೆಂಪು ತಿಲಕ ಇವು ಹಾಲಕ್ಕಿ ಹೆಣ್ಣುಮಕ್ಕಳ ಸಾಂಪ್ರದಾಯಿಕ ಉಡುಗೆ ತೊಡುಗೆಗಳಾಗಿದೆ. ನಿತ್ಯದ ಉಡುಗೆಯದ ಒಣ್ಣದ ಸೀರೆಯ ನಿರಿಗೆಯನ್ನು ಹಿಂದಕ್ಕೆ ಬಿಟ್ಟು ವೃತಾಕಾರವಾಗಿ ಇವರು ಕುಣಿಯುವಾಗ ನವಿಲು ನೃತ್ಯ ಮಾಡುವಂತೆ ಕಣ್ಣಿಸುತ್ತದೆ. ಕೇರಿಯ ಹೆಂಗಸರೂ, ಹುಡುಗಿಯರೂ ಬೀಜ ಬಿತ್ತುವ ಸ್ಥಳಕ್ಕೆ ಹೋಗಿ ವೃತಾಕಾರವಾಗಿ ನಿಂತುಕೋಳ್ಳುತಾರೆ. ಒಬ್ಬರ ಕೈಯನ್ನೊಬ್ಬರು ಹಿಡಿದುಕೊಂಡು ಸಾಮಾನ್ಯವಾಗಿ ಸುತ್ತುತಾರೆ. ಹಾಡುಗಾತಿಯೊಬ್ಬಳು ಹಾಡಿನ ಮೊದಲ ಸೊಲ್ಲೊಂದನ್ನು ಹೇಳುತ್ತಾಳೆ. ಕೂಡಲೇ ಉಳದವರು ಮುಂದೆ ಹಾರಿ, ಬಗ್ಗಿ ಪುನಃ ಹಿಂದೆ ಹಾರಿ ನಿಂತು 'ತಾಲೆ೯' ಎಂದು ಒಟ್ಡಾಗಿ ಹೇಳುತ್ತಾರೆ.
[]

ಒಂದು ಹಾಡಿನ ಭಾಗ ನೋಡಿ.
ಒಬ್ಬಳು-ಉಳಿದವರು
ಚಂಡಪ್ಪರಾಯರು...ತಾಲೆ೯
ಚಂಡಾಡಕ್ಕೋದರು...ತಾಲೆ೯
ಚಂಡ್ಹೋಗಿ ಬಿದ್ದೇ...ತಾಲೆ೯
ಚಣ್ಣ ನೀರಿಗೆ ಭೈಲಲ್ಲಿ...ತಾಲೆ೯
ಚಂಡ ಕಾಣಮ್ಮ...ತಾಲೆ೯
ಚಂಡ ಕಾಣೇ ನಾರಿ...ತಾಲೆ೯

ಬಹಳ ಹಿಂದಿನ ಕಾಲದಲ್ಲಿ ಹೆಂಗಸರು ಅನೂಜಿ೯ತ ಸ್ಥಳವಾದ ಪರ್ವತಕ್ಕೆ ಹೋಗಿ ಬೆತ್ತಲಾಗಿ ನಿಂತು ತಾಲೆ೯ ಕುಣಿಯುತ್ತಿದ್ದರೆಂದು ತಿಳಿದುಬರುವುದಾದರೂ ಈಗ ಆ ಪದ್ಧತಿ ಕಣ್ಮರೆಯಾಗಿದೆ. ಈ ಕುಣಿತದ ಒಟ್ಟು ಸ್ವರೂಪವನ್ನು ಗಮನಿಸಿದರೆ ಅವರ ಹಿಂದೆ ಫಲಸಮೃದ್ಧಿಯ ಕಲ್ಪನೆಯಿರುವುದು ವೇದ್ಯವಾಗುತ್ತದೆ. ಈ ಕುಣಿತದ ಸಂದಭ೯ದ ಮತ್ತೊಂದು ವಿಶೇಷವೆಂದರೆ ಅಣುಕು ಮದುವೆ ಹಾಗೂ ಬಿದಿರ ಹಿಂಡು ನಡುವೆ ಎಂಬ ಎರಡು ಆಚರಣೆಗಳನ್ನು ಆಚರಿಸುತ್ತಾರೆ. ಅಣುಕು ಮದುವೆ ಭೂಮಿ ಆಕಾಶಗಳ ಮಿಲನದ ಹಾಗೂ ಆ ಮೂಲಕ ಭೂಮಿಗೆ ಮಳೆಯ ಸ್ಪಶ೯ದ ಸಂಕೇತವಾದರೆ, ಉತ್ತದೆ ಬಿತ್ತದೆ ದೈತ್ಯವಾಗಿ ಬೆಳೆಯುವ 'ಬಿದಿರು' ಸಮೃದ್ಧಿಯ ಸಂಕೇತವಾಗಿರಬಹುದು ಎಂದು ಅಭಿಪ್ರಾಯಪಡಲಾಗಿದೆ.

ತಾಲೆ೯ ಕುಣಿತದ ಕೆಲವೊಂದು ಸೊಲ್ಲುಗಳು ಇಂತಿವೆ.
ಚಣಮಾಲೆ ಹೊಯ್ಯಾಲೆ ಚಣಕೆರೆ ತುಂಬಲೆ
ಬಯ್ದೀಗೊಳೆಲ್ಲ ಹಯ್ನಾದೋ| ತಾಲೆ೯
ಚಾಂಜೀಯ ಬೇರೊ ತಳಮಳಗೊಂಡೇ
ದೇವತ್ತಗೋಳಾ ಮದವೀಯೋ|| ತಾಲೆ೯

ಇತರ ಹೆಸರುಗಳು

[ಬದಲಾಯಿಸಿ]
  • ದುಮ್ ಸಾಲ್ಯೋ
  • ದುಮ್ ಸಾಲೆ

ಅಣುಕು ಮದುವೆ

[ಬದಲಾಯಿಸಿ]

ಅಣುಕು ಮದುವೆಯ ಹಾಡು ಹೇಳುವುದಕ್ಕಿಂತ ಮೊದಲು ಹಾರೈಕೆಯ ನೃತ್ಯವನ್ನು ನಾಟ್ಯದ ಮೂಲಕ ಕಥೆಯನ್ನು ಪ್ರದಶಿ೯ಸುತ್ತಾರೆ. ಆದರೆ ಅಣುಕು ಮದುವೆಯ ಹಾಡು ಪ್ರಾರಂಭವಾದೊಡನೆ ಎರಡು ಗುಂಪು ಮಾಡಿ ನಿಂತುಕೊಳ್ಳುತ್ತಾರೆ. ಒಂದು ಹೆಣ್ಣಿನ ಪಕ್ಷವಾದರೆ ಇನ್ನೊಂದು ಗಂಡಿನ ಪಕ್ಷ. ತಂತಮ್ಮ ಪಕ್ಷದಲ್ಲಿ ಇಬ್ಬಿಬ್ಬರಾಗಿ ಕೆನ್ನೆಗೆ ಕೆನ್ನೆ ಹಚ್ಚುವಷ್ಟು ಹತ್ತಿರ ನಿಂತು ಹಾಡುತ್ತಾರೆ. ಹೆಣ್ಣು ಕೇಳುವುದು, ಗಂಡು ಕೇಳುವುದು, ವಣಿ೯ಸುವುದು ಇತ್ಯಾದಿಯನ್ನು ಮದುವೆ ಹಾಡಿನ ಧಾಟಿಯಲ್ಲಿ ಹಾಡುತ್ತ ಹಾಡಿನಲ್ಲಿಯೇ ಸಂಭಾಷಣೆ ಮಾಡುತ್ತಾರೆ. ಆ ಹಾಡುಗಳನ್ನು ವೇಗವಾಗಿ ಹೇಳುತ್ತ ನತಿ೯ಸುತ್ತಾರೆ. ಕೊನೆಗೆ ಗಂಡಿನ ಪಕ್ಷದವರು ತಾವು ಹೆಣ್ಣನ್ನು ಗೆದ್ದವೆಂದು ಹೇಳಿಕೊಳ್ಳುತ್ತ ಹೆಣ್ಣಿನ ಪಕ್ಷದಲ್ಲಿದ್ದ ಒಬ್ಬ ಹುಡುಗಿಯನ್ನು ತಮ್ಮತ್ತ ಎಳೆದುಕೊಂಡು ತಮ್ಮ ಪಕ್ಷದ ಹುಡುಗಿಯ ಕೈಯಲ್ಲಿಡುತ್ತಾರೆ. ಮದುವೆಯಾಯಿತು ಎಂದು ಮತ್ತೆ ಹಾಡುತ್ತಾರೆ.
ಅಂಕೋಲಾದ ಉತ್ತರಕ್ಕಿರುವ ಹಾರವಾಡೆಯೆಂಬ ಹಳ್ಳಿಯಲ್ಲಿ ನೃತ್ಯ ಮುಗಿದ ಮೇಲೆ ಇಬ್ಬರು ಗಂಡುಮಕ್ಕಳನ್ನೂ ವಧೂ-ವರರಂತೆ ಸಿಂಗರಿಸುತ್ತಾರೆ. ವರನ ಕೈಗೆ ಕಾಕ್ದೊಂಡೆ ಕಾಯನ್ನು ಕೊಡುತ್ತಾರೆ. ವಧುವಿಗೆ ಕಾಡಿಗೆ ಹಚ್ಚುತ್ತಾರೆ. ದಿಬ್ಬಣವನ್ನು ವಾದ್ಯದೊಂದಿಗೆ ಕರೆದೊಯ್ದು ಊರಗೌಡನ ಮನೆಗೆ ಅಲ್ಲಿಂದ ಬುಧ್ವಂತರ ಮನೆಗೆ ಹೋಗಿ ನತಿ೯ಸುತ್ತಾರೆ. ಮುಂದೆ ತಮ್ಮ ಮನೆಯ ಬಾವಿಯ ಬುಡಕ್ಕೆ ಬಂದು ಅಲ್ಲಿಯ ಕಲ್ಲನ್ನು ಪೂಜಿಸುತ್ತಾರೆ. ಬಂದವರಿಗೆ ಕಾಯಿಸುಳಿ ಬೆಲ್ಲ ಅಥವಾ ಬೆಲ್ಲದ ಅವಲಕ್ಕಿ ಕೊಡುತ್ತಾರೆ. ಬಲೀಂದ್ರನನ್ನು ಕಳುಹಿಸುವ ದಿನವೂ ಇದೇ ರೀತಿ ನೃತ್ಯವನ್ನು ಆಚರಿಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. ಕನಾ೯ಟಕ ಜನಪದ ಕಲೆಗಳ ಕೋಶ, ಸಂ. ಡಾ.ಹಿ ಚಿ ಬೋರಲಿಂಗಯ್ಯ, ಕನ್ನಡ ವಿಶ್ವವಿದ್ಯಾಲಯ,ಹಂಪಿ,೨೦೧೫, ಮಯೂರ್ ಪ್ರಿಂಟ್,ಬೆಂಗಳೂರು, ಪು.ಟ ೨೨೩