ಸದಸ್ಯ:Maaheshwari P/ನನ್ನ ಪ್ರಯೋಗಪುಟ
ಕಾಂತಮಂಗಲ ಸುಳ್ಯ ಸಮೀಪವರ್ತಿ ಅಜ್ಜಾವರ ಗ್ರಾಮದಲ್ಲಿರುವ ಸ್ಥಳವೇ ಕಾಂತಮಂಗಲವಾಗಿದೆ[೧]. ಇದು ಪಯಸ್ವಿನಿ ನದಿ ದಡದಲ್ಲಿದೆ. ಇದರ ಆಚೆ ದಡದಲ್ಲಿ ಇನ್ನೊಂದು 'ಬೀರಮಂಗಲ' ಎಂಬ ಸ್ಥಳವಿದೆ. ಈ ಎರಡು ಸ್ಥಳನಾಮಗಳು ಒಂದರಿಂದ ಇನ್ನೊಂದು ನಿಷ್ಪನ್ನವಾಗಿದೆ. ಮುಖ್ಯವಾಗಿ ಚಾರಿತ್ರಿಕ ಅವಳಿ ಸೋದರರಿಂದ ನಿಷ್ಪನ್ನವಾಗಿದೆ. ಕಾಂತ ಮತ್ತು ಬೀರ ಎನ್ನುವ ಅವಳಿ ವೀರರು ಈ ಸ್ಥಳಗಳಲ್ಲಿ ನೆಲೆಯಾಗಿದ್ದ ಕಾರಣಕ್ಕಾಗಿ ಈ ಸ್ಥಳನಾಮಗಳು ಗುರುತಿಸಿಕೊಂಡಿವೆ. 'ಮಂಗಲ' ಎನ್ನುವ ಪದವು ಈ ವೀರರು ನಡೆದಾಡಿದ ಶುಭ ಲಕ್ಷಣದ ನೆಲೆ ಎನ್ನುವ ಅರ್ಥದಲ್ಲಿ ಸೇರ್ಪಡೆಯಾಗಿದೆ.
ಇತಿಹಾಸ
[ಬದಲಾಯಿಸಿ]ಅಲ್ಲದೆ ಕಾಂತಮಂಗಲ ಬೀರಮಂಗಲಗಳಲ್ಲಿನ ಪದಗಳ ಉತ್ತರ ಪದ 'ಮಂಗಳ' ಎನ್ನುವ ಪದಕ್ಕೆ ಬೇರೆ ಅರ್ಥಗಳನ್ನು ನೀಡಬಹುದು. 'ಮಂಗಲ' ಎಂದರೆ ದುರ್ಗ ರಕ್ಷಣೆಗಾಗಿ ಇರುವ ಸೈನ್ಯಕ್ಕೆ ಬೇಕಾದ ಸೌಕರ್ಯಗಳುಳ್ಳ ಸ್ಥಳವೆಂಬ ಅರ್ಥವನ್ನು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇದನ್ನು ದಂಡಿನವರು ಇರುವ ಕೋಟೆ-ಸ್ಥಳವೆಂದು ಅರ್ಥೈಸಬಹುದು[೨]. ಕಾಂತಮಂಗಲದಲ್ಲಿ ಕೋಟೆಯೊಂದಿದ್ದು ಬಹುಶಃ ಈ ಕೋಟೆ ಸೋದರ ಕಾಂತ ಮತ್ತು ಬೀರ ಎನ್ನುವ ವೀರರಿಂದ ರಕ್ಷಿಸಲ್ಪಟ್ಟ ಕಾರಣಕ್ಕಾಗಿ ಈ ಸ್ಥಳನಾಮಗಳು ಬಂದಿವೆ. ಅಲ್ಲದೆ ಇಲ್ಲೇ ಸುಬ್ರಹ್ಮಣ್ಯ ದೇವಸ್ಥಾನವು ಪಾಳು ಬಿದ್ದ ಸ್ಥಿತಿಯಲ್ಲಿತ್ತು. ಪುರಾಣ ಮೂಲ ಸುಬ್ರಹ್ಮಣ್ಯ ದೇವಸೇನಾನಿ, ಈ ಹಿನ್ನೆಲೆಯಲ್ಲಿ ಕೋಟೆಗಳಲ್ಲಿ ಅವನಿಗೆ ವಿಶೇಷ ಸ್ಥಾನ. ಕಾಂತಮಂಗಲ ಸ್ಥಳನಾಮದೊಂದಿಗೆ ಈ ಕುಮಾರ ಸಾನಿಧ್ಯ ಸಂಬಂಧ ಹೊಂದಿರುವುದು. ಚಾರಿತ್ರಿಕ ದೃಷ್ಟಿಯಿಂದ ಮಹತ್ವಪೂರ್ಣವಾಗಿದೆ. ಇಂದುಚೆನ್ನಕೇಶವ ದೇವಾಲಯದ ವಾಯುವ್ಯ ಭಾಗದಲ್ಲಿರುವ ಮುಖ್ಯ ಪ್ರಾಣ(ಹನುಮ) ಇದೇ ಕೋಟೆಯಯಲ್ಲಿ ಅನಾಥ ಸ್ಥಿತಿಯಲ್ಲಿತ್ತು. ಕೋಟೆಗೂ ಹನುಮನಿಗೂ ಸಂಬಂಧವಿದೆ. ಒಂದು ಕಲ್ಲಿನಲ್ಲಿ ಒರಟಾಗಿ ಕೆತ್ತಲಾಗಿದ್ದ ಹನುಮ, ಈ ಕಾಂತಮಂಗಲದ ಕೋಟೆಯಿಂದ ಬಂದು ಈಗ ಸುಳ್ಯ ಚೆನ್ನಕೇಶವ ದೇವಾಲಯದಲ್ಲಿ ವಾಸ್ತು ಸ್ವರೂಪದ ಕಂಚಿನ ಪ್ರತಿಮೆಯಾಗಿ ನೆಲೆಯಾಗಿದ್ದಾನೆ. ಅಲ್ಲದೆ ನೀರಿನಿಂದ ಕೂಡಿದ ಪರಿಸರವನ್ನು 'ಮಂಗಳ'ವೆಂದು ಕರೆಯಲಾಗುತ್ತಿತ್ತು. ಈ ದೃಷ್ಟಿಯಿಂದಲೂ ಕಾಂತಮಂಗಲ ಮುಖ್ಯವಾಗಿದೆ.
ಭಾಷೆಗಳು
[ಬದಲಾಯಿಸಿ]ಕೃಷಿ
[ಬದಲಾಯಿಸಿ]ಸಂಸ್ಥೆಗಳು
[ಬದಲಾಯಿಸಿ]ಸರಕಾರಿ ಪ್ರಾಥಮಿಕ ಶಾಲೆ[೩]
ಇತರ ಕೊಂಡಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ http://www.onefivenine.com/india/villages/Dakshin-Kannad/Sulya/Kanthamangala
- ↑ ಪೂವಪ್ಪ ಗೌಡ ಕಣಿಯೂರು (೨೦೧೬). ಸ್ಥಳ ನಾಮಗಳು ಮತ್ತು ಐತಿಹ್ಯಗಳು. ಸುಳ್ಯ: ಕನ್ನಡ ಸಂಘ ನೆಹರು ಮೇಮೋರಿಯಲ್ ಕಾಲೇಜು ಸುಳ್ಯ. pp. ೮-೯.
- ↑ https://schools.org.in/dakshina-kannada/29240500403/dkzp-govt.-higher-primary-school-kanthamangala.html