ಏಕತೆಯ ಪ್ರತಿಮೆ
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/India Gujarat" does not exist. | |
ಕಕ್ಷೆಗಳು | 21°50′17″N 73°43′09″E / 21.8380°N 73.7191°E |
---|---|
ಸ್ಥಳ | ಕೆವಾಡಿಯ ಕಾಲನಿ, ನರ್ಮದಾ ಜಿಲ್ಲೆ, ಗುಜರಾತ್, India |
ಶಿಲ್ಪಿ | ರಾಮ್ ವಿ. ಸುತಾರ್ |
ವಿಧ | ಪ್ರತಿಮೆ |
ಬಳಸಿದ ವಸ್ತು | ಉಕ್ಕು, ಬಲವರ್ಧಿತ ಕಾಂಕ್ರೀಟ್, ಕಂಚಿನ ಲೇಪ |
ಎತ್ತರ |
|
ಸ್ಥಾಪನಾ ದಿನಾಂಕ | 31 ಅಕ್ಟೋಬರ್ 2013 |
ಮುಕ್ತಾಯ ದಿನಾಂಕ | ಅಕ್ಟೋಬರ್ 2018 |
ಉದ್ಘಾಟನಾ ದಿನಾಂಕ | 31 ಅಕ್ಟೋಬರ್ 2018 |
ಸಮರ್ಪಿಸಿದ್ದು | ವಲ್ಲಭಭಾಯ್ ಪಟೇಲ್ |
ಕೊಂಡಿ | statueofunity |
ಏಕತೆ ಪ್ರತಿಮೆ ಎಂಬುದು ಭಾರತದ ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಜಕಾರಣಿ ವಲ್ಲಭಭಾಯ್ ಪಟೇಲ್ (೧೮೭೫-೧೯೫೦) ಅವರ ಪ್ರತಿಮೆಯಾಗಿದೆ. ಪ್ರಸ್ತುತ ಇದು ೧೮೨ ಮೀಟರ್ (೫೯೭ ಫ಼ೀಟ್) ನಷ್ಟು ಎತ್ತರವಿದ್ದು ವಿಶ್ವದ ಅತಿ ಎತ್ತರದ ಪ್ರತಿಮೆಯ ದಾಖಲೆಯನ್ನು ಹೊಂದಿದೆ. ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ವಲ್ಲಭಭಾಯಿ ಪಟೇಲ್ ಪ್ರಮುಖ ನಾಯಕರಾಗಿದ್ದರು ಮತ್ತು ಭಾರತದ ಮೊದಲ ಉಪಪ್ರಧಾನ ಮಂತ್ರಿಯಾಗಿದ್ದರು. ಗುಜರಾತಿನ ವಡೋದರಾ ನಗರದ ೧೦೦ ಕಿಲೋಮೀಟರ್ ಆಗ್ನೇಯ ಭಾಗದಲ್ಲಿರುವ ರಾಜ್ಪಿಪ್ಲಾ ಬಳಿಯ ನರ್ಮದಾ ಅಣೆಕಟ್ಟು (ಸರ್ದಾರ್ ಸರೋವರ ಅಣೆಕಟ್ಟು ಎಂದೂ ಕರೆಯಲ್ಪಡುವ) ವಿಗೆ ಎದುರಾಗಿ ಈ ಪ್ರತಿಮೆಯಿದೆ.[೧]
ಈ ಸ್ಮಾರಕ ಮತ್ತು ಅದರ ಸುತ್ತಮುತ್ತಲು ೨ ಹೆಕ್ಟೇರುಗಳಿಗಿಂತ ಹೆಚ್ಚು (೪.೯ ಎಕರೆ) ಪ್ರದೇಶವನ್ನು ಹೊಂದಿದೆ ಮತ್ತು ೧೨ ಕಿ.ಮೀ. (೪.೬ ಚದರ ಮೈಲಿ; ೩೦೦೦ ಎಕರೆಗಳು) ಕೃತಕ ಸರೋವರದ ಮೂಲಕ ಸುತ್ತುವರಿದಿದೆ. ಅಕ್ಟೋಬರ್ ೨೦೧೪ ರಲ್ಲಿ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆಗಾಗಿ ₹೨೯.೮೯ ಬಿಲಿಯನ್ (US $೪೨೦ ಮಿಲಿಯನ್) ಗುತ್ತಿಗೆಯನ್ನು ಪಡೆದ ಲಾರ್ಸನ್ & ಟರ್ಬೊ (L & T) ಇದನ್ನು ನಿರ್ಮಿಸಿದೆ. ಈ ನಿರ್ಮಾಣವನ್ನು ೨೦೧೪ರ ಅಕ್ಟೋಬರ್ 31 ರಂದು ಪ್ರಾರಂಭಿಸಲಾಯಿತು ಮತ್ತು ೨೦೧೮ರ ಅಕ್ಟೋಬರ್ ಮಧ್ಯದಲ್ಲಿ ಪೂರ್ಣಗೊಳಿಸಲಾಯಿತು. ಭಾರತದ ಶಿಲ್ಪಿ ರಾಮ್ ವಿ. ಸುತಾರ ಅವರು ವಿನ್ಯಾಸಗೊಳಿಸಿದರು ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ೩೧ ಅಕ್ಟೋಬರ್ ೨೦೧೮ ರಂದು ಪಟೇಲ್ರವರ ೧೪೩ನೇ ಜನ್ಮವಾರ್ಷಿಕೋತ್ಸವದಂದು ಲೋಕಾರ್ಪಣೆ ಮಾಡಿದರು.[೨]
ಪ್ರಭಾವ
[ಬದಲಾಯಿಸಿ]ಈ ಯೋಜನೆಯನ್ನು ಮೊದಲು ೨೦೧೦ ರ ಅಕ್ಟೋಬರ್ ೭ ರಂದು ಘೋಷಿಸಲಾಯಿತು. ಪ್ರತಿಮೆಯ ನಿರ್ಮಾಣಕ್ಕಾಗಿ ಗುಜರಾತ್ ಸರ್ಕಾರ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಏಕ್ತಾ ಟ್ರಸ್ಟ್ (ಎಸ್.ವಿ.ಪಿ.ಆರ್.ಇ.ಟಿ) ಅನ್ನು ಸ್ಥಾಪಿಸಿತು. ಈ ಪ್ರತಿಮೆಯ ನಿರ್ಮಾಣಕ್ಕಾಗಿ ಬೆಂಬಲ ನೀಡಲು ಏಕತಾ ಪ್ರತಿಮೆಗಾಗಿ ಚಳುವಳಿಯನ್ನು ಪ್ರಾರಂಭಿಸಲಾಯಿತು. ಈ ಪ್ರತಿಮೆಗೆ ಬೇಕಾಗುವ ಕಬ್ಬಿಣವನ್ನು ಸಂಗ್ರಹಿಸುವಲ್ಲಿ ಭಾರತೀಯ ರೈತರನ್ನು ಅವರು ಕೃಷಿಗಾಗಿ ಬಳಸಲ್ಪಟ್ಟ ಉಪಕರಣಗಳನ್ನು ದಾನ ಮಾಡಲು ಕೇಳುವ ಮೂಲಕ ಸಂಗ್ರಹಕ್ಕೆ ನೆರವಾದರು. ಅಂತಿಮವಾಗಿ ೫,೦೦೦ ಟನ್ನುಗಳಷ್ಟು (೪,೯೦೦ ಟನ್ನುಗಳು; ೫,೫೦೦ ಕಿರು ಟನ್ನುಗಳು) ಕಬ್ಬಿಣವನ್ನು ಸಂಗ್ರಹಿಸಲಾಯಿತು. ಆರಂಭದಲ್ಲಿ ಪ್ರತಿಮೆಯ ಉದ್ದೇಶವನ್ನು ಹೊಂದಿದ್ದರೂ, ನಂತರ ಸಂಗ್ರಹಿಸಿದ ಕಬ್ಬಿಣವನ್ನು ಯೋಜನೆಯ ಇತರ ಭಾಗಗಳಿಗೆ ಬಳಸಲಾಗುವುದು ಎಂದು ನಿರ್ಧರಿಸಲಾಯಿತು.
ಏಕತಾ ಪ್ರತಿಮೆಯ ಚಳುವಳಿಯು ಸುರಾಜ್ (ಹಿಂದಿಯಲ್ಲಿ "ಉತ್ತಮ ಆಡಳಿತ") ಮನವಿ ಪತ್ರಕ್ಕೆ ಅಂದಾಜು ೨ ಕೋಟಿ ಜನರ ಸಹಿ ಹಾಕಿಸಿತು. ಭಾರತದಾದ್ಯಂತ ಹಲವಾರು ಸ್ಥಳಗಳಲ್ಲಿ ೧೫ ಡಿಸೆಂಬರ್ ೨೦೧೩ ರಂದು ರನ್ ಫಾರ್ ಯೂನಿಟಿ ಮ್ಯಾರಥಾನ್ ನಡೆಸಲಾಯಿತು.[೩]
ಯೋಜನೆ
[ಬದಲಾಯಿಸಿ]ಇದನ್ನು ನರ್ಮದಾ ಅಣೆಕಟ್ಟಿನ ಎದುರಾಗಿ ೩.೨ ಕಿ.ಮೀ. (೨.೦ ಮೈಲಿ) ಸಾಧು ಬೆಟ್ ಎಂಬ ದ್ವೀಪದಲ್ಲಿ ಕಟ್ಟಲಾಗಿದೆ. ಆ ಕಟ್ಟಡದ ಒಟ್ಟು ಎತ್ತರವು ಅದರ ಮೂಲದಿಂದ ೨೪೦ ಮೀ (೭೯೦ ಫ಼ೀಟ್), ಅಡಿಪಾಯಕ್ಕಾಗಿ ೫೮ ಮೀ. (೧೯೦ ಫ಼ೀಟ್) ಮತ್ತು ಪ್ರತಿಮೆ ೧೮೨ ಮೀ. (೫೯೭ ಫ಼ೀಟ್) ನಷ್ಟಿದೆ. ಇದನ್ನು ಸ್ಟೀಲ್ ಫ್ರೇಮಿಂಗ್, ಬಲವರ್ಧಿತ ಸಿಮೆಂಟ್ ಕಾಂಕ್ರೀಟ್ ಮತ್ತು ಕಂಚಿನ ಹೊದಿಕೆಯೊಂದಿಗೆ ನಿರ್ಮಿಸಲಾಗಿದೆ. ಪ್ರತಿಮೆಯ ನಿರ್ಮಾಣ ೭೫,೦೦೦ ಘನ ಮೀಟರ್ (೨,೬೦೦,೦೦೦ ಅಡಿ) ಕಾಂಕ್ರೀಟ್, ೫,೭೦೦ ಟನ್ (೫,೬೦೦ ಉದ್ದದ ಟನ್ನುಗಳು; ೬,೩೦೦ ಕಿರು ಟನ್ನುಗಳು) ಉಕ್ಕಿನ ರಚನೆ, ೧೮,೫೦೦ ಟನ್ನುಗಳು (೧೮,೨೦೦ ಉದ್ದ ಟನ್ನುಗಳು; ೨೦,೪೦೦ ಕಿರು ಟನ್ನುಗಳು) ಬಲವರ್ಧಿತ ಸ್ಟೀಲ್ ಸರಳುಗಳು ಮತ್ತು ೨೨,೫೦೦ ಟನ್ನುಗಳಷ್ಟು (೨೨,೧೦೦ ಉದ್ದದ ಟನ್; ೨೪,೮೦೦ ಕಿರು ಟನ್ನುಗಳು) ಕಂಚಿನ ಹಾಳೆಗಳು.[೪]
ಹಣಕಾಸು
[ಬದಲಾಯಿಸಿ]ಭಾರತ ಸರ್ಕಾರದ ಹೆಚ್ಚಿನ ಧನ ಸಂಗ್ರಹದಿಂದ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಿಂದಾಗಿ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ. ೨೦೧೨ ರಿಂದ ೨೦೧೬ ರವರೆಗೂ ಬಜೆಟ್ ನಲ್ಲಿ ಈ ಯೋಜನೆಗೆ ೩ ಬಿಲಿಯನ್ ಡಾಲರ್ (ಯುಎಸ್ $೪೨ ಮಿಲಿಯನ್) ಭಾರತ ಸರಕಾರವು ಮಂಜೂರಾತಿ ನೀಡಿತ್ತು. ೨೦೧೪-೧೫ರ ಯೂನಿಯನ್ ಬಜೆಟ್ನಲ್ಲಿ ಪ್ರತಿಮೆಯ ನಿರ್ಮಾಣಕ್ಕಾಗಿ ₹೨ ಬಿಲಿಯನ್ (ಯುಎಸ್ $೨೮ ಮಿಲಿಯನ್) ಅನ್ನು ಮೀಸಲಿಡಲಾಯಿತು.
ನಿರ್ಮಾಣ
[ಬದಲಾಯಿಸಿ]ಟರ್ನರ್ ಕನ್ಸ್ಟ್ರಕ್ಷನ್ (ಬುರ್ಜ್ ಖಲೀಫಾದ ಯೋಜನಾ ವ್ಯವಸ್ಥಾಪಕ), ಮೈಕೆಲ್ ಗ್ರೇವ್ಸ್ ಮತ್ತು ಅಸೋಸಿಯೇಟ್ಸ್ ಮತ್ತು ಮೈನ್ಹಾರ್ಡ್ಟ್ ಗ್ರೂಪ್ ಒಳಗೊಂಡ ಒಂದು ಒಕ್ಕೂಟವು ಈ ಯೋಜನೆಯ ಮೇಲ್ವಿಚಾರಣೆಯನ್ನು ನೋಡುತ್ತಿತ್ತು. ಇದು ಪೂರ್ಣಗೊಳ್ಳಲು ೫೬ ತಿಂಗಳುಗಳನ್ನು ತೆಗೆದುಕೊಂಡಿತು - ಯೋಜನೆಗಾಗಿ ೧೫ ತಿಂಗಳುಗಳು, ನಿರ್ಮಾಣಕ್ಕೆ ೪೦ ತಿಂಗಳುಗಳು ಮತ್ತು ಒಕ್ಕೂಟವು ಹಸ್ತಾಂತರಿಸಲು ಎರಡು ತಿಂಗಳುಗಳು. ಯೋಜನೆಯ ಒಟ್ಟು ವೆಚ್ಚವು ₹ ೨೦.೬೩ ಬಿಲಿಯನ್ (ಯುಎಸ್ $ ೨೯೦ ಮಿಲಿಯನ್) ಎಂದು ಸರ್ಕಾರದಿಂದ ಅಂದಾಜಿಸಲಾಗಿದೆ. ಮೊದಲ ಹಂತದ ಟೆಂಡರ್ ಬಿಡ್ಗಳನ್ನು ಅಕ್ಟೋಬರ್ ೨೦೧೩ ರಲ್ಲಿ ಆಹ್ವಾನಿಸಿ ನವೆಂಬರ್ ೨೦೧೩ ರಲ್ಲಿ ಕೊನೆಗೊಳಿಸಲಾಯಿತು.
ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ, ೩೧ ಅಕ್ಟೋಬರ್ ೨೦೧೩ ರಂದು ವಲ್ಲಭಬಾಯಿ ಪಟೇಲರ ೧೩೮ ನೇ ಜನ್ಮದಿನದ ವಾರ್ಷಿಕೋತ್ಸವದಂದು ಪ್ರತಿಷ್ಠಾನದ ಅಡಿಪಾಯ ಹಾಕಿದರು.
ಭಾರತೀಯ ಮೂಲಸೌಕರ್ಯ ಕಂಪೆನಿ ಲಾರ್ಸೆನ್ ಮತ್ತು ಟರ್ಬೋ ೨೭ ಅಕ್ಟೋಬರ್ ೨೦೧೪ರಂದು ₹೨೯.೮೯ ಶತಕೋಟಿ (ಯುಎಸ್ $೪೨೦ ದಶಲಕ್ಷ)ಗಳನ್ನು ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆಗಾಗಿ ಒಪ್ಪಂದವನ್ನು ಸ್ವೀಕರಿಸಿತ್ತು. ಅವರು ೩೧ ಅಕ್ಟೋಬರ್ ೨೦೧೪ ರಂದು ನಿರ್ಮಾಣ ಆರಂಭಿಸಿದರು. ಯೋಜನೆಯ ಪ್ರಥಮ ಹಂತದಲ್ಲಿ, ₹೧೩.೪೭ ಬಿಲಿಯನ್ ಮುಖ್ಯ ಪ್ರತಿಮೆ, ₹೨.೩೫ ಬಿಲಿಯನ್ ಪ್ರದರ್ಶನ ಸಭಾಂಗಣ ಮತ್ತು ಸಂಪರ್ಕ ಕೇಂದ್ರಕ್ಕಾಗಿ, ₹೮೩೦ ಮಿಲಿಯನ್ ಸ್ಮಾರಕವನ್ನು ಸಂಪರ್ಕಿಸುವ ಸೇತುವೆಗಾಗಿ ಮತ್ತು ಪೂರ್ಣಗೊಂಡ ನಂತರ ೧೫ ವರ್ಷಗಳ ಕಾಲ ನಿರ್ಮಾಣದ ನಿರ್ವಹಣೆಗಾಗಿ ₹೬.೫೭ ಶತಕೋಟಿ ಮೀಸಲಾಗಿಟ್ಟಿತು. ಡಿಜಿಟಲ್ ಮೀಡಿಯಾ ಔಟ್ರೀಚ್ ಪ್ರೋಗ್ರಾಂನ್ನು ಆಕ್ಸೆಂಚರ್ ಒದಗಿಸುತ್ತದೆ. ಸ್ಮಾರಕವನ್ನು ರಾಮ್ ವಿ. ಸುತಾರ ವಿನ್ಯಾಸಗೊಳಿಸಿದರು.[೫]
ಈ ಪ್ರತಿಮೆಯು ೩೩ ತಿಂಗಳುಗಳಲ್ಲಿ ಪೂರ್ಣಗೊಂಡಿತು. ಇದಕ್ಕೆ ೨೦೧೩ ರಲ್ಲಿ ಅಡಿಪಾಯ ಹಾಕಲಾಯಿತು; ೨೦೧೮ ರ ಮಧ್ಯದಲ್ಲಿ ನಿರ್ಮಾಣ ಪೂರ್ಣಗೊಂಡಿತು; ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ೩೧ ಅಕ್ಟೋಬರ್ ೨೦೧೮ ರಂದು ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಯಿತು.[೬] ಈ ಪ್ರತಿಮೆಯನ್ನು ಭಾರತೀಯ ಎಂಜಿನಿಯರಿಂಗ್ ಕೌಶಲ್ಯಗಳಿಗೆ ಗೌರವವಾಗಿ ಸಲ್ಲಿಕೆಯಾಗಿದೆ.
ಸಮಸ್ಯೆಗಳು
[ಬದಲಾಯಿಸಿ]ಪ್ರವಾಸೋದ್ಯಮದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಪ್ರತಿಮೆಯ ಸುತ್ತಲಿನ ಭೂ ಸ್ವಾಧೀನವನ್ನು ಮಾಡಿದ್ದಕ್ಕಾಗಿ ಸ್ಥಳೀಯ ಜನರು ವಿರೋಧಿಸಿದರು. ಸಾಧು ಬೆಟ್ ಅನ್ನು ಮೂಲತಃ ವರತಾ ಬಾವಾ ಟೆಕ್ರಿ ಎಂದು ಕರೆಯಲಾಗುತ್ತಿತ್ತು, ಸ್ಥಳೀಯ ದೇವತೆಯ ಹೆಸರನ್ನು ಇಡಲಾಗಿತ್ತು, ಮತ್ತು ಅದು ಧಾರ್ಮಿಕ ಪ್ರಾಮುಖ್ಯತೆಯ ತಾಣವಾಗಿತ್ತು ಎಂದು ಜನರು ಆರೋಪಿಸಿದ್ದಾರೆ.
ಪರಿಸರ ಸಚಿವಾಲಯದ ಅನುಮತಿಯಿಲ್ಲದೆ ಯೋಜನಾ ಕಾರ್ಯಗತಗೊಳಿಸುವಿಕೆಯನ್ನು ಪ್ರಾರಂಭಿಸಿದ್ದಾರೆ ಎಂದು ಕೆಲವು ಪರಿಸರ ಕಾರ್ಯಕರ್ತರು ಕೇಂದ್ರ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದಾರೆ. ಕೆವಡಿಯಾ, ಕೋಥಿ, ವಘೋಡಿಯಾ, ಲಿಂಬಿದಿ, ನವಗಾಂವ್ ಮತ್ತು ಗೊರಾಗ್ರಾಮಗಳ ಜನರು ಪ್ರತಿಮೆಯನ್ನು ನಿರ್ಮಾಣವನ್ನು ವಿರೋಧಿಸಿದರು ಮತ್ತು ಅಣೆಕಟ್ಟು ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ೩೭೫ ಹೆಕ್ಟೇರ್ (೯೨೭ ಎಕರೆ) ಭೂಮಿಯನ್ನು ಭೂಮಿ ಹಕ್ಕುಗಳ ವಿತರಣೆ ಮತ್ತು ಗರುಡೇಶ್ವರ್ ತಾಲೂಕು ರಚನೆಗೆ ಬೇಡಿಕೆಯನ್ನಿಟ್ಟರು. ಅವರು ಕೆವಾಡಿಯಾ ಏರಿಯಾ ಅಭಿವೃದ್ಧಿ ಪ್ರಾಧಿಕಾರ (ಕೆಡಾ) ಮತ್ತು ಗರುಡೇಶ್ವರ ವೀರ್-ಕಮ್-ಕಾಸ್ವೇ ಯೋಜನೆಯ ನಿರ್ಮಾಣವನ್ನೂ ವಿರೋಧಿಸಿದರು. ಗುಜರಾತಿನ ಸರ್ಕಾರವು ಅವರ ಬೇಡಿಕೆಗಳನ್ನು ಒಪ್ಪಿಕೊಂಡಿತು.
೨೦೧೪-೧೫ರ ಕೇಂದ್ರ ಬಜೆಟ್ನಲ್ಲಿ ಪ್ರತಿಮೆಗೆ ೨ ಬಿಲಿಯನ್ ಡಾಲರ್ (ಯುಎಸ್$೨೮ ಮಿಲಿಯನ್) ಹಂಚಿಕೆಯಾದಾಗ, ಮಹಿಳಾ ಸುರಕ್ಷತೆ, ಶಿಕ್ಷಣ ಮತ್ತು ಕೃಷಿ ಯೋಜನೆಗಳಂತಹ ಇತರ ಆದ್ಯತೆಗಳ ಮೇಲೆ ಪ್ರತಿಮೆಯ ವೆಚ್ಚವನ್ನು ಭರಿಸಬಹುದಿತ್ತು ಎಂದು ಹಲವಾರು ಜನರು ಮತ್ತು ರಾಜಕೀಯ ಪಕ್ಷಗಳು ಟೀಕಿಸಿದ್ದವು.[೭] ಲಾರ್ಸೆನ್ ಮತ್ತು ಟರ್ಬೋ ಕಂಪೆನಿ ಟಿಕ್ಯೂ ಆರ್ಟ್ ಫೌಂಡ್ರಿ ಜತೆ ಒಪ್ಪಂದ ಮಾಡಿಕೊಂಡಿದ್ದು - ಚೀನಾದ ನಾಂಚಂಗ್ ಮೂಲದ ಜಿಯಾಂಗ್ಸಿ ಟೋಕಿನ್ ಕಂಪೆನಿಯ ಅಂಗಸಂಸ್ಥೆ - ಪ್ರತಿಮೆಯ ಕಂಚಿನ ಗಡಿಯಾರಕ್ಕಾಗಿ, ಗುಜರಾತ್ ಶಾಸನ ಸಭೆಯಲ್ಲಿ ವಿರೋಧ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಟೀಕೆಗೊಳಗಾಯಿತು. ಯೋಜನೆಯ ಒಟ್ಟು ಮೌಲ್ಯದ ೯% ಚೀನಾದಿಂದ ಬರುತ್ತದೆ ಎಂದು ಸ್ವರಾಜ್ಯಮಾಗ್, ನಂತರದಲ್ಲಿ ಸ್ಪಷ್ಟಪಡಿಸಿತು.
ಉಲ್ಲೇಖಗಳು
[ಬದಲಾಯಿಸಿ]- ↑ "ವಿಜಯವಾಣಿ , October 12, 2018 3:03 AM". Archived from the original on ಆಗಸ್ಟ್ 18, 2019. Retrieved ನವೆಂಬರ್ 3, 2018.
- ↑ Indiatoday , UPDATED: October 31, 2018 09:40 IST
- ↑ ವಿಜಯ ಕರ್ನಾಟಕ, Updated: 16 Dec 2013, 09:28 PM
- ↑ Statue of Unity ,The Tallest in the World
- ↑ ಇಂಡಿಯನ್ ಎಕ್ಸ್ಪ್ರೆಸ್, Updated: September 24, 2018 11:29:08 am
- ↑ ಪ್ರಜಾವಾಣಿ ,Updated: 31 ಅಕ್ಟೋಬರ್ 2018, 14:15 IST
- ↑ https://www.vishwavani.news/statueofunity-wontwelcomeyou-villagers-letter-pm/[ಶಾಶ್ವತವಾಗಿ ಮಡಿದ ಕೊಂಡಿ]