ವಿಷಯಕ್ಕೆ ಹೋಗು

ಭಾರತರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಭಾರತರು ಋಗ್ವೇದದಲ್ಲಿ ಉಲ್ಲೇಖಿಸಲ್ಪಟ್ಟ ಒಂದು ಬುಡಕಟ್ಟಾಗಿದ್ದರು. ಇವರ ಉಲ್ಲೇಖ ವಿಶೇಷವಾಗಿ ಭಾರತ ಋಷಿಗಳಾದ ವಿಶ್ವಾಮಿತ್ರರಿಗೆ ಆರೋಪಿಸಲಾದ ಮಂಡಲ ೩ರಲ್ಲಿ ಆಗಿದೆ. ಭಾರತರು ಕ್ರಿ.ಪೂ. ಎರಡನೇ ಸಹಸ್ರಮಾನದಲ್ಲಿ ರಾವಿ ನದಿಯ ಸುತ್ತ ವಾಸಿಸುತ್ತಿದ್ದ ವೈದಿಕ ಬುಡಕಟ್ಟಾಗಿದ್ದರು ಎಂದು ವಿದ್ವಾಂಸರು ನಂಬುತ್ತಾರೆ.[][][] ಭಾರತ ಶಬ್ದವನ್ನು ಅಗ್ನಿ (ಅಕ್ಷರಶಃ, "ಕಾಪಾಡಬೇಕಾದುದು", ಅಂದರೆ ಮನುಷ್ಯರ ಆರೈಕೆಯಿಂದ ಜೀವಂತವಾಗಿರಿಸಬೇಕಾದ ಬೆಂಕಿ) ಮತ್ತು ಮಂಡಲ ೨ರಲ್ಲಿ ರುದ್ರನ ಒಂದು ಹೆಸರಾಗಿಯೂ ಬಳಸಲಾಗುತ್ತದೆ.[]

ಮಂಡಲ ೭ (೭.೧೮ ಇತ್ಯಾದು) ಭಾರತರು ದಾಶರಾಜ್ಙ ಯುದ್ಧದಲ್ಲಿ ಭಾಗವಹಿಸಿದರು ಮತ್ತು ವಿಜಯಿಗಳಾದರು ಎಂದು ಉಲ್ಲೇಖಿಸುತ್ತದೆ. ಈ ಯುದ್ಧದಲ್ಲಿ ಭಾರತರ ಮುಖಂಡ ಸುದಾಸನ ವಿಜಯದ ಕಾರಣ, ಭಾರತರು ಕುರುಕ್ಷೇತ್ರ ಪ್ರದೇಶದಲ್ಲಿ ನೆಲೆಸಲು ಸಾಧ್ಯವಾಯಿತು.[] ವಿವಿಧ ವೈದಿಕ ಬುಡಕಟ್ಟುಗಳ ನಡುವಿನ ಮುಂಚಿನ ಅಧಿಕಾರ ಸಂಘರ್ಷಗಳಲ್ಲಿ ಇವರು ಯಶಸ್ವಿಯಾಗಿದ್ದರು ಎಂದು ತೋರುತ್ತದೆ. ಹಾಗಾಗಿ ವೈದಿಕೋತ್ತರ ಸಂಪ್ರದಾಯದಲ್ಲಿ (ಮಹಾಭಾರತ), ಸಂಪೂರ್ಣ ಭಾರತದ ಪ್ರಾಚೀನ ವಿಜೇತನಾದ, ನಾಮಸೂಚಕ ಪೂರ್ವಜನು ಸಾಮ್ರಾಟ ಭರತನಾಗುತ್ತಾನೆ. ಇವನ ರಾಜ್ಯವನ್ನು ಭಾರತ ಎಂದು ಕರೆಯಲಾಗುತ್ತದೆ.[] ನಂತರ ಭಾರತದ ಅರಸನು ಪುರು ಅರಸನೊಂದಿಗೆ ಮೈತ್ರಿ ಮಾಡಿ ಅವನನ್ನು ಕೂಡಿಕೊಂಡು ಕುರು ರಾಜ್ಯವನ್ನು ರಚಿಸಿದನು.[] ಇಂದು ಭಾರತ ಎಂಬುದು ನಮ್ಮ ದೇಶದ ಒಂದು ಅಧಿಕೃತ ಹೆಸರಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Scharfe, Hartmut E. (2006), "Bharat", in Stanley Wolpert (ed.), Encyclopedia of India, vol. 1 (A-D), Thomson Gale, pp. 143–144, ISBN 0-684-31512-2
  2. Thapar, Romila (2002), The Penguin History of Early India: From the Origins to AD 1300, Allen Lane; Penguin Press, p. 114, ISBN 0141937424 {{citation}}: Unknown parameter |publicationdate= ignored (help)
  3. Witzel, Michael (1995), "Early Sanskritization. Origins and Development of the Kuru State." (PDF), Electronic Journal of Vedic Studies, 1–4: 1–26, archived from the original (PDF) on 2012-02-20, retrieved 2017-12-29
  4. Pāṇini; Katre, Sumitra Mangesh (1989-01-01). Aṣṭādhyāyī of Pāṇini (in ಇಂಗ್ಲಿಷ್). Motilal Banarsidass Publ. ISBN 9788120805217.
  5. ORIGINS AND DEVELOPMENT OF THE KURU STATE by Michael Witzel, Harvard University [೧] Archived 2011-11-05 ವೇಬ್ಯಾಕ್ ಮೆಷಿನ್ ನಲ್ಲಿ.
  6. Julius Lipner (2010) "Hindus: Their Religious Beliefs and Practices.", p.23
  7. National Council of Educational Research and Training, History Text Book, Part 1, India
  8. Article 1 of the English version of the Constitution of India: "India that is Bharat shall be a Union of States."


"https://kn.wikipedia.org/w/index.php?title=ಭಾರತರು&oldid=1057152" ಇಂದ ಪಡೆಯಲ್ಪಟ್ಟಿದೆ