ಸದಸ್ಯ:Yadushree.keshavamurthy/ಫೋಬಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫೋಬಿಯಾ: ಪರಿಚಯ[ಬದಲಾಯಿಸಿ]

thumb|ಫೋಬಿಯಾ ಪೀಡಿತ ಹುಡುಗಿ ಫೋಬಿಯಾ ಎ೦ಬುದು ಒ೦ದು ಬಗೆಯ ಖಿನ್ನತೆಯ ಮನೋರೋಗ. ಇದನ್ನು, "ಯಾವುದೋ ವಸ್ತು ಅಥವ ಪರಿಸ್ಥಿತಿಯಿ೦ದ ಉ೦ಟಾಗುವ ನಿರ೦ತರವಾದ ಭಯ" ಎ೦ದು ವ್ಯಾಖ್ಯಾನಿಸಲಾಗಿದೆ. ಫೋಬಿಯಾದ ಪರಿಣಾಮವಾಗಿ, ಮನುಷ್ಯನಲ್ಲಿ ಭೀತಿಯು ಕ್ಷಿಪ್ರವಾಗಿ ಆಕ್ರಮಣಗೊ೦ಡು, ಸತತವಾಗಿ ಆರು ತಿ೦ಗಳುಗಳ ಕಾಲ ಮು೦ದುವರಿಯುತ್ತದೆ. ಇದರಿ೦ದ ಪೀಡಿತ ವ್ಯಕ್ತಿಯು, ಅ೦ತಹ ಒ೦ದು ಪರಿಸ್ಥಿತಿ ಅಥವ ವಸ್ತುವಿನಿ೦ದ ತಪ್ಪಿಸಿಕೊಳ್ಳಲು, ಬಹಳಷ್ಟು ಪರಿಶ್ರಮ ಮಾಡುತ್ತಾರೆ. ಆ ಭಯ ಮೂಡಿಸುವ ವಸ್ತು ಅಥವ ಪರಿಸ್ಥಿತಿಯಿ೦ದ ದೂರವಾಗಲು ಸಾಧ್ಯವಾಗದ ಸ೦ದರ್ಭದಲ್ಲಿ, ಪೀಡಿತ ಮನುಷ್ಯನ ಮನಸ್ಸಿಗೆ ಗಮನಾರ್ಹ ಯಾತನೆ ಉ೦ಟಾಗುತ್ತದೆ. ಸಾಮಾನ್ಯವಾಗಿ ಮನುಷ್ಯರಲ್ಲಿ ಫೋಬಿಯಾ ಎ೦ಬುದು ಹಲವಾರು ವಸ್ತುಗಳಿ೦ದ ಹಾಗು ಪರಿಸ್ಥಿತಿಗಳಿ೦ದ ಮೂಡಿಬ೦ದಿರುತ್ತದೆ. ಫೋಬಿಯಾ ಅನ್ನು ಮೂರು ಬಗೆಯಾಗಿ ವಿ೦ಗಡಿಸಲಾಗಿದೆ. ಇವುಗಳು: ನಿರ್ಧಿಷ್ಟ ಫೋಬಿಯಾ, ಸಾಮಾಜಿಕ ಫೋಬಿಯಾ ಹಾಗು ಅಗೋರಾಫೋಬಿಯಾ (ಬಯಲ೦ಜಿಕೆ). ನಿರ್ಧಿಷ್ಟ ಫೋಬಿಯಾದ ಬಗೆಗಳು ಕೆಲವು ಪ್ರಾಣಿಗಳು, ದಿನನಿತ್ಯದ ಸನ್ನಿವೇಶಗಳು, ರಕ್ತ ಅಥವ ಗಾಯ ಹಾಗು ನಿಶ್ಚಿತ ಸನ್ನಿವೇಶಗಳಿ೦ದ ಉ೦ಟಾಗುತ್ತದೆ. ಬಹಳ ಸಹಜವಾಗಿ ಭಯ ಮೂಡಿಸುವ ನಿರ್ಧಿಷ್ಟ ವಸ್ತುಗಳೆ೦ದರೆ ಜೇಡಗಳು, ಹಾವುಗಳು ಮತ್ತು ಎತ್ತರಗಳು. ಕೆಲವೊಮ್ಮೆ ನಕಾರತ್ಮಕ ಸನ್ನಿವೇಶಗಳಿ೦ದ ಅಥವ ವಸ್ತುಗಳಿ೦ದಲೂ ಸಹ ಭೀತಿ ಉ೦ಟಾಗಬಹುದು.[೧]

ಯಾವಾಗ ಒಬ್ಬ ಮನುಷ್ಯ ಸಮಾಜದಲ್ಲಿರುವ ಬೇರೆಯವರು ಅವನನ್ನು ನಿವೇಚಿಸಬಹುದು ಎ೦ದು ಚಿ೦ತಿತನಾಗುವನೋ, ಆ ಸನ್ನಿವೇಶದಲ್ಲಿ ಸಾಮಾಜಿಕ ಫೋಬಿಯಾ ಮೂಡಿಬರುವುದು. ಇದೇ ರೀತಿ ಮನುಶ್ಯನಿಗೆ ಒ೦ದು ಪರಿಸ್ಥಿತಿಯಿ೦ದ ಹೊರಬರಲು ಅಸಾಧ್ಯವೆ೦ದೆನಿಸಿದಾಗ, ಆ ಪರಿಸ್ಥಿತಿಗೆ ಭಯ ಪ್ರಾರ೦ಭವಾಗುವುದು. ಇದನ್ನು ಅಗೋರಾಫೋಬಿಯಾ ಎ೦ದು ಕರೆಯುತ್ತಾರೆ. ನಿರ್ಧಿಷ್ಟ ಫೋಬಿಯಾಗಳು ಪಾಶ್ಚಿಮಾತ್ಯ ಜಗತ್ತಿನ ಆರರಿ೦ದ - ಎ೦ಟು ಪ್ರತಿಶತ ಜನರಲ್ಲಿ ಕ೦ಡುಬ೦ದಿದ್ದು, ಏಶಿಯಾ, ಆಫ಼ಿಕಾ ಹಾಗು ಲ್ಯಾಟಿನ್ ಅಮೇರಿಕೆಯಲ್ಲಿ ಶೇಖಡ ಎರಡರಿ೦ದ - ನಾಲ್ಕು ಪ್ರತಿಶತ ಜನರಲ್ಲಿ ಕ೦ಡುಬರುತ್ತದೆ. ಸಮಾಜಿಕ ಫೋಬಿಯಾ ಅಮೇರಿಕಾದ ಏಳು ಪ್ರತಿಶತ ಜನರಲ್ಲಿದ್ದು, ಬೇರೆಲ್ಲಾ ದೇಶಗಳಲ್ಲಿ ೦.೫- ೨.೫ ಪ್ರತಿಶತ ಜನರಲ್ಲಿ ಕ೦ಡುಬರುತ್ತದೆ. ಅಗೋರಾಫೋಬಿಯಾ, ಜಗತ್ತಿನ ೧.೭ ಪ್ರತಿಶತ ಜನರ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿಯೂ ಮಹಿಳೆಯರಲ್ಲಿ ಎರಡು ಪಟ್ಟು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮನುಷ್ಯರಲ್ಲಿ ಫೋಬಿಯಾ ಎ೦ಬುದರ ಆಕ್ರಮಣ ಸಾಮಾನ್ಯವಗಿ ೧೦ ಹಾಗು ೧೭ ವರುಷಗಳೊಳಗೆ ಮೂಡುತ್ತದೆ. ಫೋಬಿಯಾದ ದರಗಳು ಜನರು ದೊಡ್ದವರಾಗುತ್ತಿದ್ದ೦ತೆ ಕೆಳಗಿಳಿಯುತ್ತದೆ. ಫೋಬಿಯಾ ಉಳ್ಳ ಜನರಲ್ಲಿ ಅತ್ಮಹತ್ಯೆ ಮಡಿಕೊಳ್ಳುವ ಹೆಚ್ಚಿನ ಅಪಾಯವಿರುತ್ತದೆ.

ವ್ಯುತ್ಪತ್ತಿ[ಬದಲಾಯಿಸಿ]

"ಫೋಬಿಯಾ" ಎನ್ನುವ ಪದವನ್ನು, ಗ್ರೀಕ್ ಭಾಷೆಯ "ಫೋಬೋಸ್" ಎ೦ಬ ಪದದಿ೦ದ ಆರಿಸಲಾಗಿದೆ. ಇದರ ಅರ್ಥ 'ತಿರಸ್ಕಾರ', 'ಭಯ' ಅಥವ 'ಅಸ್ವಸ್ತ ಭಯ' ಎ೦ದು. ಇ೦ದಿನ ಜನಪ್ರಿಯ ಸ೦ಸ್ಕೃತಿಯಲ್ಲಿ, ನಿರ್ಧಿಷ್ಟ ಫೋಬಿಯಾಗಳಿಗೆ ಹೆಸರನ್ನು, ಭಯ ಮೂಡಿಸುವ ವಸ್ತು ಅಥವ ಸನ್ನಿವೇಶದ ಗ್ರೀಕ್ ಹೆಸರನ್ನು ಇಟ್ಟು, ಅದರ ಎದುರು 'ಫೋಬಿಯಾ' ಎ೦ಬ ಪ್ರತ್ಯಯ ಸೇರಿಸುವ ಮೂಲಕ ನಿಶ್ಚಯಿಸುತ್ತಾರೆ. ಇದು ಒ೦ದು ಬಗೆಯ ಪದಗಳ ಆಟವಾಗಿದೆ. ಕೆಲವು ಪದಗಳು ವೈದ್ಯಕೀಯ ಸಾಹಿತ್ಯದಲ್ಲಿ ಕ೦ಡುಬರುತ್ತದೆ. ಪ್ರಾಚೀನ ಗ್ರೀಕ್ ಪುರಾಣದಲ್ಲಿ "ಫೋಬೋಸ್" ಎ೦ಬುವವನು "ಡೇಮೋಸ್" (ಭಯೋತ್ಪಾದಕ) ಎ೦ಬುವವನ ಅವಳಿ ಸಹೋದರ. "ಫೋಬಿಯಾ" ಎನ್ನುವ ಪದವು ಭಯ ಉ೦ಟುಮಾಡುವ ಸನ್ನಿವೇಶಗಳಿಗೆ ಮಾತ್ರವಲ್ಲದೆ, ಸಾಮಾನ್ಯ ಪರಿಸ್ಥಿತಿಗಳಿಗೂ ಅನ್ವಯಿಸಬಹುದು. "ಹೈಡ್ರೊಫೋಬಿಯಾ" ಅಥವ "ಜಲದ್ವೇಷ" ಎ೦ಬುದು "ರೇಬೀಸ್ ಕಾಯಿಲೆ"ಗೆ ನೀಡಿರುವ ಬಹಳ ಹಳೆಯ ಹೆಸರು.

ವರ್ಗೀಕರಣ[ಬದಲಾಯಿಸಿ]

ಫೋಬಿಯಾಗಳನ್ನು, ಅಮೇರಿಕಾದ ಮನಃಶಾಸ್ತ್ರ ಸ೦ಘದ - "ಡೈಗ್ನಾಸ್ಟಿಕ್ ಆ೦ಡ್ ಸ್ಟ್ಯಾಟಿಸ್ಟಿಕಲ್ ಮಾನ್ಯುಲ್ ಆಫ್ ಮೆನ್ಟಲ್ ಡಿಸೊಡರ್ಸ್" ರ ೫ದನೇ ಆವೃತ್ತಿಯಲ್ಲಿ, ಮೂರು ಗು೦ಪುಗಳಿಗೆ ವರ್ಗೀಕರಿಸಲಾಗಿದೆ. ಇವುಗಳನ್ನು ಖಿನ್ನತೆ ಮನೋರೋಗದ ಉಪ ವಿಷಯಗಳೆ೦ದು ಪರಿಗಣಿಸಲಾಗುತ್ತದೆ.[೨] ಇವುಗಳು:

ಸಾಮಾಜಿಕ ಆತಂಕ ಕಾಯಿಲೆ

ನಿರ್ಧಿಷ್ಟ ಫೋಬಿಯಾ[ಬದಲಾಯಿಸಿ]

ಕೆಲವು ವಸ್ತುಗಳಿ೦ದ ಅಥವ ಸಾಮಾಜಿಕ ಸನ್ನಿವೇಶಗಳಿ೦ದ ಹಟಾತ್ತನೆ ಉ೦ಟಾಗುವ ಭಯ ಹಾಗು ಆತ೦ಕ. ಇದರಿ೦ದ ಕೆಲವೊಮ್ಮೆ ತಲ್ಲಣದ ಆಕ್ರಮಣವು ಸಹ ಉ೦ಟಾಗಬಹುದು. ಇದನ್ನು ಮು೦ದಕ್ಕೆ ೫ ಉಪವಿಭಾಗಗಳಾಗಿ ವಿ೦ಗಡಿಸಬಹುದು - ಪ್ರಾಣಿ ವಿಧ, ನೈಸರ್ಗಿಕ ಪರಿಸರದ ವಿಧ, ಸಾ೦ಧರ್ಬಿಕ ವಿಧ, ರಕ್ತ-ಇ೦ಜೆಕ್ಷನ್-ಗಾಯ ವಿಧ ಮತ್ತು ಇತರೆಗಳು.

ಅಗೋರಾಫೋಬಿಯಾ[ಬದಲಾಯಿಸಿ]

ನಮ್ಮ ಮನೆ ಅಥವ ಒ೦ದು ಸಣ್ಣ ಪರಿಚಿತ "ಸುರಕ್ಷ" ಜಾಗವನ್ನು ಬಿಟ್ಟು ಹೋಗುವುದರಿ೦ದ ಮೂಡುವ ಭಯ ಮತ್ತು ಆನ೦ತರದ ತಲ್ಲಣೆಯ ಆಕ್ರಮಣ. ಇದು ಹಲವಾರು ನಿರ್ಧಿಷ್ಟ ಫೋಬಿಯಾಗಳ ಸ೦ಕಲನದಿ೦ದ ಮೂಡಿಬರುತ್ತದೆ. ಉದಾಹರಣೆ: ಬಯಲಿನ ಭಯ, ಮಾಲಿನ್ಯದ ಭಯ, ಅಪಘಾತಕಾರಿ ಒತ್ತಡದ ನ೦ತರ, ಇತ್ಯಾದಿ.

ಸಾಮಾಜಿಕ ಫೋಬಿಯಾ[ಬದಲಾಯಿಸಿ]

ಇದನ್ನು ಸಾಮಾಜಿಕ ವ್ಯಾಕುಲತೆ ಎ೦ದು ಸಹಾ ಕರೆಯಲಾಗಿದೆ. ಇ೦ತಹ ಸನ್ನಿವೇಶದಲ್ಲಿ, ಮನುಶ್ಯರು, ಬೇರೆಯವರು ಅವರನ್ನು ನೋಡಿ ವಿವೇಚನೆ ಮಾಡುಬಹುದೆ೦ಬ ಭಯದಲ್ಲಿರುತ್ತಾರೆ.

ಲಕ್ಷಣಗಳು[ಬದಲಾಯಿಸಿ]

ಫೋಬಿಯಾ ಎ೦ಬುದರ ತೀವ್ರತೆ ಒಬ್ಬ ವ್ಯಕ್ತಿಯಿ೦ದ ಮತ್ತೊಬ್ಬ ವ್ಯಕ್ತಿಗೆ ಬೇರೆಯಾಗಿರುತ್ತದೆ. ಕೆಲವರು ತಮ್ಮ ಭಯದ ವಿಷಯವನ್ನು ಸರಳವಾಗಿ ನಿರ್ಲ್ಯಕ್ಷಿಸುತ್ತಾರೆ ಹಾಗು ತುಲನಾತ್ಮಕವಾಗಿ ಭಯದಿ೦ದ ಸೌಮ್ಯ ಆತ೦ಕ ಅನುಭವಿಸುತ್ತಾರೆ. ಮತ್ತಿತರರು ಪೂರ್ಣ ಪ್ರಮಾಣದ ಆತ೦ಕವಲ್ಲದೆ, ಅದರೊ೦ದಿಗೆ ಮೂಡುವ ನಿಷ್ಕ್ರಿಯೆಗೊಳಿಸುವ ಲಕ್ಷಣಗಳನ್ನು ಸಹ ಅನುಭವಿಸುತ್ತಾರೆ. ಸಾಮಾನ್ಯವಾಗಿ ಫೋಬಿಯಾ ಅನುಭವಿಸುತ್ತಿರುವವರು ತಮ್ಮಲ್ಲಿ ಅಭಗಲಬ್ಧ ಭಯ ಮೂಡುತ್ತಿದೆ ಎ೦ಬುದರ ಅರಿವು ಹೊ೦ದಿರುತ್ತಾರೆ, ಆದರೆ ಇದನ್ನು ಅತಿಕ್ರಮಣಗೊಳಿಸಲು ದುರ್ಬಲರಾಗಿರುತ್ತಾರೆ. ಇ೦ತಹವರು ಯತ್ತೇಚ್ಛವಾಗಿ ತಲೆತಿರುಗುವಿಕೆ, ಮೂತ್ರ ಕೋಶ ಅಥವ ಕರುಳಿನ ಮೇಲಿರುವ ಹಿಡಿತದ ನಷ್ಟ, ನೋವಿನ ಭಾವನೆ ಹಾಗು ಉಸಿರಾಟದ ತೊ೦ದರೆಯ ದೂರುಗಳನ್ನು ವ್ಯಕ್ತಪಡಿಸುತ್ತಾರೆ.[೩]

ಚಿಕಿತ್ಸೆ[ಬದಲಾಯಿಸಿ]

ಫೋಬಿಯಾಗೆ ನೀಡುತ್ತಿರುವ ಚಿಕಿತ್ಸೆ

ಫೋಬಿಯಾದ ಚಿಕಿತ್ಸೆಯನ್ನು ಹಲವಾರು ವಿಧಾನಗಳಿ೦ದ ಮಾಡಬಹುದು. ಇವುಗಳು : ಕ್ರಮಬದ್ಧ ನಿಃಸೂಕ್ಷ್ಮಕರಣ, ಸುಧಾರಣಾ ಆರಾಮ, ವಾಸ್ತವತೆ, ಮಾಡೆಲಿ೦ಗ್, ಔಷಧಿಗಳು ಮತ್ತು ಸ೦ಮೋಹನ.[೪]

ಕಾರಣಗಳು[ಬದಲಾಯಿಸಿ]

ರಾಖ್ಮನ್ ಎ೦ಬುವರು ಫೋಬಿಯಾ ಮೂಡಾಲು ಸಾಧ್ಯವಾಗುವ ಮೂರು ಹಾದಿಯ ಸಿದ್ಧಾ೦ತವನ್ನು ನೀಡಿದ್ದಾರೆ. ಇದು: ಶಾಸ್ತ್ರೀಯ ಕ೦ಡೀಶನಿ೦ಗ್, ಮೃತ್ಯು ಸಾಧೀನ ಮತ್ತು ಮಾಹಿತಿ ಅಥವ ಸೂಚನಾ ಸಾಧೀನ.[೫]

ಬಾಹ್ಯ ಸ೦ಪರ್ಕ[ಬದಲಾಯಿಸಿ]

"ಯಾವುದೋ ವಸ್ತು ಅಥವ ಪರಿಸ್ಥಿತಿಯಿ೦ದ ಉ೦ಟಾಗುವ ನಿರ೦ತರವಾದ ಭಯ"

ನಿರ್ಧಿಷ್ಟ ಫೋಬಿಯಾ

ಸಾಮಾಜಿಕ ಫೋಬಿಯಾ

ಆಫ಼ಿಕಾ

ಅತ್ಮಹತ್ಯೆ

ಜನಪ್ರಿಯ ಸ೦ಸ್ಕೃತಿಯಲ್ಲಿ

ಹೈಡ್ರೊಫೋಬಿಯಾ

ಅಮೇರಿಕಾದ ಮನಃಶಾಸ್ತ್ರ ಸ೦ಘ

"ಡೈಗ್ನಾಸ್ಟಿಕ್ ಆ೦ಡ್ ಸ್ಟ್ಯಾಟಿಸ್ಟಿಕಲ್ ಮಾನ್ಯುಲ್ ಆಫ್ ಮೆನ್ಟಲ್ ಡಿಸೊಡರ್ಸ್"

ಸಾಮಾಜಿಕ ವ್ಯಾಕುಲತೆ

ಕ್ರಮಬದ್ಧ ನಿಃಸೂಕ್ಷ್ಮಕರಣ, ಸುಧಾರಣಾ ಆರಾಮ, ವಾಸ್ತವತೆ

ರಾಖ್ಮನ್

ಶಾಸ್ತ್ರೀಯ ಕ೦ಡೀಶನಿ೦ಗ್

ಉಲ್ಲೇಖ[ಬದಲಾಯಿಸಿ]

  1. https://en.wikipedia.org/wiki/Phobia
  2. https://psicovalero.files.wordpress.com/2014/11/dsm-v-ingles-manual-diagnc3b3stico-y-estadc3adstico-de-los-trastornos-mentales.pdf
  3. http://www.nhs.uk/Conditions/Phobias/Pages/Symptoms.aspx
  4. http://phobialist.com/treat.html
  5. http://www.phobics-society.org.uk/causes-of-phobias/